Friday, February 27, 2026
Friday, February 27, 2026
Home Blog Page 1611

ಈಗಷ್ಟೇ ಉಕ್ರೇನ್ ಟಾರ್ಗೆಟ್ ನಂತರ ಇತರ ದೇಶಗಳಿಗೆ ಹಾನಿ-ಝೆಲೆನ್ಸ್ಕಿ

0

ಉಕ್ರೇನ್‌ ಮೇಲೆ ಸತತ ದಾಳಿ ನಡೆಸುತ್ತಿರುವ ರಷ್ಯಾವು, ಉಕ್ರೇನ್‌ನ ಸಾಂಸ್ಕೃತಿಕ ಪರಂಪರೆಯ ವಿರುದ್ಧ 242 ಯುದ್ಧಾಪರಾಧಗಳನ್ನು ಎಸಗಿದೆ ಎಂದು ಉಕ್ರೇನ್‌ ದೂರಿದೆ. ಈ ಬಗ್ಗೆ ಅಲ್ಲಿನ ಸಂಸ್ಕೃತಿ ಮತ್ತು ಮಾಹಿತಿ ನೀತಿ ಸಚಿವಾಲಯ ಪ್ರಕಟಣೆ ಹೊರಡಿಸಿದೆ. ಇನ್ನೂ ಹಲವು ಪ್ರದೇಶಗಳಲ್ಲಿ ರಷ್ಯಾ ಮಾಡುತ್ತಿರುವ ಯುದ್ಧಾಪರಾಧಗಳ ಬಗ್ಗೆ ಮಾಹಿತಿ ಸಿಗುತ್ತಿಲ್ಲ ಎಂದು ಹೇಳಿದೆ.

ಇದೇ ಸಂದರ್ಭದಲ್ಲಿ, ಉಕ್ರೇನ್‌ ಅಧ್ಯಕ್ಷ ಝೆಲೆನ್‌ಸ್ಕಿ ಬೇರೆ ರಾಷ್ಟ್ರಗಳಿಗೂ ರಷ್ಯಾ ಬಗ್ಗೆ ಎಚ್ಚರಿಕೆಯ ಕರೆ ನೀಡಿದ್ದಾರೆ. ನಾವು ರಷ್ಯಾಕ್ಕೆ ಮೊದಲ ಟಾರ್ಗೆಟ್‌. ನಮ್ಮ ನಂತರ ನೀವುಗಳೂ ಅವರಿಗೆ ಶತ್ರುಗಳೇ. ನಿಮ್ಮ ಮೇಲೂ ಅವರು ದಾಳಿ ನಡೆಸುತ್ತಾರೆ. ಹಾಗಾಗಿ ಈಗ ಹೋರಾಟದಲ್ಲಿ ನಮ್ಮೊಂದಿಗೆ ಕೈ ಜೋಡಿಸಿ ಎಂದು ನೆರೆ ರಾಷ್ಟ್ರಗಳಿಗೆ ಹೇಳಿದ್ದಾರೆ.

ಉಕ್ರೇನ್‌ನ ದಕ್ಷಿಣ ಭಾಗವನ್ನು ಶಾಶ್ವತವಾಗಿ ವಶಪಡಿಸಿಕೊಳ್ಳುವುದರಿಂದ ಮೊಲ್ಡೊವಾದ ರಷ್ಯಾ ಪರವಾದ ಭಾಗವಾದ ಟ್ರಾನ್ಸ್‌ನಿಸ್ಟ್ರಿಯಾಕ್ಕೆ ನೇರ ಸಂಪರ್ಕ ಸಿಗಲಿದೆ ಎಂದು ರಷ್ಯಾ ಹೇಳಿದೆ. ಮಲ್ಡೋವಾ ಕೂಡ ರಷ್ಯಾ ಬಗ್ಗೆ ಆಕ್ರೋಶ ಹೊರಹಾಕುವಂತಾಗಿದೆ.

ಉಕ್ರೇನ್‌ ಪೂರ್ವ ಭಾಗದಲ್ಲಿ ರಷ್ಯಾ 42 ನಗರಗಳನ್ನು ವಶಪಡಿಸಿಕೊಂಡಿದೆ ಎಂದು ಉಕ್ರೇನ್‌ ತಿಳಿಸಿದೆ.

ಹೆಣ್ಣುಮಕ್ಕಳಿಗೆ ಈಗ ಶಿಕ್ಷಣ ಮುಖ್ಯ- ಶೋಭಾ ಕರಂದ್ಲಾಜೆ

0

ನಮ್ಮ ಹೆಣ್ಣು ಮಕ್ಕಳಿಗೆ ಬೇಕಾದದ್ದು ಶಿಕ್ಷಣ. ಅವರು ಶಿಕ್ಷಣ ಪಡೆದು ತಮ್ಮ ಕಾಲ ಮೇಲೆ ಅವರು ನಿಲ್ಲಬೇಕು. ಹಾಲ್ ಟಿಕೆಟ್‌ ಪಡೆದು ಪರೀಕ್ಷೆ ಬರೆಯದೆ ಪ್ರಚಾರ ಗಿಟ್ಟಿಸುತ್ತಿದ್ದಾರೆ. ಭಯೋತ್ಪಾದಕರು ಬೆಂಬಲ ಕೊಡುವ ರೀತಿಯಲ್ಲಿ ಭಾರತದಲ್ಲಿ ಏನೋ ನಡೆಯುತ್ತದೆ ಎನ್ನುವಂತೆ ಬಿಂಬಿಸಲು ಹೊರಟಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಹೇಳಿದ್ದಾರೆ.

ಭಾರತವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತಿದ್ದಾರೆ. ಇದು ಭಾರತದಲ್ಲಿ ನಡೆಯುವುದಿಲ್ಲ. ಇಲ್ಲಿ ಪ್ರಜಾತಂತ್ರ ವ್ಯವಸ್ಥೆ ಇದೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ನಿನ್ನೆ (ಶನಿವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರೂ ಪರೀಕ್ಷೆ ಬರೆಯಬೇಕು. ಪದವಿ ಪಡೆದು ಅವರ ಕಾಲ ಮೇಲೆ ಅವರು ನಿಲ್ಲಬೇಕು. ಈಗಲಾದರೂ ಸರಿ ಮಾಡಿಕೊಂಡು ಹೋಗಬೇಕು. ನಿಮ್ಮ ಹಿಂದೆ ನಿಂತ ಸಂಘಟನೆ, ಬದುಕಿನಲ್ಲಿ ಬರುವುದಿಲ್ಲ ಎಂದು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ.

ಹಿಜಾಬ್‌ ಗೆ ಸಂಬಂಧಿಸಿದಂತೆ ಹೈಕೋರ್ಟ್‌ ಸ್ಪಷ್ಟ ನಿರ್ಧಾರ ತಿಳಿಸಿದೆ. ಸಮವಸ್ತ್ರ ಧರಿಸಿ ಬರಬೇಕೆಂದು ಹೇಳಿರುವುದರಿಂದ ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆ ಕೂಡ ಇದನ್ನೇ ಹೇಳಿದೆ. ಹೈಕೋರ್ಟ್‌ ಆದೇಶ ಮೀರಿ ಕೆಲವರು ಹಿಜಾಬ್‌ಗೆ ಬೆಂಬಲ ಕೊಡುತ್ತಿದ್ದಾರೆ. ಈ ದೇಶದ ನೆಲದ ಕಾನೂನನ್ನು ಪಾಲನೆ ಮಾಡುವುದಿಲ್ಲ. ಮನಬಂದಂತೆ ನಡೆದುಕೊಳ್ಳುತ್ತೇವೆ ಎಂಬುವುದು ಸಾಬೀತು ಮಾಡಿದ್ದಾರೆ. ಪೊಲೀಸರಿಗೆ, ಸರ್ಕಾರಕ್ಕೆ ಗೌರವ ಕೊಡುವುದಿಲ್ಲ. ಪೊಲೀಸ್‌ ವ್ಯವಸ್ಥೆ ಮೇಲೆ ದೌರ್ಜನ್ಯ, ಪೊಲೀಸ್‌ ಠಾಣೆ ಮೇಲೆ ದಾಳಿ ಮಾಡುತ್ತಾರೆ. ಇದು ಅವರ ಮಾನಸಿಕತೆಯನ್ನು ತೋರಿಸುತ್ತದೆ. ದೇಶದಲ್ಲಿ ಎಲ್ಲರೂ ಒಟ್ಟಾಗಿ ಬದುಕಬೇಕು ಅನ್ನೋದು ನಮ್ಮ ಸಂಕಲ್ಪ ಎಂದು ಶೋಭಾ ಕರಂದ್ಲಾಜೆ ಅವರು ತಿಳಿಸಿದ್ದಾರೆ.

ಭಾರತ ಎತ್ತ ಸಾಗುತ್ತಿದೆ ಎಂದು ಹಿಜಾಬ್‌ ಹೋರಾಟಗಾರ್ತಿ ಆಲಿಯಾ ಟ್ಟಿಟ್‌ಗೆ ಪ್ರತಿಕ್ರಿಯಿಸಿದ ಸಚಿವರು, ಭಾರತದಲ್ಲಿ ಎಲ್ಲರೂ ಒಂದೇ ರೀತಿಯಲ್ಲಿ ಬದುಕಬೇಕು ಎಂಬುದನ್ನು ನಾವು ಸಾರುತ್ತೇವೆ. ಭಾರತದಿಂದ ಬಿಟ್ಟು ಹೋದವರ ಪರಿಸ್ಥಿತಿ ಏನಾಗಿದೆ, ಅಲ್ಲಿ ಊಟಕ್ಕೂ ಗತಿ ಇಲ್ಲದ ಪರಿಸ್ಥಿತಿ ಇದೆ. ಭಾರತದಲ್ಲಿ ಎಲ್ಲರಿಗೂ ಊಟ, ಔಷಧ ಸಿಗುತ್ತಿದೆ ಎಂದು ಹೇಳಿದ್ದಾರೆ.

ಬಡಮಕ್ಕಳಿಗೆ ಉದ್ಯೋಗ ನೀಡಿಕೆ ಸರ್ಕಾರ ಸರಿಯಾಗಿ ನಿರ್ವಹಿಸುತ್ತಿಲ್ಲ-ಕುಮಾರ ಸ್ಬಾಮಿ

0

ರಾಜ್ಯದ ಬಡ ಮಕ್ಕಳಿಗೆ ಪಾರದರ್ಶಕವಾಗಿ ಉದ್ಯೋಗ ಕೊಡುವ ಜವಾಬ್ದಾರಿಯನ್ನು ರಾಜ್ಯ ಸರ್ಕಾರ ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಆರೋಪ ಮಾಡಿದ್ದಾರೆ.

ಬೀದರ್‌ನಲ್ಲಿ ಮಾತನಾಡಿದ ಅವರು, ಪಿಎಸ್‌ಐ ನೇಮಕಾತಿ ಅಷ್ಟೇ ಅಲ್ಲ. ಸಹಕಾರಿ ಕ್ಷೇತ್ರದಲ್ಲಿಯೂ ಸರ್ಕಾರಿ ಉದ್ಯೋಗಗಳನ್ನು ಹಣಕ್ಕೆ ಮಾರಿಕೊಳ್ಳುತ್ತಿದ್ದಾರೆ ಎಂದು ದೂರಿದ್ದಾರೆ.

ಜಿಲ್ಲಾ ಹಾಲು ಒಕ್ಕೂಟಗಳಲ್ಲಿ ನೇಮಕಾತಿ ಪಾರದರ್ಶಕವಾಗಿ ನಡೆಯುತ್ತಿಲ್ಲ. ಅಲ್ಲಿ ಒಂದೊಂದು ಹುದ್ದೆ 25ರಿಂದ 50 ಲಕ್ಷ ರೂಪಾಯಿವರೆಗೆ ಮಾರಾಟವಾಗುತ್ತಿದೆ. ಇದು ಎಲ್ಲ ಜಿಲ್ಲೆಗಳ ಹಾಲು ಒಕ್ಕೂಟಗಳಲ್ಲೂ ನಡೆಯುತ್ತಿದೆ. ಈ ಮಾಹಿತಿ ನನಗೆ ಮಾತ್ರವಲ್ಲದೆ, ಇದುವರೆಗೆ ಆಡಳಿತ ನಡೆಸಿದ, ಈಗ ನಡೆಸುತ್ತಿರುವ ಪ್ರತಿಯೊಬ್ಬರಿಗೂ ಗೊತ್ತಿದೆ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ.

ಎಲ್ಲ ಇಲಾಖೆಗಳಲ್ಲಿಯೂ ಪಾರದರ್ಶಕವಾಗಿ ನೇಮಕಾತಿ ನಡೆಯುತ್ತಿಲ್ಲ. ಕಮೀಷನ್ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ವಸ್ತುಸ್ಥಿತಿ ಹೀಗಿರುವಾಗ ಪ್ರಾಮಾಣಿಕವಾಗಿ ಕಷ್ಟಪಟ್ಟು ಓದಿದ ಬಡ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಈ ಅನ್ಯಾಯದ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಹಚ್ಚಬೇಕು. ಪಾರದರ್ಶಕ ಮತ್ತು ಕಟ್ಟುನಿಟ್ಟಿನ ಕ್ರಮಗಳನ್ನು ಮುಖ್ಯಮಂತ್ರಿ ಕೈಗೊಳ್ಳಬೇಕು. ಮತ್ತು ಈ ಬಗ್ಗೆ ಸಹಕಾರಿ ಸಚಿವರು ವಾಸ್ತವಾಂಶವನ್ನು ಜನರ ಮುಂದೆ ಇಡಲಿ ಎಂದು ಕುಮಾರಸ್ವಾಮಿ ಅವರು ಒತ್ತಾಯಿಸಿದ್ದಾರೆ.

ಕೋವಿಡ್ 4 ನೇ ಅಲೆ, ರಾಜ್ಯಗಳ ಸಿಎಂ ಗಳ ಜೊತೆ ಪ್ರಧಾನಿ ಸಂವಾದ

0

ದೇಶದಲ್ಲಿ ಕೊರೋನಾ ನಾಲ್ಕನೇ ಅಲೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹೈ ಅಲರ್ಟ್ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 27ರಂದು, ಬುಧವಾರ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ ಎಂದು ಕೇಂದ್ರ ತಿಳಿಸಿದೆ.

ಕೊರೋನಾ ಪ್ರಕರಣಗಳ ಏರಿಕೆ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ.

ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ವಿಷಯವನ್ನು ಪ್ರಸ್ತುತ ಪಡಿಸಲಿದ್ದಾರೆ. ದೇಶದಾದ್ಯಂತ ಹೊಸದಾಗಿ 15,079 ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ಪ್ರಕಟಿಸಿದೆ.

ಹಿಂದೂ ಮುಸ್ಲಿಂ ವಿವಾದ ಶಾಂತಿಯುತ ಪರಹಾರ- ಸುಬ್ರಮಣ್ಯಸ್ವಾಮಿ

0

ಕೃಷ್ಣ ಜನ್ಮಭೂಮಿ ಮತ್ತು ಕಾಶಿ ವಿಶ್ವನಾಥ ಮಂದಿರ ವಿವಾದಗಳೇ ನಮ್ಮ ಮುಂದಿನ ಗುರಿ ಎಂದು ರಾಜ್ಯ ಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು ಹೇಳಿದ್ದಾರೆ.

ಮೈಸೂರು ಹಿಂದೂ ಫೋರಂ ಸಹಯೋಗದಲ್ಲಿ ಮೈಸೂರಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸದ್ಯ ರಾಮಜನ್ಮಭೂಮಿ ವಿವಾದ ಮುಗಿದಿದೆ.

ಇನ್ಮುಂದೆ ಕಾಶಿ ವಿಶ್ವನಾಥ ಮಂದಿರ ಹಾಗೂ ಕೃಷ್ಣ ಜನ್ಮಭೂಮಿಗೆ ಸಂಬಂಧಿಸಿದ ಹಿಂದೂ,ಮುಸ್ಲಿಂ ವಿವಾದಗಳನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳುತ್ತೇವೆ ಎಂದು ಸುಬ್ರಮಣಿಯನ್ ಸ್ವಾಮಿ ಅವರು ತಿಳಿಸಿದ್ದಾರೆ.

56 ಸಿವಿಲ್ ಜಡ್ಜ್ ಗಳ ನೇರ ನೇಮಕಾತಿ ಹೈಕೋರ್ಟ್ ಅಧಿಸೂಚ‌ನೆ

0

ರಾಜ್ಯದಲ್ಲಿ ಖಾಲಿ ಇರುವ 56 ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ನೇರ ನೇಮಕಾತಿ ನಡೆಸಲು ಹೈಕೋರ್ಟ್ ಆನ್​​ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.

ಈ ಕುರಿತಂತೆ ಹೈಕೋರ್ಟ್ ಅಧಿಸೂಚನೆಯನ್ನು ಹೊರಡಿಸಿದೆ. ಅರ್ಹ ಅಭ್ಯರ್ಥಿಗಳು ಆನ್​​ಲೈನ್ ಮುಖಾಂತರ ಮುಂದಿನ ತಿಂಗಳ ಮೇ 23ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ನೇರ ನೇಮಕಾತಿ ಮೂಲಕ ಆಯ್ಕೆ ಬಯಸುವ ಅಭ್ಯರ್ಥಿಗಳು ಅಂಗೀಕೃತ ವಿವಿಯಿಂದ ಕಾನೂನು ಪದವಿ ಪಡೆದಿರಬೇಕು. ಮತ್ತು ವಕೀಲರಾಗಿ ನೋಂದಾಯಿಸಿಕೊಂಡಿರಬೇಕು.

ಎಸ್​​ಸಿ-ಎಸ್​​ಟಿ ಅಭ್ಯರ್ಥಿಗಳು 38 ವರ್ಷ ಮೀರಿರಬಾರದು. ಸಾಮಾನ್ಯ ವರ್ಗದ ಅಭ್ಯರ್ಥಿಗಳು 35 ವಯೋಮಾನ ದಾಟಿರಬಾರದು.
ಮಾಜಿ ಸೈನಿಕ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ ಇದೆ. ಇನ್ನು ಸೇವಾನಿರತ ಅಭ್ಯರ್ಥಿಗಳಾಗಿದ್ದಲ್ಲಿ ಎಸ್​ಸಿ-ಎಸ್​​ಟಿ 43 ವರ್ಷ ಹಾಗೂ ಸಾಮಾನ್ಯ ವರ್ಗ 40 ವರ್ಷ ಮೀರಿರಬಾರದು. ಈ ಮೇಲಿನ ಅಂಶಗಳನ್ನು ಅಭ್ಯರ್ಥಿ ಒಳಗೊಂಡಿರಬೇಕು.

ಹೈಕೋರ್ಟ್ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದಲ್ಲಿ ನೇರ ನೇಮಕಾತಿ ನಡೆಯಲಿದೆ.
ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ನಂತರ ಮೌಖಿಕ ಪರೀಕ್ಷೆ ನಡೆಯಲಿದೆ.

ಅನರ್ಹತೆ ಗಳೆಂದರೆ ಭಾರತೀಯ ಪೌರನಾಗಿಲ್ಲದಿದ್ದರೆ, ನ್ಯಾಯಿಕ ಸೇವೆ, ಸರ್ಕಾರಿ ಸೇವೆ ಅಥವಾ ಶಾಸನಾತ್ಮಕ ಅಥವಾ ಸ್ಥಳೀಯ ಪ್ರಾಧಿಕಾರದ ಸೇವೆಯಿಂದ ಕಡ್ಡಾಯ ನಿವೃತ್ತಿ ಹೊಂದಿದ್ದರೆ, ವಜಾಗೊಂಡಿದ್ದರೆ ಹಾಗೂ ಈ ಮೊದಲು ನ್ಯಾಯಾಂಗ ಅಧಿಕಾರಿಯಾಗಿ ಆಯ್ಕೆಯಾಗಿದ್ದು ಪರಿವೀಕ್ಷಣೆ ಅವಧಿಯಲ್ಲಿ ಸೇವೆಯಿಂದ ವಿಮುಕ್ತಿಗೊಂಡಿದ್ದರೆ ಅನರ್ಹಗೊಳ್ಳಲಿದ್ದಾರೆ.
ಹಾಗೆಯೇ ನೈತಿಕ ಅಧಃಪತಕ್ಕೆ ಸೇರುವ ಯಾವುದೇ ಅಪರಾಧದಲ್ಲಿ ಶಿಕ್ಷೆಗೆ ಗುರಿಯಾಗಿದ್ದರೆ, ಕೇಂದ್ರ ಅಥವಾ ರಾಜ್ಯ ಲೋಕಸೇವಾ ಆಯೋಗಗಳು ನಡೆಸುವ ಪರೀಕ್ಷೆಗಳಿಗೆ ಶಾಶ್ವತವಾಗಿ ಅನರ್ಹಗೊಂಡಿದ್ದರೆ, ಬಾರ್ ಕೌನ್ಸಿಲ್ ನೋಂದಣಿಯಿಂದ ತೆಗೆದು ಹಾಕಿದ್ದರೆ, ನೇಮಕಾತಿ ಪ್ರಾಧಿಕಾರವನ್ನು ನೇರವಾಗಿ ಅಥವಾ ಪರೋಕ್ಷವಾಗಿ ಪ್ರಭಾವಿಸಿದರೆ ಮತ್ತು ದಿಪತ್ನಿತ್ವ ಅಥವಾ ದ್ವಿಪತಿತ್ವ ಇದ್ದಲ್ಲಿ ನೇಮಕಾತಿಗೆ ಅನರ್ಹರಾಗಿರುತ್ತಾರೆ.

ಪೂರ್ವಭಾವಿ ಪರೀಕ್ಷೆಗೆ ಪರಿಶಿಷ್ಟ ಜಾತಿ, ಪಂಗಡ ಹಾಗೂ ಪ್ರವರ್ಗ 1ಕ್ಕೆ ಸೇರಿದ ಅಭ್ಯರ್ಥಿಗಳಿಗೆ 250 ಹಾಗೂ ಇತರೆ ಅಭ್ಯರ್ಥಿಗಳಿಗೆ 500 ರೂ. ಶುಲ್ಕ ನಿಗದಿ ಮಾಡಲಾಗಿದೆ.
ಪೂರ್ವಭಾವಿ ಪರೀಕ್ಷೆ ಪಾಸಾಗಿ ಮುಖ್ಯ ಪರೀಕ್ಷೆ ಬರೆಯುವ ಮುನ್ನ, ಪರಿಶಿಷ್ಟ ಜಾತಿ, ಪಂಗಡ ಹಾಗೂ ಪ್ರವರ್ಗ 1ಕ್ಕೆ ಸೇರಿದ ಅಭ್ಯರ್ಥಿಗಳು 500 ರೂ.ಹಾಗೂ ಇತರೆ ಅಭ್ಯರ್ಥಿಗಳಿಗೆ 1000 ರೂ. ಶುಲ್ಕ ಪಾವತಿಸಬೇಕಿದೆ. ಅಭ್ಯರ್ಥಿಗಳು ತಪ್ಪು ಅಥವಾ ಸುಳ್ಳು ಮಾಹಿತಿ, ದಾಖಲೆ ಒದಗಿಸಿರುವುದು ಕಂಡು ಬಂದಲ್ಲಿ ಅರ್ಜಿ ತಿರಸ್ಕೃತಗೊಳ್ಳತ್ತದೆ. ಹಾಗೆಯೇ, ಸುಳ್ಳು ಮಾಹಿತಿ ನೀಡಿದ್ದಕ್ಕಾಗಿ ಕ್ರಿಮಿನಲ್ ಪ್ರಾಸಿಕ್ಯೂಷನ್‌ಗೂ ಒಳಪಡಿಸಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಹೈಕೋರ್ಟ್ ವೆಬ್‌ಸೈಟ್​​ಗೆ ಭೇಟಿ ನೀಡಬಹುದಾಗಿದೆ.

ರಾಜ್ಯದಲ್ಲಿ ಮೂರ್ನಾಲ್ಕು ವಾರಗಳಲ್ಲಿ ಕೋವಿಡ್4ನೇ ಅಲೆ ಸಾಧ್ಯತೆ

0

ಮೂಲ ತಳಿಗಿಂತ ವೇಗವಾಗಿ ಹರಡಬಲ್ಲ ಓಮಿಕ್ರಾನ್ ರೂಪಾಂತರಿ ತಳಿ ಬಿಎ .2 ರ ಎರಡು ಪ್ರಕರಣಗಳು ಬೆಂಗಳೂರಿನಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಉದ್ಭವಿಸುತ್ತಿರುವ ಪರಿಸ್ಥಿತಿಯನ್ನು ನಿಭಾಯಿಸಲು ಕರ್ನಾಟಕ ಆರೋಗ್ಯ ಇಲಾಖೆ ಕ್ರಮಗಳನ್ನು ಚುರುಕುಗೊಳಿಸಿದೆ.

ರಾಜ್ಯದಲ್ಲಿ, ವಿಶೇಷವಾಗಿ ಬೆಂಗಳೂರಿನಲ್ಲಿ ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ.

ಹೆಚ್ಚಿನ ಪ್ರಮುಖ ಐಟಿ ಕಂಪನಿಗಳು ಲಕ್ಷಾಂತರ ಸಾಫ್ಟ್ವೇರ್ ವೃತ್ತಿಪರರನ್ನು ಹೊಂದಿರುವ ಬೆಂಗಳೂರಿನ ಮಹದೇವಪುರ ಮತ್ತು ಪೂರ್ವ ವಲಯಗಳಿಂದ ಹೆಚ್ಚಿನ ಸಂಖ್ಯೆಯ ಕೊರೋನಾ ಪ್ರಕರಣಗಳು ವರದಿಯಾಗುತ್ತಿವೆ ಎಂದು ಅಧಿಕಾರಿಗಳು ಚಿಂತಿತರಾಗಿದ್ದಾರೆ.

ಬೆಂಗಳೂರಿನ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಸಿ.ಎನ್.ಮಂಜುನಾಥ್ ಮಾತನಾಡಿ, ರಾಜ್ಯದಲ್ಲಿ ಕೋವಿಡ್ ರೂಪಾಂತರಗಳಾದ ಬಿಎ.2.10 ಮತ್ತು ಬಿಎ.2.12 ಪತ್ತೆಯಾಗಿದೆ.ಬಿಎ.2 ರೂಪಾಂತರಗಳು ಈ ಹಿಂದೆ ನವದೆಹಲಿ ಮತ್ತು ಮುಂಬೈನಲ್ಲಿ ಕಂಡುಬಂದಿದ್ದವು ಎಂದು ಮಾಹಿತಿ ನೀಡಿದ್ದಾರೆ.

ಮೂರರಿಂದ ನಾಲ್ಕು ವಾರಗಳಲ್ಲಿ ಕರ್ನಾಟಕದಲ್ಲಿ ನಾಲ್ಕನೇ ಕೊರೋನಾ ಅಲೆ ಪ್ರಾರಂಭವಾಗುವ ಸಾಧ್ಯತೆಯಿದೆ. ಬಿಎ .2 ರೂಪಾಂತರವು ಉಲ್ಬಣಕ್ಕೆ ಕಾರಣವಾಗಬಹುದು ಎಂದು ಮಂಜುನಾಥ್ ಅವರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

ರಾಜ್ಯದಲ್ಲಿ ನಾಲ್ಕನೇ ಅಲೆಯು ಅಪ್ಪಳಿಸಿದರೆ, ಸೋಂಕಿತರು ವೇಗವಾಗಿ ಹರಡುತ್ತಿದ್ದರೂ ಆಸ್ಪತ್ರೆಗಳಿಗೆ ದಾಖಲಾಗುವವರ ಸಂಖ್ಯೆ ಮೊದಲಿಗಿಂತ ಕಡಿಮೆ ಇರುತ್ತದೆ ಎಂದು ಮಂಜುನಾಥ್ ಹೇಳಿದ್ದಾರೆ.

ರಾಜ್ಯದಲ್ಲಿ ಈಗ ಯಾವುದೇ ನಿರ್ಬಂಧಗಳು ಜಾರಿಯಲ್ಲಿಲ್ಲ ಮತ್ತು ಕೊರೋನಾ ಪೂರ್ವದ ಅವಧಿಯಂತೆ ಎಲ್ಲಾ ಚಟುವಟಿಕೆಗಳು ಪುನರಾರಂಭಗೊಂಡಿವೆ. ಇದು ಇನ್ನೂ ಎರಡು ವಾರಗಳಲ್ಲಿ ಕೋವಿಡ್ ಪ್ರಕರಣಗಳಲ್ಲಿ ಹೆಚ್ಚಳಕ್ಕೆ ಕಾರಣವಾಗಲಿದೆ. ಜನರು ಜಾಗರೂಕರಾಗಿರಬೇಕು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ರಷ್ಯದ್ದು ನ್ಯಾಯ ಸಮ್ಮತವಲ್ಲದ ದಾಳಿ- ಲೆಯೆನ್

0

ಉಕ್ರೇನ್ ಮೇಲೆ ರಷ್ಯಾ ನಡೆಸಿರುವ ನ್ಯಾಯ ಸಮ್ಮತವಲ್ಲದ ದಾಳಿಯನ್ನು ಪ್ರಶ್ನಿಸಿದಿದ್ದರೆ ಉದ್ವಿಗ್ನತೆ ಹೊಗೆಯಾಡುತ್ತಿರುವ ಇಂಡೋ ಫೆಸಿಫಿಕ್ ಸೇರಿದಂತೆ ಎಲ್ಲೆಡೆ ಮೈಟ್ ಮೇಕ್ಸ್ ರೈಟ್ ಎಂಬ ವಿಶ್ವದ ಸೃಷ್ಟಿಗೆ ಕಾರಣವಾಗುತ್ತದೆ ಎಂದು ಯೂರೋಪಿಯನ್ ಆಯೋಗದ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೆಯೆನ್ ಅವರು ಎಚ್ಚರಿಕೆ ನೀಡಿದ್ದಾರೆ.

ಭಾರತಕ್ಕೆ ಎರಡು ದಿನಗಳ ಭೇಟಿಗಾಗಿ ಇಂದು(ಭಾನುವಾರ) ಆಗಮಿಸಲಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತನಾಡಲಿದ್ದಾರೆ. ಮತ್ತು ರೈಸಿನಾ ಚರ್ಚೆ ನಡೆಸುತ್ತಾರೆ. ತಮ್ಮ ಭೇಟಿ ವೇಳೆ, ಆಕ್ರಮಣವನ್ನು ನಿಲ್ಲಿಸುವ ಅಗತ್ಯತೆಯನ್ನು ಪ್ರತಿಪಾದಿಸಿ ಉಕ್ರೇನ್ ಯುದ್ಧದ ಬಗ್ಗೆ ಭಾರತದ ಜೊತೆ ಚರ್ಚಿಸುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

ಉಕ್ರೇನ್‍ನಲ್ಲಿ ರಕ್ತಪಾತವನ್ನು ಮುಂದುವರಿಸುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಪ್ರಯತ್ನಗಳನ್ನು ತಡೆಯಲು ಇತರ ದೇಶಗಳು ಕೈಜೋಡಿಸುವಂತೆ ಯೂರೋಪಿಯನ್ ಒಕ್ಕೂಟ ಆಹ್ವಾನಿಸುತ್ತಿದೆ. ಏಕೆಂದರೆ ರಷ್ಯಾದ ಅತಿಕ್ರಮಣ ಕೇವಲ ಒಂದು ದೇಶಕ್ಕೆ ಅಪಾಯ ತರುವಂಥದ್ದಲ್ಲ. ಇದರ ಬದಲಾಗಿ ಇಡೀ ವಿಶ್ವಕ್ಕೆ ಅಪಾಯಕಾರಿ ಎಂದು ಭಾರತ ಭೇಟಿಗೆ ಮುನ್ನ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಉಕ್ರೇನ್ ಮೇಲಿನ ದಾಳಿಯ ಹಿನ್ನೆಲೆಯಲ್ಲಿ ಇಂಡೋ-ಫೆಸಿಫಿಕ್ ಪ್ರದೇಶದಲ್ಲಿ ಕೂಡಾ ದಾಳಿ ನಡೆಯುವ ಸಂಭಾವ್ಯತೆ ಬಗ್ಗೆ ಪ್ರಶ್ನಿಸಿದಾಗ, ಈ ದಾಳಿಯನ್ನು ಯಾರೂ ಪ್ರಶ್ನಿಸದಿದ್ದರೆ, ತೋಳ್ಬಲವೇ ಸರಿ ಎಂಬ ವಿಶ್ವವನ್ನು ನಾವು ಕಾಣಬೇಕಾಗುತ್ತದೆ. ಯೂರೋಪಿಯನ್ ಒಕ್ಕೂಟದಲ್ಲಿ ಕಾನೂನು ಶ್ರೇಷ್ಠವೇ ವಿನಃ ಬಂದೂಕಿನ ಆಡಳಿತವಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಈಚಿನ ನೀರಾವರಿ ಯೋಜನೆಗಳ ರೂವಾರಿ ದೇವೇಗೌಡರು- ರೇವಣ್ಣ

0

ರಾಜ್ಯದ ಜನರಿಗೆ ಕುಡಿಯುವ ನೀರು ಒದಗಿಸಲು ಹಾಗೂ ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಆಗ್ರಹಿಸಿ ಜೆಡಿಎಸ್ನಿಂದ ಹಮ್ಮಿಕೊಂಡಿದ್ದ ಜನತಾ ಜಲಧಾರೆ ರಥಯಾತ್ರೆ ನಿನ್ನೆ ಚಾಲನೆ ದೊರಕಿದೆ.

ಇಂದು ಜನತಾ ಜಲಧಾರೆ ರಥಯಾತ್ರೆಗೆ ಭದ್ರಾವತಿಯ ಭದ್ರಾ ಜಲಾಶಯದಲ್ಲಿ ಎಚ್ .ಡಿ .ರೇವಣ್ಣ ಅವರು ಚಾಲನೆ ನೀಡಿದ್ದಾರೆ.

ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಹೆಚ್.ಡಿ. ರೇವಣ್ಣ ಅವರು,ರಾಜ್ಯದ ಲ್ಲಿ ಇರುವ ಎಲ್ಲಾ ನೀರಾವರಿ ಯೋಜನೆಗಳಿಗೆ ಅದಕ್ಕೆ ಒತ್ತುಕೊಟ್ಟ ವ್ಯಕ್ತಿ ಯಾರಾದರೂ ಇದ್ದರೆ ಅದು ನಮ್ಮ ತಂದೆ ಎನ್ನುವುದಕ್ಕಿಂತಲೂ ಅದು ದೇವೇಗೌಡರು. 1983 ರಲ್ಲಿ ದೇವೇಗೌಡರು ನೀರಾವರಿ ಸಚಿವರಾದ ಆರು ವರ್ಷದಲ್ಲಿ, ನೀರಾವರಿ ಅಭಿವೃದ್ಧಿಗೆ ಮಾಡಿದ ಹಣ 900 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಇದನ್ನು
50 ವರ್ಷದ ರಾಷ್ಟ್ರೀಯ ಕಾಂಗ್ರೆಸ್ ಒಪ್ಪುತ್ತದೆಯೋ ಇಲ್ಲವೋ ಎಂದು ನೀವೇ ಹೇಳಿ ಎಂದು ಹೇಳಿದರು.

50ವರ್ಷ ಆಡಳಿತದಲ್ಲಿರುವ ಕಾಂಗ್ರೆಸ್ 200 ಕೋಟಿ ರೂಪಾಯಿ ಖರ್ಚು ಮಾಡಿಲ್ಲ. ಅದೇ ದೇವೇಗೌಡರು ಅಧಿಕಾರಕ್ಕೆ ಬಂದ ಆರು ವರ್ಷದಲ್ಲಿ 900 ಕೋಟಿ ರೂಪಾಯಿ ನೀರಾವರಿ ಅಭಿವೃದ್ಧಿ ಕಾರ್ಯಕ್ರಮಗಳು ಖರ್ಚು ಮಾಡಿದ್ದಾರೆ. ಅದೇ ರೀತಿ ದೇವೇಗೌಡರು, ಮುಖ್ಯಮಂತ್ರಿಗಳಾಗಿದ್ದಾಗ ಸುಮಾರು 2000 ಕೋಟಿ ರೂಪಾಯಿ ಹಣ.ಖರ್ಚು ಮಾಡಿದ್ದಾರೆ. ಪ್ರಧಾನಮಂತ್ರಿಯಾಗಿ ಇಡೀ ರಾಷ್ಟ್ರದಲ್ಲಿ ಇಂದು ನೀರಾವರಿ ಯೋಜನೆಗಳಿಗೆ ಪ್ರತಿವರ್ಷ 18000 ಕೋಟಿ ಹಣ ಬರಬೇಕಾಗಿದ್ದರೆ ಅದು ಸನ್ಮಾನ್ಯ ದೇವೇಗೌಡರಿಗೆ ಸಲ್ಲುತ್ತದೆ ಎಂದು ದೇವೇಗೌಡರ ಬಗ್ಗೆ ಸಂತಸವನ್ನು ವ್ಯಕ್ತಪಡಿಸಿ ದರು.

ಇಂದು ಸ್ವಾತಂತ್ರ್ಯ ಬಂದು ಎಪ್ಪತ್ತೈದು ವರ್ಷಗಳಾದರು, ನಮ್ಮ ನೀರಾವರಿ ಯೋಜನೆಗಳನ್ನು ಯಾರಿಂದಲೂ ಮಾಡಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.

ಎಪ್ಪತ್ತೈದು ವರ್ಷಗಳು ಆದರೂ ಕೂಡ ಕಾಂಗ್ರೆಸ್ ಇದುವರೆಗೂ ನೀರಾವರಿ ಯೋಜನೆಗಳ ಕೈಗೊಂಡಿಲ್ಲ ಎಂದು ತಿಳಿಸಿದರು.

ದೇವೇಗೌಡರು ನೀರಾವರಿ ಅಧಿಕಾರದಿಂದ ಇಳಿದ ಮೇಲೆ ಈ ರಾಜ್ಯದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ನೀರಾವರಿ ಮಂತ್ರಿಗಳಾಗಿದ್ದರು.ದೇವೇಗೌಡರು ನೀರಾವರಿ ಯೋಜನೆಗಳಿಗೆ ಅನೇಕ ಕೊಡುಗೆ ನೀಡಿದ್ದಾರೆ ಎಂದು ಅವರ ಪಕ್ಷಗಳು ತಿಳಿಸಬೇಕೆಂದರು.

ನಮ್ಮ ಕುಮಾರಸ್ವಾಮಿಯವರು ಜಲಧಾರೆ ಕಾರ್ಯಕ್ರಮದ ಮೂಲಕ ಯಾವ ಸಂಕಲ್ಪ ಮಾಡಿದ್ದಾರೆ. ನನಗೆ ಪೂರ್ಣ ಅಧಿಕಾರ ಕೊಡಿ 5 ವರ್ಷದ ಒಳಗೆ ಎಲ್ಲಾ ಕಾರ್ಯಕ್ರಮಗಳು ಮಾಡುತ್ತೇನೆ. ಇಲ್ಲವಾದರೆ ನಾನು ರಾಜಕೀಯ ಬಿಟ್ಟು ಹೋಗುತ್ತೇನೆ ಎಂದು ಕುಮಾರಸ್ವಾಮಿಯವರು ಸಂಕಲ್ಪ ಮಾಡಿದ್ದಾರೆ ಎಂದು ಹೆಚ್. ಡಿ.ರೇವಣ್ಣ ಅವರು ಹೇಳಿದರು.

ಕುಮಾರಸ್ವಾಮಿಯವರು ಅಧಿಕಾರಕ್ಕೆ ಬಂದ ಮೇಲೆ ಸುಮಾರು 48 ತಾಲೂಕು ಕೇಂದ್ರಗಳಲ್ಲಿ ಪಿಯು ಕಾಲೇಜು ಗಳಿರಲಿಲ್ಲ. ಅವರು ಅಧಿಕಾರಕ್ಕೆ ಬಂದ ಮೇಲೆ ಸುಮಾರು 190 ಪ್ರಥಮ ದರ್ಜೆ ಕಾಲೇಜು ನಿರ್ಮಿಸಲಾಯಿತು. ಅದೇ ರೀತಿ 1400 ಹೈಸ್ಕೂಲ್ ಗಳು, 600 ಪಿಯು ಕಾಲೇಜುಗಳು ಸ್ಥಾಪಿಸಲಾಗಿದೆ. ಇವುಗಳು ಕುಮಾರಸ್ವಾಮಿಯವರು ಅಧಿಕಾರದಲ್ಲಿದ್ದಾಗ ನೀಡಿದ ಕೊಡುಗೆಗಳಾಗಿವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾರದ ಅಪ್ಪಾಜಿಗೌಡ, ಮಾಜಿ ಗ್ರಾಮಾಂತರ ಶಾಸಕರಾದ ಶಾರದಾ ಪೂರ್ಯನಾಯಕ್, ಜೆಡಿಎಸ್ ನ ಜಿಲ್ಲಾಧ್ಯಕ್ಷರಾದ ಶ್ರೀಕಾಂತ್ ಇನ್ನು ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಹುಬ್ಬಳ್ಳಿ ಗಲಭೆ ಆರೋಪಿ ವಸೀಂ ಪಠಾಣ್ ಪೋಲಿಸರ ವಶಕ್ಕೆ

0

ಗಲಭೆ ಪೀಡಿತ ಹುಬ್ಬಳ್ಳಿ ಸಹಜ ಸ್ಥಿತಿಯತ್ತ ಮರಳಿದೆ. ಗಲಭೆಯ ಮಾಸ್ಟರ್ ಮೈಂಡ್ ಎಂದೇ ಹೇಳಲಾಗಿರೋ ವಸೀಂ ಪಠಾಣ್ ನನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಇದೇ ವೇಳೆ ಪ್ರಚೋದನಾಕಾರಿ ಪೋಸ್ಟ್ ಹಾಕಿದ ಯುವಕನ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ. ಹುಬ್ಬಳ್ಳಿ ಗಲಭೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಾ ಸಾಗಿದೆ. ಗಲಭೆಯಲ್ಲಿ ಎಐಎಂಐಎಂ ಪಾತ್ರ ಇದೆ ಎಂದು ಹೇಳುತ್ತಿರುವಾಗಲೇ ಸಂಘಟನೆಯೊಂದರ ಹೆಸರೂ ತಳಕು ಹಾಕಿಕೊಂಡಿದೆ.

ಮುಂಬೈ ಮೂಲದ ರಝಾ ಅಕಾಡೆಮಿಯೂ ಗಲಭೆ ಕೃತ್ಯದಲ್ಲಿ ಷಡ್ಯಂತ್ರ ರೂಪಿಸಿತ್ತು ಅನ್ನೋ ಮಾತು ಕೇಳಿ ಬಂದಿದೆ. ಇದಕ್ಕೆ ಪುಷ್ಟಿ ನೀಡೋ ರೀತಿಯಲ್ಲಿ ಬಂಧಿತ ವಸೀಂ ಪಠಾಣ್, ತೌಫೆಲ್ ಮುಲ್ಲಾ ರಝಾ ಅಕಾಡೆಮಿಯ ಮುಖಂಡರು. ಏನಾದರೂ ನೆಪ ಸಿಕ್ಕರೆ ಗಲಭೆ ಸೃಷ್ಟಿಸೋ ಪ್ಲ್ಯಾನ್ ನಲ್ಲಿದ್ದ ಇವರಿಗೆ ಯುವಕನೋರ್ವ ಹಾಕಿದ ವಿವಾದಾತ್ಮಕ ಪೋಸ್ಟ್ ಪ್ರಚೋದನೆ ಕೊಟ್ಟಿದೆ.