ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶಿವಮೊಗ್ಗ ಹಾಗೂ ಜಿಲ್ಲಾ ಜಂಗಮ ಹಾಗೂ ಬೇಡ ಜಂಗಮ ಸಮಾಜ ಇವರುಗಳ ಸಂಯಕ್ತಾಶ್ರಯದಲ್ಲಿ ಮಾ.01 ರ ಬೆಳಗ್ಗೆ 11 ಗಂಟೆಗೆ ನಗರದ ಕುವೆಂಪು ರಂಗಮAದಿರದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ- ಯುಗಮಾನೋತ್ಸವವನ್ನು ಏರ್ಪಡಿಸಲಾಗಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖಾ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧುಬಂಗಾರಪ್ಪ ಇವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು. ಶಾಸಕ ಎಸ್.ಎನ್. ಚನ್ನಬಸಪ್ಪರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ತಂಗಡಗಿ ಶಿವರಾಜ್ ಸಂಗಪ್ಪರವರು ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿರಲಿದ್ದಾರೆ.
ಕಾರ್ಯಕ್ರಮದಲ್ಲಿ ಸಂಸದರು, ವಿಧಾನಸಭಾ ಮತ್ತು ವಿಧಾನ ಪರಿಷತ್ ಶಾಸಕರು, ಪಾಲಿಕೆ ಮಹಾಪೌರರು, ಜನಪ್ರತಿನಿಧಿಗಳು, ವಿವಿಧ ನಿಗಮ, ಮಂಡಳಿ, ಪ್ರಾಧಿಕಾರಗಳ ಅಧ್ಯಕ್ಷರು, ಜಿಲ್ಲೆಯ ಎಲ್ಲಾ ಗೌರವಾನ್ವಿತ ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗ ಮತ್ತು ವಿವಿಧ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ಹಾಗೂ ಸದಸ್ಯರು, ಜಿಲ್ಲಾ ಮತ್ತು ತಾಲೂಕು ಜಂಗಮ ಸಮಾಜಗಳ ಹಾಗೂ ಬೇಡ ಜಂಗಮ ಸಮಾಜಗಳ ಅಧ್ಯಕ್ಷರುಗಳು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿ.ಪಂ ಸಿಇಓ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ಮಹಾನಗರ ಪಾಲಿಕೆ ಆಯುಕ್ತರು ಮತ್ತು ಇನ್ನಿತರ ಗಣ್ಯರು, ಅಧಿಕಾರಿಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಶಿವಮೊಗ್ಗದ ಜ್ಞಾನದೀಪ ಶಾಲೆಯ ಕನ್ನಡ ಉಪನ್ಯಾಸಕ ತುರುವನೂರು ಮಲ್ಲಿಕಾರ್ಜುನ ಎಂ.ವಿ. ಇವರಿಂದ ವಿಶೇಷ ಉಪನ್ಯಾಸ ಆಯೋಜಿಸಲಾಗಿದೆ.
ಮಾರ್ಚ್ 1. ಕುವೆಂಪು ರಂಗಮಂದಿರದಲ್ಲಿ ಶ್ರೀರೇಣುಕಾಚಾರ್ಯ ಜಯಂತಿ
ಕುರಿ/ ಮೇಕೆ ಘಟಕಕ್ಕೆ ಸಹಾಯಧನ ಪಡೆಯಲು ಅರ್ಜಿ ಆಹ್ವಾನ
ಶಿವಮೊಗ್ಗ ಜಿಲ್ಲೆಯ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮವು ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಕುರಿ/ಮೇಕೆ ಘಟಕ ಸ್ಥಾಪಿಸಲು ಸಹಾಯಧನಕ್ಕಾಗಿ ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.
ಅರ್ಜಿದಾರರು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಕೂಲಿ ಕಾರ್ಮಿಕರು, ಕೃಷಿ ಕಾರ್ಮಿಕರು ಮತ್ತು ಪಶು ಸಂಗೋಪನೆಯಲ್ಲಿ ತೊಡಗಿರುವ 18 ರಿಂದ 60 ವರ್ಷದೊಳಗಿನವರಾಗಿದ್ದು, ಜಾತಿ ಪ್ರಮಾಣ ಹೊಂದಿರಬೇಕು ಮತ್ತು ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಾಯಿಸಿಕೊಂಡಿರಬೇಕು. ಮಹಿಳೆಯರಿಗೆ ಶೇ. 33.3 ರಷ್ಟು ಮತ್ತು ವಿಶೇಷಚೇತನರಿಗೆ ಶೆ. 3 ರಷ್ಟು ಮೀಸಲಾತಿ ಕಲ್ಪಿಸಲಾಗಿದೆ.
ಆಸಕ್ತರು ನಿಗದಿತ ನಮೂನೆ ಅರ್ಜಿಯನ್ನು ಜಿಲ್ಲೆಯ ಎಲ್ಲಾ ತಾಲೂಕು ಪಶು ಆಸ್ಪತ್ರೆ ಅಥವಾ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕರ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ ಮಾ. 10 ರೊಳಗಾಗಿ ಜಿಲ್ಲಾ ಅನುಷ್ಠಾನಾಧಿಕಾರಗಳ ಕಚೇರಿಗೆ ಸಲ್ಲಿಸುವಂತೆ ನಿಗಮದ ಸಹಾಯಕ ನಿರ್ದೇಶಕರು ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕರ ಕಚೇರಿ/ ಪಶುವೈದ್ಯ ಸೇವಾ ಸಂಸ್ಥೆಗಳ ಕಚೇರಿಯನ್ನು ಸಂಪರ್ಕಿಸುವುದು.
Akashavani Bhadravati ಆಕಾಶವಾಣಿ ಭದ್ರಾವತಿ ಈಗ ಎಫ್.ಎಮ್. ತರಂಗಾಂತರದಲ್ಲಿ ಎಂಟು ಜಿಲ್ಲೆಗಳ ಪ್ರಸಾರ ಸಾಮರ್ಥ್ಯ ಹೆಚ್ಚಿಸಿಕೊಂಡಿದೆ: ಕೇಂದ್ರ ಸಚಿವ ಎಲ್.ಮುರುಗನ್
Akashavani Bhadravati ರೇಡಿಯೋ ವಿಶ್ವಾಸಾರ್ಹ ಮತ್ತು ಪರಿಣಾಮಕಾರಿ ಸಂವಹನ ಮಾಧ್ಯಮವಾಗಿದ್ದು ನೂತನವಾಗಿ ಭದ್ರಾವತಿ ಆಕಾಶವಾಣಿಗೆ ಎಫ್.ಎಂ ಅಳವಡಿಸುವ ಮೂಲಕ ಕಡೆಯ ವ್ಯಕ್ತಿಯನ್ನು ತಲುಪುವ ದೃಢ ಹೆಜ್ಜೆಯನ್ನು ಇಡಲಾಗಿದೆ ಎಂದು ಕೇಂದ್ರದ ಮಾಹಿತಿ ಹಾಗೂ ಪ್ರಸಾರ ಮತ್ತು ಸಂಸದೀಯ ವ್ಯವಹಾರಗಳ ಖಾತೆಯ ರಾಜ್ಯ ಸಚಿವರಾದ ಎಲ್.ಮುರುಗನ್ ತಿಳಿಸಿದರು.
ಶಿವಮೊಗ್ಗದ ವಿದ್ಯಾನಗರದಲ್ಲಿ ಗುರುವಾರ ಭದ್ರಾವತಿ ಆಕಾಶವಾಣಿಗೆ ನೂತನವಾಗಿ ಅಳವಡಿಸಲಾದ 10 ಕಿಲೋ ವ್ಯಾಟ್ ಸಾಮರ್ಥ್ಯದ ಎಫ್.ಎಂ. ಪ್ರೇಷಕದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.
ಭದ್ರಾವತಿ ಆಕಾಶವಾಣಿಗೆ ಇದೊಂದು ಉಡುಗೊರೆಯಾಗಿದ್ದು, ಜಿಲ್ಲೆಯ ಮೂಲೆ ಮೂಲೆ ಸೇರಿದಂತೆ 8 ಜಿಲ್ಲೆಗಳನ್ನು ತಲುಪಲಿದೆ. ರೇಡಿಯೋ ಒಂದು ಶಕ್ತಿಯುತವಾದ ಸಂವಹನ ಮಾಧ್ಯವಾಗಿದ್ದು ಕೇಂದ್ರ ಸರ್ಕಾರವು ಡಿಜಿಟಲ್ ಮತ್ತು ಸಂವಹನ ಮಾಧ್ಯಮಗಳ ಮೂಲಭೂತ ಸೌಕರ್ಯಗಳ ಅಭಿವೃದ್ದಿ ಮತ್ತು ಗುಣಮಟ್ಟ ವೃದ್ದಿಗಾಗಿ ರೂ.2000 ಕೋಟಿ ಖರ್ಚು ಮಾಡುತ್ತಿದೆ.
ರೇಡಿಯೋ ಆಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಂಡು ಅತಿ ಹೆಚ್ಚು ಜನರನ್ನು ತಲುಪುತ್ತಿದ್ದು ಶೇ.92 ಭಾಗವನ್ನು ತಲುಪುತ್ತಿರುವ ಬಹುದೊಡ್ಡ ಪ್ರಸಾರ ಮಾಧ್ಯಮವಾಗಿದೆ. ಕೇಂದ್ರವು ಕಲೆ, ಸಂಸ್ಕೃತಿ, ವಿನ್ಯಾಸ, ಚಲನಚಿತ್ರ, ಸಂಗೀತ, ಸಾಫ್ಟ್ವೇರ್ ಮತ್ತು ಗೇಮಿಂಗ್‌ನAತಹ ಸೃಜನಶೀಲ ಉದ್ಯಮಗಳನ್ನು ಒಳಗೊಂಡಿರುವ ಆರ್ಥಿಕ ವ್ಯವಸ್ಥೆ ‘ಆರೆಂಜ್ ಎಕಾನಮಿಗೆ ಹೆಚ್ಚಿನ ಒತ್ತು ನೀಡುತ್ತಿದೆ. 25 ಸಾವಿರ ಶಾಲೆಗಳಿಗೆ ಕ್ರಿಯೇಟಿವ್ ಲ್ಯಾಬ್‌ನ್ನು ನೀಡುತ್ತಿದೆ ಎಂದರು.
Akashavani Bhadravati ರೇಡಿಯೋ ಒಂದು ಶಕ್ತಿಯುತ ಮತ್ತು ಪರಿಣಾಮಕಾರಿ ಸಂವಹನ ಮಾಧ್ಯಮ ಮಾತ್ರವಲ್ಲದೇ ನೈಜ, ಸತ್ಯ ಮತ್ತು ಸಮರ್ಪಕವಾದ ಸುದ್ದಿ, ವಿಷಯಗಳನ್ನು ನೀಡುವ ಮೂಲಕ ಜನರ ನಂಬಿಕೆ ಉಳಿಸಿಕೊಂಡಿದೆ. ಜೊತೆಗೆ ಸ್ಥಳೀಯ ಕಲಾವಿದರನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಲು ಒಂದು ವೇದಿಕೆ ನಿರ್ಮಾಣ ಮಾಡಿದೆ. ಹೊಸತನಕ್ಕೆ ಸ್ಪೂರ್ತಿಯಾಗಿದೆ.
ರೇಡಿಯೋ 23 ಭಾಷೆಗಳು ಮತ್ತು 182 ಉಪಭಾಷೆಗಳಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಾ, ಗಡಿನಾಡು, ಗುಡ್ಡಗಾಡು, ಮತ್ತು ದೂರದ ಪ್ರದೇಶಗಳನ್ನು ತಲುಪುತ್ತಿದೆ. ಎಲ್ಲ ವರ್ಗ ಮತ್ತು ವಯೋಮಾನ ಹಾಗೂ ಎಲ್ಲ ಕ್ಷೇತ್ರಗಳಿಗೆ ಸಂಬAಧಿಸಿದ ಕಾರ್ಯಕ್ರಮಗಳು ಬಿತ್ತರವಾಗುತ್ತವೆ. ಆಕಾಶವಾಣಿ ಪಾಡ್‌ಕಾಸ್ಟ್ ಸಹ ಶುರುವಾಗಿದ್ದು ಕಮ್ಯುನಿಟಿ ರೇಡಿಯೋ ಸಹ ಬಹು ದೊಡ್ಡ ಪಾತ್ರ ವಹಿಸುತ್ತಿದೆ. 550 ಕಮ್ಯುನಿಟಿ ರೇಡಿಯೋ ಕೆಲಸ ಮಾಡುತ್ತಿದೆ. ಭದ್ರಾವತಿ ಆಕಾಶವಾಣಿ ಎಫ್ ಎಂ 25ನೇ ಪ್ರೇಷಕವಾಗಿದ್ದು 3500 ಚ ಕಿ.ಮೀ ನ್ನು ಕವರ್ ಮಾಡುತ್ತದೆ ಎಂದರು.
ಸಂಸದರು, ಶಾಸಕರು ಮನವಿ ಮಾಡಿದಂತೆ ನಗರದ ಪಾರ್ಕುಗಳಲ್ಲಿ ಬಾನುಲಿ ಕೇಳುವಂತಹ ವ್ಯವಸ್ಥೆ ಮಾಡಲು ಇಲ್ಲಿ ಪೈಲಟ್ ಯೋಜನೆಯಾಗಿ ಅನುಷ್ಟಾನಗೊಳಿಸಲಾಗುವುದು ಎಂದು ಇದೇ ವೇಳೆ ಭರವಸೆ ನೀಡಿದರು.
ಸಂಸದರಾದ ಬಿ.ವೈ.ರಾಘವೇಂದ್ರ ಮಾತನಾಡಿ, ಎಫ್.ಎಂ ಪ್ರೇಷಕ ಅಳವಡಿಕೆಗೆ 2024 ರ ಜನವರಿಯಲ್ಲಿ ಅಡಿಗಲ್ಲು ಹಾಕಲಾಗಿತ್ತು. ಇದೀಗ ಅದು ಸಾಕಾರಗೊಂಡಿದ್ದು ಆಕಾಶವಾಣಿ ಭದ್ರಾವತಿ ಕೇಂದ್ರ 10 ಕಿಲೋ ವ್ಯಾಟ್ ಸಾಮರ್ಥ್ಯದ ಎಫ್.ಎಂ 101.4 ತರಂಗಾAತರ ಎಫ್ ಎಂ ಪ್ರೇಷಕದ ಅಳವಡಿಕೆಯಿಂದಾಗಿ ಶಿವಮೊಗ್ಗದ ಸುತ್ತಲಿನ ಎಂಟು ಜಿಲ್ಲೆಗಳಿಗೆ ಪ್ರಸಾರ ವ್ಯಾಪ್ತಿ ಹೆಚ್ಚಿಸಿಕೊಳ್ಳುತ್ತಿದೆ. ಸುಮಾರು 1 ಕೋಟಿ ಜನರಿಗೆ ಈ ಸೇವೆ ಲಭ್ಯವಾಗುತ್ತಿದ್ದು ಭದ್ರಾವತಿ ಆಕಾಶವಾಣಿಯ ವಜ್ರ ಮಹೋತ್ಸವದ ಉಡುಗೊರೆ ಇದಾಗಿದೆ.
ಆಕಾಶವಾಣಿಯು ಆರಂಭಿಕ ಹಂತದಿAದ ಹಂತ ಹಂತವಾಗಿ ಬೆಳೆಯುತ್ತಾ ಬಂದಿದೆ. ಡಿಜಿಟಲ್ ಮತ್ತು ಸಂವಹನ ಕ್ರಾಂತಿಗೆ ಕೇಂದ್ರ ಸರ್ಕಾರ ಒತ್ತು ನೀಡಿದ್ದು, ಸಂಪೂರ್ಣ ಕನ್ನಡಿಗರನ್ನು ತಲುಪುವ ಏಕೈಕ ಕೇಂದ್ರವಾಗಿ ಭದ್ರಾವತಿ ಆಕಾಶವಾಣಿ ಹೊರಹೊಮ್ಮಿದೆ. ವಿದ್ಯಾನಗರದ 150 ಮೀಟರ್ ದೂರದರ್ಶನ ಟವರ್ ನ್ನು ಬಳಕೆ ಮಾಡಿಕೊಂಡು 10 ಕಿಲೋ ವ್ಯಾಟ್ ಸಾಮರ್ಥ್ಯದ ಎಫ್.ಎಂ ಪ್ರೇಷಕ ಅಳವಡಿಸಲಾಗಿದೆ ಎಂದರು.
ಇನ್ನು ಮುಂದೆ ನಗರದ ಎಲ್ಲ ಪಾರ್ಕುಗಳಲ್ಲಿ ರೇಡಿಯೋ ಸ್ಟೇಷನ್‌ಗಳನ್ನು ಅಳವಡಿಸಲು ಕೇಂದ್ರ ಸಚಿವರು ಇದೇ ಸಂದರ್ಭದಲ್ಲಿ ಒಪ್ಪಿಗೆ ನೀಡಿರುವುದು ಅಭಿನಂದನೀಯ ಎಂದರು.
ಶಾಸಕರಾದ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಎಫ್.ಎಂ ಪ್ರಸಾರಕ್ಕಾಗಿ ಶಿವಮೊಗ್ಗದ ಜನತೆ ಬಹಳ ವರ್ಷಗಳಿಂದ ಕಾಯುತ್ತಿದ್ದರು. ಇದೀಗ ಎಫ್.ಎಂ. ಪ್ರೇಷಕದ ಅಳವಡಿಕೆಯು ಜನರಲ್ಲಿ ಸಂತೋಷ ತಂದಿದೆ. ನಿಗದಿತ ಸಮಯಕ್ಕೆ ಆರಂಭವಗುವ ಆಕಾಶವಾಣಿ ಕಾರ್ಯಕ್ರಮಗಳು ಎಲ್ಲರ ಮನೆ ಮಾತಾಗಿವೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವರು ಭದ್ರಾವತಿ ಆಕಾಶವಾಣಿಗೆ ಎಫ್.ಎಂ ತರಲು ಸಹಕರಿಸಿದ್ದು ಅವರಿಗೆ ಅಭಿನಂದನೆಗಳು. ಮುಂದಿನ ದಿನಗಳಲ್ಲಿ ನಗರದ ಎಲ್ಲ ಪಾರ್ಕ್ಗಳಲ್ಲಿ ಜನರಿಗೆ ಬಾನುಲಿ ಪ್ರಸಾರ ಮಾಡುವ ಬಗ್ಗೆ ಚಿಂತಿಸಲಾಗುತ್ತಿದ್ದು, ಕೇಂದ್ರದ ಸಚಿವರು ಈ ಕುರಿತು ಸಹಕಾರ ನೀಡಬೇಕು ಎಂದರು.
ಆಕಾಶವಾಣಿ ಮಹಾ ನಿರ್ದೇಶಕರಾದ ರಾಜೇಂದ್ರ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಆಕಾಶವಾಣಿ ಇದೀಗ ತಲುಪಲಾರದ ಪ್ರದೇಶಗಳನ್ನು ತಲುಪುವ ಪ್ರಯತ್ನ ಮಾಡುತ್ತಿದೆ. ಹಾಗೂ ಎಲ್ಲೆಡೆ ಮಾಹಿತಿ, ಶಿಕ್ಷಣ ಮತ್ತು ರಂಜನೆಯನ್ನು ಒದಗಿಸುತ್ತಾ ಬಂದಿದ್ದು, ರಾಷ್ಟಿçÃಯ ಐಕ್ಯತೆಯ ಪ್ರತೀಕವಾಗಿದೆ ಮತ್ತು ವಿಶ್ವಾಸಾರ್ಹ ಧ್ವನಿಯಾಗಿ ಹೊರಹೊಮ್ಮಿದೆ ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕರಾದ ಡಾ.ಧನಂಜಯ ಸರ್ಜಿ, ಪ್ರಸಾರ ಭಾರತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೌರವ್ ದ್ವಿವೇದಿ, ಮಾಜಿ ಶಾಸಕರಾದ ಕುಮಾರಸ್ವಾಮಿ, ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಖಿಲ್ ಬಿ, ದಕ್ಷಿಣ ವಲಯ(ಬ್ರಾಡ್‌ಕಾಸ್ಟ್ ಆಪರೇಷನ್ಸ್)ದ ಅಪರ ಮಹಾ ನಿರ್ದೇಶಕಿ ಗೀತಾ ರಾಣಿ, ಆಕಾಶವಾಣಿ ಭದ್ರಾವತಿಯ ಮುಖ್ಯಸ್ಥರಾದ ಎಸ್. ಆರ್ ಭಟ್, ಚೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷರಾದ ಗೋಪಿನಾಥ್, ಜನಪ್ರತಿನಿಧಿಗಳು, ಅಧಿಕಾರಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.
CM Siddharamaiah ಸರ್ಕಾರಿ ನೇಮಕಾತಿ ಬಗ್ಗೆ ಈ ಸಲದ ಬಜೆಟ್ ನಲ್ಲಿ ತಿಳಿಸಲಾಗುವುದು: ಸಿದ್ಧರಾಮಯ್ಯ
CM Siddharamaiah ಬಿಜೆಪಿಯವರು ತಾವು ಅಧಿಕಾರದಲ್ಲಿದ್ದಾಗ, ಯಾವುದೇ ಕೆಲಸವನ್ನು ಮಾಡದೇ, ಈಗ ವಿರೋಧ ಪಕ್ಷದ ಸ್ಥಾನದಲ್ಲಿದ್ದುಕೊಂಡು ಕೇವಲ ಪ್ರತಿಭಟನೆ ಮಾಡುವುದರಲ್ಲೇ ನಿರತರಾಗಿದ್ದಾರೆ ಎಂದು ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಸಿಎಂ ಸಿದ್ದರಾಮಯ್ಯನವರು ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದರು.
ಬಿಜೆಪಿಯವರು ತಾವು ಅಧಿಕಾರದಲ್ಲಿದ್ದಾಗ, ಯಾವುದೇ ಕೆಲಸವನ್ನು ಮಾಡದೇ, ಈಗ ವಿರೋಧ ಪಕ್ಷದ ಸ್ಥಾನದಲ್ಲಿದ್ದುಕೊಂಡು ಕೇವಲ ಪ್ರತಿಭಟನೆ ಮಾಡುವುದರಲ್ಲೇ ನಿರತರಾಗಿದ್ದಾರೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರು 2 ಕೋಟಿ ಉದ್ಯೋಗ ನೀಡುವುದಾಗಿ ತಿಳಿಸಿದರೇ ಹೊರತು, ಯಾರಿಗೂ ಉದ್ಯೋಗ ದೊರೆಯಲಿಲ್ಲ. ರಾಜ್ಯದಲ್ಲಿ ಬಿಜೆಪಿಯವರು ಆಡಳಿತ ನಡೆಸಿದ ಸಂದರ್ಭದಲ್ಲಿ ಯಾವುದೇ ಉದ್ಯೋಗಗಳನ್ನು ನೀಡಲಿಲ್ಲ. ಆದ್ದರಿಂದ ನಮ್ಮ ಸರ್ಕಾರವನ್ನು ಪ್ರಶ್ನಿಸಲು ಬಿಜೆಪಿಯವರಿಗೆ ಯಾವುದೇ ನೈತಿಕತೆ ಇಲ್ಲ ಎಂದು ಹೇಳಿದರು.
CM Siddharamaiah ಸರ್ಕಾರಿ ನೇಮಕಾತಿಗಳಲ್ಲಿ ಒಳಮೀಸಲಾತಿಯ ಸಮಸ್ಯೆಯಿಂದ ವಿಳಂಬವಾಗಿತ್ತಾದರೂ, ಸದ್ಯದಲ್ಲಿಯೇ ನೇಮಕಾತಿಯನ್ನು ಪ್ರಾರಂಭಿಸಿ, ಹಂತ ಹಂತವಾಗಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ನಮ್ಮ ಸರ್ಕಾರ ನುಡಿದಂತೆ ನಡೆದು ಸರ್ಕಾರಿ ನೇಮಕಾತಿಗಳನ್ನು ಮಾಡಲಿದ್ದು, ಈ ಬಗ್ಗೆ ಬಜೆಟ್ ನಲ್ಲಿಯೂ ಘೋಷಣೆ ಮಾಡಲಾಗುವುದು ಎಂದು ತಿಳಿಸಿದರು.
ಅಪರಿಚಿತ ವ್ಯಕ್ತಿಯ ಸಾವು.ಭದ್ರಾವತಿ ನ್ಯೂಟೌನ್ ಪೊಲೀಸ್ ಪ್ರಕಟಣೆ
ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಭದ್ರಾವತಿ ಸರ್ಕಾರಿ ಬಸ್ ನಿಲ್ದಾಣದಲ್ಲಿ ಸುಸ್ತಾಗಿ ಬಿದ್ದಿದ್ದ 45-50 ವರ್ಷದೊಳಗಿನ ವ್ಯಕ್ತಿಯೊಬ್ಬರನ್ನು ಬೊಮ್ಮಕಟ್ಟೆ ವೃದ್ಧಾಶ್ರಮಕ್ಕೆ ಸೇರಿಸಿದ್ದು, ಈ ವ್ಯಕ್ತಿಯ ವೃದ್ದಾಶ್ರಮದಲ್ಲಿ ಫೆ. 23 ರಂದು ಮಲಗಿದ್ದಲ್ಲೆ ಮೃತಪಟ್ಟಿರುತ್ತಾರೆ.
ಮೃತನ ಚಹರೆ 5.5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ, ಬಲಗೈ ಮುಂಗೈಯಲ್ಲಿ ರಂಗಮ್ಮ ಎಂದು ಹಚ್ಚೆ ಇರುತ್ತದೆ. ಮೈಮೇಲೆ ಬಿಳಿ-ಕಂದು ಮಿಶ್ರಿತ ತುಂಬು ತೋಳಿನ ಚೆಕ್ಸ್ ಶರ್ಟ್, ನೀಲಿ ಜೀನ್ಸ್ ಪ್ಯಾಂಟ್ ಧರಿಸಿರುತ್ತಾರೆ.
ಈ ಮೃತ ವ್ಯಕ್ತಿಯ ವಾರಸುದಾರರ ಬಗ್ಗೆ ತಿಳಿದಲ್ಲಿ ನ್ಯೂ ಟೌನ್ ಪೊಲೀಸ್ ಠಾಣೆ ದೂ.ಸಂ.: 9480803355/ 9480803381 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ತಿಳಿಸಿದೆ.
Rotary Club Shivamogga ಸೇವಾ ಮನೋಭಾವ ಬೆಳೆಸುತ್ತಿರುವ ರೋಟರಿ ಸೇವೆ ಶ್ಲಾಘನೀಯ: ಓಂಗಣೇಶ್ ಉಪ್ಪುಂದ
Rotary Club Shivamogga ರೋಟರಿ ನಿರಂತರವಾಗಿ ಸಮಾಜಮುಖಿ ಕಾರ್ಯಗಳನ್ನು ನಡೆಸುವ ಮೂಲಕ ವಿಶ್ವಾದ್ಯಂತ ಸೇವಾ ಕಾರ್ಯ ನಡೆಸುತ್ತಿದೆ ಎಂದು ನಟ ಓಂಗಣೇಶ್ ಉಪ್ಪುಂದ ಹೇಳಿದರು.
ಶಿವಮೊಗ್ಗ ನಗರದ ಕಾಸ್ಮೋ ಕ್ಲಬ್‌ನಲ್ಲಿ ರೋಟರಿ ಕ್ಲಬ್ ವಲಯ 10 ಮತ್ತು 11ರ ವತಿಯಿಂದ ಆಯೋಜಿಸಿದ್ದ ವಿಶ್ವ ತಿಳವಳಿಕೆ ಮತ್ತು ಶಾಂತಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಎಲ್ಲರನ್ನು ಒಳಗೊಂಡು ಸೇವಾ ಮನೋಭಾವ ಬೆಳೆಸುವ ಕೆಲಸ ಮಾಡುತ್ತಿರುವ ರೋಟರಿ ಸೇವೆ ಶ್ಲಾಘನೀಯ ಎಂದು ತಿಳಿಸಿದರು.
ರೋಟರಿ ನಿಯೋಜಿತ ಜಿಲ್ಲಾ ಗವರ್ನರ್ ವಸಂತ್ ಹೋಬಳಿದಾರ್ ಮಾತನಾಡಿ, ರೋಟರಿ ಸಂಸ್ಥೆಯಲ್ಲಿ ಎಲ್ಲರೂ ಒಟ್ಟಾಗಿ ಸೇವಾ ಕಾರ್ಯಗಳನ್ನು ನಡೆಸುತ್ತಿದ್ದು, ರೋಟರಿ ಸದಸ್ಯರ ಸಂಖ್ಯೆ ಹೆಚ್ಚಿಸುವಲ್ಲಿ ಆದ್ಯತೆ ನೀಡಬೇಕು ಎಂದು ಹೇಳಿದರು.
ರೋಟರಿ ಕ್ಲಬ್ ಶಿವಮೊಗ್ಗ ಮಲೆನಾಡು ಅಧ್ಯಕ್ಷ ಪ್ರಕಾಶ್ ಮೂರ್ತಿ ಮಾತನಾಡಿ, ರೋಟರಿ ಸದಸ್ಯರ ವಿಸ್ತರಣೆಗೆ ರೋಟರ‍್ಯಾಕ್ಟ್ ಕ್ಲಬ್‌ಗಳ ವಿಸ್ತರಣೆ ಬಹು ಮುಖ್ಯ. ರೋಟರಿ ವಿಶ್ವ ತಿಳುವಳಿಕೆ ಮತ್ತು ಶಾಂತಿ ದಿನದಂದು ಸಂಸ್ಕೃತಿ, ರಾಷ್ಟ್ರ ಮತ್ತು ನಂಬಿಕೆಗಳಾದ್ಯಂತ ಜನರನ್ನು ಸಂಪರ್ಕಿಸಿವ ಏಕತೆ ಮನೋಭಾವವನ್ನು ನಾವು ಆಚರಿಸುತ್ತೇವೆ ಎಂದು ಹೇಳಿದರು.
ನಿಜವಾದ ಶಾಂತಿ ಇತರರಿಗೆ ತಿಳುವಳಿಕೆ. ಸಹಾನುಭೂತಿ ಮತ್ತು ಸೇವೆಯಿಂದ ಪ್ರಾರಂಭವಾಗುತ್ತದೆ ಎಂದು ರೋಟರಿ ನಮಗೆ ನೆನಪಿಸುತ್ತದೆ. ಒಂದುಗೊಡಿ ಕೆಲಸ ಮಾಡುವ ಮೂಲಕ ಮತ್ತು ಸೇವೆಯನ್ನು ಹೆಚ್ಚಾಗಿ ಮಾಡುವ ಮೂಲಕ ನಾವು ಸ್ನೇಹದ ಸೇತುವೆಗಳನ್ನು ನಿರ್ಮಿಸಿ ಭವಿಷ್ಯದ ಪೀಳಿಗೆಗೆ ಹೆಚ್ಚು ಶಾಂತಿಯುತ ಮತ್ತು ಭರವಸೆಯ ಜಗತ್ತನ್ನು ರಚಿಸಬಹುದು ಎಂದು ತಿಳಿಸಿದರು.
Rotary Club Shivamogga ರೋಟರಿ ಸಹಾಯಕ ಗವರ್ನರ್ ಕೆ.ಪಿ.ಶೆಟ್ಟಿ, ಲಕ್ಷ್ಮಣ್ ಗೌಡ, ತರಬೇತುದಾರ ನಾಗರಾಜ್, ಸುರೇಶ, ವಲಯ ಕಾರ್ಯದರ್ಶಿ ಮೋಹನ್, ಜೆ.ರಾಧಾಕೃಷ್ಣ, ಶಂಕರ್, ಜಗದೀಶ ಸರ್ಜಾ, ರಂಗರಾಜನ್, ಕಿರಣಕುಮಾರ್, ಚಂದ್ರಶೇಖರ್, ಪ್ರಕಾಶ್ ಜಿ.ಎನ್., ಕಾರ್ಯದರ್ಶಿ ರಶ್ಮಿ, ಇವೆಂಟ್ ಕಾರ್ಯದರ್ಶಿ ಮಂಜುಳಾ ರಾಜು, ರೋಟರಿ ಸದಸ್ಯರು ಮತ್ತಿತರರು ಪಾಲ್ಗೊಂಡಿದ್ದರು.
D.K. Shivakumar ಹಿಮೋಫೀಲಿಯ ಪೀಡಿತ ಒಬ್ಬ ರೋಗಿಗೆ ವರ್ಷಕ್ಕೆ ರೂ 5 ಲಕ್ಷ ಖರ್ಚಾಗುತ್ತದೆ : ಡೀಸಿಎಂ ಡಿ.ಕೆ.ಶಿವಕುಮಾರ್
D.K. Shivakumar ಹಿಮೋಫಿಲಿಯಾ ಅಪರೂಪದ ಕಾಯಿಲೆ. ಹಿಮೋಫಿಲಿಯಾ ರೋಗಿಗಳಿಗೆ ತಿಂಗಳಿಗೆ ಒಂದು ಇಂಜೆಕ್ಷನ್ ಕೊಡಬೇಕು, ವರ್ಷಕ್ಕೆ ಒಬ್ಬ ರೋಗಿಗೆ 5 ಲಕ್ಷ ರೂ. ಖರ್ಚಾಗುತ್ತದೆ. ಜನರಿಗೆ ಅನುಕೂಲವಾಗಲಿ ಎಂದು ಹಿಮೋಫಿಲಿಯಾ ರೋಗ ನಿರೋಧಕ ಚಿಕಿತ್ಸೆ ನೀಡಲು ನಮ್ಮ ಸರ್ಕಾರ ಮುಂದೆ ಬಂದಿದೆ. ಇಡೀ ದೇಶದಲ್ಲಿ ಯಾವ ಸರ್ಕಾರವೂ ಮಾಡದ ಕೆಲಸವನ್ನೂ ನಮ್ಮ ಸರ್ಕಾರ ಮಾಡುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ಹಿಮೋಫೀಲಿಯ ರೋಗಿಗಳಿಗೆ ವಿಶೇಷವಾಗಿ ಇರುವ ಅಂಬ್ಯುಲೆನ್ಸ್ ವಾಹನಗಳನ್ನ ಲೋಕಾರ್ಪಣಗೊಳಿಸಿದ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು.
ಹಿಮೋಫಿಲಿಯಾದಿಂದ ಬಳಲುತ್ತಿರುವ ಮಕ್ಕಳು ಹಾಗೂ ದೊಡ್ಡವರು ಯಾರೂ ಕೂಡ ವಿಶ್ವಾಸವನ್ನು ಕಳೆದುಕೊಳ್ಳಬಾರದು. ಈ ಕಾಯಿಲೆ ಬಂದ ಕೂಡಲೇ ನಮ್ಮ ಕೈಯಿಂದ ಏನೂ ಮಾಡಲು ಆಗುವುದಿಲ್ಲ ಎಂಬ ಭಾವನೆ ಬರಬಾರದು. ಎಷ್ಟೇ ಖರ್ಚಾದರೂ ಮಕ್ಕಳ ಜೊತೆಗೆ ಹಾಗೂ ಪೋಷಕರ ಜೊತೆಗೆ ಸರ್ಕಾರ ಇದೆ. ನಿಮ್ಮ ಬದುಕಿಗೆ ಹೊಸ ಶಕ್ತಿ ತುಂಬುವುದೇ ಸರ್ಕಾರದ ಉದ್ದೇಶವಾಗಿದೆ.
D.K. Shivakumar ನಮ್ಮ ಆರೋಗ್ಯ ಇಲಾಖೆ ಇಡೀ ದೇಶಕ್ಕೆ ಮಾದರಿಯಾಗಿದೆ. ಹಿಮೋಫಿಲಿಯಾ ರೋಗಿಗಳಿಗೆ ಚಿಕಿತ್ಸೆ ನೀಡಲು ಮುಂದಾಗುವ ಮೂಲಕ ಕ್ರಾಂತಿಕಾರಕ ಹೆಜ್ಜೆಯನ್ನಿಟ್ಟಿದೆ ಎಂದು ಉಪಮುಖ್ಯಮಂತ್ರಿಗಳು ಹೇಳಿದರು.
Krishna Bhairegowda ಸಂಪೂರ್ಣ – ಸರಳ ಏಕೀಕೃತ ಭೂ- ನಿರ್ವಹಣಾ ವ್ಯವಸ್ಥೆಗೆ ಸರ್ಕಾರದ ದಿಟ್ಟ ಹೆಜ್ಜೆ- ಸಚಿವ ಕೃಷ್ಣ ಭೈರೇಗೌಡ
Krishna Bhairegowda ಭೂಮಿಗೆ ಸಂಬಂಧಿಸಿದ ಸರ್ಕಾರದ ಎಲ್ಲಾ ಸೇವೆಗಳನ್ನು ಒಂದೇ ವ್ಯವಸ್ಥೆಯ ಅಡಿಯಲ್ಲಿ ತರುವ ಮಹಾತ್ವಕಾಂಕ್ಷಿ ULMS (Unified Land Management System) ಯೋಜನೆಯ ಅನುಷ್ಠಾನಕ್ಕೆ ಸರ್ಕಾರದ ದೃಢ ಹೆಜ್ಜೆಯನ್ನು ಇಟ್ಟಿದೆ. ಈ ಕುರಿತಂತೆ ಎಲ್ಲಾಸಂಬಂಧಿಸಿದ (ಕಂದಾಯ, ನಗರಾಭಿವೃದ್ಧಿ, ನೋಂದಣಿ, ಲೋಕೋಪಯೋಗಿ, ನೀರಾವರಿ, ವಸತಿ, ಬೃಹತ್ ಮತ್ತು ಮಧ್ಯಮಕೈಗಾರಿಕಾ ಹಾಗೂ ಇತ್ಯಾದಿ ಇಲಾಖೆಗಳ) ಹಿರಿಯ ಅಧಿಕಾರಿಗಳ ಸಭೆಯನ್ನು ಮಾನ್ಯ ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ULMS ಗಣಕೀಕೃತ ಏಕ ವ್ಯವಸ್ಥೆಯಡಿ ಸರ್ವೆ, ಭೂ ಪರಿವರ್ತನೆ, ಬಡಾವಣೆ ಪ್ಲಾನ್ ಮಂಜೂರಿ, ಮನೆ ಪ್ಲಾನ್ ಮಂಜೂರಿ, ನಿವೇಶನ ಮಾರಾಟ, ಇ-ಖಾತಾ ಸೃಜನೆ (ಸ್ಥಳೀಯಸಂಸ್ಥೆಯಲ್ಲಿ), ಆಸ್ತಿ ತೆರಿಗೆ ಸಂಗ್ರಹ, ಭೂಸ್ವಾಧೀನ ಹಾಗೂ ಇನ್ನೂ ಅನೇಕ ಭೂ ಸಂಬಂಧಿತ ಚಟುವಟಿಕೆಗಳನ್ನು ಸರಾಗ, ಸುಲಭ, ಪಾರದರ್ಶಕ ಮತ್ತು ಜನಸ್ನೇಹಿಯಾದ ಒಂದೇ ಆನ್‌ಲೈನ್ ವ್ಯವಸ್ಥೆಗೆತರುವ ಯೋಜನೆಯಾಗಿದೆ. ಇದರಿಂದ ಜನರಿಗೆ ಬೇರೆ ಬೇರೆ ಕಛೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿ ಭೂಮಿಗೆ ಸಂಬಂಧಿಸಿದ ಸೇವೆಗಳನ್ನು ಸರಳವಾಗಿ ಪಡೆದುಕೊಳ್ಳಬಹುದಾದ ಅತ್ಯಂತ ಪ್ರಮುಖ ಆಡಳಿತ ಸುಧಾರಣಾ ಕ್ರಮವಾಗಿದೆ.
ULMS ಮುಖಾಂತರ ಭೂ ಮಾಲಿಕತ್ವದ ಮೂಲ ದಾಖಲೆಗಳನ್ನು ದೃಢಪಡಿಸುವುದು, ಸರ್ವೆ ನಕ್ಷೆಯನ್ನು ಡಿಜಿಟಸೂಚಿಸಲಾಗಿದೆ ದಲ್ಲಿ ಒದಗಿಸುವುದು, ಭೂ ಪರಿವರ್ತನೆ, ಬಡಾವಣೆಗಳಅನುಮೋದನೆ, ಕಟ್ಟಡ ನಕ್ಷೆ ಅನುಮೋದನೆ, ಖಾತೆ ಪಡೆಯುವುದು ಇತ್ಯಾದಿ ಪ್ರಕ್ರಿಯೆಗಳನ್ನು ಏಕೀಕೃತ ನೇರ ಆನ್‌ಲೈನ್ ವ್ಯವಸ್ಥೆಯಡಿಯಲ್ಲಿ ತರಲಾಗುವುದು. ಇದರಿಂದ ಭೂಮಿ ಬಡಾವಣೆ ನಿವೇಶನದ ದಾಖಲೆಗಳು ಒಂದೇ ಕಡೆ ದೊರೆಯುವಂತಾಗುತ್ತದೆ. ಒಂದು ಹಂತದಿಂದ ಮತ್ತೊಂದು ಹಂತಕ್ಕೆ ಸರಾಗವಾಗಿ, ವಿವಿಧಕಛೇರಿ ಇಲಾಖೆಗಳಿಗೆ ಆನ್‌ಲೈನ್‌ನಲ್ಲಿ ಪ್ರತ್ಯೇಕ ಅರ್ಜಿಗಳನ್ನುಸಲ್ಲಿಸುವ ಅವಶ್ಯಕತೆ ಇಲ್ಲದೆ, ಸ್ವಯಂಚಾಲಿತವಾಗಿ ಕಡತ ಸಾಗುವವ್ಯವಸ್ಥೆ ಇದು. ಕಾಲಮಿತಿಯೊಳಗೆ ತೀರ್ಮಾನಿಸುವ ವ್ಯವಸ್ಥೆಯಿರುವುದರಿಂದ ವಿಳಂಬಕ್ಕೆ ಕಡಿವಾಣ ಬೀಳಲಿದೆ. ಈ ವ್ಯವಸ್ಥೆಯಿಂದ ನಕಲಿ/ಅಕ್ರಮ ಭೂ ವ್ಯವಹಾರಗಳಿಗೆ ಕಡಿವಾಣಬೀಳಲಿದೆ. ಹಾಗೆಯೇ ಇದು ಅಮಾಯಕರಿಗೆ ವಂಚನೆಯಿಂದ ರಕ್ಷಣೆ ನೀಡಲಿದೆ. ಇದರಿಂದ ಭೂ ವ್ಯವಹಾರ, ಮಾಲಿಕತ್ವದ ಗೊಂದಲಗೋಜುಗಳಿಗೆ ಮುಕ್ತಿ ನೀಡಿ ವ್ಯಾಜ್ಯಗಳನ್ನು ತಗ್ಗಿಸಿ, ಭೂಮಾಲಿಕತ್ವದ ಖಚಿತತೆ ಸಾಧಿಸಬಹುದು.
ಹಾಲಿ ವ್ಯವಸ್ಥೆಯಲ್ಲಿ ದಾಖಲೆಗಳ ಖಚಿತತೆ, ದೃಢೀಕರಣ ಸಮರ್ಪಕವಾಗಿ ಆಗುತ್ತಿಲ್ಲ ಮತ್ತು ಕಾಗದದಲ್ಲಿ ದೃಢೀಕರಣ ಮಾಡುವ ಪದ್ಧತಿ ನೈಜತೆಯನ್ನು ಖಾತ್ರಿಪಡಿಸುತ್ತಿಲ್ಲ. ಆನ್‌ಲೈನ್ ವ್ಯವಸ್ಥೆಯಲ್ಲಿ ಮೂಲ ದಾಖಲೆಗಳನ್ನು ನೇರವಾಗಿ ಅಧಿಕೃತ ಅಧಿಕಾರಿಯಿಂದ ಪಡೆಯಲಾಗುವುದು. ಬಲ್ಲ/ನಂಬಿಕಾರ್ಹ ಮೂಲ/ಅಧಿಕಾರಿ/ಪ್ರಾಧಿಕಾರದ ಮೂಲಕ ದಾಖಲೆ ಪಡೆಯಲಾಗುವುದರಿಂದ ಕಾಗದಗಳ ನೈಜತೆಯ ಅನುಮಾನಕ್ಕೆ ಮುಂದೆಅವಕಾಶವಿರುವುದಿಲ್ಲ. ಸರ್ವೆ ನಕ್ಷೆಯನ್ನು ಸಂಬಂಧಿಸಿದ ಅಧಿಕಾರಿನೇರವಾಗಿ ಒದಗಿಸಬೇಕಾಗಿರುತ್ತದೆ. ಇದರಿಂದ ಸ್ಪಷ್ಟ ಜವಾಬ್ದಾರಿ ನಿಗದಿಯಾಗುವುದರಿಂದ ತಪ್ಪುಗಳಿಗೆ ಕಡಿವಾಣ ಬೀಳಲಿದೆ. ಮೂಲ ದಾಖಲೆಗಳ ಅಸಲೀತನ ಖಾತರಿಪಡಿಸಿಕೊಂಡರೆ ಮುಂದೆ ಆಗಬಹುದಾದ ಅನೇಕ ತಕರಾರು, ವ್ಯಾಜ್ಯಗಳನ್ನು ತಪ್ಪಿಸಿನೆಮ್ಮದಿಯ ಮಾಲಿಕತ್ವ ನೀಡಬಹುದು.
Krishna Bhairegowda ದಾಖಲೆಗಳು ದೃಢೀಕೃತವಾದರೆ, ನಕಲಿ/ಅಕ್ರಮ/ವ್ಯಾಜ್ಯಗಳು ತಗ್ಗಿದರೆ ಭ್ರಷ್ಟಾಚಾರವೂ ತಗ್ಗುತ್ತದೆ. ಸರಾಗವಾಗಿ ಭೂ ವ್ಯವಹಾರ ನಡೆಸಲುಇದು ಸಹಕಾರಿಯಾದ ಹೆಜ್ಜೆ. ಇದರಿಂದ ಭೂಮಿಯ ನೈಜ ಆರ್ಥಿಕಮೌಲ್ಯ ಮತ್ತು ಆದಾಯ ಹೆಚ್ಚಾಗುತ್ತದೆ. ಇತರೆ ಆರ್ಥಿಕಚಟುವಟಿಕೆಗಳಿಗೂ ಪ್ರೋತ್ಸಾಹವಾಗುತ್ತದೆ ಹಾಗೂ ಆಡಳಿತ ಸರಳೀಕರಣವಾಗುತ್ತದೆ. ಒಂದೇ ಕಡೆ ಆಸ್ತಿ ವ್ಯವಹಾರ/ಖರೀದಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಲಭ್ಯವಾಗುವುದರಿಂದ ದಾಖಲೆ ಪರಿಶೀಲಿಸುವುದು/ದೃಢಪಡಿಸಿಕೊಳ್ಳುವುದು ಸುಲಲಿತವಾಗಲಿದೆ. ಈ ವ್ಯವಸ್ಥೆಯ ಮುಖಾಂತರ ಮುಂದಿನ ಪ್ರತಿಯೊಂದು ಭೂ ಆಸ್ತಿಗೆ ತನ್ನದೇ ಆದಂತ ಏಕಮಾತ್ರ ಭೂಮಿ ಗುರುತಿನ ಸಂಖ್ಯೆ (ULPIN) ಅಥವಾ ಭೂ ಆಧಾರ್ ನೀಡುವುದರಿಂದ ಸಂಪೂರ್ಣ ಪಾರದರ್ಶಕತೆ, ಖಚಿತತೆ, ಮಾಲಿಕತ್ವದ ಗ್ಯಾರಂಟಿ ನೀಡಬಹುದು.
ULMS ಭೂಮಿ ವ್ಯವಹಾರ, ನಕ್ಷೆ ಮಂಜೂರಾತಿ ಇಂತಹ ಚಟುವಟಿಕೆಗಳಿಗೂ ಮೀರಿದ ಹಲವು ಹೆಜ್ಜೆ ಮುಂದೆ ಹೋಗಿ ಭೂಸ್ವಾಧೀನ, ಆಸ್ತಿ ತೆರಿಗೆ, ಮಾಸ್ಟರ್ ಪ್ಲಾನ್, ನಗರಾಭಿವೃದ್ಧಿ ಪ್ರಾಧಿಕಾರಗಳ ನಿವೇಶನ ಹಂಚಿಕೆ ಹೀಗೆ ಅನೇಕ ಸೇವೆ/ಚಟುವಟಿಕೆಗಳನ್ನು ಏಕ ವ್ಯವಸ್ಥೆಗೆ ತರಲಿದೆ. ಇದರಿಂದ ಭೂಸ್ವಾಧೀನ ತ್ವರಿತಗೊಳ್ಳಲಿದೆ ಮತ್ತು ಈ ಪ್ರಕ್ರಿಯೆಯಲ್ಲಿ ನಡೆಯುತ್ತಿರುವ ವವ್ಯವಸ್ಥಿತ ಅಕ್ರಮಗಳಿಗೂ ಕಡಿವಾಣ ಬೀಳಲಿದೆ. ಆಸ್ತಿ ತೆರಿಗೆವ್ಯವಸ್ಥೆಯಲ್ಲಿರುವ ತಾರತಮ್ಯಗಳು ಅಂದರೆ ಅಸ್ತಿ ತೆರಿಗೆ ವಂಚನೆ, ಕಡಿಮೆ ಪಾವತಿಸುವುದು ಇವುಗಳನ್ನು ಸರಿಪಡಿಸಿ, ಗ್ರಾಮಪಂಚಾಯ್ತಿ ಮತ್ತು ನಗರಾಡಳಿತ ಸಂಸ್ಥೆಗಳನ್ನು ಆರ್ಥಿಕ ವಾಗಿಬಲಪಡಿಸುವುದು ಸಾಧ್ಯವಾಗಲಿದೆ.
ಇಂದು ಅನೇಕರಿಗೆ ಭೂ ಮಾಲಿಕತ್ವದ ವ್ಯವಸ್ಥೆ ಆರ್ಥಿಕ ಶಕ್ತಿಮತ್ತು ನೆಮ್ಮದಿ ನೀಡುವುದರ ಬದಲಿಗೆ ಗೊಂದಲ, ಅನಿಶ್ಚಿತತೆ, ವ್ಯಾಜ್ಯಗಳು ಗೂಡಾಗಿ ಪರಿಣಮಿಸಿದೆ. ಹಾಲಿ ವ್ಯವಸ್ಥೆ ಆಸ್ತಿಗಳಆರ್ಥಿಕ ಮೌಲ್ಯ, ಆದಾಯ, ಉತ್ಪಾದನೆಯನ್ನು ತಗ್ಗಿಸುತ್ತಿದೆ.ಜನಗಳಿಗೆ ನೆಮ್ಮದಿಯಿಲ್ಲ ಮತ್ತು ಸಮಾಜಕ್ಕೆ ಲಾಭವಿಲ್ಲ.
ದೇಶದ ನ್ಯಾಯಾಲಯಗಳಲ್ಲಿರುವ ಶೇ. 50ಕ್ಕೂ ಹೆಚ್ಚು ವ್ಯಾಜ್ಯಗಳು ಭೂಮಿ/ಮಾಲಿಕತ್ವ ಸಂಬಂಧಿಸಿದವುಗಳು. ಈ ಭೂವ್ಯಾಜ್ಯಗಳಿಂದ ಮತ್ತು ಅನಿಶ್ಚಿತತೆಯಿಂದ ನಾವು ಭೂ ಗ್ಯಾರಂಟಿಯಡಿಗೆ ಸಾಗಲು ULMS ಪರಿಣಾಮಕಾರಿ ಮಾರ್ಗವಾಗಲಿದೆ. ಇದರಿಂದ ಜನಗಳ ಕೇಂದ್ರಿತ, ಜನಪರ ಆಡಳಿತ ಸುಧಾರಣೆ ಸಾಧ್ಯ. ಈ ಏಕೀಕೃತ ವ್ಯವಸ್ಥೆಯನ್ನು ಸಂಬಂಧಿಸಿದ ಎಲ್ಲಾ ಇಲಾಖೆಗಳು ಮುಂದಿನ 6 ತಿಂಗಳುಗಳಲ್ಲಿ ಅನುಷ್ಠಾನಕ್ಕೆ ತರಬೇಕೆಂದು ಸೂಚಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡರ ಕಾರ್ಯಾಲಯ ತಿಳಿಸಿದೆ.
MESCOM ಫೆ.27& 28 ರಂದು ಶಿವಮೊಗ್ಗದ ಕುವೆಂಪು ನಗರ ,ಸೂಡ ಸಿ & ಡಿ ಬ್ಲಾಕ್ ಸುತ್ತಮುತ್ತ ವಿದ್ಯುತ್ ನಿಲುಗಡೆ
MESCOM ತಾವರೆಚಟ್ನಹಳ್ಳಿ ವಿ ವಿ ಕೇಂದ್ರದ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿದ್ದು, ಫೆ. 27 ಮತ್ತು 28 ರಂದು ಬೆಳಗ್ಗೆ 9.00 ರಿಂದ ಸಂಜೆ 5.00 ರವರೆಗೆ ಕುವೆಂಪುನಗರ ಸೂಡ ಸಿ & ಡಿ ಬ್ಲಾಕ್, ಶಿವಕುಮಾರಸ್ವಾಮಿ ಲೇಔಟ್ ಮತ್ತು ಇನ್ಪ್ರಾ ಸಿಟಿ, ಮ್ಯಾಕ್ಸ್ ಲೇಔಟ್, ಎಂ.ಇ.ಎಸ್. ಲೇಔಟ್, ರೆಡ್ಡಿ ಲೇಔಟ್, ಸವಳಂಗರಸ್ತೆ, ರತ್ನಗಿರಿ ನಗರ ಮತ್ತು ಹುಣಸೋಡು, ಕಲ್ಲಗಂಗೂರು ಸುತ್ತಮುತ್ತಲಿನ ಜಲ್ಲಿ ಕ್ರಷರ್‌ಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.
ಕಬ್ಬು ಬೆಳೆಗೆ ನೀಡುವ ಆರ್ಥಿಕ ನೆರವಿನ ಪ್ರಕಾರ ರಾಜ್ಯ ಸರ್ಕಾರ ರೂ. 300 ಕೋಟಿ ಬಿಡುಗಡೆ ಮಾಡಿದೆ- ಸಚಿವ ಶಿವಾನಂದ ಪಾಟೀಲ
ರಾಜ್ಯ ಸರ್ಕಾರ ಘೋಷಣೆ ಮಾಡಿದಂತೆ 2025-26ನೇ ಸಾಲಿನಲ್ಲಿ ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಕೆ ಮಾಡಿದ ರಾಜ್ಯದ ರೈತರಿಗೆ ಪ್ರತಿ ಟನ್‌ಗೆ ರೂಂ 50 ಗಳ ಆರ್ಥಿಕ ನೆರವಿನ ಮೊತ್ತ ರೂಂ 300 ಕೋಟಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಕಬ್ಬು ಅಭಿವೃದ್ಧಿ, ಸಕ್ಕರೆ, ಜವಳಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.
ಮುಖ್ಯಮಂತ್ರಿಗಳು ವಿಧಾನಸೌಧದಲ್ಲಿ ಕಳೆದ ನವಂಬರ್ 8ರಂದು ಕರೆದಿದ್ದ ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ಕಬ್ಬು ಬೆಳೆಗಾರರ ಸಭೆಯಲ್ಲಿ ಪ್ರತಿ ಟನ್ ಕಬ್ಬಿಗೆ ಎಫ್‌ಆರ್‌ಪಿ ಮೇಲೆ ನೂರು ರೂ. ಆರ್ಥಿಕ ನೆರವು ನೀಡುವ ನಿರ್ಧಾರ ಪ್ರಕಟಿಸಿದ್ದರು.
ರೂ 100 ಆರ್ಥಿಕ ನೆರವಿನಲ್ಲಿ ರಾಜ್ಯ ಸರ್ಕಾರ ರೂ 50 ಹಾಗೂ ಸಕ್ಕರೆ ಕಾರ್ಖಾನೆಗಳು ರೂ 50 ನೀಡಬೇಕು ಎಂಬ ತೀರ್ಮಾನವನ್ನು ಕೈಗೊಳ್ಳಲಾಗಿದ್ದು, ಈ ನಿರ್ಧಾರದಂತೆ ರಾಜ್ಯ ಸರ್ಕಾರ ತನ್ನ ಪಾಲಿನ ಆರ್ಥಿಕ ನೆರವಿನ ಹಣ ರೂಂ 300 ಕೋಟಿಗಳನ್ನು ಬಿಡುಗಡೆ ಮಾಡಿದೆ ಎಂದುಸ ಸಚಿವರು ತಿಳಿಸಿದ್ದಾರೆ.
ರಾಜ್ಯದ ಸಕ್ಕರೆ ಕಾರ್ಖಾನೆಗಳ ಪ್ರಸ್ತಾವನೆ ಆಧರಿಸಿ ಕಬ್ಬು ಅಭಿವೃದ್ಧಿ ಆಯುಕ್ತರು ಜಿಲ್ಲಾಧಿಕಾರಿಗಳಿಗೆ ಹಣ ಬಿಡುಗಡೆ ಮಾಡಲಿದ್ದಾರೆ. ರಾಜ್ಯದ ರೈತರು ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ ಪೂರೈಕೆ ಮಾಡಿದ ಕಬ್ಬಿನ ಪ್ರಮಾಣ ಆಧರಿಸಿ ಅವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಪ್ರತಿ ಟನ್‌ಗೆ 50 ರೂ.ಗಳಂತೆ ಜಮಾ ಮಾಡಲು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ಅದೇ ರೀತಿ ಕಬ್ಬು ಪೂರೈಕೆ ಮಾಡಿದ ರೈತರಿಗೆ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಗಳು ಪ್ರತಿ ಟನ್ ಕಬ್ಬಿಗೆ ರೂ 50 ಆರ್ಥಿಕ ನೆರವು ನೀಡಲು ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.
2025-26ನೇ ಸಾಲಿನ ಕಬ್ಬು ನುರಿಸುವ ಹಂಗಾಮಿನಲ್ಲಿ 81 ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸಿದ್ದು, 29 ಕಾರ್ಖಾನೆಗಳಲ್ಲಿ ಕಬ್ಬು ನುರಿಸುವಿಕೆ ಮುಕ್ತಾಯವಾಗಿದೆ. ಇದುವರೆಗೆ 521 ಲಕ್ಷ ಮೆಟ್ರಿಕ್ ಕಬ್ಬು ನುರಿಸಲಾಗಿದ್ದು, ಈ ಹಂಗಾಮಿನಲ್ಲಿ ಸುಮಾರು 600 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ನಿರೀಕ್ಷೆ ಇದೆ ಎಂದು ಸಚಿವರು ವಿವರಿಸಿದ್ದಾರೆ.
ಮಾರ್ಚ್ ಮೊದಲ ವಾರದ ವೇಳೆಗೆ ಪ್ರಸಕ್ತ ಹಂಗಾಮಿನ ಕಬ್ಬು ನುರಿಸುವಿಕೆ ಅಂತ್ಯವಾಗಲಿದ್ದು, 600 ಲಕ್ಷ ಮೆಟ್ರಿಕ್ ಟನ್ ನುರಿಸುವ ಅಂದಾಜು ಆಧರಿಸಿ ರೂ 300 ಕೋಟಿ ಆರ್ಥಿಕ ನೆರವು ಬಿಡುಗಡೆ ಮಾಡಲಾಗಿದೆ ಎಂದು
ಕಬ್ಬು ಅಭಿವೃದ್ಧಿ, ಸಕ್ಕರೆ, ಜವಳಿ ಹಾಗೂ ಕೃಷಿ ಮಾರುಕಟ್ಟೆ ಸಚಿವಶಿವಾನಂದ ಪಾಟೀಲ ತಿಳಿಸಿದ್ದಾರೆ.
