Tuesday, February 24, 2026
Tuesday, February 24, 2026
Home Blog Page 1644

ರಾಜ್ಯದಲ್ಲಿ ಅವಧಿಗೆ ಮುನ್ನ ಚುನಾವಣೆ ನಡೆಯುವುದಿಲ್ಲ- ಶಾ

0

ಕರ್ನಾಟಕದಲ್ಲಿ ಅವಧಿಪೂರ್ವ ಚುನಾವಣೆ ನಡೆಯುವುದಿಲ್ಲ ಎಂದು ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಅಮಿತ್ ಶಾ ಅವರು, ಈ ಕುರಿತು ಸ್ಪಷ್ಟನೆ ನೀಡಿದ್ದು, ಬೇರೆ ಪಕ್ಷಗಳೊಂದಿಗೆ ಚುನಾವಣಾಪೂರ್ವ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ.
ರಾಜ್ಯದಲ್ಲಿ ಅವಧಿ ಪೂರ್ವ ಚುನಾವಣೆ ಇಲ್ಲವೆಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಅವಧಿಪೂರ್ವ ಚುನಾವಣೆ ಮಾತು ಕೇಳಿಬರುತ್ತಿದೆಯಲ್ಲ ಎಂದು ಕೋರ್ ಕಮಿಟಿಯ ಸದಸ್ಯರು ಇದು ನಿಜವೇ ಎಂದು ಕೇಳಿದ್ದರು. ಈ ವೇಳೆ ಅಮಿತ್ ಶಾ ಅವರು ಅವಧಿಗೆ ಮೊದಲು ಚುನಾವಣೆ ಇಲ್ಲವೆಂದು ಸ್ಪಷ್ಟನೆ ನೀಡಿದ್ದಾರೆನ್ನಲಾಗಿದೆ.

ಕಾನೂನಿಗೆ ಭಂಗಬಾರದಂತೆ ಎಲ್ಲರೂ ಅವರವರ ಹಬ್ಬ ಆಚರಿಸಿ-ಸಿಎಂ

0

ಹೊಸ ತಂತ್ರಜ್ಞಾನವನ್ನು ಪೊಲೀಸ್ ಇಲಾಖೆಯಲ್ಲಿ ಅಳವಡಿಸಲಿದ್ದೇವೆ. ಜೊತೆಗೆ ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿಗಳನ್ನು ಹೆಚ್ಚಿಸಲು ಈ ಕೂಡಲೇ ಕ್ರಮ ಕೈಗೊಳ್ಳಲಾಗುತ್ತದೆ. ಪೊಲೀಸ್ ಸಿಬ್ಬಂದಿಗಳಿಗಾಗಿ ಮನೆ ಕಟ್ಟಲು ಈಗಾಗಲೇ 10 ಸಾವಿರಕ್ಕೂ ಹೆಚ್ಚು ಮನೆಗಳಿಗಾಗಿ ರಾಜ್ಯ ಸರ್ಕಾರ ಅನುಮತಿ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಮಾಹಿತಿ ನೀಡಿದ್ದಾರೆ.

ಈ ಮೂಲಕ ಪೊಲೀಸ್ ಸಿಬ್ಬಂದಿ ಮೇಲಿನ ಹೊರೆ ಕಡಿಮೆ ಮಾಡುವ ಮೂಲಕ ಸಿಹಿ ಉಣಬಡಿಸಿದ್ದಾರೆ. ನಾಡಿನ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳನ್ನು ಸಹ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೋರಿದ್ದಾರೆ.

ಈ ವರ್ಷ ನಾಡಿನ ಜನತೆಗೆ ಸಮೃದ್ದಿ, ಶಾಂತಿ ಸಿಗಲಿ ಅಂತ ಹಾರೈಸಿದ್ದಾರೆ.

ಹಲಾಲ್ ಮಾಂಸ ಬಹಿಷ್ಕಾರಕ್ಕೆ ಹಿಂದೂ ಸಂಘಟನೆಗಳ ವಿರೋಧ ವಿಚಾರವಾಗಿಯೂ ಮಾತನಾಡಿದ ಅವರು, ಎಲ್ಲ ಪೊಲೀಸ್ ಜಿಲ್ಲಾ ಎಸ್ ಪಿ ಗಳು, ಡಿಸಿಗಳಿಗೆ ಸೂಚನೆ ನೀಡಲಾಗಿದೆ. ಕಾನೂನು ಸುವ್ಯವಸ್ಥೆಗೆ ದಕ್ಕೆ ಬಾರದಂತೆ ಅವರ ಹಬ್ಬಗಳನ್ನ ಆಚರಣೆ ಮಾಡಬೇಕು. ಕಾನೂನು ಸುವ್ಯವಸ್ಥೆ ಕಾಪಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಬೆಂಗಳೂರು ನಗರದ ಕೋರಮಂಗಲದ ಕೆಎಸ್‌ಆರ್​ಪಿ ಮೈದಾನದಲ್ಲಿ ಏಪ್ರಿಲ್ 2ರಂದು ನಡೆದ ಪೊಲೀಸ್ ಧ್ವಜ ದಿನಾಚರಣೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿ ಈ ಮಾಹಿತಿ ನೀಡಿದರು. ಸಿಎಂ ಜೊತೆ ಗೃಹ ಸಚಿವ ಅರಗ ಜ್ಞಾನೇಂದ್ರ ಡಿಜಿ & ಐಜಿಪಿ ಪ್ರವೀಣ್ ಸೂದ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರು.

ಕರ್ನಾಟಕ ಪೊಲೀಸ್ ಇಲಾಖೆಯ ಸಿಬ್ಬಂದಿಗಳ ಶ್ರಮ ಅನನ್ಯ
ಪೊಲೀಸ್ ಇಲಾಖೆ ಬೇರೆ ಇಲಾಖೆಗಳಂತಲ್ಲ. ಪೊಲೀಸ್ ಇಲಾಖೆಗೂ ಇತರ ಇಲಾಖೆಗಳಿಗೂ ಬಹಳ ವ್ಯತ್ಯಾಸಗಳಿದೆ. ಪೊಲೀಸ್ ಇಲಾಖೆಯ ಸಿಬ್ಬಂದಿಗಳ ದಕ್ಷತೆ ಹಾಗೂ ನಿಷ್ಠೆ ದೇಶ ಮತ್ತು ರಾಜ್ಯದ ಭದ್ರತೆಗೆ ಬಹಳ ಮುಖ್ಯವಾಗಿದೆ ಎಂದು ಕರ್ನಾಟಕ ಪೊಲೀಸ್ ಇಲಾಖೆಯ ಸಿಬ್ಬಂದಿಗಳ ಶ್ರಮ ಮತ್ತು ಕೆಲಸವನ್ನು ಕೊಂಡಾಡಿದರು.

ಇಂದು ನಡೆದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಪದಕ ಪುರಸ್ಕೃತ 135 ಪೊಲೀಸ್ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿದ್ದಾರೆ.

ಕೆ. ಆರ್. ನಂದೀಶ್, ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ, ಬೆಂಗಳೂರು, ಪಿ. ಸಿದ್ದರಾಮಣ್ಣ, ಬಿ.ಎಸ್. ಚಂದ್ರ ಸೇಖರ್, ಜಿ. ಕೃಷ್ಣಕುಮಾರ್, ಹನುಮೇಶ್, ಎಚ್. ಸಿಸಿಬಿ, ಡಿವೈಎಸ್ಪಿ ಬಾಗಲಕೋಟೆ, ಆರ್. ಎನ್. ನಿಕಿಲ್ ಕುಮಾರ್, ಎಸಿಬಿ ಸಿಎಅರ್ ದಕ್ಷಿಣ, ಅರ್. ರಮೇಶ್ ಸಹಾಯಕ ಕಮಾಂಡೆಂಟ್, 3ನೇ ಪಡೆ, ವೀರೇಂದ್ರ ಕುಮಾರ್ ಡಿವೈಎಸ್ಪಿ, ಸಿಐಡಿ, ರಾಘವೇಂದ್ರ ಅರ್. ನಾಯಕ್, ಡಿವೈಎಸ್ಪಿ, ಡಿಎಎಅರ್ ಉಡುಪಿ, ಚಂದ್ರಕಾಂತ್ ನಂದಾರೆಡ್ಡಿ, ಕೆಎಸ್‌ಆರ್ಪಿ, ಕೇದಾರ್ ನಾಥ್, ಜಿ.ಎಚ್. ಪಿಟಿಎಸ್ ತಣಿಸಂದ್ರ, ಎಚ್‌.ಪಿ ಶಿವಕುಮಾರ್ ಡಿವೈಎಸ್ಪಿ, ಬೆಂಗಳೂರು ಕೇಂದ್ರ ವಲಯ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಮಲ್ಲೇಶ ದೊಡ್ಡಮನಿ, ಡಿವೈಎಸ್ಪಿ ಬಳ್ಲಾರಿ, ಎಂ.ಎನ್. ಶಶಿಧರ್, ಎಸಿಪಿ , ದೆವರಾಜ ಪೊಲೀಸ್ ಠಾಣೆ, ಮುರಳೀಧರ್, ಡಿವೈಸ್ಪಿ ಕೆಜಿಎಫ್, ಅಡಿವೆಪ್ಪ, ಶೀವಪ್ಪ, ಎಸಿಬಿ ಬೆಳಗಾವಿ, ಆರ್. ಪ್ರಕಾಶ್, ಪೊಲೀಸ್ ಇನ್‌ಸ್ಪೆಕ್ಟರ್, ಗೋವಿಂದಪುರ, ಬೆಂಗಳೂರು ನಗರ, ಯು. ಆರ್. ಮಂಜುನಾಥ್ ಜಯನಗರ ಪೊಲೀಸ್ ಠಾಣೆ, ನಟರಾಜ್ , ಪಿಐ ಸುದ್ದುಗುಂಟೆ ಪೊಲೀಸ್ ಠಾಣೆ, ಶಿವಕುಮಾರ್ ಮುಚ್ಚುಂಡಿ, ರಾವ್ ಗಣೇಶ್ ಜನಾರ್ಧನ್, ಸಿ. ನಾಗಪ್ಪ, ಸಿ.ಎಸ್. ಶಿವಣ್ಣ ನಾಯಕ್ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಇಷ್ಟೇ ಅಲ್ಲದೇ ರೈಲ್ವೇ ಪೊಲೀಸ್ ವಿಭಾಗದಲ್ಲಿಯೂ ಪೊಲೀಸ್ ಸಿಬ್ಬಂದಿಗಳಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತಿದೆ.

ನಂದಿನಿ ಬ್ರ್ಯಾಂಡ್ ಸಹಕಾರ ಕ್ಷೇತ್ರಕ್ಕೆ ಬೃಹತ್ ಕೊಡುಗೆ-ಅಮಿತ್ ಶಾ

0

ಸಹಕಾರ ರಂಗದ ಕುರಿತು ಹೆಚ್ಚಿನ ಅರಿವು ಮೂಡಿಸಲು ಸಹಕಾರ ವಿಶ್ವವಿದ್ಯಾಲಯ ಸ್ಥಾಪಿಸುವುದಾಗಿ ಘೋಷಿಸಿರುವ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್‌ ಶಾ ಸಹಕಾರ ಕ್ಷೇತ್ರದ ಪಾರದರ್ಶಕ ನಿರ್ವಹಣೆಗೆ ನೀತಿ ಜಾರಿಗೊಳಿಸುವುದಾಗಿ ಪ್ರಕಟಿಸಿದ್ದಾರೆ.

ಇದೇ ವೇಳೆ, ಹಾಲು ಉತ್ಪಾದಕರಿಗೆ ಕ್ರೆಡಿಟ್‌ ಕಾರ್ಡ್‌ ವಿತರಿಸಲು ಉದ್ದೇಶಿಸಿದ್ದು, ಆ ಯೋಜನೆ ಕರ್ನಾಟಕದಿಂದಲೇ ಪ್ರಾಯೋಗಿಕವಾಗಿ ಆರಂಭವಾಗಲಿದೆ ಎಂದು ಹೇಳಿದ್ದಾರೆ.

ಬೆಂಗಳೂರು ಅರಮನೆಯಲ್ಲಿ ಸಹಕಾರ ಇಲಾಖೆ ಆಯೋಜಿಸಿದ್ದ ಸಹಕಾರ ಮೇಳದಲ್ಲಿ ನಂದಿನಿ ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್‌ನ ಲಾಂಛನ ಬಿಡುಗಡೆ ಮತ್ತು ಸೌಹಾರ್ದ ಸಹಕಾರಿ ಸೌಧವನ್ನು ವರ್ಚುವಲ್‌ ಮೂಲಕ ಉದ್ಘಾಟನೆ ಅವರು ಮಾತನಾಡಿದರು.

ನಂದಿನಿ ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್‌ ಮೂಲಕ ಎಲ್ಲಾ ಹಾಲು ಉತ್ಪಾದಕರಿಗೆ ಕ್ರೆಡಿಟ್‌ ಕಾರ್ಡ್‌ ವಿತರಣೆ ಮಾಡಲು ಕ್ರಮ ಕೈಗೊಳ್ಳಬೇಕು. ಇದು ಕೇಂದ್ರದ ಯೋಜನೆಯಾಗಿದ್ದು, ಪ್ರಾಯೋಗಿಕವಾಗಿ ಕರ್ನಾಟಕದಿಂದಲೇ ಆರಂಭವಾಗಲಿ. ಇದಕ್ಕೆ ಬೇಕಾದ ಎಲ್ಲ ಸಹಕಾರ-ಸಹಾಯವನ್ನು ಕೇಂದ್ರ ಸರ್ಕಾರ ನೀಡಲಿದೆ ಎಂದು ಆಶ್ವಾಸನೆ ನೀಡಿದರು.

ಆರ್ಥಿಕ ಸಂಕಷ್ಟದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಬಲವರ್ಧನೆಗೆ ಕೇಂದ್ರ ಸರ್ಕಾರವು ಕಾರ್ಯೋನ್ಮುಖವಾಗಿದ್ದು, ಕಾನೂನು ತರಲು ಮುಂದಾಗಿದೆ. ಈ ಸಂಬಂಧ ಕರಡನ್ನು ಸಿದ್ಧಪಡಿಸಲಾಗುತ್ತಿದೆ. ನಂತರ ಎಲ್ಲಾ ರಾಜ್ಯಗಳಿಗೂ ಅದನ್ನು ಕಳುಹಿಸಿಕೊಡಲಾಗುವುದು. ಕಾನೂನು ಅಳವಡಿಕೆ ಮಾಡಿಕೊಂಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಬಲವರ್ಧನೆಗೆ ರಾಜ್ಯ ಸರ್ಕಾರಗಳು ಮುಂದಾಗಬೇಕು ಎಂದು ಶಾ ತಿಳಿಸಿದರು.

ಸಹಕಾರ ರಂಗದ ಕುರಿತು ಹೆಚ್ಚಿನ ಅರಿವು ಮೂಡಿಸಲು ಸಹಕಾರ ವಿಶ್ವವಿದ್ಯಾಲಯ ಆರಂಭಿಸಲಾಗುವುದು. ಸಹಕಾರ ಕ್ಷೇತ್ರವು ಸರ್ಕಾರದ ಹಸ್ತಕ್ಷೇಪ ಇಲ್ಲದೆ ಪಾರದರ್ಶಕವಾಗಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಸಹಕಾರ ನೀತಿಯನ್ನು ಸಹ ಜಾರಿಗೊಳಿಸುವ ಉದ್ದೇಶವೂ ಇದೆ ಎಂದು ತಿಳಿಸಿದರು.

ಸಹಕಾರ ಆಂದೋಲನವು ಕರ್ನಾಟಕ ರಾಜ್ಯದಿಂದ ಆರಂಭಗೊಂಡಿದೆ. ಅಮೂಲ್‌ ಸಂಸ್ಥೆ, ಲಿಜ್ಜತ್‌ ಪಾಪಡ್‌ ಹೆಸರಲ್ಲಿ ಮಹಿಳೆಯರು ತಯಾರಿಸಿದ ಹಪ್ಪಳ ರಫ್ತು, ಕ್ರಿಬ್ಕೊದಂತಹ ಸಹಕಾರ ಸಂಸ್ಥೆಗಳು ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡುತ್ತಿವೆ. ಇವೆಲ್ಲವು ಆಂದೋಲನದ ಫಲಶೃತಿಯಾಗಿದೆ ಎಂದರು.

ಇದರೊಂದಿಗೆ ಕರ್ನಾಟಕದ ನಂದಿನಿ ಬ್ರ್ಯಾಂಡ್‌ ಸಹ ಸಹಕಾರ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ನೀಡುತ್ತಿದೆ. ಬಹು ಸಾಮರ್ಥ್ಯ ಇರುವ ಸಹಕಾರಿ ಕ್ಷೇತ್ರವು ಗ್ರಾಮೀಣ ಅಭಿವೃದ್ಧಿಯ ಜತೆಗೆ ದೇಶದ ಆರ್ಥಿಕತೆಗೆ ಹೊಸ ದಿಕ್ಕು ನೀಡಿದೆ. ಸಹಕಾರ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಲು ಸಾಕಷ್ಟುಅವಕಾಶಗಳು ಇವೆ. ಜತೆ ಜತೆಗೆ ಸವಾಲುಗಳೂ ಇವೆ. ಆ ಸವಾಲುಗಳನ್ನು ಮೆಟ್ಟಿನಿಲ್ಲದಿದ್ದರೆ ಸಹಕಾರ ಆಂದೋಲನ ಕಷ್ಟಕರವಾಗಲಿದೆ ಎಂದು ಅಭಿಪ್ರಾಯಪಟ್ಟರು.

ನಾವೀಗ ಸ್ವಾತಂತ್ರ್ಯದ ಅಮೃತ ಮಹೋತ್ಸವದ ವರ್ಷದಲ್ಲಿದ್ದೇವೆ. ಈ ವೇಳೆ ನಾವೆಲ್ಲ ಒಂದು ಸಂಕಲ್ಪ ಮಾಡಬೇಕು. ಅಮೃತ ಮಹೋತ್ಸವದಿಂದ ಶತಮಾನೋತ್ಸವದ ವೇಳೆಗೆ ದೇಶದ ಗ್ರಾಮೀಣ ಭಾಗದ ಪ್ರತಿ ಮನೆಗೂ ಸಹಕಾರ ಆಂದೋಲನವನ್ನು ಮುಟ್ಟಿಸುವ ಕೆಲಸ ಮಾಡಬೇಕು. ಈ ಮೂಲಕ ಬಡತನವನ್ನು ನಿರ್ಮೂಲನೆ ಮಾಡಬೇಕಾಗಿದೆ ಎಂದು ಅಮಿತ್‌ ಶಾ ಎಂದು ತಿಳಿಸಿದರು.

ಗ್ರಾಮೀಣ ವಿಕಾಸದಲ್ಲಿ ಸಹಕಾರ ಕ್ಷೇತ್ರದ ಅನಿವಾರ್ಯತೆ ಸೃಷ್ಟಿಯಾಗಬೇಕು. ಸಹಕಾರಿ ಕ್ಷೇತ್ರದಲ್ಲಿ ಭ್ರಷ್ಟಾಚಾರ ಕಡಿಮೆಯಾಗಬೇಕು. ಚುನಾವಣೆ, ಮುಂಬಡ್ತಿ, ನೇಮಕಾತಿ, ಖರೀದಿ ಪ್ರಕ್ರಿಯೆಗಳು ಪಾರದರ್ಶಕವಾಗಬೇಕು. ಇದಕ್ಕಾಗಿ ಜೆಮ್‌ (ಗವರ್ನಮೆಂಟ್‌ ಇ-ಮಾರ್ಕೆಟ್‌ಪ್ಲೇಸ್‌) ಎಂಬ ಹೊಸ ಸಾಫ್ಟ್ ವೇರ್‌ ರೂಪಿಸಲಾಗಿದೆ. ಇದರಿಂದ ಭ್ರಷ್ಟಾಚಾರ ಶೂನ್ಯಕ್ಕಿಳಿಯಲಿದೆ. ಅಲ್ಲದೇ, ಪ್ಯಾಕ್ಸ್‌, ಡಿಸಿಸಿ, ರಾಜ್ಯ ಸಹಕಾರ ಬ್ಯಾಂಕ್‌ ಮತ್ತು ನಬಾರ್ಡ್‌ಗಳನ್ನು ಡಿಜಿಟಲೀಕರಣಗೊಳಿಸಿ ಎಲ್ಲದಕ್ಕೂ ಒಂದೇ ಸಾಫ್ಟ್‌ವೇರ್‌ ಮಾಡಲಾಗುವುದು. ಇದು ಎಲ್ಲಾ ರಾಜ್ಯ ಭಾಷೆಯಲ್ಲಿಯೂ ಲಭ್ಯವಾಗಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೇಂದ್ರ ಸಚಿವರಾದ ಪ್ರಹ್ಲಾದ್‌ ಜೋಶಿ, ಶೋಭಾ ಕರಂದ್ಲಾಜೆ, ಭಗವಂತ್‌ ಖೂಬಾ, ರಾಜ್ಯದ ಸಚಿವರಾದ ಎಸ್‌.ಟಿ.ಸೋಮಶೇಖರ್‌, ಆರ್‌.ಅಶೋಕ್‌, ಆರಗ ಜ್ಞಾನೇಂದ್ರ, ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಬೈರತಿ ಬಸವರಾಜ, ಪ್ರಭು ಚವ್ಹಾಣ್‌, ಬಿ.ಸಿ.ಪಾಟೀಲ್‌, ಶಿವರಾಂ ಹೆಬ್ಬಾರ್‌, ಶಶಿಕಲಾ ಜೊಲ್ಲೆ, ಕೆ.ಗೋಪಾಲಯ್ಯ ಮತ್ತಿತರರು ಉಪಸ್ಥಿತರಿದ್ದರು.

ರಸಗೊಬ್ಬರ ಬೆಲೆಯೇರಿಕೆ ಕೃಷಿಕರಿಗೆ ಶಾಕ್

0

ಕಳೆದ ಕೆಲ ದಿನಗಳಿಂದ ನಿರಂತರವಾಗಿ ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆಯಾಗುತ್ತಿದೆ.

ಮತ್ತೊಂದೆಡೆ ದಿನಬಳಕೆಯ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗುತ್ತಿದೆ. ಇದರಿಂದ ಜನಸಾಮಾನ್ಯರು ಕಂಗಾಲಾಗಿದ್ದಾರೆ. ಇದೀಗ ರೈತರಿಗೂ ಬೆಲೆ ಏರಿಕೆ ಶಾಕ್ ಎದುರಾಗಿದೆ.

ಹೌದು, ರಸಗೊಬ್ಬರ ಕಂಪನಿಗಳು ಡಿಎಪಿ, ಎನ್‌.ಪಿ.ಕೆ. ದರ ಹೆಚ್ಚಳಕ್ಕೆ ಮುಂದಾಗಿವೆ. IFFCO DAP ಬೆಲೆಯನ್ನು ಶೇ. 12.5 ರಷ್ಟು ​​ಹೆಚ್ಚಿಸಿದೆ. ದಾಸ್ತಾನು ಇರುವ ರಸಗೊಬ್ಬರವನ್ನು ಹಳೆಯ ದರದಲ್ಲಿ ಮಾರಾಟ ಮಾಡುವುದನ್ನು ಮುಂದುವರಿಸಲಾಗುತ್ತದೆ ಎಂದು ತಿಳಿದುಬಂದಿದೆ.

ರಸಗೊಬ್ಬರ ಕಂಪನಿಗಳು ರೈತರಿಗೆ ಹೊರೆ ವರ್ಗಾಯಿಸಲು ಪ್ರಾರಂಭಿಸಿವೆ. ಮೂಲಗಳ ಪ್ರಕಾರ ರಸಗೊಬ್ಬರ ಪ್ರಮುಖ IFFCO 50 ಕೆಜಿ ಚೀಲದ ಡಿಎಪಿ ಬೆಲೆಯನ್ನು 1,200 ರೂ.ನಿಂದ ಸುಮಾರು 1,350 ರೂ.ಗೆ(ಶೇ. 12.5 ಹೆಚ್ಚಳ) ಹೆಚ್ಚಿಸಿದೆ.
NPKS 50 ಕೆಜಿ ಪ್ರತಿ ಚೀಲಕ್ಕೆ 1,290 ರೂ.ನಿಂದ ಶೇ. 8.5 ಹೆಚ್ಚಳಗೊಂಡು 1,400 ರೂ.ಆಗಿದೆ ಎನ್ನಲಾಗಿದೆ.

ಐಟಿಬಿಟಿ ಕ್ಷೇತ್ರದಲ್ಲಿ ಕರ್ನಾಟಕದ ನೆರವು ಕೋರಿದ ಥಾಯ್ಲೆಂಡ್

0

ಥಾಯ್ಲೆಂಡ್‌ ದೇಶವು ಶಿಕ್ಷಣ, ಐಟಿ ಮತ್ತು ಬಿಟಿ ಕ್ಷೇತ್ರಗಳಲ್ಲಿ ಕರ್ನಾಟಕದ ನೆರವನ್ನು ಕೇಳಿದ್ದು, ರಾಜ್ಯದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ತೆರೆಯುವುದಾಗಿ ಕೋರಿದೆ.

ಇದಕ್ಕೆ ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ತಿಳಿಸಿದರು.

ವಿಕಾಸಸೌಧದಲ್ಲಿ ಥಾಯ್ಲೆಂಡ್‌ ದೇಶದ ಭಾರತೀಯ ಕೌನ್ಸಿಲ್‌ ಜನರಲ್‌ ನಿಟಿರೂಜ್‌ ಫೋನ್‌ ಪ್ರಸೆರ್ಟ್‌ ನೇತೃತ್ವದ ನಿಯೋಗದೊಂದಿಗೆ ಚರ್ಚಿಸಿದ ನಂತರ ಮಾತನಾಡಿದ ಅವರು, ಉನ್ನತ ಶಿಕ್ಷಣ, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಥಾಯ್ಲೆಂಡ್‌ ಜತೆ ಸಹಭಾಗಿತ್ವ ಹೊಂದಲು ರಾಜ್ಯ ಸರ್ಕಾರ ಉತ್ಸುಕವಾಗಿದೆ.

ಥಾಯ್ಲೆಂಡ್‌ ಪ್ರವಾಸೋದ್ಯಮ ಚಟುವಟಿಕೆಗಳನ್ನು ಅವಲಂಬಿಸಿದೆ. ಹೀಗಾಗಿ, ಪ್ರವಾಸೋದ್ಯಮ ಕ್ಷೇತ್ರಕ್ಕೆ ಬೇಕಿರುವ ತಂತ್ರಜ್ಞಾನದ ನೆರವು ನೀಡಲು ಕೂಡ ತಾವು ಸಿದ್ದ ಎಂದು ಹೇಳಿದರು.

37 ನೇ ದಿನಕ್ಕೆ ಕಾಲಿಟ್ಟ ರಷ್ಯ- ಉಕ್ರೇನ್ ಯುದ್ಧ

0

ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ 37ನೇ ದಿನಕ್ಕೆ ಕಾಲಿಟ್ಟಿದೆ. ಇದರ ಮಧ್ಯೆ ಮೊದಲ ಬಾರಿಗೆ ರಷ್ಯಾದ ಗಡಿಗೆ ನುಗ್ಗಿದ ಉಕ್ರೇನ್ ಸೇನಾಪಡೆಗಳು ಹೆಲಿಕಾಪ್ಟರ್ ಮೂಲಕ ಮೊದಲ ಬಾರಿಗೆ ವೈಮಾನಿಕ ದಾಳಿ ನಡೆಸಿವೆ.

ರಷ್ಯಾದ ಬೆಲ್ಗೆರೊಡ್ ಪ್ರದೇಶದಲ್ಲಿರುವ ತೈಲ ಸಂಗ್ರಹ ಡಿಪೋದ ಮೇಲೆ ಉಕ್ರೇನ್ ಸೇನೆಗಳು ಫೈರಿಂಗ್ ನಡೆಸಿವೆ.
ಹೆಲಿಕಾಪ್ಟರ್ ಮೂಲಕ ಗಡಿ ಪ್ರದೇಶಿಸಿ ನಡೆಸಿರುವ ದಾಳಿಯಿಂದ ಇಂಧನ ಸಂಗ್ರಹಿಸಿದ ಡಿಪೋ ಹೊತ್ತಿ ಉರಿದಿದೆ.

1950ರ ಕೋರಿಯನ್ ಯುದ್ಧದ ನಂತರದಲ್ಲಿ ಮೊದಲ ಬಾರಿಗೆ ಬೇರೊಂದು ದೇಶದ ವಾಯುಪಡೆಗಳು ರಷ್ಯಾದ ಗಡಿಯನ್ನು ಪ್ರವೇಶಿಸಿ ದಾಳಿ ನಡೆಸಿರುವುದು ಎಂದು ಹೇಳಲಾಗುತ್ತಿದೆ.

ಎಂ-24 ಚಾಪರ್ ಮೂಲಕ ದಾಳಿ ನಡೆದಿರುವ ಬಗ್ಗೆ ವರದಿಯಾಗಿದೆ.

ಎತ್ತರದಲ್ಲಿ ಉಡಾವಣೆಯಾಗುತ್ತಿದ್ದ ರಾಕೆಟ್‌ನಿಂದ ಬೆಳಕಿನ ಉಂಡೆಗಳು ಬಿದ್ದಿದ್ದು, ತದನಂತರದಲ್ಲಿ ನೆಲದಲ್ಲಿ ಸ್ಫೋಟ ಸಂಭವಿಸಿದೆ. ಈ ದೃಶ್ಯಗಳು ಇಂಧನ ಸಂಗ್ರಹಿಸಿಟ್ಟಿದ್ದ ಡಿಪೋದ ಭದ್ರತಾ ಕ್ಯಾಮರಾದಲ್ಲಿ ಸೆರೆಯಾಗಿವೆ.

ಎರಡು ಉಕ್ರೇನಿಯನ್ ಸೇನಾ ಹೆಲಿಕಾಪ್ಟರ್‌ಗಳು ನಡೆಸಿದ ವಾಯುದಾಳಿಯಿಂದಾಗಿ ಪೆಟ್ರೋಲ್ ಡಿಪೋದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅದು ಕಡಿಮೆ ಎತ್ತರದಲ್ಲಿ ರಷ್ಯಾದ ಪ್ರದೇಶವನ್ನು ಪ್ರವೇಶಿಸಿತು ಎಂದು ಬೆಲ್ಗೊರೊಡ್ ಪ್ರದೇಶದ ಗವರ್ನರ್ ವ್ಯಾಚೆಸ್ಲಾವ್ ಗ್ಲಾಡ್ಕೊವ್ ಟೆಲಿಗ್ರಾಮ್‌ನಲ್ಲಿ ಬರೆದಿದ್ದಾರೆ.

ಉಕ್ರೇನ್ ನಡೆಸಿರುವ ದಾಳಿಯಿಂದ ಶೇಖರಣಾ ಘಟಕದಲ್ಲಿದ್ದ ಇಬ್ಬರು ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಅವರು ಹೇಳಿದರು.

ಬೆಲ್ಗೊರೊಡ್‌ನಲ್ಲಿನ ಇಂಧನ ಡಿಪೋದಲ್ಲಿ ಸಂಭವಿಸಿದ ಭಾರಿ ದಾಳಿಯನ್ನು ಖಚಿತಪಡಿಸಲು ಅಥವಾ ನಿರಾಕರಿಸಲು ಸಾಧ್ಯವಿಲ್ಲ ಎಂದು ಉಕ್ರೇನ್ ಹೇಳಿದೆ.

ಕಚ್ಚಾತೈಲ ಬೆಲೆಯೇರಿಕೆ ಕಾರಣ ರಷ್ಯದ ತೈಲ ಖರೀದಿಗೆ ಭಾರತ ರೆಡಿ

0

ಜಾಗತಿಕವಾಗಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿರುವುದರಿಂದ ರಿಯಾಯಿತಿ ದರದಲ್ಲಿ ತೈಲ ಅಗತ್ಯವಿರುವುದರಿಂದ ಭಾರತವು ರಷ್ಯಾದಿಂದ ಕಚ್ಚಾ ತೈಲವನ್ನು ಖರೀದಿಸುವುದನ್ನು ಮುಂದುವರಿಸಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಿಳಿಸಿದ್ದಾರೆ.

ಭಾರತವು ಈಗಾಗಲೇ ರಷ್ಯಾದಿಂದ ತೈಲವನ್ನು ಖರೀದಿಸಲು ಪ್ರಾರಂಭಿಸಿದೆ ಎಂದು ಸೀತಾರಾಮನ್ ಹೇಳಿದರು.

ಸರಬರಾಜು ಕಡಿಮೆಯಾದ ಕಾರಣ ತೈಲ ಆಮದು ಸವಾಲಿನದಾಗಿದೆ ಎಂದು ಅವರು ಹೇಳಿದರು.

ಫೆಬ್ರುವರಿ 24ರಂದು ಉಕ್ರೇನ್‌ ಮೇಲೆ ಆಕ್ರಮಣವನ್ನು ಆರಂಭಿಸಿದ ನಂತರ ರಷ್ಯಾ ಮೇಲೆ ವಿಧಿಸಲಾದ ನಿರ್ಬಂಧಗಳನ್ನು ದುರ್ಬಲಗೊಳಿಸುವ ಮತ್ತು ಡಾಲರ್ ಆಧಾರಿತ ಹಣಕಾಸು ವ್ಯವಸ್ಥೆಯನ್ನು ಬುಡಮೇಲು ಮಾಡುವುದನ್ನು ತಪ್ಪಿಸುವಂತೆ ಅಮೆರಿಕ ಮತ್ತು ಬ್ರಿಟಿಷ್ ಅಧಿಕಾರಿಗಳು ಭಾರತವನ್ನು ಒತ್ತಾಯಿಸಿದ್ದವು.

ಇದಾದ ಬಳಿಕ, ಭಾರತದ ಬೆಂಬಲವನ್ನು ಪಡೆಯಲು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ನವದೆಹಲಿಗೆ ಭೇಟಿ ನೀಡಿದ್ದಾರೆ.

ಶ್ರೀಲಂಕಾದಲ್ಲಿ ಸಾರ್ವಜನಿಕ ತುರ್ತುಪರಿಸ್ಥಿತಿ ಘೋಷಣೆ

0

ದಶಕಗಳಲ್ಲಿಯೇ ಅತ್ಯಂತ ಭೀಕರ ಆರ್ಥಿಕ ಬಿಕ್ಕಟ್ಟಿನ ನಂತರ ಹಿಂಸಾತ್ಮಕ ಪ್ರತಿಭಟನೆಗಳು ಮುಂದುವರೆದ ಹಿನ್ನಲೆಯಲ್ಲಿ ಶ್ರೀಲಂಕಾದ ಅಧ್ಯಕ್ಷ ಗೋಟಬಯ ರಾಜಪಕ್ಸೆ ಶುಕ್ರವಾರ ತಡರಾತ್ರಿ ರಾಷ್ಟ್ರವ್ಯಾಪಿ ಸಾರ್ವಜನಿಕ ತುರ್ತು ಪರಿಸ್ಥಿತಿ ಘೋಷಿಸಿದರು.

ಸಾರ್ವಜನಿಕ ಭದ್ರತೆ, ಸಾರ್ವಜನಿಕ ಸುವ್ಯವಸ್ಥೆಯ ರಕ್ಷಣೆ ಮತ್ತು ಸರಬರಾಜು ಮತ್ತು ಅಗತ್ಯ ಸೇವೆಗಳ ನಿರ್ವಹಣೆ ಖಚಿತಪಡಿಸಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಶ್ರೀಲಂಕಾ ಸರ್ಕಾರದ ಗೆಜೆಟ್ ಅಧಿಸೂಚನೆಯಲ್ಲಿ ರಾಜಪಕ್ಸೆ ಹೇಳಿದ್ದಾರೆ.

ನೂರಾರು ಪ್ರತಿಭಟನಾಕಾರರು ರಾಜಧಾನಿ ಕೊಲಂಬೊದ ಉಪನಗರದಲ್ಲಿರುವ ಅಧ್ಯಕ್ಷ ರಾಜಪಕ್ಸೆ ಅವರ ನಿವಾಸದ ಹೊರಗೆ ಪೊಲೀಸರು ಮತ್ತು ಮಿಲಿಟರಿಯೊಂದಿಗೆ ಘರ್ಷಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಇಂಧನ ಮತ್ತು ಇತರ ಸರಕುಗಳು ಸೇರಿದಂತೆ ಅಗತ್ಯ ವಸ್ತುಗಳ ಕೊರತೆಯ ಕಾರಣ ಭಾರೀ ಪ್ರತಿಭಟನೆಗೆ ಕಾರಣವಾಗಿದೆ.

ಪೊಲೀಸರು 53 ಜನರನ್ನು ಬಂಧಿಸಿ ಕೊಲಂತ್ತಬೊ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರ್ಫ್ಯೂ ವಿಧಿಸಿದ್ದಾರೆ.

ಪರೋಕ್ಷವಾಗಿ ಅಮೆರಿಕ ಬಗ್ಗೆ ಅಸಮಾಧಾನ ಹೊರಹಾಕಿದ ಇಮ್ರಾನ್

0

ಭಾರತವನ್ನು ಬೆಂಬಲಿಸುತ್ತಿರುವ ಬಲಿಷ್ಠ ರಾಷ್ಟ್ರವೊಂದು ಪಾಕಿಸ್ತಾನದ ವಿರುದ್ಧ ಕೋಪಗೊಂಡಿದೆ ಎಂದು ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್‌ ಖಾನ್‌ ಹೇಳಿದ್ದಾರೆ.

ತಮ್ಮ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾದ ಬಳಿಕ ಇಮ್ರಾನ್‌ ಖಾನ್‌ ಈ ಹೇಳಿಕೆ ನೀಡಿದ್ದಾರೆ.
ಇಸ್ಲಾಮಾಬಾದ್ ಭದ್ರತಾ ವ್ಯವಸ್ಥೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸ್ವತಂತ್ರ ವಿದೇಶಾಂಗ ನೀತಿಯು ದೇಶಕ್ಕೆ ನಿರ್ಣಾಯಕವಾಗಿದೆ.

ಪಾಕಿಸ್ತಾನವು ತನ್ನ ಗರಿಷ್ಠ ಸಾಮರ್ಥ್ಯವನ್ನು ಮುಟ್ಟಲು ಸಾಧ್ಯವಾಗದಿರಲು ಕಾರಣ ಇತರ ಶಕ್ತಿಶಾಲಿ ರಾಷ್ಟ್ರಗಳ ಮೇಲಿನ ಅವಲಂಬನೆ ಎಂದು ಪ್ರತಿಪಾದಿಸಿದ್ದಾರೆ.

ಸ್ವತಂತ್ರ ವಿದೇಶಾಂಗ ನೀತಿಯನ್ನು ಹೊಂದಿರದ ದೇಶವು ತನ್ನ ಜನತೆಯ ಹಿತಾಸಕ್ತಿಯನ್ನು ಕಾಯ್ದುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಇಮ್ರಾನ್‌ ಖಾನ್‌ ಒತ್ತಿ ಹೇಳಿದ್ದಾರೆ.

ವಿದೇಶಿ ನೆರವಿನ ಮೂಲಕ ಇತರ ದೇಶಗಳ ಇಚ್ಛೆಗೆ ಮಣಿಯುವುದಕ್ಕಿಂತ ರಾಷ್ಟ್ರದ ಹಿತಾಸಕ್ತಿಗಳನ್ನು ಧ್ಯೇಯವಾಗಿಟ್ಟುಕೊಂಡು ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅತ್ಯಂತ ಮುಖ್ಯ ಎಂದು ಎಂದು ತಿಳಿಸಿದ್ದಾರೆ.

ಅಮೆರಿಕವನ್ನು ಉಲ್ಲೇಖಿಸಿ ಮಾತನಾಡಿದ ಅವರು, ನಾನು ಇತ್ತೀಚಿನ ರಷ್ಯಾಗೆ ಭೇಟಿ ಕೊಟ್ಟಿದ್ದಕ್ಕೆ ಪ್ರಬಲ ದೇಶ ಅಸಮಾಧಾನವನ್ನು ವ್ಯಕ್ತಪಡಿಸಿದೆ. ಮಿತ್ರರಾಷ್ಟ್ರವಾದ ಭಾರತವು ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳಲು ಸಹಕರಿಸುತ್ತಿದೆ ಎಂದಿದ್ದಾರೆ.

ಉಕ್ರೇನ್‌ ವಿರುದ್ಧ ಮಿಲಿಟರಿ ಕಾರ್ಯಾಚರಣೆ ಆರಂಭಿಸಿದ ನಂತರ ಫೆ.24ರಂದು ಇಮ್ರಾನ್‌ ಖಾನ್‌ ಕ್ರೆಮ್ಲಿನ್‌ಗೆ ತೆರಳಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರನ್ನು ಭೇಟಿಯಾಗಿದ್ದರು.

ಯುದ್ಧ ನಿಲ್ಲಿಸುವಂತೆ ರಷ್ಯ ವಿದೇಶಾಂಗ ಸಚಿವರಿಗೆ ಪ್ರಧಾನಿ ಮನವಿ

0

ರಷ್ಯಾ- ಉಕ್ರೇನ್‌ ನಡುವೆ ನಡೆಯುತ್ತಿರುವ ಯುದ್ಧವನ್ನು ಕೊನೆಗಾಣಿಸುವಂತೆ ಪ್ರಧಾನಿ ನರೇಂದ್ರ ಮೋದಿ, ರಷ್ಯಾವನ್ನು ಆಗ್ರಹಿಸಿದ್ದಾರೆ.

2 ದಿನಗಳ ಭೇಟಿಗಾಗಿ ಭಾರತಕ್ಕೆ ಆಗಮಿಸಿರುವ ರಷ್ಯಾದ ವಿದೇಶಾಂಗ ಸಚಿವ ಸರ್ಗಿ ಲಾವ್ರೊವ್‌ ಜತೆ ಪ್ರಧಾನಿ ಮೋದಿ ಸುಮಾರು 40 ನಿಮಿಷ ಮಾತುಕತೆ ನಡೆಸಿದ್ದಾರೆ.

ಈ ವೇಳೆ ಯುದ್ಧ ಕೊನೆಗಾಣಿಸುವಂತೆ ಮೋದಿ, ಸರ್ಗಿ ಯವರಲ್ಲಿ ಮನವಿ ಮಾಡಿದ್ದಾರೆ. ಯುದ್ಧ ನಿಲ್ಲಿಸುವ ನಿಟ್ಟಿ ನಲ್ಲಿ ಕೈಗೊಳ್ಳಲಾಗುವ ಶಾಂತಿ ಮಾತುಕತೆಯನ್ನು ಭಾರತ ಬೆಂಬಲಿಸುತ್ತದೆ ಎಂದೂ ಹೇಳಿದ್ದಾರೆ.

ಉಕ್ರೇನ್‌-ರಷ್ಯಾ ನಡುವೆ ಶಾಂತಿ ಸ್ಥಾಪನೆಗಾಗಿ ಮಧ್ಯಸ್ಥಿಕೆ ವಹಿಸುವ ಅವಶ್ಯಕತೆ ಬಂದರೆ ಅದಕ್ಕೆ ಭಾರತ ಸಿದ್ಧವಿರುವ ವಿಚಾರವನ್ನು ಮೋದಿಯವರು, ಸರ್ಗಿಯವರಿಗೆ ತಿಳಿಸಿದ್ದಾರೆಂದು ಹೇಳಲಾಗಿದೆ.

ಅನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸರ್ಗಿ, ಉಕ್ರೇನ್‌-ರಷ್ಯಾ ಬಿಕ್ಕಟ್ಟನ್ನು ಕೊನೆಗಾಣಿಸಲು ಭಾರತ ಮಧ್ಯಸ್ಥಿಕೆ ವಹಿಸುವುದಾದರೆ ಅದಕ್ಕೆ ಸ್ವಾಗತ. ಭಾರತವು ರಷ್ಯಾದ ಪ್ರಮುಖ ಸ್ನೇಹಿತ. ಜತೆಗೆ ಉಕ್ರೇನ್‌ ಹಾಗೂ ರಷ್ಯಾ ಜತೆಗೆ ಹಲವಾರು ವ್ಯವಹಾರಗಳಲ್ಲಿ ಭಾಗಿದಾರ.

ಭಾರತವು ಎರಡೂ ದೇಶಗಳ ನಡುವಿನ ಬಿಕ್ಕಟ್ಟು ಶಮನಕ್ಕೆ ಪ್ರಯತ್ನಿಸುವುದಾದರೆ ಅದನ್ನು ರಷ್ಯಾ ಸ್ವಾಗತಿಸುತ್ತದೆ. ಪಾಶ್ಚಾತ್ಯ ರಾಷ್ಟ್ರಗಳು ಮರೆತುಹೋದ ಜವಾಬ್ದಾರಿಯುತ ವರ್ತನೆಯನ್ನು ಭಾರತ ತೋರ್ಪಡಿಸುತ್ತಿರುವುದು ಸ್ವಾಗತಾರ್ಹ ಎಂದಿದ್ದಾರೆ.

ವ್ಯಾಪಾರಕ್ಕೆ ಸದಾ ಸಿದ್ಧ
ರಷ್ಯಾದಿಂದ ಯಾವುದೇ ಸಾಮಗ್ರಿಗಳನ್ನು ಯಾವುದೇ ಕ್ಷಣದಲ್ಲಿ ಭಾರತ ಖರೀದಿಸಲು ಬಯಸಿದರೂ ರಷ್ಯಾ ಸದಾ ಸಿದ್ಧವಿರುತ್ತದೆ ಎಂದೂ ರಷ್ಯಾ ಸಚಿವ ಸರ್ಗಿ ಆಶ್ವಾಸನೆ ನೀಡಿ ದ್ದಾರೆ.

ಇದೇ ವೇಳೆ ಭಾರತದ ಸ್ವತಂತ್ರ ವಿದೇಶಾಂಗ ನೀತಿಯನ್ನು ಅವರು ಮನಸಾರೆ ಶ್ಲಾಘಿಸಿದ್ದಾರೆ.

ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.