Monday, November 9, 2026
Monday, November 9, 2026
Home Blog Page 1914

ಹಿರಿಯ ಗಮಕಿ ಶ್ರೀ ಕೇಶವ ಮೂರ್ತಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ

0

ಶಿವಮೊಗ್ಗದ ಹೊಸಹಳ್ಳಿ ಯ ಹಿರಿಯ ಗಮಕಿಗಳಾದ ಶ್ರೀ ಎಚ್ .ಆರ್ .ಕೇಶವಮೂರ್ತಿ ಅವರು ನವದೆಹಲಿಯಲ್ಲಿ ಇತ್ತೀಚೆಗಷ್ಟೇ ಪದ್ಮಶ್ರೀ ಪ್ರಶಸ್ತಿಯನ್ನ
ರಾಷ್ಟ್ರಪತಿಗಳಾದ ಶ್ರೀ ರಾಮನಾಥ ಕೋವಿಂದ್ ಅವರಿಂದ ಸ್ವೀಕರಿಸಿದ್ದಾರೆ.

ಶಿವಮೊಗ್ಗವೊಂದೇ ಅಲ್ಲ ಇಡೀ ಕರ್ನಾಟಕವೇ ಹೆಮ್ಮೆ ಪಡಬಹುದಾದ ಸಂಗತಿ.
ಶ್ರೀಯುತರು ಗಮಕ ಕಲೆಯ ಉಳಿವಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.

ಹಿರಿಯ ಗಮಕ ಗುರುಗಳಾಗಿ ಅವರು ಅಸಂಖ್ಯ ಶಿಷ್ಯವೃಂದಕ್ಕೆ ಗಮಕ ಗಾಯನವನ್ನ ಹೇಳಿಕೊಟ್ಟಿರುತ್ತಾರೆ.
ಆಕಾಶವಾಣಿ ( ಭದ್ರಾವತಿ) ಮತ್ತು ದೂರದರ್ಶನ ಚಂದನ ಕಾರ್ಯಕ್ರಮ ದಲ್ಲಿ ಅವರ ಗಮಕ ಗಾಯನ ಪ್ರಸಾರವಾಗಿವೆ.

ಕೇಶವ ಮೂರ್ತಿ ಅವರು ಗಮಕ ಗಾಯನ ಕ್ಷೇತ್ರದಲ್ಲಿ ಪರಿಣಿತಿ ಹೊಂದಿದವರು. ಇವರು 22 ಫೆಬ್ರವರಿ 1935 ರಂದು ಜನಿಸಿದರು. ಅವರು ಹೊಸಹಳ್ಳಿಯಲ್ಲಿರುವ ಗಮಕ ಕಲಾ ಪರಿಷತ್‌ನಿಂದ ಲಭ್ಯವಿರುವ ಗಮಕದ ಧ್ವನಿ ಟ್ರ್ಯಾಕ್‌ಗಳಲ್ಲಿ ಧ್ವನಿಮುದ್ರಣಗೊಂಡ ಹಿರಿಯ ಕಲಾವಿದರಲ್ಲಿ ಒಬ್ಬರು. ಅವರು ಪ್ರಾದೇಶಿಕ ದೂರದರ್ಶನ ಮತ್ತು ಉದಯ ಟಿವಿಯಲ್ಲಿ ಮತ್ತೂರು ಕೃಷ್ಣಮೂರ್ತಿ ಅವರೊಂದಿಗೆ ಕಾರ್ಯಕ್ರಮಗಳನ್ನು ನೀಡಿದ್ದಾರೆ.

ಇವರಿಗೆ ಹಲವಾರು ಸನ್ಮಾನಗಳು ಪ್ರಶಸ್ತಿಗಳು ಪುರಸ್ಕಾರಗಳು ಲಭಿಸಿವೆ.

ಶಾಂತಲಾ ನಾಟ್ಯಶ್ರೀ ಪುರಸ್ಕಾರ 1998, ಕುಮಾರವ್ಯಾಸ ಪ್ರಶಸ್ತಿ 2009, ರಾಜ್ಯೋತ್ಸವ ಪ್ರಶಸ್ತಿ 2009 ಇನ್ನೂ ಅನೇಕ ಪ್ರಶಸ್ತಿಗಳು ಲಭಿಸಿವೆ. ಈ ವರ್ಷ(2022) ಹೆಮ್ಮೆಯ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕೆ ಲೈವ್ ಮೀಡಿಯ ಶ್ರೀ ಎಚ್.ಆರ್.ಕೇಶವಮೂರ್ತಿ ಅವರಿಗೆ
ಹಾರ್ದಿಕವಾಗಿ ಅಭಿನಂದಿಸುತ್ತದೆ.

ಯುದ್ಧ ನಿಲ್ಲಿಸದ ಹೊರತು ಸಂಧಾನ ಅಸಾಧ್ಯ- ಝೆಲೆನ್ಸ್ಕಿ

0

ರಷ್ಯಾದ ಜೊತೆ ನಡೆಯುವ ಮಾತುಕತೆಯ ಭಾಗವಾಗಿ ಉಕ್ರೇನ್ ಒಂದು ತಟಸ್ಥ ನಿಲುವನ್ನು ತಳೆಯಲು ಸಿದ್ಧವಿದೆ. ಆದರೆ ಅಂಥದೊಂದು ಒಪ್ಪಂದವನ್ನು ಜನಮತ ಸಂಗ್ರಹಣೆಗೆ ಹಾಕಬೇಕೆಂದು ರವಿವಾರ ಬಿತ್ತರಗೊಂಡ ತಮ್ಮ ಹೇಳಿಕೆಯಲ್ಲಿ ಜೆಲೆನ್ಸ್ಕಿ ಹೇಳಿದ್ದಾರೆ.

ಸುಮಾರು ಎರಡು ವಾರಗಳ ಅವಧಿಯಲ್ಲಿ ಉಕ್ರೇನ್ ಮತ್ತು ರಷ್ಯಾ ಶಾಂತಿ ಮಾತುಕತೆ ನಡೆಸಲು ಮುಖಾಮುಖಿಯಗಲು ಸಿದ್ಧತೆ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲೇ ಹೇಳಿಕೆಯೊಂದನ್ನು ನೀಡಿರುವ ಅಮೆರಿಕಾದ ಅಧಿಕಾರಿಯೊಬ್ಬರು ಉಕ್ರೇನಲ್ಲಿ ಯುದ್ಧ ನಿಲ್ಲಿಸುವ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವ ಮನಸ್ಥಿತಿಯಲ್ಲಿ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಇಲ್ಲ ಎಂದು ಹೇಳಿದ್ದಾರೆ.

ನಾನು ಇದುವರೆಗೆ ಮನಗಂಡಿರುವ ಅಂಶಗಳ ಆಧಾರದಲ್ಲಿ ಹೇಳುವುದಾದರೆ, ಈ ಹಂತದಲ್ಲಿ ರಾಜಿಮಡಿಕೊಳ್ಳಲು ಪುಟಿನ್ ತಯಾರಿಲ್ಲ ಎಂದು ಹೆಸರು ಹೇಳಿಕೊಳ್ಳಲಿಚ್ಛಿಸದ ಯುಎಸ್ ಗೃಹ ಇಲಾಖೆಯ ಅಧಿಕಾರಿಯೊಬ್ಬರು ರಾಯಿಟರ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಕಳೆದ ವಾರದ ಅಂತ್ಯದಲ್ಲಿ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಜೆಲೆನ್ಸ್ಕಿ ಅವರು ಯುದ್ಧವನ್ನು ನಿಲ್ಲಿಸಲು ಸಾಧ್ಯವಾಗಬಹುದಾದ ಮಾರ್ಗ ರೂಪಿಸಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಉಕ್ರೇನ್‌ನ ಸಾರ್ವಭೌಮತ್ವವನ್ನು ಕಡಿಮೆ ಮಾಡುವ ಮತ್ತು ಉಕ್ರೇನಿಯನ್ ಅಧ್ಯಕ್ಷ ವೊಲೊದಿಮಿರ್ ಜೆಲೆನ್ಸ್ಕಿ ತೆಗೆದುಕೊಳ್ಳಬಹುದಾದ ನಿರ್ಧಾರಗಳ ಹಿನ್ನೆಲೆಯಲ್ಲಿ ಮುಖ್ಯವಾದ ಮಾತುಕತೆಗೆ ಅನುಕೂಲವಾಗುವಂಥ ಸರಳ ಮಾರ್ಗೋಪಾಯವನ್ನು ನಾವು ಪುಟಿನ್ ಗೆ ಸೂಚಿಸಿದಾಗ್ಯೂ ಯಾವುದೇ ಆಶಾಕಿರಣ ಮೂಡುವ ಲಕ್ಷಣಗಳು ಕಾಣುತ್ತಿಲ್ಲ, ಎಂದು ಯುಎಸ್ ಆಧಿಕಾರಿ ಹೇಳಿದ್ದಾರೆ.

ಟರ್ಕಿಯ ಅಧ್ಯಕ್ಷ ಅಧ್ಯಕ್ಷ ತಯ್ಯಿಪ್ ಎರ್ಡೊಗನ್ ಅವರು ಪುಟಿನ್ ಜೊತೆ ಭಾನುವಾರಂದು ಮಾತಕತೆ ನಡೆಸಿದ ಬಳಿಕ ಟರ್ಕಿಯ ರಾಜಧಾನಿ ಇಸ್ತಾನ್ಬುಲ್ ನಲ್ಲಿ ರಷ್ಯಾ ಮತ್ತು ಉಕ್ರೇನ್ ನಡುವೆ ಶಾಂತಿ ಮಾತುಕತೆಗಾಗಿ ವೇದಿಕೆ ಸಿದ್ಧವಾಗಿದೆ. ಆದರೆ ಅಲ್ಲಿ ನಡೆಯುವ ಮಾತುಕತೆಯಿಂದ ಯಾವುದೇ ಮಹತ್ತರ ಬದಲಾವಣೆ ಆಗುವ ನಿರೀಕ್ಷೆ ಇಲ್ಲವೆಂದು ಉಕ್ರೇನ್ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ರಷ್ಯಾದ ಜೊತೆ ನಡೆಯುವ ಮಾತುಕತೆಯ ಭಾಗವಾಗಿ ಉಕ್ರೇನ್ ಒಂದು ತಟಸ್ಥ ನಿಲುವನ್ನು ತಳೆಯಲು ಸಿದ್ಧವಿದೆ ಆದರೆ ಅಂಥದೊಂದು ಒಪ್ಪಂದವನ್ನು ತೃತೀಯ ಪಕ್ಷಗಳು ದೃಢೀಕರಿಸಬೇಕು ಮತ್ತು ಜನಮತ ಸಂಗ್ರಹಣೆಗೆ ಹಾಕಬೇಕೆಂದು ಭಾನುವಾರ ಬಿತ್ತರಗೊಂಡ ತಮ್ಮ ಹೇಳಿಕೆಯಲ್ಲಿ ಜೆಲೆನ್ಸ್ಕಿ ಹೇಳಿದ್ದಾರೆ.

ಪುಟಿನ್ ಸೇನೆಗಳು ಫೆಬ್ರುವರಿ 24 ರಂದು ಉಕ್ರೇನ್ ಮೇಲೆ ಆಕ್ರಮಣ ಆರಂಭಿಸಿದ ಒಂದು ತಿಂಗಳು ಬಳಿಕ ಜೆಲೆನ್ಸ್ಕಿ ಅವರು ರವಿವಾರದಂದು ರಷ್ಯಾದ ಪತ್ರಕರ್ತರೊಂದಿಗೆ ಸುಮಾರು 90 ನಿಮಿಷಗಳ ಕಾಲ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾತಾಡಿ, ರಷ್ಯಾ ಯುದ್ಧವಿರಾಮ ಘೋಷಿಸಿ ಮತ್ತು ಪಡೆಗಳನ್ನು ವಾಪಸ್ಸು ಕರೆಸಿಕೊಳ್ಳದ ಹೊರತು ಯಾವುದೇ ರೀತಿಯ ಶಾಂತಿ ಮಾತುಕತೆ ಮತ್ತು ಸಂಧಾನಕ್ಕೆ ಆಸ್ಪದವಿಲ್ಲ ಎಂದು ಹೇಳಿದ್ದಾರೆ. ಆದರೆ, ಮಾಸ್ಕೋ ಅಧಿಕಾರಿಗಳು ಉಕ್ರೇನ್ ಅಧ್ಯಕ್ಷನ ಜೊತೆ ನಡೆಸಿದ ಸಂದರ್ಶನ ಬಿತ್ತರಿಸಬಾರದೆಂದು ರಷ್ಯಾದ ಮಾಧ್ಯಮಗಳಿಗೆ ಕಟ್ಟೆಚ್ಚರಿಕೆ ನೀಡಿದ್ದಾರೆ.

ರಷ್ಯಾ ಆಕ್ರಮಿಸಿಕೊಂಡಿರುವ ಪ್ರಾಂತ್ಯಗಳನ್ನು ಬಲಪ್ರಯೋಗಿಸಿ ವಾಪಸ್ಸು ಪಡೆದುಕೊಳ್ಳುವ ಇರಾದೆ ತಮಗಿಲ್ಲ ಎಂದು ಸ್ಪಷ್ಟಪಡಿಸಿರುವ ಜೆಲೆನ್ಸ್ಕಿ ಅವರು, ತಾವೇನಾದರೂ ಹಾಗೆ ಮಾಡಲು ಮುಂದಾದರೆ ಅದು ಮೂರನೇ ವಿಶ್ವಯುದ್ಧಕ್ಕೆ ನಾಂದಿಯಾಗುತ್ತದೆ ಎಂದು ಹೇಳಿದ್ದಾರಲ್ಲದೆ, ಡೊನ್ಬಾಸ್ ಪೂರ್ವ ಪ್ರಾಂತ್ಯದಲ್ಲಿ ಒಂದು ರಾಜಿ ಸಂಧಾನ ತಮಗೆ ಬೇಕಾಗಿದೆ ಎಂದಿದ್ದಾರೆ. ಈ ಪ್ರಾಂತ್ಯವು 2014ರಿಂದ ರಷ್ಯಾ ಬೆಂಬಲಿತ ಸೇನೆಯ ವಶದಲ್ಲಿದೆ. ತನ್ನ ನೆರೆ ರಾಷ್ಟ್ರವನ್ನು ಸೇನಾಬಲಗಳಿಂದ ಮುಕ್ತಗೊಳಿಸುವ ಉದ್ದೇಶದಿಂದ ಉಕ್ರೇನ್‌ ಮೇಲೆ ವಿಶೇಷ ಸೇನಾ ಕಾರ್ಯಾಚರಣೆ ನಡೆಸುತ್ತಿರುವುದಾಗಿ ರಷ್ಯಾ ಹೇಳಿಕೊಂಡಿದೆ. ಉಕ್ರೇನ್ ಮತ್ತು ಅದರ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು ಇದನ್ನು ಅಪ್ರಚೋದಿತ ಆಕ್ರಮಣಕ್ಕೆ ನೆಪ ಎಂದು ಬಣ್ಣಿಸುತ್ತಿವೆ.

ಜಿಲ್ಲಾಧಿಕಾರಿಗಳಿಗೆ ಬೇಲೂರಿನ‌ ಜನಪರ ಸಂಘಟನೆಗಳ ಮನವಿ

0

ಬೇಲೂರು ಚನ್ನಕೇಶವ ಸ್ವಾಮಿ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ಹೇರದಂತೆ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿ ಜನಪರ ಸಂಘಟನೆಗಳ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಯಿತು.

ದೇವಸ್ಥಾನದ ಹೊರಗೆ ಪ್ರವಾಸಿಗರಿಗೆ ಮಾಹಿತಿ ನೀಡಿ, ಸಣ್ಣಪುಟ್ಟ ವ್ಯಾಪಾರ ನಡೆಸುವ ಮುಸ್ಲಿಂ ವ್ಯಾಪಾರಿಗಳಿಗೆ ವ್ಯಾಪಾರ, ವಹಿವಾಟು ನಡೆಸದಂತೆ ದೇವಸ್ಥಾನದ ಆಡಳಿತ ಮಂಡಳಿಯ ಅಧಿಕಾರಿಗಳು ಸೂಚಿಸಿದ್ದಾರೆ.

ಇದು ಅಸಾಂವಿಧಾನಿಕ ಕ್ರಮವಾಗಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.
ಬೇಲೂರು ಸೇರಿದಂತೆ ಜಿಲ್ಲೆಯ ಯಾವುದೇ ಭಾಗದಲ್ಲಿ ನಡೆಯುವ ಜಾತ್ರೆ, ಉತ್ಸವ, ಹಬ್ಬಗಳು ಮತ್ತು ಮಾರುಕಟ್ಟೆಗಳಲ್ಲಿ ಮುಸ್ಲಿಮರಿಗೆ ಆರ್ಥಿಕ ಚಟುವಟಿಕೆ ನಡೆಸಲು ಅವಕಾಶ ನೀಡಬೇಕು. ಹಾಗೂ ಅನಧಿಕೃತವಾಗಿ ನಿರ್ಬಂಧ ಹೇರಿ ಸಾಮಾಜಿಕ ಬಹಿಷ್ಕಾರ ಹಾಕದಂತೆ ಜಿಲ್ಲಾಡಳಿತ ಆದೇಶ ಹೊರಡಿಸಬೇಕು ಎಂದು
ಒತ್ತಾಯಿಸಿದರು.

ಸಾಮಾಜಿಕ ಮಾಧ್ಯಮಗಳಲ್ಲಿ ಮುಸ್ಲಿಮರ ವಿರುದ್ಧ ಸುಳ್ಳು ಮತ್ತು ಅಪಪ್ರಚಾರದ ಮೂಲಕ ಸಮಾಜದಲ್ಲಿ ಕೋಮು ದ್ವೇಷ ಹರಡುತ್ತಿರುವ ಸಂಘಟನೆಗಳು ಮತ್ತು ವ್ಯಕ್ತಿಗಳ ವಿರುದ್ಧ ಪೋಲೀಸರು ಕ್ರಮ ಜರುಗಿಸಬೇಕು. ಬೇಲೂರು ದೇವಸ್ಥಾನವನ್ನು ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸೇರಿಸುವ ಪ್ರಕ್ರಿಯೆ ಆರಂಭವಾಗಿದ್ದು, ಇಂತಹ ಸಂದರ್ಭದಲ್ಲಿ ಜಾಗತಿಕ ಮಟ್ಟದಲ್ಲಿ ದೇಶ ಮತ್ತು ಜಿಲ್ಲೆಗೆ ಮುಜುಗರ ತರುವಂತಹ ಇಂತಹ ಕೃತ್ಯಗಳು ನಡೆಯದಂತೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಆರ್‌. ಗಿರೀಶ್‌ ಅವರಿಗೆ ಮನವಿ ಸಲ್ಲಿಸಿದರು.

ಧರಣಿಯಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಧರ್ಮೇಶ್, ದಲಿತ ಸಂಘರ್ಷ ಸಮಿತಿ ಮುಖಂಡರಾದ ಎಚ್.ಕೆ. ಸಂದೇಶ್, ರಾಜಶೇಖರ್, ಕೃಷ್ಣದಾಸ್, ಕಾಂಗ್ರೆಸ್‌ ಮುಖಂಡ ಅಬ್ದುಲ್ ಸಮದ್, ಚಿತ್ರ ಕಲಾವಿದ ಕೆ.ಟಿ. ಶಿವಪ್ರಸಾದ್, ಹಿರಿಯ ನಾಗರಿಕರ ವೇದಿಕೆ ಬಿ.ಕೆ.ಮಂಜುನಾಥ್, ಪತ್ರಕರ್ತ ವೆಂಕಟೇಶ್, ಎಚ್‌.ಎಸ್‌.ನಾಗರಾಜು, ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಎಂ.ಜಿ.ಪೃಥ್ವಿ, ಕೆ.ಪಿ.ಆರ್‌.ಎಸ್‌ ಜಿಲ್ಲಾ ಅಧ್ಯಕ್ಷ ಎಚ್.ಆರ್.ನವೀನ್ ಕುಮಾರ್, ಮುಬಾಶಿರ್‌ ಅಹಮದ್‌, ಕೆಪಿಸಿಸಿ ಸದಸ್ಯ ಎಚ್‌.ಕೆ.ಮಹೇಶ್‌, ಕಾಂಗ್ರೆಸ್‌ ಮಹಿಳಾ ಘಟಕದ ಅಧ್ಯಕ್ಷೆ ತಾರಾಚಂದನ್‌, ಲೇಖಕಿ ಸುವರ್ಣ ಶಿವಪ್ರಸಾದ್ ಪಾಲ್ಗೊಂಡಿದ್ದರು.

ಇಸ್ರೆಲ್ ಪ್ರಧಾನಿಗೆ ಕೋವಿಡ್ ಪ್ರಧಾನಿ ರಾಜ್ಯ ಪ್ರವಾಸ ರದ್ದು

0

ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಕರ್ನಾಟಕ ಭೇಟಿ ರದ್ದಾಗಿದೆ.
ಏಪ್ರಿಲ್ 5ರಂದು ಉಭಯ ನಾಯಕರು ರಾಜ್ಯಕ್ಕೆ ಆಗಮಿಸಬೇಕಿತ್ತು.

ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್‌ಗೆ ಕೋವಿಡ್ ಸೋಂಕಿ ತಗುಲಿರುವ ಕಾರಣ ಅವರ ಭಾರತ ಭೇಟಿ ರದ್ದಾಗಿದೆ. ಆದ್ದರಿಂದ ನಫ್ತಾಲಿ ಬೆನೆಟ್‌ ಜೊತೆಗಿನ ಮೋದಿ ಕರ್ನಾಟಕ ಪ್ರವಾಸವೂ ರದ್ದುಗೊಂಡಿದೆ.

ಪ್ರಧಾನಮಂತ್ರಿಗಳ ಕಾರ್ಯಾಲಯ ಈ ಕುರಿತು ಕರ್ನಾಟಕ ಸರ್ಕಾರಕ್ಕೆ ಮಾಹಿತಿ ನೀಡಿದೆ. ಏಪ್ರಿಲ್ 5ರಂದು ನಫ್ತಾಲಿ ಬೆನೆಟ್ ಮತ್ತು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಭೇಟಿ ನೀಡಬೇಕಿತ್ತು.
ಬೆಂಗಳೂರಿನಲ್ಲಿ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಉದ್ಘಾಟಿಸಬೇಕಿತ್ತು. ಬೆಂಗಳೂರು ನಗರದ ಬಹು ನಿರೀಕ್ಷಿತ ಸಬ್ ಅರ್ಬನ್ ರೈಲು ಯೋಜನೆಗೆ ಶಂಕು ಸ್ಥಾಪನೆ ಮಾಡಬೇಕಿತ್ತು.

ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಉದ್ಘಾಟನಾ ಕಾರ್ಯಕ್ರಮ 2021ರ ಡಿಸೆಂಬರ್ 6ರಂದು ಮೊದಲು ನಿಗದಿಯಾಗಿತ್ತು. ಆಗಲೂ ಉದ್ಘಾಟನೆಗೆ ನರೇಂದ್ರ ಮೋದಿ ಆಗಮಿಸಬೇಕಿತ್ತು. ಆದರೆ ಆ ಕಾರ್ಯಕ್ರಮ ರದ್ದಾಗಿತ್ತು.
ಬೆಂಗಳೂರು ಸಬ್ ಅರ್ಬನ್ ರೈಲು ಬೆಂಗಳೂರು ನಗರದ ಬಹು ನಿರೀಕ್ಷಿತ ಸಬ್ ಅರ್ಬನ್ ರೈಲು ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಶಂಕು ಸ್ಥಾಪನೆ ಮಾಡಬೇಕಿತ್ತು.

ಸೋಮವಾರ ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್‌ಗೆ ಕೋವಿಡ್ ಸೋಂಕು ತಗುಲಿದ ಹಿನ್ನಲೆಯಲ್ಲಿ ಏಪ್ರಿಲ್ 3ರ ಭಾರತ ಭೇಟಿಯನ್ನು ಅವರು ರದ್ದುಗೊಳಿಸಿದ್ದಾರೆ. ಕಳೆದ ವರ್ಷ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಬಳಿಕ ಮೊದಲ ಬಾರಿಗೆ ಅವರು ಭಾರತ ಪ್ರವಾಸ ಕೈಗೊಂಡಿದ್ದರು.

ತೀರ್ಥಹಳ್ಳಿ- ಶಿವಮೊಗ್ಗ ಹೆದ್ದಾರಿ ಕಾಮಗಾರಿಗೆ ಅನುಮತಿ- ಜ್ಞಾನೇಂದ್ರ

0

ತೀರ್ಥಹಳ್ಳಿ-ಶಿವಮೊಗ್ಗ ರಾಷ್ಟೀಯ ಹೆದ್ದಾರಿ ಯೋಜನೆಯ ಎರಡು ಕಾಮಗಾರಿಗಳಿಗೆ ಕೇಂದ್ರ ಸರ್ಕಾರ 156 ಕೋಟಿ ರೂ. ಮಂಜೂರು ಮಾಡಿದೆ.

ಈ ಕುರಿತು ಮಾಹಿತಿ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ತೀರ್ಥಹಳ್ಳಿ-ಶಿವಮೊಗ್ಗ ರಾಷ್ಟೀಯ ಹೆದ್ದಾರಿಯಲ್ಲಿ ಬರುವ ಭಾರತೀಪುರ ಹೇರ್ ಪಿನ್ ತಿರುವನ್ನು ತಪ್ಪಿಸಿ, ಅತ್ಯಾಧುನಿಕ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ , ಕೇಂದ್ರ ಸರಕಾರದ ಹೆದ್ದಾರಿ ಸಚಿವಾಲಯ ಅನುಮತಿ ನೀಡಿದೆ.

58 ಕೋಟಿ ರೂಪಾಯಿಗಳ ವೆಚ್ಚದ ಈ ಕಾಮಗಾರಿಯನ್ನು ಸದ್ಯದಲ್ಲಿಯೇ ಎತ್ತಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ಮೇಲ್ಸೇತುವೆ ನಿರ್ಮಾಣದ ಅಗತ್ಯದ ಕುರಿತು ಈ ಹಿಂದೆ ಸಲ್ಲಿಸಿದ ಮನವಿಗೆ ಸ್ಪಂದಿಸಿ ಅನುದಾನ ಬಿಡುಗಡೆಯಾಗಿದೆ. ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ ಅವರೂ ಸಹ ಮೇಲ್ಸೇತುವೆ ಅಗತ್ಯದ ಬಗ್ಗೆ ಕೇಂದ್ರ ಸಚಿವರ ಜೊತೆ ಸಮಾಲೋಚಿಸಿದ್ದರು. ಹಾಗೂ ಯೋಜನೆಯನ್ನು ಕಾರ್ಯಗತಗೊಳಿಸಲು ಕೋರಿದ್ದರು ಎಂದೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಿಳಿಸಿದ್ದಾರೆ.

ಭಾರತೀಪುರ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯಷ್ಟೇ ಅಲ್ಲದೆ ತೀರ್ಥಹಳ್ಳಿ ತಾಲೂಕು ಮೇಗರವಳ್ಳಿಯಿಂದ, ಆಗುಂಬೆವರೆಗೆ 14.77 ಕಿಲೊಮೀಟರ್ ರಾಷ್ಟ್ರೀಯ ಹೆದ್ದಾರಿ 169-A ಗೆ ದ್ವಿಪಥ ಪಿಎಸ್‌, ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲು ರೂ 96.20 ಕೋಟಿಗೆ ಅನುಮೋದನೆ ಸಹ ನೀಡಲಾಗಿದೆ. ಕಾಮಗಾರಿ ಚುರುಕಿಗೆ ಸಹಾಯವಾಗುವುದು ಎಂದೂ ಸಚಿವರು ತಿಳಿಸಿದ್ದಾರೆ.

ಈ ಎರಡೂ ಕಾಮಗಾರಿಗಳಿಗೆ ಅನುಮತಿ ನೀಡಿ ಅನುದಾನ ಬಿಡುಗಡೆ ಮಾಡಿರುವ ಪ್ರಧಾನಿ ನರೇಂದ್ರ ಮೋದೀಜಿ, ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರಿಗೆ, ಹಾಗೂ ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ ಧನ್ಯವಾದ ತಿಳಿಸಿದ್ದೇನೆ ಎಂದು ಹೇಳಿದ್ದಾರೆ.

ಒಂದು ತಿಂಗಳೊಳಗೆ ಬಿ.ಪಿ.ಎಲ್. ಪಡಿತರ ಚೀಟಿ ವಿತರಣೆ- ಉಮೇಶ್ ಕತ್ತಿ

0

ರಾಜ್ಯದಲ್ಲಿ ಹೊಸದಾಗಿ ಆದ್ಯತಾ ಪಡಿತರ ಚೀಟಿ (ಬಿಪಿಎಲ್ ಕಾರ್ಡ್) ಬಯಸಿ ಅರ್ಜಿ ಸಲ್ಲಿಸಿದವರ ಪೈಕಿ ಮನೆ ಮನೆ ಸಮೀಕ್ಷೆ ಪೂರ್ಣಗೊಂಡ 4.25 ಲಕ್ಷ ಅರ್ಜಿದಾರರ ಜೈವಿಕ ದತ್ತಾಂಶ ಸಂಗ್ರಹಿಸಿ, ಒಂದು ತಿಂಗಳೊಳಗೆ ಪಡಿತರ ಚೀಟಿ ವಿತರಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ಭರವಸೆ ನೀಡಿದರು.

ವಿಧಾನಪರಿಷತ್​ನಲ್ಲಿ ಕಾಂಗ್ರೆಸ್​ನ ಯು.ಬಿ.ವೆಂಕಟೇಶ್ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ ಮೂರು ವರ್ಷ (2022ರ ಫೆಬ್ರವರಿ ಅಂತ್ಯ)ಗಳಲ್ಲಿ ಆದ್ಯತಾ ಪಡಿತರ ಚೀಟಿ ಕೋರಿ ಒಟ್ಟು 15,53,745 ಅರ್ಜಿಗಳು ಸ್ವೀಕೃತವಾಗಿವೆ.
ಇದರಲ್ಲಿ 8,03,782 ಅರ್ಹ ಅರ್ಜಿದಾರರಿಗೆ ಬಿಪಿಎಲ್ ಪಡಿತರ ಕಾರ್ಡ್ ವಿತರಿಸಲಾಗಿದೆ ಎಂದರು.

ಕೊರೊನಾ ಹಾವಳಿ ಕಾರಣಕ್ಕೆ ಮನೆ ಮನೆ ಸಮೀಕ್ಷೆ, ಜೈವಿಕ ತಂತ್ರಾಂಶ ಸಂಗ್ರಹ ಸ್ಥಗಿತವಾಗಿತ್ತು. ಇದರಿಂದ ಪಡಿತರ ಚೀಟಿ ವಿತರಣೆ ವಿಳಂಬವಾಗಿದೆ ಎಂದರು.

ಉಳಿದ ಅರ್ಜಿದಾರರ ಮನೆ ಮನೆ ಸಮೀಕ್ಷೆ, ದತ್ತಾಂಶ ಸಂಗ್ರಹ ಕಾರ್ಯ ಮೂರು ತಿಂಗಳಲ್ಲಿ ಪೂರ್ಣಗೊಳಿಸಿ ಬಿಪಿಎಲ್ ಕಾರ್ಡ್ ನೀಡಲಾಗುವುದು. ಇಲಾಖೆ ಕೈಗೊಂಡ ವಿಶೇಷ ಕ್ರಮದಿಂದ ಆದಾಯ ತೆರಿಗೆ ಪಾವತಿದಾರರು, ಸರ್ಕಾರಿ ನೌಕರರು ಉಳಿದವರ ಹೊಂದಿದ್ದ 13 ಲಕ್ಷ ಬಿಪಿಎಲ್ ಪಡಿತರ ಚೀಟಿಗಳನ್ನು ವಾಪಸ್ ಪಡೆಯಲಾಗಿದೆ ಎಂಬ ಕತ್ತಿ ಮಾಹಿತಿ ನೀಡಿದರು.

ಕಚ್ಚಾ ತೈಲ, ಖಾದ್ಯ ತೈಲ ಹಾಗೂ ಕಬ್ಬಿಣದ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆ ಅವಲಂಬಿತವಾದ ಕಾರಣ ಮುಕ್ತ ಮಾರುಕಟ್ಟೆಯಲ್ಲಿ ಇವುಗಳ ಬೆಲೆ ನಿಯಂತ್ರಣ ಅಸಾಧ್ಯ. ಆದರೆ ಕೃತಕ ಅಭಾವ ಸೃಷ್ಟಿ, ಅಧಿಕ ಬೆಲೆಗೆ ಮಾರಾಟ ತಡೆಗೆ ಅಗತ್ಯ ಕ್ರಮವಹಿಸಲಾಗಿದೆ ಎಂದು ಕಾಂಗ್ರೆಸ್​ನ ಎಸ್.ರವಿ ಪ್ರಶ್ನೆಗೆ ಉಮೇಶ್ ಕತ್ತಿ ಉತ್ತರಿಸಿದರು.

ಖಾದ್ಯತೈಲ ಅಕ್ರಮ ದಾಸ್ತಾನು, ಅಧಿಕ ಬೆಲೆಗೆ ಮಾರಾಟ ನಿಯಂತ್ರಣಕ್ಕಾಗಿ ಕಳೆದ 1,368 ತಪಾಸಣೆಗಳಾಗಿವೆ. ಹೆಚ್ಚಿನ ಬೆಲೆಗೆ ಮಾರಾಟಕ್ಕೆ ಸಂಬಂಧಿಸಿ ಇದುವರೆಗೆ 75 ಮೊಕದ್ದಮೆಗಳನ್ನು ಹೂಡಿದ್ದು, 29 ದಾವೆಗಳಲ್ಲಿ 2,96,000 ರೂ. ದಂಡ ವಸೂಲಿ ಮಾಡಲಾಗಿದೆ. ಡಿಸೇಲ್ ಹಾಗೂ ಪೆಟ್ರೋಲ್ ಮೇಲೆ ರಾಜ್ಯ ವಿಧಿಸುತ್ತಿರುವ ಸೆಸ್ ಇಳಿಕೆ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ಸೆಸ್ ಪರಿಷ್ಕರಣೆ ವಿಷಯವು ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟದ್ದು ಎಂದು ಉಮೇಶ್ ಕತ್ತಿ ಸ್ಪಷ್ಟಪಡಿಸಿದರು.

ಸ್ವಿಸ್ ಓಪನ್ ಟೆನಿಸ್ ಗೆದ್ದ ಪಿ.ವಿ.ಸಿಂಧು

0

ಭಾರತದ ಮುಂಚೂಣಿ ಷಟ್ಲರ್ ಪಿ.ವಿ. ಸಿಂಧೂ ಸ್ವಿಸ್ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ನಲ್ಲಿ ಚಾಂಪಿಯನ್ ಆಗಿದ್ದಾರೆ. ಇದರೊಂದಿಗೆ ಸ್ವಿಸ್ ಓಪನ್ ಪ್ರಶಸ್ತಿ ಗೆದ್ದ ಭಾರತದ ಎರಡನೇ ಆಟಗಾರ್ತಿ ಎನಿಸಿಕೊಂಡಿದ್ದಾರೆ.

ಇದಕ್ಕೂ ಮುಂಚೆ 2011 ಮತ್ತು 2012ರಲ್ಲಿ ಸೈನಾ ನೆಹ್ವಾಲ್ ಚಾಂಪಿಯನ್ ಆಗಿದ್ದರು. ಇದು ಸಿಂಧುಗೆ ಈ ವರ್ಷ ದೊರೆತ ಎರಡನೇ ಸೂಪರ್ 300 ಟ್ರೋಫಿ. ವಿಶ್ವದ ಏಳನೇ ಶ್ರೇಯಾಂಕದ ಆಟಗಾರ್ತಿ ಜನವರಿಯಲ್ಲಿ ಸೈಯದ್ ಮೋದಿ ಇಂಟರ್ನ್ಯಾಷನಲ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದರು.

ನಿನ್ನೆ ನಡೆದ ಫೈನಲಿನಲ್ಲಿ 26 ವರ್ಷದ ಹೈದರಾಬಾದ್ ತರುಣಿ ಥೈಲ್ಯಾಂಡ್ ನ ಬುಸನಾನ್ ಒಂಗ್ ಬಮ್ರಂಗ್ ಫಾನ್ ವಿರುದ್ಧ 21-16,21-8 ಗೇಮ್ ಗಳಿಂದ ಗೆದ್ದಿದ್ದಾರೆ. ಈ ಜಯದೊಂದಿಗೆ ಬುಸನಾನ್ ವಿರುದ್ಧದ ತಮ್ಮ ಜಯಾಪಾಜಯ ದಾಖಲೆಯನ್ನು ಸಿಂಧೂ 16-1 ಕ್ಕೆ ಹಿಗ್ಗಿಸಿ ಕೊಂಡಿದ್ದಾರೆ.

ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕಿಳಿದ 2 ಒಲಿಂಪಿಕ್ಸ್ ಪದಕಗಳ ಒಡತಿ ನಿರಂತರವಾಗಿ ಅಂಕ ಕಲೆ ಹಾಕುತ್ತಲೇ ಸಾಗಿದರು. ಆದರೆ, ಥೈಲ್ಯಾಂಡ್ ಆಟಗಾರ್ತಿ ಮರು ಹೋರಾಟ ಸಂಘಟಿಸಿ 9-9 ರ ಸಮಬಲ ಸಾಧಿಸಿದ್ದಾರೆ. ಆನಂತರ 16-15ರ ಮೇಲುಗೈ ಪಡೆದಿದ್ದಾರೆ. ಅಷ್ಟರಲ್ಲಿ ಲಯಕ್ಕೆ ಮರಳಿದ ಸಿಂಧೂ 5 ಅಂಕ ಕಲೆಹಾಕಿ ಮೊದಲ ಗೇಮ್ ತಮ್ಮದಾಗಿಸಿಕೊಂಡರು. ಇಷ್ಟಲ್ಲದೆ, ಗೇಮ್ ನಲ್ಲಿ ಇನ್ನಷ್ಟು ಆಕ್ರಮಣಕಾರಿಯಾಗಿ ಆಟವಾಡಿ 21-8 ರಿಂದ ಗೆಲುವು ಸಾಧಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.


Latest News on WhatsApp

Send a Whatsapp message ‘Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಶಿವಮೊಗ್ಗದಲ್ಲಿ ಹತ್ತನೇ ತರಗತಿ ಪರೀಕ್ಷೆಗೆ ಸಮ್ಮಿಶ್ರ ಪ್ರತಿಕ್ರಿಯೆ

0

ಇಂದಿನಿಂದ ರಾಜ್ಯದ್ಯಂತ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಆರಂಭಗೊಂಡಿದೆ. ಮಾರ್ಚ್ 28 ರಿಂದ ಏಪ್ರಿಲ್ 11ರ ವರೆಗೆ ಪರೀಕ್ಷೆಗಳು ನಡೆಯಲಿವೆ. ಕಳೆದ ಎರಡು ವರ್ಷಗಳು ಕೂಡ ಕೊರೋನಾ ಭೀತಿಯಿಂದಲೇ ಪರೀಕ್ಷೆಗಳು ನಡೆದಿದ್ದವು. ಆದರೆ ಈ ವರ್ಷ ಮೂರನೇ ಅಲೆಯ ಪರಿಣಾಮ ಅಷ್ಟರಮಟ್ಟಿಗೆ ಇಲ್ಲವಾದ್ದರಿಂದ ಪರೀಕ್ಷೆಗಳು ಮೊದಲಿನಂತೆಯೇ ನಡೆಯುತ್ತಿದೆ.

ಹೈಕೋರ್ಟ್ ಆದೇಶದಲ್ಲಿ ಶಾಲೆಗಳಿಗೆ ವಿದ್ಯಾರ್ಥಿಗಳು ಬರುವಾಗ ಕಡ್ಡಾಯವಾಗಿ ಸಮವಸ್ತ್ರ ಧರಿಸಿ ಕುಳಿತುಕೊಳ್ಳಬೇಕು ಎಂದು ತಿಳಿಸಿದೆ. ಇಂದು ಸಹ ಅನೇಕ ಕಡೆಗಳಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡು ಬಂದು ಪರೀಕ್ಷೆಗೆ ಕೂರದೆ ತಮ್ಮ ಮನೆಗಳಿಗೆ ಹಿಂದಿರುಗಿದ್ದಾರೆ.

ಆದರೆ ಶಿವಮೊಗ್ಗದ ನಗರದಲ್ಲಿ ಹಿಜಾಬ್ ಅನ್ನು ಬದಿಗಿಟ್ಟು, ಶಿಕ್ಷಣವೇ ಮುಖ್ಯ ಎಂದು ಅನೇಕ ವಿದ್ಯಾರ್ಥಿನಿಯರು ಪರೀಕ್ಷೆಯನ್ನು ಮುಗಿಸಿ ಕೊಠಡಿಯಿಂದ ಹೊರ ಬಂದಿದ್ದಾರೆ.

ಪರೀಕ್ಷೆ ಕೇಂದ್ರಗಳಾದ ಸರ್ಕಾರಿ ಪ್ರೌಢ ಶಾಲೆ ದುರ್ಗಿಗುಡಿ, ಕಸ್ತೂರಬಾ ಬಾಲಿಕಾ ಪದವಿ ಪೂರ್ವ ಕಾಲೇಜು ಇನ್ನೂ ಅನೇಕ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗಳು ಯಾವುದೇ ಅಡ್ಡಿ ಆತಂಕವಿಲ್ಲದೆ ಸರಾಗವಾಗಿ ನಡೆದಿದೆ.

ಅನೇಕ ಪೋಷಕರು ಪರೀಕ್ಷಾ ಕೇಂದ್ರಗಳ ಎದುರು ಮಕ್ಕಳಿಗೋಸ್ಕರ ಕಾದುನಿಂತಿದ್ದರು.

ಪರೀಕ್ಷೆ ಮುಗಿಸಿ ಬಂದ ವಿದ್ಯಾರ್ಥಿಗಳು ನಮ್ಮ ಕೆ ಲೈವ್ ನೊಂದಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಇಂದಿನ ಪರೀಕ್ಷೆ ಸುಲಭವಾಗಿತ್ತು. ನಾವು ಚೆನ್ನಾಗಿ ಬರೆದಿದ್ದೇವೆ ಎಂದು ನೂರ್ಪಾಷ್ ವಿದ್ಯಾರ್ಥಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಪರೀಕ್ಷೆ ತುಂಬಾ ಚೆನ್ನಾಗಿತ್ತು. ನಾನು ಎಲ್ಲಾ ಪ್ರಶ್ನೆಗಳನ್ನು ಉತ್ತರಿಸಿದ್ದೇನೆ ಎಂದು ಗಗನ್ ಎಂಬ ವಿದ್ಯಾರ್ಥಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಓರ್ವ ವಿದ್ಯಾರ್ಥಿನಿ ತನ್ನ ಹೆಸರು ಹೇಳದೆ, ಪರೀಕ್ಷೆಯ ಕುರಿತು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಪ್ರಶ್ನೆ ಪತ್ರಿಕೆ ಕೊಟ್ಟಾಗ ಮೊದಲು ಭಯವಾಗಿತ್ತು. ನಂತರದಲ್ಲಿ ಪರೀಕ್ಷೆಯನ್ನು ಚೆನ್ನಾಗಿ ಬರೆದಿದ್ದೇನೆ ಎಂದು ಮುಸ್ಲಿಂ ವಿದ್ಯಾರ್ಥಿನಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಓರ್ವ ಪೋಷಕರು ಸಹ ಮಕ್ಕಳು ಪರೀಕ್ಷೆ ಬರೆಯುವಾಗ ಯಾವುದೇ ಅಡ್ಡಿ ಆತಂಕಗಳಿಲ್ಲದೆ ಪರೀಕ್ಷೆ ಸರಾಗವಾಗಿ ನಡೆಯಲಿ ಎಂದು ಅಭಿಪ್ರಾಯಪಟ್ಟಿದ್ದಾರೆ.

ಎಸ್ ಎಸ್ ಎಲ್ ಸಿ ಎಂಬುದು ವಿದ್ಯಾರ್ಥಿ ಜೀವನದ ಪ್ರಮುಖವಾದಂತಹ ಘಟ್ಟವಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಮುಂಬರುವ ಪರೀಕ್ಷೆಗಳನ್ನು ಯಾವುದೇ ಅಡ್ಡಿ ಆತಂಕವಿಲ್ಲದೆ ಚೆನ್ನಾಗಿ ಬರೆದು ಉತ್ತೀರ್ಣರಾಗಲಿ ಎಂದು ನಮ್ಮ ಕೆ ಲೈವ್ ಮಾಧ್ಯಮ ಹರಸಿ ಹಾರೈಸುತ್ತದೆ

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.


Latest News on WhatsApp

Send a Whatsapp message ‘Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

.

ಗೆಲ್ಲುವ ಮೊತ್ತವಿದ್ದರೂ ಆರ್ ಸಿಬಿಗೆ ಸೋಲಿನ ರುಚಿ

0

ಬ್ಯಾಟಿಂಗ್ನಲ್ಲಿ ಭರ್ಜರಿ ಪ್ರದರ್ಶನ ನೀಡಿದ ಹೊರತಾಗಿಯೂ ಪ್ರಖರ ಬೌಲಿಂಗ್ ದಾಳಿ ನಡೆಸಲು ವಿಫಲಗೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ 15ನೇ ಆವೃತ್ತಿಯ ತನ್ನ ಪ್ರಥಮ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಐದು ವಿಕೆಟ್ಗಳ ಸೋಲನ್ನು
ಅನುಭವಿಸಿದೆ.

ಮುಂಬೈಯ ಡಿವೈ ಪಾಟೀಲ್ ಸ್ಟೇಡಿಯಂ ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಗೆ ಆಹ್ವಾನ ಪಡೆದ ಆರ್ ಸಿಬಿ ತಂಡ, ಹಿರಿಯ ಆಟಗಾರರ ಮಿಂಚಿನ ಪ್ರದರ್ಶನದ ನೆರವಿನಿಂದ 205 ರನ್ ಗಳ ಬೃಹತ್ ಮೊತ್ತ ಪಡೆದುಕೊಂಡಿದೆ. ಇದಕ್ಕೆ ಉತ್ತರವಾಗಿ ಬ್ಯಾಟ್ ಮಾಡಿದ ಮಯಾಂಕ್ ಅಗರ್ವಾಲ್ ನೇತೃತ್ವದ ಪಂಜಾಬ್ ಕಿಂಗ್ಸ್ 19 ಓವರುಗಳಲ್ಲಿ 5 ವಿಕೆಟ್ ಕಳೆದುಕೊಂಡು 208 ರನ್ ಪಡೆದು ವಿಜಯದ ಪತಾಕೆ ಹಾರಿಸಿದೆ.

ದೊಡ್ಡ ಮೊತ್ತ ಬೆನ್ನಟ್ಟಲು ಆರಂಭಿಸಿದ ಪಂಜಾಬ್ ಪರ ಆರಂಭಿಕರಾದ ಮಯಾಂಕ್ ಅಗರ್ವಾಲ್ 32, ಶಿಖರ್ ಧವನ್ 43, ಭದ್ರ ಅಡಿಪಾಯ ಹಾಕಿಕೊಟ್ಟರೆ, ಭಾನುಕ ರಜಪಕ್ಸ್ 43, ಮಧ್ಯಮ ಕ್ರಮಾಂಕದಲ್ಲಿ ರನ್ ಗತಿ ಕಾಪಾಡಿಕೊಂಡರು. ಕೊನೆಯ ಹಂತದಲ್ಲಿ ಒಡೆನ್ ಸ್ಮಿತ್ 8 ಎಸೆತಗಳಲ್ಲಿ 25 ರನ್ ಬಾರಿಸಿದರೆ,ಶಾರುಖ್ ಖಾನ್ 20 ಎಸೆತಗಳಲ್ಲಿ 24ರನ್ ಬಾರಿಸಿ ಪಂಜಾಬ್ಗೆ ಗೆಲುವು ತಂದು ಕೊಟ್ಟರು.

ಗೇಮ್ ಪ್ಲಾನ್ ಅಂತೆ ದೊಡ್ಡ ಮೊತ್ತಕ್ಕೆ ಪೂರಕ ರನ್ ರೇಟ್ ಕಾಯ್ದುಕೊಂಡ ಪಂಜಾಬ್ ಕಿಂಗ್ಸ್ ಅರ್ಹ ಗೆಲುವಿಗೆ ಪಾತ್ರವಾಯಿತು. ಆರ್ ಸಿ ಬಿ ಬೌಲರ್ ಮೊಹಮ್ಮದ್ ಸಿರಾಜ್ ಎರಡು ವಿಕೆಟ್ ಪಡೆದರೂ ಸಹ 59 ರನ್ ಬಿಟ್ಟುಕೊಟ್ಟು ದುಬಾರಿ ಎನಿಸಿಕೊಂಡರು.

ಅನುಜ್ ರವತ್ ಹಾಗೂ ಪ್ಲೇಸಿಸ್ ಮೂಲಕ ಆರ್ಸಿಬಿ ಉತ್ತಮ ಆರಂಭ ಪಡೆದುಕೊಂಡಿತು. ಈ ಜೋಡಿ ಮೊದಲ ವಿಕೆಟ್ ಗೆ 7 ಓವರ್ಗಳಲ್ಲಿ 50 ರನ್ ಪಡೆದುಕೊಂಡಿತು. ಆದರೆ ರಾಹುಲ್ ಚಹಾರ್ ಸ್ಪಿನ್ ಮೋಡಿಗೆ ರಾವತ್ ಬೌಲ್ಡ್ ಆಗಿ ಹೊರನಡೆದರು. ಅನಂತರ ಕ್ರಿಸ್ ಗೆ ಬಂದ ಮಾಜಿ ನಾಯಕ ವಿರಾಟ್ ಕೊಹ್ಲಿ ಸರಾಗವಾಗಿ ಬ್ಯಾಟ್ ಬೀಸಲಾರಂಭಿಸಿದರು. ಆಕಡೆ ಪ್ಲೇಸಿಸ್ ಕೂಡ ಮೈದಾನದ ಸುತ್ತಲೂ ಬೌಂಡರಿ ಸಿಕ್ಸರ್ ಗಳ ಮಳೆ ಸುರಿಸಿದರು. ಈ ಜೋಡಿ ಬೋಡೆನ್ ಸ್ಮಿತ್ ಎಸೆದ ಇನಿಂಗ್ಸ ನ 13ನೇ ಓವರ್ ನಲ್ಲಿ 21 ರನ್ ಚಚ್ಚಿತು. ಕೊಹ್ಲಿ ಹಾಗೂ ಕಾರ್ತಿಕ್ ಜೋಡಿ ಕೊನೆಯ 2.5 ಓವರ್ಗಳಲ್ಲಿ 37 ರನ್ ಬಾರಿಸಿದ ರಿಂದ ತಂಡದ ಮೊತ್ತ ದ್ವಿಶತಕದ ಗಡಿ ದಾಟಿತು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.


Latest News on WhatsApp

This image has an empty alt attribute; its file name is GET-FREE-NEWS-UPDATES-ON-WHATSAPP-1.png
Send a Whatsapp message ‘Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

This image has an empty alt attribute; its file name is Untitled_design__8_-removebg-preview-1.png

KLIVE Android App on Google Play Store

This image has an empty alt attribute; its file name is GET-FREE-NEWS-UPDATES-ON-WHATSAPP.png

Download the most loved Klive App for your Android phone or tablet.

ಉಕ್ರೇನ್ ಟ್ಟಿಟರ್ ಖಾತೆಯಲ್ಲಿದ್ದ ಕವಿತೆಯಂತಹ ಸಂದೇಶ

0

ಗೆಲುವು ನಮ್ಮದು….
ನೂತನ ನಗರಗಳ ನಿರ್ಮಾಣ.
ಹೊಸ ಕನಸುಗಳಿವೆ.
ಹೊಸ ಕತೆಗಳೂ ಇವೆ
ಇವಕ್ಕೆ ಬೇಡ ಯಾವುದೇ ಅನುಮಾನ…
…ಝೆಲೆನ್ಸ್ಕಿ

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.


Latest News on WhatsApp

Send a Whatsapp message ‘Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.