Wednesday, February 25, 2026
Wednesday, February 25, 2026
Home Blog Page 1629

ಯುದ್ಧದಲ್ಲಿ ರಷ್ಯದಿಂದ ರಾಸಾಯನಿಕ ಅಸ್ತ್ರಬಳಕೆ ಸಂದೇಹದಲ್ಲಿ ಉಕ್ರೇನ್

0

ಉಕ್ರೇನ್‌ನಲ್ಲಿ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಬಳಸುವುದಕ್ಕೂ ಮೊದಲೇ ಪಶ್ಚಿಮದ ರಾಷ್ಟ್ರಗಳು ಮಾಸ್ಕೋ ಮೇಲೆ ಹೆಚ್ಚಿನ ನಿರ್ಬಂಧವನ್ನು ವಿಧಿಸಬೇಕು ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಕರೆ ನೀಡಿದ್ದಾರೆ.

ರಷ್ಯಾ ಮುತ್ತಿಗೆ ಹಾಕಿರುವ ದಕ್ಷಿಣ ಉಕ್ರೇನಿಯನ್ ಬಂದರಿನ ಮರಿಯುಪೋಲ್ ನಲ್ಲಿ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಬಳಸಲಾಗಿದೆ ಎಂದು ಸೋಮವಾರ ವರದಿಯಾಗಿದೆ. ಆದರೆ ಈ ವರದಿಯ ಬಗ್ಗೆ ಯಾವುದೇ ದೃಢೀಕರಣವಿಲ್ಲ ಎಂದು ಗೊತ್ತಾಗಿದೆ. ಈ ಹಿನ್ನೆಲೆ “ನಾವು ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತೇವೆ” ಎಂದಿರುವ ಝೆಲೆನ್ಸ್ಕಿ, ರಾಸಾಯನಿಕ ಅಸ್ತ್ರಗಳನ್ನು ಈಗಾಗಲೇ ಬಳಸಲಾಗಿದೆ ಎಂದು ಹೇಳಲಿಲ್ಲ.

ರಷ್ಯಾದ ಮೇಲೆ ಹೆಚ್ಚಿನ ನಿರ್ಬಂಧವನ್ನು ಹೇರುವುದರ ಮೂಲಕ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡುವುದಿರಲಿ ಅದರ ಬಗ್ಗೆ ಮಾತನಾಡುವುದಕ್ಕೂ ಕಡಿವಾಣ ಹಾಕುವುದಕ್ಕೆ ಸಾಧ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ.

ರಷ್ಯಾದ ಸೇನಾ ಪಡೆಯು ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಬಳಸಬಹುದು ಎಂಬುದರ ಬಗ್ಗೆ ಈಗಾಗಲೇ ಚರ್ಚಿಸಲಾಗಿದೆ. ಈ ಅಂಶವನ್ನು ನಾನು ವಿಶ್ವ ನಾಯಕರಿಗೆ ಮತ್ತೊಮ್ಮೆ ನೆನಪಿಸುವುದಕ್ಕೆ ಬಯಸುತ್ತೇನೆ. ಈ ಸಮಯದಲ್ಲಿ ಅದು ರಷ್ಯಾದ ಆಕ್ರಮಣಕ್ಕೆ ಹೆಚ್ಚು ಕಠಿಣ ಮತ್ತು ವೇಗವಾಗಿ ಪ್ರತಿಕ್ರಿಯಿಸಲು ಅಗತ್ಯವಾಗಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಕ್ಸಿ ಅವರು ಹೇಳಿದ್ದಾರೆ.

ಮರಿಯುಪೋಲ್‌ನಲ್ಲಿ ರಷ್ಯಾ ಸೇನೆಯು ರಾಸಾಯನಿಕ ಶಸ್ತ್ರಾಸ್ತ್ರಗಳ ಮೂಲಕ ದಾಳಿ ನಡೆಸಿದೆ ಎಂಬುದಕ್ಕೆ ಯಾವುದೇ ದೃಢೀಕರಣವಿಲ್ಲ. ಈ ಕುರಿತು ಹೆಚ್ಚಿ ಮಾಹಿತಿ ಮತ್ತು ಸ್ಪಷ್ಟನೆಯನ್ನು ಮುಂದೆ ನೀಡಲಾಗುವುದು ಎಂದು ಮರಿಯುಪೋಲ್‌ನ ಮೇಯರ್ ಸಹಾಯಕ ಪೆಟ್ರೋ ಆಂಡ್ರ್ಯುಶ್ಚೆಂಕೊ ಹೇಳಿದ್ದಾರೆ.

ಮೌನಿ ಶಬರಿ ಊರ್ಮಿಳಾ ಚತುರ್ವೇದಿ

0

1992 ರಲ್ಲಿ, ಜಬಲ್ಪುರದ ಊರ್ಮಿಳಾ ಚತುರ್ವೇದಿ ಅವರು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಪ್ರಾರಂಭವಾಗುವವರೆಗೆ ಆಹಾರ ಪದಾರ್ಥಗಳನ್ನು ತಿನ್ನುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರು.

ಅವರ 28 ವರ್ಷಗಳ ಉಪವಾಸವನ್ನು ಭಗವಾನ್ ರಾಮನ ಆಶೀರ್ವಾದ ಪಡೆದು ಉಪವಾಸ ಮುರಿದಿದ್ದಾರೆ.

ಉಪವಾಸದ ಸಮಯದಲ್ಲಿ ಆಕೆಯನ್ನು ಬೆಂಬಲಿಸಿದ ಕುಟುಂಬದವರು, ಈಗ ಊರ್ಮಿಳಾ ಚತುರ್ವೇದಿಯವರು ಆಹಾರ ಸೇವಿಸಲು ಮುಂದಾಗಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ.

28 ವರ್ಷಗಳ ಕಾಲ, ಊರ್ಮಿಳಾ ಅವರು ಹಣ್ಣುಗಳ ಮೇಲೆ ಬದುಕುಳಿದರು.

81 ವರ್ಷದ ಚತುರ್ವೇದಿ ಮಧ್ಯಪ್ರದೇಶದ ಜಬಲ್ಪುರದ ವಿಜಯ್ ನಗರ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. 1992 ರಲ್ಲಿ, ಬಾಬರಿ ಮಸೀದಿಯ ವಿವಾದಿತ ರಚನೆಯನ್ನು ಕೆಡವಿದಾಗ ಮತ್ತು ದೇಶದಲ್ಲಿ ಗಲಭೆಗಳು ಭುಗಿಲೆದ್ದ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಪ್ರಾರಂಭವಾಗುವವರೆಗೆ ತಾನು ಹಣ್ಣುಗಳನ್ನು ಮಾತ್ರ ತಿನ್ನುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದರು.

ರಾಮ ಮಂದಿರ ನಿರ್ಮಾಣವಾಗುವವರೆಗೆ ಉಪವಾಸ ಮಾಡುವ ಆಕೆಯ ಪ್ರತಿಜ್ಞೆಯು ನವೆಂಬರ್ 2019 ರಲ್ಲಿ ರಾಮ್ ಲಲ್ಲಾ ವಿರಾಜಮಾನರ ಪರವಾಗಿ ತೀರ್ಪು ನೀಡಿದಾಗ ಮತ್ತು ಮಂದಿರದ ನಿರ್ಮಾಣವನ್ನು ನೋಡಿಕೊಳ್ಳಲು ಟ್ರಸ್ಟ್ ಅನ್ನು ರಚಿಸುವಂತೆ ಭಾರತ ಸರ್ಕಾರಕ್ಕೆ ಆದೇಶಿಸಿದಾಗ ಮೊದಲ ಬಾರಿಗೆ ವರದಿಯಾಗಿತ್ತು.

ಆ ಸಮಯದಲ್ಲಿ ಅವಳ ಮಗ ಅಮಿತ್ ಚತುರ್ವೇದಿ, “ನನ್ನ ತಾಯಿ ಕಳೆದ 27 ವರ್ಷಗಳಿಂದ ಹಣ್ಣು ಮತ್ತು ಹಾಲಿನ ಆಹಾರಕ್ರಮದಲ್ಲಿದ್ದರು. ಇದನ್ನು ಆರಂಭಿಸಿದಾಗ ಆಕೆಗೆ 54 ವರ್ಷ. ಸುಪ್ರೀಂ ಕೋರ್ಟ್ ತೀರ್ಪಿನಿಂದ ಅವರು ತುಂಬಾ ಸಂತೋಷಪಟ್ಟಿದ್ದಾರೆ.

ಈ ನಿರ್ಧಾರದಿಂದ ಊರ್ಮಿಳಾ ಚತುರ್ವೇದಿ ಸಂತಸ ವ್ಯಕ್ತಪಡಿಸಿದ್ದಾರೆ. ಈ ನಿರ್ಧಾರಕ್ಕೆ ಬರಲು 28 ವರ್ಷಗಳು ಬೇಕಾಯಿತು. ಆದರೆ ರಾಮಮಂದಿರವು ಅದರ ನಿಜವಾದ ಸ್ಥಳದಲ್ಲಿ ನಿಲ್ಲುತ್ತಿರುವುದು ಸಂತಸ ತಂದಿದೆ ಎಂದರು.

ಈ 28 ವರ್ಷಗಳಲ್ಲಿ, ಅವರು ಉಪವಾಸದಿಂದಾಗಿ ಅನೇಕ ಸಂಬಂಧಿಕರನ್ನು ಕಳೆದುಕೊಂಡರು. ಆಹಾರ ಸೇವಿಸಲು ಪ್ರಾರಂಭಿಸುವಂತೆ ಅನೇಕರು ಅವರನ್ನು ಮನವೊಲಿಸಿದರು. ಆದರೆ ಅವಳು ಅಚಲವಾಗಿಯೇ ಇದ್ದರು. ಅವರ ಕುಟುಂಬದ ಬೆಂಬಲ ಯಾವಾಗಲೂ ಅವಳೊಂದಿಗೆ ಇತ್ತು. ಸಾರ್ವಜನಿಕ ವೇದಿಕೆಯಲ್ಲಿ ಅವರ ಧೈರ್ಯ ಮತ್ತು ಸಮರ್ಪಣೆಗಾಗಿ ಅವರಿಗೆ ಪ್ರಶಸ್ತಿಯನ್ನೂ ನೀಡಲಾಯಿತು.

ಅವರ ಕುಟುಂಬವು ಅವರನ್ನು ಅಯೋಧ್ಯೆಗೆ ಕರೆದೊಯ್ದು ಸರಯು ನದಿಯ ದಡದಲ್ಲಿ ಸಾಧ್ಯವಾದಷ್ಟು ಬೇಗ ಉಪವಾಸವನ್ನು ಮುರಿಯಲು ಯೋಜಿಸಿತು. ಊರ್ಮಿಳಾ ಚತುರ್ವೇದಿ ಅವರು ತಮ್ಮ ಕುಟುಂಬದೊಂದಿಗೆ ದೇವಾಲಯದ ನಿರ್ಮಾಣದಲ್ಲಿ ಭಾಗವಹಿಸಲು ಬಯಸಿದ್ದರು.

ಆದರೆ ಕೋವಿಡ್ -19 ಸಾಂಕ್ರಾಮಿಕವು ಯೋಜನೆಯನ್ನು ಅಡ್ಡಿಪಡಿಸಿತು.

1992ರಂದು ಬಾಬರಿ ಮಸೀದಿಯನ್ನು ಕೆಡವಿದ ದಿನದಿಂದ ರಾಮಮಂದಿರಕ್ಕಾಗಿ 28 ವರ್ಷ ಉಪವಾಸ ವೃತ ಕೈಗೊಂಡಿದ್ದ ಊರ್ಮಿಳಾ ಚತುರ್ವೇದಿಯವರು ಕೇವಲ ಹಾಲು ಹಣ್ಣಿನ ಆಹಾರದಿಂದ 84 ವಯಸ್ಸಿನ ಇವರು 28 ವರ್ಷಗಳ ಕಾಲ ಜೀವಿಸಿದ್ದೇ ಅಚ್ಚರಿಯ ಸಂಗತಿ.

ಅಂದು ರಾಮನಿಗಾಗಿ ವರ್ಷಗಟ್ಟಲೆ ಕಾದು ಕುಳಿತ ಶಬರಿ.. ಇಂದು ರಾಮಮಂದಿರಕ್ಕಾಗಿ 28 ವರ್ಷಗಳ ಕಾಲ ಉಪವಾಸವಿದ್ದ ಊರ್ಮಿಳಾ ಚತುರ್ವೇದಿ ಶಬರಿಯ ಇನ್ನೊಂದು ರೂಪವೇ ಸರಿ.

ಇವರು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಶಂಕುಸ್ಥಾಪನೆ ನಡೆಸಿದ ಸಂದರ್ಭದಲ್ಲಿ ತಮ್ಮ 28 ವರ್ಷಗಳ ಉಪವಾಸವನ್ನು ಅಂತಿಮಗೊಳಿಸಿದರು.

ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ

0

ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಬಿಜೆಪಿ ಕಾರ್ಯಕರ್ತ ಸಂತೋಷ್ ಪಾಟೀಲ್ ಈಗ ಸಚಿವ ಈಶ್ವರಪ್ಪ ಅವರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದರಿಂದ ಶೀಘ್ರದಲ್ಲಿಯೇ ಸಚಿವ ಕೆ.ಎಸ್.
ಈಶ್ವರಪ್ಪನವರ ಸ್ಥಾನಕ್ಕೆ ಚ್ಯುತಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರ ಮೇಲೆ ಒತ್ತಡವು ಪಕ್ಷವಾಗಲೀ ಅಥವಾ ಹೈಕಮಾಂಡ್ ನಿಂದಾಗಲಿ ಬರಬಹುದೆಂದು ರಾಜಕೀಯ ವಲಯದಲ್ಲಿ ಗುಸುಗುಸು ಶುರುವಾಗಿದೆ.

ಸಂತೋಷ್ ಪಾಟೀಲ್ ಆತ್ಮಹತ್ಯೆ ಬೆನ್ನಲ್ಲಿಯೇ ಪ್ರತಿಪಕ್ಷ ಕಾಂಗ್ರೆಸ್ ಮುಖ್ಯಮಂತ್ರಿ ಬೊಮ್ಮಾಯಿ ಸರ್ಕಾರದ ವಿರುದ್ಧ ಮುಗಿಬಿದ್ದಿದೆ. ಈಶ್ವರಪ್ಪ ಅವರ ರಾಜೀನಾಮೆಯನ್ನು ಕೂಡಲೇ ಪಡೆಯಬೇಕು. ಅವರನ್ನು ಸಂಪುಟದಿಂದ ಕಿತ್ತೆಸೆಯಬೇಕು ಹಾಗೂ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿ ಬಂಧಿಸಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಆಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ..

ಇನ್ನು ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ಕೆ.ಎಸ್.​​ ಈಶ್ವರಪ್ಪ, “ಸಂತೋಷ್ ಪಾಟೀಲ ಆತ್ಮಹತ್ಯೆ ಮಾಡಿಕೊಂಡಿದ್ದಾರಾ? ಯಾಕೆ?,” ಎಂದು ಮರುಪ್ರಶ್ನಿಸಿದ್ದಾರೆ.

“ಅವರು ಯಾಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ನನಗೆ ಗೊತ್ತಿಲ್ಲ. ಅವರು ನನ್ನ ಮೇಲೆ ಕಮಿಷನ್ ಆರೋಪ ಮಾಡಿದ್ದರು. ಯಾಕೆ ಆರೋಪ ಮಾಡಿದ್ದೆ ಎಂದು ಕೇಳುವುದಕ್ಕೆ ಇಂದು ಅವರೇ ಇಲ್ಲ. ಸಂತೋಷ್ ಪಾಟೀಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದೆ. ಕೋರ್ಟ್ ಕೂಡಾ ವಿಚಾರಣೆ ಅಂಗೀಕರಿಸಿತ್ತು,” ಎಂದು ಪ್ರತಿಕ್ರಿಯಿಸಿದರು.
ಈಗಾಗಲೇ ಬರುವ ವರ್ಷದ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ
ಬಹಳ ಸೂಕ್ಷ್ಮವಾದ ಸನ್ನಿವೇಶದಲ್ಲಿ ಈ ಆತ್ಮಹತ್ಯೆ ಪ್ರಕರಣ ನಡೆದಿದೆ.
ತನಿಖೆಯಾಗಿ ಫಲಿತಾಂಶ ಬಾರದ ಹೊರತು ಈಗಲೇ ಏನೂ ಹೇಳಲು ಸಾಧ್ಯವಿಲ್ಲ ಎಂಬುದಾಗಿ ಪರಿಣತರ ಅಭಿಪ್ರಾಯವಾಗಿದೆ.

ತೆರಿಗೆ ಹಣದಿಂದ ತೈಲ ಬಾಂಡ್ ಸಾಲದ ಮರು ಪಾವತಿ ಆಗುತ್ತಿದೆ- ನಿರ್ಮಲಾ ಸೀತಾರಾಮನ್

0

ಕಾಂಗ್ರೆಸ್ ಸರ್ಕಾರ ಈ ಮೊದಲು ತೈಲ ಬಾಂಡ್ ಮೂಲಕ ಮಾಡಿದ್ದ ಸಾಲಗಳಿಗೆ ಬಿಜೆಪಿ ಸರ್ಕಾರ 93 ಸಾವಿರ ಕೋಟಿ ರೂ. ಮರುಪಾವತಿ ಮಾಡಿದೆ. 2026ರ ಒಳಗಾಗಿ 1.48 ಲಕ್ಷ ಕೋಟಿ ರೂ.ಗಳನ್ನು ಪಾವತಿ ಮಾಡಲಾಗುತ್ತದೆ. ಈ ಹೆಚ್ಚಿನ ಮೊತ್ತವನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಮಾಡಲಾಗಿದೆ ಎಂದು ಸಚಿವೆ ನಿರ್ಮಲಾ ಸೀತರಾಮನ್ ಅವರು ಟ್ವೀಟ್ ನಲ್ಲಿ ಮಾಹಿತಿ ತಿಳಿಸಿದ್ದಾರೆ.

ತೈಲ ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ಕೇಂದ್ರ ಸರ್ಕಾರ ತೆರಿಗೆ ಇಳಿಕೆ ಮಾಡುತ್ತಿಲ್ಲ. ಇಂಧನ ಮೇಲೆ ಹೆಚ್ಚಿನ ತೆರಿಗೆ ವಿಧಿಸುವ ಮೂಲಕ ಜನಸಾಮಾನ್ಯರ ಮೇಲೆ ಹೊರೆ ಬೀಳುತ್ತಿದೆ. ಇದನ್ನು ತಪ್ಪಿಸಲು ಸರ್ಕಾರ ಯಾವುದೇ ಕ್ರಮವನ್ನು ಕೈಗೊಳ್ಳುತ್ತಿಲ್ಲ. ಕಳೆದ 8 ವರ್ಷದಿಂದ ತೈಲಗಳ ತೆರಿಗೆಯಿಂದ ಕೇಂದ್ರ ಸರ್ಕಾರಕ್ಕೆ 100 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ಆದಾಯ ಬಂದಿದೆ. ಈ ಹಣವನ್ನು ಸರ್ಕಾರ ಯಾವುದಕ್ಕೆ ವೆಚ್ಚ ಮಾಡಿದ ಎಂಬುದನ್ನು ತಿಳಿಸಬೇಕು ಎಂದು ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರು ಆಗ್ರಹಿಸಿದ್ದಾರೆ. ಇದು ಕಾಂಗ್ರೆಸ್ ನ ವಾದವಾಗಿತ್ತು.

ಕೋವಿಡ್ ನಾಲ್ಕನೇ ಅಲೆ ಭೀತಿ ಮಾಸ್ಕ್ ಧಾರಣೆ ಮುಂದುವರೆಸಿ- ಡಾ.ಸುಧಾಕರ್

0

ಪ್ರಪಂಚಾದ್ಯಂತ ಕೊರೋನಾ ರೂಪಾಂತರಿ ತಳಿ ಹರಡುತ್ತಿದೆ. ಚೀನಾ, ಯೂರೋಪ್ ನಂತರ ಭಾರತದ ಹಲವು ಕಡೆ ಕರೊನಾ ಸೋಂಕು ಹೆಚ್ಚಳದ ಜೊತೆಗೆ ಹೊಸ ರೂಪಾಂತರಿ ವೈರಸ್ ಪತ್ತೆಯಾಗುತ್ತಿದೆ. ನಾಲ್ಕನೇ ಅಲೆಯ ಆತಂಕವನ್ನು ಹೆಚ್ಚಿಸಿದೆ.

ನಾಲ್ಕನೇ ಅಲೆಯ ಸುಳಿವು ಸಿಗುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಮುನ್ನೆಚ್ಚರಿಕಾ ಕ್ರಮಗಳಿಗೆ ಮುಂದಾಗಿದೆ.

ಎರಡು ಡೋಸ್ ಲಸಿಕಾಕರಣ ಪ್ರಕ್ರಿಯೆಯ ನಂತರ ಭಾರತದಲ್ಲಿ ಕೊರೋನಾ ತೀವ್ರತೆ ಕಡಿಮೆಯಾಗಿತ್ತು.ಪ್ರಸ್ತುತ ಸಂದರ್ಭದಲ್ಲಿ ಬೂಸ್ಟರ್ ಡೋಸ್ ಲಸಿಕೀಕರಣ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸುವ ಮೂಲಕ ನಾಲ್ಕನೇ ಅಲೆ ತಡೆಯಲು ಸರ್ಕಾರ ತೀರ್ಮಾನಿಸಿದೆ.

ಮಾಸ್ಕ್ ಬಳಕೆ ಹಾಗೂ ಬೂಸ್ಟರ್ ಡೋಸ್ ಹಾಕಿಸಿಕೊಳ್ಳುವುದನ್ನು ಮರೆಯದಿರುವಂತೆ ಜನರಲ್ಲಿ ಮನವಿ ಮಾಡಿಕೊಳ್ಳಲು ಸರ್ಕಾರ ನಿರ್ಧರಿಸಿದೆ. ದೇಶದ ಹಲವು ಕಡೆ ಸೋಂಕು ಪ್ರಕರಣ ಹೆಚ್ಚುತ್ತಿರುವುದರಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಸುಧಾಕರ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರ ತುರ್ತು ಸಭೆ ನಡೆಸಿದ್ದಾರೆ.

ಈ ಸಭೆಯಲ್ಲಿ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಈ ನಿರ್ಧಾರಗಳನ್ನು ಮುಖ್ಯಮಂತ್ರಿ ಗಮನಕ್ಕೆ ತಂದು ಒಪ್ಪಿಗೆ ಪಡೆದ ನಂತರ ತ್ವರಿತವಾಗಿ ಜಾರಿಗೊಳಿಸಬೇಕು. ಮುಂಬೈನಲ್ಲಿ ಮಾಸ್ಕ್ ಕಡ್ಡಾಯ ಕೈಬಿಡಲಾಗಿದೆ. ಆದರೆ ರಾಜ್ಯದಲ್ಲಿ ಅಂತಹ ನಿರ್ಧಾರ ಕೈಗೊಳ್ಳದಿದ್ದರೂ ಕೂಡ ರಾಜ್ಯದಲ್ಲಿ ಮಾಸ್ಕ್ ಬಳಕೆ ಕಡಿಮೆಯಾಗಿದೆ.

ಜೂನ್-ಜುಲೈ ತಿಂಗಳ ಹೊತ್ತಿಗೆ ನಾಲ್ಕನೇ ಅಲೆ ಪ್ರವೇಶದ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ವೈಯಕ್ತಿಕ, ಇತರರ ಆರೋಗ್ಯದ ಸುರಕ್ಷತೆ ದೃಷ್ಟಿಯಿಂದ ಮಾಸ್ಕ್ ಬಳಕೆ ಮುಂದುವರಿಸಬೇಕು ಎಂದು ಡಾ.ಕೆ.ಸುಧಾಕರ್ ಮನವಿ ಮಾಡಿಕೊಂಡಿದ್ದಾರೆ.

ಗುಜರಾತ್ ಟೈಟನ್ಸ್ ಗೆ ಬ್ರೇಕ್ ಹಾಕಿದ ಹೈದ್ರಾಬಾದ್

0

ಕೇನ್ ವಿಲಿಯಮ್ಸನ್ ಅರ್ಧಶತಕ/ಸನ್ರೈಸರ್ಸ್ ಹೈದರಾಬಾದ್ ಗೆ 8 ವಿಕೆಟ್ ಗಳ ಜಯ ಲಭಿಸುವಂತೆ ಮಾಡಿತು.

ನಾಯಕ ಕೇನ್ ವಿಲಿಯಮ್ಸನ್ (57) ಹಾಗೂ ಅಭಿಷೇಕ್ ಶರ್ಮಾ (42) ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ ಸನ್ ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್ 15ನೇ ಆವೃತ್ತಿಯ 21ನೇ ಪಂದ್ಯದಲ್ಲಿ ಗುಜರಾತ್ ವಿರುದ್ಧ 8 ವಿಕೆಟ್ ಗಳ ಜಯ ಸಾಧಿಸಿತು ತಂಡಕ್ಕಿದು ಸತತ ಎರಡನೇ ಜಯ. ಹಿಂದಿನ ಪಂದ್ಯದಲ್ಲಿ ಚೆನ್ನೈ ವಿರುದ್ಧವೂ 8 ವಿಕೆಟ್ ಗಳ ಗೆಲುವು ಕಂಡಿತ್ತು .


ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಗುಜರಾತ್ ಟೈಟನ್ಸ್. ನಿಗದಿತ 20 ಓವರ್ ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 162 ರನ್ ಬಾರಿಸಿತು. ಪ್ರತಿಯಾಗಿ ಸನ್ರೈಸರ್ಸ್ ಹೈದರಾಬಾದ್ 19.1 ಓವರ್ ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 168 ರನ್ ಬಾರಿಸಿ ಗೆದ್ದು ಬೀಗಿತು. ಈ ಮೂಲಕ ಆರಂಭಿಕ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದ ಟೈಟನ್ಸ್ ಗೆ ಸೋಲಿನ ರುಚಿ ತೋರಿಸಿಕೊಟ್ಟಿತು. ಎಸ್ ಆರ್ ಎಚ್ ಪರ ನಿಕೋಲಸ್ ಪೂರನ್ 18 ಎಸೆತಗಳಿಗೆ 34 ರನ್ ಚಚ್ಚಿ ಔಟಾಗದೆ ಉಳಿದರೆ, ರಾಹುಲ್ ತ್ರಿಪಾಠಿ 17 ರನ್ ಬಾರಿಸಿ ಗಾಯದಿಂದ ನಿವೃತ್ತಿಯನ್ನು ಪಡೆದರು.

ಗುಜರಾತ್ ಟೈಟನ್ಸ್ ತಂಡದ ಆರಂಭಿಕ ಪ್ರದರ್ಶನ ನಿರಾಶಾದಾಯಕವಾಗಿತ್ತು.
ಗಿಲ್ ,ಹಿ೦ದಿನ ಪಂದ್ಯದಲ್ಲಿ 4 ರನ್ ಗಳ ಕೊರತೆಯಿಂದ ಶತಕ ವಂಚಿತರಾಗಿದ್ದರು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗಿಲ್ ಸೋಮವಾರ ಏಳು ರನ್ಗಳಿಗೆ ಆಟ ಮುಗಿಸಿದರು. ಭುವನೇಶ್ವರ್ ಕುಮಾರ್ ಎಸೆತದಲ್ಲಿ ರಾಹುಲ್ ತ್ರಿಪಾಠಿ ಹಿಡಿದ ಐಪಿಎಲ್ ನ ಅದ್ಭುತ ಕ್ಯಾಚ್ ಗೆ ಗಿಲ್ ಬಲಿಯಾದರು. ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಮ್ಯಾಥ್ಯು ವೇಡ್ (19) ಪ್ರದರ್ಶನವು ಗಮನ ಸೆಳೆಯಲಿಲ್ಲ. ಬಳಿಕ ಆಡಲು ಬಂದ ಸಾಯಿ ಸುದರ್ಶನ್ 11 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಹೀಗಾಗಿ ತಂಡ 64 ರನ್ ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಹಿನ್ನಡೆ ಅನುಭವಿಸಿತು. ಪಾಂಡ್ಯ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು. ಡೇವಿಡ್ ಮಿಲ್ಲರ್ (12) ರನ್ ಗಳಿಗೆ ಪೆವಿಲಿಯನ್ ಸೇರಿದರು. ಪಾಂಡ್ಯ ಜೊತೆ ಸೇರಿದ ಅಭಿನವ್ 21 ಎಸೆತಗಳಲ್ಲಿ 5 ಫೋರ್ ಹಾಗೂ ಒಂದು ಸಿಕ್ಸರ್ ಸಮೇತ 35 ರನ್ ಬಾರಿಸಿದರು. ಇವರಿಬ್ಬರ ಜೊತೆಯಾಟ ದಿಂದ ತಂಡದ ರನ್ ಗಳಿಕೆ ಗ್ರಾಫ್ ಮೇಲಕ್ಕೇರಿತು. ತೇವತಿಯ ಆರು ರನ್ ಗಳ ಕೊಡುಗೆ ಕೊಟ್ಟರೆ, ಎದುರಾಳಿ ತಂಡದ ಬೌಲರ್ ಗಳು 22 ರನ್ ಗಳನ್ನು ಉದಾರವಾಗಿ ನೀಡಿದರು ಎಸ್ ಆರ್ ಎಚ್ ಪರ ಭುವನೇಶ್ವರ್ ಕುಮಾರ್ 37 ರನ್ ಗಳಿಗೆ ಎರಡು ವಿಕೆಟ್ ಪಡೆದರೆ, ನಟರಾಜನ್ 34 ರನ್ ಗಳಿಗೆ ಎರಡು ವಿಕೆಟ್ ಗಳಿಸಿದರು.

ಕುವೆಂಪು ವಿವಿ ಬೋಧಕೇತರ ಸಿಬ್ಬಂದಿಗೆ ಮುಂಬಡ್ತಿ

0

ದಶಕಗಳಿಂದ ಕಗ್ಗಂಟಾಗಿದ್ದ ವಿಶ್ವವಿದ್ಯಾಲಯದ ಬೋಧಕೇತರ ನೌಕರರ ಮುಂಬಡ್ತಿ‌ ಸಮಸ್ಯೆ ಪರಿಹರಿಸಿ ಅರ್ಹ ನೌಕರರಿಗೆ ಕುವೆಂಪು ವಿಶ್ವವಿದ್ಯಾಲಯವು ಆದೇಶ ನೀಡಿದ್ದು, ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ, ಕುಲಸಚಿವೆ ಜಿ. ಅನುರಾಧ, ಸಿಂಡಿಕೇಟ್ ಸದಸ್ಯರಾದ ಬಳ್ಳೇಕೆರೆ ಸಂತೋಷ್, ಧರ್ಮಪ್ರಸಾದ್, ರಾಮಲಿಂಗಪ್ಪ ಮತ್ತು ರಮೇಶ್ ಬಾಬು ಅವರನ್ನು ವಿಶ್ವವಿದ್ಯಾಲಯದ ಅಧ್ಯಾಪಕೇತರ ನೌಕರರ ಸಂಘದ ವತಿಯಿಂದ ಕುಲಪತಿಗಳ ಕಚೇರಿಯಲ್ಲಿ ಸನ್ಮಾನಿಸಲಾಯಿತು.

2017ರ ಮಾರ್ಚ್ 03ರ ಜೇಷ್ಠತಾ ಪಟ್ಟಿಯ ಅನ್ವಯ ಸಹಾಯಕ‌ ಕುಲಸಚಿವ ವೃಂದದಿಂದ ಪ್ರಥಮ ದರ್ಜೆ ಸಹಾಯಕ ವೃಂದದವರೆಗೆ ಅರ್ಹ ನೌಕರರಿಗೆ ಕಳೆದ ಏಪ್ರಿಲ್ 06 ರಂದು ಮುಂಬಡ್ತಿಯ ಆದೇಶವನ್ನು ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಅವರು ನೀಡಿದ್ದರು.

ಹಣಕಾಸು ಅಧಿಕಾರಿ ಎಸ್. ರಾಮಕೃಷ್ಣ, ಉಪಕುಲಸಚಿವೆ ಸುಮನ್‌ ಆಚಾರ್, ಸಂಘದ ಅಧ್ಯಕ್ಷ ಶ್ರೀನಿವಾಸ್, ಕಾರ್ಯದರ್ಶಿ ಅಲಿ, ಸಿದ್ದರಾಮ, ಸುಶೀಲ, ರೇಖಾ ಸೇರಿದಂತೆ ಸಂಘದ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪಕ್ಷ ಬಲ ಪಡಿಸಲು ರಾಜ್ಯಾದ್ಯಂತ ಪ್ರವಾಸ- ಯಡಿಯೂರಪ್ಪ

0

ರಾಜ್ಯದಲ್ಲಿ ಕೋಮು ಸೌಹಾರ್ದ ಹಾಳು ಮಾಡುವಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಸರ್ಕಾರವು ಬಿಗಿಯಾದ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಬಿ.ಎಸ್. ಯಡಿಯೂರಪ್ಪ ಸಲಹೆ ನೀಡಿದರು.

ಪಕ್ಷ ಸಂಘಟನೆಗಾಗಿ ಎರಡು ದಿನಗಳ ಸಭೆಗಾಗಿ ಬೆಳಗಾವಿಗೆ ಬಂದ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.

ಹಿಂದೂ-ಮುಸ್ಲಿಮರು ಒಂದೇ ತಾಯಿ ಮಕ್ಕಳಂತೆ ಬಾಳಬೇಕು ಎನ್ನುವುದು ಪಕ್ಷ ಹಾಗೂ ಪ್ರಧಾನಿ ನರೇಂದ್ರ ಅವರ ಅಪೇಕ್ಷೆ. ಅಲ್ಲಲ್ಲಿ ಅಹಿತಕರ ಘಟನೆಗಳು ನಡೆದಿವೆ. ಅವುಗಳಿಗೆ ನಮ್ಮ ಬೆಂಬಲವಿಲ್ಲ. ಅಂತಹ ಘಟನೆಗಳನ್ನು ಖಂಡಿಸುತ್ತೇನೆ. ಅದೇ ರೀತಿ ಮುಂದುವರಿದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಗೊಂದಲ ಉಂಟು ಮಾಡುವವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡ ಈಗಾಗಲೇ ಹೇಳಿದ್ದಾರೆ. ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.

ಜಿಲ್ಲೆಯಲ್ಲಿ ಪಕ್ಷದಲ್ಲಿರುವ ಭಿನ್ನಮತದ ಬಗ್ಗೆ ಚರ್ಚೆಯಾಗುವುದೇ’ ಎಂಬ ಪ್ರಶ್ನೆಗೆ, ಸಂಘಟನೆಯ ಹಿತದೃಷ್ಟಿಯಿಂದ ಎಲ್ಲ ವಿಷಯಗಳ ಬಗ್ಗೆಯೂ ಚರ್ಚಿಸುತ್ತೇನೆ. ಸರಿಪಡಿಸಲು ಬಿಚ್ಚು ಮನಸ್ಸಿನಿಂದ ಪ್ರಯತ್ನಿಸುತ್ತೇನೆ ಎಂದು ಪ್ರತಿಕ್ರಿಯಿಸಿದರು.

‘ಪಕ್ಷವನ್ನು ಬಲಪಡಿಸುವುದು ಹಾಗೂ ಮುಂದಿನ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಲು ರಾಜ್ಯದಾದ್ಯಂತ ಪ್ರವಾಸ ಕೈಗೊಂಡಿದ್ದೇವೆ. ಕಾರ್ಯಕರ್ತರೊಂದಿಗೆ ಸಮಾಲೋಚನೆ, ಸ್ಥಿತಿಗತಿ ತಿಳಿದುಕೊಳ್ಳುವುದು, ಸಂಘಟನೆ ಬಲಪಡಿಸಲು ಏನೇನು ಮಾಡಬೇಕು ಎಂಬ ಸಲಹೆಗಳನ್ನೂ ಪಡೆಯಲಾಗುವುದು. ಮುಂದಿನ ಚುನಾವಣೆವರೆಗೆ ಎಲ್ಲರೂ ಒಟ್ಟಾಗಿ ಪ್ರವಾಸ ಕೈಗೊಳ್ಳುತ್ತೇವೆ ಎಂದರು.

ಪಕ್ಷದ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ, ‘ಕಾಡಾ’ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ ಇದ್ದರು.

ಜನತಾ ಜಲಧಾರೆ ಮೇಕೆದಾಟು ಪಾದಯಾತ್ರೆಯ ರೀತಿ ಶೋ ಯಾತ್ರೆಯಲ್ಲ -ಎಚ್. ಡಿ.ಕೆ.

0

ಈ ಬಾರಿ ಕನ್ನಡಿಗರ ಬಹುಮತದ ಸರ್ಕಾರ ಬೇಕು. ಯಾವ ಪಕ್ಷದ ಜೊತೆಯೂ ಹೊಂದಾಣಿಕೆ ಮಾಡುವುದಿಲ್ಲ. 30 ಅಥವಾ 40 ಸ್ಥಾನಕ್ಕಾಗಿ ಹೋರಾಟ ಅಲ್ಲ. ಪೂರ್ಣ ಪ್ರಮಾಣದ ಸರ್ಕಾರಕ್ಕೆ ಹೋರಾಟ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದರು.

ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಜನತಾ ಜಲಧಾರೆ ಯಾತ್ರೆಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮದು ವಿಚಾರಾಧಾರಿತವಾದ ಹೋರಾಟ. ಧರ್ಮ -ಧರ್ಮಗಳ ನಡುವೆ ಬೆಂಕಿ ಇಟ್ಟು ಮತ ಕೇಳುತ್ತಿಲ್ಲ. ರಾಜ್ಯದ ಅಭಿವೃದ್ದಿಗಾಗಿ ನಮ್ಮ ಹೋರಾಟ ಎಂದರು.

ಸಿಎಂ ಬಸವರಾಜ ಬೊಮ್ಮಾಯಿ ಮೌನ ವಿಚಾರವಾಗಿ ಪ್ರತಿಕ್ರಿಯಿಸಿ, ನಿಮ್ಮ ಯಾವ ಕೆಲಸ ಮಾತನಾಡುತ್ತಿದೆ.? ರಾಯಚೂರಿನಲ್ಲಿ ತಲವಾರ್ ಹಂಚಿದ್ದಾರೆ. ಯಾವ ಕಾರಣಕ್ಕೆ ತಲವಾರ್ ಹಂಚಿದ್ದಾರೆ? ಅವರ‌ನ್ನು ನೀವು ಅರೆಸ್ಟ್ ಮಾಡಿದ್ದೀರಾ? ಮೌನಿ‌ ಬಸವರಾಜ ಬೊಮ್ಮಾಯಿ ಅವರೇ ಎಂದು ಕಿಡಿಕಾರಿದರು.

ಈ ಬಾರಿ ಜೆಡಿಎಸ್‌ಗೆ ಬಹುಮತ ಕೊಡಿ. 5 ವರ್ಷದಲ್ಲಿ ರಾಜ್ಯದ ನೀರಾವರಿ ಯೋಜನೆ ಅನುಷ್ಠಾನ ಮಾಡುತ್ತೇನೆ. ಸಾಧ್ಯವಾಗದಿದ್ದರೆ ಜೆಡಿಎಸ್ ವಿಸರ್ಜನೆ ಮಾಡಲಾಗುವುದು ಎಂದರು.

ರಾಯಚೂರಿನಲ್ಲಿ ಲವ್ ಕೇಸರಿ ವಿಚಾರವಾಗಿ ಮಾತನಾಡಿ, ಯಾವುದೇ ಪ್ರೀತಿಯಲ್ಲಿ ಬಾಂಧವ್ಯ ಮುಖ್ಯ. ಪರಸ್ಪರ ಪ್ರೀತಿಸುವವರಿಗೆ ತೊಂದರೆ ಕೊಡಬಾರದು. ಅವರು ಯಾವ ಧರ್ಮದವರೇ ಆಗಿರಲಿ. ಅವರನ್ನು ನಿಯಂತ್ರಿಸುವ ಕೆಲಸ ಮಾಡಬಾರದು ಎಂದರು.

ಜನತಾ ಜಲಧಾರೆ ಯಾತ್ರೆ ವಿಚಾರವಾಗಿ ಮಾತನಾಡಿ, ಇದು ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಗೆ ಪರ್ಯಾಯವಲ್ಲ. ಅದು ಶೋಗಾಗಿ ನಡೆಸಿದ ಯಾತ್ರೆ. ಅವರು ನೇರವಾಗಿ ರಾಜಕೀಯ ಯಾತ್ರೆ ಎಂದು ಹೇಳಲಿಲ್ಲ. ನಮ್ಮದು ಜನರ ಮುಂದೆ ಸಮಸ್ಯೆ ಬಿಚ್ಚಿಡಲು ಯಾತ್ರೆ. ಈ ಮೂಲಕ ಅಧಿಕೃತ ಚುನಾವಣಾ ಪ್ರಚಾರ ಆರಂಭಿಸಿದ್ದೇನೆ. ಇದನ್ನು ನಾನು ನೇರವಾಗಿ ಹೇಳುತ್ತಿದ್ದಾನೆ ಎಂದರು.

ನಮ್ಮ ಹಾಸನ ಜಿಲ್ಲೆಯಲ್ಲಿ ಯಾವ ಜಾತ್ರೆಯಲ್ಲೂ ಮುಸ್ಲಿಂಮರಿಗೆ ನಿರ್ಬಂಧ ಹೇರುವುದಕ್ಕೆ ಅವಕಾಶ ಕೊಡುವುದಿಲ್ಲ. ಚೆನ್ನಕೇಶವ ಜಾತ್ರೆಯಲ್ಲಿ ಸಮಸ್ಯೆ ಆಗಿರುವುದು ಗಮನಕ್ಕೆ ಬಂದಿದೆ. ಖುದ್ದು ರೇವಣ್ಣ ಅವರಿಗೆ ಸಮಸ್ಯೆ ಬಗೆಹರಿಸುವಂತೆ ಹೇಳಿದ್ದೇನೆ. ನಿರ್ಬಂಧ ತೆರವು ಮಾಡಿಸಿ ಅವರಿಗೆ ವ್ಯಾಪಾರಕ್ಕೆ ಅವಕಾಶ ಕೊಡಿಸುತ್ತೇನೆ. ಹಾಸನ ಜಿಲ್ಲೆ ಮಾತ್ರ ಅಲ್ಲ, ಎಲ್ಲಾ ಜಿಲ್ಲೆಗಳಲ್ಲೂ ನಿರ್ಬಂಧ ತೆರವಿಗೆ ನನ್ನ ಹೋರಾಟ ಇರುತ್ತದೆ ಎಂದರು.

ಸಮಯೋಚಿತ ನಿರ್ಧಾರ ಮತ್ತು ಕ್ರಮಗಳನ್ನ ವಿಪಕ್ಷಗಳಿಂದ ಕಲಿಯಬೇಕಿಲ್ಲ- ಬೊಮ್ಮಾಯಿ

0

ವಿಚಾರಗಳನ್ನು ಪ್ರಚಾರ ಮಾಡುವ ಸಂಘಟನೆಗಳಿಗೆ ಸರ್ಕಾರ ಅಡ್ಡಿಪಡಿಸುವುದಿಲ್ಲ. ಆದರೆ, ಕಾನೂನು ಕೈಗೆತ್ತಿಕೊಂಡು ಹಿಂಸೆಗೆ ಇಳಿದರೆ ಅದನ್ನು ಸಹಿಸಲಾಗದು ಇಂದು ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಎಚ್ಚರಿಕೆಯನ್ನು ನೀಡಿದ್ದಾರೆ.

ಶಾಂತಿ ಕದಡುವ ಶಕ್ತಿಗಳ ಬಗ್ಗೆ ಮುಖ್ಯಮಂತ್ರಿಗಳು ಮೌನವಾಗಿದ್ದಾರೆ. ಇಂತಹ ಕೃತಿಗಳಿಗೆ ಅವರ ಬೆಂಬಲ ಇದೆಯೇ ಎಂದು ವಿರೋಧ ಪಕ್ಷದ ನಾಯಕರು ಪ್ರಶ್ನೆಯನ್ನು ಕೇಳಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಬಿಜೆಪಿ ಶಾಸಕ ಬಿಎಸ್ ಯಡಿಯೂರಪ್ಪ ಅವರು ಕೋಮುಸೌಹಾರ್ದಕ್ಕೆ ಇದಕ್ಕೆ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ಇದರ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಸಂವಿಧಾನಬದ್ಧವಾಗಿ ರಚನೆಯಾಗಿರುವ ಸರ್ಕಾರ ಕಾನೂನು, ಸುವ್ಯವಸ್ಥೆ ಹಾಗೂ ಸಮಾನತೆಯ ದೃಷ್ಟಿಯಿಂದ ಕೆಲಸ ಮಾಡುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ವಿರೋಧಪಕ್ಷಗಳ ಟೀಕೆಗಳಿಗೆ ಪ್ರತಿಕ್ರಿಯಿಸುವುದಿಲ್ಲ. ನಾವು ಮಾತನಾಡಬಾರದು. ನಮ್ಮ ಕೆಲಸ ಮಾತನಾಡಬೇಕು. ಯಾವಾಗ ಯಾವ ನಿರ್ಧಾರ ಮತ್ತು ಯಾವ ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನು ವಿರೋಧ ಪಕ್ಷಗಳಿಂದ ಕಲಿಯಬೇಕಿಲ್ಲ ಎಂದು ಹೇಳಿದ್ದಾರೆ.

ಈ ಹಿಂದೆ ಹಲವು ಯುವಕರ ಕೊಲೆ ನಡೆದಾಗ, ನೇರವಾಗಿ ಭಾಗಿಯಾಗಿದ್ದ ಸಂಘಟನೆಗಳು ಮತ್ತು ಮುಖಂಡರ ಮೇಲಿದ್ದ ಪ್ರಕರಣಗಳನ್ನು ಕೈಬಿಟ್ಟಾಗ ಕಾಂಗ್ರೆಸ್ ನ ಕರ್ತವ್ಯ ಪ್ರಜ್ಞೆ ಎಲ್ಲಿಗೆ ಹೋಗಿತ್ತು ಎಂದು ಪ್ರಶ್ನಿಸಿದ ಬೊಮ್ಮಾಯಿ, ಶಾಂತಿ-ಸುವ್ಯವಸ್ಥೆ ಇರುವ ಪ್ರಗತಿಪರ ರಾಜ್ಯವನ್ನು ಯಾವ ರೀತಿ ಕಾಪಾಡಿಕೊಳ್ಳಬೇಕು ಎಂಬುದು ನಮಗೆ ಗೊತ್ತಿದೆ ಎಂದು ತಿರುಗೇಟು ನೀಡಿದ್ದಾರೆ.