ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವು ರೈತರಿಂದ ಖರೀದಿಸುವ ಹಾಲಿನ ದರವನ್ನು ಲೀಟರ್ ಗೆ 2.50 ರೂಪಾಯಿ ಹೆಚ್ಚಳ ಮಾಡಿದೆ.
ಆ ಮೂಲಕ ವ್ಯಾಪ್ತಿಯ ಹಾಲು ಉತ್ಪಾದಕರಿಗೆ ಮಹಾಶಿವರಾತ್ರಿಯ ಕೊಡುಗೆಯನ್ನು ಘೋಷಿಸಿದೆ. ನೂತನ ದರ ಮಾರ್ಚ್ 1ರಿಂದ ಜಾರಿಗೆ ಬರುತ್ತಿದೆ. ಪ್ರಸ್ತುತ ಲೀಟರ್ 25.36 ರೂಪಾಯಿ ಸಿಗುತ್ತಿದೆ. ಇಂದಿನಿಂದ 27.86 ರೂಪಾಯಿ ಆಗಲಿದೆ. ಗುಣಮಟ್ಟಕ್ಕೆ ಅನುಗುಣವಾಗಿ ರೈತರು ಲೀಟರ್ ಗೆ 29.25 ರೂಪಾಯಿ ವರೆಗೂ ದರ ಪಡೆಯಲು ಅವಕಾಶವಿದೆ ಎಂದು ಒಕ್ಕೂಟದ ಅಧ್ಯಕ್ಷ ಎನ್. ಎಚ್. ಶ್ರೀಪಾದರಾವ್ ಅವರು ಹೇಳಿದ್ದಾರೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ಗಂಗಾ ಸ್ನಾನ ತುಂಗಾ ಪಾನ ಅಂತ ನಮ್ಮನಿ ಮಾತಿದೆ. ಆದ್ರಿ ಮಲೆನಾಡಿನಲ್ಲಿ ತುಂಬಿ ಹರಿಯುವ ತುಂಗೆಯ ನೀರು ಕುಡಿಯಲು ಅಲ್ಲ. ಮುಟ್ಟಲು ಕೂಡ ಯೋಗ್ಯವಲ್ಲದ ರೀತಿಯಲ್ಲಿ ಕಲುಷಿತವಾಗಿದೆ.
ತುಂಗಾ ಕೇವಲ ಮಲೆನಾಡು ಭಾಗದ ರೈತರಿಗೆ ಮಾತ್ರವಲ್ಲದೆ, ನೆರೆಯ ಆಂಧ್ರಪ್ರದೇಶದ ರೈತರಿಗೂ ಜೀವನಾಡಿಯಾಗಿದೆ. ಆದರೆ ಈ ನದಿಗಳು ಶಿವಮೊಗ್ಗ ನಗರದ ಕೊಳಚೆ ನೀರಿನಿಂದಾಗಿ ಕುಡಿಯಲು ಅಲ್ಲ, ಮುಟ್ಟಲು ಕೂಡ ಯೋಗ್ಯವಲ್ಲದ ರೀತಿಯಲ್ಲಿ ಮಲಿನಗೊಂಡಿದೆ.
ನಗರದಲ್ಲಿ ಕಲುಷಿತಗೊಳ್ಳುವ ತುಂಗಾ ನದಿಯ ನೀರು ಶಿವಮೊಗ್ಗದಿಂದ ಕೆಲ ನಾಲೆಗಳ ಮೂಲಕ ಹಳ್ಳಿಗಳಿಗೂ ಸಹ ನೀರನ್ನು ಬಿಡಲಾಗುತ್ತದೆ. ಈ ನೀರನ್ನು ಬಳಸುತ್ತಿರುವ ಹಳ್ಳಿಗಳಲ್ಲಿ ಅನೇಕರು ಚರ್ಮ ರೋಗ ಸೇರಿದಂತೆ ಹಲವು ರೋಗಗಳಿಗೆ ತುತ್ತಾಗುತ್ತಿದ್ದಾರೆ.
ನಗರ ಪ್ರದೇಶದ ಒಳಭಾಗದಲ್ಲಿ ಹರಿಯುವಂತಹ ಡ್ರೈನೇಜ್ ನೀರು ಹಾಗೂ ಪ್ಲಾಸ್ಟಿಕ್ ನಂತಹ ತ್ಯಾಜ್ಯಗಳು ನದಿಗೆ ಸೇರುತ್ತಿದೆ. ಜೊತೆಗೆ ಸ್ಮಾರ್ಟ್ ಸಿಟಿ ಕಾಮಗಾರಿ ನಗರದಲ್ಲಿ ಭರದಿಂದ ಸಾಗುತ್ತಿದೆ. ಕಾರಣದಿಂದಾಗಿ ತುಂಗಾ ನದಿ ಮಲಿನವಾಗಿದೆ. ಸದ್ಯ ಶಿವಮೊಗ್ಗದಲ್ಲಿ ತುಂಗಾ ಉಳಿವಿಗಾಗಿ ‘ತುಂಗಾ ಉಳಿಸಿ’ ಎಂಬ ಅಭಿಯಾನ ಆರಂಭವಾಗಿದೆ.
ಶಿವಮೊಗ್ಗ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಹೆಚ್.ಸಿ. ಬಸವರಾಜಪ್ಪ ಅವರ ಅಧ್ಯಕ್ಷತೆಯಲ್ಲಿ ತುಂಗಾ ನದಿ ತೀರದ ಗ್ರಾಮಗಳ ರೈತರು ಒಟ್ಟಾಗಿ ಹೋರಾಟ ಸಮಿತಿಯನ್ನು ರಚಿಸಿ ಕೊಂಡಿದ್ದಾರೆ. ತುಂಗಾ ನದಿಯನ್ನು ಕೊಳಚೆ ಮುಕ್ತಗೊಳಿಸಲು ರೈತರು ಸಿದ್ದರಾಗಿದ್ದಾರೆ. ಮೊದಲನೇ ಹಂತದ ಹೋರಾಟವಾಗಿ ಸಮಿತಿಯು ಪತ್ರ ಚಳುವಳಿಯನ್ನು ಆರಂಭಿಸಿದೆ.
ತುಂಗಾ ನದಿ ಉಳಿವಿಗಾಗಿ ಹೋರಾಟ ಸಮಿತಿ ಅಧ್ಯಕ್ಷ ಹೆಚ್.ಸಿ.ಬಸವರಾಜಪ್ಪ ಅವರು ಮಾತನಾಡಿ ಆದರೆ ಈ ದಿನಗಳಲ್ಲಿ ರೈತರು ಕಗ್ಗತ್ತಲಿನಲ್ಲಿ ಬದುಕುವ ಸ್ಥಿತಿಯಲ್ಲಿದ್ದಾರೆ. ಇದಕ್ಕೆ ಕಾರಣ ಇಷ್ಟೇ ನಾವೆಲ್ಲ ನಾಲೆ ಮತ್ತು ನದಿಪಾತ್ರದಲ್ಲಿ ಬರುವ ಹಳ್ಳಿಗಳು ನಮ್ಮಲ್ಲಿ. ತುಂಗಾ ಎಡ ನಾಲೆಯು ಶಿವಮೊಗ್ಗ ನಗರದ ಮಧ್ಯಭಾಗದಿಂದ ಹಾದು ಹೋಗಿದೆ. ನಾಲೆಯ ಮೇಲ್ಭಾಗದ ವಸತಿ ಪ್ರದೇಶಗಳಿಂದ ಬರುವಂತಹ ಕಲುಷಿತ ನೀರು ನಾಲಿಗೆ ಸೇರುತ್ತಿದೆ. ಇದರಿಂದ ಶಿವಮೊಗ್ಗದಿಂದ ಮುಂದೆ ಬರುವಂತಹ ಹಳ್ಳಿಗಳ ಭಾಗದ ಜನರಲ್ಲಿ ಚರ್ಮರೋಗ ಹಾಗೂ ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ನಗರ ಪ್ರದೇಶದ ಕೊಳಚೆನೀರು ಇಂಗುವ ವ್ಯವಸ್ಥೆ ಇಲ್ಲದ ಕಾರಣ ನಾಲೆಗಳಿಗೆ ಸೇರುತ್ತಿದೆ. ನೀರು ಕುಡಿಯುವುದು ಅಲ್ಲಾ, ಮುಟ್ಟಲು ಯೋಗ್ಯವಲ್ಲದ ರೀತಿಯಲ್ಲಿದೆ. ಈ ನೀರನ್ನು ಬಳಸಿ ಆಸ್ಪತ್ರೆಗೆ ತುತ್ತಾಗುತ್ತಿರವ ಹಳ್ಳಿ ಭಾಗದ ಜನರ ಸಂಖ್ಯೆ ಹೆಚ್ಚಾಗಿದೆ. ಈ ಕುರಿತಂತೆ ಸಕ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ‘ತುಂಗಾ ಉಳಿಸಿ ಅಭಿಯಾನ’ವನ್ನು ಪ್ರಾರಂಭಿಸಿದ್ದೇವೆ. ಮೊದಲ ಹಂತದಲ್ಲಿ ‘ಪತ್ರ ಚಳುವಳಿಯನ್ನು’ ಆರಂಭಿಸಿದ್ದೇವೆ ಎಂದು ತಿಳಿಸಿದ್ದಾರೆ.
ತುಂಗಾ ನದಿ ನಗರದ ಕೊಳಚೆ ನೀರು ಸೇರುತ್ತಿರುವ ಬಗ್ಗೆ ಯಾವ ರೀತಿ ಕ್ರಮ ಕೈಗೊಳ್ಳಲಾಗುವುದು ಎಂಬ ಬಗ್ಗೆ ಆಗ ಅಧಿಕಾರದಲ್ಲಿದ್ದ ಮಹಾನಗರಪಾಲಿಕೆಯ ಆಯುಕ್ತ ಶ್ರೀ ಚಿದಾನಂದ ವಟಾರೆ ಅವರು ಮಾತನಾಡಿ ನೀರು ತುಂಗಾ ನದಿಗೆ ಸೇರುತ್ತಿದೆ ಪತ್ರಿಕೆಗಳಲ್ಲಿ ಆರ್ಟಿಕಲ್ಸ್ ನೋಡಿದ್ದೇನೆ. ಈ ಕುರಿತಂತೆ ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ವತಿಯಿಂದ ಸೂಕ್ತ ಕ್ರಮಕೈಗೊಳ್ಳಲಾಗುತ್ತಿದೆ. ಈ ಕುರಿತಂತೆ ಕಾಮಗಾರಿಯನ್ನು ಪೂರ್ಣಗೊಳಿಸಲು ಟೆಂಡರ್ ಪ್ರಕ್ರಿಯೆಯಲ್ಲಿದೆ. ಪಾಲಿಕೆ ಅಡಿಯಲ್ಲಿ ಏಳು ರಾಜಕಾಲುವೆಗಳಿಗೆ ನಗರದ ಎಲ್ಲಾ ಮನೆಗಳಿಂದ ಬರುವ ನಿರುಪಯುಕ್ತ ನೀರು ಇದರಲ್ಲಿ ಸೇರುತ್ತಿದೆ. ಈ ಕುರಿತಂತೆ ಆದಷ್ಟು ಬೇಗ ಯುಜಿಡಿ ಹೌಸ್ ಸರ್ವಿಸ್ ಅನ್ನು ಅಳವಡಿಸಿಕೊಳ್ಳುವಂತೆ ಆಯುಕ್ತರು ಜನರಲ್ಲಿ ಮನವಿ ಮಾಡಿಕೊಂಡರು.
ಶಿವಮೊಗ್ಗ ಮಹಾನಗರ ಪಾಲಿಕೆಯ ಮೇಯರ್ ಶ್ರೀಮತಿ ಸುನಿತಾ ಅಣ್ಣಪ್ಪ ಜಿಲ್ಲಾಡಳಿತ ಈ ಬಗ್ಗೆ ಮುಂದಿನ ದಿನಗಳಲ್ಲಿ ಕೈ ಗೊಳ್ಳತ್ತಿರುವ ಸೂಕ್ತ ಕ್ರಮಗಳ ಬಗ್ಗೆ ” ಸ್ವಚ್ಛ ಭಾರತ್ ಮಿಷನ್ 2.O ಕುರಿತಂತೆ ಮಾನ್ಯ ಪ್ರಧಾನ ಮಂತ್ರಿ ನರೇಂದ್ರಮೋದಿ ಅವರು ತಿಳಿಸಿರುವಂತೆ ಯಾವುದೇ ನೈರ್ಮಲ್ಯಗಳು ಶುದ್ಧೀಕರಿಸದೆ ನದಿಗೆ ಸೇರದ ಹಾಗೆ ಕ್ರಮಕೈಗೊಳ್ಳಬೇಕು. ಏಳು ರಾಜಕಾಲುವೆಗಳನ್ನು ಸ್ಮಾರ್ಟ್ ಸಿಟಿ ಅಡಿಯಲ್ಲಿ ಪರಿಗಣಿಸಲಾಗಿದೆ. ಸದ್ಯದಲ್ಲೇ ಕಾಮಗಾರಿಗಳ ಕುರಿತಂತೆ ಟೆಂಡರ್ ಕರೆದು ಆದಷ್ಟು ಬೇಗ ಸಮಸ್ಯೆಗಳನ್ನ ಬಗೆಹರಿಸುವುದಾಗಿ ತಿಳಿಸಿದರು.
ಒಟ್ಟಾರೆ ನಗರದ ತ್ಯಾಜ್ಯದಿಂದ ತುಂಗಾ ನದಿಯ ನೀರು ಬಳಕೆಗೆ ಯೋಗ್ಯವಲ್ಲದ ರೀತಿ ಮಾರ್ಪಟ್ಟಿವೆ. ಆದಷ್ಟು ಬೇಗ ಜಿಲ್ಲಾಡಳಿತ ಇದಕ್ಕೆ ಶಾಶ್ವತ ಪರಿಹಾರ ಕೈಗೊಳ್ಳಬೇಕು. ಸಾರ್ವಜನಿಕರು ಹಾಗೂ ಈ ನದಿಗಳ ನೀರನ್ನು ಬಳಸುತ್ತಿರುವ ರೈತರ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕೊಳ್ಳಲಿ ಎಂಬುದು ಕೆ-ಲೈವ್ ಆಶಯವಾಗಿದೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ಉಕ್ರೇನ್ ವಿರುದ್ಧದ ರಷ್ಯಾ ಆಕ್ರಮಣ ತಡೆಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಕೈಗೊಂಡ ಎರಡನೇ ಸುತ್ತಿನ ತುರ್ತು ನಿರ್ಣಯದಿಂದಲೂ ಭಾರತ ಅಂತರ ಕಾಯ್ದುಕೊಂಡಿದೆ. ರಷ್ಯಾ ದಾಳಿಯಿಂದ ಉಕ್ರೇನ್ ನಲ್ಲಿ ಆಗುತ್ತಿರುವ ಜೀವಹಾನಿ ಕುರಿತು ವಿಶ್ವಸಂಸ್ಥೆ ಭದ್ರತಾ ಮಂಡಳಿ 15 ಸದಸ್ಯ ರಾಷ್ಟ್ರಗಳು ತುರ್ತು ಸಭೆ ಸೇರಿ ಚರ್ಚೆ ನಡೆಸಿದವು. ನಂತರ ಯುದ್ಧ ನಿಲುಗಡೆಗೆ ಆಗ್ರಹಿಸಿ, ರಷ್ಯಾ ವಿರುದ್ಧ ನಿರ್ಣಯ ಕೈಗೊಳ್ಳಲಾಯಿತು. ಆಕ್ರಮಣಶೀಲ ರಾಷ್ಟ್ರವನ್ನು ಮಟ್ಟಹಾಕಲು ನಿರ್ಣಯಿಸಿ ಕೈಗೊಳ್ಳಲಾದ ನಿರ್ಣಯವನ್ನು ಮತಕ್ಕೆ ಹಾಕಲಾಯಿತು.
ಭಾರತ, ಚೀನಾ ಮತ್ತು ಯುಎಇ ಮತದಾನದಿಂದ ದೂರ ಉಳಿದವು. ಉಕ್ರೇನ್ ವಿರುದ್ಧದ ದಾಳಿ ತಕ್ಷಣ ನಿಲ್ಲಬೇಕು ಎನ್ನುವುದು ಭಾರತದ ನಿಲುವು. ಆದರೆ, ಜಾಗತಿಕ ಗುಂಪುಗಾರಿಕೆ ಮೂಲಕ ರಷ್ಯಾ ಮೇಲೆ ಒತ್ತಡ ಹಾಕಿ ಶಾಂತಿ ಸಾಧಿಸುವುದು ಸದ್ಯದ ಸ್ಥಿತಿಯಲ್ಲಿ ಅಸಾಧ್ಯ. ಅರ್ಥಪೂರ್ಣ ಸಂಧಾನದ ಮೂಲಕ ಬಿಕ್ಕಟ್ಟು ಬಗೆಹರಿಸ ಬೇಕಿದೆ ಎಂದು ವಿಶ್ವಸಂಸ್ಥೆ ಯಲ್ಲಿನ ಭಾರತದ ರಾಯಭಾರಿ ಟಿ. ಎಸ್. ತಿರುಮೂರ್ತಿ ಅವರು ತಿಳಿಸಿದ್ದಾರೆ.
ರಷ್ಯಾ ನಡೆಸಿದ ದಾರಿಯಲ್ಲಿ ಉಕ್ರೇನ್ 16 ಮಕ್ಕಳು ಮೃತಪಟ್ಟಿದ್ದಾರೆ. 45 ಕಂದಮ್ಮಗಳು ಗಾಯಗೊಂಡಿವೆ. ರಷ್ಯಾ ಸೈನಿಕರನ್ನು ನಮ್ಮ ಪಡೆಗಳು ದಿಟ್ಟತನದಿಂದ ಹಿಮ್ಮೆಟ್ಟಿದೆ. ಇದುವರೆಗೆ ರಷ್ಯಾದ 5,400 ಸೈನಿಕರನ್ನು ನಮ್ಮ ಯೋಧರು ಕೊಂದುಹಾಕಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ ಸ್ಕಿ ಅವರು ತಿಳಿಸಿದ್ದಾರೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ಉಕ್ರೇನ್ ಮೇಲೆ ದಾಳಿ ಮಾಡುವ ಮೂಲಕ ಜಾಗತಿಕ ಕಾರಣವಾಗಿರುವ ವಿರುದ್ಧ ಅಮೇರಿಕ ಮತ್ತು ಕೆನಡಾದಲ್ಲಿ ಆಕ್ರೋಶ ಹೆಚ್ಚಾಗಿದೆ. ಮದ್ಯದ ಮಳಿಗೆ ಗಳಲ್ಲಿ ರಷ್ಯಾದ ಮದ್ಯ ಮಾರಾಟ ನಿಷೇಧಿಸಲಾಗುತ್ತದೆ ಎಂದು ರಾಜ್ಯಪಾಲ ಕ್ರಿಸ್ ಸುನುನು ಅವರು ಘೋಷಿಸಿದ್ದಾರೆ. ಒಹಿಯೋ ದಲ್ಲೂ ಇದೇ ರೀತಿಯ ನಿಷೇಧ ಹೇರಲಾಗುವುದು ಎಂದು ಅಲ್ಲಿನ ರಾಜ್ಯಪಾಲ ಹೇಳಿದ್ದಾರೆ.
ಕೆನಡಾದಲ್ಲಿ ಸಹ ಮದ್ಯದಂಗಡಿಗಳಲ್ಲಿ ರಷ್ಯಾ ಮದ್ಯದ ಬಾಟಲಿಗಳನ್ನು ತೆರವುಗೊಳಿಸಲಾಗಿದೆ. ಒಂಟಾರಿಯೋದ 679 ಮಧ್ಯದ ಅಂಗಡಿಗಳಿಂದ ಈಗಾಗಲೇ ಪುಟಿನ್ ರಾಷ್ಟ್ರದ ಮದ್ಯದ ಬಾಟಲಿ ತೆರವುಗೊಳಿಸಲಾಗಿದೆ. ಇದಲ್ಲದೆ, ಮಳಿಗೆಗಳಿಂದ ವೋಡ್ಕಾ ಖರೀದಿಸುವ ಜನ ಅದನ್ನು ಚರಂಡಿಗೆ ಸುರಿದ ವಿಡಿಯೋಗಳು ಸಹ ಜಾಲತಾಣದಲ್ಲಿ ವೈರಲ್ ಆಗಿದೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ಸಮರ ಪೀಡಿತ ಉಕ್ರೇನ್ ನಲ್ಲಿ ಸಿಕ್ಕಿಬಿದ್ದಿರುವ ಸುಮಾರು 15,000 ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರ ಇನ್ನಷ್ಟು ಬಿರುಸಿನ ಕ್ರಮವನ್ನು ಕೈಗೊಂಡಿದೆ. ಓದು ಹಾಗೂ ಉದ್ಯೋಗಕ್ಕೆಂದು ಹೋಗಿರುವ ಭಾರತೀಯರು ಸದ್ಯದ ಬಿಕ್ಕಟ್ಟಿನಿಂದ ನಲುಗಿದ್ದಾರೆ. ಶೀಘ್ರವಾಗಿ ಅವರನ್ನು ಕರೆತರಲು ಮೋದಿ ಸರ್ಕಾರ ನಾಲ್ಕು ಕೇಂದ್ರ ಸಚಿವರನ್ನು ಉಕ್ರೇನ್ ನ ಬೇರೆ ರಾಷ್ಟ್ರಗಳಿಗೆ ಕಳಿಸಿಕೊಡಲು ನಿರ್ಧರಿಸಿದೆ.
ದಿನದಿಂದ ದಿನಕ್ಕೆ ಉಕ್ರೇನ್ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಅಣು ಸಮರದ ಭೀತಿ ಸೃಷ್ಟಿಯಾಗಿದೆ. ಅಂತಹದ್ದೊಂದು ಅನಾಹುತಕಾರಿ ಬೆಳವಣಿಗೆ ಆಗುವ ಮೊದಲು ದೇಶವಾಸಿಗಳನ್ನು ಹಿಂದಕ್ಕೆ ಕರೆ ತರುವುದು ಕ್ಷೇಮ ಎಂದು ಕೇಂದ್ರ ನಿರ್ಧರಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತಮಟ್ಟದ ತುರ್ತು ಸಭೆ, ರಕ್ಷಣಾ ಕಾರ್ಯಾಚರಣೆಯನ್ನು ರೇಷೆಗಳನ್ನು ಚರ್ಚಿಸಿದೆ. ಅಂತಿಮವಾಗಿ ಉಕ್ರೇನ್ ನ ನಾಲ್ಕು ನೆರೆ ರಾಷ್ಟ್ರಗಳಿಗೆ ಸಚಿವರನ್ನು ಕಳುಹಿಸಿ ಭಾರತೀಯರ ರಕ್ಷಣೆಗೆ ಸಂಯೋಜಿತ ಶ್ರಮವಹಿಸಲು ತೀರ್ಮಾನಿಸಿದೆ.
ಕೇಂದ್ರ ಸಚಿವರಾದ ಜ್ಯೋತಿರಾಧಿತ್ಯ ಸಿಂಧಿಯಾ, ಹರ್ ದೀಪ್ ಸಿಂಗ್ ಪುರಿ, ಕಿರಣ್ ರಿಜಿಜು ಮತ್ತು ವಿ.ಕೆ. ಸಿಂಗ್ ಅವರು ಭಾರತ ಸರ್ಕಾರದ ವಿಶೇಷ ರಾಯಭಾರಿಗಳಾಗಿ ಉಕ್ರೇನ್ ನೆರೆ ರಾಷ್ಟ್ರಗಳಿಗೆ ತೆರಳಲಿದ್ದಾರೆ. ಸಿಂಧಿಯ ಅವರು ರೊಮೇನೀಯಾ ಮತ್ತು ಮೊಲ್ಡೋವಾದಲ್ಲಿ ರಕ್ಷಣಾ ಕಾರ್ಯಾಚರಣೆಗೆ ನೆರವಾಗಲಿದ್ದಾರೆ. ರಿಜಿಜು ಅವರು ಸ್ಲೊವಾಕಿಯಾ ತಲುಪಿರುವ ಭಾರತೀಯರನ್ನು ಸ್ವದೇಶಕ್ಕೆ ಕಳಿಸುವ ಕೆಲಸ ನಿರ್ವಹಿಸಲಿದ್ದಾರೆ. ಪುರಿ ಅವರು ಹಂಗೇರಿ ಮತ್ತು ಸಿಂಗ್ ಅವರು ಪೋಲೇಂಡ್ ನಲ್ಲಿ ಉಳಿದುಕೊಂಡು ರಕ್ಷಣಾ ಕಾರ್ಯಾಚರಣೆ ಸಂಘಟಿಸಲು ಇದ್ದಾರೆ ಎಂದು ಮೂಲಗಳು ತಿಳಿಸಿದೆ.
ರಷ್ಯಾ ಉಕ್ರೇನ್ ಕದನ ಘೋರ ಸ್ವರೂಪ ಪಡೆಯುತ್ತಿರುವ ನಡುವೆಯೇ ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರ ವಿಶೇಷ ಆದ್ಯತೆ ನೀಡಿತ್ತು. ಈ ಕುರಿತು ಪ್ರಧಾನಿ ಮೋದಿ ಅವರು ಭಾನುವಾರ ಹೇಳಿಕೆ ನೀಡಿದ್ದಾರೆ. ಮರುದಿನವೇ ಸಚಿವರನ್ನು ಕಳುಹಿಸಿಕೊಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ.
ನಿನ್ನೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್, ವಾಣಿಜ್ಯ ಸಚಿವ ಪಿಯೂಷ್ ಗೊಯಲ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಪಾಲ್ಗೊಂಡಿದ್ದರು.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ಕಾನ್ಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಅಧ್ಯಯನವು ಭಾರತದಲ್ಲಿ ಜೂನ್ 22 ರ ಹೊತ್ತಿಗೆ ಕೋವಿಡ್ ನ ನಾಲ್ಕನೇ ಅಲೆ ಆರಂಭವಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ. ನಾಲ್ಕನೇ ಅಲೆಯೂ ಆಗಸ್ಟ್ ನ ಮಧ್ಯಭಾಗದ ನಂತರ ಉತ್ತುಂಗದ ಮಟ್ಟ ತಲುಪಬಹುದು ಎಂದು ಹೇಳಿದೆ.
ಆನ್ಲೈನ್ ಜಾಲತಾಣ ಮೆಡ್ ಆರ್ ಕ್ಸಿವ್ ನಲ್ಲಿ ಈ ಕುರಿತಂತೆ ಮಾಹಿತಿಯನ್ನು ಪ್ರಕಟಿಸಿದೆ. ಅಧ್ಯಯನದಲ್ಲಿ ಸಂಖ್ಯಾಶಾಸ್ತ್ರದ ಮಾದರಿಯ ಮೂಲಕ ಅಧ್ಯಯನ ನಡೆಸಲಾಗಿತ್ತು ಕೋವಿಡ್ ನಾಲ್ಕು ತಿಂಗಳ ಕಾಲ ಇರುವ ಸಾಧ್ಯತೆ ಇದೆ ಎಂದು ಈ ಅಧ್ಯಯನ ಹೇಳಿದೆ.
ಐಐಟಿ ಕಾನ್ಪುರದ ಗಣಿತ ಮತ್ತು ಸಂಖ್ಯಾಶಾಸ್ತ್ರ ವಿಭಾಗದ ಸೈಬರ್ ಪರ್ಷದ್ ರಾಜೇಶಭಾಯ್, ಸುಭ್ರಾ ಶಂಕರ್ ಧರ್ ಮತ್ತು ಶರಭ್ ಅವರು ಈ ಅಧ್ಯಯನದ ಭಾಗವಾಗಿದ್ದರು. ಹೊಸ ಕೋವಿಡ್ ನ ರೂಪಾಂತರ ತಳಿಯ ಗುಣಲಕ್ಷಣಗಳು ಮತ್ತು ದೇಶಾದ್ಯಂತ ಇರುವ ಲಸಿಕೆಯ ಪ್ರಮಾಣದ ಮೇಲೆ ನಾಲ್ಕನೇ ಅಲ್ಲಿಯ ತೀವ್ರತೆಯು ಅವಲಂಬಿತವಾಗಿರುತ್ತದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ.
ಕೋವಿಡ್ ಪ್ರಾರಂಭವಾದ 2020ರ ಜನವರಿ 30ರಿಂದ 936 ದಿನಗಳ ನಂತರ ಭಾರತದಲ್ಲಿ ನಾಲ್ಕನೇ ಅಲೆ ಕಾಣಿಸಿಕೊಳ್ಳಲಿದೆ. ಅಂದರೆ 2022ರ ಜೂನ್ 22ರಂದು ಹೊಸ ಅಲೆ ಆರಂಭವಾಗಿ ಆಗಸ್ಟ್ 23 ರವರಿಗೆ ಉತ್ತುಂಗಕ್ಕೆ ತಲುಪಲಿದೆ ಎಂದು ಅಧೀನದ ಲೇಖಕರು ಸಂಶೋಧನಾ ವರದಿಯಲ್ಲಿ ತಿಳಿಸಿದ್ದಾರೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ಮಾನವ ಪ್ರೇರಿತ ಹವಾಮಾನ ಬದಲಾವಣೆಯು ಪ್ರಕೃತಿಯಲ್ಲಿ ಅಪಾಯಕಾರಿ ಮತ್ತು ವ್ಯಾಪಕವಾದ ವಿನಾಶವನ್ನು ಉಂಟುಮಾಡುತ್ತಿದೆ.
ಭಾರತ ಸೇರಿದಂತೆ ವಿಶ್ವದಾದ್ಯಂತ ಲಕ್ಷಾಂತರ ಜನರ ಜೀವನದ ಮೇಲೆ ಪರಿಣಾಮ ಬೀರುತ್ತಿದೆ. ಅಲ್ಲಿ ಬೃಹತ್ ನಗರಗಳು, ಕರಾವಳಿ ಪ್ರದೇಶಗಳು ಮತ್ತು ಹಿಮಾಲಯ ನದಿ ವ್ಯವಸ್ಥೆಯು ಗಂಭೀರ ಅಪಾಯದಲ್ಲಿದೆ ಎಂದು ಯುಎನ್‌ನ ಅಂತರರಾಷ್ಟ್ರೀಯ ಸಮಿತಿಯ ವರದಿಯು ಎಚ್ಚರಿಸಿದೆ.
ಪ್ರಕೃತಿ ನಾಶದಿಂದಾಗಿ ಮಾನವಕುಲದ ಅರ್ಧದಷ್ಟು ಜನರು ಈಗ ಅಪಾಯದ ವಲಯದಲ್ಲಿ ವಾಸಿಸುತ್ತಿದ್ದಾರೆ. ಅಪಾಯಗಳನ್ನು ಕಡಿಮೆ ಮಾಡುವ ಪ್ರಯತ್ನಗಳ ಹೊರತಾಗಿಯೂ ಅನೇಕ ಪರಿಸರ ವ್ಯವಸ್ಥೆಗಳು ಹಿಂತಿರುಗದ ಹಂತದಲ್ಲಿವೆ ಎಂದು ಸಂಶೋಧನೆಗಳು ತೋರಿಸುತ್ತವೆ.
ಪ್ರಪಂಚದಾದ್ಯಂತದ 34,000 ಕ್ಕೂ ಹೆಚ್ಚು ಉಲ್ಲೇಖಗಳನ್ನು ಉಲ್ಲೇಖಿಸುವಂತೆ ಹವಾಮಾನ ಬದಲಾವಣೆಯ ಆರನೇ ಮೌಲ್ಯಮಾಪನ ಚಕ್ರದ ಮೇಲಿನ ಅಂತರರಾಷ್ಟ್ರೀಯ ಸಮಿತಿಯ ಎರಡನೇ ವರದಿಯು 127 ಜಾಗತಿಕ ಮತ್ತು ಪ್ರಾದೇಶಿಕ ಪ್ರಮುಖ ಅಪಾಯಗಳನ್ನು ಗುರುತಿಸಿದೆ. ಇದು ಫಾರ್ಮ್, ಆಹಾರ, ನೀರು, ಕಾಡಿನ ಬೆಂಕಿ, ಆರೋಗ್ಯ, ಸಾರಿಗೆ ವ್ಯವಸ್ಥೆ ಮತ್ತು ಜಾತಿಗಳ ಅಳಿವುಗಳನ್ನು ಒಳಗೊಂಡಿವೆ.
ವರದಿಯು ಪ್ರಕಾರ ಬದಲಾಗುತ್ತಿರುವ ಹವಾಮಾನಕ್ಕೆ ಹೊಂದಿಕೊಳ್ಳಲು ಸ್ಥಳೀಯ ಮತ್ತು ಸಾಂಪ್ರದಾಯಿಕ ಆಯ್ಕೆಗಳನ್ನು ಒಳಗೊಂಡಂತೆ ಲಭ್ಯವಿರುವ ಆಯ್ಕೆಗಳ ಬಗ್ಗೆ ಯೋಜಿಸಬೇಕಿದೆ. ಇದು ಹವಾಮಾನ ಅಪಾಯಗಳನ್ನು ಕಡಿಮೆ ಮಾಡಲು ಮಾತ್ರವಲ್ಲದೆ ಜನರ ಜೀವನವನ್ನು ಸುಧಾರಿಸಲು ಪ್ರಕೃತಿಯ ಸಾಮರ್ಥ್ಯದ ಬಗ್ಗೆ ಹೊಸ ಒಳನೋಟಗಳನ್ನು ಒದಗಿಸುತ್ತದೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ಕೇಂದ್ರದ ಜಲಶಕ್ತಿ ಯೋಜನೆಯನ್ನು ರಾಜ್ಯದಲ್ಲಿ ಪ್ರಥಮವಾಗಿ ಬೆಳಗಾವಿ ಜಿಲ್ಲೆಯ ಚೆನ್ನಮ್ಮನ ಕಿತ್ತೂರಿನಲ್ಲಿ ಮಹಾರಾಷ್ಟ್ರದ ಗಡಿಯವರೆಗಿನ ರಾಷ್ಟ್ರೀಯ ಹೆದ್ದಾರಿ ಅಕ್ಕಪಕ್ಕ ಅನುಷ್ಠಾನಗೊಳಿಸಲಾಗುವುದು. ಬಳಿಕ ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಘೋಷಿಸಿದ್ದಾರೆ.
ಬೆಳಗಾವಿಯಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಶಂಕುಸ್ಥಾಪನೆ ಸಮಾರಂಭದಲ್ಲಿ ಅವರು ಮಾತನಾಡಿದರು. ಮಹಾರಾಷ್ಟ್ರದ ಪಂಢರಪುರ, ಶಿರಡಿ ಮತ್ತಿತರ ಧಾರ್ಮಿಕ ಸ್ಥಳಗಳನ್ನು ಕರ್ನಾಟಕದ ಧಾರ್ಮಿಕ ಸ್ಥಳಗಳ ಜೊತೆ ಜೋಡಿಸುವ ನಿತಿನ್ ಗಡ್ಕರಿ ಅವರ ಮಹತ್ವಾಕಾಂಕ್ಷಿ ಯೋಜನೆಗೆ ರಾಜ್ಯ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ. ಭೂಸ್ವಾಧೀನ ಸಮಸ್ಯೆಗೆ ಪರಿಹಾರ ಮತ್ತು ಜಿ ಎಸ್ ಟಿ ವಿನಾಯಿತಿ ನೀಡಲಾಗುವುದು ಎಂದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, 2014ರವರೆಗೆ ದೇಶದಲ್ಲಿ 91 ಸಾವಿರ ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗಿದ್ದರೆ, ನರೇಂದ್ರ ಮೋದಿ ಪ್ರಧಾನಿಯಾದ ಏಳು ವರ್ಷಗಳ ಅವಧಿಯಲ್ಲಿ 1.40 ಲಕ್ಷ ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣಗೊಂಡಿದೆ. ಇದು ಪರಿವರ್ತನೆಗೆ ಸಾಕ್ಷಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಚಿವರಾದ ಸಿ.ಸಿ. ಪಾಟೀಲ್, ಗೋವಿಂದ ಕಾರಜೋಳ, ಶಶಿಕಲಾ ಜೊಲ್ಲೆ, ಉಮೇಶ್ ಕತ್ತಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ದೇಶದಲ್ಲಿ ಇದುವರೆಗೆ 11 ನದಿ ನೀರಿನ ಸಮಸ್ಯೆ ಬಗೆಹರಿಸಿದ್ದೇನೆ. ಆದರೆ, ಕರ್ನಾಟಕ ಮತ್ತು ಮಹಾರಾಷ್ಟ್ರದ ನದಿ ನೀರಿನ ಸಮಸ್ಯೆ ನಿವಾರಣೆ ಸಾಧ್ಯವಾಗಿಲ್ಲ ಎಂದು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿ ನಗರದ ಗಬ್ಬೂರ ವೃತ್ತದ ಟ್ರಕ್ ಟರ್ಮಿನಲ್ ಆವರಣದಲ್ಲಿ ಭೂ ಸಾರಿಗೆ ಹಾಗೂ ಹೆದ್ದಾರಿ ಮಂತ್ರಾಲಯ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ, ಪಿಎಂ ಗತಿ ಶಕ್ತಿ, ಭಾರತ ಮಾಲಾ ಹಾಗೂ ಲೋಕೋಪಯೋಗಿ ಇಲಾಖೆಗಳ ಸಹಯೋಗದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಒಟ್ಟು 12,795 ಕೋಟಿ ರೂ. ವೆಚ್ಚದಲ್ಲಿ 925 ಕಿ.ಮೀ. ಉದ್ದುದ್ದ ವಿವಿಧ 26 ರಾಷ್ಟ್ರೀಯ ಹೆದ್ದಾರಿಗಳ ಭೂಮಿ ಪೂಜೆ ಹಾಗೂ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನೀರಿನ ಸಂಪನ್ಮೂಲ ಸಾಕಷ್ಟಿದ್ದರೂ ನೀರಿನ ಬಳಕೆಯ ನಿಯೋಜನೆ ಸರಿಯಾಗಿ ಆಗುತ್ತಿಲ್ಲ ಎಂಬ ನೋವು ಇದೆ ಎಂದರು.
ಹೆದ್ದಾರಿ ನಿರ್ಮಾಣ ಹಾಗೂ ಅದಕ್ಕೆ ಬೇಕಾಗುವ ಮರಳು, ಸಿಮೆಂಟ್, ಜಲ್ಲಿ ಕಲ್ಲು, ಸ್ಟೀಲ್ ಸೇರಿದಂತೆ ಇತರೆ ವಸ್ತುಗಳ ಮೇಲೆ ವಿಧಿಸುವ ಜಿ ಎಸ್ ಟಿಯಲ್ಲಿ ಕೇಂದ್ರದ ಪಾಲಿನ ಹಣವನ್ನು ರಾಜ್ಯಕ್ಕೆ ಬಳಸಿಕೊಳ್ಳಲು ಅವಕಾಶ ಕೊಡಬೇಕು. ಈ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಧ್ಯೆ ಒಡಂಬಡಿಕೆಗೆ ಸಹಮತ ನೀಡಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಮಂಡಿಸಿದ ಬೇಡಿಕೆಗೆ, ಈ ಸಂಬಂಧ ತಕ್ಷಣ ಪ್ರಸ್ತಾವನೆ ಸಲ್ಲಿಸುವಂತೆ ನಿತಿನ್ ಗಡ್ಕರಿ ನಿರ್ದೇಶನ ನೀಡಿದರು.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ಶ್ರೀ ಅರಿಂದಮ್ ಬಗಾಚಿ ಅವರ ಟ್ವಿಟರ್ ನಲ್ಲಿ ಕರ್ನಾಟಕದ ರಾಣೆಬೆನ್ನೂರಿನ ವಿದ್ಯಾರ್ಥಿಯೊರ್ವರು ರಷ್ಯಾದ ರಾಕೆಟ್ ದಾಳಿಗೆ ಬಲಿಯಾಗಿರುವ ಬಗ್ಗೆ ಬರೆದುಕೊಂಡಿದ್ದಾರೆ.
ಭಾರತೀಯ ವಿದೇಶಾಂಗ ಸಚಿವಾಲಯದ ವರದಿ ಪ್ರಕಾರ ಕರ್ನಾಟಕದ ವಿದ್ಯಾರ್ಥಿಯೋರ್ವರು ರಷ್ಯಾದ ರಾಕೆಟ್ ದಾಳಿಗೆ ಬಲಿಯಾಗಿದ್ದಾರೆ. ಕಾರ್ಕೀವ್ ನಗರದಲ್ಲಿ ಈ ದಾರುಣ ಘಟನೆ ನಡೆದಿದೆ. ವಿದ್ಯಾರ್ಥಿಯ ಹೆಸರನ್ನು ಕನ್ನಡ ದೃಶ್ಯಮಾಧ್ಯಮಗಳಲ್ಲಿ ನವೀನ್ ಎಂದು ಪ್ರಸಾರಮಾಡಿವೆ. ವಿದ್ಯಾರ್ಥಿ ರಾಣಿಬೆನ್ನೂರಿನವೆರೆಂದು ಹೇಳಲಾಗಿದೆ.