Sunday, August 9, 2026
Sunday, August 9, 2026
Home Blog Page 173

ಅಪ್ಪಟ ಚರ್ಮದ ಲಿಡ್ಕರ್ ಉತ್ಪನ್ನಗಳಿಗೆ ಶೇ.20 ರಿಯಾಯ್ತಿ

0

ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ದಿ ನಿಗಮ ನಿಯಮಿತದ ಅಡಿಯಲ್ಲಿ ಬರುವ ನಗರದ ನೆಹರು ರಸ್ತೆಯ ಬಸವ ಸದನದಲ್ಲಿರುವ ಲಿಡ್ಕರ್ ಮಾರಾಟ ಮಳಿಗೆಯಲ್ಲಿ ಅಪ್ಪಟ ಚರ್ಮದ ವಸ್ತುಗಳ ಮೇಲೆ ಯುಗಾದಿ ಹಬ್ಬ ಮತ್ತು ವರ್ಷಾಂತ್ಯದ ತೀರುವಳಿ ಮಾರಾಟದ ಪ್ರಯುಕ್ತ ಎಲ್ಲಾ ದಾಸ್ತಾನುಗಳ ಮೇಲೆ ಶೇ.20 ರಿಯಾಯಿತಿಯನ್ನು ನೀಡಲಾಗುತ್ತಿದೆ.
ಮಾ.6 ರಿಂದ 25 ರವರೆಗೆ ಈ ಅವಕಾಶವಿದ್ದು ಸಾರ್ವಜನಿಕರು ಇದರ ಸದುಪಯೋಗಪಡೆಯಬೇಕೆಂದು ಲಿಡ್ಕರ್ ಮಾರಾಟ ಮಳಿಗೆಯ ಜಿಲ್ಲಾ ಸಂಯೋಜಕರು ತಿಳಿಸಿದ್ದಾರೆ.

Klive Special Article ನಿಮ್ಮೂರು ನಮ್ಮ ಮಾಹಿತಿ ಸ್ಥಳ: ಸುಣ್ಣದಹಳ್ಳಿ ಲೇ: ದಿಲೀಪ್ ನಾಡಿಗ್

0

Klive Special Article ಸುವರ್ಣ ಹಳ್ಳಿ ಕಾಲಕ್ರಮೇಣ ಸುಣ್ಣದ ಹಳ್ಳಿಯಾಯಿತು. ಇಲ್ಲಿದ್ದಾನೆ ಅಭಯ ವೀರಾಂಜನೇಯ.

ಸುಂದರಮೂರುತಿ ಮುಖ್ಯಪ್ರಾಣ ಬಂದ ನಮ್ಮ ಮನೆಗೆ.

ಪ್ರಥಮೋ‌ಹನುಮನ್ನಾಮ, ದ್ವಿತಿಯೋ ಭೀಮೇವಚ, ಪೂರ್ಣಪ್ರಜ್ಞ ತೃತೀಯಸ್ತು ಭಗವತ್ಕಾರ್ಯ ಸಾಧಕಃ.

ಭದ್ರಾ ನದಿಯ ದಡದ ಮೇಲೆ ನಿಂತಿದ್ದಾನೆ ವ್ಯಾಸರಾಜರಿಂದ‌ ಪ್ರತಿಷ್ಠಿತನಾಗಿರುವ ವೀರಾಂಜನೇಯ.‌ ವೆಂಕಿಪುರ ಪುರಾತನ ಹೆಸರು .
ಐತಿಹಾಸಿಕವಾಗಿ ಈ ಸ್ಥಳವನ್ನು ವೆಂಕಿಪುರ (Venkipura) ಎಂದೂ ಕರೆಯಲಾಗುತ್ತಿತ್ತು. “ವೆಂಕಿ” ಎಂಬುದು ಸಂಸ್ಕೃತದಲ್ಲಿ “ಮೂಲೆ/ತಿರುಗು” ಎಂಬ ಅರ್ಥ ನೀಡುತ್ತದೆ. ಈ ಹೆಸರು ಬಂದಿರುವುದಕ್ಕೆ ಕಾರಣ, ಇಲ್ಲಿ ಭದ್ರಾ ನದಿ ಮೊದಲು ಪಶ್ಚಿಮಕ್ಕೆ 90° ತಿರುಗಿ, ನಂತರ ಮತ್ತೆ ಪೂರ್ವದ ಕಡೆಗೆ ಹರಿಯುತ್ತದೆ.
ಈ ಪ್ರದೇಶವನ್ನು ಹೊಯ್ಸಳ ರಾಜರು ಆಳಿದರು. ಈ ನಗರವನ್ನು ಪ್ರಾಚೀನ ಕಾಲದಿಂದ ಹಳದಮ್ಮ ದೇವಿ (Haladammadevi) ಮತ್ತು ಅಂತರಗಟ್ಟಮ್ಮ ದೇವಿ (Antaragattammadevi) ಎಂಬ ದೇವತೆಗಳು ಕಾಪಾಡುತ್ತಿವೆ ಎಂಬ ಸ್ಥಳೀಯ ನಂಬಿಕೆ ಇದೆ. ಈ ದೇವಾಲಯಗಳು ಇಂದಿಗೂ ನಗರದಲ್ಲಿ ಇವೆ.
Klive Special Article ಕ್ರಿ.ಶ. 1413ರಲ್ಲಿ, ಹೊಯ್ಸಳರ ಢಣಾಯಕನಾದ ಎರೇಲಕ್ಕ ನಾಯಕ (Yerelakka Nayaka) ಎಂಬ ನಾಯಕನು ದುಮ್ಮ (Dumma) ಮತ್ತು ಬಾಣೂರು (Banuru) ಎಂಬ ಎರಡು ಪಟ್ಟಣಗಳನ್ನು ಆಡಳಿತ ಮಾಡುತ್ತಿದ್ದನು. ನಂತರ ಅವನು ಅರಣ್ಯವನ್ನು ತೆರವುಗೊಳಿಸಿ ಇನ್ನೂ ಎರಡು ಹೊಸ ಪಟ್ಟಣಗಳನ್ನು ನಿರ್ಮಿಸಿ ಅವುಗಳಿಗೆ ನರಸಿಂಹಪುರ (Narasimha Pura) ಮತ್ತು ಲಕ್ಷ್ಮೀಪುರ (Lakshmipura) ಎಂಬ ಹೆಸರುಗಳನ್ನು ಇಟ್ಟನು.
ನಂತರ ಈ ಎರಡು ಪಟ್ಟಣಗಳು ಸೇರಿ ಬೆಂಕಿಪುರ / ವೆಂಕಿಪುರ ಎಂದು ಪ್ರಸಿದ್ಧಿಯಾದವು. ಕಾಲಕ್ರಮೇಣ ಭದ್ರಾ ನದಿಯ ತೀರದಲ್ಲಿ ಇರುವುದರಿಂದ ಈ ಪಟ್ಟಣಕ್ಕೆ ಭದ್ರಾವತಿ ಎಂಬ ಹೆಸರು ಬಂದಿತು.
ಇಂತಹ ಪುಣ್ಯಸ್ಥಳದಲ್ಲಿ ವ್ಯಾಸರಾಜರಿಂದ ಪ್ರತಿಷ್ಠಾಪಿಸಲಾದ ವೀರಾಂಜನೇಯ ಆಭಯಹಸ್ತನಾಗಿ, ಮೇಲೆ ಶಂಖ, ಚಕ್ರ, ಶಿಖೆಯನ್ನು, ಬಾಲದಲ್ಲಿ ಘಂಟೆಯನ್ನು, ಕಾಲಕೆಳಗೆ ಅಕ್ಷಯಕುಮಾರನ ಸಂಹರಿಸಿದ ರೀತಿಯಲ್ಲಿ ನಿಂತು ಪ್ರಾಚೀನ ಕಾಲದಿಂದಲೂ ಭಕ್ತರ ಇಷ್ಟಾರ್ಥ ಸಿದ್ಧಿಯಾಗುವಂತೆ ಹರಸುತ್ತಿದ್ದಾನೆ ಮುದ್ದು ಆಂಜನೇಯ.

ದಿಲೀಪ್ ನಾಡಿಗ್
6361124316
9448148710

Government First Grade College ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸ ಮಾಲೆ ಕಾರ್ಯಕ್ರಮ

0

Government First Grade College ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಇತಿಹಾಸ ವಿಭಾಗದ ಪರಂಪರೆ ಕೂಟ ಹಾಗೂ ಐಕ್ಯೂಎಸ್‌ಸಿ ವತಿಯಿಂದ ವಿಶೇಷ ಉಪನ್ಯಾಸ ಮಾಲೆ ಕಾರ್ಯಕ್ರಮ ಆಯೋಜಿಸಲಾಯಿತು .ಇತಿಹಾಸ ವಿಭಾಗ ಸಹ ಪ್ರಾಧ್ಯಾಪಕರಾದ ವಿನೋದ ಪ್ರಕಾಶರವರು ಎಲ್ಲಾ
ಅತಿಥಿಗಳ ವೇದಿಕೆ ಗಣ್ಯರನ್ನು ಸ್ವಾಗತಿಸಿದರು.
ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು .
ಇತಿಹಾಸ ವಿಭಾಗದ ಮುಖ್ಯಸ್ಥರು ಡಾ ಸುರೇಶ್ ರವರು ವಾಸ್ತಾವಿಕ ನುಡಿಗಳೊಂದಿಗೆ
ಕಾರ್ಯಕ್ರಮ ಪ್ರಾರಂಭಿಸಿದರು. ಆಧ್ಯಕ್ಷತೆಯನ್ನು ಕಾಲೇಜಿನ ಪ್ರಾಶುಂಪಾಲರು ಶಶಿಧರ್ ಅವರು ವಿಧ್ಯಾರ್ಥಿಗಳಿಗೆ
ಇತಿಹಾಸದ ಮಹತ್ವ ಉದ್ಯೋಗಾವಕಾಶಗಳ ಬಗ್ಗೆ ಅರಿವು ಮೂಡಿಸಿದರು.
ಐಕ್ಯೂಎಸ್‌ಸಿ ಕೋ ಆರ್ಡಿನಲರ್ ಆಗಿರುವ ಡಾ : ವಿದ್ಯಾಮರಿಯಾ ಜೋಸೆಪ್
ಮಾತಾನಾಡಿ ಇತಿಹಾಸ ಅಧ್ಯಯನದ ವಿಶೇಷ ತಿಳಿಸಿದರು.
ಸಮಾಜಶಾಸ್ತ ಮಖ್ಯಸ್ಥರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು.
ಡಾ ಹಸಿನಾ ರಾಮಪ್ರಕಾಶ ,ಪ್ರದೀಪ ವೇದಿಕೆಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಿಶೇಷ ಉಪನ್ಯಾಸ ಕಾರ್ಯಕ್ರಮದ ಮೊದಲು ಮಾತಾನಾಡಿದ ಡಾ ಹಸೀನರವರು
ಭಾರತ ಪ್ರವಾಸೋದ್ಯಮ ಒಂದು ಐತಿಹಾಸಿಕ ಅವಲೋಕನ ಕುರಿತು ಮಾತಾನಾಡಿದರು.
ಭಾರತದ ಇತಿಹಾಸ ಸಂಸ್ಕೃತಿ ಸ್ಮಾರಕಗಳು ದೇಶದ ಪ್ರವಾಸೋದ್ಯಮದ ಅಭಿವೃದ್ದಿಗೆ ಹೇಗೆ ಕಾರಣವಾಗಿದೆ ಎಂದು
ತಿಳಿಸಿದರು.
Government First Grade College ದೇಶ ಸುತ್ತಿ ಕೋಶ ಓದಿ ಹೇಗೆ ಬದುಕನ್ನು ಕಟ್ಟಿಬಹುದೆಂದು ತಿಳಿಸಿದರು.
ತದನಂತರ ಸಂಪನ್ಮೂಲ ವ್ಯಕ್ತಿ ಯಾದ ಪ್ರದೀಪ ಹೆಚ್ ರವರು ಮಾತಾನಾಡಿ ಕರ್ನಾಟಕ
ಸಂಸ್ಕೃತಿ ಇತಿಹಾಸ ಒಂದು ಪಕ್ಷಿನೋಟ ವಿಷಯ ಕುರಿತು ಉಪನ್ಯಾಸ ನೀಡಿದರು.
೩ ನೇ ಸಂಪನ್ಮೂಲ ವ್ಯಕ್ತಿಯಾದ ರಾಮಪ್ರಕಾಶ ಪ್ರವಾಸಿ ಮಾರ್ಗದರ್ಶಕರು ಸರ್ಕಾರದ
ವಸ್ತು ಸಂಗ್ರಹಾಲಯ ಶಿವಮೊಗ್ಗ ಶಿರ್ಷಿಕೆ ಪುರತತ್ವಶಾಸ್ತ ಅಂದು ಇಂದು ವಿಚಯ ಕುರಿತು ಉಪನ್ಯಾಸ ನೀಡಿದರು
ಈ ಸಂದರ್ಭದಲ್ಲಿ ಹೇಮ ಡಿ .ಚಂದ್ರಕಲಾ ,ಮೋಹನ್ ವಿಧ್ಯಾರ್ಥಿಗಳು ಸೇರಿದಂತೆ ಹಲವರಿದ್ದರು.

ಚಿಕ್ಕಮಗಳೂರಿನ ಹೊರನಾಡಿನಲ್ಲಿ ವಿಶೇಷ ಬೇಸಿಗೆ ಶಿಬಿರ

0

ಚಿಕ್ಕಮಗಳೂರಿನ ಹೊರನಾಡಿನಲ್ಲಿ ದಿಕ್ಸೂಚಿ ಅಡ್ವೆಂಚರ್ ವತಿಯಿಂದ ಏಪ್ರಿಲ್ 13ರಿಂದ 19ರವರೆಗೆ ವಿಶೇಷ ಬೇಸಿಗೆ ಶಿಬಿರ ಹಮ್ಮಿಕೊಳ್ಳಲಾಗಿದೆ. 8 ವರ್ಷ ಮೇಲ್ಪಟ್ಟವರು ಬೇಸಿಗೆ ಶಿಬಿರದಲ್ಲಿ ಹೆಸರು ನೋಂದಾಯಿಸಿ ಪಾಲ್ಗೊಳ್ಳಬಹುದಾಗಿದೆ. ಕ್ರಾಫ್ಟ್ಸ್‌, ಕ್ಯಾಂಪ್ ಫೈರ್, ಕ್ಯಾಂಪಿಂಗ್, ಟ್ರೆಕ್ಕಿಂಗ್, ಪ್ರಥಮ ಚಿಕಿತ್ಸೆ, ವಾಟರ್ ಗೇಮ್ಸ್ ಸೇರಿದಂತೆ ವೈವಿಧ್ಯ ವಿಷಯಗಳ ಬಗ್ಗೆ ಮಕ್ಕಳಿಗೆ ಕಲಿಸಲಾಗುತ್ತದೆ. ವಿಶೇಷ ಬೇಸಿಗೆ ಶಿಬಿರಕ್ಕೆ ಸಂಬಂಧಿಸಿ ಮಾಹಿತಿಗಾಗಿ ಫ್ವಥಿ 8277314779, ವೈಶ್ಣವಿ 7760666544 ಸಂಪರ್ಕಿಸಬಹುದಾಗಿದೆ.

Department of Tourism ಪ್ರವಾಸೋದ್ಯಮ ಇಲಾಖೆಯಿಂದ ಮೊಬೈಲ್ ಕ್ಯಾಂಟೀನ್ ಯೋಜನೆಯಡಿ ಸಹಾಯಧನ ಪಡೆಯಲು ಅರ್ಜಿ ಆಹ್ವಾನ

0

Department of Tourism ಪ್ರವಾಸೋದ್ಯಮ ಇಲಾಖೆಯ ವತಿಯಿಂದ 2025-26ನೇ ಸಾಲಿನಲ್ಲಿ ರಾಜ್ಯದ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಹಾಗೂ ಸಣ್ಣ ಉದ್ಯಮಿದಾರರನ್ನು ಉತ್ತೇಜಿಸುವ ಉದ್ದೇಶದಿಂದ ಮೊಬೈಲ್ ಕ್ಯಾಂಟೀನ್ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಈ ಯೋಜನೆಯಡಿ ಶಿವಮೊಗ್ಗ ಜಿಲ್ಲೆಯ ನಿವಾಸಿಗಳಾಗಿರುವ ಪರಿಶಿಷ್ಟ ಜಾತಿಗೆ ಸೇರಿದ 06 ಅಭ್ಯರ್ಥಿಗಳು ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ 04 ಅಭ್ಯರ್ಥಿಗಳಿಗೆ ಮೊಬೈಲ್ ಕ್ಯಾಂಟೀನ್ ವಾಹನ ಖರೀದಿಸಲು ಸಹಾಯಧನ ನೀಡುವ ಉದ್ದೇಶದಿಂದ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು 20 ರಿಂದ 55 ವರ್ಷದೊಳಗಿನವರಾಗಿದ್ದು, 10ನೇ ತರಗತಿ ಉತ್ತೀರ್ಣ ಪ್ರಮಾಣ ಪತ್ರ, ಆಧಾರ್ ಪ್ರತಿ, ಲಘು ವಾಹನ ಚಾಲನಾ ಪರವಾನಗಿ, ಚಾಲ್ತಿಯಲ್ಲಿರುವ ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ವಾಸಸ್ಥಳ ದೃಢೀಕರಣ ಪತ್ರ, ಬ್ಯಾಂಕ್‌ನಿAದ ಸಾಲ ಪಡೆಯಲು ಅರ್ಹತೆ ಹೊಂದಿರುವ ಬಗ್ಗೆ ಮಂಜೂರಾತಿ/ದೃಢೀಕರಣ ಪತ್ರ ಹಾಗೂ ಇಲಾಖೆಯಿಂದ ನೀಡಲಾಗುವ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಕಡ್ಡಾಯವಾಗಿ ಪಡೆಯುವುದಾಗಿ ಪ್ರಮಾಣ ಪತ್ರ, ಯಾವುದೇ ಸರ್ಕಾರಿ ಇಲಾಖೆ ಅಥವಾ ನಿಗಮ/ಮಂಡಳಿಗಳಲ್ಲಿ ಖಾಯಂ ನೌಕರಿಯಾಗಿಲ್ಲವೆಂಬ ಸ್ವಯಂ ಘೋಷಣೆಯನ್ನು ಸಲ್ಲಿಸಬೇಕು ಮತ್ತು ಅರ್ಜಿಯೊಂದಿಗೆ ಸಲ್ಲಿಸುವ ಎಲ್ಲಾ ದಾಖಲಾತಿಗಳನ್ನು ಸ್ವಯಂ ದೃಢೀಕರಿಸಿ ಸಲ್ಲಿಸಬೇಕು.
Department of Tourism ಆಸಕ್ತ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರ ಕಛೇರಿ, ಪ್ರವಾಸೋದ್ಯಮ ಇಲಾಖೆ, ‘ಎ’ ಬ್ಲಾಕ್, 3ನೇ ತಿರುವು ಗೋಪಾಲಗೌಡ ಬಡಾವಣೆ, ಶಿವಮೊಗ್ಗ ಈ ಕಛೇರಿಯಿಂದ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಪೂರಕ ದಾಖಲೆಗಳೊಂದಿಗೆ ಮಾ.13 ರೊಳಗಾಗಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪ್ರವಾಸೋದ್ಯಮ ಸಮಿತಿ ಅಧ್ಯಕ್ಷರೂ ಆದ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 08182-251444 ನ್ನು ಸಂಪರ್ಕಿಸುವುದು.

ಶಿವಮೊಗ್ಗದಲ್ಲಿ ಮಾ. 25 ರಂದು ಡಾಕ್ ಅದಾಲತ್

0

ಶಿವಮೊಗ್ಗ ಕೋಟೆ ರಸ್ತೆಯಲ್ಲಿರುವ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ಮಾ. 25 ರಂದು ಬೆಳಗ್ಗೆ 11.00ಕ್ಕೆ ತ್ರೈಮಾಸಿಕ ಡಾಕ್ ಅದಾಲತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಅಂಚೆ ಇಲಾಖೆಯ ಕುಂದುಕೊರತೆಗಳನ್ನು ಅಥವಾ ಸಲಹೆಗಳಿದ್ದಲ್ಲಿ ಮಾ.23 ರೊಳಗಾಗಿ ಲಿಖಿತವಾಗಿ ಸಲ್ಲಿಸಿ, ಡಾಕ್ ಅದಾಲತ್ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಅಂಚೆ ಅಧೀಕ್ಷಕ ಎಂ. ಕುಮಾರಸ್ವಾಮಿ ತಿಳಿಸಿರುತ್ತಾರೆ.

ಭದ್ರಾವತಿ: ಮೆಸ್ಕಾಂ ಜನ ಸಂಪರ್ಕ ಸಭೆ

0

ಭದ್ರಾವತಿ ಮೆಸ್ಕಾಂ ಗ್ರಾಮೀಣ ಉಪವಿಭಾಗ ಕಛೇರಿಯಲ್ಲಿ ಮಾ.07 ರಂದು ಬೆಳಿಗ್ಗೆ 11.00 ರಿಂದ 01.00 ಗಂಟೆಯವರೆಗೆ ಜನಸಂಪರ್ಕ ಸಭೆ ನಡೆಯಲಿದೆ. ಈ ಸಭೆಯಲ್ಲಿ ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲ್ಲಿದ್ದು, ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದರಿಂದ ಈ ಅವಕಾಶವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಮೆಸ್ಕಾಂ ತಿಳಿಸಿದೆ.
ಸಂಪರ್ಕಿಸಬಹುದಾದ ದೂರವಾಣಿಸಂಖ್ಯೆ;.9448289507.

ನೀರಿನ ಕಂದಾಯ ಮತ್ತು ಬಾಕಿ ಕರವಸೂಲಾತಿಗೆ ವಿಶೇಷ ಕೌಂಟರ್

0

ಶಿವಮೊಗ್ಗ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣಾ ವಿಭಾಗ ಹಾಗೂ ಉಪವಿಭಾಗದ ವತಿಯಿಂದ ಮಾರ್ಚ್ 08 ರಂದು 2025-26ನೇ ಸಾಲಿನ ನೀರಿನ ಕಂದಾಯ ಮತ್ತು ಬಾಕಿ ಕರವಸೂಲಾತಿ ಮಾಡಲು ನಗರದ ಈ ಕೆಳಕಂಡ ಪ್ರದೇಶಗಳಲ್ಲಿ ವಿಶೇಷ ಕೌಂಟರ್‌ಗಳನ್ನು ತೆರೆಯಲಾಗುತ್ತದೆ.
ಕಿದ್ವಾಯಿ ಶಾಲೆ ಪಕ್ಕ ಆರ್.ಎಂ.ಎಲ್. ನಗರ, ದುರ್ಗಿಗುಡಿ ಸರ್ಕಾರಿ ಶಾಲೆ ಹತ್ತಿರ, ಶಿವಪ್ಪ ನಾಯಕ ಅರಮನೆ ಮುಂಭಾಗ ಕೋಟೆ ರಸ್ತೆ, ಅಶೋಕ ನಗರದ ನಂದಿನಿ ಬೂತ್ ಹತ್ತಿರ ಹಾಗೂ ಇಂದಿರಾ ಗಾಂಧಿ ಬಡಾವಣೆ ಐಜಿ ಸರ್ಕಲ್ ಬಸ್ ಸ್ಟಾö್ಯಂಡ್ ಹತ್ತಿರ ಈ ಸ್ಥಳಗಳಲ್ಲಿ ವಿಶೇಷ ವಸೂಲಾತಿ ಕೌಂಟರ್‌ಗಳನ್ನು ತೆರೆಯಲಾಗುತ್ತಿದ್ದು, ನೀರಿನ ಖಾತೆದಾರರು ಬಾಕಿ ಉಳಿಸಿಕೊಂಡಿರುವ ನೀರಿನ ಕಂದಾಯವನ್ನು ಪಾವತಿಸಬೇಕು. ಇಲ್ಲವಾದಲ್ಲಿ ನೀರಿನ ಸಂಪರ್ಕವನ್ನು ಕಡಿತಗೊಳಿಸಲಾಗುವುದು. ಆದ್ದರಿಂದ ಸಾರ್ವಜನಿಕರು ಮಂಡಳಿಯೊAದಿಗೆ ಸಹಕರಿಸಬೇಕೆಂದು ಕನನೀಸ ಮತ್ತು ಒಚ ಮಂಡಳಿ ನಿರ್ವಹಣಾ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಬಿಯಂತರರು ತಿಳಿಸಿದ್ದಾರೆ.

Department of Social Welfare ಎಸ್‌ಸಿ-ಎಸ್‌ಟಿ ಸಾಧಕರಿಂದ ಪ್ರಶಸ್ತಿಗೆ ಅರ್ಜಿ ಆಹ್ವಾನ

0

Department of Social Welfare ಡಾ.ಬಾಬು ಜಗಜೀವನರಾಂ ಹಾಗೂ ಡಾ.ಬಿ.ಆರ್.ಅಂಬೇಡ್ಕರ್‌ರವರ ಜನ್ಮ ದಿನಾಚರಣೆ ಪ್ರಯುಕ್ತ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ರಾಜ್ಯ ಮಟ್ಟದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಜನಾಂಗದವರ ಶ್ರೇಯಸ್ಸಿಗಾಗಿ ಪ್ರೋತ್ಸಾಯಿಸಿ, ಶ್ರಮಿಸಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಂದ ಅರ್ಜಿ ಆಹ್ವಾನಿಸಲಾಗಿದೆ.
2026-27ನೇ ಸಾಲಿನಲ್ಲಿ ಏಪ್ರಿಲ್ 05 ರಂದು ಡಾ.ಬಾಬು ಜಗಜೀವನರಾಂ ರವರ 119ನೇ ಜನ್ಮದಿನಾಚರಣೆ ಹಾಗೂ ಏಪ್ರಿಲ್ 14 ರಂದು ಡಾ.ಬಿ ಆರ್. ಅಂಬೇಡ್ಕರ್‌ರವರ 135 ನೇ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಈ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಜಿದಾರರು ಉಪ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಹಾಗೂ ಆಯಾ ತಾಲ್ಲೂಕಿನ ಸಹಾಯಕ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ ಇಲ್ಲಿ ಮಾರ್ಚ್ 9 ರೊಳಗೆ ದಾಖಲಾತಿಗಳೊಂದಿಗೆ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಬಹುದೆಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಡಿ ಮಲ್ಲೇಶಪ್ಪ ತಿಳಿಸಿದ್ದಾರೆ.

Karnataka Media Academy ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ ಇನ್ಫೋಸಿಸ್ ಸ್ಪ್ರಿಂಗ್ಬೋರ್ಡ್ ಅಡಿ ಪತ್ರಕರ್ತೆಯರಿಗಾಗಿ ತರಬೇತಿಗೆ ಅರ್ಜಿ ಆಹ್ವಾನ

0

Karnataka Media Academy ಕರ್ನಾಟಕ ಮಾಧ್ಯಮ ಅಕಾಡೆಮಿಯು Infosys Springboard ಸಿ.ಎಸ್.ಆರ್.‌ ಕಾರ್ಯಕ್ರಮದಡಿ ಮಹಿಳಾ ಪತ್ರಕರ್ತೆಯರಿಗಾಗಿಯೇ ವಿಶೇಷವಾಗಿ ತರಬೇತಿ ಆಯೋಜಿಸಿದ್ದು, ಪತ್ರಕರ್ತೆಯರಿಂದ ಅರ್ಜಿ ಆಹ್ವಾನಿಸಿದೆ.
ತರಬೇತಿಯು ಮಾರ್ಚ್‌ 25 ರಿಂದ 27ರ ವರೆಗೆ ಮೈಸೂರಿನ ಇನ್‌ಫೋಸಿಸ್‌ ಕ್ಯಾಂಪಸ್‌ನಲ್ಲಿ ನಡೆಯಲಿದೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕನಿಷ್ಠ 5 ವರ್ಷ ಸೇವಾನುಭವ ಹೊಂದಿರುವ ಪತ್ರಕರ್ತೆಯರು ಅರ್ಜಿ ಸಲ್ಲಿಸಬಹುದು.
ಆಸಕ್ತ ಪತ್ರಕರ್ತೆಯರು ಗೂಗಲ್‌ ಫಾರ್ಮ್‌ https://forms.gle/tozr4GxUQibDHBvk9 ನಲ್ಲಿ ಮಾಹಿತಿ ಹಾಗೂ ದಾಖಲೆಗಳನ್ನು ಒದಗಿಸುವ ಮೂಲಕ ತರಬೇತಿಗೆ ನೋಂದಾಯಿಸಬಹುದಾಗಿದೆ.
• ಅರ್ಜಿ ನಮೂನೆಯಲ್ಲಿ ಸೂಚಿಸಿರುವಂತೆ ಪತ್ರಕರ್ತೆಯರು ಭಾವಚಿತ್ರ, ವಯಸ್ಸಿನ ದಾಖಲೆ, ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಮಾಧ್ಯಮ ಸಂಸ್ಥೆಯ ಮುಖ್ಯಸ್ಥರ ದೃಢೀಕರಣ ಅಥವಾ ಕಚೇರಿಯ ಅಧಿಕೃತ ಗುರುತಿನಚೀಟಿ, ಸದರಿ ಮಾಧ್ಯಮ ಸಂಸ್ಥೆಯು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ಕುರಿತ ದಾಖಲೆ ಹಾಗೂ ಕನಿಷ್ಠ 5 ವರ್ಷ ಸೇವೆ ಸಲ್ಲಿಸಿರುವ ಕುರಿತು ಸೇವಾನುಭವ ದಾಖಲೆಗಳನ್ನು ಸಲ್ಲಿಸಬೇಕು.
• ಇದು ಮೂರು ದಿನಗಳ ವಸತಿಯುತ ತರಬೇತಿಯಾಗಿದ್ದು, ಪತ್ರಕರ್ತೆಯರಿಗೆ ನಿಯಮಾನುಸಾರ ಪ್ರಯಾಣ ಭತ್ಯೆ ನೀಡಲಾಗುವುದು.
• ಈ ತರಬೇತಿ ಕಾರ್ಯಕ್ರಮದಲ್ಲಿ ಡಿಜಿಟಲ್‌ ಮಾಧ್ಯಮ, ಎಐ ಬಳಕೆ ಹಾಗೂ ಸಾಫ್ಟ್‌ಸ್ಕಿಲ್‌ ಅಭಿವೃದ್ಧಿ ಮತ್ತು ನಾಯಕತ್ವ ತರಬೇತಿ ನೀಡಲಾಗುವುದು.

ಪತ್ರಕರ್ತೆಯರ ಆಯ್ಕೆ ಕುರಿತ ಅಂತಿಮ ನಿರ್ಧಾರ ಅಕಾಡೆಮಿಯದ್ದೇ ಆಗಿರುತ್ತದೆ.
• ಅರ್ಜಿ ಸಲ್ಲಿಸಲು ಮಾರ್ಚ್ 10, 2026 ಕೊನೆಯ ದಿನವಾಗಿದೆ.