ಕಳೆದ ವಾರದಿಂದ ಹಾವೇರಿ ಜಿಲ್ಲೆಯ ಗುತ್ತಲು ಹೋಬಳಿಯಲ್ಲಿ ಬೀಡುಬಿಟ್ಟಿರುವ ಕಾಡಾನೆ ಸರಿಗೆ ಶಿವಮೊಗ್ಗ ಜಿಲ್ಲೆಯ ಸಕ್ರೇಬೈಲ್ ನಿಂದ ಮೂರು ಆನೆಗಳನ್ನು ಕರೆತರಲಾಗಿದೆ.
15 ಜನರನ್ನು ಒಳಗೊಂಡ ತಂಡವು ಈ ಕಾರ್ಯಾಚರಣೆ ನಡೆಸಲ್ಲಿದ್ದಾರೆ. ಗುತ್ತಲ ಭಾಗದಲ್ಲಿ ಕಾಡಾನೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ.
ಕಾಡಾನೆ ಸೆರೆಗೆ ಸಕ್ರೆಬೈಲ್ ನಿಂದ ಮಂಗಳವಾರ ಆಗಮಿಸಿದ 3 ಕಾಡಾನೆಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿವೆ. ಗಂಡು ಕಾಡಾನೆಯನ್ನು ಆಕರ್ಷಿಸಲು ಭಾನುಮತಿ ಎಂಬ ಹೆಣ್ಣಾನೆಯನ್ನು ಕರೆತರಲಾಗಿದೆ. 10ಕ್ಕೂ ಅಧಿಕ ಕಾವಡಿಗಳು, ಮಾವುತರು, ಕುರಿ ಸಂವರ್ಧನಾ ಕೇಂದ್ರದ ಬಳಿ ಬೀಡುಬಿಟ್ಟಿದ್ದಾರೆ.
ಹಗಲಿನಲ್ಲಿ ಅವಿತುಕೊಳ್ಳುವ ಕಾಡಾನೆ, ರಾತ್ರಿ ಜಮೀನುಗಳಿಗೆ ನುಗ್ಗಿ ಮೇವು, ಬೆಳೆ ತಿನ್ನುತ್ತದೆ. ಅಲ್ಲದೆ ಕೆರೆ ಹಾಗೂ ಕಾಡಿನ ಜಲ ಮೂಲಗಳ ಲಭ್ಯತೆ ಸುಗಮವಾಗಿದೆ. ಹೀಗಾಗಿ ಕಾಡಾನೆ ಬೇರೆಡೆ ತೆರಳದೇ ಇಲ್ಲಿಯೇ ಉಳಿದಿದೆ. ಆದರೆ ದೊಡ್ಡ ಪೊದೆಯಲ್ಲಿ ಕಾಡಾನೆ ಅವಿತು ವಿಶ್ರಾಂತಿ ಪಡೆಯುತ್ತಿರುವ ಸಾಧ್ಯತೆ ಅಧಿಕವಾಗಿದ್ದು, ಹಗಲು ವೇಳೆ ಎಲ್ಲಿಯೂ ಕಾಣ ಸಿಗುತ್ತಿಲ್ಲ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ಬಾಲಿವುಡ್ ನ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ನಿರೀಕ್ಷಿತ ಗಂಗೂಬಾಯಿ ಕಥಿಯಾವಾಡಿ ಸಿನಿಮಾದ ಹೆಸರನ್ನು ಬದಲಿಸುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ಗಂಗೂಬಾಯಿ ಕಥಿಯಾವಾಡಿ ಚಿತ್ರ ಬಿಡುಗಡೆಗೆ ತಡೆ ನೀಡುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ವೇಳೆ “ಚಿತ್ರದ ವಿರುದ್ಧ ಹಲವು ದೂರುಗಳು ದಾಖಲಾಗಿವೆ ಹೀಗಾಗಿ ಹೆಸರು ಬದಲಿಸುವುದೇ ಸೂಕ್ತ” ಎಂದು ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ದಿನೇಶ್ ಮಹೇಶ್ವರಿ ಅವರ ಪೀಠವು ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ಗಂಗೂಬಾಯಿ ಅವರ ಸಾಕು ಮಗ ಈ ಚಿತ್ರ ಬಿಡುಗಡೆಗೆ ತಡೆ ನೀಡುವಂತೆ ಕೋರ್ಟ್ ಮೆಟ್ಟಿಲೇರಿದ್ದಾರೆ.
ಕಾಂಗ್ರೆಸ್ ಶಾಸಕ ಅಮೀನ್ ಪಟೇಲ್ ಅವರು “ಈ ಚಲನಚಿತ್ರಕ್ಕೆ ಮೂಲ ಕಾರಣವಾಗಿರುವ ಕೃತಿಯಲ್ಲಿ ಗಂಗೂಬಾಯಿ ಅವರನ್ನು ಕಾಮಾಟಿಪುರದ ನಾಯಕಿ ಎಂದು ತಪ್ಪಾಗಿ ಬಿಂಬಿಸಲಾಗಿದೆ ಹಾಗೂ ಕಥಿಯಾವಾಡಿ ಸಮುದಾಯಕ್ಕೆ ಅವಹೇಳನ ಮಾಡಲಾಗಿದೆ” ಎಂದು ಮುಂಬೈ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಸಂಘಟಿತ ಕಾರ್ಮಿಕರ ಗಾಗಿ ಹಲವಾರು ಯೋಜನೆಗಳನ್ನು ರೂಪಿಸಿದ್ದಾರೆ. ಅವುಗಳನ್ನು ಸದುಪಯೋಗ ಪಡೆದುಕೊಳ್ಳಬೇಕೆಂದು ಸಂಸದ ಬಿ.ವೈ. ರಾಘವೇಂದ್ರ ಅವರು ಮನವಿ ಮಾಡಿಕೊಂಡಿದ್ದಾರೆ.
ಭದ್ರಾವತಿಯ ಶ್ರಮಶಕ್ತಿ ಅಸಂಘಟಿತ ಕಾರ್ಮಿಕರ ಒಕ್ಕೂಟದಿಂದ ಗಾಂಧಿನಗರದ ಅಗಮುಡಿ ಮೊದಲಿಯಾರ್ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ, ಇ ಶ್ರಮ್ ಕಾರ್ಡ್ ಮತ್ತು ಕಾರ್ಮಿಕ ಇಲಾಖೆಯಿಂದ ಕಿಟ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಅಸಂಘಟಿತ ಕಾರ್ಮಿಕರು ಸಹ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವ ನಿಟ್ಟಿನಲ್ಲಿ ಅಗತ್ಯವಿರುವ ಯೋಜನೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೂಪಿಸಿವೆ. ಯೋಜನೆಗಳು ಸಮರ್ಪಕವಾಗಿ ತಲುಪಿಸುವ ನಿಟ್ಟಿನಲ್ಲಿ ಸಂಘಟನೆಗಳ ಪಾತ್ರ ಪ್ರಮುಖವಾಗಿವೆ. ನಗರದ ಜೀವನಾಡಿಯಾಗಿ ಲಕ್ಷಾಂತರ ಅವಲಂಬಿತರ ವಿಐಎಸ್ಎಲ್ ಮತ್ತು ಎಂಪಿ ಎಂ ಕಾರ್ಖಾನೆಗಳ ಕಾಯಕಲ್ಪ ಮಾಡಬೇಕು ಎಂದು ಹೇಳಿದರು.
ನಗರಸಭಾ ಸದಸ್ಯ ಬಿ.ಕೆ. ಮೋಹನ್ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ನಗರಸಭೆ ಅಧ್ಯಕ್ಷೆ ಗೀತಾ ರಾಜಕುಮಾರ್, ಸಮಿತಿ ಅಧ್ಯಕ್ಷ ಸುದೀಪ್ ಕುಮಾರ್, ಸದಸ್ಯರಾದ ವಿ. ಕದಿರೇಶ್, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ. ಅಶೋಕ್ ಇನ್ನು ಮುಂತಾದ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ಉಕ್ರೇನ್ ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿ ಒಲಿಕ್ಸಿ ಡ್ಯಾನಿಲೊವ್ ಅವರು “ರಷ್ಯಾ ಸೇನೆಯಿಂದ ಆಕ್ರಮಣ ಭೀತಿ ಹೆಚ್ಚುತ್ತಿರುವ ನಡುವೆಯೇ ಉಕ್ರೇನ್ ಕಾರ ಮುಂದಿನ 30 ದಿನಗಳವರೆಗೆ ಆಂತರಿಕ ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ” ಎಂದು ತಿಳಿಸಿದ್ದಾರೆ.
ಉಕ್ರೇನ್ ಇಂಡಿಯಾ ದಕ್ಷಿಣ ಬೆಲಾರಸ್ ನಲ್ಲಿ ರಷ್ಯಾ ಮಿಲಿಟರಿಯ 100 ಟ್ಯಾಂಕರ್, ವಿಮಾನಗಳು ಬಂದು ನಿಂತಿವೆ. ಸಮರ ಸನ್ನದ್ದ ಸ್ಥಿತಿಯಲ್ಲಿ ಶಸ್ತ್ರಾಸ್ತ್ರ ಸಂಗ್ರಹವನ್ನು ಕೂಡ ಮಾಡಿಕೊಂಡಿರುವ ರಷ್ಯಾ ಸೇನಾ ನೆಲೆಗಳ ಫೋಟೊಗಳನ್ನು ಅಮೆರಿಕ ಮತ್ತು ನ್ಯಾಟೋ ಸದಸ್ಯ ರಾಷ್ಟ್ರಗಳ ಸೇನಾಪಡೆಗಳಿಗೆ ರವಾನಿಸಲಾಗಿದೆ. ಅದರಂತೆ ರಷ್ಯಾ ಸೇನೆ ಯುದ್ಧ ಆರಂಭಿದಲ್ಲಿ ಕೂಡಲೇ ಪ್ರತಿತಂತ್ರಕ್ಕೂ ಅಮೆರಿಕ ಸೇನೆ ಸಿದ್ಧವಾಗಿದೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು “ರಾಜತಾಂತ್ರಿಕ ಪರಿಹಾರ ಕಡೆಗಣಿಸಿಲ್ಲ. ಆದರೆ, ರಷ್ಯಾದ ಹಿತ ರಕ್ಷಣೆಗೆ ಆದ್ಯತೆ ನೀಡಲಾಗುತ್ತಿದೆ. ನಮ್ಮ ಪ್ರಜೆಗಳ ಸುರಕ್ಷತೆ ಮುಖ್ಯ, ಆ ನಿಟ್ಟಿನಲ್ಲಿ ಯಾವುದೇ ಕಾರಣಕ್ಕೂ ರಾಜಿ ಇಲ್ಲ” ಎಂದು ಹೇಳಿದ್ದಾರೆ.
ಕ್ಯಾಥೋಲಿಕ್ ಚರ್ಚ್ ಮುಖ್ಯಸ್ಥ ಪೋಪ್ ಫ್ರಾನ್ಸಿಸ್ ಅವರು ರಷ್ಯಾ ಉಕ್ರೇನ್ ನಡುವೆ ಬಹಳ ಅಪಾಯಕಾರಿ ಸನ್ನಿವೇಶ ನಿರ್ಮಾಣಗೊಳ್ಳುತ್ತಿದೆ. ಇದು ವಿಶ್ವದ ಶಾಂತಿಯನ್ನು ಭಂಗಗೊಳಿಸಲಿದೆ. ದಿನಂಪ್ರತಿ ಯುದ್ಧದ ಭೀತಿ ಹೆಚ್ಚಿಸುವ ಬದಲು ಒಂದು ಬಾರಿ ಉಭಯ ರಾಷ್ಟ್ರಗಳ ಪ್ರತಿನಿಧಿಗಳು ಎದುರಾಗಿ ಕೂತು ಮಾತುಕತೆ ನಡೆಸುವುದು ಸೂಕ್ತ “ಎಂದು ತಿಳಿಸಿದ್ದಾರೆ.
ಭಾರತದಲ್ಲಿನ ರಷ್ಯಾ ರಾಯಭಾರ ಕಚೇರಿ ಉಪ ಮುಖ್ಯಸ್ಥ ರೋಮನ್ ಬಬುಶ್ಕಿನ್ ಅವರು “ಭಾರತದ ಜೊತೆ ನಮ್ಮ ಪಾಲುದಾರಿಕೆ, ದ್ವಿಪಕ್ಷೀಯ ಸಂಬಂಧಕ್ಕೆ ಭವಿಷ್ಯದಲ್ಲಿ ಯಾವುದೇ ರೀತಿಯಾದ ಅಥವಾ ಹಿನ್ನಡೆ ಉಂಟಾಗುವುದಿಲ್ಲ ಎಂದು ನಿರೀಕ್ಷಿಸಿದ್ದೇವೆ. ರಕ್ಷಣಾ ಕ್ಷೇತ್ರದಲ್ಲಿ ಹತ್ತು ವರ್ಷಗಳವರೆಗೆ ಸಹಕಾರಕ್ಕೆ ಒಪ್ಪಂದ ಮಾಡಿಕೊಂಡಿದ್ದೇವೆ. ಉಕ್ರೇನ್ ಗಡಿ ಬಿಕ್ಕಟ್ಟಿನ ಪರಿಣಾಮವು ಇದರ ಮೇಲೆ ಆಗಲ್ಲ ಎಂದು ನಂಬಿಕೆ ಇದೆ” ಎಂದು ಹೇಳಿದ್ದಾರೆ.
18 ರಿಂದ 60 ವರ್ಷ ವಯಸ್ಸಿನ ಉಕ್ರೇನ್ ಪ್ರಜೆಗಳು ಸ್ವಯಂಪ್ರೇರಣೆಯಿಂದ ಸೇನೆಗೆ ಸೇರ್ಪಡೆಯಾಗಲು ಕೂಡ ಸರ್ಕಾರ ಅವಕಾಶ ಕಲ್ಪಿಸಿದೆ. ಒಂದು ವರ್ಷದವರೆಗೆ ಇವರುಗಳಿಗೆ ಶಸ್ತ್ರಾಸ್ತ್ರ ತರಬೇತಿ ನೀಡಿ, ತುರ್ತುಪರಿಸ್ಥಿತಿಗಳಲ್ಲಿ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ಪಾದರಕ್ಷೆ, ಎಕ್ಕಡ, ಜೋಡು , ಕೆರ, ಮೆಟ್ಟು ಇತ್ಯಾದಿಗಳು ಚಪ್ಪಲಿಗಳಿಗೆ ಅನ್ಯ ಪದಗಳು. ಸುಮ್ಮನೆ ಚಪ್ಪಲಿ ಎಂದರೆ ಅರ್ಥವಾಗುತ್ತಲ್ಲಾ? ಚಪ್ಪಲಿಗಳು ಅಂತ ಯಾಕೆ ಬಹುವಚನವನ್ನೇಕೆ ಉಪಯೋಗಿಸಬೇಕು ಎನ್ನುವ ಪ್ರಶ್ನೆ ಮೂಡುವುದು ಸಹಜ. ಈಗಿನ ಸಂದರ್ಭದಲ್ಲಿ ಮನುಷ್ಯನಿಗೆ ಬಟ್ಟೆ, ಆಭರಣಗಳ ಜೊತೆಗೆ ಚಪ್ಪಲಿಗಳು ಸಹ ಅತ್ಯಂತ ಅವಶ್ಯಕವಾಗಿವೆ. ಒಂಟಿಕಾಲಿಗರೂ ಸಹ ಒಂದು ಚಪ್ಪಲಿಯನ್ನು ಕೊಳ್ಳಲಾರ. ಹಾಕಿಕೊಳ್ಳುವುದು ಒಂದೇ ಕಾಲಿಗೆ ಆಗಿದ್ದರೂ, ಹಣವನಂತೂ ಜೋಡಿ ಚಪ್ಪಲಿಗಳಿಗೆ ನೀಡಬೇಕು. ಇವುಗಳು ಜೋಡಿ ಆಗಿರುವುದರಿಂದಲೇ ಜೋಡುಗಳು ಎಂದು ಕರೆದಿರಬೇಕು. ಇವುಗಳ ಕೆಲಸ ಮಾನುಷ್ಯರ ಪಾದಸೇವೆ ಆದ್ದರಿಂದ ಬಹುಶಃ ಪಾದರಕ್ಷೆ ಪಾದುಕೆ ಅಂತ ಜನ ಕರೀತಾರೆ ಅಂತ ಅನಿಸುತ್ತದೆ.
ಸಾಮಾನ್ಯವಾಗಿ ಪೀಠಾಧಿಪತಿಗಳು, ಧಾರ್ಮಿಕ ಮಹಾತ್ಮರು, ಕಾವಿಧಾರಿಗಳು ಧರಿಸುವ ಪಾದರಕ್ಷೆಗಳಿಗೆ ಪಾದುಕೆ ಅಂತ ಕರೆಯುವುದು ವಾಡಿಕೆ . ಪಾದುಕೆ ಎಂಬುದು ಪಾದಕ್ಕೆ ಹಾಕಿಕೊಳ್ಳುವ ಮರದ ಚಪ್ಪಲಿ. ಇವಕ್ಕೆ ಹೆಚ್ಚಿನ ಗೌರವ ಬಂದಿರುವುದ್ದಕ್ಕೆ ಕಾರಣ ಅವು ಮರದಿಂದ ಮಾಡಲ್ಪಟ್ಟವು ಎಂಬ ಕಾರಣಕ್ಕೆ ಇರಬಹುದು.
ಚರ್ಮದಿಂದ ಮಾಡಿದ ಚಪ್ಪಲಿಗಳನ್ನು ಚಮ್ಮಾವುಗೆ ಎನ್ನುತ್ತಾರೆ. ಸನ್ಯಾಸಿಗಳು, ಮಠಾಧೀಶರು ಪಾದುಕೆಗಳನ್ನು ಪಾದಗಳಿಗೆ ಧರಿಸಿಯೇ ಓಡಾಡುತ್ತಾರೆ. ಚರ್ಮದಿಂದ ಮಾಡಿದವನ್ನು ಹಾಕಿ ನಡೆದಾಡಿದರೆ ಅದು ಭೂತಾಯಿಗೆ ಮಾಡುವ ಅಪಚಾರವೆಂಬ ಕಾರಣವಷ್ಟೇ ಅಲ್ಲದೆ, ಚಪ್ಪಲಿ ತಯಾರಿಕೆಯ ಹಿಂದಿರುವ ಪ್ರಾಣಿ ಹತ್ಯೆಯ ಪಾಪಪ್ರಜ್ಞೆಯೂ ಇರಬಹುದೇನೋ…
ಈಗಂತೂ ನಡೆದಾಡುವ ವಯಸ್ಸಿಗೇ ಪಾದರಕ್ಷೆಗಳು ಬಂದುಬಿಟ್ಟಿವೆ. ಆಗಿನ ಕಾಲದಲ್ಲಿ ಎಲ್ಲರೂ ಬರಿಗಾಲಲ್ಲೇ ಓಡಾಡುತ್ತಿದ್ದರು. ಜಗತ್ತು ಬದಲಾಗುತ್ತಿದ್ದಂತೆ ಜನರ ಅವಶ್ಯಕತೆಗಳು ಹೆಚ್ಚಾಗಿವೆ. ಈಗಿನ ಜನರು ಮನೆಯಲ್ಲೊಂದು ಜೋಡು, ಹೊರಗಡೆ ಓಡಾಡಲೊಂದು ಚಪ್ಪಲಿ, ಬೆಳಿಗ್ಗೆ ಜಾಗಿಂಗ್ ಗೆ ಹೋಗುವಾಗ ಒಂದು ಜೊತೆ ಬೂಟು, ಮದುವೆಗೆ ಒಂದು ಜೊತೆ, ಪಾರ್ಟಿಗಳಿಗೆ ಒಂದು ಜೊತೆ ಅಂತಲ್ಲ ಮನೆತುಂಬಾ ಚಪ್ಪಲಿಗಳ ರಾಶಿಯನ್ನೇ ಇಟ್ಟುಕೊಂಡಿರುತ್ತಾರೆ.
ಈಗ ಡ್ರೆಸ್ ಕೋಡ್ ಜೊತೆ ಮ್ಯಾಚಿಂಗ್ ಚಪ್ಪಲಿ ಫ್ಯಾಶನ್ ಬಂದಿದೆ. ಚಪ್ಪಲಿ ಕಾಯುವ ಜನರ ಬಗ್ಗೆ ನಾವು ಯೋಚಿಸುವುದೇ ಇಲ್ಲ. ದೊಡ್ಡ ದೊಡ್ಡ ದೇವಾಲಯಗಳ ಸಮೀಪ ಹಲವರಿಗೆ ಅದೇ ಹೊಟ್ಟೆಪಾಡು. ನಾವು ದೇವರಿಗೆ ಧಾರಾಳವಾಗಿ ಕಾಣಿಕೆ ನೀಡುತ್ತೇವೆ. ಆದರೆ ಪಾದರಕ್ಷೆಗಳನ್ನು ಜೋಪಾನದಿಂದ ಕಾಯುವವರೆದುರು ಚೌಕಾಶಿ ಮಾಡುತ್ತೇವೆ.
ಹಿಂದಿನ ಕಾಲದಲ್ಲಿ ಚಪ್ಪಲಿಗಳನ್ನ ಮನೆಯ ಹಿಂದುಗಡೆ ಬಿಡುವ ರೂಢಿಯಿತ್ತು. ಆದರೆ, ಈಗ ನಾವು ಯಾರಾದರೂ ಒಬ್ಬರ ಮನೆಗೆ ಹೋದರೆ ಮೊದಲಿಗೆ ದರ್ಶನವಾಗುವುದೇ ಚಪ್ಪಲಿಗಳ ರಾಶಿಗಳು….
ವಿವಿಧ ರೀತಿಯ, ವಿವಿಧ ಬಣ್ಣದ ಚಪ್ಪಲಿಗಳನ್ನು ನಾವು ಎಲ್ಲೆಂದರಲ್ಲಿ ಕಾಣಬಹುದು. ಚಪ್ಪಲಿ ಸಾವಿರ ರೂಪಾಯದ್ದೇ ಆದರೂ, ತೊಡುವುದು ಮಾತ್ರ ಕಾಲಿಗೆ ತಾನೇ ಅಂತ ಒಬ್ಬರು ಯೋಚಿಸಿದರೆ, ಮತ್ತೊಬ್ಬರು ಇನ್ನೊಬ್ಬರು ತನ್ನನ್ನು ನೋಡುತ್ತಾರೆ ಎನ್ನುವ ಕಾರಣಕ್ಕೆ ದುಬಾರಿಯ ಚಪ್ಪಲಿಗಳನ್ನು ಧರಿಸುತ್ತಾರೆ.
ಅದೇನೇ ಇರಲಿ, ಮಾರುಕಟ್ಟೆಯಲ್ಲಿ ಸ್ಯಾಂಡಲ್ಸ್ ಎಂದೇ ಗುರುತಿಸಲ್ಪಡುವ ಇವುಗಳ ಬೇಡಿಕೆಗೆ ಮುಖ್ಯ ಕಾರಣ ಚರ್ಮದ ಚಪ್ಪಲಿ ಗಿಂತ ಅಗ್ಗದ ಬೆಲೆಯುಳ್ಳದ್ದು ಎಂಬುದಷ್ಟೇ.
ಚಪ್ಪಲಿಗಳಿಗೂ ಲಿಂಗಭೇದವುಂಟು. ಪುರುಷ ಚಪ್ಪಲಿಗಳಿಗೆ ಬಿರುಸು, ಸಪ್ಪಳ ಎರಡೂ ಹೆಚ್ಚು. ಕಿಮ್ಮತ್ತು ಸ್ವಲ್ಪ ಕಮ್ಮಿ. ಮಹಿಳಾ ಚಪ್ಪಲಿಗಳನ್ನು ಲೇಡೀಸ್ ಚಪ್ಪಲ್ಸ್ ಎಂದರೇನೇ ಅಂಗಡಿಯವರಿಗೆ ಅರ್ಥವಾಗುವುದು. ಅವುಗಳಿಗೆ ಚಮ್ಮಕ್ಕು, ಕಿಮ್ಮತ್ತು ಎರಡು ಜಾಸ್ತಿನೇ..
ಇಂತಹ ಚಪ್ಪಲಿಗಳನ್ನು ಹಾಕಿಕೊಂಡು ನಡೆದಾಡುವಾಗ ನಾಲ್ಕು ಜನ ನಮ್ಮನ್ನು ಗಮನಿಸುತ್ತಿದ್ದಾರೆ ಎಂದು ತಿಳಿದ ರಂತೂ ಅವರು ನಡಿಗೆ ಪರದೇಶಿಯೇ ಆಗಿ ಬಿಡುತ್ತದೆ.
ಅಭ್ಯಾಸವಿಲ್ಲದೆ ಇಂಥ ಏರು ಹಿಮ್ಮಡಿಯ ಚಪ್ಪಲಿ ಹಾಕಿದವರು ನಯವಾದ ಗ್ರಾನೈಟು ನೆಲದ ಮೇಲೆ ಜಾರಿ ಬಿದ್ದು ಕಾಲು ಮುರಿದುಕೊಂಡರು ಉದಾಹರಣೆಗಳೇನು ಕಡಿಮೆ ಇಲ್ಲ.
ಗ್ರಾಮೀಣ ಬದುಕಿನಲ್ಲಿ ಬೈಗುಳಕ್ಕೆ ವಿಶಿಷ್ಟ ಸ್ಥಾನವಿದೆ. ಅದು ಅನಕ್ಷರಸ್ಥ ಒರಟರ ಒಂದು ಆಯುಧ ಎಂದರೂ ತಪ್ಪಾಗುವುದಿಲ್ಲ. ಸುಳ್ಳು- ಮೋಸ- ಕಳ್ಳತನ ಮಾಡಿದವರ ಮರ್ಯಾದೆಯನ್ನು ಬೀದಿಯಲ್ಲಿ ತೆಗೆಯಲು ಚಪ್ಪಲಿ, ಮೆಟ್ಟು, ಕೆರ ಅಂತೆಲ್ಲ ಮುಂತಾದುವುಗಳ ವಾಕ್ ಪ್ರಯೋಗ ಆಗುತ್ತಿರುತ್ತದೆ. ಮೆಟ್ನಾಗೆ ಹೊಡಿತೀನಿ, ಕೆರಾ ತಗೊಂಡು ಹೊಡಿತೀನಿ, ನಿನ್ನದೇನು ನಾಲಿಗೆನಾ ಇಲ್ಲಾ ಕೆರಾನಾ? ಮೊದಲಾದ ಬೈಗುಳಗಳು ಬರಿಗಾಲಿನವರ ಬಾಯಿಂದಲೂ ಆಕಸ್ಮಿಕವಾಗಿ ಬಂದುಬಿಡುತ್ತವೆ. ಪದ ಬಳಕೆಯಲ್ಲಿ ಮಡಿವಂತಿಕೆ ಇರಿಸಿಕೊಂಡವರ ಬೈಗುಳ ಆಗಬೇಕಾ ಚಪ್ಪಲಿ ಪೂಜೆ ? ಎಂಬುದಕ್ಕಷ್ಟೇ ಸೀಮಿತವಾಗಿದೆ.
ದೆವ್ವಗಳಿಗೆ ಚಪ್ಪಲಿಯ ಭಯ ಇದೆಯಂತೆ. ಅದರಿಂದಾಗಿಯೇ ರಾತ್ರಿ ಕೆಟ್ಟ ಕನಸು ಕಾಣುವ ಹೆದರುಪುಕ್ಕರು ಹಾಸಿಗೆ ಬದಿಯಲ್ಲಿ ಚಪ್ಪಲಿ ಇಟ್ಟು ಮಲಗುತ್ತಾರಂತೆ. ನೋಡಿ ಚಪ್ಪಲಿಗಳಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಅಂತ?.
ಸಾಮಾನ್ಯವಾಗಿ ಚಪ್ಪಲಿ ಕಳುವಾಗುವ ಸ್ಥಳಗಳು ಎಂದರೆ ದೇವಸ್ಥಾನ, ಕಲ್ಯಾಣ ಮಂದಿರ, ಪೂಜಾ ಸಮಾರಂಭಗಳು ಅಥವಾ ಮದುವೆ ಮನೆಗಳು. ದೇವಸ್ಥಾನದ ಒಳಹೊಕ್ಕು ಪ್ರಾರ್ಥಿಸುವಾಗ, ನಮ್ಮ ಮನಸ್ಸಿನಲ್ಲಿ ಹೊರಗೆ ಬಿಟ್ಟಿರುವ ಚಪ್ಪಲಿಗಳ ಮೇಲೆಯೇ ಗಮನ ಜಾಸ್ತಿ.
ಹೀಗೆ ಚಪ್ಪಲಿಗಳ ಬಗ್ಗೆ ಮಾತನಾಡುತ್ತಾ ಹೋದರೆ ದಿನವೇ ಸಾಲುವುದಿಲ್ಲವೇನೊ..
ಏನಾದರೂ ಇರಲಿ, ಇಂದಿನ ಜೀವನಶೈಲಿಗೆ ನಿತ್ಯ ಬದುಕಿಗೆ ಚಪ್ಪಲಿಗಳು ಅಗತ್ಯವಷ್ಟೇ ಅಲ್ಲ, ಅತ್ಯವಶ್ಯಕ ವಸ್ತು. ಮಾಂಸಾಹಾರಿಗಳ ಸಂಖ್ಯೆ ಹೆಚ್ಚುವಂತೆ ಚಪ್ಪಲಿ ತಯಾರಿಕೆ ಮತ್ತು ಮಾರಾಟವೂ ಹೆಚ್ಚುತ್ತಿರುವುದು ಸಹಜ ಕ್ರಿಯೆ.
ಚಪ್ಪಲಿ ಕಾಲಾತೀತ, ದೇಶಾತೀತ ಎಂಬುದನ್ನು ಯಾರೂ ಅಲ್ಲಗಳೆಯಲಾರರು.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ಶಿವಮೊಗ್ಗ ಜಿಲ್ಲೆಯಲ್ಲಿ ಅಡಿಕೆ ಬೆಳೆಯಲ್ಲಿ ನುಸಿ ಭಾದೆ ಕಂಡುಬರುತ್ತಿದ್ದು ಕೂಡಲೇ ನಿಯಂತ್ರಣ ಕ್ರಮ ಕೈಗೊಳ್ಳುವಂತೆ ನವಿಲೆ ಅಡಿಕೆ ಸಂಶೋಧನಾ ಕೇಂದ್ರ ಸಲಹೆ ನೀಡಿದೆ.
ಡಿಸೆಂಬರ್ ನಿಂದ ಎಪ್ರಿಲ್ ವರೆಗೆ ತಾಪಮಾನ ಹೆಚ್ಚಾಗಿರುವುದರಿಂದ ಈ ವಾತಾವರಣವು ನುಸಿಗಳ ವಂಶಾಭಿವೃದ್ಧಿಗೆ ಅನುಕೂಲವಾಗಿರುತ್ತದೆ. ನೀರು ಮತ್ತು ನೆರಳು ಸಮರ್ಪಕವಾಗಿ ದೊರೆಯದ ತೋಟಗಳಲ್ಲಿ ಇವುಗಳು ಹೆಚ್ಚಾಗಿ ಕಂಡುಬರುತ್ತವೆ. ನುಸಿ ಮೊಟ್ಟೆ ಹಾಗೂ ಅದರಿಂದ ಹೊರಬಂದ ಎಲ್ಲಾ ಹಂತದ ಮರಿಗಳು ಎಲೆಗಳ ಕೆಳಭಾಗದಲ್ಲಿ ಜೀವಿಸುತ್ತವೆ. ನುಸಿ ಬಾಧಿತ ಎಲ್ಲಿಯ ಕೆಳಬಾಗವನ್ನು ಬೆರಳಿನಿಂದ ಒತ್ತಿ ಹೇಳಿದಾಗ ಬೆರಳುಗಳು ರಕ್ತದಂತೆ ಕೆಂಪಾಗಿ ಕಂಡುಬರುತ್ತವೆ. ಇವುಗಳು ಸೂಜಿಯಂತೆ ಚೂಪಾಗಿರುವ ನಳಿಕೆಯಿಂದ ರಸವನ್ನು ಹೀರುವುದರಿಂದ ರಸ ಹೀರಿದ ಭಾಗದಲ್ಲಿ ಹಳದಿ ಚುಕ್ಕೆಗಳು ಮೂಡಿ ನಂತರ ಎಲೆ ಹಳದಿ ಬಣ್ಣಕ್ಕೆ ತಿರುಗುತ್ತದೆ. ಇವುಗಳ ಬಾಧೆ ಉಲ್ಬಣಗೊಂಡಾಗ ಗರಿಗಳು ಸೀಳುವುದಲ್ಲದೆ ಒಣಗಿ ಸಾಯುತ್ತವೆ ಎಂದು ತಿಳಿಸಿದೆ
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಜೆಡಿಎಸ್ ಪಕ್ಷದವರು ಎಲ್ಲಾ ಚರ್ಚೆಯಲ್ಲಿ ಭಾಗವಹಿಸಿದ್ದರು. ಆಡಳಿತ ಪಕ್ಷವು ಚರ್ಚೆಗೆ ಸಿದ್ದವಿತ್ತು ಆದರೆ ಕಾಂಗ್ರೆಸ್ ಧರಣಿ ನಡೆಸಿ ಕಲಾಪದಲ್ಲಿ ಭಾಗವಹಿಸಲೇ ಇಲ್ಲ. ಸೌಹಾರ್ದ ವಾತಾವರಣಕ್ಕೆ ಐದಾರು ಸಲ ಯತ್ನಿಸಿಯೂ ಸಫಲತೆ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
“ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸದನದಲ್ಲಿ ಮಾತನಾಡಿಯೇ ಯಾವುದೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಈ ಜವಾಬ್ದಾರಿ ಸದನದಲ್ಲಿದ್ದವರಿಗೂ, ಧರಣಿಯಲ್ಲಿದ್ದವರಿಗೂ ಇರಬೇಕು” ಎಂದು ಕಾಗೇರಿ ಅವರು ತಿಳಿಸಿದರು.
ಕಲಾಪಕ್ಕೆ ಅಡ್ಡಿಪಡಿಸಿದವರ ವಿರುದ್ಧ ತೀವ್ರ ಕ್ರಮ ಜರುಗಿಸಲು ಕಾನೂನಿನ ಚೌಕಟ್ಟಿನಲ್ಲಿ ನನಗೆ ಎಲ್ಲ ರೀತಿಯ ಅಧಿಕಾರವಿದೆ. ಆದರೆ, ಅಂತಹ ದಿನಗಳು ಬಾರದಿರಲಿ ಎಂದು ಹೇಳಿದರು.
“ಇತ್ತೀಚೆಗೆ ವಿವಾದ ಸೃಷ್ಟಿಸಿಕೊಂಡು ನಾಯಕತ್ವ ಬೆಳೆಸಿಕೊಳ್ಳುವ ಮಾನಸಿಕತೆ ನಿರ್ಮಾಣವಾಗಿದೆ” ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
“ಮಾರ್ಚ್.04 ರಿಂದ ಬಜೆಟ್ ಅಧಿವೇಶನ ನಡೆಯಲಿದೆ. ಆ ಸಂದರ್ಭದಲ್ಲಿ ಚುನಾವಣಾ ಸುಧಾರಣೆ ಕುರಿತಂತೆ ಚರ್ಚಿಸಲು ಚಿಂತಿಸಲಾಗಿದ್ದು, ಈ ಸಂಬಂಧ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗುವುದು” ಎಂದು ವಿಧಾನಸಭಾದ್ಯಕ್ಷ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಬೇಸರ ವ್ಯಕ್ತಪಡಿಸಿದರು.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ಗ್ರಾಮೀಣ ಭಾಗದ ಪ್ರತಿ ಮನೆಗೆ ಶುದ್ದ ಕುಡಿಯುವ ನೀರು ಒದಗಿಸುವ ಜಲಜೀವನ್ ಮಿಷನ್ ಯೋಜನೆ ಅನುಷ್ಠಾನದಲ್ಲಿ ಅಧಿಕಾರಿ/ಸಿಬ್ಬಂದಿಗಳು ಪ್ರತಿ ಹಂತದಲ್ಲಿ ಕಾಮಗಾರಿ ಮತ್ತು ದಾಖಲಾತಿಗಳನ್ನು ಸಮರ್ಪಕವಾಗಿ ನಿರ್ವಹಿಸುವ ಮೂಲಕ ಯೋಜನೆಯನ್ನು ಯಶಸ್ವಿಗೊಳಸಿಬೇಕು ಎಂದು ಜಿಲ್ಲಾ ಪಂಚಾಯತ್ ಸಿಇಓ ಎಂ.ಎಲ್.ವೈಶಾಲಿ ತಿಳಿಸಿದರು.
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಿಲ್ಲಾ ಪಂಚಾಯತ್ ಶಿವಮೊಗ್ಗ ಇವರ ವತಿಯಿಂದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾಗಿರುವ ಜಲ್‍ಜೀವನ್ ಮಿಷನ್ ಯೋಜನೆಯ ಅನುಷ್ಠಾನದ ವಿವಿಧ ಹಂತದಲ್ಲಿನ ತಾಂತ್ರಿಕ ಸಿಬ್ಬಂದಿಗಳಿಗೆ ಇಂದಿನಿಂದ ಎರಡು ದಿನಗಳ ಜಿಲ್ಲಾ ಮಟ್ಟದ ತರಬೇತಿ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಅವರು ಮಾತನಾಡಿದರು.
ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ತಾಂತ್ರಿಕವಾಗಿ ಯಾವುದೇ ರೀತಿಯ ಗೊಂದಲಗಳಿದ್ದರೆ ಈ ತರಬೇತಿಯಲ್ಲಿ ತಾಂತ್ರಿಕ ಸಿಬ್ಬಂದಿಗಳು ಪರಿಹರಿಸಿಕೊಳ್ಳಬೇಕು. 1 ನೇ ಹಂತದಲ್ಲಾದ ಲೋಪಗಳನ್ನು ಸರಿಪಡಿಸಿಕೊಂಡು ತಾಂತ್ರಿಕ ಸಿಬ್ಬಂದಿ ಕಾಮಗಾರಿಯನ್ನು ಮತ್ತು ಕಚೇರಿ ಸಿಬ್ಬಂದಿ ದಾಖಲಾತಿಗಳನ್ನು ಸಮರ್ಪಕವಾಗಿ ನಿರ್ವಹಿಸಿ ಶೇ.100 ಪಕ್ಕಾ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಇಬ್ಬರೂ ಸಮನ್ವಯದಿಂದ ಕೆಲಸ ಮಾಡಬೇಕು.
ಗ್ರಾ.ಪಂ ಜನಪ್ರತಿನಿಧಿಗಳು, ಅಧಿಕಾರಿಗಳು, ನೀರುಗಂಟಿ ಸೇರಿದಂತೆ ಎಲ್ಲರೊಡಗೂಡಿ ಕೆಲಸ ಮಾಡಬೇಕು. ಆಗ ಕೆಲಸದಲ್ಲಿ ಪಾರದರ್ಶಕತೆ, ಗುಣಮಟ್ಟ ಮತ್ತು ಉತ್ತಮ ನಿರ್ವಹಣೆ ಸಾಧ್ಯವಾಗುತ್ತದೆ ಎಂದ ಅವರು ಎಲ್ಲ ಗ್ರಾಮಗಳಲ್ಲಿ ಒಂದೇ ತೆರನಾಗಿ ಲೋಪರಹಿತವಾಗಿ ಗುಣಮಟ್ಟದ ಕೆಲಸವನ್ನು ನಿಗದಿತ ಸಮಯದೊಳಗೆ ಮಾಡಿಕೊಡಬೇಕು ಎಂದು ಸೂಚಿಸದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವೃತ್ತ, ಬೆಂಗಳೂರಿನ ಅಧೀಕ್ಷಕ ಅಭಿಯಂತರ ನಾಗರಾಜ್.ಕೆ.ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮವಾಸಿಗಳ ಪ್ರತಿ ಮನೆಗಳಿಗೆ ಸಂಸ್ಕರಿಸಿದ ಶುದ್ದ ಕುಡಿಯುವ ನೀರು ಒದಗಿಸುವುದೇ ಜಲಜೀವನ್ ಮಿಷನ್‍ನ ಉದ್ದೇಶವಾಗಿದೆ. ಕೇಂದ್ರ ಸರ್ಕಾರದ ಈ ಯೋಜನೆಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಿದ್ದು ತಡವಾದ್ದರಿಂದ 1 ನೇ ಹಂತದ ಕಾಮಗಾರಿಗಳು ಸ್ವಲ್ಪ ತರಾತುರಿಯಲ್ಲಿ ನಡೆದು ಇಂಜಿನಿಯರುಗಳಿಗೆ ಬಿಗಿ ಕಾರ್ಯಸೂಚಿ ನೀಡಲಾಯಿತು. ಹಾಗೂ ತಾಂತ್ರಿಕ ಸಿಬ್ಬಂದಿಗಳ ಕೊರತೆಯೂ ಇದ್ದರಿಂದ ಎಲ್ಲ ಮಾರ್ಗಸೂಚಿಗಳನ್ನು ಅನುಸರಿಸುವುದು ಕಷ್ಟವಾಯಿತು. ಆದರೆ ಈಗ 2ನೇ ಹಂತದ ಕಾಮಗಾರಿಯಲ್ಲಿ ಲೋಪಗಳನ್ನು ತಿದ್ದಿಕೊಂಡು ಬಹಳ ಎಚ್ಚರಿಕೆಯಿಂದ ಸಿಬ್ಬಂದಿಗಳು ಕಾರ್ಯ ನಿರ್ವಹಿಸಬೇಕು.
ಗ್ರಾಮ ಕ್ರಿಯಾ ಯೋಜನೆಯನ್ನು ಸಮರ್ಪಕವಾಗಿ ಸಿದ್ದಪಡಿಸಿಕೊಳ್ಳಬೇಕು. ಜನರು ಪ್ರಜ್ಞಾವಂತರಾಗಿದ್ದು ಎಚ್ಚರಿಕೆಯಿಂದ ಕೆಲಸ ಕೈಗೊಳ್ಳಬೇಕು. ಉತ್ತಮ, ನವೀನ ತಂತ್ರಜ್ಞಾನ ಬಳಕೆ ಮಾಡಿಕೊಂಡು ಕಾಮಗಾರಿಯನ್ನು ಅಚ್ಚುಕಟ್ಟಾಗಿ, ಗುಣಮಟ್ಟದಿಂದ ನಿರ್ವಹಿಸಬೇಕು. ಎಲ್ಲ ರೀತಿಯ ಇಂಜಿನಿಯರಿಂಗ್ ಅಂಶಗಳನ್ನು ನೋಡಿಕೊಂಡು ಕೆಲಸ ಮಾಡಿದಲ್ಲಿ ಯೋಜನೆ ಯಶಸ್ವಿಯಾಗುತ್ತದೆ ಎಂದರು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ(ಆಡಳಿತ) ಮಲ್ಲಿಕಾರ್ಜುನ್ ಮಾತನಾಡಿ, ಹಿಂದೆಲ್ಲ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗಾಗಿ ಜನರು ತುಂಬಾ ಕಷ್ಟಪಡಬೇಕಿತ್ತು. ಈ ಕಷ್ಟವನ್ನು ದೂರ ಮಾಡಲು ಕೇಂದ್ರ ಸರ್ಕಾರ ಪ್ರತಿ ಮನೆಗೆ ನೀರು ಒದಗಿಸಲು ಜಲಜೀವನ್ ಮಿಷನ್ ಎಂಬ ಮಹಾತ್ವಾಕಾಂಕ್ಷಿ ಯೋಜನೆ ಜಾರಿಗೆ ತಂದು ಪ್ರತಿ ವ್ಯಕ್ತಿಗೆ ದಿನಕ್ಕೆ 55 ಲೀ ನೀರು ಕೊಡುವ ಉದ್ದೇಶ ಹೊಂದಿದೆ. ರಾಜ್ಯದ ಗ್ರಾಮೀಣ ಭಾಗದಲ್ಲಿ ಸುಮಾರು 25 ಲಕ್ಷ ವಸತಿಗಳಿದ್ದು ಈ ಯೋಜನೆಯಡಿ ಶೇ.47 ಸಾಧನೆ ಮಾಡಲಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಕರ್ನಲ್ ಕೇಶವ್ ಮತ್ತು ಹೆಚ್.ಎಂ. ಶಿವಶಂಕರಯ್ಯ ಇವರು ಪಿಪಿಟಿ ಪ್ರದರ್ಶನದ ಮೂಲಕ ಜಲಜೀವನ್ ಮಿಷನ್ ಕುಡಿಯುವ ನೀರು ಯೋಜನೆಯ ಮುಖ್ಯಗುಣಲಕ್ಷಣಗಳು, ಉದ್ದೇಶ, ಉಪಯೋಗ, ಗುಣಮಟ್ಟ, ಗ್ರಾಮ ಕ್ರಿಯಾಯೋಜನೆ, ನಿರ್ವಹಣೆ ಹಾಗೂ ಕಾಮಗಾರಿ ವೇಳೆ ಬಳಕೆಗೆ ಬರುವ ಇಂಜಿನಿಯರಿಂಗ್ ಅಂಶಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ(ಅಭಿವೃದ್ದಿ) ಜಯಲಕ್ಷ್ಮಮ್ಮ ಇತರೆ ಅಧಿಕಾರಿಗಳು ಇದ್ದರು.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ಭಜರಂಗದಳ ಕಾರ್ಯಕರ್ತ ಕೊಲೆ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದೆ. ಹರ್ಷನನ್ನು ಕೊಲೆಮಾಡಲು ಕೊಲೆಗಾರರು ಯುವತಿಯರು ವಿಡಿಯೋ ಕಾಲ್ ಬಲೆ ಬೀಸಿರುವ ಸಂಗತಿ ಬೆಳಕಿಗೆ ಬಂದಿದೆ.
ಹರ್ಷನ ಹತ್ಯೆ ಮಾಡಲು ಆರೋಪಿಗಳು ಯುವತಿಯರು ವಿಡಿಯೋ ಕಾಲ್ ಬಲೆ ಬೀಸಿರುವ ಸಂಗತಿಯನ್ನು ಹರ್ಷನ ಸ್ನೇಹಿತ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕೊಲೆಗೂ ಮೊದಲು ಇಬ್ಬರು ಅಪರಿಚಿತ ಯುವತಿಯರು ವಾಟ್ಸಪ್ ಕರೆ ಮಾಡಿ ಹರ್ಷನ ಸಹಾಯ ಕೇಳಿದ್ದರು.ಕರೆ ಬಂದ ಬಳಿಕ ಹರ್ಷ ಮನೆಯಿಂದ ಹೊರ ಬಂದಿದ್ದು, ತನ್ನ ಸ್ನೇಹಿತನಿಗೆ ವಿಡಿಯೋದಲ್ಲಿದ್ದಾಕೆಯನ್ನ ಅಪರಿಚಿತಳು ಎಂದು ತೋರಿಸಿದ್ದಾನೆ. ಮತ್ತೆ ಕರೆ ಮಾಡಿದ ಹುಡುಗಿಯೂ ಸಹಜವಾಗಿಯೇ ವಿಚಾರಿಸಿ ಹರ್ಷ ಇರುವ ಜಾಗದ ವಿವರವನ್ನು ತಿಳಿದುಕೊಂಡಿದ್ದಾಳೆ.
ಹರ್ಷ ತನ್ನ ಸ್ನೇಹಿತರಿಗೆ ಬೈಕ್ ತರುವುದಕ್ಕಾಗಿ ಕಳುಹಿಸಿ ನಡೆದುಕೊಂಡು ಹೋಗುವ ವೇಳೆ ಭಾರತೀ ಕಾಲೋನಿಯ ಕ್ರಾಸ್ ಬಳಿ ಹರ್ಷನನ್ನು ಆರೋಪಿಗಳು ಬರ್ಬರವಾಗಿ ಕೊಲೆ ಮಾಡಿದ್ದರು.
ವಿಷಯ ತಿಳಿದ ತಕ್ಷಣ ಹರ್ಷನ ಸ್ನೇಹಿತರು ಸ್ಥಳಕ್ಕೆ ಬಂದಿದ್ದಾರೆ. ಆದರೆ ಹರ್ಷನ ಮೊಬೈಲ್ ಆತನ ಬಳಿಯಲ್ಲಿ ಇರಲಿಲ್ಲ. ಪೊಲೀಸರು ಕೂಡಾ ಹರ್ಷನ ಮೊಬೈಲ್ ನಾಪತ್ತೆಯಾಗಿರುವುದು ಖಚಿತ ಪಡಿಸಿದ್ದರು.
ಸಹಜವಾಗಿ ಹರ್ಷ ಒಬ್ಬಂಟಿಯಾಗಿ ಎಲ್ಲೂ ಓಡಾಡುತ್ತಿರಲಿಲ್ಲ. ಸದಾ ಸ್ನೇಹಿತರೊಂದಿಗೆ ಇರುತ್ತಿದ್ದ. ಈ ಹಿನ್ನೆಲೆಯಲ್ಲಿ ಆರೋಪಿಗಳು ವಾಟ್ಸಪ್ ತಂತ್ರ ಬಳಸಿರಬಹುದು ಎಂದು ಕೇಳಿಬರುತ್ತಿದೆ.
ಅಲ್ಲದೆ ಬುಧವಾರ ಕೂಡ ಪೊಲೀಸರು ಇನ್ನೂ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಇಲಿಯಾಸ್ ನಗರದ ನಿವಾಸಿ ಫರಾಜ್ ಪಾಶಾ(24) ಮತ್ತು ವಾದಿ ಎ ಹುದಾ ನಿವಾಸಿ ಅಬ್ದುಲ್ ಖಾದರ್ ಜಿಲಾನ್(25) ಎಂದು ತಿಳಿದುಬಂದಿದೆ.
ಅದೇನೇ ಆಗಲಿ ಹರ್ಷನ ಕೊಲೆ ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಿದೆ. ಇನ್ನೂ ಹರ್ಷನ ಕೊಲೆಯ ಸತ್ಯಾಂಶವನ್ನು ಹೊರತರಲು ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ದೇಶದ ಗಡಿಯಲ್ಲಿ ಶಾಂತಿ ಮತ್ತು ಸ್ಥಿರತೆ ಕಾಯ್ದುಕೊಳ್ಳಲು ರಕ್ಷಣಾ ಪಡೆಗಳು ಸನ್ನದ್ದ ಸ್ಥಿತಿಯಲ್ಲಿವೆ. ಯಾವುದೇ ಬೆದರಿಕೆಗಳನ್ನು ಎದುರಿಸಲು ಸಿದ್ಧವಾಗಿದೆ ಎಂದು ಭೂ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ ಅವರು ತಿಳಿಸಿದ್ದಾರೆ.
ಬೆಂಗಳೂರು ನಗರದ ಪ್ಯಾರಾಚೂಟ್ ರೆಜಿಮೆಂಟ್ ತರಬೇತಿ ಕೇಂದ್ರದಲ್ಲಿ ವಾಯುಸೇನೆಯ ಪ್ಯಾರಾಚೂಟ್ ಬೆಟಾಲಿಯನ್ ಗಳಿಗೆ ಅಧ್ಯಕ್ಷೀಯ ಬಣ್ಣಗಳನ್ನು ಪ್ರದಾನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತೀಯ ವಾಯುಪಡೆಗಳು ನೂತನ ಶಸ್ತ್ರಾಸ್ತ್ರ ಮತ್ತು ಅತ್ಯಾಧುನಿಕ ಉಪಕರಣಗಳು ಒಂದಿಗೆ ಬಲ ಹೆಚ್ಚಿಸಿಕೊಂಡಿವೆ ಎಂದರು.
ಸೇನಾಪಡೆಗಳ ಕಾರ್ಯನಿರ್ವಹಣೆಯಲ್ಲಿ ಸಾಕಷ್ಟು ಬದಲಾವಣೆ ತರಲಾಗುತ್ತಿದೆ. ಬದಲಾವಣೆ ನಿರಂತರ ಪ್ರಕ್ರಿಯೆ. ಸೇನಾಪಡೆಯ ಸಂಘಟನೆ, ಶಸ್ತ್ರಾಸ್ತ್ರಗಳ ಬಳಕೆ, ಹೋರಾಟದ ವಿಧಾನ ಸೇರಿದಂತೆ ಹಲವು ವಿಷಯಗಳಲ್ಲಿ ಬದಲಾವಣೆ ತರುವ ಪ್ರಯತ್ನ ಸಾಗಿದೆ ಎಂದರು.
ಕಳೆದ ಎರಡು ಮತ್ತು ಮೂರು ವರ್ಷಗಳಿಂದ ಬದಲಾವಣೆ ಪ್ರಕ್ರಿಯೆ ಮತ್ತಷ್ಟು ವೇಗವಾಗಿ ನಡೆಯುತ್ತಿದೆ. ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಸಲಕರಣೆಗಳು ಸೇನಾಪಡೆಗಳನ್ನು ಸೇರಿಕೊಂಡಿದೆ ಎಂದು ವಿವರಿಸಿದರು.
11 ಪ್ಯಾರಾ (ಸ್ಪೆಷಲ್ ಫೋರ್ಸ್) 21 ಫ್ಯಾರಾ(ಸ್ಪೆಷಲ್ ಫೋರ್ಸ್), 23 ಪ್ಯಾರಾ ಮತ್ತು 29 ಪ್ಯಾರಾ ರೆಜಿಮೆಂಟ್ ಗಳಿಗೆ ಜನರಲ್ ನೆರೆಮನೆಯವರು ಅಧ್ಯಕ್ಷೀಯ ಬಣ್ಣಗಳನ್ನು ಪ್ರದಾನ ಮಾಡಿದರು. ಸರ್ವಧರ್ಮ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಸೇನಾ ಪಡೆಯ ಹಿರಿಯ ಅಧಿಕಾರಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.