ಮೀಡಿಯಂ ಒನ್ ಮಲಯಾಳಂ ಖಾಸಗಿ ಚಾನೆಲ್ ಪ್ರಸಾರವನ್ನು ತಡೆಹಿಡಿದ ಕೇಂದ್ರ ಸರ್ಕಾರದ ಕ್ರಮವನ್ನು ಹೈಕೋರ್ಟ್ ವಿಭಾಗೀಯ ಪೀಠ ಎತ್ತಿ ಹಿಡಿದಿದೆ. ಏಕ ಪೀಠದ ತೀರ್ಪು ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಭಾಗೀಯ ಪೀಠ ತಿರಸ್ಕರಿಸಿದೆ.
ಚಾನೆಲ್ ಮಾಲಿಕತ್ವ ಹೊಂದಿರುವ ಮಾಧ್ಯಮಂ ಬ್ರಾಡ್ ಕಾಸ್ಟಿಂಗ್ ಲಿಮಿಟೆಡ್, ಸಿಬ್ಬಂದಿ ಹಾಗೂ ಕೇರಳ ಕಾರ್ಯನಿರತ ಪತ್ರಕರ್ತರ ಸಂಘ ಏಕಸದಸ್ಯಪೀಠದ ತೀರ್ಪು ವಿರುದ್ಧ ಕೇರಳ ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ವಿಭಾಗೀಯ ಪೀಠದ ಈ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್ ಮೊರೆ ಹೋಗುವುದಾಗಿ ಮೀಡಿಯಾ ಒನ್ ಆಡಳಿತ ಮಂಡಳಿ ತಿಳಿಸಿದೆ.
ಮುಖ್ಯ ನ್ಯಾಯಮೂರ್ತಿ ಎಸ್. ಮಣಿ ಕುಮಾರ್,ನ್ಯಾ.ಷಾಜಿ ಪಿ. ಚಾಲಿ ಅವರನ್ನು ಒಳಗೊಂಡ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಭದ್ರತೆಗೆ ಕುತ್ತು ತರುವ ವರದಿಗಳನ್ನು ಪ್ರಸಾರ ಮಾಡಿದ ಕಾರಣ ಮೀಡಿಯಾ ಒನ್ ಚಾನೆಲ್ ಪ್ರಸಾರವನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ರಷ್ಯಾ ಪಡೆಗಳು ಭಾನುವಾರದಿಂದ ಆರಂಭ ಮಾಡಿರುವ ಎರಡನೇ ಸುತ್ತಿನ ದಾಳಿಗೆ ರಾಜಧಾನಿ ಕೀವ್ ನಗರ ತತ್ತರಿಸಿದೆ. ಇಲ್ಲಿನ ಬಹುತೇಕ ಎಲ್ಲಾ ಸರ್ಕಾರಿ ಕಟ್ಟಡಗಳು ನಾಶಗೊಂಡಿವೆ. ಭಾರಿ ಗಾತ್ರದ ಬಾಂಬ್ ಗಳನ್ನು ಸಿಡಿಸುತ್ತಿರುವುದರಿಂದ ವಸತಿ ಪ್ರದೇಶಗಳಿಗೂ ಹಾನಿ ಉಂಟಾಗಿದೆ. ಆಸ್ಪತ್ರೆ ಮತ್ತು ಟಿವಿ ಕೇಂದ್ರಗಳನ್ನು ರಷ್ಯನ್ ಪಡೆಗಳು ಗುರಿಯಾಗಿಸಿಕೊಂಡು ದಾಳಿ ನಡೆಸಿವೆ. ಕಿವಿಗಡ ಚಿಕ್ಕುವ ಸದ್ದಿನಿಂದ ಕಂಗಾಲಾಗಿರುವ ಜನರು, ಮನೆಗಳಲ್ಲಿ ಇರಲಾಗದೆ ಹಡಗುದಾಣ ಗಳತ್ತ ಪಲಾಯನ ಮಾಡುತ್ತಿದ್ದಾರೆ. ಕೀವ್ ನಗರದ 30 ಲಕ್ಷ ಜನ ಮನೆಮಾರು ತೊರೆದು, ನೆಲಮಹಡಿಯ ಮೆಟ್ರೋ ನಿಲ್ದಾಣಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ ಎಂದು ವರದಿಗಳಿಂದ ತಿಳಿದು ಬಂದಿದೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ಉಕ್ರೇನ್ ನಲ್ಲಿ ಸಾವನ್ನಪ್ಪಿದ ಕರ್ನಾಟಕದ ವಿದ್ಯಾರ್ಥಿ ನವೀನ್ ಕುಟುಂಬದ ಬಳಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕ್ಷಮೆ ಕೇಳಬೇಕು. ಇಂತಹ ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಲು ಸರ್ಕಾರ ವಿಫಲವಾಗಿದೆ. ಪಾದಯಾತ್ರೆ ಮುಗಿದನಂತರ ನವೀನ್ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ.
ಕಡಿಮೆ ಅಂಕ ಬಂದ ನಂತರ ವಿದೇಶಕ್ಕೆ ಹೋಗಿ ಎಂಬಿಬಿಎಸ್ ಓದುತ್ತಿದ್ದಾರೆ ಎಂದು ಕೇಂದ್ರದ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಅವರ ಹೇಳಿಕೆಗೆ ಡಿಕೆಶಿ ಅವರು ತಿರುಗೇಟು ನೀಡಿದ್ದಾರೆ.
ಸಚಿವರ ಮಾತಿಗೆ ಪ್ರಧಾನ ಮಂತ್ರಿಗಳು ಅನುಮೋದನೆ ನೀಡುತ್ತಾರೆ ಎಂದರೆ ಇದಕ್ಕಿಂತ ನಾಚಿಕೆಗೇಡಿನ ವಿಚಾರ ಮತ್ತೊಂದಿಲ್ಲ. ಕೇಂದ್ರದ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವರು ಕೂಡಲೇ ಕ್ಷಮೆ ಕೋರಬೇಕು ಬಿಜೆಪಿ ಸರ್ಕಾರಕ್ಕೆ ವಿದ್ಯಾರ್ಥಿಗಳ ಭಾವನೆ ತಿಳಿಯುತ್ತಿಲ್ಲ. ಈ ವಿಚಾರದಲ್ಲಿ ಸರ್ಕಾರ ಜಾಗೃತ ವಾಗದಿದ್ದರೆ ವಿದ್ಯಾರ್ಥಿಗಳು ಮುಂದೆ ಏನು ಮಾಡುತ್ತಾರೆ ಎಂದು ಹೇಳಲು ಸಾಧ್ಯವಾಗುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ಉಕ್ರೇನ್ ನಲ್ಲಿ ಮೃತಪಟ್ಟಿರುವ ನವೀನ್ ಪಾರ್ಥಿವ ಶರೀರವನ್ನು ತಾಯ್ನಾಡಿಗೆ ತರುವುದು ನಮ್ಮ ಸರ್ಕಾರದ ಆದ್ಯತೆ. ನವೀನ್ ಕುಟುಂಬಕ್ಕೆ ಎಲ್ಲ ರೀತಿಯ ಸಹಾಯ, ಸಹಕಾರ ನೀಡಲಾಗುವುದು ಎಂದು ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.
ನವೀನ್ ಹಾಕಿಕೊಂಡಿದ್ದ ಬಟ್ಟೆಗಳನ್ನು ಹೋಲುವ ಕೆಲವು ಛಾಯಾಚಿತ್ರಗಳನ್ನು ಅವರ ಸ್ನೇಹಿತರು ಕಳುಹಿಸಿಕೊಟ್ಟಿದ್ದಾರೆ. ಅವು ಶೆಲ್ ದಾಳಿ ನಿಂತ ಮೇಲೆ ನವೀನ್ ಜೊತೆಗಿದ್ದವರು ತೆಗೆದ ಚಿತ್ರಗಳಾಗಿವೆ. ಈ ಬಗ್ಗೆ ವಿದೇಶಾಂಗ ಸಚಿವರೊಂದಿಗೆ ಮತ್ತು ಉಕ್ರೇನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೂ ಮಾತನಾಡಿ ನವೀನ್ ಪಾರ್ಥಿವ ಶರೀರ ಪಡೆಯಲು ಗಂಭೀರ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ಭಾರತ ಸರ್ಕಾರ ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರನ್ನು ತೆರವು ಮಾಡಲು ತೀವ್ರ ಪ್ರಯತ್ನ ಮಾಡುತ್ತಿದೆ. ಬೇರೆ ಬೇರೆ ನಗರಗಳಲ್ಲಿ ಇರುವವರನ್ನು ಬೇರೆ ಬೇರೆ ದಿಕ್ಕಿನಲ್ಲಿ ಬರಲು ತಿಳಿಸಲಾಗಿದೆ ಎಂದು ಬಸವರಾಜ್ ಬೊಮ್ಮಾಯಿ ಅವರು ಹೇಳಿದರು.
ಯುದ್ಧ ನಡೆಯುತ್ತಿರುವುದರಿಂದ ಸ್ವಲ್ಪ ಕಷ್ಟವಾಗಿದೆ. ಭಾರತ ಸರ್ಕಾರವು ಉಕ್ರೇನ್ ಸರ್ಕಾರದೊಂದಿಗೆ ಮಾತನಾಡಿ ಸುರಕ್ಷಿತ ವಲಯಗಳಿಗೆ ಹೇಗೆ ಹೋಗಬೇಕೆಂಬುದನ್ನು ಯೋಜಿಸಿ ಗುಂಪಿನಲ್ಲಿ ತೆರಳಲು ನಿರ್ದೇಶನ ನೀಡಿದೆ. ಹತ್ತಿರದ ರೈಲ್ವೆ ನಿಲ್ದಾಣದಲ್ಲಿ ಪಶ್ಚಿಮ ದಿಕ್ಕಿನತ್ತ ಬರಲು ಯೋಜಿಸಿದೆ. ಯುದ್ಧಭೂಮಿಯಿಂದ ಕನ್ನಡಿಗರನ್ನು ಹೊರತರುವ ಪ್ರಯತ್ನ ನಡೆದಿದೆ ಎಂದು ಮುಖ್ಯಂತ್ರಿಗಳು ಅವರು ತಿಳಿಸಿದ್ದಾರೆ. ನವೀನ್ ಜೊತೆಗಿದ್ದ ಗಾಯಾಳು ವಿದ್ಯಾರ್ಥಿ ಸ್ಥಿತಿಗತಿಯ ಬಗ್ಗೆ ವಿಚಾರಣೆ ನಡೆದಿದೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ಶುದ್ಧ ನೀರಿನ ಘಟಕ ಗಳಲ್ಲೇ ನೀರು ಕಲುಷಿತಗೊಂಡಿದೆ ಎಂದು ರಾಜ್ಯ ಮೌಲ್ಯಮಾಪನ ಮತ್ತು ಸಾಂಖ್ಯಿಕ ಇಲಾಖೆಯು ಸರ್ಕಾರಕ್ಕೆ ವರದಿ ಸಲ್ಲಿಸಿದೆ.
ರಾಜ್ಯದಲ್ಲಿರುವ 17.439 ಶುದ್ಧ ನೀರಿನ ಘಟಕಗಳ ಪೈಕಿ 9,329 ಘಟಕಗಳಲ್ಲಿ ನೀರು ಕಲುಷಿತಗೊಂಡಿದೆ. ಅದರಲ್ಲಿ ಆರ್ ಡಿ ನಿಂದ ಸ್ಥಾಪಿತವಾದ 8,465 ಘಟಕಗಳು ಕೂಡ ಇವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಘಟಕ ಸ್ಥಾಪನೆಗೂ ಮುಂಚೆ ಅಗತ್ಯ ಇರುವ ಲ್ಯಾಬ್ ವರದಿಗಳನ್ನು ಶೇ.45.56 ರಷ್ಟು ಘಟಕಗಳು ಹೊಂದಿಲ್ಲ. ಲ್ಯಾಬ್ ವರದಿ ಪಡೆಯದೆ ಸ್ಥಾಪಿತವಾಗಿವೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಿದೆ.
2013-14ರಿಂದ 2020-21ರ ಅವಧಿಯಲ್ಲಿ ವಿವಿಧ ಇಲಾಖೆಗಳಡಿ ಸ್ಥಾಪನೆಯಾದ ಘಟಕಗಳನ್ನು ಮೌಲಿಕರಿಸಿ ರುವ ಇಲಾಖೆ, 1664 ಘಟಕಗಳು ಸ್ಥಗಿತಗೊಂಡಿರುವುದನ್ನು ಬಹಿರಂಗಪಡಿಸಿದೆ. ನಿರ್ವಹಣಾ ಜವಾಬ್ದಾರಿ ಹೊತ್ತ ಪ್ರಾಧಿಕಾರಗಳು ನಿರ್ವಹಣೆಗೆ ನಿರ್ಲಕ್ಷ ವಹಿಸಿದೆ ಎಂದು ಇಲಾಖೆಯು ದೂರಿದೆ.
ಘಟಕ ಸ್ಥಾಪನೆ ಮತ್ತು ನಿರ್ವಹಣೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಮೌಲ್ಯಮಾಪನ ಇಲಾಖೆಯು ಅನುಮಾನಿಸಿದೆ. 17439 ಘಟಕಗಳ ಪೈಕಿ ಟೆಂಡರ್ ಕರೆಯದೇ 1410, ಪ್ರಯೋಗಾಲಯ ವರದಿ ಪಡೆಯದೆ 7946, ಮಾನದಂಡಗಳನ್ನು ಖಚಿತಪಡಿಸಿದೆ ಇರುವ 7132, ಘಟಕಗಳ ನಿರ್ವಹಣಾ ಒಪ್ಪಂದ ಇಲ್ಲದೆ 1984 ಘಟಕಗಳು ಸ್ಥಾಪನೆಯಾಗಿವೆ. ಈ ಬಗ್ಗೆ ತನಿಖೆಗೆ ಶಿಫಾರಸು ಮಾಡಲಾಗಿದೆ
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ಪುಟ್ಟ ರಾಷ್ಟ್ರವಾದ ಉಕ್ರೇನ್ ಮೇಲೆ ಬಲಿಷ್ಠ ರಾಷ್ಟ್ರವಾದ ರಷ್ಯಾವು ಆಕ್ರಮಣಕಾರಿ ದಾಳಿಯನ್ನು ಮುಂದುವರೆಸಿದೆ. ರಷ್ಯಾವು ಜನನಿಬಿಡ ನಗರ ಪ್ರದೇಶಗಳಿಂದ ಗುರಿಯಾಗಿಸಿ ದಾಳಿಯನ್ನು ನಡೆಸಿದೆ.
ಉಕ್ರೇನ್ ನ ಹಾರ್ಕಿವ್, ಖೆಸ್ರನ್ ಮತ್ತು ಮರಿಯುಪೋಲ್ ನಗರಗಳನ್ನು ರಷ್ಯಾದ ಪಡೆಗಳು ಸುತ್ತುವರೆದಿವೆ. ಕೀವ್ ಟಿವಿ ಟವರ್ ನ ಪ್ರಧಾನ ಕೇಂದ್ರದ ಚೌಕ ಗುರಿಯಾಗಿಸಿ ರಷ್ಯಾ ಬಾಂಬ್ ದಾಳಿ ನಡೆಸಿದೆ ಈ ದಾಳಿಯಲ್ಲಿ ಅನೇಕ ಸಾವು ನೋವು ಸಂಭವಿಸಿದೆ ಎಂದು ವರದಿಯಾಗಿದೆ.
ಉಕ್ರೇನ್ ಅಧ್ಯಕ್ಷ ಝೆಲೆನ್ ಸ್ಕಿ, ಅವರು ಈ ದಾಳಿಯನ್ನು ಘೋರ ಭಯೋತ್ಪಾದನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ‘ಇದನ್ನು ಯಾರು ಕ್ಷಮಿಸುವುದಿಲ್ಲ. ಯಾರು ಮರೆಯುವುದಿಲ್ಲ’ ಎಂದು ಪ್ರತಿಜ್ಞೆ ಮಾಡಿದ್ದಾರೆ.
ಉಕ್ರೇನ್ ಅಧ್ಯಕ್ಷ ಝೆಲೆನ್ ಸ್ಕಿ ಅವರು ನಾವು ಸಹಿಸಿಕೊಳ್ಳುವುದಿಲ್ಲ ನಮ್ಮ ರಾಷ್ಟ್ರ ಕೊನೆಯವರೆಗೂ ಹೋರಾಟ ನಡೆಸಲಿದೆ ಎಂದು ರಷ್ಯಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾನು ಎರಡು ದಿನಗಳಿಂದ ನನ್ನ ಮಕ್ಕಳ ಮುಖವನ್ನೇ ನೋಡಿಲ್ಲ ಎನ್ನುವ ಸಂಗತಿಯನ್ನು ಝೆಲೆನ್ ಸ್ಕಿ ತಿಳಿಸಿದರು.
ರಷ್ಯಾ ವಿದೇಶಾಂಗ ಸಚಿವ ಸರ್ಗೈ ಲಾವ್ರೊವ್ ಅವರು ಯಾವುದೇ ರಾಷ್ಟ್ರ ಅಣ್ವಸ್ತ್ರ ನೀಡಿದರೆ ಅದು ನಿಜವಾದ ಅಪಾಯ. ಅದು ಮೂರನೇ ಮಹಾಯುದ್ಧ ಸಂಭವಿಸಲು ದಾರಿಯಾಗಲಿದ್ದು, ಅಣ್ವಸ್ತ್ರ ಬಳಕೆಗೆ ನಾಂದಿ ಹಾಡಲಿದೆ. ಅದು ವಿನಾಶಕಾರಿ ಯಾಗಲಿದೆ ಎಂದು ಬೆದರಿಕೆ ಹಾಕಿದ್ದಾರೆ.
ಯುದ್ಧಭೂಮಿಯಲ್ಲಿ ಪುಟಿನ್ ಲಾಭ ಗಳಿಸಬಹುದಾದರೂ, ಆತ ದೀರ್ಘಾವಧಿಯಲ್ಲಿ ಹೆಚ್ಚಿನ ಬೆಲೆ ತೆರಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಸ್ಟೇಟ್ ಆಫ್ ಯುನೈಟೆಡ್ ನ ಕಾಂಗ್ರೆಸ್ ಜಂಟಿ ಅಧಿವೇಶನದಲ್ಲಿ ರಷ್ಯಾಗೆ ಎಚ್ಚರಿಕೆ ನೀಡಿದ್ದಾರೆ.
ಯುದ್ಧಪೀಡಿತ ಉಕ್ರೇನ್ ದಲ್ಲಿ ರಷ್ಯಾದ ವಿರುದ್ಧ ಸಂಘರ್ಷಕ್ಕೆ ಹಿಡಿಯುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಬೈಡನ್ ಸ್ಪಷ್ಟಪಡಿಸಿದ್ದಾರೆ.
ಎರಡನೇ ಮಹಾಯುದ್ಧದ ಬಳಿಕ ಯುರೋಪಿನಲ್ಲಿ ಶಾಂತಿ ಕಾಪಾಡಲು ನ್ಯಾಟೋ ರಚಿಸಲಾಗಿದೆ ಈ ಸಂಘರ್ಷದಲ್ಲಿ ನಮ್ಮ ಸಂಪೂರ್ಣ ಬೆಂಬಲ ಇರುತ್ತದೆ ಎಂದು ಬೈಡನ್ ತಿಳಿಸಿದ್ದಾರೆ.
ಯುರೋಪಿನಲ್ಲಿ ಅಮೆರಿಕ ಪಡೆಗಳನ್ನು ನೀಡಿ ನಿಯೋಜಿಸಿರುವುದು ಉಕ್ರೇನ್ ನಲ್ಲಿ ಹೋರಾಡಲು ಅಲ್ಲ. ಆದರೆ ಪುಟಿನ್ ಪಶ್ಚಿಮದತ್ತ ನುಗ್ಗಲು ನಿರ್ಧರಿಸಿದರೆ, ನ್ಯಾಟೋ ಮಿತ್ರ ರಾಷ್ಟ್ರಗಳನ್ನು ರಕ್ಷಿಸಲು ಸೇನೆ ನಿಯೋಜಿಸಲಾಗಿದೆ ಎಂದು ಬೈಡನ್ ಹೇಳಿದ್ದಾರೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ಸುಸ್ಥಿರ ಅಭಿವೃದ್ದಿಗಾಗಿ ನ್ಯಾನೋ ತಂತ್ರಜ್ಞಾನ ಎಂಬ ಧ್ಯೇಯ ವಾಕ್ಯದೊಂದಿಗೆ 12ನೇ ವರ್ಷದ ಬೆಂಗಳೂರು ಇಂಡಿಯಾ ನ್ಯಾನೊ ಸಮಾವೇಶ ಮೊದಲ ಬಾರಿಗೆ ವರ್ಚುಯಲ್ ಮಾದರಿಯಲ್ಲಿ ಮಾರ್ಚ್ 7ರಿಂದ 9ರವರೆಗೆ ನಡೆಯಲಿದೆ ಎಂದು ಐಟಿ, ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ತಿಳಿಸಿದ್ದಾರೆ.
ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಅಶ್ವತ್ಥನಾರಾಯಣ ಅವರು ಹೇಳಿದ್ದಾರೆ.
ಸಮಾವೇಶದಲ್ಲಿ ಕೆನಡಾ, ಇಸ್ರೇಲ್, ಜರ್ಮನಿ, ನೆದರ್ಲ್ಯಾಂಡ್ಸ್ ಹಾಗೂ ಜಪಾನ್ ಸೇರಿದಂತೆ ಹತ್ತು ರಾಷ್ಟ್ರಗಳು ಭಾಗವಹಿಸುತ್ತಿವೆ. ಜೊತೆಗೆ ಐದು ಉದ್ಯಮ ಸಂಸ್ಥೆಗಳು ಕೂಡ ಸಮಾವೇಶಕ್ಕೆ ಹೆಗಲು ಕೊಡುತ್ತಿವೆ ಎಂದು ಅವರು ಹೇಳಿದರು.
ನ್ಯಾನೊ ವಿಜ್ಞಾನ ಮತ್ತು ತಂತ್ರಜ್ಞಾನವು ಭವಿಷ್ಯದ ನಿರ್ಣಾಯಕ ಸಂಗತಿಯಾಗಿದೆ. ರಾಜ್ಯ ಸರ್ಕಾರವು ಇದರ ಬೆಳವಣಿಗೆಗೆ ಸಾಕಷ್ಟು ಆಗಿದೆ ನೀಡಿದೆ. ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ವಿಷನ್ ಗ್ರೂಪ್ ಮೂಲಕ ಈಗಾಗಲೇ ರಾಜ್ಯದ 1,500 ಕಾಲೇಜುಗಳಿಗೆ ಸಂಶೋಧನೆಗೆ ಪ್ರೋತ್ಸಾಹಿಸಲು 200 ಕೋಟಿ ರೂಪಾಯಿ ನೀಡಲಾಗಿದೆ. ವಿಜ್ಞಾನದ ಬಗ್ಗೆ ಕುತೂಹಲವುಳ್ಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಲಾ ಒಂದು ಸಾವಿರ ರೂಪಾಯಿ ಶಿಷ್ಯವೇತನ ನೀಡಲಾಗುತ್ತಿದೆ ಎಂದು ಅಶ್ವತ್ಥನಾರಾಯಣ ಅವರು ಬೆಂಗಳೂರಿನ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಮಾವೇಶದ ಕಾರ್ಯಕಾರಿ ಸಮಿತಿ ಮುಖ್ಯಸ್ಥ ಜಗದೀಶ್ ಪಾಟಣಕರ್, ಸಮಾವೇಶದ ಅಧ್ಯಕ್ಷರಾದ ಪ್ರೊ. ಅಜಯ್ ಕುಮಾರ್ ಸೂದ್, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನಿರ್ದೇಶಕ ಬಸವರಾಜ ಇನ್ನಿತರರು ಉಪಸ್ಥಿತರಿದ್ದರು.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ಹಿಂದೂ ಕಾರ್ಯಕರ್ತ ಹರ್ಷನ ಕೊಲೆಯ ಬಳಿಕ ಶಿವಮೊಗ್ಗ ನಗರದಲ್ಲಿ ನಡೆದಂತಹ ಕೋಮುಗಲಭೆ ಹಿನ್ನೆಲೆ ನಗರದಲ್ಲಿ ಕರ್ಫ್ಯೂ ಹಾಗೂ 144 ಸೆಕ್ಷನ್ ಜಾರಿಯಲ್ಲಿತ್ತು. ಈ ಕುರಿತಂತೆ ನಗರದ ‘ಶಾಂತಿಗಾಗಿ ನಾವು ಸೌಹಾರ್ದ ಸಭೆ’ ಯನ್ನು ಜಿಲ್ಲಾಡಳಿತ ನಡೆಸಿತು.
ಭಾರತದಲ್ಲಿ ಎಲ್ಲರೂ ಭಾತೃತ್ವ ದಿಂದ ಬದುಕಬೇಕೆಂಬ ಸಂದೇಶವನ್ನು ಈ ಸಭೆಯಲ್ಲಿ ರವಾನೆ ಮಾಡಲಾಯಿತು. ವಿವಿಧ ಧರ್ಮಗಳ ಮುಖಂಡರು, ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ, ವಿವಿಧ ಸಂಘಟನೆಗಳ ಪ್ರಮುಖರು ರೈತ ಮುಖಂಡರು ಈ ಸಭೆಯಲ್ಲಿ ಭಾಗವಹಿಸಿ ಶಾಂತಿಯ ಮಂತ್ರವನ್ನು ತಿಳಿಸಿದರು.
ಶಾಂತಿ,ಸೌಹಾರ್ದತೆಯ ಸಂಕೇತವಾದ ರಾಷ್ಟ್ರಧ್ವಜದ ಬಣ್ಣ ಕೇಸರಿ ಬಿಳಿ ಮತ್ತು ಹಸಿರು ಬಟ್ಟೆಗಳನ್ನು ಜೋಡಿಸುವ ಮೂಲಕ ಈ ಸಭೆಯನ್ನು ಪ್ರಾರಂಭಿಸಲಾಯಿತು.
ಭಾರತ ಸರ್ವಜನಾಂಗದ ಶಾಂತಿಯ ತೋಟವಾಗಿದೆ. ಕೆಲವರು ಗಲಾಟೆ ಎಬ್ಬಿಸಿ ಗೊಂದಲ ಮೂಡಿಸುತ್ತಿದ್ದಾರೆ. ಇದು ತಪ್ಪು ಜಿಲ್ಲಾಡಳಿತ ಈ ಬಗ್ಗೆ ಸದಾ ಎಚ್ಚರಿಕೆಯಿಂದ ಇರುತ್ತದೆ. ನಾನು ನೂರು ಭಾತೃತ್ವ ಭಾವನೆಯಿಂದ ಬದುಕಬೇಕು ಎಂದು ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಅವರು ಸಲಹೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮಿಪ್ರಸಾದ್ ಅವರು ಸಾರ್ವಜನಿಕರು ಪೊಲೀಸರೊಂದಿಗೆ ಸಹಕಾರ ನೀಡಬೇಕು. ಘಟನೆಗಳಾದಾಗ ಶಾಂತಿ ಕಾಪಾಡಲು ಸಮುದಾಯದ ಸ್ಪಂದನೆ ಅಗತ್ಯವಾಗಿದೆ ಎಂದು ಹೇಳಿದರು.
ಸಮಾಜದಲ್ಲಿ ಅಹಿತಕರ ಘಟನೆಗಳು ನಡೆದಾಗ ಬಡವರ ಬದುಕು ಕಳೆದುಕೊಳ್ಳುತ್ತಾರೆ. ಅದಕ್ಕೆ ಅವಕಾಶ ನೀಡಬಾರದು. ಮನುಷ್ಯತ್ವ ಮೀರಿದ ಯಾವುದೇ ಧರ್ಮವಿಲ್ಲ. ಸೌಹಾರ್ದತೆ ಕಾಪಾಡುವ ಜವಾಬ್ದಾರಿ ಧರ್ಮಗುರುಗಳ ಹೆಗಲ ಮೇಲಿದೆ ಎಂದು ಶಿವಮೊಗ್ಗದ ಬಸವಕೇಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿಯವರು ಹೇಳಿದರು.
ಕೂಡಲಿ ಶೃಂಗೇರಿ ಮಹಾಸಂಸ್ಥಾನ ಮಠದ ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಅವರು ಭಾರತ ವಿವಿಧತೆಯಲ್ಲಿ ಏಕತೆಯ ಹೊಂದಿದ ರಾಷ್ಟ್ರವಾಗಿದೆ. ವಿಶ್ವದಲ್ಲಿಯೇ ಸ್ನೇಹ, ಸಹನೆ, ಶಾಂತಿಗೆ ಹೆಸರಾಗಿದೆ. ಅಶಾಂತಿಯನ್ನು ಯಾವ ಧರ್ಮವು, ದೇವರು ಹೇಳಿಲ್ಲ. ಶಾಂತಿ ಪ್ರಧಾನವಾಗಬೇಕು. ಮಾನವ ಸಂಬಂಧಗಳು ಗಟ್ಟಿಯಾಗಬೇಕು ಎಂದು ಹೇಳಿದರು.
ಮೌಲ್ವಿ ಮೌಲಾನ ಶಾಹುಲ್ ಹಮೀದ್ ಮುಸ್ಲಿಯಾರ್ ಅವರು ಮಾತನಾಡಿ ನಾಡಗೀತೆಯಲ್ಲಿ ಹೇಳಿರುವ ಹಾಗೆ ವಿವಿಧ ಜಾತಿ, ಧರ್ಮ, ಸಂಸ್ಕೃತಿಯುಳ್ಳ ದೇಶ ನಮ್ಮದಾಗಿದೆ. ಹೂದೋಟದಲ್ಲಿ ವಿವಿಧ ಜಾತಿಯ ಹೂಗಳಿವೆ. ಅದನ್ನು ಹೋಲಿಸಿದಾಗ ಸುಂದರ ಹಾರವಾಗುವ ಹಾಗೆಯೇ ನಾವೆಲ್ಲರೂ ಪರಸ್ಪರ ಶಾಂತಿ ಪ್ರೀತಿಯಿಂದ ಇರಬೇಕು ಎಂದು ತಿಳಿಸಿದರು ಎಂದು ತಿಳಿಸಿದರು.
ಕ್ರೈಸ್ತ ಧರ್ಮ ಗುರು ಸ್ಟ್ಯಾನಿ ಡಿಸೋಜ ಅವರು ಜಗದಲ್ಲೆಲ್ಲ ಶಾಂತಿ ಇರಲಿ. ಆದರೆ ಅದು ನನ್ನಿಂದಲೇ ಪ್ರಾರಂಭವಾಗಲಿ ಎಂಬ ಮಾತಿದೆ. ನಿಯಂತ್ರಣ ತಪ್ಪಿದಾಗ ಕೋಪ ಬಂದು ಆಸ್ತಿಪಾಸ್ತಿಯ ಜೊತೆಗೆ ಮಾನಸಿಕ ಆರೋಗ್ಯ ನಷ್ಟವಾಗಿ ಸಾಮಾಜಿಕ ಸ್ವಾಸ್ಥ್ಯದ ನಷ್ಟವೂ ಉಂಟಾಗುತ್ತದೆ. ಯಾರೋ ಕಿಡಿಗೇಡಿಗಳು ಮಾಡಿದ ಕೃತಿಗಳು ಎಲ್ಲ ಧರ್ಮಕ್ಕೆ ಮಸಿಬಳಿಯುವಂತಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ರೈತಮುಖಂಡ ಕೆ.ಟಿ.ಗಂಗಾಧರ್, ವಕೀಲ ಕೆ.ಪಿ.ಶ್ರೀಪಾಲ್, ಎ.ಟಿ.ಎನ್.ಸಿ. ಕಾಲೇಜಿನ ಪ್ರಾಂಶುಪಾಲ ಸುರೇಶ್, ವಾಣಿಜ್ಯ ಸಂಘದ ಅಧ್ಯಕ್ಷ ಎನ್ ಗೋಪಿನಾಥ್, ಹಿಂದೂ ಪರಿಷತ್ ನ ರಮೇಶ್ ಬಾಬು, ಮೌಲಾನಾ ಈರ್ ವಾದ್ ಅಹಮ್ಮದ್ ಖಾನ್ ಕರಡಿ ಸೇರಿದಂತೆ ಹಲವು ಮುಖಂಡರು ಈ ಸಭೆಯಲ್ಲಿ ಉಪಸ್ಥಿತರಿದ್ದರು.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ರಷ್ಯಾ ಮತ್ತು ಉಕ್ರೇನ್ ಬಿಕ್ಕಟ್ಟು ಮತ್ತು ಬಿಗಡಾಯಿಸಿದ ಪರಿಣಾಮ, ಯುದ್ಧಪೀಡಿತ ಉಕ್ರೇನ್ ನಿಂದ ಭಾರತೀಯರ ಸ್ಥಳಾಂತರವು ಸವಾಲಾಗಿ ಪರಿಣಮಿಸಿದೆ. ಅದರಲ್ಲೂ ಕೀವ್ ಹಾಗೂ ಕಾರ್ಕಿವ್ ನಗರಗಳಲ್ಲಿ ವಸತಿ ಕಟ್ಟಡಗಳನ್ನೂ ರಷ್ಯಾ ಪಡೆ ಟಾರ್ಗೆಟ್ ಮಾಡುತ್ತಿರುವುದರಿಂದ, ಕೂಡಲೇ ಗಡಿ ದಾಟುವಂತೆ ಕೇಂದ್ರ ಸರ್ಕಾರ ಎಮರ್ಜೆನ್ಸಿ ಘೋಷಿಸಿದೆ. ನಿನ್ನೆ 9:00 ಗಂಟೆ ಸಮಯಕ್ಕೆ ಗಡಿ ಪಟ್ಟಣಗಳಾದ ಪೆಸೊಶಿನ್, ಬಬೇಯಿ ಅಥವಾ ಬಿಜ್ಲುಡುವೊಕಾಗೆ ಎಲ್ಲಾ ಭಾರತೀಯರು ಬಂದು ಜಮಾವಣೆ ಆಗಬೇಕು. ಕಾಲ್ನಡಿಗೆ ಯಲ್ಲಾದರೂ ಸರಿ, ಅಲ್ಲಿಗೆ ತಲುಪಿ. ಅಲ್ಲಿಂದ ವಿಶೇಷ ವಿಮಾನಗಳಲ್ಲಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಗುತ್ತದೆ ಎಂದು ರಾಯಭಾರಿ ಕಚೇರಿ ತಿಳಿಸಿದೆ.
ಯುದ್ಧದಲ್ಲಿ ಈಗಾಗಲೇ ಭಾರತೀಯ ವಿದ್ಯಾರ್ಥಿ ಮೃತಪಟ್ಟ ಹಿನ್ನೆಲೆಯಲ್ಲಿ, ಭಾರತೀಯರ ಸುರಕ್ಷತೆ ಕೋರಿ ಜೊತೆಗೆ ಭಾರತ ಮಾತುಕತೆ ನಡೆಸಿದೆ.
ಉಕ್ರೇನ್ ನಲ್ಲಿ ಪ್ರಸ್ತುತ ಸಾರ್ವಜನಿಕ ಸಂಚಾರವ್ಯವಸ್ಥೆ ಸ್ತಬ್ಧವಾಗಿದೆ. ಗಡಿಗಳಿಗೆ ಬಂದು ಸೇರುವುದಾದರೂ ಹೇಗೆ ಎಂದು ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರು ಸಂಕಷ್ಟ ತೋಡಿಕೊಂಡಿದ್ದಾರೆ. ಅಲ್ಲದೆ ವರ್ಣಭೇದ ನೀತಿ ಅನುಸರಿಸಲಾಗುತ್ತಿದೆ. ಯುರೋಪ್, ಶ್ವೇತವರ್ಣೀಯ ರಿಗೆ ಮಾತ್ರ ರೈಲು ಹತ್ತಲು ಅವಕಾಶ ನೀಡಲಾಗುತ್ತಿದೆ. ಭಾರತೀಯರು ಮತ್ತು ಆಫ್ರಿಕಾ ಮೂಲದ ವರಿಗೆ ತಾರತಮ್ಯ ಮಾಡಲಾಗುತ್ತಿದೆ. ಜೊತೆಗೆ ಉಕ್ರೇನ್ ಯೋಧರು ಭಾರತೀಯರ ಮೇಲೆ ಹಲ್ಲೆ ಮಾಡುತ್ತಿದ್ದಾರೆ ಎಂದು ಅನೇಕರು ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ವಿದ್ಯಾರ್ಥಿ ಹಂತದಲ್ಲೇ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿದರೆ ಭವಿಷ್ಯದಲ್ಲಿ ಅದು ದೇಶದ ಪ್ರಗತಿಗೆ ಪೂರಕವಾಗುತ್ತದೆ ಎಂದು ಹುಂಚದ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಆದರ್ಶ್ ಹುಂಚದಕಟ್ಟೆ ಅವರು ತಿಳಿಸಿದ್ದಾರೆ.
ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಪ್ರಯುಕ್ತ ಆಯನೂರಿನ ವಾತ್ಸಲ್ಯ ಇಂಟರ್ನ್ಯಾಷನಲ್ ಶಾಲೆಯಲ್ಲಿ ಆಯೋಜಿಸಿದ್ದ ವಾತ್ಸಲ್ಯ ಸೈನ್ಸ್ ಫೇರ್ ಉದ್ಘಾಟಿಸಿ ಮಾತನಾಡುತ್ತಿದ್ದರು.
ಎಳೆಯ ವಯಸ್ಸಿನಲ್ಲಿಯೇ ಮಕ್ಕಳಲ್ಲಿ ವೈಜ್ಞಾನಿಕ ವಿಚಾರಧಾರೆಗಳು ಬೆಳೆಯುವಂತಾಗಬೇಕು. ಇದಕ್ಕೆ ಪೋಷಕರು ಮತ್ತು ಶಾಲೆಯ ಜವಾಬ್ದಾರಿ ಮುಖ್ಯ ಎಂದರು.
ವಿದ್ಯಾರ್ಥಿಗಳು ಭೌತಶಾಸ್ತ್ರ, ರಸಾಯನಶಾಸ್ತ್ರ, ಪರಿಸರ ವಿಜ್ಞಾನ, ಸಸ್ಯ ಶಾಸ್ತ್ರಗಳ ಮಾದರಿಗಳನ್ನು ತಯಾರಿಸಿದ್ದರು. ಪೋಷಕರು, ಸಾರ್ವಜನಿಕರು ಶಾಲೆಗೆ ಭೇಟಿ ನೀಡಿ ವಿಜ್ಞಾನ ಮೇಳ ವೀಕ್ಷಿಸಿದರು. ಈ ಸಂದರ್ಭದಲ್ಲಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷೆ ಶೈಲ ಕುಮಾರಿ, ಮುಖ್ಯಶಿಕ್ಷಕ ಕೃಷ್ಣ ಕುಲಕರ್ಣಿ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.