Saturday, October 17, 2026
Saturday, October 17, 2026

ಭದ್ರತಾ ಪಡೆಗಳಿಂದ ನಾಲ್ಕು ಜನ ಉಗ್ರರ ಹತ್ಯೆ

Date:

ಭದ್ರತಾ ಪಡೆಗಳು ನಡೆಸಿದ ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಜೈಷೆ ಮೊಹಮ್ಮದ್ ಉಗ್ರ ಸಂಘಟನೆಯ ಕಮಾಂಡರ್ ಜಾಹಿದ್ ವಾನಿ ಸೇರಿದಂತೆ 5 ಉಗ್ರರನ್ನು ಹತ್ಯೆಗೈಯಲಾಗಿದೆ.

ಶನಿವಾರ ರಾತ್ರಿ ಪುಲ್ವಾಮಾ ಮತ್ತು ಬುಡ್ಗಾಮ್ ಜಿಲ್ಲೆಗಳಲ್ಲಿ ಎನ್ಕೌಂಟರ್ ನಡೆದಿದೆ. ಪುಲ್ವಾಮಾದ ನೈರಾ ಪ್ರದೇಶದಲ್ಲಿ ಪಾಕಿಸ್ತಾನದ ಜೈಷೆ ಮೊಹಮ್ಮದ್ ಸಂಘಟನೆಯ 4 ಉಗ್ರರನ್ನು ಪಡೆಗಳು ಹೊಡೆದುರುಳಿಸಿದ್ದಾರೆ ಎಂದು ಕಾಶ್ಮೀರ ಐಜಿಪಿ ವಿಜಯ್ ಕುಮಾರ್ ಅವರು ತಿಳಿಸಿದ್ದಾರೆ.

ಕಮಾಂಡರ್ ವಾನಿಯ ವಿರುದ್ಧ ಐಇಡಿ ಸ್ಫೋಟದ ಸಂಚು ಮತ್ತು ಉಗ್ರ ಸಂಘಟನೆಗಳಿಗೆ ಯುವಕರನ್ನು ನೇಮಕ ಮಾಡಿಕೊಳ್ಳುತ್ತಿರುವ ಆರೋಪವಿತ್ತು.

ಪುಲ್ವಾಮಾದಲ್ಲಿ ನಡೆದ ಎನ್ ಕೌಂಟರ್ ವೇಳೆ ಉಗ್ರರು ಸ್ಥಳೀಯ ನಿವಾಸಿ ಇನಾಯತ್ ಅಹಮದ್ ಎಂಬಾತನ ಮನೆಯಲ್ಲಿ ಅಡಗಿದ್ದರು. ಮೊದಲು ಎಲ್ಲರಿಗೂ ಶರಣಾಗಲು ಭದ್ರತಾಪಡೆಗಳು ಮತ್ತು ಪೊಲೀಸರು ಒತ್ತಾಯಿಸಿದ್ದಾರೆ. ಇದಕ್ಕೆ ಒಪ್ಪದೆ ಯೇ ಇನಾಯತ್ ಸೇರಿದಂತೆ ನಾಲ್ಕು ಜನ ಉಗ್ರರು ಗನ್ ಹಿಡಿದು ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಯೋಧರು ಗುಂಡಿಕ್ಕಿ ಹೊಡೆದು ಡಿಸಿದ್ದಾರೆ.

ಒಟ್ಟಿನಲ್ಲಿ ಕಳೆದ 12 ಗಂಟೆಗಳಲ್ಲಿ ಪಾಕಿಸ್ತಾನದ ಪ್ರಚೋದನೆಯಿಂದ ಅಕ್ರಮವಾಗಿ ಗಡಿ ನುಸುಳಿದ್ದ ಲಷ್ಕರ್ ಮತ್ತು ಜೈಷೆ ಮೊಹಮ್ಮದ್ ಸಂಘಟನೆಯ ಉಗ್ರರನ್ನು ಭೇಟೆಯಾಡಲಾಗಿದೆ. ಇದು ಭಯೋತ್ಪಾದನೆ ನಿಗ್ರಹ ಸಿಕ್ಕ ದೊಡ್ಡ ಯಶಸ್ಸು ಎಂದು ವಿಜಯ್ ಕುಮಾರ್ ಅವರು ಹೇಳಿದ್ದಾರೆ.

ಮೃತಪಟ್ಟ ಉಗ್ರರ ಬಳಿಯಿಂದ ಎಕೆ -56 ರೈಫಲ್, ಮತ್ತು ಕೆಲವು ನಕ್ಷೆ ಗಳನ್ನು ವಶಕ್ಕೆ ಪಡೆಯಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಗಳಲ್ಲಿ ಇಂಟರ್ನೆಟ್ ಸಂಪರ್ಕ ಕಡಿತಗೊಳಿಸಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

World Mental Health Day ಶಿವಮೊಗ್ಗದಲ್ಲಿ ವಿಶ್ವ ಮಾನಸಿಕ ದಿನಾಚರಣೆ ಜಾಗೃತಿ ಜಾಥಾ

World Mental Health Day ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಅಂಗವಾಗಿ...

Mysuru Dasara ದಸರಾ ಪುಸ್ತಕ ಮೇಳ: ಪುಸ್ತಕಗಳ ವೀಕ್ಷಿಸಿದ ಅಭಿನವ ಗವಿ ಸಿದ್ದೇಶ್ವರ ಸ್ವಾಮೀಜಿ

Mysuru Dasara ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026ರ ಉದ್ಘಾಟನೆಮಾಡಿದ...

Mysuru Dasara ಮೈಸೂರು ದಸರಾ ವಿದ್ಯುತ್ ದೀಪಾಲಂಕಾರಕ್ಕೆ ಸಚಿವ ಜಾರ್ಜ್ ಚಾಲನೆ

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ವಿದ್ಯುತ್‌ ದೀಪಾಲಂಕಾರಕ್ಕೆ...