Friday, February 20, 2026
Friday, February 20, 2026
Home Blog Page 1686

ಆಗುಂಬೆ ಘಾಟಿ ರಸ್ತೆ ಕಾಮಗಾರಿ ಪರ್ಯಾಯ ವ್ಯವಸ್ಥೆ

0

ರಸ್ತೆ ದುರಸ್ತಿ ಕಾಮಗಾರಿಯ ಕಾರಣ ಮಾರ್ಚ್ 5 ರಿಂದ 15 ರವರೆಗೆ ಪ್ರತಿದಿನ ಬೆಳಗ್ಗೆ 7ರಿಂದ ಸಂಜೆ 7ರ ವರೆಗೆ ಆಗುಂಬೆ ಘಾಟ್ ಮೂಲಕ ಸಾಗುವ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ.
ಶಿವಮೊಗ್ಗದಿಂದ ತೀರ್ಥಹಳ್ಳಿ, ಆಗುಂಬೆ, ಉಡುಪಿ, ಮಂಗಳೂರು ಹೆದ್ದಾರಿಯಲ್ಲಿ ಸಂಚರಿಸುವ ಲಘು ವಾಹನಗಳು ತೀರ್ಥಹಳ್ಳಿ, ಕೊಪ್ಪ, ಶೃಂಗೇರಿ, ಮಾಳಾ, ಘಾಟಿ, ಕಾರ್ಕಳ ಮೂಲಕ ಉಡುಪಿ ತಲುಪಬಹುದು.

ಭಾರಿ ವಾಹನಗಳು ಆಯನೂರು, ಸಾಗರ, ಹೊನ್ನಾವರ ಮೂಲಕ ಸಾಗಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಆಗುಂಬೆ ಘಾಟಿಯ ತಪಾಸಣಾ ಕೇಂದ್ರ ದಿಂದ ಹೆಬ್ರಿಯವರೆಗೆ 5.25 ಕೋಟಿ ರೂ. ವೆಚ್ಚದಲ್ಲಿ 20 ಕಿ.ಮೀ.ಡಾಂಬರೀಕರಣ ಕಾಮಗಾರಿಯನ್ನು ಮಾರ್ಚ್ 5ರಿಂದ 15ರವರೆಗೆ ಆರಂಭಿಸಲಾಗುತ್ತದೆ. ಈ ದಿನಗಳಂದು
ಸಂಜೆ 7ರಿಂದ ಬೆಳಿಗ್ಗೆ ಏಳರವರೆಗೆ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ವಿಶ್ವಸಂಸ್ಥೆಯಲ್ಲಿ ಉಕ್ರೇನ್ ಕುರಿತ ಭಾರತದ ನಡೆಗೆ ಫ್ರಾನ್ಸ್ ಮೆಚ್ಚುಗೆ

0

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ, ಉಕ್ರೇನ್ ಮೇಲೆ ರಷ್ಯಾ ನಡೆಸಿದ ದಾಳಿಯನ್ನು ಖಂಡಿಸುವ ನಿರ್ಣಯದಿಂದ ಭಾರತ ಮತ್ತೊಮ್ಮೆ ಅಂತರ ಕಾಯ್ದುಕೊಂಡಿದೆ. ಇದಕ್ಕೂ ಮೊದಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (ಯುಎನ್‌ಎಸ್‌ಸಿ) ಭಾರತವು ಇದೇ ರೀತಿಯ ಧೋರಣೆ ಹೊಂದಿತ್ತು. ಅದರ ಬಗ್ಗೆ ಕೆಲವು ದೇಶಗಳು ಆಶ್ಚರ್ಯ ವ್ಯಕ್ತಪಡಿಸಿವೆ.

UNSC ನಂತರ, UNGA ನಲ್ಲಿ ಭಾರತ ತೆಗೆದುಕೊಂಡ ಕ್ರಮಗಳು ಈಗ ಫ್ರಾನ್ಸ್‌ನ ಬೆಂಬಲವನ್ನು ಪಡೆದಿವೆ. ʻಭಾರತ ಏನು ಮಾಡಬೇಕೆಂದು ಯಾರೂ ಹೇಳಬಾರದುʼ ಎಂದು ಭಾರತದಲ್ಲಿನ ಫ್ರೆಂಚ್ ರಾಯಭಾರಿ ಎಮ್ಯಾನುಯೆಲ್ ಲೆನಿನ್ ಹೇಳಿದ್ದಾರೆ. ಬಿಕ್ಕಟ್ಟು ತೀವ್ರಗೊಳ್ಳುತ್ತಿದ್ದಂತೆ, ಭಾರತದಿಂದ ಬೆಂಬಲವು ಸ್ವಾಗತಾರ್ಹವಾಗಿದೆ. ಏಕೆಂದರೆ, ಭಾರತದ ಧ್ವನಿಯು ಜಗತ್ತಿಗೆ ಮುಖ್ಯವಾಗಿದೆ.

ಎಮ್ಯಾನುಯೆಲ್ ಲೆನಿನ್ ಮಾತನಾಡಿ, ಭಾರತವು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮಹತ್ತರವಾದ ಜವಾಬ್ದಾರಿಯನ್ನು ಬಯಸುತ್ತದೆ. ಯುಎನ್‌ಎಸ್‌ಸಿಯಲ್ಲಿ ಖಾಯಂ ಸ್ಥಾನವನ್ನು ಪಡೆಯುವ ಭಾರತಕ್ಕೆ ನಮ್ಮ ದೇಶವು ಪ್ರಬಲ ಬೆಂಬಲಿಗವಾಗಿದೆ. ಭಾರತದ ಧ್ವನಿ ಪ್ರಪಂಚದಾದ್ಯಂತ ಕೇಳಿಬರುತ್ತಿದೆ. ನಾವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವನ್ನು ನಂಬುತ್ತೇವೆ. ಭಾರತವು ಪ್ರಾದೇಶಿಕ ಸಮಗ್ರತೆಗೆ ಗೌರವ ನೀಡುವ ಹೇಳಿಕೆಗಳನ್ನು ನೀಡಿದೆ ಅದನ್ನು ನಾವು ಸ್ವಾಗತಿಸುತ್ತೇವೆ. ನಾವು ಉಕ್ರೇನ್‌ಗೆ ಎಲ್ಲ ರೀತಿಯಲ್ಲೂ ಸಹಾಯ ಮಾಡುತ್ತಿದ್ದೇವೆ ಎಂದು ಲೆನಿನ್ ಹೇಳಿದ್ದಾರೆ.
193 ಸದಸ್ಯರ ಸಾಮಾನ್ಯ ಸಭೆಯು ಉಕ್ರೇನ್‌ನ ಸಾರ್ವಭೌಮತ್ವ, ಸ್ವಾತಂತ್ರ್ಯ, ಏಕತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ತನ್ನ ಬದ್ಧತೆಯನ್ನು ಪುನರುಚ್ಚರಿಸಲು ಮತ ಚಲಾಯಿಸಿತು.

ಪರಮಾಣು ಪಡೆಗಳನ್ನು ಸಿದ್ಧಪಡಿಸಲು ರಷ್ಯಾ ತೆಗೆದುಕೊಂಡ ಯುದ್ಧ ನಿರ್ಧಾರವನ್ನು ನಿರ್ಣಯವು ಖಂಡಿಸಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಬೆಲಾರಸ್ ಭಾಗವಹಿಸಿದ್ದನ್ನೂ ಖಂಡಿಸಲಾಯಿತು. ನಿರ್ಣಯವು ರಾಜಕೀಯ ಮಾತುಕತೆ, ಮಧ್ಯಸ್ಥಿಕೆ ಮತ್ತು ಇತರ ಶಾಂತಿಯುತ ವಿಧಾನಗಳ ಮೂಲಕ ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷದ ತಕ್ಷಣದ ಶಾಂತಿಯುತ ಪರಿಹಾರಕ್ಕೆ ಕರೆ ನೀಡುತ್ತಿದೆ ಎಂದು ಮೂಲಗಳು ತಿಳಿಸಿವೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಆಪರೇಶನ್ ಗಂಗಾ ಪ್ರಧಾನಿಯವರಿಂದ ಮಹತ್ವದ ಸಭೆ

0

ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರನ್ನು ಮರಳಿ ಕರೆತರುವ ಕಾರ್ಯಾಚರಣೆ ಕುರಿತಂತೆ ಇದೀಗ ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಲಾಗುತ್ತಿದೆ.

ಈ ಸಭೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್, ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ, ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ ಎಸ್ ಎ) ಅಜಿತ್ ದೋವಲ್ ಮತ್ತು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದಾರೆ.

ರಷ್ಯಾದ ಮಿಲಿಟರಿ ಕಾರ್ಯಾಚರಣೆಗಳ ನಡುವೆ ಉಕ್ರೇನ್ ನಿಂದ ಭಾರತೀಯರನ್ನು ಮರಳಿಸಲು ಆಪರೇಶನ್ ಗಂಗಾ ಅಡಿಯಲ್ಲಿ ನಡೆಯುತ್ತಿರುವ ಪ್ರಯತ್ನಗಳ ಬಗ್ಗೆ ಪ್ರಧಾನಿ ಅಧ್ಯಕ್ಷತೆಯಲ್ಲಿ ನಡೆದ ಐದನೇ ಪರಿಶೀಲನಾ ಸಭೆ ಇದಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಮತ್ತೊಬ್ಬ ವಿದ್ಯಾರ್ಥಿಗೆ ಗುಂಡು ತಗುಲಿ ಆಸ್ಪತ್ರೆಗೆ ದಾಖಲು

0

ಉಕ್ರೇನ್‌ ರಾಜಧಾನಿ ಕೀವ್‌ನಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬರಿಗೆ ಗುಂಡೇಟು ತಗುಲಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕೇಂದ್ರ ವಿಮಾನಯಾನ ಇಲಾಖೆ ರಾಜ್ಯ ಖಾತೆ ಸಚಿವ ಜನರಲ್‌ ವಿ.ಕೆ ಸಿಂಗ್‌ ಶುಕ್ರವಾರ ತಿಳಿಸಿದ್ದಾರೆ.

ಪೋಲೆಂಡ್‌ನ ರೆಸ್ಜೋವ್‌ನಲ್ಲಿರುವ ವಿಮಾನ ನಿಲ್ದಾಣದಲ್ಲಿ ಮಾತನಾಡಿರುವ ಅವರು, ‘ಕೀವ್‌ನಿಂದ ಬರುತ್ತಿದ್ದ ವಿದ್ಯಾರ್ಥಿಯೊಬ್ಬರಿಗೆ ಗುಂಡಿನೇಟು ಬಿದ್ದಿದೆ ಎಂಬ ಮಾಹಿತಿ ಸಿಕ್ಕಿದೆ.
ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ತಿಳಿಸಿದ್ದಾರೆ.

ಇದಕ್ಕೂ ಹಿಂದೆ ಕರ್ನಾಟಕ ಮೂಲದ ವಿದ್ಯಾರ್ಥಿ ನವೀನ್‌ ಶೇಖರಪ್ಪ ಗ್ಯಾನಗೌಡರ್‌ ಉಕ್ರೇನ್‌-ರಷ್ಯಾ ಸಂಘರ್ಷದಲ್ಲಿ ಪ್ರಾಣ ಕಳೆದುಕೊಂಡಿದ್ದರು.

ಭಾರತೀಯರೆಲ್ಲರೂ ಸಿಕ್ಕ ಸಾರಿಗೆ ವ್ಯವಸ್ಥೆಯನ್ನು ಬಳಸಿಕೊಂಡು ಕೂಡಲೇ ಉಕ್ರೇನ್‌ ತೊರೆಯಬೇಕು ಎಂದು ಅಲ್ಲಿನ ಭಾರತೀಯ ರಾಯಭಾರ ಕಚೇರಿ ಈಗಾಗಲೇ ಹೇಳಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಹರ್ಷನ ಕುಟುಂಬಕ್ಕೆ ಸರ್ಕಾರದಿಂದ ₹25 ಲಕ್ಷ ಪರಿಹಾರ ಘೋಷಣೆ

0

ಶಿವಮೊಗ್ಗದಲ್ಲಿ ಇತ್ತೀಚಿಗೆ ಹತ್ಯೆಗೀಡಾದ ಬಜರಂಗದಳ ಕಾರ್ಯಕರ್ತ ಹರ್ಷನ ಕುಟುಂಬಕ್ಕೆ ರಾಜ್ಯ ಸರ್ಕಾರವು 25 ಲಕ್ಷರೂಪಾಯಿ ಪರಿಹಾರವನ್ನು ಘೋಷಿಸಿದೆ. ಪರಿಹಾರದ ಚೆಕ್ಕನ್ನು ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮಾರ್ಚ್ 6ರಂದು ವಿತರಣೆ ಮಾಡುವರು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ತಿಳಿಸಿದ್ದಾರೆ.

ನನ್ನ ಕುಟುಂಬಕ್ಕೆ ರಾಜ್ಯ ಸರ್ಕಾರವು 25 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಿನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೆ.ಎಸ್. ಈಶ್ವರಪ್ಪ ಅವರು ಮಾತನಾಡುತ್ತಿದ್ದರು. ಕುಟುಂಬದವರಿಗೆ ಸಾಂತ್ವನ ಹೇಳಿ, ಪರಿಹಾರದ ಚೆಕ್ ವಿತರಣೆ ಗೆ ಮಾಡಲು ಅವರು ಮಾರ್ಚ್ 6ರಂದು ಹರ್ಷದ ಮನೆಗೆ ಭೇಟಿ ನೀಡುತ್ತಿದ್ದಾರೆ. ನಿಕಟಪೂರ್ವ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಬರುತ್ತಿದ್ದಾರೆ ಎಂದು ಹೇಳಿದ್ದಾರೆ.

ಹರ್ಷನ ಹತ್ಯೆ ನಂತರ ನಡೆದ ಗಲಭೆಯಲ್ಲಿ ಉಂಟಾದ ಆಸ್ತಿಪಾಸ್ತಿಗೆ ಸರ್ಕಾರದಿಂದ ಪರಿಹಾರ ಕೊಡಲು ತೀರ್ಮಾನವಾಗಿದೆ. ಈ ಬಗ್ಗೆ ಶೀಘ್ರದಲ್ಲೇ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು. ಮಾಧ್ಯಮಗಳು ವಿಶ್ವನಾಥ ಶೆಟ್ಟಿ ತಾಯಿಯ ಸಂಕಷ್ಟದ ಸ್ಥಿತಿ ತೆರೆದಿಟ್ಟದ್ದು ನಮಗೂ ನೋವಾಗಿದೆ. ಇದೇ ನೆಪದಲ್ಲಿ ಕಾಂಗ್ರೆಸ್ ಮುಖಂಡರು ವಿಶ್ವನಾಥನ ತಾಯಿಗೆ ಸಾಂತ್ವನ ಹೇಳದಿರುವುದು ಅಚ್ಚರಿ ಮೂಡಿಸಿದೆ ಎಂದು ಹೇಳಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಸ್ಥಳೀಯ ಸಂಸ್ಥೆ ಚುನಾವಣೆ ದೀದಿಗೇ ಬೆಂಬಲ

0

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಬಳಿಕ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷವು ಮುನ್ಸಿಪಾಲಿಟಿ ಚುನಾವಣೆಯಲ್ಲೂ ಭರ್ಜರಿ ಜಯ ಸಾಧಿಸಿದೆ.

ಮುನ್ಸಿಪಲ್ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, 108 ಮುನ್ಸಿಪಾಲಿಟಿಗಳ ಪೈಕಿ 102 ರಲ್ಲಿ ಟಿಎಂಸಿ ಗೆಲುವು ಸಾಧಿಸಿದೆ.

40 ವರ್ಷಗಳ ಬಳಿಕ ಅಧಿಕಾರಿ ಕುಟುಂಬದ ಭದ್ರಕೋಟೆಯಾಗಿದ್ದ ಕಾಂತಿ ಮುನ್ಸಿಪಾಲಿಟಿ ಯನ್ನು ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಟಿಎಂಸಿ ಯಶಸ್ಸು ಕಂಡಿದೆ. ಪಶ್ಚಿಮ ಬಂಗಾಳದ ಪ್ರತಿಪಕ್ಷ ಮುಖಂಡ ನಂದಿಗ್ರಾಮದಲ್ಲಿ ಮಮತಾ ಅವರ ಪ್ರಮುಖ ಎದುರಾಳಿಯಾಗಿದ್ದ ಸುವೇಂದು ಅಧಿಕಾರಿ ಕುಟುಂಬದ ಭದ್ರಕೋಟೆ ಇದಾಗಿತ್ತು. ಕಾಂತಿ ಮುನ್ಸಿಪಾಲಿಟಿ ಪಾರ್ಟಿಯಲ್ಲಿ ನಾಲ್ಕು ದಶಕಗಳಲ್ಲಿ ಮೊದಲ ಬಾರಿಗೆ ಅಧಿಕಾರಿ ಕುಟುಂಬಕ್ಕೆ ಅಧಿಕಾರ ಕೈತಪ್ಪಿ ಹೋಗಿದೆ.

ಇದೇ ಮೊದಲ ಬಾರಿಗೆ ಕಣಕ್ಕಿಳಿದಿದ್ದ ಸಾಮಾಜಿಕ ಕಾರ್ಯಕರ್ತರು ಅಜೋಯ್ ಎಡ್ವರ್ಡ್ ನೇತೃತ್ವದ ಹ್ಯಾಮ್ರೊ ಪಕ್ಷವು ಡಾರ್ಜಿಲಿಂಗ್ ಮುನಿಸಿಪಾಲಿಟಿಯಲ್ಲಿ ಜಯ ಸಾಧಿಸಿದೆ.

ಟಿಎಂಸಿ ಜಿಜೆಎಂ ಮತ್ತು ಬಿಜೆಪಿ ಪಕ್ಷಗಳನ್ನು ಮೀರಿಸಿ ಹ್ಯಾಮ್ರೊ ಅಚ್ಚರಿಯ ಗೆಲುವನ್ನು ತಮ್ಮದಾಗಿಸಿಕೊಂಡಿದ್ದಾರೆ.

ನಾದಿಯಾ ಜಿಲ್ಲೆಯ ತಹೇರ್ ಪುರ್ ಮುನ್ಸಿಪಾಲಿಟಿಯಲ್ಲಿ ಸಿಪಿಐ ನೇತೃತ್ವದ ಎಡರಂಗ ಗೆಲುವು ಸಾಧಿಸಿದೆ.

ಮುರ್ಷಿದಾಬಾದ್ ಜಿಲ್ಲೆಯ ಬೆಲ್ದಾಂಗ, ಝಾಲ್ಡಾ ಜಿಲ್ಲೆಯ ಪುರುಲಿಯಾ, ಹೂಗ್ಲಿ ಜಿಲ್ಲೆಯ ಚಂಪ್ದನಿ ಮತ್ತು ಪುಬ್ರಾ ಜಿಲ್ಲೆಯ ಈಗ್ರಾ ಮುನ್ಸಿಪಾಲಿಟಿ ಗಳಲ್ಲಿ ಅತಂತ್ರ ಫಲಿತಾಂಶ ಬಂದಿದೆ ಅಧಿಕಾರ ಹಿಡಿಯಲು ಪಕ್ಷೇತರರು ಪ್ರಮುಖ ಪಾತ್ರವಹಿಸಲಿದ್ದಾರೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು “ನಮಗೆ ಮತ್ತೊಂದು ಭರ್ಜರಿ ಜನಾದೇಶದ ನೀಡಿರುವುದಕ್ಕೆ ಎಲ್ಲರಿಗೂ ಹೃದಯಪೂರ್ವಕ ಕೃತಜ್ಞತೆಗಳು. ಮುನ್ಸಿಪಲ್ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ನ ವಿಜೇತ ಅಭ್ಯರ್ಥಿಗಳಿಗೆ ಅಭಿನಂದನೆಗಳು. ಈ ವಿಜಯದೊಂದಿಗೆ ನಮ್ಮ ಜವಾಬ್ದಾರಿ ಮತ್ತು ಸಮರ್ಪಣಾ ಭಾವ ಹೆಚ್ಚಲಿ. ಈ ಜಯಘೋಷವು ವಿನಯವನ್ನು ಕಲಿಸಲಿ. ರಾಜ್ಯದ ಶಾಂತಿ, ಸಮೃದ್ಧಿ ಮತ್ತು ಅಭಿವೃದ್ಧಿಗಾಗಿ ಒಟ್ಟಿಗೆ ಕೆಲಸ ಮಾಡೋಣ ಎಂದು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಉಕ್ರೇನ್ ಟೆನಿಸ್ ಪಟು ಎಲಿನಾ ರಷ್ಯದ ಪೊಟಪೋವ ವಿರುದ್ಧ ಗೆಲುವು

0

ಇತ್ತ ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿ ಉಕ್ರೇನ್ ನ ಪ್ರದೇಶಗಳನ್ನು ಹಂತಹಂತವಾಗಿ ಆಕ್ರಮಿಸಿಕೊಂಡು ತನ್ನ ಹತೋಟಿಗೆ ತೆಗೆದುಕೊಳ್ಳುತ್ತಿದೆ. ಇನ್ನೊಂದೆಡೆ ಮೊಂಟೆರಿ ಓಪನ್ ಟೆನಿಸ್ ಟೂರ್ನಿಯ ಪಂದ್ಯದಲ್ಲಿ ಉಕ್ರೇನ್ ನ ಎಲಿನಾ ಸ್ವಿಟೋಲಿನಾ ಅವರು ರಷ್ಯಾದ ಅನಸ್ತಾಸಿಯಾ ಪೊಟಪೊವಾ ಅವರನ್ನು ಸೋಲಿಸಿದರು.

ಟೂರ್ನಿಯ ಮೊದಲ ಸುತ್ತಿನ ಪಂದ್ಯದಲ್ಲಿ ಎಲಿನಾ ಅವರಿಗೆ 6-2, 6-1ರಿಂದ ಸುರಕ್ಷಿತವಾಗಿ ಜಯಗಳಿಸಿದ್ದಾರೆ.

ಉಕ್ರೇನ್ ಮೇಲಿನ ರಷ್ಯದ ದಾಳಿಯ ಹಿನ್ನೆಲೆಯಲ್ಲಿ ಪಂದ್ಯವನ್ನು ಬಹಿಷ್ಕರಿವುದಕ್ಕಿಂತ ದೇಶಕ್ಕಾಗಿ ಏನಾದರೂ ಹೆಚ್ಚಿನದನ್ನು ಮಾಡಬೇಕೆಂದು ಅವರು ತೀರ್ಮಾನಿಸಿದ್ದಾರೆ.

ತಮ್ಮ ದೇಶದ ರಾಷ್ಟ್ರೀಯ ಚಿಹ್ನೆಗಳನ್ನು ಬಳಸಿ ಆಡುವ ರಷ್ಯಾ ಅಥವಾ ಬೆಲಾರೂಸ್ ಅಥ್ಲೀಟ್ ಗಳ ಅಂತರರಾಷ್ಟ್ರೀಯ ಟೆನಿಸ್ ಫೆಡರೇಷನ್ ನಿರ್ಬಂಧ ಹೇರುವ ವರೆಗೆ ಆದೇಶಗಳ ಸ್ಪರ್ಧಿಗಳ ಎದುರು ಆಡುತ್ತಿಲ್ಲ ಎಂದು ಈ ಹಿಂದೆ ಸ್ಟಿಟೋಲಿನಾ ಹೇಳಿದ್ದರು.

ಮೊಂಟೆರಿ ಓಪನ್ ಟೆನಿಸ್ ಟೂರ್ನಿಯ ಪಂದ್ಯದಲ್ಲಿ ಸ್ವಿಟೋಲಿನಾ ಅವರು ತಮ್ಮ ದೇಶದ ಧ್ವಜದ ಬಣ್ಣದ ಪೋಷಾಕು ಧರಿಸಿ ಕಣಕ್ಕಿಳಿದಿದ್ದು ವಿಶೇಷವಾಗಿತ್ತು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ನೀಟ್ ರದ್ದು ಮಾಡಲು ಟ್ವೀಟ್ ಅಭಿಯಾನ

0

ಉಕ್ರೇನ್ ನಲ್ಲಿ ರಷ್ಯಾ ನಡೆಸಿದ ಶೆಲ್ ದಾಳಿಯಲ್ಲಿ ಹಾವೇರಿಯ ನವೀನ್ ಸಾವಿಗೀಡಾದ ಬೆನ್ನಲ್ಲೇ, ವೈದ್ಯಕೀಯ ಕಾಲೇಜುಗಳ ಪ್ರವೇಶ ಪ್ರಕ್ರಿಯೆಯ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ.

ನವೀನ್ ಸಾವಿಗೆ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ಕಾರಣ ಹಾಗಾಗಿ ನೀಟ್ ರದ್ದುಪಡಿಸಬೇಕು ಎಂದು ಒತ್ತಾಯಿಸಿ ಟ್ವಿಟರ್ನಲ್ಲಿ ಬೃಹತ್ ಅಭಿಯಾನ ನಡೆದಿದೆ.

ಟ್ವಿಟ್ಟರ್ ಮೂಲಕ ಕರ್ನಾಟಕ ರಕ್ಷಣಾ ವೇದಿಕೆ ಆರಂಭಿಸಿದ ಅಭಿಯಾನಕ್ಕೆ 20 ಸಾವಿರಕ್ಕೂ ಹೆಚ್ಚು ಮಂದಿ ಪ್ರತಿಕ್ರಿಯಿಸಿದರು.

ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ.ಎ.ನಾರಾಯಣಗೌಡ ಅವರು ಟ್ವಿಟ್ಟರ್ನಲ್ಲಿ ‘ಕನ್ನಡದ ಹುಡುಗ ನವೀನ್ ಸಾವಿನ ಹೊಣೆ ಹೊರುವವರು ಯಾರು? ಒಂದಿಡಿ ವೈದ್ಯಕೀಯ ಸೀಟಿಗೆ ಕೋಟ್ಯಾಂತರ ರೂಪಾಯಿ ಬಾಚುವ ಕ್ಯಾಪಿಟೇಷನ್ ಲಾಬಿ, ಇನ್ನೊಂದೆಡೆ ಕನ್ನಡಿಗರ ಹಕ್ಕುಗಳನ್ನು ಹಸಿರು ಕೊಳ್ಳುತ್ತಿರುವ ನೀಟ್ ಎಂಬ ಷಡ್ಯಂತ್ರ. ಬಲಿಯಾಗುತ್ತಿರುವುದು ಕನ್ನಡಿಗರು’ ಎಂದು ಟ್ವೀಟ್ ಮಾಡಿದ್ದಾರೆ.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್ ಡಿ ಕುಮಾರಸ್ವಾಮಿಯವರು ನೀಟ್ ಮೂಲಕ ಉನ್ನತ ಶಿಕ್ಷಣವನ್ನು ಉಳ್ಳವರಿಗೆ ಮೀಸಲಿಡಲಾಗಿದೆ. ಬಡವರು, ಮಧ್ಯಮವರ್ಗ ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ಅವಕಾಶ ನಿರಾಕರಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ‘ಪರಿಶಿಷ್ಟರಿಗೆ ಉಚಿತ ವೈದ್ಯ ಸೀಟು ನೀಡಲಾಗುತ್ತದೆ. ನೀಟ್ ಮೂಲಕ ಶೇ.40ರಷ್ಟು ಸೀಟುಗಳನ್ನು ಬಡವರಿಗೆ ರಿಯಾಯಿತಿ ದರದಲ್ಲಿ ಕೊಡಲಾಗುತ್ತಿದೆ. ಇದನ್ನು ಶೇ.60 ಕ್ಕೆ ಹೆಚ್ಚಿಸಬೇಕೆನ್ನುವುದು ಪ್ರಧಾನಿ ಹಂಬಲ’ ಎಂದು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಪರೀಕ್ಷಾಂಗ ಕುಲಸಚಿವರಾಗಿ ನವೀನ್ ಕುಮಾರ್ ಅಧಿಕಾರ ಸ್ವೀಕಾರ

0

ಕುವೆಂಪು ವಿಶ್ವವಿದ್ಯಾಲಯದ ನೂತನ ಪರೀಕ್ಷಾಂಗ ಕುಲಸಚಿವರಾಗಿ ನೇಮಕಗೊಂಡಿರುವ ಪ್ರೊ.‌ನವೀನ್ ಕುಮಾರ್ ಎಸ್. ಕೆ ಮತ್ತು ದೂರಶಿಕ್ಷಣ ನಿರ್ದೇಶನಾಲಯದ ನೂತನ ನಿರ್ದೇಶಕ ಪ್ರೊ.‌ಬಿ.‌ಎಸ್. ಬಿರಾದರ್ ಅವರು ಗುರುವಾರ ಅಧಿಕಾರ ವಹಿಸಿಕೊಂಡರು. ಕುಲಸಚಿವರಾದ ಜಿ. ಅನುರಾಧ, ಡಾ.‌ ಕೆ. ಆರ್. ಮಂಜುನಾಥ್, ಡಾ. ಬಿ.ಇ. ಕುಮಾರಸ್ವಾಮಿ, ಪರೀಕ್ಷಾಂಗ ವಿಭಾಗದ ಸಿಬ್ಬಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಶಿ‌ವಮೊಗ್ಗ ಹುಲಿ- ಸಿಂಹ ಧಾಮಕ್ಕೆ ಪೂರ್ಣಿಮಾ ಸೇರ್ಪಡೆ

0

ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮಕ್ಕೆ ಹೊಸ ಅತಿಥಿ ಹೆಣ್ಣುಹುಲಿ ಪೂರ್ಣಿಮಾ ಆಗಮಿಸಿದೆ.

ಮೈಸೂರು ಸಂರಕ್ಷಣಾ ಕೇಂದ್ರದಿಂದ ಕೋರಿಕೆಯ ಮೇರೆಗೆ ಪೂರ್ಣಿಮಾಳನ್ನು ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮ ತರಲಾಗಿದೆ.

ಪೂರ್ಣಿಮಾಳಿಗೆ ಹನ್ನೊಂದು ವರ್ಷ ವಯಸ್ಸಾಗಿದೆ. ಪೂರ್ಣಿಮಾ ಆಗಮನದಿಂದ ಸಿಂಹಧಾಮದಲ್ಲಿ ಹುಲಿಗಳ ಸಂಖ್ಯೆ 5ರಿಂದ ಆರಕ್ಕೆ ಏರಿಕೆಯಾಗಿದೆ.

ಸಿಂಹಧಾಮದಲ್ಲಿ ರಾಮ, ಸೀತಾ, ವಿಜಯ,ದಶಮೀ, ಹನುಮಾ ಎಂಬ ಹುಲಿಗಳಿವೆ. ಇವುಗಳ ಜೊತೆಗೆ ಪೂರ್ಣಿಮಾ ಈಗ ಹೊಸ ಸೇರ್ಪಡೆಯಾಗಿದೆ.