Monday, February 16, 2026
Monday, February 16, 2026
Home Blog Page 1742

ಗಗಯಾನಿ ಕಲ್ಪನಾ ಚಾವ್ಲಾ

0

ವಿಕ್ಷಕರೇ ಎಲ್ಲರಿಗೂ ನಮಸ್ಕಾರ
KliveNews You tube channel ಗೆ ಸ್ವಾಗತ. ನಾನು ಅಂಜುಮ್ ಬಿ.ಎಸ್‌.

ಇಂದಿನ ವಿಶೇಷ ಕಾರ್ಯಕ್ರಮ
ಗಗನ ಯಾನಿ ಕಲ್ಪನಾ ಚಾವ್ಲಾ

ವೀಕ್ಷಕರೇ ,ಕಲ್ಪನಾ ಚಾವ್ಲಾ ಅವರ ಬಗ್ಗೆ ನಿಮಗೆಷ್ಟು ಗೊತ್ತು?

ಕಲ್ಪನಾ ಚಾವ್ಲಾ ಅವರ ಸವಿನೆನಪಿಗಾಗಿ ನಾವು ಅವರ ಜೀವನದ ಒಂದಿಷ್ಟು ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ.

ಕಲ್ಪನಾ ಚಾವ್ಲಾ ಚಂಡಿಗಡ ಹಾಗೂ ದೆಹಲಿ ನಡುವೆ ಇರುವ ಕರ್ನಾಲ್ ಎಂಬ ಪುಟ್ಟ ನಗರದಲ್ಲಿ ಜನಿಸಿದ್ದರು. ( Kalpana photo)
ವಿಭಜನೆ ಕಾಲದಲ್ಲಿ ಪಾಕಿಸ್ತಾನದಿಂದ ಭಾರತಕ್ಕೆ ಬಂದ ಅವರ ತಂದೆ ಸಣ್ಣ ವ್ಯಾಪಾರ ಪ್ರಾರಂಭಿಸುತ್ತಾರೆ. (Image of India and Pakistan)
ಬಾಲ್ಯದಲ್ಲಿಯೇ ಕಲ್ಪನಾ ನಕ್ಷತ್ರಗಳನ್ನು ಮುಟ್ಟುವ ಕನಸನ್ನು ಕಾಣುತ್ತಿದ್ದಳು. ( Image of stars) ನಾಚಿಕೆ ಸ್ವಭಾವದವರಾದ ಕಲ್ಪನಾ ವಿಮಾನಗಳ ಚಿತ್ರ ಬಿಡಿಸುವುದನ್ನು ಹೆಚ್ಚು ಇಷ್ಟಪಡುತ್ತಿದ್ದರು. (flight)
ಸಾಹಸ ಮಾಡುವ ಧೈರ್ಯ ಅವರಲ್ಲಿ ಎಷ್ಟಿತ್ತೆಂದರೆ ತಮ್ಮ 14ನೇ ವಯಸ್ಸಿನಲ್ಲಿಯೇ ಅವರು ವಾಹನ ಚಾಲನೆಯನ್ನೂ ಸಹ ಕಲಿತಿದ್ದರು. ( Driving)

ತಂದೆಯ ಸಹಾಯದಿಂದ ಕಲ್ಪನಾ ಮೊದಲ ಬಾರಿಗೆ ಚಿಕ್ಕ ವಿಮಾನದಲ್ಲಿ ಹಾರಾಟ ನಡೆಸುತ್ತಾರೆ. ನಂತರದ ದಿನಗಳಲ್ಲಿ ಸಮಯದಲ್ಲಿ ಅವರು ಬಾಹ್ಯಾಕಾಶ ಇಂಜಿನಿಯರ್ ಆಗಬೇಕೆಂದು ನಿರ್ಧರಿಸಿದರು.( Image of erospace)
ಅವರ ನಿರ್ಧಾರಕ್ಕೆ ಸಂಪ್ರದಾಯಸ್ಥ ಕುಟುಂಬ ಒಪ್ಪಿಗೆ ನೀಡಲಿಲ್ಲ. ( Image of family) ಆದರೆ ತಾಯಿ ಸಂಜುಕ್ತಾ ಚಾವ್ಲಾ ಮಗಳ ಕನಸಿಗೆ ಅಡ್ಡಿಯಾದ ಸಮಸ್ಯೆಗಳನ್ನು ದೂರ ಮಾಡಿದರು.( Image of mother and daughter)

ನಂತರ ಕಲ್ಪನಾ ಡಯಾಲ್ ಸಿಂಗ್ ಕಾಲೇಜಿನಲ್ಲಿ ತಮ್ಮ ಕಾಲೇಜು ಜೀವನವನ್ನು ಮುಗಿಸ್ತಾರೆ.( Image of Dayal Singh college)
ನಂತರದಲ್ಲಿ ಕಲ್ಪನಾ ಚಾವ್ಲಾ ಏರೋಸ್ಪೇಸ್ ಎಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು.
ಕುಟುಂಬದ ಸ್ನೇಹಿತನ ಪರಿಚಯದಿಂದ ಅಮೆರಿಕಕ್ಕೆ ತೆರಳಲು ಕುಟುಂಬದವರನ್ನು ಒಪ್ಪಿಸಿದ ಕಲ್ಪನಾ ಆತನ ಸಹಾಯದಿಂದ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಹಾಜರಾತಿ ಪಡೆಯುತ್ತಾರೆ. ( Image of techsos University)
ಅಮೆರಿಕಾಗೆ ಬರುತ್ತಿದ್ದಂತೆ ಅವರಿಗೆ ಫ್ರೆಂಚ್ ಮೂಲದ ಅಮೆರಿಕನ್ ವ್ಯಕ್ತಿಯ ಪರಿಚಯವಾಗತ್ತೆ.( Image meeting frds)ಪರಿಚಯ ಪ್ರೇಮಕ್ಕೆ ತಿರುಗಿ 1983 ರಲ್ಲಿ ಅವರು ಮದುವೆಯಾಗ್ತಾರೆ. (Marrige )
ಸಮರ್ಪಣಾ ಭಾವದಿಂದ ಕ್ಲಿಷ್ಟ ಪ್ರಯೋಗಗಳಲ್ಲಿ ತೊಡಗುತ್ತಿದ್ದ ಕಲ್ಪನಾ ಪ್ರಯೋಗಾಲಯದಲ್ಲಿ ಹೆಚ್ಚಿನ ಸಮಯ ಕಳೆಯುತ್ತಾರೆ.
ಅವರು 1988ರಲ್ಲಿ ಪಿ ಎಚ್ ಡಿ ಮುಗಿಸಿ, ಕ್ಯಾಲಿಫೋರ್ನಿಯಾದಲ್ಲಿರುವ ನಾಸಾದ ಏಮ್ಸ್ ರಿಸರ್ಚ್ ಸೆಂಟರ್ ನಲ್ಲಿ ಕೆಲಸ ಆರಂಭಿಸುತ್ತಾರೆ.( Image of NASA )

1995ರಲ್ಲಿ ಮೊದಲ ಬಾರಿ ಕಲ್ಪನಾ ಗಗನಯಾತ್ರಿ ಆಗಿ ಆಯ್ಕೆಯಾಗುತ್ತಾರೆ.( Image of kalpana chawla )

2003ರ ಜನವರಿ 16ರಂದು ಕೊಲಂಬಿಯಾ ನೌಕೆ ಅಂತರಿಕ್ಷ ಕ್ಕೆ ಉಡಾವಣೆಯಾಗತ್ತೆ.( Image of Columbia )
ಏಳು ಮಂದಿ ಸಾಹಸಿ ಗಗನಯಾತ್ರಿಗಳನ್ನು ಅವರ ಕುಟುಂಬದವರು ಹಾಗೂ ಸ್ನೇಹಿತರು ಸಂತೋಷದಿಂದ ಬೀಳ್ಕೋಡುತ್ತಾರೆ.

ದುರದೃಷ್ಟವಶಾತ್ ಅದು ಅವರ ಜೀವನದ ಕೊನೆಯ ಬೀಳ್ಕೊಡುಗೆ ಯಾಗಿತ್ತು. ಕೊಲಂಬಿಯ ಯಶಸ್ವಿಯಾಗಿ ಅಂತರಿಕ್ಷಕ್ಕೆ ತಲುಪಿತ್ತು.

ಕಲ್ಪನಾ ಸೇರಿದಂತೆ ಇತರ ಗಗನಯಾತ್ರಿಗಳು ಕಠಿಣ ಪರಿಶ್ರಮದಿಂದ ದಿನಕ್ಕೆ ಹದಿನಾರು ಗಂಟೆಗಳಿಗಿಂತ ಹೆಚ್ಚು ಕಾಲ ಕೆಲಸ ಮಾಡುತ್ತಿದ್ದರು. ( Image of kalpana with others)

ಶೂನ್ಯ ಗುರುತ್ವಾಕರ್ಷಣೆಯನ್ನು ಕಲ್ಪನಾ ಸಂಗೀತ ಕೇಳುತ್ತಾ ಸಸ್ಯಹಾರಿ ಆಹಾರವನ್ನು ಸೇವಿಸುತ್ತಾ ಆನಂದ ಪಡುತ್ತಿದ್ದರು.( Image of kalpana )

ಆದರೆ ಕೊಲಂಬಿಯಾ ಭೂಮಿಯ ವಾತಾವರಣಕ್ಕೆ ಪುನಃ ಪ್ರವೇಶಿಸಿದಾಗ ಸಮಸ್ಯೆ ಪ್ರಾರಂಭವಾಯಿತು. (Vedio of flight landing ) ಭೂಮಿಗೆ ತಲುಪಲು 16 ನಿಮಿಷಗಳು ಇರುವಾಗ 2003ರ ಫೆಬ್ರವರಿ 1ರಂದು ಕೊಲಂಬಿಯಾ ದುರಂತ ಕಂಡಿತ್ತು.
ಅದರಲ್ಲಿರುವ ಸಾಹಸಿ ಹಾಗೂ ಉತ್ಸಾಹಿ ಗಗನಯಾತ್ರಿಗಳು ಸುಟ್ಟು ಭಸ್ಮವಾಗಿದ್ದರು. (Tragedy of kalpana’s death) ಭಾರತದ ನಕ್ಷತ್ರವೊಂದು ಕಾಂತಿ ಕಳೆದುಕೊಂಡಿತ್ತು.

ಮಧುರ ನಗು ಹಾಗೂ ಉತ್ಸಾಹಭರಿತ ಜೀವನದಿಂದ ಲಕ್ಷಾಂತರ ಜನರ ಮನಗೆದ್ದ ಕಲ್ಪನಾ ಚಾವ್ಲಾರ ಸಾವು ಇಡೀ ಜಗತ್ತಿಗೆ ತುಂಬಲಾಗದ ನಷ್ಟವಾಗಿತ್ತು. ಸಾವು ಅವರನ್ನು ಈ ಭೂಮಿಯಿಂದ ದೂರ ಮಾಡಿದ್ದರೂ ಅಭಿಮಾನಿಗಳ ಹೃದಯದಲ್ಲಿ ಕಲ್ಪನಾ ಈಗಲೂ ಜೀವಂತವಾಗಿದ್ದಾರೆ. (Image of kalpana )

ಫೆಬ್ರವರಿ 5, 2003ರಂದು ಭಾರತದ ಪ್ರಧಾನ ಮಂತ್ರಿಗಳು ಉಪಗ್ರಹ “ಮೆಟ್ ಸ್ಯಾಟ್” ಉಪಗ್ರಹ ಸರಣಿಯನ್ನು “ಕಲ್ಪನಾ” ಎಂದು ಮರುನಾಮಕರಣ ಮಾಡುವ ಘೋಷಣೆಯನ್ನು ಮಾಡಿದರು.
ನಕ್ಷತ್ರ ಗ್ರಹ “51826 ಕಲ್ಪನಾಚಾವ್ಲಾ” ಎಂದು ನಾಮಕರಣ ಮಾಡಲಾಗಿದೆ.
ನ್ಯೂಯಾರ್ಕ್ ನಗರದ ಜಾಕ್ಸನ್ ಹೈಟ್ಸ್ ವಲಯದ “ಲಿಟಲ್ ಇಂಡಿಯಾ” ಪ್ರದೇಶದ 74ನೇ ರಸ್ತೆಯನ್ನು “ಕಲ್ಪನಾ ಚಾವ್ಲಾ ಪಥ” ಎಂದು ಹೆಸರಿಸಲಾಗಿದೆ.
ಕಲ್ಪನಾ ಎಂ ಎಸ್ ಸಿ ಡಿಗ್ರಿ ಪಡೆದ ಟೆಕ್ಸಾಸ್ ವಿಶ್ವವಿದ್ಯಾಲಯದ ಒಂದು ಹಾಸ್ಟೆಲ್ ಗೆ ಕಲ್ಪನಾ ಚಾವ್ಲಾ ಹೆಸರಿಡಲಾಗಿದೆ.
ನಾಸಾ ಸಂಸ್ಥೆಯು ಒಂದು ಸೂಪರ್ ಕಂಪ್ಯೂಟರ್ ಅನ್ನು ಕಲ್ಪನಾರವರಿಗೆ ಸಮರ್ಪಿಸಿದೆ.(ndtv)
ಅಮರ ಚಿತ್ರ ಕಥೆ ಕಲ್ಪನಾ ಜೀವನದ ಬಗ್ಗೆ ಕಾಮಿಕ್ ಪುಸ್ತಕವನ್ನು ಹೊರತಂದಿದೆ.
ನಾಸಾ ಮಂಗಳ ಗ್ರಹಾನ್ವೇಷಣೆಯ ರೋವರ್ ಮಿಷನ್ ಕೊಲಂಬಿಯಾ ಸರಣಿಯ ಏಳು ಪರ್ವತಶ್ರೇಣಿಗಳಿಗೆ ಕೊಲಂಬಿಯಾ ನೌಕೆಯ ದುರಂತದಲ್ಲಿ ಮಡಿದವರ ನೆನಪಾಗಿ ಅವರ ಹೆಸರನ್ನು ಇಟ್ಟಿದೆ. ಇದರಲ್ಲಿ ಚಾವ್ಲಾ ಪರ್ವತ ಒಂದಾಗಿದೆ.

ಆತ್ಮವಿಶ್ವಾಸವೊಂದಿದ್ದರೆ ಗಗನವನ್ನೇ ಏರಬಹುದು. ಇಳಿಯದಿದ್ದರೂ ಚಿಂತೆಯಿಲ್ಲ. ತಮ್ಮ ಗುರಿಯತ್ತ ಪ್ರಯತ್ನ ಮಾಡಿದ ಅನುಭವ ಆ ಆತ್ಮ ಪಡೆದುಕೊಂಡಿದೆ. ಸಾವಿಗೆ ಅಂಜುತ್ತಿದ್ದರೆ ಸಾಧನೆ ಮಾಡಲಾದೀತೇ?

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.


Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಬೆಂಗಳೂರಿನಲ್ಲಿ ಶಾಲಾ ಕಾಲೇಜುಗಳು ಪುನರಾರಂಭ

0

ಕೋವಿಡ್ ಕಾರಣದಿಂದಾಗಿ ಕಳೆದ ಎರಡು ವಾರಗಳಿಂದ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಬಂದ್ ಮಾಡಲಾಗಿದ್ದ 1ರಿಂದ 9ನೇ ತರಗತಿವರೆಗಿನ ಸರಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳು ಹಾಗೂ ವಿಶ್ವವಿದ್ಯಾಲಯಗಳ ವ್ಯಾಪ್ತಿಯ ಪದವಿ ಮತ್ತು ಸ್ನಾತಕೋತ್ತರ ಪದವಿ ತರಗತಿಗಳು ಜನವರಿ 31ರ ಸೋಮವಾರದಿಂದ ಪುನರಾರಂಭಗೊಂಡಿವೆ.
ಆದರೆ ಬೆಂಗಳೂರು ನಗರದ ಕೆಲವು ಖಾಸಗಿ ಶಾಲೆಗಳು ಫೆ.2ರಿಂದ ಶಾಲೆಗಳ ಆರಂಭಕ್ಕೆ ನಿರ್ಧರಿಸಿದ್ದು ಅಲ್ಲಿಯವರೆಗೆ ಆನ್ ಲೈನ್ ತರಗತಿಗಳನ್ನು ಮುಂದುವರಿಸಲು ತೀರ್ಮಾನಿಸಿವೆ ಎಂದು ತಿಳಿದುಬಂದಿದೆ.
ಸರ್ಕಾರದ ತೀರ್ಮಾನದಂತೆ ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು ಸಿಟಿ ವಿಶ್ವವಿದ್ಯಾಲಯ ಮತ್ತು ನೃಪತುಂಗ ಕ್ಲಸ್ಟರ್ ವಿಶ್ವವಿದ್ಯಾಲಯ ಸೇರಿದಂತೆ ಇತರ ಖಾಸಗಿ ವಿಶ್ವವಿದ್ಯಾಲಯಗಳು ಸಹ ಭೌತಿಕ ತರಗತಿಗಳನ್ನು ನಡೆಸಲು ಮುಂದಾಗಿವೆ.
ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ ಮಾತ್ರ ಫೆ.4ರ ಶುಕ್ರವಾರದಿಂದ ತರಗತಿಗಳ ಆರಂಭಕ್ಕೆ ನಿರ್ಧರಿಸಿದೆ ಎಂದು ಕುಲಪತಿ ಪ್ರೋ. ಗೋಮತಿದೇವಿ ಅವರು ತಿಳಿಸಿದ್ದಾರೆ.
ಸರ್ಕಾರದ ತೀರ್ಮಾನದಂತೆ ನಗರ ವ್ಯಾಪ್ತಿಯಲ್ಲಿ ಸ್ಥಗಿತಗೊಂಡಿದ್ದ ಎಲ್ಲಾ ಸರ್ಕಾರಿ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 1ರಿಂದ 9ನೇ ತರಗತಿಯವರೆಗಿನ ಶಾಲೆಗಳನ್ನು ಮಧ್ಯಾಹ್ನದ ಬಿಸಿಯೂಟದೊಂದಿಗೆ ಆರಂಭಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ.

ಕ್ರಿಕೆಟ್ ಅಂಡರ್ 19 ಭಾರತ ಮತ್ತು ಆಸ್ಟ್ರೇಲಿಯ ಎರಡನೇ ಸೆಮಿ ಪಂದ್ಯ

0

ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ಫೆಬ್ರವರಿ 2ರಂದು ಸೂಪರ್ ಲೀಗ್ ಎರಡನೇ ಸೆಮಿಫೈನಲ್ ನಡೆಯಲಿದೆ.
ಆಸ್ಟ್ರೇಲಿಯ ತಂಡ ಮತ್ತೊಂದು ಸೂಪರ್ ಲೀಗ್ ಕ್ವಾರ್ಟರ್ ಫೈನಲ್ ನಲ್ಲಿ ಪಾಕಿಸ್ತಾನ ತಂಡವನ್ನು ಸೋಲಿಸಿ ಸೂಪರ್ ಲೀಗ್ ಸೆಮಿಫೈನಲ್ಸ್ ಪ್ರವೇಶಿಸಿದೆ.
ಎಡಗೈ ವೇಗಿ ರವಿಕುಮಾರ್ (14ಕ್ಕೆ 3) ಅವರ ಕರಾರುವಾಕ್ ದಾಳಿ ಹಾಗೂ ಅಂಗ್ ಕ್ರಿಶ್ ರಘುವಂಶಿ (44) ಅದರ ಸಂದರ್ಭೋಚಿತ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ 19ರ ವಯೋಮಿತಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಸೂಪರ್ ಲೀಗ್ ಕ್ವಾರ್ಟರ್ ಫೈನಲ್ ನಲ್ಲಿ ಬಾಂಗ್ಲಾದೇಶ ತಂಡವನ್ನು 5 ವಿಕೆಟ್ ಗಳಿಂದ ಮಣಿಸಿ ಸೂಪರ್ ಲೀಗ್ ಸೆಮಿಫೈನಲ್ಸ್ ಪ್ರವೇಶಿಸಿದೆ.
ಆಂಟಿಗುವಾದ ಕೂಲಿಡ್ಜ್ ಕ್ರಿಕೆಟ್ ಮೈದಾನದಲ್ಲಿ ನಡೆದ ಬಂದಿದ್ದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಭಾರತ, ಕಳೆದ ಬಾರಿಯ ಚಾಂಪಿಯನ್ ಬಾಂಗ್ಲಾ ತಂಡವನ್ನು ಹಿಂದಿಕ್ಕಿದೆ.
ಬಳಿಕ 30.5 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 117 ರನ್ ಗಳಿಸಿ ಅಂತಿಮ ನಾಲ್ಕರ ಘಟ್ಟಕ್ಕೆ ಕಾಲಿಟ್ಟಿದೆ.

ಜನಹಿತ ಕಾರ್ಯಕ್ರಮ ಅನು ಷ್ಠಾನಗೊಳಿಸಿದ್ದೇವೆ-ಸಿ ಎಂ.

0

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಜನಹಿತಕ್ಕಾಗಿ ಹಲವು ಯೋಜನೆ ಜಾರಿಗೊಳಿಸಲಾಗಿದೆ ನಮಗೆ ನಮ್ಮ ಜವಾಬ್ದಾರಿಯಾಗಿದೆ ಸಿದ್ದರಾಮಯ್ಯ ಅವರೇ ಮೊಸರಲ್ಲಿ ಕಲ್ಲು ಹುಡುಕುವ ಯತ್ನ ಮಾಡಬೇಡಿ ಎಂದು ತಿಳಿಸಿದ್ದಾರೆ.

ಸಿದ್ದರಾಮಯ್ಯ ಅವರಿಂದ ಹೆಚ್ಚಿನದೇನನ್ನೂ ನಿರೀಕ್ಷೆ ಮಾಡಲಾಗದು. ಜನಹಿತದ ಕಾರ್ಯಕ್ರಮ ಅನುಷ್ಠಾನವಾಗಿದ್ದನ್ನು ನೋಡಬೇಕು. ಅದನ್ನು ಅನಗತ್ಯ ಟೀಕೆ ಮಾಡಬಾರದು ಸಿದ್ದರಾಮಯ್ಯ ಅವರ ಅವಧಿಯಲ್ಲಿ ಪ್ರಣಾಳಿಕೆಯ ಶೇ. 96ರಷ್ಟು ಜಾರಿಗೊಳಿಸಿದ್ದಾರೆ ಹೇಳಿಕೊಂಡಿದ್ದರು. ಈ ನಡುವೆಯೂ ಜನರು ಅವರನ್ನು‌ ತಿರಸ್ಕರಿಸಿದ್ದರು ಎಂದು ಸಿಎಂ ಬೊಮ್ಮಾಯಿ ಅವರು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.

ಈ ವೇಳೆ “ಕಾರ್ಯಕ್ರಮ ಘೋಷಿಸಿದರೆ ಆಗುವುದಿಲ್ಲ ಅನುಷ್ಠಾನವಾಗಬೇಕು ವಿದ್ಯಾರ್ಥಿಗಳು, ಯುವಕರು, ಮಹಿಳೆಯರು, ರೈತರು, ದುಡಿಯುವ ವರ್ಗ, ಎಸ್ ಸಿ, ಎಸ್ ಟಿ ಸಮುದಾಯಗಳಿಗೆ ಒಳ್ಳೆಯದು ಮಾಡಬೇಕೆನ್ನುವ ಅರಿವಿದೆ” ಎಂದು ಸಿಎಂ ತಿಳಿಸಿದರು.

ಕಂದಾಯ ಸಚಿವ ಆರ್.ಅಶೋಕ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ “ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ಮುಸುಕಿನ ಗುದ್ದಾಟ ಘಟನೆಯಿಂದ ಬಯಲಾಗಿದೆ. ಬಿಜೆಪಿ ಶಾಸಕರು ತಮ್ಮ ಪಕ್ಷಕ್ಕೆ ಬರುತ್ತಿದ್ದಾರೆಂದು ಕಾಂಗ್ರೆಸ್ ನಾಯಕರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಆದರೆ, ಕಾಂಗ್ರೆಸ್ ಸ್ಥಿತಿಯೇ ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ” ಎಂದು ವ್ಯಂಗ್ಯ ಮಾಡಿದ್ದಾರೆ.

ಸಂಸತ್ತಿನ ಬಜೆಟ್ ಅಧಿವೇಶನ ಆರಂಭ

0

ಸೋಮವಾರದಿಂದ ಸಂಸತ್ ಬಜೆಟ್ ಅಧಿವೇಶನ ಆರಂಭವಾಗಲಿದೆ. ಪೆಗಾಸಸ್ ವಿವಾದ, ರೈತರ ಸಮಸ್ಯೆಗಳು ಮತ್ತು ಪೂರ್ವ ಲಡಾಕ್ ನಲ್ಲಿ ಚೀನಾದ ಆಕ್ರಮಣಗಳಂತಹ ವಿಷಗಳನ್ನು ಸರ್ಕಾರದ ವಿರುದ್ಧ ಅಸ್ತ್ರಗಳಾಗಿ ಪ್ರಯೋಗಿಸಲು ಪ್ರತಿಪಕ್ಷಗಳು ಸಜ್ಜಾಗಿವೆ ಎಂದು ತಿಳಿದುಬಂದಿದೆ.
ಸಾಂಕ್ರಾಮಿಕ ಹಿನ್ನೆಲೆಯಲ್ಲಿ ದೈಹಿಕ ಅಂತರ ಕಾಯ್ದುಕೊಂಡು ಕೂರಬೇಕಾದ ಕಾರಣ, ಲೋಕಸಭೆ ಮತ್ತು ರಾಜ್ಯಸಭೆ ಕಲಾಪಗಳನ್ನು ಪಾಳಿಗಳಲ್ಲಿ ನಡೆಸಲಾಗುತ್ತದೆ. ಅಲ್ಲದೆ ಎರಡು ಹಂತಗಳನ್ನು ಅಧಿವೇಶನ ನಡೆಯಲಿದೆ. ಅಧಿವೇಶನದ ಮೊದಲ ಭಾಗವು ಜನವರಿ 31ರಿಂದ ಪೆಬ್ರುವರಿ 11 ರವರೆಗೆ ನಡೆಯಲಿದೆ ಎಂದು ತಿಳಿದು ಬಂದಿದೆ.
ನಂತರ ವಿವಿಧ ಇಲಾಖೆಗಳಿಗೆ ಬಜೆಟ್ ಹಂಚಿಕೆಗಳನ್ನು ಪರಿಶೀಲಿಸಲು ಬಿಡುವು ನೀಡಲಾಗುತ್ತದೆ. ಮಾರ್ಚ್ 14ರಂದು ಅಧಿವೇಶನ ಪುನರಾರಂಭವಾಗಲಿದ್ದು ಏಪ್ರಿಲ್ 8ರಂದು ಅಂತ್ಯಗೊಳ್ಳಲಿದೆ.
ಜಂಟಿ ಸದನವನ್ನು ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಭಾಷಣದೊಂದಿಗೆ ಅಧಿವೇಶನ ಆರಂಭವಾಗಲಿದೆ. ಕೋವಿಡ್ -19 ಸಾಂಕ್ರಾಮಿಕ ಪರಿಸ್ಥಿತಿ ಹಿನ್ನೆಲೆಯಲ್ಲಿ ಸೆಂಟ್ರಲ್ ಹಾಲ್ ಹಾಗೂ ಉಭಯ ಸದನಗಳ ಚೇಂಬರ್ ಗಳಲ್ಲಿ ಸಂಸದ ಆಸನಕ್ಕೆ ವ್ಯವಸ್ಥೆ ಮಾಡಲಾಗಿದೆ.
ರಾಷ್ಟ್ರಪತಿ ಭಾಷಣದ ಬಳಿಕ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರ್ಥಿಕ ಸಮೀಕ್ಷೆ 2021-22ನ್ನು ಮಂಡಿಸಲಿದ್ದಾರೆ ಎಂದು ತಿಳಿದುಬಂದಿದೆ.

ಭದ್ರತಾ ಪಡೆಗಳಿಂದ ನಾಲ್ಕು ಜನ ಉಗ್ರರ ಹತ್ಯೆ

0

ಭದ್ರತಾ ಪಡೆಗಳು ನಡೆಸಿದ ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಜೈಷೆ ಮೊಹಮ್ಮದ್ ಉಗ್ರ ಸಂಘಟನೆಯ ಕಮಾಂಡರ್ ಜಾಹಿದ್ ವಾನಿ ಸೇರಿದಂತೆ 5 ಉಗ್ರರನ್ನು ಹತ್ಯೆಗೈಯಲಾಗಿದೆ.

ಶನಿವಾರ ರಾತ್ರಿ ಪುಲ್ವಾಮಾ ಮತ್ತು ಬುಡ್ಗಾಮ್ ಜಿಲ್ಲೆಗಳಲ್ಲಿ ಎನ್ಕೌಂಟರ್ ನಡೆದಿದೆ. ಪುಲ್ವಾಮಾದ ನೈರಾ ಪ್ರದೇಶದಲ್ಲಿ ಪಾಕಿಸ್ತಾನದ ಜೈಷೆ ಮೊಹಮ್ಮದ್ ಸಂಘಟನೆಯ 4 ಉಗ್ರರನ್ನು ಪಡೆಗಳು ಹೊಡೆದುರುಳಿಸಿದ್ದಾರೆ ಎಂದು ಕಾಶ್ಮೀರ ಐಜಿಪಿ ವಿಜಯ್ ಕುಮಾರ್ ಅವರು ತಿಳಿಸಿದ್ದಾರೆ.

ಕಮಾಂಡರ್ ವಾನಿಯ ವಿರುದ್ಧ ಐಇಡಿ ಸ್ಫೋಟದ ಸಂಚು ಮತ್ತು ಉಗ್ರ ಸಂಘಟನೆಗಳಿಗೆ ಯುವಕರನ್ನು ನೇಮಕ ಮಾಡಿಕೊಳ್ಳುತ್ತಿರುವ ಆರೋಪವಿತ್ತು.

ಪುಲ್ವಾಮಾದಲ್ಲಿ ನಡೆದ ಎನ್ ಕೌಂಟರ್ ವೇಳೆ ಉಗ್ರರು ಸ್ಥಳೀಯ ನಿವಾಸಿ ಇನಾಯತ್ ಅಹಮದ್ ಎಂಬಾತನ ಮನೆಯಲ್ಲಿ ಅಡಗಿದ್ದರು. ಮೊದಲು ಎಲ್ಲರಿಗೂ ಶರಣಾಗಲು ಭದ್ರತಾಪಡೆಗಳು ಮತ್ತು ಪೊಲೀಸರು ಒತ್ತಾಯಿಸಿದ್ದಾರೆ. ಇದಕ್ಕೆ ಒಪ್ಪದೆ ಯೇ ಇನಾಯತ್ ಸೇರಿದಂತೆ ನಾಲ್ಕು ಜನ ಉಗ್ರರು ಗನ್ ಹಿಡಿದು ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಯೋಧರು ಗುಂಡಿಕ್ಕಿ ಹೊಡೆದು ಡಿಸಿದ್ದಾರೆ.

ಒಟ್ಟಿನಲ್ಲಿ ಕಳೆದ 12 ಗಂಟೆಗಳಲ್ಲಿ ಪಾಕಿಸ್ತಾನದ ಪ್ರಚೋದನೆಯಿಂದ ಅಕ್ರಮವಾಗಿ ಗಡಿ ನುಸುಳಿದ್ದ ಲಷ್ಕರ್ ಮತ್ತು ಜೈಷೆ ಮೊಹಮ್ಮದ್ ಸಂಘಟನೆಯ ಉಗ್ರರನ್ನು ಭೇಟೆಯಾಡಲಾಗಿದೆ. ಇದು ಭಯೋತ್ಪಾದನೆ ನಿಗ್ರಹ ಸಿಕ್ಕ ದೊಡ್ಡ ಯಶಸ್ಸು ಎಂದು ವಿಜಯ್ ಕುಮಾರ್ ಅವರು ಹೇಳಿದ್ದಾರೆ.

ಮೃತಪಟ್ಟ ಉಗ್ರರ ಬಳಿಯಿಂದ ಎಕೆ -56 ರೈಫಲ್, ಮತ್ತು ಕೆಲವು ನಕ್ಷೆ ಗಳನ್ನು ವಶಕ್ಕೆ ಪಡೆಯಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಗಳಲ್ಲಿ ಇಂಟರ್ನೆಟ್ ಸಂಪರ್ಕ ಕಡಿತಗೊಳಿಸಲಾಗಿದೆ.

ಪ್ರೊ ಕಬಡ್ಡಿ ಲೀಗ್ ಬುಲ್ಸ್ ಗೆ ಸೋಲಿನ ರುಚಿ ಉಣಿಸಿದ ತಲೈವಾಸ್

0

ಬೆಂಗಳೂರು, ನೀರಸ ಪ್ರದರ್ಶನ ನೀಡಿದ ಬೆಂಗಳೂರು ಬುಲ್ಸ್ ಪ್ರೊ ಕಬಡ್ಡಿ ಲೀಗ್ 8ನೇ ಆವೃತ್ತಿಯ 83ನೇ ಪಂದ್ಯದಲ್ಲಿ ತಮಿಳು ತಲೈವಾಸ್ ವಿರುದ್ಧ 24ರಿಂದ 42 ಅಂಕಗಳ ಅಂತರದಿಂದ ಪರಾಭವಗೊಂಡಿತು. ವೈಟ್ ಫೀಲ್ಡ್ ನ ಶೆರಾಟಾನ್ ಗ್ರಾಂಡ್ ಹೋಟೆಲ್ ನ ಸಭಾಂಗಣದಲ್ಲಿ ನಿನ್ನೆ ನಡೆದ ದ್ವಿತೀಯ ಪಂದ್ಯದ ಮೊದಲಾರ್ಧದ ಮುಕ್ತಾಯಕ್ಕೆ ಎಂಟರಿಂದ 21ರಲ್ಲಿ ಹಿನ್ನಡೆ ಅನುಭವಿಸಿದ ಬುಲ್ಸ್ ದ್ವಿತಿಯಾರ್ಧದಲ್ಲಿ 16 ರಿಂದ 21 ರಲ್ಲಿ ಚೇತೋಹಾರಿ ಪ್ರದರ್ಶನ ನೀಡಿದರು. ಟೂರ್ನಿಯಲ್ಲಿ ಆರನೇ ಸೋಲು ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸದ್ಯ 46 ಅಂಕ ಹೊಂದಿರುವ ಬುಲ್ಸ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

ಇದಕ್ಕೂ ಮುಂಚೆ ನಡೆದ ದಿನದ ಮೊದಲ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ಒಂದ ರಿಂದ 30 ಅಂಕಗಳ ಅಂತರದಿಂದ ಪಟಾನಾ ಪೈರೇಟ್ಸ್ ತಂಡವನ್ನು ಸೋಲಿಸಿತು.

ರೈತರಿಂದ ವಿರೋಧಿ ದಿನಾಚರಣೆ

0

ದೆಹಲಿಯಲ್ಲಿ ರೈತ ಸಂಘಟನೆಗಳು ಇಂದು ದೇಶದಾದ್ಯಂತ ‘ ವಿರೋಧ ದಿನ’ ಆಚರಿಸಲಿವೆ. ” ರೈತ ಸಂಘಟನೆಗಳ ಭರವಸೆಗಳನ್ನು ಈಡೇರಿಸುವುದಾಗಿ ಕೇಂದ್ರ ಸರ್ಕಾರವು ಲಿಖಿತ ಭರವಸೆ ನೀಡಿದ ಹಿನ್ನೆಲೆಯಲ್ಲಿ ದೆಹಲಿ ಗಡಿಗಳಲ್ಲಿ ವರ್ಷದಿಂದ ನಡೆಯುತ್ತಿದ್ದ ಪ್ರತಿಭಟನೆಯನ್ನು ಡಿಸೆಂಬರ್ 9ರಂದು ವಾಪಸ್ ಪಡೆಯಲಾಯಿತು. ಆದರೆ ಇದುವರೆಗೂ ಬೇಡಿಕೆ ಈಡೇರಿಕೆ ಬಗ್ಗೆ ಗಮನಹರಿಸದೇ ಕೇಂದ್ರ ಸರ್ಕಾರವು ದ್ರೋಹ ಎಸಗಿದೆ.

ಆದ್ದರಿಂದ, ಕೃಷಿ ಕಾಯ್ದೆಗಳ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿದ್ದ ಎಲ್ಲಾ ಸಂಘಟನೆಗಳು ದೇಶದ 500ಕ್ಕೂ ಅಧಿಕ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಿವೆ ಎಂದು ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ಅವರು ತಿಳಿಸಿದ್ದಾರೆ

ರಾಫೆಲ್ ನಡಾಲ್ ಗ್ರ್ಯಾನ್ ಸ್ಲಾಮ್ ಟೆನಿಸ್ ಪ್ರಶಸ್ತಿ

0

ಮೆಲ್ಬೋರ್ನ್ ನ ರಾಡ್ ಲೇವರ್ ಅಂಕಣದಲ್ಲಿ ನಡೆದ 2000 22ರ ಸಾಲಿನ ಆಸ್ಟ್ರೇಲಿಯನ್ ಓಪನ್ ಪುರುಷರ ಸಿಂಗಲ್ಸ್ ಫೈನಲ್ ನಲ್ಲಿ ವಿಶ್ವದ ಎರಡನೇ ಶ್ರೇಯಾಂಕದ ರಷ್ಯಾ ಆಟಗಾರ ಡ್ಯಾನಿಲ್ ಮೆಡ್ವೆಡೆವ್ ಅವರನ್ನು ಸೋಲಿಸುವ ಮೂಲಕ 21ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆದ್ದ ವಿಶ್ವದ ಮೊದಲ ಆಟಗಾರ ಎಂಬ ಖ್ಯಾತಿಗೆ ಸ್ಪೇನ್ ನ ರಾಫೆಲ್ ನಡಾಲ್ ಅವರು ಪಾತ್ರರಾಗಿದ್ದಾರೆ.

ಮ್ಯಾರಥಾನ್ ಫೈನಲ್ ಹಣಾಹಣಿಯಲ್ಲಿ ಮೆಡ್ವೆಡೆವ್ ಅವರನ್ನು 2-6, 6-7, 6-4, 7-5 ಸೆಟ್ ಗಳಿಂದ ಮಣಿಸುವ ಮೂಲಕ ಟೆನಿಸ್ ದಿಗ್ಗಜ ರಾಫೆಲ್ ನಡಾಲ್ ಅವರು ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ರಾಫೆಲ್ ನಡಾಲ್ ಅವರು “ಇದು ನನ್ನ ವೃತ್ತಿ ಬದುಕಿನ ಭಾವನಾತ್ಮಕ ಪಂದ್ಯ. ಕೆಲವು ದಿನಗಳ ಹಿಂದಿನ ತನಕವೂ ಮತ್ತೆ ಟೆನಿಸ್ ಮಾಡುವೆನೆಂಬ ಭರವಸೆ ಇರಲಿಲ್ಲ. ಅಭಿಮಾನಿಗಳು ಹಾಗೂ ಹಿತೈಷಿಗಳ ಪ್ರೋತ್ಸಾಹ ಹಾಗೂ ಹಾರೈಕೆಯಿಂದ ಹೋರಾಟ ನಡೆಸಿ ಗೆದ್ದಿದ್ದೇನೆ. ನನ್ನ ಹೃದಯದಲ್ಲಿ ದೀರ್ಘಕಾಲ ಉಳಿಯಲಿದೆ” ಎಂದು ತಿಳಿಸಿದ್ದಾರೆ.

ಸ್ಟೇಟ್ ಬ್ಯಾಂಕ್ ಆರ್ ಡಿ ಖಾತೆ ಪರಿಷ್ಕೃತ ಬಡ್ಡಿ ದರ

0

ಭಾರತದಲ್ಲೇ ಸಾರ್ವಜನಿಕ ಬಲಿಯದ ಬೃಹತ್ ಬ್ಯಾಂಕ್ ಎನಿಸಿಕೊಂಡಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಆವರ್ತಕ ಠೇವಣಿ ಮೇಲಿನ ಬಡ್ಡಿಯನ್ನು ಹೆಚ್ಚಿಸಿದೆ. ಜನವರಿ 15 ರಿಂದಲೇ ನೂತನ ಬಡ್ಡಿ ದರ ಅನ್ವಯವಾಗಲಿದೆ. ಒಂದರಿಂದ ಎರಡು ವರ್ಷ ಮತ್ತು ಒಂದರಿಂದ ಮೂರು ವರ್ಷದವರೆಗೆ ಇಟ್ಟವರಿಗೆ ಶೇ.5.1 ರಷ್ಟು, ಮೂರರಿಂದ ಐದು ವರ್ಷ ಠೇವಣಿಗೆ ಶೇ. 5.3 ರಷ್ಟು ಮತ್ತು 5ರಿಂದ 10 ವರ್ಷ ಠೇವಣಿ ಇಟ್ಟರೆ ಶೇ. 5.4 ರಷ್ಟು ಬಡ್ಡಿ ದೊರೆಯಲಿದೆ. ಆವರ್ತಕ ಠೇವಣಿ ಎಂಬುವುದು ಮಾಸಿಕ ಉಳಿತಾಯ ಯೋಜನೆಯಾಗಿದೆ. ತಿಂಗಳಿಗೆ ಕನಿಷ್ಠ 100 ರೂಪಾಯಿ ಸಹ ಮಾಡಬಹುದಾಗಿದೆ.