Tuesday, February 17, 2026
Tuesday, February 17, 2026
Home Blog Page 1724

ಶಿವಮೊಗ್ಗ ಸರ್ವತೋಮುಖ ಅಭಿವೃದ್ಧಿಗೆ ಸಂಯುಕ್ತ ಪ್ರಯತ್ನ ಮಾಡೋಣ

0

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘವು ಅತ್ಯಂತ ಹಿರಿಯ ಸಂಸ್ಥೆಯಾಗಿದೆ.ಜಿಲ್ಲೆಯ
ಉದ್ಯಮ ಹಾಗೂ ಕೈಗಾರಿಕೆಗಳ ಪ್ರಗತಿ , ಪರಿಸರ ಪ್ರವಾಸೋದ್ಯಮಗಳ ಬಗ್ಗೆ ದೂರದೃಷ್ಟಿಯಿರಿಸಿ ತನ್ನದೇ ಯೋಜನೆಗಳನ್ನ ಹಮ್ಮಿಕೊಂಡು
ಹಲವನ್ನು ಸಾಧಿಸಿದೆ.

ಇಂತಹ ಸಂಸ್ಥೆಯೆದುರು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆಯು ಇನ್ನೂ ಶೈಶವಾಸ್ಥೆಯಲ್ಲಿದೆ.ಆದ್ದರಿಂದ ಈಗ ‌ಶಿವಮೊಗ್ಗ ಚೇಂಬರ್ ಆಫ್ ಕಾಮರ್ಸ್ ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀಗೋಪೀನಾಥ್ ಅವರು ವೇದಿಕೆಯ ಯೋಜನೆಗಳನ್ನೂ
ತಮ್ಮ ಸಂಸ್ಥೆಯ ಯೋಜನಾ ವರದಿಯಲ್ಲಿ ಸಮ್ಮಿಲನಗೊಳಿಸಲು ಪ್ರಯತ್ನಿಸಲಿ. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಯ ಕಾರ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆಯೂ ಸಕ್ರೀಯವಾಗಿ ಸಹಕರಿಸುತ್ತದೆ ಎಂದು ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆಯ ಅಧ್ಯಕ್ಷ ಶ್ರೀಲಕ್ಷ್ಮೀನಾರಾಯಣ ಕಾಶಿ ಹೇಳಿದರು.

ಶಿವಮೊಗ್ಗ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ನ ನೂತನ ಅಧ್ಯಕ್ಷರಾಗಿ
ಆಯ್ಕೆಗೊಂಡ ಶ್ರೀ ಎನ್.ಗೋಪಿನಾಥ್ ಅವರನ್ನ
ವೇದಿಕೆ ಪರವಾಗಿ ಅಭಿನಂದಿಸಿ ಅವರು ಮಾತನಾಡುತ್ತಿದ್ದರು.

ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆಯ ಎಲ್ಕ ಚಟುವಟಿಕೆಗಳನ್ನ
ಅದರ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ತಮಗೆ ಚೆನ್ನಾಗಿ
ತಿಳಿದಿದೆ. ಚೇಂಬರ್ ಆಫ್ ಕಾಮರ್ಸ್ ಕೂಡ ಇಂತಹ ಸಮಾನ ಮನಸ್ಕ ಸಂಘಟನೆಗಳ ಸಹಕಾರದಿಂದ ಜಿಲ್ಲೆಯ ಸರ್ವತೋಮುಖ ಪ್ರಗತಿಗೆ ಶ್ರಮಿಸಲಿದೆ. ಚೇಂಬರ್ ಆಫ್ ಕಾಮರ್ಸ್ ನ ಎಲ್ಲ ಸದಸ್ಯರೂ ಇದೇ ರೀತಿಯ ಅಭಿವೃದ್ಧಿ ಪರ ಚಿಂತನಶೀಲರಿದ್ದಾರೆ. ಬರುವ ದಿನಗಳಲ್ಲಿ ಒಂದೊಂದೇ ಯೊಜನೆಗಳ ಪೂರ್ಣಮಾಡಲು ಈಗಿನಿಂದಲೇ ಶ್ರಮಿಸುತ್ತೇನೆ ಎಂದು ಚೇಂಬರ್ ಆಫ್ ಕಾಮರ್ಸ್ ನ ನೂತನ ಅಧ್ಯಕ್ಷ ಎನ್. ಗೋಪಿನಾಥ್ ತಮಗೆ ನೀಡಿದ ಅಭಿನಂದನೆಗೆ ಉತ್ತರಿಸಿ ಮಾತನಾಡಿದರು.

ಚೇಂಬರ್ ಆಫ್ ಕಾಮರ್ಸ್ ನ ನೂತನ ಅಧ್ಯಕ್ಷ ಎನ್. ಗೋಪಿನಾಥ್

ಚೇಂಬರ್ ಆಫ್ ಕಾಮರ್ಸ್ ನ
ಮಾಜಿ ಅಧ್ಯಕ್ಷ ಶ್ರೀ ಶಂಕರಪ್ಪ, ನಿರ್ದೇಶಕ ವಿಜಯ ಕುಮಾರ್,
ವೇದಿಕೆ ಸಹಕಾರ್ಯದರ್ಶಿ ಅ.ನ.ವಿಜೇಂದ್ರ ರಾವ್, ನಿರ್ದೇಶಕರಾದ ಕೆ.ಜಿ.ಮಂಜುನಾಥ ಶರ್ಮ, ಮಂಜುನಾಥ ಮೂರ್ತಿ
ಶಿವಮೊಗ್ಗ ಕೆ-ಲೈವ್ ನ್ಯೂಸ್ ಮಾಧ್ಯಮದ ಪ್ರಧಾನ ಸಂಪಾದಕ
ಡಾ.ಎನ್.ಸುಧೀಂದ್ರ. ಲೇಖಕ
ಶ್ರೀ ಕತ್ತಿಗೆ ಚನ್ನಪ್ಪ ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಗಡಿಯಲ್ಲಿ ಚೀನಾ ಸೈನಿಕರ ಅತಿಕ್ರಮ ಪ್ರವೇಶ

0

ಚೀನಾದಿಂದ ಇಂಡೋ ಪೆಸಿಫಿಕ್ ಪ್ರಾಂತ್ಯದಲ್ಲಿ ಮಿತಿಮೀರುತ್ತಿರುವ ಅತಿಕ್ರಮಣದ ಬಗ್ಗೆ ಕ್ವಾಡ್ ಒಕ್ಕೂಟದ ಸಭೆಯಲ್ಲಿ ಚರ್ಚೆಯಾದ ಹಿನ್ನೆಲೆ ಲಡಾಕ್ ಇತ್ತೀಚಿಗೆ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಸೈನಿಕರು ಗಡಿಯಲ್ಲಿ ಅತಿಕ್ರಮವಾಗಿ ಪ್ರವೇಶಿಸಿ ರುವ ವಿಡಿಯೋವೊಂದು ಬಯಲಾಗಿದೆ. ಬ್ಲಾಕ್ ಅಭಿವೃದ್ಧಿ ಮಂಡಳಿಯ ಸದಸ್ಯ ರೊಬ್ಬರು ವೀಡಿಯೋವನ್ನ ಟ್ವೀಟ್ ಮಾಡಿದ್ದಾರೆ.

ಲಡಾಕ್ ನ ಗಡಿಭಾಗದ ಗ್ರಾಮಕ್ಕೆ ನುಗ್ಗಿರುವ ಚೀನಾ ಸೈನಿಕರನ್ನು ಸ್ಥಳೀಯರನ್ನು ಬಲವಂತವಾಗಿ ಓಡಿಸುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ. ಇದು ನಮ್ಮ ಪ್ರಾಂತ್ಯ ಎಂದು ಸೈನಿಕರು ಅಟ್ಟಹಾಸ ಮೆರೆಯುತ್ತಿರುವ ಈ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಪ್ರಮಾಣದ ಆಕ್ರೋಶ ವ್ಯಕ್ತವಾಗಿದೆ.

ಕೆಲದಿನಗಳ ಹಿಂದೆ ಉಪಗ್ರಹ ಸೆರೆಹಿಡಿದ ಫೋಟೋದಲ್ಲಿ ಪೂರ್ವ ಕಣಿವೆಯಲ್ಲಿನ ಪಾಂಗಾಂಗ್ ತ್ಸೊ ಸರೋವರ ತೀರದಲ್ಲಿ ಚೀನಾ ಸೇನೆಯು ತನ್ನ ಕಾರ್ಯಚರಣೆಗಳು ಮತ್ತು ತಾಲೀಮಿಗಾಗಿ ಹೊಸ ಸೇತುವೆ ನಿರ್ಮಿಸಿರುವುದು ಬಯಲಾಗಿದೆ.

1962 ರಿಂದ ಚೀನಾ ಸೇನೆಯು ಅತಿಕ್ರಮಿಸಿಕೊಂಡು ಬಂದಿರುವ ಭಾರತದ ಪ್ರಾಂತ್ಯದಲ್ಲಿ ಸೈನಿಕರು ಸೇತುವೆ ನಿರ್ಮಿಸುತ್ತಿದ್ದಾರೆ. ಇದು ಖಂಡನೀಯ ಎಂದು ಕೇಂದ್ರ ಸರ್ಕಾರ ಪ್ರತಿಕ್ರಿಯಿಸಿತ್ತು. ಪೂರ್ವ ಲಡಾಕ್ ನಲ್ಲಿ ಕಳೆದೆರಡು ವರ್ಷಗಳಿಂದ ಗಡಿ ಬಿಕ್ಕಟ್ಟು ಹಾಗೆ ಉಳಿದುಕೊಂಡಿದೆ. ಚೀನಾ ಸೈನಿಕರಿಂದ ಭಾರತದ ಯೋಧರ ಮೇಲೆ ದಾಳಿ ನಡೆದ ಹಿನ್ನೆಲೆಯಲ್ಲಿ ಪಾಂಗಾಂಗ್ ತ್ಸೊ ಸರೋವರದ ಸುತ್ತಲೂ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. 14 ಸುತ್ತು ಮಾತುಕತೆ ಯಾದರೂ ಬಿಕ್ಕಟ್ಟು ಶಮನವಾಗಿಲ್ಲ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಪ್ರೊ ಕಬಡ್ಡಿ ಲೀಗ್ ಪುಣೇರಿ ಮತ್ತು ಯೋಧಾ ವಿಜಯ

0

ಹ್ಯಾಟ್ರಿಕ್ ಗೆಲುವಿನ ಸಂದರ್ಭದಲ್ಲಿದ್ದ ಹರಿಯಾಣ ಸ್ಟೀಲರ್ಸ್ ತಂಡದ ಖುಷಿಯನ್ನು ಪುನೇರಿ ಪಲ್ಟನ್ ತಂಡವು ತನ್ನ ತೆಕ್ಕೆಗೆ ತೆಗೆದುಕೊಂಡಿತು.
ಪ್ರೊ ಕಬಡ್ಡಿ ಲೀಗ್ ನ ಶುಕ್ರವಾರದ ಮೊದಲ ಪಂದ್ಯದಲ್ಲಿ ಪುಣೇರಿ ಬಳಗ 45-27 ಅಂಕಗಳ ಅಂತರದಿಂದ ಭರ್ಜರಿ ಜಯ ಸಾಧಿಸಿತು.

ಬೆಂಗಳೂರಿನ ಶೆರಟಾನ್ ಹೋಟೆಲ್ ನಲ್ಲಿ ನಡೆದ ಪಂದ್ಯದಲ್ಲಿ ಪುಣೇರಿ ಬಳಗ ಆರಂಭದಿಂದಲೇ ಅಧಿಕಾರಯುತ ಪ್ರದರ್ಶನವನ್ನು ನೀಡಿತು.

ಇದರ ಪರಿಣಾಮವಾಗಿ ಪ್ರಥಮಾರ್ಧ ಮುಕ್ತಾಯದ ವೇಳೆಗೆ 26-07 ಅಂಕಗಳ ಭರ್ಜರಿ ಮುನ್ನಡೆ ಗಳಿಸಿತು. ದ್ವಿತೀಯಾರ್ಧದಲ್ಲೂ ಅದೇ ಮಾದರಿಯ ಪ್ರದರ್ಶನ ಮುಂದುವರಿಸಿ 20-19 ಅಂಕಗಳ ಜಯ ಗಳಿಸಿತು.

ಅಂತಿಮ ಹತ್ತು ನಿಮಿಷಗಳಲ್ಲಿ ಸ್ಟೀಲರ್ಸ್ ಪಡೆ ತಿರುಗೇಟು ನೀಡಿದ ಹೊರತಾಗಿಯೂ ಅಂತರ ಸರಿದೂಗಿಸಲು ಸಾಧ್ಯವಾಗಲಿಲ್ಲ.
ಒಟ್ಟು 19 ಪಂದ್ಯಗಳಲ್ಲಿ 58 ಅಂಕಗಳನ್ನು ಸಂಪಾದಿಸಿರುವ ಹರಿಯಾಣ ಅಂಕಪಟ್ಟಿಯಲ್ಲಿ 3ನೇ ಸ್ಥಾನ ಪಡೆದು ಕೊಂಡಿದ್ದು, ಪ್ಲೇ ಆಫ್ ಹಂತದ ನಿರೀಕ್ಷೆಯಲ್ಲಿದೆ.
17 ಪಂದ್ಯಗಳಲ್ಲಿ 47 ಅಂಕ ಗಳಿಸಿರುವ ಪುಣೇರಿ ಅಂಕಪಟ್ಟಿಯಲ್ಲಿ 9ನೇ ಸ್ಥಾನ ಪಡೆದುಕೊಂಡಿದೆ.

ದಿನದ ಎರಡನೇ ಪಂದ್ಯದಲ್ಲಿ ಜೈಪುರ ಪಿಂಕ್ ಫ್ಯಾಥರ್ಸ್ ವಿರುದ್ಧ ಯು.ಪಿ. ಯೋಧಾ ತಂಡ 41-34 ಅಂಕಗಳಿಂದ ಜಯ ಸಾಧಿಸಿತು.
14 ಅಂಕ ಗಳಿಸಿದ ಪ್ರದೀಪ್ ನರ್ವಾಲ್ ಗೆಲುವಿನ ರೂವಾರಿ ಎನಿಸಿಕೊಂಡರು.

ಏಕದಿನ ಸರಣಿಯಲ್ಲಿ ಮಣಿದ ವೆಸ್ಟ್ ಇಂಡೀಸ್

0

ರೋಹಿತ್ ಶರ್ಮಾ ಸಾರಥ್ಯದ ಭಾರತ ಕ್ರಿಕೆಟ್ ತಂಡ ಏಕದಿನ ಸರಣಿಯ ಮೂರು ಪಂದ್ಯಗಳಲ್ಲಿ ಪ್ರವಾಸಿ ವೆಸ್ಟ್ ಇಂಡೀಸ್ ತಂಡವನ್ನ ಬಗ್ಗು ಬಡಿದಿದೆ.

ವಿಂಡೀಸ್ ತಂಡವೊಂದು ಏಕದಿನ ಸರಣಿಯಲ್ಲಿ ಭಾರತ ತಂಡದ ವಿರುದ್ಧ ವೈಟ್ ವಾಷ್ ಆಗಿದ್ದು ಇದೇ ಮೊದಲು. ಇದರೊಂದಿಗೆ ಕೆರಿಬಿಯನ್ ಬಳಗವನ್ನು ಕ್ಲೀನ್ ಸ್ವೀಪ್ ಮಾಡಿದ ಭಾರತ ಏಕದಿನ ತಂಡದ ಮೊದಲ ನಾಯಕ ಎಂಬ ಹಿರಿಮೆಗೆ ರೋಹಿತ್ ಶರ್ಮಾ ಭಾಜನರಾಗಿದ್ದಾರೆ.

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶುಕ್ರವಾರದಂದು ಈ ಪಂದ್ಯ ನಡೆಯಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡ 9.3 ಓವರ್ ಗಳಲ್ಲಿ 42 ರನ್ ಕಲಿ ಹಾಕಿತು.
ಅಷ್ಟರಲ್ಲಿಯೇ ರೋಹಿತ್ ಶರ್ಮಾ (13), ವಿರಾಟ್ ಕೊಹ್ಲಿ (0), ಶಿಖರ್ ಧವನ್ (10), ಮುಂತಾದ ಘಟಾನುಘಟಿಗಳ ವಿಕೆಟ್ ಕಳೆದುಕೊಂಡಿದ್ದರಾದರೂ,ಆ ಬಳಿಕ ಶ್ರೇಯಸ್ ಅಯ್ಯರ್ (80), ಮತ್ತು ರಿಷಭ್ ಪಂತ್ (56), ಜೋಡಿ ನಾಲ್ಕನೇ ವಿಕೆಟ್ ಗೆ 110 ರನ್ ಗಳನ್ನು ಗಳಿಸಿದರು.

ಇದರ ಫಲವಾಗಿ ತಂಡವು ನಿಗದಿತ 50 ಓವರ್ ಗಳಲ್ಲಿ 265 ರನ್ ಗಳ ಸ್ಪರ್ಧಾತ್ಮಕ ಮೊತ್ತ ಪಡೆಯಿತು. ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ತಂಡ 37.1 ಓವರ್ ಗಳಲ್ಲಿ 169 ರನ್ ಗಳಿಗೆ ಸೋಲನ್ನು ಕಂಡಿತು.

ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಮತ್ತು ದೀಪಕ್ ಚಹರ್ ಅವರ ನೇರ ಹಾಗೂ ನಿಖರ ಎಸೆತಗಳಿಗೆ ವಿಂಡೀಸ್ ತಂಡದ ಯಾವುದೇ ಬ್ಯಾಟ್ಸ್ಮನ್ ನಿಲ್ಲಲಿಲ್ಲ. ಇದರೊಂದಿಗೆ ಸ್ಪಿನ್ನರ್ ಕುಲದೀಪ್ ಯಾದವ್ ಕೂಡ ಒಳ್ಳೆಯ ಪ್ರದರ್ಶನ ನೀಡಿದರು. ಇದರ ಫಲವಾಗಿ ಜೇಸನ್ ಫೋಲ್ಡರ್ ಬಳಗ ಪ್ರತಿಯೊಂದು ರನ್ನಿಗೂ ಹಪಹಪಿಸುವಂತಾಯಿತು.
ಅಂತಿಮವಾಗಿ ಇನ್ನೂ 12.5 ಓವರ್ ಬಾಕಿ ಇರುವಾಗಲೇ ಆಟ ಮುಗಿಸಿತು.

ಕನ್ನಡಿಗ ಬೌಲರ್ ಪ್ರಸಿದ್ಧ ಕೃಷ್ಣ ಸರಣಿ ಪುರುಷ ಪ್ರಶಸ್ತಿಗೆ ಆಯ್ಕೆಯಾಗಿರುವುದು ಕರ್ನಾಟಕಕ್ಕೆ ಹೆಮ್ಮೆಯ ಸಂಗತಿ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಗಡಿಯಲ್ಲಿ ಆರುಮಂದಿ ಪಾಕ್ ನಾಗರಿಕರ ಬಂಧನ

0

ಗುಜರಾತ್ ನ ಕಛ್ ನಲ್ಲಿ ಕಾರ್ಯಚರಣೆ ಮುಂದುವರಿಸಿರುವ ಗಡಿ ಭದ್ರತಾ ಪಡೆ ಯು ಭುಜ್ ಜಿಲ್ಲೆಯ ಹರಾಮಿ ನಲ್ಲಾ ಸಾಗರ ಪ್ರದೇಶದಲ್ಲಿ ಬಿಎಸ್ ಎಫ್ ಯೋಧರು ರಾತ್ರೋರಾತ್ರಿ ಕಾರ್ಯಾಚರಣೆ ಕೈಗೊಂಡಿದ್ದಾರೆ. ಪಾಕ್ ನ 6 ನಾಗರಿಕರ ಬಂಧನದ ಜೊತೆಗೆ ದೋಣಿಗಳನ್ನು ಜಪ್ತಿ ಮಾಡಲಾಗಿದೆ ಎಂದು ಬಿಎಸ್ ಎಫ್ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಕ್ರೀಕ್ ಕ್ರೊಕೊಡೈಲ್ ಕಮಾಂಡೋ ಗಳನ್ನು ಭುಜ್ ಸಾಗರ ಪ್ರದೇಶದಲ್ಲಿ ನಿಯೋಜಿಸಲಾಗಿದೆ. ಇಷ್ಟಲ್ಲದೆ, ಮೀನುಗಾರರ ಪತ್ತೆಗೆ ವಾಯುಪಡೆಯ ಒಂದು ಹೆಲಿಕ್ಯಾಪ್ಟರ್ ಅನ್ನು ಸಹ ಬಳಸಲಾಗುತ್ತಿದೆ. ಹೆಲಿಕ್ಯಾಪ್ಟರ್ ಮೂಲಕ ಬಿ ಎಸ್ ಎಸ್ 3 ತಂಡಗಳನ್ನು ಮೂರು ಕಡೆ ನಿಯೋಜಿಸಲಾಗಿದೆ. ಪಾಕ್ ನ ಉಳಿದ ನಾಗರಿಕರ ಪತ್ತೆಗೆ ಯೋಧರು ಕಾರ್ಯಾಚರಣೆ ಮುಂದುವರಿಸಿದ್ದಾರೆ ಎಂದು ತಿಳಿಸಿದ್ದಾರೆ.

ಬಿಎಸ್ಎಫ್ ನ ಯೋಧರಿಗೆ ಕಾರ್ಯಚರಣೆ ಕೈಗೊಳ್ಳಲು ಹಲವು ಸವಾಲು ಎದುರಾಗುತ್ತಿವೆ. ಹೆಚ್ಚಿನ ಪ್ರಮಾಣದ ಜೌಗು ಪ್ರದೇಶಗಳು, ನೀರಿನ ಏರಿಳಿತ ಸೇರಿ ಹಲವು ಸವಾಲುಗಳ ಮಧ್ಯೆಯೇ ಬೃಹತ್ ಕಾರ್ಯಚರಣೆ ಮುಂದುವರೆದಿದೆ ಎಂದು ಮಾಹಿತಿ ನೀಡಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ಪಾಕಿಸ್ತಾನದ ಮೀನುಗಾರರು ದೋಣಿಗಳ ಸಮೇತ ಸಾಗರ ಪ್ರದೇಶದಲ್ಲಿ ನುಸುಳಿರುವ ಇರುವ ಕಾರಣ ಹೆಚ್ಚಿನ ನಿಗಾ ವಹಿಸಲಾಗಿದೆ. ಡ್ರೋನ್ ಗಳನ್ನು ಸಹ ನಿಗಾ ವಹಿಸಲು ಬಳಸಲಾಗುತ್ತಿದೆ ಎಂದು ತಿಳಿದುಬಂದಿದೆ. ಬಿ ಎಸ್ ಎಫ್ ಗುಜರಾತ್ ಫ್ರಂಟಿಯರ್ ಐಜಿ ಜಿ. ಎಸ್. ಮಲಿಕ್ ಅವರೇ ಖುದ್ದಾಗಿ ಬೃಹತ್ ಕಾರ್ಯಚರಣೆ ಮೇಲೆ ನಿಗಾ ಇಟ್ಟಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಸಿಕ್ಕ ಸೀಟು ಬಿಟ್ಟು ಹೋಗುವ ವಿದ್ಯಾರ್ಥಿಗಳಿಗೆ ದಂಡ ಶುಲ್ಕವಿಲ್ಲ

0

ನೀಟ್ ಪರೀಕ್ಷೆಯಲ್ಲಿ ವಿಳಂಬವಾಗಿದೆ. ಆದ್ದರಿಂದ, ಈಗಾಗಲೇ ಇಂಜಿನಿಯರಿಂಗ್ ಸೀಟು ಪಡೆದು ಈಗ ಕೋರ್ಸ್ಗೆ ಪ್ರವೇಶ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ವಿಧಿಸುತ್ತಿದ್ದ ದಂಡ ಶುಲ್ಕವನ್ನು ರದ್ದುಪಡಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ. ಎನ್. ಅಶ್ವತ್ಥನಾರಾಯಣ ಅವರು ತಿಳಿಸಿದ್ದಾರೆ.

ಇಷ್ಟಲ್ಲದೇ, ಈ ವರ್ಷ ವಿದ್ಯಾರ್ಥಿಗಳಿಂದ ಸಂಗ್ರಹ ಮಾಡಿದ ಶುಲ್ಕವನ್ನು ಹಿಂದಿರುಗಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಈ ವಿನಾಯಿತಿ ಈ ವರ್ಷಕ್ಕೆ ಮಾತ್ರ ಅನ್ವಯಿಸಲಿದೆ. ಸಾಮಾನ್ಯವಾಗಿ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಸೀಟು ಹಂಚಿಕೆ ಒಟ್ಟಿಗೆ ನಡೆಯುತ್ತಿತ್ತು. ಆದರೆ ಈ ವರ್ಷ ನೀಟ್ ಪರೀಕ್ಷೆ ವಿಚಾರ ಮೆಟ್ಟಿಲೇರಿದ್ದರಿಂದ ಹಂಚಿಕೆ ಪ್ರಕ್ರಿಯೆ ತಡವಾಗಿದೆ. ಹೀಗಾಗಿ ಅನಿಶ್ಚಿತ ಪರಿಸ್ಥಿತಿ ತಲೆದೋರಿದೆ ಎಂದು ಅಶ್ವತ್ಥನಾರಾಯಣ ಅವರು ತಿಳಿಸಿದ್ದಾರೆ.

ಈಗಾಗಲೇ ಇಂಜಿನಿಯರಿಂಗ್ ಪ್ರವೇಶಾತಿ ಪಡೆದವರಿಗೆ ಈಗ ವೈದ್ಯಕೀಯ ಸೀಟು ಸಿಕ್ಕಿದ್ದರೆ, ಆಸಕ್ತರು ಅಲ್ಲಿಗೆ ಹೋಗಬಹುದು. ಅದಕ್ಕೆ ಯಾವುದೇ ದಂಡ ವಸೂಲಿ ಮಾಡುವುದಿಲ್ಲ. ಹಾಗೆಯೇ ಈ ವರ್ಷ ಕಟ್ಟಿದ್ದ ಶುಲ್ಕವನ್ನು ಮುಟ್ಟುಗೋಲು ಹಾಕಿಕೊಳ್ಳುವುದಿಲ್ಲ. ಇದರ ಬದಲಿಗೆ ವಿದ್ಯಾರ್ಥಿಗಳಿಗೆ ಹಿಂದಿರುಗಿಸಲಾಗುತ್ತದೆ ಎಂದು ಸಿ.ಎನ್.ಅಶ್ವತ್ಥನಾರಾಯಣ ಅವರು ಹೇಳಿದ್ದಾರೆ.

ಪ್ರವೇಶ ಪಡೆದ ನಂತರ ಸೀಟು ಬಿಟ್ಟು ಹೋಗುವವರಿಗೆ ಶುಲ್ಕದ ಐದು ಪಟ್ಟು ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಆದರೆ ಈ ಬಾರಿ ಇದಕ್ಕೆ ವಿನಾಯಿತಿ ನೀಡಲಾಗಿದೆ ಎಂದು ಸಿ. ಎನ್.ಅಶ್ವತ್ಥನಾರಾಯಣ ಅವರು ಮಾಧ್ಯಮ ಮಿತ್ರರಿಗೆ ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಮೇಕೆದಾಟು ಯಾತ್ರೆ ಮತ್ತೆ ಆರಂಭಿಸುವತ್ತ ಕಾಂಗ್ರೆಸ್ ಚಿತ್ತ

0

ಹಿಜಾಬ್ ವಿವಾದ ವ್ಯಾಪಕ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಅದರಿಂದ ಅಂತರ ಕಾಯ್ದುಕೊಂಡಿರುವ ಕಾಂಗ್ರೆಸ್ ,ಇದೀಗ ಮೇಕೆದಾಟು ಪಾದಯಾತ್ರೆ ಮುಂದುವರಿಸಲು ಸಿದ್ಧತೆ ಪ್ರಾರಂಭಿಸಿದೆ.

ಹಿಜಾಬ್ ವಿಚಾರದಲ್ಲಿ ಪ್ರಾರಂಭದಲ್ಲಿ ಪ್ರತಿಕ್ರಿಯಿಸಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಹಿಜಬ್ ಧರಿಸುವುದು ಮೂಲಭೂತ ಹಕ್ಕು ಎಂದು ಪ್ರತಿಪಾದಿಸಿದ್ದರು. ಮತ್ತೊಂದೆಡೆ ಈ ಬೆಳವಣಿಗೆ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸಹ ಪ್ರತಿಕ್ರಿಯಿಸಿದ್ದರು.

ಬಳಿಕ ಕಾಂಗ್ರೆಸ್ ನ ಅಲ್ಪಸಂಖ್ಯಾತ ಮುಖಂಡರೊಂದಿಗೆ ಚರ್ಚೆ ನಡೆಸಿದ ಡಿ.ಕೆ.ಶಿವಕುಮಾರ್, ಈ ಬೆಳವಣಿಗೆಗೆ ಅತ್ಯಂತ ಎಚ್ಚರಿಕೆಯಿಂದ ಪ್ರತಿಕ್ರಿಯಿಸಬೇಕು. ರಾಜ್ಯದಲ್ಲಿ ಪಕ್ಷಕ್ಕೆ ಪೂರಕವಾದ ವಾತಾವರಣ ನಿರ್ಮಾಣವಾಗುತ್ತಿದೆ. ಇಂಥ ಸಂದರ್ಭದಲ್ಲಿ ಯಾವುದೇ ಧರ್ಮವನ್ನು ಓಲೈಸುವ ಸಂದೇಶ ಹೋಗದಂತೆ ನೋಡಿಕೊಳ್ಳಬೇಕು. ಎಲ್ಲಾ ಧರ್ಮ, ಸಮುದಾಯದವರು ಬೆಂಬಲಿಸಿದರೆ ಮಾತ್ರ ಪಕ್ಷ ಅಧಿಕಾರಕ್ಕೆ ಬರುತ್ತದೆ. ಈ ಸಂಗತಿ ಎಂದರೆ ಮನಸ್ಸಿನಲ್ಲಿರಬೇಕು ಎಂಬ ಸೂಚನೆ ನೀಡಿದ್ದರು ಎಂದು ತಿಳಿದುಬಂದಿದೆ.
ಈ ಹಂತದಲ್ಲಿ ಮೇಕೆದಾಟು ಪಾದಯಾತ್ರೆಯನ್ನು ಮುಂದುವರಿಸಲು ಕಾಂಗ್ರೆಸ್ ತಯಾರಿ ಮಾಡಿಕೊಳ್ಳುತ್ತಿದೆ.
ಮೇಕೆದಾಟು 2.0 ಅತಿ ಶೀಘ್ರದಲ್ಲಿ ನಿಮ್ಮ ಮುಂದೆ ಎಂದು ಕೆಪಿಸಿಸಿ ಅಧಿಕೃತ ಹ್ಯಾಂಡಲ್ ನಿಂದ ಟ್ವೀಟ್ ಮಾಡಲಾಗಿದೆ.
ಜೊತೆಗೆ ಮೇಕೆದಾಟು ಬಗ್ಗೆ ಗಮನ ಸೆಳೆಯುವ ವಿಡಿಯೋವೊಂದನ್ನು ಅಪ್ಲೋಡ್ ಮಾಡಲಾಗಿದೆ. ಮೇಕೆದಾಟು2ರಲ್ಲಿ ಭಾಗಿಯಾಗಲು ನೊಂದಣಿ ಮಾಡಿಕೊಳ್ಳುವಂತೆ ಮನವಿ ಮಾಡಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ರಾಜ್ಯ ಸಂಪುಟ ಪುನಾರಚನೆ ಸದ್ಯಕ್ಕಿಲ್ಲ

0

ಮಾರ್ಚ್ ವರೆಗೂ ಸಂಪುಟ ವಿಸ್ತರಣೆ ಬೇಡ. ಆ ಬಳಿಕವೇ ಮುಂದಿನ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಸಂಪುಟ ಸರ್ಜರಿ ಮಾಡಬಹುದು ಎಂದು ಬಿಜೆಪಿ ಹೈಕಮಾಂಡ್ ನಿಂದ ಖಚಿತ ಸಂದೇಶ ಬಂದಿದೆ. ಹಾಗೆಯೇ ನಿಶ್ಚಿಂತೆಯಿಂದ ಆಡಳಿತ ನಡೆಸಿಕೊಂಡು ಹೋಗುವುದರ ಜೊತೆಗೆ ಉತ್ತಮ ಬಜೆಟ್ ಮಂಡಿಸುವಂತೆ ಸಿಎಂಗೆ ವರಿಷ್ಠರು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಹಿನ್ನೆಲೆಯಲ್ಲಿ ಹೈಕಮಾಂಡ್ ಕಡೆಯಿಂದ ಸಂದೇಶ ಬಂದಿದೆ. ಉತ್ತರಪ್ರದೇಶ ಸೇರಿದಂತೆ ಪಂಚರಾಜ್ಯ ಚುನಾವಣೆ ಇರುವಾಗ ಕರ್ನಾಟಕದಲ್ಲಿ ಸಂಪುಟ ವಿಸ್ತರಣೆ ಪುನರ್ ರಚನೆ ಕೈಗೊಳ್ಳುವುದು ಸೂಕ್ತವಲ್ಲ. ರಾಜ್ಯದಲ್ಲಿ ಜಂಟಿ ಅಧಿವೇಶನ ಮತ್ತು ಬಜೆಟ್ ಅಧಿವೇಶನದ ಹೊಸ್ತಿಲಲ್ಲಿ ಈ ಪ್ರಕ್ರಿಯೆ ಕೈಗೊಳ್ಳುವುದು ಜಾಣ್ಮೆಯ ನಡೆಯಾಗುವುದಿಲ್ಲ. ಇಂದಿನ ಬೆಳವಣಿಗೆಯಲ್ಲಿ ನೋಡಿಕೊಂಡು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬಹುದು ಎಂಬ ಸಂದೇಶ ರವಾನೆಯಾಗಿದೆ.
ಸಿಎಂ ಬಸವರಾಜ್ ಬೊಮ್ಮಾಯಿ ದಿಲ್ಲಿ ಪ್ರವಾಸ ಕೈಗೊಂಡಿದ್ದಾಗ ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ರಾಜಕೀಯ ಬೆಳವಣಿಗೆ ವಿಚಾರವಾಗಿಯೂ ಚರ್ಚಿಸಿದ್ದರು. ಸಂಪುಟ ವಿಸ್ತರಣೆ ಬಗ್ಗೆ ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಅವರೊಂದಿಗೆ ಮಾತನಾಡುವಂತೆ ಸೂಚಿಸಿದ್ದರು.
ಅದರಂತೆ ನೇರವಾಗಿ ನಡ್ಡಾ ಭೇಟಿ ಸಾಧ್ಯವಾಗದಿದ್ದರೂ ಫೋನ್ ಮೂಲಕ ಸಿಎಂ ಮಾತನಾಡಿದ್ದರು. ಒಂದೆರಡು ದಿನದಲ್ಲಿ ಮತ್ತೆ ಮಾತನಾಡುವುದಾಗಿ ಸಿಎಂಗೆ ನಡ್ಡಾ ಅವರು ತಿಳಿಸಿದ್ದರು ಎಂದು ತಿಳಿದುಬಂದಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಗಣನೀಯ ಇಳಿಕೆ

0

ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.

ನಿನ್ನೆ 1.14 ಲಕ್ಷ ಜನರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ.3, 976 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. 41 ಜನರು ಮೃತಪಟ್ಟಿದ್ದಾರೆ.

ಸಕ್ರಿಯ ಪ್ರಕರಣಗಳ ಸಂಖ್ಯೆ 44,571ಕ್ಕೆ ಇಳಿಕೆಯಾಗಿದೆ. ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಶೇ.3.47 ರಷ್ಟಿದೆ. ಸಾವಿನ ಪ್ರಮಾಣ ಶೇ.1.03 ರಷ್ಟಿದೆ.

ಇದುವರೆಗೆ 39. 21 ಲಕ್ಷ ಜನರು ಸೋಂಕಿಗೆ ಒಳಗಾಗಿದ್ದಾರೆ. 39,575 ಜನರು ಮೃತಪಟ್ಟಿದ್ದಾರೆ. ಜನವರಿ 11ರಂದು 11,377 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಟ್ಟು ಬಿಡುಗಡೆಯಾದ ಅವರ ಸಂಖ್ಯೆ 38. 36ಕ್ಕೆ ಏರಿಕೆಯಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ

0

ಕರ್ನಾಟಕ ನಾಟಕ ಅಕಾಡೆಮಿ ನೀಡುವ 2020-21ನೇ ಸಾಲಿನ ಪ್ರಶಸ್ತಿಗಳ ಪ್ರದಾನ ಸಮಾರಂಭವು ಕಲಘಟಗಿಯ ಹನ್ನೆರಡುಮಠದ ಆವರಣದಲ್ಲಿ ನಡೆಯಿತು.
ಹಿರಿಯ ನಟ ಎಸ್.ಎನ್.ಸೇತೂರಾಂ ಅವರಿಗೆ ಜೀವಮಾನದ ರಂಗ ಗೌರವ ಪ್ರಶಸ್ತಿ, 25 ಕಲಾವಿದರಿಗೆ ವಾರ್ಷಿಕ ರಂಗ ಪ್ರಶಸ್ತಿ, ಹಲವರಿಗೆ ಪುಸ್ತಕ ಮತ್ತು ದತ್ತಿ ಪುರಸ್ಕಾರ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಸಿ.ಎಂ. ನಿಂಬಣ್ಣನವರು, ಕಲಘಟಗಿಯಲ್ಲಿ ರಂಗಮಂದಿರ ನಿರ್ಮಾಣಕ್ಕೆ 10 ಲಕ್ಷ ರೂ. ಅನುದಾನ ನೀಡುವೆ ಎಂದು ಭರವಸೆ ನೀಡಿದರು.
ಹಿರಿಯ ನಟ ಎಸ್.ಎನ್. ಸೇತೂರಾಂ ಮಾತನಾಡಿ , ರಂಗಭೂಮಿಗೆ ನಾನು ಸೇವೆ ಮಾಡುವ ಉದ್ದೇಶದಿಂದ ಬರಲಿಲ್ಲ. ಬದಲಾಗಿ ಮನಸ್ಸಿನ ಹಸಿವಿನ ಪೂರೈಕೆಗಾಗಿ, ಬುದ್ಧಿಯನ್ನು ಚುರುಕುಗೊಳಿಸುವುದಕ್ಕಾಗಿ ರಂಗ ಭೂಮಿಗೆ ಬಂದೆ ಎಂದರು.

ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಪ್ರೋ. ಭೀಮಸೇನ ಆರ್.ಅವರು ಮಾತನಾಡಿ,
ಗ್ರಾಮೀಣ ರಂಗಕಲಾವಿದರು ಫಲಾಪೇಕ್ಷೆಯಿಲ್ಲದೇ ರಂಗಕಲೆ ಉಳಿಸಿ-ಬೆಳೆಸಲು ಶ್ರಮಿಸುತ್ತಿದ್ದಾರೆ. ಸಾಕಷ್ಟು ಕಲಾವಿದರು ಪ್ರಶಸ್ತಿ ಪಡೆಯಲು ಅರ್ಹರಿದ್ದರೂ ನಾಟಕ ಅಕಾಡೆಮಿ ಸದಸ್ಯರು ಸಮರ್ಥರನ್ನು ಆಯ್ಕೆ ಮಾಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಶ್ರೀ ರೇವಣಸಿದ್ದ ಶಿವಾಚಾರ್ಯ ಸ್ವಾಮೀಜಿ, ಸಭಾಪತಿ ಬಸವರಾಜ್ ಹೊರಟ್ಟಿ, ಹಾಗೂ ಇನ್ನಿತರರು ಉಪಸ್ಥಿತರಿದ್ದರು.