Sunday, August 9, 2026
Sunday, August 9, 2026
Home Blog Page 169

International Women’s Day ಸಮಾಜದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಅಪಾರ : ಡಾ. ಅರುಂಧತಿ ಚಂದ್ರಶೇಖರ್

0

International Women’s Day ಪ್ರತಿಯೊಂದು ದಿನವು, ಮಹಿಳೆಯರ ಸಾಧನೆಯನ್ನು ಗುರುತಿಸುವಂತಹ ದಿನವಾಗಬೇಕು ಎಂದು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯುಕ್ತೆ ಡಾ. ಅರುಂಧತಿ ಚಂದ್ರಶೇಖರ್ ಹೇಳಿದರು.

“ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ” ಭಾರತೀಯ ವೈದ್ಯಕೀಯ ಸಂಘದ ಶಿವಮೊಗ್ಗ ಮಹಿಳಾ ಘಟಕದ ವತಿಯಿಂದ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿ, ‘ಕೊಟ್ಟು ಪಡೆದುಕೊಳ್ಳೋಣ’ ಎಂಬ ಘೋಷ ವಾಕ್ಯದೊಂದಿಗೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸುತ್ತಿದ್ದೇವೆ. ಮಹಿಳೆಯರಿಗೆ ಗೌರವ, ಅವಕಾಶ, ಧ್ವನಿ ಮತ್ತು ಸುರಕ್ಷತೆ ಕೊಡಬೇಕಿದೆ. ಜಾಸ್ತಿ ಕೊಟ್ಟಷ್ಟು ನಮ್ಮ ಸಮಾಜ ಪಡೆದುಕೊಳ್ಳುವುದು ಹೆಚ್ಚುತ್ತದೆ ಎಂದು ತಿಳಿಸಿದರು.

ಭಾರತೀಯ ವೈದ್ಯಕೀಯ ಸಂಘದಂತಹ ಸಂಸ್ಥೆಗಳು ಮತ್ತು ಎಲ್ಲ ವೈದ್ಯರು, ಮಹಿಳೆಯರ ಆರೋಗ್ಯದ ವಿಷಯಕ್ಕೆ ಮತ್ತಷ್ಟು ಕೊಡುಗೆ ನೀಡಲು ಸಾಧ್ಯವಿದೆ. ಕೌಟುಂಬಿಕ ದೌರ್ಜನ್ಯ ಅನುಭವಿಸುವ ಮಹಿಳೆಯರು ಸಹಾಯಕ್ಕಾಗಿ ಮೊದಲು ಧಾವಿಸುವುದೇ ವೈದ್ಯರ ಬಳಿಗೆ. ಇವರಿಗೆ ನೆರವನ್ನು ಸಕಾಲಕ್ಕೆ ನೀಡುವುದು ವೈದ್ಯರಾದ ಎಲ್ಲರ ಕರ್ತವ್ಯ ಎಂದು ಹೇಳಿದರು.

ಭಾರತದಲ್ಲಿ ಮಹಿಳೆಯರು ಗ್ರಾಮೀಣ ಮಟ್ಟದಲ್ಲಿ ಸಮಾಜದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಅದರ ಅತ್ಯುತ್ತಮ ಉದಾಹರಣೆ ಆಶಾ ಕಾರ್ಯಕರ್ತೆಯರು. ಇವರು ಗ್ರಾಮ ಮತ್ತು ಆರೋಗ್ಯ ವ್ಯವಸ್ಥೆಯ ನಡುವಿನ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಾರೆ. ಆಶಾ ಕಾರ್ಯಕರ್ತೆಯರು ಗ್ರಾಮೀಣ ಸಮುದಾಯದಲ್ಲಿ ಆರೋಗ್ಯ ಸುಧಾರಣೆಗೆ ಮಾತ್ರವಲ್ಲದೆ ಮಹಿಳಾ ಸಬಲೀಕರಣಕ್ಕೂ ಸಹಕಾರಿಯಾಗಿದ್ದಾರೆ. ಅವರ ಪರಿಶ್ರಮದಿಂದ ಗ್ರಾಮಗಳಲ್ಲಿ ಆರೋಗ್ಯ ಜಾಗೃತಿ ಮತ್ತು ಸಮುದಾಯದ ಭಾಗವಹಿಸುವಿಕೆ ಹೆಚ್ಚಾಗಿದೆ ಎಂದು ತಿಳಿಸಿದರು.

ವೈದ್ಯರಾಗಿದ್ದಂತಹ ನನ್ನ ಪಾಲಕರು ಶಿವಮೊಗ್ಗ ಜಿಲ್ಲೆಯ ಮೆಗ್ಗಾನ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂಬುದು ಹೆಮ್ಮೆಯ ಸಂಗತಿ ಎಂದರು. ಭಾರತೀಯ ಆಡಳಿತ ಸೇವೆಯಲ್ಲಿ ಮಹಿಳೆಯರ ಸಮಾನತೆಗೆ ಯಶಸ್ವಿಯಾಗಿ ಹೋರಾಡಿದ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಪ್ರಥಮ ಮಹಿಳೆ ಸಿ.ಬಿ.ಮುತ್ತಮ್ಮ ಅವರ ಕೊಡುಗೆ ಸ್ಮರಿಸಿದರು. ಐಎಂಎ ಶಿವಮೊಗ್ಗ ವರ್ಷವಿಡೀ ನಡೆಸುತ್ತಿರುವ ವಿವಿಧ ಕಾರ್ಯಕ್ರಮಗಳಾದ ಮಹಿಳೆಯರ ಆರೋಗ್ಯದ ಕುರಿತು ವಿವಿಧ ಮಾಧ್ಯಮಗಳ ಮೂಲಕ ಮಾಹಿತಿ, ಅಗತ್ಯವಿರುವಲ್ಲಿ ಆರೋಗ್ಯ ತಪಾಸಣಾ ಶಿಬಿರಗಳು, ಶಾಲಾ ಹೆಣ್ಣು ಮಕ್ಕಳಿಗೆ ನೈರ್ಮಲ್ಯ ಕುರಿತು ನಡೆಸುತ್ತಿರುವ ಕಾರ್ಯಕ್ರಮ ಶ್ಲಾಘನೀಯ ಎಂದರು.

International Women’s Day ಐಎಂಎ ಮಹಿಳಾ ಸದಸ್ಯರಾದ ಡಾ. ರಕ್ಷಾ ರಾವ್, ಡಾ. ವಿದ್ಯಾ ರಮೇಶ್ ಮತ್ತು ಡಾ. ಅಖಿಲಾ ಅವರಿಂದ ಚಾರಣ, ಕ್ರೀಡೆ, ಹಣಕಾಸು ವಿಷಯಗಳ ಬಗ್ಗೆ ಪ್ರಸ್ತುತಿ, ಕನ್ನಡ, ಹಿಂದಿ ಸಿನಿತಾರೆಯರ ಶೈಲಿ ಅನುಕರಿಸಿ ಅವರನ್ನು ವೇದಿಕೆಯ ಮೇಲೆ ಮರುಕಲ್ಪಿಸಲಾಯಿತು.
ಐನಬೈಲು ಪರಮೇಶ್ವರ ಹೆಗಡೆ ಅವರ ನಿರ್ದೇಶನದಲ್ಲಿ ‘ಶತಗಜಾತ್ರಾಣಿ’ ಯಕ್ಷಗಾನ ಪ್ರಸಂಗವನ್ನು ಮಹಿಳಾ ಸದಸ್ಯೆಯರು ಸುಂದರವಾಗಿ ಅಭಿನಯಿಸಿದರು.

ಐಎಂಎ ಶಿವಮೊಗ್ಗ ಶಾಖೆ ಅಧ್ಯಕ್ಷ ಡಾ. ಕೆ.ಆರ್.ರವೀಶ್, ಕಾರ್ಯದರ್ಶಿ ಡಾ. ಕೆ.ಎಸ್.ಶುಭ್ರತಾ, ಖಚಾಂಚಿ ಡಾ. ಎಚ್.ಎಲ್.ಶಶಿಧರ್, ಮಹಿಳಾ ಘಟಕದ ಅಧ್ಯಕ್ಷೆ ಡಾ. ಕೌಸ್ತುಭಾ ಅರುಣ್, ಕಾರ್ಯದರ್ಶಿ ಡಾ. ಶ್ವೇತಾ ಬಾದಾಮಿ, ಹಿರಿಯ ಕಿರಿಯ ಸದಸ್ಯರು, ಕುಟುಂಬ ವರ್ಗದವರು ಉಪಸ್ಥಿತರಿದ್ದರು.

Government First Grade College ಆಧುನಿಕತೆಯಲ್ಲಿ ಕಥೆಗಳು ಕಣ್ಮರೆಯಾಗುತ್ತಿದೆ : ಡಾ. ವಿಜಯಾದೇವಿ

0

Government First Grade College ಈ ಹೊತ್ತಿಗೆ ಮಕ್ಕಳಿಂದ ಹಿಡಿದು ಎಲ್ಲರಲ್ಲೂ ನೈತಿಕತೆ ಪ್ರಜ್ಞೆ ಮೂಡಲು ಕಥೆಗಳು ಸಹಾಯಕವಾಗಿದೆ. ಆಧುನಿಕತೆಯಲ್ಲಿ ಕಣ್ಮರೆಯಾಗುತ್ತಿರುವುದು ದುರಂತಕ್ಕೆ ಕಾರಣವಾಗುತ್ತಿದೆ ಎಂದು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಎಮಿರೇಟ್ಸ್ ಪ್ರಾಧ್ಯಾಪಕರಾದ ಡಾ. ವಿಜಯ ದೇವಿ ಹೇಳಿದರು. ಅವರು ಶಿವಮೊಗ್ಗ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಭದ್ರಾವತಿ ಆಕಾಶವಾಣಿ ಕೇಂದ್ರದ ಕೇಳುಗರ ಬಳಗ, ರೇಣುಕಪ್ಪಗೌಡ ಪ್ರತಿಷ್ಠಾನ, ಜಿಲ್ಲಾ ಸರ್ವೋದಯ ಮಂಡಲ, ಕಾಲೇಜಿನ ಕನ್ನಡ ವಿಭಾಗ, ಸಾಂಸ್ಕೃತಿಕ ವೇದಿಕೆ ಸಹಯೋಗದಲ್ಲಿ ಆರ್ ಜೆ ಗಣೇಶ್ ಕೆಂಚನಾಲ್ ಅವರ ಬಾನುಲಿಯಿಂದ ‘ಕಥೆ ನಿಮ್ಮ ಜೊತೆ’ ಪುಸ್ತಕವನ್ನು, ಆಕಾಶವಾಣಿ ಕೇಳುಗರೊಂದಿಗೆ ಬಿಡುಗಡೆ ಮಾಡಿ ಮಾತನಾಡಿದರು.
ಜಗತಿನಲ್ಲಿ ಜೀವಂತಿಕೆ ನಡೆಯುತ್ತಿರುವುದು ಸೃಜನಶೀಲತೆಯ ಕಾರಣದಿಂದ. ಸಾಹಿತ್ಯದ ಮೂಲ ದ್ರವ್ಯ ಗ್ರಾಮೀಣ ಬದುಕಿನಲ್ಲಿದೆ. ಅಂತಹ ಗ್ರಾಮೀಣ ಬದುಕಿನ ಸತ್ವವು ಈ ಕತೆ ಪುಸ್ತಕದಲ್ಲಿದೆ. ನೈತಿಕ ಮೌಲ್ಯಗಳ ಅಂತಸತ್ವವವನ್ನು ಕತೆಗಳ ಮೂಲಕ ಬಿತ್ತರಿಸುವುದು ಅಗತ್ಯವಾಗಿದೆ. ಬರಹ ಕೇವಲ ಸಂತಸವನ್ನು ನೀಡುವುದಲ್ಲ. ಬದಲಿಗೆ ವೈಯಕ್ತಿಕ ಜವಾಬ್ದಾರಿ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಕಲಿಸುತ್ತದೆ. ವೃತ್ತಿಯ ಮೂಲಕ ಸಮಾಜದ ಆರೋಗ್ಯವನ್ನು ಬಯಸುವ ಆಶಯ ಬಹಳ ಮುಖ್ಯ. ಕೃತಿಯೊಂದು ಸಮಾಜದ ಮಾನವೀಯ ಮೌಲ್ಯಗಳನ್ನು ಬೆಳೆಸಿದರೆ ಅದಕ್ಕಿಂತಲೂ ಬೇರೆ ಯಾವುದೂ ಇಲ್ಲ. ಓಡುವ ಜಗತ್ತಿನಲ್ಲಿ ಬುದ್ದಿವಂತಿಕೆ ಮತ್ತು ಮಾನವೀಯತೆಗಳು ಮುಖ್ಯವಾಗುತ್ತವೆ ಎಂದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಖ್ಯಾತ ಮನೋವೈದ್ಯ ಕೆ.ಎಸ್ ಪವಿತ್ರ ಮಾತನಾಡಿ ಜನಪದರ ಕತೆಗಳು ಮಾನಸಿಕ ಮತ್ತು ಸಾಮಾಜಿಕ ಆರೋಗ್ಯಕ್ಕೆ ಪೂರಕವಾದುದು. ಕೇಳುವುದರ ಮೂಲಕ ಹೊಸದೊಂದು ಸನ್ನಿವೇಶ ತಂದು ಹೇಳಬಹುದು ಆದರೆ ಬರಹ ಸವಾಲಿನದು. ಅದನ್ನು ಗಣೇಶ ಕೆಂಚನಾಲ ಕೇಳುಗರ ಮೂಲಕ ಸಾಧ್ಯವಾಗಿಸಿದ್ದಾರೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಡಾ. ಗಣೇಶ ಕೆಂಚನಾಲ ಕಥೆ ಕಟ್ಟುವ ಕಾರ್ಯಕ್ರಮ ಆಕಾಶವಾಣಿ ಕೇಂದ್ರದಿಂದ 2023 ರಿಂದ ಆರಂಭವಾಗಿದ್ದು ಈ ವರೆಗೆ ಸುಮಾರು ನೂರು ಕತೆಗಳು ಬಿತ್ತರಗೊಂಡಿವೆ. ಎಲ್ಲವೂ ಪುಸ್ತಕ ರೂಪದಲ್ಲಿ ತರಲಾಗುವುದು. ಕಥೆಗಳು ಸ್ವಾಸ್ಥ್ಯ ಸಮಾಜವನ್ನು ನಿರ್ಮಿಸುತ್ತವೆ ಎಂದರು. Government First Grade College ಯುವಜನತೆ ಒಳ್ಳೆಯದನ್ನು ಕೇಳುವ, ನೋಡುವ, ಓದುವ ಕೆಲಸದಲ್ಲಿ ನಿರತರಾಗಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಶಶಿಧರ ಎಸ್ ವಹಿಸಿದ್ದರು. ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರಾದ ಬಸವರಾಜ ನೆಲ್ಲಿಸರ, ಕೇಳುಗ ಬಳಗದ ಸಂಚಾಲಕರಾದ ಜಿ. ವಿಜಯಕುಮಾರ, ಆರ್ ಮನೋಹರ, ಕನ್ನಡ ವಿಭಾಗದ ಮುಖ್ಯಸ್ಥ ರವಿ ಎನ್., ಪ್ರಾಧ್ಯಾಪಕರಾದ ಕೆ.ಪಿ ಪವಿತ್ರ, ಡಾ. ಚಿಕ್ಕ ಹೆಗಡೆ, ಮಂಜುಳ, ಶ್ವೇತ ಉಪಸ್ಥಿತಿ ಇದ್ದರು. ಶ್ರೀಮತಿ ನಂದಿನಿ ನಿರೂಪಿಸಿ, ಡಾ. ಮಂಜುನಾಥ ಪ್ರಾರ್ಥಿಸಿ, ಡಾ. ಅಣ್ಣಪ್ಪ ಎನ್. ಮಳೀಮಠ್ ವಂದಿಸಿದರು. ಆಕಾಶವಾಣಿ ಆರ್ ಜೆ ಬಳಗ ಸೇರಿದಂತೆ ಆಕಾಶವಾಣಿ ಕೇಳುಗರು, ಸಾಹಿತ್ಯಾಸಕ್ತರು. ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿದ್ದರು.

Karnataka State Commission for Protection of Child Rights ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು ತರಬೇತಿ ಕಾರ್ಯಕ್ರಮ

0

Karnataka State Commission for Protection of Child Rights ಭಾಗೀಧಾರ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳಿಗೆ “ಮಕ್ಕಳ ಹಕ್ಕುಗಳ ರಕ್ಷಣೆ, ಸುರಕ್ಷತೆ, ಶಾಲೆಯಿಂದ ಹೊರಗುಳಿದ ಮಕ್ಕಳ ಕುರಿತು ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆ, ಪೋಕ್ಸೋ ಕಾಯ್ದೆ, ಕಾಣೆಯಾದ ಮಕ್ಕಳ ಪತ್ತೆ, ಬಾಲನ್ಯಾಯ ಕಾಯ್ದೆ, ಆರ್ ಟಿ ಇ ಕಾಯ್ದೆ ಕುರಿತು ಸೋಮವಾರ ನಗರದ ಡಿಎಆರ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಂತೋಷ್ ಎಂ ಎಸ್ ಉದ್ಘಾಟಿಸಿದರು.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು, ಮಕ್ಕಳ ರಕ್ಷಣಾ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಪೊಲೀಸ್ ಇಲಾಖೆಯ ಅಧಿಕಾರಿಗಳು, ಮಕ್ಕಳ ವಿಶೇಷ ಪೊಲೀಸ್ ಅಧಿಕಾರಿಗಳು ಹಾಗೂ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.
Karnataka State Commission for Protection of Child Rights ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಮಕ್ಕಳ ಅಭಿವೃದ್ಧಿ ಅಧಿಕಾರಿಗಳಾದ ಶಶಿರೇಖಾ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಮಂಜುನಾಥ ಆರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ನಟರಾಜ್, ವೃತ್ತ ನಿರೀಕ್ಷಕರಾದ ಸುರೇಶ್ ಪಾಲ್ಗೊಂಡಿದ್ದರು. ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ತಾಜುದ್ದೀನ್ ಖಾನ್ ಇವರು ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದರು.

D. Devaraja Urs Backward Classes Development Corporation ಆಹಾರ ವಾಹಿನಿ ಯೋಜನೆ : ಅರ್ಜಿ ಅವಧಿ ವಿಸ್ತರಣೆ

0

D. Devaraja Urs Backward Classes Development Corporation ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದಿಂದ 2025-26 ನೇ ಸಾಲಿನಲ್ಲಿ ಆಹಾರ ವಾಹಿನಿ(ಆಹಾರ ಕಿಯೋಸ್ಕ್) ಯೋಜನೆಯಡಿ ಆಹ್ವಾನಿಸಲಾಗಿದ್ದ ಅರ್ಜಿ ಅವಧಿಯನ್ನು ಮಾರ್ಚ್ 20 ರವರೆಗೆ ವಿಸ್ತರಿಸಲಾಗಿದೆ.
ಈ ಹಿಂದೆ ಅರ್ಜಿ ಸಲ್ಲಿಸಲು ಮಾರ್ಚ್ 04 ಕೊನೆಯ ದಿನಾಂಕವೆಂದು ನಿಗದಿಪಡಿಸಲಾಗಿತ್ತು. ಆಹಾರ ಯೋಜನೆ ಸ್ಥಳಾಂತರಿಸಬಹುದಾದ ತಿಂಡಿ ಮಳಿಗೆಗಳನ್ನು ನಾಲ್ಕು ಚಕ್ರಗಳ ಇವಿ-ಗೂಡ್ಸ್ ವಾಹನಗಳನ್ನು ಅಗತ್ಯಕ್ಕೆ ತಕ್ಕಂತೆ ನವೀಕರಿಸಿ ಫಲಾನುಭವಿಗಳಿಗೆ ವಿತರಿಸುವ ಯೋಜನೆಯಾಗಿದೆ. ನಿಗಮದಿಂದ ವಾಹನ ಖರೀದಿಗೆ ರೂ.3 ಲಕ್ಷಗಳ ಸಹಾಯಧನವನ್ನು ಬಿಡುಗಡೆ ಮಾಡಲಾಗುವುದು. ಉಳಿಕೆ ಮೊತ್ತವನ್ನು ಬ್ಯಾಂಕುಗಳು/ಹಣಕಾಸು ಸಂಸ್ಥೆಗಳಿAದ ಸಾಲ ಪಡೆಯಬಹುದಾಗಿರುತ್ತದೆ.
D. Devaraja Urs Backward Classes Development Corporation ವಿಶ್ವಕರ್ಮ, ಉಪ್ಪಾರ, ಅಂಬಿಗ, ಸವಿತಾ, ಮಡಿವಾಳ, ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯ, ಒಕ್ಕಲಿಗ, ಲಿಂಗಾಯತ, ಕಾಡುಗೊಲ್ಲ, ಮರಾಠ ಮತ್ತು ಇದರ ಉಪ ಸಮುದಾಯಗಳು ಹೊರತುಪಡಿಸಿ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿ ನಲ್ಲಿ ಉಳಿದ ಸಮುದಾಯಗಳಿಗೆ ಅನ್ವಯವಾಗುತ್ತದೆ. ಹಿಂದುಳಿದ ವರ್ಗಗಳ ಅರ್ಜಿದಾರರು ಅರ್ಜಿಗಳನ್ನು ಸೇವಾ ಸಿಂಧು ಪೋರ್ಟಲ್ http://sevasindhu.karnataka.gov.in, ಗ್ರಾಮ ಒನ್, ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಆನ್‌ಲೈನ್ ಮುಖಾಂತರ ಸಲ್ಲಿಸಬಹುದು ಎಂದು ಡಿಬಿಸಿಡಿಸಿ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.

ಪತ್ರಕರ್ತ ಅನಿಲ್ ನಿಧನಕ್ಕೆ ಸಂತಾಪ

0

ಬಿಟಿವಿ ಶಿವಮೊಗ್ಗ ಜಿಲ್ಲಾ ವರದಿಗಾರ ಅನಿಲ್ ಕುಮಾರ್ ನಾಯ್ಕ (44) ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ.
ಅವರಿಗೆ ಇಬ್ಬರು ಗಂಡು ಮಕ್ಕಳು, ಒಬ್ಬಳು ಪುತ್ರಿ, ಪತ್ನಿ ಇದ್ದಾರೆ.
ಈ ಮೊದಲು ಟಿವಿ9 ಕ್ಯಾಮರಾಮನ್ ಆಗಿ ಕಾರ್ಯನಿರ್ವಹಿಸಿ ನಂತರ ಬಿಟಿವಿಗೆ ಶಿವಮೊಗ್ಗ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದ ಅನಿಲ್ ನಿಧನಕ್ಕೆ ಶಿವಮೊಗ್ಗ ಜಿಲ್ಹಾ ಬಿಜೆಪಿ ಸಮಿತಿಯ ಪರವಾಗಿ ಜಿಲ್ಲಾಧ್ಯಕ್ಷರಾದ ಎನ್ ಕೆ ಜಗದೀಶ್ ರವರು ತೀವ್ರ ಸಂತಾಪ‌ ಸೂಚಿಸಿದ್ದಾರೆ.

Canara Bank. Rural Self-Employment Training Institute ಉಚಿತ ಬ್ಯೂಟಿಪಾರ್ಲರ್ ತರಬೇತಿಗಾಗಿ ಅರ್ಜಿ ಆಹ್ವಾನ

0

Canara Bank. Rural Self-Employment Training Institute ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕು ಸೊಣ್ಣಹಳ್ಳಿಪುರದಲ್ಲಿರುವ ಕೆನರಾ ಬ್ಯಾಂಕ್. ಗ್ರ‍್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಏಪ್ರಿಲ್ ತಿಂಗಳ ಮೊದಲನೆಯ ವಾರದಿಂದ 35 ದಿನಗಳ ಕಾಲ ನಿರುದ್ಯೋಗಿ ಯುವತಿಯರಿಗೆ ಹಾಗೂ ಮಹಿಳೆಯರಿಗೆ ಉಚಿತ ಬ್ಯೂಟಿಪಾರ್ಲರ್ ತರಬೇತಿ ಶಿಬಿರವನ್ನುಏರ್ಪಡಿಸಿದ್ದು, ಆಸಕ್ತ 18 ರಿಂದ 45 ವರ್ಷ ವಯಸ್ಸಿನ ಕರ್ನಾಟಕ ರಾಜ್ಯದ ಯಾವುದೇ ಜಿಲ್ಲೆಯ ನಿರುದ್ಯೋಗಿ ಯುವತಿಯರು ಹಾಗೂ ಮಹಿಳೆಯರು ಈ ಶಿಬಿರದಲ್ಲಿ ಪಾಲ್ಗೊಳ್ಳಬಹುದಾಗಿದೆ.
ಈ ಶಿಬಿರದ ಸಮಯದಲ್ಲಿ ತರಬೇತಿ, ಊಟ ಹಾಗೂ ವಸತಿ ಸೌಕರ್ಯಗಳು ಉಚಿತವಾಗಿ ಶಿಬಿರಾರ್ಥಿಗಳಿಗೆ ಕಲ್ಪಿಸಲಾಗುವುದು. ಗ್ರಾಮೀಣ ಭಾಗದ ಬಿಪಿಎಲ್ ಅಭ್ಯರ್ಥಿಗಳಿಗೆ ಮೊದಲ ಆದ್ಯತೆಯನ್ನು ನೀಡಲಾಗುವುದು. ಅಭ್ಯರ್ಥಿಗಳು ಸ್ಥಳಿಯ ಭಾಷೆ ಬಲ್ಲವರಾಗಿದ್ದು, ಕನ್ನಡ ಓದಲು ಮತ್ತು ಬರೆಯಲು ತಿಳಿದಿರಬೇಕು. ತರಬೇತಿ ಅವಧಿ ಪೂರ್ಣಗೊಂಡ ನಂತರ ಕೇಂದ್ರ ಸರ್ಕಾರದ ಗ್ರಾಮೀಣ ಸಚಿವಾಲಯದಿಂದ ಪ್ರಮಾಣ ಪತ್ರವನ್ನು ವಿತರಿಸಲಾಗುವುದು.
Canara Bank Rural Self-Employment Training Institute ಆಸಕ್ತಿಯುಳ್ಳ ಅಭ್ಯರ್ಥಿಗಳು ಮಾ.23 ರಂದು ಬೆಳಗ್ಗೆ 10.00 ಘಂಟೆಗೆ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಸೊಣ್ಣಹಳ್ಳಿಪುರ, ಹಸಿಗಾಳ(ಅಂಚೆ), ಹೊಸಕೋಟೆ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆಇಲ್ಲಿ ನಡೆಯುವ ತರಬೇತಿಗೆ ನೇರವಾಗಿ ವಿದ್ಯಾರ್ಹತೆ ಮತ್ತು ವಿಳಾಸ ದಾಖಲಾತಿಗಳೊಂದಿಗೆ ಹಾಜರಾಗಬೇಕು. ಸಂದರ್ಶನಕ್ಕೆ ಹಾಜರಾಗಲು ಅಸಾಧ್ಯವಾದಲ್ಲಿ ದಿನಾಂಕ: 23/03/2026 ರೊಳಗೆ ಸಂಸ್ಥೆಯನ್ನು ಈ ದೂರವಾಣಿ ಸಂಖ್ಯೆ 8970476050/ 6363139123/ 9591514154/ 9686248369/9505894247 ಗಳಿಗೆ ಸಂಪರ್ಕಿಸಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

DVS Arts, Science and College ಎಲ್ಲ ಕ್ಷೇತ್ರಗಳಿಗೂ ಹಣ ಒದಗಿಸುವುದು ಬಜೆಟ್ ಆಶಯ : ಪ್ರೊ. ಚಂದ್ರಶೇಖರ್

0

DVS Arts, Science and College ಬಜೆಟ್ ಎಂಬುದು ರಾಜ್ಯದ ಜನರ ಕ್ಷೇಮಾಭಿವೃದ್ಧಿಯ ಸಂಕೇತ ಎಂದು ಸಾಗರದ ಇಂದಿರಾಗಾಂಧಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಚಂದ್ರಶೇಖರ್ ಹೇಳಿದರು.

ದೇಶೀಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಕಲಾ, ವಿಜ್ಞಾನ ಮತ್ತು ಕಾಲೇಜಿನಲ್ಲಿ ಆಯೋಜಿಸಿದ್ದ “ಕರ್ನಾಟಕ ರಾಜ್ಯ ಬಜೆಟ್ 2026 ಒಂದು ವಿಶ್ಲೇಷಣೆ” ಕಾರ್ಯಕ್ರಮದಲ್ಲಿ ಮಾತನಾಡಿ, ಈ ಬಜೆಟ್ ಸಮತೂಕದ ಬಜೆಟ್ ಎಂದು ತಿಳಿಸಿದರು.

ಬಜೆಟ್ ಎಂಬುದು ಕೇವಲ ಕಾಗದದ ಪತ್ರಗಳಲ್ಲಿರುವ ಅಂಕಿ ಸಂಖ್ಯೆಗಳು ಮಾತ್ರವಲ್ಲ. ಒಂದು ರಾಜ್ಯದ ಜನರ ಕ್ಷೇಮಾಭಿವೃದ್ಧಿಯ ಸಂಕೇತ. ಬಹಳ ಮುಖ್ಯವಾಗಿ ಎಲ್ಲ ಸಮುದಾಯಗಳನ್ನು ಪರಿಗಣಿಸಿ ಎಲ್ಲ ಕ್ಷೇತ್ರಗಳಿಗೆ ಸಾಧ್ಯವಾದಷ್ಟು ಹೆಚ್ಚಿನ ಹಣಕಾಸಿನ ಸಂಪನ್ಮೂಲವನ್ನು ಒದಗಿಸಿರುವುದು ಈ ಬಜೆಟ್‌ನ ಮತ್ತೊಂದು ಮೈಲುಗಲ್ಲು ಎಂದು ಹೇಳಿದರು.

ಬಹಳ ಮುಖ್ಯವಾಗಿ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದರೂ ಸಹ ಅದನ್ನು ಮೀರಿದ ಎಲ್ಲ ಜನರ ಯೋಗಕ್ಷೇಮದ ದೃಷ್ಟಿಯಿಂದ ಕೃಷಿ ವಲಯ, ಕೈಗಾರಿಕಾ ವಲಯ, ಸೇವಾ ವಲಯ ಮತ್ತು ಮಹಿಳಾ ಕ್ಷೇತ್ರಕ್ಕೂ ಕೂಡ ವಿಶೇಷ ಒತ್ತನ್ನು ಕೊಟ್ಟಿರುವುದು ಈ ಬಜೆಟ್‌ನಲ್ಲಿ ಕಂಡುಬರುತ್ತದೆ ಎಂದು ತಿಳಿಸಿದರು.

ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಂ.ವೆಂಕಟೇಶ್ ಮಾತನಾಡಿ, ಕರ್ನಾಟಕದ ಬಜೆಟ್ ಎಲ್ಲ ಜನರನ್ನು ಒಳಗೊಂಡ ಒಂದು ವಿಶೇಷ ಬಜೆಟ್ ಆಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 17ನೇ ಬಜೆಟ್‌ನಲ್ಲಿ ಸಾರ್ವಜನಿಕರ ಹಿತಾಸಕ್ತಿಗಳನ್ನು ಗಮನಿಸಿ ಅದಕ್ಕೆ ತಕ್ಕ ಹಾಗೆ ಹಣಕಾಸಿನ ಸಂಪನ್ಮೂಲಗಳನ್ನು ಹಂಚಿಕೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.

DVS Arts, Science and College ಅನೇಕ ದೂರ ದೃಷ್ಟಿ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದಾರೆ. ವಿಶೇಷವಾಗಿ ಈ ಮುಂಗಡ ಪತ್ರ ಜನಪ್ರಿಯ ಎನ್ನುವುದಕ್ಕಿಂತ ಜನಪರ ಬಜೆಟ್ ಅನ್ನು ಕರ್ನಾಟಕದ ಜನತೆಗೆ ನೀಡಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಐಕ್ಯೂಎಂಸಿ ಸಂಯೋಜಕ ಕುಮಾರಸ್ವಾಮಿ, ಅರ್ಥಶಾಸ್ತ್ರ ವಿಭಾಗದ ಅಧ್ಯಾಪಕಿ ರಂಜಿತಾ ಮತ್ತು ಶಿವಲಿಂಗಂ ಉಪಸ್ಥಿತರಿದ್ದರು.

DVS College of Arts, Science and Commerce ಕಾನೂನಿನಲ್ಲಿ ಮಹಿಳೆಯರ ರಕ್ಷಣೆಗೆ ಆದ್ಯತೆ :ಎಂ.ಎಸ್.ಸಂತೋಷ್

0

DVS College of Arts, Science and Commerce ಮಹಿಳೆಯರ ರಕ್ಷಣೆಗೆ ಕಾನೂನಿನಲ್ಲಿ ಹೆಚ್ಚಿನ ಕಾಯ್ದೆಗಳನ್ನು ರೂಪಿಸಲಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಎಂ.ಎಸ್.ಸಂತೋಷ್ ಹೇಳಿದರು.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಅಖಿಲ ಭಾರತ ಅಂಚೆ ಅಧಿಕಾರಿಗಳ ಸಂಘದ ಸಿ ಗ್ರೂಪ್ ನೌಕರರು ಮತ್ತು ವಿವಿಧ ಸಂಘಗಳ ವತಿಯಿಂದ ದೇಶೀಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಸಿಂಗಾರ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿ, ಮಹಿಳೆಯರು ತಮಗೆ ಆದಂತಹ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಬಹುದಾಗಿದೆ. ಅತ್ಯಂತ ಸರಳವಾಗಿ ಇರುವ ಕಾನೂನು ವಿಚಾರಗಳನ್ನು ಜನಸಾಮಾನ್ಯರು ಅರಿತುಕೊಳ್ಳಬೇಕು ಎಂದು ತಿಳಿಸಿದರು.
ಮಹಿಳಾ ನೌಕರರು ಕಾರ್ಯನಿರ್ವಹಿಸುವ ಸ್ಥಳದಲ್ಲಿ ಏನಾದರೂ ಲೈಂಗಿಕ ಕಿರುಕುಳ ಕಂಡು ಬಂದರೆ ಹೇಗೆ ದೂರು ನೀಡಬೇಕು ಮತ್ತು ದೂರು ನೀಡುವಾಗ ಯಾವ ಸಂಗತಿಗಳನ್ನು ಪರಿಗಣಿಸಬೇಕು ಎಂಬುದರ ಬಗ್ಗೆ ಮಾಹಿತಿ ಹೊಂದಿರಬೇಕು. ಕರ್ತವ್ಯ ನಿರ್ವಹಿಸುವ ಸ್ಥಳಗಳಲ್ಲಿ ಅಲ್ಲಿನ ಮುಖ್ಯಸ್ಥರು ಅಥವಾ ಸಹೋದ್ಯೋಗಿಗಳು ಏನಾದರೂ ಲೈಂಗಿಕ ಕಿರುಕುಳ ನೀಡಿದರೆ ಕಿರುಕುಳಕ್ಕೆ ಒಳಪಟ್ಟ ಮಹಿಳೆಯು ಕಡ್ಡಾಯವಾಗಿ ಬರವಣಿಗೆಯಲ್ಲಿ ದೂರು ನೀಡಬೇಕಾಗುತ್ತದೆ ಎಂದು ಹೇಳಿದರು.
ಆಂತರಿಕ ದೂರು ಸಮಿತಿಗೆ ವಿಚಾರಣೆ ನಡೆಸುವ ಅಧಿಕಾರವಿದೆ. ಮುಂದಿನ ಕ್ರಮ ಕೈಗೊಳ್ಳಬಹುದಾಗಿರುತ್ತದೆ. ಸಿವಿಲ್ ನ್ಯಾಯಾಲಯದ ಎಲ್ಲಾ ಅಧಿಕಾರವು ಈ ಆಂತರಿಕ ದೂರು ಸಮಿತಿಗೆ ಇರುವುದರಿಂದ ಸಮಸ್ಯೆಗೆ ಪರಿಹಾರವನ್ನು ನೀಡಬಹುದಾಗಿದೆ ಎಂದು ತಿಳಿಸಿದರು.
DVS College of Arts, Science and Commerce ಕಾರ್ಯಗಾರದಲ್ಲಿ ಭಾರತ್ ನ್ಯಾಯ ಸಮಿತಿ ಮತ್ತು ಪೋಕ್ಸೋ ಕಾಯ್ದೆಯ ಸಂಪೂರ್ಣ ವಿವರಗಳನ್ನು ತಿಳಿಸಿದರು. ಕರ್ತವ್ಯದ ಸ್ಥಳದಲ್ಲಿ ಲೈಂಗಿಕ ಕಿರುಕುಳ ನಿಯಂತ್ರಣ ಕಾಯ್ದೆ ಬಗ್ಗೆ ಮಾಹಿತಿ ನೀಡಿದರು.
ದೇಶೀಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ವೆಂಕಟೇಶ್ ಮಾತನಾಡಿ, ಮಹಿಳೆಯರು ಸಮಾಜದ ಎಲ್ಲ ರಂಗಗಳಲ್ಲಿ ಸಾಧನೆಗಳನ್ನು ಮಾಡುತ್ತಿದ್ದಾರೆ. ಬಹಳ ಮುಖ್ಯವಾಗಿ ಅಂಚೆ ಇಲಾಖೆಯಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳಾ ನೌಕರರಿದ್ದಾರೆ ಎಂದರು.
ಅಖಿಲ ಭಾರತ ಅಂಚೆ ಅಧಿಕಾರಿಗಳ ಸಂಘದ ರೂಪಾ, ಕ್ರಿಸ್ಟಿನಾ ಇತರರಿದ್ದರು.

ಸೊರಬದಲ್ಲಿ ಸಂಭ್ರಮದ ಹೋಳಿ ಹಬ್ಬ ಆಚರಣೆ

0

ವಿಶ್ವ ಹಿಂದೂ ಪರಿಷದ್, ಬಜರಂಗದಳ ಹಾಗೂ ವಿವಿಧ ಹಿಂದೂ ಪರ ಸಂಘನೆಗಳ ವತಿಯಿಂದ ಪಟ್ಟಣದ ಶ್ರೀ ರಂಗನಾಥ ದೇವಸ್ಥಾನದ ಆವರಣದಲ್ಲಿ ಹಿಂದೂ ಬಾಂಧವರು ಸಂಭ್ರಮದಿಂದ ಹೋಳಿ ಹಬ್ಬದ ಅಂಗವಾಗಿ ರಂಗ ಪಂಚಮಿ ಆಚರಿಸಿದರು.
ಭ್ರಾತೃತ್ವದ ಕೊಂಡಿ ಬೆಸೆಯುವ ಹಬ್ಬದ ಅಂಗವಾಗಿ ಯುವ ಜನತೆ ಡಿಜೆ ಸದ್ದಿಗೆ ರೈನ್ ಡ್ಯಾನ್ಸ್ ಮಾಡುವ ಮೂಲಕ ಸಂತಸಪಟ್ಟರು. ಹಾಡುಗಳ ಸದ್ದಿಗೆ ಹಿರಿಯರು, ಕಿರಿಯರೆನ್ನೆದೇ ಎಲ್ಲರೂ ಜೊತೆಗೂಡಿ ಹೆಜ್ಜೆಹಾಕಿದರು. ಪರಸ್ಪರ ಬಣ್ಣ ಹಚ್ಚುವ ಮೂಲಕ ಹಬ್ಬದ ಶುಭಾಷಯ ವಿನಿಮಯ ಮಾಡಿಕೊಂಡರು. ರೈನ್ ಡ್ಯಾನ್ಸ್ ಮಾಡಲು ಯುವತಿಯರಿಗೆ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲಾಗಿತ್ತು.
ರಂಗ ಪಂಚಮಿ ಆಚರಣೆಗೆ ಸಮಾಜ ಸೇವಕ ಡಾ. ಎಚ್.ಇ. ಜ್ಞಾನೇಶ್ ಚಾಲನೆ ನೀಡಿದರು. ವಿಶ್ವ ಹಿಂದೂ ಪರಿಷದ್ ತಾಲೂಕು ಅಧ್ಯಕ್ಷ ನಿರಂಜನ್, ಜಿಲ್ಲಾ ಕಾರ್ಯದರ್ಶಿ ಎಚ್.ಎಲ್. ಚಂದನ್, ತಾಲೂಕು ಕಾರ್ಯದರ್ಶಿ ಸಾತ್ವಿಕ್, ಸಹ ಕಾರ್ಯದರ್ಶಿ ನಂದನ್ ಕುಮಾರ್, ಬಜರಂಗದಳದ ಸಾಗರ ಜಿಲ್ಲಾ ಸಹ ಸಂಚಾಲಕ ರವಿ ಗುಡಿಗಾರ್, ಸಹ ಸಂಯೋಜಕ ಬಿ. ಶಶಿಕುಮಾರ್, ತಾಲೂಕು ಸಂಯೋಜಕ ಉಮಾಶಂಕರ್, ಸಹ ಸಂಯೋಜಕ್ ಮಣಿ…

ಅಪರಿಚಿತ ಶವ ಪತ್ತೆ

0

ಮಾ.08 ರಂದು ತುಪ್ಪೂರು ಗ್ರಾಮದ ಅನೆಮರಿ ಕ್ರಾಸ್ ಬಳಿ ಶಿವಮೊಗ್ಗ ಸಾಗರ ಎನ್ ಹೆಚ್ ರಸ್ತೆ ಪಕ್ಕದಲ್ಲಿ ಸುಮಾರು 40-50 ವಯಸ್ಸಿನ ಅನಾಮದೇಯ ವ್ಯಕ್ತಿ ಮಲಗಿದ್ದ ಸ್ಥಿತಿಯಲ್ಲಿ ಮೃತ ಪಟ್ಟಿರುತ್ತಾನೆ.
ಮೃತನ ಚಹರೆ ದೃಡಕಾಯ ಮೈ ಕಟ್ಟು, ಎಣ್ಣೆಕಪ್ಪು ಮೈ ಬಣ್ಣ, 5.6 ಅಡಿ ಎತ್ತರ, ಎಡ ಪಕ್ಕೆಯಲ್ಲಿ ಸಾಸಿವೆ ಗಾತ್ರದ ಮಚ್ಚೆ ಇರುತ್ತದೆ, ಮೃತದೇಹ ಮೇಲೆ ನೀಲಿ ಬಣ್ಣದ ತುಂಬು ತೋಳಿನ ಟೀ ಶರ್ಟ, ತಿಳಿ ಹಸಿರು ಬಣ್ಣದ ನೈಟ್ ಪ್ಯಾಂಟ್‌ಇರುತ್ತದೆ.
ಈ ಮೃತ ವ್ಯಕ್ತಿಯ ವಾರಸುದಾರರು ಪತ್ತೆಯಾದಲ್ಲಿ ಅಥವಾ ಯಾವುದೇ ಪೊಲೀಸ್ ಠಾಣೆಯಲ್ಲಿ ಮನುಷ್ಯಕಾಣೆ ಪ್ರಕರಣ ದಾಖಲಾಗಿದ್ದಲ್ಲಿ ಪಿ.ಐ ಕುಂಸಿ ಠಾಣೆ-9480803351, ಕುಂಸಿ ಪೊಲೀಸ್ ಠಾಣೆ -8277982830, ಶಿವಮೊಗ್ಗ ಕಂಟ್ರೋಲ್ ರೂಂ- 08182 261413 ಗಳನ್ನು ಸಂಪರ್ಕಿಸಿ, ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.