Thursday, February 19, 2026
Thursday, February 19, 2026
Home Blog Page 1700

ಸಂಸ್ಕೃತಿ ಇಲಾಖೆಯ ‌ಆಶ್ರಯದಲ್ಲೇ ಕೆಳದಿ ಉತ್ಸವ ನಡೆಯಲಿ

0

ಸಾಗರ ತಾಲೂಕಿನ ಕೆಳದಿ ಗ್ರಾಮದಲ್ಲಿ ಫೆಬ್ರುವರಿ 27ರಂದು ಕೆಳದಿ ರಾಣಿ ಚೆನ್ನಮ್ಮ ಉತ್ಸವ ಆಚರಿಸಲು ನಿರ್ಧರಿಸಲಾಗಿದೆ. ಪ್ರತಿವರ್ಷ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಸರ್ಕಾರಿ ಕಾರ್ಯಕ್ರಮವನ್ನಾಗಿ ಉತ್ಸವ ನಡೆಯಬೇಕೆಂದು ಎಂಎಸ್ಐಎಲ್ ಅಧ್ಯಕ್ಷ ಹಾಗೂ ಶಾಸಕ ಎಚ್. ಹಾಲಪ್ಪನವರು ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ದೀರ್ಘಕಾಲ ಮಹಿಳೆ ರಾಜ್ಯಭಾರ ನಿರ್ವಹಿಸಿದ ವಿಶೇಷತೆಗೆ ಕಾರಣವಾದ ರಾಣಿ ಚೆನ್ನಮ್ಮ ಹಾಗೂ ಕೆಳದಿ ಅರಸರ ಕೊಡುಗೆಗಳು ಮಹತ್ವದಾಗಿದೆ. ಇತಿಹಾಸದ ನೆನಪು ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಯಲ್ಲಿ ಕೆಳದಿ ಉತ್ಸವದ ಆಚರಣೆ ನಡೆದುಕೊಂಡು ಬರುತ್ತಿದೆ.

ಕೆಳದಿ ಉತ್ಸವವನ್ನು ಇಲಾಖೆಯಿಂದ ಸರಕಾರಿ ಕಾರ್ಯಕ್ರಮವಾಗಿ ಪ್ರತಿವರ್ಷ ಆಚರಿಸುವ ಸಂಬಂಧ ರಾಜ್ಯ ಪತ್ರದಲ್ಲಿ ಅಧಿಸೂಚನೆ ಹೊರಡಿಸುವ ನಿಟ್ಟಿನಲ್ಲಿ ಸೂಕ್ತ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಹಿಂದುಳಿದ ವರ್ಗಗಳ ರಾಜಕೀಯ ಮೀಸಲಾತಿ ಸಮಸ್ಯೆ ಬಗೆಹರಿಸಿ

0

ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಅವರು ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿಗೆ ಅಳಿವು-ಉಳಿವಿನ ಪ್ರಶ್ನೆ ಎದುರಾಗಿದೆ. ಈ ಕುರಿತಂತೆ ಉನ್ನತ ಸಭೆ ಕರೆದು ಸುಪ್ರೀಂಕೋರ್ಟ್ ನ ಮಧ್ಯಂತರ ಆದೇಶಕ್ಕೆ ರಾಜ್ಯದಲ್ಲಿ ಸಿದ್ಧಪಡಿಸಿದ ದತ್ತಾಂಶ ಸಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.

“ರಾಜ್ಯದಲ್ಲಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯಿತಿ, ಬಿಬಿಎಂಪಿ ಚುನಾವಣೆ ಬಾಕಿ ಇದೆ. ಸದ್ಯದ ಸ್ಥಿತಿಯಲ್ಲಿ ಸುಪ್ರೀಂ ಆದೇಶದಂತೆ ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿ ನೀಡುವ ಮುನ್ನ ಮೂರು ಹಂತದ ಪರಿಶೀಲನೆ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ನಡೆಸದಿದ್ದರೆ, ಹಿಂದುಳಿದ ವರ್ಗಗಳ ಮಂದಿಯೂ ಚುನಾವಣೆ ಎದುರಿಸುವ ಅವಕಾಶ ಕಳೆದುಕೊಳ್ಳುತ್ತಾರೆ” ಎಂದು ಹರಿಪ್ರಸಾದ್ ಕಳವಳ ವ್ಯಕ್ತಪಡಿಸಿದರು.

“ವೈಜ್ಞಾನಿಕ ಮಾನದಂಡದ ಆಧಾರದಲ್ಲಿ ರಾಜಕೀಯ ಹಿಂದುಳಿದಿರುವಿಕೆಯನ್ನು ಗುರುತಿಸಿಲ್ಲ ಎಂಬ ಕಾರಣದಿಂದ ಸದ್ಯ ಅಡಚಣೆ ಎದುರಾಗಿದೆ. ಸುಪ್ರೀಂ ಮಧ್ಯಂತರ ಆದೇಶ ನೀಡಿ ತಿಂಗಳು ಕಳೆದರೂ ಸರ್ಕಾರ ಯಾವುದೇ ರೀತಿಯ ಚರ್ಚೆ ನಡೆಸಿದ ಮಾಹಿತಿ ಇಲ್ಲ” ಎಂದು ಹರಿಪ್ರಸಾದ್ ಬೇಸರ ವ್ಯಕ್ತಪಡಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಮನರೇಗಾ ಯೋಜನೆ ಚಾಮರಾಜನಗರ ಜಿಲ್ಲೆ ಪ್ರಥಮ

0

ಕಾರ್ಮಿಕರಿಗೆ ಉದ್ಯೋಗ ನೀಡುವುದರ ಜೊತೆಗೆ ಗ್ರಾಮೀಣ ಭಾಗದ ಅಭಿವೃದ್ಧಿಯ ಆಶಯವನ್ನಿಟ್ಟುಕೊಂಡು ಜಾರಿಯಾಗಿರುವ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಎಸ್ಸಿ ಎಸ್ಟಿ ಕುಟುಂಬಗಳಿಗೆ ಉದ್ಯೋಗ ದೊರಕಿಸಿ ಕೊಡುವಲ್ಲಿ ಚಾಮರಾಜನಗರ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ.

ಮನರೇಗಾ ದಲ್ಲಿ ಒಟ್ಟು 53,997 ಜನರು ಎಸ್ಸಿ, 23,083 ಎಸ್ಟಿ ಸಮುದಾಯದ ಕುಟುಂಬಗಳಿಗೆ ಉದ್ಯೋಗ ಖಾತ್ರಿಯ ಉದ್ಯೋಗ ಕಾರ್ಡ್ ಗಳನ್ನು ವಿತರಿಸಲಾಗಿದೆ.

ಹೀಗೆ ಉದ್ಯೋಗ ಕಾರ್ಡ್ ವಿತರಿಸು ವುದರಲ್ಲಿ ಜಿಲ್ಲೆಗೆ 4ನೇ ಸ್ಥಾನ ದೊರತರೆ, ಅಧಿ ಕುಟುಂಬಗಳಿಗೆ ಉದ್ಯೋಗ ದೊರಕಿಸಿ ಕೊಡುವುದರಲ್ಲಿ ಪ್ರಥಮ ಸ್ಥಾನ ಪಡೆದಿರುವ ಜಿಲ್ಲೆ ಎಂದರೆ ಅದು ಚಾಮರಾಜನಗರ ವಾಗಿದೆ.

ಉದ್ಯೋಗ ಕಾರ್ಡ್ ಹೊಂದಿದ್ದ 53,997 ಎಸ್ಸಿ ಕುಟುಂಬಗಳ ಪೈಕಿ 24,497 ಕುಟುಂಬಗಳಿಗೆ ಉದ್ಯೋಗ ನೀಡಲಾಗಿದೆ. ಇನ್ನು ಜಾಬ್ ಕಾರ್ಡ್ ಪಡೆದಿದ್ದ 23,083 ಎಸ್ಟಿ ಕುಟುಂಬಗಳ ಪೈಕಿ 8,783 ಜನರಿಗೆ ಉದ್ಯೋಗ ಒದಗಿಸಲಾಗಿದೆ. ಆ ಮೂಲಕ ಶೇ.28.17 ರಷ್ಟು ಸಾಧನೆಯನ್ನು ತೋರಿದೆ. ಹೀಗೆ ಎಸ್ಸಿಎಸ್ಟಿ ಕುಟುಂಬಗಳಿಗೆ ಉದ್ಯೋಗ ಬದುಕಿಸಿದ ಜಿಲ್ಲೆಗಳ ಪೈಕಿ ಚಾಮರಾಜನಗರ ಮೊದಲ ಸ್ಥಾನ ಪಡೆದುಕೊಂಡಿದೆ. ಶೇ. 25.12 ರಷ್ಟು ಸಾಧನೆ ಮಾಡಿರುವ ವಿಜಯನಗರ ಜಿಲ್ಲೆಗೆ ಎರಡನೇ ಸ್ಥಾನ ಪಡೆದಿದೆ. 25.11ರಷ್ಟು ಸಾಧನೆ ಮಾಡಿರುವ ಬೀದರ್ ಮೂರನೇ ಸ್ಥಾನದಲ್ಲಿದೆ. ನಂತರದಲ್ಲಿ ಕಲ್ಬುರ್ಗಿ, ಕೋಲಾರ ಜಿಲ್ಲೆಗಳಿವೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಚಿಕ್ಕ ಸಂಗತಿ ಆದರೂ ದೊಡ್ಡ ಸುದ್ದಿ

0

ಹರ್ಷ ಕೊಲೆ ನಂತರ ಎರಡು ಕೋಮುಗಳ ನಡುವೆ ಸೌಹಾರ್ದತೆ ಕದಡಿದೆ. ಆದರೆ ಇಲ್ಲೊಂದು ಮುಸ್ಲಿಂ ಯುವಕರ ಸಂಘಟನೆಯೊಂದು ಮನೆಗಳಿಗೆ ಭೇಟಿ ನೀಡಿ ಸಮಾಧಾನ ಹೇಳುವ ಮಾದರಿ ಕಾರ್ಯ ಮಾಡುತ್ತಿದೆ.

ಕಿಡಿಗೇಡಿಗಳ ಕೃತ್ಯಕ್ಕೆ ಮಂಗಳವಾರ ಎರಡು ಆಟೋ, ವಿಚಿತ್ರ ವಾಹನಗಳು ಬೆಂಕಿಗೆ ಆಹುತಿಯಾಗಿವೆ. ಸಂತ್ರಸ್ತರ ಮನೆಗಳಿಗೆ ಭೇಟಿ ನೀಡಿದ ಸಂಘಟನೆ ಕಾರ್ಯಕರ್ತರು ತಮ್ಮ ಕೈಲಾದ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ.

ಸರ್ಕಾರದ ಹಂತದಲ್ಲಿ ಅಗತ್ಯ ಧನ ಸಹಾಯ ಕೊಡಿಸುವುದಕ್ಕೂ ಪ್ರಯತ್ನ ಪಡುವುದಾಗಿ ತಿಳಿಸಿದ್ದಾರೆ. ಮಂಗಳವಾರದಂದು ಕೋರಮಕೇರಿಯಲ್ಲಿ ಗಂಗಾಧರ್ ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ ಸುಡಲಾಗಿತ್ತು. ಟಿಪ್ಪು ನಗರದ ಬಲಭಾಗದಲ್ಲಿ ರಾಜಶೇಖರ್ ಎಂಬುವವರ ಎರಡು ಆಟೋಗಳನ್ನು ಸುಡಲಾಗಿತ್ತು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಕುವೆಂಪು ವಿವಿ ವಿವಾದ ಕುಲಪತಿ ವಾಪಸಿಗೆ ಆಗ್ರಹ

0

ಕುವೆಂಪು ವಿಶ್ವವಿದ್ಯಾಲಯದಲ್ಲಿನ ಗೊಂದಲಗಳು ಈಗ ಉನ್ನತ ಶಿಕ್ಷಣ ಇಲಾಖೆ ಮತ್ತು ರಾಜ್ಯಪಾಲರ ಅಂಗಳಕ್ಕೆ ತಲುಪಿದೆ.

ದೂರ ಶಿಕ್ಷಣ ನಿರ್ದೇಶನಾಲಯ ದಲ್ಲಿ ಪರೀಕ್ಷೆ ನಡೆಸಿದೆ ಫಲಿತಾಂಶ ಪ್ರಕಟಿಸಿರುವುದು. ಅನಂತರದಲ್ಲಿ ನ ಆಡಳಿತಾತ್ಮಕ ಗೊಂದಲಗಳು ಮತ್ತು ವಿಶ್ವವಿದ್ಯಾಲಯದಲ್ಲಿನ ಕಳೆದ ಎರಡು ವರ್ಷಗಳ ಬೆಳವಣಿಗೆಗಳ ಕುರಿತು ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ ಹಾಗೂ ಕುಲಪತಿಗಳು ಆದ ರಾಜ್ಯಪಾಲ ಧಾವರಚಂದ್ ಗೆಹ್ಲೋಟ್ ಅವರ ಗಮನಕ್ಕೆ ತರಲಾಗಿದೆ.

ಗ್ರಾಮಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ನೇತೃತ್ವದಲ್ಲಿ ಕುವೆಂಪು ವಿವಿಯ ಸಿಂಡಿಕೇಟ್ ಸದಸ್ಯರು ವಿಶ್ವವಿದ್ಯಾಲಯದ ಆಡಳಿತ ಮತ್ತು ಹಣಕಾಸು ಕಾರ್ಯಗಳ ನಿರ್ವಹಣೆ ಹಾಗೂ ಇನ್ನಿತರೆ ಭ್ರಷ್ಟಾಚಾರಗಳ ಕುರಿತು ತಕ್ಷಣ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಶಿಸ್ತುಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಇತ್ತೀಚಿನ ದಿನಗಳಲ್ಲಿ ಬೇಡದ ಕಾರಣಕ್ಕೆ ವಿಶ್ವವಿದ್ಯಾಲಯ ಸುದ್ದಿಯಾಗಿ ಕುವೆಂಪು ಹೆಸರಿನ ಘನತೆಗೆ ಕುಂದು ತರುತ್ತಿದೆ. ಆದ್ದರಿಂದ ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ ಅವರನ್ನು ವಾಪಾಸು ಕರೆಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

ವಿವಿಯಲ್ಲಿ ಕಳೆದ ಎರಡು ವರ್ಷಗಳ ಆಡಳಿತ ಹಾಗೂ ಹಣಕಾಸು ಕಾರ್ಯಗಳ ನಿರ್ವಹಣೆಯಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಆರೋಪಗಳು ಕೇಳಿಬರುತ್ತಿವೆ. ದೂರ ಶಿಕ್ಷಣ ನಿರ್ದೇಶನಾಲಯ ದಲ್ಲಿ ಸಿಂಡಿಕೇಟ್ ಆಕ್ಷೇಪದ ನಡುವೆಯೂ ಪರೀಕ್ಷೆಗಳನ್ನು ನಡೆಸದೆ ಫಲಿತಾಂಶ ಪ್ರಕಟಿಸಲಾಗಿದೆ. ಅದೇನು ಕೇಂದ್ರಗಳಿಂದ ಕೋಟ್ಯಂತರ ರೂಪಾಯಿ ಬಾಕಿ ಉಳಿಸಿಕೊಂಡು ವಿವಿಗೆ ನಷ್ಟ ಉಂಟು ಮಾಡಿದ್ದಾರೆ. ಕುಲಸಚಿವ ಜಿ. ಅನುರಾಧ ಅವರು ದೂರಶಿಕ್ಷಣ ನಿರ್ದೇಶ ಕರಾಗಿದ್ದ ಡಾ. ಯೋಗೇಶ್ ಅವರನ್ನು ಮಾತೃ ವಿಭಾಗಕ್ಕೆ ವರ್ಗಾವಣೆ ಮಾಡಿ. ಡಾ. ಬಿ. ಎಸ್. ಬಿರಾದಾರ ಅವರನ್ನು ನೇಮಕ ಮಾಡಿದ್ದರು. ಆದರೆ ಕುಲಸಚಿವರ ವರ್ಗಾವಣೆ ಆದೇಶವನ್ನು ಕುಲಪತಿ ತಡೆಹಿಡಿದಿದ್ದಾರೆ.
ನಿರ್ದೇಶಕರ ಬಗ್ಗೆಯೂ ಅನುಮಾನಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಅದೇ ಸ್ಥಾನದಲ್ಲಿ ಮುಂದುವರೆಸಿದ್ದಲ್ಲಿ ತನಿಖೆಗೆ ಅಡ್ಡಿ ಉಂಟಾಗುತ್ತದೆ.

ಜೇಷ್ಠತೆ ಮತ್ತು ಸಂಬಂಧಿಸಿದ ಅವ್ಯವಹಾರ, ಸಮಾಜ ಕಲ್ಯಾಣ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಮಿತಿಯ ನಡವಳಿಗಳು ಮತ್ತು ಸಿಂಡಿಕೇಟ್ ನಿರ್ಣಯಗಳನ್ನು ಜಾರಿಯಾಗದಂತೆ ತಡೆದು ಅವುಗಳ ಉಲ್ಲಂಘನೆ ಮಾಡಿರುವುದು ಹಾಗೂ ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ ಅವರ ಅವಧಿಯಲ್ಲಿನ ಆಡಳಿತ ಮತ್ತು ಹಣಕಾಸಿನ ನಿರ್ವಹಣೆ ಗಳ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.

ನಿಯೋಗದಲ್ಲಿ ಸಿಂಡಿಕೇಟ್ ಸದಸ್ಯರಾದ ಜಿ. ಧರ್ಮ ಪ್ರಸಾದ್, ಎಚ್. ಬಿ. ರಮೇಶ್ ಬಾಬು, ಎಚ್. ರಾಮಲಿಂಗಪ್ಪ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಉಕ್ರೇನ್ -ರಷ್ಯ ಯುದ್ಧ.ಭಾರತಕ್ಕೆ ಬಿಸಿ

0

ತೀವ್ರಗೊಂಡ ರಷ್ಯಾ ಉಕ್ರೇನ್ ಯುದ್ಧ ಬೀತಿಯಿಂದಾಗಿ ಜಾಗತಿಕ ಆರ್ಥಿಕತೆಯು ಅನಿಶ್ಚಿತತೆಯು ತೂಗುಯ್ಯಾಲೆಗೆ ಸಿಲುಕಿದೆ. ರಷ್ಯಾ ಮೇಲೆ ಅಮೆರಿಕ, ಬ್ರಿಟನ್ ಸೇರಿದಂತೆ ಹಲವು ದೇಶಗಳಿಂದ ಆರ್ಥಿಕ ದಿಗ್ಬಂಧನ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಯುದ್ಧ ಆರಂಭವಾದರೆ ಭಾರತ ಆರ್ಥಿಕವಾಗಿ ,ರಾಜತಾಂತ್ರಿಕವಾಗಿ, ಮತ್ತು ರಕ್ಷಣಾ ದೃಷ್ಟಿಯಿಂದ ಹತ್ತಾರು ಪರಿಣಾಮಗಳನ್ನು ಎದುರಿಸಲಿದೆ. ಜನಸಾಮಾನ್ಯರು, ರೈತರಿಗೂ ಇದರ ಬಿಸಿ ಪರೋಕ್ಷವಾಗಿ ತಟ್ಟಲಿದೆ. ಮದ್ಯ ಪ್ರಿಯರ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆ ಇದೆ.

ಯುದ್ಧ ಆತಂಕದ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರವು ಬ್ಯಾರೆಲ್ ಗೆ ಬಹುತೇಕ ನೂರು ಡಾಲರ್ ತಲುಪಿದೆ. 2014ರ ನಂತರ ದಾಖಲೆ ಮಟ್ಟಕ್ಕೆ ಏರಿದೆ. ವಿಶ್ವದಲ್ಲೇ ಅತಿದೊಡ್ಡ ಕಚ್ಚಾ ತೈಲ ಉತ್ಪಾದಕ ದೇಶಗಳಲ್ಲಿ ಒಂದಾಗಿರುವ ರಷ್ಯಾ ಯುದ್ಧದಲ್ಲಿ ತೊಡಗಿದರೆ, ಪೂರೈಕೆ ವ್ಯತ್ಯಯವಾಗಿ ಈ ದರವು ಮತ್ತಷ್ಟು ಹೆಚ್ಚಾಗಲಿದೆ.

ಕಚ್ಚಾ ತೈಲ ದರ ಏರಿಕೆಯು ಪೆಟ್ರೋಲ್, ಡೀಸೆಲ್, ಎಲ್ ಪಿಜಿ ಬೆಲೆ ಏರಿಕೆಗೆ ನೇರ ಕಾರಣವಾಗುವುದಲ್ಲದೆ ಪರೋಕ್ಷವಾಗಿ ದೈನಂದಿನ ವಸ್ತುಗಳ ಬೆಲೆ ಏರಿಕೆ ಮತ್ತು ಆ ಮೂಲಕ ಹಣದುಬ್ಬರ ಹೆಚ್ಚಳಕ್ಕೆ
ದಾರಿ ಮಾಡುತ್ತದೆ. ಕಚ್ಚಾ ತೈಲಕ್ಕಾಗಿ ವಿದೇಶಗಳ ಮೇಲೆ ಅವಲಂಬಿಸಿರುವ ಭಾರತದ ಆಮದು ರಫ್ತು ಸಮತೋಲನ ತಪ್ಪುತ್ತದೆ. ಇದರ ಜೊತೆಗೆ ಜಾಗತಿಕ ಜಿಡಿಪಿ ಪ್ರಗತಿಯ ಮೇಲು ಕಚ್ಚಾ ತೈಲ ದರ ಏರಿಕೆ ಪರಿಣಾಮ ಬೀರಲಿದೆ.

ರಷ್ಯಾ ಭಾರತಕ್ಕೆ ಡಿಎಪಿ ಸೇರಿದಂತೆ ಮೂರು ಪ್ರಮುಖ ರಸ ಗೊಬ್ಬರಗಳ ಪೂರೈಕೆ ದೇಶವಾಗಿದೆ. ಯುದ್ಧದ ಛಾಯೆಯಿಂದ ಭಾರತದ ರಸಗೊಬ್ಬರಗಳ ಆಮದಿಗೆ ಹೊಡೆತ ಬೀಳಲಿದೆ. ಮುಂಗಾರು ಸಿದ್ಧತೆಯಲ್ಲಿ ತೊಡಗುವ ರೈತರಿಗೂ ಇದರ ಬಿಸಿ ತಾಕುವ ಸಾಧ್ಯತೆ ಇದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಯೋಜನಾ ವರದಿ ನೀಡಲು ಕೃಷಿ ವಿವಿಗೆ ಸೂಚನೆ-ಬಿ.ಸಿ.ಪಾಟೀಲ್

0

ಕೃಷಿಯಲ್ಲಿ ಡೋನ್ ತಂತ್ರಜ್ಞಾನ ಬಳಕೆ ಸೇರಿದಂತೆ ಕೀಟನಾಶಕ , ಲಘುಪೋಷಕಾಂಶಗಳು ಮತ್ತು ಬೆಳೆ ಪ್ರಚೋದಕಗಳ ಸಿಂಪಡಣೆ , ಬೆಳೆವಾರು ಬಳಕೆ ಕುರಿತು ಸಂಶೋಧನೆಯನ್ನು ನಡೆಸಲು ಅನುಕೂಲವಾಗುವಂತೆ ನೂತನ ಪದ್ಧತಿಗಳನ್ನು ಅಭಿವೃದ್ಧಿ ಪಡಿಸಿ , ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲು ವಿಜ್ಣಾನಿಗಳ ತಂಡಗಳನ್ನು ರಚನೆ ಮಾಡಲು ಕೃಷಿ ವಿಶ್ವವಿದ್ಯಾಲಯಗಳು ಯೋಜನಾ ವರದಿ ನೀಡುವಂತೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಸೂಚಿಸಿದ್ದಾರೆ.

ವಿಕಾಸಸೌಧಲ್ಲಿ ಕೃಷಿ ಸಚಿವರ ಅಧ್ಯಕ್ಷತೆಯಲ್ಲಿ ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಉನ್ನತಾಧಿಕಾರದ ಸಮಿತಿಯ ಸಭೆಯನ್ನು ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳ ತಾಂತ್ರಿಕತೆಗಳನ್ನು ಮೂಲಕ ಅನುಕೂಲವಾಗುವಂತೆ ಅಭಿವೃದ್ಧಿಪಡಿಸುವ ಬಗ್ಗೆ ಪರಿಶೀಲನಾ ಸಭೆ ನಡೆಯಿತು.

ಸಭೆಯಲ್ಲಿ ರೈತರ ಆದಾಯ ದ್ವಿಗುಣಗೊಳಿಸಲು ಸೆಕೆಂಡರಿ ಕೃಷಿಗೆ ಒತ್ತು ನೀಡುವುದರ ಜೊತೆಗೆ ಸೆಕೆಂಡರಿ ಕೃಷಿ ಕುರಿತು ರಾಜ್ಯದ ಎಲ್ಲಾ ಕೃಷಿ ವಿಶ್ವ ವಿದ್ಯಾಲಯಗಳಲ್ಲಿರುವ ನೂತನ ತಾಂತ್ರಿಕತೆಗಳನ್ನು ಒಂದೇ ಸೂರಿನಡಿ ರೈತರಿಗೆ ಲಭ್ಯವಾಗುವಂತೆ ಇನ್ನು ಬೇಷನ್ ಕೇಂದ್ರಗಳ ಮೂಲಕ ರೈತರಿಗೆ ಮಾಹಿತಿ / ತರಬೇತ ನೀಡಲು ತಿಳಿಸಲಾಯಿತು. ಎಲ್ಲಾ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಲಭ್ಯವಿರುವ ರೈತಸ್ನೇಹಿ ಆದಾಯ ಹೆಚ್ಚಿಸುವ ಸಂಶೋಧನೆಗಳನ್ನು ತಂತ್ರಾಂಶದಲ್ಲಿ ಅಳವಡಿಸಿ ಎಲ್ಲರಿಗೂ ಲಭ್ಯವಾಗುವಂತೆ ಮಾಡುವುದು. ಭಾಗವಹಿಸಿದ್ದ ಕೃಷಿ ಪಂಡಿತ ಪ್ರಶಸ್ತಿ ವಿಜೇತ ರೈತರಿಂದ ಸ್ಥಳೀಯವಾಗಿ ಲಭ್ಯವಿರುವ ವಿವಿಧ ಸೆಕಂಡರಿ ಕೃಷಿ ಉದ್ಯಮಗಳ ಕುರಿತು ಮಾಹಿತಿ ಪಡೆಯಲಾಯಿತು.
ವಿಜ್ಞಾನಿಗಳ ತಂಡವನ್ನು ರಚಿಸಲು ಕೃಷಿ ವಿಶ್ವವಿದ್ಯಾಲಯಗಳಿಗೆಕೃಷಿ ವಿಶ್ವ ವಿದ್ಯಾಲಯಗಳಲ್ಲಿ ಅಭಿವೃದ್ಧಿಪಡಿಸಿರುವ ಬೆಳೆಗಳ ತಳಿಗಳನ್ನು ಹಾಗೂ ಉತ್ತಮ ತಾಂತ್ರಿಕತೆಗಳ ಕುರಿತು ವ್ಯಾಪಕ ಪ್ರಚಾರ ನೀಡುವುದು . ಕೃಷಿ ಇಲಾಖೆಯು ಕೃಷಿ ವಿಶ್ವ ವಿದ್ಯಾಲಯಗಳು ಅಭಿವೃದ್ಧಿಪಡಿಸಿರುವ ಉತ್ತಮ ತಳಿಗಳನ್ನು ಸಹಾಯಧನ ನೀಡಲು ಕಾರ್ಯಕ್ರಮದಡಿ ಕ್ರಮವಹಿಸಲು ಸೂಚಿಸಿದರು.

ಉನ್ನತಾಧಿಕಾರದ ಸಮಿತಿಯಲ್ಲಿ ಕೃಷಿ , ತೋಟಗಾರಿಕೆ , ರೇಷ್ಮೆ , ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು , ಹಾಗೂ ವಿವಿಧ ಕೃಷಿ ತೋಟಗಾರಿಕೆ / ಪಶುಸಂಗೋಪನಾ ವಿಶ್ವವಿದ್ಯಾಲಯಗಳ ಹಾಗೂ ಕೃಷಿ ಕುಲಪತಿಗಳು , ಆಯುಕ್ತರು , ನಿರ್ದೇಶಕರು ಪಂಡಿತ ಪ್ರಶಸ್ತಿ ವಿಜೇತರು ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ರಾಜ್ಯ ಹೆದ್ದಾರಿಗಳನ್ನ ಟೋಲ್ ಮುಕ್ತಗೊಳಿಸಲು ಸರ್ಕಾರದ ಚಿಂತನೆ

0

ರಾಜ್ಯದ ಹೆದ್ದಾರಿಗಳಲ್ಲಿ ಎದ್ದು ನಿಲ್ಲುತ್ತಿರುವ ಟೋಲ್ ಗಳ ಬಗ್ಗೆ ಜನಕ್ರೋಷ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂದೆ ಅಭಿವೃದ್ಧಿಪಡಿಸಲು ಇರುವ ರಾಜ್ಯ ಹೆದ್ದಾರಿಗಳನ್ನು ಟೋಲ್ ರಹಿತ ಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ.

ಟೋಲ್ ನಿರ್ಮಾಣದ ಬಗ್ಗೆ ಮತ್ತು ಗುತ್ತಿಗೆ ಅವಧಿ ಮುಗಿದರೂ ಗುತ್ತಿಗೆದಾರರು ಟೋಲ್ ವಸೂಲಿ ಮಾಡುತ್ತಿರುವ ಕುರಿತು ಅಧಿವೇಶನದಲ್ಲಿ ಸಾಕಷ್ಟು ಬಾರಿ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದೆ. ಇದರ ಹಿನ್ನೆಲೆಯಲ್ಲಿ ನಾಲ್ಕನೆ ಹಂತದಲ್ಲಿ ಅಭಿವೃದ್ಧಿ ಗೊಳಿಸಿರುವ ಸುಮಾರು 54 ರಸ್ತೆಗಳನ್ನು ಟೋಲ್ ಮುಕ್ತಗೊಳಿಸಲು ಸರ್ಕಾರ ನಿರ್ಧರಿಸಿದೆ.

ನಾಲ್ಕನೇ ಹಂತದ ರಾಜ್ಯ ಹೆದ್ದಾರಿಗಳ ಅಭಿವೃದ್ಧಿಗೆ ಮುಂದಾಗಿರುವ ರಾಜ್ಯ ಸರ್ಕಾರ 2943 ಕಿ. ಮೀ. ಅಭಿವೃದ್ಧಿಗೆ 3500 ಕೋಟಿ ರೂಪಾಯಿ ವಿನಿಯೋಗಿಸಲಿದೆ. ಹೆದ್ದಾರಿ ಅಭಿವೃದ್ಧಿ ಯೋಜನೆ ವಿಭಾಗದ ಮೂಲಕ ಈಗಾಗಲೇ 2943 ಕಿ. ಮೀ. ರಸ್ತೆ ಗುರುತಿಸಿ ಅನುಮೋದನೆಗಾಗಿ ಲೋಕೋಪಯೋಗಿ ಇಲಾಖೆಗೆ ವರದಿ ಸಲ್ಲಿಸಲಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆಯುವ ಭರವಸೆ ಇದೆ. ಮಾರ್ಚ್ 4ರಂದು ಮಂಡಿಸಲಿರುವ ಬಜೆಟ್ ನಲ್ಲಿ 4ನೆಯ ಹಂತದ ಹೆದ್ದಾರಿ ಅಭಿವೃದ್ಧಿ ಯೋಜನೆ ಗೋಷಣೆ ಆಗುವ ನಿರೀಕ್ಷೆಯಿದೆ.

ರಾಷ್ಟ್ರೀಯ ಹೆದ್ದಾರಿ ಗಳಂತೆಯೇ ರಾಜ್ಯ ಹೆದ್ದಾರಿಗಳನ್ನೂ ಎಕನಾಮಿಕ್ ಕಾರಿಡಾರ್ ಗಳಾಗಿ ಬದಲಾಯಿಸಲು ಕೆಎಸ್ ಎಚ್ಐಪಿ ಉದ್ದೇಶಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ರಸ್ತೆ ಜಾಲವನ್ನು ರಾಷ್ಟ್ರೀಯ ಹೆದ್ದಾರಿಗಳ ಅಂದಿಗೆ ಸಂಯೋಜಿಸಲಾಗುತ್ತಿದೆ. ನಾಲ್ಕನೇ ಹಂತದ ಯೋಜನೆಯಲ್ಲಿ ಕೈಗೊಳ್ಳುತ್ತಿರುವ ರಾಜ್ಯ ಹೆದ್ದಾರಿಗಳು ರಾಜ್ಯ ಎರಡನೇ ಮತ್ತು ಮೂರನೇ ಹಂತದ ನಗರ, ಕೈಗಾರಿಕಾ ಪ್ರದೇಶಗಳನ್ನು ಸಂಪರ್ಕಿಸುವುದು ರೊಂದಿಗೆ ರಾಷ್ಟ್ರೀಯ ಹೆದ್ದಾರಿ,ಕೈಗಾರಿಕಾ ಕಾರಿಡಾರ್, ಪ್ರವಾಸೋದ್ಯಮ ಕ್ಷೇತ್ರಗಳನ್ನು ಸಂಪರ್ಕಿಸುವಂತೆ ಆಯ್ಕೆ ಮಾಡಲಾಗಿದೆ. ತಡೆರಹಿತ ಪ್ರಯಾಣಕ್ಕೆ ಪೂರಕವಾಗಿ ರಸ್ತೆ ಅಭಿವೃದ್ಧಿಗೊಳಿಸಲು ಸರ್ಕಾರ ಯೋಜನೆ ಹಾಕಿಕೊಂಡಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಪ್ರೊ ಕಬಡ್ಡಿ ಲೀಗ್ ಬುಲ್ಸ್ ಹೋರಾಟ ಅಂತ್ಯ.ದಬಾಂಗ್ ಜಯ

0

ನಾಯಕ ಪವನ್ ಸೆಹ್ರಾವತ್ ಅವರ ಕೆಚ್ಚೆದೆಯ ಹೋರಾಟದ ಹೊರತಾಗಿಯೂ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್ 8 ನೇ ಆವೃತ್ತಿಯ 2 ನೇ ಸೆಮಿಫೈನಲ್ ನಲ್ಲಿ ದಬಾಂಗ್ ದೆಹಲಿ ತಂಡದ ಎದುರು ಮುಗ್ಗರಿಸಿತು. ಆದ್ದರಿಂದ ಜನಪ್ರಿಯ ಪ್ರೊ ಕಬಡ್ಡಿ ಲೀಗ್ ನಲ್ಲಿ ಮೂರನೇ ಬಾರಿ ಫೈನಲ್ ಪ್ರವೇಶಿಸುವ ಕನಸಿಗೆ ಉಪಾಂತ್ಯದಲ್ಲಿ ತೆರೆಬಿತ್ತು.

ವೈಟ್ಫೀಲ್ಡ್ ನ ಶೆರಾಟಾನ್ ಗ್ರಾಂಡ್ ಹೋಟೆಲ್ ನಲ್ಲಿ ನಡೆದ ಪಂದ್ಯದ ದ್ವಿತೀಯಾರ್ಧದಲ್ಲಿ ನವೀನ್ ಕುಮಾರ್ ಅವರ ರೇಡಿಂಗ್ ನಿಂದ ಮಿಂಚಿದ ದೆಹಲಿ ತಂಡ 40-35 ಅಂಕಗಳಿಂದ ಬುಲ್ಸ್ ತಂಡವನ್ನು ಸೋಲಿಸಿ ಎರಡನೇ ಬಾರಿ ಫೈನಲ್ ಪ್ರವೇಶಿಸಿತು. ಫೆಬ್ರವರಿ 25ರಂದು ಮೂರು ಬಾರಿಯ ಚಾಂಪಿಯನ್ ಪಟ್ನಾ ಪೈರೇಟ್ಸ್ ಮತ್ತು ದೆಹಲಿ ತಂಡಗಳ ನಡುವೆ ಫೈನಲ್ ನಡೆಯಲಿದೆ.

ಒಂದು ಹಂತದಲ್ಲಿ ಸಮಬಲದ ಹೋರಾಟ ನೀಡಿದ್ದ ಬುಲ್ಸ್ ಆಲ್ ಔಟ್ ಆಗಿದ್ದು ಮುಳುವಾಯಿತು. ಪವನ್ ಅವರ ಚಾಣಾಕ್ಷ ರೇಡಿಂಗ್ ನೆರವಿನಿಂದ ಬುಲ್ಸ್ ತಂಡ ಪೂರ್ವಾರ್ಧದಲ್ಲಿ ಮುಕ್ತಾಯಗೊಳ್ಳುವಾಗ 17-16ರ ಮುನ್ನಡೆ ಗಳಿಸಿತು. ಪಂದ್ಯದ ಆರಂಭದಿಂದಲೂ ಉಭಯ ತಂಡಗಳು ಎಚ್ಚರಿಕೆ ಆಟಕ್ಕೆ ಒತ್ತು ನೀಡಿದವು. 14ನೇ ನಿಮಿಷದಲ್ಲಿ ಉಭಯ ತಂಡಗಳು 14-14ರ ಸಮಬಲ ಸಾಧಿಸಿದವು. ಅನಂತರದಲ್ಲಿ 6 ನಿಮಿಷಗಳಲ್ಲಿ ಬುಲ್ಸ್ 3 ಅಂಕ ಗಳಿಸಿತು. ಡಬಲ್ ಕೇವಲ 2 ಅಂಕಕ್ಕೆ ಸೀಮಿತಗೊಂಡಿತ್ತು. ಏನೇ ಆದರೂ ಕೊನೆಯಲ್ಲಿ ದಬಾಂಗ್ ಆಟಗಾರರು ಪ್ರಥಮ ಸ್ಥಾನವನ್ನು ಗಳಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಡಾ.ಬೆಟಗೇರಿ ಕೃಷ್ಣಶರ್ಮ ವಾರ್ಷಿಕ ಪ್ರಶಸ್ತಿ ಘೋಷಣೆ

0

2021-22ನೇ ಸಾಲಿನ ಡಾ. ಬೆಟಗೇರಿ ಕೃಷ್ಣಶರ್ಮ ಪ್ರಶಸ್ತಿಗೆ ಮೂವರು ಸಾಧಕರು ಆಯ್ಕೆಯಾಗಿದ್ದಾರೆ.

ಡಾ. ಬೆಟಗೇರಿ ಕೃಷ್ಣಶರ್ಮ ವಿಮರ್ಶಾ ಸಂಶೋಧನಾ ಪ್ರಶಸ್ತಿಗೆ ಮೈಸೂರಿನ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕ ಡಾ.ಸಿ.ಎನ್. ರಾಮಚಂದ್ರ, ಡಾ. ಬೆಟಗೇರಿ ಕೃಷ್ಣಶರ್ಮ ಜಾನಪದ ಪ್ರಶಸ್ತಿಗೆ ಉತ್ತರ ಕನ್ನಡ ಜಿಲ್ಲೆಯ ನಿವೃತ್ತ ಪ್ರಾಚಾರ್ಯ ಡಾ.ಎನ್.ಆರ್. ನಾಯಕ್ ಮತ್ತು ಡಾ. ಬೆಟಗೇರಿ ಕೃಷ್ಣಶರ್ಮ ಪತ್ರಕರ್ತ ಪ್ರಶಸ್ತಿಗೆ ವಿಜಯಪುರ ಮೂಲದ ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿ ಅವರು ಆಯ್ಕೆಗೊಂಡಿದ್ದಾರೆ.

ಪ್ರಶಸ್ತಿಯು ತಲಾ 50 ಸಾವಿರ ರೂ. ನಗದು ಮತ್ತು ಫಲಕಗಳನ್ನು ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಎಪ್ರಿಲ್ ತಿಂಗಳಲ್ಲಿ ನಡೆಯಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಪ್ರೊ. ರಾಘವೇಂದ್ರ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.