Wednesday, February 18, 2026
Wednesday, February 18, 2026
Home Blog Page 172

District Consumer Disputes Redressal Commission ಓಲಾ ಎಲೆಕ್ಟ್ರಿಕ್ ಟೆಕ್ನಾಲಜೀಸ್ ನಿಂದ ಸೇವಾನ್ಯೂನತೆ ಗ್ರಾಹಕರಿಗೆ ಪರಿಹಾರ ನೀಡಲು ಆದೇಶ

0

District Consumer Disputes Redressal Commission ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂ ಮೇದುಗೊಂಡನಹಳ್ಳಿಯ ಸುನೀಲ್ ಕುಮಾರ್ ಎಂ.ಎಸ್. ಎಂಬುವವರು ವ್ಯವಸ್ಥಾಪಕ ನಿರ್ದೇಶಕರು, ಓಲಾ ಎಲೆಕ್ಟ್ರಿಕ್ ಟೆಕ್ನಾಲಾಜಿಸ್ ಪ್ರೈ. ಲಿ., ಶಿವಮೊಗ್ಗ ಮತ್ತು ಬೆಂಗಳೂರು ಇವರ ವಿರುದ್ಧ ಸೇವಾ ನ್ಯೂನತೆ ಕುರಿತು ವಕೀಲರ ಮೂಲಕ ಸಲ್ಲಿಸಿದ ದೂರನ್ನು ಆಲಿಸಿದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವೂ ದೂರುದಾರಿಗೆ ಸೂಕ್ತ ಪರಿಹಾರ ನೀಡುವಂತೆ ತೀರ್ಪು ನೀಡಿದೆ.
ದೂರುದಾರರು ಓಲಾ ಎಲೆಕ್ಟ್ರಿಕ್ ಟೆಕ್ನಾಲಾಜಿಸ್ ಪ್ರೈ. ಲಿ., ಶಿವಮೊಗ್ಗ ಇವರಿಂದ ಸೆಪ್ಟಂಬರ್ 2023 ರಲ್ಲಿ ರೂ. 1,09,999/- ಬೆಲೆಯ ಓಲಾ ಎಸ್‌ಎಲ್ ಏರ್ ಮಿಡ್‌ನ್ಶೆಟ್ ಬ್ಲೂ ಸ್ಕೂಟರ್‌ನ್ನು ಖರೀದಿಸಿದ್ದು, ಮೂರು ವರ್ಷಗಳವರೆಗೆ ಬ್ಯಾಟರಿ ವಾರಂಟಿ ಹಾಗೂ ನಲವತ್ತು ಸಾವಿರ ಕಿ.ಮೀ.ರವರೆಗೆ ಬಿಡಿಭಾಗಗಳ ವಾರಂಟಿಯನ್ನು ಹೊಂದಿರುತ್ತದೆ. ಅಕ್ಟೋಬರ್ 2023ರಲ್ಲಿ ಈ ಸ್ಕೂಟಿ ರಿಪೇರಿಗೆ ಬಂದಿದ್ದು, ಶಿವಮೊಗ್ಗದ ಶಾಖೆಯಲ್ಲಿ ಪೇರಿ ಮಾಡಿಕೊಟ್ಟಿರುತ್ತಾರೆ. ಆದರೆ ಪುನಃ ಸಮಸ್ಯೆ ಬಂದಿದ್ದು, ಬಿಡಿ ಭಾಗಗಳನ್ನು ಬದಲಾಯಿಸಿದರು ಸಹ ಸರಿಯಾದ ರೀತಿಯಲ್ಲಿ ರಿಪೇರಿಯಾಗಿರುವುದಿಲ್ಲ. ವಾರಂಟಿ ಅವಧಿಯೊಳಗೆ ವಾಹನದಲ್ಲಿ ಸಮಸ್ಯೆಯಿರುವುದರಿಂದ ಸ್ಕೂಟಿಯ ಮೊತ್ತವನ್ನು ವಾಪಾಸು ನೀಡುವಂತೆ ನೋಟಿಸ್ ನೀಡಿದ್ದು, ಯಾವುದೇ ಉತ್ತರ ನೀಡಿರುವುದಿಲ್ಲವೆಂದು ಎದುರುದಾರರ ವಿರುದ್ಧ ಸೇವಾ ನ್ಯೂನತೆ ಎಸಗಿರುವುದಾಗಿ ತಿಳಿಸಿ ಆಯೋಗಕ್ಕೆ ದೂರನ್ನು ಸಲ್ಲಿಸಿರುತ್ತಾರೆ.
ದೂರನ್ನು ದಾಖಲಿಸಿಕೊಂಡು ಎದುರುದಾರರಿಗೆ ನೋಟಿಸ್ ಕಳುಹಿಸಿದ್ದು, ತಮ್ಮ ವಕೀಲರ ಮೂಲಕ ಹಾಜರಾಗಿ ದೂರಿಗೆ ತಕರಾರು ಸಲ್ಲಿಸಿ, ಸ್ಕೂಟಿಯ ಬಿಡಿಭಾಗಗಳನ್ನು ಬದಲಾಯಿಸಿ ರಿಪೇರಿ ಮಾಡಿದ್ದರೂ ಸಹ ವಾಹನವನ್ನು ಪಡೆಯದೇ ಶಿವಮೊಗ್ಗ ಶಾಖೆಯ ಬಳಿಯಿರುತ್ತದೆ. ಆದ್ದರಿಂದ, ತಮ್ಮಿಂದ ಯಾವುದೇ ಸೇವಾ ನ್ಯೂನತೆಯಾಗಿರುವುದಿಲ್ಲವೆಂದು ತಿಳಿದು ಅರ್ಜಿಯನ್ನು ವಜಾ ಮಾಡಬೇಕೆಂದು ಕೋರಿರುತ್ತಾರೆ.
District Consumer Disputes Redressal Commission ದೂರುದಾರರು ಮತ್ತು ಎದುರುದಾರರು ಸಲ್ಲಿಸಿರುವ ಪ್ರಮಾಣ ಪತ್ರ ಮತ್ತು ದಾಖಲಾತಿಗಳನ್ನು ಪರಿಶೀಲಿಸಿ ಉಭಯ ಪಕ್ಷಗಾರರ ವಾದ-ವಿವಾದಗಳನ್ನು ಆಲಿಸಿ, ಎದುರುದಾರರು ವಾರಂಟಿ ಅವಧಿಯಲ್ಲಿ ಸರಿಯಾಗಿ ರಿಪೇರಿ ಮಾಡಿಕೊಡದೇ ಸೇವಾ ನ್ಯೂನತೆ ಎಸಗಿರುವುದಾಗಿ ಪರಿಗಣಿಸಿ, ದೂರನ್ನು ಭಾಗಶಃ ಪುರಸ್ಕರಿಸಿ, 1 ಮತ್ತು 2 ನೇ ಎದುರುದಾರರು ದೂರುದಾರರಿಗೆ ಸ್ಕೂಟಿಯ ಖರೀದಿ ಮೊತ್ತದ ಬೆಲೆಯಲ್ಲಿ ಜಿಎಸ್‌ಟಿ ಮೊತ್ತವನ್ನು ಕಳೆದು ರೂ. 1,03,413/- ಗಳಿಗೆ ಮೇ. 2025 ರಿಂದ ವಾರ್ಷಿಕ ಶೇ. 9 ರಂತೆ ಬಡ್ಡಿಯನ್ನು ಸೇರಿಸಿ ಈ ಆದೇಶವಾದ ದಿನಾಂಕದಿAದ 45 ದಿನಗಳೊಳಗಾಗಿ ಕೊಡುವುದು. ತಪ್ಪಿದ್ದಲ್ಲಿ ಶೆ. 12 ರಂತೆ ಬಡ್ಡಿಯನ್ನು ಪೂರ ಹಣ ನೀಡುವವರೆಗೂ ಪಾವತಿಸತಕ್ಕದ್ದು. ಹಾಗೂ ರೂ. 25,000/- ಗಳನ್ನು ಮಾನಸಿಕ ಹಿಂಸೆಗಾಗಿ ಮತ್ತು ವ್ಯಾಜ್ಯದ ಖರ್ಚು-ವೆಚ್ಚದ ಬಾಬ್ತು ರೂ. 10,000/-ಗಳನ್ನು ದೂರುದಾರರಿಗೆ ನೀಡುವಂತೆ ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಟಿ.ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯ ಇವರನ್ನೊಳಗೊಂಡ ಪೀಠ ಆ.25 ರಂದು ಆದೇಶಿಸಿದೆ.

Department of Empowerment of Persons with Disabilities and Senior Citizens ಸೆ.15 , ಹಿರಿಯ ನಾಗರೀಕರಿಗೆ ಶಿವಮೊಗ್ಗ ನೆಹರು ಕ್ರೀಡಾಂಗಣದಲ್ಲಿ ಕ್ರೀಡೆ & ಸಾಂಸ್ಕೃತಿಕ ಸ್ಪರ್ಧೆ

0

Department of Empowerment of Persons with Disabilities and Senior Citizens ವಿಕಲಚೇತನ ಹಾಗು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಸೆ. 15 ರಂದು ನಗರದ ನೆಹರು ಕ್ರೀಡಾಂಗಣದಲ್ಲಿ ಹಿರಿಯ ನಾಗರಿಕರಿಗಾಗಿ ನಡೆಯುವ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಶಿವಮೊಗ್ಗ ಜಿಲ್ಲಾ ಸರ್ಕಾರಿ ನಿವೃತ್ತ ನೌಕರರು ಭಾಗವಹಿಸುವಂತೆ ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಸ್.ಆರ್. ಚಂದ್ರಪ್ಪ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಕ್ರೀಡೆಗಳಲ್ಲಿ ಮ್ಯುಸಿಕಲ್ ಚೇರ್, ಬಿರುಸಿನ ನಡಿಗೆ, ಬಕೆಟ್‌ನಲ್ಲಿ ಬಾಲ್ ಎಸೆಯುವ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಗಾಯನ ಸ್ಪರ್ಧೆ ಮತ್ತು ಏಕಪಾತ್ರಾಭಿನಯ ಸ್ಪರ್ಧೆ ಏರ್ಪಡಿಸಿದೆ. ಸ್ತಿçÃಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕವಾಗಿದ್ದು, ವಯೋಮಿತಿ ಆಧಾರದ ಮೇಲೆ 60 ರಿಂದ 69 ಹಾಗೂ 70 ವರ್ಷ ಮೇಲ್ಪಟ್ಟವರಿಗಾಗಿ ಎರಡು ವಿಭಾಗಗಳನ್ನು ಏರ್ಪಡಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ಪುರುಷರ ವಿಭಾಗದಿಂದ 60-69ರ ವಯೋಮಿತಿಯ ಬಿರುಸಿನ ನಡಿಗೆಯಲ್ಲಿ ಪ್ರಥಮ ಸ್ಥಾನ ಪಡೆದ ಹಾಗೂ ಗಾಯನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ 60-69ರ ವಯೋಮಿತಿಯ ಮಹಿಳೆಯರನ್ನು ರಾಜ್ಯಮಟ್ಟದ ಸ್ಪರ್ಧೆಗೆ ಕಳುಹಿಸಲಾಗುವುದು.

Dr. Babu Jagjivan Ram Leather Industries Development Corporation ಚರ್ಮ ಕೈಗಾರಿಕೆ ಕುಶಲಕರ್ಮಿಗಳಿಂದ ವಿವಿಧ ಯೋಜನೆಗಳಲ್ಲಿ ಕಿರು ನೇರ ಸಾಲ ಪಡೆಯಲು ಅರ್ಜಿ ಆಹ್ವಾನ

0

Dr. Babu Jagjivan Ram Leather Industries Development Corporation ಡಾ. ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮವು 2025-26ನೇ ಸಾಲಿನ ಪರಿಶಿಷ್ಟ ಜಾತಿಗೆ ಸೇರಿದ ಚರ್ಮ ಕೈಗಾರಿಕೆಯಲ್ಲಿ ತೊಡಗಿರುವ ಕುಶಲಕರ್ಮಿಗಳಿಗೆ ಕಿರು ನೇರ ಸಾಲ ಯೋಜನೆ, ಚರ್ಮಕಾರರ ವಸತಿ ಯೋಜನೆ ಮತ್ತು ಚರ್ಮ ಕುಶಲಕರ್ಮಿಗಳ ಕುಟುಂಬಗಳ ಯುವಜನರಿಗೆ ಹೊಸ ತಂತ್ರಜ್ಞಾನ ವಿನ್ಯಾಸಗಳು ಹಾಗೂ ಮಾರುಕಟ್ಟೆ ಬೇಡಿಕೆಗಳ ಬಗ್ಗೆ ದೆಹಲಿ, ತಮಿಳುನಾಡು, ಮಹಾರಾಷ್ಟ್ರ ಉತ್ತರಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ತರಬೇತಿ ಪಡೆಯಲು ಅಧ್ಯಯನ ಪ್ರವಾಸ ಯೋಜನೆಗೆ ಅರ್ಹರಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು https://sevasindhu.karnataka.gov.in, https://sevasindhuservices.karnataka.gov.in ಪೋರ್ಟಲ್ ಮೂಲಕ ಅ. 08 ರೊಳಗಾಗಿ ಅರ್ಜಿ ಸಲ್ಲಿಸುವಂತೆ ನಿಗಮದ ವ್ಯವಸ್ಥಾಪಕರು/ಜಿಲ್ಲಾ ಸಂಯೋಜಕರು ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸಂಯೋಜಕರು, ಲಿಡ್‌ಕರ್, ನೆಹರು ರಸ್ತೆ, ಶಿವಮೊಗ್ಗ ಇವರನ್ನು ಖುದ್ದಾಗಿ ಅಥವಾ ಮೊ.ಸಂ.: 8904510699 ನ್ನು ಸಂಪರ್ಕಿಸುವುದು.

ಒಡಿಸ್ಸಿ ನೃತ್ಯ ಕಲಾವಿದೆಯಾರಾದ ಪೃಥೆ ಹವಾಲ್ದಾರ್, ಓಜಸ್ ಬಲ್ಲೂರು ಹಾಗೂ ಇತರರಿಂದ ಮನಸೆಳೆದ ನೃತ್ಯ ಪ್ರದರ್ಶನ

0

ಮೈಸೂರು ನಗರದ ಜಗನ್ನಾಥ ಸೆಂಟರ್ ಪಾರ್ ಆರ್ಟ್ ಅಂಡ್ ಕಲ್ಚರ್‌ನಲ್ಲಿ ಪ್ರತೀ ಬುಧವಾರ ನಡೆಯುವ ಕಲಾ ಸಪ್ತಮಿ ಕಾರ್ಯಕ್ರಮದಲ್ಲಿ ಮೈಸೂರಿನ ರುದ್ರನೃತ್ಯ ಯೋಗ ಶಾಲೆಯ ನೃತ್ಯಗುರು ಸಿಂಧು ಕಿರಣ್‌ರವರ ಶಿಷ್ಯೆಯರಾದ ಪೃಥೆ ಹವಾಲ್ದಾರ್, ಓಜಸ್ ಬಲ್ಲೂರು, ಡಾ. ತರಾನಾ ಚೆಂಗಪ್ಪ, ಸತ್ಯ ಪ್ರಮೋದಿನಿ, ಉನ್ನತಿ ಗಣಪತಿ ಕನೋಲ್ಕರ್, ಕಾವ್ಯ ಉತ್ತಯ್ಯರವರು ಒಡಿಸ್ಸಿ ನೃತ್ಯ ಪ್ರದರ್ಶಿಸಿ ಗಮನ ಸೆಳೆದರು.

ಓಡಿಸ್ಸಿ ಸಂಪ್ರದಾಯದಂತೆ ಮಹಾಕವಿ ಕಾಳಿದಾಸರ ರಚನೆಯ, ನೃತ್ಯಗುರು ಸಿಂಧು ಕಿರಣ್‌ರವರ ನೃತ್ಯ ಸಂಯೋಜನೆಯ ಮಂಗಳಾಚರಣ್‌ನೊಂದಿಗೆ ಆರಂಭವಾದ ಈ ಪ್ರದರ್ಶನದಲ್ಲಿ, ನಂತರ ಓಡಿಸ್ಸಿ ನೃತ್ಯಕಲೆಯ ಮೇರು ವ್ಯಕ್ತಿತ್ವ ಕೇಳುಚರಣ ಮಹಾಪತ್ರರವರ ನೃತ್ಯ ಸಂಯೋಜನೆಯ, ಭುವನೇಶ್ವರ ಮಿಶ್ರರವರ ಸಂಗೀತ ನಿರ್ದೇಶನದಲ್ಲಿನ ಶ್ರೀಕೃಷ್ಣನ ಬಾಲ ಲೀಲೆಗಳನ್ನು ಸಿಂಧು ಕಿರಣ್, ಓಜಸ್ ಬಲ್ಲೂರು ಪ್ರಸ್ತುತ ಪಡಿಸಿದರು.

ನಂತರ ಓಜಸ್‌ರವರು ಏಕವ್ಯಕ್ತಿ ಪ್ರಯೋಗದಲ್ಲಿ ಶಂಕರಾಭರಣ ರಾಗದಲ್ಲಿನ ಶಂಕರ ಪಲ್ಲವಿಯನ್ನು ಪರಿಣಾಮಕಾರಿಯಾಗಿ ಅಭಿವ್ಯಕ್ತಿಗೊಳಿಸಿದರು.

ನೃತ್ಯಗುರು ಸಿಂಧು ಕಿರಣ್‌ರವರು ಸಹ ಏಕವ್ಯಕ್ತಿ ಪ್ರಯೋಗದಲ್ಲಿ ರಾಮಾಯಣದ ಮಾಯಾಜಿಂಕೆ, ಜಟಾಯು ವಧೆಯನ್ನು ಕೇಂದ್ರವಾಗಿರಿಸಿಕೊಂಡು ಸೀತಾಪಹರಣವನ್ನು ಪ್ರಸ್ತುತ ಪಡಿಸಿ, ನೃತ್ಯ ರಸಿಕರ ಮೆಚ್ಚುಗೆಗೆ ಪಾತ್ರರಾದರು. ಇದು ಭುವನೇಶ್ವರ ಮಿಶ್ರರವರು ಸಂಗೀತ ಸಂಯೋಜನೆಯ ರಾಗಮಾಲಿಕೆಯಲ್ಲಿದ್ದು, ಕೇಳುಚರಣ ಮಹಾಪತ್ರರವರ ನೃತ್ಯ ಸಂಯೋಜನೆಯಲ್ಲಿ ಪ್ರಸ್ತುತಗೊಂಡಿತ್ತು.

ನೃತ್ಯ ಪ್ರದರ್ಶನದ ಕೊನೆಯಲ್ಲಿ ಸಂಪ್ರದಾಯದಂತೆ ಭೈರವಿ ರಾಗದಲ್ಲಿನ ಮೋ ಕ್ಸ್ ನೃತ್ಯವನ್ನು ಕಲಾವಿದರು ಪ್ರದರ್ಶಿಸಿದರು.

ಈ ನೃತ್ಯ ಪ್ರದರ್ಶನದಲ್ಲಿ ಪಾಲ್ಗೊಂಡು ತನ್ನ ನೃತ್ಯಾಭಿನಯದಿಂದ ಗಮನ ಸೆಳೆದ ಕಲಾವಿದೆ ಪೃಥೆ ಹವಾಲ್ದಾರ್‌ರವರು ನಗರದ ಹಿರಿಯ ಪತ್ರಕರ್ತ ವೈದ್ಯನಾಥ್ ಹಾಗೂ ಜ್ಞಾನೇಶ್ವರಿ ದಂಪತಿಗಳ ಪುತ್ರಿ.

ಕಾರ್ಯಾಕ್ರಮದಲ್ಲಿ ನೃತ್ಯ ಕಲಾವಿದರಿಗೆ ಜಗನ್ನಾಥ ಸೆಂಟರ್ ಪಾರ್ ಆರ್ಟ್ಸ್ ಅಂಡ್ ಕಲ್ಚರ್‌ವತಿಯಿಂದ ನೆನಪಿನ ಕಾಣಿಕೆಗಳನ್ನು ನೀಡಿ ಗೌರವಿಸಲಾಯಿತು.

ನಂತರ ನಾಡಿನ ಪ್ರಸಿದ್ಧ ಕಲಾವಿದರಾದ ನೃತ್ಯ ಗುರು ಮೈಸೂರು ಬಿ. ನಾಗರಾಜ್‌ರವರ ಆರ್ಟಿಕ್ಯುಲೇಟ್ ಡ್ಯಾನ್ಸ್ ಸ್ಟುಡಿಯೋದ ಶಿಷ್ಯಂದಿರಿಂದ ನಡೆದ ಕಥಕ್ ನೃತ್ಯ ಪ್ರದರ್ಶನವು, ಸುಮಧುರವಾದ ಸಂಗೀತ, ಚುರುಕಾದ ಹಾಗೂ ಅತ್ಯಂತ ಕರಾರುವಾಕ್ಕಾದ ಪದಚಲನೆ, ಭಾವಾಭಿವ್ಯಕ್ತಿಗಳಿಂದ ನೃತ್ಯ ರಸಿಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಹಾಗೆಯೇ ಸ್ವತಃ ಗುರು ನಾಗರಾಜ್‌ರವರ ಆರ್ಥಪೂರ್ಣವಾದ ನಿರೂಪಣೆ ಕಥಕ್ ನೃತ್ಯ ಪರಂಪರೆಯನ್ನು ಪರಿಣಾಮಕಾರಿಯಾಗಿಯೇ ಅನಾವರಣಗೊಳಿಸಿತ್ತು.

ಜಗನ್ನಾಥ ಸೆಂಟರ್ ಪಾರ್ ಆರ್ಟ್ ಅಂಡ್ ಕಲ್ಚರ್‌ನ ಕಲಾ ಸಪ್ತಮಿಯ ಎರಡನೇ ಕಾರ್ಯಕ್ರಮ ಕಲಾ ರಸಿಕರನ್ನು ಎರಡು ವಿಭಿನ್ನ ಪ್ರಕಾರಗಳ ಪ್ರಯೋಗಗಳ ಮೂಲಕ ಮಹತ್ವದ ಹೆಜ್ಜೆ ಇರಿಸಿತ್ತು. ಪ್ರತೀ ವಾರವೂ ಸಹ ಸಂಗೀತ, ರಂಗ ಸಂಗೀತ, ನಾಟಕ, ನೃತ್ಯ, ಜಾನಪದ ಸಂಗೀತ ಸೇರಿದಂತೆ ವಿಭಿನ್ನವಾದ ಕಾರ್ಯಕ್ರಮಗಳನ್ನು ಉಚಿತವಾಗಿ ನೀಡುವ ಆಶಯವನ್ನು ಈ ಕಲಾ ಸಪ್ತಮಿ ಹೊಂದಿದೆ.

Hindustan Aeronautics Limited ಅಪ್ರೆಂಟಿಸ್ ತರಬೇತಿಗೆ ಅರ್ಹರಿಂದ ಅರ್ಜಿ ಆಹ್ವಾನ

0

Hindustan Aeronautics Limited ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್‌ಎಎಲ್) ಬೆಂಗಳೂರು ಇಲ್ಲಿ ಐಟಿಐ ತೇರ್ಗಡೆ ಹೊಂದಿದ ಅಭ್ಯರ್ಥಿಗಳಿಗೆ ಒಂದು ವರ್ಷದ ಅಪ್ರೆಂಟಿಸ್ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಎಸ್‌ಎಸ್‌ಎಲ್‌ಸಿ + ಐಟಿಐ ಪಾಸಾದವರು ಫಿಟ್ಟರ್, ಟರ್ನರ್, ಮಷಿನಿಸ್ಟ್, ಎಲೆಕ್ಟ್ರೀಷಿಯನ್, ವೆಲ್ಡರ್, ಸಿಒಪಿಎ , ಕಾರ್ಪೆಂಟರ್, ಫೌಂಡ್ರಿಮನ್, ಶೀಟ್ ಮೆಟಲ್ ವರ್ಕರ್, ಟೂಲ್ ಆಂಡ್ ಡೈಮೇಕರ್, ಸಿಎನ್‌ಸಿ ಪ್ರೋಗ್ರಾಮರ್ ಕಂ ಆಪರೇಟರ್ ತರಬೇತಿ ಪಡೆಯಲು ಅರ್ಜಿ ಸಲ್ಲಿಸಬಹುದು.
ಆಸಕ್ತರು ತಮ್ಮ ಎಸ್‌ಎಸ್‌ಎಲ್‌ಸಿ+ ಐಟಿಐ ಅಂಕಪಟ್ಟಿ, ಜಾತಿ /ಪಿಡಬ್ಲ್ಯೂಡಿಪ್ರಮಾಣ ಪತ್ರ, ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್, ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಈ ಎಲ್ಲಾ ದಾಖಲೆಗಳ ಮೂಲ ಪ್ರತಿ ಹಾಗೂ 2 ಸೆಟ್ ಜೆರಾಕ್ಸ್ ಪ್ರತಿಯನ್ನು ತೆಗೆದುಕೊಂಡು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಶಿವಮೊಗ್ಗ, ಗುತ್ಯಪ್ಪ ಕಾಲೋನಿ, ಪಂಪಾ ನಗರ, 2ನೇ ಕ್ರಾಸ್, ಸಾಗರ ರಸ್ತೆ, ಶಿವಮೊಗ್ಗ ಇಲ್ಲಿಗೆ ದಿ:26/09/2025 ರೊಳಗಾಗಿ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿ ಮತ್ತು ಅರ್ಜಿ ನಮೂನೆಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಶಿವಮೊಗ್ಗ, ದೂ.ಸಂ: 08182-255293, 9380663606/ 9901914601 ನ್ನು ಸಂಪರ್ಕಿಸುವಂತೆ ಉದ್ಯೋಗಾಧಿಕಾರಿಗಳು ತಿಳಿಸಿದ್ದಾರೆ.

ಸರ್ಕಾರಿ ಶಾಲೆಗಳಿಗೆ ಪ್ರೋತ್ಸಾಹ ನೀಡುವುದು ಎಲ್ಲರ ಕರ್ತವ್ಯ- ಎಂ.ಬಿ.ಲಕ್ಷ್ಮಣ ಗೌಡ

0

ಸರ್ಕಾರಿ ಶಾಲೆಗಳಿಗೆ ಪ್ರೋತ್ಸಾಹ ನೀಡುವುದು ನಮ್ಮೆಲ್ಲರ ಕರ್ತವ್ಯ ಎಂದು ವಲಯ 11ರ ಸಹಾಯಕ ಗವರ್ನರ್ ಲಕ್ಷ್ಮಣ್‌ ಗೌಡ ಎಂ.ಬಿ ಹೇಳಿದರು.

ವಿನೋಬನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ವಲಯ ಸೇನಾನಿ ಕಿರಣ್ ಕುಮಾರ್ ಜಿ ಅವರಿಂದ ಶಾಲೆಗೆ ಅಗತ್ಯವಿರುವ ಪ್ರೆಷರ್ ಪಂಪ್ ಕೊಡುಗೆ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸರ್ಕಾರಿ ಶಾಲೆಯಲ್ಲಿ ಅಗತ್ಯ ಇರುವ ವಸ್ತುಗಳನ್ನು ರೋಟರಿ ಸಂಸ್ಥೆಯಿಂದ ಹೆಚ್ಚು ಪೂರೈಸಲಾಗುತ್ತಿದೆ. ನಮ್ಮ ರೋಟರಿಯ ಜಿಲ್ಲಾ ಕಾರ್ಯಕ್ರಮವಾದ ಸ್ವಚ್ಛತಾ ಕಾರ್ಯಕ್ರಮದ ಅಡಿಯಲ್ಲಿ ವಲಯ ಸೇನಾನಿ, ಎಸ್ ಬಿ ಎಸ್ ಬೋರ್ ವೆಲ್ಸ್ ನ ಕಿರಣ್ ಕುಮಾರ್.ಜಿ ಅವರು ಶಾಲೆಗೆ ಪ್ರೆಷರ್ ಪಂಪ್ ನೀಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.

ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯ ರಮೇಶ್ ಮಾತನಾಡಿ, ಹಿಂದಿನಿಂದಲೂ ನಮ್ಮ ಶಾಲೆಗೆ ರೋಟರಿ ಸಂಸ್ಥೆಯವರು ಶಾಲೆಗೆ ಉಪಯುಕ್ತ ಕೊಡುಗೆಯನ್ನು ನೀಡುತ್ತಿದ್ದು, ಹೆಚ್ಚಿನ ಸೇವಾ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂದು ತಿಳಿಸಿದರು.

ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಬಸವರಾಜ್ ಬಿ, ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಕಾರ್ಯದರ್ಶಿ ಜಯಶೀಲಶೆಟ್ಟಿ, ರೋಟರಿ ಕ್ಲಬ್ ಶಿವಮೊಗ್ಗ ಪೂರ್ವ ಸಂಸ್ಥೆ ಅಧ್ಯಕ್ಷ ನೆಪ್ಚೂನ್ ಕಿಶೋರ್ ಕುಮಾರ್, ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಧನಂಜಯ್, ರೋಟರಿ ಮಾಜಿ ಸಹಾಯಕ ಗವರ್ನರ್ ರವಿ ಕೋಟೋಜಿ, ಧಮೇಂದ್ರ ಸಿಂಗ್, ಚಂದ್ರು ಜೆಪಿ, ಸಂತೋಷ್ ಬಿ ಎ, ಈಶ್ವರ್ ಬಿವಿ, ಗೀತಾ ಜಗದೀಶ್, ಮೋಹನ್ ಕುಮಾರ್, ಬಲರಾಮ್, ಜಗದೀಶ್ ಜಿಎಸ್ ಹಾಗೂ ಶಾಲಾ ಸಿಬ್ಬಂದಿ ವರ್ಗ, ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

Rotary Club Shimoga ಎಲ್ಲರೂ ರಸ್ತೆ ಸಂಚಾರ ನಿಯಮ ಪಾಲಿಸಿದರೆ ಅಪಘಾತಗಳು ಕಡಿಮೆಯಾಗುತ್ತವೆ,- ಎಚ್.ಎಲ್.ರವಿ

0

Rotary Club Shimoga ಸಮಾಜದ ಪ್ರತಿಯೊಬ್ಬರೂ ಸಂಚಾರ ನಿಯಮಗಳನ್ನು ಪಾಲಿಸಬೇಕು. ಸುರಕ್ಷಿತ ವಾಹನ ಚಾಲನೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ರೋಟರಿ ಜಿಲ್ಲಾ ಮಾಜಿ ಗವರ್ನರ್ ಎಚ್.ಎಲ್.ರವಿ ಹೇಳಿದರು.

ರೋಟರಿ ಕ್ಲಬ್ ಶಿವಮೊಗ್ಗ ಮಲೆನಾಡು ವತಿಯಿಂದ ಏರ್ಪಡಿಸಿದ್ದ ರಸ್ತೆ ಸುರಕ್ಷತಾ ಅಭಿಯಾನದಲ್ಲಿ ಮಾತನಾಡಿ, ರಸ್ತೆ ಸಂಚಾರ ನಿಯಮಗಳ ಪಾಲನೆ ಮಾಡದೆ ಇರುವುದರಿಂದ ಹೆಚ್ಚಿನ ಅಪಘಾತಗಳು ಸಂಭವಿಸಿ ಜೀವಹಾನಿಯಾಗುತ್ತಿವೆ. ಎಲ್ಲರೂ ಸಂಚಾರ ನಿಯಮಗಳ ಪಾಲಿಸಿದರೆ ಅಪಘಾತಗಳ ಪ್ರಮಾಣ ಕಡಿಮೆ ಆಗುತ್ತದೆ. ರೋಟರಿ ಸಂಸ್ಥೆಯು ರಸ್ತೆ ಸುರಕ್ಷತೆ ಜಾಗೃತಿಗೆ ವಿಶೇಷ ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂದು ತಿಳಿಸಿದರು.

ರೋಟರಿ ಕ್ಲಬ್ ಶಿವಮೊಗ್ಗ ಮಲೆನಾಡು ಅಧ್ಯಕ್ಷ ಪ್ರಕಾಶಮೂರ್ತಿ ಮಾತನಾಡಿ, ರೋಟರಿ ಸಂಸ್ಥೆಯಿಂದ ನಿರಂತರವಾಗಿ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸೇವಾ ಚಟುವಟಿಕೆಗಳನ್ನು ನಡೆಸಲಾಗುವುದು ಎಂದು ಹೇಳಿದರು.

ಸಂಚಾರಿ ಪೊಲೀಸ್ ಸಿಬ್ಬಂದಿ ಹಾಲೇಶಪ್ಪ ಮಾತನಾಡಿ, ಯುವಜನರು ಬೈಕ್ ಚಾಲನೆ ಮಾಡುವಾಗ ಹೆಲ್ಮೇಟ್ ಹಾಗೂ ಕಾರು ಚಾಲನೆ ಮಾಡುವಾಗ ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಬೇಕು. ಜವಾಬ್ದಾರಿಯುತರಾಗಿ ವಾಹನಗಳನ್ನು ಚಲಾಯಿಸಬೇಕು ಎಂದರು.

Rotary Club Shimoga ರೋಟರಿ ಕ್ಲಬ್ ಶಿವಮೊಗ್ಗ ಮಲೆನಾಡು ವತಿಯಿಂದ ಗೋಪಾಳ ಲಾಸ್ಟ್ ಬಸ್ ನಿಲ್ದಾಣ, ಸಿಟಿ ಬಸ್, ಸ್ಕೂಲ್ ಬಸ್, ಆಟೋ ರಿಕ್ಷಾ, ಕಾರ್ ಮತ್ತು ಲಾರಿ ಚಾಲಕರಿಗೆ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲಾಯಿತು. ರೋಟರಿ ಕ್ಲಬ್ ಶಿವಮೊಗ್ಗ ಮಲೆನಾಡು ನಿಕಟಪೂರ್ವ ಅಧ್ಯಕ್ಷ ಮುಸ್ತಾಕ್ ಆಲಿ ಷಾ, ಕ್ಲಬ್ ಸರ್ವೀಸ್ ಡೈರೆಕ್ಟರ್ ಸಿ.ರಾಜು, ಸ್ವಪ್ನಾ ಮತ್ತಿತರರು ಇದ್ದರು.

ಶಿವಮೊಗ್ಗ ಜಿಲ್ಲಾ ಸರ್ವೋದಯ ಮಂಡಲ ಅಧ್ಯಕ್ಷರಾಗಿ ಮನೋಹರ್ ಆಯ್ಕೆ

0

ಶಿವಮೊಗ್ಗ ಜಿಲ್ಲಾ ಸರ್ವೋದಯ ಮಂಡಲ ಶಿವಮೊಗ್ಗ, ಜಿಲ್ಲಾ ಸರ್ವೋದಯ ಮಂಡಲ ಇತ್ತೀಚೆಗೆ ಮಥುರಾ ಪ್ಯಾರಡೈಸ್ ನಲ್ಲಿ ಸಭೆ ಸೇರಿ ಮೂರು ವರ್ಷದ ಅವಧಿಗೆ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷತೆಯನ್ನು ಜಿಲ್ಲಾ ಸರ್ವೋದಯ ಮಂಡಲದ ಅಧ್ಯಕ್ಷರಾದ ಶ್ರೀ ಬಸವರಾಜಪ್ಪ ಕಂದಗಲ್ ವಹಿಸಿದ್ದರು. 2025 – 28 ರವರಿಗೆ ಈ ಕೆಳಗಿನ ಕಾರ್ಯಕಾರಿ ಸಮಿತಿ ರಚನೆಯಾಯಿತು. ಶ್ರೀ ಮನೋಹರ್ ಆಡಿಟರ್ ಇವರು ಅಧ್ಯಕ್ಷರಾಗಿ ಶ್ರೀ ಜಿ ವಿಜಯಕುಮಾರ್ ಕಾರ್ಯದರ್ಶಿಯಾಗಿ ಆಯ್ಕೆಯಾದರು, ಇವರೊಟ್ಟಿಗೆ ಶ್ರೀ ಬಸವರಾಜಪ್ಪ ಕಂದಗಲ್ ಅವರು ಗೌರವಾಧ್ಯಕ್ಷರಾಗಿ ಮತ್ತು ಶ್ರೀ ಭಗವಂತ ರಾವ್ ರಾಜ್ಯ ಸಮಿತಿಯ ಸದಸ್ಯರಾಗಿ ಆಯ್ಕೆಯಾದರು. ಸಲಹಾ ಸಮಿತಿಯ ಸದಸ್ಯರಾಗಿ ಶ್ರೀ ಎಂ ಎನ್ ಸುಂದರರಾಜ್ ಶ್ರೀಮತಿ ರೇಣುಕಾ ಗಂಗಾಧರ್ ಆಯ್ಕೆಯಾದರು. ಹೊಸನಗರ ತಾಲೂಕು ಅಧ್ಯಕ್ಷರಾಗಿ ಶ್ರೀ ವಿಶ್ವೇಶ್ವರ ಮತ್ತು ಶಿಕಾರಿಪುರ ತಾಲೂಕ ಅಧ್ಯಕ್ಷರಾಗಿ ಸುಭಾಷ್ ಚಂದ್ರ ಸ್ಥಾನಕ್ ಇವರು ಸಲಹಾ ಸಮಿತಿಯ ಸದಸ್ಯರಾಗಿ ಮುಂದುವರೆಯಲಿದ್ದಾರೆ.
ನೂತನ ಅಧ್ಯಕ್ಷರಾದ ಶ್ರೀ ಮನೋಹರ್ ರವರು ಮಾತನಾಡಿ ಮುಂದಿನ ದಿನಗಳಲ್ಲಿ ಗಾಂಧೀಜಿಯವರ ಆದರ್ಶ ಮತ್ತು ತತ್ವಗಳನ್ನು ಶಾಲಾ ಮಕ್ಕಳಲ್ಲಿ ಪಸರಿಸಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಗೌರವಾಧ್ಯಕ್ಷ ಶ್ರೀ ಬಸವರಾಜಪ್ಪನವರು ಮಾತನಾಡಿ, ತಮ್ಮ ಅಧಿಕಾರಾವಧಿಯಲ್ಲಿ ರಾಜ್ಯಮಟ್ಟದ ಮತ್ತು ರಾಷ್ಟ್ರಮಟ್ಟದ ಎರಡು ಸರ್ವೋದಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿದ್ದನ್ನು ಸ್ಮರಿಸಿದರು. ಅಲ್ಲದೆ ಹೊಸ ಸಮಿತಿಗೆ ತಮ್ಮ ಸಂಪೂರ್ಣ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದರು.

DC Shivamogga ಸೆ.12. ಶಿವಮೊಗ್ಗದಲ್ಲಿ ಬೆಂಗಳೂರು ಗ್ರಾಮಾಂತರ ವಿಭಾಗಮಟ್ಟದ ದಸರಾ ಕ್ರೀಡಾಕೂಟದ ಉದ್ಘಾಟನೆ

0

DC Shivamogga ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಸೆ. 12 ಮತ್ತು 13 ರಂದು ಬೆಂಗಳೂರು ಗ್ರಾಮಾಂತರ ವಿಭಾಗ ಮಟ್ಟದ ಜುಡೋ, ಯೋಗ, ಬ್ಯಾಡ್ಮಿಂಟನ್, ಈಜು, ಟೆನ್ನಸ್ ಮತ್ತು ಹಾಕಿ ದಸರಾ ಕ್ರೀಡಾಕೂಟ ಆಯೋಜಿಸಲಾಗಿದ್ದು, ಸೆ. 12 ರಂದು ಬೆಳಗ್ಗೆ 10.00ಕ್ಕೆ ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಉದ್ಘಾಟನೆ ಸಮಾರಂಭ ಏರ್ಪಡಿಸಲಾಗಿದೆ.

ಈ ಕಾರ್ಯಕ್ರಮವನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಮೊಗ್ಗ ನಗರ ಕ್ಷೇತ್ರ ಶಾಸಕ ಎಸ್.ಎನ್. ಚನ್ನಬಸಪ್ಪ ವಹಿಸಲಿದ್ದಾರೆ. ಭದ್ರಾವತಿ ಕ್ಷೇತ್ರದ ಶಾಸಕರು ಮತ್ತು ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಕೆ.ಸಂಗಮೇಶ್ವರ ಹಾಗೂ ಸಾಗರ ಕ್ಷೇತ್ರದ ಶಾಸಕರು ಮತ್ತು ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕೆ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಇವರುಗಳು ಉಪಸ್ಥಿತರಿರಲಿದ್ದಾರೆ.

DC Shivamogga ಕಾರ್ಯಕ್ರಮದಲ್ಲಿ ಜಿಲ್ಲೆಯ ಸಂಸದರು, ವಿಧಾನಸಭೆ ಮತ್ತು ವಿಧಾನ ಪರಿಷತ್ ಶಾಸಕರುಗಳು, ವಿವಿಧ ಅಭಿವೃದ್ಧಿ ನಿಗಮ/ಮಂಡಳಿ/ಪ್ರಾಧಿಕಾರಗಳ ಅಧ್ಯಕ್ಷರುಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತರು ಮತ್ತು ಪ್ರಧಾನ ಕಾರ್ಯದರ್ಶಿಗಳು ವಿಶೇಷ ಆಹ್ವಾನಿತರು. ಜಿಲ್ಲಾಧಿಕಾರಿಗಳು, ಜಿ.ಪಂ.ಸಿಇಓ, ಪೊಲೀಸ್ ಅಧೀಕ್ಷಕರು, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಉಪಸ್ಥಿತರಿರಲಿದ್ದಾರೆ.

Rotary Club Shimoga ಚಾಲಕರು,ಅನೇಕ ಕುಟುಂಬಗಳ ಜೀವವನ್ನು ಸುರಕ್ಷಿತ ಸಾಗಿಸುತ್ತಾರೆ- ಕೆ.ಎಸ್.ವಿಶ್ವನಾಥ್ ನಾಯಕ್

0

Rotary Club Shimoga ದಿನಾಂಕ 09.09.2025, ಬೆಳಿಗ್ಗೆ 9:09 ನಿಮಿಷಕ್ಕೆ ರೋಟರಿ ಕ್ಲಬ್ ಶಿವಮೊಗ್ಗ ರಿವರ್‌ಸೈಡ್ ವತಿಯಿಂದ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮವನ್ನು ವಿನೋಬನಗರ ಪೊಲೀಸ್ ಚೌಕಿ ಆಟೋ ನಿಲ್ದಾಣದಲ್ಲಿ ಹಮ್ಮಿಕೊಳ್ಳಲಾಯಿತು. ರೋಟರಿ ಡಿಸ್ಟ್ರಿಕ್ಟ್ ಪಬ್ಲಿಕ್ ಇಮೇಜ್ ಚೇರ್‍ಮನ್ ಡಾ. ಸೌಮ್ಯ ಮಣಿ ರವರ ಆಶಯದಂತೆ ನಗರದಲ್ಲಿನ ಪ್ರಮುಖ ವಾಹನ ದಟ್ಟಣೆ ಇರುವ ಪೋಲಿಸ್ ಚೌಕಿ ಸರ್ಕಲ್‌ನಲ್ಲಿ ರಸ್ತೆ ಸುರಕ್ಷತಾ ಸ್ಟಿಕ್ಕರ್ ಬಿಡುಗಡೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಆಟೋ ಹಾಗೂ ಬಸ್ ಚಾಲಕರಿಗೆ ಟ್ರಾಫಿಕ್ ನಿಯಮ ಪಾಲನೆಯ ಅವಶ್ಯಕತೆ, ಜವಾಬ್ದಾರಿಯುತ ಚಾಲನೆ ಹಾಗೂ ರಸ್ತೆ ಸುರಕ್ಷತೆಯ ಪ್ರಾಮುಖ್ಯತೆ ಕುರಿತು ಅರಿವು ಮೂಡಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಅಧ್ಯಕ್ಷರಾದ ಕೆ.ಎಸ್.ವಿಶ್ವನಾಥ ನಾಯಕ ಅವರು,
“ಚಾಲಕನು ಕೇವಲ ವಾಹನವನ್ನು ಮಾತ್ರ ನಡೆಸುವುದಿಲ್ಲ, ಅವರು ಅನೇಕ ಕುಟುಂಬಗಳ ಜೀವವನ್ನು ಸುರಕ್ಷಿತವಾಗಿ ಸಾಗಿಸುತ್ತಾರೆ. ರಸ್ತೆ ನಿಯಮ ಪಾಲನೆ ಮಾಡುವ ಪ್ರತಿಯೊಬ್ಬ ಚಾಲಕ ಸಮಾಜದ ಜೀವ ರಕ್ಷಕ. ಇಂತಹ ಚಾಲಕರಿಗೆ ಸಮಾಜದಿಂದ ಗೌರವ ದೊರೆಯುವುದು ಅವರ ಹಕ್ಕು” ಎಂದು ಅಭಿಪ್ರಾಯಪಟ್ಟರು.

ಸಹಾಯಕ ಗವರ್ನರ್ ಕೆ.ಪಿ. ಶೆಟ್ಟಿ ಅವರು,
“ಚಾಲಕನು ಸಮಾಜದ ನಾಡಿಯಂತೆ. ಅವರ ನಿಷ್ಠಾವಂತ ಸೇವೆಯಿಂದಲೇ ಸಾಮಾನ್ಯ ಜನರ ಬದುಕು ಚಲಿಸುತ್ತದೆ. ಪ್ರತಿಯೊಬ್ಬ ಚಾಲಕ ತನ್ನ ಕೆಲಸವನ್ನು ಸೇವೆ ಎಂದು ಕಂಡುಕೊಂಡಾಗ ಅವರು ಸಮಾಜದ ಶ್ರೇಷ್ಠ ದೀಪಸ್ತಂಭರಾಗುತ್ತಾರೆ” ಎಂದು ಪ್ರೇರಣಾದಾಯಕ ಸಂದೇಶ ನೀಡಿದರು.

ವಿನೋಬನಗರ ಆಟೋ ಚಾಲಕರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸಹ ಹಾಜರಿದ್ದು, “ನಮ್ಮ ಸೇವೆಯನ್ನು ಗುರುತಿಸಿ ಗೌರವಿಸಿರುವ ರೋಟರಿ ರಿವರ್‌ಸೈಡ್ ಕ್ಲಬ್‌ಗೆ ನಾವು ಚಿರಕೃತಜ್ಞರಾಗಿದ್ದೇವೆ” ಎಂದು ಹೇಳಿದರು.

Rotary Club Shimoga ಅನೇಕ ಆಟೋ ಚಾಲಕರ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, “ಚಾಲಕನು ಸಮಾಜದ ಜೀವನಾಡಿ” ಎಂಬ ಸಂದೇಶ ಎಲ್ಲರ ಮನದಲ್ಲಿ ನಾಟುವಂತಾಯಿತು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ರಿವರ್ ಸೈಡ್ ನ ಅಧ್ಯಕ್ಷರು ಮತ್ತು ಕಾರ್ಯದರ್ಶಿ, ಸದಸ್ಯರುಗಳಾದ ಎಂ.ಪಿ. ಆನಂದ್ ಮೂರ್ತಿ, ಸಿ.ಎನ್ .ಮಲ್ಲೇಶ್ , ದೇವೇಂದ್ರಪ್ಪ, ಎಸ್. ಪಿ. ಶಂಕರ್, ಮರಿಸ್ವಾಮಿ, ಸುಂದರ್, ಎಂ. ಆರ್. ಬಸವರಾಜ್, ರವಿ ಎಂ.ಎಂ. , ಸೋಲಾರ್ ಮಂಜುನಾಥ್, ರಾಕೇಶ್, ಜೈಪ್ರಕಾಶ್, ಶಾಮ್ ಹಾಗೂ ಇತರ ಸದಸ್ಯರುಗಳು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಟ್ಟಿರುತ್ತಾರೆ.