Tuesday, February 24, 2026
Tuesday, February 24, 2026
Home Blog Page 1643

ಕೊರೋನ ಸಂದರ್ಭ ಭಾರತ ನೀಡಿದ ನೆರವು ಸ್ಮರಿಸಿದ ನೇಪಾಳ ಪ್ರಧಾನಿ

0

3 ದಿನಗಳ ಭಾರತದ ಪ್ರವಾಸಕ್ಕಾಗಿ ಬಂದಿರುವ ನೇಪಾಳದ ಪ್ರಧಾನಮಂತ್ರಿ ಶೇರ ಬಹಾದೂರ ದೇವುಬಾರವರು ಎಪ್ರಿಲ್‌ 2ರಂದು ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದರು.

ಈ ಸಮಯದಲ್ಲಿ ನೇಪಾಳದಲ್ಲಿ ‘ರೂಪೆ ಕಾರ್ಡ’ (ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ), ಹಾಗೆಯೇ ಭಾರತ ಮತ್ತು ನೇಪಾಳದ ನಡುವೆ ರೈಲು ಸೇವೆಯ ಉದ್ಘಾಟನೆ ಮಾಡಲಾಯಿತು.

ಈ ಸಮಯದಲ್ಲಿ ಇಬ್ಬರೂ ಪ್ರಧಾನಮಂತ್ರಿಗಳಿಂದ ಒಂದು ಸಂಯುಕ್ತ ನಿವೇದನೆಯನ್ನು ಪ್ರಸಿದ್ಧಿಗಾಗಿ ಕೊಡಲಾಯಿತು. ಇದರಲ್ಲಿ ದೇವುಬಾರವರು ‘ಇಂದು ನಾವು ಎರಡೂ ದೇಶಗಳಿಗೆ ಸಂಬಂಧಿಸಿದ ವಿವಿಧ ಸಂಗತಿಗಳ ಮೇಲೆ ಮೈತ್ರಿಪೂರ್ವಕ ಚರ್ಚೆ ಮಾಡಿದರು.

ನಾವು ಭಾರತದ ಪ್ರಭಾವಿ ವ್ಯವಸ್ಥಾಪನೆಯ ಪರಿಚಯವು ಕೊರೋನಾದ ಸಮಯದಲ್ಲಾಯಿತು. ಭಾರತವು ನಮಗೆ ಕೊರೋನಾ ಪ್ರತಿಬಂಧಾತ್ಮಕ ಲಸಿಕೆ ಹಾಗೂ ಇತರ ಸಾಹಿತ್ಯಗಳನ್ನು ಪೂರೈಸಿತು’ ಎಂದು ಹೇಳಿದರು.

ವಿವಾದಗಳನ್ನ ದ್ವಿಪಕ್ಷೀಯ ಸಂಧಾನದ ಮೂಲಕ ಪರಿಹರಿಸಿಕೊಳ್ಳೋಣ

0

ಕಾಶ್ಮೀರ ಸಮಸ್ಯೆ ಸೇರಿದಂತೆ ಭಾರತದ ಜೊತೆ ಎಲ್ಲ ವಿವಾದಗಳನ್ನು ದ್ವಿಪಕ್ಷೀಯ ಮಾತುಕತೆ ಮತ್ತು ರಾಜತಾಂತ್ರಿಕತೆ ಮೂಲಕ ಬಗೆಹರಿಸಿಕೊಳ್ಳಲು ಪಾಕಿಸ್ತಾನ ಬಯಸಿದೆ ಎಂದು ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ ಪ್ರಕಟಿಸಿದ್ದಾರೆ.

ಇದರೊಂದಿಗೆ ಅಮೆರಿಕ ಜತೆ ಉತ್ತಮ ಬಾಂಧವ್ಯದ ಸುಧೀರ್ಘ ಇತಿಹಾಸವನ್ನು ಮುಂದುವರಿಸುವ ಹಾಗೂ ಚೀನಾದ ಜತೆ ನಿಕಟ ಸಂಬಂಧ ಹೊಂದಲು ಪಾಕಿಸ್ತಾನ ಬಯಸಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ರವಿವಾರ ನಡೆಯುವ ಅವಿಶ್ವಾಸ ನಿರ್ಣಯದ ಮೇಲಿನ ಮತದಾನದ ಹಿನ್ನೆಲೆಯಲ್ಲಿ ದೇಶದ ಭವಿಷ್ಯದ ವಿದೇಶಾಂಗ ನೀತಿಯ ಸ್ಪಷ್ಟ ಸೂಚನೆ ಇದಾಗಿದೆ ಎಂದು ತಿಳಿದುಬಂದಿದೆ.

ತಾವು ರಷ್ಯಾಗೆ ಭೇಟಿ ನೀಡಿದ ಬಳಿಕ ತಮ್ಮ ಸರ್ಕಾರವನ್ನು ಪದಚ್ಯುತಗೊಳಿಸಲು ಅಮೆರಿಕದ ಸೂಚನೆಯಂತೆ ವಿದೇಶಿ ನೆರವಿನ ಪಿತೂರಿ ನಡೆದಿದೆ ಎಂದು ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆ ನೀಡಿದ್ದು, ಸೇನಾ ಮುಖ್ಯಸ್ಥರ ಹೇಳಿಕೆ ಇದಕ್ಕೆ ತದ್ವಿರುದ್ಧವಾಗಿದೆ.

ಅಮೆರಿಕ ಜತೆಗಿನ ಸಂಬಂಧವನ್ನು ಮುಂದುವರಿಸುವ ಸುಳಿವನ್ನು ಸೇನಾ ಮುಖ್ಯಸ್ಥರು ನೀಡಿದ್ದಾರೆ. ದೇಶದ ಪೂರ್ವ ಗಡಿ ಮತ್ತು ವಾಸ್ತವ ನಿಯಂತ್ರಣ ರೇಖೆಯಲ್ಲಿನ ಪರಿಸ್ಥಿತಿ ತೃಪ್ತಿದಾಯಕ ಮತ್ತು ಶಾಂತಿಯುತವಾಗಿ ಇರುವುದರಿಂದ ಪಾಕಿಸ್ತಾನ ನಿರಾಳವಾಗಿದೆ ಎಂದು ಜನರಲ್ ಬಾಜ್ವಾ ಹೇಳಿದ್ದಾರೆ.

ವಿಶ್ವದ ಮೂರನೇ ಒಂದರಷ್ಟು ಭಾಗವಾದ ಗಲ್ಫ್ ಪ್ರದೇಶದಲ್ಲಿ ಒಂದಲ್ಲ ಒಂದು ಸಂಘರ್ಷ ಮತ್ತು ಯುದ್ಧ ನಡೆಯುತ್ತಿದ್ದರೆ, ನಮ್ಮ ಪ್ರದೇಶದಿಂದ ಈ ಜ್ವಾಲೆಯ ಹೊಗೆಯನ್ನು ದೂರ ಇಡುವುದು ಅಗತ್ಯಎಂದು ಇಸ್ಲಾಮಾಬಾದ್ ಸೆಕ್ಯುರಿಟಿ ಡಯಲಾಗ್ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪ್ರತಿಪಾದಿಸಿದರು.

ಕಾಶ್ಮೀರ ಸಮಸ್ಯೆ ಹೊರತಾಗಿ ಪಾಕಿಸ್ತಾನವು ಭಾರತ- ಚೀನಾ ಗಡಿ ವಿವಾದವನ್ನು ಗಂಭೀರವಾಗಿ ಪರಿಗಣಿಸಿದೆ. “ಉಭಯ ದೇಶಗಳ ರಾಜಕೀಯ ಮುಖಂಡರು ಭಾವನಾತ್ಮಕ ಮತ್ತು ಗ್ರಹಿಕೆಯ ಪೂರ್ವಾಗ್ರಹವನ್ನುಬಿಟ್ಟು, ಶಾಂತಿ ಮತ್ತು ಸಮೃದ್ಧತೆಯನ್ನು ಜನರಿಗೆ ತರುವ ಅಗತ್ಯವಿದೆ” ಎಂದು ಬಾಜ್ವಾ ಪ್ರತಿಪಾದಿಸಿದರು.

ಅಸಂಘಟಿತ ಕಾರ್ಮಿಕರೆ ಇ-ಶ್ರಮ್ ಕಾರ್ಡ್ ಪಡೆದುಕೊಳ್ಳಿರಿ

0

ಅಸಂಘಟಿತ ವರ್ಗದ ಜನರಿಗೆ ಇ-ಶ್ರಮ್ ಕಾರ್ಡ್ ಮೂಲಕ ಸರ್ಕಾರ ಸಾಕಷ್ಟು ಸಹಾಯ ಮಾಡುತ್ತಿದೆ. ಇ-ಶ್ರಮ್ ಕಾರ್ಡ್ ಯೋಜನೆಗೆ ಸಂಬಂಧಿಸಿದ ಜನರ ಖಾತೆಗಳಿಗೆ ಮುಂದಿನ ಕಂತು 500 ರೂ.ಗಳನ್ನು ಸರ್ಕಾರ ಮತ್ತೊಮ್ಮೆ ಕಳುಹಿಸಲಿದೆ.

ಕಂತಿನ ಹೊರತಾಗಿ ಫಲಾನುಭವಿಗಳು ಹಲವು ಸವಲತ್ತುಗಳನ್ನು ಪಡೆಯುತ್ತಿದ್ದಾರೆ.

ಈ ಯೋಜನೆಯ ಪ್ರಕಾರ, ಅನೇಕ ಪ್ರಯೋಜನಗಳನ್ನು ಜನರಿಗೆ ನೀಡಲಾಗುತ್ತಿದೆ. ಕೆಲ ಯೋಜನೆಗಳಲ್ಲಿ ಉದ್ಯೋಗ, ವಿಮೆಯಂತಹ ಸೌಲಭ್ಯಗಳನ್ನು ನೀಡಿದರೆ ಮತ್ತೊಂದೆಡೆ ಕೆಲವು ಯೋಜನೆಗಳಲ್ಲಿ ಜನರಿಗೆ ಆರ್ಥಿಕ ನೆರವು ನೀಡಲಾಗುತ್ತದೆ.

ಇ-ಶ್ರಮ್ ಕಾರ್ಡ್ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಜನರಿಗೆ ವರ್ಗಾಯಿಸಲಾಗುತ್ತಿದೆ.

ಇ-ಶ್ರಮ್ ಕಾರ್ಡ್ ಹೊಂದಿದ್ದರೆ, ನೀವು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿಯಲ್ಲಿ 2 ಲಕ್ಷದವರೆಗೆ ವಿಮಾ ರಕ್ಷಣೆಯನ್ನು ಪಡೆಯುತ್ತೀರಿ. ಕಾರ್ಮಿಕರು ಅಪಘಾತದಲ್ಲಿ ಮೃತಪಟ್ಟರೆ ಅವರ ಕುಟುಂಬಕ್ಕೆ 2 ಲಕ್ಷ ರೂ., ವ್ಯಕ್ತಿಯು ಅಂಗವೈಕಲ್ಯ ಹೊಂದಿದ್ದರೆ, 1 ಲಕ್ಷ ರೂ. ನೀಡಲಾಗುವುದು.

ಇ-ಶ್ರಮ್ ಕಾರ್ಡ್ ಹೊಂದಿದ್ದರೆ, ಈ ಯೋಜನೆಯಡಿಯಲ್ಲಿ ಮನೆ ನಿರ್ಮಿಸಲು ಸಹಾಯಕ್ಕಾಗಿ ಹಣವನ್ನು ಸಹ ನೀಡಲಾಗುತ್ತದೆ. ಅದೇ ಸಮಯದಲ್ಲಿ, ಇ-ಶ್ರಮ್ ಕಾರ್ಡ್ ಹೊಂದಿರುವವರು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳ ನೇರ ಪ್ರಯೋಜನಗಳನ್ನು ಸಹ ಪಡೆಯುತ್ತಾರೆ.

ಉಚಿತ ಸೈಕಲ್, ಉಚಿತ ಹೊಲಿಗೆ ಯಂತ್ರ, ಮಕ್ಕಳಿಗೆ ಸ್ಕಾಲರ್‌ಶಿಪ್, ನಿಮ್ಮ ಕೆಲಸಕ್ಕೆ ಉಚಿತ ಪರಿಕರಗಳು ಮುಂತಾದ ಕಾರ್ಮಿಕ ಇಲಾಖೆಯ ಎಲ್ಲಾ ಯೋಜನೆಗಳ ಪ್ರಯೋಜನವನ್ನು ಸಹ ಪಡೆಯಬಹುದು.

ಮುಂದಿನ ದಿನಗಳಲ್ಲಿ ಪಡಿತರ ಚೀಟಿಯನ್ನು ಇ-ಶ್ರಮ್ ಕಾರ್ಡ್ ಲಿಂಕ್ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

ಇದರಿಂದ ನೀವು ದೇಶದ ಯಾವುದೇ ಪಡಿತರ ಅಂಗಡಿಯಿಂದ ಪಡಿತರವನ್ನು ಪಡೆಯಲು ಸಾಧ್ಯವಾಗುತ್ತದೆ. ಇದಲ್ಲದೇ ಪ್ರತಿ ತಿಂಗಳು ಆರ್ಥಿಕ ನೆರವು ನೀಡಲಾಗುತ್ತದೆ ಎಂದು ತಿಳಿದುಬಂದಿದೆ.

ಉಕ್ರೇನಿಗೆ ಜೀವರಕ್ಷಕ ಉಪಕರಣ ನೆರವು- ಅಮೆರಿಕ

0

ರಷ್ಯಾ ಉಕ್ರೇನ್ ಮೇಲೆ ರಾಸಾಯನಿಕ ಅಸ್ತ್ರಗಳನ್ನು ಪ್ರಯೋಗಿಸಿದರೆ, ಅಮೆರಿಕ ಉಕ್ರೇನ್ಗೆ ಜೀವರಕ್ಷಕ ಉಪಕರಣ ಹಾಗೂ ಸರಬರಾಜುಗಳನ್ನು ಒದಗಿಸುತ್ತದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಪ್ಸಾಕಿ ತಿಳಿಸಿದರು.

ಅಮೆರಿಕ ಹಾಗೂ ಅಂತರರಾಷ್ಟ್ರೀಯ ಸಮುದಾಯ ಸದಸ್ಯರು ರಷ್ಯಾ, ಉಕ್ರೇನ್ ಮೇಲೆ ರಾಸಾಯನಿಕ ಅಥವಾ ಜೈವಿಕ ಶಸ್ತ್ರಾಸ್ತ್ರಗಳನ್ನು ಬಳಸುವ ಬಗ್ಗೆ ಆಗಾಗ ಎಚ್ಚರಿಸುತ್ತಲೇ ಇದ್ದಾರೆ.

ಆದರೆ ಇದು ರಷ್ಯಾದ ಬೆದರಿಕೆಯಷ್ಟೇ ಆಗಿರಬಹುದು ಎಂದು ಜೆನ್ ಪಾಕ್ಸಿ ಹೇಳಿದರು. ಒಂದು ವೇಳೆ ರಷ್ಯಾ ಉಕ್ರೇನ್ ಮೇಲೆ ರಾಸಾಯನಿಕ ಅಸ್ತ್ರಗಳನ್ನು ಪ್ರಯೋಗಿಸಿದ್ದಲ್ಲಿ, ಉಕ್ರೇನ್ಗೆ ಜೀವರಕ್ಷಕ ಉಪಕರಣ ಹಾಗೂ ಸರಬರಾಜನ್ನು ನೀಡುತ್ತೇವೆ.

ಆದರೆ ಉಕ್ರೇನ್ ಗೆ ನೆರವು ನೀಡಲು ಅಮೆರಿಕ ಬದ್ಧವಾಗಿದೆ. ಈ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ ಎಂದು ಸ್ಪಷ್ಟಪಡಿಸಿದರು.

ಶಿವಮೊಗ್ಗ ಕಡೆ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆ

0

ರಾಜ್ಯದ ಕರಾವಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇಂದಿನಿಂದ ಏಪ್ರಿಲ್ 6 ರವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ತಮಿಳುನಾಡಿನ ಕರಾವಳಿಯಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಏ.6ರವರೆಗೂ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರು, ಮೈಸೂರು, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಚಾಮರಾಜನಗರ, , ಚಿಕ್ಕಮಗಳೂರು ಮತ್ತು ಶಿವಮೊಗ್ಗದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಕರಾವಳಿಯ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ನಾಳೆ ಭಾರೀ ಮಳೆಯಾಗಲಿದೆ. ಕರ್ನಾಟಕದ ದಕ್ಷಿಣ ಒಳನಾಡಿನ ಹಲವೆಡೆ ಮಳೆಯಾಗುವ ಸಾಧ್ಯತೆಯಿದ್ದು, ಇಂದಿನಿಂದ ನಾಲ್ಕು ದಿನ ಬೆಂಗಳೂರು, ಮೈಸೂರು, ಹಾಸನ, ಕೊಡಗು, ಮಂಡ್ಯ, ರಾಮನಗರ, ಕೋಲಾರದಲ್ಲಿ ಗುಡುಗು ಸಹಿತ ಮಳೆಯಾಗಲಿದೆ.

ಏ. 5 ಹಾಗೂ 6ರಂದು ಕೂಡ ಹಲವೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಕನ್ನಡ ಭಾಷೆಯನ್ನು ಎಲ್ಲರೂ ಗೌರವಿಸಬೇಕು-ಡಾ.ನಾ. ಡಿಸೋಜ

0

ಶಿವಮೊಗ್ಗ ಪೌರಾಣಿಕ ಐತಿಹಾಸಿಕವಾಗಿ ಪ್ರಸಿದ್ಧಿಯನ್ನು ಗಳಿಸಿದೆ.
ಕಲೆ-ಸಾಹಿತ್ಯ ಸಾಮಾಜಿಕ ಸಾಂಸ್ಕೃತಿಕ ಕ್ಷೇತ್ರದಲ್ಲಿ ಕೂಡ ದೇಶದಲ್ಲೆಲ್ಲಾ ಗಮನಸೆಳೆದ ಜಿಲ್ಲೆ ಇದಾಗಿದೆ.

ಸಾಹಿತ್ಯದ ಹಬ್ಬವೆಂದರೆ ಇಲ್ಲಿ ಸಾಮಾನ್ಯವೇ… ಇಲ್ಲಿ, ಹಲವಾರು ಉಪನ್ಯಾಸಗಳು, ಕವಿಗೋಷ್ಠಿಗಳು, ಹಾಗೂ ಸಾಹಿತ್ಯ ಸಮ್ಮೇಳನಗಳು ಜರುಗುತ್ತಲೇ ಇರುತ್ತವೆ.

ಈ ಬಾರಿಯ ವಿಶೇಷವೆಂದರೆ,
ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡ ಸಾಹಿತ್ಯ ಪರಿಷತ್ತಿನಿಂದ 1915ರಿಂದ ನಡೆಸಿಕೊಂಡು ಬರುತ್ತಿರುವ ದೊಡ್ಡ ಪ್ರಮಾಣದ ಕನ್ನಡ ಸಮ್ಮೇಳನ.
ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ 16ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಶಿವಮೊಗ್ಗದ ಸಾಹಿತ್ಯ ಗ್ರಾಮ ಚಾಲುಕ್ಯ ನಗರ, ಗೋಪಿಶೆಟ್ಟಿಕೊಪ್ಪ ದಲ್ಲಿ ಹಮ್ಮಿಕೊಳ್ಳಲಾಯಿತು.

ಮಾರ್ಚ್ 30, ಸಮ್ಮೇಳನದ ಉದ್ಘಾಟನೆ ನಡೆಯಿತು. ಮಾರ್ಚ್ 31ರಂದು ಸಂಜೆ ಸಮಾರೋಪ ಸಮಾರಂಭ ನೆರವೇರಿತು.

ವಿವಿಧ ಜಾನಪದ ಕಲಾ ತಂಡಗಳಿಂದ ರಾಜ ಬೀದಿಗಳಲ್ಲಿ ಹಬ್ಬದ ಸಡಗರವಿತ್ತು.

ಪ್ರಮುಖವಾಗಿ ಡೊಳ್ಳುಕುಣಿತ ಈ ಮೆರವಣಿಗೆಯಲ್ಲಿ ಕೇಂದ್ರಬಿಂದುವಾಗಿತ್ತು.

ಸಮ್ಮೇಳನದ ಅಧ್ಯಕ್ಷರಿಂದ ಗೋಪಾಲ ಶಾಲಾ ವಿದ್ಯಾರ್ಥಿಗಳಿಗೆ ಕನ್ನಡ ಪುಸ್ತಕ ವಿತರಿಸುವ ಮೂಲಕ ಮೆರವಣಿಗೆ ಆರಂಭಗೊಂಡಿತು.

ಮೆರವಣಿಗೆಯು ಶಾಂತವೇರಿ ಗೋಪಾಲಗೌಡ ಮಹಾದ್ವಾರದ ಮೂಲಕ ಡಾ.ಜಿ.ಎಸ್. ಶಿವರುದ್ರಪ್ಪ ಸಾಹಿತ್ಯ ಸಭಾಂಗಣದೊಳಗೆ ಪ್ರವೇಶಿಸಿತು.

ಸಭಾಂಗಣದ ಹೊರವಲಯದಲ್ಲಿ ವಿವಿಧ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ನಡೆಯಿತು. ಪುಸ್ತಕಗಳಲ್ಲದೆ ದೇಶಿಯ ಉತ್ಪನ್ನಗಳು, ಹಾಗೂ ಖಾದಿ ಬಟ್ಟೆಗಳ ಅಂಗಡಿಗಳು ಸಹ ಇಲ್ಲಿ ನೆರೆದಿದ್ದವು.

16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಸ್ಥಾನವನ್ನು ಅಲಂಕರಿಸಿದ ಡಾ. ಗುಂಡಾಜೋಯಿಸರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಎರಡು ದಿನಗಳ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ, ಮೊದಲ ದಿನ ಹಾಲು ಹಳ್ಳ ಹರಿಯಲಿ ಕವಿಗಳ ಸಮಯ ಗೋಷ್ಠಿ, ಸಮ್ಮೇಳನದ ಅಧ್ಯಕ್ಷರ ಬದುಕು-ಬರಹ ,ಡಾ. ಕೆಳದಿ ಗುಂಡಾಜೋಯಿಸ್ ಅವರ ಸಾಹಿತ್ಯ ಕೃತಿಗಳ ಅವಲೋಕನ, ಹಾಗೂ ಸಂಶೋಧನಾ ಕ್ಷೇತ್ರಕ್ಕೆ ಕೆಳದಿ ಗುಂಡಾಜೋಯಿಸ್ ಅವರ ಕೊಡುಗೆಗಳ ಗೋಷ್ಠಿ, ಸಂಜೆ 6 ಗಂಟೆಯ ಹೊತ್ತಿಗೆ ರಾಷ್ಟ್ರೀಯ ಶಿಕ್ಷಣ ನೀತಿ ಶಿಕ್ಷಣ ಮತ್ತು ಚಿನ್ನದ ಮುಂದಿನ ಅಂಶಗಳ ಕುರಿತು ಗೋಷ್ಠಿ ನೆರವೇರಿತು.

ಮಾರ್ಚ್ 31ರಂದು, ಹೊಸ ಓದು ಹೊಸದನಿ, ವಿಶೇಷ ಉಪನ್ಯಾಸ, ಜೇನು ಮಳೆಯು ಸುರಿಯಲಿ , ಪುಸ್ತಕ ಅವಲೋಕನ ಗೋಷ್ಠಿಗಳು ನೆರವೇರಿದವು.
ಜನಪದ ವಾಗ್ಮಿ, ಲಘು ವಿಷಯಗಳನ್ನು ಜನರಿಗೆ ಮುಟ್ಟಿಸುವಂತಹ ಮಾತುಗಾರರಾದ ಪ್ರೋ. ಕೃಷ್ಣೇಗೌಡರ ಕನ್ನಡ ಪ್ರೀತಿಯ ಕುರಿತು ಮಾತನಾಡಿದರು.

ಸಾಹಿತ್ಯ ಸಮ್ಮೇಳನದ ಎರಡನೆಯ ದಿನ ಎಲ್ಲ ಕನ್ನಡ ಮನಸ್ಸುಗಳು ಸೇರಿ ಭಾರತ್ ಸೇವಾದಳದ ಜಿಲ್ಲಾ ಸಂಘಟಕರಾದ ಸೂರಜ್ ಅವರ ನೇತೃತ್ವದಲ್ಲಿ ಧ್ವಜಾವರೋಹಣ ಕಾರ್ಯಕ್ರಮ ನೆರವೇರಿತು.
ಕೆಳದಿ ಗುಂಡಾಜೋಯಿಸ್, ಹಾಗೂ ಹಾಗೂ ಕನ್ನಡದ ಖ್ಯಾತ ಕವಿಗಳಾದ ನಾ. ಡಿಸೋಜಾ ಅವರು ಧ್ವಜಾವರೋಹಣ ಕಾರ್ಯಕ್ರಮವನ್ನು ನೆರವೇರಿಸಿದರು.
ವೇದಿಕೆ ಕಾರ್ಯಕ್ರಮ ಆರಂಭಗೊಂಡ ನಂತರ ಕಾರ್ಯಕ್ರಮದಲ್ಲಿ ನೆರೆದಿರುವ ಹಲವಾರು ಕನ್ನಡ ಪ್ರೇಮಿಗಳು ಗಾನಸುಧೆ ಹರಿಸಿದರು.
ನಂತರ ಜನಪದ ಗೀತೆ, ಭಾವಗೀತೆಗಳ ಗೀತ ಗಾಯನ ನಡೆಯಿತು.
ಕನ್ನಡ ಸಾಹಿತ್ಯ ಸಮ್ಮೇಳನದ ವಿಶೇಷ ಆಹ್ವಾನಿತರು, ಹಾಗೂ ಹಿರಿಯ ಸಾಹಿತಿಗಳಿಗೆ ಸನ್ಮಾನ ಕಾರ್ಯಕ್ರಮ ನೆರವೇರಿತು.

ಕಾರ್ಯಕ್ರಮವನ್ನುದ್ದೇಶಿಸಿ, ಮಡಿಕೇರಿಯ 81ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಡಾ.ನಾ. ಡಿಸೋಜಾರವರು ಸಮಾರೋಪ ನುಡಿಗಳನ್ನಾಡುತ್ತಾ, 92 ವರ್ಷದ ಯುವಕ ಅಂದರೆ ಕೆಳದಿ ಗುಂಡಾ ಜೋಯಿಸ್ ಅವರು ಇಲ್ಲಿ ಬಂದು ಮಾತನಾಡಿದ ಮೇಲೆ. ನಾನು 82 ಅಲ್ಲೇ ಕೂತು ಮಾತನಾಡುವುದು ಸೂಕ್ತವಲ್ಲ ಎನಿಸಿತು. ಅವರಿಗೂ ನನಗೂ ಅವಿನಾಭಾವ ಸಂಬಂಧ. ಈ ಕಾರ್ಯಕ್ರಮಕ್ಕೆ ಬಂದು ಬಹಳ ಸಂತೋಷವಾಯಿತು. ಇಡೀ ನಾಡಿನ ಕೆಳದಿಯ ಇತಿಹಾಸವನ್ನು ಪರಿಚಯಿಸಿದವರು ಕೆಳದಿ ಗುಂಡಾಜೋಯಿಸ್. ಇವರೊಂದಿಗೆ ಈ ಸಮಾರಂಭದಲ್ಲಿ ಭಾಗಿಯಾಗಿರುವುದು ನಿಜಕ್ಕೂ ಸಂತೋಷದ ವಿಚಾರ. ಕನ್ನಡ ಭಾಷೆಯನ್ನು ಎಲ್ಲರೂ ಗೌರವಿಸಬೇಕು. ನಾವು ನಮ್ಮ ಭಾಷೆ, ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗುವುದು ನಮ್ಮ ಹೊಣೆ ಎಂದರು.

ನಂತರ ಸಾಗರದ ಸಂಶೋಧಕರು, ಹಿರಿಯ ಸಾಹಿತಿಗಳು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾದ ಡಾ‌. ಕೆ.ಎಸ್. ಗುಂಡಾ ಜೋಯಿಸ್ ರವರು ಮಾತನಾಡುತ್ತಾ, ಅನ್ಯ ಭಾಷೆಗಳ ಅತಿಕ್ರಮಣವನ್ನು ಕಡಿಮೆ ಮಾಡಲು ಕನ್ನಡ ಭಾಷೆಯಲ್ಲೇ ವ್ಯವರಿಸಬೇಕು. ಮಕ್ಕಳಿಗೆ ಮೊದಲು ಕನ್ನಡ ಶಿಕ್ಷಣವನ್ನು ನೀಡಬೇಕು ಎಂದರು.

ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿ. ಮಂಜುನಾಥ್ ರವರು ಅಧ್ಯಕ್ಷ ನುಡಿಗಳನ್ನಾಡಿದರು.

ಈ ಮೂಲಕ ಶಿವಮೊಗ್ಗದ 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಮುಕ್ತಾಯಗೊಂಡಿತು.

ಪಿಳ್ಳಂಗೆರೆ ದೇಗುಲ ಕಲ್ಯಾಣಿಗೆ ನರೇಗಾದಿಂದ ಪುನರುಜ್ಜೀವನ

0

ನರೇಗಾ ಯೋಜನೆಯಡಿ ಶಿವಮೊಗ್ಗ ಜಿಲ್ಲೆಯ ಪಿಳ್ಳೆಂಗೆರೆ ಗ್ರಾಮದಲ್ಲಿರುವ ಶ್ರೀರಂಗನಾಥಸ್ವಾಮಿ ದೇಗುಲದ ಕಲ್ಯಾಣಿಯನ್ನು ಪುನಶ್ಚೇತನಗೊಳಿಸಿರುವುದರಿಂದ ಕಲ್ಯಾಣಿಗೆ ಮರುಜೀವ ಬಂದು ರಮಣೀಯವಾಗಿ ಕಾಣುತ್ತಿದೆ.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ “100 ದಿನ ಜಲಶಕ್ತಿ ಅಭಿಯಾನ” ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಅಭಿಯಾನದಲ್ಲಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಬರುವ ಜಲ ಮೂಲಗಳನ್ನು ಗುರುತಿಸಿ ಪುನಶ್ಚೇತನಗೊಳಿಸುವ ಉದ್ದೇಶದಿಂದ ಪಿಳ್ಳಂಗೆರೆ ಗ್ರಾಮದ ಶ್ರೀ ರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿರುವ ಕಲ್ಯಾಣಿ ಪುನಶ್ಚೇತನ ಕಾಮಗಾರಿಯನ್ನು ಅನುಷ್ಠಾನ ಮಾಡಲಾಗಿದೆ.

ಶ್ರೀ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಸುಮಾರು 700 ವರ್ಷದ ಇತಿಹಾಸವಿದ್ದು, ದೇವಸ್ಥಾನ ಆವರಣದ ಕಲ್ಯಾಣಿಯಲ್ಲಿರುವ ಜಲವನ್ನು ದೇವಸ್ಥಾನಕ್ಕೆ ಬಳಸಲಾಗುತ್ತಿತ್ತು. ಆದರೆ ಸುಮಾರು 30 ವರ್ಷಗಳಿಂದ ಕಲ್ಯಾಣಿ ಜಲವು ಬತ್ತಿಹೋಗಿದ್ದು, ಕಲ್ಯಾಣಿಯ ಸುತ್ತಲು ಗಿಡ ಗಂಟಿಗಳಿಂದ ತುಂಬಿ ಕಲ್ಯಾಣಿಯ ಗುರುತು ಇಲ್ಲದಂತಹ ಪರಸ್ಥಿತಿ ನಿರ್ಮಾಣವಾಗಿತ್ತು.

ಜಲಶಕ್ತಿ ಅಭಿಯಾನ ಕಾರ್ಯಕ್ರಮದ ಮೂಲಕ “ಕ್ಯಾಚ್ ದಿ ರೈನ್” ಶೀರ್ಷಿಕೆಯಡಿಯಲ್ಲಿ ಜಿಲ್ಲೆಯ ಜಲಮೂಲಗಳಾದ ನದಿ, ಕೆರೆ, ಕಲ್ಯಾಣಿ, ಗೋಕಟ್ಟೆಗಳನ್ನು ಗುರುತಿಸಿ ಅವುಗಳನ್ನು ಪುನಶ್ಚೇತನಗೊಳಿಸಲು ತೀರ್ಮಾನಿಸುವ ಮೂಲಕ ಪಿಳ್ಳಂಗೆರೆ ಗ್ರಾಮ ಪಂಚಾಯತಿಯಲ್ಲಿರುವ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿರುವ ಕಲ್ಯಾಣಿಯ ಪುನಶ್ಚೇತನಕ್ಕೆ ಸಚಿವರಾದ ಕೆ.ಎಸ್.ಈಶ್ವರಪ್ಪ ಅವರು 2021 ರ ಏಪ್ರಿಲ್ 24 ರಂದು ಶಂಕುಸ್ಥಾಪನೆ ಮಾಡಿ ಕಾಮಗಾರಿಗೆ ಚಾಲನೆ ನೀಡಿದ್ದು, ಸುಮಾರು ರೂ.5.00 ಲಕ್ಷಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

ಈ ಯೋಜನೆಯಡಿ ಕಲ್ಯಾಣಿಯನ್ನು ಪುನಶ್ಚೇತನಗೊಳಿಸಿರುವುದರಿಂದ ಕಲ್ಯಾಣಿಗೆ ಹೊಸ ಮೆರುಗು ಬಂದಿದೆ. ಗ್ರಾಮ ಪಂಚಾಯತಿಯಿಂದ ಕಲ್ಯಾಣಿ ಸುತ್ತಲು ಗಿಡಗಳನ್ನು ನೆಡಲಾಗಿದೆ. ಜುಲೈ ತಿಂಗಳಲ್ಲಿ ಅತೀ ಹೆಚ್ಚು ಮಳೆಯಾದ ಕಾರಣ ಕಲ್ಯಾಣಿ ಸಂಪೂರ್ಣ ಭರ್ತಿಗೊಂಡು, ಸುತ್ತ ಮುತ್ತಲಿನ ಪ್ರದೇಶವು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಕಲ್ಯಾಣಿಯ ಪ್ರಶಾಂತತೆಯ ನೋಟ ಹಾಗೂ ತುಂಗಾ ತೀರದ ತಟವು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದ್ದು, ಕಲ್ಯಾಣಿಗೆ ಮರುಜೀವ ಬಂದಿದೆ.

ನರೇಗಾ ಯೋಜನೆಯಡಿಯಲ್ಲಿ ಕಲ್ಯಾಣಿ ಪುನಶ್ಚೇತನ ಕಾಮಗಾರಿಯನ್ನು ಅಂದಾಜು ಮೊತ್ತ ರೂ.5 ಲಕ್ಷಗಳಲ್ಲಿ ಪೂರ್ಣಗೊಳಿಸಿದ್ದೇವೆ. ಕಾಮಗಾರಿ ಪ್ರಾರಂಭದಲ್ಲಿ 20 ಮೆಟ್ಟಿಲುಗಳು ಇರಬೇಕು ಎಂದು ತಿಳಿದುಕೊಂಡಿದ್ದೆ.ಈ ಮೆಟ್ಟಿಲುಗಳನ್ನು ಪೂರ್ಣವಾಗಿ ತೆಗೆದ ನಂತರ 3 ಅಡಿ ಸುತ್ತಳತೆಯ 30 ಅಡಿ ಆಳವುಳ್ಳ ಬಾವಿ ಸಿಕ್ಕಿತು. ಇದನ್ನು ತೆಗೆಯಲು ತುಂಬ ಶ್ರಮ ಪಡಬೇಕಾಯಿತು. ಆದರೂ ಕೂಡ ಎಲ್ಲರ ಸಹಕಾರದಿಂದ ಯಶಸ್ಚಿಯಾಗಿ ಕಾಮಗಾರಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಿದೆ ಎಂದು ಪಿಳ್ಳೆಂಗೆರೆ , ಗ್ರಾಮ ಪಂಚಾಯಿತಿ ಪಿಡಿಓ ಎಸ್. ಹಾಲೇಶ್ ಅವರು ತಿಳಿಸಿದ್ದಾರೆ.

100 ದಿನ ಜಲಶಕ್ತಿ ಅಭಿಯಾನ”ದ ಅಡಿಯಲ್ಲಿ ಜಿಲ್ಲೆಯ 12 ಕಲ್ಯಾಣಿಗಳು, 156 ಕುಂಟೆಗಳು, 24 ಗೊಕಟ್ಟೆ, 86 ಕೆರೆಗಳು ಹಾಗೂ 61 ಕಟ್ಟೆಗಳನ್ನು ಪುನಶ್ಚೇತನಗೊಳಿಸಿದ್ದೇವೆ. ಪಿಳ್ಳಂಗೆರೆ ಗ್ರಾಮದಲ್ಲಿರುವ ಶ್ರೀ ರಂಗನಾಥಸ್ವಾಮಿ ದೇವಾಲಯದ ಕಲ್ಯಾಣಿ ಪುನಶ್ಚೇತನ ಕಾಮಗಾರಿಯನ್ನು ಕೈಗೊಳ್ಳುವ ಮೊದಲು ಮತ್ತು ಕಾಮಗಾರಿ ಅನುಷ್ಠಾನವಾದ ಮೇಲೆ ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಕಾಮಗಾರಿ ಪೂರ್ಣಗೊಂಡ ಬಳಿಕ ಅಲ್ಲಿನ ಸ್ಥಳೀಯರಿಗೆ, ಭಕ್ತರಿಗೆ ಮತ್ತು ಅರ್ಚಕರಿಗೆ ತುಂಬಾ ಖುಷಿಯಾಗಿದೆ.

ಮಹಾತ್ಮಗಾಂಧಿ ನರೇಗಾ ಯೋಜನೆಯಿಂದ ಒಂದು ಉತ್ತಮವಾದ ಹಾಗೂ ಗುಣಮಟ್ಟದ ಆಸ್ತಿಯನ್ನು ಮರು ನಿರ್ಮಾಣ ಮಾಡಿದ್ದೇವೆ ಎಂದು ಜಿ.ಪಂ.ಸಿಇಓ ಎಂ.ಎಲ್. ವೈಶಾಲಿಯವರು ತಿಳಿಸಿದ್ದಾರೆ.

ಕಲ್ಯಾಣಿ ಪುನಶ್ಚೇತನ ಕಾಮಗಾರಿ ಅನುಷ್ಠಾನದಿಂದ ನಮ್ಮ ಪಿಳ್ಳಂಗೆರೆ ಗ್ರಾಮದ ಶ್ರೀರಂಗನಾಥ ಸ್ವಾಮಿ ದೇವಾಲಯಕ್ಕೆ ಹೊಸ ಮೆರಗು ಬಂದಂತಾಗಿದೆ. ಕಲ್ಯಾಣಿ ಪುನಶ್ಚೇತನ ಕಾಮಗಾರಿ ಅನುಷ್ಠಾನಕ್ಕೆ ಸಹಕರಿಸಿದ ಎಲ್ಲಾ ಅಧಿಕಾರಿಗಳಿಗೂ ಪಿಳ್ಳೆಂಗೆರೆ ಗ್ರಾಮಸ್ಥರು ವಂದನೆಗಳನ್ನು ತಿಳಿಸಿದ್ದಾರೆ.

ಮಕ್ಕಳು ಮನಸ್ಸನ್ನು ನಿಯಂತ್ರಿಸಿ ಪಾಠ ಕಲಿಯಬೇಕು- ಮೋದೀಜಿ

0

ಮಕ್ಕಳು ಮನಸನ್ನು ಹಿಡಿತದಲ್ಲಿ ಇಟ್ಟುಕೊಂಡು ಪಾಠ ಕಲಿಯಬೇಕು. ಆನ್‌ಲೈನ್ ಅಥವಾ ಆಫ್‌ಲೈನ್ ಯಾವುದೇ ಕ್ಲಾಸ್ ಇದ್ದರೂ ಮನಸನ್ನು ಹಿಡಿತದಲ್ಲಿ ಇಟ್ಟುಕೊಂಡಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಆನ್‌ಲೈನ್ ಅಥವಾ ಆಫ್‌ಲೈನ್ ಯಾವುದೇ ಕ್ಲಾಸ್ ಇದ್ದರೂ ಮನಸನ್ನು ಹಿಡಿತದಲ್ಲಿ ಇಟ್ಟುಕೊಂಡಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು‌ ವರ್ಚುವಲ್ ಮೂಲಕ ಮಕ್ಕಳ ಜೊತೆ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಮೈಸೂರಿನಿಂದ ಏಕೈಕ ವಿದ್ಯಾರ್ಥಿಯಾಗಿ ಭಾಗವಹಿಸಿದ್ದ ಜಿಲ್ಲೆಯ ದೊಡ್ಡ ಮಾರನಗೌಡನಹಳ್ಳಿಯ ಜವಾಹರ್ ನವೋದಯ ವಿದ್ಯಾಲಯದ 11ನೇ ತರಗತಿಯ ವಿದ್ಯಾರ್ಥಿ ಎಂ.ಬಿ. ತರುಣ್ ಅವರು ಶುಕ್ರವಾರ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಆನ್‌ಲೈನ್ ಪಾಠದಲ್ಲಿ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಡಕುಗಳ ಬಗ್ಗೆ ಪ್ರಶ್ನಿಸಿದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಉತ್ತರಿಸಿದರು.

ಮಕ್ಕಳು ಮನಸನ್ನು ಹಿಡಿತದಲ್ಲಿ ಇಟ್ಟುಕೊಂಡು ಪಾಠ ಕಲಿಯಬೇಕು. ಆನ್‌ಲೈನ್ ಅಥವಾ ಆಫ್‌ಲೈನ್ ಯಾವುದೇ ಇದ್ದರೂ ಮನಸನ್ನು ಹಿಡಿತದಲ್ಲಿ ಇಟ್ಟುಕೊಂಡಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಮೂಲಕ ಮಕ್ಕಳ ಜೊತೆ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದಲ್ಲಿ ಸಲಹೆ ನೀಡಿದರು.

ಆಫ್‌ಲೈನ್ ಪಾಠಕ್ಕಿಂತ ಆನ್‌ಲೈನ್ ಪಾಠ ಎಷ್ಟು ಮುಖ್ಯ ಎಂದು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಆಫ್‌ಲೈನ್ ತರಗತಿ ಒಂದು ನಿಗದಿತ ಸ್ಥಳದಲ್ಲಿ ಮಾತ್ರ ಕಲಿಯಲು ಅವಕಾಶ. ಆದರೆ ಆನ್‌ಲೈನ್ ತರಗತಿಯಿಂದ ಯಾವಾಗ, ಎಲ್ಲಿಬೇಕಾದರೂ ಕಲಿಯಬಹುದು ಎಂದರು.

ಬೃಹತ್ ಎಲ್‌ಇಡಿ ಪರದೆಯಲ್ಲಿ ಕಾರ್ಯಕ್ರಮ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಮಕ್ಕಳು ಮೋದಿ ಜೊತೆಗೆ ಚರ್ಚೆಯಲ್ಲಿ ಪಾಲ್ಗೊಂಡಿದ್ದಕ್ಕೆ ಸಂತಸ ವ್ಯಕ್ತಪಡಿಸಿ, ಮಕ್ಕಳ ಕಲಿಕೆ, ಪರೀಕ್ಷಾ ಫೋಬಿಯಾ ತಪ್ಪಿಸಲು ಕಾರ್ಯಕ್ರಮ ಸಹಕಾರಿ ಆಗಿತ್ತು, ಪರೀಕ್ಷೆ ಒತ್ತಡ ಕಡಿಮೆ ಮಾಡಲು ಪ್ರಧಾನಿಗಳ ಉತ್ತರ ಸಹಕಾರಿ ಆಗಿತ್ತು ಎಂದು ಹೇಳಿದರು.

ಅರಣ್ಯ‌ ಹಕ್ಕು ಪತ್ರ ಪಡೆದ ಪರಿಶಿಷ್ಟ ವರ್ಗಗಳ ಫಲಾನುಭವಿಗಳ ವಿವರಕ್ಕೆ ಕ್ರಮ

0

ಶಿವಮೊಗ್ಗದ ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕು ಪತ್ರ ಪಡೆದ ಫಲಾನುಭವಿಗಳ ವಿವರಗಳನ್ನು ಸಲ್ಲಿಸಲು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ತಿಳಿಸಿದೆ.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಆರ್ಥಿಕ ಸಹಾಯಧನ ನೀಡುವ ಸಲುವಾಗಿ ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕು ಪತ್ರ ಪಡೆದ ಫಲಾನುಭವಿಗಳು ತಮ್ಮ ಸೂಕ್ತ ದಾಖಲೆ/ವಿವರಗಳನ್ನು FRUITS ತಂತ್ರಾಂಶದಲ್ಲಿ ನೋಂದಣಿ ಮಾಡಬೇಕಿದೆ.

ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ಅಗತ್ಯ ದಾಖಲೆಗಳಾದ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ಜಾತಿ ಪ್ರಮಾಣ ಪತ್ರ, ಮೊಬೈಲ್ ಸಂಖ್ಯೆ, ಹಕ್ಕುಪತ್ರದ ಪ್ರತಿಗಳನ್ನು ಆಯಾ ತಾಲೂಕಿನ ಸಹಾಯಕ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆಗೆ ತಕ್ಷಣ ಸಲ್ಲಿಸುವಂತೆ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು ತಿಳಿಸಿರುತ್ತಾರೆ.

ಇನ್ನುಮುಂದೆ ವೈದ್ಯಕೀಯ ಕೋರ್ಸ್ ಗಳಲ್ಲಿ ಯೋಗ ಶಿಕ್ಷಣ ಕಡ್ಡಾಯ

0

ಇನ್ಮುಂದೆ ವೈದ್ಯಕೀಯ ಶಿಕ್ಷಣ ಸಂಸ್ಥೆ, ವಿಶ್ವವಿದ್ಯಾಲಯ, ಕಾಲೇಜುಗಳಲ್ಲಿ ಯೋಗ ತರಬೇತಿ ಕಡ್ಡಾಯವಾಗಿದೆ ಎಂದು ರಾಷ್ಟ್ರೀಯ ವೈದ್ಯಕೀಯ ಮಂಡಳಿ ಸರ್ಕಾರಗಳಿಗೆ ಸುತ್ತೋಲೆ ಹೊರಡಿಸಿದೆ.

ಈ ಮೂಲಕ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ 10 ದಿನಗಳ ಯೋಗ ತರಬೇತಿ ಕಡ್ಡಾಯವಾಗಿದ್ದು, ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಪ್ರತಿ ವರ್ಷ ಜೂನ್ 21ರಂದು ಆಚರಸಲಾಗುತ್ತಿದ್ದು, ಅಂದು ಮುಕ್ತಾಯವಾಗುವಂತೆ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ತರಬೇತಿ ನೀಡಬೇಕು ಎಂದು ರಾಜ್ಯ ಸರ್ಕಾರಗಳಿಗೆ ತಿಳಿಸಲಾಗಿದೆ.

ಅಲ್ಲದೇ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ 2026 ರಲ್ಲಿ ಮೊದಲ ರಾಷ್ಟ್ರವ್ಯಾಪಿ ನಿರ್ಗಮನ ಪರೀಕ್ಷೆ ನಡೆಸುವುದಾಗಿ ಎನ್ ಎಂ ಸಿ ತಿಳಿಸಿದೆ. ಎಂಬಿಬಿಎಸ್ ಪದವಿ ಪಡೆದ ವಿದ್ಯಾರ್ಥಿಗಳು ಅವರ ಅಂಕಗಳ ಆಧಾರದ ಮೇಲೆ ಮಾಡಲು ಇಚ್ಛಿಸುವ ವೈದ್ಯಕೀಯ ಅಭ್ಯಾಸಗಳಿಗೆ ಪರವಾನಗಿ ಪಡೆಯುವ ಕ್ರಮ ರಾಷ್ಟ್ರೀಯ ನಿರ್ಗಮನ ಪರೀಕ್ಷೆಯಾಗಿದೆ.