Rotary Club Shivamogga ದಕ್ಷಿಣ ಭಾರತದಲ್ಲಿ ಅತ್ಯುತ್ತಮ ಪ್ರಗತಿ ಕಾಣುತ್ತಿದ್ದರು, ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಕಾರಣದಿಂದ, ಆದಾಯ ಹಂಚಿಕೆಯ ಕೊರತೆಯಿಂದ ದಕ್ಷಿಣ ರಾಜ್ಯ ಸರ್ಕಾರಗಳು, ತಮ್ಮ ಪ್ರಜೆಗಳಿಗೆ ನ್ಯಾಯ ಒದಗಿಸಲು ಕಷ್ಟಪಡುವ ಪ್ರಮೇಯ ಉಂಟಾಗಿದೆ ಎಂದು ರೋಟರಿ ಕ್ಲಬ್ ಶಿವಮೊಗ್ಗ ಜ್ಯೂಬಿಲಿಯ ವಾರದ ಸಭೆಯ ಮುಖ್ಯಾತಿಥಿಗಳಾಗಿ ಆಗಮಿಸಿದ ಪ್ರೋ. ಕುಮಾರಸ್ವಾಮಿ ಮಾತನಾಡುತ್ತಿದ್ದರು.
ರಾಷ್ಟ್ರೀಯ ಸಮಸ್ಯೆಗಳನ್ನು ಕೇಂದ್ರ ಸರ್ಕಾರ ನಿರ್ವಹಿಸಿದರೆ, ರಾಜ್ಯ ಸರ್ಕಾರಗಳು ಸ್ಥಳಿಯ ನಾಗರೀಕರ ಸಮಸ್ಯೆ, ಪ್ರಗತಿಗಳನ್ನು ಪೂರೈಸುವ ಹೊಣೆಗಾರಿಕೆ ಇದೆ.
ತೆರಿಗೆಗಳನ್ನು ಕೇಂದ್ರ ಸರ್ಕಾರಕ್ಕೆ ಆದಾಯ ರೂಪದಲ್ಲಿ ಪಡೆದರೆ, ಸಾಮಾಜಿಕ ನ್ಯಾಯ ಒದಗಿದುವುದಕ್ಕಾಗಿ ಕೇಂದ್ರ ಸರ್ಕಾರ 1951 ರಲ್ಲಿ ಪ್ರಥಮ ಹಣಕಾಸು ಆಯೋಗ ರಚಿಸಿ ಐದು ವರ್ಷಕ್ಕೊಮ್ಮೆ ಸಮಿತಿ ಹೊಸದಾಗಿ ನಿಯಮ ರೂಪಿಸಿ, ರಾಷ್ಟ್ರೀಯ ನ್ಯಾಯ ಒದಗಿಸುತ್ತೇವೆ ಎನ್ನುತ್ತಾರೆ.
ಈಗ ಹದಿನೈದನೇ ಪೈನಾನ್ಸ್ ಕಮಿಷನ್ ಕಾರ್ಯನಿರ್ವಹಿಸುತ್ತಿದೆ
ಮೊದಲ ಆಯೋಗ ಆದಾಯ ತೆರಿಗೆಯನ್ನು ಮಾತ್ರ ಹಂಚಿಕೆ ಮಾಡುತ್ತಿದ್ದರು. ಆದರೆ, ಹತ್ತನೆ ಸಮಿತಿ ಕ್ರಾಂತಿಕಾರಕ ನಿರ್ಣಯ ಕೈಗೊಂಡು ಪೂರ್ಣ ತೆರಿಗೆಯಲ್ಲಿ ಹಂಚಿಕೆ ಮಾಡಬೇಕೆಂದಿತು.
ಹದಿಮೂರನೇ ಸಮಿತಿ ಶೇ.32 ನೀಡಬೇಕೆಂದರೆ, ಹದಿನಾಲ್ಕನೆ ಸಮಿತಿ 42% ಹಂಚಿಕೆ ಮಾಡಬೇಕೆಂದಿತು. ಹದಿನೈದನೆ ಸಮಿತಿ 41% ರಾಜ್ಯ ಸರ್ಕಾರಕ್ಕೆ 1% ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಲು ಸೂಚಿಸಿದೆ.
ಜನಸಂಖ್ಯೆ ಆದಾರದಲ್ಲಿ ಹೆಚ್ಚಿನಪಾಲು ಶೇ.15 ನೀಡುವುದರಿಂದ ಉತ್ತರ ರಾಜ್ಯಗಳು ಹೆಚ್ಚು ಪಾಲು ಪಡೆಯುತ್ತವೆ. ಅರಣ್ಯ 33%, ಗುಡ್ಡಗಾಡು ಪ್ರದೇಶಕ್ಕೆ 66% ಹೊಂದಿರುವ ರಾಜ್ಯಕ್ಕೆ 7.5% ಪಾಲು ಇದೆ. ತಲಾದಾಯ ಹೆಚ್ಚು ಇದ್ದರೆ 45%, ಹೆಚ್ಚು ತೆರಿಗೆ ಸಂಗ್ರಹಿಸಿದರೆ 2.5% ಮಾತ್ರ ನೀಡಲಾಗುತ್ತದೆ.
ಜನಸಂಖ್ಯೆ ನಿಯಂತ್ರಣಕ್ಕೆ 12.5% ನೀಡುತ್ತಿರುವುದರಿಂದ ಈಗಾಗಲೆ ಜನಸಂಖ್ಯೆ ನಿಯಂತ್ರಣ ಹೊಂದಿರುವ ರಾಜ್ಯಗಳಿಗೆ ಅನ್ಯಾಯ ವಾಗುತ್ತಿದೆ. ನಾವು ನೂರು ರೂ. ಸಂಗ್ರಹಿಸಿದ ತೆರಿಗೆಯಲ್ಲಿ ನಮಗೆ ಹಿಂದಿರುಗುವುದು 3.64ಪೈಸೆ ಮಾತ್ರ. ಕೈಗಾರಿಕೆ, ವಾಣಿಜ್ಯ, ಜನಸಂಖ್ಯೆ, ವ್ಯವಸಾಯ, ಶೈಕ್ಷಣಿಕ ಪ್ರಗತಿ ಗಳಿಸಿದರು ಆದಾಯ ಹಂಚಿಕೆಯಲ್ಲಿ ಎಪ್ಪತ್ತೈದು ವರ್ಷ ದಿಂದ ಅನ್ಯಾಯ ವಾಗುತ್ತಲೇ ಇದೆ.
ಮುಂದೆ ರಾಜಕೀಯವಾಗಿಯು ತ್ತೊಂದರೆ ಉಂಟಾಗುತ್ತದೆ. ನಮ್ಮ ದಕ್ಷಿಣ ರಾಜ್ಯಗಳು ಒಟ್ಟಿಗೆ ಸೇರಿ ಪ್ರಗತಿಯಿಂದ ಉಂಟಾಗಿರುವ ಅನ್ಯಾಯ ಪ್ರದರ್ಶಿಸಲೇ ಬೇಕು.
ಕೇಂದ್ರ ಸರ್ಕಾರ ತೆರಿಗೆ ಹೆಚ್ಚಿಸದೆ, ಆರೋಗ್ಯ, ಶಿಕ್ಷಣ, ಹಿಂದುಳಿದವರ್ಗಕ್ಕೆ, ರಸ್ತೆ, ಆದಾಯ ಹೀಗೆ ಮೇಲ್ ತೆರಿಗೆ ಎಂದು ಹೆಚ್ಚಿಸಿ ನೇರವಾಗಿ ತನ್ನ ಆದಾಯ ಹೆಚ್ಚಿಸಿ ಕೊಳ್ಳುತ್ತಿದೆ. ಈ ತೆರಿಗೆ 2011-12 ರಲ್ಲಿ ಶೇ.10%, 92ಸಾವಿರ ಕೋಟಿ ಮಾತ್ರ ಇತ್ತು. 24-25ರಲ್ಲಿ ಶೇ.28% ಮೂರು ಸಾವಿರದ ಅರವತ್ತೈದು ಲಕ್ಷ ಕೋಟಿಗೆ ಏರಿಕೆಯಾಗಿದೆ.
ಒಟ್ಟು ಆದಾಯದಲ್ಲಿ ಶೇ.50ಭಾಗ ಹಂಚಿಕೆ ಯಾಗಲೇಬೇಕು ಹಾಗೂ ಸಮಿತಿಯಲ್ಲಿ ರಾಜ್ಯ ಸರ್ಕಾರಗಳ ಪ್ರತಿನಿಧಿಗಳು ಇರಲೇ ಬೇಕು, ಜನಸಂಖ್ಯೆ ನಿಯಂತ್ರಣಕ್ಕೆ ಶೇ.20 ಆದಾಯ ಹಂಚಿಕೆಯಾಗಬೇಕು ಎಂಬ ಬೇಡಿಕೆ ಹೆಚ್ಚಾಗಿದೆ. ಪ್ರತಿ ರಾಜ್ಯಗಳು ಪ್ರಗತಿ ಹೊಂದಿದರೆ ಮಾತ್ರ ರಾಷ್ಟ್ರ ಪ್ರಗತಿ ಹೊಂದಲು ಸಾದ್ಯ ಎಂದರು.
Rotary Club Shivamogga ಅಧ್ಯಕ್ಷತೆಯನ್ನು ಬಿ.ಎಸ್.ಅಶ್ವತ್ ವಹಿಸಿ ಕಳೆದ ಸಾಲಿನಲ್ಲಿ ನಮ್ಮ ಕ್ಲಬ್ ಏಳು ಜಿಲ್ಲಾಮಟ್ಟದ ಸೇವಾ ಪ್ರಶಸ್ತಿಗಳಿಸಲು ಅಧ್ಯಕ್ಷೆ ರೂಪಪುಣ್ಯಕೋಟಿ, ಕಾರ್ಯದರ್ಶಿ ಡಾ.ಪ್ರಕೃತಿಮಂಚಾಲೆ ಹಾಗೂ ಆಡಳಿತ ಮಂಡಳಿಗೆ ಅಭಿನಂದಿಸಿ, ಈ ಸಾಲಿನಲ್ಲು ಅತ್ಯತ್ತಮ ಕಾರ್ಯಕ್ರಮ ಆಯೋಜಿಸಲಾಗುವುದೆಂದರು.
ಭಾರದ್ವಾಜ್ ಸ್ವಾಗತಿಸಿದರು, ಸತ್ಯನಾರಾಯಣ್ ನಿರೂಪಿಸಿದರು, ರೇವಣ ಸಿದ್ದಪ್ಪ ವಂದಿಸಿದರು. ಲಕ್ಷ್ಮೀನಾರಾಯಣ್, ವಿನೋದ್, ಜವಳಿ, ಉಮೇಶ್, ವಾಗೇಶ್, ಉಮಾದೇವಿ ಮುಂತಾದ ಸದಸ್ಯರು ಭಾಗವಹಿಸಿದ್ದರು.

