Tuesday, March 3, 2026
Tuesday, March 3, 2026
Home Blog Page 1564

ಹತ್ತನೇ ತರಗತಿ ಪರೀಕ್ಷಾ ಅಕ್ರಮ:ಪೊಲೀಸ್ ಕಾರ್ಯಾಚರಣೆ ಆರಂಭ

0

ಮಾಗಡಿಯ ಪರೀಕ್ಷಾ ಕೇಂದ್ರವೊಂದರಲ್ಲಿ‌ ಏಪ್ರಿಲ್ ನಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿ ಒಟ್ಟು ಏಳು ಮಂದಿಯನ್ನು ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ರಾಮನಗರದ ಕೆಂಪೇಗೌಡ ಶಾಲೆಯ ಕ್ಲರ್ಕ್ ರಂಗನಾಥ‌ ಜೊತೆಗೆ ಪರೀಕ್ಷಾ‌ ಕೇಂದ್ರದ ಮೇಲ್ವಿಚಾರಕರು, ಐವರು ವಿಷಯ ತಜ್ಞರನ್ನು ಪೊಲೀಸರು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದಲ್ಲದೇ, ಮಾಗಡಿ ಕ್ಷೇತ್ರ ಶಿಕ್ಷಣಾಧಿಕಾರಿಯನ್ನೂ‌ ಪೊಲೀಸರು ಈಗಾಗಲೇ ವಿಚಾರಣೆ ಮಾಡಿದ್ದಾರೆ.

ಸರ್ಕಾರದ ವಿರುದ್ಧ ಲಾಂಗ್ ಮಾರ್ಚ್ ಹೊರಟ ಇಮ್ರಾನ್ ಬಂಧನಕ್ಕೆ ಶಾರ್ಟ್ ಕಟ್ ಕ್ರಮ

0

ಪಾಕಿಸ್ತಾನದ ಸಂಸತ್ತಿನಲ್ಲಿ ಅವಿಶ್ವಾಸ ಗೊತ್ತುವಳಿಯಲ್ಲಿ ಸೋಲುಂಡ ಬಳಿಕ ಮಾಜಿ ಪ್ರಧಾನಿ ಇಮ್ರಾನ್ ಖಾನ್, ನೂತನ ಸರಕಾರದ ವಿರುದ್ಧ ಸಿಡಿದೆದ್ದಿದ್ದಾರೆ.

ನೂತನ ಪ್ರಧಾನಿ ಶಹಬಾಜ್ ಷರೀಫ್ ನೇತೃತ್ವದ ಸರಕಾರವನ್ನು ಇಂಪೋರ್ಟೆಡ್ ಸರಕಾರ ಎಂದು ಜರಿಯುತ್ತಿರುವ ಇಮ್ರಾನ್ ಖಾನ್, ತನ್ನ ಸೋಲಿಗೆ ಅಮೆರಿಕದ ಕೈವಾಡವೇ ಕಾರಣ ಎಂದು ಆರೋಪಿಸಿದ್ದಾರೆ.

ಗುಪ್ತಚರ ಸಂಸ್ಥೆಗಳ ಮಾಹಿತಿಯ ಪ್ರಕಾರ, ಪಿಟಿಐ ಕಾರ್ಯಕರ್ತರು ಕಾನೂನು ಜಾರಿ ಸಂಸ್ಥೆಗಳಿಂದ ಯಾವುದೇ ಪ್ರತಿರೋಧವನ್ನು ಎದುರಿಸಲು ಸಿದ್ಧರಾಗಿರುತ್ತಾರೆ. ಇಂತಹ ಸಂದರ್ಭಗಳಲ್ಲಿ ಮುಖಾಮುಖಿ ಆಗುವ ಸಾಧ್ಯತೆ ಇದೆ ಎಂಬುದು ಸರ್ಕಾರಿ ಸಂಸ್ಥೆಗಳಿಗೆ ಚೆನ್ನಾಗಿ ತಿಳಿದಿದೆ. ಅದನ್ನು ತಪ್ಪಿಸಲು ಕಷ್ಟವಾಗಲಿದೆ ಎಂಬ ವಿಚಾರವನ್ನು ಅಧಿಕಾರಿಗಳು ಚರ್ಚೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಮಧ್ಯೆ ಸರಕಾರದ ವಿರುದ್ಧ ಪ್ರತಿಭಟನೆ ಆರಂಭಿಸಿರುವ ಇಮ್ರಾನ್ ಖಾನ್, ಲಾಂಗ್ ಮಾರ್ಚ್ ಪ್ರಾರಂಭ ಮಾಡಿದ್ದಾರೆ. ಈ ರಾಲಿಯಲ್ಲಿ ಭಾಗವಹಿಸಲು ಪೇಶಾವರದಿಂದ ಇಸ್ಲಾಮಾಬಾದ್‌ಗೆ ತೆರಳುತ್ತಿರುವ ಪಾಕಿಸ್ತಾನ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಅಧ್ಯಕ್ಷ ಇಮ್ರಾನ್ ಖಾನ್ ಮತ್ತು ಪಕ್ಷದ ಇತರ ಪ್ರಮುಖ ನಾಯಕರನ್ನು ಬಂಧಿಸಲು ಪಾಕಿಸ್ತಾನ ಸರಕಾರ ನಿರ್ಧರಿಸಿದೆ.

ಮೂಲಗಳ ಪ್ರಕಾರ, ಲಾಂಗ್ ಮಾರ್ಚ್‌ನಲ್ಲಿ ಅವರನ್ನು ಬಂಧಿಸುವುದು ಅಸಾಧ್ಯವಾದ ಕೆಲಸವೆಂದು ತೋರುತ್ತಿರುವಾಗ ಸಂಭವನೀಯ ಹಿಂಸಾಚಾರವನ್ನು ತಡೆಯಲು ಅವರನ್ನು ಬಂಧಿಸುವುದನ್ನು ಬಿಟ್ಟು ಸರ್ಕಾರಕ್ಕೆ ಬೇರೆ ದಾರಿಯಿಲ್ಲ ಎಂಬ ಅಭಿಪ್ರಾಯವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಆಕಾಶವಾಣಿಯಲ್ಲಿ ಸಾಂದರ್ಭಿಕ ಸುದ್ದಿ ಸಂಪಾದಕ & ವರದಿಗಾರರ ಹುದ್ದೆಗೆ ಅರ್ಜಿ ಆಹ್ವಾನ

0

ಆಕಾಶವಾಣಿ ಬೆಂಗಳೂರು ಕೇಂದ್ರದ ಪ್ರಾದೇಶಿಕ ಸುದ್ದಿ ವಿಭಾಗವು ಸಾಂದರ್ಭಿಕ ಸುದ್ದಿ ಸಂಪಾದಕರು/ವರದಿಗಾರರು ಹಾಗೂ ಸಾಂಧರ್ಭಿಕ ಸುದ್ದಿ ವಾಚಕರು-ಅನುವಾದಕಾರನ್ನು ನೇಮಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಸಾಂದರ್ಭಿಕ ಸುದ್ದಿ ಸಂಪಾದಕರು/ವರದಿಗಾರರ ಹುದ್ದೆಗೆ ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯದ ಪದವೀಧರರಾಗಿರಬೇಕು. ಪದವಿ ಅಥವಾ ಪತ್ರಿಕೋದ್ಯಮ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಕನಿಷ್ಟ 1 ವರ್ಷದ ಸ್ನಾತಕೋತ್ತರ ಡಿಪ್ಲೊಮಾ ಪಡೆದಿರಬೇಕು ಅಥವಾ ಮುದ್ರಣ/ವಿದ್ಯುನ್ಮಾನ ಮಾಧ್ಯಮದಲ್ಲಿ ವರದಿಗಾರಿಕೆ/ಸಂಪಾದಕತ್ವ ಕೆಲಸದಲ್ಲಿ 5 ವರ್ಷ ಅನುಭವವಿರಬೇಕು.

ಕಂಪ್ಯೂಟರ್ ಅಪ್ಲಿಕೇಷನ್ ಪ್ರಾಥಮಿಕ ತಿಳುವಳಿಕೆ, ಕನ್ನಡ ಭಾಷೆಯಲ್ಲಿ ಪ್ರಾವಿಣ್ಯತೆ ಇದ್ದು, ವಯಸ್ಸು 21 ರಿಂದ 50 ವರ್ಷದೊಳಗಿರಬೇಕು.

ಸಾಂಧರ್ಭಿಕ ಸುದ್ದಿ ವಾಚಕರು-ಅನುವಾದಕಾರರ ಹುದ್ದೆಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದ ಪದವೀಧರರಾಗಿರಬೇಕು.
ಕನ್ನಡ ಭಾಷೆಯಲ್ಲಿ ಪ್ರಾವಿಣ್ಯತೆ ಇರಬೇಕು ಹಾಗೂ ಪ್ರಸಾರಕ್ಕೆ ಯೋಗ್ಯವಾದ ಉತ್ತಮ ಗುಣಮಟ್ಟದ ಧ್ವನಿ ಹೊಂದಿರಬೇಕು. ರೇಡಿಯೋ/ಟಿವಿ ಸುದ್ದಿಮಾಧ್ಯಮ ಕೆಲಸ ಅನುಭವ, ಕಂಪ್ಯೂಟರ್ ಅಪ್ಲಿಕೇಷನ್ ಪ್ರಾಥಮಿಕ ತಿಳುವಳಿಕೆ ಇದ್ದು 21 ರಿಂದ 50 ವರ್ಷ ವಯೋಮಿತಿಯೊಳಗಿರಬೇಕು.

ಅರ್ಜಿ ಶುಲ್ಕ ಸಾಮಾನ್ಯ ವರ್ಗಕ್ಕೆ ರೂ.300, ಎಸ್‍ಸಿ/ಎಸ್‍ಟಿ/ಓಬಿಸಿ ರೂ.225 ಇದ್ದು The Station Director, All India Radio, Bengaluru ಇವರ ಹೆಸರಿನಲ್ಲಿ ಬ್ಯಾಂಕ್ ಡ್ರಾಫ್ಟ್ ಮೂಲಕ ಪಾವತಿಸಬೇಕು. ಹಾಗೂ ಅಭ್ಯರ್ಥಿಯ ಪೂರ್ಣ ವಿವರಗಳು, ಅಗತ್ಯ ದಾಖಲಾತಿಗಳ ಪ್ರತಿಗಳು ಹಾಗೂ ಅರ್ಜಿ ಶುಲ್ಕದ ಬ್ಯಾಂಕ್ ಡ್ರಾಫ್ಟ್‍ನ್ನು ಒಳಗೊಂಡ ಅರ್ಜಿಗಳನ್ನು ರಿಜಿಸ್ಟರ್ಡ್ ಅಂಚೆ ಮೂಲಕ ಖುದ್ದಾಗಿ ಜೂನ್ 10 ರೊಳಗೆ ತಲುಪುವಂತೆ ದಿ ಡೆಪ್ಯುಟಿ ಜನರಲ್, (ಇ) & ಹೆಚ್‍ಓಓ,Attn: ರೀಜನಲ್ ನ್ಯೂಸ್ ಯುನಿಟ್, ಆಲ್ ಇಂಡಿಯಾ ರೇಡಿಯೋ, ರಾಜ್‍ಭವನ್ ರಸ್ತೆ, ಬೆಂಗಳೂರು 560001 ವಿಳಾಸಕ್ಕೆ ಕಳುಹಿಸಿಕೊಡಬೇಕು.

ಹೆಚ್ಚಿನ ವಿವರಗಳಿಗೆ ದೂ.ಸಂ 8317466729/9448159726/9482169168/080-22356344/22373000 ನ್ನು ಸಂಪರ್ಕಿಸಬಹುದೆಂದು ಪ್ರಸಾರ ಭಾರತಿ ಪ್ರಕಟಣೆ ತಿಳಿಸಿದೆ.

ಸ್ತ್ರೀವಾದವು ಸೀತಾ ಮತ್ತು ದ್ರೌಪದಿಯರ ಕಾಲದಲ್ಲೇ ಇತ್ತು–ಶಾಂತಿಶ್ರೀ

0

ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಉಪಕುಲಪತಿ ಶಾಂತಿಶ್ರೀ ಧುಲಿಪುಡಿ ಪಂಡಿತ್ ಅವರು ಸ್ತ್ರೀವಾದವು ಪಾಶ್ಚಿಮಾತ್ಯ ಪರಿಕಲ್ಪನೆಯಲ್ಲ. ಆದರೆ ಭಾರತೀಯ ನಾಗರಿಕತೆಯಲ್ಲಿ ಅಂತರ್ಗತವಾಗಿದೆ ಎಂದು ಮಂಗಳವಾರ ಹೇಳಿದ್ದಾರೆ.

ದ್ರೌಪದಿ ಮತ್ತು ಸೀತೆಗಿಂತ ದೊಡ್ಡ ಸ್ತ್ರೀವಾದಿ ಬೇರೊಂದಿಲ್ಲ ಎಂದು ಅವರು ಇದೇ ವೇಳೆ ಅಭಿಪ್ರಾಯಪಟ್ಟಿದ್ದಾರೆ.

ಸುಷ್ಮಾ ಸ್ವರಾಜ್ ಸ್ತ್ರೀ ಶಕ್ತಿ ಸಮ್ಮಾನ್ 2022 ಅನ್ನು ನೀಡಿ ಗೌರವಿಸಲಾದ ಸಮಾರಂಭದಲ್ಲಿ ಮಾತನಾಡುತ್ತ ಈ ಬಗ್ಗೆ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಆಧುನಿಕ ಭಾರತದ ಬೌದ್ಧಿಕ ಪ್ರವಚನದಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳನ್ನು ಭಾರತೀಯ ಸ್ತ್ರೀವಾದಿಗಳನ್ನು ಅಧ್ಯಯನ ಮಾಡುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.

ನಾನು ದಕ್ಷಿಣ ಭಾರತದಿಂದ ಬಂದಿದ್ದೇನೆ. ಅಲ್ಲಿ ಕಾನಂಗಿ ಹಾಗೂ ಮಣಿಕೆಕ್ಲೈ ಅವರ ವರ್ಣನೆ ಕಂಡುಬರುತ್ತದೆ. ಆಧುನಿಕ ಭಾರತದ ಬೌದ್ಧಿಕ ಪ್ರವಚನದಲ್ಲಿ ಆಸಕ್ತಿ ಹೊಂದಿರುವವರಂತೆ ಈ ಪಾತ್ರಗಳನ್ನು ಅಧ್ಯಯನ ಮಾಡುವಂತೆ ನಾನು ಅನೇಕ ವಿದ್ಯಾರ್ಥಿಗಳನ್ನು ಒತ್ತಾಯಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಅಂದು ಭಿಕ್ಷಾಟನೆ ಮಾಡಿದ ಹುಡುಗಿ ಇಂದು ಎಸ್ಎಸ್ಎಲ್ ಸಿ ಯಲ್ಲಿ ಸಾಧನೆ

0

ಈ ವಿದ್ಯಾರ್ಥಿನಿಗೆ ಹೆತ್ತವರಿಲ್ಲ. ಆದರೆ ಸಾಧಿಸುವ ಛಲ ಬಿಟ್ಟಿಲ್ಲ. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉನ್ನತ ಮಟ್ಟದ ಅಂಕಗಳಿಸಿ ಸಾಧನೆ ಮಾಡಿದ್ದಾಳೆ.

ಯಾದಗಿರಿ ಜಿಲ್ಲೆಯ ಗುರುಮಿಠಕಲ್ ತಾಲೂಕಿನ ಚಂಡರಕಿ ಗ್ರಾಮದ ನರಸಮ್ಮ ಹಾಗೂ ನರಸಿಂಹ ದಂಪತಿಗಳ ಪುತ್ರಿ ಎನ್.ಸೋನು ಬೆಂಗಳೂರುನಲ್ಲಿ ಎಸ್ ಎಸ್ ಎಲ್ ಸಿ ಉತ್ತಮ ಸಾಧನೆ ಮಾಡಿದ್ದಾಳೆ. ಸೋನು ತಾಯಿ ನರಸಮ್ಮ ನಿಧನರಾದ ನಂತರ ಸೋನು ತಮ್ಮ ತಂದೆ ನರಸಿಂಹ ಅವರ ಜೊತೆ ಬೆಂಗಳೂರಿಗೆ ವಲಸೆ ಹೋಗುತ್ತಾಳೆ. ತಂದೆ ಕೂಲಿ ಕೆಲಸ ಮಾಡಲು ಹೋದರೆ ಸೋನು ಬೆಂಗಳೂರು ಸಹಕಾರ ನಗರದಲ್ಲಿರುವ ಗುಂಡಾಂಜನೇಯ ದೇವಸ್ಥಾನದಲ್ಲಿ ಭಿಕ್ಷೆ ಬೇಡುತ್ತಿದ್ದಳು.

ಇದನ್ನು ಅರಿತ ಸ್ಪರ್ಶಾ ಟ್ರಸ್ಟ್ ಸಿಬ್ಬಂದಿ ರೂಪಾ ಮಹಾಜನ್ ಅವರು ಬಾಲಕಿಯನ್ನು ರಕ್ಷಣೆ ಮಾಡಿ ಕರೆದುಕೊಂಡು ಹೋದರು. 2013 ರಲ್ಲಿ ಬಾಲಕಿಯನ್ನು ರಕ್ಷಣೆ ಮಾಡಿ ಸ್ಪರ್ಶಾ ಟ್ರಸ್ಟ್ ಗೆ ಕರೆದುಕೊಂಡು ಹೋದರು.
ಸ್ಪರ್ಶಾ ಟ್ರಸ್ಟ್ ಅನಾಥಳಾಗಿದ್ದ ಸೋನು ಅವರಿಗೆ ಉತ್ತಮ ಶಿಕ್ಷಣ ನೀಡಿ ನೋವು ದೂರ ಮಾಡಿದ್ದು ಇವಳ ಸಾಧನೆಗೆ ಸಾಕ್ಷಿಯಾಗಿದೆ.

ಸೋನುಳನ್ನು ಕರೆದುಕೊಂಡು ಹೋಗಿ ಬೆಂಗಳೂರಿನ ಸಂಜೀವಿನಿ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 3 ನೇ ತರಗತಿಗೆ ಸೇರಿಸಿದ್ದು ,7 ನೇ ತರಗತಿಯವರೆಗೆ ಅಧ್ಯಯನ ಮಾಡಿಸಿದ್ದಾರೆ‌.

ನಂತರ ಸೋನು ನಲ್ಲಿ ಆಸಕ್ತಿ ವಹಿಸಿರುವದನ್ನು ಅರಿತು ಸೋನು ಅವರನ್ನು ಹೆಸರಘಟ್ಟದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರವೇಶ ಕೊಡಿಸಿದ್ದು, ಈ ಶಾಲೆಯಲ್ಲಿಯೇ 8 ರಿಂದ 10 ನೇ ತರಗತಿವರಗೆ ವ್ಯಾಸಂಗ ಮಾಡಿದಳು. ಈಗ
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಒಟ್ಟು 625 ಕ್ಕೆ 602 ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.

ಸ್ಪರ್ಶಾ ಟ್ರಸ್ಟ್‌ ನ ಸಿಬ್ಬಂದಿಗಳಾದ ರೂಪಾ ಮಹಾಜನ್,ಹುಲಿಶ್ ಅವರು ವಿದ್ಯಾರ್ಥಿನಿ ಇಂಗ್ಲಿಷ್ ತರಬೇತಿ ಸೇರಿದಂತೆ ಮೊದಲಾದ ವಿಷಯ ಕುರಿತು ತರಬೇತಿ ನೀಡಿದ್ದಾರೆ .

ನಾನು ಬೆಂಗಳೂರಿನ ಗುಂಡಾಂಜನೇಯ ದೇವಸ್ಥಾನದಲ್ಲಿ ಭೀಕ್ಷೆ ಬೇಡುತ್ತಿದ್ದೆ ಅಂದು ಜೀವನ ನಡೆಸುವುದು ಕಷ್ಟವಾಗಿತ್ತು ‌.ಈ ವೇಳೆ ಸ್ಪರ್ಶಾ ಟ್ರಸ್ಟ್ ಸಿಬ್ಬಂದಿ ವರ್ಗದವರು ನನ್ನನ್ನು ನೋಡಿ ಸ್ಪರ್ಶಾ ಟ್ರಸ್ಟ್ ಕಚೇರಿಗೆ ಕರೆದುಕೊಂಡು ಹೋಗಿ ನಂತರ ಉತ್ತಮ ಶಿಕ್ಷಣ ಕೊಡಿಸಿದ್ದಾರೆ. ತಂದೆ ,ತಾಯಿ ಯಾರು ಇಲ್ಲ.ನಾನು ಸಾಫ್ಟ್‌ವೇರ್ ಇಂಜಿನಿಯರ್ ಆಗಬೇಕೆಂಬ ಗುರಿ ಹೊಂದಿದ್ದೇನೆ ಎಂದು ಸೋನು ತಿಳಿಸಿದ್ದಾರೆ.

ಇಂಡೋ-ಪೆಸಿಫಿಕ್ ಆರ್ಥಿಕ ವೇದಿಕೆ ರಚನೆ ಬಗ್ಗೆ ಚೀನಾ ವ್ಯಂಗ್ಯ ಪ್ರತಿಕ್ರಿಯೆ

0

ಆರ್ಥಿಕ ಸಹಕಾರಕ್ಕಾಗಿ ಭಾರತ ಸೇರಿದಂತೆ 13 ದೇಶಗಳು ಮಾಡಿಕೊಂಡಿದ್ದ ಸಮೃದ್ಧಿಗಾಗಿ ಇಂಡೋ-ಪೆಸಿಫಿಕ್‌ ಆರ್ಥಿಕ ವೇದಿಕೆ (ಐಪಿಇಎಫ್‌)ನ್ನು ಚೀನಾ ವಿರೋಧಿಸಿದೆ.

ಇಂಡೋ ಪೆಸಿಫಿಕ್‌ ವಲಯದಲ್ಲಿ ತನ್ನ ಪ್ರಾಬಲ್ಯಕ್ಕೆ ಎದುರಾದ ಅಪಾಯ ಎಂದು ಭಾವಿಸಿರುವ ಚೀನಾ ಇದನ್ನು ‘ಆರ್ಥಿಕ ನ್ಯಾಟೋ’ ಎಂದು ಕರೆದಿದೆ.

ಏಷ್ಯಾ ಪೆಸಿಫಿಕ್‌ ಎಂಬುದು ಚೀನಾ ನೆಲೆಗೊಂಡಿರುವ, ಅಭಿವೃದ್ಧಿ ಹೊಂದುತ್ತಿರುವ ಪ್ರದೇಶವಾಗಿದೆ. ಈ ವಲಯಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ರಕ್ಷಿಸಬೇಕು. ಜಾಗತಿಕ ಭದ್ರತೆಯನ್ನು ಹೆಚ್ಚು ಮಾಡಲು ಏಷ್ಯಾ-ಪೆಸಿಫಿಕ್‌ ರಾಷ್ಟ್ರಗಳೊಂದಿಗೆ ಸಹಕಾರ ಮಾತುಕತೆಯಾಡಲು ಚೀನಾ ಸಿದ್ಧವಾಗಿದೆ’ ಎಂದು ವಿದೇಶಾಂಗ ಸಚಿವ ವಾಂಗ್‌ ಯಿ ಹೇಳಿದ್ದಾರೆ.

ಭಾರತದಲ್ಲಿ ರಕ್ಷಣಾ ಉತ್ಪಾದನೆ, ಕೌಶಲ್ಯ ಅಭಿವೃದ್ಧಿ, ವ್ಯಾಪಾರ ಮತ್ತು ತಂತ್ರಜ್ಞಾನ ಪಾಲುದಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉಭಯ ದೇಶಗಳು ತಮ್ಮ ಸಹಕಾರವನ್ನು ಮುಂದುವರೆಸುವ ಕುರಿತಾಗಿ ನಿರ್ಣಯಗಳನ್ನು ಕೈಗೊಳ್ಳಲಾಯಿತು ಎಂದು ವಿದೇಶಾಂಗ ಕಾರ್ಯದರ್ಶಿ ವಿನಯ್‌ ಕ್ವಾತ್ರಾ ಹೇಳಿದರು.

ಈ ಒಪ್ಪಂದ ಮಾಡಿಕೊಂಡ ದಿನವೇ ಚೀನಾ ಇಂಡೋ-ಪೆಸಿಫಿಕ್‌ ಪ್ರದೇಶಕ್ಕೆ ಹೊಸ ಯೋಜನೆ ಮತ್ತು ಹೂಡಿಕೆ, ಹೆಚ್ಚಿನ ಸಹಕಾರವನ್ನು ಘೋಷಿಸಿದೆ.

ರಕ್ಷಣೆ, ವ್ಯಾಪಾರ, ತಂತ್ರಜ್ಞಾನದಲ್ಲಿ ಸಹಕಾರ: ಭಾರತ-ಜಪಾನ್‌ ಸಮ್ಮತಿ
ರಕ್ಷಣಾ ಉಪಕರಣಗಳ ಉತ್ಪಾದನೆ, ವ್ಯಾಪಾರ ಮತ್ತು ತಂತ್ರಜ್ಞಾನದಲ್ಲಿ ಉಭಯ ದೇಶಗಳ ಸಹಕಾರವನ್ನು ಮುಂದುವರೆಸುವ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಜಪಾನ್‌ ಪ್ರಧಾನಿ ಫುಮಿಯೋ ಕಿಶಿದಾ ಮಂಗಳವಾರ ದ್ವಿಪಕ್ಷೀಯ ಮಾತುಕತೆ ನಡೆಸಿದ್ದು, ಚರ್ಚೆ ಯಶಸ್ವಿಯಾಗಿದೆ.
ಕ್ವಾಡ್‌ ಸಭೆಯಲ್ಲಿ ಭಾಗವಹಿಸಲು ಜಪಾನ್‌ ಪ್ರವಾಸದಲ್ಲಿರುವ ಮೋದಿ, ಕಿಶಿದಾ ಅವರೊಂದಿಗಿನ ದ್ವಿಪಕ್ಷೀಯ ಮಾತುಕತೆಯಲ್ಲಿ ಉಭಯ ದೇಶಗಳ ನಡುವಿನ ಉನ್ನತ ಮಟ್ಟದ ವಿನಿಮಯ ಚಲನೆಯನ್ನು ಕಾಯ್ದುಕೊಳ್ಳಬೇಕಾದ ಮಹತ್ವವನ್ನು ಒತ್ತಿ ಹೇಳಿದರು.

ಇಬ್ರಾಹಿಂ ಹೇಳಿಕೆಗೆ ಮಂಜಮ್ಮ ಜೋಗತಿ ಬೇಸರ

0

ರಾಜ್ಯದಲ್ಲಿ ಇರುವುದು ಬಿಜೆಪಿ ಸರ್ಕಾರ ಅಲ್ಲ. ಮಂಗಳಮುಖಿ ಸರ್ಕಾರ. ಈ ಸರ್ಕಾರದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಗಮನಕ್ಕೆ ತಂದರೂ ಕ್ರಮ ತೆಗೆದುಕೊಳ್ಳುತ್ತಿಲ್ಲ. ಆದಷ್ಟು ಬೇಗ ಈ ಮಂಗಳಮುಖಿ ಸರ್ಕಾರದಿಂದ ಮುಕ್ತಿಪಡೆಯೋಣ. ಇವರ ಜೊತೆ ಜಗಳ ಆಡುವುದಕ್ಕೂ ಆಗಲ್ಲ. ಗಂಡಸರಾದರೆ ಗಂಡಸರನ್ನು ಕಳುಹಿಸಬಹುದು. ಹೆಂಗಸರಾದರೆ ಹೆಂಗಸರನ್ನು ಕಳುಹಿಸಬಹುದು. ಇದು ಗಂಡಸೂ ಅಲ್ಲ ಹೆಂಗಸೂ ಅಲ್ಲ, ಕೈ ತಟ್ಟುತ್ತಾರೆ. ನಾವು ಹಿಂದೆ ಸರಿಯಬೇಕಾಗುತ್ತದೆ. ಎಷ್ಟು ಬೈದರೂ ಎಷ್ಟು ಉಗಿದರೂ ಹ್ಹಿ ಹ್ಹಿ ಹ್ಹೀ ಅಂತಾರೆ ಎಂದು ಸಿ.ಎಂ. ಇಬ್ರಾಹಿಂ ಅವರು ರಾಯಚೂರಿನ ಮುದಗಲ್‌ನಲ್ಲಿ ಇತ್ತೀಚೆಗಷ್ಟೇ ಹೇಳಿದ್ದರು.

ಈ ಹೇಳಿಕೆಗೆ ಜಾನಪದ ಆಕಾಡೆಮಿ ಅಧ್ಯಕ್ಷೆ ಬಿ. ಮಂಜಮ್ಮ ಜೋಗತಿ ತೀವ್ರ ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ಇಬ್ರಾಹಿಂ ಹೇಳಿಕೆಯ ವರದಿಗೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿರುವ ಅವರು, ನನ್ನ ತಂದೆ ಕೂಡ ಹೀಗೆ ಹೇಳಿದ್ದರು. ಗಂಡಾಗಿದ್ದರೆ ಕೆಲಸ ಕೊಡಿಸುತ್ತಿದ್ದೆ, ಹೆಣ್ಣಾಗಿದ್ದರೆ ಮದುವೆ ಮಾಡಿಸುತ್ತಿದ್ದೆ. ಕುರುಡ ಕುಂಟ ಆಗಿದ್ದರೆ ಮನೆಯಲ್ಲೇ ಇರಿಸಿಕೊಂಡು ಊಟ ಹಾಕುತ್ತಿದ್ದೆ.

ನಾನು ಮಂಗಳಮುಖಿ, ಕಲಾವಿದೆ, ಕನ್ನಡತಿ. ಸಮಾಜ ಗೌರವಿಸುತ್ತಿದೆ ನಮ್ಮನ್ನು. ಹೀಗೆ ಅವಮಾನ ಮಾಡಬಾರದಿತ್ತು ಸರ್. ನಿಮ್ಮ ರಾಜಕೀಯಕ್ಕೆ ನೀವು ಕೈ ತಟ್ಟಿದ್ದೀರಿ ಇವತ್ತು ಎಂದು ಟ್ವೀಟ್ ನಲ್ಲಿ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ಮೋದಿಯವರದ್ದು ದೇಶದ ಬಹುಭಾಗ ಜನರನ್ನ ಹೊರಗಿಡುವ ಮನಸ್ಥಿತಿ-ರಾಹುಲ್ ಟೀಕೆ

0

ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿಯನ್ನು ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮೋದಿ ಅವರು ಭಾರತದ ಕಲ್ಪನೆಗೆ ವಿರುದ್ಧವಾಗಿ ನಡೆಯುತ್ತಿದ್ದಾರೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಕಾರ್ಪಸ್ ಕ್ರಿಸ್ಟಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಇಂಡಿಯಾ @ 75 ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ನರೇಂದ್ರ ಮೋದಿ ಅವರು ಭಾರತವನ್ನು ಒಳಗೊಳ್ಳದ ಹಾಗೂ ದೇಶದ ಜನಸಂಖ್ಯೆಯ ಬಹುಭಾಗವನ್ನು ಹೊರಗಿಡುವ ಮನಸ್ಥಿತಿಯನ್ನು ಹೊಂದಿದ್ದಾರೆ.

ಇದು ಮೋದಿ ಅವರು ದೇಶಕ್ಕೆ ಮಾಡುತ್ತಿರುವ ಅನ್ಯಾಯ ಹಾಗೂ ದೇಶದ ಕಲ್ಪನೆಗೆ ವಿರುದ್ಧವಾಗಿದೆ ಎಂದು ಟೀಕಿಸಿದ್ದಾರೆ.

ಜನರನ್ನು ಹೊರಗಿಟ್ಟು ಭಾರತದ ನಿರ್ಮಾಣದ ದೃಷ್ಟಿ ಇಟ್ಟುಕೊಂಡಿದ್ದರೆ ಅದು ನನಗೆ ಸಮಸ್ಯೆಯಾಗಿ ಪರಿಣಮಿಸುತ್ತದೆ. ಈ ವೇಳೆ ಯಾರನ್ನು ಹೊರಗಿಡಲಾಗುತ್ತದೆ ಎಂದು ನಾನು ಅಂಜುವುದಿಲ್ಲ. ನನಗೆ ಅಲ್ಲೊಂದು ಸಮಸ್ಯೆ ಕಾಣುತ್ತಿರುತ್ತದೆ. ಈ ದೃಷ್ಟಿಕೋನದಿಂದ ಬಹುಪಾಲು ಜನರಿಗೆ ಅನ್ಯಾಯವಾಗಿದೆ. ಹೊರಗಿಡಲ್ಪಡುವ ಜನರಲ್ಲಿರುವ ಅಪಾರವಾದ ಶಕ್ತಿಯನ್ನು ನಿರ್ಲಕ್ಷ್ಯ ಮಾಡಿದಂತಾಗುತ್ತದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ನೀವು ಪ್ರತಿಯೊಬ್ಬ ವ್ಯಕ್ತಿಯನ್ನೂ ಸಹಾನುಭೂತಿಯಿಂದ ಕಾಣಬೇಕು. ಆದರೆ, ಪ್ರಧಾನಿ ಮೋದಿ ಅವರು ನಮ್ಮ ದೊಡ್ಡ ಮಟ್ಟದ ಜನಸಂಖ್ಯೆಯನ್ನು ಹೊರಗಿಟ್ಟು ಭಾರತದ ದೃಷ್ಟಿಕೋನವನ್ನು ನಿರ್ಮಾಣ ಮಾಡಲು ಹೊರಟಿರುವುದು ತಪ್ಪು. ಅದು ಭಾರತದ ದೃಷ್ಟಿಕೋನವಲ್ಲ. ಬದಲಿಗೆ ಮೋದಿ ಅವರ ದೃಷ್ಟಿಕೋನವಾಗಿದೆ ಎಂದು ಟೀಕಿಸಿದ್ದಾರೆ.

ರಫ್ತು ನಿರ್ಬಂಧ ಹೇರಿಕೆ:ಏರುತ್ತಿರುವ ಸಕ್ಕರೆ ಬೆಲೆಗೆ ಕಡಿವಾಣ

0

ಕಳೆದ 6 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭಾರತ ಸರ್ಕಾರವು ಸಕ್ಕರೆ ರಫ್ತಿಗೆ ನಿರ್ಬಂಧ ವಿಧಿಸಿದೆ. ಈ ಬಾರಿಯ ಸಕ್ಕರೆ ಹಂಗಾಮಿನಲ್ಲಿ ರಫ್ತು ಪ್ರಮಾಣವನ್ನು 1 ಕೋಟಿ ಟನ್​ಗೆ ಮಿತಗೊಳಿಸಲಾಗಿದೆ.

ಹಲವು ಸಕ್ಕರೆ ಕಾರ್ಖಾನೆಗಳು ತಮ್ಮ ಬಳಿಯಿದ್ದ ದಾಸ್ತಾನನ್ನು ವಿಶ್ವ ಮಾರುಕಟ್ಟೆಯಲ್ಲಿ ಗರಿಷ್ಠ ಪ್ರಮಾಣಕ್ಕೆ ಮಾರಾಟ ಮಾಡಲು ಮುಂದಾದ ಹಿನ್ನೆಲೆಯಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆಯನ್ನು ಹಿಡಿತದಲ್ಲಿ ಇರಿಸಲು ಕೇಂದ್ರ ಸರ್ಕಾರವು ಈ ನಿರ್ಧಾರ ತೆಗೆದುಕೊಂಡಿದೆ.

ಜೂನ್ 1ರಿಂದ ಅಕ್ಟೋಬರ್ 31ರ ನಡುವಣ ಅವಧಿಯಲ್ಲಿ ವಿದೇಶಗಳಿಗೆ ಸಕ್ಕರೆ ರಫ್ತು ಮಾಡುವ ಮೊದಲು ತನ್ನ ಅನುಮತಿ ಪಡೆಯುವುದು ಕಡ್ಡಾಯ ಎಂದು ಭಾರತ ಸರ್ಕಾರವು ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ. ವಿಶ್ವದ ಅತ್ಯಂತ ದೊಡ್ಡ ಸಕ್ಕರೆ ಉತ್ಪಾದಕ ದೇಶವಾಗಿರುವ ಭಾರತವು ಎರಡನೇ ಅತಿ ಹೆಚ್ಚು ಪ್ರಮಾಣದ ಸಕ್ಕರೆ ರಫ್ತು ಮಾಡುವ ದೇಶವೂ ಹೌದು. ಬ್ರೆಜಿಲ್ ವಿಶ್ವದಲ್ಲಿ ಅತಿಹೆಚ್ಚು ಸಕ್ಕರೆ ರಫ್ತು ಮಾಡುವ ದೇಶ ಎನಿಸಿದೆ.

ಸಕ್ಕರೆ ರಫ್ತಿಗೆ ಭಾರತ ಸರ್ಕಾರವು ಕಡಿವಾಣ ಹಾಕಬಹುದು ಎಂದು ಕಳೆದ ಮಾರ್ಚ್ ತಿಂಗಳಲ್ಲಿ ರಾಯಿಟರ್ಸ್ ಸುದ್ದಿಸಂಸ್ಥೆಯು ವರದಿ ಮಾಡಿತ್ತು. ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆಏರಿಕೆಗೆ ಕಡಿವಾಣ ಹಾಕುವುದು. ಹಾಗೂ ನಿರಂತರ ಪೂರೈಕೆಯನ್ನು ಖಾತ್ರಿಪಡಿಸಿಕೊಳ್ಳುವ ಉದ್ದೇಶದಿಂದ ಭಾರತ ಸರ್ಕಾರವು ಇಂಥ ಕ್ರಮ ತೆಗೆದುಕೊಳ್ಳಬಹುದು ಎಂದು ವಿಶ್ಲೇಷಿಸಲಾಗಿತ್ತು.

ಸಕ್ಕರೆ ರಫ್ತು ನಿಷೇಧದ ಆದೇಶವನ್ನು ಭಾರತ ಸರ್ಕಾರವು ಪ್ರಕಟಿಸಿದ ನಂತರ ಲಂಡನ್​ನಲ್ಲಿ ಸಕ್ಕರೆ ವಹಿವಾಟಿನ ಮಾನದಂಡವಾಗಿ ಬಳಸುವ ಬಿಳಿ ಸಕ್ಕರೆ ಬೆಲೆಯು ಶೇ.1ರಷ್ಟು ಹೆಚ್ಚಾಗಿದೆ. ಭಾರತದಲ್ಲಿ ಪ್ರತಿವರ್ಷವೂ ಹಬ್ಬಸಾಲಿನಲ್ಲಿ ಸಕ್ಕರೆಗೆ ಬೇಡಿಕೆ ಹೆಚ್ಚಾಗುವುದು ವಾಡಿಕೆ. ಈ ಅವಧಿಯಲ್ಲಿ ದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸಕ್ಕರೆ ಇರಬೇಕು ಎನ್ನುವ ಕಾರಣಕ್ಕಾಗಿ ಸರ್ಕಾರವು ಇಂಥ ತೀರ್ಮಾನ ತೆಗೆದುಕೊಂಡಿದೆ ಎಂದು ಮುಂಬೈ ಮೂಲದ ಜಾಗತಿಕ ಸಕ್ಕರೆ ವಹಿವಾಟುದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.

1 ಕೋಟಿ ಟನ್​ನಷ್ಟು ಸಕ್ಕರೆಯನ್ನು ವಿಶ್ವ ಮಾರುಕಟ್ಟೆಯಲ್ಲಿ ಮಾರಲು ಅವಕಾಶ ಮಾಡಿಕೊಟ್ಟಿರುವುದು ಸಹ ಉತ್ತಮ ನಿರ್ಧಾರವೇ ಆಗಿದೆ. ಇದರಿಂದ ವಿಶ್ವದ ವಿವಿಧ ದೇಶಗಳಲ್ಲಿ ಸಕ್ಕರೆ ಬೆಲೆ ತಹಬಂದಿಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ಆರಂಭದಲ್ಲಿ 80 ಲಕ್ಷ ಟನ್​ ಸಕ್ಕರೆ ರಫ್ತಿಗೆ ಮಿತಿ ವಿಧಿಸಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು. ಆದರೆ ನಂತರದ ದಿನಗಳಲ್ಲಿ ದೇಶದಲ್ಲಿ ಈ ಬಾರಿ ಸಕ್ಕರೆ ಉತ್ಪಾದನೆ ಹೆಚ್ಚಾಗಬಹುದು ಎಂಬ ಪರಿಷ್ಕೃತ ಅಂದಾಜು ಸಿಕ್ಕ ಕಾರಣ, ರಫ್ತು ಮಿತಿಯನ್ನು 1 ಕೋಟಿ ಟನ್​ಗೆ ಹೆಚ್ಚಿಸುವ ನಿರ್ಧಾರ ತೆಗೆದುಕೊಂಡಿತು.

ಅಮೆರಿಕ ನೀಡಿದ ಹೇಳಿಕೆಗಳ ಬಗ್ಗೆ ಚೀನಾ ತೀವ್ರ ಆಕ್ಷೇಪ

0

ಇತ್ತೀಚೆಗೆ ಚೀನಾ – ತೈವಾನ್‌ ವಿಚಾರವಾಗಿ ಅಮೆರಿಕ ನೀಡಿದ ಹೇಳಿಕೆ ಎರಡೂ ರಾಷ್ಟ್ರಗಳ ವಾಗ್ಯುದ್ಧಕ್ಕೆ ಕಾರಣವಾಗಿತ್ತು.

ಅದು ಇಂದಿಗೂ ಕೂಡ ಮುಂದುವರೆದಿದ್ದು ಅಮೆರಿಕ ಬೆಂಕಿ ಜೊತೆ ಆಟ ಆಡುತ್ತಿದೆ ಎಂದು ಚೀನಾ ಕಿಡಿಕಾರಿದೆ. ಚೀನಾದಲ್ಲಿರುವ ತೈವಾನ್‌ ವ್ಯವಹಾರಗಳ ವಕ್ತಾರೆ ಝಹು ಫೆಂಗ್ಲಿಯಾನ್‌ ಈ ಬಗ್ಗೆ ಮಾತನಾಡಿದ್ದು ಅಮೆರಿಕ ಚೀನಾ ವಿರುದ್ದ ತೈವಾನ್‌ ಕಾರ್ಡ್‌ಅನ್ನ ಉಪಯೋಗಿಸಲು ನೋಡಿದರೆ ಅಮೆರಿಕ ತಾನಾಗಿಯೇ ಸುಟ್ಟುಹೋಗುತ್ತದೆ ಎಂದು ಹೇಳಿರುವುದಾಗಿ ಅಲ್ಲಿನ ಮಾಧ್ಯಮಗಳು ವರದಿಮಾಡಿವೆ.