Sunday, March 23, 2025
Sunday, March 23, 2025

ಪಿಳ್ಳಂಗೆರೆ ದೇಗುಲ ಕಲ್ಯಾಣಿಗೆ ನರೇಗಾದಿಂದ ಪುನರುಜ್ಜೀವನ

Date:

ನರೇಗಾ ಯೋಜನೆಯಡಿ ಶಿವಮೊಗ್ಗ ಜಿಲ್ಲೆಯ ಪಿಳ್ಳೆಂಗೆರೆ ಗ್ರಾಮದಲ್ಲಿರುವ ಶ್ರೀರಂಗನಾಥಸ್ವಾಮಿ ದೇಗುಲದ ಕಲ್ಯಾಣಿಯನ್ನು ಪುನಶ್ಚೇತನಗೊಳಿಸಿರುವುದರಿಂದ ಕಲ್ಯಾಣಿಗೆ ಮರುಜೀವ ಬಂದು ರಮಣೀಯವಾಗಿ ಕಾಣುತ್ತಿದೆ.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ “100 ದಿನ ಜಲಶಕ್ತಿ ಅಭಿಯಾನ” ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಅಭಿಯಾನದಲ್ಲಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಬರುವ ಜಲ ಮೂಲಗಳನ್ನು ಗುರುತಿಸಿ ಪುನಶ್ಚೇತನಗೊಳಿಸುವ ಉದ್ದೇಶದಿಂದ ಪಿಳ್ಳಂಗೆರೆ ಗ್ರಾಮದ ಶ್ರೀ ರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿರುವ ಕಲ್ಯಾಣಿ ಪುನಶ್ಚೇತನ ಕಾಮಗಾರಿಯನ್ನು ಅನುಷ್ಠಾನ ಮಾಡಲಾಗಿದೆ.

ಶ್ರೀ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಸುಮಾರು 700 ವರ್ಷದ ಇತಿಹಾಸವಿದ್ದು, ದೇವಸ್ಥಾನ ಆವರಣದ ಕಲ್ಯಾಣಿಯಲ್ಲಿರುವ ಜಲವನ್ನು ದೇವಸ್ಥಾನಕ್ಕೆ ಬಳಸಲಾಗುತ್ತಿತ್ತು. ಆದರೆ ಸುಮಾರು 30 ವರ್ಷಗಳಿಂದ ಕಲ್ಯಾಣಿ ಜಲವು ಬತ್ತಿಹೋಗಿದ್ದು, ಕಲ್ಯಾಣಿಯ ಸುತ್ತಲು ಗಿಡ ಗಂಟಿಗಳಿಂದ ತುಂಬಿ ಕಲ್ಯಾಣಿಯ ಗುರುತು ಇಲ್ಲದಂತಹ ಪರಸ್ಥಿತಿ ನಿರ್ಮಾಣವಾಗಿತ್ತು.

ಜಲಶಕ್ತಿ ಅಭಿಯಾನ ಕಾರ್ಯಕ್ರಮದ ಮೂಲಕ “ಕ್ಯಾಚ್ ದಿ ರೈನ್” ಶೀರ್ಷಿಕೆಯಡಿಯಲ್ಲಿ ಜಿಲ್ಲೆಯ ಜಲಮೂಲಗಳಾದ ನದಿ, ಕೆರೆ, ಕಲ್ಯಾಣಿ, ಗೋಕಟ್ಟೆಗಳನ್ನು ಗುರುತಿಸಿ ಅವುಗಳನ್ನು ಪುನಶ್ಚೇತನಗೊಳಿಸಲು ತೀರ್ಮಾನಿಸುವ ಮೂಲಕ ಪಿಳ್ಳಂಗೆರೆ ಗ್ರಾಮ ಪಂಚಾಯತಿಯಲ್ಲಿರುವ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿರುವ ಕಲ್ಯಾಣಿಯ ಪುನಶ್ಚೇತನಕ್ಕೆ ಸಚಿವರಾದ ಕೆ.ಎಸ್.ಈಶ್ವರಪ್ಪ ಅವರು 2021 ರ ಏಪ್ರಿಲ್ 24 ರಂದು ಶಂಕುಸ್ಥಾಪನೆ ಮಾಡಿ ಕಾಮಗಾರಿಗೆ ಚಾಲನೆ ನೀಡಿದ್ದು, ಸುಮಾರು ರೂ.5.00 ಲಕ್ಷಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

ಈ ಯೋಜನೆಯಡಿ ಕಲ್ಯಾಣಿಯನ್ನು ಪುನಶ್ಚೇತನಗೊಳಿಸಿರುವುದರಿಂದ ಕಲ್ಯಾಣಿಗೆ ಹೊಸ ಮೆರುಗು ಬಂದಿದೆ. ಗ್ರಾಮ ಪಂಚಾಯತಿಯಿಂದ ಕಲ್ಯಾಣಿ ಸುತ್ತಲು ಗಿಡಗಳನ್ನು ನೆಡಲಾಗಿದೆ. ಜುಲೈ ತಿಂಗಳಲ್ಲಿ ಅತೀ ಹೆಚ್ಚು ಮಳೆಯಾದ ಕಾರಣ ಕಲ್ಯಾಣಿ ಸಂಪೂರ್ಣ ಭರ್ತಿಗೊಂಡು, ಸುತ್ತ ಮುತ್ತಲಿನ ಪ್ರದೇಶವು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಕಲ್ಯಾಣಿಯ ಪ್ರಶಾಂತತೆಯ ನೋಟ ಹಾಗೂ ತುಂಗಾ ತೀರದ ತಟವು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದ್ದು, ಕಲ್ಯಾಣಿಗೆ ಮರುಜೀವ ಬಂದಿದೆ.

ನರೇಗಾ ಯೋಜನೆಯಡಿಯಲ್ಲಿ ಕಲ್ಯಾಣಿ ಪುನಶ್ಚೇತನ ಕಾಮಗಾರಿಯನ್ನು ಅಂದಾಜು ಮೊತ್ತ ರೂ.5 ಲಕ್ಷಗಳಲ್ಲಿ ಪೂರ್ಣಗೊಳಿಸಿದ್ದೇವೆ. ಕಾಮಗಾರಿ ಪ್ರಾರಂಭದಲ್ಲಿ 20 ಮೆಟ್ಟಿಲುಗಳು ಇರಬೇಕು ಎಂದು ತಿಳಿದುಕೊಂಡಿದ್ದೆ.ಈ ಮೆಟ್ಟಿಲುಗಳನ್ನು ಪೂರ್ಣವಾಗಿ ತೆಗೆದ ನಂತರ 3 ಅಡಿ ಸುತ್ತಳತೆಯ 30 ಅಡಿ ಆಳವುಳ್ಳ ಬಾವಿ ಸಿಕ್ಕಿತು. ಇದನ್ನು ತೆಗೆಯಲು ತುಂಬ ಶ್ರಮ ಪಡಬೇಕಾಯಿತು. ಆದರೂ ಕೂಡ ಎಲ್ಲರ ಸಹಕಾರದಿಂದ ಯಶಸ್ಚಿಯಾಗಿ ಕಾಮಗಾರಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಿದೆ ಎಂದು ಪಿಳ್ಳೆಂಗೆರೆ , ಗ್ರಾಮ ಪಂಚಾಯಿತಿ ಪಿಡಿಓ ಎಸ್. ಹಾಲೇಶ್ ಅವರು ತಿಳಿಸಿದ್ದಾರೆ.

100 ದಿನ ಜಲಶಕ್ತಿ ಅಭಿಯಾನ”ದ ಅಡಿಯಲ್ಲಿ ಜಿಲ್ಲೆಯ 12 ಕಲ್ಯಾಣಿಗಳು, 156 ಕುಂಟೆಗಳು, 24 ಗೊಕಟ್ಟೆ, 86 ಕೆರೆಗಳು ಹಾಗೂ 61 ಕಟ್ಟೆಗಳನ್ನು ಪುನಶ್ಚೇತನಗೊಳಿಸಿದ್ದೇವೆ. ಪಿಳ್ಳಂಗೆರೆ ಗ್ರಾಮದಲ್ಲಿರುವ ಶ್ರೀ ರಂಗನಾಥಸ್ವಾಮಿ ದೇವಾಲಯದ ಕಲ್ಯಾಣಿ ಪುನಶ್ಚೇತನ ಕಾಮಗಾರಿಯನ್ನು ಕೈಗೊಳ್ಳುವ ಮೊದಲು ಮತ್ತು ಕಾಮಗಾರಿ ಅನುಷ್ಠಾನವಾದ ಮೇಲೆ ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಕಾಮಗಾರಿ ಪೂರ್ಣಗೊಂಡ ಬಳಿಕ ಅಲ್ಲಿನ ಸ್ಥಳೀಯರಿಗೆ, ಭಕ್ತರಿಗೆ ಮತ್ತು ಅರ್ಚಕರಿಗೆ ತುಂಬಾ ಖುಷಿಯಾಗಿದೆ.

ಮಹಾತ್ಮಗಾಂಧಿ ನರೇಗಾ ಯೋಜನೆಯಿಂದ ಒಂದು ಉತ್ತಮವಾದ ಹಾಗೂ ಗುಣಮಟ್ಟದ ಆಸ್ತಿಯನ್ನು ಮರು ನಿರ್ಮಾಣ ಮಾಡಿದ್ದೇವೆ ಎಂದು ಜಿ.ಪಂ.ಸಿಇಓ ಎಂ.ಎಲ್. ವೈಶಾಲಿಯವರು ತಿಳಿಸಿದ್ದಾರೆ.

ಕಲ್ಯಾಣಿ ಪುನಶ್ಚೇತನ ಕಾಮಗಾರಿ ಅನುಷ್ಠಾನದಿಂದ ನಮ್ಮ ಪಿಳ್ಳಂಗೆರೆ ಗ್ರಾಮದ ಶ್ರೀರಂಗನಾಥ ಸ್ವಾಮಿ ದೇವಾಲಯಕ್ಕೆ ಹೊಸ ಮೆರಗು ಬಂದಂತಾಗಿದೆ. ಕಲ್ಯಾಣಿ ಪುನಶ್ಚೇತನ ಕಾಮಗಾರಿ ಅನುಷ್ಠಾನಕ್ಕೆ ಸಹಕರಿಸಿದ ಎಲ್ಲಾ ಅಧಿಕಾರಿಗಳಿಗೂ ಪಿಳ್ಳೆಂಗೆರೆ ಗ್ರಾಮಸ್ಥರು ವಂದನೆಗಳನ್ನು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Thawar Chand Gehlot ರಾಜಭವನದಲ್ಲಿ ಸಂಭ್ರಮಿಸಿದ “ಚಂದನ” ದ ಚೈತ್ರಾಂಜಲಿ, ಯುಗಾದಿ ಶುಭಾಶಯ ಕೋರಿದ ರಾಜ್ಯಪಾಲ‌ ಗೆಹ್ಲೋಟ್

Thawar Chand Gehlot ಬೆಂಗಳೂರು 22.03.2025: ಹಿಂದುಗಳ ಹೊಸ ವರ್ಷವೆಂದೇ ಕರೆಯಲ್ಪಡುವ...

PM Yoga Awards ಪ್ರಧಾನಮಂತ್ರಿಗಳ ಯೋಗ ಪ್ರಶಸ್ತಿಗೆ ಅರ್ಜಿ ಆಹ್ವಾನ

PM Yoga Awards ಯೋಗ ಕ್ರೀಡೆಗೆ ಅತ್ಯುನ್ನತವಾದ ಕೊಡುಗೆಯನ್ನು ನೀಡಿರುವಂತಹ ಕ್ರೀಡಾಪಟುಗಳಿಗೆ ಅಥವಾ...

PM Yoga Awards 2025 ಪ್ರಧಾನಮಂತ್ರಿಗಳ ಯೋಗ ಪ್ರಶಸ್ತಿಗೆ ಅರ್ಜಿ ಆಹ್ವಾನ

PM Yoga Awards 2025 ಯೋಗ ಕ್ರೀಡೆಗೆ ಅತ್ಯುನ್ನತವಾದ ಕೊಡುಗೆಯನ್ನು ನೀಡಿರುವಂತಹ...