Monday, February 23, 2026
Monday, February 23, 2026
Home Blog Page 1653

ಮುಂದಿನ ಮೂರು ವರ್ಷಗಳಲ್ಲಿ 10 ಕಡೆಅಣುವಿದ್ಯುತ್ ಸ್ಥಾವರ ಸ್ಥಾಪನೆ

0

ಕರ್ನಾಟಕದ ಕೈಗಾದಲ್ಲಿ 700 ಮೆಗಾವ್ಯಾಟ್ ಪರಮಾಣು ಸಾಮಥ್ರ್ಯದ ಎರಡು ವಿದ್ಯುತ್ ಘಟಕಗಳು ಸೇರಿದಂತೆ ಮುಂದಿನ ಮೂರು ವರ್ಷದಲ್ಲಿ ದೇಶದ 10 ಕಡೆಗಳಲ್ಲಿ ಅಣು ವಿದ್ಯುತ್ ಸ್ಥಾವಗಳ ಸ್ಥಾಪನೆಯ ಚಟುವಟಿಕೆಗಳನ್ನು ಆರಂಭಿಸಲಾಗುತ್ತಿದೆ.

ಕೈಗಾದ ಯೋಜನೆಯ ಸ್ಥಳದಲ್ಲಿ ಉತ್ಖನನ ಚಟುವಟಿಕೆಗಳನ್ನು ಒಳಗೊಂಡಿರುವ ಪೂರ್ವ ಯೋಜನಾ ಹಂತದಿಂದ ಪರಮಾಣು ಶಕ್ತಿ ರಿಯಾಕ್ಟರ್‍ಗಳ ನಿರ್ಮಾಣದ ಪ್ರಾರಂಭವನ್ನು ಮೊದಲ ಕಾಂಕ್ರೀಟ್ ಸುರಿಯುವಿಕೆ ಮೂಲಕ ಆರಂಭಿಸಲಾಗುತ್ತಿದೆ.

ಕೈಗಾ ಘಟಕದ 5 ಮತ್ತು 6 ಘಟಕಗಳಲ್ಲಿ 2023ರ ವೇಳೆಗೆ ಎಫ್‍ಪಿಸಿ ನಡೆಯುವುದನ್ನು ನಿರೀಕ್ಷಿಸಲಾಗಿದೆ. ಗೋರಖ್‍ಪುರ ಹರ್ಯಾಣದ ಅಣು ವಿದ್ಯುತ್ ಪ್ರಯೋಂಜನ್ 3 ಮತ್ತು 4ರ ಘಟಕಗಳಲ್ಲಿ 2024 ರ ವೇಳೆಗೆ, ರಾಜಸ್ಥಾನದ ಮಹಿ ಬನ್ಸ್ವಾರಾ ಅಣುಶಕ್ತಿ ಯೋಜನೆ 1 ರಿಂದ 4 ಘಟಕದವರೆಗೆ, ಮಧ್ಯಪ್ರದೇಶ ಚುಟ್ಕಾ ಪರಮಾಣು ಶಕ್ತಿ ಯೋಜನೆ 1 ಮತ್ತು 2ಘಟಕಗಳಿಗೆ 2025ರ ವೇಳೆಗೆ ಎಫ್‍ಪಿಸಿ ಆರಂಭಿಸುವುದಾಗಿ ಪರಮಾಣು ಶಕ್ತಿ ಇಲಾಖೆ ಅಕಾರಿಗಳು ವಿಜ್ಞಾನ ಮತ್ತು ತಂತ್ರಜ್ಞಾನದ ಸಂಸದೀಯ ಸಮಿತಿಗೆ ತಿಳಿಸಿದ್ದಾರೆ.

ಕೇಂದ್ರ ಸರ್ಕಾರ 2017ರ ಜೂನ್ 2017 ರಲ್ಲಿ 700 ಮೆಗಾವ್ಯಾಟ್‍ನ 10 ಪ್ರೆಶರೈಸ್ ಹೆವಿ ವಾಟರ ರಿಯಾಕ್ಟರ್ ಸ್ಥಾವರಗಳ ಅಭಿವೃದ್ಧಿಗೆ ಅನುಮೋದನೆ ನೀಡಿದೆ. 1.05 ಲಕ್ಷ ಕೋಟಿ ವೆಚ್ಚದಲ್ಲಿ ದೇಶಿಯ ಉತ್ಪಾದನೆಗೆ ಆದ್ಯತೆ ನೀಡಲಾಗಿದೆ.

ವೆಚ್ಚವನ್ನು ಕಡಿಮೆ ಮಾಡುವ ಮತ್ತು ನಿರ್ಮಾಣ ಸಮಯವನ್ನು ವೇಗಗೊಳಿಸುವ ಉದ್ದೇಶದಿಂದ ಒಂದೇ ಬಾರಿಗೆ 10 ಪರಮಾಣು ಶಕ್ತಿ ರಿಯಾಕ್ಟರ್‍ಗಳನ್ನು ನಿರ್ಮಿಸಲು ಸರ್ಕಾರವು ಮೊದಲ ಬಾರಿಗೆ ಅನುಮೋದನೆ ನೀಡಿತು.

ನಿರ್ಮಾಣ ವೆಚ್ಚವನ್ನು ಕಡಿಮೆ ಮಾಡಲು ಒಮ್ಮೆಲೆ ಭಾರೀ ಪ್ರಮಾಣದ ಯಂತ್ರೋಪಕರಣ ಗಳಿಗೆ ಖರೀದಿ ಆದೇಶ ನೀಡುವ ಪ್ರಕ್ರಿಯೆ ಜಾರಿಯಲ್ಲಿದೆ. ಅಕದೊತ್ತಡದ ಸ್ಟೀಮ್ ಜನರೇಟರ್‍ಗಳು, ಎಸ್‍ಎಸ್ 304 ಎಲ್ ಲ್ಯಾಟಿಸ್ ಟ್ಯೂಬ್‍ಗಳು ಮತ್ತು ಎಂಡ್ ಶೀಲ್ಡ್ ಪ್ಲೇಟ್‍ಗಳು, ಪ್ರೆಶರೈಸರ್ ಫೋರ್ಜಿಂಗ್‍ಗಳು, ಬ್ಲೀಡ್ ಕಂಡೆನ್ಸರ್ ಫೋರ್ಜಿಂಗ್‍ಗಳು, ಇಂಕೋಲೈ 800 ಟ್ಯೂಬ್‍ಗಳು, 40 ಸ್ಟೀಮ್ ಜನರೇಟರ್‍ಗಳು, ರಿಯಾಕ್ಟರ್ ಹೆಡರ್ಸ್ ಗಳನ್ನು ವಿದೇಶದಿಂದ ಖರೀದಿಸಬೇಕಿದೆ ಎಂದು ಅಣು ಶಕ್ತಿ ಮಂತ್ರಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಗೋರಖ್‍ಪುರದ ಮೂರು ಮತ್ತು ನಾಲ್ಕನೆ ಘಕಟಗಳು, ಕೈಗಾ ಸ್ಥಾವರದ ಐದು ಮತ್ತು ಆರಕ್ಕೆ ಘಕಟನಗಳಿಗೆ ಎಂಜಿನಿಯರಿಂಗ್ ಖರೀದಿ, ಸಂಗ್ರಹಣೆ ಮತ್ತು ನಿರ್ಮಾಣ ಪ್ಯಾಕೇಜ್‍ಗಾಗಿ ಆದೇಶ ನೀಡಲಾಗಿದೆ. ಫ್ಲೀಟ್ ಮೋಡ್ ಅಡಿಯಲ್ಲಿ ಸ್ಥಾವರಗಳ ನಿರ್ಮಾಣ ಆರಂಭವಾಗುತ್ತಿದೆ. ಮೊದಲ ಕಾಂಕ್ರೀಟ್ ಸುರಿಯುವಿಕೆಯಿಂದ ಐದು ವರ್ಷಗಳ ಅವಯಲ್ಲಿ ಪರಮಾಣು ವಿದ್ಯುತ್ ಸ್ಥಾವರ ನಿರ್ಮಾಣ ಪೂರ್ಣಗೊಳ್ಳಲಿದೆ.

ಪ್ರಸ್ತುತ ಭಾರತವು ಒಟ್ಟು 6780 ಮೆಗಾವ್ಯಾಟ್ ಸಾಮಥ್ರ್ಯದ 22 ರಿಯಾಕ್ಟರ್‍ಗಳನ್ನು ಹೊಂದಿದೆ. ಕಳೆದ ವರ್ಷ ಜನವರಿ 10 ರಂದು ಗುಜರಾತ್‍ನ ಕಾಕ್ರಪಾರ್‍ನಲ್ಲಿರುವ 700 ಮೆಗಾವ್ಯಾಟ್ ರಿಯಾಕ್ಟರ್ ಅನ್ನು ಗ್ರಿಡ್‍ಗೆ ಸಂಪರ್ಕಿಸಲಾಗಿದೆ. ಆದರೆ ಇದು ಇನ್ನೂ ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಿಲ್ಲ.

ನೈಸರ್ಗಿಕ ಯುರೇನಿಯಂ ಅನ್ನು ಇಂಧನವಾಗಿ ಮತ್ತು ಭಾರೀ ನೀರನ್ನು ಮಾಡರೇಟರ್ ಆಗಿ ಬಳಸುವ ಪಿಎಚ್‍ಡಬ್ಲ್ಯೂಆರ್ ಭಾರತದ ಪರಮಾಣು ಶಕ್ತಿ ಕಾರ್ಯಕ್ರಮದ ಮುಖ್ಯ ಆಧಾರಗಳಾಗಿವೆ. 1960 ರ ದಶಕದಲ್ಲಿ ಕೆನಡಾದ ಬೆಂಬಲದೊಂದಿಗೆ ರಾಜಸ್ಥಾನದ ರಾವತ್‍ಭಟದಲ್ಲಿ 220 ಮೆಗಾವ್ಯಾಟ್ ಸಾಮಥ್ರ್ಯದ ಭಾರತದ ಮೊದಲ ಎರಡು ಪಿಎಚ್‍ ಡಬ್ಲ್ಯೂಆರ್ ಗಳನ್ನು ಸ್ಥಾಪಿಸಲಾಯಿತು.

1974 ರಲ್ಲಿ ಭಾರತದ ಶಾಂತಿಯುತ ಪರಮಾಣು ಪರೀಕ್ಷೆಗಳ ನಂತರ ಕೆನಡಾ ಬೆಂಬಲವನ್ನು ಹಿಂತೆಗೆದುಕೊಂಡ ಕಾರಣ ಎರಡನೇ ರಿಯಾಕ್ಟರ್ ಅನ್ನು ದೇಶೀಯ ಘಟಕಗಳೊಂದಿಗೆ ನಿರ್ಮಿಸಬೇಕಾಯಿತು. ಪ್ರಮಾಣೀಕೃತ ವಿನ್ಯಾಸ ಮತ್ತು ಸುಧಾರಿತ ಸುರಕ್ಷತಾ ಕ್ರಮಗಳೊಂದಿಗೆ ಪ್ರತಿ 220 ಮೆಗಾವ್ಯಾಟ್, 14 ಪಿಎಚ್‍ಡಬ್ಲ್ಯೂಆರ್‍ಗಳನ್ನು ಹಲವು ವರ್ಷಗಳಲ್ಲಿ ನಿರ್ಮಿಸಲಾಗಿದೆ.

ವಿದ್ಯುತ್ ಉತ್ಪಾದನಾ ಸಾಮಥ್ರ್ಯವನ್ನು 540 ಮೆಗಾವ್ಯಾಟ್‍ಗೆ ಹೆಚ್ಚಿಸಲು ಭಾರತೀಯ ಇಂಜಿನಿಯರ್‍ಗಳು ವಿನ್ಯಾಸವನ್ನು ಮತ್ತಷ್ಟು ಸುಧಾರಿಸಿ, ಮಹಾರಾಷ್ಟ್ರದ ತಾರಾಪುರದಲ್ಲಿ ಎರಡು ರಿಯಾಕ್ಟರ್ ಗಳನ್ನು ಸ್ಥಾಪಿಸಿದ್ದಾರೆ. ಸಾಮಥ್ರ್ಯವನ್ನು 700 ಮೆಗಾವ್ಯಾಟ್‍ಗೆ ಹೆಚ್ಚಿಸಲು ಮತ್ತಷ್ಟು ಮೇಲ್ದರ್ಜೆಗೆರಿಸಲಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ವಿಕಲ ಚೇತನರಿಗೂ ಭಾರತೀಯ ಸೇವಾ ಪರೀಕ್ಷೆಗೆ ಅವಕಾಶವಿದೆ

0

ವಿಕಲಚೇತನರೂ ಕೂಡ ಐಪಿಎಸ್, ಐಆರ್‌ಪಿಎಫ್‌ಎಸ್ ,ಡಿಎಎನ್‌ಐಪಿಎಸ್ ಗೆ ಯುಪಿಎಸ್ಸಿಗೆ ಅರ್ಜಿ ಸಲ್ಲಿಸಲು ಸುಪ್ರಿಂಕೋರ್ಟ್ ಅವಕಾಶ ಕಲ್ಪಿಸಿಕೊಟ್ಟಿದೆ. ಕೇಂದ್ರದ ಆಗಸ್ಟ್ 18, 2021 ರ ಅಧಿಸೂಚನೆಯನ್ನು ಪ್ರಶ್ನಿಸುವ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ.

ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್ ಮತ್ತು ಎ.ಎಸ್. ಓಕಾ ಅವರ ಪೀಠಕ್ಕೆ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಈ ವಿಷಯದಲ್ಲಿ ಪ್ರತಿ ಅಫಿಡವಿಟ್ ಸಲ್ಲಿಸಲು ಸರ್ಕಾರವು ಸಮಯ ಬಯಸುತ್ತದೆ ಎಂದು ತಿಳಿಸಿದರು. ಅಫಿಡವಿಟ್ ಸಲ್ಲಿಸಲು ಎರಡು ವಾರಗಳ ಕಾಲಾವಕಾಶ ಬೇಕಾಗುತ್ತದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪೀಠಕ್ಕೆ ತಿಳಿಸಿದ್ದಾರೆ.

ಈ ವಿನಂತಿ ನ್ಯಾಯಸಮ್ಮತ ಮತ್ತು ಸಮಂಜಸವಾಗಿದೆ ಎಂಬುದನ್ನು ನಾವು ಕಂಡುಕೊಂಡಿದ್ದೇವೆ. ಅದರ ಪ್ರಕಾರ, ಏಪ್ರಿಲ್ 1, 2022 ರಂದು ಅಥವಾ ಅದಕ್ಕೂ ಮೊದಲು ಪ್ರಧಾನ ಕಾರ್ಯದರ್ಶಿ, ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ಅವರ ಕಚೇರಿಯಲ್ಲಿ ಸಂಜೆ 4 ಗಂಟೆಯ ಮೊದಲು ಅರ್ಜಿ ಸಲ್ಲಿಸಬಹುದು ಎಂದು ಪೀಠ ಹೇಳಿದೆ.

ಈಗ ನಡೆಯುತ್ತಿರುವ ಆಯ್ಕೆ ಪ್ರಕ್ರಿಯೆಯನ್ನು ಯಾವುದೇ ರೀತಿಯಲ್ಲಿ ತಡೆಯಬಾರದು ಎಂದು ತನ್ನ ಆದೇಶದಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಪೀಠವು ಏಪ್ರಿಲ್ 18ರಂದು ವಿಚಾರಣೆಯನ್ನು ಮುಂದೂಡಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ದೇಶದಲ್ಲಿ 1421ಜನರಲ್ಲಿ ಕೋವಿಡ್ ಸೋಂಕು ಪತ್ತೆ

0

ದೇಶದಲ್ಲಿ ಕಳೆದೊಂದು ದಿನದಲ್ಲಿ ಒಟ್ಟು 1,421 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ. 149 ಜನ ಸಾವನ್ನಪ್ಪಿದ್ದಾರೆ. ಇದುವರೆಗೆ ಒಟ್ಟು 5,21,004 ಜನರು ಕೋವಿಡ್​-19ಗೆ ಬಲಿಯಾಗಿದ್ದಾರೆೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

1,826 ಮಂದಿ ನಿನ್ನೆ ಗುಣಮುಖರಾಗಿದ್ದಾರೆ. ಇದುವರೆಗೆ ಚೇತರಿಸಿಕೊಂಡವರ ಸಂಖ್ಯೆ 4,24,82,262 ಕ್ಕೇರಿದೆ. ವಾರದ ಕೋವಿಡ್​​ ಪಾಸಿಟಿವಿಟಿ ದರ ಶೇ.0.29ರಷ್ಟಿದ್ದರೆ, ದೈನಂದಿನ ಕೋವಿಡ್​ ಪಾಸಿಟಿವಿಟಿ ದರ ಶೇ.0.25 ರಷ್ಟಿದೆ. 29,90,658 ಮಂದಿ ವ್ಯಾಕ್ಸಿನ್​ ಪಡೆದಿದ್ದಾರೆ.

ಇದುರವರೆಗೆ ಒಟ್ಟು 1,83,20,10,030 ಜನ ಲಸಿಕೆ ಪಡೆದವರಾಗಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಮನ್ ಕಿ ಬಾತ್ ಪ್ರಧಾನಿ ಪ್ರಸ್ತುತ ಪಡಿಸಿದ ಮೆಚ್ಚಿನ ಅಂಶಗಳು

0

ಪ್ರತಿ ತಿಂಗಳ ಕೊನೆಯ ಭಾನುವಾರ ಎಂದಿನಂತೆ ನಡೆಯುವ ಮನ್ ಕೀ ಬಾತ್ ಬಾನುಲಿ ಕಾರ್ಯಕ್ರಮದಲ್ಲಿ ದೇಶದ ಜನತೆಯನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದ್ದಾರೆ. ಪಂಚ ರಾಜ್ಯ ಚುನಾವಣೆಯ ನಂತರ ನಡೆದ ಮೊದಲ ರೆಡಿಯೋ ಕಾರ್ಯಕ್ರಮ ಇದಾಗಿದೆ. ಈ ಸಂದರ್ಭದಲ್ಲಿ ಜನರಿಗೆ ಮೋದಿ ಅವರು ಈ ಕೆಳಕಂಡ ಅಂಶಗಳನ್ನು ತಿಳಿಸಿದ್ದಾರೆ.

ಭಾರತವು ಇಂದು ಆರ್ಥಿಕ ಪ್ರಗತಿಯತ್ತ ಬೃಹತ್ ಹೆಜ್ಜೆಗಳನ್ನು ಇಡುತ್ತಿದೆ. ಭಾರತವು ಈಗ ದೊಡ್ಡದಾಗಿ ಯೋಚಿಸುತ್ತಿದೆ. ಅದನ್ನು ಸಾಕಾರಗೊಳಿಸಲು ಕೆಲಸ ಮಾಡುತ್ತಿದೆ. ಭಾರತವು 400 ಬಿಲಿಯನ್ ಡಾಲರ್ ರಫ್ತು ಗುರಿಯನ್ನು ಸಾಧಿಸಿದ್ದು, ಇದು ಭಾರತದ ಸಾಮರ್ಥ್ಯವನ್ನು ಸೂಚಿಸುತ್ತದೆ. ವಿಶ್ವದಲ್ಲಿ ಭಾರತೀಯ ವಸ್ತುಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಭಾರತದಿಂದ ಹೊಸ ಉತ್ಪನ್ನಗಳನ್ನು ಹೊಸ ಸ್ಥಳಗಳಿಗೆ ರಫ್ತು ಮಾಡಲಾಗುತ್ತಿದೆ. ಮೇಡ್ ಇನ್ ಇಂಡಿಯಾ ಉತ್ಪನ್ನಗಳು ಈಗ ವಿದೇಶದಲ್ಲಿ ಹೆಚ್ಚು ಗೋಚರಿಸುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಈ ಹಿಂದೆ ದೊಡ್ಡ ಜನರು ಮಾತ್ರ ಸರ್ಕಾರಕ್ಕೆ ಉತ್ಪನ್ನಗಳನ್ನು ಮಾರಾಟ ಮಾಡಬಹುದು ಎಂದು ನಂಬಲಾಗಿತ್ತು ಆದರೆ, ಸರ್ಕಾರಿ ಇ-ಮಾರ್ಕೆಟ್‌ಪ್ಲೇಸ್ ಪೋರ್ಟಲ್ ಆ ನಂಬಿಕೆಯನ್ನು ಬದಲಾಯಿಸಿದೆ. ಇದು ನವ ಭಾರತದ ಆತ್ಮವನ್ನು ತೋರಿಸುತ್ತದೆ. ಇತ್ತೀಚಿನ ವರ್ಷಗಳಲ್ಲಿ ಆಯುಷ್ ವಲಯದಲ್ಲಿ ಹಲವಾರು ಸ್ಟಾರ್ಟ್ ಅಪ್‌ಗಳು ಮತ್ತು ಉದ್ಯಮಗಳ ಏರಿಕೆ ಮತ್ತು ಯಶಸ್ಸು ಸಾಧಿಸಿದೆ.ಇದು ಪ್ರೇರಣದಾಯಕ ಪ್ರವೃತ್ತಿಯಾಗಿದೆ ಎಂದು ಮೋದಿ ಅವರು ತಿಳಿಸಿದ್ದಾರೆ.

ಇದೇ ವೇಳೆಯಲ್ಲಿ 125 ವರ್ಷದ ಯೋಗ ಗುರು ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ಇತ್ತೀಚೆಗೆ ನಡೆದ ಪದ್ಮ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ನೀವು ಬಾಬಾ ಶಿವಾನಂದರನ್ನು ನೋಡಿರಬೇಕು. ಅವರ ಚೈತನ್ಯ ಮತ್ತು ಫಿಟ್ನೆಸ್ ನೋಡಿ ಎಲ್ಲರೂ ಆಶ್ಚರ್ಯಚಕಿತರಾದರು. ಅವರ ಆರೋಗ್ಯ ದೇಶದಲ್ಲಿ ಚರ್ಚೆಯ ವಿಷಯವಾಗಿದೆ. ಅವರಿಗೆ ಯೋಗದ ಬಗ್ಗೆ ಒಲವಿದೆ ಎಂದು ಹೇಳಿದರು.

ಮುಪ್ಪಟಂ ಶ್ರೀನಾರಾಯಣರಂತಹ ಜನರು ಪ್ರಾಣಿಗಳ ಬಗ್ಗೆ ಎಷ್ಟು ಕಾಳಜಿ ವಹಿಸುತ್ತಾರೆಂದರೆ ಅವರು ಮಣ್ಣಿನ ಪಾತ್ರೆಗಳನ್ನು ವಿತರಿಸುತ್ತಾರೆ. ಇದರಿಂದ ಜನರು ಪಕ್ಷಿಗಳು ಮತ್ತು ಪ್ರಾಣಿಗಳಿಗೆ ನೀರು ಒದಗಿಸುತ್ತಾರೆ. ಅವರು ಅಂತಹ ಒಂದು ಲಕ್ಷ ಪಾತ್ರೆಗಳನ್ನು ನೀಡಿದ್ದಾರೆ. ಹಾಗೂ ಅವುಗಳನ್ನು ಗಾಂಧೀಜಿ ಆಶ್ರಮಕ್ಕೆ ದಾನ ಮಾಡಲಿದ್ದಾರೆ. ಕೆಲವು ವ್ಯಕ್ತಿಗಳು ನೈಸರ್ಗಿಕ ನೀರಿನ ಮೂಲಗಳನ್ನು ಸಂರಕ್ಷಿಸಲು ಶ್ಲಾಘನೀಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.

ನಾಸಿಕ್‌ನಲ್ಲಿರುವ ಚಂದ್ರಕಿಶೋರ್ ಗೋದಾವರಿ ನದಿಯ ಸುತ್ತ ಕಸ ಹಾಕುವ ಜನರನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ. ಪುರಿಯಲ್ಲಿ ರಾಹುಲ್ ಮಹಾರಾಣಾ, ಧಾರ್ಮಿಕ ಸ್ಥಳಗಳ ಆವರಣದಿಂದ ಪ್ಲಾಸ್ಟಿಕ್ ಕಸವನ್ನು ಸ್ವಚ್ಛಗೊಳಿಸುತ್ತಾರೆ ಎಂದು ಹೇಳಿದರು.

ಹೆಣ್ಣು ಮಕ್ಕಳ ಶಿಕ್ಷಣ ಹಾಗೂ ಮಹಿಳಾ ಸಬಲೀಕರಣಕ್ಕೆ ಮತ್ತಷ್ಟು ಒತ್ತು ನೀಡಬೇಕಿದೆ. ಸಾವಿತ್ರಿಬಾಯಿ ಫುಲೆ ಅವರು ಮಹಿಳೆಯರಲ್ಲಿ ಅನಕ್ಷರತೆ ಮತ್ತು ಹೆಣ್ಣು ಭ್ರೂಣ ಹತ್ಯೆಯಂತಹ ಸಾಮಾಜಿಕ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತಿದರು. ಶಿಕ್ಷಣವನ್ನು ಪೂರ್ಣಗೊಳಿಸಲು ಸಾಧ್ಯವಾಗದ ಹೆಣ್ಣು ಮಕ್ಕಳನ್ನು ಮರಳಿ ಶಾಲೆಗೆ ಕರೆತರಲು ನಾವು ಕನ್ಯಾ ಶಿಕ್ಷಾ ಪ್ರವೇಶ ಉತ್ಸವವನ್ನು ಪ್ರಾರಂಭಿಸಿದ್ದೇವೆ.

ಏಕ್ ಭಾರತ್, ಶ್ರೇಷ್ಠ ಭಾರತ್ ಎಂಬ ಮನೋಭಾವದ ಧ್ಯೋತಕವಾಗಿರುವ ಗುಜರಾತ್‌ನ ಕರಾವಳಿ ಭಾಗದಲ್ಲಿ ನಡೆಯುವ ಜಾತ್ರೆಯ ಬಗ್ಗೆ ಎಷ್ಟು ಜನರಿಗೆ ತಿಳಿದಿದೆ. ನಾನು ನೀರಿನ ಕೊರತೆ ಎದುರಿಸುತ್ತಿರುವ ಗುಜರಾತ್‌ನಿಂದ ಬಂದಿದ್ದೇನೆ. ಗುಜರಾತ್‌ನಲ್ಲಿ ನೀರಿಗಾಗಿ ಸ್ಟೆಪ್‌ವೆಲ್‌ಗಳು ನಿರ್ಣಾಯಕವಾಗಿವೆ. ಜಲ ಮಂದಿರ ಯೋಜನೆಯು ನೀರಿನ ಸಂರಕ್ಷಣೆ ಮತ್ತು ಮೆಟ್ಟಿಲುಬಾವಿಗಳನ್ನು ಪುನರುಜ್ಜೀವನಗೊಳಿಸುವಲ್ಲಿ ಒಂದು ಮಹತ್ವದ ತಿರುವು ನೀಡಿದೆ. ಇದು ಅನೇಕ ಪ್ರದೇಶಗಳಲ್ಲಿ ನೀರಿನ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡಿದೆ ಎಂದು ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಎಸ್ಎಸ್ಎಲ್ ಸಿ ಪರೀಕ್ಷೆಗೆ ಹಿಜಾಬ್ ಧರಿಸಿ ಬಂದರೆ ಪ್ರವೇಶವಿಲ್ಲ- ನಾಗೇಶ್

0

ನಾಳೆ ಎಸ್ ಎಸ್ ಎಲ್ ಸಿ ಪರೀಕ್ಷೆ ಪ್ರತಿವರ್ಷದಂತೆ ಯಾವುದೇ ಅಡ್ಡಿ ಆತಂಕವಿಲ್ಲದೆ ನಡೆಯಲಿದೆ ಎನ್ನುವ ವಿಶ್ವಾಸವಿದೆ. ಕೋರ್ಟ್ ಆದೇಶವನ್ನು ಪಾಲಿಸಿ ವಿದ್ಯಾರ್ಥಿಗಳು ಹಿಜಾಬ್ ಬಿಟ್ಟು ಸಮವಸ್ತ್ರದಲ್ಲಿ ಪರೀಕ್ಷೆ ಬರೆಯಬೇಕು.

ಹಿಜಾಬ್ ಗಾಗಿ ಪರೀಕ್ಷೆ ತಿರಸ್ಕರಿಸಿದರೆ, ಮತ್ತೆ ಮರು ಪರೀಕ್ಷೆ ಕೂಡ ಇಲ್ಲ ಎಂಬುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದ್ದಾರೆ.

ಈ ಬಗ್ಗೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ನಾಳೆಯ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಎಲ್ಲಾ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಹಿಜಾಬ್ ಸಂಘರ್ಷದ ಕಾರಣದಿಂದಾಗಿ ಪರೀಕ್ಷಾ ಕೇಂದ್ರದ ಬಳಿಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಹಿಜಾಬ್ ಧರಿಸಿ ಬಂದರೆ ಅವರೇ ಕ್ರಮ ಕೈಗೊಳ್ಳಲಿದ್ದಾರೆ ಎಂದು ಬಿ.ಸಿ. ನಾಗೇಶ್ ಅವರು ಹೇಳಿದ್ದಾರೆ.

ಹಿಜಾಬ್ ಧರಿಸಿ ಬಂದರೆ ನಾಳಿನ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯೋದಕ್ಕೆ ಅವಕಾಶವಿಲ್ಲ. ಸಮವಸ್ತ್ರದಲ್ಲಿ ಬಂದ್ರೇ ಮಾತ್ರ ತರಗತಿಗೆ ಅವಕಾಶ. ಸಮವಸ್ತ್ರವಿಲ್ಲದ ಶಾಲೆಗಳ ಬಗ್ಗೆ ಡಿಡಿಪಿಐ ತೀರ್ಮಾನವೇ ಅಂತಿಮವಾಗಿದೆ. ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆ ತಪ್ಪಿಸಿದ್ರೇ ಮರು ಪರೀಕ್ಷೆ ಕೂಡ ಇಲ್ಲ ಎಂಬುದಾಗಿ ಹೇಳಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ನೇಪಾಳ ಪ್ರಧಾನಿ ಭಾರತ ಭೇಟಿ ದ್ವಿಪಕ್ಷೀಯ ಮಾತುಕತೆ

0

ನೇಪಾಳದ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಅವರು ಏಪ್ರಿಲ್ 1ರಿಂದ 3ರವರೆಗೆ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಶೇರ್ ಬಹದ್ದೂರ್ ದೇವುವಾ
ಅವರು ಏ. 2ರಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ. ನೇಪಾಳ ಪ್ರಧಾನಿ ಅವರ ಅಧಿಕೃತ ಕಾರ್ಯಕ್ರಮಗಳ ಜೊತೆಗೆ ಅವರು ವಾರಣಾಸಿಗೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

2021 ಜುಲೈನಲ್ಲಿ ಪ್ರಧಾನ ಮಂತ್ರಿಯಾದ ನಂತರ ದೇವುಬಾ ಅವರ ಮೊದಲ ದ್ವಿಪಕ್ಷೀಯ ವಿದೇಶ ಪ್ರವಾಸ ಇದಾಗಿದೆ. ಅವರು ಪ್ರಧಾನ ಮಂತ್ರಿಯಾಗಿ ತಮ್ಮ ನಾಲ್ಕು ಹಿಂದಿನ ಅವಧಿಗಳಲ್ಲಿ ಭಾರತಕ್ಕೆ ಭೇಟಿ ನೀಡಿದ್ದಾರೆ. 2017ರಲ್ಲಿ ಪ್ರಧಾನ ಮಂತ್ರಿಯಾಗಿ ಅವರ ತೀರಾ ಇತ್ತೀಚಿನ ಭೇಟಿಯಾಗಿದೆ.
ಈ ಭೇಟಿಯು ಎರಡು ದೇಶಗಳ ನಡುವಿನ ಆವರ್ತಕ ಉನ್ನತ ಮಟ್ಟದ ವಿನಿಮಯದ ಸಂಪ್ರದಾಯವಾಗಿದೆ.

ಅಭಿವೃದ್ಧಿ ಮತ್ತು ಆರ್ಥಿಕ ಪಾಲುದಾರಿಕೆ, ವ್ಯಾಪಾರ, ಆರೋಗ್ಯ ವಲಯದಲ್ಲಿ ಸಹಕಾರ, ವಿದ್ಯುತ್, ಸಂಪರ್ಕ, ಜನರ ಸಂಪರ್ಕಗಳು ಮತ್ತು ಪರಸ್ಪರ ಹಿತಾಸಕ್ತಿಯ ಇತರ ವಿಷಯಗಳು ಸೇರಿದಂತೆ ದ್ವಿಪಕ್ಷೀಯ ಸಂಬಂಧಗಳ ಸಂಪೂರ್ಣ ಶ್ರೇಣಿಯನ್ನು ಪರಿಶೀಲಿಸಲು ಇದು ಎರಡೂ ಕಡೆಯವರಿಗೆ ಅವಕಾಶ ನೀಡುತ್ತದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಕೇಂದ್ರ ಸಚಿವ ಅಮಿತ್ ಶಾ ಸಿದ್ಧಗಂಗಾ ಭೇಟಿ

0

ಬಿಜೆಪಿ ನಾಯಕ, ಕೇಂದ್ರ ಗೃಹ ಸಚಿವ ಅಮಿತ್ ಶಾ ಕರ್ನಾಟಕ ಪ್ರವಾಸ ಕೈಗೊಳ್ಳಲಿದ್ದಾರೆ. ಏಪ್ರಿಲ್ 1ರಂದು ಅವರು ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಲಿದ್ದಾರೆ. ಏಪ್ರಿಲ್ 1ರಂದು ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳ 115ನೇ ಜಯಂತಿ ಹಾಗೂ ಗುರುವಂದನಾ ಮಹೋತ್ಸವ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಅಮಿತ್ ಶಾ ಪಾಲ್ಗೊಳ್ಳಲಿದ್ದಾರೆ.

ಶ್ರೀ ಸಿದ್ಧಗಂಗಾ ಮಠದಲ್ಲಿ ಏಪ್ರಿಲ್ 1ರ ಶುಕ್ರವಾರ ಬೆಳಗ್ಗೆ 10.30ಕ್ಕೆ ಕಾರ್ಯಕ್ರಮ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ. ಎಸ್.‌ ಯಡಿಯೂರಪ್ಪ ಸೇರಿದಂತೆ ಹಲವಾರು ಸಚಿವರು, ಶಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಶನಿವಾರ ಕರ್ನಾಟಕ ಬಿಜೆಪಿ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ ಶ್ರೀ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದರು. ಶ್ರೀ ಶಿವಕುಮಾರ ಮಹಾಸ್ವಾಮಿಗಳ ಗದ್ದುಗೆ ದರ್ಶನ ಪಡೆದರು. ಏಪ್ರಿಲ್ 1 ರಂದು ಅಮಿತ್ ಶಾ ಮಠಕ್ಕೆ ಭೇಟಿ ನೀಡುವುದರಿಂದ ಕಾರ್ಯಕ್ರಮಗಳ ಸಿದ್ಧತೆ ಪರಿಶೀಲನೆ ಮಾಡಿದರು.

ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳ 115ನೇ ಜಯಂತಿ ಹಾಗೂ ಗುರುವಂದನಾ ಮಹೋತ್ಸವ ಕಾರ್ಯಕ್ರಮದ ಸಿದ್ಧತೆಗಳ ಪರಿಶೀಲನೆ ನಡೆಸಿದರು. ನಂತರ ಪತ್ರಿಕಾಗೋಷ್ಠಿ ನಡೆಸಿ ಸದರಿ ಕಾರ್ಯಕ್ರಮದ ಬಗ್ಗೆ ವಿವರಗಳನ್ನು ನೀಡಿದ್ದಾರೆ.

ಅಮಿತ್‌ ಶಾ ಭೇಟಿ ಹಿನ್ನಲೆಯಲ್ಲಿ ತುಮಕೂರು ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ ನೇತೃತ್ವದಲ್ಲಿ ಶುಕ್ರವಾರ ಅಧಿಕಾರಿಗಳ ಸಭೆ ನಡೆಯಿತು. ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಪೊಲೀಸ್ ಇಲಾಖೆಗೆ ಸಹ ಸೂಚನೆ ನೀಡಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ನವೋದ್ಯಮಗಳಿಗೆ ರಾಜ್ಯದಲ್ಲಿ ಸಾಕಷ್ಟು ಪ್ರೋತ್ಸಾಹ-ಬೊಮ್ಮಾಯಿ

0

ಸ್ಟಾರ್ಟ್‌ಅಪ್ ಉದ್ದಿಮೆಗಳ ಸ್ಥಾಪನೆಯಲ್ಲಿ ರಾಜ್ಯ ಮುಂದಿದೆ. ಕೈಗಾರಿಕೆ, ಉದ್ದಿಮೆ ಸ್ಥಾಪಿಸಲು ಹೆಚ್ಚಿನ ಸವಲತ್ತು ಹಾಗೂ ಸಹಾಯಧನವನ್ನು ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ನೀಡಲಾಗಿದೆ. ಮಹಿಳಾ ಉದ್ದಿಮೆದಾರರಿಗೂ ಆರ್ಥಿಕ ಸಹಾಯ ಘೋಷಿಸಲಾಗಿದೆ ಎಂದು ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ತಿಳಿಸಿದ್ದಾರೆ.

ಹುಬ್ಬಳ್ಳಿಯ ನವೀನ್​ ಹೋಟೆಲ್​​ನಲ್ಲಿ ನಡೆದ ಟೈಕಾನ್ ಸಮಾವೇಶದ ಈವ್ನಿಂಗ್ ವಿಥ್ ಲೆಜೆಂಡ್ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಬೆಂಗಳೂರು ಹೊರತಾಗಿ ರಾಜ್ಯದ ವಿವಿಧ ನಗರಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ. ಗುಜರಾತ್ ಮಾದರಿಯಲ್ಲಿ ವಿಶೇಷ ಹೂಡಿಕೆ ವಲಯವನ್ನು ಸ್ಥಾಪಿಸಿ ರಿಯಾಯಿತಿಗಳನ್ನು ಸಹ ನೀಡಲಾಗಿದೆ. ಚೆನ್ನೈ, ಬೆಂಗಳೂರು, ಚಿತ್ರದುರ್ಗ ಹಾಗೂ ಬೆಳಗಾವಿ ನಡುವಿನ ರಾಷ್ಟ್ರೀಯ ಹೆದ್ದಾರಿಯ ಅಕ್ಕಪಕ್ಕದಲ್ಲಿ ಕೈಗಾರಿಕಾ ಟೌನ್‌ಶಿಪ್ ನಿರ್ಮಿಸಲಾಗುವುದು ಎಂದರು.

ಟೈ ಉತ್ತಮ ಕೆಲಸ ಮಾಡುತ್ತಿದೆ. ಯುವ ಉದ್ದಿಮೆದಾರರಿಗೆ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸುತ್ತದೆ. ಯುವಜನರು ಭವಿಷ್ಯದ ಬಗ್ಗೆ ಆಶಾದಾಯಕಾಗಿರಬೇಕು. ಆತ್ಮಸ್ಥೈರ್ಯ ಹೊಂದಬೇಕು. ಉದ್ದಿಮೆ ಸ್ಥಾಪಿಸಿ ತಮ್ಮ ಅಸ್ಮಿತೆಯನ್ನು ಕಂಡುಕೊಳ್ಳಬೇಕು ಎಂದು ಬೊಮ್ಮಾಯಿ ಅವರು ಕಿವಿಮಾತು ಹೇಳಿದ್ದಾರೆ.

ರಾಜಕೀಯಕ್ಕೆ ದೇಶ ಹಾಗೂ ಜನಜೀವನದಲ್ಲಿ ಬದಲಾವಣೆ ತರುವ ಶಕ್ತಿಯಿದೆ. ಇಚ್ಛಾಶಕ್ತಿಯುಳ್ಳ ನಾಯಕರು‌ ಉತ್ತಮ ಬದಲಾವಣೆ ತರಬಲ್ಲರು. ರಾಜಕೀಯ ರಂಗದಲ್ಲಿ ಮುಕ್ತ ಅವಕಾಶಗಳಿವೆ. ಯಾವುದೇ ನಿರ್ಬಂಧಗಳಿಲ್ಲ.

ಕಪಿಲ್‌ ದೇವ್ ವಿಶ್ವಕಪ್ ಗೆಲ್ಲುವುದರ ಮೂಲಕ ದೇಶದ ಜನರ ಮನ ಗೆದ್ದರು. ಹುಬ್ಬಳ್ಳಿಯ ಉದ್ದಿಮೆದಾರರು ಸಣ್ಣನಗರದ ಮನಸ್ಥಿತಿಯನ್ನು ತೊರೆದು ಮುಕ್ತ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಿಸಬೇಕು. ಹೊಸ ರೀತಿ ಉದ್ದಿಮೆ ಹಾಗೂ ಕೈಗಾರಿಕೆಗಳಲ್ಲಿ ತೊಡಗಿಕೊಳ್ಳಬೇಕು ಎಂದು ಸಿಎಂ ಕರೆ ಕೊಟ್ಟರು.

ಕಾರ್ಯಕ್ರಮದಲ್ಲಿ ಶಾಸಕ ಅರವಿಂದ ಬೆಲ್ಲದ್, ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್‌ದೇವ್, ಹುಬ್ಬಳ್ಳಿ ಕೆಎಲ್‌ಇ ಸಂಸ್ಥೆಯ ಶಂಕರಣ್ಣ ಮುನವಳ್ಳಿ, ಹುಬ್ಬಳ್ಳಿ ಟೈ ಪ್ರೆಸಿಡೆಂಟ್ ವಿಜೇಶ್ ಸೈಗಲ್, ಇಸ್ಕಾನ್ ಸಂಸ್ಥೆಯ ಗೋವರ್ಧನ್ ಪ್ರಭುದಾಸ್ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಬೆಂಗಳೂರಿಗೆ ಹರ್ಷ ಕೊಲೆ ಆರೋಪಿಗಳ ಸ್ಥಳಾಂತರ ಪ್ರಕ್ರಿಯೆ

0

ಶಿವಮೊಗ್ಗದ ಹಿಂದೂ ಕಾರ್ಯಕರ್ತ ಹರ್ಷನ ಕೊಲೆ ಪ್ರಕರಣ ಸಂಬಂಧ ಎಫ್‌ಐಆರ್‌ ದಾಖಲಿಸಿ ಕೊಳ್ಳಲಾಗಿದೆ. ರಾಷ್ಟ್ರೀಯ ತನಿಖಾ ದಳವು ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಹತ್ತು ಮಂದಿ ಆರೋಪಿಗಳನ್ನು ಶಿವಮೊಗ್ಗ ಜೈಲಿನಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಸ್ಥಳಾಂತರ ಮಾಡಲು ಸಿದ್ಧತೆಗಳು ನಡೆಯುತ್ತಿದೆ.

ಎನ್‌ಐಎ ವಿಶೇಷ ಕೋರ್ಟ್‌ ಆದೇಶ ನೀಡಿ, ಕಾರಾಗೃಹದ ಮುಖ್ಯಸ್ಥರಿಗೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬೆಂಗಳೂರಿನ ಜೈಲಿಗೆ ಸ್ಥಳಾಂತರ ಮಾಡುವ ಪ್ರಕ್ರಿಯೆ ನಡೆಯುತ್ತಿದೆ.ಒಂದೆರಡು ದಿನಗಳಲ್ಲಿ ಬೆಂಗಳೂರಿಗೆ ಸ್ಥಳಾಂತರವಾಗುವ ಸಾಧ್ಯತೆಯಿದೆ.

ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ಎನ್‌ಐಎ ಅಧಿಕಾರಿಗಳು, ಬಂಧನಕ್ಕೊಳಗಾಗಿರುವ ಆರೋಪಿಗಳ ವಿಚಾರಣೆ ಅಗತ್ಯವಿದೆ. ಆದ್ದರಿಂದ ಶಿವಮೊಗ್ಗ ಜೈಲಿನಲ್ಲಿರುವ ಆರೋಪಿಗಳನ್ನು ಬೆಂಗಳೂರಿನ ಕಾರಾಗೃಹಕ್ಕೆ ಸ್ಥಳಾಂತರಿಸಬೇಕು. ಬಳಿಕ ಅವರನ್ನು ಬಾಡಿ ವಾರೆಂಟ್‌ ಮೂಲಕ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತದೆ ಎಂದು ಕೋರ್ಟ್‌ಗೆ ಮನವಿ ಮಾಡಿದ್ದರು. ಅದನ್ನು ಪುರಸ್ಕರಿಸಿರುವ ಕೋರ್ಟ್‌ ಹತ್ತು ಮಂದಿ ಆರೋಪಿಗಳನ್ನು ಬೆಂಗಳೂರು ಜೈಲಿಗೆ ಸ್ಥಳಾಂತರಿಸಲು ಸೂಚಿಸಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ರಷ್ಯದ ದಾಳಿ ಬಲವಾಗಿದೆ ಉಕ್ರೇನ್ ಶಕ್ತಿಗುಂದಿದೆ-ಸೆರ್ಗೆಯ ರಷ್ಯ

0

ಉಕ್ರೇನ್‌ ರಾಜಧಾನಿ ಕೀವ್‌ ಮೇಲೆ ಕಣ್ಣಿಟ್ಟು ನಿರಂತರ ದಾಳಿ ನಡೆಸುತ್ತಿದ್ದ ರಷ್ಯಾ ಸದ್ಯ ತನ್ನ ಗುರಿಯನ್ನು ಬದಲಾಯಿಸಿದಂತಿದೆ. ಕೀವ್‌ ಬದಲಿಗೆ ದೇಶದ ಪೂರ್ವದಲ್ಲಿರುವ ಕೈಗಾರಿಕಾ ಪ್ರದೇಶ ಡೋನ್‌ಬಾಸ್‌ ಸ್ವತಂತ್ರಕ್ಕೆ ಕರೆ ನೀಡುತ್ತಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಇದು ಯುದ್ಧದ ಅಂತ್ಯ ಅಂತೂ ಅಲ್ಲ. ರಷ್ಯಾ ಪಡೆಗಳು ಉಕ್ರೇನಿನ ಮೇಲೆ ಯೋಜಿತವಾಗಿ ಹಂತ ಹಂತವಾಗಿ ಮರುದಾಳಿ ನಡೆಸಲು ನಡೆಸುತ್ತಿರುವ ಪೂರ್ವಸಿದ್ಧತೆ ಇರಬಹುದು. ಆರಂಭಿಕ ವೈಫಲ್ಯಗಳಿಂದ ಸೇನೆಯನ್ನು ಮರುಸಂಘಟಿಸುವ ಉದ್ದೇಶದಿಂದ ಡೋನ್‌ಬಾಸ್‌ನಿಂದ ಹೊಸದಾಗಿ ಯುದ್ಧ ಆರಂಭಿಸಬಹುದು ಎಂದು ಅಮೆರಿಕದ ವಿಶ್ಲೇಷಕರೊಬ್ಬರು ಅಂದಾಜಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ರಷ್ಯಾದ ಜನರಲ್‌ ಸ್ಟಾಫ್‌ ಉಪ ಮುಖ್ಯಸ್ಥ ಕ| ಜ| ಸೆರ್ಗೆಯ. ರುಡುಸ್ಕೋಯ. ಉಕ್ರೇನ್ ನಲ್ಲಿ ರಷ್ಯಾ ನಡೆಸಿದ ಮೊದಲ ಹಂತದ ಮಿಲಿಟರಿ ಕಾರ್ಯಚರಣೆಯ ಉದ್ದೇಶಗಳು ಈಡೇರಿವೆ. ರಷ್ಯಾ ಪಡೆಗಳು ಉಕ್ರೇನಿನ ಮಿಲಿಟರಿ ಶಕ್ತಿಯನ್ನು ಗಣನೀಯವಾಗಿ ಕುಗ್ಗಿಸಿವೆ. ಹೀಗಾಗಿ ರಷ್ಯಾದ ಪಡೆಗಳು ಡೋನ್‌ಬಾಸ್‌ ವಿಮೋಚನೆಯಂಥ ತಮ್ಮ ಮುಖ್ಯ ಗುರಿಯನ್ನು ಸಾಧಿಸುವತ್ತ ಗಮನ ನೀಡುತ್ತಿವೆ ಎಂದು ಹೇಳಿದ್ದಾರೆ. ಅಲ್ಲದೆ ಉಕ್ರೇನ್‌ ಅಧ್ಯಕ್ಷ ವೊಲೋದಿಮಿರ್‌ ಜೆಲೆನ್‌ಸ್ಕಿ ಅವರು ಮತ್ತೊಮ್ಮೆ ಸಂಧಾನ ಸಭೆಯ ಮಾತನಾಡಿದ್ದಾರೆ. ಆದರೆ ಉಕ್ರೇನಿನ ಯಾವುದೇ ಭೂಭಾಗವನ್ನು ಬಿಟ್ಟುಕೊಡಲು ಅವರು ಸಿದ್ಧರಿಲ್ಲದ ಕಾರಣ. ಹೀಗಾಗಿ ಮಾತುಕತೆ ಅದು ಮತ್ತೆ ವಿಫಲವಾಗಿದೆ ಎಂದು ತಿಳಿಸಿದ್ದಾರೆ.