Wednesday, February 18, 2026
Wednesday, February 18, 2026
Home Blog Page 177

Vice President Election 2025 ಉಪರಾಷ್ಟ್ರಪತಿ ಚುನಾವಣೆ. ಎನ್ ಡಿಎ ಅಭ್ಯರ್ಥಿ ಗೆಲುವಿಗೆ ಸಂಖ್ಯಾಬಲ ಬೆಂಬಲ?

Vice President Election 2025 ಉಪ ರಾಷ್ಟ್ರಪತಿಗಳಾಗಿದ್ದ ಶ್ರೀ ಜಗದೀಪ್ ಧನ್ಕರ್ ಅವರ ರಾಜಿನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಸೆಪ್ಟೆಂಬರ್ 9 ಚುನಾವಣೆ ನಡೆಯುತ್ತಿದೆ.
ಲೋಕಸಭೆಯಲ್ಲಿ ಪಕ್ಷಗಳ ಬಲಾಬಲ ಆಧರಿಸಿ ಊಹಿಸಿದರೆ ಇಂಡಿ ಅಭ್ಯರ್ಥಿ ನ್ಯಾ.ಶ್ರೀ ಬಿ.ಸುದರ್ಶನ ರೆಡ್ಡಿ ಅವರಿಗಿಂತ
ಬಿಜೆಪಿ ಬೆಂಬಲಿತ
ಎನ್ ಡಿ ಎ ಅಭ್ಯರ್ಥಿ ಶ್ರೀ ಸಿ.ಪಿ‌.ರಾಧಾಕೃಷ್ಣನ್
Vice President Election 2025 ಅವರ ಜಯ ಬಹುತೇಕ ಖಚಿತವಾಗಿದೆ. 391 ಮತ ಪಡೆದವರು ಜಯಶಾಲಿಗಳಾಗುತ್ತಾರೆ. ಸಂಖ್ಯಾಬಲದ ಪ್ರಕಾರ
ಲೋಕಸಭೆ ಮತ್ತು ರಾಜ್ಯಸಭೆ ಸೇರಿ ಒಟ್ಟು ಸ್ಥಾನಗಳು 781.
ಅದರಲ್ಲಿ ಎನ್ ಡಿಎ ಬಲ 436 ಇದೆ.
ಪ್ರತಿಪಕ್ಷ ಒಕ್ಕೂಟ ಇಂಡಿ ಬಲ 324 ಇದೆ.
ಪಕ್ಷ ನಿಷ್ಠೆ ಆಧಾರದಲ್ಲಿ
ಮತಹಾಕಿದರೆ ಎನ್ ಡಿ ಎ ಅಭ್ಯರ್ಥಿ ಸಿ.ಪಿ.ರಾಧಾಕೃಷ್ಣನ್ ಗೆಲುವು ಸಲೀಸಾಗಲಿದೆ.
ಇಂದು ಶಿವಮೊಗ್ಗ ಸಂಸದ ಬಿ.ವೈ‌ರಾಘವೇಂದ್ರ ಅವರು ಮತ ಚಲಾಯಿಸಿದ
ಹರ್ಷದಲ್ಲಿರುವ ತಮ್ಮ ಚಿತ್ರವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Sri Dharmasthala Manjunatheshwara Education Trust ಬೆಂಗಳೂರಿನ ರುಡ್ ಸೆಟ್ ಸಂಸ್ಥೆಯಿಂದ ಅಣಬೆ ಕೃಷಿ ಬಗ್ಗೆ ಉಚಿತ ತರಬೇತಿಗೆ ಅರ್ಜಿ ಆಹ್ವಾನ

0

Sri Dharmasthala Manjunatheshwara Education Trust ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್‌ ಮತ್ತು ಕೆನರಾ ಬ್ಯಾಂಕ್‌ನ ಸಹಯೋಗದಲ್ಲಿ ನಡೆಸುತ್ತಿರುವ ರುಡ್‌ಸೆಟ್‌ ಸಂಸ್ಥೆಯ ವತಿಯಿಂದ ಅಣಬೆ ಬೇಸಾಯ (Mushroom Cultivation) ಕುರಿತ 10 ದಿನಗಳ ಉಚಿತ ತರಬೇತಿಯನ್ನು ಅಕ್ಟೋಬರ್ 06 ರಿಂದ ಹಮ್ಮಿಕೊಳ್ಳಲಾಗಿದ್ದು, ಗ್ರಾಮೀಣ ಆಸಕ್ತ ನಿರುದ್ಯೋಗಿ ಯುವಕ-ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತರು 18 ರಿಂದ 45 ವರ್ಷ ವಯೋಮಾನದವರಾಗಿದ್ದು, ಕನ್ನಡ ಭಾಷೆ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು. ಬಿಪಿಎಲ್‌ ಕಾರ್ಡ್‌ ಅಥವಾ ಜಾಬ್‌ ಕಾರ್ಡ್‌ ಹಾಗೂ ಆಧಾರ್‌ ಕಾರ್ಡ್‌ನ್ನು ಕಡ್ಡಾಯವಾಗಿ ಹೊಂದಿರಬೇಕು. ಆಸಕ್ತರು ತಮ್ಮ ಹೆಸರನ್ನು ನೋಂದಾಯಿಸಲು ಸೆಪ್ಟೆಂಬರ್‌ 25 ಕೊನೆಯ ದಿನವಾಗಿದೆ.

ತರಬೇತಿಯು ಕಡ್ಡಾಯವಾಗಿ ವಸತಿಯುತವಾಗಿದ್ದು, ತರಬೇತಿಯ ಅವಧಿಯಲ್ಲಿ ಉಚಿತವಾಗಿ ಊಟ ಮತ್ತು ವಸತಿ ನೀಡಲಾಗುವುದು ಹಾಗೂ ತರಬೇತಿ ಪೂರ್ಣಗೊಂಡ ನಂತರ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಪ್ರಮಾಣಪತ್ರವನ್ನು ವಿತರಿಸಲಾಗುವುದು.

Sri Dharmasthala Manjunatheshwara Education Trust ಆಸಕ್ತರು ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ರುಡ್‌ಸೆಟ್‌ ಸಂಸ್ಥೆ, ಅರಿಶಿನಕುಂಟೆ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೊಬೈಲ್‌ ಸಂಖ್ಯೆ: 9380162042, 9481506564, 9113880324 ಅನ್ನು ಸಂಪರ್ಕಿಸಬಹುದಾಗಿದೆ ಎಂದು ರುಡ್‌ಸೆಟ್‌ ಸಂಸ್ಥೆಯ ಬೆಂಗಳೂರು ಶಾಖೆಯ ನಿರ್ದೇಶಕರಾದ ರವಿಕುಮಾರ ಅವರು ತಿಳಿಸಿದ್ದಾರೆ.

CM Siddharamaiah ಶ್ರೀನಾರಾಯಣ ಗುರುಗಳು ಜಾತಿ, ಮೂಢನಂಬಿಕೆ,& ಅಂಧಶ್ರದ್ಧೆ ವಿರುದ್ಧ ಹೋರಾಟಗೈದವರು- ಸಿದ್ಧರಾಮಯ್ಯ

0

CM Siddharamaiah ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಆಯೋಜಿಸಿದ್ದ ಬ್ರಹ್ಮ ಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಮಾತನಾಡಿದರು.

ಬ್ರಹ್ಮ ಶ್ರೀ ನಾರಾಯಣ ಗುರುಗಳ ಚಿಂತನೆ, ಹೋರಾಟಗಳ ಉದ್ದೇಶವನ್ನು ಜನರು ಅರ್ಥೈಸಿಕೊಳ್ಳಬೇಕಿದೆ. ನಾರಾಯಣ ಗುರುಗಳು ಯಾವುದೇ ಒಂದು ಸಮುದಾಯ, ಜಾತಿಗೆ ಮೀಸಲಾಗದೇ, ಇಡೀ ಸಮಾಜದ ಆಸ್ತಿಯಾಗಿದ್ದಾರೆ.

ಸಮಾಜದಲ್ಲಿರುವ ಜಾತಿವ್ಯವಸ್ಥೆ, ಮೂಢನಂಬಿಕೆ, ಅಂಧಶ್ರದ್ಧೆಯ ವಿರುದ್ಧ ಹೋರಾಟ ನಡೆಸಿದರು. ನಾರಾಯಣ ಗುರುಗಳು’ ವಿದ್ಯೆಯಿಂದ ಸ್ವತಂತ್ರರಾಗಿರಿ’ ಎಂಬ ಮಾತನ್ನು ಪ್ರತಿಪಾದಿಸಿದರು. ಇತಿಹಾಸದಲ್ಲಿ ನಮ್ಮ ಸಮಾಜದಲ್ಲಿ ಅನಕ್ಷರತೆಯಿತ್ತು, ಈಗ ಪರಿಸ್ಥಿತಿ ಕೊಂಚ ಸುಧಾರಿಸಿದೆ. ದೇವಸ್ಥಾನಕ್ಕೆ ಪ್ರವೇಶ ದೊರೆಯದಿದ್ದರೆ, ದೇವಸ್ಥಾನವೇ ನಿಮ್ಮ ಬಳಿ ಕರೆತರಲು ಪ್ರಯತ್ನಿಸಿ ಎಂದು ನಾರಾಯಣಗುರುಗಳು ತಿಳಿಸಿದ್ದರು. ನಾರಾಯಣ ಗುರುಗಳ ಕಾಲಮಾನದಲ್ಲಿ ಕೇರಳದಲ್ಲಿ ಶೂದ್ರವರ್ಗದವರನ್ನು ತುಚ್ಛವಾಗಿ ಕಾಣುವ ಪರಿಸ್ಥಿತಿಯಿತ್ತು.

ಪರ್ಯಾಯ ವ್ಯವಸ್ಥೆಯನ್ನು ನಾರಾಯಣ ಗುರುಗಳು ಹುಡುಕಿದರು. ಅವರು ಮೊದಲನೇ ದೇವಸ್ಥಾನ ಕಟ್ಟಿದ್ದು 1885ರಲ್ಲಿ. ಅಲ್ಲಿಂದೀಚೆಗೆ 150ಕ್ಕೂ ಹೆಚ್ಚು ದೇವಸ್ಥಾನಗಳನ್ನು ಕಟ್ಟಿದರು. ಮೇಲ್ಜಾತಿಯವರೇ ಪೂಜಾರಿಗಳಾಗಬೇಕೆಂದು ದೇವರು ಹೇಳಿಲ್ಲ. ಪೂಜಾರಿಗಳಾದವರಿಗೆ ತರಬೇತಿ ಕೊಡುವ ವ್ಯವಸ್ಥೆಯನ್ನು ಕೂಡ ಮಾಡುತ್ತಾರೆ. ಒಂದು ಜಾತಿ, ಒಂದು ಮತ, ಒಂದು ದೇವರು ಎಂಬ ಮಾತುಗಳನ್ನು ಅವರು ಹೇಳಿದರು.

ನಮಗೆ ದೊರೆತಿರುವ ಸ್ವಾತಂತ್ರ್ಯ ಯಶಸ್ವಿಯಾಗಬೇಕಾದರೆ ಶಕ್ತಿ ಇಲ್ಲದವರನ್ನು ಶಕ್ತಿಯುತರಾಗಿಸಬೇಕು. ಆಗ ಮಾತ್ರ ನಿಜವಾದ ಸ್ವಾತಂತ್ರ್ಯ ದೊರೆಯುತ್ತದೆ. ಬಸವಣ್ಣನ ಕಾಲದಿಂದಲೂ ಜಾತಿ, ವರ್ಗ ಹೋಗಬೇಕೆಂದು ಹೇಳುತಾ ಬಂದಿದ್ದರೂ ಜಾತಿ ವರ್ಗ ಹೋಗಿಲ್ಲ. ಸಂವಿಧಾನದಲ್ಲಿ ಬಹಳ ಸ್ಪಷ್ಟವಾಗಿ ಎಲ್ಲರಿಗೂ ಸಮಾನ ಅವಕಾಶಗಳು ದೊರೆಯಬೇಕು ಎಂದಿದ್ದರೂ ಎಲ್ಲರಿಗೂ ಸಮಾನ ಅವಕಾಶಗಳು ಸಿಕ್ಕಿಲ್ಲ.

ಬಸವಣ್ಣವ ವಚನವನ್ನು ಹೇಳುತ್ತಲೇ ಯಾವ ಜಾತಿ ಎಂದು ಕೇಳುತ್ತೇವೆ. ಇದನ್ನು ಹೋಗಲಾಡಿಸಬೇಕಾದರೆ ಆರ್ಥಿಕ, ಸಾಮಾಜಿಕವಾಗಿ ಸ್ವಾವಲಂಬಿಗಳಾಗಬೇಕು. ಅದಕ್ಕಾಗಿ ಕಸುಬು ಯಾವುದೇ ಇದ್ದರೂ ವಿದ್ಯೆ ಕಲಿಯಲೇಬೇಕು. ವೈದ್ಯರು, ಇಂಜಿನಿಯರ್, ಪ್ರೊಫೆಸರ್, ವಿಜ್ಞಾನಿಗಳಾಗಬೇಕು. ವೈದ್ಯರು, ಇಂಜಿನಿಯರ್ ಅಥವಾ ವಿಜ್ಞಾನಿಗಳಾಗುವುದು ಯಾರೊಬ್ಬರ ಸ್ವತ್ತಲ್ಲ. ಎಲ್ಲರಿಗೂ ಸಾಮರ್ಥ್ಯವಿದೆ. ನಾನು ಕುರುಬ ಜಾತಿಯಲ್ಲಿ ಹುಟ್ಟಿದ್ದರೂ ಮುಖ್ಯಮಂತ್ರಿಯಾಗಿಲ್ಲವೆ. ಹುಟ್ಟಿನಿಂದ ಎಲ್ಲವೂ ನಿರ್ಧಾರವಾಗುವುದಿಲ್ಲ.

ಅವಕಾಶಗಳು ದೊರೆಯುವುದು ಹಾಗೂ ಅದನ್ನು ಬಳಕೆ ಮಾಡುವುದರ ಮೇಲೆ ನಿರ್ಧಾರವಾಗುತ್ತದೆ. ಜಾಲಪ್ಪ ಅವರು ವೈದ್ಯಕೀಯ ಕಾಲೇಜು ಸ್ಥಾಪಿಸಿದರು. ಆ ಯೋಚನೆ ಮಾಡದೇ ಹೋಗಿದ್ದರೆ ಅದು ಸಾಧ್ಯವಾಗುತ್ತಿರಲಿಲ್ಲ. ಸರ್ಕಾರ ಎಲ್ಲರಿಗೂ ಉಚಿತ ಶಿಕ್ಷಣ ನೀಡುತ್ತಿದೆ. ಕಡ್ಡಾಯ ಶಿಕ್ಷಣ ನೀಡಲು ಬದ್ಧವಾಗಿದೆ. ಪೋಷಕರು ತಾವು ಯಾವುದೇ ವೃತ್ತಿಯನ್ನು ಮಾಡುತ್ತಿರಲಿ, ಮಕ್ಕಳಿಗೆ ಮಾತ್ರ ಒಳ್ಳೆಯ ಶಿಕ್ಷಣ ಕೊಡಿಸಿ ಅವರನ್ನು ವಿದ್ಯಾವಂತರನ್ನಾಗಿ ಮಾಡುವುದು ತಂದೆ ತಾಯಿಗಳ ಕರ್ತವ್ಯ.

CM Siddharamaiah ವಿದ್ಯೆ ಇಲ್ಲದೆ ಹೋಗಿದ್ದರೆ ದೇವರಾಜ ಅರಸು ಅವರನ್ನು ಮೊದಲ್ಗೊಂಡು, ನಾನಾಗಲಿ, ಬಂಗಾರಪ್ಪನವರಾಗಲಿ, ವೀರಪ್ಪ ಮೊಯ್ಲಿ ಅವರಾಗಲಿ, ಎಸ್. ಎಂ.ಕೃಷ್ಣ ಅವರಾಗಲಿ, ದೇವೇಗೌಡ ಅವರಾಗಲಿ ಮುಖ್ಯಮಂತ್ರಿಗಳಾಗಲು ಸಾಧ್ಯವಿತ್ತೆ? ಎಲ್ಲಾ ಸಾಧನೆಗಳಿಗೂ ಶಿಕ್ಷಣವೇ ಅಡಿಪಾಯ ಎಂದು ಶಿಕ್ಷಣದ ಮಹತ್ವವನ್ನು ನಾರಾಯಣ ಗುರುಗಳು ಪದೇ ಪದೇ ಹೇಳುತ್ತಿದ್ದರು.

ಸರ್ಕಾರದ ವತಿಯಿಂದ ಸುಮಾರು 31 ಜಯಂತಿಗಳನ್ನು ಆಚರಿಸಲಾಗುತ್ತದೆ. ಅದರಲ್ಲಿ ಸುಮಾರು 15 ಜಯಂತಿಗಳ ಆಚರಣೆ ಜಾರಿಗೆ ತಂದಿದ್ದು ನಮ್ಮ ಸರ್ಕಾರ.
2016ರಲ್ಲಿ ನಾರಾಯಣ ಗುರುಗಳ ಜಯಂತಿ ಆಚರಣೆ ಪ್ರಾರಂಭಿಸಿದ್ದು ನಮ್ಮದೇ ಸರ್ಕಾರದ ಅವಧಿಯಲ್ಲಿ.

ಈಡಿಗ – ಬಿಲ್ಲವ ಸಮಾಜದ ಸಮುದಾಯ ಭವನ ನಿರ್ಮಾಣ, ಹಾಸ್ಟೆಲ್ ನಿರ್ಮಾಣಕ್ಕೆ ಸ್ಥಳ ಒದಗಿಸಿದವುದೂ ಸೇರಿದಂತೆ ನಮ್ಮ ಸರ್ಕಾರ ಅನುದಾನವನ್ನು ನೀಡಲಿದೆ. ಈಡಿಗರು, ಬಿಲ್ಲವರ ಅಭಿವೃದ್ಧಿ ನಿಗಮ ಈಗಾಗಲೇ ಘೋಷಣೆಯಾಗಿದೆ. ಕಾನೂನುನಾತ್ಮಕವಾಗಿ ಅವುಗಳನ್ನು ನೋಂದಣಿ ಮಾಡುವ ಕಾರ್ಯ ಆಗಬೇಕಾಗಿದೆ.‌ ದೇವರಾಜ ಅರಸು ನಿಗಮದಲ್ಲಿ ಇದಕ್ಕಾಗಿ 10 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಅದರ ಬದಲಿಗೆ ನಿಗಮಗಳಲ್ಲಿಯೇ ಸ್ವತಂತ್ರವಾಗಿ ಇಡಲು ಕ್ರಮ ಕೈಗೊಳ್ಳಲಾಗುವುದು. ಕಂಪನಿ ಕಾಯ್ದೆ ಪ್ರಕಾರ ನೋಂದಣಿ ಮಾಡಲಾಗುವುದು.

ನಿಮ್ಮ ಸಮುದಾಯಗಳ ಎಲ್ಲಾ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವುದು ನೀವು ನಾರಾಯಣ ಗುರುಗಳಿಗೆ ಸಲ್ಲಿಸುವಂತಹ ಗೌರವ. ನಾವೆಲ್ಲ ಅವರ ಚಿಂತನೆಗಳನ್ನು ರೂಢಿಸಿಕೊಂಡು ಸಾಗಬೇಕಿದೆ.
ನಾನು ಸದಾ ಅವಕಾಶ ವಂಚಿತರ ಪರ, ಸಾಮಾಜಿಕ ನ್ಯಾಯದ ಪರವಾಗಿ ಇರುತ್ತೇನೆ. ನಮ್ಮ ಸರ್ಕಾರವು ಅದಕ್ಕೆ ಬದ್ಧವಾಗಿರುತ್ತದೆ. ನನ್ನ ರಾಜಕೀಯ ಜೀವನವನ್ನೇ ಸಾಮಾಜಿಕ ನ್ಯಾಯಕ್ಕಾಗಿ ಮುಡಿಪಾಗಿಟ್ಟಿದ್ದೇನೆ ಎಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ತಿಳಿಸಿದರು.

Klive Special Article ನಿಮ್ಮೂರಿನ ಇತಿಹಾಸ ನಿಮಗೆಷ್ಟು ಗೊತ್ತು? ವಿವರಣೆ: ದಿಲೀಪ್ ನಾಡಿಗ್. ಶಿವಮೊಗ್ಗ

0

ಭಾಗ. 4.

Klive Special Article ಕೆಳದಿ ಮಹಾಯೋಧ ದೊಡ್ಡ ಸಂಕಣ್ಣನಾಯಕರು ತಾನುಟ್ಟಿದ್ದ ಖಾವಿಯೊಳಗೆ ಬೆಚ್ಚಗೆ ಮಲಗಿದ್ದ ನಾಗಮುರಿ ಖಡ್ಗದೊಂದಿಗೆ ದಕ್ಷಿಣ ಭಾರತದ ತೀರ್ಥ ಯಾತ್ರೆ ಕೈಗೊಂಡು ಮೊದಲು ಶ್ರೀ ರಾಮೇಶ್ವರನನ್ನ ದರ್ಶಿಸಿ ಶಿವಗಂಗೆ, ಕಂಚಿ, ಕುಂಭಕೋಣ, ಚಿದಂಬರಂ, ಶ್ರೀಮುಷ್ಣ, ಮನ್ನಾರ, ಪುದುಗಲ, ಮುಂತಾದ ಶೈವ ಪುಣ್ಯಕ್ಷೇತ್ರ ಸಂದರ್ಶಿಸಿ, ಶೈವದೇವರುಗಳ ಸಾನಿಧ್ಯದಲ್ಲಿ ಸೇವೆ ಮತ್ತು ಸಮುದ್ರ ದರ್ಶನ ಮಾಡಿ ಉತ್ತರಾಭಿಮುಖವಾಗಿ ಪ್ರಯಾಣ ಬೆಳೆಸಿ ವಿಜಯವಾಡ, ಗೋಲ್ಕೊಂಡ, ಅಹ್ಮದ್ ನಗರ, ಮೂಲಕ ದಿಲ್ಲಿಗೆ ಬಂದನು. ದೊಡ್ಡ ಸಂಕಣ್ಣನಾಯಕನ ನಿಜವಾದ ಯೋಧನ ತಾಕತ್ತು ಇಲ್ಲಿಯೇ ಪ್ರದರ್ಶವಾಗುತ್ತದೆ. ದಿಲ್ಲಿ‌ನಗರದ ವೈಭವವನ್ನು, ಸೊಬಗನ್ನು, ಭವ್ಯ ಕಟ್ಟಡಗಳನ್ನು ಕಣ್ಣಾರೆ ಕಂಡ ದೊಡ್ಡಸಂಕಣ್ಣನಾಯಕ ರಿಗೆ ದೆಹಲಿ ಬಾದಷಹನ ಅರಮನೆಯ ಬಳಿ ಬಂದಾಗ ಒಂದು ವಿಶೇಷ ದೃಶ್ಯ ಕಂಡರು, ಅರಮನೆಯ ಬಾಗಿಲಿಗೆ ಬಿರುದು ಸಮೇತ ಕಟ್ಟಿದ್ದ ಕತ್ತಿಯೊಂದು ತೂಗಾಡುತಿತ್ತು, ಅದರ ವಿಚಾರ ಕೇಳಲಾಗಿ ಬಾದಷಹನ ಅರಮನೆಯಲ್ಲಿ ಅಂಕುಶಖಾನನೆಂಬ ಜಟ್ಟಿಯೊಬ್ಬನಿದ್ದಾನೆ, ಅವನು ಒಂಟಿ ಕತ್ತಿಕಾಳಗದಲ್ಲಿ ಪ್ರಸಿದ್ದನಾಗಿದ್ದು ಅವನೊಂದಿಗೆ ಸೆಣಸುವವರು ಈ ಕತ್ತಿಯನ್ನು ಬಿಚ್ಚಿ ತನ್ನೊಡನೆ ಕಾಳಗಕ್ಕೆ ಬರಬೇಕೆಂದು ಸೂಚಿಸಿರುವುದಾಗಿಯೂ ತಿಳಿಸಿದರು. Klive Special Article ಇತ್ತ ಬಾದಷಹ ಇವನನ್ನ ಎದುರಿಸುವ ಜಟ್ಟಿಗಳಾರೂ ಇಡೀ ಭಾರತದಲ್ಲೇ ಇಲ್ಲವೆಂದು ಚಿಂತಿಸುವ ಸಮಯದಲ್ಲೇ ಮಲ್ಲರಿಗೇ ಜಗದೇಕಮಲ್ಲರಾದ ಮಲ್ಲಸಾಮ್ರಾಜ್ಯದ ದೊಡ್ಡಸಂಕಣ್ಣನಾಯಕರ ಪ್ರವೇಶವಾಗಿತ್ತು. ಈ ವಿಚಾರ ತಿಳಿದ ಸಂಕಣ್ಣ ನಾಯಕರು ಕತ್ತಿಯನ್ನು ಬಿಚ್ಚಿ ಅಂಕುಶಖಾನನು ಪರಾಕ್ರಮಿಯಾಗಿದ್ದರೆ ನನ್ನನ್ನು ಎದುರಿಸಲೆಂದನು. ದೊಡ್ಡಸಂಕಣ್ಣನಾಯಕ ರ ವಿಷಯ ತಿಳಿದ ದೆಹಲಿ ಬಾದಷಹ ಸಂಭ್ರಮದಿಂದ ಅವನನ್ನು ಬರಮಾಡಿಕೊಂಡು ಕತ್ತಿ ಕಾಳಗ ಏರ್ಪಡಿಸಿದನಲ್ಲದೆ ತನ್ನ ಶಸ್ತ್ರಾಗಾರದಿಂದ ನಾನಾ ತರಹದ ಖಡ್ಗವನ್ನು ತರಿಸಿ ಬೇಕಾದುದನ್ನು ಆರಿಸಿಕೊಳ್ಳುವಂತೆ ಮಲ್ಲರಿಗೆ ಮಲ್ಲನಾದ ಸಂಕಣ್ಣನಾಯಕರಿಗೆ ತಿಳಿಸಿದನು. ಅವುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಸಂಕಣ್ಣನಾಯಕರು ನಗುತ್ತ ನನಗೆ ಈ ಯಾವ ಆಯುಧವೂ ಬೇಕಿಲ್ಲವೆಂದು ನನ್ನ ಬಳಿಯೇ ಖಡ್ಗವಿದೆಯೆಂದು ಹೇಳಿ ಕಾಳಗಕ್ಕೆ ಇಳಿದನು. ಈ ಅಪೂರ್ವ ಕಾಳಗವನ್ನು ವೀಕ್ಷಿಸಲು ಸಾವಿರಾರು ಜನರು, ನೂರಾರು ಜಟ್ಟಿಗಳು ಸೇರಿದರು. ಆದರೆ ಖಾವಿಯೊಳಗೆ ಬೆಚ್ಚಗೆ ಮಲಗಿದ್ದ ನಾಗಮುರಿ ರಕ್ತಕ್ಕಾಗಿ ತಹತಹಿಸುತ್ತಾ ಮಲಗಿತ್ತು. ಮಲ್ಲರಿಗೆ ಮಲ್ಲರಾದ ಮಲ್ಲಸಾಮ್ರಾಜ್ಯದ ದೊಡ್ಡಸಂಕಣ್ಣನಾಯಕರು ಇಡೀ ಭಾರತವೇ ಮೆಚ್ಚಿ ಕೊಂಡಾಡುವಂತಹ ಸಾಹಸಕ್ಕೆ ಕೈ ಹಾಕಿದ್ದರು. ಮುಂದುವರೆಯುವುದು. ದಿಲೀಪ್ ನಾಡಿಗ್, 6361124316

Department of School Education ಯೋಗ ಮತ್ತು ಚೆಸ್ ಒಂದು ದಿನಕ್ಕೆ ಸೀಮಿತ ಬೇಡ, ಬದುಕಿನ ಅವಿಭಾಜ್ಯ ಅಂಗವಾಗಲಿ – ಶಿವಾನಂದ

0

Department of School Education ಯೋಗ ಮತ್ತು ಚೆಸ್ ಒಂದು ದಿನಕ್ಕೆ ಸೀಮಿತವಾಗಬಾರದು,ದೈನಂದಿನ ಬದುಕಿನ ಅವಿಭಾಜ್ಯ ಕಾರ್ಯವಾಗಬೇಕು ಎಂದು ಅರುಣೋದಯ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಶಿವಾನಂದ ಆಭಿಪ್ರಾಯ ಪಟ್ಟರು.

ಅವರು ಶಾಲಾ ಶಿಕ್ಷಣ ಇಲಾಖೆ ಶಿವಮೊಗ್ಗ, ಹಾಗೂ ಅರುಣೋದಯ ಆಂಗ್ಲ ಮಾಧ್ಯಮ ಶಾಲೆ, ನವುಲೆ, ಶಿವಮೊಗ್ಗ ಇವರ ಸಂಯುಕ್ತ ಆಶ್ರಯ ದಲ್ಲಿ ಆಯೋಜಿಸಲಾಗಿದ್ದ ಎ ಮತ್ತು ಬಿ ಅನುದಾನ ರಹಿತ 14 ವರ್ಷ ವಯೋಮಿತಿಯೊಳಗಿನ ಪ್ರಾಥಮಿಕ ಶಾಲಾ ಬಾಲಕ – ಬಾಲಕಿಯರ ಯೋಗ ಮತ್ತು ಚೆಸ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ಸೋಲು ಗೆಲುವು ಮುಖ್ಯವಲ್ಲ, ಕ್ರೀಡಾ ಮನೋಭಾವದಿಂದ ಸ್ಪರ್ಧೆಯಲ್ಲಿ ಭಾಗವಹಿಸಿ ಎಂದು ಕ್ರೀಡಾ ಪಟುಗಳಿಗೆ ಕರೆ ನೀಡಿದರು.

ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಚಂದ್ರಕಾಂತ್ ಮಾತನಾಡಿ, ಕೇವಲ ಭಾರತವಲ್ಲದೇ ಇಡೀ ವಿಶ್ವದಲ್ಲಿ ಯೋಗಕ್ಕೆ ಆದ್ಯತೆ ನೀಡಲಾಗುತ್ತಿಡೆ ಎಂದರು.

ಚದುರಂಗ ಭಾರತೀಯರಿಗೆ, ರಾಜ ಮಹಾರಾಜರ ಕಾಲದಿಂದಲೂ ಜನಪ್ರಿಯವಾದ ಕ್ರೀಡೆ, ಚದುರಂಗದಿಂದ ಏಕಾಗ್ರತೆ,ಶಿಸ್ತು, ಬುದ್ಧಿಮಟ್ಟ ವೃದ್ಧಿಯಾಗುತ್ತದೆ ಎಂದರು.

ಪ್ರತಿನಿತ್ಯ ಅರ್ಧಗಂಟೆ ಎಲ್ಲರೂ ಕೂಡ ಯೋಗಾಸನ ಮಾಡಬೇಕು. ಇದರಿಂದ ಉತ್ತಮ ಆರೋಗ್ಯ ಲಭಿಸುತ್ತದೆ. ದಶಕದಿಂದೀಚೆಗೆ ಯೋಗದ ಮಹತ್ವ ಜನರಿಗೆ ಅರಿವಾಗಿದ್ದು, ಹೆಚ್ಚಿನ ಜನ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ಹೊಂದಿದ್ದು, ಯೋಗಾಭ್ಯಾಸದ ಕಡೆಗೆ ಒಲವು ಹೊಂದಿದ್ದಾರೆ ಎಂದರು.

Department of School Education ಕಾರ್ಯಕ್ರಮದಲ್ಲಿ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ರಾ. ಹ.ತೀಮೇನಹಳ್ಳಿ, ಮುಖ್ಯ ಶಿಕ್ಷಕ ಮಂಜುನಾಥ್, ಸಹ ಶಿಕ್ಷಕರ ಸಂಘದ ಉಪಾಧ್ಯಕ್ಷ ರಾಮಚಂದ್ರಪ್ಪ ಇನ್ನು ಮುಂತಾದವರು ಉಪಸ್ಥಿತರಿದ್ದರು.

Shimoga Housing Co-operative Society ಯಶಸ್ವಿಯಾಗಿ ನಡೆದ ಶಿವಮೊಗ್ಗ ಹೌಸಿಂಗ್ ಸೊಸೈಟಿಯ 100 ನೇ ಸಭೆ

0

Shimoga Housing Co-operative Society ಶಿವಮೊಗ್ಗ ನಗರದ ಪ್ರತಿಷ್ಠಿತ ಶಿವಮೊಗ್ಗ ಹೌಸಿಂಗ್ ಕೊ ಆಪರೇಟಿವ್ ಸೊಸೈಟಿ ನಿಯಮಿತದ 1೦೦ನೇ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯು ನಗರದ ಕೋಟೆ ಶ್ರೀ ಮಾರಿಕಾಂಬ ದೇವಾಲಯದ ಸಮುದಾಯ ಭವನದಲ್ಲಿ ಯಶಸ್ವಿಯಾಗಿ ನೆರವೇರಿತು.

ಈ ಸಭೆಯ ಅಧ್ಯಕ್ಷತೆಯನ್ನು ಸೊಸೈಟಿಯ ಅಧ್ಯಕ್ಷರು , ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷರಾದ ಎಸ್ ಕೆ ಮರಿಯಪ್ಪನವರು ವಹಿಸಿದ್ದರು.

Shimoga Housing Co-operative Society ಈ ಸಭೆಯಲ್ಲಿ ಸೊಸೈಟಿಯ ಉಪಾಧ್ಯಕ್ಷರಾದ ಸಿ ಹೊನ್ನಪ್ಪ, ಖಜಾಂಚಿ ಕೆ ರಂಗನಾಥ್, ಹಿರಿಯ ನಿರ್ದೇಶಕರಾದ ಉಮಾಶಂಕರ್ ಉಪಾಧ್ಯ, ಎನ್ .ಉಮಾಪತಿ, ಎಸ್ ಪಿ ಶೇಷಾದ್ರಿ, ನರಸಿಂಹ ಸಿ ಗಂಧದ ಮನೆ, ಎಂ ಪ್ರವೀಣ್ ಕುಮಾರ್, ನಟರಾಜ್ ಶಾಸ್ತ್ರಿ, ಶ್ರೀನಿವಾಸ್ ಕರಿಯಣ್ಣ, ನಿರ್ಮಲ ಕಾಶಿ, ಎಸ್ ಎಂ ಕುಮಾರ್ ಎಂ. ಆರ್ ,ಪ್ರಕಾಶ್, ಕೆ ಜಿ ರಾಘವೇಂದ್ರ, ಬಿಎಸ್ ನಾಗರಾಜ್, ವೇದಾವತಿ ಕೆಎಸ್ ಹಾಗೂ ಸರ್ವ ಸದಸ್ಯರು ಪಾಲ್ಗೊಂಡಿದ್ದರು.

Department of Tourism and Culture ಅಕ್ಟೋಬರ್ 10 ರಿಂದ 12 ವರೆಗೆ ಮಲೆನಾಡ ಪಾರಂಪರಿಕ ಆಹಾರ ಹಬ್ಬ

0

Department of Tourism and Culture ನಮ್ಮ ಕನಸಿನ ಶಿವಮೊಗ್ಗ ವತಿಯಿಂದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸ್ಥಳೀಯ ಸಂಘಗಳ ಸಹಕಾರದೊಂದಿಗೆ ಅಕ್ಟೋಬರ್ 10 ರಿಂದ ಅಕ್ಟೋಬರ್ 12ರವರೆಗೆ ಶಿವಮೊಗ್ಗದ ಫ್ರೀಡಂ ಪಾರ್ಕ್ ಆವರಣದಲ್ಲಿ ಮಲೆನಾಡು ಪಾರಂಪರಿಕ ಆಹಾರ ಹಬ್ಬ -2025 ಅನ್ನು ಹಮ್ಮಿಕೊಳ್ಳಲಾಗಿದೆ.

Shivamogga Police ಕಾಣೆಯಾದ ವ್ಯಕ್ತಿಗಳ ಸುಳಿವು ನೀಡಲು ಮಾಳೂರು & ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ ಪ್ರಕಟಣೆ

0

Shivamogga Police ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂರು ಜನ ನಾಪತ್ತೆಯಾಗಿದ್ದು, ಸುಳಿವು ದೊರೆತಲ್ಲಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

ಅಕ್ಕಸಾಲಿಕೊಪ್ಪದ ವನಜಾ ಶೆಡ್ತಿ ಎಂಬುವವರ ಮಗ ಸದಾನಂದ ಶೆಟ್ಟಿ ಬಿನ್ ಸೂರಣ್ಣ ಶೆಟ್ಟಿ ಎಂಬುವವರು 2024ರ ಜೂನ್‌ನಿಂದ ಕಾಣೆಯಾಗಿದ್ದು, ಈವರೆಗೂ ವಾಪಾಸ್ಸು ಬಂದಿರುವುದಿಲ್ಲ ಎಂದು ಸಹೋದರಿ ವಿಮಲ ಕೋಂ ಮಂಜುನಾಥ, ಕುಂಬಾರಕೊಪ್ಪ ಕುಡುಮಲ್ಲಿಗೆ ಗ್ರಾಮ ತೀರ್ಥಹಳ್ಳಿ ತಾ ವಾಸಿ ಇವರು ದಿ: 02-09-2025 ರಂದು ದೂರು ನೀಡಿರುತ್ತಾರೆ. ಈತನ ತಾಯಿ ಸುಮಾರು 95 ವರ್ಷದವರಾಗಿದ್ದು, ಅನಾರೋಗ್ಯಪೀಡತರಾಗಿರುತ್ತಾರೆ.

ಈತನ ಚಹರೆ: ಸುಮಾರು 5.5 ಅಡಿ ಎತ್ತರ ಉದ್ದನೆಯ ಮುಖ, ಗೋಧಿ ಬಣ್ಣ, ಬಿಳಿ ಕೂದಲು, ಸಾಧಾರಣ ಮೈಕಟ್ಟು ಹೊಂದಿರುತ್ತಾರೆ.
ತೀರ್ಥಹಳ್ಳಿ ತಾಲ್ಲೂಕು ತನಿಕಲ್ ಬೆಟ್ಟಬಸವಾನಿ ಗ್ರಾಮ ವಾಸಿ ಹರೀಶ್ ಜಿ ಆರ್ ಬಿನ್ ಜಿ ಹೆಚ್ ರಂಗಪ್ಪ ಗೌಡ ಎಂಬುವವರ ಅಣ್ಣ ತುಳಸೀದಾಸ್ ಎಂಬುವವರು ಚಿತ್ರದುರ್ಗದ ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿಹಳ್ಳಿಯಲ್ಲಿರುವ ಅನಾಥ ಸೇವಾ ಆಶ್ರಮದ ಹಾಸ್ಟೆಲ್‌ನಲ್ಲಿದ್ದು ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದು, ಜನವರಿ 1982 ರಂದು ಮನೆಗೆ ಬಂದು,1982ರ ಜ.14ರಂದು ಪುನಃ ಕಾಲೇಜಿಗೆಂದು ಹೋದವರು ಕಾಣೆಯಾಗಿರುತ್ತಾರೆ ಎಂದು ದಿ:06-08-2025 ರಂದು ದೂರು ನೀಡಿರುತ್ತಾರೆ.

ಈತನ ಚಹರೆ ಕಾಣೆಯಾದ ಸಮಯದಲ್ಲಿ ಸುಮಾರು 05 ಅಡಿ ಎತ್ತರ ಉದ್ದನೆಯ ಮುಖ, ಗೋಧಿ ಬಣ್ಣ, ಕಪ್ಪು ಕೂದಲು, ಸಾಧಾರಣ ಮೈಕಟ್ಟು ಹೊಂದಿರುತ್ತಾರೆ.

ಮಿಳಗಟ್ಟ 02 ನೇ ತಿರುವು ಶಿವಮೊಗ್ಗ ಹಾಲಿ ವಾಸ ಬೆಜ್ಜವಳ್ಳಿ ತೀರ್ಥಹಳ್ಳಿ ತಾಲ್ಲೂಕು ಅರುಣ್ ಎಸ್ ಬಿನ್ ಸೋಮಶೇಖರ್ ಎಂಬುವವರ ಪತ್ನಿ ಪವಿತ್ರ ಎಂಬ24 ವರ್ಷದ ಮಹಿಳೆ ಬೆಜ್ಜವಳ್ಳಿಯ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು ದಿ:04-04-2025 ರಂದು ಎಂದಿನAತೆ ಕೆಲಸಕ್ಕೆಂದು ಹೋಗಿದ್ದು ಮನೆಗೆ ವಾಪಾಸ್ಸಾಗಿರುವುದಿಲ್ಲ.

Shivamogga Police ಈಕೆಯ ಚಹರೆ ಸುಮಾರು 04 ಅಡಿ ಎತ್ತರ, ದುಂಡು ಮುಖ, ಗೋಧಿ ಬಣ್ಣ, ಕಪ್ಪು ಕೂದಲು, ಸಾಧಾರಣ ಮೈಕಟ್ಟು ಹೊಂದಿರುತ್ತಾರೆ. ಮನೆಯಿಂದ ಹೋಗುವಾಗ ನೀಲಿ ಮತ್ತು ಬಿಳಿ ಬಣ್ಣದ ಚೂಡಿದಾರ ಧರಿಸಿರುತ್ತಾಳೆ.
ಮೇಲ್ಕಂಡ ಕಾಣೆಯಾಗಿದ್ದ ಮೂರು ವ್ಯಕ್ತಿಗಳು ಕಂಡಲ್ಲಿ ಅಥವಾ ಪತ್ತೆಯಾದಲ್ಲಿ ಪಿ.ಎಸ್.ಐ. ಮಾಳೂರು ಠಾಣೆ, ಸಿಪಿಐ ಮಾಳೂರು ವೃತ್ತ ಅಥವಾ ಶಿವಮೊಗ್ಗ ಪೊಲೀಸ್ ಕಂಟ್ರೋಲ್ ರೂಂ. ಅಥವಾ ದೂರವಾಣಿ ಸಂಖ್ಯೆ; ಪಿ.ಎಸ್.ಐ. ಮಾಳೂರು ಠಾಣೆ, ಮೊ.08181-235142, ಮೊ. 9480803353.ಸಿಪಿಐ ಮಾಳೂರು ವೃತ್ತ, 08181-228310. ಮೊ. 9480803333. ಶಿವಮೊಗ್ಗ ಪೊಲೀಸ್ ಕಂಟ್ರೋಲ್ ರೂಂ.08182-261413, ಮೊ. 9480803300 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವುದು

D. K. Shivakumar ಹಿಂದುಳಿದ ವರ್ಗಗಳ ಆಯೊಗದಿಂದ ಪ್ರತಿ ಮನೆಗೂ ಭೇಟಿ ನೀಡಿ ಕೈಗೊಳ್ಳುವ ಸಮೀಕ್ಷೆಗೆ ಸಹಕರಿಸಿ- ಡಿಸಿಎಂ ಡಿ.ಕೆ.ಶಿವಕುಮಾರ್ ಮನವಿ

0

D. K. Shivakumar ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ರಾಜ್ಯದಲ್ಲಿರುವ ಪ್ರತಿಯೊಂದು ಮನೆಗೂ ಭೇಟಿ ನೀಡಿ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲಾಗುತ್ತಿದೆ. ಸಮೀಕ್ಷೆಯಿಂದ ಯಾವ ಮನೆಯೂ ಹೊರಗೆ ಉಳಿಯಬಾರದು ಎಂಬ ಉದ್ದೇಶದಿಂದ ವಿದ್ಯುತ್ ಸಂಪರ್ಕವಿರುವ ಮನೆಗಳ ಆರ್.ಆರ್. ಮೀಟರ್ ಆಧಾರದ ಮೇಲೆ ಮನೆಗಳನ್ನು ಗುರುತಿಸಿ, ಸಮೀಕ್ಷೆ ನಡೆಸಲಾಗುತ್ತಿದೆ. D. K. Shivakumar ಎಲ್ಲಾ ವರ್ಗದ ಜನರ ಕಲ್ಯಾಣಕ್ಕೆ ಶ್ರಮಿಸಲು ಈ ಸಮೀಕ್ಷೆಯನ್ನು ನಡೆಸಲಾಗುತ್ತಿದ್ದು, ಸಮೀಕ್ಷೆ ವೇಳೆ ಪ್ರತಿಯೊಬ್ಬರು ಸಹಕಾರ ನೀಡುವ ಮೂಲಕ ಕರ್ನಾಟಕದ ಅಭಿವೃದ್ಧಿಗೆ ಕೈಜೋಡಿಸಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದ್ದಾರೆ.

Karnataka Media Academy ಇನ್ಫೋಸಿಸ್ ,ಸ್ಪ್ರಿಂಗ್ ಬೋರ್ಡ್ ಸಿಎಸ್ಆರ್, ಯೋಜನೆಯಡಿ ಕರ್ನಾಟಕ ಮಾಧ್ಯಮ ಅಕಾಡೆಮಿ ಜೊತೆ ಒಡಂಬಡಿಕೆ

0

Karnataka Media Academy ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ಜಾಗತಿಕ ಮಟ್ಟದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಇನ್‌ಫೋಸಿಸ್‌ನ ಸ್ಪ್ರಿಂಗ್‌ಬೋರ್ಡ್‌ ಸಿಎಸ್‌ಆರ್‌ ಕಾರ್ಯಕ್ರಮದಡಿ ಸಹಭಾಗಿತ್ವಕ್ಕಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿಯು ಪತ್ರಕರ್ತರ ತರಬೇತಿಗಾಗಿ ಒಡಂಬಡಿಕೆ ಮಾಡಿಕೊಂಡಿದೆ.
ಪತ್ರಕರ್ತರ ಸಾಫ್ಟ್‌ಸ್ಕಿಲ್‌ ತರಬೇತಿಯ ಉದ್ದೇಶಕ್ಕಾಗಿ ಮಾಡಿಕೊಳ್ಳುತ್ತಿರುವ ಈ ಒಡಂಬಡಿಕೆಯು ಸಿ.ಎಸ್.ಆರ್.‌ ಅಡಿ ಕರ್ನಾಟಕ ಮಾಧ್ಯಮ ಅಕಾಡೆಮಿ ಕೈಗೆತ್ತಿಕೊಂಡ ಮೊದಲ ಕಾರ್ಯಕ್ರಮವಾಗಿದೆ.
ಇನ್ಫೋಸಿಸ್ CSR ಯೋಜನೆಯ “ಸ್ಪ್ರಿಂಗ್‌ಬೋರ್ಡ್” ಪ್ಲಾಟ್‌ಫಾರ್ಮ್ ಮೂಲಕ ಪತ್ರಕರ್ತರ ಡಿಜಿಟಲ್ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಸಾಮರ್ಥ್ಯ ನಿರ್ಮಾಣ ಈ ಒಡಂಬಡಿಕೆಯ ಉದ್ದೇಶವಾಗಿದೆ.
“ಇನ್‌ಫೋಸಿಸ್‌ ಸ್ಪ್ರಿಂಗ್‌ಬೋರ್ಡ್‌ ಮತ್ತು ಕರ್ನಾಟಕ ಮಾಧ್ಯಮ ಅಕಾಡೆಮಿಯ ಸಹಭಾಗಿತ್ವವು ಬದಲಾಗುತ್ತಿರುವ ಹೊಸ ಮಾಧ್ಯಮಕ್ಕೆ ಹೊಂದಿಕೊಳ್ಳುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಈ ವಿನೂತನ ಪ್ಲಾಟ್‌ಫಾರಂ ಮಾಧ್ಯಮ ವೃತ್ತಿಪರರ ಕೌಶಲ್ಯ ಉನ್ನತೀಕರಣಕ್ಕೆ, ಅದರಲ್ಲೂ ವಿಶೇಷವಾಗಿ ಪತ್ರಕರ್ತರಿಗೆ ವೇಗವಾಗಿ ಬದಲಾಗುತ್ತಿರುವ ಸನ್ನಿವೇಶಗಳಿಗೆ ಅನುಗುಣವಾಗಿ ತಾಂತ್ರಿಕ ಪರಿಣತಿ ಹಾಗೂ ಸುದ್ದಿಯನ್ನು ಪ್ರಸ್ತುತಪಡಿಸುವ ಕೌಶಲವನ್ನು ಒದಗಿಸಲಿದೆ” ಎಂಬ ಆಶಯವನ್ನು ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷೆ ಶ್ರೀಮತಿ ಆಯೇಶಾ ಖಾನಂ ಅವರು ವ್ಯಕ್ತಪಡಿಸಿದ್ದಾರೆ.
Karnataka Media Academy “ಇನ್‌ಫೋಸಿಸ್‌ ಸ್ಪ್ರಿಂಗ್‌ಬೋರ್ಡ್‌ ಶಿಕ್ಷಣ ಕುರಿತ ಸಿಎಸ್‌ಆರ್‌ ಕಾರ್ಯಕ್ರಮವಾಗಿದೆ. ಇಂದು ಇನ್‌ಫೋಸಿಸ್‌ ಸ್ಪ್ರಿಂಗ್‌ಬೋರ್ಡ್‌ ಮಾಧ್ಯಮ ಅಕಾಡೆಮಿಯೊಂದಿಗೆ ಒಡಂಬಡಿಕೆಗೆ ಸಹಿ ಹಾಕಿದೆ. ಮಾಧ್ಯಮ ಅಕಾಡೆಮಿಗೆ ಸ್ಪ್ರಿಂಗ್‌ಬೋರ್ಡ್‌ನ ಡಿಜಿಟಲ್‌ ವಿಷಯಗಳಿಗೆ ಪ್ರವೇಶ ಲಭಿಸಲಿದೆ ಮತ್ತು ಅವರು ಸಾಫ್ಟ್ ಸ್ಕಿಲ್ ಗಳು, ವ್ಯಕ್ತಿತ್ವ ವಿಕಾಸ ಹಾಗೂ ಕೃತಕ ಬುದ್ಧಿಮತ್ತೆ (AI) ಸೇರಿದಂತೆ ಇತ್ತೀಚಿನ ತಂತ್ರಜ್ಞಾನಗಳ ಅವಲೋಕನ ಕುರಿತ ವಿಷಯಗಳಿಂದ ಪ್ರಯೋಜನ ಪಡೆಯಬಹುದು. ಇದು ವಿಶೇಷವಾಗಿ 2ನೇ ಹಾಗೂ 3ನೇ ಹಂತದ ನಗರಗಳ ಪತ್ರಕರ್ತರಿಗೆ ಖಂಡಿತವಾಗಿಯೂ ಸಹಾಯಕವಾಗಲಿದೆ” ಎಂದು ಇನ್ಫೋಸಿಸ್ ನ ಹಿರಿಯ ಉಪಾಧ್ಯಕ್ಷ (ಇ ಟಿ ಎ) ಶ್ರೀ ಸತೀಶ ಬಿ. ನಂಜಪ್ಪ ಅವರು ಅಭಿಪ್ರಾಯ ಪಟ್ಟಿದ್ದಾರೆ. ತರಬೇತಿ ಇನ್‌ಫೋಸಿಸ್‌ ಸ್ಪ್ರಿಂಗ್‌ಬೋರ್ಡ್‌ ಕಾರ್ಯಕ್ರಮದಡಿ ಪತ್ರಕರ್ತರಿಗೆ ಮೂರು ದಿನದ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗುವುದು. ಇದರಲ್ಲಿ ಡಿಜಿಟಲ್‌ ಮಾಧ್ಯಮಕ್ಕೆ ಅಗತ್ಯ ಕೌಶಲ್ಯಗಳು, ಕೃತಕ ಬುದ್ಧಿಮತ್ತೆಯ ಬಳಕೆ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದಂತೆ ತರಬೇತಿ ನೀಡಲಾಗುವುದು.
Karnataka Media Academy ಈ ವರ್ಷದಲ್ಲಿ ಒಟ್ಟು ಮೂರು ಕಾರ್ಯಕ್ರಮಗಳ ಮೂಲಕ ಒಟ್ಟು 150 ಪತ್ರಕರ್ತರಿಗೆ ತರಬೇತಿ ನೀಡಲು ಉದ್ದೇಶಿಸಿದೆ. ಇದರಲ್ಲಿ ವಿಶೇಷವಾಗಿ ಒಂದು ಬ್ಯಾಚ್‌ನಲ್ಲಿ ಮಹಿಳಾ ಆಯವ್ಯಯದಡಿ ಪತ್ರಕರ್ತೆಯರಿಗೆ ತರಬೇತಿ ನೀಡಲು ಉದ್ದೇಶಿಸಿದೆ.
ಜಿಲ್ಲಾ ಮಟ್ಟದ ಪತ್ರಕರ್ತರಿಗೆ ಈ ತರಬೇತಿಯಲ್ಲಿ ಆದ್ಯತೆ ನೀಡಲಾಗುವುದು.
ಇನ್ಫೋಸಿಸ್ ಸಂಸ್ಥೆಯು ಪ್ಲಾಟ್‌ಫಾರ್ಮ್ ಮತ್ತು ಪರಿಣತಿ ಒದಗಿಸಲಿದೆ. ಕರ್ನಾಟಕ ಮಾಧ್ಯಮ ಅಕಾಡೆಮಿಯು ಪತ್ರಕರ್ತರು ಹಾಗೂ ಶಿಕ್ಷಕರ ಭಾಗವಹಿಸುವಿಕೆ ಸಮನ್ವಯಗೊಳಿಸಲಿದೆ.
ಪತ್ರಿಕೋದ್ಯಮ ಕ್ಷೇತ್ರದಲ್ಲಿ ಗುಣಮಟ್ಟದ ಸುಧಾರಣೆಯ ನಿಟ್ಟಿನಲ್ಲಿ ಇದೊಂದು ಮಹತ್ವದ ಉಪಕ್ರಮವಾಗಿದೆ. ಹೆಚ್ಚು ಪತ್ರಕರ್ತರಿಗೆ ತರಬೇತಿ ನೀಡುವ ಆಶಯದೊಂದಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿಯು ಮುಂದಡಿಯಿಟ್ಟಿದೆ.
ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಶಾ ಖಾನಂ, ಸದಸ್ಯ ಹೆಚ್.ವಿ. ಕಿರಣ್‌ ಇನ್‌ಫೋಸಿಸ್ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಸತೀಶ ಬಿ. ನಂಜಪ್ಪ, ಹಿರಿಯ ಅಧಿಕಾರಿಗಳಾದ ಸಂತೋಷ್‌ ಅನಂತಪುರ, ಬಿಳಿಗಿರಿ ರಂಗ ಮೊದಲಾದವರು ಉಪಸ್ಥಿತರಿದ್ದರು.