Sunday, August 9, 2026
Sunday, August 9, 2026
Home Blog Page 178

Gopala Krishna Beluru ಮಾರ್ಗಮಧ್ಯೆ ಅಪಘಾತಕ್ಕೀಡಾಗಿದ್ದವ್ಯಕ್ತಿಗೆ ಮಾನವೀಯ ನೆರವು ನೀಡಿದ ಶಾಸಕ ಬೇಳೂರು ಗೋಪಾಲಕೃಷ್ಣ.

0

Gopala Krishna Beluru ತಾಲೂಕಿನ ಹುಲಿ ದೇವರ ಬನ ಬಳಿ ನಡೆದ ಒಂದು ಘಟನೆ, ಮಾನವೀಯ ಮೌಲ್ಯಗಳು ಇನ್ನೂ ಜೀವಂತವಾಗಿವೆ ಎಂಬುದಕ್ಕೆ ಸಾಕ್ಷಿಯಾಗಿದೆ. ಹೊಸನಗರ ಮಾರ್ಗದಿಂದ ಆವಿನಹಳ್ಳಿ ಕಡೆಗೆ ಸಾಗುತ್ತಿದ್ದಾಗ, ಬೈಕ್ ಸವಾರರೊಬ್ಬರು ಎದುರಿಗೆ ಬಂದ ಎಮ್ಮೆಗೆ ಡಿಕ್ಕಿ ಹೊಡೆದು ರಸ್ತೆಗೆ ಬಿದ್ದು ನರಳುತ್ತಿದ್ದರು. ಈ ದೃಶ್ಯವನ್ನು ಕಂಡ ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ತಮ್ಮ ವಾಹನದಿಂದ ತಕ್ಷಣ ಇಳಿದು, ಗಾಯಾಳುವಿಗೆ ಪ್ರಥಮ ಚಿಕಿತ್ಸೆ ನೀಡಿ, ಮಾನವೀಯತೆಯ ಉದಾತ್ತ ಗುಣವನ್ನು ಪ್ರದರ್ಶಿಸಿದ್ದಾರೆ.

ಘಟನೆಯ ತೀವ್ರತೆಯನ್ನು ಅರಿತ ಶಾಸಕರು, ತಮ್ಮ ಚಾಲಕರಾದ ರಾಕೇಶ್ ಗೌತಮಪುರ, ಅಂಗರಕ್ಷಕರಾದ ತೀರ್ಥೇಶ್ ಮತ್ತು ಎಸ್ಕಾರ್ಟ್ ವಾಹನದ ಸಿಬ್ಬಂದಿಗಳನ್ನು ಕರೆದು, ಸ್ಥಳದಲ್ಲಿಯೇ ಗಾಯಾಳುವಿಗೆ ಅಗತ್ಯ ಪ್ರಥಮ ಚಿಕಿತ್ಸೆಯನ್ನು ನೀಡಲು ಮುಂದಾದರು. ರಕ್ತಸ್ರಾವವಾಗುತ್ತಿದ್ದ ಗಾಯಗಳಿಗೆ ಸ್ವಚ್ಛ ಬಟ್ಟೆಯಿಂದ ಒತ್ತಿ, ನೋವನ್ನು ಕಡಿಮೆ ಮಾಡಲು ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ಶಾಸಕರ ಸಮಯಪ್ರಜ್ಞೆ ಮತ್ತು ಸಹಾನುಭೂತಿ ನಿಜಕ್ಕೂ ಶ್ಲಾಘನೀಯ. ಯಾವುದೇ ಹಿಂಜರಿಕೆ ಇಲ್ಲದೆ, ತಮ್ಮ ಸ್ಥಾನಮಾನವನ್ನು ಬದಿಗಿಟ್ಟು, ಒಬ್ಬ ಸಾಮಾನ್ಯ ನಾಗರಿಕನಂತೆ ಸಂಕಷ್ಟದಲ್ಲಿರುವ ವ್ಯಕ್ತಿಗೆ ನೆರವಾಗಲು ಮುಂದಾದ ಅವರ ನಡೆ, ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

Gopala Krishna Beluru ಪ್ರಥಮ ಚಿಕಿತ್ಸೆ ನೀಡಿದ ನಂತರ, ಗಾಯಾಳುವಿನ ಸ್ಥಿತಿ ಗಂಭೀರವಾಗುವುದನ್ನು ತಪ್ಪಿಸಲು, ಶಾಸಕರು ತಕ್ಷಣ ಆಂಬುಲೆನ್ಸ್‌ಗೆ ಕರೆ ಮಾಡಿ, ಗಾಯಾಳುವನ್ನು ಸಾಗರದ ಆಸ್ಪತ್ರೆಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಿದರು. ಇದರಿಂದಾಗಿ, ನರಳುತ್ತಿದ್ದ ವ್ಯಕ್ತಿಗೆ ಸಕಾಲದಲ್ಲಿ ವೈದ್ಯಕೀಯ ಚಿಕಿತ್ಸೆ ದೊರೆಯುವಂತಾಯಿತು. ಈ ಘಟನೆ, ಕೇವಲ ಒಬ್ಬ ಶಾಸಕರ ಕರ್ತವ್ಯವನ್ನು ಮೀರಿ, ಒಬ್ಬ ವ್ಯಕ್ತಿಯಾಗಿ ಗೋಪಾಲಕೃಷ್ಣ ಬೇಳೂರು ಅವರು ಹೊಂದಿರುವ ಸಾಮಾಜಿಕ ಕಳಕಳಿ ಮತ್ತು ಮಾನವೀಯ ಮೌಲ್ಯಗಳನ್ನು ಎತ್ತಿ ತೋರಿಸುತ್ತದೆ.

ಇಂತಹ ಸಂದರ್ಭದಲ್ಲಿ, ಒಬ್ಬ ಜನಪ್ರತಿನಿಧಿಯಾಗಿ ಶಾಸಕರು ತೋರಿದ ಈ ನಡೆ, ಸಮಾಜಕ್ಕೆ ಒಂದು ಉತ್ತಮ ಸಂದೇಶವನ್ನು ರವಾನಿಸುತ್ತದೆ.

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆರೋಗ್ಯ ಇಲಾಖಾ ನೌಕರರಿಂದ ಮನವಿ ಸಲ್ಲಿಕೆ

0

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆರೋಗ್ಯ ಇಲಾಖಾ ನೌಕರರ ಸಂಘದ ನೇತೃತ್ವದಲ್ಲಿ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ, ವೈದ್ಯಕೀಯ ಶಿಕ್ಷಣ ಇಲಾಖಾ ನೌಕರರ ಕೇಂದ್ರ ಸಂಘ ಹಾಗೂ ಆರೋಗ್ಯ ಇಲಾಖೆಯ ಎಲ್ಲ ವೃಂದ ಸಂಘದಿಂದ ಪಟ್ಟಣದ ತಾಲೂಕು ಕಚೇರಿಗೆ ತೆರಳಿ ತಹಶೀಲ್ದಾರರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ನೇತೃತ್ವ ವಹಿಸಿದ್ದ ಆರೋಗ್ಯ ಇಲಾಖಾ ನೌಕರರ ಸಂಘದ ಅಧ್ಯಕ್ಷ ಜಿ.ಇ. ನಾಗರಾಜ್ ಮಾತನಾಡಿ, ಮೊದಲ ಹಂತದಲ್ಲಿ ಮಾ. 11ರಿಂದ ಮಾ.15ರ ವರೆಗೆ ರಾಜ್ಯದ ಎಲ್ಲ ಜಿಲ್ಲಾ ಆಸ್ಪತ್ರೆ, ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ಮತ್ತು ಡಿಸ್ಪೆನ್ಸರಿಗಳಲ್ಲಿನ ಎಲ್ಲ ವೃಂದದ ವೈದ್ಯರು, ಅಧಿಕಾರಿ-ನೌಕರರು ಕಪ್ಪು ಪಟ್ಟಿ ಧರಿಸಿ ಹೊರರೋಗಿಗಳ ಚಿಕಿತ್ಸೆಯನ್ನು ಸ್ಥಗಿತಗೊಳಿಸಿ, ತುರ್ತು ಸೇವೆಗಳನ್ನು ಮಾತ್ರ ನಿರ್ವಹಿಸುವ ಮೂಲಕ ಮುಷ್ಕರದಲ್ಲಿ ಪಾಲ್ಗೊಳ್ಳುತ್ತಾರೆ ಎಂದರು.

ಸರ್ಕಾರ ಸ್ಪಂದಿಸದಿದ್ದರೆ ಮಾ. 16ರಿಂದ ಬೇಡಿಕೆ ಈಡೇರುವವರಿಗೂ ರಾಜ್ಯದ ಆರೋಗ್ಯ ಇಲಾಖೆಯ ಎಲ್ಲ ವೈದ್ಯರು, ಅಧಿಕಾರಿಗಳು, ನೌಕರರು ಕರ್ತವ್ಯಕ್ಕೆ ಅನಿರ್ಧಿಷ್ಟಾವಧಿವರೆಗೆ ಗೈರುಹಾಜರಾಗಿ ಮುಷ್ಕರ ನಡೆಸಲಾಗುವುದು. ಔಷಧಿಗಳ ಸರಬರಾಜು, ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ, ಮುಂಬಡ್ತಿ, ಉನ್ನತ ವ್ಯಾಸಂಗ, ಸ್ನಾತಕೋತ್ತರ ವ್ಯಾಸಂಗಕ್ಕೆ ಅವಕಾಶ, ಖಾಲಿ ಹುದ್ದೆಗಳ ಭರ್ತಿ, ಕೇಂದ್ರ ಪುರಸ್ಕೃತ ಯೋಜನೆ ಅಡಿ ಕಾರ್ಯನಿರತ ನೌಕರರಿಗೆ ಹಲವಾರು ವರ್ಷಗಳಿಂದ 3-4 ತಿಂಗಳಿಗೊಮ್ಮೆ ವೇತನ ಭತ್ಯೆಗಳನ್ನು ನೀಡುತ್ತಿದ್ದು, ಪ್ರತಿ ತಿಂಗಳ ಮೊದಲ ವಾರದಲ್ಲಿ ವೇತನ ಭತ್ಯೆಗಳನ್ನು ನೀಡುವುದು ಸೇರಿ 11 ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.

ಆರೋಗ್ಯ ಇಲಾಖಾ ನೌಕರರ ಸಂಘದ ಕಾರ್ಯಾಧ್ಯಕ್ಷ ಡಾ. ಪ್ರಭು ಸಾಹುಕಾರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್. ಮಂಜುನಾಥ್, ತಾಲೂಕು ವೈದ್ಯಾಧಿಕಾರಿ ಡಾ. ನೂತನ್ ನಾಯ್ಕ್, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ದಯಾನಂದ, ಡಾ. ವಿನಯ್ ಪಾಟೀಲ್, ಡಾ. ರಾಘವೇಂದ್ರ ಸೇರಿದಂತೆ ವೈದ್ಯಾಧಿಕಾರಿಗಳು, ಆರೋಗ್ಯ ಇಲಾಖಾ ನೌಕರರು ಪಾಲ್ಗೊಂಡಿದ್ದರು.

Minister Santosh Lad ಶ್ರೀ ಮಾರಿಕಾಂಬಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಸಚಿವ ಸಂತೋಷ್ ಲಾಡ್ ರವರ ಹುಟ್ಟುಹಬ್ಬ ಆಚರಣೆ

0

Minister Santosh Lad ಯುವಕರ ಆಶಾಕಿರಣ, ಅಹಿಂದ ವರ್ಗದ ನಾಯಕ ಕರ್ನಾಟಕ ಸರ್ಕಾರದ ಕಾರ್ಮಿಕ ಸಚಿವರಾದ ಶ್ರೀಸಂತೋಷ್ಲಾಡ್ ರವರ ಹುಟ್ಟು ಹಬ್ಬದ ಅಂಗವಾಗಿ ಶಿವಮೊಗ್ಗ ಜಿಲ್ಲೆಯ ಯುವ ಕಾಂಗ್ರೆಸ್ ನ ಪದಾಧಿಕಾರಿಗಳು ಹಾಗೂ ಸಂತೋಷ್ ಲಾಡ್ ಅಭಿಮಾನಿಗಳು ಶಿವಮೊಗ್ಗ ನಗರದ ಐತಿಹಾಸಿಕ ಕೋಟೆ ಶ್ರೀ ಮಾರಿಕಾಂಬಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ದೇವಿಯ ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ ಭಕ್ತರಿಗೆ ಲಡ್ಡು ವಿತರಿಸುವ ಮುಖಾಂತರ ಆಚರಿಸಲಾಯಿತು.

Minister Santosh Lad ಈ ಕಾರ್ಯಕ್ರಮದಲ್ಲಿ ಯುವ ಮುಖಂಡರಾದ ಕೆ ರಂಗನಾಥ್ , ಸೂಡ ಸದಸ್ಯರಾದ ಎಂ ಪ್ರವೀಣ್ ಕುಮಾರ್, ಹಾಪ್ ಕಾಮ್ಸ್ ನಿರ್ದೇಶಕ ಶರತ್ ಮರಿಯಪ್ಪ ಪ್ರಮುಖರಾದ ಹೆಚ್ ಪಿ ಗಿರೀಶ್, ಬಿ ಲೋಕೇಶ್, ಇ ಟಿ ನಿತಿನ್ ಎ , ಎಂ ರಾಕೇಶ್, ಕೆ ಎಲ್ ಪವನ್,ಗುರುಪ್ರಸಾದ್, ಎಸ್ ಬಸವರಾಜ್, ಮೋಹನ್ ಸೋಮಿನಕೊಪ್ಪ, ಶಬರೀಶ್ ,ರಾಹಿಲ್, ಸಚಿನ್ ಈಡಿಗ, ವಿನಯ್ ಬಜಾರ್, ಸಂತೋಷ್, ಗಣೇಶ್ , ಸಾಹಿಲ್, ಭವಿತ್, ಅನಿಲ್ ಹಾಗೂ ಇತರರು ಇದ್ದರು.

Chamber of Commerce shivamogga ಕೇಂದ್ರ ಸಚಿವರಿಗೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದ ಸನ್ಮಾನ

0

Chamber of Commerce shivamogga ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಮುರುಗನ್ ಅವರನ್ನು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಭದ್ರಾವತಿಯಲ್ಲಿರುವ ಸಂಘಟಿತ ರೇಡಿಯೋ ಕೇಂದ್ರಕ್ಕೆ ಪೂರಕವಾಗಿ ಶಿವಮೊಗ್ಗದಲ್ಲಿ 10 ಕಿಲೋ ವ್ಯಾಟ್ ಟ್ರಾನ್ಸ್ ಮೀಟರ್ ಎಫ್ ಎಂ ರೇಡಿಯೋ ಕೇಂದ್ರವನ್ನು ಉದ್ಘಾಟಿಸಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಮುರುಗನ್ ಅವರನ್ನು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಸನ್ಮಾನಿಸಿದರು.

Chamber of Commerce shivamogga ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ಖಜಾಂಚಿ ಆರ್.ಮನೋಹರ್, ಮಾಚೇನಹಳ್ಳಿ ಕೈಗಾರಿಕಾ ಅಸೋಸಿಯೇಷನ್ ಅಧ್ಯಕ್ಷ ಡಿ.ಜಿ.ಬೆನಕಪ್ಪ, ಕಾರ್ಯದರ್ಶಿ ರಾಜೇಶ್, ಕಿರಣ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಂಸದ ಬಿ.ವೈ.ರಾಘವೇಂದ್ರ. ಶಾಸಕ ಎಸ್.ಎನ್.ಚನ್ನಬಸಪ್ಪ. ಅವರನ್ನು ಅಭಿನಂದಿಸಲಾಯಿತು.

ಸರ್ಕಾರದ ಸೌಲಭ್ಯ ಪಡೆಯುವುದು ಪ್ರತಿಯೊಬ್ಬ ವಿದ್ಯಾರ್ಥಿಯಹಕ್ಕು- ಸಿ,ಎಸ್.ಚಂದ್ರಭೂಪಾಲ್

0

ಸರ್ಕಾರದ ಸೌಲಭ್ಯ ಪಡೆದುಕೊಳ್ಳುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಹಕ್ಕು ಮತ್ತು ಕರ್ತವ್ಯವಾಗಿದೆ, ಸರ್ಕಾರ ನೀಡಿರುವ ಯುವನಿಧಿ ಯೋಜನೆಯಂತಹ ಸೌಲಭ್ಯ ಸವಲತ್ತು ಪಡೆದುಕೊಂಡು ಸದ್ಬಳಕೆಮಾಡಿಕೊಳ್ಳಿ ಎಂದು ಜಿಲ್ಲಾ ಗ್ಯಾರಂಟಿ ಯೊಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಸಿ. ಎಸ್. ಚಂದ್ರಭೂಪಾಲ್ ಹೇಳಿದರು.

ಅವರು ಕೈಗಾರಿಕಾ ತರಬೇತಿ ಇಲಾಖೆ ಮತ್ತು ಉದ್ಯೋಗ ಇಲಾಖೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಸಹ್ಯಾದ್ರಿ ಪ್ರಥಮ ದರ್ಜೆ ವಿಜ್ಞಾನ ಕಾಲೇಜು ಮತ್ತು ಜಿಲ್ಲಾ ಗ್ಯಾರಂಟಿ ಪ್ರಾಧಿಕಾರ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಸಹ್ಯಾದ್ರಿ ಪ್ರಥಮ ದರ್ಜೆ ವಿಜ್ಞಾನ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಯುವನಿಧಿ ಯೋಜನೆಯ ಪ್ರಚಾರ ಕಾರ್ಯಕ್ರಮ ಉದ್ಘಾಟಿಸಿ ಪೊಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದರು.

ಇಚ್ಚಾಶಕ್ತಿಯಿಂದ ವಿದ್ಯಾರ್ಥಿಗಳು ವಿದ್ಯ್ಯಾಭ್ಯಾಸ ಮತ್ತು ಉದ್ಯೋಗದ ಮೇಲೆ ಗಮನಹರಿಸಿ ಯೋಜನೆ ಸದುಪಯೋಗ ಪಡೆದುಕೊಂಡು ಪೋಷಕರ ಆಸೆಗಳನ್ನು ಇಡೇರಿಸಬೇಕು. ಕೌಶಲ್ಯಾಭಿವೃದ್ಧಿ ತರಬೇತಿ ಪಡೆಯುವಾಗ ವಿದ್ಯಾರ್ಥಿಗಳಿಗೆ ಬರುವ ಯುವನಿಧಿ ಹಣಕ್ಕೆ ಯಾವುದೇ ಅಡ್ಡಿಯಾಗುವುದಿಲ್ಲವಾದ್ದರಿಂದ ಆತಂಕ ಪಡಬೇಕಾಗದ ಅವಶ್ಯಕತೆ ಇಲ್ಲಾ ಎಂದು ಅವರು ಹೇಳಿದರು.

ಸರ್ಕಾರವು ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ಉದ್ಯೋಗ ಹುಡುಕಲು ಸಹಕಾರಿಯಾಗಲಿ ಎಂಬ ಉದ್ದೇಶದಿಂದ 2 ವರ್ಷ ಅವಧಿವರೆಗೆ ಯುವನಿಧಿ ಯೋಜನೆಯಡಿ ಎಲ್ಲಾ ವಿದ್ಯಾರ್ಥಿಗಳು ಪದವಿ ಮುಗಿದ ತಕ್ಷಣ ಗ್ರಾಮ್ ಒನ್, ಕರ್ನಾಟಕ ಒನ್, ಮೂಲಕ ಅರ್ಜಿ ಸಲ್ಲಿಸಿದ 6 ತಿಂಗಳ ನಂತರ ಪ್ರತಿ ತಿಂಗಳು ರೂ. 3000 ಹಣವನ್ನು ಯಾವುದೇ ಮಧ್ಯವರ್ತಿ ಇಲ್ಲದೇ ಖಾತೆಗೆ ನೇರವಾಗಿ ವರ್ಗಾವಣೆಯಾಗುತ್ತದೆ ಎಂದರು.

ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷರಾದ ಮಧು ಹೆಚ್‌ಎಂ ಮಾತನಾಡಿ, ಪದವಿ ಮುಗಿಸಿ ಉದ್ಯೋಗ ಪಡೆಯುವಂತ ಯುವಕರಿಗೆ ಸರ್ಕಾರ ನೀಡುವ ಯುವನಿಧಿಯಿಂದ ಬರುವಂತ ರೂ.3000 ಸಹಾಯಧನ ಅತ್ಯಮೂಲ್ಯವಾಗಲಿದೆ ಹಾಗೂ ಸರ್ಕಾರ ನೀಡಿರುವ ಈ ಯೋಜನೆಗಳ ಸದುಪಯೋಗ ಪಡೆದು ಉನ್ನತ ವಿದ್ಯಾಭ್ಯಾಸಕ್ಕೆ ಒತ್ತು ನೀಡಿ. ಪದವಿ ಮುಗಿಸಿದ ನಂತರ ಉದ್ಯೋಗ ಪಡೆಯುವ ತನಕ ಜೀವನಕ್ಕೆ ಯುವನಿಧಿ ಸಹಾಯಕವಾಗಿದೆ ಎಂದರು.

ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಸುರೇಶ ಮಾತನಾಡಿ ವಿದ್ಯಾರ್ಥಿಗಳು ತಮ್ಮದೇ ಆದಂತ ಕೌಶಲ್ಯ ಬೆಳೆಸಿಕೊಂಡು ಉದ್ಯೋಗವನ್ನು ಪಡೆದುಕೊಳ್ಳಿ, ಕೌಶಲ್ಯಾಭಿವೃದ್ದಿಯಲ್ಲಿ ಯುವನಿಧಿಯ ಎಲ್ಲಾ ಫಲಾನುಭವಿಗಳಿಗೆ ಉಚಿತ ತರಬೇತಿ ನೀಡಲಾಗುತ್ತಿದ್ದು, ಅದರ ಸದ್ಬಳಕೆ ಪಡೆದುಕೊಳ್ಳಿ. ಕೌಶಲ್ಯವು ವಿದ್ಯಾರ್ಥಿಗಳಿಗೆ ಉದ್ಯೋಗ ಪಡೆಯಲು ಮುಖ್ಯವಾಗುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ವೆಬ್ ಡಿಸೈನಿಂಗ್, ಡಾಟಾ ಎಂಟ್ರಿ ಇವುಗಳಿಗೆ ತುಂಬಾ ಬೇಡಿಕೆಯಿದೆ. ಆದ್ದರಿಂದ ವಿದ್ಯಾರ್ಥಿಗಳು ಕಂಪ್ಯೂಟರ್ ಜ್ಞಾನ ಬೆಳೆಸಿಕೊಳ್ಳಿ ಎಂದರು.

ಉದ್ಯೋಗ ಇಲಾಖೆಯ ಉದ್ಯೋಗ ಅಧಿಕಾರಿಗಳಾದ ಮಂಜುನಾಥ ಮಾತನಾಡಿ, ಯುವನಿಧಿಯಡಿಯಲ್ಲಿ ಒಟ್ಟು 57258 ಫಲಾನುಭವಿಗಳಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ 11569 ಅಭ್ಯರ್ಥಿ ಯುವನಿಧಿ ಹಣ ನೊಂದಾಯಿಸಿಕೊAಡಿದ್ದಾರೆ. ಒಟ್ಟು ರೂ.29,04,20,100/- ಹಣ ಶಿವಮೊಗ್ಗ ಜಿಲ್ಲೆಯ ಯುವನಿಧಿ ಫಲಾನುಭವಿಗಳಿಗೆ ನೇರವಾಗಿ ವರ್ಗಾವಣೆಯಾಗಿದೆ ಎಂದರು. ಪದವಿಧರರಿಗೆ ರೂ, 3000 ಡಿಪ್ಲೋಮಾ ವಿದ್ಯಾರ್ಥಿಗಳಿಗೆ ರೂ.1500 ಯುವನಿಧಿಯಡಿ ಸಹಾಯಧನ ನೀಡಲಾಗುತ್ತದೆ, ಪದವಿ ವಿದ್ಯಾರ್ಥಿಗಳು ತಮ್ಮ ಫಲಿತಾಂಶ ಬಂದು ಅರ್ಜಿ ಸಲ್ಲಿಸಿದ 180 ದಿನಗಳೊಳಗೆ ಯುವನಿಧಿ ಹಣ ಪಡೆದುಕೊಳ್ಳಬಹುದು. ಅರ್ಜಿ ಸಲ್ಲಿಸುವಾಗ ಸಮಸ್ಯೆ ಕಂಡು ಬಂದಾಗ ಜಿಲ್ಲಾ ಗ್ಯಾರಂಟಿ ಅಡಿಯಲ್ಲಿ ದೂರನ್ನು ನೀಡಬಹುದು ಎಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆ ಪ್ರಾಧಿಕಾರದ ಸದಸ್ಯರಾದ ಜಯಪ್ಪ, ಜಿಲ್ಲಾ ಕೌಶಲ್ಯಭಿವೃದ್ದಿ ಅಧಿಕಾರಿ ಸುರೇಶ, ಉದ್ಯೋಗ ಇಲಾಖೆಯ ಉದ್ಯೋಗ ಅಧಿಕಾರಿಗಳಾದ ಮಂಜುನಾಥ, ಸಹ್ಯಾದ್ರಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ರಾಜೇಶ್ವರಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮಾರ್ಚ್ 3. ಜಿಲ್ಲಾಡಳಿತದಿಂದ ಶ್ರೀಯೋಗಿ ನಾರೇಯಣ ಯತೀಂದ್ರ ಜಯಂತಿ ಆಯೋಜನೆ

0

ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶಿವಮೊಗ್ಗ ಹಾಗೂ ಜಿಲ್ಲಾ ಬಲಿಜ ಸೇವಾ ಸಂಘ ಇವರುಗಳ ಸಂಯಕ್ತಾಶ್ರಯದಲ್ಲಿ ಮಾ.03 ರ ಬೆಳಗ್ಗೆ 11 ಗಂಟೆಗೆ ನಗರದ ಕುವೆಂಪು ರಂಗಮಂದಿರದಲ್ಲಿ ಶ್ರೀ ಯೋಗಿನಾರೇಯಣ ಯತೀಂದ್ರ (ಕೈವಾರ ತಾತಯ್ಯ) ಜಯಂತಿ ಏರ್ಪಡಿಸಲಾಗಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖಾ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧುಬಂಗಾರಪ್ಪ ಇವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು. ಶಾಸಕ ಎಸ್.ಎನ್. ಚನ್ನಬಸಪ್ಪರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ತಂಗಡಗಿ ಶಿವರಾಜ್ ಸಂಗಪ್ಪರವರು ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿರಲಿದ್ದಾರೆ.
ಕಾರ್ಯಕ್ರಮದಲ್ಲಿ ಸಂಸದರು, ವಿಧಾನಸಭಾ ಮತ್ತು ವಿಧಾನ ಪರಿಷತ್ ಶಾಸಕರು, ಪಾಲಿಕೆ ಮಹಾಪೌರರು, ಜನಪ್ರತಿನಿಧಿಗಳು, ವಿವಿಧ ನಿಗಮ, ಮಂಡಳಿ, ಪ್ರಾಧಿಕಾರಗಳ ಅಧ್ಯಕ್ಷರು, ಜಿಲ್ಲೆಯ ಎಲ್ಲಾ ಗೌರವಾನ್ವಿತ ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗ ಮತ್ತು ವಿವಿಧ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ಹಾಗೂ ಸದಸ್ಯರು, ಜಿಲ್ಲಾ ಬಲಿಜ ಸೇವಾ ಸಂಘದ ಅಧ್ಯಕ್ಷರು/ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿ.ಪಂ ಸಿಇಓ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ಮಹಾನಗರ ಪಾಲಿಕೆ ಆಯುಕ್ತರು ಮತ್ತು ಇನ್ನಿತರ ಗಣ್ಯರು, ಅಧಿಕಾರಿಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

ಶಿವಮೊಗ್ಗದ ಸಹ್ಯಾದ್ರಿ ವಿಜ್ಞಾನ ಕಾಲೇಜು ಪ್ರಾಧ್ಯಾಪಕರಾದ ಡಾ. ಛಾಯಾ ಕುಮಾರಿ ಈ. ಇವರಿಂದ ವಿಶೇಷ ಉಪನ್ಯಾಸ ಆಯೋಜಿಸಲಾಗಿದೆ.

ಮಾರ್ಚ್ 3. ಬೆಕ್ಕಿನಕಲ್ಮಠದ ಸಮಾರಂಭದಲ್ಲಿ ‌’ ನೆಲ- ಮುಗಿಲು’ಕವನ ಸಂಕಲನ ಬಿಡುಗಡೆ

0

ಮಸರೂರು ದಿ.ರೇಣುಕಪ್ಪ ಗೌಡ ಪ್ರತಿಷ್ಠಾನ ಪ್ರಕಟಿಸಿರುವ ಹಾರನಹಳ್ಳಿ ಕರಿಬಸವಯ್ಯ ಅವರು ಬರೆದಿರುವ ನೆಲ-ಮುಗಿಲ ಮೌನ ಕವನ ಸಂಕಲನವನ್ನು ಮಾರ್ಚ್ 03 ರಂದು ಸಂಜೆ 6:30ಕ್ಕೆ ಶಿವಮೊಗ್ಗ ಶ್ರೀ ಬೆಕ್ಕಿನಕಲ್ಮಠದಲ್ಲಿ ನಡೆಯುವ 1158 ನೇ ಶಿವಾನುಭವ ಗೋಷ್ಠಿಯಲ್ಲಿ ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರು ಶ್ರೀ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳವರು ಬಿಡುಗಡೆ ಮಾಡಲಿದ್ದಾರೆ.

ಪುಸ್ತಕ ಕುರಿತು ಜಾವಳ್ಳಿ ಜ್ಞಾನದೀಪ ಶಾಲೆಯ ಅಧ್ಯಾಪಕ ತುರುವನೂರು ಮಲ್ಲಿಕಾರ್ಜನ ಅವರು ಮಾತನಾಡಲಿದ್ದಾರೆ. ಈ ಸಂದರ್ಭದಲ್ಲಿ ಸುವರ್ಣ ದಾಂಪತ್ಯ ಜೀವನ ಪೂರೈಸಿದ ಪ್ರೊ.ಸಿ.ಯು.ಸೋಮಶೇಖರ್ ದಂಪತಿಯನ್ನು ಸನ್ಮಾನಿಸಲಾಗುತ್ತದೆ. ನಿವೃತ್ತ ಉಪನ್ಯಾಸಕ ಡಾ.ಎಂ .ರಾಜಶೇಖರಯ್ಯ, ಮಸರೂರು ದಿ.ರೇಣುಕಪ್ಪ ಪ್ರತಿ಼ಷ್ಠಾನದ ಕಾರ್ಯದರ್ಶಿ ಡಾ.ಗಣೇಶ್ ಕೆಂಚನಾಲ ಉಪಸ್ಥಿತರಿರುತ್ತಾರೆ. ಕಲಾವಿದರಾದ ನಾಗರತ್ನಮ್ಮ ಚಂದ್ರಶೇಖರಯ್ಯ ,ಸುಮಾಹೆಗಡೆ ಕಾವ್ಯ ಗಾಯನ ನಡೆಸಿಕೊಡಲಿದ್ದಾರೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ.

Rotary Club Shimoga ರೋಟರಿ ಕ್ಲಬ್ ವತಿಯಿಂದ ಸ್ವಯಂಚಾಲಿತ ರಕ್ತಸಂಗ್ರಹ ಯಂತ್ರದ ಉದ್ಘಾಟನೆ

0

Rotary Club Shimoga ರೋಟರಿ ಕ್ಲಬ್ ಶಿವಮೊಗ್ಗ ಉತ್ತರ ವತಿಯಿಂದ ರೆಡ್‌ ಕ್ರಾಸ್ ಸಂಜೀವಿನಿ ರಕ್ತ ಕೇಂದ್ರಕ್ಕೆ ರೋಟರಿ ಗ್ಲೋಬಲ್ ಗ್ರಾಂಟ್ ಮೂಲಕ ಸ್ವಯಂಚಾಲಿತ ರಕ್ತ ಸಂಗ್ರಹ ಯಂತ್ರವನ್ನು ಕೊಡುಗೆಯಾಗಿ ನೀಡಿದ್ದು, ಇದರ ಉದ್ಘಾಟನಾ ಸಮಾರಂಭ ಮಾ.1ರಂದು ಬೆಳಗ್ಗೆ 11 ಗಂಟೆಗೆ ಶಿವಮೊಗ್ಗದ ಜೆಎನ್‌ಎನ್‌ಸಿಇ ಎಂಬಿಎ ಸಭಾಂಗಣದಲ್ಲಿ ನಡೆಯಲಿದೆ ಎಂದು ರೋಟರಿ ಮಾಜಿ ಜಿಲ್ಲಾ ಗವರ್ನರ್ ಪ್ರೊ.ಎ.ಎಸ್. ಚಂದ್ರಶೇಖರ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಯಂತ್ರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ರೋಟರಿ ನಿರ್ದೇಶಕ ಕೆ.ಪಿ. ನಾಗೇಶ್, ಜಿಲ್ಲಾ ಗವರ್ನರ್ ಪಾಲಾಕ್ಷ, ಜಿಲ್ಲಾ ಚೇರ್ಮನ್ ಡಿ.ಎಸ್. ರವಿ, ಪ್ರೊ. ಎ.ಎಸ್. ಚಂದ್ರಶೇಖರ್, ಕೆ.ಪಿ. ಶೆಟ್ಟಿ, ಎಸ್.ಪಿ. ದಿನೇಶ್, ಎ.ಎನ್. ಶಾಂತರಾಜಪ್ಪ, ಆ‌ರ್. ಬಸವರಾಜಪ್ಪ ಭಾಗವಹಿಸಲಿದ್ದಾರೆ ಎಂದರು.

ಕೊಡುಗೆಯಾಗಿ ನೀಡಿದ ರಕ್ತ ಸಂಗ್ರಹಣಾ ಹಾಗೂ ವಿಂಗಡಣಾ ಯಂತ್ರ ಮತ್ತು ದಾನಿಗಳ ಮಂಚದ ಬೆಲೆ 42.90 ಲಕ್ಷ ರೂ. ಆಗಿದ್ದು, ಈ ಹಣವನ್ನು ಸಂಪೂರ್ಣವಾಗಿ ಅಮೆರಿಕದ ಮೋಡೆಸ್ಟ್ ರೋಟರಿ ಕ್ಲಬ್ ಅಮೆರಿಕದ ರೋಟರಿ ಜಿಲ್ಲೆ 5220 ಹಾಗೂ ರೋಟರಿ ಪ್ರತಿಷ್ಠಾನ ನೀಡಿದೆ ಎಂದರು.

ಈ ಯಂತ್ರದಿಂದ ಹಲವು ಪ್ರಯೋಜನಗಳಿದ್ದು, ಒಂದು ರಕ್ತ ಸಂಗ್ರಹಣವನ್ನು ವಿವಿಧ ಬಗೆಯಲ್ಲಿ ಸಂಗ್ರಹಿಸಬಹುದಾಗಿದೆ. ಪ್ಲೇಟೆಟ್ ಮತ್ತು ಪ್ಲಾಸ್ಮಾ ಲಭ್ಯತೆಯಲ್ಲಿ ಹೆಚ್ಚಳವಾಗಲಿದೆ. ಕ್ಯಾನ್ಸರ್, ಅಪಘಾತ ಗಳು ಹಾಗೂ ಡೆಂಗ್ಯೂ ಚಿಕಿತ್ಸೆಗಳಲ್ಲಿ ಅಗತ್ಯವಿರುವ ಪ್ಲೇಟೆಟ್ ಹಾಗೂ ಪ್ಲಾಸ್ಮಾಗಳನ್ನು ನಿರಂತರವಾಗಿ ಇದು ಒದಗಿಸುತ್ತದೆ. ಸೋಂಕು ಗಳು ಹಾಗೂ ಪ್ರತಿರೋಧಕ ಪ್ರತಿಕ್ರಿಯೆಗಳ ಅಪಾಯ ಕಡಿಮೆ ಇರುತ್ತದೆ. ಅಗತ್ಯ ಇರುವ ರಕ್ತ ಘಟಕಗಳನ್ನು ಮಾತ್ರ ಸಂಗ್ರಹಿಸಲಾಗು ತದೆ. ಸಮಯ ಹಾಗೂ ಸಂಪನ್ಮೂಲ ಉಳಿತಾಯವಾಗುತ್ತದೆ. ಉನ್ನತ ಮಟ್ಟದ ವೈದ್ಯಕೀಯ ಚಿಕಿತ್ಸೆಗೆ ಬೆಂಬಲವಾಗುತ್ತದೆ. ಹೆಚ್ಚು ಶುದ್ಧ ಹಾಗೂ ಪರಿಣಾಮಕಾರಿ ಪ್ಲಾಸ್ಮಾ ಲಭಿಸುತ್ತದೆ. ಹಾಗಾಗಿ ಈ ಯಂತ್ರವು ಬಹು ಉಪಯೋಗಿ ಯಂತ್ರವಾಗಿದೆ ಎಂದರು.

Rotary Club Shimoga ಇದಲ್ಲದೇ ರೋಟರಿ ಉತ್ತರ ಕ್ಲಬ್ ಹಲವು ಸಾಮಾಜಿಕ ಕಾರ್ಯ ಕ್ರಮಗಳನ್ನು ನಡೆಸುತ್ತಾ ಬಂದಿದೆ. ಶಾಲೆಗಳಲ್ಲಿ ಪೀಠೋಪಕರಣಗಳು, ಶುದ್ಧ ಕುಡಿಯುವ ನೀರಿನ ಘಟಕ, ಕಂಪ್ಯೂಟರ್, ಪ್ರಾಜೆಕ್ಟ್ ಮುಂತಾದವುಗಳನ್ನು ನೀಡಲು ಸುಮಾರು 25 ಶಾಲೆಗಳಿಗೆ 26.50 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಸುಮಾರು 5 ಸಾವಿರ ಮಕ್ಕಳು ಇದರಿಂದ ಪ್ರಯೋಜನ ಪಡೆಯಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಭಾರತಿ ಚಂದ್ರಶೇಖರ್, ಶ್ರೀನಾಥ್ ಗಿರಿಮಾಜಿ, ಕೆ.ಪಿ. ಶೆಟ್ಟಿ, ಶಿವಕುಮಾರ್, ಜಿ. ವಿಜಯ ಕುಮಾರ್, ಜೆ.ಕೆ. ಶ್ರವಣ್, ಶ್ರೀಧರ್, ಎಸ್.ಜಿ. ರಮೇಶ್, ಬಸವರಾಜಪ್ಪ, ಮೈತ್ರಿ ಇದ್ದರು.

DVS Institute ಆಧುನಿಕ ಬದುಕಿನ ಶೈಲಿಯು ಯಾಂತ್ರಿಕವಾಗಿದ್ದು, ಮಾನವೀಯ ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿದೆ:ಆಯನೂರು ಮಂಜುನಾಥ್

0

DVS Institute ಆಧುನಿಕ ಯುಗದಲ್ಲಿ ಕೃತಕ ಬುದ್ಧಿಮತ್ತೆಯೊಂದಿಗೆ ಮನುಷ್ಯ ಕಾಲದೊಂದಿಗೆ ವೇಗವಾಗಿ ಹೆಜ್ಜೆ ಇಡುತ್ತಿದ್ದಾನೆ ಎಂದು ಮಾಜಿ ಸಂಸದ ಆಯನೂರು ಮಂಜುನಾಥ್ ಹೇಳಿದರು.
ದೇಶೀಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ 1, 2 ಮತ್ತು 3ರ ವತಿಯಿಂದ ಕೋಹಳ್ಳಿ ಆಯನೂರಿನಲ್ಲಿ ಆಯೋಜಿಸಿದ್ದ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಆಧುನಿಕ ಬದುಕಿನ ಶೈಲಿಯು ಯಾಂತ್ರಿಕವಾಗಿದ್ದು, ಮಾನವೀಯ ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿದೆ ಎಂದು ತಿಳಿಸಿದರು.
ಡಿವಿಎಸ್ ಸಂಸ್ಥೆ ಕಾರ್ಯದರ್ಶಿ ಎಸ್.ಪಿ.ದಿನೇಶ್ ಮಾತನಾಡಿ, ವಿದ್ಯಾರ್ಥಿಗಳು ಗ್ರಾಮೀಣ ಜೀವನದ ಉತ್ತಮ ಜೀವನ ಶೈಲಿಯನ್ನು ರೂಢಿಸಿಕೊಳ್ಳಲು ಶಿಬಿರಗಳು ಉಪಯುಕ್ತವಾಗಿವೆ. ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಜೀವನ ಕೌಶಲ್ಯಗಳನ್ನು ಪಡೆದುಕೊಳ್ಳಲು ಒಂದು ಉತ್ತಮ ವೇದಿಕೆಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಿವಿಎಸ್ ಸಂಸ್ಥೆಯ ಅಧ್ಯಕ್ಷ ಕೆ.ಬಸಪ್ಪಗೌಡ ಮಾತನಾಡಿ, ಭಾರತ ದೇಶವು ಬಹು ಸಂಸ್ಕೃತಿಯ ನಾಡಾಗಿದೆ. ಇಲ್ಲಿ ಅನೇಕ ವೈಶಿಷ್ಟಗಳಿವೆ. ಗಾಂಧೀಜಿ ಅವರ ಕನಸಾದ ಗ್ರಾಮ ಸ್ವರಾಜ್ಯದ ಕನಸನ್ನು ನನಸಾಗಿಸಬೇಕಿದೆ, ಅದಕ್ಕಾಗಿ ಎನ್‌ಎಸ್‌ಎಸ್ ಉದ್ದೇಶಗಳು ದೇಶವನ್ನು ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು.
DVS Institute ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಮಂಜುನಾಥ ಶೆಟ್ಟಿ ಅವರು ಕೋಹಳ್ಳಿ ದೇವಸ್ಥಾನದ ಇತಿಹಾಸ ಮತ್ತು ಮಹತ್ವವನ್ನು ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಕೇಶವನ್ ನಾಯರ್ ಎನ್.ವಿ., ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಚಾರ್ಯ ಡಾ. ಎಂ.ವೆಂಕಟೇಶ್ ಪ್ರಾಸ್ತಾವಿಕ ಭಾಷಣ ಮಾಡಿದರು.
ಐಕ್ಯೂಎಸಿ ಸಂಚಾಲಕ ಪ್ರೊ. ಎನ್.ಕುಮಾರಸ್ವಾಮಿ, ಕಾರ್ಯಕ್ರಮಾಧಿಕಾರಿ ಡಾ. ಡಿ.ಬಿ.ಶಿವರುದ್ರಪ್ಪ, ಅರ್ಪಿತಾ ಪಿ, ಡಾ. ಶಿವಶಂಕರ್ ಎಂ.ಕಿನ್ನಾಳ್, ಅಧ್ಯಾಪಕರಾದ ಕೇತನಾ ಆರ್ತಿ, ಡಾ. ದುರ್ಗಪ್ಪ ಮುಂಡಗಿ, ಡಾ. ಮಂಜುನಾಥ್, ಡಾ. ಶ್ರೀನಿವಾಸ್ ಲಮಾಣಿ, ಸಚಿನ್ ಕೆ ಹಾಗೂ ಊರಿನ ಪ್ರಮುಖರು ಉಪಸ್ಥಿತರಿದ್ದರು.

ರಾಜ್ಯದಲ್ಲಿ ಮಾನ್ಯತೆ ಪಡೆದ ಪತ್ರಕರ್ತರಿಗೆ ರೈಲ್ವೆ ರಿಯಾಯಿತಿ ಇತ್ಯಾದಿ‌ ಬೇಡಿಕೆಗಳ ಬಗ್ಗೆ ಇಲಾಖೆಯೊಂದಿಗೆ ಚರ್ಚೆ- ಸಚಿವ ಎಲ್.ಮುರುಗನ್

0

ರಾಜ್ಯದಲ್ಲಿ ಮಾನ್ಯತೆ ಪಡೆದ ಪತ್ರಕರ್ತರಿಗೆ ರೈಲ್ವೆ ರಿಯಾಯಿತಿ, ಆನ್‌ಲೈನ್ ಬುಕಿಂಗ್ ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆ ಗಳ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ರಾಜ್ಯ ಸಚಿವ ಡಾ. ಮುರುಗನ್ ಭರವಸೆ ನೀಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಲಾದ ಮನವಿ ಸ್ವೀಕರಿಸಿ ಮಾತನಾಡಿದ ಅವರು, ವಾರ್ತಾ ಸಚಿವರಾದ ಅಶ್ವಿನ್ ವೈಷ್ಣವ್, ರೈಲ್ವೆ ಸಚಿವರು ಸೇರಿದಂತೆ ಸಂಬಂದಿಸಿದ ಸಚಿವರನ್ನು ಭೇಟಿ ಮಾಡಿ ಬೇಡಿಕೆಗಳ ಕುರಿತಾಗಿ ಗಮನ ಸೆಳೆಯಲಾಗುವುದು ಎಂದರು.
ನೂತನ ಜಾಹೀರಾತು ನೀತಿ ಗೊಂದಲಗಳನ್ನು ನಿವಾರಿಸುವ ನಿಟ್ಟಿನಲಿ ಸಚಿವರು, ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದ ಅವರು, ಸರ್ಕಾರ ಮತ್ತು ಸಾರ್ವಜನಿಕರ ನಡುವೆ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಪತ್ರಕರ್ತರ ಹಿತ ಕಾಯಲು ಬದ್ಧ ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಿವರ ಕೇಳಿ ಪಡೆದ ಅವರು, ಪತ್ರಕರ್ತರ ಹಿತ ಕಾಯುವಲ್ಲಿ ಸಂಘವು ನಡೆಸುತ್ತಿರುವ ಕಾರ್ಯಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಂಸದ ಬಿ. ವೈ. ರಾಘವೇಂದ್ರ, ಶಾಸಕ ಎಸ್. ಎನ್. ಚನ್ನಬಸಪ್ಪರವರು, ಪತ್ರಕರ್ತರ ಬೇಡಿಕೆಗಳ ಕುರಿತಾಗಿ ಸಚಿವರಲ್ಲಿ ಸಹಾನುಭೂತಿಯಿಂದ ಮಾತನಾಡಿದರು.
ಸಚಿವರ ಜೊತೆಗೆ ಸಂಸದ ಬಿ. ವೈ. ರಾಘವೇಂದ್ರರವರಿಗೂ ಮನವಿ ಅರ್ಪಿಸಲಾಯಿತು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆಯ ಅಧ್ಯಕ್ಷ ವೈದ್ಯನಾಥ್ ಅವರ ನೇತೃತ್ವದಲ್ಲಿ ಸಚಿವರನ್ನು ಭೇಟಿ ಮಾಡಿದ ನಿಯೋಗದಲ್ಲಿ ಪ್ರಧಾನ ಕಾರ್ಯದರ್ಶಿ ಹಾಲಸ್ವಾಮಿ, ಕಾರ್ಯದರ್ಶಿ ಸೋಮನಾಥ್, ದೀಪಕ್ ಸಾಗರ್, ಸತ್ಯನಾರಾಯಣಪ್ಪ, ನಾಗರಾಜ ಶಣೈ, ಅತೀಕ್ ಉಲ್ಲಾ ಖಾನ್, ಶಿವಮೊಗ್ಗ ಯೋಗರಾಜ್, ಸ್ಪಂದನ ಚಂದ್ರು, ಶಿವಮೊಗ್ಗ ನಾಗರಾಜ್, ಎಸ್. ಕೆ. ದಿನೇಶ್, ರಾಘು, ಮಂಜುನಾಥ್ ಸೇರಿದಂತೆ ಪತ್ರಕರ್ತರು, ಪತ್ರಿಕಾ ಛಾಯಾಗ್ರಾಹಕರು, ವಿದ್ಯುನ್ಮಾನ ಮಾಧ್ಯಮ ಮಾಧ್ಯಮ ಮಿತ್ರರು ಉಪಸ್ಥಿತರಿದ್ದರು.