Wednesday, February 18, 2026
Wednesday, February 18, 2026
Home Blog Page 170

Department of Health & family welfare ,Shimoga ನೇತ್ರ ಸಹಾಯಕರ ತಾತ್ಕಾಲಿಕ ಹುದ್ದೆಗೆ ಅರ್ಜಿ ಆಹ್ವಾನ

0

Department of Health & family welfare ,Shimoga ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘವು ಜಿಲ್ಲಾ ಅಂಧತ್ವ ನಿಯಂತ್ರ ಕಾರ್ಯಕ್ರಮದಡಿ ನೇತ್ರ ಸಹಾಯಕರ 5 ಖಾಲಿ ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ.
ಎರಡು ವರ್ಷದ ಡಿಪ್ಲೋಮಾ ಇನ್ ಅಪ್ಟೋಮೆಟ್ರಿ ಅಥವಾ ನೇತ್ರ ಸಹಾಯಕರಾಗಿ ಮಾನ್ಯತೆ ಪಡೆದ ಸರ್ಕಾರಿ ಆಸ್ಪತ್ರೆಗಳಲ್ಲಿ ಎನ್‌ಪಿಸಿಬಿ ನಿಯಮಾನುಸಾರ ತರಬೇತಿ ಪಡೆದಿರಬೇಕು. ಕಂಪ್ಯೂಟರ್ ಮತ್ತು ಇಂಟರ್‌ನೆಟ್ ಇತ್ಯಾದಿಗಳ ತರಬೇತಿಯಲ್ಲಿ ಉತ್ತೀರ್ಣರಾಗಿರಬೇಕು. 45 ವರ್ಷಗಳ ವಯೋಮಿತಿಯೊಳಗಿನವರಾಗಿರಬೇಕು. ನೇಮಕಾತಿಯು ಮೇರಿಟ್ ಕಂ ರೋಸ್ಟರ್ ಕಂ ಅನುಭವ ಕಂ ಅರ್ಹತೆ ಆಧಾರದ ಮೇಲೆ ಹುದ್ದೆಗಳನ್ನು ಭರ್ತಿ ಮಾಡಲಾಗುವುದು.
Department of Health & family welfare ,Shimoga ಆಸಕ್ತರು ನಿಗದಿತ ನಮೂನೆ ಅರ್ಜಿಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಧತ್ವ ನಿಯಂತ್ರಣ ವಿಭಾಗದಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಸ್ವಯಂ ದೃಢೀಕರಿಸಿದ ದಾಖಲೆಗಳ ನಕಲು ಪ್ರತಿ, ಇತ್ತೀಚಿನ ಭಾವಚಿತ್ರ, ಗುರುತಿನ ಚೀಟಿ, ಜಾತಿ ಪ್ರಮಾಣ ಪತ್ರ, ಖಾಯಂ ವಿಳಾಸ ಮತ್ತು ಸ್ವವಿವರಗಳೊಂದಿಗೆ ಸೆ. 23 ರೊಳಗಾಗಿ ಸಲ್ಲಿಸುವಂತೆ ಜಿಲ್ಲಾ ಅಂಧತ್ವ ನಿಯಂತ್ರಣ ಕಾರ್ಯಕ್ರಮಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 08182-222382/ 8197094440 /9481691580 ಗಳನ್ನು ಸಂಪರ್ಕಿಸುವುದು.

Lokayukta Shimoga ಸೆ, 19. ಸಾಗರದಲ್ಲಿ ಲೋಕಾಯುಕ್ತ ಪೊಲೀಸ್ ಜಿಲ್ಲಾ ಅಧಿಕಾರಿಗಳಿಂದ ಸಾರ್ವಜನಿಕ ಅಹವಾಲು ಅರ್ಜಿ ಸ್ವೀಕಾರ

0

Lokayukta Shimoga ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗದ ಜಿಲ್ಲಾ ಅಧಿಕಾರಿಗಳು ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಸೆ 19 ರಂದು ಬೆಳಿಗ್ಗೆ 11.00 ಗಂಟೆಯಿ0ದ ಮಧ್ಯಾಹ್ನ 1.00ರವರೆಗೆ ಸಾಗರ ತಾಲೂಕು ಕಚೇರಿ ಸಭಾಂಗಣದಲ್ಲಿ ಕುಂದುಕೊರತೆ ಅರ್ಜಿ ಸ್ವೀಕಾರ ಸಭೆ ನಡೆಸಲಿದ್ದಾರೆ.
ಸಾರ್ವಜನಿಕರು ಈ ಸಭೆಗೆ ಹಾಜರಾಗಿ ಸರ್ಕಾರಿ ಯೋಜನೆಗಳನ್ನು ಫಲಾನುಭವಿಗಳಿಗೆ ದೊರಕಿಸುವಲ್ಲಿ ಸರ್ಕಾರಿ ಅಧಿಕಾರಿಗಳ Lokayukta Shimoga ಬೇಜವಾಬ್ದಾರಿತನ, ಸರ್ಕಾರಿ ಹಣ/ಅಧಿಕಾರ ದುರುಪಯೋಗ, ಕಳಪೆ ಕಾಮಾಗಾರಿ, ಸರ್ಕಾರಿ ನೌಕರರ ಅಕ್ರಮ ಆಸ್ತಿ ಸಂಪಾದನೆ, ಸರ್ಕಾರಿ ಕರ್ತವ್ಯ ನಿರ್ವಹಿಸಲು ನಿರ್ಲಕ್ಷ್ಯ, ಅನಗತ್ಯ ವಿಳಂಬ ಮತ್ತು ಅಧಿಕೃತ ಕೆಲಸ ನಿರ್ವಹಿಸಲು ಲಂಚಕ್ಕೆ ಬೇಡಿಕೆ ಇಟ್ಟಂತಹ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವಿರುದ್ದ ಲಿಖಿತವಾಗಿ ಅಹವಾಲು ಸಲ್ಲಿಸಬಹುದೆಂದು ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.

Vidhana Soudha ವಿಧಾನಸೌಧ ಸದನಗಳ ಬಗ್ಗೆ ವಿಶೇಷ ಪುಸ್ತಕ ಬಿಡುಗಡೆ.

0

Vidhana Soudha ಬೆಂಗಳೂರಿನ ಹೊಟೇಲ್ ತಾಜ್ ನಲ್ಲಿ ಕಳೆದ ಮೂರು ದಿನಗಳಿಂದ ನಡೆದ 11 ನೇ ಕಾಮನ್ ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಷನ್ (CPA) ಭಾರತ ವಲಯದ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿಂದು ಕರ್ನಾಟಕ ವಿಧಾನಮಂಡಲದ ವಿಧಾನಸಭೆ ಹಾಗೂ ಪರಿಷತ್ ಕುರಿತ ಕಾಫಿ ಟೇಬಲ್ ವಿಶೇಷ ಪುಸ್ತಕವನ್ನು ಲೋಕಸಭಾ ಸಭಾಧ್ಯಕ್ಷರಾದ ಓಂ ಬಿರ್ಲಾ, ರಾಜ್ಯಸಭೆಯ ಉಪಸಭಾಪತಿ ಹರಿವಂಶ್ ನಾರಾಯಣ್ ಸಿಂಗ್, ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷ ಯು ಟಿ ಖಾದರ್ ಮತ್ತು ಸಭಾಪತಿ ಬಸವರಾಜ ಹೊರಟ್ಟಿ ಅವರು ಬಿಡುಗಡೆ ಮಾಡಿದರು.

Om Birla 45 ವರ್ಷಗಳಿಂದ ವಿಧಾನ ಪರಿಷತ್ ಸದಸ್ಯರಾಗಿ ,ಹಲವು ಸಲ ಸಭಾಪತಿಗಳಾಗಿ ಸೇವೆಸಲ್ಲಿಸಿದ ಹೊರಟ್ಟಿ ಅವರಿಗೆ ಸನ್ಮಾನ

0

Om Birla ಬೆಂಗಳೂರಿನ ಹೊಟೇಲ್ ತಾಜ್ ನಲ್ಲಿ ಕಳೆದ ಮೂರು ದಿನಗಳಿಂದ ನಡೆದ 11 ನೇ ಕಾಮನ್ ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಷನ್ (CPA) ಭಾರತ ವಲಯದ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿಂದು ಕಳೆದ ಸತತ 45 ವರ್ಷಗಳಿಂದ ರಾಜ್ಯ ವಿಧಾನಪರಿಷತ್ ಸದಸ್ಯರಾಗಿ ಹಾಗೂ ಹಲವು ಬಾರಿ ಸಭಾಪತಿಗಳಾಗಿ ಸೇವೆ ಸಲ್ಲಿಸಿ ಹಲವಾರು ದಾಖಲೆಗಳಿಗೆ ಭಾಜನರಾಗಿರುವ ಬಸವರಾಜ ಹೊರಟ್ಟಿ ಅವರನ್ನು ಸನ್ಮಾನಿಸಲಾಯಿತು.

Om Birla ಈ ಸಂದರ್ಭದಲ್ಲಿ ಲೋಕಸಭಾ ಸಭಾಧ್ಯಕ್ಷರಾದ ಓಂ ಬಿರ್ಲಾ, ರಾಜ್ಯಸಭೆಯ ಉಪಸಭಾಪತಿ ಹರಿವಂಶ್ ನಾರಾಯಣ್ ಸಿಂಗ್, ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷ ಯು ಟಿ ಖಾದರ್ ಅವರು ಉಪಸ್ಥಿತರಿದ್ದರು.

Rotary Club Shimoga ಅತಿಯಾದ ಮೊಬೈಲ್ ವೀಕ್ಷಣೆ ಒಳ್ಳೆಯದಲ್ಲ.-ಹಸನ್ ಬೆಳ್ಳಿಗನೂಡು

0

Rotary Club Shimoga ಒತ್ತಡದ ಜೀವನ ಶೈಲಿ, ಕೌಟುಂಬಿಕ ಸಮಸ್ಯೆ, ನಿರಾಸೆ ಸೇರಿದಂತೆ ಅನೇಕ ಕಾರಣಗಳು ಆತ್ಮಹತ್ಯೆಗೆ ದಾರಿಯಾಗುತ್ತಿವೆ ಎಂದು ಕವಿ, ಶಿಕ್ಷಕ ಹಸನ್ ಬೆಳ್ಳಿಗನೂಡು ಹೇಳಿದರು.
ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಪ್ರಯುಕ್ತ ರೋಟರಿ ಕ್ಲಬ್ ಶಿವಮೊಗ್ಗ ಮಲೆನಾಡು ಸಂಸ್ಥೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಅತಿಯಾದ ಮೊಬೈಲ್ ವೀಕ್ಷಣೆ ಮಾಡಬಾರದು. ಒಂಟಿತನ ಮನೋಭಾವದಲ್ಲಿ ಇರಬಾರದು. ದುಡುಕಿನ ನಿರ್ಧಾರ ತೆಗೆದುಕೊಳ್ಳಬಾರದು. ಸಮಸ್ಯೆಗಳಿದ್ದಲ್ಲಿ ಆಪ್ತರ ಬಳಿ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ತಿಳಿಸಿದರು.
ರೋಟರಿ ಕ್ಲಬ್ ಶಿವಮೊಗ್ಗ ಮಲೆನಾಡು ಅಧ್ಯಕ್ಷ ಪ್ರಕಾಶ್ ಮೂರ್ತಿ ಮಾತನಾಡಿ, ಆಧುನಿಕ ಜಗತ್ತಿನಲ್ಲಿ ಸಂಬಂಧಗಳ ಬೆಲೆ ತಿಳಿಯದಿರುವುದು, ಒತ್ತಡ, ಮಾನಸಿಕ ಖಿನ್ನತೆ, ಇತರ ಮಕ್ಕಳೊಂದಿಗೆ ಹೋಲಿಕೆ ಮಾಡುವುದರಿಂದ ಆತ್ಮಹತ್ಯೆಗೆ ಪ್ರಚೋದನೆಯಾಗುತ್ತಿದೆ. ಪ್ರಸ್ತುತ ಅವಿಭಕ್ತ ಕುಟುಂಬಗಳ ಪ್ರೀತಿ, ಸಂಬಂಧ, ಸಹಾಯ, ಮಾನವೀಯ ಮೌಲ್ಯಗಳು ಇಂದಿಗೆ ಅವಶ್ಯಕವೆನಿಸಿದೆ ಎಂದು ತಿಳಿಸಿದರು.
Rotary Club Shimoga ರೋಟರಿ ಸಂಸ್ಥೆಯು ನಿರಂತರವಾಗಿ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವ ಜತೆಯಲ್ಲಿ ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಅರಿವು ಕಾರ್ಯಕ್ರಮಗಳನ್ನು ನಡೆಸುತ್ತಿದೆ. ವಿವಿಧ ವಿಷಯಗಳ ಬಗ್ಗೆ ಜನರಿಗೆ ಸೂಕ್ತ ಮಾರ್ಗದರ್ಶನ ನೀಡುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ರೋಟರಿ ಜಿಲ್ಲಾ ಮಾಜಿ ಗವರ್ನರ್ ರವಿ ಮಾತಾನಾಡಿ, 26-27ನೇ ಸಾಲಿನ ಅಂತರಾಷ್ಟ್ರೀಯ ಅಧ್ಯಕ್ಷರ ಬಗ್ಗೆ ವಿವರಿಸಿದರು. ವಲಯ ಸಂಯೋಜಕಿ ಮಂಜುಳಾ ರಾಜು ಪ್ರಾರ್ಥನೆ ಮಾಡಿದರು. ಚನ್ನಯ್ಯ ನಿರೂಪಣೆ ಮಾಡಿದರು. ಗೀತ ಗಾಯನದ ಮೂಲಕ ರಂಜಿಸಿದರು. ರಶ್ಮಿ ವಂದನಾರ್ಪಣೆ ಮಾಡಿದರು. ಎಲ್ಲ ರೋಟರಿ ಸದಸ್ಯರು ಉಪಸ್ಥಿತರಿದ್ದರು.

Dr. Aravind S T ಆತ್ಮಹತ್ಯೆಗೆ ನಿರ್ಧರಿಸಿದ ವ್ಯಕ್ತಿಯನ್ನ ಗುರುತಿಸುವುದು ಹೇಗೆ?

0

ಲೇ: ಡಾ.ಅರವಿಂದ ತಿಮ್ಮಯ್ಯ.
ಪಾಸಿಟಿವ್ ಮೈಂಡ್.
ಶಿವಮೊಗ್ಗ.

Dr. Aravind S T ಮನೋವೈದ್ಯನಾಗಿ ಅನೇಕ ಕಡೆ ಆತ್ಮಹತ್ಯೆ ತಡೆಗಟ್ಟುವಿಕೆ ಬಗ್ಗೆ ಮಾತನಾಡುವಾಗ ಜನರು ಕೇಳುವ ಒಂದು ಸಾಮಾನ್ಯ ಪ್ರಶ್ನೆ _ಆತ್ಮಹತ್ಯೆ ಮಾಡಲು ನಿರ್ಧರಿಸಿರುವ ವ್ಯಕ್ತಿಯನ್ನು ಗುರುತಿಸುವುದು ಹೇಗೆ?

ಸಾಮಾನ್ಯವಾದ ಲಕ್ಷಣಗಳು
೧. ಹಿಂದಿನ ಲವಲವಿಕೆ ಕಳೆದುಕೊಳ್ಳುವುದು
೨. ಆತ್ಮಹತ್ಯೆ ಬಗ್ಗೆ ಮಾತನಾಡುವುದು
೩. ತಾನು ನಿಷ್ಪ್ರಯೋಜಕ ಹಾಗೂ ತನ್ನಿಂದ ಎಲ್ಲರಿಗೂ ತೊಂದರೆ ಎಂಬ ಭಾವನೆ
೪ ಅತಿಯಾದ ಪಾಪ ಪ್ರಜ್ಞೆ
೫. ಏಕಾಏಕಿ ಎಲ್ಲಾ ಗೆಳೆಯರು ,ಸಂಬಂಧಿಕರನ್ನು ಭೇಟಿಯಾಗಿ ಮಾತನಾಡಿಸಿ ಬರುವುದು ( ಕೊನೆಯ ವಿದಾಯ ಹೇಳಿದ ಹಾಗೆ,final 👋 final goodbye)
೬. ಏಕಾಏಕಿ ತನ್ನ ವಸ್ತುಗಳನ್ನು ಇತರರಿಗೆ ದಾನ ಮಾಡುವುದು ಹಾಗೂ ತನ್ನ ಆಸ್ತಿಯ ವಿಲ್ ಬರೆದಿಡುವುದು. Etc

ಆದರೆ ಇಲ್ಲಿ ನನ್ನ ಒಬ್ಬ ರೋಗಿ ತನ್ನ ಕುಟುಂಬದ ಫೋಟೋ ಆಲ್ಬಮ್ಗಳಲ್ಲಿ ತನ್ನ ಮುಖ ಚಯರೆಯನ್ನು ಕೆಂಪು ಬಣ್ಣದಿಂದ ಗೀಚಿ ತಾನು ಕುಟುಂಬದಿಂದ ದೂರ ಹೋಗುತ್ತಿದ್ದೇನೆ ಎಂಬ ಸೂಚನೆಯನ್ನು ನೀಡಿದ್ದ. ಆತ ತಾನು ಬದುಕುವುದರಲ್ಲಿ ಅರ್ಥ ಇಲ್ಲ ಎಂದು ಭಾವಿಸಿ ಆತ್ಮಹತ್ಯೆಗೆ ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದ.

Dr. Aravind S T ಅವರ ಸಂಬಂಧಿಕರು ಇದನ್ನು ಗಮನಿಸಿ ನನ್ನ ಬಳಿಗೆ ಕರೆದುಕೊಂಡು ಬಂದರು, ಆತನನ್ನು ಪರೀಕ್ಷಿಸಿದಾಗ ಆತ ತೀವ್ರವಾದ ಖಿನ್ನತೆಯಿಂದ ಬಳಲುತ್ತಿದ್ದ , ಕುಟುಂಬದ ಆಸ್ತಿ ಕಲಹದ ವಿಚಾರವಾಗಿ, ತಾನು ಇಷ್ಟು ವರ್ಷ ದುಡಿದಿದ್ದು ನಿಷ್ಪ್ರಯೋಜನವಾಯಿತು ಎಂಬ ಅಸಹಾಯಕ ಮನೋಭಾವ ಮತ್ತು ಆತ್ಮಹತ್ಯೆ ಬಗ್ಗೆ ತುಂಬಾ ಸೀರಿಯಸ್ ಆಗಿದ್ದ.

ಆತನನ್ನು ನಾವು ಅಡ್ಮಿಟ್ ಮಾಡಿ ಬೇಕಾದ ಚಿಕಿತ್ಸೆ, ಕೌಟುಂಬಿಕ ಆಪ್ತ ಸಮಾಲೋಚನೆ, antidepressent ಮಾತ್ರೆಗಳು ಹಾಗೂ ವೈಯಕ್ತಿಕ ಆಪ್ತ ಸಮಾಲೋಚನೆಯನ್ನು ಮಾಡಿ, ಆತ್ಮಹತ್ಯೆಯ ಬಲೆಯಿಂದ ಹೊರಗೆ ತಂದವು .ಆ ವ್ಯಕ್ತಿಯಲ್ಲಿ ಮತ್ತೆ ಆತ್ಮವಿಶ್ವಾಸ ಮೂಡಿಸಿ ,ಜೀವನದಲ್ಲಿ ಸಮಸ್ಯೆಗೆ ಸವಾಲಾಗಿ ನಿಲ್ಲಲು ಹುರಿದಿಂಬಿಸಿದವು.

ಇಂದು ಆ ವ್ಯಕ್ತಿ ಛಲದಿಂದ ಬದುಕುತ್ತಿದ್ದಾನೆ .ತನ್ನ ಕುಟುಂಬದೊಂದಿಗೆ ಪ್ರೀತಿ ವಿಶ್ವಾಸದಿಂದ ಜೀವನ ಸಾಗಿಸುತ್ತಿದ್ದಾನೆ.
ಒಬ್ಬ ಮನೋವೈದ್ಯನಾಗಿ ಇದು ನನಗೆ ಅತ್ಯಂತ ತೃಪ್ತಿ ಕೊಡುವ ವಿಷಯ.
ಆತ್ಮಹತ್ಯೆಗಳನ್ನು ತಡೆಗಟ್ಟಬಹುದು , ಸಾರ್ವಜನಿಕರು ನೊಂದವರಲ್ಲಿ ಒಂದು ಭರವಸೆ ಮೂಡಿಸಿ, ಅಗತ್ಯ ಬಿದ್ದರೆ ಆಪ್ತ ಸಮಾಲೋಚನೆ ಹಾಗೂ ಚಿಕಿತ್ಸೆಯನ್ನು ಕೊಡಿಸಿ.

DK Shivakumar ನೀರಾವರಿಗೆ ₹11ಸಾವಿರ ಕೋಟಿ ಖರ್ಚುಮಾಡಿದ್ದೇವೆ- ಡಿ.ಕೆ.ಶಿವಕುಮಾರ್

0

DK Shivakumar ತುಂಬಿದ ಭದ್ರಾ ಜಲಾಯಶ ರೈತರ ಜೀವನಕ್ಕೆ ಸುಭದ್ರತೆ ನೀಡಿದ್ದು, 5 ಜಿಲ್ಲೆಗಳ ರೈತರಿಗೆ ಇದು ಜೀವನಾಡಿ ಆಗಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಬೃಹತ್ ಮತ್ತು ಮಧ್ಯಮ ನೀರಾವರಿ ಹಾಗೂ ಬೆಂಗಳೂರು ನಗರಾಭಿವೃದ್ದಿ ಸಚಿವರಾದ ಡಿ.ಕೆ.ಶಿವಕುಮಾರ್ ಹೇಳಿದರು.
ಕರ್ನಾಟಕ ಸರ್ಕಾರ ಜಲಸಂಪನ್ಮೂಲ ಇಲಾಖೆ, ಕರ್ನಾಟಕ ನೀರಾವರಿ ನಿಗಮ ನಿಯಮಿತ ಇವರ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಬಿ.ಆರ್.ಪ್ರಾಜೆಕ್ಟ್ನಲ್ಲಿ ಭದ್ರಾ ಜಲಾಶಯ ಬಾಗಿನ ಸಮರ್ಪಣೆ ಹಾಗೂ ನೂತನ ಪ್ರವಾಸಿ ಮಂದಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭದ್ರಾ ಜಲಾಶಯ ತುಂಬಿರುವುದರಿAದ ಬಯಲು ಸೀಮೆಯ ರೈತರಿಗೆ ಅನುಕೂಲವಾಗಿದೆ. 60 ವರ್ಷಗಳ ಹಿಂದೆ ರೈತರ ಹಿತದೃಷ್ಟಿಯಿಂದ ಸರ್ ಎಂ. ವಿಶ್ವೇಶ್ವರಯ್ಯವರು ಈ ಜಲಾಶಯವನ್ನು ಸ್ಥಾಪನೆ ಮಾಡಿದ್ದು, 1945 ಜಲಾಶಯ ನಿರ್ಮಾಣ ಮಾಡವ ಬಗ್ಗೆ ಸಮೀಕ್ಷೆಯ ನಡೆಸಿ, 1965 ರಲ್ಲಿ ಅದನ್ನು ಕಾರ್ಯ ರೂಪಕ್ಕೆ ತಂದರು ಎಂದು ಹೇಳಿದರು.
ರೈತನಿಗೆ ಸರ್ಕಾರಿ ನೌಕರರಂತೆ ಸಂಬಳ, ಪಿಂಚಣಿ, ನಿವೃತ್ತಿ ಯಾವುದು ಇಲ್ಲ. ಇಂತಹ ರೈತರನ್ನು ಬದುಕಿಸುವ ಕೆಲಸ ನಮ್ಮ ಸರ್ಕಾರ ಮಾಡುತ್ತಿದೆ. ಈಗಾಗಲೇ ಸಂಸದೆ ಪ್ರಭಾ ಮಲ್ಲಿಕಾರ್ಜುನ ಅವರ ಕೋರಿಕೆಯಂತೆ ನಾಲೆಗಳನ್ನು ಅಭಿವೃದ್ದಿ ಪಡಿಸಲು 100 ಕೋಟಿ ಅನುದಾನ ಈಗಾಗಲೇ ನೀಡಲಾಗಿದ್ದು, ಈ ಮೂಲಕ ರಾಜ್ಯದ ಎಲ್ಲಾ ಶಾಸಕರು ಜನರ ಹಾಗೂ ರೈತರ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ಅವಕಾಶ ಸಿಕ್ಕಾಗ ಪುಣ್ಯ ಕೆಲಸ ಮಾಬೇಕಾಗುತ್ತದೆ. ಅದರಂತೆ ಈಗಾಗಲೇ ನಮ್ಮ ಸರ್ಕಾರದ ನೀರಾವರಿ ಯೋಜನೆಗೆ 11 ಸಾವಿರ ಕೋಟಿ ಖರ್ಚು ಮಾಡಿದ್ದು, ಚನ್ನಗಿರಿ ವ್ಯಾಪ್ತಿಯ ನೀರಾವರಿಗೆ 362 ಕೋಟಿ ಕೊಟ್ಟಿದ್ದೇವೆ. ಹಾಗೂ ಸರ್ವರಿಗೂ ಸಮಪಾಲು-ಸಮಬಾಳು ಆಶಯದಂತೆ ರಾಜ್ಯ ಜನರ ಏಳಿಗಾಗಿ ಸರ್ಕಾರದಿಂದ 5 ಗ್ಯಾರಂಟಿ ಯೋಜನೆಯನ್ನು ಕೂಡ ಜಾರಿ ಮಾಡಿದ್ದೇವೆ ಎಂದರು.
ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ 5500 ಕೋಟಿ ಕೊಡುವುದಾಗಿ ಹೇಳಿದ್ರು. ಇದೀಗ ರಾಜ್ಯ ಸರ್ಕಾರ 10,000 ಕೋಟಿ ಖರ್ಚು ಮಾಡಿದೆ. ಆಲಮಟ್ಟಿ ಜಲಾಶಯ 524 ಅಡಿಗೆ ಏರಿಸಲು ಗೆಜೆಟ್ ನೋಟಿಫಿಕೇಶನ್ ಆಗಿಬೇಕಿದೆ. ಆದರೆ ಅದರಲ್ಲೂ ರಾಜಕೀಯ ಮಾಡಲಾಗುತ್ತಿದೆ ಎಂದರು.
DK Shivakumar ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರಾದ ಎಸ್. ಎಸ್. ಮಲ್ಲಿಕಾರ್ಜುನ ಮಾತನಾಡಿ, ಭದ್ರಾ ಜಲಾಶಯದಿಂದ ಮೂರು ಜಿಲ್ಲೆಗೆ ನೀರನ್ನು ಒದಗಿಸುವ ಕೆಲಸ ಮಾಡಿಲಾಗಿದ್ದು, ಆ ಭಾಗದ ಜನರಿಗೆ. ಭದ್ರಾ ಜಲಾಶಯ ಜೀವನಾಡಿ ಆಗಿದೆ. ಎಸ್. ಎಂ. ಕೃಷ್ಣ ಅವರು ಮುಖ್ಯ ಮಂತ್ರಿಯಾಗಿದ್ದಾಗ ಈ ಯೋಜನೆಗಾಗಿ 300 ಕೋಟಿ ಬಿಡುಗಡೆ ಮಾಡಲಾಗಿತ್ತು. ಇದರಿಂದ ಹೊಸಪೇಟೆಯ ಒಂದು ತಾಲ್ಲೂಕು, ದಾವಣಗೆರೆಯ 3 ತಾಲ್ಲೂಕಿಗೆ ಅನುಕೂಲವಾಯಿತು ಹಾಗೂ ಭದ್ರ ಬಲದಂಡೆಯಿAದ ಭದ್ರಾವತಿ, ಮಾಯಕೊಂಡ, ಹರಪ್ಪನಹಳ್ಳಿ, ದಾವಣಗೆರೆ ತಾಲೂಕುಗಳಿಗೆ 1.46 ಲಕ್ಷ ಕ್ಯೂಸೆಕ್ಸ್ ನೀರು ಹರಿಯುತ್ತಿದೆ ಎಂದರು.

ಎಲ್ಲರಿಗೂ ಕುಡಿಯುವ ನೀರನ್ನು ಕೊಡಬೇಕು. ಇದರ ಬಗ್ಗೆ ಒಂದು ಸೂಕ್ತವಾದ ನಿರ್ಧಾರವನ್ನು ಕೂಡ ಮಾಡಲಾಗಿದೆ. ಆ ನಿಟ್ಟಿನಲ್ಲಿ ಭದ್ರಾ ಜಲಾಶಯದ ನೀರಾವರಿ ಯೋಜನೆಗೆ ಹೆಚ್ಚು ಅನುದಾನ ಕೊಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು. ಶಾಸಕರೆಲ್ಲರೂ ಸೇರಿ ಒಗ್ಗಟ್ಟಿನಿಂದ ರೈತರಿಗೆ ನೀರನ್ನು ತಲುಪಿಸುವ ಕೆಲಸ ಮಾಡಲಾಗಿದೆ. ಇದಕ್ಕೆ ಸಂಬAಧಿಸಿದAತೆ ಇನ್ನಷ್ಟು ನೀರಾವರಿ ಅಭಿವೃದ್ಧಿಗಾಗಿ ಅನುದಾನವನ್ನು ಸರ್ಕಾರ ಬಳಿ ಕೇಳಿದ್ದೇವೆ ಅದನ್ನು ಪೂರೈಸುವ ಭರವಸೆಯಿದೆ ಎಂದು ಎಸ್. ಎಸ್. ಮಲ್ಲಿಕಾರ್ಜುನ ತಿಳಿಸಿದರು.

ಕಾರ್ಯಕ್ರಮದಲ್ಲಿ ಭದ್ರಾವತಿ ಶಾಸಕ ಹಾಗೂ ಕರ್ನಾಟಕ ರಾಜ್ಯ ಗ್ರಾಮೀಣ ಮೂಲಭೂತ ಸೌಕರ್ಯಗಳ ಅಭಿವೃದ್ದಿ ನಿಗಮದ ಅಧ್ಯಕ್ಷ ಬಿ.ಕೆ.ಸಂಗಮೇಶ್ವರ, ಸರ್ಕಾರದ ದೆಹಲಿ ಪ್ರತಿನಿಧಿ ಹಾಗೂ ಮಾಜಿ ಸಚಿವರಾದ ಟಿ.ಬಿ.ಜಯಚಂದ್ರ, ದಾವಣಗೆರೆ ಸಂಸದರಾದ ಪ್ರಭಾ ಮಲ್ಲಿಕಾರ್ಜುನ್, ತರಿಕೇರೆ ಶಾಸಕ ಬಿ.ಹೆಚ್.ಶ್ರೀನಿವಾಸ, ಚನ್ನಗಿರಿ ಶಾಸಕ ಬಸವರಾಜು ವಿ.ಶಿವಗಂಗಾ, ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ, ಹರಪ್ಪನಹಳ್ಳಿ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ್, ಹೊನ್ನಳ್ಳಿ ಶಾಸಕ ಶಾಂತನಗೌಡ ಡಿ.ಜಿ, ಗುಬ್ಬಿ ಶಾಸಕ ಶ್ರೀನಿವಾಸ, ವಿಧಾನ ಪರಿಷತ್ ಶಾಸಕರುಗಳಾದ ಬಲ್ಕೀಶ್ ಬಾನು, ಕರ್ನಾಟಕ ರಾಜ್ಯ ಎಸ್‌ಸಿ/ಎಸ್‌ಟಿ ಅಲೆಮಾರಿಗಳ ಅಭಿವೃದ್ದಿ ನಿಗಮ ಅಧ್ಯಕ್ಷೆ ಪಲ್ಲವಿ, ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರಿದ ಅಧ್ಯಕ್ಷ ಡಾ.ಕೆ.ಪಿ.ಅಂಶುಮAತ್, ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್, ವಿವಿಧ ನಿಗಮ, ಮಂಡಳಿ ಅಧ್ಯಕ್ಷರುಗಳು, ಜಿಲ್ಲಾಧಿಕಾರಿಗಳು ಪೊಲೀಸ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Sanskrit Bharati ನೀವೀಗ ಅಂಚೆ ಮೂಲಕ ಸಂಸ್ಕೃತ ಕಲಿಕಾ ತರಗತಿ ಆರಂಭ ಮಾಹಿತಿ ಪ್ರಕಟಣೆ

0

Sanskrit Bharati ಶಿವಮೊಗ್ಗ ನಗರದ ಸಂಸ್ಕೃತ ಭಾರತಿ ವತಿಯಿಂದ ಸಾರ್ವಜನಿಕರಿಗೆ ವಿದ್ಯಾರ್ಥಿಗಳಿಗೆ, ಗೃಹಿಣಿಯರಿಗೆ, ಉದ್ಯೋಗಸ್ಥರಿಗೆ ಸರಳವಾಗಿ ಸಂಸ್ಕೃತದಲ್ಲಿ ಮಾತನಾಡುವ, ಬರೆಯುವ ಹಾಗೂ ಓದುವ ಅಂಚೆ ಮೂಲಕ ಸಂಸ್ಕೃತ ಶಿಕ್ಷಣವನ್ನು ಅಕ್ಟೋಬರ್ ತಿಂಗಳಿಂದ ಆರಂಭಿಸಲಾಗುತ್ತದೆ.
ವಾರದಲ್ಲಿ ಎರೆಡು ದಿನ ಆನ್ ಲೈನ್ ತರಗತಿಗಳನ್ನು ನಡೆಸಲಾಗುವುದು. 15 ವರ್ಷ ಮೇಲ್ಪಟ್ಟ ಯಾರೇ ಆಗಲಿ ಈ ಶಿಕ್ಷಣಕ್ಕೆ ಸೇರಬಹುದು. ಸಂಸ್ಕೃತದ ಯಾವುದೇ ಪರಿಚಯವಿಲ್ಲದವರೂ ಕೂಡ ಈ ತರಗತಿಗೆ ಸೇರಿ ಸುಲಭವಾಗಿ ಸಂಸ್ಕೃತವನ್ನು ಕಲಿಯಬಹುದು. Sanskrit Bharati ಭಾರತೀಯ ಪರಂಪರೆಯ ಅತಿ ಪುರಾತನ ಭಾಷೆಯಾದ ಸಂಸ್ಕೃತವನ್ನು ಕಲಿಯುವ ಮತ್ತು ಮಾತನಾಡುವ ಅವಕಾಶಕ್ಕೆ ಒಂದು ಅತ್ಯುತ್ತಮ ವ್ಯವಸ್ಥೆಯನ್ನು ಸಂಸ್ಕೃತ ಭಾರತಿ ಒದಗಿಸಿದೆ. ಇಡೀ ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬಾಷೆಗಳಲ್ಲಿ ಸಂಸ್ಕೃತ ಮುಂದೆ ವಿಶ್ವಮಾನ್ಯ ಭಾಷೆಯಾಗಲಿದ್ದು ಜಗತ್ತಿನಲ್ಲಿ ಸರ್ವವ್ಯಾಪಿಯಾಗಲಿದೆ. ಮನೆಯಲ್ಲಿಯೇ ಕುಳಿತು ಸುಲಭವಾಗಿ ಸಂಸ್ಕೃತ ಕಲಿಸುವ ಈ ಯೋಜನೆಗೆ ಸಂಸ್ಕೃತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಸ್ಕೃತ ಭಾರತಿ ಶಿವಮೊಗ್ಗ ಜಿಲ್ಲಾ ಸಂಯೋಜಕ ಟಿ.ವಿ.ನರಸಿಂಹ ಮೂರ್ತಿ ತಿಳಿಸಿದ್ದಾರೆ.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ, ಗೌತಮ, ಸಂಸ್ಕೃತ ಭಾರತಿ ಪೂರ್ಣಾವಧಿ ಕಾರ್ಯಕರ್ತ, ಸಂಸ್ಕೃತ ಭವನಮ್, ಬಿ.ಬಿ.ರಸ್ತೆ, ಶಿವಮೊಗ್ಗ ದೂರವಾಣಿ, , 7353778239 ಇವರನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ.

Sahyadri Narayana Hospital ಗಂಟಲಲ್ಲಿ ಸಿಲುಕಿ ಕೋಳಿ ಮೂಳೆ: ಆಪರೇಷನ್ ಇಲ್ಲದೇ ಹೊರತೆಗೆದ ವೈದ್ಯರು, ಸಹ್ಯಾದ್ರಿ ನಾರಾಯಣ ಆಸ್ಪತ್ರೆಯ ಸಾಧನೆ

0

Sahyadri Narayana Hospital ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಆಸ್ಪತ್ರೆ ಇತ್ತೀಚೆಗೆ ವಿರಳ ಹಾಗೂ ಕ್ಲೀಷ್ಟಕರ ಚಿಕಿತ್ಸೆಯೊಂದನ್ನು ನಡೆಸಲಾಗಿದೆ.

ಒಂದು ಮೂಳೆಯ ಕಥೆ: ಗಂಟಲಿನಲ್ಲಿ ಸಿಲುಕಿದ ಕೋಳಿ ಮೂಳೆ, ಶಸ್ತ್ರಚಿಕಿತ್ಸೆಯಿಲ್ಲದೆ ವೈದ್ಯರು ಹೊರ ತೆಗೆದಿದ್ದಾರೆ. ಸಹ್ಯಾದ್ರಿ ನಾರಾಯಣ ಆಸ್ಪತ್ರೆ ವೈದ್ಯರಿಂದ ವಿಶಿಷ್ಟ ಚಿಕಿತ್ಸೆ ನಡೆಸಲಾಗಿದೆ.

ಹೀಗೊಂದು ಪ್ರಕರಣ, ಸರಳ ದೈನಂದಿನದ ಊಟವೊಂದು ವ್ಯಕ್ತಿಯೊಬ್ಬರಿಗೆ ಸಾವಿನ ಬಾಗಿಲವರೆಗೆ ಕರೆದುಕೊಂಡು ಹೋಗಿ ಬಂದಿದೆ. ವೈದ್ಯರ ತುರ್ತು ಚಿಕಿತ್ಸೆಯಿಂದ ರೋಗಿ ಸಾವಿನ ದವಡೆಯಿಂದ ಪಾರಾಗಿದ್ದಾರೆ.

ಸುಮಾರು ೭೦ ವರ್ಷದ ವ್ಯಕ್ತಿಯೊಬ್ಬರು ಕೋಳಿ ಮೂಳೆ ಆಸ್ವಾದಿಸಲು ಹೋಗಿ ಅದು ಅನ್ನನಾಳದಲ್ಲಿ ಸಿಲುಕಿಹಾಕಿಕೊಂಡಿತ್ತು. ಮೂಳೆ ಅನ್ನನಾಳದಲ್ಲಿ ಸಿಲುಕಿಹಾಕಿಕೊಳ್ಳುವ ಮುಂಚೆ ಅದನ್ನು ಚುಚ್ಚಿ ರಕ್ತಸ್ರಾವವಾಗಿಸಿತ್ತು. ರೋಗಿ ಉಸಿರಾಡಲು ಸಹ ಕಷ್ಟ ಪಡುತ್ತಿರುವಾಗ ರೋಗಿಯ ಸಂಬಂಧಿಕರು ಅವರನ್ನು ಸಹ್ಯಾದ್ರಿ ನಾರಾಯಣ ಆಸ್ಪತ್ರೆಗೆ ಕರೆ ತಂದಿದ್ದಾರೆ.

ಹಿರಿಯ ಗ್ಯಾಸ್ಟ್ರೋಎಂಟರಾಲಜಿಸ್ಟ್‌ ಡಾ. ಶಿವಕುಮಾರ್ ವಿ ಅವರ ತಂಡ ತುರ್ತಾಗಿ ರೋಗಿಯನ್ನು ಪರೀಕ್ಷಿಸಿ ಸಿಟಿ ಇಮೇಜಿಂಗ್‌ ಪರೀಕ್ಷೆಗೆ ಒಳಪಡಿಸಿದ್ದಾರೆ. ಇದರಲ್ಲಿ ಹರಿತವಾದ ಎಲುಬೊಂದು ಅನ್ನನಾಳವನ್ನು ಹರಿದು ಅಪಾಯಕಾರಿ ರಂಧ್ರ ಉಂಟುಮಾಡಿ, ಗಾಳಿ, ಹಾಗೂ ದ್ರವವು ಎದೆಗೂಡು ಹಾಗೂ ಮೀಡಿಯಾಸ್ಷೀನಮ್‌ಗೆ ಸೋರಿಕೆಯಾಗುತ್ತಿರುವುದು ಕಂಡು ಬಂದಿದೆ.

ತಕ್ಷಣವೇ ಕಾರ್ಯಪ್ರವೃತ್ತರಾದ ಡಾ. ಶಿವಕುಮಾರ್‌, ಗ್ಯಾಸ್ಟ್ರೋಎಂಟರಾಲಜಿಸ್ಟ್‌ ಡಾ ಸುಮೇಶ ನಾಯರ್‌, ಡಾ ಪೂಜಾ ಕ್ರಿಷ್ಣಪ್ಪ ಅವರಿದ್ದ ತಂಡ, ಮೂಳೆ ಹೊರತಗೆಯಲು ಶಸ್ತ್ರಚಿಕಿತ್ಸೆಯ ಮೊರೆಹೋಗದೆ, ಕೇವಲ ಲೇಸರ್‌ ಹಾಗೂ ಅತ್ಯಾಧುನಿಕ ಎಂಡೋಸ್ಕೋಪಿಕ್‌ ತಂತ್ರಜ್ಞಾನವನ್ನು ಬಳಸಿಕೊಂಡು ಮೂಳೆಯನ್ನು ಹೊರತೆಗೆದಿದ್ದಾರೆ.

ಚಿಕಿತ್ಸೆಯ ಬಗ್ಗೆ ಮಾತನಾಡಿದ ಡಾ. ಶಿವಕುಮಾರ್‌ ಅವರು, “ರೋಗಿ ತೀವ್ರ ಎದೆನೋವು ಮತ್ತು ಉಸಿರಾಟದ ತೊಂದರೆಯೊಂದಿಗೆ ಆಸ್ಪತ್ರೆಗೆ ಬಂದಿದ್ದರು. ಈ ರಂಧ್ರವನ್ನು ಗಮನಿಸಿದರೆ ಶಸ್ತ್ರಚಿಕಿತ್ಸೆ ಅನಿವಾರ್ಯವಾಗಬಹುದಿತ್ತು, ಆದರೆ ರೋಗಿಗೆ ಶಸ್ತ್ರಚಿಕಿತ್ಸೆಯ ಅಪಾಯ ಹೆಚ್ಚು ಇದ್ದುದರಿಂದ ನಾವು ಆಧುನಿಕ ಎಂಡೋಸ್ಕೋಪಿಕ್ ವಿಧಾನವನ್ನು ಆಯ್ಕೆ ಮಾಡಿದೆವು, ಸಾಮಾನ್ಯ ಅನಸ್ತೇಷಿಯಾ ಅಡಿಯಲ್ಲಿ, ತಂಡ ಎಲುಬನ್ನು ಸಣ್ಣ ತುಂಡುಗಳಾಗಿ ಮಾಡಿ ಎಂಡೋಸ್ಕೋಪ್ ತಂತ್ರಜ್ಞಾನದಿಂದ ತೆಗೆದುಹಾಕಿತು. ನಂತರ ರಂಧ್ರವನ್ನು ಲೋಹದ ಕ್ಲಿಪ್‌ಗಳ ಮೂಲಕ ಮುಚ್ಚಲಾಯಿತು.”

Sahyadri Narayana Hospital “ಈ ರೀತಿಯ ಪ್ರಕರಣಗಳು ಅತ್ಯಂತ ಸವಾಲಿನವು, ಏಕೆಂದರೆ ಸೋಂಕು ಮತ್ತು ಉಸಿರಾಟ ವೈಫಲ್ಯದ ಅಪಾಯ ಅತ್ಯಂತ ಹೆಚ್ಚಾಗಿರುತ್ತದೆ. ಆದರೆ ತುರ್ತು ಚಿಕಿತ್ಸೆಯಿಂದ ರೋಗಿ ಕೇವಲ ನಾಲ್ಕು ದಿನಗಳಲ್ಲಿ ಸಂಪೂರ್ಣ ಗುಣಮುಖರಾದರು,” ಎಂದು ಡಾ. ಶಿವಕುಮಾರ್ ಹೇಳಿದರು.

“ಊಟ ಮಾಡುವಾಗ ಯಾವತ್ತೂ ಗಮನ ಬೇರೆಡೆ ಇರಬಾರದು—ಟಿವಿ ಅಥವಾ ಸ್ಮಾರ್ಟ್‌ಫೋನ್‌ಗೆ ನೋಡುತ್ತ ಊಟ ಮಾಡುವುದರಿಂದ ಒಂದು ಸಣ್ಣ ತಪ್ಪುವೈದ್ಯಕೀಯ ತುರ್ತು ಪರಿಸ್ಥಿತಿಯನ್ನೇ ಉಂಟುಮಾಡಬಹುದು ಡಾ.ಶಿವಕುಮಾರ್‌ ಎಂದಿದ್ದಾರೆ .

ಸಹ್ಯಾದ್ರಿ ನಾರಾಯಣ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ವರ್ಗೀಸ್ ಪಿ ಜಾನ್ ಅವರು ಈ ಚಿಕಿತ್ಸೆ ನೀಡಿದ ತಂಡವನ್ನು ಅಭಿನಂದಿಸಿದ್ದಾರೆ “ಈ ಪ್ರಕರಣವು ನಮ್ಮ ಆಸ್ಪತ್ರೆಯು ಅಪರೂಪದ, ತುರ್ತು ಪ್ರಕರಣಗಳನ್ನು ತಂತ್ರಜ್ಞಾನ, ನಿಪುಣತೆ, ಹಾಗೂ ವಿವಿಧ ವಿಭಾಗಗಳ ಸಮನ್ವಯತೆಯಿಂದ ತುಂಬಾ ಸುಲಲಿತವಾಗಿ ಮಾಡುತ್ತದೆ ಎನ್ನುವುದು ಜಗತ್ತಿಗೆ ತೋರಿಸಿದೆ ಎಂದರು.”

Om birla ಚರ್ಚೆಯೇ ಪ್ರಜಾಪ್ರಭುತ್ವದ ಜೀವಾಳ- ಲೋಕಸಭಾಧ್ಯಕ್ಷ ಓಂಬಿರ್ಲಾ

0

Ombirla ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶ ನಮ್ಮ ಭಾರತ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ಭಾರತದಲ್ಲಿ ಚರ್ಚೆ ಎಂದರೆ ಒಡಕು ಅಲ್ಲ, ಬದಲಿಗೆ ಪ್ರಜಾಪ್ರಭುತ್ವದ ಚೈತನ್ಯ. ಚರ್ಚೆಯು ವಿಶ್ವಾಸವನ್ನು ಬೆಳೆಸುತ್ತದೆ ಮತ್ತು ವಿಶ್ವಾಸವು ಜನರ ಆಕಾಂಕ್ಷೆಗಳನ್ನು ಈಡೇರಿಸುತ್ತದೆ. ಚರ್ಚೆಯೇ ಪ್ರಜಾಪ್ರಭುತ್ವದ ಜೀವಾಳ ಎಂದು ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರು ಅಭಿಪ್ರಾಯ ಪಟ್ಟರು.

ಇಂದು ಬೆಂಗಳೂರಿನ ಐತಿಹಾಸಿಕ ವಿಧಾನ ಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಇಂದು ಹಮ್ಮಿಕೊಳ್ಳಲಾಗಿದ್ದ 11ನೇ ಕಾಮನ್ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಷನ್ (CPA) ಭಾರತ ವಲಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು ಕೇಂದ್ರದ ಲೋಕಸಭೆ, ರಾಜ್ಯಸಭೆ ಸೇರಿದಂತೆ ರಾಜ್ಯ ವಿಧಾನ ಮಂಡಲಗಳ ಸಭೆಗಳಲ್ಲಿ ಗುಣಾತ್ಮಕ ಚರ್ಚೆಗಳು ಮತ್ತು ಆರೋಗ್ಯಕರ ವಿಮರ್ಶೆಗಳು ಜನರಲ್ಲಿ ಪ್ರಜಾಪ್ರಭುತ್ವದ ಮೇಲಿನ ನಂಬಿಕೆಯನ್ನು ಬಲಪಡಿಸುತ್ತವೆ ಎಂಬುದನ್ನು ಪ್ರತಿಯೊಬ್ಬ ಜನಪ್ರತಿನಿಧಿ ಗೌರವಿಸಬೇಕು ಎಂದು ಹೇಳಿದರು.

ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಸಹ ವಿಚಾರಗಳ ಭಿನ್ನತೆಯಲ್ಲಿ ಒಗ್ಗಟ್ಟು ಇರಬೇಕು, ರಾಷ್ಟ್ರ, ರಾಜ್ಯ ಮತ್ತು ಜನರಿಗಾಗಿ ಉತ್ತಮ ನೀತಿಗಳನ್ನು ರೂಪಿಸಲು ಒಗ್ಗಟ್ಟಿನಿಂದ ಜನ ಪ್ರತಿನಿಧಿಗಳು ಕೆಲಸ ಮಾಡಬೇಕೆಂದು ಅವರು ಕರೆ ನೀಡಿದರು.

ಸಂಸದೀಯ ಕಲಾಪಗಳಲ್ಲಿ ಆಗಾಗ್ಗೆ ಉಂಟಾಗುವ ಅಡೆತಡೆಗಳಿಂದ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುತ್ತದೆ. ಒಳ್ಳೆಯ ಚರ್ಚೆಯ ನಡುವಿನ ಸ್ಥಗಿತಗಳು ಮತ್ತು ಮುಂದೂಡಿಕೆಗಳು ಪ್ರಜಾಪ್ರಭುತ್ವಕ್ಕೆ ಹಾನಿಕಾರಕ ಎಂದು ಎಚ್ಚರಿಸಿದರು. ಈ ಕುರಿತಂತೆ ಎಲ್ಲಾ ಪಕ್ಷಗಳು ಚಿಂತಿಸಬೇಕೆಂದು ಸಲಹೆ ನೀಡಿದರು.

ಕಡಿಮೆಯಾಗುತ್ತಿರುವ ಸಂಸದೀಯ ಕಲಾಪಗಳ ಸಂಖ್ಯೆ ಮತ್ತು ಚರ್ಚೆಗೆ ಸೀಮಿತ ಸಮಯದ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು ಜನರ ಆಕಾಂಕ್ಷೆಗಳನ್ನು ಈಡೇರಿಸಲು ಹೆಚ್ಚಿನ ಕಲಾಪಗಳು ಮತ್ತು ದೀರ್ಘ ಚರ್ಚೆಗಳು ಸೇರಿದಂತೆ ಕಲಾಪಗಳ ವಿಸ್ತರಣೆಯ ಅಗತ್ಯವಿದೆ ಎಂದರು.
ಕಲಾಪಗಳಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆ ಸೇರಿದಂತೆ ಡಿಜಿಟಲ್ ಪಾರ್ಲಿಮೆಂಟ್ ಮೂಲಕ ವಿವಿಧ ಭಾಷೆಗಳ ಜನಪ್ರತಿನಿಧಿಗಳು ಚರ್ಚೆಯಲ್ಲಿ ಸುಗಮವಾಗಿ ಪಾಲ್ಗೊಳ್ಳಲು ಮತ್ತು ಪ್ರತಿಕ್ರಿಯಿಸಲು ಅನುವಾಗುವಂತೆ ತಾಂತ್ರಿಕ ಉಪಕ್ರಮಗಳ ಮೂಲಕ ಭಾರತದ ಸಂಸದೀಯ ಪ್ರಕ್ರಿಯೆಯನ್ನು ಕನ್ನಡ, ತಮಿಳು, ತೆಲುಗು, ಮರಾಠಿ, ಅಸ್ಸಾಮೀಸ್ ಸೇರಿದಂತೆ 22 ಭಾರತೀಯ ಭಾಷೆಗಳಲ್ಲಿ ಸಂಸದೀಯ ಕಾರ್ಯಕಲಾಪಗಳು ಲಭ್ಯವಿವೆ.

Ombirla ಕಾಮನ್ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಷನ್ 180ಕ್ಕೂ ಹೆಚ್ಚು ಸಂಸತ್ತುಗಳು ಮತ್ತು ವಿಧಾನಸಭೆಗಳ ಒಕ್ಕೂಟವಾಗಿದ್ದು, ಭಾರತವು CPA ಯ 9ನೇ ವಲಯವನ್ನು ರೂಪಿಸಿದೆ, ಇದರಲ್ಲಿ 31 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಶಾಖೆಗಳಿವೆ. ತಾವು CPA ಭಾರತ ವಲಯದ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯಸಭೆಯ ಉಪಾಧ್ಯಕ್ಷರಾದ ಹರಿವಂಶ್ ನಾರಾಯಣ ಸಿಂಗ್ ಮಾತನಾಡಿ ಕರ್ನಾಟಕ ರಾಜ್ಯ ಸಾಂಸ್ಕೃತಿಕ ವೈಭವಕ್ಕೆ ಹೆಸರುವಾಸಿಯಾಗಿದೆ. ಇಲ್ಲಿನ ಕಾಫಿ, ಚಿನ್ನ ಹಾಗೂ ರೇಷ್ಮೆ ಸೀರೆಗೆ ವಿಶ್ವವಿಖ್ಯಾತಿ ಗಳಿಸಿವೆ. ವಚನಕಾರ ಬಸವಣ್ಣ, ರಾಣಿ ಚೆನ್ನಮ್ಮ, ಸರ್ ಎಂ ವಿಶ್ವೇಶ್ವರಯ್ಯನವರಂತಹ ಮಹಾನ್ ಚೇತನಗಳು ಕರ್ನಾಟಕದ ಹಿರಿಮೆ ಹೆಚ್ಚಿಸಿದ್ದಾರೆ .ಭೂಸುಧಾರಣೆಯಂತಹ ಜನಪರ ಕಾಯ್ದೆಯನ್ನು ಜಾರಿಗೆ ತಂದ ಶ್ರೇಯಸ್ಸು ಕರ್ನಾಟಕಕ್ಕೆ ಸಲ್ಲುತ್ತದೆ ಎಂದರು.

ಸಮಾಜದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯನ್ನು ತರಬೇಕಾದ ಜವಾಬ್ದಾರಿ ನಮ್ಮಗಳ ಮೇಲಿದೆ,ಈ ನಿಟ್ಟಿನಲ್ಲಿ ಕಾಲಕ್ಕೆ ತಕ್ಕಂತೆ ಹೊಸ ಹೊಸ ಕಾಯ್ದೆಗಳನ್ನು ನಾವು ಜಾರಿಗೆ ತರಬೇಕಾಗಿದೆ. ಸದನದಲ್ಲಿ ಈ ಕುರಿತು ಹೆಚ್ಚಿನ ಚರ್ಚೆ ನಡೆಸಬೇಕಿದೆ. ವಿಪರ್ಯಾಸವೆಂದರೆ ಸದನದ ಬಹುತೇಕ ಸಮಯ ಬೇರೆ ಬೇರೆ ಕಾರಣಗಳಿಗೆ ವ್ಯರ್ಥ ವಾಗುವುದನ್ನು ನಾವು ಕಾಣುತ್ತಿದ್ದೇವೆ. ರಾಜಕೀಯ ಭಿನ್ನಾಭಿಪ್ರಾಯಗಳೇನೆ ಇರಲಿ ನಾವು ಜನಪರವಾದ, ದೇಶದ ಅಭಿವೃದ್ಧಿ, ಐಕ್ಯತೆ ಕುರಿತಾದ ವಿಷಯಗಳು ಬಂದಾಗ ಅವೆಲ್ಲವನ್ನು ಮರೆತು ಸಮ್ಮತಿ ಸೂಚಿಸಬೇಕಾಗಿದೆ ಎಂದು ಹೇಳಿದರು.

ಸದನದಲ್ಲಿ ಆರೋಗ್ಯಕರ ಸಂವಾದ ನಡೆಯಬೇಕು.ಆ ಮೂಲಕ ಜನರ ನಂಬಿಕೆಗೆ ಚ್ಯುತಿ ಬಾರದಂತೆ ಶಾಸಕರ ನಡವಳಿಕೆ ಇರಬೇಕು. ಹಾಗಾಗಿ ಈ ಎರಡು ದಿನಗಳ ಕಾರ್ಯಾಗಾರ ಅತ್ಯಂತ ಮಹತ್ವಪೂರ್ಣದ್ದಾಗಿದೆ. ಇಂದು ಇಡೀ ಜಗತ್ತು ಭಾರತವನ್ನು ಅತ್ಯಂತ ಗೌರವದಿಂದ ಕಾಣುತ್ತಿದೆ .ಆದ್ದರಿಂದ ನಾವು ಹೆಚ್ಚು ಜವಾಬ್ದಾರಿ ಹಾಗೂ ಜಾಗರೂಕತೆಯಿಂದ ವರ್ತಿಸಬೇಕೆಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ 11ನೇ ಕಾಮನ್ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಷನ್ ಭಾರತ ಕ್ಷೇತ್ರೀಯ ಸಮ್ಮೇಳನಕ್ಕೆ ನಮ್ಮ ಬೆಂಗಳೂರಿಗೆ ಎಲ್ಲರನ್ನೂ ಸ್ವಾಗತಿಸಲು ನನಗೆ ಸಂತೋಷವಾಗಿದೆ. ಸಾಮರಸ್ಯದ ಸಂಪ್ರದಾಯಗಳು, ಪ್ರಜಾಪ್ರಭುತ್ವದ ಚೈತನ್ಯ ಮತ್ತು ರೋಮಾಂಚಕ ನಾಗರಿಕ ಸಂಸ್ಕೃತಿಯಿಂದ ಕೂಡಿದ ಕರ್ನಾಟಕ, ಈ ಶಾಸಕರ ಮತ್ತು ಚಿಂತಕರ ಸಮಾವೇಶವನ್ನು ಆಯೋಜಿಸುವ ಗೌರವಕ್ಕೆ ಪಾತ್ರವಾಗಿರುವುದು ಹೆಮ್ಮೆಯ ಜವಬ್ದಾರಿಯಾಗಿದೆ ಎಂದರು.

ನಾವು ಇಲ್ಲಿ ಕೇವಲ ಶಾಸಕಾಂಗದ ಪ್ರತಿನಿಧಿಗಳಾಗಿ ಮಾತ್ರವಲ್ಲ, ಪ್ರಜಾಪ್ರಭುತ್ವದ ಕಾವಲುಗಾರರಾಗಿ, ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ನಾವೆಲ್ಲ ಇಂದು ಈ ಸಮ್ಮೇಳನದ ಹೆಸರಲ್ಲಿ ಒಟ್ಟಿಗೆ ಸೇರಿದ್ದೇವೆ. ಡಾ. ಬಿ. ಆರ್. ಅಂಬೇಡ್ಕರ್ರವರು ನೆನಪಿಸಿದಂತೆ, ಪ್ರಜಾಪ್ರಭುತ್ವವು ಭಾರತಕ್ಕೆ ಹೊಸದಾಗಿ ಆಮದು ಮಾಡಿಕೊಂಡ ಉಡುಗೊರೆಯಲ್ಲ, ಬದಲಿಗೆ ನಮ್ಮ ನಾಗರಿಕತೆಯ ಚೈತನ್ಯದಲ್ಲಿ ಆಳವಾಗಿ ಬೇರೂರಿರುವ ತತ್ವವಾಗಿದೆ ಎಂದರು.

ಆಧುನಿಕ ಸಂಸತ್ತುಗಳು ಸ್ಥಾಪನೆಯಾಗುವ ಮೊದಲೇ, ಭಾರತದಲ್ಲಿ ಚರ್ಚೆ ಮತ್ತು ಸಾಮೂಹಿಕ ನಿರ್ಧಾರ ಕೈಗೊಳ್ಳುವ ಸಂಪ್ರದಾಯಗಳಿದ್ದವು—ಬುದ್ಧನ ಕಾಲದಲ್ಲಿ ಜನರ ಸಭೆಗಳಿಗೆ ಚಾಲನೆ ನೀಡಲಾಯಿತು. ಕರ್ನಾಟಕದಲ್ಲಿ 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಪ್ರಜಾಪ್ರಭುತ್ವದ ಚರ್ಚೆಯ ಚೈತನ್ಯವು ಅಭಿವ್ಯಕ್ತಿಯಾಯಿತು. ಇದು ನಿಜವಾದ “ಜನರ ಸಂಸತ್” ಆಗಿತ್ತು.

ಕಾಮನ್ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಷನ್ (CPA) ಕೇವಲ ಒಂದು ಸಂಸ್ಥೆಯಲ್ಲ, ಬದಲಿಗೆ ಆಲೋಚನೆಗಳು, ಮೌಲ್ಯಗಳು ಎತ್ತಿ ಹಿಡಿಯುವ ಸಂಸ್ಥೆಯಾಗಿದೆ. ಭೌಗೋಳಿಕತೆ ಮತ್ತು ಇತಿಹಾಸವನ್ನು ಮೀರಿ, ಸಂಸದೀಯ ಪ್ರಜಾಪ್ರಭುತ್ವ, ಕಾನೂನಿನ ಆಡಳಿತ ಮತ್ತು ಮಾನವ ಘನತೆಗೆ ನಮ್ಮ ಬದ್ಧತೆಯ ಮೂಲಕ ನಮ್ಮನ್ನು ಒಗ್ಗೂಡಿಸುತ್ತದೆ. ಈ ಸಮ್ಮೇಳನದ ಧ್ಯೇಯವಾಕ್ಯ “ಶಾಸಕಾಂಗದ ಸದನಗಳಲ್ಲಿ ಚರ್ಚೆ ಮತ್ತು ವಿಚಾರವಿನಿಮಯ: ಜನರ ವಿಶ್ವಾಸವನ್ನು ಗಟ್ಟಿಗೊಳಿಸುವುದು ಮತ್ತು ಜನರ ಆಕಾಂಕ್ಷೆಗಳನ್ನು ಪೂರೈಸುವುದು” ಎಂಬುದು ಸಕಾಲಿಕವಾಗಿದೆ ಎಂದರು.

ಪ್ರಜಾಪ್ರಭುತ್ವವು ಬಾಹ್ಯ ಶತ್ರುಗಳಿಂದ ಕಡಿಮೆ ಅಪಾಯದಲ್ಲಿದೆ, ಆದರೆ ಒಳಗಿನವರಿಂದ ಹೆಚ್ಚಿನ ಅಪಾಯದಲ್ಲಿದೆ-ಚರ್ಚೆಯನ್ನು ಸರ್ವಾಧಿಕಾರದಿಂದ ಬದಲಾಯಿಸಿದಾಗ, ಸಂವಾದವು ಏಕಮುಖವಾದಾಗ ಮತ್ತು ಶಾಸಕಾಂಗಗಳು ಸಾಮಾನ್ಯ ಒಳಿತಿನ ಕ್ಷೇತ್ರವಾಗಿರದೆ ಪಕ್ಷಪಾತದ ಉಪಕರಣವಾಗಿ ಮಾರ್ಪಾಡಾಗುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸಾಮಾಜಿಕ ಡಾರ್ವಿನ್ ವಾದದ ಅಪಾಯಕಾರಿ ಪ್ರವೃತ್ತಿ-ಕೇವಲ ಬಲಿಷ್ಠರೇ ಉಳಿಯಲು ಅರ್ಹರೆಂಬ ನಂಬಿಕೆಯು ಪ್ರಜಾಪ್ರಭುತ್ವದ ಸಮಾನತೆಯ ಭರವಸೆಯನ್ನು ಕ್ಷೀಣಿಸುತ್ತದೆ. ನಿಜವಾದ ಗಣರಾಜ್ಯವು ಬಲಿಷ್ಠರನ್ನು ಸಶಕ್ತಗೊಳಿಸುವ ರೀತಿಯಿಂದ ಅಲ್ಲ, ಬದಲಿಗೆ ದುರ್ಬಲರನ್ನು ಉನ್ನತಿಗೊಳಿಸುವ ರೀತಿಯಿಂದ ತೀರ್ಮಾನವಾಗುತ್ತದೆ.

ಕರ್ನಾಟಕದ ಮುಖ್ಯಮಂತ್ರಿಯಾಗಿ, ನಮ್ಮ ರಾಜ್ಯವು ಈ ಪ್ರಜಾಪ್ರಭುತ್ವದ ಚೈತನ್ಯವನ್ನು ಸಾಕಾರಗೊಳಿಸಿದೆ ಎಂದು ಹೇಳಲು ನನಗೆ ಹೆಮ್ಮೆಯಿದೆ. ಬಸವಣ್ಣನವರ ನೇತೃತ್ವದ ವಚನ ಚಳವಳಿಯಿಂದ ಸಮಾನತೆಯನ್ನು ಒತ್ತಾಯಿಸಿದ ದಿನಗಳಿಂದ, ಆಧುನಿಕ ಕರ್ನಾಟಕದ ಪ್ರಗತಿಪರ ಸುಧಾರಣೆಗಳವರೆಗೆ, ನಮ್ಮ ಸಮಾಜವು ಮುಕ್ತ ಸಂವಾದ ಮತ್ತು ನ್ಯಾಯವನ್ನು ಮೌಲ್ಯೀಕರಿಸಿದೆ.

ನಮ್ಮ ವಿಧಾನಸಭೆಯು ಸಾಮಾಜಿಕ ನ್ಯಾಯ, ಭಾಷಾಂಗ ಗುರುತು, ಅಥವಾ ಆರ್ಥಿಕ ಒಕ್ಕೂಟದ ಬಗ್ಗೆ ಐತಿಹಾಸಿಕ ಚರ್ಚೆಗಳಿಗೆ ವೇದಿಕೆಯಾಗಿದೆ. ನಾವು ಅಭಿವೃದ್ಧಿಯೊಂದಿಗೆ ಸಮಾನತೆಯನ್ನು, ಬೆಳವಣಿಗೆಯೊಂದಿಗೆ ಸುಸ್ಥಿರತೆಯನ್ನು ಮತ್ತು ಸಂಪ್ರದಾಯದೊಂದಿಗೆ ನಾವೀನ್ಯತೆಯನ್ನು ಸಮತೋಲನಗೊಳಿಸಲು ಶ್ರಮಿಸಿದ್ದೇವೆ.

ಈ ವೇದಿಕೆಯು ನಾಗರಿಕರು ಮತ್ತು ಅವರ ಪ್ರತಿನಿಧಿಗಳ ನಡುವಿನ ವಿಶ್ವಾಸವನ್ನು ಬಲಪಡಿಸುವ ಅಭ್ಯಾಸವನ್ನು ಉತ್ತೇಜಿಸಲಿ, ಜವಾಹರಲಾಲ್ ನೆಹರೂರವರ ಮಾತಿನಂತೆ, ಪ್ರಜಾಪ್ರಭುತ್ವವು “ಕೇವಲ ಆಡಳಿತದ ರೂಪವಲ್ಲ, ಜೀವನ ವಿಧಾನ”ವಾಗಿ ಮುಂದುವರಿಯಲಿ.

ಕರ್ನಾಟಕಕ್ಕೆ ಈ ಜವಾಬ್ದಾರಿಯನ್ನು ವಹಿಸಿಕೊಟ್ಟ ಕಾಮನ್ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಷನ್ಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಮತ್ತು ಈ ಸಮ್ಮೇಳನಕ್ಕೆ ಶುಭವಾಗಲಿ ಎಂದು ಹಾರೈಸಿದರು.

ಕರ್ನಾಟಕ ವಿಧಾನಸಭಾಧ್ಯಕ್ಷ ಯು ಟಿ ಖಾದರ್ ಅವರು ಕಾರ್ಯಕ್ರಮದ ಆರಂಭದಲ್ಲಿ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿ ಈ ಸಮ್ಮೇಳನವು ಸಂಸದರು, ಶಾಸಕಾಂಗ ನಾಯಕರು ಮತ್ತು ತಜ್ಞರನ್ನು ಒಗ್ಗೂಡಿಸುವ ವೇದಿಕೆಯಾಗಿದ್ದು, ಆಲೋಚನೆಗಳ ಹಂಚಿಕೆ, ಕಲಿಕೆ ಮತ್ತು ಆಡಳಿತದ ಉತ್ತಮ ಅಭ್ಯಾಸಗಳ ಚರ್ಚೆಗೆ ಅವಕಾಶ ನೀಡುತ್ತದೆ ಎಂದರು.

ಸಂಸದೀಯ ವ್ಯವಸ್ಥೆಯು ಜನಪ್ರಭುತ್ವದ ಅಡಿಪಾಯವಾಗಿದ್ದು, ಉತ್ತಮ ಆಡಳಿತವು ಜನರ ಕನಸುಗಳನ್ನು ಪ್ರತಿಬಿಂಬಿಸುತ್ತದೆ. ಈ ಸಮ್ಮೇಳನವು ಸಂಸದೀಯ ವ್ಯವಸ್ಥೆಯನ್ನು ಬಲಪಡಿಸುವುದು, ಸಂಸದರ ಕೌಶಲ್ಯಗಳನ್ನು ಹೆಚ್ಚಿಸುವುದು ಮತ್ತು ಪ್ರಜಾಪ್ರಭುತ್ವವನ್ನು ಹೆಚ್ಚು ಭಾಗವಹಿಸುವಂತೆ, ಜವಾಬ್ದಾರಿಯುತವಾಗಿ ಮಾಡುವುದು ಇದರ ಉದ್ದೇಶವಾಗಿದೆ ಎಂದು ಹೇಳಿದರು.

ಕರ್ನಾಟಕ ವಿಧಾನಸಭೆಯ ಇತ್ತೀಚಿನ ಅಧಿವೇಶನದಲ್ಲಿ 39 ಬಿಲ್ಗಳಲ್ಲಿ 37 ಅಂಗೀಕರಿಸಲ್ಪಟ್ಟವು, ಇನ್ನೂಳಿದ 2 ಬಿಲ್ಗಳನ್ನು ಉಪ ಸಮಿತಿಗೆ ಕಳುಹಿಸಲ್ಪಟ್ಟವು; ಇದು ಸರಕಾರ ಮತ್ತು ವಿರೋಧ ಪಕ್ಷಗಳ ಸಹಕಾರದಿಂದ ಸಾಧ್ಯವಾಗಿದೆ ಎಂದು ಸ್ಮರಿಸಿದ ಅವರು, ಈ ಸಮ್ಮೇಳನದಲ್ಲಿ ಮುಖ್ಯವಾಗಿ “ವಿಧಾನಮಂಡಲಗಳಲ್ಲಿ ಚರ್ಚೆಗಳು: ಜನರ ವಿಶ್ವಾಸ ನಿರ್ಮಾಣ, ಆಕಾಂಕ್ಷೆಗಳ ಈಡೇರಿಕೆ”. ವಿಷಯದ ಮೇಲೆ ಚರ್ಚಿಸಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಸಮ್ಮೇಳನಕ್ಕೆ ಆಗಮಿಸಿರುವ ಅತಿಥಿಗಳಿಗೆ ಮೈಸೂರು ಪ್ರವಾಸ ಸೇರಿದಂತೆ ರಾಜ್ಯವನ್ನು ಪರಿಚಯಿಸುವ ವಿವಿಧ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಮಾತನಾಡಿ ತಾವು ಬಸವೇಶ್ವರರ ಅನುಭವ ಮಂಟಪದಿಂದ ಪ್ರೇರಿಪಿತನಾಗಿ ಕರ್ನಾಟಕ ಶಾಸಕಾಂಗದಲ್ಲಿ ನಿರಂತರವಾಗಿ ಒಂದೇ ಕ್ಷೇತ್ರದಿಂದ ಕಳೆದ 45 ವರ್ಷಗಳಿಂದ ಆಯ್ಕೆಯಾಗಿ ಸೇವೆ ಒಬ್ಬ ಜವಬ್ದಾರಿಯುತ ಜನಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿರುವುದನ್ನು ಹಾಗೂ ಹಲವು ದಾಖಲೆಗಳಲ್ಲಿ ತಮ್ಮ ಹೆಸರು ಸೇರಿರುವುದನ್ನು ಸ್ಮರಿಸುತ್ತಾ ಸಭಾಪತಿಯಾಗಿ 3ನೇ ಬಾರಿ ಮತ್ತು ಒಬ್ಬ ಹಿರಿಯ ಸಂಸದೀಯ ಪಟುವಾಗಿ ಅಧಿವೇಶನದ ಸಂದರ್ಭದಲ್ಲಿ ಯುವ ಜನಪ್ರತಿನಿಧಿಗಳಿಗೆ ಮಾತನಾಡಲು ಹೆಚ್ಚಿನ ಅವಕಾಶ ನೀಡಿರುವುದು ಸಂತೃಪ್ತಿ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಪ್ರಸ್ತುತ ಸಮ್ಮೇಳನ ಸಂವಿಧಾನಾತ್ಮಕ, ಶಾಸನಾತ್ಮಕ, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಅಂಶಗಳೊಂದಿಗೆ ಸಂಸದೀಯ ಪ್ರಜಾಪ್ರಭುತ್ವವನ್ನು ಉತ್ತೇಜಿಸುವ ಉದ್ದೇಶದಿಂದ ರೂಪುಗೊಂಡಿದೆ. 1911ರಲ್ಲಿ ಸ್ಥಾಪಿತವಾದ ಇದು ಕಾಮನ್ವೆಲ್ತ್ನ ಅತ್ಯಂತ ಹಳೆಯ ಸಂಸ್ಥೆಯಾಗಿದ್ದು, ಸ್ವಯಂಪ್ರೇರಿತ ರಾಷ್ಟ್ರಗಳ ಸಂಘವಾಗಿದೆ. ಇದು ಲಿಂಗ, ಜಾತಿ, ಧರ್ಮ ಅಥವಾ ಸಂಸ್ಕೃತಿಯನ್ನು ಮೀರಿ ಕಾನೂನಿನ ಆಡಳಿತ, ವೈಯಕ್ತಿಕ ಹಕ್ಕುಗಳು ಮತ್ತು ಸಂಸದೀಯ ಪ್ರಜಾಪ್ರಭುತ್ವದ ಸಕಾರಾತ್ಮಕ ಆದರ್ಶಗಳನ್ನು ಉತ್ತೇಜಿಸುತ್ತದೆ ಎಂದರು.

ಸಂವಿಧಾನಾತ್ಮಕ ಮೌಲ್ಯಗಳನ್ನು ಎತ್ತಿಹಿಡಿದು ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಸ್ಥಿತಿಯನ್ನು ಸುಧಾರಿಸುವುದು ಈ ಸಮ್ಮೇಳನದ ಮುಖ್ಯ ಉದ್ದೇಶವಾಗಿದೆ. ಜನಪ್ರತಿನಿಧಿಗಳು ಸಭೆಯ ಒಳಗೆ ಮತ್ತು ಹೊರಗೆ ಮಾದರಿಯಾಗಿ ನಡೆದುಕೊಂಡು ಸಂವಿಧಾನಾತ್ಮಕ ಕರ್ತವ್ಯಗಳನ್ನು ನಿರ್ವಹಿಸಬೇಕು. ಅದಿವೇಶನ ಕಾರ್ಯನಿರ್ವಹಣೆಯನ್ನು ಸುಗಮಗೊಳಿಸಿ ಸದ್ಬಳಕೆ ಮಾಡಿಕೊಳ್ಳಬೇಕು. ಎಂದು ಸಲಹೆ ನೀಡಿದರು.

ಸಂಸತ್ ಅಥವಾ ರಾಜ್ಯ ಸಂಸದೀಯ ಸಭೆಗಳು ಪ್ರಜಾಪ್ರಭುತ್ವದ ಮುಖ್ಯ ಸಂಸ್ಥೆಗಳಾಗಿದ್ದು, ರಾಜಕೀಯ ಚರ್ಚೆ, ವಿಚಾರವಿನಿಮಯ ಮತ್ತು ಅಭಿಪ್ರಾಯ ವ್ಯಕ್ತಪಡಿಸುವ ಮುಖ್ಯ ವೇದಿಕೆಗಳು. ಇವು ಸರ್ಕಾರದ ಯಂತ್ರವನ್ನು ಮಾರ್ಗದರ್ಶಿಸುತ್ತವೆ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಮಾರ್ಗವನ್ನು ರೂಪಿಸುತ್ತವೆ ಎಂದು ಹೇಳಿದರು.

ಆಗಸ್ಟ್ 2025ರಲ್ಲಿ ರಾಹುಲ್ ವಿ. ಕರದ್ ನೇತೃತ್ವದಲ್ಲಿ 130 ಭಾರತೀಯ ಸಂಸದರು ಮತ್ತು ಶಾಸಕರು ಅಮೇರಿಕಾದ ಬೋಸ್ಟನ್ನಲ್ಲಿ ನಡೆದ 50ನೇ ನ್ಯಾಷನಲ್ ಕಾನ್ಫರೆನ್ಸ್ ಆಫ್ ಸ್ಟೇಟ್ ಲೆಜಿಸ್ಲೇಚರ್ (ಎನ್ಸಿಎಸ್ಎಲ್)ಗೆ ಭೇಟಿ ನೀಡಿದರು. ಅಲ್ಲಿ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆಗಳು ಹಾಗೂ ನಾಗರಿಕ ಕೇಂದ್ರಿತ ಸೇವೆಗಳನ್ನು ಅಧ್ಯಯನ ಮಾಡಿದರು. ಇದರ ಆಧಾರದಲ್ಲಿ ಭಾರತದಲ್ಲಿ ಸೂಕ್ತ ಶಾಸನಗಳನ್ನು ರೂಪಿಸಿ ಸರ್ಕಾರದ ಯಂತ್ರವನ್ನು ಮಾರ್ಗದರ್ಶಿಸಲು ಸಮ್ಮೇಳನದಲ್ಲಿ ಚರ್ಚೆಗಳನ್ನು ಹಮ್ಮಿಕೊಳ್ಳಬೇಕು ಎಂದು ಶಿಫಾರಸು ಮಾಡಿದರು.

ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮಾತನಾಡಿ ಸಮ್ಮೇಳನದಲ್ಲಿ ಭಾಗವಹಿಸುತ್ತಿರುವ ಎಲ್ಲರಿಗೂ ಶುಭ ಹಾರೈಸಿ ಸಮ್ಮೇಳನ ಹಮ್ಮಿಕೊಂಡಿರುವ ಗುರಿಯೊಂದಿಗೆ ಯಶಸ್ವಿಯಾಗಲಿ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸಮ್ಮೇಳನದ ಅಂಗವಾಗಿ ಅಂಚೆ ಇಲಾಖೆವತಿಯಿಂದ ವಿಶೇಷ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಯಿತು ಮತ್ತು ಅತಿಥಿಗಳನ್ನು ಕರ್ನಾಟಕದ ಪರಂಪರೆಯಂತೆ ಮೈಸೂರು ಪೇಟ ಮತ್ತು ಗಂಧದ ಹಾರ ಮತ್ತು ರೇಷ್ಮೆ ಶಾಲುಗಳಿಂದ ಸನ್ಮಾನಿಸಲಾಯಿತು.
ಸಮ್ಮೇಳನವು ಇಂದಿನಿಂದ ಮೂರು ದಿನಗಳ ಕಾಲ ಸೆ 13 ರ ವರೆಗೆ ನಗರದ ಖಾಸಗಿ ಹೊಟೇಲ್ ನಲ್ಲಿ ನಡೆಯಲಿದ್ದು, ದೇಶ-ವಿದೇಶಗಳ ಸಭಾಧ್ಯಕ್ಷರು ಮತ್ತು ಸಭಾಪತಿಗಳು ಭಾಗವಹಿಸಲಿದ್ದಾರೆ.