Department of Kannada and Culture ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ‘ವಚನ ಕಲ್ಯಾಣ’ ಎಂಬ ಅಹೋರಾತ್ರಿ (9 ಗಂಟೆಗಳ) ನಾಟಕವನ್ನು ಸಿದ್ಧಪಡಿಸಿ, ನಾಡಿನಾದ್ಯಂತ ಪ್ರದರ್ಶನ ಮಾಡಲು ಉದ್ದೇಶಿಸಿದ್ದು, ನುರಿತ ಹಾಗೂ ಆಸಕ್ತ ಯುವಕ/ಯುವತಿಯರು ಹಾಗೂ ಅನುಭವಿ ರಂಗ ಕಲಾವಿದರು/ಗಾಯಕರುಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ವಯೋಮಿತಿ 18 ರಿಂದ 40 ವರ್ಷಗಳ ಒಳಗಿನವರು ಅರ್ಜಿ ಸಲ್ಲಿಸಬಹುದಾಗಿದ್ದು ರಂಗಶಿಕ್ಷಣದಲ್ಲಿ ತರಬೇತಿ ಪಡೆದ ಹಾಗೂ ನಾಟಕದಲ್ಲಿ ಅಭಿನಯಿಸಿದ ಕಲಾವಿದರಿಗೆ ಆದ್ಯತೆ ನೀಡಲಾಗುವುದು. ಅರ್ಜಿ ನಮೊನೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವೆಬ್‌ಸೈಟ್ ವಿಳಾಸ kannadasiri.karnataka.gov.in ಇಲ್ಲಿ ಪಡೆದು, ಮಾ.20 ರೊಳಗಾಗಿ ಅರ್ಜಿಯನ್ನು ಭರ್ತಿಮಾಡಿ ಸದಸ್ಯ ಕಾರ್ಯದರ್ಶಿ, ಸಂತ ಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ, ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಂಗಳೂರು-560056 ಇಲ್ಲಿಗೆ ಮುದ್ದಾಂ ಅಥವಾ ಅಂಚೆಯ ಮೂಲಕ ಅಥವಾ ಇಮೇಲ್ ವಿಳಾಸ kanakaresearchcenter@gmail.com ಮೂಲಕ ಸಲ್ಲಿಸಲು ಕೋರಿದೆ.
Department of Kannada and Culture ಆಯ್ಕೆಯಾದ ಅಭ್ಯರ್ಥಿಗಳು ಮೂರು ತಿಂಗಳ ಕಾಲದ ಅವಧಿಯಲ್ಲಿ ಪೂರ್ಣಕಾಲಿಕ ತರಬೇತಿ ಪ್ರದರ್ಶನಗಳಲ್ಲಿ ಪಾಲ್ಗೊಳ್ಳುವುದು ಕಡ್ಡಾಯವಾಗಿದ್ದು, ಮಾಸಿಕ ಗೌರವಧನ ಮತ್ತು ಊಟ-ವಸತಿ ವ್ಯವಸ್ಥೆಯನ್ನು ಮಾಡಲಾಗುವುದು. ಹಾಗೂ ಸಂದರ್ಶನಕ್ಕೆ ಹಾಜರಾಗುವ ಕಲಾವಿದರಿಗೆ ಇಲಾಖೆಯು ಯಾವುದೇ ಭತ್ಯೆ ನೀಡಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ವಚನ ಕಲ್ಯಾಣ ನಾಟಕದ ನಿರ್ದೇಶಕರಾದ ಬಸಲಿಂಗಯ್ಯ ಅಥವಾ ದೂ.ಸಂ:94485 38620 ನ್ನು ಸಂಪರ್ಕಿಸಬಹುದಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Department of Kannada and Culture ವಚನ ಕಲ್ಯಾಣ-ಅಹೋರಾತ್ರಿ ರಂಗ ಪ್ರಯೋಗಕ್ಕೆ ಕಲಾವಿದರ ಆಯ್ಕೆಗೆ ಅರ್ಜಿ ಆಹ್ವಾನ
ಶಿಕಾರಿಪುರದ ಇಬ್ಬರು ಯುವ ಬರಹಗಾರರಿಗೆ ಸನ್ಮಾನ
ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಯುವ ಬರಹಗಾರರ ಚೊಚ್ಚಲ ಕೃತಿಗೆ ಆಯ್ಕೆಯಾದ ಲೇಖಕರು ಮತ್ತು ಕವಿಗಳನ್ನು ಬೆಂಗಳೂರಿನ ಕನ್ನಡ ಭವನದ ನಯನ ಸಭಾಂಗಣದಲ್ಲಿ ಮಂಗಳವಾರ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯಿಂದ ಆಯ್ಕೆಯಾದ ಶಿರಾಳಕೊಪ್ಪದ ಲೇಖಕ ಎಂ ನವೀನ್ ಕುಮಾರ್ ಅವರ ‘ಬುದ್ಧಿವಂತರು ಬಡವರಾಗುವುದು ಏಕೆ?’ ಕೃತಿ ಹಾಗೂ ಶಿಕಾರಿಪುರದ ಶ್ರೀದೇವಿ ಭುಜಂಗಪ್ಪ ಅವರ ‘ಇವನೇ ಕವನ’ ಸಂಕಲನಕ್ಕೆ ಗೌರವ ಸಲ್ಲಿಸಲಾಯಿತು. ಖ್ಯಾತ ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ಇವರಿಗೆ ಸನ್ಮಾನಿಸಿ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಮಾನಸ, ಖ್ಯಾತ ಸಾಹಿತಿ ಹಂಪನಾ, ಕವಿ ಸತೀಶ್ ಕುಲಕರ್ಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಡಳಿತಾಧಿಕಾರಿ ಕೆ.ಬಿ. ಕಿರಣ್ ಸಿಂಗ್, ನಿರ್ದೇಶಕ ಡಾ. ಕೆ.ಬಿ. ಮಂಜುನಾಥಯ್ಯ, ಪ್ರಾಧಿಕಾರದ ಸದಸ್ಯ ಲಕ್ಷ್ಮಣ್ ಕೂಡಸೆ, ಕಿತ್ತೂರು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಡಾ. ಬಿ.ಸಿ. ಕುಶಾಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಯುವ ಬರಹಗಾರರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಹೊಸ ಸಾಹಿತ್ಯ ಕೃತಿಗಳನ್ನು ಹೊರತರುವ ಲೇಖಕರಿಗೆ ಇದು ಪ್ರೇರಣೆಯಾಗಿದೆ ಎಂದು ಗಣ್ಯರು ಅಭಿಪ್ರಾಯಪಟ್ಟರು.
ಬಾಬಾ ಸಾಹೇಬರು ಭಾರತ ದೇಶದ ನಿಜ ಭಾಗ್ಯವಿಧಾತ: ಪಲ್ಲವಿ ಜಿ
ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಸಮಾನತೆ ತರಲು ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟವರು ಡಾ. ಬಿ ಆರ್ ಅಂಬೇಡ್ಕರ್. ಅವರು ಭಾರತ ದೇಶದ ನಿಜ ಭಾಗ್ಯವಿಧಾತ ಎಂದು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಪಲ್ಲವಿ ಜಿ. ಅವರು ಅಭಿಪ್ರಾಯ ವ್ಯಕ್ತ ಪಡಿಸಿದರು.
ಬೆಂಗಳೂರು ನಗರದ ಡಾ.ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಡಾ. ಬಿ ಆರ್ ಅಂಬೇಡ್ಕರ್ ಅಧ್ಯಯನ ಕೇಂದ್ರ, ಡಾ, ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾನಿಲಯ ಇವರ ಸಹಯೋಗದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬೆಂಗಳೂರು ನಗರ ಜಿಲ್ಲೆ ಏರ್ಪಡಿಸಿದ್ದ “ಭೀಮ ಗಾಯನ”ವಿಶೇಷ ಸಂಗೀತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ನಮ್ಮ ಸಂವಿಧಾನ ಪೀಠಿಕೆಯು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ, ಸ್ವಾತಂತ್ರ್ಯ, ಸಮಾನತೆ, ಐಕ್ಯತೆ ಮತ್ತು ಭ್ರಾತೃತ್ವದ ಬದ್ಧತೆಯನ್ನು ಪ್ರತಿಪಾದಿಸುತ್ತದೆ.ಅಂಬೇಡ್ಕರ್ ರಚಿತ ಈ ಸಂವಿಧಾನದ ಪೀಠಿಕೆಯೇ ಅವರು ಒಬ್ಬ ವಿಶ್ವ ಮಾನವ ಎಂಬುದನ್ನು ಸಾಬೀತು ಪಡಿಸುತ್ತದೆ ಎಂದ ಅವರು ಬಾಬಾ ಸಾಹೇಬರು ಒಂದು ಸಮುದಾಯಕ್ಕೆ ಸೀಮಿತರಾದವರಲ್ಲ. ಭಾರತದ ಎಲ್ಲ ಪ್ರಜೆಗಳ ಸಮಾನ ಹಕ್ಕುಗಳಿಗೆ ಹೋರಾಡಿದವರು. ಅವರ ಆಶಯ ಆದರ್ಶಗಳನ್ನು ಈ ದೇಶದ ಯುವ ಸಮುದಾಯ ಅರ್ಥ ಮಾಡಿಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ಕರೆ ಕೊಟ್ಟರು.
ಮಹಿಳೆಯರಿಗೆ ಹೆಚ್ಚಿನ ಹಕ್ಕುಗಳನ್ನು ಪ್ರತಿಪಾದಿಸಿದ ಹಿಂದು ಕೋಡ್ ಬಿಲ್ಲನು ತಿರಸ್ಕರಿಸಿದ ಸಂದರ್ಭದಲ್ಲಿ ಅಂಬೇಡ್ಕರ್ ಅವರು ತಮ್ಮ ಸಚಿವ ಪದವಿಗೆ ರಾಜಿನಾಮೆ ನೀಡುತ್ತಾರೆ. ಅಂತಹ ಕಾರ್ಯ ನಿಷ್ಠೆ ಇಂದಿನ ಸಂದರ್ಭದಲ್ಲಿ ಕಾಣುವುದೇ ಅತ್ಯಂತ ವಿರಳ. ಹಾಗಾಗಿ ಅಂಬೇಡ್ಕರ್ ಇಂದಿಗೂ ನಮಗೆ ಅತ್ಯಂತ ಪ್ರಸ್ತುತ ಎಂದ ಅವರು, ದೇಶದಲ್ಲಿ ಮಹಿಳೆಯರನ್ನು ಒಂದು ವರ್ಗವನ್ನಾಗಿಸಿ ಮನೆಗೆ ಸೀಮಿತವಾಗಿರಿಸಿದ್ದ ಪರಿಸ್ಥಿತಿ ಒಂದು ಕಾಲದಲ್ಲಿ ಇತ್ತು, ಅಂತಹ ಸಂದರ್ಭದಲ್ಲಿ ಅಕ್ಷರದವ್ವ ಸಾವಿತ್ರಿಬಾಯಿ ಪುಲೆ ಅವರು ಮಹಿಳೆಯರ ಶಿಕ್ಷಣಕ್ಕೆ ಹೋರಾಡಿದವರು. ಇಂದು ಅವರ ಪುಣ್ಯಸ್ಮರಣೆಯ ದಿನದಂದು ನಾವೆಲ್ಲರೂ ಕೃತಜ್ಞತಾ ಭಾವದಿಂದ ಅವರನ್ನು ನೆನೆಯಬೇಕಿದೆ ಎಂದರು.
Chamber of Commerce Shivamogga ಮಹಿಳೆಯರು ಸಂಘಟಿತರಾಗುವುದು ಅತ್ಯಂತ ಅವಶ್ಯ : ಜಿ.ವಿಜಯಕುಮಾರ್
Chamber of Commerce Shivamogga ಸಮಾಜದ ಬೆಳವಣಿಗೆಗೆ ಮಹಿಳೆಯರ ಪಾತ್ರ ದೊಡ್ಡದು. ಮಹಿಳೆಯರು ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಲು, ಆರ್ಥಿಕವಾಗಿ ಸದೃಢರಾಗಲು ಸಂಘಟಿತರಾಗುವುದು ಮುಖ್ಯ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಹೇಳಿದರು
ಶಿವಮೊಗ್ಗ ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಆವರಣದಲ್ಲಿ ಜಿಲ್ಲಾ ಸರ್ವೋದಯ ಮಂಡಲದಿಂದ ಏರ್ಪಡಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಸಾಧನೆ ಮಾಡಿದ ಮಹಿಳೆಯರು ಮತ್ತು ಆಕಾಶವಾಣಿ ಆರ್ ಜೆ ಬಳಗದವರನ್ನು ಸನ್ಮಾನಿಸಿ ಮಾತನಾಡಿದರು.
ಹೆಣ್ಣು ಮಕ್ಕಳು ಸ್ವಾವಲಂಬಿಯಾಗಬೇಕು. ಮಹಿಳೆ ತನ್ನ ಪ್ರಯತ್ನ, ಪರಿಶ್ರಮದಿಂದ ಈಗ ಎಲ್ಲಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದಾಳೆ. ತಾನು ಪಡೆದುಕೊಂಡ ಶಿಕ್ಷಣದಿಂದ ಸ್ವತಂತ್ರವಾಗಿ ಜೀವನ ಮಾಡುವ ಶಕ್ತಿ ಹೊಂದಿದ್ದಾಳೆ. ಮಹಿಳೆಯರ ಅಭಿವೃದ್ಧಿ ಎಂದರೆ ಒಟ್ಟಾರೆ ಸಮಾಜದ ಅಭಿವೃದ್ಧಿ ಎಂದು ತಿಳಿಸಿದರು.
ಮನೋವೈದ್ಯೆ ಕೆ.ಎಸ್.ಪವಿತ್ರ ಮಾತನಾಡಿ, ಮಹಿಳೆಯು ಆರೋಗ್ಯದಿಂದ ಇದ್ದರೆ ಮನೆಗೆ ಅಡಿಪಾಯವಿದ್ದಂತೆ. ಅವರು ಆರೋಗ್ಯದಿಂದ ಇದ್ದಷ್ಟು ಮನೆ ಸಬಲವಾಗಿರುತ್ತದೆ. ಮಹಿಳೆಯ ದೃಢಸಂಕಲ್ಪವು ಯಾವುದೇ ಸವಾಲನ್ನು ಜಯಿಸಬಹುದು ಎಂದರು.
ಜಿಲ್ಲಾ ಸರ್ವೋದಯ ಮಂಡಲ ಅಧ್ಯಕ್ಷ ಆರ್.ಮನೋಹರ ಮಾತನಾಡಿ, ಹೆಣ್ಣು ಭ್ರೂಣ ಹತ್ಯೆ ಕೇವಲ ಅಪರಾಧವಲ್ಲ, ಅದೊಂದು ನೈತಿಕ ಕಳಂಕ ಮತ್ತು ಸಾಂವಿಧಾನಿಕ ಅವಮಾನ ಎಂದು ಹೇಳಿದರು.
ಸನ್ಮಾನಿತರಾದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಎಮಿರೇಟ್ಸ್ ಪ್ರಾಧ್ಯಾಪಕಿ ಡಾ. ವಿಜಯ ದೇವಿ ಮಾತನಾಡಿ, ಮಹಿಳೆಯ ಸಬಲೀಕರಣ ಮನೆಯಿಂದಲೇ ಪ್ರಾರಂಭವಾಗಬೇಕು. ಶೈಕ್ಷಣಿಕ ಪ್ರಗತಿ ತುಂಬಾ ಮುಖ್ಯ. ಮಹಿಳೆಯರ ಪ್ರತಿಭೆಯನ್ನು ಗುರುತಿಸುವ ಕೆಲಸವಾಗಬೇಕು ಎಂದರು.
Chamber of Commerce Shivamogga ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಬಸವರಾಜ ನೆಲ್ಲಿಸರ, ಆಕಾಶವಾಣಿ ಆರ್ ಜೆ ಗಣೇಶ್ ಕೆಂಚನಾಲ್, ಸನ್ಮಾನಿತ ಆಕಾಶವಾಣಿ ಆರ್ ಜೆ ಗಳಾದ ಪ್ರೇಮ ಸಾಲೆರಾ, ನಂದಿನಿ, ವಿದ್ಯಾ ಕಾರಂತ್ ಹಾಗೂ ಬಸವರಾಜ್ ಗುಬ್ಬಿ.. ಮಾನಸ ಶಿವರಾಮ್ ಕೃಷ್ಣ, ಚಂದ್ರಿಕಾ ನೇರಲಗುಂಡಿ, ಬ್ರಹ್ಮಾನಂದ ರಾನಾದೆ, ಪಂಕಜ, ಸಹನಾ ಚೇತನ್, ರಾಜು ಶಂಕರಘಟ್ಟ, ಡಾ ಮಾನಸ, ಆಕಾಶವಾಣಿ ಆರ್ ಜೆ ಬಳಗ ಇತರರಿದ್ದರು.
ಉದ್ಯೋಗ ನೀಡಲು ನೇರ ಸಂದರ್ಶನ
ಶಿವಮೊಗ್ಗ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಉದ್ಯೋಗಕ್ಕೆ ಆಯ್ಕೆ ಮಾಡಿಕೊಳ್ಳಲು ಮಾ.13 ರಂದು ನೇರ ಸಂದರ್ಶನ ಏರ್ಪಡಿಸಲಾಗಿದೆ.
ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಗುತ್ಯಪ್ಪ ಕಾಲೋನಿ ಪಂಪಾ ನಗರ 2ನೇ ಕ್ರಾಸ್, ಸಾಗರ ರಸ್ತೆ, ಶಿವಮೊಗ್ಗ ಇಲ್ಲಿ ಮಾ.13 ರ ಬೆಳಿಗ್ಗೆ 10 ಗಂಟೆಗೆ ನೇರ ಸಂದರ್ಶನ ಆಯೋಜಿಸಿದ್ದು, ಪ್ರತಿಷ್ಟಿತ ಖಾಸಗಿ ಕಂಪನಿಗಳು ಭಾಗವಹಿಸಿ, ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವರು. ಎಸ್‌ಎಸ್‌ಎಲ್‌ಸಿ, ಪಿಯುಸಿ, ಡಿಪ್ಲೋಮಾ ಮತ್ತು ಯಾವುದೇ ಪದವಿ ತೇರ್ಗಡೆ ಹೊಂದಿದ 18 ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ಬಯೊಡೇಟಾ(ರೆಸ್ಯೂಮ್) ಮತ್ತು ಆಧಾರ್ ಕಾರ್ಡ್ ಪ್ರತಿಯೊಂದಿಗೆ ಸಂದರ್ಶನದಲ್ಲಿ ಭಾಗವಹಿಸಬಹುದು. ಸಂದರ್ಶನದಲ್ಲಿ ಭಾಗವಹಿಸಲು ಉಚಿತ ಪ್ರವೇಶವಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಖುದ್ದಾಗಿ ಅಥವಾ ದೂ.ಸಂ:08182-255293, 9380663606 ನ್ನು ಸಂಪರ್ಕಿಸಬಹುದೆAದು ಜಿಲ್ಲಾ ಉದ್ಯೋಗಾಧಿಕಾರಿಗಳು ತಿಳಿಸಿದ್ದಾರೆ.
MESCOM ಜೋಗ ಮೆಸ್ಕಾಂ ಜನ ಸಂಪರ್ಕ ಸಭೆ
MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಮಾ.12 ರಂದು ಸಮಯ ಬೆಳಿಗ್ಗೆ 11.00 ರಿಂದ 01.00 ರವರೆಗೆ ಜನ ಸಂಪರ್ಕ ಸಭೆ ನಡೆಯಲಿದೆ. ಈ ಸಭೆಯಲ್ಲಿ ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲ್ಲಿದ್ದು,ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದರಿಂದ ಈ ಅವಕಾಶವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ;.9448289520
L. B College ಎಲ್. ಬಿ ಕಾಲೇಜಿನಲ್ಲಿ ಕೃತಕ ಬುದ್ದಿಮತ್ತೆ ಕುರಿತು ಕಾರ್ಯಗಾರ
L. B College ಸಾಗರದ ಎಲ್. ಬಿ. ಕಾಲೇಜಿನಲ್ಲಿ ಕೃತಕ ಬುದ್ದಿಮತ್ತೆ (ಎ ಐ) ಕುರಿತ 2 ದಿನಗಳ ಕಾರ್ಯಗಾರವು ಸೋಮವಾರ ಆರಂಭವಾಯಿತು. ಕಾರ್ಯಗಾರವನ್ನು ಉದ್ಘಾಟಿಸಿದ ಎಂ. ಡಿ ಎಫ್ ಅಧ್ಯಕ್ಷರಾದ ಬಿ. ಆರ್. ಜಯಂತ್ ರವರು ಎ ಐ ಜ್ಞಾನ ಎಲ್ಲರಿಗೂ ಅನಿವಾರ್ಯವಾಗಿದ್ದು ವಿದ್ಯಾರ್ಥಿಗಳು ಕಾರ್ಯಾಗಾರದ ಪೂರ್ಣ ಪ್ರಯೋಜನ ಪಡೆಯುವಂತೆ ತಿಳಿಸಿದರು. ನಮ್ಮ ಕಾಲೇಜಿನಲ್ಲಿ ಎ ಐ ಕೋರ್ಸ್ ಆರಂಭಿಸುವ ಯೋಚನೆಯಿದೆ ಎಂದು ಹೇಳಿದರು. ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದ ಕಾಲೇಜಿನ ಪ್ರಾಚಾರ್ಯರಾದ ಡಾ. ಲಕ್ಷ್ಮೀಶ ಎ. ಎಸ್ ಮಾತನಾಡುವ ಸಾಧನವಾಗಿದ್ದ ಮೊಬೈಲ್ ಇಂದು ಸಂದೇಶಗಳನ್ನು ಕಳುಹಿಸಲು, ಹಣಕಾಸಿನ ವ್ಯವಹಾರ ನಡೆಸಲು ಮುಖ ನೋಡಿ ಮಾತನಾಡಲು, ಕನ್ನಡಿಯಾಗಿ, ಲೆಕ್ಕ ಮಾಡುವ ಕ್ಯಾಲುಕ್ಯೂಲೇಟರ್ ಆಗಿ, ಮೇಲ್ ಕಳುಹಿಸಲು ಹೀಗೆ ವಿವಿಧ ಉದ್ದೇಶಗಳಿಗೆ ಬಳಕೆಯಾಗುತ್ತಿದೆ. ಇವೆಲ್ಲವೂ ಸಾಧ್ಯವಾಗಿದ್ದು ಮೊಬೈಲ್ ನ್ನು ಹೇಗೆಲ್ಲಾ ಬಳಸಬಹುದು ಎಂಬ ನಿರಂತರ ಅಧ್ಯಯನ ಮತ್ತು ಸಂಶೋಧನೆಯಿಂದ ಹೀಗೆ ಎ ಐ ತಂತ್ರಜ್ಞಾನವನ್ನು ಬಳಸಬಹುದಾದ ಕ್ಷೇತ್ರಗಳ ಬಗ್ಗೆ ಅಧ್ಯಯನ ಮತ್ತು ಸಂಶೋಧನೆಯ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ಎ ಐ ಕುರಿತು ತರಬೇತಿ ನೀಡಲು ಬೆಂಗಳೂರಿನ ಅಪ್ ಫ್ರಂಟ್ ಸಂಸ್ಥೆಯ ಸಹಯೋಗದೊಂದಿಗೆ 2 ದಿನಗಳ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಎಂ. ಡಿ ಎಫ್ ಪ್ರಧಾನ ಕಾರ್ಯದರ್ಶಿ ಡಾ. ಶಿವಕುಮಾರ್, ಜಂಟಿ ಕಾರ್ಯದರ್ಶಿ ಎಂ. ಆರ್ ಸತ್ಯನಾರಾಯಣ ಉಪಸ್ಥಿತರಿದ್ದರು. ಕಾಲೇಜಿನ ಐ ಕ್ಯೂ ಎ ಸಿ ಸಂಚಾಲಕರಾದ ನಾಗೇಶ್ ಚೌಹಾನ್ ಎಲ್ಲರನ್ನು ವಂದಿಸಿದರು. ಮೊಬೈಲ್ ನಲ್ಲಿಯೇ ಪ್ರಾಯೋಗಿಕವಾಗಿ ಎ ಐ ಬಳಸುವ ತರಬೇತಿಯನ್ನು ಕಾಲೇಜಿನ ವಿದ್ಯಾರ್ಥಿಗಳಿಗೆ ನೀಡಲಾಯಿತು.
Indian Cricket Team ವಿಶ್ವ ವಿಜೇತ ಭಾರತೀಯ ಕ್ರಿಕೆಟ್ ತಂಡಕ್ಕೆ ಸೀಎಂ ಸಿದ್ಧರಾಮಯ್ಯನವರಿಂದ ಅಭಿನಂದನೆ
Indian Cricket Team ವಿಶ್ವ ವಿಜೇತ ಭಾರತೀಯ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳು ಸೀಎಂ ಸಿದ್ಧರಾಮಯ್ಯ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ಕೋರಿದ್ದಾರೆ.
ಟಿ20 ವಿಶ್ವಕಪ್ ಪಂದ್ಯಾವಳಿಯ ಮೊದಲ ದಿನದಿಂದಲೇ ಚಾಂಪಿಯನ್ ಆಟವಾಡುತ್ತಾ ಬಂದಿದ್ದ ನಮ್ಮ ತಂಡ ಪ್ರಶಸ್ತಿಗೆ ಅತ್ಯಂತ ಅರ್ಹ ತಂಡವಾಗಿತ್ತು. ಯುವ ಆಟಗಾರರಿಂದಲೇ ತುಂಬಿದ್ದ ಈ ತಂಡ ಅನುಭವದಲ್ಲಿ ಕಡಿಮೆಯಿದ್ದರೂ, ಪ್ರತಿಭಾಶಾಲಿಗಳಿಂದ ಕೂಡಿತ್ತು. ತವರು ಪ್ರೇಕ್ಷಕರ ಬೆಂಬಲ, ಆಟಗಾರರ ಶ್ರಮ ಮತ್ತು ಕೋಟ್ಯಂತರ ಭಾರತೀಯರ ಹಾರೈಕೆ ವಿಶ್ವಕಪ್ ಕಿರೀಟವಾಗಿ ನಮ್ಮವರ ಮುಡಿ ಸೇರಿದೆ.
ಇಂದಿನ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್, ಅದ್ಭುತ ಬೌಲಿಂಗ್, ಅತ್ಯುತ್ತಮ ಕ್ಷೇತ್ರರಕ್ಷಣೆ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ಭಾರತ ತಂಡ ಶ್ರೇಷ್ಠ ಪ್ರದರ್ಶನ ತೋರಿದೆ. ಉತ್ತಮ ಪ್ರದರ್ಶನ ನೀಡುತ್ತಾ ಫೈನಲ್ ಪಂದ್ಯದ ವರೆಗೆ ಬಂದಿರುವ ನ್ಯೂಜಿಲೆಂಡ್ ತಂಡದ ಸಾಧನೆ ಕೂಡ ಕಡಿಮೆಯೇನಲ್ಲ. ಅವರಿಗೂ ನನ್ನ ಅಭಿನಂದನೆಗಳು.
Indian Cricket Team ಕ್ರಿಕೆಟ್ ಜಗತ್ತಿನಲ್ಲಿ ಭಾರತದ ಕೀರ್ತಿ ಪತಾಕೆ ಮತ್ತೆ ಮುಗಿಲೆತ್ತರದಲ್ಲಿ ರಾರಾಜಿಸುತ್ತಿದೆ. ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಇದೊಂದು ಅವಿಸ್ಮರಣೀಯ ದಿನ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ.
International Women’s Day ಸೈಲ್-ವಿಐಎಸ್‌ಎಲ್ ನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ
International Women’s Day ಸೈಲ್-ವಿಐಎಸ್‌ಎಲ್ ನ ಫ್ಯಾಕ್ಟರಿ ಮೀಟಿಂಗ್‌ಹಾಲ್‌ನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ‘ಕೊಡುವುದರಿಂದ ಪ್ರಗತಿ’ ಎಂಬ ಧ್ಯೇಯದೊಂದಿಗೆ ಆಚರಿಸಲಾಯಿತು. ಕಾರ್ಯಪಾಲಕ ನಿರ್ದೇಶಕರಾದ ಶ್ರೀ ಅನೂಪ್ ಕುಮಾರ್, ಶ್ರೀ ಬಿ. ವಿಶ್ವನಾಥ, ಮುಖ್ಯ ಮಹಾಪ್ರಬಂಧಕರು (ಮಾನವ ಸಂಪನ್ಮೂಲ), ಶ್ರೀ ಟಿ. ರವಿಚಂದ್ರನ್, ಮಹಾಪ್ರಬಂಧಕರು (ಸ್ಥಾವರ), ಡಾ. ಹೆಚ್. ಶೋಭ, ಉಪ ಮುಖ್ಯ ವೈಧ್ಯಾಧಿಕಾರಿ, ಶ್ರೀ ಜಿ. ಅಮೃತ್ ಕುಮಾರ್, ಅಧ್ಯಕ್ಷರು, ವಿಐಎಸ್‌ಎಲ್ ಕಾರ್ಮಿಕರ ಸಂಘ ಮತ್ತು ಶ್ರೀ ಅಜಯ್ ಸೋಂಕುವಾರ್, ಅಧ್ಯಕ್ಷರು, ವಿಐಎಸ್‌ಎಲ್ ಅಧಿಕಾರಿಗಳ ಸಂಘ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಪಾಲಕ ನಿರ್ದೇಶಕರಾದ ಶ್ರೀ ಅನೂಪ್ ಕುಮಾರ್, ತಮ್ಮ ಭಾಷಣದಲ್ಲಿ ವಿಐಎಸ್‌ಎಲ್‌ನ ಮಹಿಳಾ ಸಮುದಾಯದ ಪ್ರಮುಖ ಸಾಧನೆಗಳನ್ನು ಪ್ರಸ್ತಾಪಿಸುತ್ತಾ ಸಮಾಜಕ್ಕೆ ಮತ್ತು ಕಾರ್ಖಾನೆಗೆ ಅವರ ಕೊಡುಗೆಯನ್ನು ಶ್ಲಾಘಿಸಿದರು. ಹಾಗೆಯೇ, ಸೈಲ್-ವಿಐಎಸ್‌ಎಲ್ ನಲ್ಲಿ ಮಹಿಳೆಯರಿಗೆ ಪ್ರೋತ್ಸಾಹ ಮತ್ತು ಸಹಕಾರವನ್ನು ನೀಡುವ ಮೂಲಕ ಅವರು ತಮ್ಮ ಸಮಾಥ್ಯವನ್ನು ಪ್ರದರ್ಶಿಸುವಲ್ಲಿ ಸಹಕಾರಿಯಾಗಿದೆ ಎಂದರು.
ಡಾ. ಶೋಭ, ಡಾ. ಸುಶ್ಮಾ, ಶ್ರೀಮತಿಯವರಾದ ಅಪರ್ಣ, ನಾಗರತ್ನ, ಚಂದ್ರಾವತಿ, ಶೈಲಶ್ರೀ, ಅಮಿತಾ, ಮಂಜುಶ್ರೀ, ರಮ್ಯ, ರಕ್ಷಿತ, ತ್ರಿವೇಣಿ, ಹೇಮ, ಸರಸ್ವತಿ, ಮತ್ತು ಯೋಗೇಶ್ವರಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಮಹಿಳಾ ಉದ್ಯೋಗಿಗಳಿಗೆ ಮತ್ತು ಮಹಿಳಾ ಗುತ್ತಿಗೆ ಕಾರ್ಮಿಕರಿಗೆ ವಿನೋದದ ಆಟಗಳನ್ನು ಆಯೋಜಿಸಲಾಗಿತ್ತು. ಪ್ರಶಸ್ತಿ ವಿಜೇತರಿಗೆ ಗಣ್ಯರಿಂದ ಬಹುಮಾನ ವಿತರಿಸಲಾಯಿತು.
International Women’s Day ಸೈಲ್-ವಿಐಎಸ್‌ಎಲ್ ರಾಂಚಿಯವರು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ವೀಡಿಯೋ ಸಂವಾದದಲ್ಲಿ ಕಾರ್ಯಪಾಲಕ ನಿರ್ದೇಶಕರಾದ ಶ್ರೀ ಅನೂಪ್ ಕುಮಾರ್, ಶ್ರೀ ಬಿ. ವಿಶ್ವನಾಥ, ಮುಖ್ಯ ಮಹಾಪ್ರಬಂಧಕರು (ಮಾನವ ಸಂಪನ್ಮೂಲ), ಶ್ರೀ ಟಿ. ರವಿಚಂದ್ರನ್, ಮಹಾಪ್ರಬಂಧಕರು (ಸ್ಥಾವರ) ಮತ್ತು ವಿಐಎಸ್‌ಎಲ್‌ನ ಮಹಿಳಾ ಕಾರ್ಮಿಕರು ಭಾಗವಹಿಸಿ ಸೈಲ್ ಅಧ್ಯಕ್ಷರು ಮತ್ತು ಸೈಲ್ ಬೊರ್ಡ್ ಸದಸ್ಯರೊಂದಿಗೆ ಸಂವಾದದಲ್ಲಿ ಭಾಗವಹಿಸಿದ್ದರು.
DVS College of Arts, Science and Commerce ಆಳ್ವಾಸ್ ಸ್ಪರ್ಧೆಯಲ್ಲಿ ಡಿವಿಎಸ್ ಬಿಕಾಂ ವಿದ್ಯಾರ್ಥಿಗಳ ಸಾಧನೆ
DVS College of Arts, Science and Commerce ದೇಶೀಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಬಿಕಾಂ ವಿದ್ಯಾರ್ಥಿಗಳು ಇತ್ತೀಚೆಗೆ ಮೂಡಬಿದರೆ ಆಳ್ವಾಸ್ ಕಾಲೇಜಿನಲ್ಲಿ ಆಯೋಜಿಸಿದ್ದ ಕ್ಷಿತಿವಂಶ್ ಅಂತರ ಕಾಲೇಜು ಸ್ಪರ್ಧೆಯಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾಗಿದ್ದಾರೆ.
ಪೇಪರ್ ಪ್ರೆಸೆಂಟೇಷನ್, ಫ್ಯಾಷನ್ ವಾಕ್ ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನ, ಇಂಗ್ಲಿಷ್ ಡಿಬೇಟ್, ಪ್ಲಾಗಿಂಗ್ ಡ್ರೈವ್, ಗ್ರೂಪ್ ಡ್ಯಾನ್ಸ್ ನಲ್ಲಿ ದ್ವಿತೀಯ ಬಹುಮಾನ ಗಳಿಸಿದ್ದಾರೆ. ದೇಶಿಯ ವಿದ್ಯಾಶಾಲಾ ಸಮಿತಿ ಅಧ್ಯಕ್ಷ ಕೆ.ಬಸಪ್ಪ ಗೌಡ, ಕಾರ್ಯದರ್ಶಿ ಎಸ್.ಪಿ.ದಿನೇಶ್, ಕಾಲೇಜಿನ ಪ್ರಾಂಶುಪಾಲ ಡಾ. ಎಂ.ವೆಂಕಟೇಶ್ ವಿದ್ಯಾರ್ಥಿಗಳಿಗೆ ಅಭಿನಂದಿಸಿದರು. ವಿಭಾಗದ ಮುಖ್ಯಸ್ಥ ರುದ್ರೇಶ.ಸಿ.ಇ., ಪ್ರಾಧ್ಯಾಪಕರಾದ ಡಾ. ಚಂದ್ರಶೇಖರಪ್ಪ.ಯು ಮತ್ತು ಸರ್ವಜ್ಞಮೂರ್ತಿ ಉಪಸ್ಥಿತರಿದ್ದರು.
