Sunday, August 9, 2026
Sunday, August 9, 2026
Home Blog Page 167

ನಾಪತ್ತೆಯಾಗಿದ್ದ ಯುವಕನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ

0

ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಯುವಕನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ.

ಮೃತರನ್ನು ಹುಂಚ ಸಮೀಪದ ಮಾರ್ನಮಿಬೈಲು ನಿವಾಸಿ ಧನುಷ್ ಎನ್.ಎಸ್. (25) ಎಂದು ಗುರುತಿಸಲಾಗಿದೆ.

ಧನುಷ್ ಕಳೆದ 19-01-2026 ರಂದು ಮನೆಯಿಂದ ಹೊರಟು ಹೋದ ಅವರು ನಂತರ ಮರಳಿ ಮನೆಗೆ ಬಂದಿರಲಿಲ್ಲ. ಈ ಬಗ್ಗೆ ಕುಟುಂಬದವರು ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಇದೀಗ ಯುವಕನ ಮೃತದೇಹ 5MS ಪ್ರದೇಶದ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸಾಗಿಸಲಾಗಿದೆ. ಯುವಕನ ಸಾವಿನ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಕುರಿತು ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Chamber of Commerce Shivamogga ವಿಜಯರತ್ನ ಪುರಸ್ಕೃತ ಪ್ರದೀಪ್ ವಿ.ಎಲಿಗೆ ಸನ್ಮಾನ

0

Chamber of Commerce Shivamogga ಕನ್ನಡ ದಿನಪತ್ರಿಕೆ ವಿಜಯವಾಣಿ ನೀಡುವ ವಿಜಯರತ್ನ ಇಂಟರ್ ನ್ಯಾಷನಲ್ 2026 ಪ್ರಶಸ್ತಿ ಪುರಸ್ಕೃತ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ನಿರ್ದೇಶಕ ಪ್ರದೀಪ್ ವಿ.ಎಲಿ ಅವರಿಗೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಮಾತನಾಡಿ, ಉದ್ಯಮದಲ್ಲಿ ಶ್ರಮ ಹಾಗೂ ಪ್ರಾಮಾಣಿಕತೆ ಇದ್ದರೆ ಅಂತರಾಷ್ಟ್ರೀಯ ಮಟ್ಟದಲ್ಲೂ ಸಾಧನೆ ಸಾಧ್ಯ ಎಂದು ತಿಳಿಸಿದರು.
ಉದ್ಯಮ ಕ್ಷೇತ್ರದಲ್ಲಿ ಸತತ ಪರಿಶ್ರಮ, ನಿಷ್ಠೆ ಮತ್ತು ಸಮಾಜಪರ ಬದ್ಧತೆ ಮೂಲಕ ಗಮನಾರ್ಹ ಸಾಧನೆ ಮಾಡಿರುವ ಹಿನ್ನೆಲೆಯಲ್ಲಿ ಪ್ರದೀಪ್ ವಿ.ಎಲಿ ಅವರನ್ನು “ವಿಜಯರತ್ನ” ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ವ್ಯವಹಾರದಲ್ಲಿ ಗುಣಮಟ್ಟ, ನಂಬಿಕೆ ಮತ್ತು ಸೇವಾ ಮನೋಭಾವವನ್ನು ಅಳವಡಿಸಿಕೊಂಡು ಯಶಸ್ವಿಯಾಗಿ ಮುನ್ನಡೆಯುತ್ತಿದ್ದಾರೆ ಎಂದರು.
ಶಿವಮೊಗ್ಗ ಜಿಲ್ಲೆಯಲ್ಲಿ ಯುವ ಉದ್ಯಮಿಗಳ ಸಂಖ್ಯೆ ಹೆಚ್ಚಾಗಬೇಕು. ಸರ್ಕಾರದ ವತಿಯಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು. ಶಿವಮೊಗ್ಗ ಜಿಲ್ಲಾ ಮತ್ತು ವಾಣಿಜ್ಯ ಕೈಗಾರಿಕೆ ಸಂಘವು ಯುವ ಉದ್ಯಮಿಗಳಿಗೆ ಪ್ರೋತ್ಸಾಹ ಮತ್ತು ಮಾರ್ಗದರ್ಶನ ನೀಡಲಿದೆ ಎಂದು ತಿಳಿಸಿದರು.
Chamber of Commerce Shivamogga ಸನ್ಮಾನಿತ ಪ್ರದೀಪ್ ವಿ.ಎಲಿ ಮಾತನಾಡಿ, ಈ ಗೌರವ ನನ್ನ ಕುಟುಂಬ, ಸಹೋದ್ಯೋಗಿಗಳ ಆಶೀರ್ವಾದದ ಫಲ. ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹಕಾರ ಕೂಡ ಇದೆ. ಮುಂದೆಯೂ ಸಮಾಜಮುಖಿ ಕಾರ್ಯಗಳಲ್ಲಿ ಇನ್ನಷ್ಟು ತೊಡಗಿಸಿಕೊಳ್ಳುತ್ತೇನೆ ಎಂದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ಖಜಾಂಚಿ ಆರ್.ಮನೋಹರ್, ನಿರ್ದೇಶಕರಾದ ಬಿ.ಸುರೇಶ್ ಕುಮಾರ್, ಗಣೇಶ್ ಎಂ.ಅಂಗಡಿ , ಜಿ.ವಿ.ಕಿರಣ್ ಕುಮಾರ್ , ರವಿಪ್ರಕಾಶ್ ಜೆನ್ನಿ, ಸಿ ಎ ಶರತ್, ಎಸ್ ಎಸ್ ಉದಯ್ ಕುಮಾರ್, ವಿನೋದ್ ಕುಮಾರ್ ಜೈನ್, ಎಸ್ ಪಿ ಶಂಕರ್, ಮಂಜೇಗೌಡ, ಹಾಲಸ್ವಾಮಿ, ಡಾ. ಲಕ್ಷ್ಮೀದೇವಿ ಗೋಪಿನಾಥ್, ಸಹನಾ ಸುಭಾಷ್ ಹಾಗೂ ಮಾಜಿ ಅಧ್ಯಕ್ಷ ಡಿ ಎಂ ಶಂಕರಪ್ಪ ಇತರರಿದ್ದರು.

ಮಾರ್ಚ್ 15ರಂದು ರೋಟರಿ ಸೆಂಟ್ರಲ್‌ಗೆ ಜಿಲ್ಲಾ ಗವರ್ನರ್ ಭೇಟಿ

0

ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಸಂಸ್ಥೆಗೆ ಮಾರ್ಚ್ 15ರಂದು ಜಿಲ್ಲಾ ಗವರ್ನರ್ ಕೆ.ಪಾಲಾಕ್ಷ ಅವರ ಅಧಿಕೃತ ಭೇಟಿ ಹಿನ್ನೆಲೆಯಲ್ಲಿ ವಿವಿಧ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಗೋಪಾಳದ ರೋಟರಿ ಭವನದಲ್ಲಿ ಮಾರ್ಚ್ 15ರಂದು ಸಂಜೆ 6.30ಕ್ಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಗವರ್ನರ್ ಕೆ.ಪಾಲಾಕ್ಷ, ವಲಯ 11ರ ಸಹಾಯಕ ಗವರ್ನರ್ ಎಂ.ಬಿ.ಲಕ್ಷ್ಮಣ್ ಗೌಡ, ವಲಯ ಸೇನಾನಿ ಜಿ.ಕಿರಣಕುಮಾರ್, ರೇಖಾ ಪಾಲಾಕ್ಷ, ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಬಿ.ಬಸವರಾಜ, ಕಾರ್ಯದರ್ಶಿ ಜಯಶೀಲ ಶೆಟ್ಟಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಸರ್ಕಾರಿ ಶಾಲೆಗಳಿಗೆ ಕುಡಿಯುವ ನೀರಿನ ಯಂತ್ರ ವಿತರಿಸಲಾಗುವುದು. ಶಾಲಾ ಮಕ್ಕಳಿಗೆ ನೋಟ್‌ಬುಕ್ ವಿತರಣೆ, ಪುಸ್ತಕ, ತಟ್ಟೆ. ಲೋಟ ಹಾಗೂ ಸ್ಟ್ಯಾಂಡ್‌ಗಳನ್ನು ನೀಡಲಾಗುವುದು ಎಂದು ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಬಿ.ಬಸವರಾಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

CM Siddaramaiah ಶಾಸಕ ಎಸ್.ಎನ್. ಚನ್ನಬಸಪ್ಪನವರಿಂದ ಸಿಎಂ ಭೇಟಿ, ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗೆ ಮನವಿ

0

CM Siddaramaiah ಶಿವಮೊಗ್ಗದ ಶಾಸಕರಾದ ಎಸ್.ಎನ್. ಚೆನ್ನಬಸಪ್ಪನವರ ಕಚೇರಿಗೆ ಕ್ಯಾನ್ಸರ್‌ನಂತಹ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ ಅನೇಕ ನಿವಾಸಿಗಳು ಶಸ್ತ್ರಚಿಕಿತ್ಸೆ ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ನೆರವು ಕೋರಿ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ, ಬೆಂಗಳೂರಿನ ವಿಧಾನಸೌಧದಲ್ಲಿ ಶಾಸಕರಾದ ಎಸ್.ಎನ್. ಚನ್ನಬಸಪ್ಪನವರು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು.

CM Siddaramaiah ಈ ಸಂದರ್ಭದಲ್ಲಿ ಅವರ ಶಸ್ತ್ರಚಿಕಿತ್ಸೆಯ ವೆಚ್ಚವನ್ನು ಭರಿಸಲು ‘ಮುಖ್ಯಮಂತ್ರಿ ಪರಿಹಾರ ನಿಧಿ’ಯ (CMRF) ಅಡಿಯಲ್ಲಿ ತುರ್ತಾಗಿ ಆರ್ಥಿಕ ನೆರವು ಮಂಜೂರು ಮಾಡುವಂತೆ ಕೋರಿ ಅವರಿಗೆ ಅಧಿಕೃತ ಮನವಿಯನ್ನು ಸಲ್ಲಿಸಲಾಯಿತು.

D.K. Shivakumar ಕೆಪಿಸಿಸಿ ಅಧ್ಯಕ್ಷರಾಗಿ ಆರು ವರ್ಷ ಪೂರೈಸಿದ ಉಪಮುಖ್ಯಮಂತ್ರಿ ಡಿ‌.ಕೆ. ಶಿವಕುಮಾರ್

0

D.K. Shivakumar ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ಮಾನ್ಯ ಉಪಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿ.ಕೆ ಶಿವಕುಮಾರ್ ಅವರನ್ನು ಬೆಂಗಳೂರಿನ ಐಟಿಸಿ ಗಾರ್ಡೇನಿಯಾ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭೇಟಿ ಮಾಡಿ ಸಚಿವರಾದ ಮಧು ಬಂಗಾರಪ್ಪನವರು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸಚಿವರುಗಳಾದ ಶ್ರೀ ಎನ್.ಎಸ್ ಬೋಸರಾಜು, ಶ್ರೀ ಪ್ರಿಯಾಂಕ್ ಖರ್ಗೆ ಹಾಗೂ ಶಾಸಕರಾದ ಶ್ರೀ ಗೋಪಾಲಕೃಷ್ಣ ಬೇಳೂರು ಹಾಜರಿದ್ದರು.

Klive Special Article ಮೂತ್ರಪಿಂಡದ ಕಾಯಿಲೆ – ಒಂದು ನಿಶಬ್ದ ಹಂತಕ, ಇದನ್ನು ನೀವು ತಡೆಯಬಹುದು

0

Klive Special Article ಮೂತ್ರಪಿಂಡಗಳು (ಕಿಡ್ನಿ) ನಮ್ಮ ದೇಹದ ಅತ್ಯಂತ ಪ್ರಮುಖ ಅಂಗಗಳಾಗಿದ್ದು, ನಮ್ಮನ್ನು ಆರೋಗ್ಯವಾಗಿಡಲು ಹಲವು ಅಗತ್ಯ ಕಾರ್ಯಗಳನ್ನು ನಿರ್ವಹಿಸುತ್ತವೆ. ರಕ್ತದಲ್ಲಿನ ಕಲ್ಮಶಗಳನ್ನು (ಟಾಕ್ಸಿನ್) ಮತ್ತು ಹೆಚ್ಚುವರಿ ನೀರನ್ನು ಹೊರಹಾಕುವುದು ಇದರ ಮುಖ್ಯ ಕೆಲಸವಾಗಿದೆ. ಅಲ್ಲದೆ, ರಕ್ತದೊತ್ತಡವನ್ನು ನಿಯಂತ್ರಿಸಲು, ಹಿಮೋಗ್ಲೋಬಿನ್ ಮಟ್ಟವನ್ನು ಕಾಪಾಡಲು ಮತ್ತು ಮೂಳೆಗಳ ಆರೋಗ್ಯವನ್ನು ವೃದ್ಧಿಸಲು ಇದು ಸಹಾಯ ಮಾಡುತ್ತದೆ.

ಮೂತ್ರಪಿಂಡದ ಕಾಯಿಲೆಯನ್ನು ‘ನಿಶಬ್ದ ಹಂತಕ’ (ಸೈಲೆಂಟ್ ಕಿಲ್ಲರ್) ಎಂದು ಕರೆಯಲು ಒಂದು ಕಾರಣವಿದೆ: ಮೂತ್ರಪಿಂಡದ ಕಾಯಿಲೆಗಳು ಆರಂಭಿಕ ಹಂತದಲ್ಲಿ ಯಾವುದೇ ರೋಗಲಕ್ಷಣಗಳನ್ನು ತೋರಿಸುವುದಿಲ್ಲ. ರೋಗವು ತೀವ್ರ ಹಂತಕ್ಕೆ ತಲುಪಿದಾಗ ಮಾತ್ರ ಲಕ್ಷಣಗಳು ಗೋಚರಿಸುತ್ತವೆ.

ಸಾಮಾನ್ಯ ಜನರಲ್ಲಿ ಮೂತ್ರಪಿಂಡದ ಕಾಯಿಲೆಯ ಬಗ್ಗೆ ಇರುವ ಅರಿವು ಶೇಕಡಾ 10% ಕ್ಕಿಂತ ಕಡಿಮೆಯಿದೆ. ಶೇಕಡಾ 80 ರಿಂದ 90 ರಷ್ಟು ಮೂತ್ರಪಿಂಡಗಳು ಹಾನಿಗೊಳಗಾದಾಗ ಮಾತ್ರವೇ ರೋಗಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ.ಉಲ್ಬಣಗೊಂಡ ಮೂತ್ರಪಿಂಡ ಕಾಯಿಲೆಯ ಪ್ರಮುಖ ಲಕ್ಷಣಗಳು:

ಕಾಲುಗಳಲ್ಲಿ ಊತ / ಮುಖ ಊದಿಕೊಳ್ಳುವುದು ಉಸಿರಾಡಲು ತೊಂದರೆ

ವಿಪರೀತ ಸುಸ್ತು ಅಥವಾ ಆಯಾಸ

ಹಸಿವು ಕಡಿಮೆಯಾಗುವುದು

ಸ್ನಾಯು ಸೆಳೆತ (ಮಸಲ್ ಕ್ರ್ಯಾಂಪ್ಸ್)

ಚರ್ಮದಲ್ಲಿ ತುರಿಕೆ

ಮೂತ್ರದಲ್ಲಿ ನೊರೆ ಬರುವುದು

ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವುದು

ಅತಿ ಹೆಚ್ಚಿನ ರಕ್ತದೊತ್ತಡ

ಮೂತ್ರಪಿಂಡದ ಕಾಯಿಲೆ ಯಾರಿಗೆಲ್ಲ ಬರುವ ಸಾಧ್ಯತೆಯಿದೆ?

ಇದರ ಅಪಾಯಕಾರಿ ಅಂಶಗಳು (Risk factors) ಹೀಗಿವೆ:

೧. ಅಧಿಕ ರಕ್ತದೊತ್ತಡ (ಹೈ ಬಿಪಿ)

೨. ಮಧುಮೇಹ (ಡಯಾಬಿಟಿಸ್) – ಪ್ರಪಂಚದಾದ್ಯಂತ ಇದು ಅತಿ ಸಾಮಾನ್ಯ ಕಾರಣವಾಗಿದೆ.

೩. ಬೊಜ್ಜು (ಸ್ಥೂಲಕಾಯ)

೪. ಮೂತ್ರಪಿಂಡಗಳ ಸೋಂಕು (ಪೈಲೊನೆಫ್ರೈಟಿಸ್)

೫. ನೋವು ನಿವಾರಕ ಮಾತ್ರೆಗಳ (ಪೇನ್‌ಕಿಲ್ಲರ್ಸ್) ಮತ್ತು ಗ್ಯಾಸ್ಟ್ರಿಕ್ ಮಾತ್ರೆಗಳ (ಆಂಟಾಸಿಡ್) ಅತಿಯಾದ ಬಳಕೆ

೬. ಕಿಡ್ನಿ ಸ್ಟೋನ್ (ಮೂತ್ರಪಿಂಡದ ಕಲ್ಲು) ಸಮಸ್ಯೆಯನ್ನು ನಿರ್ಲಕ್ಷಿಸುವುದು

೭. ಗ್ಲೋಮೆರುಲೋನೆಫ್ರೈಟಿಸ್ (ಮೂತ್ರಪಿಂಡದ ಫಿಲ್ಟರ್‌ಗಳ ಉರಿಯೂತ

Klive Special Article ನಮ್ಮ ದೇಶದಲ್ಲಿ ಈ ಪ್ರಕರಣಗಳ ಸಂಖ್ಯೆ ಹೆಚ್ಚಾಗಲು ಕಾರಣ – ಅತಿಯಾದ ಹೃದಯದ ಒತ್ತಡ, ದೀರ್ಘಕಾಲದ ನಿರ್ಜಲೀಕರಣ (ದೇಹದಲ್ಲಿ ನೀರಿನಂಶ ಕಡಿಮೆಯಾಗುವುದು), ವಿಪರೀತ ಆಹಾರ ಸೇವನೆ ಮತ್ತು ಕೀಟನಾಶಕಗಳ ಪ್ರಭಾವ.

ಮೂತ್ರಪಿಂಡದ ಕಾಯಿಲೆಯನ್ನು ಪತ್ತೆ ಹಚ್ಚುವುದು ಹೇಗೆ?

ಸಂಪೂರ್ಣ ಮೂತ್ರ ಪರೀಕ್ಷೆಯಂತಹ (Complete Urine Test) ಸರಳ ಪರೀಕ್ಷೆಗಳ ಮೂಲಕ ಸೋಂಕು, ಮೂತ್ರದಲ್ಲಿ ರಕ್ತ ಅಥವಾ ಪ್ರೋಟೀನ್ ಸೋರಿಕೆಯಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತದೆ. ರಕ್ತ ಪರೀಕ್ಷೆಯಲ್ಲಿ ‘ಸಿರಮ್ ಕ್ರಿಯೇಟಿನೈನ್’ (Serum Creatinine) ಮಟ್ಟವನ್ನು ಅಳೆಯಲಾಗುತ್ತದೆ. ಇದರ ಮೂಲಕ ಮೂತ್ರಪಿಂಡಗಳು ಎಷ್ಟು ಶೇಕಡಾ ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ಲೆಕ್ಕಹಾಕಲಾಗುತ್ತದೆ (ಇದನ್ನು eGFR- ಗ್ಲೋಮೆರುಲಾರ್ ಫಿಲ್ಟ್ರೇಶನ್ ರೇಟ್ ಎಂದು ಕರೆಯಲಾಗುತ್ತದೆ).

ಮೂತ್ರದಲ್ಲಿ ಪ್ರೋಟೀನ್ ಸೋರಿಕೆಯಾಗುತ್ತಿರುವ ಕೆಲವು ಸಂದರ್ಭಗಳಲ್ಲಿ, ‘ಕಿಡ್ನಿ ಬಯಾಪ್ಸಿ’ (Kidney Biopsy) ಮಾಡಿಸಿಕೊಳ್ಳಲು ಸಲಹೆ ನೀಡಲಾಗುತ್ತದೆ. ಕಿಡ್ನಿಯ ಅಲ್ಟ್ರಾಸೌಂಡ್ (Ultrasound) ಸ್ಕ್ಯಾನಿಂಗ್ ಕೂಡ ಅಗತ್ಯವಿರುತ್ತದೆ.

ಮೂತ್ರಪಿಂಡಗಳು ಹಾನಿಗೊಳಗಾಗದಂತೆ ನಾವು ತಡೆಯಬಹುದೇ?

ಹೌದು, ಕೆಲವು ಸರಳ ಕ್ರಮಗಳನ್ನು ಅನುಸರಿಸುವ ಮೂಲಕ ನಾವು ಇದನ್ನು ತಡೆಯಬಹುದು:

೧. ದೈಹಿಕವಾಗಿ ಫಿಟ್ ಆಗಿರಿ ಮತ್ತು ಚಟುವಟಿಕೆಯಿಂದಿರಿ.

೨. ಆರೋಗ್ಯಕರ ಆಹಾರವನ್ನು ಸೇವಿಸಿ – ದಿನಕ್ಕೆ 5 ಗ್ರಾಂ ಗಿಂತ ಕಡಿಮೆ ಉಪ್ಪನ್ನು ಬಳಸಿ.

೩. ನಿಮ್ಮ ರಕ್ತದೊತ್ತಡವನ್ನು ಪರೀಕ್ಷಿಸಿಕೊಂಡು 140/90mmHg ಗಿಂತ ಕಡಿಮೆ ಇರುವಂತೆ ನೋಡಿಕೊಳ್ಳಿ ಮತ್ತು ನಿಮ್ಮ ರಕ್ತದ ಸಕ್ಕರೆ ಮಟ್ಟವನ್ನು (HbA1c) ಶೇಕಡಾ 7% ಕ್ಕಿಂತ ಕಡಿಮೆ ಇಟ್ಟುಕೊಳ್ಳಿ.

೪. ಸೂಕ್ತ ಪ್ರಮಾಣದಲ್ಲಿ ಹಣ್ಣುಗಳನ್ನು ಸೇವಿಸಿ – ದೇಹದಲ್ಲಿ ನೀರಿನಂಶ ಕಾಪಾಡಿಕೊಳ್ಳಲು ದಿನಕ್ಕೆ ಕನಿಷ್ಠ 2 ಲೀಟರ್ ನೀರು ಕುಡಿಯಿರಿ.

೫. ಧೂಮಪಾನ ಮತ್ತು ಮದ್ಯಪಾನವನ್ನು ತ್ಯಜಿಸಿ.

೬. ವೈದ್ಯರ ಚೀಟಿ ಇಲ್ಲದೆ ಸಿಗುವ ನೋವು ನಿವಾರಕ ಮಾತ್ರೆಗಳನ್ನು (Pain killers) ಪದೇ ಪದೇ ತೆಗೆದುಕೊಳ್ಳಬೇಡಿ.

೭. ನಿಮಗೆ ಮಧುಮೇಹ, ಅಧಿಕ ರಕ್ತದೊತ್ತಡ, ವಯಸ್ಸು 40 ವರ್ಷಕ್ಕಿಂತ ಮೇಲ್ಪಟ್ಟಿದ್ದರೆ, ಅಥವಾ ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಮೂತ್ರಪಿಂಡದ ಕಾಯಿಲೆ ಇದ್ದರೆ, ದಯವಿಟ್ಟು ನಿಮ್ಮ ಕಿಡ್ನಿ ಕಾರ್ಯಕ್ಷಮತೆಯನ್ನು ಒಮ್ಮೆ ಪರೀಕ್ಷಿಸಿಕೊಳ್ಳಿ.

ಈ ವರ್ಷದ ವಿಶ್ವ ಮೂತ್ರಪಿಂಡ ದಿನದ ಧ್ಯೇಯವಾಕ್ಯ:

“ಎಲ್ಲರಿಗೂ ಮೂತ್ರಪಿಂಡದ ಆರೋಗ್ಯ – ಜನರ ಕಾಳಜಿ, ಭೂಮಿಯ ರಕ್ಷಣೆ”.

ಮೂತ್ರಪಿಂಡದ ಕಾಯಿಲೆಗೆ ಚಿಕಿತ್ಸೆ ಹೇಗೆ?

ಆರಂಭಿಕ ಹಂತದಲ್ಲಿ, (ACE-I/ARB-I) ನಂತಹ ಹಲವು ಔಷಧಿಗಳು ಮೂತ್ರಪಿಂಡದ ಕಾಯಿಲೆ (CKD) ಉಲ್ಬಣಗೊಳ್ಳುವುದನ್ನು ತಡೆಯಬಲ್ಲವು.

ಮೂತ್ರಪಿಂಡದ ಕಾಯಿಲೆಯು ಕೊನೆಯ ಹಂತದಂತಹ (CKD stage V) ಮುಂದುವರಿದ ಹಂತಗಳಿಗೆ ತಲುಪಿದಾಗ, ಚಿಕಿತ್ಸಾ ಆಯ್ಕೆಗಳು ಸೀಮಿತವಾಗುತ್ತವೆ. ಆಗ ಡಯಾಲಿಸಿಸ್ (Renal replacement therapy) ಅಥವಾ ಕಿಡ್ನಿ ಕಸಿಗೆ (Renal transplantation) ಒಳಗಾಗಬೇಕಾಗುತ್ತದೆ.

ಸೂಕ್ತ ರೋಗಿಗಳಿಗೆ ಕಿಡ್ನಿ ಕಸಿ ಮಾಡುವುದು ಅತ್ಯುತ್ತಮ ಚಿಕಿತ್ಸೆಯಾಗಿದೆ ಮತ್ತು ಇದು ಡಯಾಲಿಸಿಸ್‌ಗಿಂತ ಹೆಚ್ಚು ಪ್ರಯೋಜನಗಳನ್ನು ಹೊಂದಿದೆ.

ಕಿಡ್ನಿ ತೊಂದರೆಗಳು ಹೆಚ್ಚಾಗುತ್ತಿರುವ ಕಾರಣವೇನು?

ಪ್ರಪಂಚದಾದ್ಯಂತ ಕಿಡ್ನಿ ತೊಂದರೆಯಿಂದ ಬಳಲುತ್ತಿರುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ. ಅದಕ್ಕೆ ಪ್ರಮುಖ ಕಾರಣವೆಂದರೆ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವುದು. ಅಲ್ಲದೆ ಆಧುನಿಕ ಜೀವನಶೈಲಿಯಿಂದ ಉಂಟಾಗಿರುವ ಸ್ಥೂಲಕಾಯ (Obesity) ಧೂಮಪಾನ ಆರೋಗ್ಯಕ್ಕೆ ಪೂರಕವಲ್ಲದ ಆಹಾರ ಸೇವನೆ (Unhealthy Diet) ಹಾಗೂ ವ್ಯಾಯಾಮವಿಲ್ಲದ ಜೀವನ ಶೈಲಿ ಕಾರಣವಾಗಿದೆ.

ಭಾರತದಲ್ಲಿನ ಅಂಕಿ ಅಂಶಗಳ ಪ್ರಕಾರ 60 ರಿಂದ 70% ಕಿಡ್ನಿ ವೈಫಲ್ಯತೆ ಉಂಟಾಗುವುದು ಡಯಾಬಿಟಿಸ್ ಹಾಗೂ ಬಿಪಿ ಕಾಯಿಲೆಗಳಿಗೆ ಸಂಬಂಧಪಟ್ಟ ಸಮಸ್ಯೆಗಳೇ ಕಾರಣ. ಕಿಡ್ನಿ ತೊಂದರೆ ತಡೆಗಟ್ಟ ಬೇಕಾದಲ್ಲಿ ಈ ವರ್ಗದ ಜನರಿಗೆ ಆರೋಗ್ಯದ ಬಗ್ಗೆ ಅರಿವನ್ನು ಮೂಡಿಸಿ, ಕನಿಷ್ಠ ವರ್ಷಕ್ಕೆ ಒಮ್ಮೆಯಾದರೂ ಕಿಡ್ನಿ ತಪಾಸಣೆ (Blood Urine & Urine Protein) ಮಾಡಿಸಿಕೊಳ್ಳುವುದು ಅನಿವಾರ್ಯವಾಗಿದೆ. ಹೆಚ್ಚಿನ ನೀರು ಸೇವನೆ ಮಾಡಬೇಕು. (ದಿನಕ್ಕೆ ಎರಡು ಲೀಟರ್) ಆಹಾರದಲ್ಲಿನ ಉಪ್ಪಿನ ಪ್ರಮಾಣ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು ಹಾಗೂ ಯಾವುದೇ ರೋಗ ಲಕ್ಷಣ ಕಂಡು ಬಂದಲ್ಲಿ ವೈದ್ಯರೊಂದಿಗೆ ತಪಾಸಣೆ ಮಾಡಿಸುವುದು ಬಹಳ ಮುಖ್ಯವಾಗಿರುತ್ತದೆ. ಸೌಂದರ್ಯ ವರ್ಧಕ ವಸ್ತುಗಳು (Skin Peel, Hair Straightening, Anti Aging Cream) ಮುಂತಾದವುಗಳಲ್ಲಿ ಕಿಡ್ನಿಗೆ ಹಾನಿ ಮಾಡಬಹುದಾದ ರಾಸಾಯನಿಕ ವಸ್ತುಗಳು ಇರಬಹುದು. ಆದ್ದರಿಂದ ಇಂತಹ ವಸ್ತುಗಳಿಂದ ದೂರ ಇರಬೇಕು ಹಾಗೂ ತಜ್ಞರ ನಿರ್ದೇಶನವಿಲ್ಲದೆ Online Products ಗೆ ಮೊರೆ ಹೋಗಬೇಡಿ. ಪ್ರಕೃತಿದತ್ತವಾದ ನಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ.

Renukacharya Jayanti ಮಾ.16ರ ಮತ್ತು ಮಾ. 17ರಂದು ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ

0

Renukacharya Jayanti ಸೊರಬ ತಾಲೂಕಿನ ಸುಕ್ಷೇತ್ರ ದುಗ್ಲಿಯ ಶ್ರೀಮದ್ ರಂಭಾಪುರಿ ಶಾಖಾ ಶ್ರೀ ಗುರು ರೇವಣಸಿದ್ಧೇಶ್ವರ ಮಠದ ಆವರಣದಲ್ಲಿ ಮಾ.16ರ ಸೋಮವಾರ ಮತ್ತು ಮಾ. 17ರ ಮಂಗಳವಾರ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಪ್ರಯುಕ್ತ ವಿವಿಧ ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಮಠದ ಶ್ರೀ ರೇವಣ ಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಸೊರಬ ಪಟ್ಟಣದ ನಿಜಗುಣ ರೆಸಿಡೆನ್ಸಿ ಸಭಾಂಗಣದಲ್ಲಿ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಮಾ. 16ರಂದು ಸಂಜೆ 4ಕ್ಕೆ ಗಂಗಾಪೂಜೆ, ಶ್ರೀ ಜಗದ್ಗುರು ಪಂಚಾಚಾರ್ಯ ಧ್ವಜಾರೋಹಣ, ಸಂಜೆ ೬ಕ್ಕೆ ಕಲಶಾರಾಧನೆ, ಶ್ರೀ ದುರ್ಗಾಹೋಮ ಪೂರ್ಣಾಹುತಿ ಮಹಾಮಂಗಳಾರತಿ ನಂತರ ಶ್ರೀ ಚೌಡೇಶ್ವರಿ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ. ಮಾ. ೧೭ರಂದು ಜಗುದ್ಗುರು ರೇಣುಕಾರ್ಯರಿಗೆ, ಶ್ರೀ ವೀರಭದ್ರಸ್ವಾಮಿಗೆ, ಶ್ರೀ ಚೌಡೇಶ್ವರಿ ದೇವಿಗೆ, ಲಿಂ. ಶ್ರೀ ಮುರುಘೇಂದ್ರ ಸ್ವಾಮಿ ಅವರ ಗದ್ದುಗೆಗೆ, ಶ್ರೀ ಬಸವೇಶ್ವರ ಸ್ವಾಮಿಗೆ ಮತ್ತು ಶ್ರೀ ನಾಗಮೂರ್ತಿಗೆ ರುದ್ರಾಭಿಷೇಕ ಶಿವಾಷ್ಟೋತ್ತರ ವಿಶೇಷ ಅಲಂಕಾರ ಮತ್ತು ಮಹಾ ಮಂಗಳಾರತಿ ನಡೆಯಲಿದ್ದು, ನಂತರ ಶ್ರೀ ಜಗದ್ಗುರು ರೇವಣ ಸಿದ್ಧೇಶ್ವರರ ಪಲ್ಲಕ್ಕಿ ಉತ್ಸವ ಸಕಲ ವಾಧ್ಯಮೇಳದೊಂದಿಗೆ ಗ್ರಾಮದಲ್ಲಿ ಜರುಗಲಿದೆ. ಬೆಳಗ್ಗೆ 10ಕ್ಕೆ ಕಾಳಸರ್ಪ ನಿವಾರಣೆಗೆ ಆಶ್ಲೇಷ ಬಲಿ, ಸರ್ಪಶಾಂತಿ ಹೋಮ, ಪೂರ್ಣಾಹುತಿ, ಮಹಾ ಮಂಗಳಾರತಿ ಹಾಗೂ ತೀರ್ಥ ಪ್ರಸಾಧ ವಿನಿಯೋಗ ನಡೆಯಲಿದೆ ಎಂದರು.
ಮಹಾರಥೋತ್ಸವ: ಸಂಜೆ 4ಕ್ಕೆ ಬಾಳೆಹೊನ್ನೂರು ರಂಭಾಪುರಿ ಜಗದ್ಗುರು ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಅವರ ಆಗಮನವಾಗಲಿದ್ದು, ನಂತರ ಜಗದ್ಗುರು ಶ್ರೀ ರೇವಣ ಸಿದ್ಧೇಶ್ವರ ಮಹಾರಥೋತ್ಸವ ಸಕಲ ವಾಧ್ಯ ವೈಭವದೊಂದಿಗೆ ವಿಜೃಂಭಣೆಯಿಂದ ಜರುಗಲಿದೆ. ಶ್ರೀ ಶಿವಕುಮಾರ ಶಾಸ್ತ್ರೀ ಹಿರೇಮಠ ಹಾಗೂ ಶ್ರೀ ಮಠದ ಪರೋಹಿತ ಬಳಗದಿಂದ ವೈದಿಕ ಸೇವೆ ನಡೆಯಲಿದೆ. ವಿಶೇಷವಾಗಿ ಈ ಬಾರಿ ಶ್ರೀ ವೀರಭದ್ರೇಶ್ವರ ಮೂರ್ತಿಯ ಪ್ರತಿಷ್ಟಾಪನೆಯ ವರ್ಷಾಚರಣೆ ಅಂಗವಾಗಿ ಶರಬಿ ಗುಗ್ಗಳ ನಡೆಯಲಿದೆ ಎಂದರು.
ಧರ್ಮ ಸಮಾರಂಭ: ಶ್ರೀ ಮಠದ ಆವರಣದಲ್ಲಿ ಸಂಜೆ 5:30ಕ್ಕೆ ಶ್ರೀ ಕ್ಷೇತ್ರದ ಜಾತ್ರಾ ಮಹೋತ್ಸವ ಮತ್ತು ಲಂಗೈಕ್ಯ ಪೂಜ್ಯರ ಪುಣ್ಯಸ್ಮರಣೆ ಅಂಗವಾಗಿ ಧರ್ಮ ಸಮಾರಂಭ ನಡೆಯಲಿದ್ದು, ಬಾಳೆಹೊನ್ನೂರು ರಂಭಾಪುರಿ ಜಗದ್ಗುರು ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಸುಳ್ಳ ಪಂಗೃಹ ಹಿರೇಮಠದ ಶ್ರೀ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ. Renukacharya Jayanti ಸಮಾರಂಭವನ್ನು ಸಂಸದ ಬಿ.ವೈ. ರಾಘವೇಂದ್ರ ಉದ್ಘಾಟಿಸಲಿದ್ದಾರೆ. ಲಿಂ. ಶ್ರೀಗಲ ಭಾವಚಿತ್ರವನ್ನು ಮಾಜಿ ಸಚಿವ ಹರತಾಳು ಹಾಲಪ್ಪ ಬಿಡುಗಡೆ ಮಾಡಲಿದ್ದು, ಮುಂಡಗೋಡ ಮಾಜಿ ಶಾಸಕ ವಿ.ಎಸ್. ಪಾಟೀಲ್, ಈಡಿಗ ಸಮಾಜದ ಅಧ್ಯಕ್ಷ ಗಣಪತಿ ಹುಲ್ತಿಕೊಪ್ಪ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಅಧ್ಯಕ್ಷ ಗುರುಕುಮಾರ ಪಾಟೀಲ್, ಬಿಜೆಪಿ ತಾಲೂಕು ಅಧ್ಯಕ್ಷ ಪ್ರಕಾಶ ಅಗಸನಹಳ್ಳಿ, ವಿವಿಧ ಸಮಾಜ ಪ್ರಮುಖರಾದ ಎನ್. ಸುರೇಶ್, ಎಚ್. ಮಲ್ಲಿಕಾರ್ಜುನಪ್ಪ, ಪಿಡಿಓ ಮಲ್ಲಮ್ಮ ಕಬ್ಬೂರು, ಮೆಸ್ಕಾಂ ಜೆಇ ಬಾಲರಾಜ್ ನಾಗರಾಳ ಸೇರಿದಂತೆ ಇತರರು ಪಾಲ್ಗೊಳ್ಳುವರು. ಸಭಾ ಕಾರ್ಯಕ್ರಮದಲ್ಲಿ ಶ್ರೀಗಳ ದ್ವಾದಶ ಪಟ್ಟಾಧಿಕಾರ ವರ್ಧಂತಿ ವರ್ಷಾಚರಣೆ ಪ್ರಯುಕ್ತ ವಿವಿಧ ಕ್ಷೇತ್ರಗಳ ಸಾಧಕರಿಗೆ ಶ್ರೀ ಗುರು ರೇವಣಸಿದ್ಧೇಸ್ವರ ಸದ್ಭಾವನಾ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ನಾಗರಾಜಗೌಡ ಚಿಕ್ಕಾವಲಿ, ಟೌನ್ ವೀರಶೈವ ಸಮಾಜದ ಅಧ್ಯಕ್ಷ ವಿಶ್ವನಾಥ ಗೌಡ, ಪ್ರಮುಖರಾದ ಸಿ.ಪಿ. ವೀರೇಶ್ ಗೌಡ, ಮಲ್ಲಿಕಾರ್ಜುನ ನಿಜಗುಣ, ಚಂದ್ರಶೇಖರ ನಿಜಗುಣ, ವಿಜೇಂದ್ರಗೌಡ ತಲಗುಂದ, ಶಶಿಕಾಂತ ಗೌಡ ಬೆನ್ನೂರು, ಜಗದೀಶಗೌಡ ತ್ಯಾವಗೋಡು, ಗಂಗಾಧರ ಗೌಡ ಗುಡುವಿ, ಸತೀಶ್‌ಗೌಡ ಗುಂಜನೂರು, ಗುರುಪ್ರತೀಕ್ ಸೇರಿದಂತೆ ಇತರರಿದ್ದರು.

ಶ್ರೀಕಾಂತಣ್ಣ ಕಪ್-3 ಪೋಸ್ಟರ್ ಬಿಡುಗಡೆ

0

ಮಾ.28-29 ರಂದು ಎಂಬಿಸಿ ಇವರ ಆಶ್ರಯದಲ್ಲಿ ಸತತ 3ನೇ ಬಾರಿಗೆ ಆಯೋಜಿಸಲಾಗಿರುವ ಶ್ರೀಕಾಂತಣ್ಣ ಕಪ್-3 ಪೋಸ್ಟರ್ ಅನ್ನು ಗಾಂಧಿ ಬಜಾರ್‌ನಲ್ಲಿರುವ ತುಳಜಾ ಭವಾನಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಸಂತೋಷ್ ಸಕ್ರೆ, ಗಜೇಂದ್ರನಾಥ್, ಪ್ರವೀಣ್, ಬಸವರಾಜ್, ವಿನಯ್ ತಾಂಡ್ಲೆ, ಸಂತೋಷ್, ಅನಿಲ್ ಆಚಾರ್, ಮಂಜುನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

International Women’s Day ಒತ್ತಡರಹಿತ ಜೀವನಕ್ಕೆ ವ್ಯಾಯಾಮ, ಯೋಗ ಅಗತ್ಯ: ಡಾ. ಕೆ.ಎಸ್. ಪವಿತ್ರ

0

International Women’s Day ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗದ ಮಹಿಳಾ ಘಟಕದ ವತಿಯಿಂದ ವಿಶ್ವವಿದ್ಯಾಲಯದ ಆವರಣದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಧರ್ ನರ್ಸಿಂಗ್ ಹೋಂನ ಮನೋವೈದ್ಯೆ ಡಾ. ಕೆ.ಎಸ್. ಪವಿತ್ರ, ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸುವುದರಿಂದ ಒತ್ತಡದ ಜೀವನ ನಡೆಸುತ್ತಿದ್ದಾರೆ. ಆದ್ದರಿಂದ ಒತ್ತಡರಹಿತ ಜೀವನ ನಡೆಸುವುದು ಅತ್ಯಂತ ಮುಖ್ಯವಾಗಿದ್ದು, ನಿಯಮಿತ ವ್ಯಾಯಾಮ ಹಾಗೂ ಯೋಗಾಭ್ಯಾಸಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಸೌಮ್ಯಾ ಪ್ರಸಾದ್, ಕೃಷಿ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. ಮಹಿಳೆಯರು ಆರ್ಥಿಕ, ಸಾಮಾಜಿಕ ಮತ್ತು ವೈಜ್ಞಾನಿಕ ಕ್ಷೇತ್ರಗಳಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸುತ್ತಿದ್ದು, ಸ್ವಾವಲಂಬಿಯಾಗಿ ಬದುಕಲು ಪ್ರಯತ್ನಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್.ಸಿ. ಜಗದೀಶ್, ಮಹಿಳಾ ದಿನಾಚರಣೆ ಕೇವಲ ಆಚರಣೆಗೆ ಸೀಮಿತವಾಗದೆ ಮಹಿಳೆಯರ ಸಮಸ್ಯೆಗಳು, ಹಕ್ಕುಗಳು ಹಾಗೂ ಸಾಧನೆಗಳನ್ನು ಚರ್ಚಿಸುವ ವೇದಿಕೆಯಾಗಬೇಕು ಎಂದು ಅಭಿಪ್ರಾಯಪಟ್ಟರು. ಮಹಿಳೆಯರ ಸಾಧನೆಗೆ ಸಮಾಜದ ಎಲ್ಲರೂ ಗೌರವ ನೀಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಪ್ರಾಧ್ಯಾಪಕಿ ಡಾ. ಜಯಲಕ್ಷ್ಮಿ ನಾರಾಯಣ ಹೆಗಡೆ, ಪ್ರತಿವರ್ಷ ವಿಶ್ವವಿದ್ಯಾಲಯದ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಈ ದಿನದ ಉದ್ದೇಶ ಮಹಿಳೆಯರ ಹಕ್ಕುಗಳು ಹಾಗೂ ಸಾಧನೆಗಳನ್ನು ಗೌರವಿಸುವುದಾಗಿದೆ ಎಂದು ತಿಳಿಸಿದರು.

International Women’s Day ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಮಹಿಳಾ ಘಟಕವನ್ನು ಉದ್ಘಾಟಿಸಲಾಯಿತು.

ಕಾರ್ಯಕ್ರಮದಲ್ಲಿ ಡಾ. ಜಿ.ಕೆ. ಗಿರಿಜೇಶ್ (ವಿಸ್ತರಣಾ ನಿರ್ದೇಶಕರು), ಡಾ. ಸಿ.ಜೆ. ಶ್ರೀಧರ್ (ಡೀನ್–ಸ್ನಾತಕೋತ್ತರ ಅಧ್ಯಯನ), ಡಾ. ನಾರಾಯಣ ಎಂ. ಮಾವರಕರ (ಡೀನ್–ವಿದ್ಯಾರ್ಥಿ ಕಲ್ಯಾಣ), ಡಾ. ಚಂದ್ರಶೇಖರ್ ಎಸ್.ವೈ. (ಪ್ರಚಾರ ವಿಶೇಷಾಧಿಕಾರಿ), ಆಹಾರ ಮತ್ತು ನಿರ್ವಹಣಾ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು ಆದ ಜ್ಯೋತಿ ಎಂ ರಾಥೋಡ್ ಹಣಕಾಸು ನಿಯಂತ್ರಣಾಧಿಕಾರಿ ಪ್ರಿಯಾಂಕಾ ಸೇರಿದಂತೆ ಪ್ರಾಧ್ಯಾಪಕರು, ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸೇವಿಸುವ ಆಹಾರವು ಉತ್ತಮ ಗುಣಮಟ್ಟದ್ದಾಗಿದ್ದಲ್ಲಿ ಆರೋಗ್ಯವು ಉತ್ತಮ : ಎಸ್‌.ಪಿ ಪರಮೇಶ್ವರ್ ಹೆಚ್

0

ಸೇವಿಸುವ ಆಹಾರವು ಉತ್ತಮ ಗುಣಮಟ್ಟದ್ದಾಗಿದ್ದಲ್ಲಿ ಆರೋಗ್ಯವು ಉತ್ತಮವಾಗಿರುತ್ತದೆ ಎಂದು ದಾವಣಗೆರೆ ಜಿಲ್ಲಾ ಅಡಿಷನಲ್ ಎಸ್‌.ಪಿ ಪರಮೇಶ್ವರ್ ಹೆಚ್ ಹೇಳಿದರು.

ಅವರಿಂದು ಆಹಾರ್2000 ನವರ ನೂತನ ಆಹಾರೋದ್ಯಮ ಉದ್ಘಾಟಿಸಿ ಮಾತನಾಡುತ್ತಾ ಉತ್ತಮ ಗುಣಮಟ್ಟದ ಬೇಕರಿ ಉತ್ಪನ್ನಗಳು ಹಾಗೂ ಸಿಹಿ ಪದಾರ್ಥಗಳನ್ನು ಆಧುನಿಕ ತಂತ್ರಜ್ಞಾನಗಳೊಂದಿಗೆ ಮಾಡುತ್ತಿರುವುದು ಸ್ವಾಗತಾರ್ಹ ಎಂದರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ಹಿರಿಯ ಪತ್ರಕರ್ತ ಡಾ ಎಚ್ ಬಿ ಮಂಜುನಾಥ ರಾಷ್ಟ್ರದ ಜಿಡಿಪಿಯಲ್ಲಿ ಆಹಾರೋದ್ಯಮದ ಕೊಡುಗೆ ಮಹತ್ತರವಾಗಿದೆ. ನಮ್ಮ ರಾಷ್ಟ್ರದ ಜಿಡಿಪಿ ಅಭಿವೃದ್ಧಿ ದರವು 7.8 ರಷ್ಟಿದ್ದು ವಿಶ್ವದಲ್ಲಿ ಇದು ಅಧಿಕವಾಗಿದೆ, ದೇಶದ ನಿವ್ಹಳ ಆಂತರಿಕ ಉತ್ಪಾದನಾ ಅಭಿವೃದ್ಧಿಯಲ್ಲಿ ಶೇಕಡ 11 ರಿಂದ 12 ರಷ್ಟು ಕೊಡುಗೆ ಕೊಡುತ್ತಿರುವ ಆಹಾರೋದ್ಯಮ ಕ್ಷೇತ್ರವು ದೇಶದ ಒಟ್ಟು ಉದ್ಯೋಗಗಳಲ್ಲಿ ಶೇಕಡ 13ರಷ್ಟನ್ನು ಒದಗಿಸುತ್ತಿದೆ ಎಂದರಲ್ಲದೆ ರುಚಿಯೊಂದಿಗೆ ಶುಚಿಯನ್ನೂ ಕಾಪಾಡಿಕೊಂಡು ಗ್ರಾಹಕರಿಗೆ ಯೋಗ್ಯ ಬೆಲೆಯಲ್ಲಿ ಒದಗಿಸಬಲ್ಲ ಆಹಾರ ಪದಾರ್ಥಗಳಿಗೆ ಯಾವತ್ತೂ ಭವಿಷ್ಯವಿದ್ದು ಆಹಾರ 2000 ಸಂಸ್ಥೆಯ ಧ್ಯೇಯವೇ ಇದಾಗಿದೆ. ಗ್ರಾಹಕ ಪರವಾದ ಆರ್ ಪ್ರಭಾಕರ್ ರವರ ಅವಿಷ್ಕಾರಗಳ ಪರಿಕಲ್ಪನೆಗಳನ್ನು ಎರಡೂವರೆ ದಶಕಗಳ ಕೆಳಗೆ ದಾವಣಗೆರೆಯಲ್ಲಿ ಕಾರ್ಯರೂಪಕ್ಕೆ ತರುವಲ್ಲಿ ಜಿ ವಿ ರಮೇಶ್ ಹಾಗೂ ಜಿ ನಾರಾಯಣ ಭಟ್ ರವರ ಪರಿಶ್ರಮವ ಅನುಕರಣೆಯ ಎಂದು ಹೆಚ್ ಬಿ ಮಂಜುನಾಥ್ ಅಭಿಪ್ರಾಯ ಪಟ್ಟರು.

ಘಪ್ರಸಿದ್ಧ ಮಯೂರ ಸಮೂಹದ ಚೇರ್ಮನ್ ಜಿ ಶ್ರೀನಿವಾಸರಾವ್ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಯಾವುದೇ ಸಂಸ್ಥೆಯ ಅಭಿವೃದ್ಧಿಯಲ್ಲಿ ಸಿಬ್ಬಂದಿಗಳ ಪಾತ್ರವೂ ಮಹತ್ತರವಾಗಿರುತ್ತದೆ ಎಂದರು. ರೂಪಾರವರು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕುರಿತು ಮಾತನಾಡಿದರು.

ಪ್ರಾಸ್ತಾವಿಕ ನುಡಿಗಳ ನಾಡಿದ ಆಹಾರ 2000 ಸಂಸ್ಥೆಯ ಜಿ ವಿ ರಮೇಶ್ ಅತ್ಯಾಧುನಿಕ ತಂತ್ರಜ್ಞಾನದ ಯಂತ್ರೋಪಕರಣಗಳನ್ನು ಬಳಸಿ ಆರೋಗ್ಯಕರವಾದ ಉತ್ಪನ್ನಗಳನ್ನು ನೂತನ ಸಂಸ್ಥೆಯು ಗ್ರಾಹಕರಿಗೆ ಒದಗಿಸಲಿದೆ ಎಂದರು. ಆಹಾರ 2000 ಸಂಸ್ಥೆಯ ರಚತ ಮಹೋತ್ಸವ ಅಂಗವಾಗಿ 35 ಶ್ರಮಿಕ ಬಂಧುಗಳನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಸಾರ್ವಜನಿಕ ಸೇವಾ ಉದ್ದೇಶದ ಮಾತಾಪಿತೃ ಫೌಂಡೇಶನ್ ಅನ್ನು ಲೋಕಾರ್ಪಣೆ ಮಾಡಲಾಯಿತು. ಆಹಾರ ಕ್ಷೇತ್ರದಲ್ಲಿ ಸಾಧನೆ ಮಾಡಿದ ಜಿ ನಾರಾಯಣ ಭಟ್, ಸುಬ್ಬಣ್ಣ, ಜನಾರ್ದನರಾವ್, ನಗರಪಾಲಿಕಾ ಮಾಜಿ ಸದಸ್ಯ ನಾಗರಾಜ್, ಶಿವನಹಳ್ಳಿ ರಮೇಶ್, ಲೋಕಿಕೆರೆ ನಾಗರಾಜ್, ಸುನಂದಾ ರಮೇಶ್ ಭಟ್ ಮುಂತಾದವರು ಉಪಸ್ಥಿತರಿದ್ದು ಹೋಟೆಲ್ ಉದ್ಯಮಿ ನೇರಂಬಳ್ಳಿ ರಾಘವೇಂದ್ರರಾರು ಅಧ್ಯಕ್ಷೀಯ ನುಡಿಗಳ ನಾಡಿದರು. ಖ್ಯಾತ ವಾಗ್ಮಿ ಶ್ರೀಕಾಂತ ಭಟ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರಖ್ಯಾತ ಗಾಯಕಿ ಮಾನಸ ವಿ ಎಸ್, ಹೆಚ್ ಎಂ ಶ್ರೀಧರ್ ಮತ್ತು ತಂಡದವರು ಸುಗಮ ಸಂಗೀತ ಪ್ರಸ್ತುತಪಡಿಸಿದರು.