Friday, February 20, 2026
Friday, February 20, 2026
Home Blog Page 1689

ಅಕ್ರಮ ಮರಳುಗಾರಿಕೆ ಪತ್ತೆ

0

ಮೋಟರ್ ಬೋಟ್ ಬಳಸಿ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಸುತ್ತಿದ್ದ ಸ್ಥಳಕ್ಕೆ ಅಧಿಕಾರಿಗಳು ದಾಳಿ ನಡೆಸಿ ಅಕ್ರಮವನ್ನು ಪತ್ತೆಹಚ್ಚಿದ್ದಾರೆ.

ಹೊಸನಗರ ತಾಲೂಕಿನ ಹೆಬ್ಬೈಲು ಸಮೀಪದ ಬಾವಿಕೊಪ್ಪ ಎಂಬಲ್ಲಿ ಶರಾವತಿ ಹಿನ್ನೀರು ಪ್ರದೇಶದಲ್ಲಿ ಕೆಲದಿನಗಳ ಈಚೆಗೆ ಬೃಹತ್ ಬೋಟ್ ಬಳಸಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.

ಭೂ ಮತ್ತು ಗಣಿ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿ ನವೀನ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ ವೇಳೆ ಅಕ್ರಮಕ್ಕೆ ಬಳಸಿದ ಒಂದು ಬೋಟ್ ,ಪೈಪ್ ಗಳು ಹಾಗೂ ಇನ್ನಿತರ ಪರಿಕರಗಳು ಸ್ಥಳದಲ್ಲಿ ಪತ್ತೆಯಾಗಿವೆ.

ಅಲ್ಲದೇ ಅಕ್ರಮ ಮರಳು ಸಾಗಾಟಕ್ಕೆ ಯತ್ನ ನಡೆಸುತ್ತಿದ್ದ ಒಂದು ಟಿಪ್ಪರ್ ಲಾರಿಯನ್ನು ಸಹ ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಎರಡು ಮೂರು ದಿನಗಳಿಂದ ಅಕ್ರಮ ಮರಳು ಗಣಿಗಾರಿಕೆ ನಡೆದಿದೆ ಎನ್ನುವ ಮಾಹಿತಿ ದೊರೆತಿದೆ. ನೀರಿನಾಳದಿಂದ ಮರಳನ್ನು ಮೇಲೆತ್ತಲು ಬಳಸಿರುವ ಬೋಟ್ ಬಾರಿ ಗಾತ್ರದಲ್ಲಿದ್ದು, ಅದನ್ನು ಬೇರೆಡೆಗೆ ಸಾಗಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಸ್ಥಳದಲ್ಲಿಯೇ ಅದನ್ನು ನಾಶಮಾಡಲಾಗಿದೆ. ಅಕ್ರಮ ಎಸಗಿರುವ ಆರೋಪಿಗಳ ಕುರಿತು ಮಾಹಿತಿ ಕಲೆಹಾಕಲಾಗಿದ್ದು ಹೆಚ್ಚಿನ ತನಿಖೆ ನಡೆಸಲಾಗುತ್ತದೆ ಎಂದು ಭೂ ಮತ್ತು ಗಣಿ ಇಲಾಖೆ ಅಧಿಕಾರಿ ನವೀನ್ ಅವರು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಗ್ರಾ ಪಂ ಸದಸ್ಯರ ಗೌರವ ಧನ ಹೆಚ್ಚಿಸಿ- ಶಾಸಕ ಅರುಣ್

0

ಗ್ರಾಮ ಪಂಚಾಯಿತಿ ಸದಸ್ಯರಿಗೆ ನೀಡುತ್ತಿರುವ ಗೌರವ ಧನ ಹಾಗೂ ದಿನಭತ್ಯೆ ಹೆಚ್ಚಿಸುವಂತೆ ವಿಧಾನಪರಿಷತ್ ಸದಸ್ಯ ಡಿ.ಎಸ್‌. ಅರುಣ್ ಸೇರಿದಂತೆ ಹಲವು ಶಾಸಕರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಪ್ರಸ್ತುತ ಗ್ರಾಮ ಪಂಚಾಯಿತಿ ಸದಸ್ಯರಿಗೆ ನೀಡುವ ಗೌರವಧನ ಅತ್ಯಂತ ಕಡಿಮೆ ಇದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಓಡಾಟಕ್ಕೆ ಹೆಚ್ಚಿನ ಸಮಯ ಮೀಸಲು ನೀಡಬೇಕಾದ ಅವಶ್ಯಕತೆ ಇದೆ. ಚುನಾವಣೆಗೆ ಮುನ್ನ ಸಹ ಗೌರವಧನ ಹೆಚ್ಚಿಸುವ ಭರವಸೆ ಸಚಿವರಿಂದ ಸಿಕ್ಕಿತ್ತು.
ಹೀಗಾಗಿ ಸರ್ಕಾರ ವಿಷಯಕ್ಕೆ ಆದ್ಯತೆ ನೀಡಿ ಬೇಡಿಕೆ ಈಡೇರಿಸಬೇಕು ಎಂದು ಸಿಎಂಗೆ ಒತ್ತಾಯಿಸಿದ್ದಾರೆ.

ಗೌರವಧನ ಹಾಗೂ ದಿನಭತ್ಯೆ ಹೆಚ್ಚಿಸುವ ಕುರಿತಾಗಿ ರಾಜ್ಯದಲ್ಲಿ ನಡೆಯುತ್ತಿರುವ ಅಧಿವೇಶನ ಮುಗಿಯುವ ಒಳಗಾಗಿ ಸರಕಾರ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಲಾಗಿದೆ.
ಆರ್ಥಿಕ ಇಲಾಖೆಯಿಂದ ಇದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ಬರುವ ನಿರೀಕ್ಷೆ ಇದೆ ಎಂದು ಡಿ.ಎಸ್. ಅರುಣ್ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಸರ್ಕಾರಕ್ಕೆ ಧನ್ಯತೆ ಅರ್ಪಿಸಿದ ವಿದ್ಯಾರ್ಥಿ ಮೈನಾ

0

ಉಕ್ರೇನ್ ನಲ್ಲಿ ಸಿಕ್ಕಿರುವ ರಾಜ್ಯದ ವಿದ್ಯಾರ್ಥಿಗಳ ಪೈಕಿ 11 ವಿದ್ಯಾರ್ಥಿಗಳು ಇದೀಗ ರಾಜ್ಯಕ್ಕೆ ಮರಳಿದ್ದಾರೆ.

ಏರ್ ಇಂಡಿಯಾ ವಿಮಾನ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ವಿದ್ಯಾರ್ಥಿಗಳನ್ನು ಪೋಷಕರು ಬರಮಾಡಿಕೊಂಡರು.

ವಿದ್ಯಾರ್ಥಿ ಮೈನಾ ಮಾತನಾಡಿ,ಬುಕೋವಿನ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಲು ಡಿಸೆಂಬರ್ ನಲ್ಲಿ ತೆರಳಿದ್ದೆ. ನಾವು ವೆಸ್ಟ್ ಉಕ್ರೇನ್ ನಲ್ಲಿ ತಂಗಿದ್ದೆವು. ನಮಗೆ ಯಾವುದೇ ತೊಂದರೆಯಾಗಿಲ್ಲ. ಆದರೆ ಬಾರ್ಡರ್ ಗಳಲ್ಲಿ ಅತಿಯಾದ ಚಳಿ ಹಾಗೂ ಊಟದ ವ್ಯವಸ್ಥೆ ಸರಿಯಾಗಿರಲಿಲ್ಲ. ಕೇಂದ್ರ ಸರ್ಕಾರ ನಮ್ಮನ್ನು ವಾಪಸ್ ಕರೆತಂದಿದೆ.
ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಧನ್ಯವಾದ ತಿಳಿಸುತ್ತೇವೆ ಎಂದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಅರಣ್ಯ ಅತಿಕ್ರಮಣ ಕೃಷಿಕರಿಗೂ ಪಂಪ್ ಸೆಟ್ ಗೆ ವಿದ್ಯುತ್ ಸಂಪರ್ಕ- ಸುನೀಲ್ ಕುಮಾರ್

0

ವಿದ್ಯುತ್ ಇಲಾಖೆ ಜನಸಾಮಾನ್ಯರ ಇಲಾಖೆ ಆಗಬೇಕು ಎಂಬುದು ನಮ್ಮ ಉದ್ದೇಶ. ಈ ಹಿನ್ನೆಲೆಯಲ್ಲಿ ಈಗಾಗಲೇ ಜಿಪಿಎಸ್ ಅರಣ್ಯ ಅತಿಕ್ರಮಣ ಕೃಷಿಭೂಮಿಗಳ ಪಂಪ್ ಸೆಟ್ ಗೂ ವಿದ್ಯುತ್ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಇಂಧನ ಸಚಿವ ವಿ. ಸುನಿಲಕುಮಾರ್ ಅವರು ಭರವಸೆ ನೀಡಿದ್ದಾರೆ.

ಶಿರಸಿಯ ಬನವಾಸಿ ಹೋಬಳಿ ವ್ಯಾಪ್ತಿಯ ಕಡಗೋಡದಲ್ಲಿ 110/11 ಕೆ.ವಿ ಸಾಮರ್ಥ್ಯ ವಿದ್ಯುತ್ ಉಪಕೇಂದ್ರ ಕಾಮಗಾರಿಗೆ ನಿನ್ನೆ ಚಾಲನೆ ನೀಡಿ ಮಾತನಾಡುತ್ತಿದ್ದರು.

ಅರಣ್ಯ ಅತಿಕ್ರಮಣದಾರ ಕೃಷಿಕರ ಅನುಕೂಲತೆ ದೃಷ್ಟಿಯಿಂದ ಇನ್ನೊಂದು ವಾರದಲ್ಲಿ ಆದೇಶ ಹೊರಡಿಸಲಾಗುವುದು. ಕೃಷಿ ಚಟುವಟಿಕೆ, ಉದ್ಯಮ, ಜನಜೀವನಕ್ಕೆ ಇಂಧನ ಇಲಾಖೆ ಅತ್ಯಗತ್ಯ. ಇಲಾಖೆಯ ದಕ್ಷತೆಯಿಂದ ಸ್ಪಂದಿಸಿದರೆ ಜನಸ್ನೇಹಿಯಾಗಿ ಹೊರಹೊಮ್ಮಲು ಸಾಧ್ಯ ಎಂದು ಸುನಿಲ ಕುಮಾರ್ ಅವರು ತಿಳಿಸಿದ್ದಾರೆ.

ಬೆಳಕು ಯೋಜನೆಯ ಮೂಲಕ ರಾಜ್ಯದ ಮೂರು ಲಕ್ಷ ಕುಟುಂಬಗಳು ವಿದ್ಯುತ್ ಸಂಪರ್ಕ ಪಡೆದಿವೆ. ವಿದ್ಯುತ್ ಟ್ರಾನ್ಸ್ ಫಾರ್ಮರ್ ಸುಟ್ಟು ಹಾನಿಯಾದರೆ 24ಗಂಟೆಯಲ್ಲಿ ಬದಲಿಸುವ ವ್ಯವಸ್ಥೆ ತಂದಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಕೊಹ್ಲಿ100 ನೇ ಟೆಸ್ಟ್ ಗೆ ಶೇ. 50 ಪ್ರೇಕ್ಷರಿಗೆ ಅವಕಾಶ

0

ಮುಂಬೈಯ ಮೊಹಾಲಿ ಪಿಸಿಎ ಕ್ರೀಡಾಂಗಣದಲ್ಲಿ ಮಾರ್ಚ್ 4ರಂದು ಆರಂಭವಾಗಲಿರುವ ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಹಾಗೂ ವಿರಾಟ್ ಕೊಹ್ಲಿ ಅವರ 100ನೇ ಟೆಸ್ಟ್ ಪಂದ್ಯದ ನೇರ ವೀಕ್ಷಣೆಗೆ ಶೇ.50 ರಷ್ಟು ವೀಕ್ಷಕರಿಗೆ ಅವಕಾಶ ಕಲ್ಪಿಸಿಕೊಡಬೇಕೆಂದು ಬಿಸಿಸಿಐ ನಿರ್ಧರಿಸಿದೆ.

ಕೋವಿಡ್ ಹಿನ್ನೆಲೆಯಲ್ಲಿ ಪ್ರೇಕ್ಷಕರ ರಹಿತ ಟೆಸ್ಟ್ ಆಯೋಜಿಸಲು ಬಿಸಿಸಿಐ ನಿರ್ಧರಿಸಿತ್ತು. ಆದ್ದರಿಂದ, ಸಾವಿರಾರು ಅಭಿಮಾನಿಗಳಿಗೆ ಕೊಹ್ಲಿ ಅವರ 100 ನೇ ಟೆಸ್ಟ್ ಕಣ್ತುಂಬಿಕೊಳ್ಳಲು ಅವಕಾಶ ಇಲ್ಲದಂತಾಗಿತ್ತು. ಆದರೆ ಈಗ ಬಿಸಿಸಿಐ ತನ್ನ ನಿರ್ಧಾರವನ್ನು ಬದಲಿಸಿಕೊಂಡಿದೆ.

ಮೊಹಾಲಿಯ ಕ್ರೀಡಾಂಗಣದಲ್ಲಿ ಆ ಯೋಜನೆಯಾಗಿರುವ ಟೆಸ್ಟ್ ಪಂದ್ಯ ಮುಚ್ಚಿದ ಬಾಗಿಲುಗಳ ಹಿಂದೆ ನಡೆಯುವುದಿಲ್ಲ. ಪ್ರಸ್ತುತ ಪರಿಸ್ಥಿತಿಯನ್ನು ಆಧರಿಸಿ ರಾಜ್ಯ ಕ್ರಿಕೆಟ್ ಸಂಸ್ಥೆ ಮೈದಾನಕ್ಕೆ ಪ್ರೇಕ್ಷಕರಿಗೆ ಅವಕಾಶ ಕಲ್ಪಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. ಹೀಗಾಗಿ ಕ್ರಿಕೆಟ್ ಅಭಿಮಾನಿಗಳಿಗೆ ಐತಿಹಾಸಿಕ ಕ್ಷಣ ವೀಕ್ಷಿಸಲು ಸಾಧ್ಯವಾಗುತ್ತದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಜಿಎಸ್ ಟಿ ಸಂಗ್ರಹದಲ್ಲಿ ಕರ್ನಾಟಕ ದ್ವಿತೀಯ ಸ್ಥಾನ

0

ಕಳೆದ ಫೆಬ್ರವರಿ ತಿಂಗಳಿನಲ್ಲಿ ದೇಶದಲ್ಲಿ ಒಟ್ಟು ಜಿ ಎಸ್ ಟಿ ಸಂಗ್ರಹ 1.33 ಲಕ್ಷ ಕೋಟಿ ರೂಪಾಯಿಗೆ ಹೆಚ್ಚಾಗಿದೆ. ಶೇ.18 ರಷ್ಟು ವೃದ್ಧಿಸಿದೆ. ಇದೇ ಸಂದರ್ಭದಲ್ಲಿ ರಾಜ್ಯಗಳ ಗರಿಷ್ಠ ಜಿಎಸ್ ಟಿ ಸಂಗ್ರಹದಲ್ಲಿ ಕರ್ನಾಟಕವು ದೇಶದಲ್ಲೇ ಎರಡನೇ ಸ್ಥಾನ ಪಡೆದಿದೆ. ಪ್ರಸ್ತುತ ಸಾಲಿನಲ್ಲಿ ಐದನೇ ಬಾರಿಗೆ ಜಿ ಎಸ್ ಟಿ 1.30 ಲಕ್ಷ ಕೋಟಿ ರೂಪಾಯಿಗಳ ಗಡಿ ದಾಟಿದೆ. ಇದೇ ಪ್ರಥಮ ಬಾರಿಗೆ ಸೆಸ್ ಸಂಗ್ರಹವೂ 10,000 ಕೋಟಿ ರೂಪಾಯಿ ದಾಟಿದೆ.

ಆಟೋಮೊಬೈಲ್ ಮತ್ತು ಕೆಲ ವಲಯಗಳಲ್ಲಿ ವ್ಯಾಪಾರ ಚಟುವಟಿಕೆಗಳ ಚೇತರಿಕೆ ಪ್ರಭಾವ ಬೀರಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಜಿಎಸ್ ಟಿ ಸಂಗ್ರಹ ಜನವರಿ ತಿಂಗಳಿನ ದಾಖಲೆಯಲ್ಲಿ 1,40,986 ಕೋಟಿ ರೂಪಾಯಿಗೆ ವೃದ್ಧಿಸಿತ್ತು.

ಫೆಬ್ರವರಿಯಲ್ಲಿ ಸಂಗ್ರಹವಾಗಿರುವ 1,33,026 ಕೋಟಿ ರೂಪಾಯಿ ಜಿ ಎಸ್ ಟಿ ಯಲ್ಲಿ ಸೆಂಟ್ರಲ್ ಜಿ ಎಸ್ ಟಿ 24,435 ಕೋಟಿ ರೂಪಾಯಿ, ರಾಜ್ಯ ಜಿಎಸ್ ಟಿ 30,779 ಕೋಟಿ ರೂಪಾಯಿ, ಸಂಯೋಜಿತ ಜಿಎಸ್ ಟಿ 67,471 ಕೋಟಿ ರೂಪಾಯಿ ಮತ್ತು ಸೆಸ್ 10,340 ಕೋಟಿ ರೂಪಾಯಿಗಳಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ವಿದ್ಯಾರ್ಥಿ ನವೀನ್ ಸಾವಿಗೆ ಗಣ್ಯರ ಸಾಂತ್ವನ

0

ರಷ್ಯಾ ಉಕ್ರೇನ್ ಯುದ್ಧದಲ್ಲಿ ಭಾರತೀಯ ವಿದ್ಯಾರ್ಥಿ, ಹಾವೇರಿ ಜಿಲ್ಲೆ ಚಳಗೇರಿಯ ನವೀನ್ ಗ್ಯಾನ ಗೌಡರ (21) ಮೃತಪಟ್ಟಿದ್ದಾರೆ.

ಅನೇಕ ಗಣ್ಯರು ನವೀನ್ ಕುಟುಂಬದವರಿಗೆ ಸಾಂತ್ವನವನ್ನು ಹೇಳಿದ್ದಾರೆ. ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರು ನವೀನ ತಂದೆ ಶೇಖರಪ್ಪ ಅವರಿಗೆ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ. ನವೀನ್ ಸಾವಿನ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಉಕ್ರೇನ್ ನಲ್ಲಿ ಶೇಲ್ ದಾಳಿಗೆ ಹಾವೇರಿ ಜಿಲ್ಲೆಯ ವಿದ್ಯಾರ್ಥಿ ನವೀನ್ ಮೃತಪಟ್ಟಿರುವುದು ದುರಂತದ ಸಂಗತಿ. ನವೀನ್ ತಂದೆ ಅವರಿಗೆ ಕರೆ ಮಾಡಿ, ಸಾಂತ್ವನ ಹೇಳಿದ್ದೇನೆ. ನವೀನ ಅವರ ಮೃತದೇಹವನ್ನು ಭಾರತಕ್ಕೆ ತರಿಸಿಕೊಳ್ಳುವ ಎಲ್ಲಾ ಪ್ರಯತ್ನ ನಡೆಸಲಾಗುವುದು. ಯುದ್ಧಪೀಡಿತ ಪ್ರದೇಶವಾಗಿರುವುದರಿಂದ, ದೇಹ ಯಾವ ಸ್ಥಿತಿಯಲ್ಲಿದೆ ಮತ್ತು ಹೇಗೆ ತರಬೇಕು ಎಂಬ ಬಗ್ಗೆ ಚರ್ಚೆ ನಡೆದಿದೆ ಎಂದು ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಅಂತಾರಾಷ್ಟ್ರೀಯ ಕ್ರೀಡಾ ಸಂಘಟನೆಯಿಂದ ರಷ್ಯಾ ಎತ್ತಂಗಡಿ

0

ಉಕ್ರೇನ್ ವಿರುದ್ಧ ಮಿಲಿಟರಿ ಸಮರ ಸಾರಿರುವ ರಷ್ಯಾ ವಿರುದ್ಧ ಜಾಗತಿಕ ಕ್ರೀಡಾ ಸಂಸ್ಥೆಗಳು ಪರೋಕ್ಷವಾಗಿ ತೊಡೆತಟ್ಟಿವೆ. ರಷ್ಯಾ ಅಧ್ಯಕ್ಷ ವ್ಲಾಡಮಿರ್ ಪುಟಿನ್ ಹಠಮಾರಿತನಕ್ಕೆ ಬೆಂಬಲ ನೀಡುತ್ತಿರುವ ಬೆಲಾರುಸ್ ಗೂ ಪಾಠ ಕಲಿಸಲು ಮುಂದಾಗಿದೆ. ಈ ಎರಡು ದೇಶಗಳಿಗೆ ನೀಡಿರುವ ನಾನಾ ಕ್ರೀಡಾಕೂಟಗಳ ಆತಿಥ್ಯ ರದ್ದು ಮಾಡಲಾಗಿದೆ.

ರಷ್ಯಾದ ಅತಿಕ್ರಮಣವನ್ನು ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿ ಮೊದಲಾಗಿ ವಿರೋಧಿಸಿದೆ. ಆದೇಶಕ್ಕೆ ನೀಡಿರುವ ಎಲ್ಲಾ ಆತಿಥ್ಯವನ್ನು ವಾಪಸ್ ಪಡೆಯಬೇಕು ಎಂದು ಸದಸ್ಯ ಒಕ್ಕೂಟಗಳಿಗೆ ಸೂಚನೆ ನೀಡಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಶಾಸಕರೊಂದಿಗೆ ಮುಖ್ಯಮಂತ್ರಿಗಳ ಬಜೆಟ್ ಪೂರ್ವ ಸಭೆ

0

ಬಜೆಟ್ ಅಧಿವೇಶನದ ವೇಳೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಆಡಳಿತಾರೂಢ ಬಿಜೆಪಿ ಶಾಸಕರೊಂದಿಗೆ ಸಭೆ ನಡೆಸಿ ಅಹವಾಲು ಆಲಿಸಲಿದ್ದಾರೆ.

ಜಂಟಿ ಅಧಿವೇಶನದ ಸಂದರ್ಭದಲ್ಲೆ ಶಾಸಕರೊಂದಿಗೆ ಸಿಎಂ ಸಭೆ ನಡೆಸಲು ನಿರ್ಧರಿಸಿದ್ದರು. ಆದರೆ, ಪ್ರತಿಪಕ್ಷ ಕಾಂಗ್ರೆಸ್ ಸದನದಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದರಿಂದ ನಿಗದಿಗಿಂತ ಮೊದಲೇ ಅಧಿವೇಶನ ಮೊಟಕುಗೊಂಡಿತು. ಆದ್ದರಿಂದ ಶಾಸಕರ ಸಭೆ ನಡೆಸಲು ಸಾಧ್ಯವಾಗಿರಲಿಲ್ಲ.

ಶಾಸಕಾಂಗ ಪಕ್ಷದ ಸಭೆ ನಡೆಸಿದರೆ ಎಲ್ಲಾ ಶಾಸಕರಿಗೂ ಅಭಿಪ್ರಾಯ ಹಂಚಿಕೊಳ್ಳಲು ಅವಕಾಶ ದೊರಕುವುದಿಲ್ಲ. ಕೆಲವರು ಮಾತ್ರ ಮಾತನಾಡುತ್ತಾರೆ. ಎಷ್ಟು ಬಾರಿ ಟೀಕೆ, ಟಿಪ್ಪಣಿ ಮತ್ತು ವೈಯಕ್ತಿಕ ಆಕ್ರೋಶ ತೋಡಿಕೊಳ್ಳಲು ಕೆಲ ಶಾಸಕರು ಈ ವೇದಿಕೆಯನ್ನು ಬಳಸಿಕೊಳ್ಳುತ್ತಾರೆ. ಆದ್ದರಿಂದ ಹೆಚ್ಚಿನ ಸಂಖ್ಯೆಯ ಶಾಸಕರು ತಮ್ಮ ಕ್ಷೇತ್ರದ ಅಭಿವೃದ್ಧಿ ಸಂಬಂಧ ಸರ್ಕಾರದ ಯೋಜನೆಗಳ ಲಾಭ ಪಡೆಯುವ ಬಗ್ಗೆ ಚರ್ಚಿಸಲು ಆಗುವುದಿಲ್ಲ. ಈ ಹಿನ್ನೆಲೆಯಲ್ಲಿ ವಿಭಾಗವಾರು ಸಭೆ ಸೂಕ್ತ ಎಂಬ ನಿರ್ಧಾರಕ್ಕೆ ಬರಲಾಗಿದೆ. ಅದರಂತೆ ನಾಲ್ಕು ಕಂದಾಯ ವಿಭಾಗವಾರು ನಡೆಯಲಿದೆ ವರದಿಗಳು ತಿಳಿಸಿವೆ.

ಈ ನಡುವೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯ ನಾಲ್ಕನೇ ಕಂತಿನ ಹಣವನ್ನು ಜಂಟಿ ಅಧಿವೇಶನದ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇನ್ನು ನಾನಾ ಇಲಾಖೆಗಳ ಅನುದಾನ ಹಂಚಿಕೆ ಮಾಡುವಂತೆಯೂ ಸಿಎಂ ಸೂಚಿಸಿದ್ದಾರೆ. ಇದರಿಂದ ಶಾಸಕರು ಸ್ವಲ್ಪ ಸಮಾಧಾನಗೊಂಡಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಶಿವಮೊಗ್ಗ ನಂದಿನಿ ಶಿಮುಲ್ ರೈತರಿಗೆಲೀಟರ್ ಗೆ ರೂ 2.50 ಹೆಚ್ಚಳ

0

ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವು ರೈತರಿಂದ ಖರೀದಿಸುವ ಹಾಲಿನ ದರವನ್ನು ಲೀಟರ್ ಗೆ 2.50 ರೂಪಾಯಿ ಹೆಚ್ಚಳ ಮಾಡಿದೆ.

ಆ ಮೂಲಕ ವ್ಯಾಪ್ತಿಯ ಹಾಲು ಉತ್ಪಾದಕರಿಗೆ ಮಹಾಶಿವರಾತ್ರಿಯ ಕೊಡುಗೆಯನ್ನು ಘೋಷಿಸಿದೆ. ನೂತನ ದರ ಮಾರ್ಚ್ 1ರಿಂದ ಜಾರಿಗೆ ಬರುತ್ತಿದೆ. ಪ್ರಸ್ತುತ ಲೀಟರ್ 25.36 ರೂಪಾಯಿ ಸಿಗುತ್ತಿದೆ. ಇಂದಿನಿಂದ 27.86 ರೂಪಾಯಿ ಆಗಲಿದೆ. ಗುಣಮಟ್ಟಕ್ಕೆ ಅನುಗುಣವಾಗಿ ರೈತರು ಲೀಟರ್ ಗೆ 29.25 ರೂಪಾಯಿ ವರೆಗೂ ದರ ಪಡೆಯಲು ಅವಕಾಶವಿದೆ ಎಂದು ಒಕ್ಕೂಟದ ಅಧ್ಯಕ್ಷ ಎನ್. ಎಚ್. ಶ್ರೀಪಾದರಾವ್ ಅವರು ಹೇಳಿದ್ದಾರೆ.