Wednesday, February 18, 2026
Wednesday, February 18, 2026
Home Blog Page 171

Brahma Kumaris University ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯ ನೀಡಿದ ಶಿಕ್ಷಕರು ಸದಾ ಸ್ಮರಣೀಯರು- ಬ್ರಹ್ಮಕುಮಾರಿ ಸ್ವಾತಿ ಅಕ್ಕ

0

Brahma Kumaris University ಶಿಕ್ಷಕರು ದಿನವೂ ತಮ್ಮ ಜ್ಞಾನದಿಂದ ಜೀವನಕ್ಕೆ ದಿಕ್ಕನ್ನು ನೀಡುವ ಮಹಾನ್ ವ್ಯಕ್ತಿಗಳಾಗಿದ್ದಾರೆ. ಸಮಾಜದಲ್ಲಿ ಶಿಕ್ಷಕರ ಸೇವೆ ಅಮೂಲ್ಯ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ನವುಲೆ ಶಾಖೆಯ ಸಂಚಾಲಕರಾದ ಬ್ರಹ್ಮಕುಮಾರಿ ಸ್ವಾತಿ ಅಕ್ಕನವರು ನುಡಿದರು.

ಅವರು ಸಮಾಜದಲ್ಲಿ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಸೇವೆ ಸಲ್ಲಿಸಿದ ಎಲ್ಲಾ ಗಣ್ಯ ಮಹಾನ್ ಶಿಕ್ಷಕರಿಗೆ ಸನ್ಮಾನಿಸಿ ಮಾತನಾಡಿದರು.

ತಮ್ಮ ಚಿಂತನೆ ಮತ್ತು ಮೌಲ್ಯಗಳ ಮೂಲಕ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯವನ್ನು ನೀಡಿದ ಶಿಕ್ಷಕರು ಸದಾ ಸ್ಮರಣೀಯರು
ಸಹಜ ಜೀವನ ಮತ್ತು ಉನ್ನತ ಚಿಂತನೆಯ ತತ್ವವನ್ನು ಅಳವಡಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ಜೀವನದ ಸರಿಯಾದ ಮಾರ್ಗವನ್ನು ತೋರಿಸಿರುವ ಮತ್ತು ಜ್ಞಾನದೀಪವಾಗಿರುವ ಮೂಲಕ ಅವರ ಮಾರ್ಗವನ್ನು ಬೆಳೆಸುತ್ತಿರುವ ಹಾಗೂ ಪ್ರೀತಿ ಶಾಂತಿ ಸಹನಾಶೀಲತೆ ಪವಿತ್ರತೆ ಮತ್ತು ತ್ಯಾಗದಂತಹ ದೈವಿ ಗುಣಗಳಿಂದ ಜೀವನ ಪಾಠ ಶಾಲೆಯನ್ನು ಸುಗಂಧ ಭರಿತ ಮಾಡಿರುವ ಶಿಕ್ಷಕರ ಸೇವೆ ಅನನ್ಯ ಎಂದು ನುಡಿದರು.

Brahma Kumaris University ಇದೇ ಸಂದರ್ಭದಲ್ಲಿ ವಿವಿಧಡೆ ಸೇವೆ ಸಲ್ಲಿಸುತ್ತಿರುವ ಹಾಗೂ ನಿವೃತ್ತರಾಗಿರುವ 25ಕ್ಕೂ ಹೆಚ್ಚು ಜನ ಶಿಕ್ಷಕರಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು. ಮೂರ್ತಿ ಆರ್ಟ್ಸ್ ನ ಮಾಲೀಕರಾದ ರವಿ ಹಾಗೂ ಪೂಜ ಹ್ಯಾಂಡ್ ಲೂಮ್ಸ್ ನ ಮಾಲೀಕರಾದ ಅಶೋಕ್ ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Karnataka Ratna ಚಲನಚಿತ್ರ ರತ್ನಗಳಾದ ವಿಷ್ಣುವರ್ಧನ್ & ಬಿ.ಸರೋಜಾದೇವಿ‌ ಅವರಿಗೆಈಗ “ಕರ್ನಾಟಕ ರತ್ನ” ಪ್ರಶಸ್ತಿ

0

Karnataka Ratna ರಾಜ್ಯ ಸರ್ಕಾರ ನೀಡುವ ಅತ್ಯುನ್ನತ ಪ್ರಶಸ್ತಿಯಾದ ‘ಕರ್ನಾಟಕ ರತ್ನ’ ಇದೀಗ ಕನ್ನಡ ಚಿತ್ರರಂಗದ ಹಿರಿಯ ಕಲಾವಿದರಿಗೆ ಒಲಿದು ಬಂದಿದೆ.

‘ಸಾಹಸಸಿಂಹ’ ಡಾ. ವಿಷ್ಣುವರ್ಧನ್ ಮತ್ತು ಹಿರಿಯ ನಟಿ ಬಿ. ಸರೋಜಾದೇವಿಯವರು ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಸಚಿವ ಸಂಪುಟ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಅವರು ಈ ವಿಷಯವನ್ನು ಮಾಧ್ಯಮಗಳೆದುರು ಪ್ರಸ್ತಾಪಿಸಿದರು.

Karnataka Ratna 220ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ, ಇಡೀ ರಾಜ್ಯದ ಮನೆ ಮನ ತಲುಪಿರುವಂತಹ ದಿಗ್ಗಜ ನಟ ವಿಷ್ಣುವರ್ಧನ್‌ಗೆ, ಕರ್ನಾಟಕದ ಶ್ರೇಷ್ಠ ಪುರಸ್ಕಾರ ನೀಡಬೇಕು ಎನ್ನುವುದು ಅವರ ಕುಟುಂಬ ವರ್ಗ ಸೇರಿದಂತೆ ಚಿತ್ರರಂಗದ ಅನೇಕ ಕಲಾವಿದರು, ಅಭಿಮಾನಿಗಳ ಬಯಕೆಯಾಗಿತ್ತು.

ಅದರಂತೆಯೇ ರಾಜ್ಯ ಸರ್ಕಾರ ಎಲ್ಲರ ಮನವಿಗೆ ಸ್ಪಂದಿಸಿ ಪ್ರಶಸ್ತಿ ಘೋಷಿಸಿದೆ ಎಂದರು.

Kateel Ashok Pai Memorial College ಭಾರತದ ಜನಸಂಖ್ಯೆಯಲ್ಲಿ ಶೇ.44 ಜನ ಆತ್ಮಹತ್ಯೆಗೆ ಬಲಿಯಾಗುತ್ತಿದ್ದಾರೆ- ಕು.ಶಿಲ್ಪಾ

0

Kateel Ashok Pai Memorial College “ಆತ್ಮಹತ್ಯೆ: ಸಮಾಜದ ಕಳವಳದ ನೆರಳು”
ಎಲ್ಲೆಡೆ  ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿರುವ ಕಾರಣದಿಂದಾಗಿ ಆತ್ಮಹತ್ಯೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಹಲವಾರು ಕಾರ್ಯಕ್ರಮಗಳು ಸಮಾಜದಲ್ಲಿ ನಡೆಯುತ್ತಿವೆ.

ಸೆಪ್ಟೆಂಬರ್ 10 ರಂದು ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನದ ಅಂಗವಾಗಿ ಶಿವಮೊಗ್ಗ ಜಿಲ್ಲೆಯ ಸಾಗರ ರಸ್ತೆಯಲ್ಲಿರುವ ಮಾನಸ ಟ್ರಸ್ಟ್ನ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಮನೋವಿಜ್ಞಾನ ವಿಭಾಗದಿಂದ ಹಲವಾರು ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.

ಇದರ ಅಂಗವಾಗಿ ಕು. ಶಿಲ್ಪಾ, ಕ್ಲಿನಿಕಲ್ ಸೈಕಾಲಜಿಸ್ಟ್, ಬೆಂಗಳೂರು ಇವರು ಆನ್ಲೈನ್ ಮೂಲಕ ಆತ್ಮಹತ್ಯೆಗೆ ಕಾರಣ ಮತ್ತು ಅದನ್ನು ತಡೆಗಟ್ಟುವ ಕ್ರಮದ ಬಗ್ಗೆ ಉಪನ್ಯಾಸ ನೀಡಿದರು.

ಅವರು ನೀಡಿದ ಮಾಹಿತಿಯ ಪ್ರಕಾರ ಪ್ರತಿ ೪೩ ಸೆಕೆಂಡಿಗೆ ಒಬ್ಬರಂತೆ ವಿಶ್ವದಲ್ಲಿ ದಿನಕ್ಕೆ ೭,೨೦,೦೦೦ ಜನರು ಬಲಿಯಾಗುತ್ತಿದ್ದಾರೆ.ಅದರಲ್ಲಿ ಮುಖ್ಯವಾಗಿ ತಿಳಿದುಬಂದ ಸಂಗತಿ ಏನೆಂದರೆ ೧೫ ರಿಂದ ೨೯ ವರ್ಷದೊಳಗಿನ ಯುವಪೀಳಿಗೆ ಇದರಲ್ಲಿ ಹೆಚ್ಚಾಗಿದ್ದಾರೆ.

ಭಾರತದಲ್ಲಿ ಒಟ್ಟು ಜನಸಂಖ್ಯೆಯ ಶೇಕಡಾ ೪೪% ಜನ ಆತ್ಮಹತ್ಯೆಗೆ ಬಲಿಯಾಗುತ್ತಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ಎರಡು ವರ್ಷದಲ್ಲಿ ಅಂದರೆ ೨೦೨೩ರಲ್ಲಿ ೧೦,೩೪೩ ಹಾಗೂ ೨೦೨೪ರಲ್ಲಿ ೧೧,೩೩೪ ಜನ ಬಲಿಯಾಗಿದ್ದಾರೆ. ಅದರಲ್ಲೂ ಹಾಸ್ಟೆಲ್ ಹಾಗೂ ಪಿಜಿಯಲ್ಲಿ ಇರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ, ಹೀಗೆ ೨೧ ವರ್ಷದ ಅನನ್ಯ ದ್ವಿತೀಯ ಪದವಿ ವಿದ್ಯಾರ್ಥಿನಿ ಹಾಗೂ ೨೨ ವರ್ಷದ ರೀಟಾ (ಹೆಸರು ಬದಲಿಸಿದೆ) ಎಂಬ ವಿದ್ಯಾರ್ಥಿನಿಯರೂ ಆತ್ಮಹತ್ಯೆಗೆ ಯತ್ನಿಸಿದ್ದು ಅದಕ್ಕೆ ಕಾರಣ “ಮಾನಸಿಕ ಒತ್ತಡ” ಎಂದು ತನಿಖೆ ವೇಳೆ ತಿಳಿದು ಬಂದಿದೆ. ಅದಲ್ಲದೆ ನಿರುದ್ಯೋಗ, ಲವ್ ಫೈಲ್ಯೂರು, ಮಾನಸಿಕ ಒತ್ತಡ, ಕುಟುಂಬದಲ್ಲಿ ಕಲಹ, ಮುಂತಾದವುಗಳಿಂದಲೂ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ.

Kateel Ashok Pai Memorial College ಈ ರೀತಿಯ ಆತ್ಮಹತ್ಯೆಗಳನ್ನು ತಡೆಗಟ್ಟಲು ಕುಟುಂಬ ಹಾಗೂ ಸ್ನೇಹಿತರು ಕ್ರಮಕೈಗೊಳ್ಳಬೇಕು ಎಂದಿದ್ದಾರೆ. ಮುಖ್ಯವಾಗಿ ಮನೋವಿಜ್ಞಾನಿಗಳು ಅಂತಹವರನ್ನು ವೀಕ್ಷಿಸಿ ಅವರಿಗೆ ಉತ್ತಮ ಆಪ್ತಸಮಾಲೋಚನೆ ನೀಡಬೇಕೆಂದು ತಿಳಿಸಿದ್ದಾರೆ.

ಈ ಕಾರ್ಯಕ್ರಮ ದಲ್ಲಿ ಒಟ್ಟು ೧೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಶಿಕ್ಷಕರೂ ಹಾಗೂ ವೃತ್ತಿಪರರು ಪಾಲ್ಗೊಂಡಿದ್ದರು.

ಆತ್ಮಹತ್ಯೆಯ ಬಗ್ಗೆ ಹಮ್ಮಿಕೊಂಡಿದ್ದ ಮುಂಜಾಗ್ರತ ಕಾರ್ಯಕ್ರಮವು ಸಾಕಷ್ಟು ಪ್ರಮಾಣದಲ್ಲಿ ಒಳ್ಳೆಯ ಸಂದೇಶ ನೀಡಿದ್ದು ಈ ವಿಷಯದ ಬಗ್ಗೆ ಎಲ್ಲರೂ ಗಮನಹರಿಸಬೇಕಾಗಿದೆ.
ಆತ್ಮಹತ್ಯೆ ತಡೆಗಟ್ಟಲು ಸಮಾಜದಲ್ಲಿ ಮಾನಸಿಕ ಆರೋಗ್ಯದ ಕುರಿತು ಅರಿವು ಮೂಡಿಸಿ ಅದು ದುರ್ಬಲತೆ ಅಲ್ಲ ಎಂಬ ಸಂದೇಶ ನೀಡಬೇಕು ಅಲ್ಲದೆ, ತೊಂದರೆಗೀಡಾದವರಿಗೆ ಕೌನ್ಸೆಲಿಂಗ್ ಹಾಗೂ ವೈದ್ಯರ ನೆರವು ದೊರಕಿಸುವ ಪ್ರಯತ್ನ ಮಾಡಲು ಯತ್ನಿಸಬೇಕು. ಅವರಿಗೆ ಒಂಟಿತನ ಉಂಟಾಗದಂತೆ ನೋಡಿಕೊಳ್ಳಬೇಕು, ಅಷ್ಟೇ ಅಲ್ಲದೆ ಕುಟುಂಬ ಹಾಗೂ ಸ್ನೇಹಿತರು ಭಾವನಾತ್ಮಕ ಬೆಂಬಲ ನೀಡಿ ಮಾದಕ ವಸ್ತುಗಳಾದ ಮದ್ಯಪಾನ, ಧೂಮಪಾನ ಹಾಗೂ ಇತರೆ ಮಾದಕ ವಸ್ತುಗಳಿಂದ  ದೂರ ಇರುವಂತೆ ನೋಡಿಕೊಳ್ಳಬೇಕು, ಆತ್ಮಹತ್ಯೆಯ ಬಗ್ಗೆ ಯೋಚಿಸಲು ಅವಕಾಶ ಇಲ್ಲದಂತೆ ಸಮಾಜ ಪರಸ್ಪರ ನೆರವಾಗುತ್ತಾ, ಅದರೊಂದಿಗೆ ಸರ್ಕಾರ ಆತ್ಮಹತ್ಯೆ ತಡೆಗಟ್ಟುವ ಕಾರ್ಯಕ್ರಮ ಹಾಗೂ ಇದರ ಬಗ್ಗೆ ಸೂಕ್ತ ಕ್ರಮಗಳನ್ನು ಹಮ್ಮಿಕೊಳ್ಳಬೇಕು, ನಿರುದ್ಯೋಗ ಸಮಸ್ಯೆಗೆ ಪರಿಹಾರ ಸೂಚಿಸಬೇಕು ಮತ್ತು ಎಲ್ಲರಿಗೂ ಮನೋವೈದ್ಯಕೀಯ ನೆರವು ದೊರಕುವಂತೆ ಮಾಡಬೇಕಾಗಿದೆ.

ಆತ್ಮಹತ್ಯೆ ಅನಿವಾರ್ಯವಲ್ಲ – ತಡೆಗಟ್ಟಬಹುದಾದ ಮಾನವೀಯ ಸಮಸ್ಯೆ. ಪ್ರತಿಯೊಬ್ಬರೂ ಲಕ್ಷಣಗಳನ್ನು ಗಮನಿಸಿ, ಕೇಳಿ, ಜೊತೆಗಿದ್ದು ಬೆಂಬಲಿಸಿದರೆ ಒಂದು ಜೀವವನ್ನು ಉಳಿಸಬಹುದು. ಮನೋವೈದ್ಯರಾಗಿ ಇರಬೇಕಿಲ್ಲ – ಮಾನವನಾಗಿ, ಕರುಣೆಯಿಂದ ವರ್ತಿಸಿದರೆ ಸಾಕು. ಆತ್ಮಹತ್ಯೆ ವಿರೋಧದ ಹೋರಾಟವು ಕೇವಲ ವೈದ್ಯಕೀಯ ಅಥವಾ ಸರ್ಕಾರಿ ಕೆಲಸವಲ್ಲ, ಇದು ನಮ್ಮೆಲ್ಲರ ಒಟ್ಟುಗೂಡಿದ ಜವಾಬ್ದಾರಿ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ‘ವಾಲ್ ಆಫ್ ಹೋಪ್’ ಎಂಬ ಭಿತ್ತಿಪತ್ರ ರಚನೆ, ಆರ್ಟ್ ಥೆರಪಿ ಕಾರ್ಯಾಗಾರ ಹಾಗೂ ‘ಆತ್ನಹತ್ಯೆ ಏನು, ಯಾಕೆ’ ಎಂಬ ರೂಪಕವನ್ನು ಪ್ರಸ್ತುತಪಡಿಸಿದರು.

Chamber Of Commerce Shivamogga ರಸಪ್ರಶ್ನೆ & ಭಾಷಣ ಸ್ಪರ್ಧೆಗಳಿಂದ ವಿದ್ಯಾರ್ಥಿಗಳಲ್ಲಿ ಕಲಿಕಾ ಸಾಮರ್ಥ್ಯ ವೃದ್ಧಿಸುತ್ತದೆ- ಬಿ.ಗೋಪಿನಾಥ್

0

Chamber Of Commerce Shivamogga ರಸಪ್ರಶ್ನೆ ಮತ್ತು ಭಾಷಣ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಕಲಿಯುವ ಸಾಮರ್ಥ್ಯ ವೃದ್ಧಿಸುತ್ತದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಹೇಳಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಶಾಂತಲಾ ಸ್ಪೇರೋ ಕಾಸ್ಟ್ ಸಭಾಂಗಣದಲ್ಲಿ ಸರ್ ಎಂ ವಿಶ್ವೇಶ್ವರಯ್ಯ ಅವರ ಜನ್ಮದಿನಾಚರಣೆ ಮತ್ತು ಇಂಜಿನಿಯರ್ಸ್ ಡೇ ಪ್ರಯುಕ್ತ ಏರ್ಪಡಿಸಿದ್ದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಮತ್ತು ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಸಪ್ರಶ್ನೆ ಮತ್ತು ಭಾಷಣ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಅರಿವಿನ ಕೌಶಲ್ಯಗಳನ್ನು ಹೆಚ್ಚಿಸುವುದು, ಜ್ಞಾನ ವೃದ್ಧಿಸುವುದು, ವಿಮರ್ಶಾತ್ಮಕ ಚಿಂತನೆ ಮತ್ತು ಆತ್ಮವಿಶ್ವಾಸವನ್ನು ಬೆಳೆಸುವುದು ಮತ್ತು ಕಲಿಕೆಯಲ್ಲಿ ತೊಡಗಿಸಿಕೊಳ್ಳುವಿಕೆ ಹೆಚ್ಚಿಸುವುದಕ್ಕೆ ನೆರವಾಗುತ್ತದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳನ್ನು ಅಧ್ಯಯನ ಮಾಡಲು ಮತ್ತು ಭಾಗವಹಿಸಲು ಪ್ರೇರೇಪಿಸುವ ಸಕಾರಾತ್ಮಕ ಕಲಿಕಾ ಶೈಲಿಯನ್ನು ಒದಗಿಸುತ್ತವೆ.
ಭಾಷಣ ಕಾರ್ಯಕ್ರಮಗಳು ವಿದ್ಯಾರ್ಥಿಗಳು ತಮ್ಮ ಸಾರ್ವಜನಿಕ ಭಾಷಣ ಮತ್ತು ಸಂವಹನ ಸಾಮರ್ಥ್ಯಗಳನ್ನು ಅಭ್ಯಾಸ ಮಾಡಲು ಮತ್ತು ಪರಿಷ್ಕರಿಸಲು ರಚನಾತ್ಮಕ ವೇದಿಕೆಗಳನ್ನು ನೀಡುತ್ತವೆ. ಇದು ಆತ್ಮವಿಶ್ವಾಸ ಮತ್ತು ಆತ್ಮಸ್ಥೈರ್ಯ ಬೆಳೆಸುತ್ತದೆ ಎಂದರು.

ಡಿವಿಎಸ್ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಕೆ.ಭಾಸ್ಕರ್, ಉಪನ್ಯಾಸಕರಾದ ಸಿ.ಎಸ್ ರಾಜೇಶ್, ಶ್ರೀಧರ್ ಅವರು ರಸಪ್ರಶ್ನೆ ಮತ್ತು ಭಾಷಣ ಸ್ಪರ್ಧೆ ನಡೆಸಿಕೊಟ್ಟರು.
ಡಿವಿಎಸ್ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಹೆಚ್ ಸಿ ಉಮೇಶ್ ಅವರು ರಸಪ್ರಶ್ನೆ ಮತ್ತು ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಮೊದಲ ಮೂರು ವಿದ್ಯಾರ್ಥಿಗಳ ಹೆಸರುಗಳನ್ನು ಘೋಷಿಸಿದರು.

ರಸಪ್ರಶ್ನೆ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಾದ ಚೆತುಸ್ಕಿ ಆತ್ರೇಯ ಪ್ರಥಮ ಸ್ಥಾನ ಅಂಶುಮಂತ್ ಮಂಜು ಪಾಟೀಲ್ ದ್ವಿತೀಯ ಸ್ಥಾನ, ದೀಕ್ಷಿತ್ ಕಾರ್ತಿಕ್ ತೃತೀಯ ಸ್ಥಾನ ವಿಜೇತರಾದರು.

Chamber Of Commerce Shivamogga ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯರ ಬಗ್ಗೆ ನಡೆದ ಭಾಷಣ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಾದ ಶ್ರದ್ದಾ ಪ್ರಥಮ ಸ್ಥಾನ, ಶಾರ್ವರಿ ದ್ವಿತೀಯ ಸ್ಥಾನ, ಪ್ರಜ್ವಲ್ ಡಿ ತೃತೀಯ ಸ್ಥಾನ ಪಡೆದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯ್ ಕುಮಾರ್, ಕಾರ್ಯದರ್ಶಿ ಎ ಎಂ ಸುರೇಶ್, ಖಜಾಂಚಿ ಆರ್ ಮನೋಹರ, ನಿರ್ದೇಶಕರಾದ ಎಸ್. ಎಸ್.ಉದಯ ಕುಮಾರ್, ಗಣೇಶ್ ಎಂ ಅಂಗಡಿ, ಬಿ.ಸುರೇಶ್ ಕುಮಾರ್, ವಿದ್ಯಾರ್ಥಿಗಳು, ಪೋಷಕರು ಶಿಕ್ಷಕರು ಭಾಗವಹಿಸಿದ್ದರು.

Kote Sri Marikamba Temple 78 ನೇ ವಿದ್ಯಾಗಣಪತಿ ಮಹೋತ್ಸವದಲ್ಲಿ ಯಶಸ್ವಿಯಾಗಿ ನಡೆದ ನಿವೇದಿತಾ ವಿಕಾಸ್ ಅವರ ಗಾಯನ ಕಾರ್ಯಕ್ರಮ

0

Kote Sri Marikamba Temple ಶಿವಮೊಗ್ಗ ನಗರದ ಕೋಟೆ ಶ್ರೀ ಮಾರಿಕಾಂಬ ದೇವಸ್ಥಾನದ ಸಭಾಭವನದಲ್ಲಿ ಶ್ರೀ ವಿದ್ಯಾಗಣಪತಿ ಸೇವಾ ಸಂಘದಿಂದ ಆಯೋಜಿಸಿದ್ದ 78ನೇ ವಾರ್ಷಿಕ ಮಹೋತ್ಸವ ಕಾರ್ಯಕ್ರಮದಲ್ಲಿ ಉಸ್ತಾದ್ ಹುಮಾಯೂನ್ ಹರ್ಲಾಪುರ್ ಅವರ ಶಿಷ್ಯರಿಂದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

78ನೇ ವಾರ್ಷಿಕ ಮಹೋತ್ಸವ ಪ್ರಯುಕ್ತ ವಿದ್ಯಾ ಗಣಪತಿ ವೇದಿಕೆಯಲ್ಲಿ ಪಂಡಿತ್ ಕುಮಾರ್ ಅವರ ಶಿಷ್ಯೆ ನಿವೇದಿತಾ ವಿಕಾಸ್ ಅವರಿಂದ ಒಂದೂವರೆ ಗಂಟೆಗೂ ಹೆಚ್ಚು ಸಮಯ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆದು ಅಪಾರ ಜನ ಮೆಚ್ಚುಗೆಗೆ ಪಾತ್ರವಾಯಿತು.

Kote Sri Marikamba Temple ಕಾರ್ಯಕ್ರಮದಲ್ಲಿ ತಬಲವಾದಕರಾಗಿ ವಿನಾಯಕ್ ಸಾಗರ್, ತಂಬೂರಿನಲ್ಲಿ ದಿಲ್ ಶಾದ್ ಹರ್ಲಾಪುರ್ ಸಾಥ್ ನೀಡಿದರು. ತುಂಬಾ ವಿಶೇಷವಾದ ಕಾರ್ಯಕ್ರಮದಲ್ಲಿ ಸಮಿತಿ ಉಪಾಧ್ಯಕ್ಷ ಶಂಕರ್ ನಾರಾಯಣ ಶಾಸ್ತ್ರಿ ಎಚ್.ಆರ್. ಕಲಾವಿದರಿಗೆ ಸನ್ಮಾನ ಮಾಡಿ ಗೌರವ ಸಮರ್ಪಣೆ ಮಾಡಿದರು.

Department of Social Welfare ಪ್ರಜಾಪ್ರಭುತ್ವ ದಿನದ ಅಂಗವಾಗಿ ಸೆ.15. ರಂದು ಸೈಕಲ್ ಜಾಥಾ

0

Department of Social Welfare ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಪ್ರಜಾಪ್ರಭುತ್ವದ ಬಗ್ಗೆ ನಾಗರೀಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ನನ್ನ ಮತ ನನ್ನ ಹಕ್ಕು’ ಎಂಬ ಘೋಷವಾಖ್ಯದಡಿ ಸೆ.15 ರಂದು ಬೆಳಗ್ಗೆ 07-30 ಗಂಟೆಗೆ ಶಿವಮೊಗ್ಗ ನಗರದ ಅಲ್ಲಮ ಪ್ರಭು ಉದ್ಯಾನ (ಫ್ರೀಡಂ ಪಾರ್ಕ್) ದಿಂದ ಪ್ರಾರಂಭಿಸಿ ಡಾ. ಬಿ.ಆರ್. ಅಂಬೇಡ್ಕರ್ ಭವನದವರೆಗೆ ಸೈಕಲ್ ಜಾಥ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

Department of Social Welfare ದಿನಾಚರಣೆಯ ವೇದಿಕೆ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಬೆಳಗ್ಗೆ 10.30 ಕ್ಕೆ ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿ ಏರ್ಪಡಿಸಲಾಗಿದ್ದು, ಜಿಲ್ಲೆಯ ಎಲ್ಲಾ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಎರಡೂ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳುಸುವಂತೆ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟನೆ ತಿಳಿಸಿದೆ.

Shimoga Tourism ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ‌ನಡೆಸುವ ಸ್ಪರ್ಧೆಗಳ ಪ್ರವೇಶಕ್ಕೆ ಅಂತಿಮ ದಿನಾಂಕ ವಿಸ್ತರಣೆ

0

Shimoga Tourism ಶಿವಮೊಗ್ಗ ಜಿಲ್ಲೆಯ ಪ್ರವಾಸೋದ್ಯಮವನ್ನು ಉನ್ನತೀಕರಣ ಮತ್ತು ಪ್ರಚಾರಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಪ್ರವಾಸೋದ್ಯಮ ಇಲಾಖೆಗಳು ಸಂಯುಕ್ತಾಶ್ರಯದಲ್ಲಿ ಸೆ. 27ರಂದು ವಿಶ್ವ ಪ್ರವಾಸೋದ್ಯಮ ದಿನಾಚರಣೆ -2025ರ ಅಂಗವಾಗಿ ಆಯೋಜಿಸಿರುವ ವೀಡಿಯೋಗ್ರಾಫಿ, ಫೋಟೋಗ್ರಾಫಿ, ರೀಲ್ಸ್, ಲೋಗೋ ವಿನ್ಯಾಸ ಹಾಗೂ ಶಿವಮೊಗ್ಗ ಪ್ರವಾಸೋದ್ಯಮ ಟ್ಯಾಗ್‌ಲೈನ್ ಸ್ಪರ್ದೆಗೆ ನೋಂದಣಿ ಮಾಡಿಕೊಂಡಿರುವವರು ಜಾಲತಾಣಕ್ಕೆ ಅಪ್ಲೋಡ್ ಮಾಡಲು ಸೆ. 20ರವರೆಗೆ ಅವಧಿ ವಿಸ್ತರಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪ್ರವಾಸೋದ್ಯಮ ಸಮಿತಿ ಅಧ್ಯಕ್ಷರೂ ಅಗಿರುವ ಗುರುದತ್ತ ಹೆಗಡೆರವರು ತಿಳಿಸಿದ್ದಾರೆ.

Department of Youth Empowerment and Sports ಕ್ರೀಡೆಗಳು ಕೇವಲ ಗೆಲುವುಸೋಲಿನ ಪಂದ್ಯವಲ್ಲ.ಸಹೋದರತ್ವ,ಮಾನವೀಯ ಗುಣಗಳನ್ನ ಹೊಂದಿದೆ- ವಿ.ಅಭಿಷೇಕ್

0

Department of Youth Empowerment and Sports ಕ್ರೀಡೆಯು ದೈಹಿಕ ಹಾಗೂ ಮಾನಸಿಕ ಕ್ಷಮತೆಯನ್ನು ಸದೃಢವಾಗಿಸಲು ಸಹಕಾರಿಯಾಗಿದ್ದು, ಜೀವನದಲ್ಲಿ ಶಿಸ್ತನ್ನು ಕಲಿಸುತ್ತದೆ. ಆ ನಿಟ್ಟಿನಲ್ಲಿ ನಾವೆಲ್ಲರೂ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಅಪರ ಜಿಲ್ಲಾಧಿಕಾರಿ ಅಭಿಷೇಕ್.ವಿ ಹೇಳಿದರು.

ಅವರು ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 2025-26 ನೇ ಸಾಲಿನ ಬೆಂಗಳೂರು ಗ್ರಾಮಾಂತರ ವಿಭಾಗ ಮಟ್ಟದ ದಸರಾ ಕ್ರೀಡಾಕೂಟ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕ್ರೀಡೆಯೂ ಕೇವಲ ಸೋಲು ಗೆಲುವಿನ ಪಂದ್ಯವಾಗಿಲ್ಲದೇ ಅದು ಸಹೋದರತ್ವ ಹಾಗೂ ಮಾನವೀಯ ಗುಣಗಳನ್ನು ಹೊಂದಿದೆ. ಜೀವನದಲ್ಲಿ ಶಿಸ್ತನ್ನು ಸಹ ಕಲಿಸುತ್ತದೆ. ಹಾಗಾಗಿ ನಾವೆಲ್ಲರೂ ಕ್ರೀಡೆಯನ್ನು ಆಟದ ದೃಷ್ಟಿಯಿಂದ ನೋಡದೆ ಬದುಕಿನ ಒಂದು ಭಾಗವಾಗಿ ಕಾಣಬೇಕಿದೆ ಎಂದು ಅವರು ಹೇಳಿದರು.

ವಿದ್ಯಾರ್ಥಿಗಳ ಬದುಕಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯೂ ಅವಶ್ಯಕವಾಗಿದೆ. ಯಾಕೆಂದರೆ ಅವರ ಭವಿಷ್ಯದಲ್ಲಿ ಉದ್ಯೋಗವನ್ನು ಅರಸಿ ಹೋಗುವಾಗ ಕೇವಲ ಪಠ್ಯದಿಂದ ಪಡೆದ ಅಂಕವನ್ನು ಮಾತ್ರವಲ್ಲದೆ ಕ್ರೀಡೆ ಒಳಗೊಂಡಂತೆ ಇನ್ನಿತರ ಪಠ್ಯೇತರ ಚಟುವಟಿಕೆಯನ್ನು ಮಾನದಂಡವಾಗಿ ಪರಿಗಣಿಸುತ್ತಾರೆ. ಹಾಗಾಗಿ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಹೆಚ್ಚಾಗಿ ತೊಡಗಿಕೊಂಡು ರಾಜ್ಯ, ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸುವಂತಾಗಬೇಕು. ಆ ಮೂಲಕ ದೇಶಕ್ಕೆ ಕೀರ್ತಿ ತರಬೇಕು. ಅದಕ್ಕೆ ಬೇಕಾದಂತಹ ಪ್ರೋತ್ಸಾಹ ಹಾಗೂ ತರಬೇತಿಯನ್ನು ಇಲಾಖೆಯಿಂದ ನೀಡಲಾಗುತ್ತದೆ ಅವರು ಎಂದರು.

Department of Youth Empowerment and Sports ಜಿ.ಪಂ.ಮುಖ್ಯ ಯೋಜನಾಧಿಕಾರಿ ಹನುಮನಾಯ್ಕ ಮಾತನಾಡಿ, ಕ್ರೀಡೆಯಲ್ಲಿ ಭಾಗವಹಿಸುವವರು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಈ ಕ್ರೀಡಾಕೂಟದಲ್ಲಿ ಭಾಗವಹಿಸಲು 8 ಜಿಲ್ಲೆಯಿಂದ ತಂಡಗಳು ಬಂದಿದ್ದು, ಎಲ್ಲರೂ ಉತ್ಸಾಹದಿಂದ ಭಾಗವಹಿಸಿ ಗೆಲುಪಡೆಯಿರಿ ಎಂದು ಶುಭ ಕೋರಿದರು.

ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೇಖ್ಯಾನಾಯ್ಕ, ಮುಖ್ಯ ಅಥ್ಲೇಟಿಕ್ಸ್ ತರಬೇತಿದಾರಾ ಬಾಳಪ್ಪ ಮಾನೆ, ಇಲಾಖೆ ಸಿಬ್ಬಂದಿಗಳು ಹಾಗೂ ಕ್ರೀಡಾಪಟುಗಳು ಹಾಜರಿದ್ದರು.

Agricultural University ಹೊಸದಾಗಿ ಉದ್ದಿಮೆ ಆರಂಭಿಸುವವರಿಗೆ ಕೃಷಿ ವಿವಿ‌ಯಿಂದ ಎಲ್ಲಾ ಸಹಕಾರ ನೀಡಲಾಗುವುದು- ಡಾ.ಆರ್.ಸಿ.ಜಗದೀಶ್

0

Agricultural University ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ದಗೊಳಿಸುವಿಕೆ ಯೋಜನೆಯು ಒದು ವಿಶೇಷ ಯೋಜನೆಯಾಗಿದ್ದು ಹೊಸದಾಗಿ ಕಿರು ಉದ್ದಿಮೆ ಆರಂಭಿಸುವವರಿಗೆ ಕೃಷಿ ವಿಶ್ವವಿದ್ಯಾಲಯದಿಂದ ಲಭ್ಯವಿರುವ ಎಲ್ಲ ಸಹಕಾರ ನೀಡಲಾಗುವುದು ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಆರ್.ಸಿ ಜಗದೀಶ್ ತಿಳಿಸಿದರು.
ಆತ್ಮನಿರ್ಭರ ಭಾರತ ಅಭಿಯಾನ, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಗಳ ಸಂಸ್ಕರಣೆ ಹಾಗೂ ರಫ್ತುನಿಗಮ ನಿಯಮಿತ(ಕೆಎಪಿಪಿಇಸಿ), ಜಿಲ್ಲಾಡಳಿತ, ಜಿ.ಪಂ, ಜಿಲ್ಲಾ ಕೃಷಿ ತರಬೇತಿ ಕೇಂದ್ರ ಹಳ್ಳಿಕೆರೆ ಹಾಗೂ ಕೃಷಿ ಇಲಾಖೆ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ ಜಿ.ಪಂ. ಸಭಾಂಗಣದಲ್ಲಿ ಫಲಾನುಭವಿಗಳಿಗೆ ಏರ್ಪಡಿಸಲಾಗಿದ್ದ ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ದಗೊಳಿಸುವಿಕೆ ಹಾಗೂ ಆತ್ಮ ಯೋಜನೆ ಕುರಿತಾದ ಅರಿಚು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹೊಸದಾಗಿ ಕಿರು ಉದ್ದಿಮೆ ಆರಂಭಿಸುವವರಿಗೆ ವಿಶ್ವವಿದ್ಯಾಲಯದಿಂದ ಸಂಸ್ಕರಣೆಗೆ ಜಾಗ, ಪ್ರಯೋಗಾಲಯ ಹಾಗೂ ಬ್ಯಾಂಕ್ ಮೂಲಕ ಸಾಲ ಕೂಡ ಕೊಡಿಸಲಾಗುವುದು ಎಂದರು.
ಜಿಲ್ಲೆಯಿಂದ 100 ಟನ್‌ಗಳಷ್ಟು ಅಪ್ಪೆ ಮಿಡಿ ವಿದೇಶಕ್ಕೆ ರಫ್ತಾಗುತ್ತಿದೆ. ಮೆಕ್ಕೆಜೋಳದಿಂದ 50 ಕ್ಕೂ ಹೆಚ್ಚಿನ ಬಗೆಯ ಖಾದ್ಯವನ್ನು ಮಾಡಬಹುದು. ಹಾಗೂ ಹೊಸ ಹೊಸ ಖಾದ್ಯಗಳ ಸಂಶೋಧನೆಗೂ ಅವಕಾಶ ಇದೆ. ಮಸಾಲೆ ಪದಾರ್ಥಗಳ ಸಂಶೊಧನೆಗಳನ್ನು ಕೂಡ ಮಾಡಬಹುದು.
ಅಣಬೆ ಹಾಗೂ ಬೇಕರಿ ಉದ್ಯಮದಲ್ಲಿ ಆಸಕ್ತಿ ಇರುವರಿಗೆ ತರಬೇತಿ ನೀಡಲಾಗುತ್ತದೆ. ಚಾಕೊಲೇಟ್ ಉದ್ಯಮ ಮಾಡುವವರಿಗೂ ಪ್ರೋತ್ಸಾಹ ನೀಡಲಾಗುತ್ತದೆ. ಹಾಗೂ ವಿವಿಧ ಖಾದ್ಯಗಳಲ್ಲಿ ವಿಟಮಿನ್ ಮತ್ತು ಪ್ರೋಟಿನ್ ಮಟ್ಟವನ್ನು ಪರೀಕ್ಷೆ ಮಾಡಲಾಗುತ್ತದೆ ಎಂದ ಅವರು ತಾಂತ್ರಿಕತೆ ಬಗ್ಗೆ ತರಬೇತಿ ಹಾಗೂ ಖಾದ್ಯಗಳ ಪ್ಯಾಕಿಂಗ್‌ಗೂ ತರಬೇತಿ ನೀಡಲಾಗುವುದು. ನಮ್ಮಲ್ಲಿರುವ ವಿಜ್ಞಾನಿಗಳು ಮತ್ತು ಸೌಲಭ್ಯಗಳನ್ನು ರೈತರು, ಆಸಕ್ತರು ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಕೆಎಪಿಪಿಇಸಿ ಯ ವ್ಯವಸ್ಥಾಪಕ ನಿರ್ದೇಶಕ ಸಿ.ಎ.ಶಿವಪ್ರಕಾಶ್ ಮಾತನಾಡಿ, ರೈತರ ಆದಾಯ ಹೆಚ್ಚಿಸಿ ಅವರನ್ನೂ ಉದ್ದಿಮೆದಾರರನ್ನಾಗಿ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು 2020-21 ರಲ್ಲಿ ಪ್ರಾರಂಭಿಸಲಾಗಿದೆ. ರೂ. 15 ಲಕ್ಷದವರೆಗೆ ಸಹಾಯಧನ ನೀಡಲಾಗುವುದು. ಈ ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸೇರಿ ರೂ. 10 ಸಾವಿರ ಕೋಟಿ ಮಂಜೂರಾಗಿದ್ದು ರಾಜ್ಯದ ಪಾಲು ರೂ.493.65ಕೋಟಿ ಆಗಿದೆ
Agricultural University ಈ ಯೋಜನೆಯು ದೇಶದ ಆರ್ಥಿಕತೆಗೆ ಉತ್ತಮ ಕೊಡುಗೆ ನೀಡುತ್ತಿದೆ. ರೈತರು ಬೆಳೆಗೆ ಉತ್ತಮ ಬೆಲೆ ಸಿಗಬೇಕಾದರೆ ಉತ್ಪನ್ನಗಳ ಮೌಲ್ಯವರ್ಧನೆ ಮಾಡಬೇಕು. ಈ ಯೋಜನೆ ಮೌಲ್ಯವರ್ಧನೆಗೆ ಬಹು ಮುಖ್ಯ ವಲಯವಾಗಿದ್ದು ನಿರಂತರ ಬೆಳೆಯುತ್ತಿರುವ ಕ್ಷೇತವಾಗಿದೆ. ಈವರೆಗೆ ಸಿರಿಧಾನ್ಯದ 2 ಸಾವಿರ ಘಟಕಗಳಿಗೆ ಸಹಾಯಧನ ನೀಡಲಾಗಿದೆ.
ಪದವಿ ಮುಗಿಸಿ, ಕಂಪ್ಯೂಟರ್ ಜ್ಞಾನ ಹೊಂದಿದವರು ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳಾಗಿ ಸೇವೆ ಸಲ್ಲಿಸಬಹುದು. ಒಂದು ಪ್ರಾಜೆಕ್ಟ್ ಗೆ ರೂ. 20 ಸಾವಿರ ಸಿಗುತ್ತದೆ. ಈ ಯೋಜನೆಯಡಿ ಶಿವಮೊಗ್ಗ ರಾಜ್ಯದಲ್ಲಿ 5 ನೇ ಸ್ಥಾನದಲ್ಲಿದ್ದು ಉತ್ತಮ ಕೆಲಸ ಮಾಡುತ್ತಿದೆ. ಜಿಲ್ಲೆಯಲ್ಲಿ ಉತ್ತಮ ಸಂಪನ್ಮೂಲವಿದ್ದು ಆಹಾರ ಸಂಸ್ಕರಣೆಗೆ ಭಾರೀ ಅವಕಾಶ ಇದ್ದು ಉತ್ತಮ ಉದ್ಯೋಗಾವಕಾಶ ಸೃಷ್ಟಿಸಲಾಗುತ್ತಿದೆ ಎಂದರು.
ಜಂಟಿ ಕೃಷಿ ನಿರ್ದೇಶಕ ಕಿರಣ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ಯಮಿಗಳ ನಿಯಮಬದ್ದಗೊಳಿಸುವಿಕೆ ಯೋಜನೆಯು ರಾಜ್ಯ ಮತ್ತು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಪ್ರಾರಂಭ ಹಂತದಲ್ಲಿ ನಮ್ಮ ಜಿಲ್ಲೆಯಲ್ಲಿ ಒಂದು ಜಿಲ್ಲೆ ಒಂದು ಉತ್ಪನ್ನದಡಿ ಅನಾನಸ್ ಬೆಳೆಯನ್ನು ಆಯ್ಕೆ ಮಾಡಲಾಗಿದೆ. ನಂತರ ಅಸಂಘಟಿತ ಆಹಾರ ಸಂಸ್ಕರಣಾ ಉದ್ಯಮಿಗಳ ಉನ್ನತೀಕರಣಕ್ಕೆ ಮತ್ತು ವಿಸ್ತರಣೆಗೆ ಅವಕಾಶ ಕಲ್ಪಿಸಲಾಗುವುದು.
ಸಾಕಷ್ಟು ಕಿರು ಉದ್ದಮೆ ಆರಂಭವಾಗಿದ್ದು ಕಿರು ಉದ್ದಿಮೆಗಳಿಂದಾಗಿ ರೈತರ ಉತ್ಪನ್ನಗಳ ಮೌಲ್ಯವರ್ಧನೆ ಆಗಿ ಆದಾಯ ಹೆಚ್ಚಳಕ್ಕೆ ಸಹಾಯವಾಗುತ್ತಿದೆ. ಈ ಯೋಜನೆಯಡಿ 15 ಲಕ್ಷ ಸಹಾಯಧನ ಪಡೆಯಲು ಅವಕಾಶವಿದ್ದು ಜಿಲ್ಲೆಯಲ್ಲಿ ಈವರೆಗೆ 344 ಅರ್ಜಿಗಳಿಗೆ ಬ್ಯಾಂಕ್ ಸಾಲ ಮಂಜೂರಾತಿ ಆಗಿದೆ. 97 ಎಣ್ಣೆಗಾಣದ ಉತ್ಪನ್ನಗಳು, 55 ಬೇಕರಿ ಉತ್ಪನ್ನಗಳು, 53 ರಾಗಿ, 28 ಪೈನಾಪಲ್ ಆಧಾರಿ ಉತ್ಪನ್ನಗಳು, 16 ಅಕ್ಕಿ ಹಾಊ ಬೆಲ್ಲದ ಸಂಸ್ಕರಣ ಘಟಕಗಳು, 7 ಸಾಂಬಾರು ಹಾಗೂ ಹಾಲಿನ ಉತ್ಪನ್ನಗಳು, 5 ಉಪ್ಪಿನಕಾಯಿ ಮತ್ತು 4 ಬೇಳೆ ಆಧಾರಿತ ಉತ್ಪನ್ನಗಳಿಗೆ ಮಂಜೂರಾತಿ ದೊರೆತಿದೆ. ಜಿಲ್ಲೆಯಲ್ಲಿ 16 ಉದ್ದಿಮೆದಾರರು ನೋಂದಣಿ 8 ಫಲಾನುಭವಿಗಳು ಇದ್ದು, ಆಸಕ್ತರು ಈ ಸೌಲಭ್ಯಗಳ ಸದುಪಯೋಗಪಡೆಯಬೇಕೆಂದರು.
ಕೆಎಪಿಪಿಇಸಿ ಟೀಂ ಲೀಡರ್ ಅರವಿಂದ ಕರೆ ಮಾತನಾಡಿ, ಪಿಎಂಎಓಫ್‌ಎಂಇ ಯೋಜನೆಯಡಿ ಉದ್ದಿಮೆಗಳಿಗೆ ವೃತ್ತಿಪರ ಹಾಗೂ ತಾಂತ್ರಿಕ ಬೆಂಬಲ ದೊರೆಯುವಿಕೆಯನ್ನು ಹೆಚ್ಚಿಸುವುದು. ಬ್ರ್ಯಾಂಡಿಂಗ್ ಹಾಗೂ ಮಾರ್ಕೆಟಿಂಗ್ ಬೆಂಬಲ, ಸಾಮಾನ್ಯ ಮೂಲಭೂತ ಸೌಕರ್ಯಕ್ಕೆ ಬೆಂಬಲ, ಸಾಮರ್ಥ್ಯ ನಿರ್ಮಾಣ ಹಾಗೂ ಸಂಶೋಧನೆ, ಕಿರು ಉದ್ದಿಮೆಗಳ ವೈಯಕ್ತಿಕ ಹಾಗೂ ಗುಫುಗಳಿಗೆ ಬೆಂಬಲ ನೀಡಲಾಗುವುದು.
ಬ್ರಾಂಡಿAಗ್ ಹಾಗೂ ಮಾರ್ಕೆಟಿಂಗ್ ಅನ್ನು ಬಲಪಡಿಸುವುದು, ಸಾಮಾನ್ಯ ಸಂಸ್ಕರಣಾ ಸೌಲಭ್ಯ, ಪ್ರಯೋಗಾಲಯಗಳು, ದಾಸ್ತಾನನ್ನು ಶೇಖರಣೆ, ಪ್ಯಾಕೇಜಿಂಗ್, ಮಾರ್ಕೆಟಿಂಗ್ ಹಾಗೂ ಇನ್‌ಕ್ಯೂಬೇಷನ್ ಸೇವೆಗಳಂತಹ ಸಾಮಾನ್ಯ ಸೇವೆಗಳ ದೊರೆಯುವಿಕೆಯನ್ನು ಹೆಚ್ಚಿಸುವುದು. ತಾಂತ್ರಿಕ ಸಂಸ್ಥೆಗಳನ್ನು ಬಲಪಡಿಸುವುದು, ಆಹಾರ ಸಂಸ್ಕರಣಾ ವಲಯದಲ್ಲಿ ಸಂಶೋಧನೆ ಹಾಗೂ ತರಬೇತಿಗೆ ಪ್ರೋತ್ಸಾಹ ನೀಡಲಾಗುವುದು ಎಂದ ಅವರು, ಈ ಯೋಜನೆಯಡಿ ಅರ್ಜಿ ಸಲ್ಲಿಕೆ ವಿಧಾನ, ಡಿಆರ್‌ಪಿ (ಜಿಲ್ಲಾ ಸಂಪನ್ಮೂಲ ವ್ಯಕ್ತಿ) ಆಯ್ಕೆ ಇತರೆ ಮಾಹಿತಿ ನೀಡಿದರು.
ಲೀಡ್ ಬ್ಯಾಂಕ್ ಮ್ಯಾನೇಜರ್ ಹನುಮಂತಪ್ಪ ಮಾತನಾಡಿ ಈ ಯೋಜನೆಗೆ ಸಂಬಂಧಿಸಿದಂತೆ ಲಭ್ಯವಿರುವ ಸಾಲ ಸೌಲಭ್ಯದ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಫಲಾನುಭವಿಗಳೊಂದಿಗೆ ಸಂವಾದ ನಡೆಸಲಾಯಿತು.ಜಿ.ಪಂ ಉಪ ಕಾರ್ಯದರ್ಶಿ ಸುಜಾತ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ನಾಗರಾಜ್, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಬಾಬುರಾಮ್. ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಶಿವಕುಮಾರ್, ಇತರೆ ಅಧಿಕಾರಿಗಳು, ಯೋಜನೆಯ ಫಲಾನುಭವಿಗಳು ಪಾಲ್ಗೊಂಡಿದ್ದರು

ಅರಣ್ಯ ಮತ್ತು ವನ್ಯಜೀವಿ ಸಂಪತ್ತನ್ನು ಸಂರಕ್ಷಿಸಲು ಕೇವಲ ಕಾನೂನಿಂದ ಮಾತ್ರ ಸಾಧ್ಯವಿಲ್ಲ. ಅದಕ್ಕೆ ಜನ ಸಾಮಾನ್ಯರ ಸಹಕಾರ ಕೂಡ ಅತಿ ಮುಖ್ಯವಾಗಿ ಬೇಕಾಗಿದ್ದು ನಾವೆಲ್ಲರೂ ವನ್ಯಜೀವಿ ಸಂಪತ್ತನ್ನು ರಕ್ಷಣೆ ಮಾಡುವ ಮನೋಭಾವ ಬೆಳಿಸಿಕೊಳ್ಳೋಣ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ ನಾಯಕ್ ಕರೆ ನೀಡಿದರು.
ಕರ್ನಾಟಕ ಅರಣ್ಯ ಇಲಾಖೆ ವತಿಯಿಂದ ನಗರದ ಮುಖ್ಯ ಅರಣ್ಯ ಸಂರಕ್ಷಾಣಾಧಿಕಾರಿಗಳ ಕಚೇರಿಯ ಶ್ರೀಗಂಧ ಕೋಠಿ ಆವರಣದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ-2025 ಕಾರ್ಯಕ್ರಮದಲ್ಲಿ ನಾಡಿನ ಅರಣ್ಯ ಮತ್ತು ವನ್ಯಜೀವಿ ಸಂಪತ್ತನ್ನು ಸಂರಕ್ಷಿಸಲು ಪ್ರಾಣತ್ಯಾಗ ಮಾಡಿದ ಅರಣ್ಯ ಇಲಾಖೆಯ ಹುತಾತ್ಮರಿಗೆ ಶ್ರದ್ದಾಂಜಲಿ ಸಲ್ಲಿಸಿ ಅವರು ಮಾತನಾಡಿದರು.
ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ ಮಾಡುವ ಅಧಿಕಾರಿಗಳಿಗೆ ಜನರಿಂದ ಬೆಂಬಲ ಸಿಗುತ್ತಿಲ್ಲದಿರುವುದು ಶೋಚನಿಯವಾಗಿದೆ. ಕಳೆದ 10 ವರ್ಷದಲ್ಲಿ 20 ಮಂದಿ ಅರಣ್ಯ ಅಧಿಕಾರಿ ಹುತಾತ್ಮರಾಗಿದ್ದಾರೆ. ನಮ್ಮಲ್ಲಿ ಎಷ್ಟೇ ತಂತ್ರಜ್ಞಾನ ಮುಂದುವರೆದರೂ ಇಂತಹ ಅನಾಹುತಗಳನ್ನು ತÀಡೆಯಲು ಸಾಧ್ಯವಾಗುತ್ತಿಲ್ಲ ಎಂದರು ಬೇಸರ ವ್ಯಕ್ತಿಪಡಿಸಿದರು.
ಅರಣ್ಯ ಇಲಾಖೆಯಲ್ಲಿ ಸಾಕಷ್ಟು ತಂತ್ರಜ್ಞಾನದ ಉಪಯೋಗ ಆಗಬೇಕಿದೆ. ಆದರೆ ಇಂತಹ ಬಳಕೆ ಆಗದೇ ಇರುವ ಕಾರಣಕ್ಕೆ ಅಧಿಕಾರಿಗಳ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ ಎಂದನಿಸುತ್ತಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಇಲಾಖೆಯು ತನಿಖಾ ಅಧಿಕಾರಿಗಳಿಗೆ ತಂತ್ರಜ್ಞಾನದ ಬಗ್ಗೆ ತರಬೇತಿ ನೀಡಬೇಕು ಎಂದರು.
ರಾಜ್ಯದಲ್ಲಿ 3 ಕ್ರಿಮಿನಲ್ ಕಾನೂನುಗಳು ಬದಲಾವಣೆ ಆಗಿ ಹೊಸ ಕಾನೂನು ಜಾರಿಗೆ ಬಂದಿದೆ. ಕಂದಾಯ, ಪೊಲೀಸ್ ಇಲಾಖೆ ಒಳಗೊಂಡAತೆ ಅನೇಕ ಇಲಾಖೆಗಳಿಗೆ ಈ ಕಾನೂನಗಳ ಬಗ್ಗೆ ನಮ್ಮ ತಂಡ ಜಾಗೃತಿ ಮೂಡಿಸುತ್ತಿದೆ. ಅರಣ್ಯ ಇಲಾಖೆಯಲ್ಲಿಯೂ ಇಂತಹ ಜಾಗೃತಿ ಕಾರ್ಯಕ್ರಮಗಳು ಆಗಬೇಕಿದೆ. ಆಗ ನ್ಯಾಯಾಲಯದಲ್ಲಿ ಅರಣ್ಯ ಇಲಾಖೆಗೆ ಸಂಬAಧಿಸಿದ ಪ್ರಕರಣಗಳ ಬಗ್ಗೆಯೂ ಅಧಿಕಾರಿಗಳಿಗೆ ಅರಿವು ಮೂಡುತ್ತದೆ ಎಂದರು.
ಆನೆ ಯೋಜನೆಯ ಅಪರ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಮನೋಜ್ ರಾಜನ್ ಮಾತನಾಡಿ, ಪ್ರಾಣಿಗಳ ದಾಳಿ, ಪರಿಸರ ವಿಕೋಪದಂತಹ ಅನಾಹುತಗಳಿಂದ ಕರ್ನಾಟಕದಲ್ಲಿ 1966 ರಿಂದ 2025ರವರೆಗೆ 62 ಅರಣ್ಯ ಇಲಾಖೆಯ ಅಧಿಕಾರಿಗಳು ಪ್ರಾಣತ್ಯಾಗ ಮಾಡಿದ್ದಾರೆ. ಪ್ರಾಣಿ ಮತ್ತು ಮಾನವ ಸಂಘರ್ಷದಿAದ 35 ಮಂದಿ ಸಾವನ್ನಪ್ಪಿದ್ದಾರೆ. ಕರ್ನಾಟಕದಲ್ಲಿ 6300 ಕ್ಕೂ ಹೆಚ್ಚು ಆನೆಗಳಿದ್ದು ಇಡೀ ದೇಶದ ಮಾನವ ಮತ್ತು ಪ್ರಾಣಿ ಸಂಘರ್ಷದ ಪ್ರಕರಣಗಳನ್ನು ಗಮನಿಸಿದರೆ ನಮ್ಮ ರಾಜ್ಯದಲ್ಲಿ ಅನಾಹುತಗಳ ಕಡಿಮೆ ಮಟ್ಟದಲ್ಲಿದೆ ಎಂದು ತಿಳಿಸಿದರು.
ಇಂತಹ ಪ್ರಾಣಿ ಮತ್ತು ಮಾನವ ಸಂಘರ್ಷ ತಪ್ಪಿಸಲು ಆನೆ ಓಡಾಡುವ ದಾರಿಯಲ್ಲಿ ಬ್ಯಾರಿಕೇಡ್, ಕಾರಿಡಾರ್ ಹಾಗೂ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ. ತಂತ್ರಜ್ಞಾನ ಹಾಗೂ ಶ್ವಾನದಳ ಸಹಾಯದಿಂದ ಆನೆಯನ್ನು ಪತ್ತೆ ಹಚ್ಚುವ ಕೆಲಸ ಮಾಡಲಾಗುತ್ತಿದೆ. ಹಾಗೂ ಕಳೆದ 2 ವರ್ಷಗಳಿಂದ ಅರಣ್ಯದಲ್ಲಿ ಪ್ರಾಕೃತಿಕ ವಿಕೋಪದಂತಹ ಯಾವುದೇ ಅನಾಹುತಗಳು ಕೂಡ ಕಂಡು ಬಂದಿಲ್ಲ.
ಸರ್ಕಾರದ ಸೂಚನೆಯಂತೆ, ಅರಣ್ಯ ಇಲಾಖೆ ಅಧಿಕಾರಿಗಳ ಹಿತದೃಷ್ಟಿಯಿಂದ ಇಂಟಿಗ್ರೇಟೆಡ್ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ. ಈ ಮೂಲಕ ಅಧಿಕಾರಿಗಳು ಜಾಗೃತೆಯಿಂದ ಕೆಲಸ ಮಾಡುವಂತೆ ಸೂಚಿಸಲಾಗುತ್ತಿದ್ದು, ತಮ್ಮ ಲೋಪಗಳಿಂದ ಪ್ರಾಣತ್ಯಾಗ ಮಾಡುವಂತಹ ಸಂದರ್ಭವನ್ನು ತಂದಿಟ್ಟುಕೊಳ್ಳಬಾರದು ಎಂದು ಸಲಹೆ ನೀಡಲಾಗುತ್ತಿದೆ.
ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ ಮಾತನಾಡಿ, ನಾಡಿನ ಅರಣ್ಯ ಮತ್ತು ವನ್ಯಜೀವಿ ಸಂಪತ್ತನ್ನು ಸಂರಕ್ಷಿಸಲು ಪ್ರಾಣತ್ಯಾಗ ಮಾಡಿದ ಅರಣ್ಯ ಇಲಾಖೆಯ ಹುತಾತ್ಮರಿಗೆ ಶ್ರದ್ದಾಂಜಲಿ ಸಲ್ಲಿಸುವುದು ಒಂದು ಉತ್ತಮವಾದ ಆಚರಣೆಯಾಗಿದೆ.
ದೇಶದ ಸೇನೆಯಂತೆೆ ಅರಣ್ಯ ಇಲಾಖೆಯೂ ಕಾರ್ಯನಿರ್ವಹಿಸುತ್ತಿದ್ದು, ಇದು ನಿಸರ್ಗವನ್ನು ಕಾಯುವ ಸೇನೆಯಾಗಿದೆ. ಅದರಂತೆ ಶರಾವತಿ ಸಂತ್ರಸ್ತರಿಗೆ ಪರಿಹಾರ ಹಾಗೂ ಇನ್ನಿತರ ಅಭಿವೃದ್ದಿ ಕಾರ್ಯಗಳಿಗೆ ಸಂಬAಧಿಸಿದAತೆ ಕಂದಾಯ ಮತ್ತು ಅರಣ್ಯ ಇಲಾಖೆಗಳು ಜಂಟಿಯಾಗಿ ಉತ್ತಮ ಕೆಲಸ ಮಾಡುತ್ತಿವೆ. ಶಿವಮೊಗ್ಗ ಜಿಲ್ಲೆಯಲ್ಲಿ ಅತಿ ಹೆಚ್ಚು ಭೂಮಿ ಅತಿಕ್ರಮಣ ಹಾಗೂ ಅರಣ್ಯ ಭೂಮಿಗೆ ಸಂಬAಧಿಸಿದ ಪ್ರಕರಣಗಳು ಬಾಕಿ ಇದ್ದು, ಇವನ್ನು ಬಗೆಹರಿಸುವ ನಿಟ್ಟಿನಲ್ಲಿ ಯಾವುದೇ ಒತ್ತಡಕ್ಕೆ ಮಣಿಯದೆ ಒಟ್ಟಾಗಿ ಕೆಲಸ ಮಾಡಿದರೆ ಅವುಗಳನ್ನು ವಿಲೇವಾರಿ ಮಾಡಬಹುದು ಎಂದರು.
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆ.ಟಿ.ಹನುಮಂತಪ್ಪ ಮಾತನಾಡಿ, ವನ್ಯಪ್ರಾಣಿ ಹಾಗೂ ಪ್ರಕೃತಿ ವಿಕೋಪದಿಂದ ಸಾವು ಸಂಭವಿಸುತ್ತದೆ. ಹಾಗಾಗಿ ಅಧಿಕಾರಿಗಳು ಜಾಗೃತೆಯಿಂದ ಕೆಲಸ ಮಾಡಬೇಕು. ಅರಣ್ಯ ಸೇವೆಯಲ್ಲಿರುವ ಪ್ರತಿಯೊಬ್ಬ ಅಧಿಕಾರಿಯ ಜೀವ ಅಮೂಲ್ಯವಾದದ್ದು. ಆದ್ದರಿಂದ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಿಬೇಕು ಎಂದರು.
ಅರಣ್ಯ, ಭೂಮಿ, ಅಭಿವೃದ್ದಿಯ ವಿಚಾರದಲ್ಲಿ ಅಧಿಕಾರಿಗಳಿಗೆ ಒತ್ತಡ ಇದೆ. ಆದರೂ ಎಲ್ಲಾ ಸಂದರ್ಭದಲ್ಲಿಯೂ ಪೊಲೀಸ್, ಕಂದಾಯ, ಕಾನೂನು ಇಲಾಖೆಗಳು ನಮಗೆ ಬೆಂಬಲವಾಗಿ ನಿಂತಿವೆ. ಅಧಿಕಾರಿಗಳ ಪ್ರಾಣತ್ಯಾಗವನ್ನು ಇಲಾಖೆಯು ಸದಾ ನೆನೆಯುತ್ತದೆ. ಅವರ ಕುಟುಂಬದ ನಷ್ಟವನ್ನು ತುಂಬಿಕೊಳ್ಳಲು ಸರ್ಕಾರವು ಕೂಡ ರೂ. 50 ಲಕ್ಷ ಪರಿಹಾರ ನೀಡಲು ಮುಂದಾಗಿದೆ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಜಿ.ಆರ್.ಅಜ್ಜಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿ.ಪಂ. ಸಿಇಓ ಹೇಮಂತ್.ಎನ್, ಡಿಸಿಎಫ್ ಪ್ರಸನ್ನಕೃಷ್ಣ ಪಟಗಾರ್, ಪೊಲೀಸ್ ಇಲಾಖೆ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Shivamogga Police ಈ ಚಲನ್ ಸಂಚಾರಿ ಪ್ರಕರಣಗಳಲ್ಲಿ ಶೇ 50 ದಂಡ ರಿಯಾಯ್ತಿ ಪಡೆಯಲು ಸೆ.12 ಕೊನೇ ದಿನ

0

Shivamogga Police ಶಿವಮೊಗ್ಗ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾಗಿರುವ ಶ್ರೀ ಸಂತೋಷ್ ಎಂ ಎಸ್ ರವರು ಶಿವಮೊಗ್ಗ ನಗರದ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಗೆ ಅನಿರೀಕ್ಷಿತ ಭೇಟಿ ನೀಡಿ ಇಲ್ಲಿಯವರೆಗೂ ಶಿವಮೊಗ್ಗ ಜಿಲ್ಲೆಯಲ್ಲಿ ಈ ಚಲನ್ ಮೂಲಕ ವಿಧಿಸಲಾದ ದಂಡದ ಪಾವತಿಯಲ್ಲಿನ ಪ್ರಗತಿಯನ್ನು ಪರಿಶೀಲಿಸಿದರು. ಕರ್ನಾಟಕ ಸರ್ಕಾರದ ಅಧಿಸೂಚನೆಯಂತೆ ದಿನಾಂಕ 23.08.2025 ರಿಂದ ದಿನಾಂಕ 12.09.2025 ರವರೆಗೆ ಈ ಚಲನ್ ಮೂಲಕ ಪಾವತಿಗಾಗಿ ಬಾಕಿ ಇರುವ ದಂಡದ ಮೊತ್ತದಲ್ಲಿ 50% ಕಡಿತಗೊಳಿಸಿ ಕಡಿಮೆ ಮೊತ್ತದ ದಂಡ ಪಾವತಿ ಮಾಡಿದಲ್ಲಿ ಅಂತಹ ಪ್ರಕರಣವನ್ನು ವಿಲೇ ಮಾಡಲಾಗುವುದು. ಆದ್ದರಿಂದ ಸಾರ್ವಜನಿಕರು ಈ ಸವಲತ್ತನ್ನು ಯಾವ ರೀತಿ ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಬಗ್ಗೆ ಪರಿಶೀಲಿಸಲಾಯಿತು.

ಭೇಟಿ ಸಮಯದಲ್ಲಿ ಹಾಜರಿದ್ದ ಸಂಚಾರಿ ಪೊಲೀಸ್ ಠಾಣೆಯ ನಿರೀಕ್ಷಕರು ಹಾಗೂ ಉಪನಿರೀಕ್ಷಕರು ನೀಡಿದ ವಿವರದಂತೆ ದಿನಾಂಕ 28.08.2023 ರಿಂದ ದಿನಾಂಕ 30.08.2025 ರವರೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 2,94,181 ಪ್ರಕರಣಗಳು ದಾಖಲಾಗಿದ್ದು ಅದರ ದಂಡದ ಒಟ್ಟು ಮೊತ್ತ ರೂ. 23,37,67,500 ಆಗಿದ್ದು ಅವುಗಳ ಪೈಕಿ ಒಟ್ಟು 56,199 ಈ ಚಲನ್ ಪ್ರಕರಣಗಳು ಮುಕ್ತಾಯಗೊಂಡಿದ್ದು ಒಟ್ಟು ರೂ. 4,09,02,500 ರಷ್ಟು ಹಣ ಪಾವತಿ ಮಾಡಲಾಗಿದೆ. ದಾಖಲಾದ ಪ್ರಕರಣಗಳ ಪೈಕಿ 2,37,982 ಈ ಚಲನ್ ಪ್ರಕರಣಗಳು ವಿಲೇವಾರಿಗೆ ಬಾಕಿ ಇದ್ದು ಅವುಗಳಿಂದ ಒಟ್ಟು ರೂ. 19,28,65,000 ರಷ್ಟು ಹಣ ದಂಡದ ಮೂಲಕ ಪಾವತಿಯಾಗಲು ಬಾಕಿ ಇದೆ ಎಂದು ಅಂಕಿ ಅಂಶದ ಮೂಲಕ ನಿರೀಕ್ಷಕರು ತಿಳಿಸಿರುತ್ತಾರೆ.

ದಿನಾಂಕ 13.09.2025 ರಂದು ಅಂದರೆ ಇದೇ ಶನಿವಾರದಂದು ರಾಷ್ಟ್ರೀಯ ಲೋಕ ಅದಾಲತ್ ಶಿವಮೊಗ್ಗ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಆಯೋಜಿಸಲಾಗಿದ್ದು ಅದರ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು ಈ ಚಲನ್ ಮೂಲಕ ವಿಧಿಸಲಾದ ದಂಡದ ಮೊತ್ತದಲ್ಲಿ 50% ಕಡಿಮೆ ಮಾಡಿ ದಂಡದ ಮೊತ್ತವನ್ನು ಪಾವತಿ ಮಾಡುವಂತೆ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟಿರುವ ಯೋಜನೆಯು ಇನ್ನು ಕೇವಲ ಒಂದೇ ದಿನ ಜಾರಿಯಲ್ಲಿ ಇರುವ ಕಾರಣ ಅತಿ ಹೆಚ್ಚು ಪ್ರಕರಣಗಳಲ್ಲಿ ಕಡಿಮೆ ಮೊತ್ತದ ದಂಡ ಪಾವತಿ ಮಾಡಿ ಸಾರ್ವಜನಿಕರು ಅವಕಾಶದ ಸದ್ಬಳಕೆ ಮಾಡಿಕೊಳ್ಳಬೇಕೆಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಶಿವಮೊಗ್ಗದಿಂದ ಹೊರಡಿಸಲಾದ ಪತ್ರಿಕಾ ಪ್ರಕಟಣೆಯಲ್ಲಿ ಸದಸ್ಯ ಕಾರ್ಯದರ್ಶಿಗಳು ಕೋರಿಕೊಂಡಿದ್ದಾರೆ.

Shivamogga Police ಸಾರ್ವಜನಿಕರು ತಮ್ಮ ವಾಹನ ಸಂಖ್ಯೆಯನ್ನು ನಮೂದಿಸುವ ಮೂಲಕ ಸಂಚಾರಿ ಪೊಲೀಸ್ ಠಾಣೆ ಅವರು ಬಿಡುಗಡೆಗೊಳಿಸಿರುವ ಕ್ಯೂಆರ್ ಕೋಡ್ ಮೂಲಕ ಈ ಚಲನ್ ಪ್ರಕರಣಗಳ ವಿವರವನ್ನು ತಿಳಿದುಕೊಳ್ಳಬಹುದು. ತಮ್ಮ ವಾಹನದ ಮೇಲೆ ಪ್ರಕರಣಗಳು ದಾಖಲಾಗಿದ್ದರೆ ಅವುಗಳಿಗೆ ಸಂಬಂಧಿಸಿದ ದಂಡದ ಮೊತ್ತದಲ್ಲಿ 50% ಕಡಿಮೆ ಮೊತ್ತದ ಹಣವನ್ನು ಶಿವಮೊಗ್ಗ ನಗರದ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆ ಹಾಗೂ ಪೂರ್ವ ಸಂಚಾರಿ ಪೊಲೀಸ್ ಠಾಣೆ ಮತ್ತು ಭದ್ರಾವತಿ ನಗರದ ಸಂಚಾರಿ ಪೊಲೀಸ್ ಠಾಣೆ ಅಲ್ಲದೆ ರಸ್ತೆಯ ವೃತ್ತದಲ್ಲಿ ಇರುವಂತಹ ಸಂಚಾರಿ ಪೊಲೀಸ್ ಅಧಿಕಾರಿ ಆಗಿರುವಂತಹ ಸಹಾಯಕ ಪೊಲೀಸ್ ನಿರೀಕ್ಷಕರ ಬಳಿ ಇರುವ ಈ ವಿ ಎಂ ಯಂತ್ರಗಳ ಮೂಲಕ ಸಾರ್ವಜನಿಕರು ದಂಡದ ಮೊತ್ತವನ್ನು ಪಾವತಿ ಮಾಡಲು ಅನುಕೂಲ ಮಾಡಲಾಗಿದ್ದು ಈ ಅವಕಾಶದ ಉಪಯೋಗವನ್ನು ಪಡೆದುಕೊಳ್ಳಬೇಕೆಂದು ಕೋರಿದ್ದಾರೆ.