ಒಂದು ಕಡೆ ಜಾಗತಿಕ ಸಮುದಾಯಗಳಿಂದ ಎಚ್ಚರಿಕೆ, ಇನ್ನೊಂದೆಡೆ ಉಕ್ರೇನ್ ನಲ್ಲಿಯೇ ಸೈನಿಕರಿಗೆ ಪ್ರತಿರೋಧ. ಇದೆಲ್ಲ ಕಾರಣಗಳಿಂದಾಗಿ ಕೋಪಿ ತಗೊಂಡಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಪುಟ್ಟ ದೇಶ ಉಕ್ರೇನ್ ಮೇಲೆ ಅಣ್ವಸ್ತ್ರ ದಾಳಿ ಮಾಡುವ ಆತಂಕ ಎದುರಾಗಿದೆ.
ಹಲವು ಪಾಶ್ಚಿಮಾತ್ಯ ರಾಷ್ಟ್ರಗಳು ಆರ್ಥಿಕ ದಿಗ್ಬಂಧನ ಮಾತ್ರವಲ್ಲದೆ ರಷ್ಯಾದ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದವು. ಆ ಹಿನ್ನೆಲೆಯಲ್ಲಿ ಪುಟಿನ್ ಅವರು ಅಣ್ವಸ್ತ್ರ ದಾಳಿ ಕುರಿತು ಸಕಲ ಸಿದ್ಧತೆ ಕೈಗೊಳ್ಳಬೇಕು ಎಂದು ತಮ್ಮ ರಾಷ್ಟ್ರದ ರಕ್ಷಣಾ ಸಚಿವ ಮತ್ತು ಅಣ್ವಸ್ತ್ರ ಪಡೆ ಮುಖ್ಯಸ್ಥರಿಗೆ ಭಾನುವಾರ ಸೂಚಿಸಿದ್ದರು. ಔಪಚಾರಿಕವಾಗಿ ಉಕ್ರೇನ್ ಜೊತೆ ಶಾಂತಿ ಮಾತುಕತೆಗೆ ಪುಟಿನ್ ಒಪ್ಪಿದ್ದರೂ, ಅವರ ಮನಸ್ಸಿನಲ್ಲಿ ಉಕ್ರೇನ್ ವಿರುದ್ಧ ಆಕ್ರೋಶದ ಕುದಿ ಇದ್ದೇ ಇರುತ್ತದೆ. ಆದ್ದರಿಂದ ಮಾತುಕತೆಯಲ್ಲಿ ಸ್ವಲ್ಪ ಹಿನ್ನಡೆಯಾದರೂ ಅವರು ಯಾವುದೇ ಕ್ಷಣದಲ್ಲಿ ಅಣ್ವಸ್ತ್ರ ದಾಳಿ ನಿರ್ಧಾರ ಕೈಗೊಳ್ಳಬಹುದು ಎಂದು ಹೇಳಲಾಗುತ್ತಿದೆ.
ರಷ್ಯಾಕ್ಕೆ ಮನ್ನಣೆ ಇಲ್ಲದ ಜಗತ್ತು ನಮಗೆ ಬೇಡ. ನಮ್ಮ ತಂಟೆಗೆ ಯಾರಾದರೂ ಬಂದರೆ ಅಣ್ವಸ್ತ್ರ ಪ್ರಯೋಗಿಸಲು ಹಿಂದೆಮುಂದೆ ನೋಡುವುದಿಲ್ಲ ಎಂದು ಪುಟಿನ್ ನಾಲ್ಕು ವರ್ಷ ಹಿಂದೆಯೇ ಘೋಷಿಸಿದ್ದರು. ಇದು ಸಹ ಉಕ್ರೇನ್ ಮೇಲಿನ ಅಣ್ವಸ್ತ್ರ ಭೀತಿಯನ್ನು ಹೆಚ್ಚಿಸಿದೆ. ಆದರೆ ಬ್ರಿಟನ್ ಮಾತ್ರ, ಪುಟಿನ್ ಕೇವಲ ಹೆದರಿಸುತ್ತಿದ್ದಾರೆ. ಅವರು ಅಸ್ತ್ರ ಪ್ರಯೋಗಕ್ಕೆ ಮುಂದಾಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದೆ.
ಕಳೆದ ಆರು ದಿನಗಳಿಂದ ಉಕ್ರೇನ್ ಮೇಲೆ ರಷ್ಯಾ ಪಾರುಪತ್ಯ ಸಾಧಿಸಿದೆ. ಕೀವ್ ಮತ್ತು ಕಾರ್ಕಿವ್ ನಗರಗಳ ಮೇಲೆ ನಿಯಂತ್ರಣ ಸಾಧಿಸಿದೆ. ಪುಟಿನ್ ಸೈನಿಕರು ಕೀವ್ ನಗರದಿಂದ ಕೇವಲ 30 ಕಿ.ಮೀ. ದೂರದಲ್ಲಿದ್ದಾರೆ. ದೇಶದ ಪ್ರಮುಖ ಆಯಕಟ್ಟಿನ ಗಳನ್ನು ವಶಕ್ಕೆ ಪಡೆದುಕೊಂಡಿದೆ. ಹೀಗಿದ್ದರೂ ಉಕ್ರೇನ್ ಸೈನಿಕರು ನಾಗರಿಕರು ರಷ್ಯಾಗೆ ಮಣಿದಿಲ್ಲ. ಇದರ ಬದಲಿಗೆ ಎರಡು ನಗರಗಳಲ್ಲಿ ತೀವ್ರ ಪ್ರತಿರೋಧ ತೋರಿಸಿ ಹಿಮ್ಮೆಟ್ಟಿಸುತ್ತಿದ್ದಾರೆ.
ಐರೋಪ್ಯ ರಾಷ್ಟ್ರಗಳು ಉಕ್ರೇನ್ ರಕ್ಷಣಾ ನೆರವು, ರಾಕೆಟ್ ಮತ್ತು ಕ್ಷಿಪಣಿಗಳ ಪೂರೈಕೆಗೆ ಅಸ್ತು ಎಂದಿವೆ. ಈ ಸಂದರ್ಭದಲ್ಲಿ ಹಿಂದಡಿ ಇಟ್ಟರೆ ಅವಮಾನ ಎಂದು ಭಾವಿಸಿರುವ ಪುಟಿನ್, ಯಾವುದೇ ಕಠೋರ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಉಕ್ರೆನ್ ಮೇಲೆ ದಾಳಿ ಮತ್ತು ಜಾಗತಿಕವಾಗಿ ಸೇರಿರುವ ನಿರ್ಬಂಧಗಳು ಸಹ ರಷ್ಯಾವನ್ನು ಆರ್ಥಿಕ ಬಿಕ್ಕಟ್ಟಿಗೆ ದೂಡಲಿವೆ. ಬೇರೆ ದೇಶಗಳ ಕಠಿಣ ನಿರ್ಬಂಧಗಳೇ ಪುಟಿನ್ ಸಿಟ್ಟು ಪುಟಿದೇಳಲಲು ಕಾರಣವಾಗಿದೆ. ಇದೇ ಕಾರಣಕ್ಕೆ ಅಣ್ವಸ್ತ್ರ ಪಡೆಗಳನ್ನು ಸಿದ್ಧವಿರುವ ಅಂತೆ ಸೂಚಿಸಿರುವುದು ಇದಕ್ಕೆ ನಿರ್ದೇಶನ ಎನ್ನಲಾಗುತ್ತಿದೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ಆ್ಯಂಕರ್ : ವೀಕ್ಷಕರೆ ನಿಮಗೆಲ್ಲಾ ನಮಸ್ಕಾರ ನಾನು ಅಶ್ವಿನಿ ನಾಯಕ ನಿಮಗೆಲ್ಲ ಕೆ-ಲೈವ್ ಯುಟ್ಯೂಬ್ ಚಾನೆಲ್ ಗೆ ಸ್ವಾಗತ. ಆಂಕರ್: ಮಾನವಿಯತೆಯನ್ನ ಮರೆತಿರುವ ಇಂದಿನ ಕಾಲದಲ್ಲಿ ಇಲ್ಲೊಬ್ಬ ರೈತ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ತಾನು ಸಾಕಿದ ಎರಡು ಹೋರಿಗಳ ಪುಣ್ಯ ತಿಥಿ ನೆರವೇರಿಸಿ ಸಾರ್ಥಕತೆ ಮೆರೆದಿದ್ದಾನೆ. ಇಂದು ಮನುಷ್ಯನ ಸಾವಿನ ಬಳಿಕ ಆತನ ತಿಥಿ ಮಾಡೋಕೆ ಹಿಂದೆ ಮುಂದೆ ನೋಡ್ತಾರೆ. ಆದ್ರೆ ಇಲ್ಲೊಬ್ಬ ರೈತ ತನ್ನ ಹೋರಿಗಳ ವರ್ಷದ ಪುಣ್ಯ ಸ್ಮರಣೆ ಮಾಡಿರೋದು ನಿಜಕ್ಕೂ ಶ್ಲಾಘನೀಯ… ಹಾಗಾದ್ರೆ ಅದು ಎಲ್ಲಿ…. ಆ ರೈತ ಯಾರು ಅಂತಿರ…ಈ ಕುರಿತ ವರದಿ ಇಲ್ಲಿದೆ ನೋಡಿ…… V/O : ಇಲ್ಲೊಬ್ಬ ರೈತ ತನ್ನ ನೆಚ್ಚಿನ ಹೋರಿಗಳಾದ ರಾಣೆಬೆನ್ನೂರು ಹುಲಿ ಮತ್ತು ರಾಣೆಬೆನ್ನೂರು ಡಾನ್ ಸಾವನ್ನಪ್ಪಿ ಒಂದು ವರ್ಷದ ಪುಣ್ಯ ಸ್ಮರಣೆಯನ್ನು ಅದ್ಧೂರಿಯಾಗಿ ಆಚರಿಸಿದರು.(Video) ಆತ ಮತ್ಯಾರೂ ಅಲ್ಲ ರಾಣೆಬೆನ್ನೂರು ಹುಲಿ ಮಾಲೀಕ ದೇವಮರಿಯಪ್ಪ. ಇವರನ್ನು ಎಲ್ಲರೂ ಪ್ರೀತಿಯಿಂದ ಮೀಸೆ ಮಾಮ ಅಂತಲೂ ಕರೆಯುತ್ತಾರೆ.(V) V/O : 2 12 ವರ್ಷದ ಹಿಂದೆ ಹೋರಿಯನ್ನ ತಮಿಳುನಾಡಿನಿಂದ ತರಲಾಯಿತು. ತಂದ ಹೋರಿಗೆ ರಾಣೆಬೆನ್ನೂರು ಹುಲಿ ಎಂದು ದೇವ ಮರಿಯಪ್ಪ ಗುದಿಗೇರ ಅವರು ನಾಮಕರಣ ಮಾಡಿದರು (V). V/O : 3 ಕರ್ನಾಟಕ ರಾಜ್ಯದಲ್ಲಿ ನಡೆಯುವಂತಹ ಹೋರಿ ಬೆದರಿಸುವ ಹಬ್ಬಗಳಲ್ಲಿ ರಾಣೇಬೆನ್ನೂರು ಹುಲಿ ತನ್ನದೇ ಆದಂತಹ ಖ್ಯಾತಿಯನ್ನು ಪಡೆದಿದೆ (V). ದಶಕಗಳ ಕಾಲ ಹೋರಿ ಬೆದರಿಸುವ ಸ್ಪರ್ಧೆಗಳಲ್ಲಿ ರಾಣೆಬೆನ್ನೂರು ಹುಲಿ ಸುಮಾರು 25 ತೊಲ ಬಂಗಾರ, ಒಂದುವರೆ ಕೆಜಿ ಬೆಳ್ಳಿ, 17 ಬೈಕ್, 20 ತಿಜೋರಿ 15 ಕಾಟ್ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿತು (V). V/O : 4 ಹತ್ತು ವರ್ಷಗಳ ಕಾಲ ರಾಜ್ಯ ಹೊರರಾಜ್ಯಗಳಲ್ಲಿ ಹೋರಿ ಬೆದರಿಸುವ ಅಖಾಡದಲ್ಲಿ ರಾಣೇಬೆನ್ನೂರು ಹುಲಿ ಇದೆ ಎಂದರೆ ಸಾಕು ಸ್ಪರ್ಧೆಗಳಲ್ಲಿ ನಡುಕವನ್ನು ಹುಟ್ಟಿಸುವ ಮೂಲಕ ಖ್ಯಾತಿಗಳಿಸಿರುವ ರಾಣಿಬೆನ್ನೂರು ಹುಲಿ ತನ್ನದೇ ಆದ ಸಾವಿರಾರು ಅಭಿಮಾನಿಗಳನ್ನು ಹೊಂದಿದೆ (V). V/O : 5 ದೇವ ಮರಿಯಪ್ಪ ಅವರು ಸ್ವಂತ ಮಗನಂತೆ ರಾಣಿಬೆನ್ನೂರು ಹುಲಿಯನ್ನು ಆರೈಕೆ ಮಾಡಿದರು (V).
ರಾಣೇಬೆನ್ನೂರು ಹುಲಿ ಬಂದ ಬಳಿಕ ತನ್ನ ಆರ್ಥಿಕ ಪರಿಸ್ಥಿತಿಯು ಉತ್ತಮ ಮಟ್ಟಕ್ಕೆ ಬಂತು ಎನ್ನುತ್ತಾರೆ ಹೋರಿ ಮಾಲೀಕ ಮರಿಯಪ್ಪ(V). ಎಲ್ಲಾ ಸರಿ ಇರುವ ನಡುವೆ ಒಂದು ದಿನ ಅನಾರೋಗ್ಯದಿಂದ ರಾಣೆಬೆನ್ನೂರು ಹುಲಿ ಮೃತ ಪಟ್ಟಿತು (V). ಈ ಹೋರಿಯ ಸಾವಿನ ಸುದ್ದಿಯು ರಾಣೆಬೆನ್ನೂರು ಅಲ್ಲದೇ ರಾಜ್ಯದ ಹಲವೆಡೆ ಇದ್ದಂತಹ ರಾಣೆಬೆನ್ನೂರು ಹುಲಿಯ ಅಭಿಮಾನಿಗಳಿಗೆ ಬರ ಸಿಡಿಲಿನಂತೆ ಬಡೆಯಿತು (V). ಇಡೀ ರಾಣೆಬೆನ್ನೂರು ಸೂತಕದ ಛಾಯೆ ಎಂತೆ ಮಾರ್ಪಟ್ಟಿತು(V). ರಾಣೇಬೆನ್ನೂರು ಹುಲಿ ಅಂತ್ಯಕ್ರಿಯೆಯನ್ನು ಮನುಷ್ಯರ ಅಂತ್ಯ ಕ್ರಿಯೆಯಂತೆ ಮಾಡುವ ಮೂಲಕ ಮಾಲಿಕ ಮರಿಯಪ್ಪ ಅವರು ಪ್ರಾಣಿ ಪ್ರೇಮವನ್ನು ಮೆರೆದಿದ್ದರು(V). V/O : 6 ಅಂತ್ಯಕ್ರಿಯೆ ವೇಳೆ ಮರಿಯಪ್ಪ ಅವರು ರಾಣೆಬೆನ್ನೂರು ಹುಲಿಯ ಋಣತೀರಿಸಲು ನನ್ನಿಂದ ಸಾಧ್ಯವಿಲ್ಲ ಈ ರೀತಿಯಾದರೂ ಕೊಂಚ ಋಣ ತೀರಿಸಿ ಹೋರಿ ಮಾಲೀಕ ಮರಿಯಪ್ಪ ಬಿಕ್ಕಿಬಿಕ್ಕಿ ಅತ್ತಿದ್ದರು (V). ರಾಣಿಬೆನ್ನೂರು ಹುಲಿ ಮೃತ ಪಟ್ಟು ಒಂದು ತಿಂಗಳು ಕಳೆಯುವಷ್ಟರಲ್ಲೇ ಮರಿಯಪ್ಪ ಅವರ ಮತ್ತೊಂದು ಹೆಸರಾಂತ ಹೋರಿ ರಾಣೆಬೆನ್ನೂರು ಡಾನ್ ಮೃತಪಟ್ಟಿತು (V). ರಾಣಿಬೆನ್ನೂರು ಡಾನ್ ಎಂಬ ಹೋರಿಯು ರಾಜ್ಯದ ನಾನಾ ಭಾಗಗಳಲ್ಲಿ ಹೊರರಾಜ್ಯಗಳಲ್ಲಿ ಕೂಡ 10 ರಿಂದ 20 ಕ್ವಿಂಟಾಲ್ ತೂಕದ ಕಲ್ಲು ಜಗ್ಗುವ ಸ್ಪರ್ಧೆ ಹೆಸರುವಾಸಿಯಾಗಿತ್ತು(V). ಎರಡು ಹೋರಿಗಳ ಅಕಾಲಿಕ ನಿಧನದಿಂದಾಗಿ ಮರಿಯಪ್ಪ ಕಂಗೆಟ್ಟಿದ್ದರು(V). ರಾಣೆಬೆನ್ನೂರಿನ ಗುಡ್ಡದ ಆನ್ವೇರಿ ಗ್ರಾಮದಲ್ಲಿರುವ ಮರಿಯಪ್ಪ ಅವರ ಜಮೀನಿನಲ್ಲಿ ರಾಣೇಬೆನ್ನೂರು ಹುಲಿ ಮತ್ತು ರಾಣೆಬೆನ್ನೂರು ಡಾನ್ ಹೋರಿಗಳ ಅಂತ್ಯಸಂಸ್ಕಾರವನ್ನು ಮಾಡಲಾಗಿತ್ತು (V/O). V/O : 7 ಈ ಎರಡು ಹೋರಿಗಳ ವರ್ಷದ ಪುಣ್ಯ ಸ್ಮರಣೆಯನ್ನು ಅದ್ಧೂರಿಯಾಗಿ ಮರಿಯಪ್ಪ ಅವರು ಆಚರಿಸಿದರು(V). ರಾಣೆಬೆನ್ನೂರು ಹುಲಿ ಮತ್ತು ರಾಣೆಬೆನ್ನೂರು ಡಾನ್ ಹೋರಿಯ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸ್ಥಳೀಯರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಅಭಿಮಾನಿಗಳು ಆಗಮಿಸಿದ್ದರು(V). ಹೋರಿಗಳ ಬಗ್ಗೆ ಅಪಾರ ಪ್ರೀತಿ ಹೊಂದಿರೋ ಮರಿಯಪ್ಪ ಅವುಗಳ ಸಾವಿನ ನಂತರ ಜನ್ಮ ನೀಡಿದ ತನ್ನ ತಮ್ಮನ ಮಗನಿಗೆ ‘ಹುಲಿ’ ಎಂದು ನಾಮಕರಣ ಮಾಡಿರುವುದು ವಿಶೇಷ.(V). ಬೈಟ್ : ಮರಿಯಪ್ಪ ಇನ್ನು ಸಭಾ ಕಾರ್ಯಕ್ರಮದಲ್ಲಿ ರಾಣೆಬೆನ್ನೂರು ಹುಲಿ ಹೋರಿಗೆ ಸಂಬಂಧಿಸಿದಂತೆ ಲೇಖಕ ಜೀವರಾಜ ಛತ್ರ ಅವರು ಬರೆದ ‘ಹಟ್ಟಿ ಹಬ್ಬ’ ಎಂಬ ಕೃತಿಯನ್ನು ಬಿಡುಗಡೆ ಮಾಡಲಾಯಿತು(V). ಅಲ್ಲದೆ ನೂರಾರು ಸಂಖ್ಯೆಯಲ್ಲಿಸೇರಿದ್ದ ಪುಣ್ಯ ಸ್ಮರಣೆಯಲ್ಲಿ ಹೋರಿಮಾಲೀಕರು, ಹೋರಿ ಹಿಡಿತಗಾರರು ಸೇರಿದಂತೆ ಜನಪ್ರತಿನಿಧಿಗಳು ಜಮಾಯಿಸಿದ್ರು(V). ರಾಣೇಬೆನ್ನೂರಿನ ನಗರಸಭೆ ಸದಸ್ಯ ಪ್ರಕಾಶ್ ಬುರಡಿಕಟ್ಟೆ ಪಾಲ್ಗೊಂಡು ಹಟ್ಟಿ ಹಬ್ಬ ಹಾಗೂ ಮರಿಯಪ್ಪನವರ ಹೋರಿಗಳ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡದ್ದು ಹೀಗೆ. ಬೈಟ್: ಪ್ರಕಾಶ್ ಬುರಡಿಕಟ್ಟೆ ಗೋವುಗಳ ರಕ್ಷಣೆ ಹೋರಿ ಹಬ್ಬ ದಿಂದ ಮಾತ್ರ ಸಾಧ್ಯ ಅಂತಾರೆ ಜನಪದ ಕ್ರೀಡೆ ಹೋರಿ ಹಬ್ಬ ಆಚರಣೆ ಸಮಿತಿ ರಾಜ್ಯಾಧ್ಯಕ್ಷ ಬಸವರಾಜ್, ಹಾವೇರಿ ಅವರು ಕೆ ಲೈವ್ ಗೆ ಹೇಳಿದ್ದು ಹೀಗೆ ಬೈಟ್ : ಬಸಪ್ಪ ಆಂಕರ್: ಅದೆನೇ ಇರಲಿ… ಮನುಷ್ಯತ್ವವನ್ನೆ ಮರೆತು ಮನುಷ್ಯರೇ ಕಿತ್ತಾಡುವ ಈ ಕಾಲದಲ್ಲಿ ಸಾಕಿ ಸಲುಹಿದ ಜಾನುವಾರುಗಳ ಮೇಲೆ ತೋರಿದ ರೈತನ ಪ್ರೀತಿಗೆ ನಮ್ಮ ಸಲಾಂ…. ಇನ್ನು ಇದರಿಂದ ದೇವ ಮರಿಯಪ್ಪ ಎಲ್ಲಾ ರೈತರಿಗೆ ಮಾದರಿಯಾಗಿದ್ದಂತೂ ನಿಜ… ಈ ಕಾರ್ಯಕ್ರಮ ನಿಮಗೆ ಇಷ್ಟ ಆಯ್ತಲ್ಲ ಹಾಗಿದ್ರೆ ಲೈಕ್ ಮಾಡಿ ಶೇರ್ ಮಾಡಿ ನಮ್ಮ ಚಾನೆಲ್ ಗೆ ಸಬ್ಸ್ಕ್ರೈಬ್ ಆಗಿ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ಆರಾಧನೆಯು ದೇವರನ್ನು ಪ್ರಸನ್ನಗೊಳಿಸುವ ಕಾರಣಕ್ಕೆ ಮಾಡಲಾಗುತ್ತದೆ. ದೇವರ ಪ್ರಸನ್ನತೆಯು ಹರಿದು ಮರಳಿ ಭಕ್ತರನ್ನು ಸೇರುವ ಮೂಲಕಆರಾಧನೆಯು ದೇವರನ್ನು ಪ್ರಸನ್ನಗೊಳಿಸುವ ಕಾರಣಕ್ಕೆ ಮಾಡಲಾಗುತ್ತದೆ. ದೇವರ ಪ್ರಸನ್ನತೆಯ ಹರಿದು ಮರಳಿ ಭಕ್ತರನ್ನು ಸೇರುವ ಮೂಲಕ ಲೋಕದಲ್ಲಿ ಶಾಂತಿ ನೆಲೆಸುತ್ತದೆ ಎಂದು ರಾಮಚಂದ್ರಾಪುರ ಮಠದ ಪೀಠಾಧಿಪತಿ ಶ್ರೀ ರಾಘವೇಶ್ವರ ಭಾರತಿ ಸ್ವಾಮಿಯವರು ತಿಳಿಸಿದರು.
ಹೊಸನಗರದ ರಾಮಚಂದ್ರಾಪುರ ಮಠದಲ್ಲಿ ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಭಕ್ತಾದಿಗಳಿಗೆ ಅವರು ಆಶೀರ್ವಚನ ನೀಡಿದರು. ಜಗತ್ತಿನಲ್ಲಿ ಇಂದು ಸಮಾಧಾನ ಇಲ್ಲದಂತಾಗಿದೆ. ದಿಕ್ಕುದೆಸೆ ಇಲ್ಲದೇ ಆನಂದವನ್ನು ಹುಡುಕಲು ಹೊರಟಿದ್ದೇವೆ. ಆದರೆ ನಿಜವಾದ ಆನಂದ ಭಗವಂತನ ಆರಾಧನೆಯಿಂದ ಮಾತ್ರ ಸಾಧ್ಯ. ಪೂಜೆಗೆ ದುಃಖವನ್ನು ದೂರಮಾಡುವ ಶಕ್ತಿ ಇದೆ ಎಂದರು.
ಶಿವನು ಎಲ್ಲವನ್ನೂ ಲಯಗೊಳಿಸುವ ಶಕ್ತಿ ಹೊಂದಿರುವುದಾಗಿ ನಾವು ನಂಬುತ್ತೇವೆ. ಶಿವನ ಆರಾಧನೆಯಿಂದ ಕಲ್ಮಷ ಗೊಂಡ ಮನಸ್ಸನ್ನು ಸಹಾ ಲಯಗೊಂಡು ದುಃಖ, ಅಶಾಂತಿ ಗಳು ದೂರವಾಗುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಗೃಹಸಚಿವ ಆರಗ ಜ್ಞಾನೇಂದ್ರ, ಎಂಎಡಿಬಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ, ಶಾಸಕರಾದ ಸಿ.ಟಿ.ರವಿ, ಎಚ್. ಹಾಲಪ್ಪ, ಸುಕುಮಾರ ಶೆಟ್ಟಿ, ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅಶೋಕ ಹಾರನಹಳ್ಳಿ, ಕೈಗಾರಿಕಾ ನಿಗಮದ ಉಪಾಧ್ಯಕ್ಷ ದತ್ತಾತ್ರಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಲೋಕದಲ್ಲಿ ಶಾಂತಿ ನೆಲೆಸುತ್ತದೆ ಎಂದು ರಾಮಚಂದ್ರಾಪುರ ಮಠದ ಪೀಠಾಧಿಪತಿ ಶ್ರೀ ರಾಘವೇಶ್ವರ ಭಾರತಿ ಸ್ವಾಮಿಯವರು ತಿಳಿಸಿದರು.
ಹೊಸನಗರದ ರಾಮಚಂದ್ರಾಪುರ ಮಠದಲ್ಲಿ ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಭಕ್ತಾದಿಗಳಿಗೆ ಅವರು ಆಶೀರ್ವಚನ ನೀಡಿದರು. ಜಗತ್ತಿನಲ್ಲಿ ಇಂದು ಸಮಾಧಾನ ಇಲ್ಲದಂತಾಗಿದೆ. ದಿಕ್ಕುದೆಸೆ ಇಲ್ಲದೇ ಆನಂದವನ್ನು ಹುಡುಕಲು ಹೊರಟಿದ್ದೇವೆ. ಆದರೆ ನಿಜವಾದ ಆನಂದ ಭಗವಂತನ ಆರಾಧನೆಯಿಂದ ಮಾತ್ರ ಸಾಧ್ಯ. ಪೂಜೆಗೆ ದುಃಖವನ್ನು ದೂರಮಾಡುವ ಶಕ್ತಿ ಇದೆ ಎಂದರು.
ಶಿವನು ಎಲ್ಲವನ್ನೂ ಲಯಗೊಳಿಸುವ ಶಕ್ತಿ ಹೊಂದಿರುವುದಾಗಿ ನಾವು ನಂಬುತ್ತೇವೆ. ಶಿವನ ಆರಾಧನೆಯಿಂದ ಕಲ್ಮಷ ಗೊಂಡ ಮನಸ್ಸನ್ನು ಸಹಾ ಲಯಗೊಂಡು ದುಃಖ, ಅಶಾಂತಿ ಗಳು ದೂರವಾಗುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಗೃಹಸಚಿವ ಆರಗ ಜ್ಞಾನೇಂದ್ರ, ಎಂಎಡಿಬಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ, ಶಾಸಕರಾದ ಸಿ.ಟಿ.ರವಿ, ಎಚ್. ಹಾಲಪ್ಪ, ಸುಕುಮಾರ ಶೆಟ್ಟಿ, ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅಶೋಕ ಹಾರನಹಳ್ಳಿ, ಕೈಗಾರಿಕಾ ನಿಗಮದ ಉಪಾಧ್ಯಕ್ಷ ದತ್ತಾತ್ರಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ಕಾಂಗ್ರೆಸ್ ನ ಮೇಕೆದಾಟು ಪಾದಯಾತ್ರೆ 2.0 ಸೋಮವಾರ ಬೆಂಗಳೂರಿಗೆ ಭರ್ಜರಿಯಾಗಿ ಪ್ರವೇಶಿಸಿದೆ. ಇನ್ನೂ ಮೂರುದಿನ ನಗರದಲ್ಲಿ ಹೋರಾಟದ ಕಹಳೆ ಮೊಳಗಲಿದೆ. ಈ ನಡುವೆ ಕಾಂಗ್ರೆಸ್ ಪಾದಯಾತ್ರೆಗೆ ಬೆಂಗಳೂರಿನ ಬಿಜೆಪಿ ಶಾಸಕರು ಪ್ರತಿರೋಧ ವ್ಯಕ್ತಪಡಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಸ್ವಂತ ಜಿಲ್ಲೆ ರಾಮನಗರದಲ್ಲಿ ಪಾದಯಾತ್ರೆ ಎಲ್ಲರ ಗಮನ ಸೆಳೆಯಿತು. ಡಿಕೆಶಿ ಅವರು ನೇಗಿಲ ಹಿಡಿದು ಹೆಜ್ಜೆ ಹಾಕಿದರು. ಆದಿಚುಂಚನಗಿರಿ ಮಠದ ಶ್ರೀ ಬಾಲಗಂಗಾಧರನಾಥ ಸ್ವಾಮಿ ಅವರ ಹುಟ್ಟೂರಾದ ಬಾನಂದೂರಿನಿಂದಲೇ 2ನೇ ದಿನದ ಯಾತ್ರೆ ಶುರುವಾಯಿತು. ಪಾದಯಾತ್ರೆಯಲ್ಲಿ ಬೆಂಗಳೂರು, ತುಮಕೂರು ಸೇರಿದಂತೆ 10 ಸಾವಿರ ಮಂದಿ ಭಾಗವಹಿಸಿದ್ದರು.
ಎಸ್ಪಿ, ಡಿಸಿ ಮೂಲಕ ನಮ್ಮನ್ನು ಹೆದರಿಸ್ತೇವೆ ಎಂದರೆ ನಾವು ಸುಮ್ಮನೆ ಇರ್ತೀವಾ? 4 ದಿನದ ನಮ್ಮ ಶ್ರಮಕ್ಕೆ 40 ವರ್ಷಗಳ ಪರಿಹಾರ ಸಿಗಲಿದೆ. ನಮಗೆ ರಾಜಕಾರಣವೇ ಮುಖ್ಯ ಅಲ್ಲ. ಸ್ವಾಭಿಮಾನಕ್ಕೆ, ರಾಷ್ಟ್ರ ಹಿತಕ್ಕೆ ಹೋರಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಬಳ್ಳಾರಿ ಪಾದಯಾತ್ರೆಯಂತೆ ಇದು ಸಹ ಸಾರ್ವಜನಿಕ ಹಿತಾಸಕ್ತಿಗಾಗಿ ನಡೆದ ಯಾತ್ರೆಯಾಗಿದೆ. ಟ್ರಾಫಿಕ್ ಜಾಮ್ ನಂಥ ಸಣ್ಣಪುಟ್ಟ ಸಮಸ್ಯೆಗೆ ಸಹಿಸಿಕೊಳ್ಳುತ್ತಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ತಿಳಿಸಿದರು.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ಉಕ್ರೇನ್ ಮೇಲೆ ಐದನೇ ದಿನ ಮುಂದುವರಿದ ರಷ್ಯಾದ ದಾಳಿ ನಡುವೆಯೇ , ಉಭಯ ದೇಶಗಳ ನಡುವೆ ಸಂಧಾನ ಮಾತುಕತೆ ನಡೆದಿದೆ. ರಷ್ಯಾ ತನ್ನ ಸೇನೆಯನ್ನು ಕೂಡಲೇ ವಾಪಸ್ ಕರೆಸಿಕೊಳ್ಳಬೇಕು ಎಂದು ಉಕ್ರೇನ್ ಷರತ್ತು ವಿಧಿಸಿದೆ. ನಿಯೋಗ ಕೂಡಲೇ ಕದನ ವಿರಾಮ ಘೋಷಿಸಬೇಕು ಎಂದು ರಷ್ಯಾ ಬೇಡಿಕೆ ಇಟ್ಟಿದೆ ಎಂದು ಮೂಲಗಳು ತಿಳಿಸಿವೆ.
ಬೆಲಾರಸ್ ಗಡಿಯಲ್ಲಿ ಮಾತುಕತೆ ನಡೆಸಿರುವ ರಷ್ಯಾ ಅಧ್ಯಕ್ಷ ಪುಟಿನ್ ಅವರ ಪ್ರಸ್ತಾಪಕ್ಕೆ ಉಕ್ರೇನ್ ಅಧ್ಯಕ್ಷ ಝೆನೆಲ್ ಸ್ಕಿ ಸಮ್ಮತಿ ಬಳಿಕ ಉಭಯ ದೇಶಗಳ ರಾಯಭಾರಿಗಳ ನೀಯೋಗದ ನಡುವೆ ಅಜ್ಞಾತ ಸ್ಥಳದಲ್ಲಿ ಮೊದಲ ಸುತ್ತಿನ ಸಂಧಾನ ಮಾತುಕತೆ ನಡೆಯಿತು.
ರಷ್ಯಾ ಉಕ್ರೇನ್ ರಾಜಧಾನಿ ಕೀವ್ ಮೇಲೆ ಆಕ್ರಮಣದ ವೇಗ ಕಡಿಮೆ ಮಾಡಿದ್ದು, ಉಕ್ರೇನ್ ನಾಗರಿಕರು ಮುಕ್ತವಾಗಿ ನಗರ ತೊರೆಯಬಹುದು ಎಂದು ಹೇಳಿದೆ. ಮತ್ತೊಂದೆಡೆ ಉಕ್ರೇನ್ ಮತ್ತೆರಡು ನಗರಗಳನ್ನು ರಷ್ಯಾ ಸೇನೆ ಸೋಮವಾರ ವಶಕ್ಕೆ ಪಡೆದುಕೊಂಡಿದೆ. ಈ ಮಧ್ಯೆ, ನ್ಯಾಟೊ ಸದಸ್ಯ ರಾಷ್ಟ್ರಗಳ ಆರ್ಭಟದ ಹಿನ್ನೆಲೆಯಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ದೇಶದ ಅಣ್ವಸ್ತ್ರ ಪಡೆಗಳನ್ನು ಜಾಗೃತಗೊಳಿಸಿರುವುದು ಆತಂಕ ಮೂಡಿಸಿದೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ಭಾರತ ಮಹಿಳೆಯರ ಕ್ರಿಕೆಟ್ ತಂಡ ಪರಿಷ್ಕೃತಗೊಂಡಿರುವ ಮಹಿಳೆಯರ ಏಕದಿನ ವಿಶ್ವಕಪ್ ಟೂರ್ನಿಯು ನ್ಯೂಜಿಲ್ಯಾಂಡ್ ನ ತೌರಂಗದ ಬೇ ಓವಲ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಆರಂಭಿಕ ಪಂದ್ಯವು ಮಾರ್ಚ್ 6ರಂದು ಪಾಕಿಸ್ತಾನ ಮಹಿಳಾ ತಂಡದ ವಿರುದ್ಧ ಆರಂಭಗೊಳ್ಳಲಿದೆ. ಪೂರ್ವನಿಗದಿಯಂತೆ 2021ರ ಫೆಬ್ರುವರಿ -ಮಾರ್ಚ್ ಅವಧಿಯಲ್ಲಿ ನಡೆಯಬೇಕಿದ್ದ ಟೂರ್ನಿಯನ್ನು ಕೋವಿಡ್ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು.
ಈಗ 2022ರ ಮಾರ್ಚ್ 4ರಿಂದ ಏಪ್ರಿಲ್ 3 ರವರೆಗೆ ನಡೆಯಲಿರುವ ಟೂರ್ನಿಗೆ ಹಿಂದೇ ನಿರ್ಮಿಸಲಾಗಿದ್ದ ಸ್ಥಳಗಳೇ ಮತ್ತೆ ವೇದಿಕೆ ಕಲ್ಪಿಸಿವೆ.
ಮಾರ್ಚ್ 30ರಂದು ಕ್ರೈಸ್ಟ್ ಚರ್ಚ್ ನಲ್ಲಿ ಮೊದಲ ಸೆಮಿಫೈನಲ್ ಪಂದ್ಯ ನಡೆಯಲಿದೆ. ಮಾರ್ಚ್ 31ರಂದು ವೆಲ್ಲಿಂಗ್ಟನ್ ನಲ್ಲಿ ಎರಡನೇ ಸೆಮಿಫೈನಲ್ ಹಣಾಹಣಿ ಜರುಗಲಿದೆ. ಏಪ್ರಿಲ್ 3 ರಂದು ನಡೆಯಲಿರುವ ಫೈನಲ್ ಪಂದ್ಯಕ್ಕೆ ಕ್ರೈಸ್ಟ್ ಚರ್ಚ್ ನಲ್ಲಿ ನಡೆಯಲಿದೆ.
ಆಕ್ಲೆಂಡ್, ಹ್ಯಾಮಿಲ್ಟನ್, ತೌರಂಗ,ಕ್ರೈಸ್ಟ್ ಚರ್ಚ್,ಡುನೇಡಿನ್ ಮತ್ತು ವೆಲ್ಲಿಂಗ್ಟನ್ ನಲ್ಲಿ ವಿಶ್ವದ ಎಂಟು ಅತ್ಯುತ್ತಮ ತಂಡಗಳು ಪ್ರಶಸ್ತಿಗಾಗಿ ಹೋರಾಟ ನಡೆಸಲಿವೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ಉಕ್ರೇನಿನಿಂದ ರಾಜ್ಯಕ್ಕೆ ಹಿಂದಿರುಗುತ್ತಿರುವ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಮುಂದುವರಿಸಲು ರಾಜ್ಯ ಮತ್ತು ಕೇಂದ್ರ ಸರಕಾರಗಳ ಮಟ್ಟದಲ್ಲಿ ಮಾತುಕತೆ ನಡೆಸಿ, ಸೂಕ್ತ ವ್ಯವಸ್ಥೆ ಮಾಡಲು ಪ್ರಯತ್ನಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಭರವಸೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಕ್ರೇನಿನಿಂದ ವಾಪಸ್ಸಾಗಿರುವ ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್ ಮತ್ತು ಪದವಿ ಶಿಕ್ಷಣ ವ್ಯವಸ್ಥೆ ಮಾಡಲು ಯಾವ ತೊಂದರೆಯೂ ಇಲ್ಲ. ಆದರೆ, ಅಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದವರಿಗೆ ಇಲ್ಲಿ ವ್ಯವಸ್ಥೆ ಕಲ್ಪಿಸಲು ಕೆಲವು ಮಿತಿಗಳಿವೆ ಎಂದರು.
ಈ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಸರಕಾರ ಗಂಭೀರವಾಗಿ ಚಿಂತಿಸುತ್ತಿದೆ. ಇದಕ್ಕಾಗಿ ಇನ್ನು ಕೆಲವೇ ದಿನಗಳಲ್ಲಿ ಮಾತುಕತೆ ಪ್ರಕ್ರಿಯೆ ಆರಂಭಿಸಲಾಗುವುದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಪ್ರಧಾನಿ ನರೇಂದ್ರ ಮೋದಿ ಕೂಡ ಈ ಮಕ್ಕಳ ಬಗ್ಗೆ ಕಳಕಳಿ ಹೊಂದಿದ್ದಾರೆ ಎಂದು ಅವರು ತಿಳಿಸಿದರು.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ಹಿಂದೂಗಳ ಹಬ್ಬಗಳಲ್ಲಿ ಮಹಾಶಿವರಾತ್ರಿ ಪ್ರಮುಖವಾಗಿರುವಂತಹದು. ಕೈಲಾಸದಲ್ಲಿ ವಾಸವಾಗಿರುವ ಶಿವನ ಅತ್ಯಂತ ಪ್ರಿಯವಾದ ದಿನ ಶಿವರಾತ್ರಿಯಾಗಿದೆ.
ಈ ದಿನದಂದು ತನ್ನನ್ನು ಪೂಜಿಸುವ ಭಕ್ತರಿಗೆ ತಾನು ವಿಶೇಷವಾಗಿ ಅನುಗ್ರಹ ನೀಡುತ್ತೇನೆ ಎಂದು ಸ್ವತಹ ಶಿವನೇ ಪಾರ್ವತಿಯಲ್ಲಿ ಹೇಳಿದ್ದಾನೆಂದು ಅನೇಕ ಪುರಾಣಗಳಲ್ಲಿ ತಿಳಿಸಲಾಗಿದೆ.
ಶಿವರಾತ್ರಿಗೆ ಅನೇಕ ಕಥೆಗಳಿವೆ. ಈ ದಿನವನ್ನು ಶಿವನು ಪಾರ್ವತಿ ದೇವಿಯನ್ನು ವಿವಾಹವಾದ ದಿನವೆಂದು ಹೇಳಲಾಗುತ್ತದೆ. ಮತ್ತು ದೇವತೆಗಳು, ಅಸುರರ ನಡುವೆ ಸಮುದ್ರ ಮಂಥನ ನಡೆದು ವಿಷ ಉದ್ಭವವಾದಾಗ, ಅದನ್ನು ಶಿವನು ಕುಡಿಯುತ್ತಾನೆ. ಆಗ ಪಾರ್ವತಿ ವಿಷ ಗಂಟಲಿನೊಳಗೆ ಇಳಿಯದಂತೆ ಅದನ್ನು ತಡೆಯುತ್ತಾಳೆ. ಅಂದಿನಿಂದ ನೀಲಕಂಠ ಎಂದು ಶಿವನಿಗೆ ಹೆಸರು ಬಂತು. ಭಗೀರಥ ತನ್ನ ಪೂರ್ವಜರಿಗೆ ಮೋಕ್ಷ ಸಿಗುವಂತೆ ಮಾಡಲು, ಗಂಗೆ ಭೂಮಿಗೆ ಇಳಿದು ಬರಲಿ ಎಂದು ತಪಸ್ಸನ್ನು ಮಾಡುತ್ತಾನೆ. ಆಗ ಗಂಗಾಮಾತೆ ಪ್ರತ್ಯಕ್ಷಳಾಗಿ, ತಾನು ಭೂಮಿಗೆ ಇಳಿದು ಬರುವೆ ಆದರೆ, ತಾನು ಬರುವ ರಭಸದಿಂದ ಇಡೀ ಭೂಮಂಡಲವೇ ನಾಶವಾಗಿ ಹೋಗುತ್ತದೆ. ನನ್ನ ರಭಸವನ್ನು ತಡೆಯುವವರು ಯಾರು ಎಂದು ಭಗೀರಥನಿಗೆ ಕೇಳುತ್ತಾಳೆ. ಆಗ ಭಗಿರಥ ಶಿವನಿಗೆ ನಿನ್ನನ್ನು ತಡೆಯಲು ನಾನು ಪ್ರಾರ್ಥಿಸುತ್ತೇನೆ ಎಂದು ಹೇಳುತ್ತಾನೆ. ಈತನ ಪ್ರಾರ್ಥನೆಗೆ ಮೆಚ್ಚಿ ಶಿವ ಗಂಗೆ ಆಕಾಶದಿಂದ ಧುಮುಕುತ್ತಿದ್ದಾಗ, ಶಿವನು ತನ್ನ ಜಡೆಯ ಮೇಲೆ ಬೀಳು ಎಂದು ಹೇಳುತ್ತಾನೆ ಆಗ ಗಂಗೆ ಭೂಮಿಗೆ ಬರುತ್ತಾಳೆ.
ಮಾಘ ಬಹುಳ ಚತುರ್ದಶಿಯ ರಾತ್ರಿಯಲ್ಲಿ ಶಿವ ಪಾರ್ವತಿಯನ್ನು ವರಿಸಿದ್ದನಂತೆ. ಆದ್ದರಿಂದ ಅಂದು ದೇವಾನುದೇವತೆಗಳು ಎಲ್ಲರೂ ಜಾಗರಣೆ ಮಾಡಿ, ಗಿರಿಜಾ ಕಲ್ಯಾಣ ವೀಕ್ಷಿಸಿ, ಶಿವಪಾರ್ವತಿಯರ ಇಬ್ಬರನ್ನು ಪೂಜಿಸಿದರಂತೆ. ಆದ್ದರಿಂದಲೇ ಜಾಗ್ರಣೆ ಪದ್ಧತಿ ಆಚರಣೆಗೆ ಜಾರಿಗೆ ಬಂದಿತು ಎಂದು ಹೇಳಲಾಗುತ್ತದೆ.
ಪ್ರತಿ ವರ್ಷದಲ್ಲಿ ಶಿಶಿರ ಋತುವಿನ ಮಾಘ ಮಾಸದ ಕೃಷ್ಣ ಪಕ್ಷದ ಪಕ್ಷ ಚತುರ್ದಶಿ ಯಂದು ರಾತ್ರಿ ಸಂದರ್ಭದಲ್ಲಿ ಶಿವ-ಪಾರ್ವತಿ ಜೊತೆಯಲ್ಲಿ ಭೂಮಿಯಲ್ಲಿ ಸಂಚರಿಸುತ್ತಾ ಎಲ್ಲಾ ಸ್ಥಾವರ-ಜಂಗಮ ಲಿಂಗಗಳಲ್ಲಿ ಅಸ್ತಿತ್ವ ಹೊಂದಿರುತ್ತಾನೆ. ಈ ವೇಳೆಯಲ್ಲಿ ಅಂದರೆ ಶಿವರಾತ್ರಿಯಂದು ರಾತ್ರಿಯ ಸಂದರ್ಭದಲ್ಲಿ ಯಾರು ತನ್ನನ್ನು ಪೂಜಿಸುವರೋ ಅವರ ಪಾಪಗಳು ಪರಿಹಾರವಾಗುತ್ತದೆ ಎಂದು ಸ್ವತಹ ಶಿವನೇ ಹೇಳಿದ್ದಾನೆ.
ಆದ್ದರಿಂದ, ಭಕ್ತಾದಿಗಳು ಪ್ರತಿವರ್ಷ ಬರುವ ಶಿವರಾತ್ರಿಯಂದು ಉಪವಾಸ ವ್ರತವನ್ನು ಮಾಡಿ, ಶಿವ ದೇವಾಲಯಗಳಿಗೆ ಭೇಟಿ ನೀಡಿ ಶಿವನಾಮ ಜಪ ಮಾಡುತ್ತಾರೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಸರಕಾರಿ ಶಾಲೆಗಳ ಮಕ್ಕಳೇ ಉಪಗ್ರಹ ಅಭಿವೃದ್ಧಿ ಮಾಡಲಿದ್ದಾರೆ. ಇದಕ್ಕೆ ದಿವಂಗತ ನಟ ಪುನೀತ್ ರಾಜಕುಮಾರ್ ಗೌರವಾರ್ಥವಾಗಿ ಅವರ ಹೆಸರನ್ನೇ ಇಡಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ತಿಳಿಸಿದರು.
`ರಾಷ್ಟ್ರೀಯ ವಿಜ್ಞಾನ ದಿನ’ದ ಅಂಗವಾಗಿ ಮಲ್ಲೇಶ್ವರಂನ 18ನೇ ಅಡ್ಡರಸ್ತೆಯಲ್ಲಿರುವ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಈ ಘೋಷಣೆ ಮಾಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ (ಕೆಸ್ಟೆಪ್ಸ್) ಮತ್ತು ಭಾರತೀಯ ತಂತ್ರಜ್ಞಾನ ಸಮಾವೇಶ ಒಕ್ಕೂಟ (ಐಟಿಸಿಎ) ಮಾಡಿಕೊಂಡ ಒಡಂಬಡಿಕೆಯನ್ನು ವಿನಿಮಯ ಮಾಡಿಕೊಳ್ಳಲಾಯಿತು. ಸಮಾರಂಭದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯದ 75ನೇ ವರ್ಷಾಚರಣೆ ಅಂಗವಾಗಿ ಐಟಿಸಿಎ 75 ಉಪಗ್ರಹಗಳನ್ನು ಉಡಾಯಿಸುತ್ತಿದೆ. ಈ ಪೈಕಿ ಒಂದು ಉಪಗ್ರಹವನ್ನು ರಾಜ್ಯ ಸರಕಾರದ ಸಹಕಾರದಲ್ಲಿ ಸರಕಾರಿ ಶಾಲೆಗಳ ಮಕ್ಕಳು ನಿರ್ಮಿಸುತ್ತಿದ್ದು, ಇದಕ್ಕೆ 1.90 ಕೋಟಿ ರೂ. ವಿನಿಯೋಗಿಸಲಾಗುತ್ತಿದೆ ಎಂದರು. ಉದ್ದೇಶಿತ ಉಪಗ್ರಹವು 1.50 ಕೆ.ಜಿ. ತೂಕವಿರಲಿದ್ದು, ಯೋಜನೆಯ ಗ್ರೌಂಡ್ ಸ್ಟೇಷನ್ ಕೂಡ ಇದೇ ಕಾಲೇಜಿನ ಆವರಣದಲ್ಲಿ ಇರಲಿದೆ. ಎಲ್ಲ ನಿರ್ವಹಣೆಯೂ ಇಲ್ಲಿಂದಲೇ ಆಗಲಿದೆ. ಯೋಜನೆಗೆ 20 ಸರಕಾರಿ ಶಾಲೆಗಳ 100 ಪ್ರತಿಭಾವಂತ ಮಕ್ಕಳನ್ನು ನಾನಾ ಸ್ಪರ್ಧೆ ಮತ್ತು ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಈ ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಆನ್-ಲೈನ್, ಆಫ್-ಲೈನ್, ಹ್ಯಾಂಡ್ಸ್-ಆನ್ ಮತ್ತು ಟ್ಯುಟೋರಿಯಲ್ ಮಾದರಿಗಳಲ್ಲಿ ಪರಿಚಯಾತ್ಮಕ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಜತೆಗೆ, ಎರಡೂ ಭಾಷೆಗಳಲ್ಲಿ ಅಗತ್ಯ ಪಠ್ಯಗಳ ವೆಬ್-ಲಿಂಕ್ ಒದಗಿಸಲಾಗುವುದು. ಈ ಸಂಬಂಧದ ತರಗತಿಗಳು ಏಪ್ರಿಲ್ 22ರಿಂದ ಆರಂಭವಾಗಲಿವೆ ಎಂದು ಅವರು ಮಾಹಿತಿ ನೀಡಿದರು.
ಈ ತರಬೇತಿಯಲ್ಲಿ ಉಪಗ್ರಹ ಪೇಲೋಡ್ ತಿಳಿವಳಿಕೆ, ನ್ಯಾನೋ ಉಪಗ್ರಹಗಳ ಪರಿಚಯ, ಬೆಂಗಳೂರಿನಲ್ಲಿರುವ ವೈಜ್ಞಾನಿಕ ಸಂಸ್ಥೆಗಳಿಗೆ ಭೇಟಿ, ಉಡಾವಣೆ ಸಮಯದಲ್ಲಿ ಶ್ರೀಹರಿಕೋಟಾಗೆ ಭೇಟಿ, ವಿಜ್ಞಾನಿಗಳೊಂದಿಗೆ ಸಂವಾದ, ಗ್ರೌಂಡ್ ಸ್ಟೇಷನ್ ನಲ್ಲಿ ತರಬೇತಿ, ಅಗತ್ಯ ಪುಸ್ತಕಗಳ ಪ್ರಕಟಣೆ ಮುಂತಾದ ಚಟುವಟಿಕೆಗಳು ಇರಲಿವೆ ಎಂದು ಅಶ್ವತ್ಥನಾರಾಯಣ ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಡಿ.ವಿ.ಸದಾನಂದ ಗೌಡ, ಸಮಾಜದ ಸಬಲೀಕರಣಕ್ಕೆ ವಿಜ್ಞಾನದ ಆವಿಷ್ಕಾರಗಳಲ್ಲಿ ಪರಿಹಾರೋಪಾಯಗಳಿವೆ. ಆದ್ದರಿಂದ ಯುವಜನರಲ್ಲಿ ಮೊದಲಿನಿಂದಲೇ ವೈಜ್ಞಾನಿಕ ಕುತೂಹಲ ಬೆಳೆಸಬೇಕು,’ ಎಂದರು. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಸ್. ಅಯ್ಯಪ್ಪನ್ ಮಾತನಾಡಿ, `ದೇಶದಲ್ಲಿ ಪ್ರತೀ ಒಂದು ಕೋಟಿ ಜನಸಂಖ್ಯೆಗೆ ಕೇವಲ 2,500 ಸಂಶೋಧಕರು ಮಾತ್ರವೇ ಇದ್ದಾರೆ. ಅಂದರೆ, ಒಟ್ಟಾರೆಯಾಗಿ ಈ ಸಂಖ್ಯೆ 5 ಲಕ್ಷವನ್ನೂ ದಾಟುವುದಿಲ್ಲ. ಹೀಗಾಗಿ ನಮ್ಮಲ್ಲಿ ಆಹಾರ-ಧಾನ್ಯಗಳು ವ್ಯರ್ಥವಾಗುತ್ತಿವೆ. ಮುಂದುವರಿದ ದೇಶಗಳಿಗೆ ಹೋಲಿಸಿದರೆ ಇದು ತೀರಾ ಕಡಿಮೆಯಾಗಿದೆ. ಜಾಗತಿಕ ಚಿಂತನೆ ಮತ್ತು ಸ್ಥಳೀಯ ಉಪಯುಕ್ತತೆ ಎನ್ನುವ ಸೂತ್ರ ನಮ್ಮದಾಗಬೇಕು,ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಸರಕಾರದ ನ್ಯಾನೋ ತಂತ್ರಜ್ಞಾನ ವಿಷನ್ ಗ್ರೂಪ್ ಅಧ್ಯಕ್ಷ ಡಾ.ನವಕಾಂತ ಭಟ್, ಪ್ರೊ.ಎಚ್.ಎಸ್. ನಾಗರಾಜು, ಡಾ.ಹೇಮಂತಕುಮಾರ್, ಅಶೋಕ್ ರಾಯಚೂರು, ಬಸವರಾಜು, ಸೌಮ್ಯಾ ವೈದ್ ಮುಂತಾದವರು ಉಪಸ್ಥಿತರಿದ್ದರು.
ಕಾಲೇಜು ಮೈದಾನದಲ್ಲಿ ವಿಜ್ಞಾನ ಪ್ರದರ್ಶನ ಏರ್ಪಡಿಸಲಾಗಿತ್ತು. ಮಳಿಗೆಗಳಿಗೆ ಭೇಟಿ ನೀಡಿದ ಸಚಿವರು, ಸಂಸದರು ಮತ್ತು ವಿಜ್ಞಾನಿಗಳು, ಅಲ್ಲಿ ಪ್ರದರ್ಶನಕ್ಕಿಟ್ಟಿದ್ದ ವೈಜ್ಞಾನಿಕ ಸಾಧನಗಳು ಮತ್ತು ಉಪಕರಣಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಪ್ರದರ್ಶನಕ್ಕೆ ಸಾವಿರಾರು ವಿಜ್ಞಾನಾಸಕ್ತರು ಕೂಡ ಭೇಟಿ ನೀಡಿದ್ದು, ಗಮನಾರ್ಹವಾಗಿತ್ತು. ಕಾರ್ಯಕ್ರಮದಲ್ಲಿ ಉಪಗ್ರಹಗಳ ಬಗ್ಗೆ ಸಮಗ್ರ ಮಾಹಿತಿ ನೀಡುವ ಕೈಪಿಡಿಯನ್ನೂ ಬಿಡುಗಡೆ ಮಾಡಲಾಯಿತು. ಜೊತೆಗೆ, ಎರಡು ಸರಕಾರಿ ಶಾಲೆಗಳಿಗೆ ಸಾಂಕೇತಿಕವಾಗಿ ವಿಜ್ಞಾನದ ಪ್ರಯೋಗ ಕಿಟ್ ವಿತರಿಸಲಾಯಿತು. ಉಳಿದ ಶಾಲೆಗಳಿಗೆ ಬಿಇಒಗಳ ಮೂಲಕ ಈ ಕಿಟ್ ತಲುಪಿಸಲಾಗುವುದು ಎಂದು ಸಚಿವರು ತಿಳಿಸಿದರು.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ರಷ್ಯಾ ಉಕ್ರೇನ್ ಮೇಲೆ ಯಾಕೆ ದಾಳಿ ಮಾಡಲಾಗುತ್ತಿದೆ ಎನ್ನುವುದು ಸಾಕಷ್ಟು ಜನರಿಗೆ ಗೊತ್ತಿಲ್ಲ.
ಇದು ಇವತ್ತು ನಿನ್ನೆಯ ವಿಷಯವಲ್ಲ. ಉಕ್ರೇನ್ 1991ರವರೆಗೆ ಸೋವಿಯತ್ ಒಕ್ಕೂಟದ ಭಾಗವಾಗಿತ್ತು. ಅದಾದ ನಂತರ ರಷ್ಯಾ ಮತ್ತು ಉಕ್ರೇನ್ ನಡುವೆ ಸಂಘರ್ಷ ಶುರುವಾಯಿತು.
ರಷ್ಯಾ ದಾಳಿ ಮಾಡಿದ ಉದ್ದೇಶವಾದ್ರು ಏನು?
ಸಾಮಾನ್ಯವಾಗಿ ಎರಡು ದೇಶಗಳ ನಡುವೆ ಯುದ್ಧ ಆಗುತ್ತೆ ಅಂದ್ರೆ , ಅದು ಉಳಿದ ಎಲ್ಲಾ ದೇಶಗಳ ಮೇಲೂ ಪರಿಣಾಮ ಬೀರುತ್ತೆ. ಭಾರತ ಕೂಡ ಇದಕ್ಕೆ ಹೊರತಾಗಿಲ್ಲ. 2014ರಲ್ಲಿ ರಷ್ಯಾ ಬೆಂಬಲಿತ ಅಧ್ಯಕ್ಷನ ಪದಚ್ಯುತಿಯಾಗಿದ್ದು, ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧಕ್ಕೆ ಪ್ರಮುಖ ಕಾರಣ.
ಪ್ರಸ್ತುತ ವ್ಲಾಡಿಮಿರ್ ಪುಟಿನ್ ಅವರು ರಷ್ಯಾದ ಅಧ್ಯಕ್ಷ ರಾಗಿದ್ದಾರೆ. ಇವರು ಮಾರ್ಚ್ 19 , 2018 ರಂದು ರಷ್ಯಾ ಅಧ್ಯಕ್ಷರಾಗಿ 4ನೇ ಬಾರಿ ಆಯ್ಕೆಯಾದರು. ಹಾಗೆಯೇ ಟಿವಿ ಸೀರಿಸ್ ನಲ್ಲಿ ಪ್ರೆಸಿಡೆಂಟ್ ಪಾತ್ರ ಮಾಡಿ ಜನಮನ ಗೆದ್ದಿದ್ದ ವೊಲೊಡಿಮಿರ್ ಝೆಲೆನ್ ಸ್ಕಿ ಉಕ್ರೇನ್ ನ ಅಧ್ಯಕ್ಷರಾಗಿದ್ದು ರೋಚಕ ಸಂಗತಿ.
ರಷ್ಯಾ ಉಕ್ರೇನ್ ಬಿಕ್ಕಟ್ಟಿನ ಕೇಂದ್ರಬಿಂದು ನ್ಯಾಟೋ… ಒಂದರ್ಥದಲ್ಲಿ ರಷ್ಯಾ ಉಕ್ರೇನ್ ಯುದ್ಧಕ್ಕೆ ನ್ಯಾಟೋ ವಿವಾದವು ಪರೋಕ್ಷ ಕಾರಣವಾಗಿದೆ.
ಏನಿದು ನ್ಯಾಟೋ ಅಂದ್ರೆ.. ನಾರ್ತ್ ಅಟ್ಲಾಂಟಿಕ್ ಟ್ರೀಟ್ ಆರ್ಗನೈಸೇಷನ್. ಇದು 1949ರಲ್ಲಿ ಎರಡನೇ ವಿಶ್ವಯುದ್ಧದ ಬಳಿಕ ರಚನೆಗೊಂಡ 12 ದೇಶಗಳ ಮೈತ್ರಿಕೂಟ. ಪ್ರಸ್ತುತ ಈ ಮೈತ್ರಿಕೂಟದಲ್ಲಿ ಸದಸ್ಯ ದೇಶಗಳ ಸಂಖ್ಯೆ 30 ಇದೆ. ಇದರಲ್ಲಿ 27 ಐರೋಪ್ಯ ದೇಶಗಳು, ಎರಡು ಉತ್ತರ ಅಮೆರಿಕ ದೇಶಗಳು ಹಾಗೂ 1 ಯುರೇಷಿಯಾ ದೇಶ ಸೇರಿಕೊಂಡಿದೆ. ಹಿಂದೆ ರಷ್ಯಾದ ಭಾಗವಾಗಿದ್ದ ಹಳೆ ಸೋವಿಯತ್ ಒಕ್ಕೂಟದ ದೇಶಗಳು ಇದರ ಭಾಗವಾಗಿವೆ. ವ್ಲಾಡಿಮಿರ್ ಪುಟಿನ್ ರಷ್ಯಾ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ನ್ಯಾಟೊ ಸದಸ್ಯ ದೇಶಗಳ ಸಂಖ್ಯೆ ದುಪ್ಪಟ್ಟಾಗಿರುವುದು ಗಮನಾರ್ಹ.
ನ್ಯಾಟೋ ಉದ್ದೇಶವೇನು? ಸದಸ್ಯ ರಾಷ್ಟ್ರದ ಪೈಕಿ ಯಾವುದೇ ಒಂದು ದೇಶದ ಹಿತಾಸಕ್ತಿಗೆ ಮಿಲಿಟರಿ ದಾಳಿ, ಅತಿಕ್ರಮಣ ಮುಂತಾದ ಯಾವುದೇ ರೀತಿಯಲ್ಲಿ ತೊಂದರೆಯಾದರೂ ಇಡೀ ಮೈತ್ರಿಕೂಟವು ಒಂದುಗೂಡಿ ಸಮರ ಸಾರುತ್ತದೆ. ಈಗಿನ ಸಂದರ್ಭದಲ್ಲಿ ಉಕ್ರೇನ್ ನ್ಯಾಟೊ ಸದಸ್ಯ ದೇಶವಲ್ಲ. ನ್ಯಾಟೊ ಸದಸ್ಯ ರಾಷ್ಟ್ರಗಳ ಮಿತ್ರ ಮಾತ್ರ. ಆದರೆ 2008ರಲ್ಲಿ ನ್ಯಾಟೊ ಮೈತ್ರಿಕೂಟ ಸೇರ್ಪಡೆಗೆ ಉಕ್ರೇನ್ ಅರ್ಜಿ ಸಲ್ಲಿಸಿದ್ದರೂ ಅರ್ಹತೆ ವಿಚಾರವಾಗಿ ಗೊಂದಲ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಇದಕ್ಕೆ ಇನ್ನೂ ಅನುಮೋದನೆ ಸಿಕ್ಕಿಲ್ಲ. ಆದರೂ ಉಕ್ರೇನ್ ಬೆಂಬಲಕ್ಕೆ ನ್ಯಾಟೋ ಮುಂದಾಗಿದೆ.
ಉಕ್ರೇನ್ NATO, EU ಕಡೆ ವಾಲಿದ್ದು, ಕೂಡ ರಷ್ಯಾ ದೇಶದ ಅಕ್ರೋಶಕ್ಕೆ ಕಾರಣವಾಗತ್ತೆ. ಈ ಎರಡೂ ಪ್ರದೇಶ ಉಕ್ರೇನ್ ಗೆ ಸೇರಿದ್ದು ಎಂದು ಉಲ್ಲೇಖಿಸಲಾಗಿದೆ.
ಇದು 1949ರಲ್ಲಿ ನಡೆದಂತಹ ಘಟನೆ. ಉಕ್ರೇನ್ ಮತ್ತು ರಷ್ಯಾ ನಡುವೆ ಕ್ರಿಮಿಯಾ ಎನ್ನುವಂತಹ ಚಿಕ್ಕ ಪ್ರದೇಶವಿದೆ.
ಏನಿದು ಕ್ರಿಮಿಯಾ? ಏನಿದರ ಕಥೆ ಎನ್ನುವುದಾದರೆ?
ಕ್ರಿಮಿಯಾ ಎಂಬುದು 27,000 ಚದರ ಕಿಲೋಮೀಟರ್ ವಿಸ್ತೀರ್ಣವಿರುವ ಉಕ್ರೇನ್ ಹಾಗೂ ರಷ್ಯಾದ ನಡುವಿರುವ ಒಂದು ಭೂಭಾಗ . ಇಲ್ಲಿ 65% ರಷ್ಯನ್ನರು ಮತ್ತು 35% ಉಕ್ರೇನಿಯನ್ನರು ಇದ್ದಾರೆ. ಜಾಗತಿಕ ಸಮುದಾಯವು ಇದನ್ನು ಉಕ್ರೇನ್ ದೇಶದ ಒಂದು ಭಾಗವಾಗಿಯೇ ಪರಿಗಣಿಸಿದೆ.
ಆದರೆ, 2014ರಲ್ಲಿ ರಷ್ಯಾ ಪರ ಅಧ್ಯಕ್ಷರನ್ನು ಉಕ್ರೇನಿಯನ್ನರು ಕೆಳಗಿಳಿಸಿದ ಕೂಡಲೇ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಸೈನ್ಯವನ್ನು ಕಳುಹಿಸಿ, ಉಕ್ರೇನ್ ನ ವಶದಲ್ಲಿದ್ದ ಕ್ರಿಮಿಯಾವನ್ನು ಬಲವಂತವಾಗಿ ಸ್ವತಂತ್ರಗೊಳಿಸಿದರು.
ನಂತರ ಕ್ರಿಮಿಯಾದಲ್ಲಿ ಹಲವು ಬಂಡುಕೋರ ಸಂಘಟನೆಗಳು ಈ ಸಂದರ್ಭದಲ್ಲಿ ಹುಟ್ಟಿಕೊಂಡವು. ಅವುಗಳ ಬೆನ್ನಿಗೆ ರಷ್ಯಾ ನಿಂತಿತ್ತು. ಅದು ಶಸ್ತ್ರಾಸ್ತ್ರ, ಮದ್ದು, ಗುಂಡು ಒದಗಿಸಿತು. ಈ ಬಂಡುಕೋರರು ಉಕ್ರೇನ್ ಗೆ ನುಗ್ಗಿ ಹಾವಳಿ ಎಬ್ಬಿಸ ತೊಡಗಿದರು.
ಇದುವರೆಗೂ ಉಕ್ರೇನ್ ಹಾಗೂ ಕ್ರಿಮಿಯಾ ನಡುವಿನ ಸಂಘರ್ಷ, ಗಲಭೆ, ಗಲಾಟೆಗಳಲ್ಲಿ ಸುಮಾರು 14 ಸಾವಿರಕ್ಕೂ ಅಧಿಕ ಮಂದಿ ಸತ್ತಿದ್ದಾರೆ.
1949ರಲ್ಲಿ ಜೋಸೆಫ್ ಟ್ರಾಲನ ಅವರು ಕ್ರಿಮಿಯಾ ಪ್ರದೇಶದಲ್ಲಿ ಇರುವಂತಹ ಡಾಕ್ಟರ್ ಗಳನ್ನು ಓಡಿಸಿ ರಷ್ಯಿಯನ್ ಮೂಲದವರನ್ನು ನೇಮಕ ಮಾಡುತ್ತಾರೆ. ಇದು ಉಕ್ರೇನ್ ಮತ್ತೆ ರಷ್ಯಾ ನಡುವೆ ಬಿರುಕು ಮೂಡಲು ಕಾರಣವಾಗತ್ತೆ.
ಹಲವಾರು ದೇಶಗಳು ದಾಳಿ ಮಾಡುವುದು ಬೇಡ ಅಂತ ಮನವಿ ಮಾಡಿಕೊಂಡರೂ ರಷ್ಯಾ ಅಧ್ಯಕ್ಷ ಪುಟಿನ್ ಉಕ್ರೇನ್ ಮೇಲೆ ಯುದ್ಧ ಘೋಷಣೆ ಮಾಡಿದರು.
ಉಕ್ರೇನ್ ನಲ್ಲಿ ಸೇನಾ ಬಲವನ್ನು ನಾಶ ಮಾಡುವುದಕ್ಕಾಗಿ ವಿಶೇಷ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಪುಟಿನ್ ಹೇಳಿದ್ದಾರೆ.
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೊಲೆನ್ ಸ್ಕಿ ಅವರು ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.
ಉಕ್ರೇನ್ ನ ಸೇನಾ ಮೂಲಸೌಕರ್ಯಗಳನ್ನೇ ಗುರಿಯಾಗಿಸಿಕೊಂಡು ರಷ್ಯಾ ದಾಳಿ ನಡೆಸುತ್ತಿದೆ ಎಂದು ಅವರು ಹೇಳಿದ್ದಾರೆ.
ಈ ಎರಡೂ ದೇಶಗಳ ನಡುವಿನ ಯುದ್ಧದಿಂದಾಗಿ ಹಲವಾರು ಅಮಾಯಕರು ಬಲಿಯಾಗಿದ್ದಾರೆ. ಇದುವರೆಗೆ ಉಕ್ರೇನ್ ನ 74 ಸೇನಾ ನೆಲೆಗಳನ್ನು ನಾಶಮಾಡಲಾಗಿದೆ. ಅದರಲ್ಲಿ 11 ವಾಯುನೆಲೆಗಳು ಸೇರಿವೆ ಅಂತ ರಷ್ಯಾ ಹೇಳಿಕೊಂಡಿದೆ.
ಯಾವ ದೇಶವು ಕೂಡ ಮಧ್ಯ ಪ್ರವೇಶಿಸಬಾರದು ಎಂದು ಪುಟಿನ್ ಅವರು ಎಚ್ಚರಿಕೆ ನೀಡಿದ್ದಾರೆ. ಆದರೆ, ರಷ್ಯಾದ ದಾಳಿಯನ್ನು ತಡೆಯಲು ಭಾರತ ಮಧ್ಯಪ್ರವೇಶ ಮಾಡಬೇಕು ಎಂದು ಭಾರತದಲ್ಲಿರುವ ಉಕ್ರೇನ್ ರಾಯಭಾರಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.
ಈ ಎರಡು ದೇಶಗಳ ನಡುವಿನ ಯುದ್ಧ ಭಾರತದ ಮೇಲೂ ಸಾಕಷ್ಟು ಪರಿಣಾಮವನ್ನು ಬೀರಲಿದೆ. ಉಕ್ರೇನ್ ಹಾಗೂ ರಷ್ಯಾದಿಂದ ಪೂರೈಕೆಯಾಗುವ ಸೂರ್ಯಕಾಂತಿ ಎಣ್ಣೆ ಹಾಗೂ ಗೋಧಿ ಸೇರಿದಂತೆ ಹಲವು ಧವಸಧಾನ್ಯಗಳ ಮೇಲೆ ಭಾರತ ಅವಲಂಬಿತವಾಗಿದೆ. ದ್ರವೀಕೃತ ನೈಸರ್ಗಿಕ ಅನಿಲವನ್ನು ಈ ಎರಡು ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ.
ಜಗತ್ತಿನ ಅತಿದೊಡ್ಡ ಗೋಧಿ ರಫ್ತು ದೇಶ ರಷ್ಯಾ. ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧದಿಂದ ಭಾರತದ ಔಷಧ ಉದ್ಯಮದ ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆಯಿದೆ. ಭಾರತದ ಔಷಧ ಕಂಪನಿಗಳು ಉಕ್ರೇನ್ ಮತ್ತು ರಷ್ಯಾಗೆ ಹೆಚ್ಚಿನ ಪ್ರಮಾಣದ ಔಷಧವನ್ನು ರಪ್ತು ಮಾಡುತ್ತವೆ.
ತೈಲ ರಫ್ತು ದೇಶಗಳ ಒಕ್ಕೂಟ ಹೊರತುಪಡಿಸಿ, ವಿಶ್ವದಲ್ಲಿ ಅತಿ ಹೆಚ್ಚು ಕಚ್ಚಾ ತೈಲ ಉತ್ಪಾದಿಸುವ ಎರಡನೇ ದೊಡ್ಡ ದೇಶ ರಷ್ಯಾ. ರಷ್ಯಾ ಈಗ ಯುದ್ಧ ಘೋಷಿಸಿದ ಬೆನ್ನಲ್ಲೇ ಪ್ರತಿ ಬ್ಯಾರೆಲ್ ಬ್ರೆಂಟ್ ಕಚ್ಚಾತೈಲದ ಬೆಲೆ 100 ಡಾಲರ್ ಗಡಿದಾಟಿದೆ.
ಹೀಗಾಗಿ ಇದರ ನೇರ ಪರಿಣಾಮ ಭಾರತದ ಇಂದಿನ ಬಳಕೆದಾರರ ಮೇಲೆ ಆಗಲಿದೆ. ಇದರೊಂದಿಗೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗಲಿದೆ.
ರಷ್ಯಾ ಮತ್ತು ಉಕ್ರೇನ್ ಯುದ್ಧವು ಭಾರತದ ಭದ್ರತಾ ವ್ಯವಸ್ಥೆಯ ಮೇಲೂ ಪರಿಣಾಮ ಬೀರುವ ಅಪಾಯಗಳಿವೆ. ಭಾರತವು ಈಗ ಉಕ್ರೇನ್ ಮತ್ತು ರಷ್ಯಾದಿಂದ ಹೊಸ ಸೇನಾ ಸಲಕರಣೆಗಳನ್ನು ಭಾರಿ ಪ್ರಮಾಣದಲ್ಲಿ ಖರೀದಿಸುತ್ತಿಲ್ಲ. ಆದರೆ ಭಾರತೀಯ ಸೇನೆಯ ಮೂರು ಪಡೆಗಳಲ್ಲಿ ಈಗ ಬಳಕೆಯಲ್ಲಿರುವ ಹೆಲಿಕಾಪ್ಟರ್ಗಳು, ವಿಮಾನಗಳು, ಯುದ್ಧ ವಿಮಾನಗಳು, ಹಡಗುಗಳು, ಫಿರಂಗಿಗಳು, ರೈಫಲ್ ,ಸೇನೆ ವಾಹನಗಳ ಬಿಡಿ ಭಾಗಗಳು ಹಾಗೂ ಹಲವು ಮದ್ದುಗುಂಡು ಗಳಿಂದಾಗಿ ರಷ್ಯಾ ಮತ್ತು ಉಕ್ರೇನ್ ನನ್ನು ಅವಲಂಬಿಸಿದೆ.
ಇದರೊಂದಿಗೆ ವಾಹನ, ಮೊಬೈಲ್ ಉದ್ಯಮಕ್ಕೂ ಪೆಟ್ಟು ಬೀಳುವ ಸಾಧ್ಯತೆ ಇದೆ.
ಸ್ಮಶಾನ ಕುರುಕ್ಷೇತ್ರದಲ್ಲಿ ಸೃಷ್ಟಿಸಿರುವ ಸಾಮಾಜಿಕ ಹಾಗೂ ಪ್ರಪಂಚ ನಾಶದ ಪರಿಕಲ್ಪನೆಗಳೊಂದಿಗೆ ಕುವೆಂಪು ಯುದ್ಧದಿಂದ ಆಗುವ ಪರಿಣಾಮಗಳು ಹಾಗೂ ವಿನಾಶದ ಬಗ್ಗೆ ವಿವರಿಸುತ್ತಾರೆ.
ಯುದ್ಧ ಸಂಸ್ಕೃತಿ ಎಂಬುದು ವಿನಾಶವೇ ಸರಿ. ಹೌದು, ಯುದ್ಧದಿಂದ ನಾವು ಗಳಿಸಿಕೊಳ್ಳುವ ಅಂಶವಾದರೂ ಏನು ? ಸಾವು, ನೋವು, ದುಃಖ, ಪರಸ್ಪರ ವಿಮುಖ ಚಲನ ಗಳಷ್ಟೇ….
ಒಟ್ಟಾರೆಯಾಗಿ ಕೊಲ್ಲುವ ಒಂದು ಸಂಸ್ಕೃತಿಯೇ ನಮ್ಮ ಮುಂದೆ ತೆರೆದು ನಿಲ್ಲುತ್ತದೆ…
ಯುದ್ದವೊಂದೇ ಪರಿಹಾರವಲ್ಲ. ಸೃಷ್ಟಿಯಲ್ಲಿ ಬುದ್ಧಿವಂತ ಪ್ರಾಣಿ ಎನಿಸಿಕೊಂಡ ಮನುಷ್ಯನಿಗೆ ವಿವೇಚನಾ ಶಕ್ತಿ ಇದೆ. ಅದರ ಪೂರ್ಣ ಉಪಯೋಗ ಮಾಡಿಕೊಳ್ಳಬೇಕಿದೆ.