Sunday, February 22, 2026
Sunday, February 22, 2026
Home Blog Page 1661

ರಷ್ಯದ ಮಾನವೀಯ ಭರವಸೆಗಳನ್ನುನಂಬಲಸಾಧ್ಯ- ಝೆಲೆನ್ಸ್ಕಿ

0

ಮಾರಿಯು ಪೋಲ್‌ಗೆ ಶರಣಾಗುವಂತೆ ಮಾಸ್ಕೋದ ಎಚ್ಚರಿಕೆಯ ನಡುವೆ ಉಕ್ರೇನ್ ರಷ್ಯಾಕ್ಕೆ ತಲೆಬಾಗಲು ನಿರಾಕರಿಸಿದೆ. ಇದರ ಬಳಿಕ ಎರಡೂ ರಾಷ್ಟ್ರಗಳ ಮಧ್ಯೆ ಮಾತುಕತೆ ನಡೆಯದಿದ್ದರೆ ಅದು ಮೂರನೇ ಮಹಾಯುದ್ಧಕ್ಕೆ ಆಹ್ವಾನ ನೀಡಿದಂತೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮತ್ತೊಮ್ಮೆ ಜಗತ್ತಿಗೆ ತಿಳಿಸಿದ್ದಾರೆ.

ಮಾಸ್ಕೋ ಸೋಮವಾರ 5 ಗಂಟೆಗೆ ಮಾರಿಯುಪೋಲ್ ನಗರವನ್ನು ತೊರೆಯಬೇಕೆಂಬ ರಷ್ಯಾದ ಬೇಡಿಕೆಯನ್ನು ಉಕ್ರೇನ್ ಉಪ ಪ್ರಧಾನಿ ತಿರಸ್ಕರಿಸಿದ್ದಾರೆ. ಯಾವುದೇ ಶರಣಾಗತಿಯ ಪ್ರಶ್ನೆಯೇ ಇಲ್ಲ ಎಂದು ಅವರು ತಿರುಗೇಟು ನೀಡಿದ್ದಾರೆ. ರಷ್ಯಾದ ರಕ್ಷಣಾ ಸಚಿವಾಲಯವು ಮಾರಿಯುಪೋಲ್ ಶರಣಾಗತಿಗೆ ಬದಲಾಗಿ ಮಾನವೀಯ ಕಾರಿಡಾರ್ ತೆರೆಯಲು ಮುಂದಾಗಿದೆ ಎಂದು ಬಿಬಿಸಿ ಹೇಳಿದೆ.

ಇದಕ್ಕೂ ಮೊದಲು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ, ರಷ್ಯಾ ಮಾರಿಯುಪೋಲ್ ನಲ್ಲಿ ಯುದ್ಧ ಅಪರಾಧಗಳನ್ನು ಎಸಗಿದ್ದಾರೆ ಎಂದು ಆರೋಪಿಸಿದರು. ಉಕ್ರೇನ್ ಮೇಲಿನ ಆಕ್ರಮಣವನ್ನು ಅಂತ್ಯಗೊಳಿಸಲು ಮಾತುಕತೆ ನಡೆಸಲು ರಷ್ಯಾ ವಿಫಲವಾದರೆ ಮೂರನೆಯ ಮಹಾಯುದ್ಧಕ್ಕೆ ನೀಡಿದ ಆಹ್ವಾನ ಎಂಬ ಅರ್ಥ ನೀಡುತ್ತದೆ ಎಂದು ಝೆಲೆನ್ಸ್ಕಿ ಹೇಳಿದ್ದಾರೆ.

ಸಿಎನ್‌ಎನ್‌ನೊಂದಿಗೆ ಮಾತನಾಡಿದ ಝೆಲೆನ್ಸ್ಕಿ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ನೇರ ಮಾತುಕತೆಗೆ ಮುಕ್ತರಾಗಿದ್ದೇವೆ. ಹೋರಾಟವನ್ನು ಕೊನೆಗೊಳಿಸಲು ಮಾತುಕತೆಯೊಂದೇ ದಾರಿ. ಮಾತುಕತೆಯನ್ನು ಸಾಧ್ಯವಾಗಿಸಲು ನಾವು ಯಾವುದೇ ವಿಧಾನವನ್ನಾದರೂ ಬಳಸಬೇಕು. ಆದಾಗ್ಯೂ ರಷ್ಯಾ ವಶಕ್ಕೆ ಪಡೆದಿರುವ ಹಾಗೂ ಸ್ವತಂತ್ರವೆಂದು ಗುರುತಿಸಿರುವ ಪ್ರದೇಶಗಳಿಗೆ ಸಂಬಂಧಿಸಿದ ಯಾವುದೇ ಒಪ್ಪಂದವನ್ನು ತಿರಸ್ಕರಿಸುವುದಾಗಿ ಝೆಲೆನ್ಸ್ಕಿ ತಿಳಿಸಿದ್ದಾರೆ.

ದೇಶವು ನ್ಯಾಟೋ ಸದಸ್ಯರಾಗಿದ್ದಲ್ಲಿ ಯುದ್ಧವು ಪ್ರಾರಂಭವಾಗುತ್ತಿರಲಿಲ್ಲ ಎಂದು ಇದೇ ವೇಳೆ ಹೇಳಿದ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ, ನ್ಯಾಟೋ ಸದಸ್ಯರು ಮೈತ್ರಿಯಲ್ಲಿ ನಮ್ಮನ್ನು ಸೇರಲು ಸಿದ್ಧರಿದ್ದರೆ, ತಕ್ಷಣವೇ ಇದನ್ನು ಸಾಧ್ಯವಾಗಿಸಿ. ಏಕೆಂದರೆ ಜನರು ಪ್ರತಿದಿನ ಸಾಯುತ್ತಿದ್ದಾರೆ ಎಂದು ಹೇಳಿದ್ದಾರೆ.

ಮಾರಿಯುಪೋಲ್‌ನ ಮೇಯರ್‌ನ ಸಲಹೆಗಾರರಾದ ಪಯೋಟರ್ ಆಂಡ್ರಿಶೆಂಕೊ, ಮಾಸ್ಕೋದ ಮಾನವೀಯ ಭರವಸೆಗಳನ್ನು ನಂಬಲು ಸಾಧ್ಯವಿಲ್ಲ. ನಮ್ಮ ನಗರವನ್ನು ರಕ್ಷಿಸಿಕೊಳ್ಳುವುದನ್ನು ನಾವು ನಿಲ್ಲಿಸುವುದಿಲ್ಲ ಎಂದು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

2023ರಿಂದ ರಾಜ್ಯದ 20 ಸಾವಿರ ಶಾಲೆಗಳಲ್ಲಿ ಎನ್ಇಪಿ ಜಾರಿ: ಬಿ.ಸಿ. ನಾಗೇಶ್

0

ರಾಜ್ಯದ 20 ಸಾವಿರ ಶಾಲೆಗಳಲ್ಲಿ ಮುಂದಿನ ವರ್ಷದಿಂದ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲಾಗುತ್ತದೆ. ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಪೋಷಕರಲ್ಲಿ ಗೊಂದಲವಿದೆ. ಅದನ್ನು ನಿವಾರಿಸುವ ಕೆಲಸ ಮಾಡುತ್ತೇವೆ.

ಮುಂದಿನ ಶೈಕ್ಷಣಿಕ ವರ್ಷದಿಂದಲೇ ರಾಜ್ಯದ 20 ಸಾವಿರ ಶಾಲೆಗಳಲ್ಲಿ ಹೊಸ ಶಿಕ್ಷಣ ನೀತಿ ಜಾರಿಗೆ ತರಲಾಗುವುದು ಎಂದು ಹೇಳಿದ್ದಾರೆ.

ಇನ್ನು ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು. ಹೀಗಾಗಿ ಮದರಸಾಗಳಲ್ಲಿ ಹೊಸ ಶಿಕ್ಷಣ ಪದ್ಧತಿ ಜಾರಿಗೆ ತರಲು ಚಿಂತನೆ ನಡೆಸಲಾಗಿದೆ. ಇನ್ನು ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆ ಸಂಬಂಧ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ತಜ್ಞರ ಜೊತೆಗೆ ಚರ್ಚೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಭಾರತದಲ್ಲಿ ಬಂಡವಾಳ ಹೂಡಿಕೆ ಮಾಡುವುದಾಗಿ ಜಪಾನ್ ಪ್ರಧಾನಿ ಘೋಷಣೆ

0

ಮುಂದಿನ ಐದು ವರ್ಷಗಳ ಅವಧಿಯಲ್ಲಿ ಭಾರತದಲ್ಲಿ 3.2 ಲಕ್ಷಕೋಟಿ ಬಂಡವಾಳ ಹೂಡಿಕೆ ಮಾಡುವುದಾಗಿ ಜಪಾನ್‌ ಪ್ರಧಾನಿ ಫುಮಿಯೊ ಕಿಶಿದಾ ಅವರು ಘೋಷಣೆ ಮಾಡಿದ್ದಾರೆ.

14 ನೇ ಇಂಡೋ-ಜಪಾನ್ ವಾರ್ಷಿಕ ಶೃಂಗಸಭೆಯಲ್ಲಿ ಭಾಗಿಯಾಗಿ ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಿದ ಜಪಾನ್ ಪ್ರಧಾನಿ ಕಿಶಿದಾ ಅವರು ಈ ವಿಚಾರ ಘೋಷಿಸಿದ್ದಾರೆ.

ಉಭಯ ದೇಶಗಳ ನಡುವಿನ ಆರ್ಥಿಕ ಮತ್ತು ಸಾಂಸ್ಕೃತಿಕ ಬಾಂಧವ್ಯವನ್ನು ಹೆಚ್ಚಿಸುವ ಮಾರ್ಗಗಳ ಕುರಿತು ಉಭಯ ನಾಯಕರು ಚರ್ಚೆ ನಡೆಸಿದರು ಎಂದು ಪ್ರಧಾನಮಂತ್ರಿ ಕಚೇರಿ ಮಾಹಿತಿ ನೀಡಿದೆ.

ಇಂದಿನ ಕ್ಷೇತ್ರದಲ್ಲಿ ಪಾಲುದಾರಿಕೆ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಹಕಾರವನ್ನು ವಿಸ್ತರಿಸುವ ಸಂಬಂಧ ಆರು ಪ್ರತ್ಯೇಕ ಒಪ್ಪಂದಗಳಿಗೆ ಉಭಯ ರಾಷ್ಟ್ರಗಳು ಈ ವೇಳೆ ಸಹಿಹಾಕಿವೆ.

ಭಾರತದಲ್ಲಿನ ಜಪಾನ್ ಕಂಪನಿಗಳಿಗೆ ಎಲ್ಲಾ ತೆರನಾದ ಸಹಕಾರ ನೀಡಲು ನಾವು ಬದ್ಧರಾಗಿದ್ದೇವೆ ಎಂದು ಪ್ರಧಾನಿ ಮೋದಿ ಅವರು ಭರವಸೆ ನೀಡಿದ್ದಾರೆ.

ಉಕ್ರೇನ್‌ ಮತ್ತು ರಷ್ಯಾ ಯುದ್ಧದ ಬಗ್ಗೆ ಪ್ರತಿಕ್ರಿಯಿಸಿದ ಕಿಷಿಡ, ಉಕ್ರೇನ್‌ ಮೇಲಿನ ರಷ್ಯಾ ಆಕ್ರಮಣ ತುಂಬಾ ಗಂಭೀರವಾದ ವಿಚಾರವಾಗಿದೆ. ರಾಷ್ತ್ರಗಳ ನಡುವಿನ ಕದನ ಅಂತಾರಾಷ್ಟ್ರೀಯ ಕಾನೂನುಗಳ ಅನ್ವಯ ಶಾಂತಿಯುವ ಪರಿಹಾರ ಕಾಣಬೇಕಾಗಿದೆ ಎಂದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಹಿಜಾಬ್ ತೀರ್ಪು ನೀಡಿದ ನ್ಯಾಯಾಧೀಶರಿಗೆ ವೈ ವರ್ಗದ ಭದ್ರತೆ: ಸಿಎಂ

0

ಹಿಜಾಬ್ ತೀರ್ಪು ನೀಡಿದ ಮೂವರು ನ್ಯಾಯಾಧೀಶರಿಗೆ ವೈ ವರ್ಗದ ಭದ್ರತೆಯನ್ನು ನೀಡಲು ನಾವು ನಿರ್ಧರಿಸಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.

ಬೆಂಗಳೂರಿನಲ್ಲಿ, ಸುದ್ದಿಗಾರರೊಂದಿಗೆ ಮಾತನಾಡಿದರು. ನ್ಯಾಯಮೂರ್ತಿಗಳಿಗೆ ಕೆಲವರು ಜೀವ ಬೆದರಿಕೆ ಹಾಕಿರುವ ಕುರಿತು ವಿಧಾನಸೌಧ ಠಾಣೆ ಯಲ್ಲಿ ದಾಖಲಾಗಿರುವ ದೂರಿನ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸುವಂತೆ ಡಿಜಿ ಮತ್ತು ಐಜಿಗೆ ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ತಿಳಿಸಿದ್ದಾರೆ.

ಹಿಜಾಬ್‌ ಇಸ್ಲಾಂನ ಅತ್ಯಗತ್ಯ ಭಾಗವಲ್ಲ ಎಂದು ತೀರ್ಪು ನೀಡಿರುವ ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿಗಳಾದ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ, ನ್ಯಾ. ಕೃಷ್ಣ ಎಸ್‌. ದೀಕ್ಷಿತ್‌, ನ್ಯಾ. ಖಾಜಿ ಜೈಬುನ್ನಿಸಾ ಅವರಿಗೆ ತಮಿಳುನಾಡಿನ ಇಸ್ಲಾಮಿಕ್‌ ಸಂಘಟನೆಯೊಂದು ಬಹಿರಂಗವಾಗಿಯೇ ಕೊಲೆ ಬೆದರಿಕೆ ಹಾಕಿದೆ.

ಮಧುರೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ತಮಿಳುನಾಡು ತೌಹೀದ್‌ ಜಮಾತ್‌ ಸಂಘಟನೆಯ ನಾಯಕ ಕೊವಾಯಿ ಆರ್‌. ರೆಹಮತುಲ್ಲಾ, ಮುಂದೊಂದು ದಿನ ಹಿಜಾಬ್‌ ತೀರ್ಪು ಕೊಟ್ಟ ಆ ನ್ಯಾಯಮೂರ್ತಿಗಳಿಗೆ ಏನಾದರೂ ಆದರೆ, ಅದಕ್ಕೆ ಅವರೇ ಹೊಣೆಗಾರರು ಹೊರತು ನಾವಲ್ಲ ಎಂದು ತಿಳಿಸಿದ್ದಾರೆ. ಹಾಗೆಯೇ ಈ ರೀತಿ ಬೆದರಿಕೆ ಹಾಕಿದ್ದಕ್ಕೆ ನಮ್ಮನ್ನು ಜೈಲಿಗೆ ಹಾಕುವುದಾದರೆ ಅದನ್ನು ನಾವು ಹಿಜಾಬ್‌ಗಾಗಿ ಹೋರಾಡಿ ಜೈಲಿಗೆ ಹೋದದ್ದು ಎಂದು ಪರಿಗಣಿಸುತ್ತೇವೆ ಎಂದು ಬಸವರಾಜ್ ಬೊಮ್ಮಾಯಿ ಅವರು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ರೆಹಮತುಲ್ಲಾ, ಟಿಎನ್‌ಟಿಜೆ ಮಧುರೆ ಜಿಲ್ಲಾ ನಾಯಕ ಅಸಾನ್‌ ಬಾತ್‌ಶಾ ಹಾಗೂ ಉಪ ಕಾರ್ಯದರ್ಶಿ ಹಬೀಬುಲ್ಲಾ ವಿರುದ್ಧ ಐಪಿಸಿಯ 5 ಸೆಕ್ಷನ್‌ಗಳ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸದ್ಯ ಮೂವರೂ ತಲೆಮರೆಸಿಕೊಂಡಿದ್ದಾರೆ. ಅವರಿಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಅಕ್ರಮವಾಗಿ ಪಾಕಿಸ್ತಾನಕ್ಕೆ ಟ್ರಮಡಾಲ್ ಡ್ರಗ್ಸ್ ರವಾನೆ

0

ಟ್ರಮಡಾಲ್ ನೋವು ನಿವಾರಕ ಔಷಧಿಗಳನ್ನು ಅನಧಿಕೃತವಾಗಿ ನೆರೆಯ ಪಾಕಿಸ್ತಾನಕ್ಕೆ ರಫ್ತು ಮಾಡುತ್ತಿದ್ದ ಆರೋಪದ ಮೇರೆಗೆ ಬೆಂಗಳೂರಿನಲ್ಲಿ ನಾಲ್ವರನ್ನು ಬಂಧಿಸಲಾಗಿದೆ.

ಬೆಂಗಳೂರು ವಲಯದ ಮಾದಕ ವಸ್ತು ನಿಯಂತ್ರಣ ದಳ ಅಧಿಕಾರಿಗಳು ತೆಲಂಗಾಣ ಮೂಲದ ಲ್ಯೂಸೆಂಟ್ ಡ್ರಗ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ನಿರ್ದೇಶಕ, ಉದ್ಯಮಿ ಸೇರಿದಂತೆ ನಾಲ್ವರನ್ನು ಬೆಂಗಳೂರಿನಲ್ಲಿ ತಮ್ಮ ವಶಕ್ಕೆ ಪಡೆದಿದ್ದಾರೆ. ತೆಲಂಗಾಣದಲ್ಲಿರುವ ಈ ಕಂಪನಿಯು ಯಾವುದೇ ಪರವಾನಗಿ ಇಲ್ಲದೆ ಪಾಕಿಸ್ತಾನಕ್ಕೆ ವಾರ್ಷಿಕವಾಗಿ 25 ಸಾವಿರ ಕೆ‌ಜಿ ಟ್ರಮಡಾಲ್ ಡ್ರಗ್ ರಫ್ತು ಮಾಡುತ್ತಿತ್ತು. ಡೆನ್ಮಾರ್ಕ್, ಜರ್ಮನಿ, ಮಲೇಷ್ಯಾಗೂ ಈ ಔಷಧಿಯನ್ನು ರಫ್ತು ಮಾಡುತ್ತಿತ್ತು. ಹೀಗಾಗಿ ಈ ಸಂಬಂಧ ದಾಖಲಾಗಿದ್ದ ದೂರಿನ ಮೇರೆಗೆ ದಾಳಿ ನಡೆಸಿದ ಎನ್ ಸಿಬಿ ಅಧಿಕಾರಿಗಳು ಫಾರ್ಮಾ ಮುಖ್ಯಸ್ಥ ಸೇರಿ ನಾಲ್ವರನ್ನು ಬಂಧಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಹಿಂದೂ ಸ್ನೇಹಿತನಿಗೆ ಒಂದು ಕಿಡ್ನಿ ನೀಡಲು ಮುಂದಾದ ಮುಸ್ಲಿಂ ಗೆಳೆಯ

0

ಹಿಂದೂ ಮತ್ತು ಮುಸ್ಲಿಂ ನಡುವೆ ಸಾಮರಸ್ಯವನ್ನು ಹದಗೆಡಿಸಲು ಕೆಲ ಶಕ್ತಿಗಳು ಪ್ರಯತ್ನಿಸುತ್ತಲೇ ಇರುವುದು ಗುಟ್ಟಾಗೇನೂ ಉಳಿದಿಲ್ಲ. ಇದರ ನಡುವೆಯೇ ಎಷ್ಟೋ ಕಡೆಗಳಲ್ಲಿ ಎರಡೂ ಧರ್ಮಿಯರು ಒಟ್ಟಾಗಿ ಹಬ್ಬಗಳನ್ನು ಆಚರಿಸುತ್ತದೆ. ಧಾರ್ಮಿಕ ವಿಧಿ ವಿಧಾನ ನೆರವೇರಿಸುವುದು ನಡೆದೇ ಇದೆ.

ಎರಡೂ ಧರ್ಮಿಯರ ನಡುವೆ ಭಾತೃತ್ವ ಸಾರುವ ಕೆಲ ಘಟನೆಗಳೂ ನಡೆಯುತ್ತಿದ್ದು, ಇದು ಕೂಡ ಅಂಥದ್ದೇ ಒಂದು ಘಟನೆ.

ಪಶ್ಚಿಮ ಬಂಗಾಳದ ಉತ್ತರ ದಿನಾಜ್‌ಪುರದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಹಿಂದೂ ಸ್ನೇಹಿತನಿಗೆ ತಮ್ಮ ಒಂದು ಮೂತ್ರಪಿಂಡವನ್ನು ದಾನ ಮಾಡಲು ಮುಂದಾಗಿದ್ದಾರೆ. ಇದೀಗ ಬಹಳ ಸುದ್ದಿಯಾಗುತ್ತಿದೆ. ಹಸ್ಲು ಮೊಹಮ್ಮದ್ ಎನ್ನುವವರು ಸ್ನೇಹಿತ ಅಚಿಂತ್ಯ ಬಿಸ್ವಾಸ್ ಎಂಬುವರಿಗೆ ಕಿಡ್ನಿ ದಾನಕ್ಕೆ ಮುಂದಾಗಿದ್ದಾರೆ.

ಇಬ್ಬರೂ 6 ವರ್ಷಗಳಿಂದ ಗೆಳೆಯರಾಗಿದ್ದರು. ಒಬ್ಬರ ಕಷ್ಟ ಸುಖದಲ್ಲಿ ಮತ್ತೊಬ್ಬರು ಭಾಗಿಯಾಗುತ್ತಿದ್ದಾರೆ. ಇವರಿಬ್ಬರೂ ಹಣಕಾಸು ಕಂಪನಿಯ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ.ಎರಡು ವರ್ಷಗಳ ಹಿಂದೆ ಹಸ್ಲು ಮೊಹಮ್ಮದ್ ಅಲ್ಲಿಂದ ಕೆಲಸ ಬಿಟ್ಟು, ತಮ್ಮದೇ ಆದ ಸ್ವಂತ ಉದ್ಯಮ ಆರಂಭಿಸಿದ್ದರೂ ಸ್ನೇಹ ಮಾತ್ರ ಮುಂದುವರೆದಿದೆ.

ಕೆಲ ದಿನಗಳ ಹಿಂದೆ ಅಚಿಂತ್ಯ ಅವರಿಗೆ ಕಿಡ್ನಿ ಸಮಸ್ಯೆ ಆಗಿತ್ತು. ತಕ್ಷಣವೇ ಕಿಡ್ನಿ ಕಸಿ ಅಗತ್ಯವಿದೆ ಅಂತ ವೈದ್ಯರು ಹೇಳಿದ್ದರು. ಆದರೆ ದಾನಿಗಳನ್ನು ಹುಡುಕುವಷ್ಟು ಸಮಯ ಮತ್ತ ಹಣ ಅವರ ಬಳಿ ಇರಲಿಲ್ಲ. ಈ ವಿಚಾರ ಹಸ್ಲು ಮೊಹಮ್ಮದ್ ಅವರಿಗೆ ಗೊತ್ತಾದದ್ದೇ ತಡ, ತಮ್ಮ ಕಿಡ್ನಿ ನೀಡುವುದಾಗಿ ಹೇಳಿದ್ದಾರೆ. ವ್ಯಕ್ತಿಯ ದೇಹದಲ್ಲಿ ಇರುವ ಎರಡು ಮೂತ್ರಪಿಂಡಗಳ ಪೈಕಿ ಒಂದನ್ನು ದಾನ ಮಾಡಬಹುದು. ಇದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ನಗುತ್ತಲೇ ಹೇಳುವ ಹಸ್ಲು ಮೊಹಮ್ಮದ್, ತಮ್ಮ ಒಂದು ಕಿಡ್ನಿಯಿಂದ ಸ್ನೇಹಿತನ ಜೀವ ಉಳಿದರೆ ಅದಕ್ಕಿಂತ ದೊಡ್ಡ ಭಾಗ್ಯ ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ. ನಮ್ಮ ಧರ್ಮ ಬೇರೆ ಬೇರೆ ಇರಬಹುದು, ಆದರೆ ನಮ್ಮಿಬ್ಬರ ರಕ್ತದ ಗುಂಪು ಒಂದೇ’ ಎಂದಿದ್ದಾರೆ.

ಇನ್ನು ಅಂಗಾಂಗ ದಾನಕ್ಕೆ ಅವಕಾಶ ನೀಡುವಂತೆ ಕೋರಿ ಹಸ್ಲು ಮೊಹಮ್ಮದ್ ಅವರು ಇತ್ತೀಚೆಗೆ ರಾಜ್ಯ ಆರೋಗ್ಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದಾರೆ. ಕೆಲವೊಂದು ನಿಯಮ ಪಾಲನೆ ಮಾಡಬೇಕಿರುವ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಆರೋಗ್ಯ ಇಲಾಖೆಗೆ ವರದಿ ಕಳುಹಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಸರ್ಕಾರದ ಯೋಜನೆಗಳು ರೈತರ ಮನೆ ಬಾಗಿಲಿಗೆ ತಲುಪಲಿ- ಆರ್.ಅಶೋಕ್

0

ರಾಜ್ಯದಲ್ಲಿನ ರೈತರು ಸ್ವಾವಲಂಬಿಯಾಗಿ ಜೀವನ ನಡೆಸುವಂತಾಗಬೇಕು. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಯೋಜನೆಗಳನ್ನು ರೈತನ ಮನೆ ಬಾಗಿಲಿಗೆ ಕೊಂಡೊಯ್ಯವ ಮೂಲಕ ರಾಜ್ಯದಲ್ಲಿ ಹೊಸತನ ಆರಂಭಿಸಿದೆ ಎಂದು ಕಂದಾಯ ಸಚಿವ ಆರ್.ಆಶೋಕ ಅವರು ತಿಳಿಸಿದರು.

ದೇವತ್ಕಲ್ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿ ನಡೆ- ಹಳ್ಳಿ ಕಡೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ನೆಲಕ್ಕೆ ನೀರು ಕೊಡಲು ನಾವೆಲ್ಲ ಬಂದಿದ್ದೇವೆ. ಜಿಲ್ಲಾಧಿಕಾರಿ ತಹಶೀಲ್ದಾರ್‌ ಕಚೇರಿಗೆ ಜನರು ಅಲೆದಾಡುವುದು ಬ್ರಿಟಿಷರ ಕಾಲದ ಪದ್ಧತಿಯಾಗಿತ್ತು. ಆದರೆ, ನಮ್ಮ ಸರ್ಕಾರ ಬಂದ ಮೇಲೆ ಜನರ ಬಳಿಗೆಯೇ ಜಿಲ್ಲಾಧಿಕಾರಿ ಕಳಿಸುವ ಮೂಲಕ ಜನರ ಕಷ್ಟ ಸುಖ ಅರಿಯಲು ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ಪ್ರಾರಂಭಿಸಿದ್ದೇವೆ.

ಇದರಿಂದ ಸಾರ್ವಜನಿಕರ ಸಂಕಷ್ಟ ತಿಳಿಯಲು ಸರಕಾರಿಯಾಗಿದೆ. ಪರಿಣಾಮ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಜನರ ಮನೆ ಬಾಗಿಲಿಗೆ ಹೋಗುತ್ತಿದ್ದಾರೆ ಎಂದರು.

ರಾಜ್ಯದ 60 ಲಕ್ಷ ರೈತರಿಗೆ ಅನುಕೂಲ ಒದಗಿಸುವ ನಿಟ್ಟಿನಲ್ಲಿ ರೈತರ ದಾಖಲಾತಿಗಳನ್ನು ರೈತರ ಮನೆ ಬಾಗಿಲಿಗೆ ಮುಟ್ಟಿಸುವ ಕೆಲಸ ಮಾಡಲಾಗುತ್ತಿದೆ. ಅಲ್ಲದೇ ಇನಾಂ ಭೂಮಿಯನ್ನು ಉಳುವ ರೈತರಿಗೆ ನೀಡುವಂತಾಗಲು ಅದರ ಅರ್ಜಿ ಸಲ್ಲಿಕೆ ಅವಧಿಯನ್ನು ಇನ್ನೂ ಒಂದು ವರ್ಷ ವಿಸ್ತರಣೆ ಮಾಡುತ್ತಿರುವುದಾಗಿ ಪ್ರಕಟಿಸಿದರು.

ರಾಜ್ಯದಲ್ಲಿರುವ ನಮ್ಮ ಸರ್ಕಾರ ಬಡವರ, ರೈತರ ಪರವಾಗಿರುವ ಸರ್ಕಾವಾಗಿದ್ದು, ಬದುಕಿಗೆ ಭರವಸೆ ತರುವ ಸರ್ಕಾರವಾಗಿದೆ ಎಂದು ಹೇಳಿದರು.

ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ ಮಾತನಾಡಿ, ರಾಜ್ಯ ಸರ್ಕಾರ ಕೇಂದ್ರ ಸರ್ಕಾರದೊಂದಿಗೆ ಸಮನ್ವಯತೆ ಕಾಯ್ದಕೊಂಡು ರಾಜ್ಯಕ್ಕೆ ಹೆಚ್ಚಿನ ಅನುದಾನ ತರುವಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಅದರಲ್ಲಿಯೂ ನಿರಾವರಿ ಯೋಜನೆಯನ್ನು ಜಾರಿಗೊಳಿಸವಲ್ಲಿ ಹೆಚ್ಚು ಸಕ್ರಿಯವಾಗಿದೆ. ಆದರೆ, ಕೇಂದ್ರ ಸರ್ಕಾರದ ಸಹಯೋಗದಲ್ಲಿ ಅಳವಡಿಸಲಾಗುತ್ತಿರುವ ಗೇಟ್‌ಗಳ ಅವಳವಡಿಕೆ ಕೆಲಸ ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ ಎಂದು ಕೇಂದ್ರ ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಸೈನಿಕ ಶಾಲೆ ಆರಂಭಿಸಲು ಶಾಸಕ ರಾಜೂಗೌಡ ಅವರು ಸ್ಥಳ ಗುರುತಿಸಿದ್ದು, ರಾಜ್ಯ ಸರ್ಕಾರ ಅಗತ್ಯ ದಾಖಲಾತಿಗಳೊಂದಿಗೆ ಕೇಂದ್ರ ಸರ್ಕಾರಕ್ಕೆ ಕಳಿಸಿಕೊಡುವಂತೆ ಹೇಳಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ರಷ್ಯಾ ಅಧ್ಯಕ್ಷ ಪುಟೀನ್ ಗೆ ಪ್ರಾಣ ಭೀತಿ

0

ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗೆ ಸ್ವತಃ ಪ್ರಾಣಭೀತಿ ಎದುರಾಗಿದೆ.

ಇದೇ ಕಾರಣಕ್ಕೆ ಅವರು ಕಳೆದ ಒಂದು ತಿಂಗಳ ಅವಧಿಯಲ್ಲಿ ಬರೊಬ್ಬರಿ 1 ಸಾವಿರ ವೈಯುಕ್ತಿಕ ಸಿಬ್ಬಂದಿಗಳನ್ನು ಬದಲಿಸಿದ್ದಾರೆ ಎಂದು ಹೇಳಲಾಗಿದೆ.

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ 1,000 ಸಿಬ್ಬಂದಿಯನ್ನು ವಜಾ ಮಾಡಿದ್ದಾರೆ. ಅಡುಗೆ ಸಿಬ್ಬಂದಿ, ಭದ್ರತಾ ಸಿಬ್ಬಂದಿ, ಖಾಸಗಿ ಕಾರ್ಯದರ್ಶಿಗಳು ಹೀಗೆ ಸುಮಾರು 1000 ಜನರನ್ನು ವಜಾ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ರಷ್ಯಾದ ಗುಪ್ತಚರ ವರದಿಗಳ ಪ್ರಕಾರ ಪುಟಿನ್ ಗೆ ತನ್ನ ಹಳೆಯ ಸಿಬ್ಬಂದಿಗಳಿಂದ ಆಹಾರದಲ್ಲಿ ವಿಷ ಸೇರಿಸಿ ತನ್ನನ್ನ ಸಾಯಿಸಲಿದ್ದಾರೆಂಬ ಭಯದಲ್ಲಿ ಬದುಕುತ್ತಿದ್ದಾರೆ ಎಂದು ರಷ್ಯಾದ ಮಾಧ್ಯಮಗಳು ವರದಿ ಮಾಡಿವೆ.

ಈ ಕಾರಣಕ್ಕಾಗಿಯೇ ಪುಟಿನ್ 1,000 ವೈಯಕ್ತಿಕ ಸಿಬ್ಬಂದಿಯನ್ನು ವಜಾಗೊಳಿಸಿದ್ದಾರೆ ಎಂದು ಹೇಳಲಾಗಿದೆ.

ರಷ್ಯಾ ಉಕ್ರೇನ್ ಮೇಲೆ ನಿರಂತರ ಬಾಂಬ್ ದಾಳಿ ನಡೆಸುತ್ತಿದೆ. ಪುಟಿನ್ ಹೊರಗೆ ಗಾಂಭೀರ್ಯತೆಯನ್ನ ತೋರುವಂತೆ ನಟಿಸುತ್ತಿದ್ದರೂ ಒಳಗೊಳಗೆ ಜೀವ ಭಯದಲ್ಲಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಸದ್ಯ ಯುದ್ಧದಿಂದ ಹೊರಬರುವುದು ಹೇಗೆ ಎಂದು ಪುಟಿನ್‌ಗೆ ತಿಳಿಯುತ್ತಿಲ್ಲ ಎಂಬ ವರದಿಗಳೂ ಕೇಳಿ ಬರುತ್ತಿವೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಶಿವಮೊಗ್ಗದಲ್ಲಿ ಮಾರ್ಚ್ 22ರಂದು ಉದ್ಯೋಗ ಮೇಳ

0

ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಶಿವಮೊಗ್ಗ ಇವರ ವತಿಯಿಂದ ಮಾ.22 ರ ಬೆಳಿಗ್ಗೆ 10 ಕ್ಕೆ ರಾಷ್ಟ್ರೀಯ ವೃತ್ತಿ ಸೇವೆ(ಎನ್‍ಸಿಎಸ್) ಯೋಜನೆಯಡಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.

ಉದ್ಯೋಗ ಮೇಳದಲ್ಲಿ ಪ್ರತಿಷ್ಟಿತ ಖಾಸಗಿ ಕಂಪೆನಿಗಳು ಭಾಗವಹಿಸಲಿದ್ದು, ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ.

ಎಸ್‍ಎಸ್‍ಎಲ್‍ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, ಯಾವುದೇ ಪದವಿ ತೇರ್ಗಡೆ ಹೊಂದಿದ 18 ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ತಮ್ಮ ಬಯೋಡೇಟಾ(ರೆಸ್ಯೂಮ್) ಮತ್ತು ಆಧಾರ್ ಕಾರ್ಡ್ ಪ್ರತಿ ತೆಗೆದುಕೊಂಡು ಸಂದರ್ಶನದಲ್ಲಿ ಭಾಗವಹಿಸಬಹುದು.

ಉದ್ಯೋಗ ಮೇಳವು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಗುತ್ಯಪ್ಪ ಕಾಲೋನಿ, ಪಂಪಾನಗರ, 2ನೇ ಕ್ರಾಸ್, ಸಾಗರ ರಸ್ತೆ, ಶಿವಮೊಗ್ಗ ಇಲ್ಲಿ ನಡೆಯಲಿದ್ದು ಪ್ರವೇಶ ಉಚಿತವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಶಿವಮೊಗ್ಗ ದೂ.ಸಂ: 08182-255293, 9535312531, 9482023412 ನ್ನು ಸಂಪರ್ಕಿಸಬಹುದೆಂದು ಉದ್ಯೋಗಾಧಿಕಾರಿ ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಗ್ರೂಪ್ ಸಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ

0

ಕರ್ನಾಟಕ ಲೋಕಸೇವಾ ಆಯೋಗದ ವತಿಯಿಂದ ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ.

ಗ್ರೂಪ್ ಸಿ ವೃಂದದ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದು, ಕಲ್ಯಾಣ ಕರ್ನಾಟಕ ಭಾಗದವರಿಗೆ 281 ಹುದ್ದೆಗಳಿವೆ.

ಉಳಿಕೆ ಮೂಲ ವೃಂದಕ್ಕೆ 129 ಹುದ್ದೆಗಳು ಸೇರಿ 410 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು ಎಂದು ತಿಳಿದು ಬಂದಿದೆ.

ಕಿರಿಯ ಅಭಿಯಂತರ(ಸಿವಿಲ್) 89, ಹಿರಿಯ ಆರೋಗ್ಯ ನಿರೀಕ್ಷಕ 57, ನೀರು ಸರಬರಾಜು ಆಪರೇಟರ್ 89, ಸಹಾಯಕ ನೀರು ಸರಬರಾಜು ಆಪರೇಟರ್ 163, ಎಲೆಕ್ಟ್ರಿಷಿಯನ್ 12 ಹುದ್ದೆಗಳಿವೆ.

ಸಿವಿಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮೋ, ಸ್ಯಾನಿಟರಿ ಹೆಲ್ತ್ ಇನ್ಸ್ಪೆಕ್ಟರ್ ಡಿಪ್ಲೋಮಾ, ಎಸ್‌ಎಸ್‌ಎಲ್ಸಿ ಜೊತೆಗೆ ಎಲೆಕ್ಟ್ರಿಕಲ್, ಫಿಟ್ಟರ್ ನಲ್ಲಿ ಐಟಿಐ ಓದಿದವರು ಅರ್ಜಿ ಸಲ್ಲಿಸಬಹುದು. ಮಾರ್ಚ್ 31 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಏಪ್ರಿಲ್ 29 ಕೊನೆಯ ದಿನವಾಗಿರುತ್ತದೆ. ಮಾಹಿತಿಗಾಗಿ kpsc.kar.nic.in ಗಮನಿಸಬಹುದಾಗಿದೆ.