Sunday, February 22, 2026
Sunday, February 22, 2026
Home Blog Page 1662

ಗೃಹ ಸಚಿವರ ಜಮ್ಮು ಕಾಶ್ಮೀರ ಭೇಟಿ ವೇಳೆ ಉಗ್ರರ ದಾಳಿ

0

ಗೃಹ ಸಚಿವ ಅಮಿತ್ ಶಾ ಅವರ ಜಮ್ಮು ಕಾಶ್ಮೀರ ಭೇಟಿಯ ವೇಳೆ 24 ಗಂಟೆಗಳಲ್ಲಿ ಮೂವರು ಉಗ್ರರ ದಾಳಿ ನಡೆದಿದೆ. ಒಂದು ಘಟನೆಯಲ್ಲಿ, ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಸ್ಥಳೀಯರಲ್ಲದ ವಲಸಿಗನ ಮೇಲೆ ಗುಂಡು ಹಾರಿಸಲಾಯಿತು. ಪುಲ್ವಾಮಾ ಜಿಲ್ಲೆಯ ಅರಿಹಾಲ್ ಪ್ರದೇಶದಲ್ಲಿ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿ ಮೊಹಮ್ಮದ್ ಅಕ್ರಮ್ ಗಾಯಗೊಂಡ ಘಟನೆ ನಡೆದಿದೆ.

ಮೊಹಮ್ಮದ್ ಅಕ್ರಮ್ ಉತ್ತರ ಪ್ರದೇಶದಿಂದ ಬಂದವರು ಮತ್ತು ಕಾಶ್ಮೀರ ಕಣಿವೆಯಲ್ಲಿ ಬಡಗಿಯಾಗಿ ಕೆಲಸ ಮಾಡುತ್ತಿದ್ದಾರೆ. ಇದಲ್ಲದೆ, ಶೋಪಿಯಾನ್ ಮತ್ತು ಪುಲ್ವಾಮಾ ಜಿಲ್ಲೆಯ ಎರಡು ಪ್ರತ್ಯೇಕ ಸಿಆರ್‌ಪಿಎಫ್ ಶಿಬಿರಗಳ ಮೇಲೆ ಭಯೋತ್ಪಾದಕರು ಗ್ರೆನೇಡ್‌ಗಳನ್ನು ಎಸೆದರು.

ಶೋಪಿಯಾನ್‌ನಲ್ಲಿ, 179 ಬೆಟಾಲಿಯನ್‌ನ ಸಿಆರ್‌ಪಿಎಫ್ ಶಿಬಿರದ ಮೇಲೆ ಭಯೋತ್ಪಾದಕರು ಗ್ರೆನೇಡ್ ಎಸೆದರು ಮತ್ತು ಒಬ್ಬ ಯೋಧ ಗಾಯಗೊಂಡರು. ಅವಂತಿಪೋರಾದಲ್ಲಿ, 180 ಬೆಟಾಲಿಯನ್‌ನ ಸಿಆರ್‌ಪಿಎಫ್ ಶಿಬಿರದ ಮೇಲೆ ಭಯೋತ್ಪಾದಕರು ಗ್ರೆನೇಡ್ ಎಸೆದರು ಮತ್ತು ಇಬ್ಬರು ಜವಾನರು ಗಾಯಗೊಂಡರು.

370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ನರೇಂದ್ರ ಮೋದಿ ಸರ್ಕಾರದ ದೊಡ್ಡ ಸಾಧನೆ ಮೊದಲ ಬಾರಿಗೆ “ನಾವು ಭಯೋತ್ಪಾದನೆಯ ಮೇಲೆ ನಿರ್ಣಾಯಕ ನಿಯಂತ್ರಣವನ್ನು ಹೊಂದಿದ್ದೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ಭದ್ರತಾ ಪಡೆಗಳ ಶೌರ್ಯ ಮತ್ತು ತ್ಯಾಗಕ್ಕಾಗಿ ಅವರು ಶ್ಲಾಘಿಸಿದರು, ಅದು ಸಾಧ್ಯವಾಯಿತು ಎಂದು ಅವರು ಶ್ಲಾಘಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ

0

ತೀರ್ಥಹಳ್ಳಿ ತಾಲ್ಲೂಕಿನ ನೊಣಬೂರು ಗ್ರಾ.ಪಂ ಆವರಣದಲ್ಲಿ ಏರ್ಪಡಿಸಲಾಗಿದ್ದ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ-ಕಂದಾಯ ಇಲಾಖೆ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ.ಆರ್ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿದರು.

ಗ್ರಾಮದಲ್ಲಿ ವಿದ್ಯುತ್ ಸಮಸ್ಯೆಯಿಂದಾಗಿ ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆ ಸಾಧ್ಯವಾಗುತ್ತಿಲ್ಲ ಎಂಬ ಗ್ರಾಮಸ್ಥರ ದೂರಿಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಕುಡಿಯುವ ನೀರು ಪೂರೈಕೆಗೆ ವಿದ್ಯುತ್ ಒದಗಿಸಲು ಪ್ರತ್ಯೇಕ ಟ್ರಾನ್ಸ್ ಫಾರ್ಮರ್ ಬಳಸಬೇಕು. ನಿರಂತರ ವಿದ್ಯುತ್ ಪೂರೈಕೆಯನ್ನು ಒಂದೆರಡು ದಿನಗಳಲ್ಲಿ ಸಂಬಂಧಿಸಿದ ಅಧಿಕಾರಿಗಳು ಖಾತ್ರಿಪಡಿಸಬೇಕು. ಹಾಗೂ ಕುಡಿಯುವ ನೀರಿನ ಪೂರೈಕೆಯಲ್ಲಿ ಯಾವುದೇ ರೀತಿಯ ಸಮಸ್ಯೆಯಾಗದಂತೆ ಎಲ್ಲರೂ ಎಚ್ಚರಿಕೆ ವಹಿಸಬೇಕೆಂದು ಸೂಚನೆ ನೀಡಿದರು.

ಗ್ರಾ.ಪಂ ವ್ಯಾಪ್ತಿಯ ಗ್ರಾಮಸ್ಥರು ಸಭೆಯಲ್ಲಿ ಈ ಸ್ವತ್ತು, ಸ್ಮಶಾನ ಭೂಮಿ, ಪಹಣಿ, ಗ್ರಾಮಗಳ ಒಳಗಿನ ರಸ್ತೆಗಳ ನಿರ್ಮಾಣ, ರಿಪೇರಿ ಹಾಗೂ ನಿವೇಶನ ಮಂಜೂರಾತಿ ಸೇರಿದಂತೆ ವಿವಿಧ ವಿಷಯ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.

ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಶೀಘ್ರವಾಗಿ ಸೂಕ್ತ ಕ್ರಮ ವಹಿಸುವಂತೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳು ನೊಣಬೂರಿನ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಶಾಲಾ ಶೈಕ್ಷಣಿಕ ಮತ್ತು ಇತರೆ ಚಟುವಟಿಕೆಗಳ ಕುರಿತು ಸಂವಾದ ನಡೆಸಿದರು.

ತೀರ್ಥಹಳ್ಳಿ ತಾಲ್ಲೂಕಿನ ಮಲ್ಲೇಸರಕ್ಕೆ ಭೇಟಿ ನೀಡಿ ಅಲ್ಲಿನ ಅಂಗನವಾಡಿಯಲ್ಲಿ ಆಯೋಜಿಸಲಾಗಿದ್ದ ಪೋಷಣ್ ಅಭಿಯಾನ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳು ಚಾಲನೆ ನೀಡಿದರು. ನಂತರ ಮಲ್ಲೇಸರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಶೈಕ್ಷಣಿಕ ಚಟುವಟಿಕೆ ಕುರಿತು ಸಂವಾದಿಸಿದರು.

ಮಲ್ಲೇಸರ ಗ್ರಾಮದ ಪ್ರಗತಿಪರ ಕೃಷಿಕ ಶ್ರೀಧರ್ ಭಟ್ ಇವರ ತೋಟಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ತೋಟದ ಬೆಳೆಗಳ ಕುರಿತು ಪರಿಶೀಲಿಸಿದರು. ಹಾಗೂ ಅಲ್ಲಿ ಅವರು ಬಳಸುತ್ತಿರುವ ಕೃಷಿ ಯಂತ್ರಗಳನ್ನು ವೀಕ್ಷಿಸಿ ಚಾಲನೆ ಮಾಡಿದರು.

ನೊಣಬೂರಿನ ಗ್ರಾ.ಪಂ ಆವರಣದಲ್ಲಿ ಏರ್ಪಡಿಸಲಾಗಿದ್ದ ವೇದಿಕೆ ಕಾರ್ಯಕ್ರಮವನ್ನು ಗೃಹ ಸಚಿವರಾದ ಆರಗ ಜ್ಞಾನೇಂದ್ರ ಉದ್ಘಾಟಿಸಿದರು. ಗೃಹ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಗ್ರಾಮಸ್ಥರಿಗೆ ಹಕ್ಕುಪತ್ರ ಸೇರಿದಂತೆ ವಿವಿಧ ಸೌಲಭ್ಯ ವಿತರಣೆ ಮಾಡಿದರು.

ಈ ಭಾಗದಲ್ಲಿ ಅಡಿಕೆ ಸಣ್ಣ ಹಿಡುವಳಿದಾರರು ಹಾಗೂ ಮ್ಯಾಮ್ಕೋಸ್ ಸದಸ್ಯರಿದ್ದು ಅವರು ಎಪಿಎಂಸಿ ಯಾರ್ಡ್‍ನಲ್ಲಿ ಜಾಗ ಬೇಕೆಂದು ಕೇಳಿದ್ದಾರೆ. ಮಾರ್ಚ್ 31 ರೊಳಗೆ ಎಪಿಎಂಸಿ ಆವರಣದಲ್ಲಿ ಮ್ಯಾಮ್ಕೋಸ್‍ಗಾಗಿ ಸ್ಥಳ ನಿಗದಿಪಡಿಸಿ ನೀಡಬೇಕೆಂದು ತಹಶೀಲ್ದಾರರಿಗೆ ಸೂಚನೆ ನೀಡಿದ್ದೇನೆ ಎಂದರು.

ಗ್ರಾಮದಲ್ಲಿ ಕುಡಿಯುವ ನೀರಿದೆ. ಆದರೆ ಮೆಸ್ಕಾಂ ನಿಂದ ಸಮರ್ಪಕ ವಿದ್ಯುತ್ ಪೂರೈಕೆ ಇಲ್ಲದ ಕಾರಣ ನೀರಿನ ಪೂರೈಕೆಯಾಗುತ್ತಿಲ್ಲವೆಂದು ಗ್ರಾಮಸ್ಥರು ಹೇಳಿದ್ದಾರೆ. ಆದ್ದರಿಂದ ಮೆಸ್ಕಾಂ ಎಇಇ ರವರಿಗೆ ಪ್ರತ್ಯೇಕ ಟಿಸಿ ಯ ಮೂಲಕ ಪ್ರತ್ಯೇಕ ಲೈನ್ ಹಾಕಿಸಿ ವಿದ್ಯುತ್ ಸರಬರಾಜು ನೀಡುವಂತೆ ಸೂಚನೆ ನೀಡಿದ್ದೇನೆ ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್ ಹೊನ್ನಳ್ಳಿ, ಉಪವಿಭಾಗಾಧಿಕಾರಿ ಟಿ.ವಿ.ಪ್ರಕಾಶ್, ತೀರ್ಥಹಳ್ಳಿ ತಹಶೀಲ್ದಾರ್ ಶ್ರೀಪಾದ್ ಮತ್ತಿತರರು ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಹದಿಹರೆಯ ಜಾಗ್ರತೆಯಿರೆ ಉಲ್ಲಾಸಮಯ

0

ಹುಚ್ಚು ಖೋಡಿ ಮನಸ್ಸು ಇದು ಹದಿನಾರರ ವಯಸ್ಸು. ಈ ಹದಿಹರೆಯದ ವಯಸ್ಸೇ ಹಾಗೆ. ಮನಸ್ಸು ಚಂಚಲ,ಹಾಗೂ ಉಲ್ಲಾಸಮಯ. ಕಂಡದ್ದೆಲ್ಲಾ ಬೇಕೆಂಬುವ ಹಂಬಲ. ಈ ವಯಸ್ಸು ವ್ಯಕ್ತಿಯನ್ನು ಬದಲಿಸುವ ಮೊದಲ ಹಂತವಾಗಿದೆ.ಹಾಗೂ ಅಪಾಯಕಾರಿಯೂ ಕೂಡ.

ಹದಿಹರೆಯದ ವಯಸ್ಸೇ ಹಾಗೆ… ಈ ವಯಸ್ಸಿನಲ್ಲಿ ಹುಡುಗ ಅಥವಾ ಹುಡುಗಿಯ ಮನಸ್ಸು ಚಿಟ್ಟೆಯಂತೆ ಹಾರಾಡುತ್ತಿರುತ್ತದೆ. ಇಲ್ಲಿಯವರೆಗೂ ಮುಗ್ದವಾಗಿ ಯೋಚಿಸುತ್ತಿದ್ದಂತಹ ಮನಸ್ಸೂ… ಹದಿಹರೆಯಕ್ಕೆ ಕಾಲಿಡುತ್ತಿದ್ದಂತೆ, ಪ್ರೀತಿ ಕಡೆ ವಾಲುತ್ತದೆ.

ಹದಿಹರಯದವರಲ್ಲಿ ಯಾವುದು ಸರಿ, ಯಾವುದು ತಪ್ಪು ಎಂದು ಯೋಚಿಸಲು ತಾಳ್ಮೆ ಇಲ್ಲದಂತಹ ಹಂತವಾಗಿದೆ.ಮತ್ತು ತಮ್ಮ ತಂದೆ ತಾಯಿಗಳ ಮಾತನ್ನು ಕೇಳಿಸಿಕೊಳ್ಳುವ ಆಸಕ್ತಿ ಅವರಲ್ಲಿ ಇರುವುದಿಲ್ಲ. ಪ್ರೀತಿ ಮುಂದೆ ಎಲ್ಲದು ಕುರುಡು ಎಂಬ ಭಾವನೆ ಇರುತ್ತದೆ. ತಂದೆ ತಾಯಿಗಳಿಗಿಂತಲೂ ಹೆಚ್ಚು ಅವರು ಪ್ರೀತಿಯಲ್ಲಿ ಮುಳುಗಿರುತ್ತಾರೆ.

ಒಂದು ವೇಳೆ ಹದಿಹರೆಯದವರಿಗೆ ತಾವು ಪ್ರೀತಿಸಿದ ಹುಡುಗಿ ಅಥವಾ ಹುಡುಗ ಸಿಗದೆ ಹೋದರೆ ತಮ್ಮ ಜೀವನವೇ ಇಷ್ಟು, ಅವಳು ಅಥವಾ ಅವನಿಲ್ಲದೆ ಬದುಕಲು ಸಾಧ್ಯವಿಲ್ಲ ವೆಂದು ತಿಳಿದು ಆ ನೋವಿನಿಂದ ಹೊರಬರಲಾಗದೆ ಅನೇಕ ಯುವಕ,ಯುವತಿಯರು ಆತ್ಮಹತ್ಯೆ ಗೆ ಶರಣಾಗುತ್ತಾರೆ.

ಹದಿಹರೆಯದ ವಯಸ್ಸಿನ ಯುವಕ,ಯುವತಿಯರು ಇಂತಹ ಕೆಟ್ಟ ನಿರ್ಧಾರ ತೆಗೆದುಕೊಳ್ಳುವ ಮೊದಲು ಒಮ್ಮೆ ನಿಮ್ಮ ತಂದೆ ತಾಯಿ ಯರನ್ನು ನೆನಪು ಮಾಡಿಕೊಳ್ಳಿ. ಅವರು ನಿಮ್ಮ ಭವಿಷ್ಯಕೋಸ್ಕರ ಎಷ್ಟೆಲ್ಲಾ ಸಮಸ್ಯೆ, ಸವಾಲುಗಳನ್ನು ಎದುರಿಸುತ್ತಿರುತ್ತಾರೆಂದು.ಒಂದು ವೇಳೆ ನೀವು ಯೋಚಿಸಿದ್ದೆ ನಿಜವಾದರೆ,ನಿಮ್ಮಲ್ಲಿ ಇಂತಹ ಕೆಟ್ಟು ಆಲೋಚನೆ,ನಿರ್ಧಾರ ತೆಗೆದುಕೊಳ್ಳುವ ಯೋಚನೆ ಬರುವುದಿಲ್ಲ.

ನಿಮಗೋಸ್ಕರ ಒಂದೊಳ್ಳೆ ಭವಿಷ್ಯ ಕಾಯುತ್ತಿದೆ. ಕ್ಷಣಿಕ ಸಂತೋಷಕ್ಕಾಗಿ ನಿಮ್ಮ ಉಜ್ವಲ ಭವಿಷ್ಯ ವನ್ನು ನಾಶಮಾಡಿಕೊಳ್ಳಬೇಡಿ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಮಹಿಳೆಯರೇ ಮಹಿಳಾ ಸಮೂಹಕ್ಕೆ ಈಗ ಪ್ರೇರಣೆ- ಅನುರಾಧ

0

ಇತ್ತೀಚೆಗೆ ಮಹಿಳೆಯರು ಶಿಕ್ಷಣ, ಕ್ರೀಡೆ, ವಿಜ್ಞಾನ ಮತ್ತು ತಂತ್ರಜ್ಞಾನ, ರಕ್ಷಣೆ, ಉದ್ಯಮ, ಮುಂತಾದ ಹಲವು ಕ್ಷೇತ್ರಗಳಲ್ಲಿ ಶ್ರೇಷ್ಠ ಸಾಧನೆ ಮಾಡುತ್ತಿರುವುದು ಸಮಾಜದ ಎಲ್ಲ ಮಹಿಳೆಯರಿಗೆ ಪ್ರೇರಣೆಯಾಗಲಿ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವೆ ಜಿ. ಅನುರಾಧ ಆಶಿಸಿದ್ದಾರೆ.

ಕುವೆಂಪು ವಿವಿಯ ಮಹಿಳಾ ಬೋಧಕೇತರ ಸಿಬ್ಬಂದಿ ಶನಿವಾರ ಪ್ರೊ.‌ ಪಿ. ವೆಂಕಟರಾಮಯ್ಯ ಸಭಾಂಗಣದಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದ್ದಾರೆ.

ಎಲ್ಲಿ ಹೆಣ್ಣಿಗೆ ಗೌರವವಿರುತ್ತದೆಯೋ ಅಲ್ಲಿ ಅಭಿವೃದ್ಧಿ ಸಾಧ್ಯ. ಒಟ್ಟಾರೆ ಅಭಿವೃದ್ಧಿಯನ್ನು ಮಹಿಳಾಪರ ದೃಷ್ಟಿಕೋನದಿಂದ ನೋಡುವ ಅಗತ್ಯವಿದೆ. ಅದರಲ್ಲಿಯೂ ಮುಖ್ಯವಾಗಿ ಶಿಕ್ಷಣ, ಆರೋಗ್ಯ, ಆಡಳಿತ ಮತ್ತಿತರ ಸೇವಾ ಕ್ಷೇತ್ರಗಳಲ್ಲಿ ಮಹಿಳೆಯರ ಹೊಣೆಗಾರಿಕೆ ಹಿಂದೆಂದಿಗಿಂತಲೂ ಅಧಿಕವಾಗಿದೆ ಎಂದರು.

ಮಹಿಳಾ ವೈದ್ಯಾಧಿಕಾರಿ ಡಾ. ಶ್ರೀರಕ್ಷಾ ಮಾತನಾಡಿ, ಮಹಿಳೆಯರಿಗೆ ಮಾನಸಿಕ ಮತ್ತು ದೈಹಿಕ ಆರೋಗ್ಯ ಸದೃಢವಾಗಿರಬೇಕು. ಉತ್ತಮ ಆರೋಗ್ಯದಿಂದ ವೃತ್ತಿರಂಗದಲ್ಲಿ ಸಾಧನೆ ಮಾಡಬಹುದು. ಹೀಗಾಗಿ, ವ್ಯಾಯಾಮ, ಯೋಗ ಮತ್ತು ಧ್ಯಾನಗಳನ್ನು ಮಹಿಳೆಯರು ದೈನಂದಿನ‌ ದಿನಚರಿಯಲ್ಲಿ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ.

ಸಹಾಯಕ ಕುಲಸಚಿವೆ ಶಿವಮ್ಮ, ಅಧೀಕ್ಷಕಿ ತಹಸೀನ್ ಜಹಾನ್, ಮರಿಯಾಂಬಿ ಟಿ. ಪಿ, ಹಿರಿಯ ಸಹಾಯಕಿ ಎಚ್. ಎಸ್ ರೇಖಾ, ಎನ್. ಸುಶೀಲಾ, ಮಂಜುಳಾ ಸೇರಿದಂತೆ ವಿಶ್ವವಿದ್ಯಾಲಯದ ಎಲ್ಲಾ ಮಹಿಳಾ ನೌಕರರು ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಇಂದು ವಿಶ್ವ ಗುಬ್ಬಿ ದಿನಾಚರಣೆ

0

ಗುಬ್ಬಿಗಳನ್ನ ನೋಡದವರಾರು? ಪುಟ್ಟಪುಟ್ಟದಾಗಿ ಕುಪ್ಪಳಿಸುತ್ತದೆ. ಕಾಳುಗಳನ್ನ ಪಟಕ್ಕನೆ ತನ್ನ ಚಂಚುವಿನಿಂದ ಹೆಕ್ಕಿ ತಿನ್ನುತ್ತದೆ. ಯಾರಾದರೂ ಮನುಷ್ಯರೋ..ಪ್ರಾಣಿಯೋ ಬಂದದ್ದು ಗೊತ್ತಾದಾಕ್ಷಣ ಪುರ್ರನೆ ಹಾರಿ ಮಾಯವಾಗುತ್ತದೆ. ಪರಿಸರದಲ್ಲಿ ಅತ್ಯಂತ ನಿರುಪದ್ರವಿ,ಅಷ್ಟಿಟ್ಟು ಮನುಷ್ಯಸ್ನೇಹಿ ಪಕ್ಷಿ ಗುಬ್ಬಿ. ಬಹಳಷ್ಟು ಪಕ್ಷಿಪ್ರಿಯರು ಈ ಪುಟಾಣಿ ಹಕ್ಕಿಗೆ ತಮ್ಮ ಮನೆಯ ಸೂರುಗಳಲ್ಲಿ, ಕೈದೋಟದ ಮರಗಳಲ್ಲಿ ಗೂಡು ಕಟ್ಟಿಕೊಳ್ಳಲು ಬಿಟ್ಟಿರುವುದನ್ನ ನೋಡಿದ್ದೇವೆ.

ಇತ್ತೀಚೆಗೆ ಗುಬ್ಬಚ್ಚಿಗಳ ಸಂತತಿ ಕ್ಷೀಣಿಸಿರುವುದರ ಬಗ್ಗೆ ಪಕ್ಷಿಪ್ರಿಯರಿಂದ ಕಾಳಜಿ ವ್ಯಕ್ತವಾಗಿದೆ. ಈ ಪುಟ್ಟ ಹಕ್ಕಿಯಿಂದ ನಮಗೇನು ಲಾಭ? ಎಂದು ಕೇಳಬಹುದು. ಈ ಜೀವಜಗತ್ತಿನಲ್ಲಿ ಪ್ರತಿಯೊಂದಕ್ಕೂ ಬದುಕುವ ಹಕ್ಕಿದೆ.
ಜೊತೆಗೆ ಅವುಗಳ ಪರಿಸರ ಸಮತೋಲನಕ್ಕೂ ತಮ್ಮದೇ ಕೊಡುಗೆ ನೀಡುತ್ತಿವೆ.

ಹಕ್ಕಿಗಳು ಹುಳುಹುಪ್ಪಟೆ ತಿಂದು ಧಾನ್ಯದ ಬೆಳೆಗಳನ್ನ ಸಂರಕ್ಷಿಸುತ್ತವೆ ಎನ್ನುತ್ತಾರೆ ವಿಜ್ಞಾನಿಗಳು. ಅವುಗಳ ಈ ಸದ್ದಿಲ್ಲದ ಸೇವೆ ನಮ್ಮರಿವಿಗೆ ಬರುವುದೇ ಇಲ್ಲ. ಗುಬ್ಬಚ್ಚಿಗಳ ಸೇವೆಯೂ ಹಾಗೆ.
ನಿಮಗೆ ಚೀನಾದ ಹುಚ್ಚುದೊರೆಯ ಕತೆ ನೆನಪಿಸಿದರೆ ಗುಬ್ಬಚ್ಚಿಗಳ ಮಹತ್ವ ತಿಳಿದು ಮೆಚ್ಚುಗೆ ಮೂಡುತ್ತದೆ.
ಝೆಡಾಂಗ್ ಎಂಬ ಚೀನೀ ಅಧ್ಯಕ್ಷ (1949-1976) ಜನಸಂಖ್ಯೆಯ ಬಹುಪಾಲು ಧಾನ್ಯವನ್ನ ಗುಬ್ಬಚ್ಚಿಗಳು ತಿನ್ನುತ್ತವೆ ಎಂದು ಇಡೀ ಗುಬ್ಬಿಸಂಕುಲವನ್ನೇ ಸುಟ್ಟುಹಾಕಿದ. ಗುಬ್ಬಚ್ಚಿಗೂಡುಗಳನ್ನ, ಅವುಗಳು ಕುಳಿತ ಗಿಡ ಮರ ಪೊದೆಗಳನ್ನ ಒಮ್ಮೆಲೇ ಬೆಂಕಿ ತಾಗಿಸಿ ಸುಟ್ಟುಹಾಕಲು ಆಜ್ಞೆ ಮಾಡಿದ. ಚೀನಾ ಇಟ್ಟ ಹೆಜ್ಜೆಯನ್ನು ನಿಸರ್ಗವೂ ತಡೆಯಲಾರದು. ನಾನು ಬೆಟ್ಟಗಳನ್ನು ಬಗ್ಗಿಸುವೆ. ನದಿಗಳು ನನಗಾಗಿ ದಾರಿ ಬಿಡಬೇಕು ಹಾಗೆ ಮಾಡುವೆ” ಎಂಬುದು ಆತನ ಧ್ಯೇಯವಾಕ್ಯ.

ಅಕ್ಷರಶಃ ಹಾಗೇ ಮಾಡಿದ. ಗುಬ್ಬಿಗಳೇ ಅಲ್ಲದೆ ಧಾನ್ಯವನ್ನು ತಿನ್ನುವ ಕೀಟಸಂಕುಲ, ಇಲಿ ಹೆಗ್ಗಣ,ಎಲ್ಲವನ್ನೂ ನಾಶಮಾಡುವ ಅಭಿಯಾನ ಕೈಗೊಂಡ. ಸತ್ತ ಗುಬ್ಬಚ್ಚಿಗಳಿಗಂತೂ ಲೆಕ್ಕವಿಲ್ಲ. ಇಂತ ನಿರ್ಧಾರ ಅವನ ಪಾಲಿಗೇ ಎರವಾಯಿತು. ಹೊಲಗದ್ದೆಗಳಲ್ಲಿ ಫಸಲು ನಿಂತಾಗ ಕ್ರಿಮಿ ಕೀಟಗಳ
ಕಾಟದಿಂದ ಬೆಳೆನಷ್ಟವಾಯಿತು. ಪರಿಸರ ವಿರೋಧಿ ಕ್ರಮಗಳಿಂದ
ಕೃತಕ ಕ್ಷಾಮ ಆವರಿಸಿತು. ಆಗ ಹಸಿವಿನಿಂದ ಸತ್ತ ಚೀನಿಯರ ಸಂಖ್ಯೆ ಒಂದೂವರೆ ಕೋಟಿಯಂತೆ!. ಇನ್ನೂ ಹೆಚ್ಚೇ ಇರಬಹುದು. ಏಕೆಂದರೆ ಚೀನಾಕ್ಕೆ ಹುಸಿನುಡಿಯುವುದೆಂದರೆ ಎಲ್ಲಿಲ್ಲದ ಪ್ರೀತಿ.! ಚೀನಾ ಪರಿಸರವನ್ನ ಎದುರು ಹಾಕಿಕೊಂಡಿತು. ಇದು ಗುಬ್ಬಿಗಳ ಮಾರಣ ಹೋಮದ ಪರಿಣಾಮ.

ಈ ಗುಬ್ಬಚ್ಚಿಗಳ ಬಗ್ಗೆ ನಮ್ಮ ರಾಜ್ಯದಲ್ಲೇ ಬಹಳ ಪ್ರೀತಿ ಮಮತೆ ತೋರಿದ ಘಟನೆ ವರದಿಯಾಗಿದೆ. ಚಿಕ್ಕಬಳ್ಳಾಪರದ ಶಿಡ್ಲಘಟ್ಟ ಬಸವಾಪಟ್ಟಣದಲ್ಲಿ ನಡೆದ ಪ್ರಸಂಗ ಪಕ್ಷಿಪ್ರಿಯರ ಮೆಚ್ಚುಗೆ ಪಡೆದಿದೆ. ಆ ಹಳಿಯಲ್ಲಿ ಸುಮಾರು ಅರವತ್ತರಿಂದ ಎಪ್ಪತ್ತು ಮನೆಗಳಿಗೆ ದಿನವೂ ಪುರ್ರನೆ ಹಾರಿ ಬಂದು ಕಾಳು ಮೆದ್ದು ಹೋಗುತ್ತಿದ್ದ ಪುಟ್ಟ ಗುಬ್ಬಚ್ಚಿಯ ಚೀಂವ್..ಚೀಂವ್ ಗ್ರಾಮಸ್ಥರ ಕಿವಿಗೆ ಅಭ್ಯಾಸವಾಗಿಬಿಟ್ಟಿತ್ತು. ಆದರೆ ಒಂದು ಬೆಳಿಗ್ಗೆ ಎಷ್ಟು ಹೊತ್ತಾದರೂ ಗುಬ್ಬಿ ಬಂದೇ ಇಲ್ಲ. ನೋಡಿದರು ಕಾದರು. ಕೊನೆಗೆ ಹತ್ತಿರದ ಮರಗಳನ್ನ ಹುಡುಕಿದರು. ಮರವೊಂದರಲ್ಲಿ ಗುಬ್ಬಚ್ಚಿಯ ಸತ್ತದೇಹ ಪತ್ತೆಯಾಯಿತು. ಏನೋ ತಮ್ಮ ಅತ್ಯಂತ ಆತ್ಮೀಯರನ್ನ ಕಳೆದುಕೊಂಡ ವಿಹ್ವಲತೆ ಅವರನ್ನ ಕಾಡಿತು. ಕಣ್ಣೀರ್ಗರೆದರು. ಅಷ್ಟಕ್ಕೇ ಸುಮ್ಮನಾಗಲಿಲ್ಲ. ಅದಕ್ಕೊಂದು ಸಂಸ್ಕಾರ ಮಾಡಬೇಕೆಂದು ನಿಶ್ವಯಿಸಿದರು. ಸಮಾಧಿಯ ನಿರ್ಮಾಣವಾಯಿತು. ಪ್ರೀತಿಯ ಹಕ್ಕಿಯ ದೇಹವನ್ನ ಮಣ್ಣಿನಲ್ಲಿ ಹೂಳಿದರು. ಹೂಗಳನ್ನಿಟ್ಟರು. ತೃಪ್ತಿಯಾಗಲಿಲ್ಲ. ಮನುಷ್ಯರಿಗೆ ಸತ್ತಾಗ ತಿಥಿ ಮಾಡುವ ಆಚರಣೆಯನ್ನೂ ಮಾಡಿದರು. ಎಲ್ಲರಿಗೂ ಅಂದು ತರಕಾರಿ ಭೋಜನ. ಏಕೆಂದರೆ ಗುಬ್ಬಚ್ಚಿ ಸಸ್ಯಾಹಾರಿಯಲ್ಲವೆ?. ಬೆಂಗಳೂರಿನಲ್ಲಿ ಗುಬ್ಬಿಮನುಷ್ಯ ಅಂತ ಜನರಿಂದ ಕರೆಸಿಕೊಳ್ಳುವ ಓರ್ವರಿದ್ದಾರೆ. ಅವರ ಹೆಸರು ಎಡ್ವಿನ್ ಜೋಸೆಫ್. ಅವರ ಬಳಿ ಇನ್ನೂರಕ್ಕೂ ಮಿಕ್ಕಿ ಗುಬ್ಬಚ್ಚಿಗಳಿವೆ. ಈ ಗುಬ್ಬಿ ಪ್ರೀತಿಯ ಪ್ರಸಂಗ ಕೇಳಿ ಹಳ್ಳಿಗರ ಹೃದಯ ವೈಶಾಲ್ಯಕ್ಕೆ ಒಂದು ಸಲಾಮ್ ಎಂದರು. ಅವರು ಗುಬ್ಬಿ ಸತ್ತಾಗ ಮಣ್ಣಿನಲ್ಲಿ ಮುಚ್ಚುತ್ತಾರೆ. ಎದೆಭಾರ ,ಕಣ್ಣಾಲಿಗಳಲ್ಲಿ ನೀರು ಇಷ್ಟೇ ಅವರು ನೀಡುವ ಅಂತಿಮ ಪ್ರಾರ್ಥನೆ. ಅತ್ಯಂತ ಹೃದಯ ಕಲಕುವ ರೀತಿ ಬಸವಾಪಟ್ಟಣ ಗ್ರಾಮದ ಜನ ಗುಬ್ಬಿಗೆ ತೋರಿದ ಮಾನವೀಯತೆ ಎಲ್ಲರಿಗೂ ಮಾದರಿಯೆನಿಸಿದೆ. ನಮ್ಮ ಜನರಲ್ಲಿ ಪ್ರಾಣಿ -ಪಕ್ಷಿ ಪ್ರೀತಿಯ ಸೆಲೆಯೇ ಇದೆ. ನಾಯಿ,ಬೆಕ್ಕು, ಗಿಣಿ,ಎತ್ತು,ಆಕಳು ಎಮ್ಮೆ ಹೀಗೆ ಅದಕ್ಕೆ ಎಲ್ಲೆಯೇ ಇಲ್ಲ. ಗುಬ್ಬಚ್ಚಿಯದು ಮಾತ್ರ ಅಪರೂಪದಲ್ಲೊಂದು ಅತೀ ಅಪರೂಪದ ಪ್ರಸಂಗ. ಇದನ್ನ ಓದಿದಾಗ ಅಷ್ಟೇಕೆ ಬರೆಯುತ್ತಿದ್ದಂತೇ ನನಗೂ ಕಣ್ಣುಗಳು ತೇವಗೊಂಡವು. ನಿಮಗೆ ಹೇಗೋ ನನಗೆ ಗೊತ್ತಿಲ್ಲ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಪವರ್ ಸ್ಟಾರ್ ಪುನೀತ್ ಗೆ ಸಹಕಾರ ರತ್ನ

0

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್‌ ಅವರಿಗೆ ಮರಣೋತ್ತರ ಸಹಕಾರ ರತ್ನ ಪ್ರಶಸ್ತಿ ನೀಡುವುದಾಗಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಪ್ರಕಟಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುನೀತ್ ರಾಜ್ ಕುಮಾರ್ ಕೆಎಂಎಫ್‍ನ ರಾಯಭಾರಿಯಾಗಿ ಸಹಕಾರ ಕೊಟ್ಟಿದ್ದರು. ಉಚಿತವಾಗಿ ರಾಯಭಾರಿಯಾಗಿದ್ದ ಅವರ ಸೇವೆ ಪರಿಗಣಿಸಿ ಸಹಕಾರ ರತ್ನ ಪ್ರಶಸ್ತಿ ನೀಡುತ್ತೇವೆ ಎಂದರು.

ಅಖಿಲ ಭಾರತ ಸಹಕಾರ ಸಪ್ತಾಹ ಆಚರಣೆ ಸಂದರ್ಭದಲ್ಲಿ ಸಹಕಾರ ಪ್ರಶಸ್ತಿಯನ್ನು ಕೊಡಲಾಗಿರಲಿಲ್ಲ. ಪ್ರತಿವರ್ಷ ಉತ್ತಮ ಕೋ ಆಪರೇಟೀವ್ ಸೊಸೈಟಿ, ಉತ್ತಮ ಕೋಪರೇಟೀವ್ ಬ್ಯಾಂಕ್ ಆಯ್ಕೆ ಮಾಡಲಾಗುತ್ತದೆ. ಅಂತಹವುಗಳಿಗೆ ಸನ್ಮಾನ ಮಾಡಲಾಗುವುದು. ಸಹಕಾರ ರತ್ನ ಪ್ರಶಸ್ತಿಗೆ ರಾಜ್ಯದಲ್ಲಿ 100ಸಂಸ್ಥೆಗಳಿಂದ ಅರ್ಜಿ ಬಂದಿವೆ. ಮುಖ್ಯಮಂತ್ರಿ ಸೂಚನೆಯಂತೆ ಪ್ರಶಸ್ತಿಗೆ ಸಂಸ್ಥೆ ಹಾಗೂ ಸಾಧಕರನ್ನು ನಾವೇ ಗುರುತಿಸಿದ್ದೇವೆ. ಜಿಲ್ಲೆಗೊಂದು ಕೊಡುವ ಉದ್ದೇಶವಿದೆ ಎಂದು ಹೇಳಿದರು.

ನಾಳೆ ಕೆಂಗೇರಿ ಉಪನಗರದ ಗಣೇಶ ಮೈದಾನದಲ್ಲಿ ಪ್ರಶಸ್ತಿ ವಿತರಣಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಮುಖ್ಯಂಮತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದರು.

ಈ ಬಾರಿ 50 ಸಹಕಾರರತ್ನ ಪ್ರಶಸ್ತಿ ನೀಡುವ ಉದ್ದೇಶವಿದೆ. ಪ್ರಶಸ್ತಿಯು 15ಗ್ರಾಂ ಚಿನ್ನದ ಫಲಕ, ಪ್ರಶಸ್ತಿ ಪತ್ರ ಒಳಗೊಂಡಿದೆ ಎಂದು ವಿವರಿಸಿದರು.
ಏ.1ರಂದು ಕೇಂದ್ರ ಗೃಹ ಸಚಿವರು ತುಮಕೂರಿನ ಸಿದ್ದಗಂಗಾಮಠಕ್ಕೆ ಬರುವವರಿದ್ದಾರೆ. ಆಗ ಮತ್ತೊಂದು ಕಾರ್ಯಕ್ರಮ ಮಾಡುತ್ತೇವೆ ಎಂದು ಹೇಳಿದರು.

ಕೋವಿಡ್ ಸಂದರ್ಭದಲ್ಲಿ ಸಾವನ್ನಪ್ಪಿದ ರೈತರ ಸಾಲ ಮನ್ನಾ ಮಾಡಲು ಆಯಾಯ ಡಿಸಿಸಿ ಬ್ಯಾಂಕ್ ಗೆ ಸೂಚಿಸಿದ್ದೇವೆ. ಬ್ಯಾಂಕ್ ಲಾಭಾಂಶದಲ್ಲಿ ಕೊಡುವಂತೆ ಹೇಳಿದ್ದೇವೆ. ಸಾಲ ಪಡೆದು ಮೃತರಾದವರಿಗೆ ಕೊಡಲಾಗುತ್ತೆ ಎಂದರು.

ಅಪೆಕ್ಸ್ ಬ್ಯಾಂಕ್, ಡಿಸಿಸಿ ಬ್ಯಾಂಕ್ ವಿಲೀನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಜಾರ್ಖಂಡ್, ಕೇರಳದಲ್ಲಿ ವಿಲೀನ ಮಾಡಲಾಗಿದೆ. ನಮ್ಮಲ್ಲಿ ಒಂದು ಹಂತದ ಸಭೆ ನಡೆಸಲಾಗಿದೆ. ನಮ್ಮ ಅಕಾರಿಗಳು ಕೇರಳ, ಜಾರ್ಖಂಡ್ ಗೆ ಭೇಟಿ ನೀಡುತ್ತಾರೆ. ನಂತರ ಅಲ್ಲಿನ ಪರಿಸ್ಥಿತಿ ಬಗ್ಗೆ ವರದಿ ಕೊಡ್ತಾರೆ. ಅದನ್ನು ನೋಡಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳದ ಅಧ್ಯಕ್ಷ ಮತ್ತು ಮಾಜಿ ಸಚಿವ ಜಿ.ಟಿ.ದೇವೇಗೌಡ, ರಾಜ್ಯ ಸಹಕಾರ ಸಂಘಗಳ ನಿಬಂಧಕ ಎಸ್. ಜಿಯಾಉಲ್ಲಾ ಮತ್ತಿತರರು ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಪಾವಗಡ ಬಳಿ ಬಸ್ ಅವಘಡ ವಿಚಾರಣೆ ನಂತರ ಕ್ತಮ- ಸಿಎಂ

0

ತುಮಕೂರು ಜಿಲ್ಲೆ ಪಾವಗಡ ತಾಲೂಕಿನಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದ ಭೀಕರ ಅಪಘಾತಕ್ಕೆ ಕಾರಣವೇನು ಎಂಬುದನ್ನು ವಿಚಾರಣೆ ಮಾಡಿ ಕ್ರಮ ಕೈಗೊಳ್ಳುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.

ಯಾದಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಅಪಘಾತ ನಡೆದ ಸ್ಥಳಕ್ಕೆ ನಮ್ಮ ಅಧಿಕಾರಿಗಳು ತೆರಳಿದ್ದಾರೆ.
ಸಂಪೂರ್ಣ ಮಾಹಿತಿ ಬಂದ ನಂತರ ಮಾತನಾಡುವೆ ಎಂದರು.

ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಮತ್ತು ಎಸ್​ಪಿ ಭೇಟಿ ನೀಡಿ ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ. ಪಾವಗಡ ಸರ್ಕಾರಿ ಆಸ್ಪತ್ರೆಗೆ ಆಗಮಿಸಿದ ಕೇಂದ್ರ ಸಚಿವ ನಾರಾಯಣಸ್ವಾಮಿ, ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಶಾಸಕ ವೆಂಕಟರಮಣಪ್ಪ ಕೂಡ ಆಸ್ಪತ್ರೆಗೆ ಭೇಟಿ ನೀಡಿ ಅಗತ್ಯ ಚಿಕಿತ್ಸಾ ವ್ಯವಸ್ಥೆ ಮಾಡುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಎಸ್​ವಿಟಿ ಹೆಸರಿನ ಖಾಸಗಿ ಬಸ್​ ಅಪಘಾತಕ್ಕೀಡಾಗುತ್ತಿದ್ದಂತೆ ಚಾಲಕ ರಘು, ನಿರ್ವಾಹಕ ಮುರಳಿ ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಮೃತರ ಪೈಕಿ ಪೋತಗಾನಹಳ್ಳಿ ಅಮೂಲ್ಯ(20), ಸೂಲನಾಯಕನಹಳ್ಳಿ ಅಜಿತ್ ಕುಮಾರ್ (22), ಬೆಸ್ತರಹಳ್ಳಿ ಸನಾವುಲ್ಲಾ (18) ಹಾಗೂ ವೈ.ಎನ್.ಹೊಸಕೋಟೆಯ ಕಲ್ಯಾಣ್ ಕುಮಾರ್ (22) ಎಂದು ಗುರುತು ಸಿಕ್ಕಿದೆ. ಸಾವು-ನೋವಿನ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ನವೆಂಬರ್ ಅಂತ್ಯಕ್ಕೆ ಶಿವಮೊಗ್ಗ ವಿಮಾನನಿಲ್ದಾಣ ಲೋಕಾರ್ಪಣೆ- ಸಂಸದ ರಾಘವೇಂದ್ರ

0

ಸೋಗಾನೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ವಿಮಾನ ನಿಲ್ದಾಣ ಕಾಮಗಾರಿಗಳು ತ್ವರಿತ ಗತಿಯಲ್ಲಿ ಸಾಗುತ್ತಿದೆ. ನವೆಂಬರ್ ಅಂತ್ಯಕ್ಕೆ ಲೋಕಾರ್ಪಣೆಗೊಳ್ಳುವ ಸಾಧ್ಯತೆಯಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಅವರು ತಿಳಿಸಿದ್ದಾರೆ.

ಸೋಗಾನೆ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳೊಂದಿಗೆ ಕಾಮಗಾರಿಗಳ ಪರಿಶೀಲನೆ ನಡೆಸಿದ ಅವರು, ಸುದ್ದಿಗಾರರೊಂದಿಗೆ ಮಾತನಾಡಿದರು.

ಈಗಾಗಲೇ ವಿಮಾನ ನಿಲ್ದಾಣಕ್ಕೆ ದೇಶ-ವಿದೇಶದ ಸಂಪರ್ಕ ಕಲ್ಪಿಸಬಹುದಾದ ಸಾಧ್ಯತೆಗಳ ಕುರಿತು ಕೇಂದ್ರ ವಿಮಾನಯಾನ ಸಚಿವರಿಗೆ ಮನವಿ ಮಾಡಿಕೊಳ್ಳಲಾಗಿದೆ.
ಈ ಅವಧಿಯೊಳಗೆ ವಿಮಾನ ನಿಲ್ದಾಣಕ್ಕೆ ಅಗತ್ಯವಾಗಿರುವ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸುವ ಕಾರ್ಯವೂ ಭರದಿಂದ ಸಾಗಿದೆ. ಅಲ್ಲದೆ ಟರ್ಮಿನಲ್ ಕಟ್ಟಡ ಮತ್ತಿತರ ಸೌಲಭ್ಯಗಳೂ ಪೂರ್ಣಗೊಳ್ಳಬೇಕಾದರೆ ಎಂದರು.

ನಿಲ್ದಾಣಕ್ಕೆ ಎಲ್ಲಾ ರೀತಿಯ ಸಂಪರ್ಕ ಸೌಲಭ್ಯ ಹಾಗೂ ಸಂಬಂಧಪಟ್ಟ ಇಲಾಖೆಗಳಿಂದ ಪರವಾನಗಿ ಪಡೆಯಬೇಕಾಗುತ್ತದೆ. ಅದಕ್ಕಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಈಗಾಗಲೇ ಮನವಿ ಮಾಡಿಕೊಳ್ಳಲಾಗಿದೆ. ಈ ವಿಮಾನ ನಿಲ್ದಾಣವನ್ನು ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ಅವರಿಗೆ ವಹಿಸಿಕೊಳ್ಳುವಂತೆ ಕೋರಲಾಗಿದೆ. ಇದರಿಂದಾಗಿ ಇಲಾಖೆಗಳ ಪರವಾನಗಿ ಪಡೆಯುವ ಹಾಗೂ ಇತರೆ ವಿಮಾನ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುವ ಕೆಲಸವನ್ನು ಸಂಸ್ಥೆಯು ನಿರ್ವಹಿಸಲಿದೆ ಎಂದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ನರಮೇಧಯಾಗವೇ?

0

ನಾವು ಪೌರಾಣಿಕ ಉಲ್ಲೇಖಗಳಲ್ಲಿ
ಅಶ್ವಮೇಧಯಾಗದ ಬಗ್ಗೆ ಕೇಳಿದ್ದೇವೆ.ಓದಿದ್ದೇವೆ.ಈಗ ಆಧುನಿಕ
ಜಗತ್ತಿನಲ್ಲಿದ್ದೇವೆ. ಮಾಧ್ಯಮ ವರದಿ
ಗಳಲ್ಲಿ ನರಮೇಧದ ಬಗ್ಗೆ ಮಾಧ್ಯಮಗಳಲ್ಲಿ ನೋಡುತ್ತಿದ್ದೇವೆ. ಕೇಳುತ್ತಿದ್ದೇವೆ ಓದುತ್ತಲೂ ಇದ್ದೇವೆ.

ನಮ್ಮ ಪತ್ರಿಕೆಯೊಂದರಲ್ಲಿ ಶೀರ್ಷಿಕೆ.
“ಉಕ್ರೇನ್ ನಗರಗಳಲ್ಲಿ ನಿಲ್ಲದ ನರಮೇಧ” ಓದಿ ಹೇಸಿಗೆಯಾಯಿತು.
ಮುಂದುವರೆದ ರಾಷ್ಟ್ರಗಳೂ ಕೂಡ
ಮನುಷ್ಯರ ಮೇಲೆ ದಾಳಿ ಮಾಡಿ
ಸಾಯಿಸುತ್ತಿರುವ ದಾರುಣ ಘಟನೆ
ಯಾರಿಗೂ ಏನೂ ಎಚ್ಚರಿಸುತ್ತಿಲ್ಲವೆ ? ಎಂಬ ಪ್ರಶ್ನೆ ಕಾಡಿತು.

ಆಸ್ಪತ್ರೆ ,ಶಾಲೆ,ಅನಾಥಾಶ್ರಮ,ವಸತಿ ಕಟ್ಟಡಗಳು ಇವುಗಳ ಮೇಲೆ ರಷ್ಯ
ಬಾಂಬ್, ಶೆಲ್ ದಾಳಿಮಾಡುತ್ತಿದೆ.
ಸುಮ್ಮನೆ ಮುಗ್ಧ ಜನ,ಹಸುಳೆಗಳ ಪ್ರಾಣಹರಣವಾಗುತ್ತಿದೆ.ಇದು ಯಾವ ದೇವರಿಗೆ ಪ್ರೀತಿ?

ಅಂತಾರಾಷ್ಟ್ರೀಯ ಕೋರ್ಟ್
ಈಗಾಗಲೇ ಯುದ್ಧ ನಿಲ್ಲಿಸಲು
ರಷ್ಯ ಅಧ್ಯಕ್ಷ ಪುಟಿನ್ ಗೆ ಸೂಚಿಸಿದೆ.
ಆದರೆ ಜಾಣ ಕಿವುಡುತನ ತೋರಿಸುವ ಪುಟಿನ್ ಮಹದಾಶಯ ಏನು ಅರ್ಥವಾಗುತ್ತಿಲ್ಲ.

ಸರಿ, ಉಕ್ರೇನ್ ನ್ಯಾಟೋ ಸಂಘಟನೆ
ಸೇರುವುದಿಲ್ಲ. ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಒಪ್ಪಿದಾಗ
ರಷ್ಯ ಸುಮ್ಮನಾಗಬೇಕಿತ್ತು.
ಆದರೆ ಹಾಗಾಗಲಿಲ್ಲ.

ಕ್ರಿಮಿಯ ಪ್ರದೇಶವನ್ನ ರಷ್ಯ ವಶ ಪಡೆದಿದೆ ಉಕ್ರೇನ್ ಪ್ರತಿರೋಧ ಒಡ್ಡಿತು.ಸೋತಿತು. ಈಗ ಕ್ರಿಮಿಯ ರಷ್ಯದ ಕೈವಶ. ಈಗ ಅದರ ವರಸೆ ಏನೆಂದು ಗೊತ್ತಾಗುತ್ತಲೇ ಇಲ್ಲ.
ಒಂದು ಕಡೆ ಸಂಧಾನ ಮಾತುಕತೆ.
ಇನ್ನೊಂದೆಡೆ ನಿಲ್ಲದ ಯುದ್ಧ.
ಸಂಧಾನ ಮುಗಿಯುವವರೆಗಾದರೂ
ತಾಳ್ಮೆ ಬೇಡವೆ?.

ರಷ್ಯದ ಸೈನ್ಯ ಉಕ್ರೇನ್ ನಲ್ಲಿ‌‌ ಇರಬೇಕಂತೆ.ಇದು ರಷ್ಯದ ಹಠ.
ಉಕ್ರೇನ್ ಸುತರಾಂ ಒಪ್ಪಲಿಲ್ಲ.
ಈ ನಡುವೆ ಎರಡೂ ದೇಶಗಳು
ಜೀವ ಆಸ್ತಿ ಹಾನಿ ಮಾಡಿಕೊಳ್ಳುತ್ತಿವೆ.
ಹೆಚ್ಚಿನ ಹಾನಿ ಉಕ್ರೇನಿಗೆ.
ಆದರೆ ಅದು ತಾನು ರಷ್ಯಕ್ಕೆ ಹಾನಿಗೊಳಿಸಿದ ಮಾಹಿತಿ ನೀಡಿದೆ.

ಉಕ್ರೇನ್ ಸೇನೆ ನೀಡಿರುವ ಮಾಹಿತಿ ಪ್ರಕಾರ ಈವರೆಗೆ ರಷ್ಯಾದ 14,200 ಸೈನಿಕರು, 93 ಯುದ್ಧ ವಿಮಾನ, 112 ಹೆಲಿಕಾಪ್ಟರ್, 450 ಟ್ಯಾಂಕ್, 205 ಮಿಲಿಟರಿ ಶಸ್ತ್ರಸಜ್ಜಿತ ವಾಹನ, 1,448 ಯುದ್ದೋಪಕರಣ ಸಾಗಾಟ ವಾಹನ, 72 ಎಮ್‍ಎಲ್‍ಆರ್‌ಎಸ್, 3 ಬೋಟ್, 879 ವಾಹನ, 60 ಇಂಧನ ಟ್ಯಾಂಕರ್, 12 ಡ್ರೋನ್‍ಗಳನ್ನು ಹೊಡೆದು ಭಸ್ಮ ಮಾಡಿರುವುದಾಗಿ ಮಾಹಿತಿಯೊಂದನ್ನು ಸ್ಥಳೀಯ ಮಾಧ್ಯಮಗಳು ವರದಿಮಾಡಿವೆ.

ಆದರೆ ಸ್ವತಃ ಉಕ್ರೇನ್ ಹೊಂದಿರುವ ಹಾನಿಯ ಪಟ್ಟಿ ಸರಿಯಾದ ವಿವರಗಳೊಂದಿಗೆ ಬಿಡುಗಡೆಯಾಗಿಲ್ಲ. ಜೀವನಾಶವೇ ಅಲ್ಲದೇ ಕಟ್ಟಡಗಳ ಧ್ವಂಸ ಬಹಳ ಜಾಸ್ತಿ . ಅಲ್ಲದೇ ಹಿಂಸೆಯಾಗಿರುವುದು ಉಕ್ರೇನಿಗೆ
ಎಂಬುದರಲ್ಲಿ ಎರಡು ಮಾತಿಲ್ಲ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಪ್ರಧಾನಿ ಹೊಳಲೂರು ಭೇಟಿ ರದ್ದು?

0

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹೊಳಲೂರು ಗ್ರಾಮ ಪಂಚಾಯಿತಿ ಭೇಟಿ ರದ್ದಾಗಿದೆ. ಅದೇ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಗಮಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಏಪ್ರೀಲ್ 24ರಂದು ಮೋದಿ ಅವರು ಹೊಳಲೂರು ಪಂಚಾಯಿತಿಗೆ ಭೇಟಿ ನೀಡಬೇಕಿತ್ತು. ಆದರೆ ಅದೇ ದಿನ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳುವುದು ನಿಶ್ಚಯವಾಗಿದೆ.
ಹೀಗಾಗಿ ಬರುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

ಪ್ರಧಾನಿ ಆಗಮನಕ್ಕಾಗಿ ಈಗಾಗಲೇ ಎಲ್ಲಾ ಸಿದ್ಧತೆಗಳನ್ನು ಹೊಳಲೂರಿನಲ್ಲಿ ಮಾಡಿಕೊಳ್ಳಲಾಗುತ್ತಿದೆ. ಕಾರ್ಯಕ್ರಮಕ್ಕಾಗಿ 15 ಎಕರೆಯಷ್ಟು ಜಾಗದಲ್ಲಿ ವೇದಿಕೆ ಇತ್ಯಾದಿಗಳನ್ನು ಮಾಡುವ ಯೋಜನೆ ಕೂಡ ರೂಪಿಸಲಾಗಿತ್ತು.

ಗ್ರಾಮದ ರಸ್ತೆ, ಅಂಗನವಾಡಿ, ಆಸ್ಪತ್ರೆ, ಗ್ರಂಥಾಲಯ, ಪಂಚಾಯಿತಿ ಕಚೇರಿ ಎಲ್ಲವನ್ನೂ ಅಭಿವೃದ್ಧಿಪಡಿಸಲಾಗುತ್ತಿದೆ. ಇದುವರೆಗೆ ಮೋದಿ ಭೇಟಿ ರದ್ದಾಗಿರುವ ಬಗ್ಗೆ ಅಧಿಕೃತವಾಗಿ ಜಿಲ್ಲಾಡಳಿತದಿಂದ ಮಾಹಿತಿ ಲಭ್ಯವಾಗಿಲ್ಲ.