Tuesday, March 3, 2026
Tuesday, March 3, 2026
Home Blog Page 1563

ಸಾಂಸ್ಕೃತಿಕ ವೈವಿಧ್ಯತೆ ಸಹೋದರತ್ವ ತಿಳಿಸಲು ಶಿಬಿರಗಳು ಸಹಾಯಕ-ಡಾ.ಸೆಲ್ವಮಣಿ

0

ದಿನಾಂಕ 25/05/2022 ರಂದು ಸಂಜೆ 4:00 ಗಂಟೆಗೆ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಸಭಾಂಗಣದಲ್ಲಿ ರಾಷ್ಟ್ರೀಯ ಭಾವೈಕ್ಯತಾ ಶಿಬಿರದ ಉಧ್ಘಾಟನಾ ಸಮಾರಂಭವನ್ನ ಆಯೋಜಿಸಲಾಗಿತ್ತು.

ಈ ಸಮಾರಂಭವು ನಾಡಗೀತೆ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಗೀತೆಯೊಂದಿಗೆ ಪ್ರಾರಂಭವಾಯಿತು. ಶಿಬಿರದ ಆಯೋಜಿಕರಾದ ಡಾ||ನಾಗರಾಜ ಪರಿಸರ ಕಾರ್ಯಕ್ರಮ ಸಂಯೋಜನಾಧಿಕಾರಿಗಳು, ರಾಷ್ಟ್ರೀಯ ಸೇವಾ ಯೋಜನೆ ಕುವೆಂಪು ವಿಶ್ವವಿದ್ಯಾಲಯ ಇವರು ಪ್ರಾಸ್ತಾವಿಕ ನುಡಿಗಳಲ್ಲಿ ಶಿಬಿರದ ರೂಪುರೇಷೆ, ಕಾರ್ಯಕ್ರಮ ಮತ್ತು ಶಿಬಿರದ ಮಹತ್ವದ ಬಗ್ಗೆ ತಿಳಿಸಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸರ್ವರನ್ನು ಪ್ರೀತಿ ಪೂರ್ವವಕವಾಗಿ ಸ್ವಾಗತಿಸಿದರು.

ಕಾರ್ಯಕ್ರಮದ ಉಧ್ಘಾಟನಾ ಕಾರರಾಗಿ ಆಗಮಿಸಿದ್ದ ಡಾ|| ಆರ್.ಸೆಲ್ವಮಣಿ ಜಿಲ್ಲಾಧಿಕಾರಿಗಳು, ಶಿವಮೊಗ್ಗ ಇವರು ದೀಪಬೆಳಗುವ ಮೂಲಕ ಶಿಬಿರವನ್ನು ಉಧ್ಘಾಟಿಸಿ ಬಾರತ ವಿವಿಧತೆಯಲ್ಲಿ ಏಕತೆಯನ್ನ ಸಾರಿದಂತಹ ದೇಶ. ಈ ಶಿಬಿರವು ಸಾಂಸ್ಕೃತಿಕ ವೈವಿಧ್ಯತೆ,ಸಹೋದರತ್ವ,ಮನೋಭಾವ, ಸೃಜನಶೀಲತೆ ಕೌಶಲಗಳನ್ನು ಶಿಬಿರಾರ್ಥಿಗಳಿಗೆ ತಿಳಿಸಲು ಸಹಾಯಕವಾಗಿದೆ. ಈ ಶಿಬಿರವು ಯಶಸ್ವಿಯಾಗಲಿ ಎಂದು ಶುಭಹಾರೈಸಿದರು.

ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಕುವೆಂಪು ವಿಶ್ವವಿದ್ಯಾಲಯದ ಮಾನ್ಯ ಕುಲಸಚಿವರಾದ ಶ್ರೀಮತಿ ಅನುರಾಧ ಜಿ. ಇವರು ಈ ಶಿಬಿರವು ಭಾರತೀಯ ಭಾವೈಕ್ಯತೆಯ ಪ್ರತೀಕವಾಗಿದೆ. ಈ ಶಿಬಿರವು ಯಶಸ್ವಿಯಾಗಲೆಂದು ಶುಭಕೊರಿದರು.

ನಂತರ ಜಿ.ಧರ್ಮಪ್ರಸಾದ್ ಸಿಂಡಿಕೇಟ್ ಸದಸ್ಯರು ಕುವೆಂಪು ವಿಶ್ವವಿದ್ಯಾಲಯ ಇವರು ತಮ್ಮ ಮಾತುಗಳಲ್ಲಿ ಶಿಬಿರದ ಮಹತ್ವವನ್ನು ವಚನದೊಂದಿಗೆ ವಿಸ್ತರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕುವೆಂಪು ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿಗಳಾದ ಪ್ರೋ.ವೀರಭದ್ರಪ್ಪ ಬಿ.ಪಿ. ಇವರು ತಮ್ಮ ಕಾಲೇಜಿನ ಶಿಬಿರದ ದಿನಗಳನ್ನು ನೆನಪು ಮಾಡಿಕೊಳ್ಳುತ್ತಾ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವವಿಕಸನ ಸಾಮಾಜಿಕ ಮೌಲ್ಯ ನಿಸ್ವಾರ್ಥ ಸೇವೆಯ ಮಹತ್ವ, ರಾಷ್ಟ್ರೀಯ ಏಕತೆಯನ್ನು ತಿಳಿಸಿಕೊಳ್ಳುವಂತಹ ಇಂತಹ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಗಳಿಗೆ ನಮ್ಮ ವಿಶ್ವವಿದ್ಯಾಲಯದ ಸಂಪೂರ್ಣ ಸಹಕಾರವಿದೆ. ಈ ಶಿಬಿರವು ನಮ್ಮ ವಿಶ್ವವಿದ್ಯಾಲಯಕ್ಕೆ ಗೌರವವನ್ನು ತರಲಿದೆ ಎಂದು ಅಧ್ಯಕ್ಷೀಯ ನುಡಿಗಳನ್ನಾಡಿದರು.

ಡಾ|| ಶುಭಮರವಂತೆ ಸಹಶಿಬಿರಾಧಿಕಾರಿಗಳು ಕಾರ್ಯಕ್ರಮದ ವಂದನಾರ್ಪಣೆಯನ್ನು ಮಾಡಿದರು. ಕಾರ್ಯಕ್ರಮದಲ್ಲಿ ಪ್ರೋ. ವೀಣಾ ಎಂ. ಕೆ. ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಶಿವಮೊಗ್ಗ. ಡಾ|| ವಾಗ್ದೇವಿ ಹೆಚ್. ಎಂ. ಪ್ರಾಚಾರ್ಯರು ಸಹ್ಯಾದ್ರಿ ವಿಜ್ಞಾನ ಕಾಲೇಜು ಶಿವಮೊಗ್ಗ ಇವರು ಉಪಸ್ಥಿತರಿದ್ದರು. ನಂತರ ಕುವೆಂಪು ವಿಶ್ವವಿದ್ಯಾಲಯದ ಸ್ವಯಂ ಸೇವಕರು ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡಿದರು. ಶಿಬಿರಾರ್ಥಿಗಳನ್ನು ತಂಡಗಳಿಗೆ ನಿಯೋಜಿಸಲಾಯಿತು.

ಶಿಬಿರಾಧಿಕಾರಿಗಳು ಕಾವೇರಿ ತಂಡಕ್ಕೆ ಧ್ವಜಾ ಹಸ್ತಾಂತರ ಮಾಡಿ ಮೊದಲ ಧ್ವಜಾರೋಹಣ ಕಾರ್ಯಕ್ರಮದ ಜವಾಬ್ದಾರಿಯನ್ನು ನೀಡಿ ಶುಭಹಾರೈಸಿದರು. ನಂತರ ಸಹ್ಯಾದ್ರಿ ವಿದ್ಯಾರ್ಥಿನಿಲಯದಲ್ಲಿ ಭೋಜನವನ್ನು ಸ್ವೀಕರಿಸಿ ತಮ್ಮ ತಮ್ಮ ಕೊಠಡಿಗಳಿಗೆ ವಿಶ್ರಾಂತಿಗೆ ತೆರಳಿದರು.

ತೆಲಂಗಾಣ ಸಿಎಂ ಕೆಸಿಆರ್ :ತೃತೀಯ ರಂಗ ರಚನೆಯತ್ತ ಆಸಕ್ತಿ

0

ರಾಷ್ಟ್ರಪತಿ ಆಯ್ಕೆ, ಪ್ರಸಕ್ತ ರಾಜಕೀಯ ವಿದ್ಯಮಾನ ಹಾಗೂ ರಾಷ್ಟ್ರೀಯ ಪಕ್ಷಗಳಿಗೆ ಪರ್ಯಾಯ ಶಕ್ತಿಯಾಗಿ ತೃತೀಯ ರಂಗ ಬಲಪಡಿಸುವುದು ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಚರ್ಚಿಸುವ ಸಂಬಂಧ ತೆಲಂಗಾಣ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್‌ ರಾವ್‌ ಅವರು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರನ್ನು ಭೇಟಿ ಮಾಡಲಿದ್ದಾರೆ.

ಕಳೆದ ಶನಿವಾರ ಉತ್ತರ ಪ್ರದೇಶಕ್ಕೆ ತೆರಳಿ ಸಮಾಜವಾದಿ ಪಕ್ಷದ ಅಖಿಲೇಶ್‌ ಯಾದವ್‌ ಅವರನ್ನು ಭೇಟಿ ಮಾಡಿದ್ದ ಚಂದ್ರಶೇಖರ್‌ ರಾವ್‌ ಅವರು ಭಾನುವಾರ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಹಾಗೂ ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮಾನ್‌ ಅವರನ್ನು ಕಂಡು ತೃತೀಯ ರಂಗ ರಚನೆ ಸಂಬಂಧ ಮಾತುಕತೆ ನಡೆಸಿದ್ದರು.

ಗುರುವಾರ ರಾಜ್ಯಕ್ಕೆ ಆಗಮಿಸುತ್ತಿರುವ ಚಂದ್ರಶೇಖರ್‌ ರಾವ್‌ ಅವರು ಮಧ್ಯಾಹ್ನ 12.30ಕ್ಕೆ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರ ನಿವಾಸಕ್ಕೆ ತೆರಳಿ ಸಮಾಲೋಚನೆ ನಡೆಸಲಿದ್ದಾರೆ.

ಈ ವೇಳೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಸಹ ಉಪಸ್ಥಿತರಿರುತ್ತಾರೆ. ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸುವುದು, ರಾಷ್ಟ್ರಪತಿ ಚುನಾವಣೆ ಸಂದರ್ಭದಲ್ಲಿ ಪ್ರಾದೇಶಿಕ ಪಕ್ಷಗಳೆಲ್ಲಾ ಸೇರಿ ಒಮ್ಮತ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಕುರಿತು ಉಭಯ ನಾಯಕರು ಮಾತುಕತೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಪ್ರಸಕ್ತ ರಾಜಕಾರಣ, ರಾಜಕೀಯ ವಿದ್ಯಮಾನ ಸೇರಿದಂತೆ ಇತರೆ ವಿಚಾರಗಳ ಕುರಿತು ಉಭಯ ನಾಯಕರು ಚರ್ಚೆ ನಡೆಸಲಿದ್ದಾರೆ. ದಕ್ಷಿಣ ಭಾರತದಲ್ಲಿ ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸಲು ಡಿಎಂಕೆ, ತೃಣಮೂಲ, ಆರ್‌ಜೆಡಿ, ಸಮಾಜವಾದಿ ಪಕ್ಷಗಳ ನಾಯಕರ ಜೊತೆ ಚಂದ್ರಶೇಖರ್‌ ರಾವ್‌ ಮಾತುಕತೆ ನಡೆಸಿದ್ದಾರೆ.ಈಗ ದೇವೇಗೌಡರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಈ ಹಿಂದೆಯೂ ಪ್ರಾದೇಶಿಕ ಪಕ್ಷಗಳು ಒಗ್ಗೂಡಿ ಚುನಾವಣೆ ಎದುರಿಸುವ ಪ್ರಯತ್ನ ನಡೆಸಲಾಗಿತ್ತು. ಮತ್ತೊಮ್ಮೆ ತೃತೀಯ ರಂಗವನ್ನು ಬಲಪಡಿಸುವ ನಿಟ್ಟಿನಲ್ಲಿ ಪ್ರಾದೇಶಿಕ ಶಕ್ತಿಗಳು ಕಾರ್ಯೋನ್ಮುಖವಾಗಿವೆ. ಈ ಕುರಿತು ಮಾತುಕತೆ ನಡೆಸಿ ಅಂತಿಮ ಸ್ವರೂಪ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಪುತ್ರನಿಗೆ ಟಿಕೆಟ್ ನಿರಾಕರಣೆ ಸಮಾಧಾನದ ಪ್ರತಿಕ್ರಿಯೆ

0

ವಿಧಾನಪರಿಷತ್ ಚುನಾವಣೆಗೆ ತಮ್ಮ ಪುತ್ರನಿಗೆ ಟಿಕೆಟ್ ತಪ್ಪಿರುವುದಕ್ಕೆ ತಮಗೆ ಯಾವುದೇ ಬೇಸರವಿಲ್ಲ. ಪಕ್ಷ ಸೂಕ್ತ ಸಂದರ್ಭದಲ್ಲಿ ಸೂಕ್ತ ಸ್ಥಾನಮಾನ ನೀಡಲಿದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರಿಗೆಲ್ಲ ಪಕ್ಷ ಗುರುತಿಸಿ ಟಿಕೆಟ್ ನೀಡಿದಿಯೋ ಅವರಿಗೆ ನಮ್ಮ ಸಹಮತವಿದೆ. ಯಾವುದೇ ವಿರೋಧವಿಲ್ಲ ಎಂದು ಯಡಿಯೂರಪ್ಪ ಅವರು ಹೇಳಿದ್ದಾರೆ.

ಈಗಾಗಲೇ, ಪಕ್ಷ ವಿಜಯೇಂದ್ರ ಕಾರ್ಯ ಗುರುತಿಸಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ನಂತರ ಉಪಾಧ್ಯಕ್ಷ ಸ್ಥಾನ ನೀಡಿದೆ. ಮುಂದೆಯೂ ಗುರುತಿಸಲಿದೆ. ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿಯುತ್ತಿದ್ದಾರೆ. ಟಿಕೆಟ್ ತಪ್ಪಿದ್ದರ ಬಗ್ಗೆ ಅಸಮಾಧಾನವಿಲ್ಲ ಎಂದು ಯಡಿಯೂರಪ್ಪ ಅವರು ತಿಳಿಸಿದ್ದಾರೆ.

ಯಾರು ಸಹ ಅಸಮಾಧಾನ ಹೊರಹಾಕಬಾರದು. ಯಾವುದೇ ರೀತಿಯ ಗೊಂದಲ ಸೃಷ್ಟಿಸಬಾರದು. ಪಕ್ಷದ ವರಿಷ್ಠರು ನೀಡಿದ ತೀರ್ಮಾನಕ್ಕೆ ಬದ್ದರಾಗಿ ಕೆಲಸ ಮಾಡೋಣ ಎಂದರು. 2023ರಲ್ಲಿ ಪಕ್ಷ ಅಧಿಕಾರಕ್ಕೆ ಬರಬೇಕು. ಅದಕ್ಕಾಗಿ ಸಂಘಟನೆ ಸೇರಿದಂತೆ ಮತ್ತಿತರರ ಕಾರ್ಯದಲ್ಲಿ ತೊಡಗುವುದು ನಮ್ಮ ಮೊದಲ ಆದ್ಯತೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಳಿದ್ದಾರೆ.

ಉಗ್ರರಿಗೆ ನೆರವು ನೀಡಿದ್ದ ಯಾಸಿನ್ ಗೆಜೀವಾವಧಿ ಶಿಕ್ಷೆ: ಪಾಕ್ ಅಪಸ್ವರ

0

ಕಾನೂನು ಬಾಹಿರ ಚಟುವಟಿಕೆಗಳಿಗೆ ಪ್ರೋತ್ಸಾಹ ಕೊಡುವುದು ಮತ್ತು 2017ರಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ಹಣವನ್ನು ಒದಗಿಸುತ್ತಿದ್ದ, ಆರೋಪದಲ್ಲಿ ಕಾಶ್ಮೀರದ ಪ್ರತ್ಯೇಕತಾ ಹೋರಾಟಗಾರ ಯಾಸಿನ್‌ ಮಲ್ಲಿಕ್‌ಗೆ ದೆಹಲಿಯ ಎನ್ಐಎ ಕೋರ್ಟ್‌ ಜೀವಾವಧಿ ಶಿಕ್ಷೆ ನೀಡಿದೆ.

ಇದರ ಜೊತೆಗೆ 10ಲಕ್ಷ ದಂಡ ಹಾಕಿದೆ. ವ್ಯೂಎಪಿಎ ಕಾಯ್ದೆ,1967ರ ಅಡಿಯಲ್ಲಿ ಕೇಸ್‌ ದಾಖಲಾಗಿತ್ತು.ಇಂತಹ 7 ಪ್ರಕರಣಗಳಲ್ಲಿ ತಪ್ಪು ಮಾಡಿರೋದು ದೃಢವಾಗಿತ್ತು. ಕಳೆದ ಅನೇಕ ದಿನಗಳ ಹಿಂದೆ ಅಪರಾಧ ಮಾಡಿರುವ ಬಗ್ಗೆ ಯಾಸಿನ್‌ ಸ್ವತಃ ತಾನೇ ತಪ್ಪನ್ನು ಒಪ್ಪಿಕೊಂಡಿದ್ದ. ನಂತರ ಯಾಸಿನ್‌ಗೆ ಗಲ್ಲು ಶಿಕ್ಷೆ ನೀಡೋದಕ್ಕೆ ಎನ್ಐಎ ತಂಡ ಕೋರ್ಟ್‌ಗೆ ಮನವಿ ಮಾಡಿತ್ತು. ಆದರೆ, ಕೋರ್ಟ್‌ ಈಗ ಜೀವನಪರ್ಯಂತ ಸೆರೆವಾಸಕ್ಕೆ ಆಜ್ಞೆ ಕೊಟ್ಟಿದೆ. ಇನ್ನು ತೀರ್ಪು ನೀಡೋದಕ್ಕೂ ಮುಂಚೆ ಯಾಸಿನ್‌ಗೆ ಭಾರಿ ಭದ್ರತೆ ನೀಡಲಾಗಿತ್ತು. ದೆಹಲಿಯ ಕೋರ್ಟ್‌ ಬಳಿ ಶ್ವಾನದಳ, ಬಾಂಬ್‌ ನಿಷ್ಕ್ರಿಯ ದಳ ಸೇರಿದಂತೆ ಅನೇಕ ಪೊಲೀಸ್ ದಳಗಳಿದ್ದವು.

ಕಾಶ್ಮೀರ ರಾಜಧಾನಿ ಶ್ರೀನಗರದಲ್ಲೂ ಕೂಡ ಮುನ್ನೆಚ್ಚರಿಕಾ ಕ್ರಮವಾಗಿ ಹೈ ಅಲರ್ಟ್‌ ಘೋಷಿಸಲಾಗಿತ್ತು. ಆದರೂ ಹಲವು ಕಡೆ ಉದ್ರಿಕ್ತ ಗುಂಪುಗಳು ಭದ್ರತಾ ಪಡೆಗಳ ಮೇಲೆ ಕಲ್ಲುತೂರಾಟ ನಡೆಸಿವೆ. ಇದಕ್ಕೆ ಪ್ರತಿಯಾಗಿ ಸೇನಾ ಪಡೆಗಳು ಸಹ ಅಶ್ರುವಾಯು ಸಿಡಿಸಿ, ಗಾಳಿಯಲ್ಲಿ ಗುಂಡು ಹಾರಿಸಿ ಪರಿಸ್ಥಿತಿ ನಿಯಂತ್ರಿಸುವುದಕ್ಕೆ ಪ್ರಯತ್ನಿಸಿವೆ. ಕಾಶ್ಮೀರದ ಕಿಡಿಗೇಡಿಗೆ ಶಿಕ್ಷೆ ಪ್ರಕಟವಾಗಿದೆ.

ಪಾಕಿಸ್ತಾನದಲ್ಲಿ ತಮ್ಮ ಮನೆಮಗನನ್ನೇ ಜೈಲಿಗಟ್ಟಿದ ಸಂಕಟ ಬಂದಿದೆ. ನಿನ್ನೆಯಿಂದ ಕೂಡ ಟ್ವೀಟ್‌ ಮೇಲೆ ಟ್ವೀಟ್‌ ಮಾಡಿ ಭಾರತದ ವಿರುದ್ದ ದ್ವೇಷ ಸಾಧಿಸುತ್ತಿರುವ ಪಾಕಿಸ್ತಾನದವರು ಯಾಸಿನ್‌ನ್ನ ಬಿಡುಗಡೆ ಮಾಡುವಂತೆ ಆಗ್ರಹ ಮಾಡುತ್ತಿದ್ದಾರೆ. ಪಾಕಿಸ್ತಾನ ವಿದೇಶಾಂಗ ಸಚಿವ ಬಿಲಾವಾಲ್ ಬುಟ್ಟೋ ಜರ್ಧಾರಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿಯ ಮುಖ್ಯಸ್ಥೆ ಮಿಚೆಲ್‌ ಬ್ಯಾಚ್ಲೆಟ್‌ಗೆ ಮನವಿ ಮಾಡಿ, ಯಾಸಿನ್ ಬಿಡುಗಡೆಗೊಳಿಸುವಂತೆ ಭಾರತಕ್ಕೆ ಒತ್ತಡ ಹೇರಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೇ, ಭಾರತ ಸುಳ್ಳು ಮತ್ತು ಕಪೋಲಕಲ್ಪಿತ ಕಥೆಗಳನ್ನು ಸೃಷ್ಠಿಸಿ ಕಾಶ್ಮೀರ ನಾಯಕರಿಗೆ ಕಿರುಕುಳ ನೀಡುತ್ತಿದೆ. ಅವರನ್ನು ದಮನಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಈ ಕಡೆ ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದ್ ಟ್ವೀಟ್‌ ಮಾಡಿ ಭಾರತ, ಕಾಶ್ಮೀರದ ದನಿಗಳನ್ನು ಅಡಗಿಸೋ ಕೆಲಸವನ್ನು ಮುಂದುವರೆಸಿದೆ. ಅವರ ಮೇಲೆ ಇಲ್ಲಸಲ್ಲದ ಕೇಸ್‌ಗಳನ್ನು ಹಾಕುತ್ತಿದೆ. ಆದರೆ, ಇದರಿಂದ ಕಾಶ್ಮೀರದಲ್ಲಿ ನಡೀತಿರೋ ಸ್ವಾತಂತ್ರ್ಯ ಹೋರಾಟ ನಿಲ್ಲಿಸಲು ಅಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಿರ್ಲೋಸ್ಕರ್ ನಿರ್ವಹಣಾ ಸಂಸ್ಥೆ ಜೊತೆ ಕುವೆಂಪು ವಿವಿ ಒಡಂಬಡಿಕೆ

0

ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಆಗಮಿಸಿ ಕುವೆಂಪು ವಿವಿಯಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ಯುವ ಸಮುದಾಯದಲ್ಲಿ ಜ್ಞಾನ, ಕೌಶಲ್ಯಗಳು ಹಾಗೂ ಇಂದಿನ ಸ್ಪರ್ಧಾತ್ಮಕ ಉದ್ಯಮದ ಚಿಂತನೆಗಳನ್ನು ಉದ್ದೀಪಿಸಿ ಉದ್ಯೋಗ ಜಗತ್ತಿಗೆ ನೀಡುವ ಗುರಿಯನ್ನು ಇರಿಸಿಕೊಂಡು ಕುವೆಂಪು ವಿವಿಯು ಹೊಸಹೊಸ ಒಡಂಬಡಿಕೆಗಳನ್ನು ಮಾಡಿಕೊಳ್ಳುತ್ತಿದೆ ಎಂದು ಕುವೆಂಪು ವಿವಿಯ ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಅಭಿಪ್ರಾಯಪಟ್ಟರು.

ಕುವೆಂಪು ವಿಶ್ವವಿದ್ಯಾಲಯದ ಹೊಸ ಸಿಂಡಿಕೇಟ್ ಸಭಾಂಗಣದಲ್ಲಿ ಬುಧವಾರ ಬೆಳಿಗ್ಗೆ 11 ಗಂಟೆಗೆ ಹರಿಹರದ ಕಿರ್ಲೊಸ್ಕರ್ ನಿರ್ವಹಣಾ ವಿಜ್ಞಾನ ಸಂಸ್ಥೆ ಮತ್ತು ಕುವೆಂಪು ವಿಶ್ವವಿದ್ಯಾಲಯದ ನಿರ್ವಹಣಾ ವಿಜ್ಞಾನ ವಿಭಾಗಗಳು ಮಾಡಿಕೊಂಡ ದ್ವಿಸದಸ್ಯ ಶೈಕ್ಷಣಿಕ- ಸಂಶೋಧನಾ ಒಪ್ಪಂದಕ್ಕೆ ಸಹಿ ಹಾಕುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಒಪ್ಪಂದವು ವಿದ್ಯಾರ್ಥಿ ಮತ್ತು ಶಿಕ್ಷಕರಲ್ಲಿ ಸಾಮರ್ಥ್ಯ ವೃದ್ಧಿ, ಬಹುಶಿಸ್ತೀಯ ಶಿಕ್ಷಣ ಚಟುವಟಿಕೆಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸಹಕಾರಿಯಾಗಲಿದೆ. ಸಾಂಸ್ಕೃತಿಕ, ಸಾಹಿತ್ಯಿಕ ಶ್ರೀಮಂತಿಕೆಯುಳ್ಳ ರಾಜ್ಯದ ವಿಶ್ವವಿದ್ಯಾಲಯಗಳಲ್ಲಿನ ವಿನೂತನ ಕಲಿಕೆ ಮತ್ತು ಸಂಶೋಧನಾ ಚಟುವಟಿಕೆಗಳ ಮೂಲಕ ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ ಎಂದರು.

ಹರಿಹರದ ಕಿರ್ಲೊಸ್ಕರ್ ನಿರ್ವಹಣಾ ವಿಜ್ಞಾನ ಸಂಸ್ಥೆಯ ಆಡಳಿತಾಧಿಕಾರಿ ಡಾ. ಮಹೇಶ್ ರೇವಣ್‌ಕರ್ ಮಾತನಾಡಿ, ಎರಡೂ ಸಂಸ್ಥೆಗಳ ಮಟ್ಟದಲ್ಲಿ ವಿದ್ಯಾರ್ಥಿ-ಶಿಕ್ಷಕರ ಪರಸ್ಪರ ವಿನಿಮಯ, ಸಂಶೋಧನಾ ಚಟುವಟಿಕೆಗಳಲ್ಲಿನ ಸಹಕಾರ, ಉಭಯ ಸಂಸ್ಥೆಗಳಿಂದ ವಿಶೇಷ-ವಿಷಯಗಳ ಮೇಲೆ ಪದವಿಗಳ ಆರಂಭ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಕುವೆಂಪು ವಿವಿ ಮತ್ತು ಕಿರ್ಲೋಸ್ಕರ್ ಸಂಸ್ಥೆಗಳು ನಿರ್ಧರಿಸಿವೆ. ನಮ್ಮ ಸಂಸ್ಥೆಗಳ ನಡುವಿನ ಈ ಶೈಕ್ಷಣಿಕ ಸಂಶೋಧನಾ ಒಪ್ಪಂದ ಈ ನಿಟ್ಟಿನಲ್ಲಿ ಒಂದು ಆರಂಭ ಮಾತ್ರವಾಗಿದ್ದು, ಪ್ರತಿಭಾನ್ವಿತ, ಕೌಶಲ್ಯಪೂರ್ಣ ಮಾನವ ಸಂಪನ್ಮೂಲ ಸೃಷ್ಟಿಸುವ ಕಡೆಗೆ ಇದು ಮಹತ್ವದ ಹೆಜ್ಜೆಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ವಿವಿಯ ಕುಲಸಚಿವೆ ಅನುರಾಧ ಜಿ., ಕಿರ್ಲೊಸ್ಕರ್ ಸಂಸ್ಥೆಯ ನಿರ್ವಹಣಾ ವಿಭಾಗದ ಡೀನ್ ಡಾ. ನಾಗರಾಜ್ ಬೇವಿನಮರದ್, ವಿವಿಯ ನಿರ್ವಹಣಾ ವಿಜ್ಞಾನ ವಿಭಾಗದ ಅಧ್ಯಕ್ಷ ಪ್ರೊ. ರಮೇಶ್ ಹೆಚ್. ಎನ್., ಡಾ. ಯೋಗಿಶ್ ನಾಯ್ಕ್ ಸೇರಿದಂತೆ ಹಲವರು ಹಾಜರಿದ್ದರು.

ನನ್ನ ಪಠ್ಯ ಪ್ರಿಂಟ್ ಆಗಿದ್ದರೆ ಬೋಧಿಸಬೇಡಿ- ದೇವನೂರ ಮಹಾದೇವ

0

ನನ್ನ ಪಠ್ಯವನ್ನು ಪಠ್ಯ ಪುಸ್ತಕದಲ್ಲಿ ಈಗಾಗಲೇ ಸೇರಿಸಿದ್ದರೆ ನಾನೇನು ಮಾಡಲಾಗುವುದಿಲ್ಲ. ಆದರೆ, ಪಠ್ಯದಲ್ಲಿರುವ ನನ್ನ ಪಾಠವನ್ನು ಬೋಧಿಸಬೇಡಿ ಎಂದು ಹಿರಿಯ ಸಾಹಿತಿ ದೇವನೂರು ಮಹಾದೇವ ಹೇಳಿಕೆ ನೀಡಿದ್ದಾರೆ.

ಮೈಸೂರಿನಲ್ಲಿ
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪಠ್ಯಪುಸ್ತಕದಿಂದ ನನ್ನ ಪಾಠವನ್ನು ಕೈಬಿಡಬೇಕು. ನನ್ನ ಪಠ್ಯವನ್ನು ಪುಸ್ತಕದಲ್ಲಿ ಸೇರಿಸಲು ಯಾವುದೇ ಕಾರಣಕ್ಕೂ ನಾನು ಅನುಮತಿ ನೀಡುವುದಿಲ್ಲ. ಈ ಹಿಂದೆ ಸೇರಿಸಿದ ಪಠ್ಯಕ್ಕೂ ಕೂಡ ನನ್ನ ಅನುಮತಿಯನ್ನು ವಾಪಸ್ ಪಡೆದಿದ್ದೇನೆ ಎಂದು ದೇವನೂರು ಮಹಾದೇವ ಅವರು ಮಾತನಾಡಿದರು.

ಸರ್ಕಾರ ಈಗಾಗಲೇ ಪುಸ್ತಕವನ್ನು ಮುದ್ರಣ ಮಾಡಿಸಿದ್ರೆ ಅದು ಸರ್ಕಾರದ ತಪ್ಪು. ಅದಕ್ಕೆ ನಾನು ಏನೂ ಮಾಡಲು ಸಾಧ್ಯವಿಲ್ಲ. ಅದರಲ್ಲಿರುವ ನನ್ನ ಪಠ್ಯವನ್ನು ಬೋಧಿಸಬೇಡಿ ಎಂದು ಉಲ್ಲೇಖಿಸಲಿ ಎಂದು ಹೇಳಿದ್ದಾರೆ.

ಕೆಜಿಐಡಿ ಆನ್ ಲೈನ್ ಸೇವೆ ಮೇ30 ಕ್ಕೆ ಲೋಕಾರ್ಪಣೆ

0

ರಾಜ್ಯ ಸರ್ಕಾರಿ ನೌಕರರ 40 ವರ್ಷಗಳ ಬೇಡಿಕೆಯನ್ನು ರಾಜ್ಯ ಸರ್ಕಾರ ನೆರವೇರಿಸಿದೆ. ಮೇ.30ರಂದು ಕೆಜಿಐಡಿ ಆನ್ ಲೈನ್ ಸೇವೆಯನ್ನು ಲೋಕಾರ್ಪಣೆಗೊಳಿಸಲಾಗುತ್ತಿದೆ. ಈ ಮೂಲಕ ನೌಕರರಿಗೆ ಪ್ರತಿ ತಿಂಗಳ ವೇತನ-ಭತ್ಯೆಗಳ ಮಾಹಿತಿಯು ಎಸ್‌ಎಂಎಸ್ ಮೂಲಕ ಮೊಬೈಲ್ ಗೆ ಲಭ್ಯವಾಗುವಂತೆ ಆಗಲಿದೆ.

ಈ ಕುರಿತು ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಮಾಹಿತಿ ಬಿಡುಗಡೆ ಮಾಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೇ 30 ಸೋಮವಾರದಂದು ಕೆಜಿಐಡಿ ಆನ್ ಲೈನ್ ಸೇವೆಯನ್ನು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಲೋಕಾರ್ಪಣೆ ಮಾಡಲಿದ್ದಾರೆ ಎಂದು ತಿಳಿಸಿದೆ.

ಇನ್ನೂ ಕೆಜಿಐಡಿ ಆನ್ ಲೈನ್ ಸೇವೆ ಲೋಕಾರ್ಪಣೆಗೊಂಡರೇ, ರಾಜ್ಯ ಸರ್ಕಾರಿ ನೌಕರರ ಪ್ರತಿ ತಿಂಗಳ ವೇತನ ಭತ್ಯೆಗಳ ಮಾಹಿತಿಯು ಎಸ್ ಎಂ ಎಸ್ ಮೂಲಕ ನೌಕರರ ಮೊಬೈಲ್ ಗೆ ಬರಲಿದೆ. ಈ ಮೂಲಕ ರಾಜ್ಯ ಸರ್ಕಾರಿ ನೌಕರರಿಗೆ ಸಂತೋಷದ ವಿಚಾರವನ್ನು ಸರ್ಕಾರ ನೀಡಿದೆ.

ಮಂಕಿ ಪಾಕ್ಸ್ ಭಾರತದಲ್ಲಿ ಪತ್ತೆಯಾಗಿಲ್ಲ ಆದರೂ ಜಾಗ್ರತೆಯಾಗಿರಬೇಕು

0

ಮಂಕಿಪಾಕ್ಸ್ ಎಚ್ಚರಿಕೆಯ ಹಿನ್ನೆಲೆಯಲ್ಲಿ, ವಿಮಾನ ನಿಲ್ದಾಣದ ಆರೋಗ್ಯ ಅಧಿಕಾರಿಗಳು ಹಾಗೂ ವಲಸೆ ಅಧಿಕಾರಿಗಳಿಗೆ ವೈರಸ್ ರೋಗ ಲಕ್ಷಣಗಳನ್ನು ಹೊಂದಿರುವ ಫ್ಲೈಯರ್ ಅನ್ನು ನೋಡಿಕೊಳ್ಳಲು ತಿಳಿಸಲಾಗಿದೆ.

ಆರೋಗ್ಯ ಇಲಾಖೆಯ ಪ್ರಕಾರ, ಜ್ವರ, ಕೈ ಮತ್ತು ಮುಖದಲ್ಲಿ ಊದಿಕೊಂಡ ದುಗ್ಧರಸ ಗ್ರಂಥಿಗಳ ದದ್ದುಗಳಿಂದ ಬಳಲುತ್ತಿರುವ ಪ್ರಯಾಣಿಕರನ್ನು ಗುರುತಿಸಲು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಸೂಚಿಸಲಾಗಿದೆ.ಆ ಪ್ರಯಾಣಿಕರನ್ನು ಪ್ರತ್ಯೇಕತೆಗಾಗಿ ಬೇಲಿಯಾಘಾಟಾ ಐಡಿ ಆಸ್ಪತ್ರೆಗೆ ಕಳುಹಿಸಲು ಸೂಚಿಸಲಾಗಿದೆ.

ಮಂಕಿಪಾಕ್ಸ್ ಪೀಡಿತ ದೇಶಗಳಿಗೆ ಪ್ರಯಾಣದ ಇತಿಹಾಸವನ್ನು ಹೊಂದಿರುವ ಯಾವುದೇ ಅನಾರೋಗ್ಯ ಪೀಡಿತ ಪ್ರಯಾಣಿಕರನ್ನು ಪ್ರತ್ಯೇಕಿಸಬೇಕಾಗುತ್ತದೆ.ಹಾಗೂ ಮಾದರಿಗಳನ್ನು ಪುಣೆಯ ಪ್ರಯೋಗಾಲಯಗಳಲ್ಲಿ ಪರೀಕ್ಷೆಗೆ ಕಳುಹಿಸಲಾಗುತ್ತದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ತಿಳಿಸಿದ್ದಾರೆ.

ಡಬ್ಲ್ಯುಎಚ್‌ಒ ಪ್ರಕಾರ, ಮಾನವರಲ್ಲಿ ಮಂಕಿಪಾಕ್ಸ್ನ ಲಕ್ಷಣಗಳೆಂದರೆ ಜ್ವರ, ದದ್ದುಗಳು ಮತ್ತು ಊದಿಕೊಂಡ ದುಗ್ಧರಸ ಗ್ರಂಥಿಗಳು ಮತ್ತು ಹಲವಾರು ವೈದ್ಯಕೀಯ ತೊಡಕುಗಳಿಗೆ ಕಾರಣವಾಗಬಹುದು.

ಮಂಕಿಪಾಕ್ಸ್ ಅನ್ನು ನಿಕಟ ಸಂಪರ್ಕಗಳ ಮೂಲಕ ಮಾನವರಲ್ಲಿ ಹರಡಬಹುದು ಎಂಬುದನ್ನು ಗಮನಿಸಬಹುದು. ಆದಾಗ್ಯೂ, ಭಾರತದಲ್ಲಿ ಇದುವರೆಗೆ ಯಾವುದೇ ಪ್ರಕರಣಗಳು ಪತ್ತೆಯಾಗದ ಕಾರಣ ಈ ಎಚ್ಚರಿಕೆ ಕೇವಲ ಮೌಖಿಕವಾಗಿದೆ.

ಬಿಎಸ್ ವೈ ಅವರ ಶಕ್ತಿ ಎಲ್ಲರಿಗೆ ಗೊತ್ತಿದೆಕಡೆಗಣಿಸಲು ಸಾಧ್ಯವಿಲ್ಲ-ವಿಜಯೇಂದ್ರ

0

ಬಿಎಸ್‌ವೈ ಶಕ್ತಿ ಕುಂದಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.

ಪಿರಿಯಾಪಟ್ಟಣದಲ್ಲಿ ಮಾತನಾಡಿದ ಅವರು,ಸ್ಥಾನಮಾನ ನೀಡುವ ಬಗ್ಗೆ ನಮ್ಮ ಕೇಂದ್ರದ ನಾಯಕರು ತೀರ್ಮಾನ ಮಾಡುತ್ತಾರೆ ಎಂದ ಅವರು, ಯಡಿಯೂರಪ್ಪ ಅವರ ಶಕ್ತಿ ಏನೆಂಬುದು ಇಡೀ ರಾಜ್ಯಕ್ಕೆ ಗೊತ್ತಿದೆ. ಬಿಜೆಪಿ ಇಲ್ಲದೆ ಬಿಎಸ್‌ವೈ ಇಲ್ಲ, ಬಿಎಸ್‌ವೈ ಇಲ್ಲದೆ ಬಿಜೆಪಿ ಇಲ್ಲ. ಯಡಿಯೂರಪ್ಪ ಅವರನ್ನು ಯಾರೂ ಕಡೆಗಣಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ಮಾನ್ಯತೆ ಇಲ್ಲದ ಪಪೂ ಕಾಲೇಜುಗಳಿಗೆ ಮಕ್ಕಳ ಪ್ರವೇಶ ಬೇಡ

0

ಮಾನ್ಯತೆ ಪಡೆದ ಪದವಿ ಪೂರ್ವ ಕಾಲೇಜುಗಳಲ್ಲಿ 2022-23 ನೇ ಸಾಲಿನ ಪ್ರಥಮ ಹಾಗೂ ದ್ವಿತೀಯ ಪಿಯುಸಿ ಪ್ರವೇಶಕ್ಕೆ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್.ಉಮೇಶಪ್ಪ ಅವರು ಸಲಹೆ ನೀಡಿದ್ದಾರೆ.

ಖಾಸಗಿ ಕಾಲೇಜುಗಳ ಮಾನ್ಯತೆ ಕುರಿತು ಅನುಮಾನಗಳಿದ್ದರೆ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಮಾಹಿತಿ ಪಡೆಯಬೇಕು. ಇಲಾಖೆಯ ಮಾರ್ಗಸೂಚಿಯಂತೆ ಕಾಲೇಜುಗಳು ಕಾರ್ಯನಿರ್ವಹಿಸುವುದು ಕಡ್ಡಾಯವಾಗಿದೆ. ಇತರ ಶೈಕ್ಷಣಿಕ ಸಂಸ್ಥೆಯೊಂದಿಗೆ, ಅಕಾಡೆಮಿಕ್ಸ್ ಶೈಕ್ಷಣಿಕ ಸಂಸ್ಥೆ ಹಾಗೂ ಅಕಾಡೆಮಿಕ್ಸ್ ಟ್ಯುಟೋರಿಯಲ್‍ಗಳ ಜತೆ ಹೊಂದಾಣಿಕೆ ಮಾಡಿಕೊಂಡಿರಬಾರದು. ಈ ಎಲ್ಲಾ ಅಂಶಗಳನ್ನು ಪರಿಶೀಲಿಸಿದ ನಂತರವೇ ಪ್ರವೇಶಕ್ಕೆ ದಾಖಲಿಸಬೇಕು. ದಾಖಲಿಸಿದ ನಂತರ ಪರೀಕ್ಷೆ ಸಮಯದಲ್ಲಿ ಕಾಲೇಜುಗಳ ಮಾನ್ಯತೆ ಕುರಿತು ಗೊಂದಲ ಮತ್ತು ಶುಲ್ಕ ಪಾವತಿ ಅಂಶವನ್ನು ಇಲಾಖೆಯ ಗಮನಕ್ಕೆ ತಂದರೆ ಯಾವುದೇ ಪ್ರಯೋಜನವಿಲ್ಲ. ಜೊತೆಗೆ ಅಂತಹ ಸಮಸ್ಯೆಗಳಿಗೆ ಇಲಾಖೆ ಜವಾಬ್ದಾರಿಯಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸರ್ಕಾರಿ ಕಾಲೇಜುಗಳಲ್ಲಿ ಮಕ್ಕಳ ದಾಖಲಾತಿಗೆ ಯಾವುದೇ ಗೊಂದಲ ಮತ್ತು ಸಮಸ್ಯೆ ಇರುವುದಿಲ್ಲ.
ಖಾಸಗಿ ಕಾಲೇಜುಗಳಿಗೆ ಮಕ್ಕಳನ್ನು ದಾಖಲಿಸುವಾಗ ಎಚ್ಚರವಹಿಸಬೇಕು. ಖಾಸಗಿ ಕಾಲೇಜುಗಳು ಇಲಾಖೆಯ ನಿಯಮದ ಪ್ರಕಾರ ಶುಲ್ಕವನ್ನು ನಿಗದಿ ಪಡಿಸಿವೆಯೇ ಎಂಬುದನ್ನು ವಿಚಾರಿಸಬೇಕು. ವಿದ್ಯಾರ್ಥಿಗಳು ತಾವು ವ್ಯಾಸಂಗ ಮಾಡಲು ಇಚ್ಚಿಸುವ ಭಾಗದ ಸಂಯೋಜನೆಯನ್ನು ಕಾಲೇಜಿನಲ್ಲಿ ಬೋಧಿಸಲು ಇಲಾಖೆಯ ಅನುಮತಿ ಪಡೆದಿರುವುದನ್ನು ದಾಖಲಾತಿ ಪಡೆಯುವ ಪೂರ್ವದಲ್ಲಿ ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಿದರು.