Monday, February 16, 2026
Monday, February 16, 2026
Home Blog Page 1741

ಬಜೆಟ್ ಅಧಿವೇಶನಕ್ಕೆ ಸಂಸದರೆಲ್ಲರೂ ಹಾಜರಾಗಲು ಮೋದಿ ಕಳಕಳಿ ಮನವಿ

0

ಮುಂದಿನ ಒಂದು ವರ್ಷದ ಪೂರ್ಣ ನೀಲನಕ್ಷೆಯನ್ನು ಕೊಡುವ ಆಯವ್ಯಯ ಮಂಡನೆ ಮುಖ್ಯವಾಗಿದೆ. ಹಾಗಾಗಿ ಬಜೆಟ್ ಅಧಿವೇಶನ ದಲ್ಲಿ ಎಲ್ಲಾ ಸಂಸದರೂ ತಪ್ಪದೇ ಭಾಗಿಯಾಗಿ ಫಲಪ್ರದ ಚರ್ಚೆಗಳ ಮೂಲಕ ಯಶಸ್ವಿಯಾಗಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರು ಸಂಸದರಿಗೆ ಕರೆ ನೀಡಿದ್ದಾರೆ.
ಬಜೆಟ್ ಅಧಿವೇಶನಕ್ಕೆ ಮುನ್ನ ಸಂಸತ್ ಹೊರಗಡೆ
ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಚುನಾವಣೆಗಳು ಹೆಚ್ಚಾಗುತ್ತಿರುವ ಕಾರಣ ಇತ್ತೀಚಿನ ಸಂಸತ್ ಕಲಾಪಗಳಿಗೆ ಅಡ್ಡಿಯಾಗುತ್ತಿರುವುದು ನಿಜ. ಇವುಗಳ ನಡುವೆಯೂ ದೇಶದಲ್ಲಿ ಆರ್ಥಿಕ ಪ್ರಗತಿ, ದೇಶಿಯ ಲಸಿಕೆಗಳ ಸಾಧನೆ ಮಾಡಲಾಗಿದೆ. ಈ ಬಾರಿ ಅಧಿವೇಶನದಲ್ಲಿ ಮುಕ್ತಮನಸ್ಸಿನ ಚರ್ಚೆ ನಡೆಯುವ ನಿರೀಕ್ಷೆ ನನಗಿದೆ ಎಂದರು.
ಸ್ಪೀಕರ್ ಒಮ್ ಬಿರ್ಲಾ ಅವರು ಸರ್ವಪಕ್ಷಗಳ ಸಭೆ ಹಾಗೂ ಲೋಕಸಭೆಯ ವ್ಯವಹಾರಗಳ ಸಲಹಾ ಸಮಿತಿ ಸಭೆ ನಡೆಸಿದರು.

ಕೋವಿಡ್ ನಿಂದಾಗಿ ದೇಶದಲ್ಲಿ ಯಾರೂ ಸೌಲಭ್ಯ ವಂಚಿತರಾಗಿಲ್ಲ

0

ದೇಶದ ಹಲವು ರಾಜ್ಯಗಳಲ್ಲಿ ಕೊರೊನಾ ನಿರೋಧಕ ಲಸಿಕೆ ಕಡ್ಡಾಯಗೊಳಿಸಿದ್ದರಿಂದ ಯಾರಿಗೂ ನಷ್ಟವಾಗಿಲ್ಲ ಎಂದು ಸುಪ್ರೀಂಕೋರ್ಟ್ ಗೆ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ನಿರೋಧಕ ಲಸಿಕೆ ಪಡೆಯುವುದನ್ನು ಕಡ್ಡಾಯಗೊಳಿಸಿದ ಕಾರಣ ಜನ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಪಡಿತರ ಸೇರಿ ಹಲವು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದು ವಕೀಲ ಪ್ರಶಾಂತ್ ಭೂಷಣ್ ಅವರು ದೂರಿದರು.
ಲಸಿಕೆಗಳ ಕ್ಲಿನಿಕಲ್ ಪ್ರಯೋಗ ಹಾಗೂ ಲಸಿಕೆ ಕಡ್ಡಾಯಗೊಳಿಸಿರುವ ಕುರಿತು ಮಾಹಿತಿ ನೀಡಬೇಕು ಎಂದು ಸಲ್ಲಿಕೆಯಾದ ಅರ್ಜಿಯನ್ನು ನ್ಯಾ.ಎಲ್. ನಾಗೇಶ್ವರ ರಾವ್ ಅವರ ನೇತೃತ್ವದ ನ್ಯಾಯಪೀಠವು ವಿಚಾರಣೆ ನಡೆಸಿತು.
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಯಾರೂ ಉದ್ಯೋಗ, ಪಡಿತರ ಸೇರಿ ಯಾವುದೇ ಸೌಲಭ್ಯ ಕಳೆದುಕೊಳ್ಳುತ್ತಿಲ್ಲ ಎಂದು ಪ್ರತ್ಯುತ್ತರ ನೀಡಿದರು.
ವಾದ -ಪ್ರತಿವಾದ ಆಲಿಸಿದ ನ್ಯಾಯಾಲಯವು ಅರ್ಜಿ ಕುರಿತ ಅಂತಿಮ ವಿಚಾರಣೆಗೆ ಶೀಘ್ರವೇ ದಿನಾಂಕ ತಿಳಿಸಲಾಗುವುದು ಎಂದು ಆದೇಶ ಹೊರಡಿಸಿತು.

ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಮೊಹ್ಮದ್ ನಲ್ ಪಾಡ್

0

ಆರೋಪಿ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಜಾರಿಯಾದ ಬಳಿಕ, ನಿರೀಕ್ಷಣಾ ಜಾಮೀನು ಸಲ್ಲಿಕೆಗೆ ಅವಕಾಶವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.

ಆರೋಪಿಯು ಒಮ್ಮೆ ಕೋರ್ಟ್ ಮುಂದೆ ಹಾಜರಿದ್ದರೆ, ನಂತರ ಆತ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ ಸೆಕ್ಷನ್ 438 ರ ಅನ್ವಯ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಗೌರಿಬಿದನೂರಿನ ರಮೇಶ್ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಪರಿಶೀಲಿಸಿದ ನ್ಯಾ. ಎಚ್. ಪಿ. ಸಂದೇಶ್ ಅವರಿದ್ದ ಪೀಠ ಈ ಆದೇಶ ನೀಡಿ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾ ಮಾಡಿದೆ. ಎಸ್. ಆರ್. ನಾಗರಾಜ್ ಮತ್ತು ರಾಜ್ಯ ಸರ್ಕಾರದ ನಡುವಿನ ಪ್ರಕರಣಗಳಲ್ಲಿ ಆರೋಪಿಗೆ ಜಾಮೀನನ್ನು ನಿರಾಕರಿಸಲಾಗಿದೆ. ಆರೋಪಿಯು ಒಮ್ಮೆ ವಿಚಾರ ಕೋರ್ಟ್ ಮುಂದೆ ಖುದ್ದಾಗಿ ಅಥವಾ ವಕೀಲರ ಮುಖಾಂತರ ಹಾಜರಾಗಿ, ನಂತರದ ದಿನಗಳಲ್ಲಿ ವಿಚಾರಣೆಗೆ ಗೈರಾದ ಕಾರಣಕ್ಕೆ ವಾರೆಂಟ್ ಜಾರಿಯಾದರೆ, ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲವೆಂದು ಹೈಕೋರ್ಟ್ ಆದೇಶ ನೀಡಿದೆ. ಅದರಂತೆ ಈ ಪ್ರಕರಣದಲ್ಲೂ ಜಾಮೀನು ನೀಡಲಾಗದು ಎಂದು ನ್ಯಾಯಾಲಯ ಹೇಳಿದೆ.

2020ರ ಜುಲೈ 8ರಂದು ಗೌರಿಬಿದನೂರಿನ ಅರಣ್ಯ ವಲಯಾಧಿಕಾರಿಯು ರಮೇಶ್ ಮನೆಯಲ್ಲಿದ್ದ ಮೂರು ಉಡಗಳು ಮತ್ತು ಮೂರು ಗೌಜಲಹಕ್ಕಿ ಗಳನ್ನು ವಶಪಡಿಸಿಕೊಂಡಿದ್ದರು. ಈ ಸಂಬಂಧ ವಿಚಾರಣಾ ನ್ಯಾಯಾಲಯವು, ಪ್ರಕರಣ ದಾಖಲಿಸಿಕೊಂಡು ಆರೋಪಿಗೆ 2021ರ ಅಕ್ಟೋಬರ್ 5ರಂದು ವಿಚಾರಣೆಗೆ ಹಾಜರಾಗಲು ಸಮನ್ಸ್ ಜಾರಿಗೊಳಿಸಿತ್ತು. ಒಂದು ವಕೀಲರ ಮೂಲಕ ಆರೋಪಿಯು ಒಂದು ದಿನದ ವಿಚಾರಣೆಗೆ ವಿನಾಯಿತಿ ಕೋರಿದ್ದರು. ಬಳಿಕ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ರಮೇಶ್ 2021ರ ಅಕ್ಟೋಬರ್ 6ರಂದು ಎನ್ ಬಿಡಬ್ಲ್ಯೂ ಜಾರಿಗೊಳಿಸಲಾಗಿತ್ತು. ಆರೋಪಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸೇಷನ್ಸ್ ಕೋರ್ಟ್ ವಜಾಗೊಳಿಸಿತ್ತು

ಜಾಮೀನು ರಹಿತ ಬಂಧನ ವಾರಂಟ್ ಇದ್ದಾಗ ನಿರೀಕ್ಷಣಾ ಜಾಮೀನು ಅವಕಾಶವಿಲ್ಲ

0

ಆರೋಪಿ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಜಾರಿಯಾದ ಬಳಿಕ, ನಿರೀಕ್ಷಣಾ ಜಾಮೀನು ಸಲ್ಲಿಕೆಗೆ ಅವಕಾಶವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.

ಆರೋಪಿಯು ಒಮ್ಮೆ ಕೋರ್ಟ್ ಮುಂದೆ ಹಾಜರಿದ್ದರೆ, ನಂತರ ಆತ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ ಸೆಕ್ಷನ್ 438 ರ ಅನ್ವಯ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಗೌರಿಬಿದನೂರಿನ ರಮೇಶ್ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಪರಿಶೀಲಿಸಿದ ನ್ಯಾ. ಎಚ್. ಪಿ. ಸಂದೇಶ್ ಅವರಿದ್ದ ಪೀಠ ಈ ಆದೇಶ ನೀಡಿ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾ ಮಾಡಿದೆ. ಎಸ್. ಆರ್. ನಾಗರಾಜ್ ಮತ್ತು ರಾಜ್ಯ ಸರ್ಕಾರದ ನಡುವಿನ ಪ್ರಕರಣಗಳಲ್ಲಿ ಆರೋಪಿಗೆ ಜಾಮೀನನ್ನು ನಿರಾಕರಿಸಲಾಗಿದೆ. ಆರೋಪಿಯು ಒಮ್ಮೆ ವಿಚಾರ ಕೋರ್ಟ್ ಮುಂದೆ ಖುದ್ದಾಗಿ ಅಥವಾ ವಕೀಲರ ಮುಖಾಂತರ ಹಾಜರಾಗಿ, ನಂತರದ ದಿನಗಳಲ್ಲಿ ವಿಚಾರಣೆಗೆ ಗೈರಾದ ಕಾರಣಕ್ಕೆ ವಾರೆಂಟ್ ಜಾರಿಯಾದರೆ, ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲವೆಂದು ಹೈಕೋರ್ಟ್ ಆದೇಶ ನೀಡಿದೆ. ಅದರಂತೆ ಈ ಪ್ರಕರಣದಲ್ಲೂ ಜಾಮೀನು ನೀಡಲಾಗದು ಎಂದು ನ್ಯಾಯಾಲಯ ಹೇಳಿದೆ.

2020ರ ಜುಲೈ 8ರಂದು ಗೌರಿಬಿದನೂರಿನ ಅರಣ್ಯ ವಲಯಾಧಿಕಾರಿಯು ರಮೇಶ್ ಮನೆಯಲ್ಲಿದ್ದ ಮೂರು ಉಡಗಳು ಮತ್ತು ಮೂರು ಗೌಜಲಹಕ್ಕಿ ಗಳನ್ನು ವಶಪಡಿಸಿಕೊಂಡಿದ್ದರು. ಈ ಸಂಬಂಧ ವಿಚಾರಣಾ ನ್ಯಾಯಾಲಯವು, ಪ್ರಕರಣ ದಾಖಲಿಸಿಕೊಂಡು ಆರೋಪಿಗೆ 2021ರ ಅಕ್ಟೋಬರ್ 5ರಂದು ವಿಚಾರಣೆಗೆ ಹಾಜರಾಗಲು ಸಮನ್ಸ್ ಜಾರಿಗೊಳಿಸಿತ್ತು. ಒಂದು ವಕೀಲರ ಮೂಲಕ ಆರೋಪಿಯು ಒಂದು ದಿನದ ವಿಚಾರಣೆಗೆ ವಿನಾಯಿತಿ ಕೋರಿದ್ದರು. ಬಳಿಕ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ರಮೇಶ್ 2021ರ ಅಕ್ಟೋಬರ್ 6ರಂದು ಎನ್ ಬಿಡಬ್ಲ್ಯೂ ಜಾರಿಗೊಳಿಸಲಾಗಿತ್ತು. ಆರೋಪಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸೇಷನ್ಸ್ ಕೋರ್ಟ್ ವಜಾಗೊಳಿಸಿತ್ತು

ವಿದ್ಯಾರ್ಥಿಗಳು ಮೊಬೈಲ್ ಬಿಟ್ಟು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು

0

“ದೇಶದ ಭವ್ಯತೆ, ಹಿರಿಮೆ, ಗರಿಮೆ ಕಾಪಾಡಿದ ಮಾನ್ಯರನ್ನು ಸ್ಮರಿಸುವುದು ನಮ್ಮ ಆದ್ಯ ಕರ್ತವ್ಯ ” ಎಂದು ಶ್ರೀರಂಜಿನಿ ದತ್ತಾತ್ರಿಯವರು ತಿಳಿಸಿದರು.

ನಮ್ಮ ಮಕ್ಕಳಿಗೆ ನಮ್ಮ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರ ಬಗ್ಗೆ, ನಮ್ಮ ದೇಶದ ಯೋಧರ ಬಗ್ಗೆ, ನಮ್ಮ ದೇಶದ ಇತಿಹಾಸ, ಸಂಸ್ಕೃತಿಗಳ ಬಗ್ಗೆ, ಭವ್ಯ ಭಾರತದ ಬಗ್ಗೆ ತಿಳಿಯುವ ಅಧ್ಯಯನಶೀಲತೆ ಬರಬೇಕು. ಈ ದೇಶವನ್ನು ಮುನ್ನಡೆಸುವ ನಾಳಿನ ಪ್ರಜೆಗಳಾದ ವಿದ್ಯಾರ್ಥಿಗಳು ಈ ದೇಶದ ಸಮಗ್ರತೆ, ಈ ದೇಶದ ಅಭಿವೃದ್ಧಿ ಬಗ್ಗೆ ಕಲ್ಪನೆಯನ್ನು ಇಟ್ಟುಕೊಂಡು ಸಾಗಬೇಕು ಎಂಬುದೇ ಆಗಿದೆ. ಈ ದೇಶದ ನಿಜವಾದ ಇತಿಹಾಸವನ್ನು ಅದೆಷ್ಟೋ ಪುಸ್ತಕಗಳಲ್ಲಿ, ದಾಖಲೆಗಳಲ್ಲಿ ತಿರುಚಲಾಗಿದೆ.ನಿಜವಾದ ಇತಿಹಾಸ ನೇಪಥ್ಯದತ್ತ ಸಾಗಿದೆ.

ಮಕ್ಕಳು ಶಾಲಾ ಪುಸ್ತಕ ಹೊರತುಪಡಿಸಿ ಇತರ ಅಮೂಲ್ಯ ಪುಸ್ತಕಗಳ ಓದುವಿಕೆಯಿಂದ ದೂರ ಸರಿಯುತ್ತಿರುವುದು ಆತಂಕದ ವಿಷಯ ಎಂದರು..ಈ ದಿಸೆಯಲ್ಲಿ 73 ನೇ ಗಣರಾಜ್ಯೋತ್ಸವ ದ ಸಂದರ್ಭದಲ್ಲಿ ಈ ದೇಶದ ಭವ್ಯತೆ, ಈ ದೇಶದ ಹಿರಿಮೆ, ಗರಿಮೆಗಳನ್ನು ಕಾಪಾಡಿದ ಮಾನ್ಯರನ್ನು ಸ್ಮರಿಸುವುದು ಅತ್ಯಗತ್ಯ. ಚರಿತ್ರೆಯ ಅಧ್ಯಯನವೆಂದರೆ ವಿದ್ಯಾರ್ಥಿಗಳು ಕಂಠಪಾಠ ಮಾಡಿಕೊಂಡು ಅಂಕಗಳಿಸಲು ಓದುವುದಷ್ಟೇ ಆಗಬಾರದು. ಮೊಬೈಲ್ ಗೀಳಿನಿಂದ ಹೊರಬಂದು ಅಮೂಲ್ಯ ಪುಸ್ತಕಗಳ ಓದುವ ಹವ್ಯಾಸ ಬೆಳೆಸಿಕೊಂಡು ನಮ್ಮ ಪೂರ್ವಜರು ಸಾಧಿಸಿದ ಗೆಲುವುಗಳು, ನಡೆಸಿದ ಹೋರಾಟಗಳು, ರಾಷ್ಟ್ರ ಜೀವನದಲ್ಲಿ ತಲೆದೋರಿದ ತಿರುವುಗಳು, ಕೋಟೆ ಕೊತ್ತಲಗಳು, ನದಿ, ಬೆಟ್ಟ, ಪರ್ವತಗಳ ಕುರಿತು ತಿಳಿದುಕೊಳ್ಳುವತ್ತ ನಮ್ಮ ಚಿತ್ತ ಸಾಗಬೇಕು.
ಈ ನಾಡಿನ ಸ್ವಾತಂತ್ರ್ಯ ಹೋರಾಟಗಾರ ಧೋಂಡಿಯಾ ವಾಘ್ ರ ಕಥನವನ್ನು ಹೇಳುತ್ತ, ಎಲ್ಲರ ಚಿತ್ತ ಭಿತ್ತಿ ಯಿಂದ ಮರೆಯಾದ ಇಂತಹ ಸಾವಿರಾರು ದೇಶಭಕ್ತರ ಬಗ್ಗೆ ಸಂಶೋಧನೆ ನಡೆಸಿ ಬೆಳಕು ಚೆಲ್ಲಬೇಕಾದ ಅವಶ್ಯಕತೆ ಬಗ್ಗೆ ವಿವರಿಸಿದರು.
ಧೋಂಡಿಯಾರು ನಾಡಿನ ಸ್ವಾತಂತ್ರ್ಯಕ್ಕಾಗಿ ನಡೆಸಿದ ಸಂಘಟನೆ, ಹೋರಾಟದ ಪರಿಕಲ್ಪನೆಯನ್ನು ಲೇಖಕಿ, ಭಾಷಣಗಾರ್ತಿ ಶ್ರೀರಂಜಿನಿ ದತ್ತಾತ್ರಿ ತೆರೆದಿಟ್ಟರು.

73 ನೇ ಗಣರಾಜ್ಯೋತ್ಸವದ ಪ್ರಯುಕ್ತ ಸಹ್ಯಾದ್ರಿ ಆಂಗ್ಲ ಮಾಧ್ಯಮ ಪ್ರೌಢ ಶಾಲಾ ಮಕ್ಕಳಿಗೆ ” ನನ್ನ ನೆಚ್ಚಿನ ಸ್ವಾತಂತ್ರ್ಯ ಯೋಧ” ಎಂಬ ವಿಚಾರವಾಗಿ ಏರ್ಪಡಿಸಿದ್ದ ಈ ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರಾದ ಶ್ರೀ ಕುಮಾರಸ್ವಾಮಿಯವರು ಅಧ್ಯಕ್ಷತೆವಹಿಸಿ ನಮ್ಮ ದೇಶದ ಮೇಲೆ ಮೊಗಲರು, ಬ್ರಿಟೀಷರು ಪರಕೀಯರು ನಡೆಸಿದ ಧಾಳಿ ಬಗೆದಷ್ಟು ಸಿಗುತ್ತಾ ಹೋಗುತ್ತದೆ. ಈ ಸಂಬಂಧ ವಿದ್ಯಾರ್ಥಿಗಳಿಗೆ ” ನನ್ನ ನೆಚ್ಚಿನ ದೇಶಭಕ್ತ” ಕಾರ್ಯಕ್ರಮ ಏರ್ಪಡಿಸಿದ್ದು ಸಂತಸದ ವಿಷಯವೆಂದು ಸ್ವಾತಂತ್ರ್ಯ ದಲ್ಲಿ ಮಡಿದ ಯೋಧರೊಂದಿಗೆ ಅನೇಕ ವಿಚಾರಗಳ ಬಗ್ಗೆ ವಿವರಿಸಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ
ರೋಹನ – ಭಗತ್ ಸಿಂಗ್,
ಬೋಧನಾ – ಮಹಾತ್ಮ ಗಾಂಧೀಜಿ,
ಚೇತನ – ಲಾಲಾ ಲಜಪತ್ ರಾಯ್,
ಮಂಜುನಾಥ್ – ತಾತ್ಯಾ ಟೋಪಿ,
ಕಿಶನ್ – ಸಂಗೊಳ್ಳಿ ರಾಯಣ್ಣ,
ಋತ್ವಿಕ್ – ಚತ್ರಪತಿ ಶಿವಾಜಿ,
ಪ್ರೀತಂ – ಸುಭಾಷ್ ಚಂದ್ರ ಬೋಸ್,
ಶೇಖರ್ – ಕಿತ್ತೂರು ಚೆನ್ನಮ್ಮ,
ಭರತ್ – ಸರ್ದಾರ್ ವಲ್ಲಭ್ ಬಾಯ್ ಪಟೇಲ್ ಬಗ್ಗೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕಿ ಉಷಾರಾವ್, ಫ್ರೆಂಡ್ಸ್ ಸೆಂಟರ್ ಮಹಿಳಾ ವಿಭಾಗದ ಅಧ್ಯಕ್ಷರಾದ ಲತಾರಮೇಶ್, ಕಾರ್ಯದರ್ಶಿ ಉಮಾ ವೆಂಕಟೇಶ್, ಫ್ರೆಂಡ್ಸ್ ಸೆಂಟರ್ ನ ಜಿ.ವಿಜಯಕುಮಾರ್, ನಾಗರಾಜ್ ವಿ, ಬಿಂದುವಿಜಯಕುಮಾರ್, ವೀಣಾರಂಗಧೋಳ್ ಉಪಸ್ಥಿತರಿದ್ದರು.
ನೆಚ್ಚಿನ ವೀರ ಯೋಧರ ಬಗ್ಗೆ ಮಾತನಾಡಿದ ವಿದ್ಯಾರ್ಥಿಗಳಿಗೆ ವೀರ ಯೋಧರ ಕುರಿತು ಬರೆದ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಯಿತು.

ಕೋವಿಡ್ ಪಾಸಿಟಿವಿಟಿ ತಗ್ಗುತ್ತಿದ್ದರೂ ಎಚ್ಚರ ತಪ್ಪುವಂತಿಲ್ಲ- ಡಾ. ಸುಧಾಕರ್

0

ರಾಜ್ಯದಲ್ಲಿ ಕೋವಿಡ್ ಪಾಸಿಟಿವಿಟಿ ಕ್ರಮೇಣ ಇಳಿಕೆಯಾಗುತ್ತಿದೆ. ಆದರೂ ಸುರಕ್ಷಿತ ಕ್ರಮಗಳನ್ನು ಇನ್ನಷ್ಟು ಎಚ್ಚರದಿಂದ ಪಾಲಿಸಬೇಕಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಅವರು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳು ಇಳಿಕೆಯತ್ತ ಸಾಗುತ್ತಿವೆ. ಕೆಲ ಜಿಲ್ಲೆಗಳಲ್ಲಿ ಮಾತ್ರ ಕೋವಿಡ್ ಪಾಸಿಟಿವಿಟಿ ಹೆಚ್ಚಾಗುತ್ತಿದೆ.
ಆದರೆ ಆಸ್ಪತ್ರೆಗೆ ದಾಖಲಾಗವವರ ಪ್ರಮಾಣ ಶೇ.2-3ರಷ್ಟಿದೆ.
ಅಲ್ಲದೆ, ಶೇ.0.05ರಷ್ಟು ಮರಣ ಪ್ರಮಾಣವಿದೆ. ಹಾಗಾಗಿ ಕೋವಿಡ್ ಸುರಕ್ಷತಾ ಕ್ರಮಗಳನ್ನು ತಪ್ಪದೇ ಪಾಲಿಸಬೇಕಿದೆ. ಕೋವಿಡ್ ಪ್ರಕರಣಗಳ ಬಗ್ಗೆ ಬೇರೆ ದೇಶ, ರಾಜ್ಯಗಳ ಸ್ಥಿತಿಗತಿಯನ್ನು ಗಮನಿಸಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಚಿತ್ರಮಂದಿರ, ಮಲ್ಟಿಪ್ಲೆಕ್ಸ್ ಸಿನಿಮಾ ಹಾಲ್ ಗಳಲ್ಲಿ ಶೇ.50ರಷ್ಟು ಆಸನ ಭರ್ತಿ ನಿರ್ಬಂಧ ತೆರವುಗೊಳಿಸುವಂತೆ ಕೋರಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿಯೋಗದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು

ಸದ್ಯದಲ್ಲೇ ಟೋಯಿಂಗ್ ಕ್ರಮಕ್ಕೆ ಹೊಸರೂಪ

0

ಟೋಯಿಂಗ್ ಸಂಬಂಧ ಪೊಲೀಸರು ಮತ್ತು ಸಾರ್ವಜನಿಕರ ನಡುವೆ ಸಂಘರ್ಷ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಬೆಂಗಳೂರು ನಗರದಲ್ಲಿ ವಾಹನಗಳ ಟೋಯಿಂಗ್ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಜನರಿಂದ ವಿರೋಧ ವ್ಯಕ್ತವಾಗುತ್ತಿರುವುದರಿಂದ, ವಾಹನಗಳನ್ನು ಟೋಯಿಂಗ್ ಮಾಡುವುದನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಟೋಯಿಂಗ್ ವ್ಯವಸ್ಥೆಗೆ ಹೊಸ ರೂಪ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಭರವಸೆ ನೀಡಿದ್ದಾರೆ.
ಈ ನಿಟ್ಟಿನಲ್ಲಿ ಜಂಟಿ ಪೊಲೀಸ್ ಕಮಿಷನರ್ ಬಿ.ಆರ್. ರವಿಕಾಂತೇಗೌಡ ಡಿಸಿಪಿ, ಎಸಿಪಿ ಹಾಗೂ ಇತರ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಇದರೊಂದಿಗೆ ಸಿಎಂ ಅಧ್ಯಕ್ಷತೆಯಲ್ಲೂ ಸಭೆಯನ್ನು ನಡೆಸಲಾಯಿತು

ಬಾನೆತ್ತರಕ್ಕೆ ಹಾರಿ ಲೀನವಾದರೂ ಜೀವಂತ

0

ಕಲ್ಪನಾ ಚಾವ್ಲಾ ಚಂಡಿಗಡ ಹಾಗೂ ದೆಹಲಿ ನಡುವೆ ಇರುವ ಕರ್ನಾಲ್ ಎಂಬ ಪುಟ್ಟ ನಗರದಲ್ಲಿ ಜನಿಸಿದ್ದರು.
ವಿಭಜನೆ ಕಾಲದಲ್ಲಿ ಪಾಕಿಸ್ತಾನದಿಂದ ಭಾರತಕ್ಕೆ ಬಂದ ಅವರ ತಂದೆ ಸಣ್ಣ ವ್ಯಾಪಾರ ಪ್ರಾರಂಭಿಸಿದರು.
ಬಾಲ್ಯದಲ್ಲಿಯೇ ಕಲ್ಪನಾ ನಕ್ಷತ್ರಗಳನ್ನು ಮುಟ್ಟುವ ಕನಸನ್ನು ಕಾಣುತ್ತಿದ್ದಳು. ನಾಚಿಕೆ ಸ್ವಭಾವದವರಾದ ಕಲ್ಪನಾ ವಿಮಾನಗಳ ಚಿತ್ರ ಬಿಡಿಸುವುದನ್ನು ಹೆಚ್ಚು ಇಷ್ಟಪಡುತ್ತಿದ್ದರು.
ಸಾಹಸ ಮಾಡುವ ಧೈರ್ಯ ಅವರಲ್ಲಿ ಎಷ್ಟಿತ್ತೆಂದರೆ ತಮ್ಮ 14ನೇ ವಯಸ್ಸಿನಲ್ಲಿಯೇ ಅವರು ವಾಹನ ಚಾಲನೆಯನ್ನೂ ಸಹ ಕಲಿತಿದ್ದರು.

ತಂದೆಯ ಸಹಾಯದಿಂದ ಕಲ್ಪನಾ ಮೊದಲ ಬಾರಿಗೆ ಚಿಕ್ಕ ವಿಮಾನದಲ್ಲಿ ಹಾರಾಟ ನಡೆಸುತ್ತಾರೆ. ನಂತರದ ದಿನಗಳಲ್ಲಿ ಸಮಯದಲ್ಲಿ ಅವರು ಬಾಹ್ಯಾಕಾಶ ಇಂಜಿನಿಯರ್ ಆಗಬೇಕೆಂದು ನಿರ್ಧರಿಸಿದರು. ಅವರ ನಿರ್ಧಾರಕ್ಕೆ ಸಂಪ್ರದಾಯಸ್ಥ ಕುಟುಂಬ ಒಪ್ಪಿಗೆ ನೀಡಲಿಲ್ಲ. ಆದರೆ ತಾಯಿ ಸಂಜುಕ್ತಾ ಚಾವ್ಲಾ ಮಗಳ ಕನಸಿಗೆ ಅಡ್ಡಿಯಾದ ಸಮಸ್ಯೆಗಳನ್ನು ದೂರ ಮಾಡಿದರು.

ನಂತರ ಕಲ್ಪನಾ ಡಯಾಲ್ ಸಿಂಗ್ ಕಾಲೇಜಿನಲ್ಲಿ ತಮ್ಮ ಕಾಲೇಜು ಜೀವನವನ್ನು ಮುಗಿಸುತ್ತಾರೆ.
ನಂತರದಲ್ಲಿ ಕಲ್ಪನಾ ಚಾವ್ಲಾ ಏರೋಸ್ಪೇಸ್ ಎಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯುತ್ತಾರೆ.
ಕುಟುಂಬದ ಸ್ನೇಹಿತನ ಪರಿಚಯದಿಂದ ಅಮೆರಿಕಕ್ಕೆ ತೆರಳಲು ಕುಟುಂಬದವರನ್ನು ಒಪ್ಪಿಸಿದ ಕಲ್ಪನಾ ಆತನ ಸಹಾಯದಿಂದ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಹಾಜರಾತಿ ಪಡೆಯುತ್ತಾರೆ.
ಅಮೆರಿಕಾಗೆ ಬರುತ್ತಿದ್ದಂತೆ ಅವರಿಗೆ ಫ್ರೆಂಚ್ ಮೂಲದ ಅಮೆರಿಕನ್ ವ್ಯಕ್ತಿಯ ಪರಿಚಯವಾಯಿತು.
ಪರಿಚಯ ಪ್ರೇಮಕ್ಕೆ ತಿರುಗಿ 1983 ರಲ್ಲಿ ಅವರು ಮದುವೆಯಾಗುತ್ತಾರೆ.
ಸಮರ್ಪಣಾ ಭಾವದಿಂದ ಕ್ಲಿಷ್ಟ ಪ್ರಯೋಗಗಳಲ್ಲಿ ತೊಡಗುತ್ತಿದ್ದ ಕಲ್ಪನಾ ಪ್ರಯೋಗಾಲಯದಲ್ಲಿ ಹೆಚ್ಚಿನ ಸಮಯ ಕಳೆಯುತ್ತಿರುತ್ತಾರೆ.
ಅವರು 1988ರಲ್ಲಿ ಪಿ ಎಚ್ ಡಿ ಮುಗಿಸಿ, ಕ್ಯಾಲಿಫೋರ್ನಿಯಾದಲ್ಲಿರುವ ನಾಸಾದ ಏಮ್ಸ್ ರಿಸರ್ಚ್ ಸೆಂಟರ್ ನಲ್ಲಿ ಕೆಲಸ ಆರಂಭಿಸಿದರು.

1995ರಲ್ಲಿ ಮೊದಲ ಬಾರಿ ಕಲ್ಪನಾ ಗಗನಯಾತ್ರಿ ಆಗಿ ಆಯ್ಕೆಯಾಗುತ್ತಾರೆ.

2003ರ ಜನವರಿ 16ರಂದು ಕೊಲಂಬಿಯಾ ನೌಕೆ ಅಂತರಿಕ್ಷ ಕ್ಕೆ ಉಡಾವಣೆಯಾಯಿತು.
ಏಳು ಮಂದಿ ಸಾಹಸಿ ಗಗನಯಾತ್ರಿಗಳನ್ನು ಅವರ ಕುಟುಂಬದವರು ಹಾಗೂ ಸ್ನೇಹಿತರು ಸಂತೋಷದಿಂದ ಬೀಳ್ಕೋಡುತ್ತಾರೆ.

ದುರದೃಷ್ಟವಶಾತ್ ಅದು ಅವರ ಜೀವನದ ಕೊನೆಯ ಬೀಳ್ಕೊಡುಗೆಯಾಗಿತ್ತು. ಕೊಲಂಬಿಯ ಯಶಸ್ವಿಯಾಗಿ ಅಂತರಿಕ್ಷಕ್ಕೆ ತಲುಪಿತ್ತು.

ಕಲ್ಪನಾ ಸೇರಿದಂತೆ ಇತರ ಗಗನಯಾತ್ರಿಗಳು ಕಠಿಣ ಪರಿಶ್ರಮದಿಂದ ದಿನಕ್ಕೆ ಹದಿನಾರು ಗಂಟೆಗಳಿಗಿಂತ ಹೆಚ್ಚು ಕಾಲ ಕೆಲಸ ಮಾಡುತ್ತಿದ್ದರು.

ಶೂನ್ಯ ಗುರುತ್ವಾಕರ್ಷಣೆಯನ್ನು ಕಲ್ಪನಾ ಸಂಗೀತ ಕೇಳುತ್ತಾ ಸಸ್ಯಹಾರಿ ಆಹಾರವನ್ನು ಸೇವಿಸುತ್ತಾ ಆನಂದ ಪಡುತ್ತಿದ್ದರು.

ಆದರೆ ಕೊಲಂಬಿಯಾ ಭೂಮಿಯ ವಾತಾವರಣಕ್ಕೆ ಪುನಃ ಪ್ರವೇಶಿಸಿದಾಗ ಸಮಸ್ಯೆ ಪ್ರಾರಂಭವಾಯಿತು.
ಭೂಮಿಗೆ ತಲುಪಲು 16 ನಿಮಿಷಗಳು ಇರುವಾಗ 2003ರ ಫೆಬ್ರವರಿ 1ರಂದು ಕೊಲಂಬಿಯಾ ದುರಂತ ಕಂಡಿತ್ತು.
ಅದರಲ್ಲಿರುವ ಸಾಹಸಿ ಹಾಗೂ ಉತ್ಸಾಹಿ ಗಗನಯಾತ್ರಿಗಳು ಸುಟ್ಟು ಭಸ್ಮವಾಗಿದ್ದರು. ಭಾರತದ ನಕ್ಷತ್ರವೊಂದು ಕಾಂತಿ ಕಳೆದುಕೊಂಡಿತ್ತು.

ಮಧುರ ನಗು ಹಾಗೂ ಉತ್ಸಾಹಭರಿತ ಜೀವನದಿಂದ ಲಕ್ಷಾಂತರ ಜನರ ಮನಗೆದ್ದ ಕಲ್ಪನಾ ಚಾವ್ಲಾರ ಸಾವು ಇಡೀ ಜಗತ್ತಿಗೆ ತುಂಬಲಾಗದ ನಷ್ಟವಾಗಿತ್ತು. ಸಾವು ಅವರನ್ನು ಈ ಭೂಮಿಯಿಂದ ದೂರ ಮಾಡಿದ್ದರೂ ಅಭಿಮಾನಿಗಳ ಹೃದಯದಲ್ಲಿ ಕಲ್ಪನಾ ಈಗಲೂ ಜೀವಂತವಾಗಿದ್ದಾರೆ.

ಫೆಬ್ರವರಿ 5, 2003ರಂದು ಭಾರತದ ಪ್ರಧಾನ ಮಂತ್ರಿಗಳು ಉಪಗ್ರಹ “ಮೆಟ್ ಸ್ಯಾಟ್” ಉಪಗ್ರಹ ಸರಣಿಯನ್ನು “ಕಲ್ಪನಾ” ಎಂದು ಮರುನಾಮಕರಣ ಮಾಡುವ ಘೋಷಣೆಯನ್ನು ಮಾಡಿದರು.
ನಕ್ಷತ್ರ ಗ್ರಹ “51826 ಕಲ್ಪನಾಚಾವ್ಲಾ” ಎಂದು ನಾಮಕರಣ ಮಾಡಲಾಗಿದೆ.
ನ್ಯೂಯಾರ್ಕ್ ನಗರದ ಜಾಕ್ಸನ್ ಹೈಟ್ಸ್ ವಲಯದ “ಲಿಟಲ್ ಇಂಡಿಯಾ” ಪ್ರದೇಶದ 74ನೇ ರಸ್ತೆಯನ್ನು “ಕಲ್ಪನಾ ಚಾವ್ಲಾ ಪಥ” ಎಂದು ಹೆಸರಿಸಲಾಗಿದೆ.
ಕಲ್ಪನಾ ಎಂ ಎಸ್ ಸಿ ಡಿಗ್ರಿ ಪಡೆದ ಟೆಕ್ಸಾಸ್ ವಿಶ್ವವಿದ್ಯಾಲಯದ ಒಂದು ಹಾಸ್ಟೆಲ್ ಗೆ ಕಲ್ಪನಾ ಚಾವ್ಲಾ ಹೆಸರಿಡಲಾಗಿದೆ.
ನಾಸಾ ಸಂಸ್ಥೆಯು ಒಂದು ಸೂಪರ್ ಕಂಪ್ಯೂಟರ್ ಅನ್ನು ಕಲ್ಪನಾರವರಿಗೆ ಸಮರ್ಪಿಸಿದೆ.
ಅಮರ ಚಿತ್ರ ಕಥೆ ಕಲ್ಪನಾ ಜೀವನದ ಬಗ್ಗೆ ಕಾಮಿಕ್ ಪುಸ್ತಕವನ್ನು ಹೊರತಂದಿದೆ.
ನಾಸಾ ಮಂಗಳ ಗ್ರಹಾನ್ವೇಷಣೆಯ ರೋವರ್ ಮಿಷನ್ ಕೊಲಂಬಿಯಾ ಸರಣಿಯ ಏಳು ಪರ್ವತಶ್ರೇಣಿಗಳಿಗೆ ಕೊಲಂಬಿಯಾ ನೌಕೆಯ ದುರಂತದಲ್ಲಿ ಮಡಿದವರ ನೆನಪಾಗಿ ಅವರ ಹೆಸರನ್ನು ಇಟ್ಟಿದೆ. ಇದರಲ್ಲಿ ಚಾವ್ಲಾ ಪರ್ವತ ಒಂದಾಗಿದೆ.

ವಿಶ್ವ ಪರಂಪರೆಯ ತಾಣಗಳಾಗಿ ರಾಜ್ಯದ ಮೂರು ದೇವಾಲಯಗಳ ಸೇರ್ಪಡೆಗೆ ಮನವಿ

0

ಬೇಲೂರು, ಹಳೇಬೀಡು ಹಾಗೂ ಸೋಮನಾಥಪುರದ ಹೊಯ್ಸಳ ದೇವಸ್ಥಾನಗಳು ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಲಿವೆ. 2022-23 ನೇ ಸಾಲಿನ ಕರ್ನಾಟಕದ ಮೂರು ದೇವಸ್ಥಾನಗಳು ಶಿಫಾರಸು ಪಟ್ಟಿಯಲ್ಲಿದೆ.

ಈ ದೇವಾಲಯಗಳು ಕಲೆ ಹಾಗು ವಾಸ್ತುಶಿಲ್ಪ, ಸಂಸ್ಕೃತಿಯ ಪ್ರತೀಕವಾಗಿದೆ. ಹೊಯ್ಸಳರ ಕಾಲದಲ್ಲಿ ಇವುಗಳನ್ನು ನಿರ್ಮಾಣ ಮಾಡಲಾಗಿದೆ. 2015ರಿಂದ ಈ ಮೂರು ದೇವಸ್ಥಾನಗಳು ತಾತ್ಕಾಲಿಕ ಪಟ್ಟಿಯಲ್ಲಿದ್ದವು. ಈ ದೇವಸ್ಥಾನಗಳನ್ನು ಕಾಯಂ ಪಟ್ಟಿಗೆ ಸೇರಿಸಬೇಕು ಎಂದು ಕೇಂದ್ರ ಸರ್ಕಾರ ಮನವಿ ಮಾಡಿದೆ.

ಯುನೆಸ್ಕೋದ ಭಾರತದ ಕಾಯಂ ಪ್ರತಿನಿಧಿ ವಿಶಾಲ್ ವಿ. ಶರ್ಮಾ ಔಪಚಾರಿಕವಾಗಿ ತಂಡಕ್ಕೆ ಭಾರತದ ಪಟ್ಟಿಯನ್ನು ನೀಡಿದ್ದಾರೆ. ಮುಂದಿನ ಹಂತವಾಗಿ ಯುನೆಸ್ಕೋದ ಸಮಿತಿ ಪಟ್ಟಿ ಪರಿಶೀಲನೆ ನಡೆಸಲಿದೆ. ಅನಂತರ ಅಂತಿಮ ತೀರ್ಮಾನ ಕೈಗೊಳ್ಳಲಿದೆ.

ತಜ್ಞರ ಸಮಿತಿ ಪಟ್ಟಿಯನ್ನು ಪರಿಶೀಲನೆ ಮಾಡಿ ಭಾರತದ ಜೊತೆ ಮತ್ತೆ ಮಾತುಕತೆ ನಡೆಸಲಿದೆ. ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಿನಲ್ಲಿ ಮೌಲ್ಯಮಾಪನ ನಡೆಯಲಿದೆ. 2023ರ ಜುಲೈ ಅಥವಾ ಆಗಸ್ಟ್ ತಿಂಗಳಿನಲ್ಲಿ ದೇವಾಲಯಗಳನ್ನು ಯುನೆಸ್ಕೋ ಪಟ್ಟಿಗೆ ಸೇರಿಸುವ ಕುರಿತು ಅಂತಿಮ ಘೋಷಣೆಯಾಗಲಿದೆ.

12ನೇ ಶತಮಾನದಲ್ಲಿ ನಿರ್ಮಾಣವಾದ ಎಲ್ಲಾ ದೇವಾಲಯಗಳು ಪ್ರಸ್ತುತ ಭಾರತೀಯ ಪುರಾತತ್ವ ಸರ್ವೇಕ್ಷಣೆಯ ಸಂರಕ್ಷಿತ ಸ್ಮಾರಕಗಳಾಗಿವೆ. ಭಾರತೀಯ ಪುರಾತತ್ವ ಇಲಾಖೆಯೇ ದೇವಸ್ಥಾನಗಳ ಉಸ್ತುವಾರಿ ನೋಡಿಕೊಳ್ಳುತ್ತಿದೆ

Shimoga News – Monday, 31 January 2022

0

Book Your Advertisement Now in Shimoga News.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.


Latest News on WhatsApp

Shimoga News
Send a Whatsapp message Startto this contact to get started. That’s it! We will send you your daily dose of positive Shimoga News on Whatsapp!

Why Keelambi Media Lab Pvt Ltd in Shimoga News ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

Shimoga News

KLIVE Android App on Google Play Store

Shimoga News

Download the most loved Klive App for your Android phone or tablet.