Wednesday, February 18, 2026
Wednesday, February 18, 2026
Home Blog Page 180

Rotary Club Shivamogga ಶಿವಮೊಗ್ಗ ರೋಟರಿ (ಪೂರ್ವ ) ಕ್ಲಬ್ ‌ ಕಿರೀಟಕ್ಕೆ 10 ಜಿಲ್ಲಾ ಪ್ರಶಸ್ತಿಗಳ ಗರಿ

0

Rotary Club Shivamogga ಕುಂದಾಪುರದ ಸಾಸ್ತಾನದಲ್ಲಿ ಏರ್ಪಡಿಸಿದ್ದ 2024-25ನೇ ಸಾಲಿನ ರೋಟರಿ ಜಿಲ್ಲಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಪೂರ್ವ ಸಂಸ್ಥೆಯು 10 ಜಿಲ್ಲಾ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
ಶಿವಮೊಗ್ಗ ನಗರದ ಅಂತರಾಷ್ಟ್ರೀಯ ಸೇವೆಯ ಸಂಸ್ಥೆಗಳಲ್ಲಿ ಒಂದಾದ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ 47 ವರ್ಷಗಳಿಂದ ನಿರಂತರವಾಗಿ ಸಮಾಜಮುಖಿ ಸೇವಾ ಕಾರ್ಯಗಳನ್ನು ಮಾಡುತ್ತ ರೋಟರಿ ಶಾಲೆ, ರೋಟರಿ ಚಿತಾಗಾರ, ಮಾನವೀಯ ಸೇವೆಗಳನ್ನು ಮಾಡುವುದರ ಜತೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಎರಡನೇ ಕ್ಲಬ್ ಆಗಿ ಸ್ಥಾಪನೆಗೊಂಡಿದೆ.
2024-25ನೇ ಸಾಲಿನಲ್ಲಿ ಸಲ್ಲಿಸಿದ ಶುದ್ಧ ನೀರು, ಶುಚಿತ್ವ, ಮಹಿಳಾ ಸಬಲೀಕರಣ, ರಸ್ತೆ ಸುರಕ್ಷತೆ, ಯುವಜನರ ಸಬಲೀಕರಣ, ಆರೋಗ್ಯ ಶಿಬಿರಗಳು ಹಾಗೂ ಹಲವಾರು ಮನುಕುಲದ ಸೇವೆಗಳನ್ನು ಗುರುತಿಸಿ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಗೆ ಸಾರ್ವಜನಿಕ ಸೇವೆಗೆ 10 ಜಿಲ್ಲಾ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ರೋಟರಿ ಜಿಲ್ಲಾ ಗವರ್ನರ್ ಪಾಲಾಕ್ಷ, ಸಮಿತಿ ಚೇರ್ಮನ್ ಬಿ.ಸಿ.ಗೀತಾ, ಸಿ.ಎ.ದೇವಾನಂದ ಅವರು ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. 14 ಜನ ಹೊಸ ಸದಸ್ಯರನ್ನು ಸೇರಿಸಿದಕ್ಕೆ ಪ್ರಶಸ್ತಿ ನೀಡಿ ಗೌರವಿಸಿದರು.
Rotary Club Shivamogga ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ರೋಟರಿ ಶಿವಮೊಗ್ಗ ನಿಕಟಪೂರ್ವ ಅಧ್ಯಕ್ಷ ಅರುಣ್ ದೀಕ್ಷಿತ್, ಹಾಲಿ ಅಧ್ಯಕ್ಷ ನೆಪ್ಚೂನ್ ಕಿಶೋರ್, ನಿಯೋಜಿತ ಜಿಲ್ಲಾ ಗವರ್ನರ್ ವಸಂತ ಹೋಬಳಿದಾರ್, ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ಚಂದ್ರಹಾಸ ರಾಯ್ಕರ್, ಮಾಜಿ ಅಧ್ಯಕ್ಷರಾದ ಎ.ಒ.ಮಹೇಶ್, ನಿಕಟಪೂರ್ವ ಕಾರ್ಯದರ್ಶಿ ಶಶಿಕಾಂತ್ ನಾಡಿಗ್ ಸ್ವೀಕರಿಸಿದರು. ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯ ಎಲ್ಲಾ ಸದಸ್ಯರು ಅಭಿನಂದಿಸಿದರು.

Shimoga Institute of Medical Sciences ಶಿವಮೊಗ್ಗ ‘ಸಿಮ್ಸ್ ‘ ಆಸ್ಪತ್ರೆಯಲ್ಲಿ ಪ್ಕಾಸ್ಟಿಕ್ ಸರ್ಜರಿ ಕ್ಯಾನ್ಸರ್,ನ್ಯೂರೋ ಸರ್ಜರಿ, ಮಕ್ಕಳ ಶಸ್ತ್ರ ಚಿಕಿತ್ಸೆ, ಮೂತ್ರರೋಗ ಚಿಕಿತ್ಸೆ ಲಭ್ಯ

0

Shimoga Institute of Medical Sciences ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಅಧೀನದಲ್ಲಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಸ್ಪೆಷಾಲಿಟಿ ವಿಭಾಗಗಳು ಮತ್ತು ಆಸ್ಪತ್ರೆಯ ಆವರಣದಲ್ಲಿ ಸೂಪರ್ ಸ್ಪೆಷಾಲಿಟಿ ಕಟ್ಟಡದಲ್ಲಿ ಹೃದ್ರೋಗ ವಿಭಾಗವು ಮತ್ತು ನರರೋಗ ವಿಭಾಗವು ಕಾರ್ಯ ನಿರ್ವಹಿಸುತ್ತಿದ್ದು ಜನರಿಗೆ ಅತ್ಯುತ್ತಮ ಸೇವೆಯನ್ನು ನಿಡಲಾಗುತ್ತಿದ್ದು. ಪ್ರಸ್ತುತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೆಚ್ಚಿನ ವಿಭಾಗಗಳ ಸೇವೆಯನ್ನು ವಿಸ್ತರಿಸುವ ದೃಷ್ಟಿಯಿಂದ
ಈ ಕೆಳಕಂಡ ಸೂಪರ್ ಸ್ಪೆಷಾಲಿಟಿ ಸೇವೆಗಳು ಸಾರ್ವಜನಿಕರಿಗೆ ಇನ್ನು ಮುಂದೆ ಲಭ್ಯವಾಗುತ್ತಿವೆ

ಪ್ಲಾಸ್ಟಿಕ್ ಸರ್ಜರಿ, ಕ್ಯಾನ್ಸರ್ ಸರ್ಜರಿ, ನ್ಯೂರೋಸರ್ಜರಿ, ಮಕ್ಕಳ ಶಸ್ತ್ರಚಿಕಿತ್ಸೆ (Pediatric) ಮೂತ್ರರೋಗ ಶಸ್ತ್ರ ಚಿಕಿತ್ಸೆ,

ಕಿಡ್ನಿ ಖಾಯಿಲೆ (nephrology) ಸೇವೆಗಳು ದಿನಾಂಕ: 04/09/2025 ರಿಂದ ಕಾರ್ಯರಂಭಗೊಳ್ಳಲಿದ್ದು, ಮೂತ್ರರೋಗ ಶಸ್ತ್ರ ಚಿಕಿತ್ಸೆ, ಪ್ಲಾಸ್ಟಿಕ್ ಸರ್ಜರಿ, ಕ್ಯಾನ್ಸರ್ ಸರ್ಜರಿ, ಮೂತ್ರಪಿಂಡ ಸರ್ಜರಿ, ಮಕ್ಕಳ ಶಸ್ತ್ರಚಿಕಿತ್ಸಾ ತಜ್ಞರ ಸೇವೆಗಳು ಸೋಮವಾರ ಮತ್ತು ಗುರುವಾರ ದೊರೆಯಲಿದೆ.

ನರರೋಗ ವಿಭಾಗವು ಸೋಮವಾರ, ಬುದುವಾರ, ಶುಕ್ರವಾರದಂದು

ನರರೋಗ ಶಸ್ತ್ರಚಿಕಿತ್ಸಾ ಸೇವೆಯು ಮಂಗಳವಾರ, ಗುರುವಾರ, ಶನಿವಾರದಂದು ಹೋರರೋಗಿಗಳ ಸೇವೆ ಲಭ್ಯವಿರುತ್ತದೆ.

ಚಿಕಿತ್ಸೆಯ ನಂತರ ಶಸ್ತ್ರಚಿಕಿತ್ಸೆ ಅವಶ್ಯವಿದ್ದಲ್ಲಿ ರೋಗಿಗಳನ್ನು ದಾಖಲಿಸಿಕೊಂಡು ಬಿ.ಪಿ.ಎಲ್ ಕಾರ್ಡ್‌ದಾರರಿಗೆ ಎ.ಬಿ.ಎ.ಆರ್.ಕೆ ಅಡಿಯಲ್ಲಿ ಉಚಿತ ಸೌಲಭ್ಯ ದೊರೆಯಲಿದೆ.

ಸೂಪರ್ ಸ್ಪೆಷಾಲಿಟಿ ವಿಭಾಗದಲ್ಲಿ ವಾರ್ಡ್‌ಗಳನ್ನು ಪ್ರಾರಂಭಿಸಲಾಗಿದ್ದು ರೋಗಿಗಳು ಈ ಹೆಚ್ಚಿನ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಂಸ್ಥೆಯ ಆಡಳಿತ ಮಂಡಳಿ ಪ್ರಕಟ ಪಡಿಸಿದೆ.

Shimoga Institute of Medical Sciences ಬೆಂಗಳೂರು, ಮೈಸೂರು, ಹುಬ್ಬಳ್ಳಿ ನಗರಗಳ ನಂತರ ಹೆಚ್ಚುವರಿ ಸೂಪರ್ ಸ್ಪೆಷಾಲಿಟಿ ಸೇವೆಯನ್ನು ಒದಗಿಸುವ ಸಂಸ್ಥೆಗಳ ಪಟ್ಟಿಗೆ ಶಿವಮೊಗ್ಗ ವೈದ್ಯಕೀಯ ಸಂಸ್ಥೆ ಸೇರ್ಪಡೆಯಾಗಿರುವುದು, ಸಂಸ್ಥೆಗೆ ಸಂತಸದ ಸುದ್ದಿಯಾಗಿದೆ ಎಂದು ಮೆಗ್ಗಾನ್ ಅಧಿಕ್ಷಕರು ತಿಳಿಸಿದ್ದಾರೆ.

Gallagher Company ರಕ್ತದಾನದಿಂದ ನಮ್ಮ ಆರೋಗ್ಯ ದೃಢವಾಗಿರುತ್ತದೆ- ಹೆಚ್.ಎಸ್.ಶಿವಕುಮಾರ್

0

Gallagher Company ಎಲ್ಲ ದಾನಗಳಿಗಿಂತ ರಕ್ತದಾನ ಅತ್ಯಂತ ಶ್ರೇಷ್ಠವಾದ ದಾನ ನಾವು ಮಾಡುವ ರಕ್ತದಾನದಿಂದ ಇಂದು ಮೂರು ಜನರ ಪ್ರಾಣವನ್ನು ಉಳಿಸಬಹುದಾಗಿದೆ ವೃತ್ತಿಯ ಜೊತೆಗೆ ಒಳ್ಳೆಯ ಪ್ರವೃತ್ತಿಯು ಸಹ ಅತಿ ಮುಖ್ಯ ಎಂದು ಗ್ಯಾಲ್ಗರ್ ಐಟಿ ಕಂಪನಿಯ ಮುಖ್ಯಸ್ಥರಾದ ಎಚ್ಎಸ್ ಕುಮಾರ್ ಅವರು ಅಭಿಮತ ವ್ಯಕ್ತಪಡಿಸಿದರು. ಗ್ಯಾಲಗರ್ ಕಂಪನಿ ಹಾಗೂ ರೆಡ್ ಕ್ರಾಸ್ ಸಂಜೀವಿನಿ ರಕ್ತ ಕೇಂದ್ರದ ಸಹಯೋಗದಲ್ಲಿ ಆಯೋಜಿಸಲಾದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು ನಿರಂತರ ರಕ್ತದಾನದಿಂದ ನಮ್ಮ ಆರೋಗ್ಯ ಸದಾ ಸದೃಢವಾಗಿರುತ್ತದೆ, ಅಲ್ಲದೆ ನಮ್ಮ ದೇಹದಲ್ಲಿ ಯಾವುದಾದರೂ ಗೊತ್ತಿಲ್ಲದ ಕಾಯಿಲೆಗಳ ಸಮಸ್ಯೆಗಳು ಇದ್ದರೂ ಸಹ ಅದು ರಕ್ತದಾನದಿಂದ ತಿಳಿಯುತ್ತದೆ ಎಂದು ನುಡಿದರು. Gallagher Company ಇದೇ ಸಂದರ್ಭದಲ್ಲಿ 119 ಬಾರಿ ರಕ್ತದಾನ ಮಾಡಿದ ಸ್ವಯಂ ಪ್ರೇರಿತ ರಕ್ತದಾನಿಗಳ ಸೇವಾ ಸಂಸ್ಥೆಯ ಅಧ್ಯಕ್ಷರಾದ ಧರಣೇಂದ್ರ ದಿನಕರ್ ಅವರು ಮಾತನಾಡುತ್ತಾ ಮನುಷ್ಯನ ದೇಹದಲ್ಲಿ 5:30 ಲೀಟರ್ ಮತ್ತು ರಕ್ತ ಸಂಚರಿಸುತ್ತಾ ಇರುತ್ತದೆ ರಕ್ತದಾನಕ್ಕೆ ಕೇವಲ 350 ಎಂಎಲ್ ಮಾತ್ರ ಬೇಕು ರಕ್ತದಾನ ಮಾಡುವುದರಿಂದ ನಮ್ಮಲ್ಲಿ ಹೊಸ ಹುರುಪು. ಚೈತನ್ಯ ಮೂಡುವುದರ ಜೊತೆಗೆ ನಾವು ಸದಾ ಕಾಲ ಆರೋಗ್ಯವಂತರಾಗಿರುತ್ತೇವೆ ಹಾಗೆ ನಾವುಗಳು ಉತ್ತಮ ಜೀವನಶೈಲಿ ಆರೋಗ್ಯ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಪ್ರತಿನಿತ್ಯ ಒಂದು ಗಂಟೆಗಳ ಕಾಲ ವ್ಯಾಯಾಮ ಮಾಡುವುದರಿಂದ ನಿಮ್ಮ ದೇಹ ಸುಸ್ಥಿತಿಯಲ್ಲಿ ಇರುತ್ತದೆ ಎಂದು ನುಡಿದರು. ರೆಡ್ ಕ್ರಾಸ್ ಸಂಜೀವಿನಿ ರಕ್ತ ಕೇಂದ್ರದ ಕಾರ್ಯದರ್ಶಿಗಳಾದ ಮಂಜುನಾಥ್ ಸಿ ಅಪ್ಪಾಜಿ ಶ್ರೀಯುತ ಧರಣೇಂದ್ರ ದಿನಕರ್ ಡಾ. ದಿನಕರ್ ಶ್ರೀಮತಿ ಶೃತಿ ಎಸ್ ಕೆ ಶ್ರೀಮತಿ ಲಕ್ಷ್ಮಿಬಾಯಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು, ರಕ್ತದಾನ ಶಿಬಿರವನ್ನು ಯಶಸ್ವಿಯಾಗಿ ನೆರವೇರಿಸಲಾಯಿತು.

Keladi Shivappa Nayak University of Agricultural and Horticultural Sciences ಇರುವಕ್ಕಿ ಕೃಷಿ ವಿವಿಯ ಆಶ್ರಯದಲ್ಲಿ ಪೌಷ್ಠಿಕ ತೋಟ & ನುಗ್ಗೆಸೊಪ್ಪಿನ ಮೌಲ್ಯವರ್ಧನೆ ಕುರಿತು ಕಾರ್ಯಾಗಾರ

0

Keladi Shivappa Nayak University of Agricultural and Horticultural Sciences ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ, ವಿಸ್ತರಣಾ ನಿರ್ದೇಶನಾಲಯದ, ರೈತರ ತರಬೇತಿ ಸಂಸ್ಥೆಯು “ಪೌಷ್ಟಿಕ ತೋಟ ಮತ್ತು ನುಗ್ಗೆ ಸೊಪ್ಪಿನ ಮೌಲ್ಯವರ್ಧನೆ”
ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತದೆ.

ಈ ಕಾರ್ಯಕ್ರಮವನ್ನು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ “ಆಹಾರ ಮತ್ತು ಪೋಷಣ ವಿಭಾಗ, ತುಂಗಾ ಬ್ಲಾಕ್ ನ ಒಂದನೇ ಮಹಡಿ, ಇರುವಕ್ಕಿ ಯಲ್ಲಿ ದಿನಾಂಕ:09.09.2025 ರ ಬೆಳಗ್ಗೆ 10 ಗಂಟೆಗೆ ನೆರವೇರಿಸಲಾಗುತ್ತದೆ.

Keladi Shivappa Nayak University of Agricultural and Horticultural Sciences ಆದುದರಿಂದ ಆಸಕ್ತ ರೈತರು ಮತ್ತು ರೈತ ಮಹಿಳೆಯರು, ರೈತರ ತರಬೇತಿ ಸಂಸ್ಥೆಯ ಸಿಬ್ಬಂದಿಯವರಿಗೆ ಫೋನ್ ಮುಖಾಂತರ ಸಂಪರ್ಕಿಸಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಈ ತರಬೇತಿ ಕಾರ್ಯಕ್ರಮವು ಉಚಿತವಾಗಿರುತ್ತದೆ.

ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಲು ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆಗಳು 9958324261/ 6363725298 / 9448312978

Santhosh Lad ಕಾರ್ಖಾನೆ ನೌಕರರ ಸಮಸ್ಯೆ & ಪರಿಹಾರ ಕುರಿತು ಸಚಿವ ಸಂತೋಷ್ ಲಾಡ್ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ

0

Santhosh Lad ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ಅಧ್ಯಕ್ಷತೆಯಲ್ಲಿ ವಿಕಾಸ ಸೌಧದ ಸಭಾ ಕೊಠಡಿಯಲ್ಲಿ ಇಂದು M/s MV photo voltaic company Limited ಕಾರ್ಖಾನೆಯ/ಕಂಪನಿಯ ನೌಕರರ ಸಮಸ್ಯೆ ಮತ್ತು ಪರಿಹಾರಗಳ ಕುರಿತು ಸಭೆ ಜರುಗಿತು.

Santhosh Lad ಸಭೆಯಲ್ಲಿ ಕಾರ್ಮಿಕ ಆಯುಕ್ತ ಗೋಪಾಲಕೃಷ್ಣ, ಕಾರ್ಖಾನೆಗಳು ಮತ್ತು ಬಾಯ್ಲರು ಇಲಾಖೆಯ ನಿರ್ದೇಶಕ ಶ್ರೀನಿವಾಸ್, ಅಪರ ನಿರ್ದೇಶಕ ನಂಜಪ್ಪ, ಜಂಟಿ ನಿರ್ದೇಶಕ ನವನೀತ್ ಮೋಹನ್, ಕಂಪನಿಯ ಆಡಳಿತ ವರ್ಗದವರು ಮತ್ತು ನೌಕರರ ಸಂಘದ
ಪ್ರತಿನಿಧಿಗಳು ಪಾಲ್ಗೊಂಡಿದ್ದರು.

National Lok Adalat ಸಂಚಾರಿ ಇ- ಚಲನ್ ದಂಡದ ಮೇಲೆ ಶೇ50 ರಿಯಾಯಿತಿ ಅವಕಾಶ ಸದ್ಬಳಕೆ ಮಾಡಿಕೊಳ್ಳಿ- ನ್ಯಾ.ಮಂಜುನಾಥ ನಾಯಕ್

0

National Lok Adalat ಬಾಕಿ ಇರುವ ಸಂಚಾರ ಇ-ಚಲನ್ ಪ್ರಕರಣಗಳ ದಂಡದ ಮೇಲೆ ಶೇ.50 ರಿಯಾಯಿತಿ ನೀಡಿ ಸರ್ಕಾರ ಆದೇಶಿಸಿದ್ದು ಈ ಅವಕಾಶವನ್ನು ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ ನಾಯಕ್ ಕರೆ ನೀಡಿದರು.
ಜಿಲ್ಲಾ ನ್ಯಾಯಾಲಯದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಅವರು ಮಾತನಾಡಿ, ಸಂಚಾರಿ ಇ-ಚಲನ್‌ನಲ್ಲಿ ದಾಖಲಾದ ಪ್ರಕರಣಗಳಲ್ಲಿ ದಂಡ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ಪ್ರಕರಣಗಳಿಗೆ ದಂಡವನ್ನು ಪಾವತಿಸಲು ಶೇ.50 ರಷ್ಟು ರಿಯಾಯಿತಿ ನೀಡಿ ಸರ್ಕಾರ ಆದೇಶಿಸಿದ್ದು ಸೆ.12 ರವರೆಗೆ ಈ ರಿಯಾಯಿತಿ ಅನ್ವಯಿಸುತ್ತದೆ. ಆದ್ದರಿಂದ ಬಾಕಿ ಉಳಿಸಿಕೊಂಡಿರುವವರು ಕೂಡಲೇ ಈ ಅವಕಾಶವನ್ನು ಬಳಕೆ ಮಾಡಿಳ್ಳಬೇಕೆಂದರು.
ಪೊಲೀಸ್ ಇಲಾಖೆಯಿಂದ ಆ.23 ರಿಂದ ಸೆ.02 ರವರೆಗೆ ಈ ರಿಯಾಯಿತಿಯಡಿ ಒಟ್ಟು 15,465 ಇ-ಚಲನ್ ಪ್ರಕರಣಗಳನ್ನು ರೂ.63,22,750/- ಮೊತ್ತ ಪಾವತಿಸಿ ಮುಕ್ತಾಯ ಮಾಡಲಾಗಿದೆ. ಇಂದಿನಿಂದ ಇನ್ನು ಒಂಭತ್ತು ದಿನಗಳ ಕಾಲದವರೆಗೆ ಮಾತ್ರ ಈ ಅವಕಾಶವಿದ್ದು ಸಾರ್ವಜನಿಕರು ತಮ್ಮ ವಾಹನಗಳ ಮೇಲೆ ಪೊಲೀಸರಿಂದ ನೋಂದಾಯಿಸಲ್ಪಟ್ಟ ದಂಡವನ್ನು ಶೀಘ್ರವಾಗಿ ಪಾವತಿಸುವಂತೆ ಅವರು ತಿಳಿಸಿದರು.
ರಾಷ್ಟ್ರೀಯ ಲೋಕ್ ಅದಾಲತ್:
ಶಿವಮೊಗ್ಗ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳ ಶೀಘ್ರ ವಿಲೇವಾರಿಗೆ ಮತ್ತು ಪಕ್ಷಗಾರರಿಗೆ ತ್ವರಿತ ನ್ಯಾಯ ದಾನದ ದೃಷ್ಟಿಯಿಂದ ಈ ವರ್ಷದ 3ನೇ ರಾಷ್ಟ್ರೀಯ ಲೋಕ್ ಅದಾಲತ್‌ನ್ನು ದಿನಾಂಕ: 13.09.2025 ರಂದು ಹಮ್ಮಿಕೊಳ್ಳಲಾಗಿದೆ.
ಅಂದು ಎಲ್ಲಾ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇರುವ ವೈವಾಹಿಕ ವಿವಾದದ ವ್ಯಾಜ್ಯಗಳು, ಅಪಘಾತಕ್ಕೆ ಸಂಬಂಧಿಸಿದ ಪರಿಹಾರದ ವ್ಯಾಜ್ಯಗಳು, ಕೌಟುಂಬಿಕ ದೌರ್ಜನ್ಯ ಪ್ರಕರಣಗಳು, ಚೆಕ್ ಅಮಾನ್ಯ ಪ್ರಕರಣಗಳು, ವಾಣಿಜ್ಯ ವಿವಾದದ ದಾವೆಗಳು, ವೇತನ ಮತ್ತು ಸೇವೆಗೆ ಸಂಬಂಧಿಸಿದವ್ಯಾಜ್ಯಗಳು, ರಾಜೀ ಆಗಬಹುದಾದ ಕ್ರಿಮಿನಲ್ ಪ್ರಕರಣಗಳು, ಗ್ರಾಹಕರ ವೇದಿಕೆಯ ಪ್ರಕರಣಗಳು, ಸಾಲದ ಪ್ರಕರಣಗಳು, ಪಾಲು ವಿಭಾಗದ ದಾವೆಗಳು, ಸ್ಥಿರಆಸ್ತಿ ಸ್ವಾಧೀನದ ದಾವೆಗಳು, ಭೂಸ್ವಾಧೀನದ ಪ್ರಕರಣಗಳು ಮತ್ತು ಇತರೆ ಸಿವಿಲ್ ಪ್ರಕರಣಗಳ ರಾಜೀ ಸಂಧಾನಕ್ಕಾಗಿ ಉಭಯ ಪಕ್ಷಗಾರರ ಉಪಸ್ಥಿತಿಯಲ್ಲಿ ನ್ಯಾಯಾಧೀಶರು ಮತ್ತು ನ್ಯಾಯಿಕೇತರ ಸಂಧಾನಕಾರರು ರಾಜೀ ಸಂಧಾನದ ಪ್ರಕ್ರಿಯೆಯನ್ನು ಕೈಗೊಂಡು ಪಕ್ಷಗಾರರು ವಿವಾದವನ್ನು ಇತ್ಯರ್ಥಪಡಿಸಿಕೊಂಡರೆ ಅದರಂತೆ ಅಂತಿಮ ಆದೇಶವನ್ನು ಅದೇ ದಿನದಂದು ನೀಡುವ ಅವಕಾಶವನ್ನು ಸಾರ್ವಜನಿಕರು ಮತ್ತು ಪಕ್ಷಗಾರರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಈ ಮೂಲಕ ಮನವಿ ಮಾಡಿದರು.
ಈ ಮುಂಚೆ ದಿನಾಂಕ: 12.07.2025 ರಂದು ಕೈಗೊಳ್ಳಲಾದ ಈ ವರ್ಷದ 2ನೇ ರಾಪ್ಟ್ರೀಯ ಲೋಕ್ ಅದಾಲತ್‌ನಲ್ಲಿ ವಿಚಾರಣೆಗೆ ಬಾಕಿ ಇದ್ದ 14225 ರಷ್ಟು ಪ್ರಕರಣಗಳು ರಾಜೀ ಸಂಧಾನದ ಮೂಲಕ ಕೊನೆಗೊಂಡಿದ್ದು, ಅವುಗಳ ಮೂಲಕ ಪಕ್ಷಗಾರರು ಒಟ್ಟು ರೂ. 30,50,15,387/- ಮೊತ್ತದ ಪರಿಹಾರ ಒಳಗೊಂಡ ವಿವಾದಗಳನ್ನು ರಾಜೀ ಮಾಡಲಾಗಿರುತ್ತದೆ. ಅದೇ ಸಂದರ್ಭದಲ್ಲಿ ಒಟ್ಟು 1,44,825 ವ್ಯಾಜ್ಯ ಪೂರ್ವ ಪ್ರಕರಣಗಳು ಕೊನೆಗೊಂಡಿದ್ದು, ಅವುಗಳ ಮೂಲಕ ಒಟ್ಟು ರೂ. 75,40,80,831/- ಮೊತ್ತದ ಪರಿಹಾರ ಒಳಗೊಂಡ ವಿವಾದಗಳನ್ನು ರಾಜೀ ಮಾಡಿಕೊಂಡಿರುತ್ತಾರೆ ಎಂದು ತಿಳಿಸಿದರು.
National Lok Adalat ರಾಷ್ಟ್ರಕ್ಕಾಗಿ ಮಧ್ಯಸ್ಥಿಕೆ – 90 ದಿನಗಳ ಮಧ್ಯಸ್ಥಿಕೆ ಅಭಿಯಾನ :
ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ನವದೆಹಲಿ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ರವರ ನಿರ್ದೇಶನದಂತೆ ಶಿವಮೊಗ್ಗ ಜಿಲ್ಲೆಯಲ್ಲಿನ ಎಲ್ಲಾ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇರುವ ವೈವಾಹಿಕ ವಿವಾಹದ ವ್ಯಾಜ್ಯಗಳು, ಅಪಘಾತಕ್ಕೆ ಸಂಬಂಧಿಸಿದ ಪರಿಹಾರದ ವ್ಯಾಜ್ಯಗಳು, ಕೌಟುಂಬಿಕ ದೌರ್ಜನ್ಯ ಪ್ರಕರಣಗಳು, ಚೆಕ್ ಅಮಾನ್ಯ ಪ್ರಕರಣಗಳು, ವಾಣಿಜ್ಯ ವಿವಾದದ ದಾವೆಗಳು, ವೇತನ ಮತ್ತು ಸೇವೆಗೆ ಸಂಬಂಧಿಸಿದ ವ್ಯಾಜ್ಯಗಳು, ರಾಜಿ ಆಗಬಹುದಾದ ಕ್ರಿಮಿನಲ್ ಪ್ರಕರಣಗಳು, ಗ್ರಾಹಕರ ವೇದಿಕೆಯ ಪ್ರಕರಣಗಳು, ಸಾಲದ ಪ್ರಕರಣಗಳು, ಪಾಲು ವಿಭಾಗದ ದಾವೆಗಳು, ಸ್ಥಿರ ಆಸ್ತಿ ಸ್ವಾಧೀನದ ದಾವೆಗಳು, ಭೂಸ್ವಾಧೀನದ ಪ್ರಕರಣಗಳು ಮತ್ತು ಇತರೆ ಸಿವಿಲ್ ಪ್ರಕರಣಗಳ ರಾಜೀ ಸಂಧಾನಕ್ಕಾಗಿ 90 ದಿನಗಳ ಮಧ್ಯಸ್ಥಿಕೆ ಅಭಿಯಾನವನ್ನು ದಿನಾಂಕ: 01.07.2025 ರಿಂದ 30.09.2025 ರವರೆಗೆ ಹಮ್ಮಿಕೊಳ್ಳಲಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು.
ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ಪಕ್ಷಗಾರರು ರಾಜೀ ಸಂಧಾನದ ಮೂಲಕ ತಮ್ಮ ಪ್ರಕರಣಗಳನ್ನು ಶೀಘ್ರವಾಗಿ ಮತ್ತು ತಮಗೆ ಸೂಕ್ತ ಎನ್ನಿಸುವ ನ್ಯಾಯಯುತವಾದ ಪರಿಹಾರಗಳನ್ನು ಪಡೆದುಕೊಳ್ಳಲು ಸಂಬAಧಪಟ್ಟ ನ್ಯಾಯಾಲಯಗಳಲ್ಲಿ ಅಂತಹ ಪ್ರಕರಣಗಳನ್ನು ಮಧ್ಯಸ್ಥಿಕೆಗೆ ನೇಮಿಸಲು ತಾವಾಗಲೀ ಅಥವಾ ವಕೀಲರ ಮೂಲಕ ಮನವಿ ಮಾಡಿಕೊಂಡು ಅದರಂತೆ ಮಧ್ಯಸ್ಥಿಕೆ ಪ್ರಕರಣಗಳನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲೆಯ ಎಲ್ಲಾ ಕಾನೂನು ಸೇವಾ ಸಮಿತಿಯಲ್ಲಿ ಮಧ್ಯಸ್ಥಿಕೆದಾರರಾಗಿ ಸೇವೆ ಸಲ್ಲಿಸುತ್ತಿರುವ ನುರಿಯ ಹಿರಿಯ ನ್ಯಾಯವಾದಿಗಳ ಸಹಾಯದಿಂದ ಪ್ರಕರಣಗಳಲ್ಲಿ ನ್ಯಾಯ ಪಡೆದುಕೊಳ್ಳಬಹುದು.
ಈವರೆಗೆ 1420 ಪ್ರಕರಣಗಳನ್ನು ಮಧ್ಯಸ್ಥಿಕೆಗಾಗಿ ಗುರುತಿಸಿದ್ದು, 112 ಪ್ರಕರಣಗಳನ್ನು ಯಶಸ್ವಿಯಾಗಿ ರಾಜೀ ಮೂಲಕ ಬಗೆಹರಿಸಲಾಗಿದೆ ಎಂದರು.
ಖಾಯA ಲೋಕ್ ಅದಾಲತ್ ಜಾಗೃತಿ ಅಭಿಯಾನ :
ಸಾರ್ವಜನಿಕ ಉಪಯುಕ್ತ ಸೇವೆಗಳನ್ನು ನೀಡುತ್ತಿರುವ ಬ್ಯಾಂಕ್‌ಗಳು, ವಿಮಾ ಕಂಪನಿಗಳು, ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯಿತಿಗಳ ಅಧಿಕಾರಿಗಳಿಗೆ ಮತ್ತು ಸಾರ್ವಜನಿಕರಲ್ಲಿ ಖಾಯಂ ಲೋಕ್ ಅದಾಲತ್ ಕುರಿತು ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ಖಾಯಂ ಲೋಕ್ ಅದಾಲತ್ ಒಂದು ವಿಶೇಷ ನ್ಯಾಯಾಲಯವಾಗಿದ್ದು, ಪ್ರಕರಣಗಳ ರಾಜೀ ಸಂಧಾನವೇ ಈ ನ್ಯಾಯಾಲಯದ ಮೊದಲ ಆದ್ಯತೆಯಾಗಿದೆ. ಪ್ರಯಾಣಿಕರನ್ನು ಅಥವಾ ಸರಕನ್ನು ಸಾಗಿಸುವ ಭೂ ಸಾರಿಗೆ, ಜಲಸಾರಿಗೆ, ವಾಯು ಸಾರಿಗೆ ಸೇವೆಗಳು, ಅಂಚೆ ತಂತಿ, ದೂರವಾಣಿ ಸೇವೆಗಳು, ವಿದ್ಯುತ್, ನೀರು ಸರಬರಾಜು, ಸಾರ್ವಜನಿಕ ನೈರ್ಮಲ್ಯ ಹಾಗೂ ಚರಂಡಿ ವ್ಯವಸ್ಥೆ, ವಿಮಾ ಸೇವೆ, ಆಸ್ಪತ್ರೆ ಹಾಗೂ ಔಷಧಾಲಯಗಳ ಸೇವೆ, ಹಣಕಾಸು ಸಂಸ್ಥೆ ಹಾಗೂ ಬ್ಯಾಂಕ್ ಸೇವೆ, ಶಿಕ್ಷಣ ಸಂಸ್ಥೆಗಳ ಸಂಬಂಧಪಟ್ಟ ಸೇವೆ, ಗೃಹ ಹಾಗೂ ರಿಯಲ್ ಎಸ್ಟೇಟ್ ಸೇವೆ ಒಳಗೊಂಡAತೆ ಇನ್ನಿತರ ಸಾರ್ವಜನಿಕ ಉಪಯುಕ್ತ ಸೇವೆಗಳ ಪ್ರಕರಣಗಳನ್ನು ಈ ನ್ಯಾಯಾಲಯದಲ್ಲಿ ಸಲ್ಲಿಸಬಹುದು. ಇತರೆ ನ್ಯಾಯಾಲಯಗಳಂತೆ ಇಲ್ಲಿ ಶುಲ್ಕ ಕಟ್ಟುವಂತಿಲ್ಲ ಹಾಗೂ ಯಾವುದೇ ಆದಾಯದ ಮಿತಿ ಇರುವುದಿಲ್ಲ. ಈ ಖಾಯಂ ಲೋಕ್ ಅದಾಲತ್ ರಾಜ್ಯದ 6 ಜಿಲ್ಲೆಗಳಲ್ಲಿ ಕಚೇರಿ ಹೊಂದಿದ್ದು ಶಿವಮೊಗ್ಗ ಜಿಲ್ಲೆಯು ಮಂಗಳೂರಿನ ವ್ಯಾಪ್ತಿಗೆ ಬರುತ್ತದೆ. ಮುಂದಿನ ದಿನಗಳಲ್ಲಿ ಮಂಗಳೂರಿನ ಪೀಠವು ನಿಯಮಿತವಾಗಿ ಶಿವಮೊಗ್ಗಕ್ಕೆ ಬಂದು ಅದಾಲತ್ ನಡೆಸಲಿದೆ ಎಂದು ಮಾಹಿತಿ ನೀಡಿದರು.
ಖಾಯಂ ಜನತಾ ನ್ಯಾಯಾಲಯದಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಅಧ್ಯಕ್ಷರಾಗಿ ಹಾಘೂ ಇಬ್ಬರು ಸದಸ್ಯರು ರಾಜ್ಯ ಸರ್ಕಾರ ನಾಮನಿರ್ದೇಶನ ಮಾಡಿದಂತೆ ಕರ್ತವ್ಯ ನಿರ್ವಹಿಸುತ್ತಾರೆ. ರೂ.1 ಕೋಟಿ ಮೌಲ್ಯದ ವ್ಯಾಜ್ಯಗಳನ್ನು ಅಥವಾ ಹಣಕಾಸಿನ ವ್ಯವಹಾರ ಪ್ರಕರಣಗಳನ್ನು ದಾಖಲಿಸಬಹುದು. ಅರ್ಜಿದಾರರಿಗೆ ಯಾವುದೇ ಆದಾಯ ಮಿತಿ ಇರುವುದಿಲ್ಲ ಹಾಗೂ ನ್ಯಾಯಾಲಯದ ಶುಲ್ಕವಿರುವುದಿಲ್ಲ. ಖಾಯಂ ಜನತಾ ನ್ಯಾಯಾಲಯದಲ್ಲಿ ನೀಡಿದ ಐತೀರ್ಪು ಅವಾರ್ಡ್ನ್ನು ಯಾವುದೇ ಸಿವಿಲ್ ಅಥವಾ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಶ್ನಿಸುವ ಅವಕಾಶವಿಲ್ಲ.
ನಾಲ್ಸಾ ಕಾನೂನು ಉಚಿತ ಸಹಾಯ ವಾಣಿ 15100 :
ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ನವದೆಹಲಿಯ ಸೂಚನೆಯಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಿವಮೊಗ್ಗ ವತಿಯಿಂದ ಒಬ್ಬ ಮಹಿಳಾ ವಕೀಲರು ಹಾಗೂ ಒಬ್ಬ ಪುರುಷ ವಕೀಲರನ್ನು ಉಚಿತ ಸಹಾಯವಾಣಿ ಸಂಖ್ಯೆ 15100 ಗೆ ಬರುವ ಕರೆಗಳನ್ನು ಸ್ವೀಕರಿಸಿ ಸಾರ್ವಜನಿಕರ ಕುಂದು ಕೊರತೆಗೆ ಉಚಿತ ಕಾನೂನು ಸಲಹೆ ನೀಡಲು ನೇಮಿಸಲಾಗಿದ್ದು, ಸಾರ್ವಜನಿಕರು ಈ ಉಚಿತ ಸಹಾಯವಾಣಿ ಸಂಖ್ಯೆ ಕರೆ ಮಾಡಿ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳನ್ನು ಹೊರತುಪಡಿಸಿ ಉಳಿದಂತೆ ತಮಗೆ ಅವಶ್ಯಕವಿರುವ ತುರ್ತು ಕಾನೂನು ಸಲಹೆಯನ್ನು ಪಡೆದುಕೊಳ್ಳಬಹುದೆಂದರು.
ಪತ್ರಿಕಾಗೋಷ್ಟಿಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಂತೋಷ್ ಎಂ ಎಸ್ ಹಾಜರಿದ್ದರು.

ಶಿವಮೊಗ್ಗದಲ್ಲಿ ಪತ್ರಿಕಾ ವಿತರಕರಿಂದ ವಿಶ್ವಪತ್ರಿಕಾ ದಿನಾಚರಣೆ

0

ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ಮಾಲತೇಶ್ ಅವರಿಂದ ವಿಶ್ವ ಪತ್ರಿಕಾ ವಿತರಕರ ದಿನಾಚರಣೆ
ಇಂದು ಮುಂಜಾನೆ ಶಿವಮೊಗ್ಗ ಖಾಸಗಿ ಬಸ್ಟಾಂಡ್‌ನಲ್ಲಿ ನಡೆಯಿತು.
ಸಮಸ್ತ ವಿತರಕರು ಪತ್ರಿಕೆ ಹಂಚುವ ಹುಡುಗರು ಏಜೆಂಟರು ಪ್ರತಿಯೊಬ್ಬ ಓದುಗರಿಗೂ ವಿಶ್ವ ಪತ್ರಿಕಾ ವಿತರಣಾ ದಿನಾಚರಣೆಯ ಶುಭಾಶಯಗಳು ಸಂಭ್ರಮ ಆಚರಣೆಯ ಜೊತೆಗೆ ನಮ್ಮ ಮೂಲಭೂತ ಬೇಡಿಕೆಗಳನ್ನು ಸರ್ಕಾರ ಮತ್ತು ಕಂಪನಿಗಳು ಪರಿಹರಿಸಲಿ ನಮಗೂ ನ್ಯಾಯಯುತವಾದ ನ್ಯಾಯವನ್ನು ಕೊಡಿಸಲಿ ಎಂದು ಮಾಲತೇಶ್ ಅವರು ಆಶಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಮಹಿಳಾ ಸಂಘದ ಅಧ್ಯಕ್ಷರಾದ ಕವಿತಾ, ನಗರಾಧ್ಯಕ್ಷರಾದ ಜೀವನ್, ಆರತಿ ತಿವಾರಿ, ಮಾರುತಿ, ಪ್ರಪುಲ್ಲ ಚಂದ್ರು, ಪತ್ರಿಕಾ ವಿತರಕರ ರಾಜವರ್ಮ ಜೈನ್, ಏಜೆಂಟರ್, ಯುವರಾಜ್, ಉಮೇಶ್, ಯೋಗೀಶ್, ವಿತಕರಾದ ಪಾರ್ತಿಬನ್, ದುಗೋಜಿ, ಮೊಲನ ಸಾಬ್, ದತ್ತಣ್ಣ, ಪ್ರಶಾಂತ್, ಸತೀಶ್ ಇನ್ನು ಮುಂತಾದವರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಪತ್ರಿಕಾ ವಿತರಕರಾದ ರಾಜ್‌ಕುಮಾರ್, ಅಜಿದ್‌ವುಲ್ಲಾ ಅವರಿಗೆ ಗೌರವಿಸಿ ಸನ್ಮಾನಿಸಲಾಯಿತು.

Keladi Shivappa Nayak University of Agriculture and Horticulture ಬೇಕರಿ ಉತ್ಪನ್ನಗಳ ತಯಾರಿಕಾ ಆಸಕ್ತರಿಗೆ ಕೌಶಲ್ಯ ತರಬೇತಿ ಹೊಂದುವ ಅವಕಾಶ

0

Keladi Shivappa Nayak University of Agriculture and Horticulture ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವು ಸೆ. 15 ರಿಂದ ಅ.14 ರವರೆಗೆ 1 ತಿಂಗಳು ಶಿವಮೊಗ್ಗ ಕೃಷಿ ಮಹಾವಿದ್ಯಾಲಯ ಆವರಣದ ಬೇಕರಿ ಘಟಕದಲ್ಲಿ ವಿವಿಧ ಬೇಕರಿ ಉತ್ಪನ್ನಗಳಾದ ಬೆಣ್ಣೆ ಬಿಸ್ಕತ್ತು, ಕೋಕೋನಟ್ ಕುಕಿಸ್, ಕೋಕೊನಟ್ ಬಿಸ್ಕತ್ತು, ಮಸಾಲ ಬಿಸ್ಕತ್ತು, ಕೋಕೊನಟ್ ಕ್ಯಾಸಲ್ಸ, ಫ್ರುಟ್ ಕೇಕ್, ಸ್ಪಾಂಜ್‌ಕೇಕ್, ಜೆಲ್‌ಕೇಕ್, ಬಟರ್ ಐಸಿಂಗ್, ಮಿಲ್ಕ ಬ್ರೆಡ್, ಪಪ್‌, ಪೇಸ್ಟ್ರಿ ದಿಲ್ ಪಸಂದ್, ಬಾಂಬೆ ಕಾರ ಹಾಗೂ ಇತರೆ ಬೇಕರಿ ಉತ್ಪನ್ನಗಳ ತಯಾರಿಕೆಯ ಬಗ್ಗೆ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಆಯೋಜಿಸಿದೆ.

ಆಕಸ್ತರು ತರಬೇತಿ ಶುಲ್ಕ ರೂ. 4500/-ಗಳನ್ನು ಪಾವತಿಸಿ, ಸೆ.13 ರೊಳಗಾಗಿ ದೂರವಾಣಿ ಮೂಲಕ ಅಥವಾ ಖುದ್ದಾಗಿ ಕೃಷಿ ಮಹಾವಿದ್ಯಾಲಯವನ್ನು ಸಂಪರ್ಕಿಸಿ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಕೃಷಿ ಮತ್ತು ತೋಟಗಾರಿಕೆ ಮಹಾವಿದ್ಯಾಲಯದ ಪ್ರೋಫೆಸರ್ ತಿಳಿಸಿದ್ದಾರೆ.

Keladi Shivappa Nayak University of Agriculture and Horticulture ನೋಂದಾವಣೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಡಾ. ಜಯಶ್ರೀ ಎಸ್. -9449187763 ಮತ್ತು ಜಯಶಂಕರ-9686555897 ಇವರುಗಳನ್ನು ಸಂಪರ್ಕಿಸುವುದು.

Department of Kannada and Culture ಸೆ.7 ರಂದು ಕುವೆಂಪು ರಂಗಮಂದಿರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ, ಜಿಲ್ಲಾ ಆಡಳಿತದಿಂದ ಸಿದ್ಧತೆ

0

Department of Kannada and Culture ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಆರ್ಯ ಈಡಿಗರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಸೆ.7 ರ ಬೆಳಿಗ್ಗೆ 11 ಗಂಟೆಗೆ ನಗರದ ಕುವೆಂಪು ರಂಗಮಂದಿರದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ಇವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಲಿದ್ದು, ಶಾಸಕರಾದ ಎಸ್.ಎನ್. ಚನ್ನಬಸಪ್ಪ ಅಧ್ಯಕ್ಷತೆ ವಹಿಸುವರು.
ವಿಶೇಷ ಆಹ್ವಾನಿತರಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ತಂಗಡಗಿ ಶಿವರಾಜ ಸಂಗಪ್ಪ ಅವರು ಆಗಮಿಸುವರು.

Department of Kannada and Culture ಮುಖ್ಯ ಅತಿಥಿಗಳಾಗಿ ಸಂಸದರು, ವಿಧಾನಸಭಾ ಹಾಗೂ ವಿಧಾನ ಪರಿಷತ್ ಶಾಸಕರುಗಳು, ವಿವಿಧ ನಿಗಮ, ಮಂಡಳಿ, ಪ್ರಾಧಿಕಾರಗಳ ಅಧ್ಯಕ್ಷರು, ಆರ್ಯ ಈಡಿಗರ ಸಂಘದ ಜಿಲ್ಲಾ ಅಧ್ಯಕ್ಷರು, ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಒ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಮಹಾನಗರಪಾಲಿಕೆ ಆಯುಕ್ತರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಪಾಲ್ಗೊಳ್ಳುವರು.

ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಜಿ.ಕೆ. ಸತೀಶ್ ವಿಶೇಷ ಉಪನ್ಯಾಸ ನೀಡುವರು.

Karnataka Minorities Development Corporation ನವೋದ್ಯಮ ಯೋಜನೆಯಡಿ ಅಲ್ಪಸಂಖ್ಯಾತರಿಗೆ ಸಹಾಯಧನ, ಆನ್ ಲೈನ್ ಅರ್ಜಿ‌ಆಹ್ವಾನ

0

Karnataka Minorities Development Corporation ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು 2025-26ನೇ ಸಾಲಿಗೆ ನವೋದ್ಯಮ (Start Ups) ಕೈಗೊಳ್ಳುವ ಮುಸಲ್ಮಾನ, ಕ್ರೈಸ್ತ , ಜೈನ್, ಆಂಗ್ಲೋಇಂಡಿಯನ್ಸ್, ಬೌದ್ಧ, ಸಿಖ್ ಮತ್ತು ಪಾರ್ಸಿ ಜನಾಂಗದ ಯುವಕ/ಯುವತಿಯರಿಗೆ ಸಹಾಯಧನ ಪಡೆಯಲು ಆಸಕ್ತರಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ.
ಅರ್ಜಿದಾರರು ಕರ್ನಾಟಕದಲ್ಲಿ ನೋಂದಾಯಿತ ಪ್ರೈ.ಲಿ/ಒಪಿಸಿ/ಎಲ್‌ಎಲ್‌ಪಿ ಪಾಲುದಾರಿಕೆ ಸಂಸ್ಥೆಗಳು ಖಾಸಗಿ ನಿಯಮಿತ ಕಂಪನಿ ಅಥವಾ ಪಾಲುದಾರಿಕೆ ಸಂಸ್ಥೆಯಾಗಿ ನೋಂದಾಯಿಸಲ್ಪಟ್ಟಿರಬೇಕು. ಆರಂಭದ ದಿನಾಂಕದಿಂದ ವಹಿವಾಟಿನ ಒಟ್ಟು ಆದಾಯವು 100 ಕೋಟಿಗಿಂತ ಕಡಿಮೆಯಿರಬೇಕು. ನವೋದ್ಯಮಗಳ ನೋಂದಣಿ ದಿನಾಂಕದಿಂದ 10 ವರ್ಷಗಳನ್ನು ಮೀರಿರಬಾರದು. ಉತ್ಪನ್ನಗಳು/ಪ್ರಕ್ರಿಯೆಗಳು/ ಸೇವೆಗಳ ತಂತ್ರಜ್ಞಾನಗಳ ಅಭಿವೃದ್ಧಿ ಅಥವಾ ಸುಧಾರಣೆ ಕಾರ್ಯ ನಿರ್ವಹಿಸುವುದು. ಅಸ್ತಿತ್ವದಲ್ಲಿರುವ ವ್ಯವಹಾರವನ್ನು ವಿಭಜಿಸುವ ಅಥವಾ ಪುನರ್ ನಿರ್ಮಿಸುವ ಮೂಲಕ ರೂಪಗೊಂಡ ಸ್ಥಾಪನೆಯನ್ನು ಪರಿಗಣಿಸಲಾಗುವುದಿಲ್ಲ. ನಿರ್ದೇಶಕರುಗಳು/ಪಾಲುದಾರರು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿರಬೇಕು ಮತ್ತು ಕಂಪನಿ/ಸಂಸ್ಥೆಯಲ್ಲಿ ಕನಿಷ್ಠ ಶೇ. 51% ರಷ್ಟು ಪಾಲನ್ನು ಹೊಂದಿರಬೇಕು ಹಾಗೂ ಅನುದಾನ ಮಂಜೂರು ಮಾಡಲಾದ ಯೋಜನೆ ಅವಧಿಯವರೆಗೆ ಮತ್ತು ಎಲ್ಲಾ ಸಮಯದಲ್ಲೂ ಸಂಸ್ಥೆಯೊಂದಿಗೆ ಸಂಬಂಧ ಹೊಂದಿರಬೇಕು ಮತ್ತು ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯಿಂದ ಆರ್‌ಡಿ ಸಂಖ್ಯೆಯೊಂದಿಗೆ ಡಿಜಿಟಲ್ ಜಾತಿ ಪ್ರಮಾಣ ಪತ್ರವನ್ನು ಹೊಂದಿರಬೇಕು. ಈ ಯೋಜನೆಯ ಅವಧಿಯಲ್ಲಿ ಮಾಲೀಕತ್ವದ ನಿಯಮಗಳು ಮತ್ತು ಷರತ್ತುಗಳನ್ನು ನಿರ್ದೇಶಕರು/ಪಾಲುದಾರರ ಅನುಕೂಲಕ್ಕಾಗಿ ಬದಲಾಯಿಸಬಾರದು.
Karnataka Minorities Development Corporation ಆಸಕ್ತರು ವೆಬ್‌ಸೈಟ್ www.eitbt.karnataka.gov.in ರಲ್ಲಿ ಎಂಎಸ್‌ಎಂಇ ಉದ್ಯೋಗ, ಆಧಾರ್, ಜಿಎಸ್‌ಟಿ, ಟ್ರೆಂಡ್ ಯೂನಿಯನ್, ಕೆಎಂಎಫ್, ವ್ಯಾಟ್ ಪ್ರಮಾಣ ಪತ್ರಗಳು ಅಥವಾ ಅಂಗಡಿಗಳು ಮತ್ತು ಸಂಸ್ಥೆಯೊಂದಿಗೆ ಇರುವ ನೋಂದಣಿ ಸಹಿತ ಸೆ. 15 ರೊಳಗಾಗಿ ಅರ್ಜಿ ಸಲ್ಲಿಸುವಂತೆ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ನಿಗಮದ ವೆಬ್‌ಸೈಟ್ ಹಾಗೂ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ನಂಜಪ್ಪ ಆಸ್ಪತ್ರೆ ಮುಂಭಾಗದ ರಸ್ತೆ, ಅಜ್ಯುತ್‌ರಾವ್ ಲೇಔಟ್, 4ನೇ ತಿರುವು, ಶಿವಮೊಗ್ಗ, ದೂ.ಸಂ.: 08182-228262 ನ್ನು ಸಂಪರ್ಕಿಸುವುದು.