Monday, February 23, 2026
Monday, February 23, 2026
Home Blog Page 1655

ಭೂರಹಿತ ಎಸ್ಸಿ ಎಸ್ಟಿ ವರ್ಗಗಳಿಗೆ ಜಮೀನು ಮಂಜೂರಿಗೆ ಹೊಸ ಮಾರ್ಗಸೂಚಿ

0

ಭೂ ರಹಿತ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವರ್ಗದ ಕೃಷಿ ಕಾರ್ಮಿಕ ಕುಟುಂಬಗಳಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. ಎಸ್ಸಿ, ಎಸ್ಟಿ ಕೃಷಿ ಕಾರ್ಮಿಕ ಕುಟುಂಬಗಳಿಗೆ ಜಮೀನು ಕೊಡಲು ಡಾ| ಬಿ.ಆರ್‌. ಅಂಬೇಡ್ಕರ್‌ ಅಭಿವೃದ್ಧಿ ನಿಗಮದಿಂದ ಅನುಷ್ಠಾನಗೊಳಿಸಲಾಗುತ್ತಿರುವ ಭೂ ಒಡೆತನ ಯೋಜನೆಯ ಅನುಷ್ಠಾನಕ್ಕೆ ಹೊಸ ಮಾರ್ಗಸೂಚಿ ಗಳನ್ನು ತರಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಸಚಿವರು, ಎಸ್ಸಿ, ಎಸ್ಟಿ ಜನಸಂಖ್ಯೆ ಹೆಚ್ಚಿರುವ ಕಡೆ ಕಡಿಮೆ ಭೂಮಿ ಹಂಚಿಕೆ ಆಗಿದೆ. ಜನಸಂಖ್ಯೆ ಕಡಿಮೆ ಇರುವ ಕಡೆ ಹೆಚ್ಚು ಭೂಮಿ ಹಂಚಿಕೆ ಆಗಿದೆ. ಮಂಜೂರಾದ ಜಮೀನು ಹಸ್ತಾಂತರ ಆಗಿರುವುದಿಲ್ಲ. ಇಂತಹ ಅನೇಕ ಸಮಸ್ಯೆಗಳಿವೆ. ಹಾಗಾಗಿ, ಭೂಒಡೆತನ ಯೋಜನೆ ಅನುಷ್ಠಾನಕ್ಕೆ ಹೊಸ ಮಾರ್ಗಸೂಚಿಗಳನ್ನು ತರಲಾಗುವುದು ಎಂದು ಹೇಳಿದ್ದಾರೆ.

ಇನ್ನು ಜಮೀನು ದುರ್ಬಳಕೆ ಆಗಿದ್ದರೆ ಅಥವಾ ಅಕ್ರಮವೆಸಗಿದ್ದರೆ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ತಿಂಗಳಾದರೂ ನಿಲ್ಲದ ಸಮರ ಸಂಧಾನಕ್ಕೆ ಝೆಲೆನ್ಸ್ಕಿ ಮನವಿ

0

ಉಕ್ರೇನ್‌ ಮತ್ತು ರಷ್ಯಾದ ನಡುವಿನ ಯುದ್ಧದಿಂದ ಭಾರಿ ಹಾನಿಯುಂಟಾಗಿದೆ. ಸಾವಿರಾರು ಅಮಾಯಕರು ಬಲಿಯಾಗಿದ್ದಾರೆ. ಹಾಗಾಗಿ, ಝೆಲೆನ್ಸ್ಕಿ ಮತ್ತೊಮ್ಮೆ ರಷ್ಯಾಕ್ಕೆ ಮಾತುಕತೆ ನಡೆಸಿ, ಯುದ್ಧ ಕೊನೆಗೊಳಿಸುವಂತೆ ಮನವಿ ಮಾಡಿದ್ದಾರೆ.

ಆದರೆ, ಉಕ್ರೇನ್ ಶಾಂತಿಯ ಸಲುವಾಗಿ ತನ್ನ ಯಾವುದೇ ಪ್ರದೇಶವನ್ನು ಬಿಟ್ಟುಕೊಡಲು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.

ರಷ್ಯಾವು ಉಕ್ರೇನ್ ಮೇಲೆ ಯುದ್ಧ ಸಾರಿ ಒಂದು ತಿಂಗಳು ಪೂರ್ಣಗೊಂಡಿವೆ. ರಷ್ಯಾ ನಡೆಸಿದ ಯುದ್ಧಕ್ಕೆ ಜಗತ್ತಿನಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾದರೂ ಅದಕ್ಕೆ ಜಗ್ಗದೇ ವ್ಲಾಡಿಮಿರ್ ಪುಟಿನ್ ನಿರಂತರ ದಾಳಿ ಮುಂದುವರೆಸಿದ್ದಾರೆ. ಈಗಾಗಲೇ ಉಕ್ರೇನ್‌ ಮತ್ತು ರಷ್ಯಾದ ನಡುವಿನ ಯುದ್ಧದಿಂದ ಭಾರಿ ಹಾನಿಯುಂಟಾಗಿದ್ದು, ಸಾವಿರಾರು ಅಮಾಯಕರು ಬಲಿಯಾಗಿದ್ದಾರೆ.

ಇನ್ನೊಂದೆಡೆ, ರಷ್ಯಾ ದಾಳಿಗೆ ಹೆದರಿ ಹಲವಾರು ಮಂದಿ ಉಕ್ರೇನ್‌ನಿಂದ ಪಲಾಯನ ಮಾಡಿದ್ದಾರೆ. ಶುಕ್ರವಾರ ರಾಷ್ಟ್ರವನ್ನುದ್ದೇಶಿಸಿ ಬಿಡುಗಡೆ ಮಾಡಿದ ವಿಡಿಯೋದಲ್ಲಿ, ರಷ್ಯಾದ ಜನರಲ್ ಸ್ಟಾಫ್‌ನ ಡೆಪ್ಯುಟಿ ಚೀಫ್ ಕರ್ನಲ್ ಜನರಲ್ ಸೆರ್ಗೆಯ್ ರುಡ್‌ಸ್ಕೋಯ್‌ಗೆ ಮಾತುಕತೆ ನಡೆಸುವಂತೆ ಮನವಿ ಮಾಡಿದ್ದಾರೆ. ಜೊತೆಗೆ ರಷ್ಯಾದ ಪಡೆಗಳು ಈಗ ಡಾನ್‌ಬಾಸ್‌ ಗುರಿಯಾಗಿಸಿಕೊಂಡು ದಾಳಿ ನಡೆಸಲು ಮುಂದಾಗಿವೆ ಎಂದು ತಿಳಿಸಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ವಿಡಿಯೋ ಸಂದೇಶ ಹಂಚಿಕೊಂಡಿರುವ ಉಕ್ರೇನ್ ವಿದೇಶಾಂಗ ಸಚಿವಾಲಯ, ರಷ್ಯಾದ ಯುದ್ಧವು ಕೇವಲ ಯುದ್ಧವಲ್ಲ. ಉಕ್ರೇನ್​​​ನ ಸ್ವಾತಂತ್ರ್ಯದ ವಿರುದ್ಧದ ಯುದ್ಧವಾಗಿದೆ. ಜನರ ಹಕ್ಕು ಕಸಿದುಕೊಳ್ಳುವ ಈ ಯುದ್ಧದ ವಿರುದ್ಧ ನೀವೆಲ್ಲ ನಿಲ್ಲಬೇಕು ಎಂದು ಕೇಳಿಕೊಳ್ಳುತ್ತೇನೆ. ನಿಖರವಾಗಿ ಒಂದು ತಿಂಗಳು ಮುಂದುವರೆದಿರುವ ಈ ಯುದ್ಧವನ್ನು ನಿಲ್ಲಬಯಸುವ ನೀವೆಲ್ಲ ಒಟ್ಟಾಗಿ ನಮಗೆ ಬೆಂಬಲ ನೀಡಬೇಕು.

ರಷ್ಯಾ ವಿರುದ್ಧ ಪ್ರತಿಭಟನೆ ನಡೆಸಬೇಕು ಎಂದು ಝೆಲೆನ್ಸ್ಕಿ ಕರೆ ನೀಡಿದ್ದರು.

ಶ್ರೀರೇಣುಕಾಚಾರ್ಯ ಜಯಂತಿ ಸರ್ಕಾರದ ಆದೇಶ

0

ಪ್ರತಿ ವರ್ಷ ಮಾರ್ಚ್ 16ರಂದು ಜಗದ್ಗುರು ರೇಣುಕಾಚಾರ್ಯ ಜಯಂತಿ ಆಚರಣೆ ಮಾಡುವಂತೆ ರಾಜ್ಯ ಸರ್ಕಾರ ಆದೇಶ ಪ್ರಕಟಿಸಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇಂದು ಅಧಿಕೃತವಾಗಿ ಈ ಬಗ್ಗೆ ಆದೇಶ ಹೊರಡಿಸಿದೆ. ರೇಣುಕಾಚಾರ್ಯ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸುವಂತೆ ರಾಜ್ಯ ಸರ್ಕಾರಕ್ಕೆ ಕಲಬುರಗಿಯ ಅಖಿಲ ಭಾರತ ವೀರಶೈವ ಮಹಾಸಭಾ ಮನವಿ ಸಲ್ಲಿಸಿದೆ.

ಅದರಂತೆ ಮಾರ್ಚ್ 16ರಂದು ರಾಜ್ಯಾದ್ಯಂತ ಆಚರಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆದೇಶ ನೀಡಿದೆ.

ರೇಣುಕಾಚಾರ್ಯ ಅವರು ತಮ್ಮ ಸಿದ್ಧಾಂತ ಶಿಖಾಮಣಿಯಂತಹ ಮಹಾನ್​ ಗೃಂಥವನ್ನು ನಮಗೆ ಕೊಡುಗೆಯಾಗಿ ನೀಡಿದ್ದಾರೆ. ಸಾಮರಸ್ಯ, ಸಹಬಾಳ್ವೆ, ಸೌಹರ್ದತೆ ಬದುಕನ್ನು ಅವರು ನಮಗೆ ಬೋಧಿಸಿದ್ದಾರೆ. ಸದ್ಯ ಇಂತಹ ಮಹಾನ್​ ವ್ಯಕ್ತಿಯ ಜಯಂತಿಯನ್ನು ಮಾರ್ಚ್​ 16 ರಂದು ಆಚರಿಸಿಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ.

ಅನೇಕರ ತ್ಯಾಗ ಬಲಿದಾನಗಳ ಫಲ ನಮ್ಮ ಸ್ಯಾತಂತ್ರ್ಯ- ಅನುರಾಧ

0

ನಮಗೆ ದೊರೆತಂತಹ ಸ್ವಾತಂತ್ರ್ಯ ಅನೇಕ ಮಹಾನ್ ವ್ಯಕ್ತಿಗಳ ತ್ಯಾಗ ಬಲಿದಾನದ ಪ್ರತೀಕವಾಗಿದೆ. ಪ್ರಸ್ತುತ ಯುವಜನತೆಯು ಜಾತ್ಯತೀತವಾಗಿ ನಾವೆಲ್ಲಾ ಒಂದೇ ಎಂಬ ಭಾವನೆಗಳನ್ನು
ಬೆಳಸಿಕೊಳ್ಳುವ ಮೂಲಕ ದೇಶದ ಪ್ರಗತಿಗೆ ಶ್ರಮಿಸಬೇಕು ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವೆ ಜಿ. ಅನುರಾಧ ಅಭಿಪ್ರಾಯಪಟ್ಟರು.

ಕುವೆಂಪು ವಿಶ್ವವಿದ್ಯಾಲಯದ ಶಾಂತವೇರಿ ಗೋಪಾಲಗೌಡ ಅಧ್ಯಯನ ಪೀಠ ಹಾಗೂ ಇಂಡಿಯಾ ಸಂಯುಕ್ತಾಶ್ರಯದಲ್ಲಿ ಶುಕ್ರವಾರ‌ ಬಸವ ಸಭಾಭವನದಲ್ಲಿ ನಡೆದ ಅಸಹಕಾರ ಚಳುವಳಿ ಮತ್ತು ಭಾರತೀಯ ಸ್ವಾತಂತ್ರ್ಯ ಸಂಗ್ರಾಮ ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಯೋಧರ ಹೋರಾಟ, ತ್ಯಾಗ, ಬಲಿದಾನಗಳು ವ್ಯರ್ಥವಾಗಬಾರದು. ಅವರ ಆಶೋತ್ತರಗಳು ಪ್ರಸ್ತುತ ಯುವಜನತೆಗೆ ದಾರಿದೀಪವಾಗಬೇಕು.

ಇಂಥಹ ವಾತಾವರಣ ಸೃಷ್ಟಿಸುವ ಹೊಣೆಗಾರಿಕೆ ಶೈಕ್ಷಣಿಕ ಸಂಸ್ಥೆಗಳಿಗಿವೆ ಎಂದರು.

ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್.‌ಕೆ.‌ ನವೀನ್ ಕುಮಾರ್ ಮಾತನಾಡಿ, ಮಲೆನಾಡಿನ ಹೆಮ್ಮೆಯ ಮಗ ಶಾಂತವೇರಿ ಗೋಪಾಲಗೌಡ ಅವರ ಕೊಡುಗೆ ಅನನ್ಯವಾದುದು. ಪ್ರಸ್ತುತ ಯುವ ಪೀಳಿಗೆ ಸ್ವಾತಂತ್ರ್ಯೋತ್ಸವದ ಸಂದರ್ಭದ ರಾಷ್ಟ್ರೀಯ ಚಳವಳಿಯನ್ನು ಅರ್ಥಮಾಡಿಕೊಳ್ಳುವಲ್ಲಿ ಸೋತಿದ್ದಾರೆ ಎಂದರು.

ಪ್ರೊ.‌ ರಾಜಾರಾಂ‌‌ ಹೆಗಡೆ, ಪ್ರೊ.‌ಜೆ. ಸದಾನಂದ, ಪ್ರೊ. ಉದ್ಧಗಟ್ಟಿ ವೆಂಕಟೇಶ್, ಪ್ರೊ. ಷಣ್ಮುಖ, ವಿದ್ಯಾರ್ಥಿಗಳು, ಮತ್ತಿತರರು ಉಪಸ್ಥಿತರಿದ್ದರು.

ಸೋಲದ ಉಕ್ರೇನ್ ಛಲ ಬಿಡದ ರಷ್ಯ

0

ರಷ್ಯಾ ಉಕ್ರೇನ್‌ನಿಂದ ತೀವ್ರ ಪ್ರತಿರೋಧವನ್ನು ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಹೇಗಾದರೂ ಮಾಡಿ ಕೀವ್ ವಶಪಡಿಸಿಕೊಳ್ಳುವ ಗುರಿಯೊಂದಿಗೆ ರಷ್ಯಾ ತನ್ನ ಶಸ್ತ್ರಾಗಾರದಲ್ಲಿರುವ ಒಂದೊಂದು ಅಸ್ತ್ರವನ್ನೂ ಹೊರ ತೆಗೆಯುತ್ತಿದೆ.

ಈಗಾಗಲೇ ಎರಡು ಬಾರಿ ಕಿಂಜಾಲ್ ಹೈಪರ್ಸಾನಿಕ್ ಕ್ಷಿಪಣಿ ದಾಳಿ ನಡೆಸಿದ ಪುಟಿನ್ ಸೇನೆ, ಇತ್ತೀಚೆಗೆ ಮತ್ತೊಂದು ಶಕ್ತಿಶಾಲಿ ಅಸ್ತ್ರದ ಪ್ರಯೋಗ ಮಾಡಿದೆ ಎಂದು ಹೇಳಿಕೊಂಡಿದೆ.

ಕ್ಷಿಪಣಿಯನ್ನು ರಷ್ಯಾದ ಕಾರ್ವೆಟ್‌ನಿಂದ ಕ್ರೈಮಿಯಾದ ಸೆವಾಸ್ಟೊಪೋಲ್‌ನಲ್ಲಿ ಸಮುದ್ರದ ಮೇಲೆ ಉಡಾಯಿಸಲಾಗಿದೆ.

ಉಕ್ರೇನ್‌ನ ಒರ್ಜೆವಾದಲ್ಲಿರುವ ಸೇನಾ ನೆಲೆಯನ್ನು ಗುರಿಯಾಗಿಸಿಕೊಂಡು ಇದನ್ನು ಪ್ರಾರಂಭಿಸಲಾಯಿತು.

ಈ ಪ್ರದೇಶವು ರಾಜಧಾನಿ ಕೀವ್‌ನಿಂದ ಸುಮಾರು 200 ಮೈಲುಗಳಷ್ಟು ದೂರದಲ್ಲಿದೆ. ಈ ದಾಳಿಯಿಂದಾಗಿ ಪಾಶ್ಚ್ಯಾತ್ಯ ದೇಶಗಳು ನೀಡಿದ್ದ ಹಲವಾರು ಶಸ್ತ್ರಾಸ್ತ್ರಗಳು ದಾಳಿಯಲ್ಲಿ ನಾಶವಾದವು ಎಂದು ರಷ್ಯಾದ ಮಿಲಿಟರಿ ಹೇಳಿದೆ.

ಶತ್ರು ರಾಷ್ಟ್ರಗಳ ವಾಯು ಪ್ರದೇಶವನ್ನ ಭೇದಿಸಿ ಭೂಮಿಯ ಮೇಲಿನ ತನ್ನ ಗುರಿಯನ್ನ ತಲುಪಿ ನಾಶಪಡಿಸುವುದಕ್ಕೆ ಹೆಸರುವಾಸಿ ಈ ಕ್ಯಾಲಿಬರ್. ರಷ್ಯಾ ಈ ಕ್ಷಿಪಣಿಗಳನ್ನು ಅತ್ಯಂತ ನಿರ್ಣಾಯಕ ಗುರಿಗಳ ಮೇಲೆ ಮಾತ್ರ ಉಡಾಯಿಸುತ್ತದೆ. ಈ ಕ್ಷಿಪಣಿ ಭೂಮಿಗೆ ಕಡಿಮೆ ಎತ್ತರದಲ್ಲಿ ಹಾರಟ ನಡೆಸುತ್ತದೆ. ಸುಮಾರು 500 ಕೆಜಿಯ ವಾರ್ ಹೆಡ್ ಗಳನ್ನ ಹೊತ್ತೊಯ್ಯಬಲ್ಲ ಕ್ಯಾಲಿಬರ್ ಕ್ಷಿಪಣಿಯನ್ನು ಮಧ್ಯದಲ್ಲಿಯೇ ಹೇಗೆ ಬೇಕೋ ಹಾಗೆ ನಿಯಂತ್ರಿಸಬಹುದು. ಗೋದಾಮುಗಳು, ಕಮಾಂಡ್ ಪೋಸ್ಟ್‌ಗಳು, ಬಂದರುಗಳು ಮತ್ತು ವಿಮಾನ ನಿಲ್ದಾಣಗಳನ್ನು ನಾಶಮಾಡಲು ಕ್ಷಿಪಣಿಯನ್ನು ಬಳಸಲಾಗುತ್ತದೆ.

ಸಾವಯವ ಸಿರಿ ಯೋಜನೆ ರಾಜ್ಯಾದ್ಯಂತ ಅನುಷ್ಠಾನಕ್ಕೆ ಆದೇಶ

0

ಸಾವಯವ ಸಿರಿ ಯೋಜನೆಯಡಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ತಾಲ್ಲೂಕುಗಳಲ್ಲಿ ಸಾವಯವ ಕೃಷಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಹಾಗೂ ಹತ್ತು ವರ್ಷಗಳ ಅನುಭವವುಳ್ಳ ಆಯಾ ತಾಲ್ಲೂಕುಗಳ ಟ್ರಸ್ಟ್ ಅಥವಾ ಸೊಸೈಟಿ ಕಾಯ್ದೆಯಡಿ ನೊಂದಾಯಿತ ಸಾವಯವ ಕೃಷಿಕರ ಸಂಘ, ಸಾವಯವ ಒಕ್ಕೂಟ ಅಥವಾ ಗುಂಪುಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಜನರಿಗೆ ಆರೋಗ್ಯಕರ ಹಾಗೂ ರಾಸಾಯನಿಕ ಮುಕ್ತ ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳನ್ನು ದೊರಕಿಸಲು ಹಾಗೂ ಸಾವಯವ ಕೃಷಿಯನ್ನು ಉತ್ತೇಜಿಸಲು ಯೋಜನೆಯನ್ನು ರೂಪಿಸಲಾಗಿದೆ.

ಈ ಹೊಸ ಯೋಜನೆಯನ್ನು
ಸಾವಯವ ಸಿರಿ ಯೋಜನೆಯ ಹೆಸರಿನಲ್ಲಿ ರಾಜ್ಯಾದ್ಯಂತ ಅನುಷ್ಠಾನಗೊಳಿಸಲು ಆದೇಶ ಹೊರಡಿಸಲಾಗಿದೆ.

ಸಾವಯವ ಕೃಷಿ ಉತ್ತೇಜನದಲ್ಲಿ ತಾಲ್ಲೂಕುಗಳಲ್ಲಿ ಈಗಾಗಲೇ ಸಾವಯವ ಕೃಷಿಯಲ್ಲಿ ತೊಡಗಿರುವ ರಾಜ್ಯದ ಟ್ರಸ್ಟ್ ಅಥವಾ ಸೊಸೈಟಿ ಕಾಯ್ದೆಯಡಿ ನೊಂದಾಯಿತ ಸಾವಯವ ಕೃಷಿಕರ ಸಂಘ/ ಸಾವಯವ ಒಕ್ಕೂಟಗಳ ಮೂಲಕ ಯೋಜನೆಯನ್ನು ಅನುಷ್ಟಾಗೊಳಿಸಲಾಗುವುದು.

ಸಾವಯವ ಕೃಷಿ ಕಾರ್ಯಕ್ರಮಗಳ ಅನುಷ್ಟಾನದಲ್ಲಿ ಅನುಭವ ಹೊಂದಿರುವ ಸ್ಥಳೀಯ ನೋಂದಾಯಿತ ಸಾವಯವ ರೈತರ ಗುಂಪು/ ಸಂಘ/ ಒಕ್ಕೂಟಗಳಿಗೆ ಆದ್ಯತೆ ನೀಡಲಾಗುವುದು.

ಆಯ್ಕೆಯಾಗುವ ಗುಂಪುಗಳು ತಮ್ಮ ವ್ಯಾಪ್ತಿಯ ಕೃಷಿಕರನ್ನು ಉತ್ತೇಜಿಸುವುದು ಹಾಗೂ ಹೆಚ್ಚಿನ ರೈತರನ್ನು ಸಾವಯವ ಕೃಷಿ ವ್ಯಾಪ್ತಿ ಒಳಪಡಿಸುವುದು.

ಆಸಕ್ತ ಸಾವಯವ ಕೃಷಿಕರ ಸಂಘ/ ಸಾವಯವ ಒಕ್ಕೂಟ/ ಗುಂಪುಗಳು ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ 2022ರ ಏಪ್ರಿಲ್ 2ರೊಳಗೆ ಆಯಾ ತಾಲ್ಲೂಕು ವ್ಯಾಪ್ತಿಯ ಸಂಬಂಧಪಟ್ಟ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರಿಗೆ ಸಲ್ಲಿಸಬಹುದು.

ಅರ್ಜಿ ನಮೂನೆ ಮತ್ತು ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕು ವ್ಯಾಪ್ತಿಯ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸಬಹುದಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ತಮಿಳುನಾಡು ವಿರುದ್ಧ ಖಂಡನಾ ನಿರ್ಣಯಸದನದಲ್ಲಿ ಅಂಗೀಕಾರ

0

ತಮಿಳುನಾಡು ವಿರುದ್ಧದ ಖಂಡನಾ ನಿರ್ಣಯಕ್ಕೆ, ವಿಧಾನಸಭೆಯಲ್ಲಿ ರಾಜ್ಯ ಸರ್ಕಾರದಿಂದ ನಿರ್ಣಯ ಮಂಡಿಸಲಾಗಿತ್ತು. ಕೆಲ ಸಣ್ಣ ತಿದ್ದುಪಡಿಯ ನಂತರ ಸರ್ವಾನುಮತದಿಂದ ಅಂಗೀಕಾರ ಕೂಡ ದೊರೆತಿತ್ತು.

ತಮಿಳುನಾಡಿನಲ್ಲಿ ಮತ್ತೊಬ್ಬ ಆರೋಪಿ ಅರೆಸ್ಟ್
ನಿರ್ಣಯದ ಬಗ್ಗೆ ಪ್ರತಿಪಕ್ಷಗಳು ಕೇಳಿದ್ದಂತಹ ಪ್ರಶ್ನೆಗೆ ಉತ್ತರಿಸಿದ ಸಿಎಂ ಬಸವರಾಜ ಬೊಮ್ಮಾಯಿಯವರು, ಕರ್ನಾಟಕ ರಾಜ್ಯವು ಯೋಜಿಸಿರುವ ಮೇಕೆದಾಟು ಕುಡಿಯುವ ನೀರು ಮತ್ತು ಸಮತೋಲನ ಜಲಾಶಯ ಯೋಜನೆಯನ್ನು ವಿರೋಧಿಸಿ, ದಿನಾಂಶ 21 03, 2022 ರಂದು ತಮಿಳುನಾಡು ವಿಧಾನ ಸಭೆಯು ಸಭ್ಯವಲ್ಲದ ಭಾಷೆಯಲ್ಲಿ ಅಂಗೀಕರಿಸಿದ ಒಕ್ಕೂಟ ವಿರೋಧಿ ಮತ್ತು ಸಮರ್ಥನೀಯವಲ್ಲದ ನಿರ್ಣಯವನ್ನು ಮತ್ತು ತಮಿಳುನಾಡು ರಾಜ್ಯವು ತನ್ನ ಪ್ರಾದೇಶಿಕ ವ್ಯಾಪ್ತಿಯಲ್ಲಿ ಏಕಪಕ್ಷೀಯವಾಗಿ ಯೋಜಿಸಿರುವ ಕಾನೂನುಬಾಹಿರ ಯೋಜನೆಗಳನ್ನು ಸಹ ಈ ಸದನವು ಗಣನೆಗೆ ತೆಗೆದುಕೊಂಡಿರುತ್ತದೆ.

ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯವು ಕಾವೇರಿ ಜಲ ವಿವಾದ ನ್ಯಾಯಾಧಿಕರಣದ ತೀರ್ಪನ್ನು ಮಾರ್ಪಡಿಸಿ ಸಾಮಾನ್ಯ ಜಲ ವರ್ಷದಲ್ಲಿ ಬಿಳಿಗುಂಡ್ಲುವಿನಲ್ಲಿ 177.25 30 ನೀರಿನ ಪ್ರಮಾಣವನ್ನು ಖಚಿತಪಡಿಸುವಂತ ನಿಗದಿಪಡಿಸಿದೆ.

ಮಾನ್ಯ ಸರ್ವೋಚ್ಚ ನ್ಯಾಯಾಲಯವು ಹಂಚಿಕೆ ಮಾಡಿರುವಂತೆ ಬೆಂಗಳೂರು ಮೆಟ್ರೋಪಾಲಿಟನ್ ನಗರದ ಕುಡಿಯುವ ನೀರಿನ ಅಗತ್ಯತೆಗೆ 24 ಟಿಎಂಸಿ (4.75 consumptive use) ನೀರನ್ನು ಸುಸ್ಥಿರಗೊಳಿಸಲು ಹಾಗೂ ತತ್ಪರಿಮಾಣವಾಗಿ ಜಲವಿದ್ಯುತ್ ಉತ್ಪಾದನೆಗೆ ಅಂತರ್-ರಾಜ್ಯ ನದಿ ಕಾವೇರಿಗೆ ಅಡ್ಡಲಾಗಿ ಮೇಕೆದಾಟು ಕುಡಿಯುವ ನೀರು ಮತ್ತು ಸಮತೋಲನ ಜಲಾಶಯ ಯೋಜನೆಯನ್ನು ಯೋಜಿಸಲಾಗಿದೆ.

ಸದರಿ ಯಾವುದೇ ಭಾದಕ ಅಥವಾ ಹಾನಿಯಾಗುವುದಿಲ್ಲ. ಯೋಜನೆಯಿಂದ ತಮಿಳುನಾಡು ರಾಜ್ಯಕ್ಕೆ ಯಾವುದೇ ಭಾಧಕ ಅಥವಾ ಹಾನಿಯಾಗುವುದಿಲ್ಲ.

ಮೇಕೆದಾಟು ಕುಡಿಯುವ ನೀರು ಮತ್ತು ಸಮತೋಲನ ಜಲಾಶಯ ಯೋಜನೆಯನ್ನು ನಿರ್ಮಿಸಲು ಕರ್ನಾಟಕ ರಾಜ್ಯವು ತನ್ನ ಸಾಂವಿಧಾನಿಕ ಅಧಿಕಾರ ವ್ಯಾಪ್ತಿಯನ್ನು ಹೊಂದಿದೆ. ರಾಷ್ಟ್ರೀಯ ಜಲನೀತಿಯೂ ಸಹ ಕುಡಿಯುವ ನೀರಿಗೆ ಪ್ರಥಮ ಆದ್ಯತೆಯನ್ನು ನೀಡುತ್ತದೆ. ಈ ಕುಡಿಯುವ ನೀರಿನ ಯೋಜನೆಯಿಂದ ನ್ಯಾಯಾಧಿಕರಣದ ಆದೇಶವನ್ನು ಯಾವುದೇ ರೀತಿಯಲ್ಲಿ ಉಲ್ಲಂಘಿಸುವುದಿಲ್ಲ ಎಂದಿದ್ದರು.

ಈ ಬಳಿಕ, ಕಾನೂನು ಸಚಿವ ಜೆಸಿ ಮಾಧುಸ್ವಾಮಿಯವರು, ವಿಧಾನ ಪರಿಷತ್ತಿನಲ್ಲಿಯೂ ಮೇಕೆದಾಟು ಯೋಜನೆಯ ಖಂಡನಾ ನಿರ್ಣಯವನ್ನು ಮಂಡಿಸಿದರು. ಈ ನಿರ್ಣಯಕ್ಕೆ ಎಲ್ಲಾ ಪಕ್ಷಗಳಿಂದ ಅಂಗೀಕಾರದ ಮುದ್ರೆಯನ್ನು ಒತ್ತಲಾಗಿದೆ. ಈ ಮೂಲಕ ಉಭಯ ಸದನಗಳಲ್ಲಿಯೂ ಮೇಕೆದಾಟು ಯೋಜನೆಯ ಖಂಡನಾ ನಿರ್ಣಯ ಅಂಗೀಕಾರ ಪಡೆದಿದೆ.

ಪಾಕ್ ಪ್ರಧಾನಿ ವಿರುದ್ಧ ಅವಿಶ್ವಾಸ ಮಂಡನೆ ಕೊಂಚ ಮುಂದೂಡಿಕೆ

0

ಪಾಕಿಸ್ತಾನ ಸಂಸತ್ ಅಧಿವೇಶನದಲ್ಲಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ಗೊತ್ತುವಳಿ ಮಂಡಿಸದೆ ಶುಕ್ರವಾರ ಮುಂದೂಡಲಾಗಿದೆ.

ಅಧಿವೇಶನವನ್ನು ಸೋಮವಾರಕ್ಕೆ ಮುಂದೂಡಲಾಗಿದೆ ಎಂದು ಪಾಕಿಸ್ತಾನ ಮೂಲದ ಮಾಧ್ಯಮ ಸಂಸ್ಥೆ ಡಾನ್ ವರದಿ ಮಾಡಿದೆ. ಪ್ರಧಾನಿ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಸರ್ಕಾರವು ಆರ್ಥಿಕ ಬಿಕ್ಕಟ್ಟು ಮತ್ತು ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರಕ್ಕೆ ಕಾರಣವಾಗಿದೆ ಎಂದು ಆರೋಪಿಸಿ ಮಾರ್ಚ್ 8 ರಂದು ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯವನ್ನು ಸಲ್ಲಿಸಿತ್ತು. ವಿರೋಧ ಪಕ್ಷದ ನಾಯಕ ಶೆಹಬಾಜ್ ಷರೀಫ್, ಪಿಪಿಪಿ ಅಧ್ಯಕ್ಷ ಬಿಲಾಲ್ವಾಲ್ […]
ಪಾಕಿಸ್ತಾನ ಸಂಸತ್ ಅಧಿವೇಶನದಲ್ಲಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ಗೊತ್ತುವಳಿ ಮಂಡಿಸದೆ ಶುಕ್ರವಾರ ಮುಂದೂಡಲಾಗಿದೆ. ಅಧಿವೇಶನವನ್ನು ಸೋಮವಾರಕ್ಕೆ ಮುಂದೂಡಲಾಗಿದೆ ಎಂದು ಪಾಕಿಸ್ತಾನ ಮೂಲದ ಮಾಧ್ಯಮ ಸಂಸ್ಥೆ ಡಾನ್ ವರದಿ ಮಾಡಿದೆ. ಪ್ರಧಾನಿ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಸರ್ಕಾರವು ಆರ್ಥಿಕ ಬಿಕ್ಕಟ್ಟು ಮತ್ತು ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರಕ್ಕೆ ಕಾರಣವಾಗಿದೆ ಎಂದು ಆರೋಪಿಸಿ ಮಾರ್ಚ್ 8 ರಂದು ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯವನ್ನು ಸಲ್ಲಿಸಿತ್ತು.

ವಿರೋಧ ಪಕ್ಷದ ನಾಯಕ ಶೆಹಬಾಜ್ ಷರೀಫ್, ಪಿಪಿಪಿ ಅಧ್ಯಕ್ಷ ಬಿಲಾಲ್ವಾಲ್ ಭುಟ್ಟೋ-ಜರ್ದಾರಿ ಮತ್ತು ಪಿಪಿಪಿ ಸಹ-ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಸೇರಿದಂತೆ ಹಲವಾರು ಪ್ರಮುಖ ವಿರೋಧ ಪಕ್ಷದ ಸದಸ್ಯರು ಇಸ್ಲಾಮಾಬಾದ್‌ನ ಸಂಸತ್ ಭವನದಲ್ಲಿ ಉಪಸ್ಥಿತರಿದ್ದರು ಎಂದು ವರದಿಯಾಗಿದೆ.

ಸಮರ ಮನುಷ್ಯ ಪುಟಿನ್ ಆಂತರ್ಯದಲ್ಲಿ ಕೌಟುಂಬಿಕ ಅಶಾಂತಿ

0

ಉಕ್ರೇನ್‌ ವಿರುದ್ಧದ ಯುದ್ಧದ ದುಷ್ಪರಿಣಾಮ ರಷ್ಯಾದ ಜನರ ಮೇಲಷ್ಟೇ ಅಲ್ಲದೆ, ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ ಅವರ ಕುಟುಂಬಕ್ಕೂ ತಟ್ಟಿದೆ.
ಉಕ್ರೇನ್‌ ವಿಚಾರವಾಗಿ ಪುಟಿನ್‌ ತೆಗೆದುಕೊಂಡ ನಿರ್ಧಾರವು ಈಗ ಅವರ ಮಗಳ ಮದುವೆಗೇ ಕಂಟಕ ಪ್ರಾಯವಾಗಿ ಪರಿಣಮಿಸಿದೆ.

ಉಕ್ರೇನ್‌ ಮೇಲೆ ಯುದ್ಧ ಸಾರಿದ್ದಕ್ಕಾಗಿ ಅಮೆರಿಕ ಸೇರಿದಂತೆ ಅನೇಕ ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾಗೆ ಹಲವು ನಿರ್ಬಂಧಗಳನ್ನು ವಿಧಿಸಿವೆ. ಪರಿಣಾಮವಾಗಿ ಪುಟಿನ್‌ ಅವರ ಹಿರಿಯ ಮಗಳ ಎರಡು ಮಹತ್ವಾಕಾಂಕ್ಷೆಯ ಕನಸು ನುಚ್ಚು ನೂರಾಗಿದೆ.

ಡಾ. ಮರಿಯಾ ವೊರೊಂಟ್ಸೊವಾ (36) ಅವರೇ ವ್ಲಾಡಿಮಿರ್‌ ಪುಟಿನ್ ಮತ್ತು ಲ್ಯುಡ್ಮಿಲಾ ದಂಪತಿ ಹಿರಿಯ ಪುತ್ರಿ. ಮರಿಯಾ ಅವರ ಮದುವೆ ಮುರಿದು ಬಿದ್ದಿದೆ. ಇದರ ಜೊತೆಗೆ ಮರಿಯಾ ಅವರ ಆಧುನಿಕ ವೈದ್ಯಕೀಯ ಕೇಂದ್ರ ನಿರ್ಮಿಸುವ ಬಹುದೊಡ್ಡ ಕನಸು ಕನಸಾಗಿಯೇ ಉಳಿದಿದೆ.

ಸೆಂಟ್‌ ಪೀಟರ್ಸ್‌ಬರ್ಗ್‌ನಲ್ಲಿ ಆಧುನಿಕ ವೈದ್ಯಕೀಯ ಕೇಂದ್ರ ನಿರ್ಮಿಸುವ ದೊಡ್ಡ ಯೋಜನೆ ಹೊಂದಿದ್ದೇನೆ. ಯುರೋಪ್‌ ಮತ್ತು ಪರ್ಷಿಯನ್ ಗಲ್ಫ್ ದೇಶಗಳಿಂದ ಶ್ರೀಮಂತ ಶೇಖ್‌ ರೋಗಿಗಳನ್ನು ಆಕರ್ಷಿಸುವ ಯೋಜನೆ ಇದಾಗಿದೆ ಎಂದು ಮಾಧ್ಯಮದೊಂದಿಗೆ ಈ ಹಿಂದೆ ಮರಿಯಾ ಹೇಳಿಕೊಂಡಿದ್ದರು.

ಆದರೆ ಉಕ್ರೇನ್‌ ಮೇಲಿನ ಯುದ್ಧದ ನಂತರ ರಷ್ಯಾಗೆ ಯೂರೋಪಿಯನ್ನರಾಗಲಿ ಅಥವಾ ಶೇಖ್‌ಗಳಾಗಲಿ ಯಾರು ಬರುತ್ತಾರೆ ಎಂಬುದು ಪ್ರಶ್ನೆಯಾಗಿದೆ.

ಡಚ್‌ ಉದ್ಯಮಿ ಜೋರಿಟ್‌ ಫಾಸೆನ್‌ ಅವರೊಂದಿಗಿನ ಮರಿಯಾ ವೊರೊಂಟ್ಸೊವಾ ಸಂಬಂಧವೂ ಮುರಿದು ಬಿದ್ದಿದೆ. ಯುದ್ಧ ಆರಂಭವಾದ ನಂತರ ಈ ಜೋಡಿ ಬೇರ್ಪಟ್ಟಿದೆ. ಇವರು ಮಕ್ಕಳನ್ನೂ ಹೊಂದಿದ್ದಾರೆ. ಆದರೆ ಡಚ್‌ ಉದ್ಯಮಿ ಫಾಸೆನ್‌ ತಾನು ಪುಟಿನ್‌ ಅವರ ಅಳಿಯ ಅಲ್ಲ ಎಂದು ಹೇಳಿಕೊಂಡಿದ್ದಾರೆ.

2017ರಲ್ಲಿ ಸಂದರ್ಶನವೊಂದರಲ್ಲಿ ಪುಟಿನ್‌, ನಾನು ತಾತಾ ಆಗಿದ್ದೇನೆ. ಮೊಮ್ಮಕ್ಕಳೊಂದಿಗೆ ಆಟ ಆಡಿರುವುದು ತುಂಬಾ ಕಡಿಮೆ ಎಂದು ಹೇಳಿಕೊಂಡಿದ್ದರು.
ಪುಟಿನ್‌ ಮಗಳು ವೊರೊಂಟ್ಸೊವಾ ಪ್ರಖ್ಯಾತ ವೈದ್ಯೆ. ಮಕ್ಕಳಲ್ಲಿ ಕಂಡುಬರುವ ಅಪರೂಪದ ಅನುವಂಶಿಕ ಕಾಯಿಲೆಗಳಿಗೆ ಸಂಬಂಧಿಸಿದಂತೆ ತುಂಬಾ ಪ್ರಖ್ಯಾತಿ ಪಡೆದಿದ್ದಾರೆ. ರಷ್ಯಾ ಆರೋಗ್ಯ ಸಚಿವಾಲಯದ ಎಂಡೊಕ್ರಿನಾಲಜಿ ನ್ಯಾಷನಲ್‌ ಮೆಡಿಕಲ್‌ ರಿಸರ್ಚ್‌ ಸೆಂಟರ್‌ನಲ್ಲಿ ವೈದ್ಯಕೀಯ ಸಂಶೋಧನೆಯ ಮುಖ್ಯಸ್ಥರಾಗಿದ್ದಾರೆ.

ವೊರೊಂಟ್ಸೊವಾ ಅವರು 1986ರಲ್ಲಿ ಜನಿಸಿದರು. ಪುಟಿನ್‌ ಅವರು ಕೆಜಿಬಿ ಗೂಡಾಚಾರರಾಗಿದ್ದಾಗ ಇವರ ಜನನವಾಯಿತು. ಪುಟಿನ್‌ ಅವರಿಗೆ ಕತ್ರಿನಾ ಎಂಬ ಮತ್ತೊಬ್ಬರು ಮಗಳಿದ್ದಾರೆ.

ಗಣಿತ ಶಾಸ್ತ್ರ ಪ್ರಾಧ್ಯಾಪಕ ಬಿ.ಜಿ.ಗಿರೀಶ್ ರಾಷ್ಟ್ರಮಟ್ಟದ ಸಾಧನೆ

0

ಕುವೆಂಪು ವಿಶ್ವವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಬಿ.ಜೆ. ಗಿರೀಶ್, ರಾಷ್ಟ್ರ ಮಟ್ಟದ ಮೆಕಾನಿಕಲ್ ಮತ್ತು ಏರೋಸ್ಪೇಸ್ ಇಂಜಿನಿಯರಿಂಗ್ ವಿಭಾಗದ ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ.

2014ರಿಂದ ಈ ವಿಷಯಗಳ ಸಂಶೋಧನೆ ಕುರಿತಂತೆ ವಿಶ್ವಾಸಾರ್ಹ ದತ್ತಾಂಶ ನೀಡುತ್ತಾ ಬಂದಿರುವ ರಿಸರ್ಚ್ ಡಾಟ್ ಕಾಂ ಹೊರತಂದಿರುವ ನೂತನ ರಾಂಕಿಂಗ್ ಪಟ್ಟಿಯಲ್ಲಿ ಈ ಮಹತ್ವದ ಸಾಧನೆ ಮಾಡಿದ್ದಾರೆ.

2021ರ ಡಿಸೆಂಬರ್ ತಿಂಗಳ ವರೆಗಿನ ಸಂಶೋಧನಾ ಪ್ರಕಟಣೆಗಳು ಮತ್ತು ಉಲ್ಲೇಖಗಳನ್ನೊಳಗೊಂಡ ಹೆಚ್ ಇಂಡೆಕ್ಸ್ ಆಧರಿಸಿ ರಾಂಕಿಂಗ್ ಪಟ್ಟಿ ಸಿದ್ಧ ಪಡಿಸಲಾಗಿದೆ.

ಕಳೆದ ಕೆಲವು ವರ್ಷಗಳಿಂದೀಚೆಗೆ ರಾಷ್ಟ್ರ ಮಟ್ಟದ ವಿವಿಧ ಮಾನದಂಡಗಳಲ್ಲಿ ಮುಂಚೂಣಿಯ ವಿಜ್ಞಾನಿಯಾಗಿ ಗುರುತಿಸಿಕೊಂಡಿರುವ ಪ್ರೊ. ಬಿ. ಜೆ. ಗಿರೀಶ್ ಅವರ ಸಂಶೋಧನಾ ಕೊಡುಗೆ ಹೀಗೇ ಮುಂದುವರೆಯಲಿ ಮತ್ತು ಇತರ ಸಂಶೋಧಕರಿಗೆ ಸ್ಪೂರ್ತಿಯಾಗಲಿ ಎಂದು ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಹಾಗೂ ಕುಲಸಚಿವೆ ಜಿ ಅನುರಾಧ ಹಾರೈಸಿದ್ದಾರೆ.