Monday, February 23, 2026
Monday, February 23, 2026
Home Blog Page 1654

ಮತ್ತೆ ವಿಮಾನ ಯಾನ ಆರಂಭ

0

ಕೊರೋನಾ ಸಾಂಕ್ರಾಮಿಕದಿಂದಾಗಿ ಎರಡು ವರ್ಷಗಳ ಹಿಂದೆ ಸ್ಥಗಿತಗೊಳಿಸಲಾಗಿದ್ದ ಎಲ್ಲಾ ಅಂತಾರಾಷ್ಟ್ರೀಯ ವಿಮಾನ ಸೇವೆಯನ್ನು ಇಂದಿನಿಂದ ಪುನಾರಂಭಿಸಲಾಗುತ್ತದೆ. ದೇಶದಲ್ಲಿ ಕೊರೋನಾ ಸಾಂಕ್ರಾಮಿಕ ಗಣನೀಯವಾಗಿ ಕಡಿಮೆಯಾಗಿರುವುದರಿಂದ ಕೋವಿಡ್‌ ಪೂರ್ವದಲ್ಲಿದ್ದಂತೆ ಎಲ್ಲಾ ವಿಮಾನ ಸೇವೆಯನ್ನು ಪುನಾರಂಭಿಸಲಾಗುತ್ತದೆ ಎಂದು ವಿಮಾನಯಾನ ಸಚಿವಾಲಯ ಮಾಹಿತಿ ತಿಳಿಸಿದೆ.

ಕೋವಿಡ್‌ ಮೊದಲ ಅಲೆಯ ಸಂದರ್ಭದಲ್ಲಿ 2020ರ ಮಾ.23ರಂದು ಎಲ್ಲಾ ಅಂತಾರಾಷ್ಟ್ರೀಯ ವಿಮಾನಯಾನವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸ ಲಾಗಿತ್ತು. ಅನಂತರ 2020ರ ಜುಲೈನಲ್ಲಿ 37 ದೇಶಗಳೊಂದಿಗೆ ದ್ವಿಪಕ್ಷೀಯ ಒಪ್ಪಂದ ಮಾಡಿಕೊಂಡು ಏರ್‌ ಬಬಲ್‌ ವ್ಯವಸ್ಥೆಯಡಿ ವಿಮಾನ ಸೇವೆ ಪುನಾರಂಭಿಸಲಾಗಿತ್ತು.

ಕಳೆದ ವರ್ಷ ಡಿಸೆಂಬರ್‌ನಲ್ಲೇ ವಿಮಾನಯಾನ ಪುನಾರಂಭಿಸುವುದಾಗಿ ವಿಮಾನಯಾನ ಸಚಿವಾಲಯ ಹೇಳಿದ್ದರೂ ಕೋವಿಡ್‌ ಮೂರನೇ ಅಲೆ ಗರಿಷ್ಠ ಮಟ್ಟತಲುಪಿದ್ದರಿಂದ ಮತ್ತೊಮ್ಮೆ ಮುಂದೂಡಲಾಗಿತ್ತು.

ಈಗ ಕೊರೋನಾ ಪೂರ್ವದಲ್ಲಿದ್ದಂತೆ ಎಲ್ಲಾ ದೇಶಗಳಿಗೂ ವಿಮಾನಯಾನ ಸೇವೆ ಆರಂಭಿಸುವುದಾಗಿ ಘೋಷಣೆ ಮಾಡಿದೆ. ಆದರೆ ವಿಮಾನ ನಿಲ್ದಾಣಗಳಲ್ಲಿ ಮಾಸ್ಕ್‌ ಧರಿಸುವುದು. ಸ್ಯಾನಿಟೈಸರ್‌ ಬಳಕೆ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ದೇಶದ ಗಡಿಯೊಳಗೆ ಹಾರಾಟ ನಡೆಸುವ ವಿಮಾನಗಳಿಗೆ 2021ರ ಅ.18ರಂದು ಅನುಮತಿ ನೀಡಲಾಗಿತ್ತು.

ಇದರಿಂದ ಲಾಭವೇನು ಎಂದರೆ
ಭಾರತ ಒಪ್ಪಂದ ಮಾಡಿಕೊಂಡಿರುವ ಬಹುತೇಕ ಎಲ್ಲಾ ದೇಶಗಳಿಗೆ ಮರಳಿ ವಿಮಾನ ಸಂಚಾರ.

ಹೆಚ್ಚಿನ ವಿಮಾನ ಸಂಚಾರದ ಕಾರಣ, ಗಗನಕ್ಕೇರಿರುವ ಟಿಕೆಟ್‌ ಬೆಲೆ ಇಳಿಯುವ ಆಶಾಭಾವನೆ.

ನೇರ ಸಂಪರ್ಕ ಲಭ್ಯವಾಗುವ ಕಾರಣ, ಸುತ್ತಿಬಳಸಿ ವಿವಿಧ ದೇಶಗಳಿಗೆ ಪ್ರಯಾಣ ಬೇಕಾಗಿಲ್ಲ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಸ್ವಯಂ ಸೇವಾ ಸಂಸ್ಥೆಗಳು ಸಮುದಾಯಕ್ಕೆ ಒಳಿತು ಮಾಡುವ ಗುರಿ ಹೊಂದಬೇಕು

0

ಬೆಂಗಳೂರಿನ ಸ್ವಯಂ ಸೇವಾ ಸಂಸ್ಥೆಗಳು ಸುಳ್ಳಿನ ಮೂಟೆ ನೀಡುವ ಸಂಸ್ಥೆಗಳಾಗದೇ ಸತ್ಯದ ಹಾದಿಯಲ್ಲಿ ನಡೆದು ಜನರಿಗೆ ಒಳಿತನ್ನು ಮಾಡುವ ಕೆಲಸಗಳನ್ನು ಮಾಡಬೇಕು ಎಂದು ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಹಾಗೂ ಕಾಡು ಮಲ್ಲೇಶ್ವರ ಗೆಳೆಯರ ಬಳಗದ ಅಧ್ಯಕ್ಷ ಬಿ.ಕೆ. ಶಿವರಾಮ್ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಮಲ್ಲೇಶ್ವರಂನ ದಕ್ಷಿಣ ಮುಖ ನಂದಿ ತೀರ್ಥ ಕಲ್ಯಾಣಿ ದೇವಸ್ಥಾನದ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ನೂತನ ಸ್ವಯಂ ಸೇವಾ ಸಂಸ್ಥೆ ಭಾರತ ವಿಕಾಸ ಪ್ರತಿಷ್ಠಾನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಮಾಡುವ ಅಭಿವೃಧ್ಧಿಕಾರ್ಯಗಳು ಶಾಶ್ವತವಾಗಿರುತ್ತವೆ. ಯಾವುದೇ ಸಮಾಜ ಮುಖಿ ಕೆಲಸವನ್ನು ಮಾಡುವಾಗ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡಿ ಇಡಬೇಕು ಎಂದು ಸಲಹೆ ನೀಡಿದ್ದಾರೆ.

ಪರಭಾರೆಯಾಗುತ್ತಿದ್ದ ಮಲ್ಲೇಶ್ವರದ ದಕ್ಷಿಣ ಮುಖಿ ನಂದಿ ತೀರ್ಥ ಕಲ್ಯಾಣಿ ದೇವಾಲಯವನ್ನು ಕಾನೂನು ಸಮರದಲ್ಲಿ ಗೆದ್ದು ಸ್ಥಳೀಕರ ಸಹಾಯದಿಂದ ಅಭಿವೃದ್ಧಿ ಪಡಿಸಿದ ಕಾಡುಮಲ್ಲೇಶ್ವರ ಗೆಳೆಯರ ಬಳಗದ ಸಾಧನೆಯನ್ನು ಇದೇ ಸಂದರ್ಭದಲ್ಲಿ ಅವರು ವಿವರಿಸಿದ್ದಾರೆ.

ಜೊತೆಗೆ ಕಾಡು ಮಲ್ಲೇಶ್ವರ ದೇವಾಲಯದ ಇತಿಹಾಸವನ್ನು ಮತ್ತಷ್ಟು ಆಳಕ್ಕೆ ಇಳಿದು ಸಂಶೋಧನೆ ಮಾಡಬೇಕಾದ ಅಗತ್ಯ ಇದೆ. ಇದಕ್ಕೆ ತಮ್ಮ ಸಂಘ ಎಲ್ಲಾ ರೀತಿಯ ಸಹಕಾರ ನೀಡುವುದು ಎಂದು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಪ್ರಾಚೀನ ದೇವಾಲಯಗಳ ಪರಿಚಯ ಮತ್ತು ಸಂರಕ್ಷಣೆ ಕುರಿತು ಉಪನ್ಯಾಸ ನೀಡಿದ ದೇವಾಲಯ ಇತಿಹಾಸ ಸಂಶೋಧಕ ಕೆಂಗೇರಿ ಚಕ್ರಪಾಣಿ ಅವರು ಕರ್ನಾಟಕದ ಪ್ರಾಚೀನ ದೇವಾಲಯಗಳು ಹೇಗೆ ಆಗಿನ ಕಾಲದಲ್ಲೇ ಎಷ್ಟು ಸುವ್ಯವಸ್ಥಿತವಾಗಿದ್ದವು ಎಂಬುದನ್ನು ವಿವರಿಸಿದರು.

ದೇಗುಲಗಳು ಕೇವಲ ದೇಗುಲಗಳಾಗಿರಲ್ಲಿಲ್ಲ. ಸಾಮಾಜಿಕ ಜೀವನದಲ್ಲಿ ಸಾವಿರಾರು ಜನರಿಗೆ ಆಶ್ರಯ ನೀಡಿದ್ದವು. ಊರಿನ ಎಲ್ಲಾ ಸಾಂಸ್ಕೃತಿಕ ಚಟುವಟಿಕೆಗಳಿಗೆ ಕೇಂದ್ರ ಬಿಂದುವಾಗಿದ್ದವು ಎಂದು ಇತಿಹಾಸದ ಹಲವು ಉದಾಹರಣೆಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಇತಿಹಾಸ ಸಂಶೋಧಕ ಟಿ.ಎಸ್. ಗೋಪಾಲ್ ಮತ್ತು ಹಿರಿಯ ಪತ್ರಕರ್ತ ಸತ್ಯನಾರಾಯಣ ನಾಡಿಗ್, ನಿವೃತ್ತ ಉಪನ್ಯಾಸಕ ಡಾ. ಮಲ್ಲಿಕಾರ್ಜುನ್, ರಮೇಶ್ ಮತ್ತು ಶಬರೀಶ್ ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

8 ನೇ ತರಗತಿ ಪಾಸಾದವರಿಗೆ ಉಚಿತ ಟೈಲರಿಂಗ್ ತರಬೇತಿ

0

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೊಣ್ಣಹಳ್ಳಿಪುರ ಗ್ರಾಮದ ಕೆನರಾ ಬ್ಯಾಂಕ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ನಿರುದ್ಯೋಗಿ ಯುವಕ-ಯುವತಿಯರಿಗಾಗಿ 30 ದಿನಗಳ ಕಾಲಾವಧಿಯ ಟೈಲರಿಂಗ್ ತರಬೇತಿ ಹಮ್ಮಿಕೊಳ್ಳಲಾಗಿದೆ.

ಆಸಕ್ತ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ 18 ವರ್ಷ ಮೇಲ್ಪಟ್ಟ 45 ವರ್ಷದೊಳಗಿನವರು ಮಾರ್ಚ್ 29 ಮಂಗಳವಾರದಂದು ಬೆಳಗ್ಗೆ 9.30 ಗಂಟೆಗೆ ಕಚೇರಿಯ ಆವರಣದಲ್ಲಿ ನಡೆಯುವ ನೇರ ಸಂದರ್ಶನದಲ್ಲಿ ಅಗತ್ಯ ದಾಖಲೆಗಳೊಂದಿಗೆ ಪಾಲ್ಗೊಳ್ಳಬಹುದು, 35 ಮಂದಿಗೆ ಮಾತ್ರ ತರಬೇತಿ ನೀಡುತ್ತಿರುವುದರಿಂದ ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು. ಏಪ್ರಿಲ್ 4 ರಿಂದ ತರಬೇತಿ ಪ್ರಾರಂಭವಾಗುತ್ತಿದೆ, ತರಬೇತಿಗೆ ಬರುವಾಗ ಪಡಿತರ ಚೀಟಿ, ಆಧಾರ್ ಕಾರ್ಡ್, 3 ಪಾಸ್ ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ ಭಾಗವಹಿಸಬಹುದು.

ಶಿಬಿರಾರ್ಥಿಗಳಿಗೆ ತರಬೇತಿ ಅವಧಿಯಲ್ಲಿ ಉಚಿತವಾಗಿ ತರಬೇತಿ, ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಬೋಧನೆ ಮಾಡಿಸಲಾಗುವುದು. ತರಬೇತಿ ಪೂರ್ಣಗೊಂಡ ನಂತರ ಸಂಸ್ಥೆ ವಿತರಿಸಿದ ಪ್ರಮಾಣ ಪತ್ರ ಆಧಾರದ ಮೇಲೆ ಸಾಲ ಸೌಲಭ್ಯ ಒದಗಿಸಲಾಗುವುದು.
ವಿತರಿಸಲಾಗುತ್ತದೆ.
ಗ್ರಾಮೀಣ ಭಾಗದ ಬಿ.ಪಿ.ಎಲ್ ರೇಷನ್ ಕಾರ್ಡ್ ಹೊಂದಿರುವವರಿಗೆ ಆದ್ಯತೆ ನೀಡಲಾಗುತ್ತದೆ. ತರಬೇತಿಗೆ ಹಾಜರಾಗುವ ಅಭ್ಯರ್ಥಿ ಗಳು ಕಡ್ಡಾಯವಾಗಿ 8ನೇ ತರಗತಿ ಉತ್ತೀರ್ಣರಾಗಿರಬೇಕು. ಮತ್ತು ಸ್ಥಳೀಯ ಭಾಷೆ ಬಲ್ಲವರಾಗಿರಬೇಕು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಮುಂದಿನ ಶೈಕ್ಷಣಿಕ ವರ್ಷದಿಂದ ಪರಿಷ್ಕೃತ ಪಠ್ಯಪುಸ್ತಕ ವಿತರಣೆ

0

ರಾಜ್ಯದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದಲೇ ಪರಿಷ್ಕೃತ ಪಠ್ಯ ಪುಸ್ತಕ ವಿತರಣೆ ಮಾಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಪಠ್ಯಪುಸ್ತಕ ಪರಿಶೀಲನಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ವರದಿಯನ್ವಯ 2022-23 ನೇ ಸಾಲಿಗೆ ಪಠ್ಯಪುಸ್ತಕಗಳನ್ನು ಮುದ್ರಿಸಿ ವಿತರಣೆ ಮಾಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಸಮಿತಿಯು 1 ರಿಂದ 10 ನೇ ತರಗತಿವರೆಗಿನ ಭಾಷಾ ವಿಷಯಗಳು, 2 ಮತ್ತು 4 ನೇ ತರಗತಿಗಳ ಪರಿಸರ ಅಧ್ಯಯನ ಹಾಗೂ 6 ರಿಂದ 10 ನೇ ತರಗತಿವರೆಗಿನ ಸಮಾಜ ವಿಜ್ಞಾನ ವಿಷಯದ ಪಠ್ಯ ಪುಸ್ತಕಗಳನ್ನು ಪರಿಷ್ಕರಿಸಿದೆ.

ಇನ್ನು 6 ರಿಂದ 8 ನೇ ತರಗತಿವರೆಗಿನ ಸಮಾಜ ವಿಜ್ಞಾನದ 7 ಮಾಧ್ಯಮದ 68 ಪರಿಷ್ಕೃತ ಪಠ್ಯ ಪುಸ್ತಕಗಳು ಮತ್ತು 1 ರಿಂದ 10 ನೇ ತರಗತಿವರೆಗಿನ ಕನ್ನಡ ಭಾಷಾ ವಿಷಯದ 15 ಪರಿಷ್ಕೃತ ಪುಸ್ತಕಗಳನ್ನು ಮುದ್ರಿಸಿ ವಿತರಿಸಲಾಗುತ್ತಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ದೇಶೀಯ ಕ್ರಿಕೆಟ್ ಕ್ರೀಡಾಸಮಾರಾಧನೆ ಐಪಿಎಲ್ ಇಂದು ಆರಂಭ

0

ಇವತ್ತಿನಿಂದ ಬಹುನಿರೀಕ್ಷಿತ 15 ನೇ ಆವೃತ್ತಿಯ ಐಪಿಎಲ್ ಆರಂಭವಾಗಲಿದೆ. ಈ ಬಾರಿ 2 ತಂಡಗಳು ಹೊಸದಾಗಿ ಸೇರ್ಪಡೆಯಾಗಿದೆ.ಒಟ್ಟು 10 ತಂಡಗಳು ಟ್ರೋಫಿಗಾಗಿ ಕಾದಾಡಲಿವೆ.

ಐಪಿಎಲ್ ನ ಮೊದಲ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ನಡೆಯಲಿದೆ.

ಮುಂಬೈನ್ ವಾಂಖೇಡೆ ಕ್ರೀಡಾಂಗಣದಲ್ಲಿ ಇಂದು ಪಂದ್ಯ ನಡೆಯಲಿದೆ.

ಈ ಋತುವಿನ 2ನೇ ದಿನ ಕಳೆದ ಋತುವಿನ ರನ್ನರ್ಸ್ ಅಪ್ ದೆಹಲಿ ಕ್ಯಾಪಿಟಲ್ಸ್ ಮುಂಬೈನ ಬ್ರಬೋರ್ನ್ ಕ್ರೀಡಾಂಗಣದಲ್ಲಿ 5 ಬಾರಿ ಚಾಂಪಿಯನ್ ಮುಂಬಾ ಇಂಡಿಯನ್ಸ್ ವಿರುದ್ಧ ಮುಖಾಮುಖಿಯಾಗಲಿದೆ. ಮಾರ್ಚ್ 27ರ ಭಾನುವಾರದ ಎರಡನೇ ಪಂದ್ಯವು ಪಂಜಾಬ್ ಕಿಂಗ್ಸ್ ರಾಯಲ್ ಮತ್ತು ಚಾಲೆಂಜರ್ಸ್ ಬೆಂಗಳೂರು ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಗುಜರಾತ್ ಟೈಟನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಎಂಬ ಎರಡು ಹೊಸ ತಂಡಗಳು ಮಾರ್ಚ್ 28 ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ಪರಸ್ಪರ ಆಡುವ ಮೂಲಕ ತಮ್ಮ ಪ್ರಯಾಣವನ್ನು ಪ್ರಾರಂಭಿಸಲಿವೆ.

ಅಂತಿಮವಾಗಿ, ಮೊದಲ ಸೆಟ್ ಪಂದ್ಯಗಳು ಐಪಿಎಲ್ 2016ರ ಚಾಂಪಿಯನ್ ಸನ್ ರೈಸರ್ಸ್ ಹೈದರಾಬಾದ್ ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ ರಾಜಸ್ಥಾನ್ ರಾಯಲ್ಸ್ ಗೆ ಆತಿಥ್ಯ ವಹಿಸುವುದರೊಂದಿಗೆ ಕೊನೆಗೊಳ್ಳುತ್ತವೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ರಾಜ್ಯಕ್ಕೆ ಸೂಕ್ಮ್ಮ ನೀರಾವರಿ ಯೋಜನೆ ಎರಡನೇ ಕಂತಿನ ಅನುದಾನ‌ ಹಂಚಿಕೆ ಬಿಡುಗಡೆ

0

ಕರ್ನಾಟಕದಲ್ಲಿ ಸೂಕ್ಷ್ಮ‌ನೀರಾವರಿ ಕಾರ್ಯಕ್ರಮಗಳಿಗೆ ಹೆಚ್ಷಿನ ಬೇಡಿಕೆ ಇರುವುದನ್ನು ಗಮನಿಸಿದ ಕೇಂದ್ರ‌ಸರ್ಕಾರವು ರಾಜ್ಯದ ಬೇಡಿಕೆ ಅನುಸಾರ ಕೇಂದ್ರ ಅನುದಾನವನ್ನು ಹೆಚ್ಚಿಸಿ ಆದೇಶಿಸಿದೆ.ಅಲ್ಲದೇ ಎರಡನೇ ಕಂತಿನ ಅನುದಾನವನ್ನು ಸಹ ಬಿಡುಗಡೆ ಮಾಡಿದೆ.

2020-21ನೇ ಸಾಲಿನಲ್ಲಿ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ಪಿಎಂಕೆಎಸ್.‌ವೈ ಪಿಡಿಎಂ ಅಡಿಯಲ್ಲಿ 400 ಕೋ ರೂ .ಬಿಡುಗಡೆ ಮಾಡಿತ್ತು.

2021-22 ನೇ‌ಸಾಲಿನಲ್ಲಿ‌ ರಾಜ್ಯದಲ್ಲಿ ಸೂಕ್ಷ್ಮ‌ನೀರಾವರಿ ಕಾರ್ಯಕ್ರಮಗಳಿಗೆ ಹೆಚ್ಚಿನ‌ ಬೇಡಿಕೆ‌ ಇರುವುದರಿಂದ‌ ಕೇಂದ್ರ ಸರ್ಕಾರ ಇದೀಗ ರಾಜ್ಯದ ಮನವಿಯಂತೆ 500 ಕೋ.ರೂಗಳ ಗಳ‌ ಅನುದಾನವನ್ನು‌ ಹಂಚಿಕೆ‌ ಮಾಡಿದೆ.
ಕಳೆದ‌ಬಾರಿಗೆ ಹೋಲಿಸಿದಲ್ಲಿ ಶೇ25
ರಷ್ಟು ಹೆಚ್ಚಿನ ಕೇಂದ್ರ ದ‌ ಪಾಲಿನ ಅನುದಾನ‌ ಪಡೆಯಲಾಗಿದೆ.
ಪ್ರಸಕ್ತ‌ ಸಾಲಿನಲ್ಲಿ ಕೇಂದ್ರವು ಹಂಚಿಕೆ‌ ಮಾಡಿದ್ದ 500 ಕೋ ರೂ.ಗಳಲ್ಲಿ ಮೊದಲ‌ ಕಂತಿನ‌ ಅನುದಾನವನ್ನಾಗಿ ರಾಜ್ಯಕ್ಕೆ ರಾಜ್ಯಕ್ಕೆ 300 ಕೋಟಿ ,ರೂ.ಗಳನ್ನು ಬಿಡುಗಡೆ ಮಾಡಲಾಗಿತ್ತು. ಉಳಿದ 200 , ಕೋ ರೂ.ಗಳನ್ನು ಮಾರ್ಚ್‌‌25 ರಂದು ಅಂದರೆ‌ ,ನಿನ್ನೆ ಆದೇಶದ ಮೂಲಕ ತಿಳಿಸಲಾಗಿದೆ.

ಸದರಿ ಕಾರ್ಯಕ್ರಮವು ತೋಟಗಾರಿಕೆ, ಕೃಷಿ, ರೇಷ್ಮೆ ಮತ್ತು ಜಲಾನಯನ ಅಭಿವೃದ್ಧಿಲಾಖೆಗಳನ್ನೊಳಗೊಂಡಿರುತ್ತದೆ.ಕೇಂದ್ರ ಹಂಚಿಕೆ ಮಾಡಿದ ಅನುದಾನದಲ್ಲಿ ಶೇ.76ರಷ್ಟು ಸಾಮಾನ್ಯ ವರ್ಗಕ್ಕೆ ಶೇ.17 ರಷ್ಟು ಪರಿಶಿಷ್ಟ ಜಾತಿಗೆ ಮತ್ತು ಪರಿಶಿಷ್ಟಪಂಗಡಕ್ಕೆ ಶೇ 7 ರಷ್ಟನ್ನು ನಿಗದಿಪಡಿಸಿ ಅನುದಾನ ಬಿಡುಗಡೆ ಮಾಡಲಾಗಿರುತ್ತದೆ.ಕೇಂದ್ರದಿಂದ‌ ರಾಜ್ಯಕ್ಕೆ ಇದರ ಯೋಜನೆಯಡಿ ಹಂಚಿಕೆಯಾದ ಎರಡನೇ‌ ಕಂತಿನ ‌200 ಕೋಟಿ ರೂ.ಗಳ ಕೇಂದ್ರದ‌ ಪಾಲಿನ ಅನುದಾನದಲ್ಲಿ ಕೃಷಿ ಇಲಾಖೆಗೆ ಹಂಚಿಕೆ ಮಾಡಬಹುದಾದ ಅನುದಾನಕ್ಕನುಗುಣವಾಗಿ ರಾಜ್ಯದ ಪಾಲಿನ ಅನುದಾನವನ್ನೂ ಸೇರಿಸಿ ಲಭ್ಯವಾಗುವ ಒಟ್ಟು ಅನುದಾನಕ್ಕೆ ಜಿಲ್ಲಾವಾರು‌ ಬೇಡಿಕೆ ಅನುಸಾರ ಕ್ರಿಯಾ‌ಯೋಜನೆಯನ್ನು ನೀಡಲಾಗಿರುತ್ತದೆ.ಇದರಿಂದ ಬೇಸಿಗೆ ಹಂಗಾಮಿನ‌ ಬೆಳೆಗಳಿಗಳಿಗೆ ಸಕಾಲದಲ್ಲಿ ಸೂಕ್ಷ್ಮ‌ನೀರಾವರಿ ಘಟಕಗಳನ್ನು ವಿತರಿಸಿ ಬೆಳೆಗಳನ್ನು ಉಳಿಸಿಕೊಳ್ಳಲು ಸಹಾಯಕವಾಗುತ್ತದೆ.
ಜಿಲ್ಲೆಗಳಿಗೆ ನೀಡಿದ ಕ್ರಿಯಾಯೋಜನೆಯನ್ವಯ ಸೂಕ್ಷ್ಮನೀರಾವರಿ ಘಟಕಗಳನ್ನು ರೈತರಿಗೆ ತುರ್ತಾಗಿ ಅಂದರೆ ಮಾರ್ಚ್ 25 ರಿಂದ ವಿತರಣೆ ಆರಂಭವಾಗಿರುತ್ತದೆ.ಇದರಿಂದ ಸಂಕಷ್ಟದಲ್ಲಿರುವ ರೈತರಿಗೆ ತುರ್ತಾಗಿ ನೆರವಿಗೆ ಧಾವಿಸಲು ಕರ್ನಾಟಕಸರ್ಕಾರ ಕ್ರಮ ಕೈಗೊಂಡಿರುತ್ತದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಗಾರೆ ಕೆಲಸಗಾರ,14 ಚಿನ್ನದ ಪದಕ ಗೆದ್ದ ಧೀರ

0

ಗಾರೆ ಕೆಲಸ ಮಾಡುವ ಕೈಗಳು ಚಿನ್ನದ ಪದಕಗಳನ್ನ ಬಾಚಿದವು ಎಂದರೆ ಸಾಮಾನ್ಯವೇನಲ್ಲ.
ಕೈ ಕೆಸರಾದರೆ ಬಾಯಿಗೆ ಮೊಸರು ಎಂಬ ನಮ್ಮ ಹಿರಿಯರ ಮಾತು ಸುಳ್ಳಲ್ಲ.
ವಿದ್ಯಾರ್ಥಿಜೀವನ ಹೂವಿನ ಹಾಸಿಗೆಯಲ್ಲ ಎಂಬುದಕ್ಕೆ ಈ ವಿದ್ತಾರ್ಥಿಯ ಜೀವನವೇ ಒಂದು ಸಾಕ್ಷಿ.
ಚಿಕ್ಕದಿನಲ್ಲೇ ತಂದೆಯನ್ನ ಕಳೆದುಕೊಂಡ ಮಗನನ್ನ ತಾಯಿ ಕೂಲಿ ಮಾಡಿ ಓದಿಸಿದ್ದಾರೆ.
ಆ ಸಾಧಕ ವಿದ್ಯಾರ್ಥಿಯ ಹೆಸರು ಮಹದೇವಸ್ವಾಮಿ. ಪದವಿ ಪರೀಕ್ಷೆಯಲ್ಲಿ
ಎರಡು ಪದಕಗಳಿಸಿದ್ದರು.ಈಗ ಕನ್ನಡ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಅವರು ಗಳಿಸಿರುವ ಚಿನ್ನದ ಪದಕಗಳ ಸಂಖ್ಯೆ ಒಂದಲ್ಲ ಎರಡಲ್ಲ…ಒಟ್ಟು ಹದಿನಾಲ್ಕು .
ಭೇಷ್…ಮಹದೇವಸ್ವಾಮಿ ನಿಮ್ಮ ಸಾಧನೆಗೆ ಇಡೀ ಕರ್ನಾಟಕ ಹೆಮ್ಮೆ ಪಡುತ್ತದೆ.
ಕಷ್ಟಪಟ್ಟರೆ ಫಲವುಂಟು ಎಂಬುದನ್ನ ಶಿಕ್ಷಕರು
ಶಿಷ್ಯರಿಗೆ ಹೇಳುತ್ತಿರುತ್ತಾರೆ. ನೀವು ಅದನ್ನ ನಿಜ ಮಾಡಿದ್ದೀರಿ.
ಎಲ್ಲ ಸೌಲಭ್ಯಗಳಿದ್ದೂ ಸಾಧನೆ ಮಾಡುವುದು
ದೊಡ್ಡದಲ್ಲ. ಸಿಮೆಂಟು,ಮರಳು,ನೀರು,ಕರಣೆ…ಹೀಗೆ ನಿಮಗೆ ಅನ್ನ ನೀಡಿದ ಒಡನಾಡಿಗಳ ಜೊತೆ ಪ್ರೀತಿಯಿಂದಿದ್ದು
ಪರೀಕ್ಷೆ ಗೆದ್ದಿದ್ದೀರಿ.
ಇನ್ನು ನಿಮಗೆ ಜೀವನವೆಂಬ ಪರೀಕ್ಷೆ ತೊಡಕಾಗಿವುದೇ ಇಲ್ಲ. ಕೆಎಎಸ್ ಐಎಎಸ್ ಮಾಡುವ ಗುರು ಇದೆ ಎಂದು ಹೇಳಿರುವ ಮಹದೇವಸ್ವಾಮಿ ಅವರಿಗೆ ನಾವೆಲ್ಲಾ ಶುಭಾಶಯ ತಿಳಿಸೋಣ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ರಾಜ್ಯಕ್ಕೆ ಏಪ್ರಿಲ್ 1 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ

0

ಕೇಂದ್ರ ಗೃಹ ಸಚಿವ ಮತ್ತು ರಾಷ್ಟ್ರೀಯ ಬಿಜೆಪಿ ನಾಯಕ ಅಮಿತ್ ಶಾ ಅವರು ಮುಂದಿನ ವಾರ ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ. ಇದೇ ಸಂದರ್ಭ ದಲ್ಲಿ ಮುಂದಿನ ವರ್ಷ ನಡೆಯುವ ರಾಜ್ಯ ವಿಧಾನಸಭೆ ಚುನಾವಣೆಯ ಪ್ರಚಾರಕ್ಕೆ ಚಾಲನೆ ನೀಡುವ ಸಾಧ್ಯತೆ ಇದೆ.

ಇತ್ತೀಚೆಗೆ ನಡೆದ 5 ರಾಜ್ಯಗಳ ಚುನಾವಣೆಗಳಲ್ಲಿ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದ ನಂತರ ಏಪ್ರಿಲ್ 1ರಂದು ಕರ್ನಾಟಕಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಲಿರುವುದು ರಾಜ್ಯ ರಾಜಕೀಯ ವಲಯದಲ್ಲಿ ಕುತೂಹಲ ಹೆಚ್ಚಿಸಿದೆ.

ವಿಧಾನಸಭೆ ಚುನಾವಣೆಗೆ ಒಂದು ವರ್ಷ ಮುಂಚಿತವಾಗಿ ಅವರು ಕರ್ನಾಟಕದಲ್ಲಿ ಪಕ್ಷದ ಪ್ರಚಾರವನ್ನು ಪ್ರಾರಂಭಿಸುವ ಸಾಧ್ಯತೆ ಇದೆ. ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆಯೂ ಮುಖ್ಯಮಂತ್ರಿ ಮತ್ತು ರಾಜ್ಯ ನಾಯಕರೊಂದಿಗೆ ಚರ್ಚಿಸಲಿದ್ದಾರೆ.

ವಿಶೇಷವಾಗಿ, ರಾಜ್ಯದ ಪ್ರಮುಖ ಲಿಂಗಾಯತ ಧಾರ್ಮಿಕ ಕ್ಷೇತ್ರವಾದ ಸಿದ್ದಗಂಗಾ ಮಠದಲ್ಲಿ ಶ್ರೀ ಶಿವಕುಮಾರ ಸ್ವಾಮಿಗಳ 116ನೇ ಜಯಂತಿಯಲ್ಲಿ ಕೇಂದ್ರ ಸಚಿವ ಅಮಿತ್ ಶಾ ಭಾಗವಹಿಸಲಿದ್ದಾರೆ.

ಕರ್ನಾಟಕದ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿರುವ ಬೃಹತ್ ಕಾರ್ಯಕ್ರಮದಲ್ಲಿ ಸಚಿವ ಶಾ ಅವರು ಭಾಗವಹಿಸುವ ಸಾಧ್ಯತೆ ಇದೆ. ಅವರ ಭೇಟಿ ಈಗಾಗಲೇ ಬಿಜೆಪಿ ವಲಯದಲ್ಲಿ ಅಲೆಗಳನ್ನು ಸೃಷ್ಟಿಸಲು ಪ್ರಾರಂಭಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟ ಪುನಾರಚನೆಗೆ ಮತ್ತು ಮಂಡಳಿ ಮತ್ತು ನಿಗಮಗಳಿಗೆ ನಾಮನಿರ್ದೇಶಿತರ ಪಟ್ಟಿಗೆ ಅವರು ಒಪ್ಪಿಗೆ ನೀಡುತ್ತಾರೆಯೇ ಎಂಬ ಪ್ರಶ್ನೆಗಳು ಉದ್ಭವಿಸಿವೆ.

ಅಮಿತ್ ಶಾ ಭೇಟಿಯ ವೇಳೆ ಪಕ್ಷದಲ್ಲಿನ ಪದಾಧಿಕಾರಿ ಬದಲಾವಣೆ ಚರ್ಚೆಗೆ ಬರುವ ಸಾಧ್ಯತೆ ಇದೆ. ಅವರ ಭೇಟಿಗೂ ಮುನ್ನ ಬೊಮ್ಮಾಯಿ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಖಾಸಗಿಯಾಗಿ ಮತ್ತು ಪಕ್ಷದ ಪದಾಧಿಕಾರಿಗಳೊಂದಿಗೆ ಚರ್ಚೆ ನಡೆಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರು ನಗರ ವಿವಿ ಪರೀಕ್ಷೆಗಳು ಮುಂದೂಡಿಕೆ

0

ಏಪ್ರಿಲ್ 6 ರಿಂದ ನಡೆಯಬೇಕಿದ್ದ ಬೆಂಗಳೂರು ನಗರ ವಿಶ್ವವಿದ್ಯಾನಿಲಯ ಪರೀಕ್ಷೆಗಳನ್ನು ಮುಂದೂಡಲಾಗಿದೆ.

ಈ ಬಗ್ಗೆ ವಿವಿ ಅಧಿಕೃತ ಆದೇಶ ಹೊರಡಿಸಿದೆ.ಬೆಂಗಳೂರು ವಿವಿಯ ಘಟಿಕೋತ್ಸವ ಹಿನ್ನೆಲೆ ಪರೀಕ್ಷೆ ಮುಂದೂಡಲಾಗಿದೆ.3, 5 ಮತ್ತು 7ನೇ ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಲಾಗಿದೆ.

ಏಪ್ರಿಲ್ 6ರಿಂದ ನಡೆಯಬೇಕಿದ್ದ ಸ್ನಾತಕೋತ್ತರ ಪರೀಕ್ಷೆಗಳು ಏಪ್ರಿಲ್ 13ರಿಂದ ನಡೆಸಲು ನಿರ್ಧರಿಸಲಾಗಿದೆ.

ಈ ಬಗ್ಗೆ ಶೀಘ್ರವೇ ಬೆಂಗಳೂರು ನಗರ ವಿಶ್ವವಿದ್ಯಾನಿಲಯ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸುತ್ತದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಕೋವಿಡ್ ಸೋಂಕು ದೇಶದಲ್ಲಿ ಕಳೆದ 24 ಗಂಟೆಯಲ್ಲಿ 82 ಸಾವು

0

ದೇಶದಲ್ಲಿ ಒಂದೇ ದಿನ 1,660 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 16,741ಕ್ಕೆ ಇಳಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ.

ಕಳೆದ 24 ಗಂಟೆಗ ಅವಧಿಯಲ್ಲಿ 82 ಸೋಂಕಿತರು ಮೃತಪಟ್ಟಿದ್ದಾರೆ.

ಇದುವರೆಗೂ ಕೋವಿಡ್‌ನಿಂದ 5,16,757 ಜನರು ಮೃತಪಟ್ಟಿದ್ದಾರೆ. ಸೋಂಕಿತರ ಒಟ್ಟು ಸಂಖ್ಯೆ 4,30,16,397ಕ್ಕೆ ಏರಿಕೆಯಾಗಿದೆ.

ಕೇರಳ ಹಾಗೂ ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳು ಕೋವಿಡ್‌ನಿಂದ ಮೃತಪಟ್ಟವರ ಹಿಂದಿನ ಸಂಖ್ಯೆಯ ವರದಿ ನೀಡಿದೆ. 4200 ಜನರು ಮೃತಪಟ್ಟಿದ್ದಾರೆ.

ನಿನ್ನೆಯವರೆಗೂ ದೇಶದಲ್ಲಿ 182.87 ಕೋಟಿ ಡೋಸ್ ಲಸಿಕೆ ವಿತರಣೆ ಮಾಡಲಾಗಿದೆ.