Thursday, December 11, 2025
Thursday, December 11, 2025
Home Blog Page 17

Dr. Shalini Rajneesh ರೈತ ಉತ್ಪಾದಕ ಸಂಸ್ಥೆಗಳ ಆಯುಷ್ ಉತ್ಪನ್ನಗಳಿಗೆ ಬ್ರ್ಯಾಂಡ್ ಮಾಡಿ ಮಾರುಕಟ್ಟೆ ವ್ಯವಸ್ಥೆಮಾಡಬೇಕು- ಡಾ.ಶಾಲಿನಿ ರಜನೀಶ್.

0

Dr. Shalini Rajneesh ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರ ಪ್ರಕಟಿಸಿರುವ ಔಷಧಿ ಸಸ್ಯಗಳ ಕೃಷಿ ಕೈಪಿಡಿಯ ಮಾಹಿತಿಯನ್ನು ಕೃಷಿ ಇಲಾಖೆಯೊಂದಿಗೆ ಹಂಚಿಕೊಳ್ಳಬೇಕು. ಹೂವುಗಳ ಮಾರಾಟಕ್ಕೆ ರೂಪಿಸಲಾಗಿರುವ ಹರಾಜು ಪ್ರಕ್ರಿಯೆ ಮಾದರಿಯಲ್ಲಿ ಔಷಧೀಯ ಗಿಡಮೂಲಿಕೆಗಳ ಹರಾಜು ಮಾರುಕಟ್ಟೆ ರೂಪಿಸುವ ಅವಶ್ಯಕತೆ ಇದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರ ಮತ್ತು ಅರಣ್ಯ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಚಿತ್ರಕಲಾ ಪರಿಷತ್ತಿನಲ್ಲಿ ಇಂದು ಮತ್ತು ನಾಳೆ ಎರಡುದಿನಗಳ ಕಾಲ ಹಮ್ಮಿಕೊಂಡಿರುವ ಅರಣ್ಯ ಮತ್ತು ಕೃಷಿ ಮೂಲಿಕಾ ಪ್ರದರ್ಶನ 2025ಕ್ಕೆ ಇಂದು ಭೇಟಿ ನೀಡಿದ್ದರು.

ಎಲೆಕ್ಟ್ರಾನಿಕ್ ಮಂಡಿಗಾಗಿ, ವಿವಿಧ ಉತ್ಪಾದನಾ ಪ್ರಕ್ರಿಯೆಯ ಯೋಜನಾ ಉತ್ಪನ್ನಗಳ ಶ್ರೇಣೀಕರಣವನ್ನು ಮಾಡುವ ಪ್ರಬಂಧಗಳಿಗೆ ಪ್ರಾಧಿಕಾರ ತರಬೇತಿ ನೀಡಬೇಕು, ನಂತರ ಮಾತ್ರ ಅದನ್ನು ಮಾರಾಟ ಮಾಡಬಹುದು ಮತ್ತು ಆಯಾ ಖರೀದಿದಾರರು ಮತ್ತು ರಫ್ತುದಾರರಿಗೆ ಮೌಲ್ಯೀಕರಿಸಬಹುದು ಎಂದರು.

ಕರ್ನಾಟಕ ರಾಜ್ಯ ಔಷಧೀಯ ಸಸ್ಯಗಳ ಪ್ರಾಧಿಕಾರವನ್ನು 2002 ರಲ್ಲಿ ಸ್ಥಾಪಿಸಲಾಯಿತು, ಅಂದಿನಿಂದ ಕರ್ನಾಟಕದಲ್ಲಿ 22 ಔಷಧೀಯ ಸಸ್ಯಗಳನ್ನು ಬೆಳೆಸಲಾಗುತ್ತಿದೆ. ಈ ಸಸ್ಯಗಳ ಮಾರಾಟಗಾರರ ಮತ್ತು ಖರೀದಿದಾರರಿಗೆ ಮಾರುಕಟ್ಟೆ ಸಂಬಂಧವನ್ನು ಆಯೋಜಿಸಲಾಗುತ್ತಿದೆ ಎಂದು ಮಾಹಿತಿ ಪಡೆದರು.

Dr. Shalini Rajneesh ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರದಿಂದ ಪ್ರತಿಯೊಂದು ಗಿಡಮೂಲಿಕೆಯ ಬಗ್ಗೆ ಪ್ರಮಾಣೀಕೃತ ಮಾಹಿತಿಯನ್ನು ಪಡೆಯಬೇಕು. ಒಣಗಿದ ಬೀಜ ಮತ್ತು ಎಲೆಗಳು ಅಥವಾ ಹೂವುಗಳಿಂದ ತಯಾರಿಸಲಾದ ಉತ್ಪನ್ನಗಳನ್ನು ಗುರುತಿಸಬೇಕು. ಇದರಿಂದ ಹೆಚ್ಚಿನ ಗಿಡಮೂಲಿಕೆಗಳನ್ನು ಉತ್ಪಾದಿಸಲು ಮತ್ತು ನಿಜವಾದ ಕೇಂದ್ರಗಳನ್ನು ಗುರುತಿಸಲು ರೈತರಲ್ಲಿ ಜಾಗೃತಿ ಮೂಡಿಸಲು ಬಳಸಬಹುದಾಗಿದೆ ಎಂದು ಮುಖ್ಯ ಕಾರ್ಯದರ್ಶಿಗಳು ತಿಳಿಸಿದರು.

ಪ್ರತಿ ವಸತಿ ಶಾಲೆಗಳ ಆವರಣದಲ್ಲಿ ಔಷಧೀಯ ಗುಣಗಳ 22 ಜಾತಿಯ 150 ಸಸ್ಯಗಳನ್ನು ಬೆಳೆಸಲು 402 ಶಾಲೆಗಳಿಗೆ ವಿಸ್ತರಿಸಬೇಕು. ವರ್ಷವಿಡಿ ಎಲ್ಲ ಮಾಹೆಗಳಲ್ಲಿ
ಗಳಲ್ಲಿ ಹಣ್ಣು ಬರುವಾಗ ಪ್ರತಿ ಶಾಲಾ ಆವರಣದಲ್ಲಿ ಔಷಧೀಯ ಗುಣಗಳುಳ್ಳ ಹಣ್ಣು ಗಿಡಗಳನ್ನು ಬೆಳೆಸಿದಲ್ಲಿ ಮಕ್ಕಳು ಮದ್ಯಾಹ್ನದ ಬಿಸಿಯೂಟದೊಂದಿಗೆ ಹಣ್ಣುಗಳನ್ನು ಬಳಸಬಹುದಾಗಿದೆ ಎಂದು ಸಲಹೆ ನೀಡಿದರು.

ಗುಣಪಡಿಸುವ ಗಿಡಮೂಲಿಕೆಗಳನ್ನು ಆಯುಷ್ ಇಲಾಖೆಯೊಂದಿಗೆ ಹಂಚಿಕೊಳ್ಳಬೇಕು ಮತ್ತು ಆಯುಷ್ ವೈದ್ಯರಿಗೆ ಈ ಗಿಡಮೂಲಿಕೆಗಳನ್ನು ಬಳಸಲು ಹೇಳಬೇಕು ಮತ್ತು ಅದು ಜಾಗೃತಿ ಕಾರ್ಯಕ್ರಮದ ಭಾಗವಾಗಿರಬೇಕು. ರೈತ ಉತ್ಪಾದಕ ಸಂಸ್ಥೆಗಳು ತಯಾರಿಸಿದ ಆಯುಷ್ ಉತ್ಪನ್ನಗಳಿಗೆ ಬ್ರ್ಯಾಂಡ್ ಮಾಡಿ ಮಾರುಕಟ್ಟೆ ವ್ಯವಸ್ಥೆ ಮಾಡಬೇಕು ಎಂದರು.

ಕರ್ನಾಟಕವು 17 ಔಷಧೀಯ ಸಸ್ಯಗಳ ಸಂರಕ್ಷಣಾ ಪ್ರದೇಶಗಳನ್ನು ಹೊಂದಿದೆ. ಪಶುವೈದ್ಯಕೀಯ ವಿಜ್ಞಾನ ಅಥವಾ ರೈತರಿಗೆ, ದನಕರುಗಳು ಮತ್ತು ಇತರ ಪ್ರಾಣಿಗಳನ್ನು ಸಾಕಲು ಮತ್ತು ರೋಗಗಳಿಂದ ಗುಣಪಡಿಸಲು ಗಿಡಮೂಲಿಕೆ ಸಸ್ಯಗಳ ಬಳಕೆಯ ಬಗ್ಗೆ ಮಾಹಿತಿಯನ್ನು ಜನಪ್ರಿಯಗೊಳಿಸಬೇಕು. ಪಶ್ಚಿಮ ಘಟ್ಟಗಳ ಬಗ್ಗೆ, ವಿಶೇಷವಾಗಿ ಬೆಟ್ಟ ಗುಡ್ಡಗಾಡು ಪ್ರದೇಶಗಳನ್ನು ಆಧರಿಸಿದ ಔಷಧೀಯ ಸಸ್ಯಗಳ ಬಗೆಗಿನ ಮಾಹಿತಿಯನ್ನು ಬುಡಕಟ್ಟು ಜನರಲ್ಲಿ ಜನಪ್ರಿಯಗೊಳಿಸಬೇಕು ಮತ್ತು ಅದರಿಂದ ಮಾರಾಟ ಮಾಡಬಹುದಾದ ಕೆಲವು ಉತ್ಪನ್ನಗಳನ್ನು ತಯಾರಿಸುವಲ್ಲಿ ಅವರಿಗೆ ತರಬೇತಿ ನೀಡಬೇಕು ಎಂದು ಹೇಳಿದರು.

ಅರಣ್ಯ ಮತ್ತು ಕೃಷಿ ಮೂಲಿಕಾ ಪ್ರದರ್ಶನದಲ್ಲಿ ಒಟ್ಟು 35 ಮಳಿಗೆಗಳು ಭಾಗವಹಿಸಿದ್ದು, ಇದರಲ್ಲಿ ರೈತ ಉತ್ಪಾದಕರು, ಗ್ರಾಮ ಸಮುದಾಯಗಳು, ವ್ಯಾಪಾರಿಗಳು, ರಾಜ್ಯದ ಒಳಗೆ ಅಥವಾ ಹೊರಗಿನ ಸಾವಯವ ರೈತರು ಸೇರಿದ್ದಾರೆ.

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೀನಾಕ್ಷಿ ನೇಗಿ, ಸ್ಮಿತಾ ಬಿಜ್ಜೂರ, ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್ಸಲನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

M.S.Santosh ಬಾಕಿಯಿರುವ ಪ್ರಕರಣಗಳ ವಿಲೇವಾರಿಗೆ ಡಿಸೆಂಬರ್ 13 ರಂದುಲೋಕ ಅದಾಲತ್- ನ್ಯಾ.ಎಂ.ಎಸ್.ಸಂತೋಷ್

0

M.S.Santosh ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳ ಶೀಘ್ರ ವಿಲೇವಾರಿ ಹಾಗೂ ಪಕ್ಷಗಾರರಿಗೆ ತ್ವರಿತ ನ್ಯಾಯದಾನ ನೀಡುವ ಉದ್ದೇಶದಿಂದ ಡಿ.13 ರಂದು ಈ ವರ್ಷದ ಕೊನೆಯ ಲೋಕ್ ಅದಾಲತ್‌ನ್ನು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಂತೋಷ್ ಎಂ ಎಸ್ ತಿಳಿಸಿದರು.
ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಗುರುವಾರ ಲೋಕ್ ಅದಾಲತ್ ಹಾಗೂ ಪೊಲೀಸ್ ಇಲಾಖೆಯ ಸಂಚಾರಿ ಇ-ಚಲನ್ ಮತ್ತು ಸಾರಿಗೆ ಇಲಾಖೆಯ ದಂಡ ಪಾವತಿ ಬಾಕಿ ಪ್ರಕರಣಗಳಿಗೆ ಶೇ.50 ರಿಯಾಯಿತಿ ನೀಡಿ ಪ್ರಕರಣ ಇತ್ಯರ್ಥಪಡಿಸುವ ಸಂಬಂಧ ಮಾಹಿತಿ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಡಿ.13 ರಂದು ನಡೆಯುವ ಲೋಕ್ ಅದಾಲತ್‌ನಲ್ಲಿ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇರುವ ವೈವಾಹಿಕ ವಿವಾಹದ ವ್ಯಾಜ್ಯಗಳು, ಅಪಘಾತಕ್ಕೆ ಸಂಬಂಧಿಸಿದ ಪರಿಹಾರದ ವ್ಯಾಜ್ಯಗಳು, ಕೌಟುಂಬಿಕ ದೌರ್ಜನ್ಯ ಪ್ರಕರಣಗಳು, ಚೆಕ್ ಅಮಾನ್ಯ ಪ್ರಕರಣಗಳು, ವಾಣಿಜ್ಯ ವಿವಾದದ ದಾವೆಗಳು, ವೇತನ ಮತ್ತು ಸೇವೆಗೆ ಸಂಬಂಧಿಸಿದ ವ್ಯಾಜ್ಯಗಳು, ರಾಜೀ ಆಗಬಹುದಾದ ಕ್ರಿಮಿನಲ್ ಪ್ರಕರಣಗಳು, ಗ್ರಾಹಕರ ವೇದಿಕೆಯ ಪ್ರಕರಣಗಳು, ಸಾಲದ ಪ್ರಕರಣಗಳು, ಪಾಲು ವಿಭಾಗದ ದಾವೆಗಳು, ಸ್ಥಿರ ಆಸ್ತಿ ಸ್ವಾಧೀನದ M.S.Santosh ದಾವೆಗಳು, ಭೂಸ್ವಾಧೀನದ ಪ್ರಕರಣಗಳು ಮತ್ತು ಇತರೆ ಸಿವಿಲ್ ಪ್ರಕರಣಗಳ ರಾಜೀ ಸಂಧಾನಕ್ಕಾಗಿ ಉಭಯ ಪಕ್ಷಗಾರರ ಉಪಸ್ಥಿತಿಯಲ್ಲಿ ನ್ಯಾಯಾಧೀಶರು ಮತ್ತು ನ್ಯಾಯಿಕೇತರ ಸಂಧಾನಕಾರರು ರಾಜೀ ಸಂಧಾನದ ಪ್ರಕ್ರಿಯೆಯನ್ನು ಕೈಗೊಂಡು ಪಕ್ಷಗಾರರು ವಿವಾದವನ್ನು ಇತ್ಯರ್ಥಪಡಿಸುವರು. ಅಂದರಂತೆ ಅಂತಿಮ ಆದೇಶವನ್ನು ಅದೇ ದಿನದಂದು ನೀಡಲಾಗುವುದು. ಸಾರ್ವಜನಿಕರು ಮತ್ತು ಪಕ್ಷಗಾರರು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಕೋರಿದರು.
ದಿನಾಂಕ: 13.09.2025 ರಂದು ಕೈಗೊಳ್ಳಲಾದ ಈ ವರ್ಷದ 3 ನೇ ರಾಷ್ಟ್ರೀಯ ಲೋಕ್‌ಅದಾಲತ್‌ನಲ್ಲಿ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇದ್ದ 14550 ರಷ್ಟು ಪ್ರಕರಣಗಳು ರಾಜೀ ಸಂಧಾನದ ಮೂಲಕ ಕೊನೆಗೊಂಡಿದ್ದು, ಅವುಗಳ ಮೂಲಕ ಪಕ್ಷಗಾರರು ಒಟ್ಟು ರೂ. 36,49,86,652/- ಮೊತ್ತದ ಪರಿಹಾರ ಒಳಗೊಂಡ ವಿವಾದಗಳನ್ನು ರಾಜೀ ಮಾಡಿಕೊಂಡಿರುತ್ತಾರೆ. ಅದೇ ಸಂದರ್ಭದಲ್ಲಿ ಒಟ್ಟು 1,46,464 ವ್ಯಾಜ್ಯ ಪೂರ್ವ ಪ್ರಕರಣಗಳು ಕೊನೆಗೊಂಡಿದ್ದು, ಅವುಗಳ ಮೂಲಕ ಒಟ್ಟು ರೂ. 46,95,49,044/- ಮೊತ್ತದ ಪರಿಹಾರ ಒಳಗೊಂಡ ವಿವಾದಗಳನ್ನು ರಾಜೀ ಮಾಡಿಕೊಂಡಿರುತ್ತಾರೆ ಎಂದು ತಿಳಿಸಿದರು.

B. Y. Raghavendra ಶಿವಮೊಗ್ಗದ ಅಕ್ಕಮಹಾದೇವಿ ವೃತ್ತ ಮೇಲ್ಸೇತುವೆ ಸನಿಹದ ಪ್ರದೇಶಗಳ ಅಭಿವೃದ್ಧಿ ಕಾಮಗಾರಿಗಳಿಗೆ ಸಂಸದರಿಂದ ಚಾಲನೆ

0

B. Y. Raghavendra ಶಿವಮೊಗ್ಗದ ಅಕ್ಕಮಹಾದೇವಿ ವೃತ್ತ (ಉಷಾ ನರ್ಸಿಂಗ್ ಹೋಮ್) ಫ್ಲೈಓವರ್ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ!!!

ಶಿವಮೊಗ್ಗದ ಅಕ್ಕಮಹಾದೇವಿ ವೃತ್ತ (ಉಷಾ ನರ್ಸಿಂಗ್ ಹೋಮ್) ಮೇಲ್ಸೇತುವೆ ಸುತ್ತಮುತ್ತಲಿನ ಪ್ರದೇಶಗಳ ಸಮಗ್ರ ಅಭಿವೃದ್ಧಿ ಮತ್ತು ಸುಧಾರಣಾ ಕಾಮಗಾರಿಗಳಿಗೆ ಇಂದು ಶಂಕುಸ್ಥಾಪನೆ ನೆರವೇರಿಸಲಾಯಿತು. ಈ ಕಾರ್ಯಕ್ರಮದ ಮೂಲಕ ನಗರ ಮೂಲಸೌಕರ್ಯ ವಿಕಾಸಕ್ಕೆ ಮತ್ತೊಂದು ಮಹತ್ವದ ಹೆಜ್ಜೆಯನ್ನಿಡಲಾಗಿದೆ.

ಈ ಯೋಜನೆ ಶಿವಮೊಗ್ಗ ಮಹಾನಗರ ಪಾಲಿಕೆ ಮತ್ತು ಭಾರತೀಯ ರೈಲ್ವೆ ಇಲಾಖೆಯ ಜಂಟಿ ಆಶ್ರಯದಲ್ಲಿ ಕೈಗೊಳ್ಳಲಾಗುತ್ತಿದ್ದು, ಪ್ರದೇಶದ ಸಂಚಾರ ವ್ಯವಸ್ಥೆ, ಸುರಕ್ಷತೆ ಮತ್ತು ಮೂಲಸೌಕರ್ಯ ಸುಧಾರಣೆಗೆ ಮಹತ್ತರ ಕೊಡುಗೆಯನ್ನು ನೀಡಲಿದೆ.

ಯೋಜನೆಯ ಪ್ರಮುಖ ಕಾರ್ಯಗಳು:

  • ರಸ್ತೆ ಬದಿಯ ಒಳಚರಂಡಿ ನಿರ್ಮಾಣ — ಮಳೆಗಾಲದ ನೀರು ನಿಲ್ಲದಂತೆ ಪರಿಣಾಮಕಾರಿ ವ್ಯವಸ್ಥೆ
  • ಚರಂಡಿಗಳ ಮೇಲೆ ಡೆಕ್ ಸ್ಲಾಬ್ ಅಳವಡಿಕೆ
  • ಸಾರ್ವಜನಿಕರ ರಕ್ಷಣೆಗೆ ಸುರಕ್ಷತಾ ತಡೆಗೋಡೆ ನಿರ್ಮಾಣ
  • ರಾತ್ರಿ ಸಂಚಾರ ಸುಗಮತೆಗೆ ಹೊಸ ಬೀದಿ ದೀಪಗಳ ಅಳವಡಿಕೆ
  • ರಸ್ತೆಗಳ ನವೀಕರಣ ಮತ್ತು ಸುಧಾರಣೆ

B. Y. Raghavendra ಈ ಕಾಮಗಾರಿಗಳು ಪೂರ್ಣಗೊಂಡ ಬಳಿಕ ಸಂಚಾರ ದಟ್ಟಣೆ ಕಡಿತ, ಮಳೆಗಾಲದಲ್ಲಿ ಜಲಾವೃತ ಸಮಸ್ಯೆಗೆ ಶಾಶ್ವತ ಪರಿಹಾರ ಮತ್ತು ಸಾರ್ವಜನಿಕರ ಸುರಕ್ಷತೆಗೆ ದೃಢ ಬಲ ನೀಡಲಿವೆ.

ಈ ಸಂದರ್ಭದಲ್ಲಿ ಶಿವಮೊಗ್ಗ ನಗರ ಶಾಸಕರಾದ ಶ್ರೀ ಎಸ್. ಎನ್. ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಡಾ. ಧನಂಜಯ್ ಸರ್ಜಿ, ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀ ಮಾಯಣ್ಣ ಗೌಡ, ಮಾಜಿ ಸೂಡಾ ಅಧ್ಯಕ್ಷರಾದ ಶ್ರೀ ನಾಗರಾಜ್ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

Chess ರಾಷ್ಟ್ರಮಟ್ಟದ ಚೆಸ್ ಪಂದ್ಯಕ್ಕೆ ಅನಘಾ ಪಾಟಿಲ್ ಆಯ್ಕೆ

0

Chess ದಿನಾಂಕ ನವೆಂಬರ್ 23 ಹಾಗೂ 24 ರಂದು ಬೆಂಗಳೂರಿನ ಎಂ ಎಸ್ ರಾಮಯ್ಯ ಪಿ ಯು ಕಾಲೇಜಿನಲ್ಲಿ ನಡೆದ ರಾಜ್ಯ ಮಟ್ಟದ ಚದುರಂಗ ಸ್ಪರ್ಧೆಯಲ್ಲಿ ಶಿವಮೊಗ್ಗ ಜಿಲ್ಲೆಯ ಚಾಣಕ್ಯ ಚೆಸ್ ಸ್ಕೂಲ್ ವಿದ್ಯಾರ್ಥಿಯಾದ ಅನಘಾ ಪಾಟೀಲ್ 3 ನೇ ಸ್ಥಾನ ಪಡೆದು ರಾಷ್ಟ್ ಮಟ್ಟಕೆ ಆಯ್ಕೆ ಯಾಗಿ ಶಿವಮೊಗ್ಗ ಜಿಲ್ಲೆಗೆ ಕೀರ್ತಿ ತಂದಿರುತ್ತಾರೆ, ಇವರಿಗೆ ಚಾಣಕ್ಯ ಚೆಸ್ ಸ್ಕೂಲ್ ವತಿಯಿಂದ ತುಂಬು Chess ಹೃದಯದ ಧನ್ಯವಾದಗಳು. ಡಿಸೆಂಬರ್ ತಿಂಗಳ 5,6, ಹಾಗೂ 7 ರಂದು ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಷ್ಟ್ರ ಮಟ್ಟದ ಚದುರಂಗ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

Ramakrishna Vidyaniketan School ಶ್ರೀರಾಮಕೃಷ್ಣ ಶಾಲೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಿಗೆ ರಾಜ್ಯಮಟ್ಟಕ್ಕೆ ಆಯ್ಕೆ

0

Ramakrishna Vidyaniketan School ಇಲ್ಲಿನ ಗೋಪಾಳದ ಶ್ರೀ ರಾಮಕೃಷ್ಣ ವಿದ್ಯಾನಿಕೇತನ ಶಾಲೆಯ ಮೂವರು ವಿದ್ಯಾರ್ಥಿನಿಯರು ನೆಹರು ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡೆಯಲ್ಲಿ ಭಾಗವಹಿಸಿದ್ದು, ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
10ನೇ ತರಗತಿ ವಿದ್ಯಾರ್ಥಿಯಾದ ವೇದಾ ಕೆ ಇವರು ಹ್ಯಾಮರ್ ಥ್ರೋನಲ್ಲಿ ಪ್ರಥಮ ಸ್ಥಾನ,
9 ನೇ ತರಗತಿ ವಿದ್ಯಾರ್ಥಿಗಳಾದ ಧನಲಕ್ಷ್ಮಿ ಎಸ್ ಹ್ಯಾಮರ್ ಥ್ರೋನಲ್ಲಿ ದ್ವಿತೀಯ, ರಕ್ಷಾ ವೈ ಡಿ ತಟ್ಟೆ ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.
Ramakrishna Vidyaniketan School ಈ ಮೂರು ವಿದ್ಯಾರ್ಥಿಗಳು 2025 ರ ಡಿಸೆಂಬರ್ 5 ರಿಂದ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುವ ರಾಜ್ಯ ಮಟ್ಟದ ಸ್ಪರ್ದೆಗೆ ಆಯ್ಕೆಯಾಗಿರುತ್ತಾರೆ.
ಅಂತೆಯೇ, ಪ್ರಣಿತಾ ಪಿ ಥ್ರೋಬಾಲ್‌ನಲ್ಲಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಈ ಎಲ್ಲಾ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ, ಶಿಕ್ಷಕ ವೃಂದದ ಪರವಾಗಿ ಕಾರ್ಯದರ್ಶಿ ಶೋಭಾ ವೆಂಕಟರಮಣ ಅಭಿನಂದಿಸಿದ್ದಾರೆ.

SAIL-VISL ಗ್ರಾಮಾಂತರ ಶಿಕ್ಷಕರ ತರಬೇತಿಯತ್ತ – ಸೈಲ್- ವಿಐಎಸ್ಎಲ್ ನ ಚಿತ್ತ

0

SAIL-VISL ೨೫ನೇ ನವೆಂಬರ್, ೨೦೨೫ ರಂದು ಸೈಲ್- ವಿಐಎಸ್ಎಲ್ ನ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಯೋಜನೆ ಅಡಿಯಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಗ್ರಾಮೀಣ ತರಬೇತಿ ಚಟುವಟಿಕೆಗಳನ್ನು ಹೆಚ್ಚಿಸಲು ಅನುಕೂಲವಾಗುವಂತೆ ‘ಡಿಜಿಟಲ್ ಇಂಟರಾಕ್ಟೀವ್ ಪ್ಯಾನಲ್ ಮತ್ತು ಎರಡು ಕಂಪ್ಯೂಟರ್’ಗಳನ್ನು ಕರ್ನಾಟಕದ ಭದ್ರಾವತಿಯ ಶಿಕ್ಷಣ ಇಲಾಖೆಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ವಿಐಎಸ್ಎಲ್ ವತಿಯಿಂದ ಕಾರ್ಯಪಾಲಕ ನಿರ್ದೇಶಕರಾದ ಶ್ರೀ ಅನೂಪ್ ಕುಮಾರ್, ಶ್ರೀ ಬಿ. ವಿಶ್ವನಾಥ, ಮುಖ್ಯ ಮಹಾಪ್ರಬಂಧಕರು (ಮಾನವ ಸಂಪನ್ಮೂಲ), ಶ್ರೀ ಎಲ್. ಪ್ರವೀಣ್ ಕುಮಾರ್, ಮಹಾಪ್ರಬಂಧಕರು (ಮಾನವ ಸಂಪನ್ಮೂಲ ಮತ್ತು ಸಾರ್ವಜನಿಕ ಸಂಪರ್ಕ) ಮತ್ತು ಸಿ.ಎಸ್.ಆರ್ ಅಪೆಕ್ಷ್ ಸಮಿತಿಯ ಸದಸ್ಯರು, ಶ್ರೀ ಅಜಯ್ ಡಿ. ಸೋಂಕುವಾರ್, ಉಪ ಮಹಾಪ್ರಬಂಧಕರು ಮತ್ತು ಸಿ.ಎಸ್.ಆರ್ ಅಪೆಕ್ಸ್ ಸಮಿತಿಯ ಸದಸ್ಯರು, ಶ್ರೀ ಎಮ್.ಎಲ್. ಯೋಗೇಶ್, ಕಿರಿಯ ಪ್ರಬಂಧಕರು ಮತ್ತು ಸಿ.ಎಸ್.ಆರ್ ಅಪೆಕ್ಷ್ ಸಮಿತಿಯ ನೋಡಲ್ ಅಧಿಕಾರಿ ಉಪಸ್ಥಿತರಿದ್ದರು. ಹಾಗೆಯೇ ಭದ್ರಾವತಿಯ ಶಿಕ್ಷಣ ಇಲಾಖೆಯಿಂದ ಶ್ರೀ ಎ.ಕೆ. ನಾಗೇಂದ್ರಪ್ಪ, ಕ್ಷೇತ್ರ ಶಿಕ್ಷಣ ಅಧಿಕಾರಿ, ಭದ್ರಾವತಿ, ಶ್ರೀ ಪಂಚಾಕ್ಷರಿ, ಕ್ಷೇತ್ರ ಸಂಪನ್ಮೂಲ ಅಧಿಕಾರಿ, ಮತ್ತು ಶ್ರೀ ದಯಾನಂದ, ಶಿಕ್ಷಣ ಸಂಯೋಜನಾಧಿಕಾರಿ, ಭದ್ರಾವತಿ ಉಪಸ್ಥಿತರಿದ್ದರು.
ಗಿISಐ ನ ಕಾರ್ಯಪಾಲಕ ನಿರ್ದೇಶಕರಾದ ಶ್ರೀ ಅನೂಪ್ ಕುಮಾರ್‌ರವರು ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಯೋಜನೆ ಅಡಿಯಲ್ಲಿ ಕೈಗೊಳ್ಳಲಾದ ವಿವಿಧ ಚಟುವಟಿಕೆಗಳನ್ನು ಉದ್ಘಾಟಿಸುತ್ತ, ನಮ್ಮ ಸಂಸ್ಥೆಯ ಪರಿಧಿಯಲ್ಲಿರುವರೆಲ್ಲರ ಮುಖದಲ್ಲಿ ನಗುವನ್ನು ತರುವುದು, ಅವರ ಜೀವನವನ್ನು ಸುಧಾರಿಸುವುದು ಮತ್ತು ನಮ್ಮ ಸಾಮಾಜಿಕ ಜವಾಬ್ದಾರಿಗಳ ಮೂಲಕ ಅರ್ಥಪೂರ್ಣ ಬದಲಾವಣೆಯನ್ನು ತರುವ ಗುರಿಯನ್ನು ಹೊಂದಿದ್ದೇವೆ. ಸೈಲ್- ವಿಐಎಸ್ಎಲ್ ಭವಿಷ್ಯದಲ್ಲಿಯೂ ಸಹ ಇದನ್ನು ಮಾಡಲು ಶ್ರಮಿಸುತ್ತದೆ ಎಂದರು.
SAIL-VISL ಭದ್ರಾವತಿಯ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಎ.ಕೆ. ನಾಗೇಂದ್ರಪ್ಪನವರು ಮಾತನಾಡುತ್ತ, SಂIಐ-ಗಿISಐ ಆಡಳಿತ ಮಂಡಳಿ ಕಳೆದ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆಯಾಧ್ಯಂತ ಸಕಾರಿ ಶಾಲೆಯ ಮಕ್ಕಳಿಗೆ ಬೆಂಚುಗಳು, ಮೇಜುಗಳು, ಬೋರ್ಡ್ಗಳು, ಶಾಲಾ ಪುಸ್ತಕಗಳು ಮತ್ತು ಬ್ಯಾಗ್‌ಗಳು ಮುಂತಾದ ಶೈಕ್ಷಣಿಕ ಉಪಕರಣಗಳು ಮತ್ತು ವಿಶೇಷ ಚೇತನ ಮಕ್ಕಳಿಗೆ ವಿಶೇಷ ಸಹಾಯಕ ಸಾಧನಗಳನ್ನು ಒದಗಿಸುವಲ್ಲಿ ನೀಡಿದ ಎಲ್ಲಾ ಸಹಾಯಕ್ಕಾಗಿ ಧನ್ಯವಾಗಳನ್ನು ಅರ್ಪಿಸಿದರು. ಇದು ಜಿಲ್ಲೆಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವಲ್ಲಿ ಬಹಳ ಸಹಾಯ ಮಾಡುತ್ತದೆ. ಕಳೆದ ವರ್ಷ ಸ್ವೀಕರಿಸಿದ ವೀಡಿಯೋ ಕಾನ್ಫರೆನ್ಸ್ ಮತ್ತು ವೆಬ್ ಕ್ಯಾಮೆರಾ ವ್ಯವಸ್ಥೆಯ ಜೊತೆಗೆ ಇಂದು ಸ್ವೀಕರಿಸಿದ ‘ಡಿಜಿಟಲ್ ಇಂಟರಾಕ್ಟೀವ್ ಪ್ಯಾನಲ್ ಮತ್ತು ಕಂಪ್ಯೂಟರ್‌ಗಳು ತಾಲ್ಲೂಕಿನ ೯೨೫ ಶಿಕ್ಷಕರಿಗೆ ಮತ್ತು ೪೬೦೦೦ ವಿದ್ಯಾರ್ಥಿಗಳಿಗೆ ತರಬೇತಿ ನೀಡುವಲ್ಲಿ ಬಹಳ ಸಹಕಾರಿಯಾಗಲಿದೆ ಎಂದರು.
ಶ್ರೀ ಯೋಗೇಶ್,ಎಮ್.ಎಲ್ ಸ್ವಾಗತಿಸಿದರು ಮತ್ತು ಶ್ರೀಮತಿ ವಾಣಿ ಪಾಟೀಲ್ ನಿರೂಪಿಸಿದರು.

shahi ಶಾಹಿ ಎಕ್ಸ್ಪೋರ್ಟ್ಸ್ ನಿಂದ ವಿವಿಧ ಸಾಮಾಜಿಕ ಸೇವಾ ಚಟುವಟಿಕೆ

0

shahi ಶಾಹಿ ಎಕ್ಸ್ಪೋರ್ಟ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಶಿಕಾರಿಪುರ ಸಾರ್ವಜನಿಕ ತಾಲ್ಲೂಕು ಆಸ್ಪತ್ರೆಗೆ ಇಪ್ಪತ್ತು ಲಕ್ಷ ರೂ. ಮೌಲ್ಯದ ಸಿ ಬಿ ನ್ಯಾಟ್ ಯಂತ್ರ ಕೊಡುವ ಮೂಲಕ ಸಾರ್ವಜನಿಕ ಸೇವೆಗೆ ಕೊಡುಗೆ ನೀಡಿದೆ.
ಶಾಹಿ ಎಕ್ಸ್ಪೋರ್ಟ್ ಪ್ರೈವೇಟ್ ಲಿಮಿಟೆಡ್ ಅವರ ಸಿ ಎಸ್ ಆರ್ ಯೋಜನೆಯಡಿ ಈ ಕೊಡುಗೆ ನೀಡಲಾಗಿದೆ.
ಪ್ರದಾನ ಮಂತ್ರಿ ಅವರ ಟಿ ಬಿ ಮುಕ್ತ ಭಾರತ ಎಂಬ ಹೆಗ್ಗಳಿಕೆಗೆ ಪೂರಕವಾಗಿ, ಶಾಹಿ ಎಕ್ಸ್ಪೋರ್ಟ್ ಪ್ರೈವೇಟ್ ಲಿಮಿಟೆಡ್ ಅವರ ಸಿ ಎಸ್ ಎಸ್ ಯೋಜನೆ ಅಡಿಯಲ್ಲಿ 20ಲಕ್ಷ ರೂಪಾಯಿ ಮೌಲ್ಯ ದ ಸಿ ಬಿ ನ್ಯಾಟ್ ಯಂತ್ರ ವನ್ನು ಹಸ್ತಾಂತರ ಮಾಡಲಾಯಿತು. ಈ ಯಂತ್ರವು ಅಲ್ಪ ಅವಧಿ ಯಲ್ಲಿ ನಿರ್ದಿಷ್ಟವಾದ ಫಲಿತಾಂಶದೊಂದಿಗೆ, ಏಕಕಾಲಕ್ಕೆ 4 ಜನರ ಸ್ಯಾಂಪಲ್ ಪರೀಕ್ಷೆ ಮಾಡಬಹುದಾಗಿದೆ. ಕಡಿಮೆ ಸಮಯದಲ್ಲಿ ಪರೀಕ್ಷೆಯ ಮೂಲಕ, ರೋಗದ ಹರಡುವಿಕೆಯನ್ನು ತಡೆಯಬಹುದಾಗಿದೆ.
ಹಸ್ತಾಂತರ ಸಮಾರಂಭ ಉದ್ಘಾಟಿಸಿದ ಸಂಸದರಾದ ಬಿ.ವೈ. ರಾಘವೇಂದ್ರ ಅವರು ಶಾಹೀ ಸೇವಾ ಕಾರ್ಯವನ್ನು ಪ್ರಶಂಸಿಸಿದರು.
ಶಾಹಿಯ ಆಡಳಿತ ವಿಭಾಗದ ಜಿ.ಎಂ. ಲಕ್ಷಣ ಧರ್ಮಟ್ಟಿ, ಮಾನವ ಸಂಪನ್ಮೂಲ ವಿಭಾಗದ ಜಿ.ಎಂ. ಬೀನೇಶ್ ಕುಮಾರ, ಮಾನವ ಸಂಪನ್ಮೂಲ ವಿಭಾಗದ ಎಜಿಎಂ ಪ್ರಶಾಂತ್ ಎಂ ಆರ್. ವಿಭಾಗ, ಹಾಗೂ ಸಿ ಎಸ್ ಆರ್ ತಂಡದ ನಾಗಯ್ಯ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು, ಡಿಟಿಓ ಶ್ರೀ ನಟರಾಜು, ಎಎಂ. ಓ ಅರುಣ್ ಕುಮಾರ್ ಹಾಜರಿದ್ದರು.

ಕೇಂದ್ರ ಕಾರಾಗೃಹದಲ್ಲಿ ಹೊಲಿಗೆ ತರಬೇತಿ:

shahi ಶಾಹಿ ಎಕ್ಸ್ ಪೋರ್ಟ್ ಸಂಸ್ಥೆ ವತಿಯಿಂದ ಶಿವಮೊಗ್ಗದಲ್ಲಿರುವ ಕೇಂದ್ರ ಕಾರಾಗೃಹದ ಬಂಧಿ ನಿವಾಸಿಗಳಿಗೆ ಹೊಲಿಗೆ ತರಬೇತಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಸಮಾರೋಪ ಸಮಾರಂಭ ಹಾಗೂ ಅರ್ಹತಾ ಪ್ರಮಾಣ ಪತ್ರ ವಿತರಣಾ ಸಮಾರಂಭ ನಡೆಯಿತು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ್ ಎಂ.ಎಸ್. ಅವರು ಕೌಶಲ್ಯದ ಕಲಿಕೆ ಸಾವಲಂಬನೆಗೆ ದಾರಿದೀಪವಾಗಲಿದೆ ಎಂದರು.
ಪ್ರಮಾಣ ಪತ್ರ ವಿತರಿಸಿದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಬಂಧಿ ನಿವಾಸಿಗಳಿಗೆ ಶುಭ ಕೋರಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಬಲ್ಕಿಶ್ ಭಾನು, ಶಾಹಿ ಸಂಸ್ಥೆಯ ಸೀನಿಯರ್ ಮ್ಯಾನೇಜರ್ ಕವಿತಾ ಪ್ರಸಾದ್, ಆಡಳಿತ ವಿಭಾಗದ ಜಿಎಂ ಲಕ್ಷ್ಮಣ ಧರ್ಮಟ್ಟಿ, ಕೇಂದ್ರ ಕಾರಾಗೃಹದ ಮುಖ್ಯ ಅಧ್ಯಕ್ಷಕ ಡಾ. ಬಿ ರಂಗನಾಥ್, ಶಿವಮೊಗ್ಗ ಡಿವೈಎಸ್ಪಿ ಅಂಜನಪ್ಪ ಕಾರಾಗೃಹದ ಸಹಾಯಕ ಅಧೀಕ್ಷಕಿ ಪ್ರೀತಿ ಉಪಸ್ಥಿತರಿದ್ದರು
ಈ ಸಂದರ್ಭದಲ್ಲಿ ತರಬೇತಿ ಅಧಿಕಾರಿಗಳಾದ ನಾಗರಾಜ್ ಕಿರಣ್ ಅವರನ್ನು ಅಭಿನಂಧಿಸಲಾಯಿತು. ತಿಮ್ಮಪ್ಪ ಪ್ರಾರ್ಥಿಸಿದರು, ತಿಪ್ಪೇಸ್ವಾಮಿ ಹಾಗೂ ಶಿವಾನಾಯ್ಕ ಅವರು ತರಬೇತಿ ಅವಧಿಯ ಅನುಭವಗಳನ್ನು ಹಂಚಿಕೊಂಡರು. ಸಂಸ್ಥೆ ಶಿಕ್ಷಕ ಗೋಪಾಲಕೃಷ್ಣ ಅವರು ಸ್ವಾಗತಿಸಿದರು.

Department of public instruction Shimoga ಶಾಲಾಶಿಕ್ಷಣ & ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿ ಶ್ರೀಮತಿ ವಿ.ರಶ್ಮಿ ಮಹೇಶ್ ಅವರ ಶಿವಮೊಗ್ಗ ಭೇಟಿ ಮಾಹಿತಿ.

0

Department of public instruction Shimoga ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ವಿ. ರಶ್ಮಿ ಮಹೇಶ್ ಇವರು ನ. 28 ರಂದು ರಾತ್ರಿ 9.40 ಶಿವಮೊಗ್ಗ ಆಗಮಿಸಿ ವಾಸ್ತವ್ಯ ಮಾಡಲಿದ್ದಾರೆ.
ನ. 29 ರಂದು ಬೆಳಗ್ಗೆ 10.00ಕ್ಕೆ ಶಿವಮೊಗ್ಗ /ಚಿತ್ರದುರ್ಗ/ದಾವಣಗೆರೆ ಜಿಲ್ಲೆಯ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶ ಸುಧಾರಣೆ ಕಾರ್ಯಗಾರದಲ್ಲಿ ಭಾಗವಹಿಸುವುದು ಹಾಗೂ ಜಿಲ್ಲೆಯ ವಿವಿಧ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಲಿದ್ದಾರೆ ಹಾಗೂ ಶಿವಮೊಗ್ಗದಲ್ಲಿ ವಾಸ್ತವ್ಯ ಮಾಡಲಿದ್ದಾರೆ.
Department of public instruction Shimoga ನ. 30 ರಂದು ಸಂಜೆ 3.00ಕ್ಕೆ ಬೆಂಗಳೂರಿಗೆ ತೆರಳಲಿದ್ದಾರೆ ಎಂದು ಕಾರ್ಯದರ್ಶಿಗಳ ಆಪ್ತ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Social Welfare Department ಹಿಂದುಳಿದ,ಅಲೆಮಾರಿ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ಅರ್ಜಿ ಅವಧಿ ವಿಸ್ತರಣೆ.

0

Social Welfare Department ಮೆಟ್ರಿಕ್ ನಂತರದ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಪ್ರವರ್ಗ-1 ಅಲೆಮಾರಿ/ ಅರೆ ಅಲೆಮಾರಿ ಜನಾಂಗದ ವಿದ್ಯಾರ್ಥಿಗಳಿಂದ 2025-26 ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ, ಅಲೆಮಾರಿ/ ಅಲೆಮಾರಿ ಜನಾಂಗದ ಮೆಟ್ರಿಕ್ ನಂತರದ ಅರ್ಹತಾ ವಿದ್ಯಾರ್ಥಿ ವೇತನ, ಶುಲ್ಕ ವಿನಾಯಿತಿ, ವಿದ್ಯಾಸಿರಿ-ಊಟ ಮತ್ತು ವಸತಿ ಸಹಾಯ ಯೋಜನೆಗಳಿಗೆ ಆನ್‌ಲೈನ್ ಮೂಲಕ ಆಹ್ವಾನಿಸಲಾಗಿದ್ದ ಅರ್ಜಿ ಅವಧಿಯನ್ನು ಡಿ.20 ರವರೆಗೆ ವಿಸ್ತರಿಸಲಾಗಿದೆ.
ಅರ್ಜಿಯನ್ನು https://ssp.postmatric.karnataka.gov.in ವೆಬ್‌ಸೈಟ್ ಮೂಲಕ ಸಲ್ಲಿಸಬೇಕು. ಹಾಗೂ https://bcwd.karnataka.gov.in ವೆಬ್‌ಸೈಟ್‌ಗೆ ಭೇಟಿ ನೀಡಿ ಕಾರ್ಯಕ್ರಮದ ವಿವರ, ಅರ್ಹತೆ, ಸಲ್ಲಿಸಬೇಕಾದ ದಾಖಲೆಗಳು ಹಾಗೂ ವಿದ್ಯಾರ್ಥಿವೇತನಕ್ಕೆ ಸಂಬಂಧಿಸಿದ ಸರ್ಕಾರಿ ಆದೇಶಗಳ ಮಾಹಿತಿ ಪಡೆಯಬಹುದು.
Social Welfare Department ಹೆಚ್ಚಿನ ಮಾಹಿತಿಗಾಗಿ ದೂ.ಸಂ;8050770005 ಹಾಗೂ bcwdhelpline@gmail.com ಗೆ ಸಂಪರ್ಕಿಸಬಹುದು, ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶಕ್ಕಾಗಿ ಸಹಾಯವಾಣಿ ಸಂ: 1902 ಹಾಗೂ postmatrichelp@karnataka.gov.in ಗೆ ಸಂಪರ್ಕಿಸಬಹುದೆಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Gangadharendra Saraswati Swamiji ಮಾನವ ಸಂಪನ್ಮೂಲವನ್ನ ಬಲಿಷ್ಠಗೊಳಿಸುವುದೇ ಗೀತೆಯ ಗುರಿ- ಶ್ರೀಗಂಗಾಧರೇಂದ್ರ ಸರಸ್ವತಿ‌ಶ್ರೀ

0

Gangadharendra Saraswati Swamiji ಗೀತೆಯ ಸಂದೇಶದ ಅಳವಡಿಕೆಯು ಮುಖ್ಯವಾಗಿ‌
ಉದ್ಯೋಗಿಯು ತನ್ನ ಮನಸ್ಸನ್ನ ನಿರ್ವಹಣೆ ಮಾಡಿಕೊಳ್ಳುವವ
ಉದ್ಯೋಗವನ್ನ ಚೆನ್ನಾಗಿ ಮಾಡುತ್ತಾನೆ.ತುರ್ತು ಪರಿಸ್ಥಿತಿ ,
ಇಡೀ ಮನಸ್ಸಿನ ನಿಯಂತ್ರಣ ತಪ್ಪುವ ಸಂದರ್ಭ ಬಂದಾಗ ಹೇಗೆ  ಸುಧಾರಿಸಿಕೊಳ್ಳುತ್ತೇವೆ ಎಂಬ ಮೈಂಡ್ ಮ್ಯಾನೇಜ್ಮೆಂಟ್ 
ಕೌಶಲ ಎನ್ನುತ್ತೇವೆ. ಈ ಮನಸ್ಸಿನ ನಿರ್ವಹಣೆಯೇ ಬಹಳ ಮುಖ್ಯವಾಗಿದೆ.ಅದೇ ಯಶಸ್ಸಿನ ಕೀಲಿಕೈ ಎಂದು
ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಶ್ರೀಗಂಗಾಧರೇಂದ್ರ ಸರಸ್ವತಿ‌ಮಹಾಸ್ವಾಮಿಗಳು ಹೇಳಿದರು. 

ಶಿವಮೊಗ್ಗದ ಪೆಸಿಟ್ ಶಿಕ್ಷಣ ಸಂಸ್ಥೆಯ ಬಿಸಿನೆಸ್ ಮ್ಯಾನೇಜ್ಮೆಂಟ್ ಕಾಲೇಜು,
ಶ್ರೀಭಗವದ್ಗೀತಾ ಅಭಿಯಾನ ಶಿವಮೊಗ್ಗ ಜಿಲ್ಲಾ ಸಮಿತಿ‌‌ ಮತ್ತು 
ಸೋಂದಾ ಸ್ವರ್ಣವಲ್ಲಿ ಮಹಾ ಸಂಸ್ಥಾನ ಇವರ ಆಶ್ರಯದಲ್ಲಿ
ಏರ್ಪಡಿಸಿದ್ದ “ ಭವಿಷ್ಯದ ಉದ್ಯಮ ನಿರ್ವಾಹಕರಿಗೆ ಭಗವದ್ಗೀತೆಯಿಂದ ಸಿಗುವ ವಿಚಾರ ಸುಗಂಧ “ ವಿಚಾರದ ಬಗ್ಗೆ ಪೂಜ್ಯಶ್ರೀಗಳು ಮಾತನಾಡುತ್ತಿದ್ದರು.
ಉದ್ಯೋಗ ಕ್ಷೇತ್ರಗಳಲ್ಲಿ ಎರಡು ಭಾಗಗಳಿವೆ.  ಮಾನವ ಸಂಪನ್ಮೂಲ ಮೊದಲನೇ ಭಾಗವಾಗಿದೆ. ಎರಡನೇಯದು 
ಮಿಕ್ಕ‌ಇತರೆ ಸಂಪನ್ಮೂಲಗಳು.
ಮಾನವ ಸಂಪನ್ಮೂಲದ ಬಗ್ಗೆ ಗೀತೆ ಪ್ರಧಾನವಾಗಿ ತಿಳಿಸುತ್ತದೆ.
ಇತರೆ ಸಂಪನೂಲಗಳ ಬಗ್ಗೆ 
ಶೈಕ್ಷಣಿಕವಾಗಿ ಬೋಧನಾ ಶಾಸ್ತ್ರಗಳಿವೆ.
Gangadharendra Saraswati Swamiji ಕ್ಷೀಣಿಸುವಂಥ ಮಾನವ ಸಂಪನ್ಮೂಲವನ್ನ ಉನ್ನತವಾಗಿ‌ ಮೇಲೆತ್ತಿ ಬಲಶಾಲಿಯನ್ನಾಗಿ ಮಾಡುವುದೇ ಭಗವದ್ಗೀತೆಯ‌
ದೃಷ್ಟಿ ಎಂದು ಗೀತೆಯ ಶ್ಲೋಕಗಳಲ್ಲಿ ದಕ್ಷತೆ ಬಗ್ಗೆ ಉಲ್ಲೇಖಗಳನ್ನ ಸೋದಾಹರಣವಾಗಿ ಶ್ರೀಗಂಗಾಧರೇಂದ್ರ ಸರಸ್ವತಿ‌ ಮಹಾಸ್ವಾಮಿಗಳು  ವಿವರಿಸಿದರು.
ನವೆಂಬರ್ 30 ರ ಭಗವದ್ಗಿತೆಯ ಹನ್ನೊಂದನೇ ಅಧ್ಯಾಯದ ಸಾಮೂಹಿಕ ಪಠಣದ  ಮಹಾಸಮರ್ಪಣೆ ಕಾರ್ಯದಲ್ಲಿ ವಿದ್ಯಾರ್ಥಿಗಳೆಲ್ಲರೂ ಭಾಗಿಗಳಾಗಲು ಪೂಜ್ಯಶ್ರೀಗಳು ಕರೆಕೊಟ್ಟರು.

ಭಗವದ್ಗೀತಾ ಅಭಿಯಾನದ ಶಿವಮೊಗ್ಗ ಜಿಲ್ಲಾ ಸಮಿತಿ ಕಾರ್ಯಾಧ್ಯಕ್ಷ ರು ,ಹಿರಿಯ ವಕೀಲರೂ ಆಗಿರುವ ಅಶೋಕ ಜಿ ಭಟ್ ಪ್ರಸ್ತಾವನಾ ಭಾಷಣ ಮಾಡಿದರು.
ಉದ್ದಿಮೆಯಲ್ಲಿ ಮಾಲೀಕ ಮತ್ತು ಶ್ರಮಿಕರ ನಡುವೆ ಕಾರ್ಯನಿರ್ವಹಣೆಯು 
ಸವಾಲಾತ್ಮಕ ಸನ್ನಿವೇಶಗಳನ್ನ ಸೃಷ್ಟಿಸುತ್ತದೆ. ಅಂತಹ‌
ಕ್ಲಿಷ್ಟಕರ ಸಂದರ್ಭದಲ್ಲಿ ಕರ್ಮಣ್ಯೇವಾಧಿಕಾರಸ್ತೆ ಮಾ ಫಲೇಷು ಕದಾಚನಾ ಎಂಬ ಸಂದೇಶ ಈ ಪ್ರಸಂಗದಲ್ಲಿ ಹೇಗೆ ಆಗಿನ ಮನೋಸ್ಥಿತಿ ಇರಬೇಕು ಎಂಬುದನ್ನ ಸೂಕ್ತವಾಗಿ ತಿಳಿಸುತ್ತದೆ. ಎಂದರು.

ವಿಷಯ ಪರಿಣಿತರಾಗಿ 
ಬೆಂಗಳೂರಿನ ಮ್ಯಾನೇಜ್ಮೆಂಟ್ ಗುರು ಪ್ರೊ. ವೆಂಕಟ ಸುಬ್ರಮಣಿಯನ್ ಪ್ರಧಾನ ಭಾಷಣ ಮಾಡಿದರು.
ಏರಿಳಿತ, ಅನಿಶ್ಚಿತತೆ, ಸಂಕೀರ್ಣತೆ, ಮತ್ತು 
ಸಂಧಿಗ್ದತೆಗಳ (VUCA) ನಡುವೆ ಇರುವ‌ ನಮ್ಮ ಬದುಕಿನಿಂದ ನಿಧಾನವಾಗಿ ಬಿಡಿಸಿಕೊಂಡು ಬರಬೇಕಾದರೆ ನಮಗೆ ಒಂದು ವಿದ್ಯೆಯ  ಸಹಾಯ ಬೇಕು .  ಜಗತ್ತಿನಲ್ಲಿ
ಪ್ರಸ್ತುತವಿರುವ ಶೈಕ್ಷಣಿಕ ವ್ಯವಸ್ಥೆ
ಅದನ್ನ ಒಳಗೊಂಡಿದೆಯೆ? ಎಂಬುದು ಪ್ರಶ್ನಾರ್ಥಕವಾಗಿದೆ.
ಆ   ತಿಳುವಳಿಕೆಯ ನಮ್ಮ ಭಾರತೀಯ ಜ್ಞಾನವಂತಿಕೆಯಲ್ಲಿ ಸಿಗುತ್ತದೆ.ಈ ಜ್ಞಾನವನ್ನ 
ಭಗವದ್ಗೀತೆಯು  ನಮಗೆ  ನೀಡುತ್ತದೆ. ಎಂದು ಹೇಳಿದರು.
ಉದ್ಯೋಗ ಕ್ಷೇತ್ರ ಮತ್ತು  ಮಾನವ ಸಂಪನ್ಮೂಲಗಳ ನಿರ್ವಹಣೆ ಗೀತೆಯಲ್ಲಿ‌ ಸಂದೇಶವಿದೆ ಎಂದು ತಿಳಿಸಿದರು. 
ಯುದ್ಧರಂಗದಲ್ಲಿ ಅರ್ಜುನ 
ಕೃಷ್ಣನನ್ನ  ಸಂಪೂರ್ಣ ಗುರುವಾಗಿ ಒಪ್ಪಿಕೊಂಡ ನಂತರ
ಆವನಿಗೆ ಅಂತರಂಗದಲ್ಲಿನ
ಭಯ ನಿವಾರಣೆ ಆಯಿತು.
ಯಾವ ವಿಚಾರದಲ್ಲೂ ಗೊಂದಲ ಇರಬಾರದು.ಆಗ ನಮ್ಮನ್ನ ನಾವೇ ನಿರ್ವಹಿಸಲು ಸಾಧ್ಯ ಎಂದು ಗೀತೆಯಲ್ಲಿನ ಹಲವು ಶ್ಲೋಕಗಳಲ್ಲಿ ತಿಳಿದು ಬರುವ  ಅರ್ಥ ಭಾವಗಳನ್ನ ವಿವರಿಸಿದರು.

ಶಾಸಕ ಮತ್ತು ಅಭಿಯಾನ ಶಿವಮೊಗ್ಗ ಜಿಲ್ಲಾ ಸಮಿತಿಯ 
ಅಧ್ಯಕ್ಷ ಡಿ.ಎಸ್.ಅರುಣ್ ಅವರು ಮಾತನಾಡಿ ‘ ಮೌಲ್ಯಾಧಾರಿತ ಶಿಕ್ಷಣ ಇವತ್ತು 
ಅಗತ್ಯವಿದೆ.ಈಗ ಇಟೆಲಿಜೆಂಟ್ ಕೋಷಂಟ್ ಜಾಸ್ತಿಯಾಗಿ  ಎಮೋಷನಲ್ ಕೋಷಂಟ್ ಕಡಿಮೆಯಾಗಿದೆ. ಅದನ್ನ ತುಂಬಿ‌ಕೊಡುವಲ್ಲಿ ಭಗವದ್ಗೀತೆ
ಒಂದು ಕೊಂಡಿಯಾಗಿದೆ. ಎಂದರು.
ಜನಶಿಕ್ಷಣ ಸಂಸ್ಥೆಯ ಮುಖ್ಯಸ್ಥೆ ಹಾಗೂ ಪೆಸಿಟ್ ಶಿಕ್ಷಣ ಸಂಸ್ಥೆಯ ನಿರ್ದೇಶಕಿ
ಶ್ರೀಮತಿ ಅರುಣಾದೇವಿ ಅವರು
ಮಾತನಾಡಿ ನಮಗೆ ಮೊದಲ
ಮ್ಯಾನೇಜ್ಮೆಂಟ್ ಗುರುಗಳೆಂದರೆ
ನಮ್ಮ ನಮ್ಮ ತಂದೆತಾಯಂದಿರು. ಅವರು ಬಾಳಿದ,ವ್ಯವಹರಿಸಿದ ದೈನಂದಿನ ಚಟುವಟಿಕೆಯನ್ನ ಗಮನವಿಟ್ಟು ನೋಡಿದರೆ ನಾವು ದೊಡ್ಡವರಾದ ‌ಮೇಲೆ ಅನುಸರಿಸಬೇಕಾದ ಪಾಠಗಳು ಸಿಗುತ್ತವೆ ಎಂದರು.
ಭಗವದ್ಗೀತೆಯ ಹೊಳಹುಗಳ ಆಧರಿಸಿ ಮ್ಯಾನೇಜ್ಮೆಂಟ್  ನಿರ್ವಹಣೆ ಬಗ್ಗೆ  ಸೂಕ್ತ ಪಠ್ಯ ನಿರ್ಮಿಸಿದರೆ ಅಂತಹ  ಅದ್ಯಯನದ ಕೋರ್ಸ್ ಗಳನ್ನ ತಮ್ಮ ಪೆಸಿಟ್ ಸಂಸ್ಥೆಯಲ್ಲಿ ಆರಂಭಿಸಲು ಸಾಧ್ಯ ಎಂಬ ಅಪೇಕ್ಷೆಯನ್ನ ವ್ಯಕ್ತಪಡಿಸಿದರು.
ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.