ದಿನಾಂಕ 25/05/2022 ರಂದು ಸಂಜೆ 4:00 ಗಂಟೆಗೆ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಸಭಾಂಗಣದಲ್ಲಿ ರಾಷ್ಟ್ರೀಯ ಭಾವೈಕ್ಯತಾ ಶಿಬಿರದ ಉಧ್ಘಾಟನಾ ಸಮಾರಂಭವನ್ನ ಆಯೋಜಿಸಲಾಗಿತ್ತು.
ಈ ಸಮಾರಂಭವು ನಾಡಗೀತೆ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಗೀತೆಯೊಂದಿಗೆ ಪ್ರಾರಂಭವಾಯಿತು. ಶಿಬಿರದ ಆಯೋಜಿಕರಾದ ಡಾ||ನಾಗರಾಜ ಪರಿಸರ ಕಾರ್ಯಕ್ರಮ ಸಂಯೋಜನಾಧಿಕಾರಿಗಳು, ರಾಷ್ಟ್ರೀಯ ಸೇವಾ ಯೋಜನೆ ಕುವೆಂಪು ವಿಶ್ವವಿದ್ಯಾಲಯ ಇವರು ಪ್ರಾಸ್ತಾವಿಕ ನುಡಿಗಳಲ್ಲಿ ಶಿಬಿರದ ರೂಪುರೇಷೆ, ಕಾರ್ಯಕ್ರಮ ಮತ್ತು ಶಿಬಿರದ ಮಹತ್ವದ ಬಗ್ಗೆ ತಿಳಿಸಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸರ್ವರನ್ನು ಪ್ರೀತಿ ಪೂರ್ವವಕವಾಗಿ ಸ್ವಾಗತಿಸಿದರು.
ಕಾರ್ಯಕ್ರಮದ ಉಧ್ಘಾಟನಾ ಕಾರರಾಗಿ ಆಗಮಿಸಿದ್ದ ಡಾ|| ಆರ್.ಸೆಲ್ವಮಣಿ ಜಿಲ್ಲಾಧಿಕಾರಿಗಳು, ಶಿವಮೊಗ್ಗ ಇವರು ದೀಪಬೆಳಗುವ ಮೂಲಕ ಶಿಬಿರವನ್ನು ಉಧ್ಘಾಟಿಸಿ ಬಾರತ ವಿವಿಧತೆಯಲ್ಲಿ ಏಕತೆಯನ್ನ ಸಾರಿದಂತಹ ದೇಶ. ಈ ಶಿಬಿರವು ಸಾಂಸ್ಕೃತಿಕ ವೈವಿಧ್ಯತೆ,ಸಹೋದರತ್ವ,ಮನೋಭಾವ, ಸೃಜನಶೀಲತೆ ಕೌಶಲಗಳನ್ನು ಶಿಬಿರಾರ್ಥಿಗಳಿಗೆ ತಿಳಿಸಲು ಸಹಾಯಕವಾಗಿದೆ. ಈ ಶಿಬಿರವು ಯಶಸ್ವಿಯಾಗಲಿ ಎಂದು ಶುಭಹಾರೈಸಿದರು.
ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಕುವೆಂಪು ವಿಶ್ವವಿದ್ಯಾಲಯದ ಮಾನ್ಯ ಕುಲಸಚಿವರಾದ ಶ್ರೀಮತಿ ಅನುರಾಧ ಜಿ. ಇವರು ಈ ಶಿಬಿರವು ಭಾರತೀಯ ಭಾವೈಕ್ಯತೆಯ ಪ್ರತೀಕವಾಗಿದೆ. ಈ ಶಿಬಿರವು ಯಶಸ್ವಿಯಾಗಲೆಂದು ಶುಭಕೊರಿದರು.
ನಂತರ ಜಿ.ಧರ್ಮಪ್ರಸಾದ್ ಸಿಂಡಿಕೇಟ್ ಸದಸ್ಯರು ಕುವೆಂಪು ವಿಶ್ವವಿದ್ಯಾಲಯ ಇವರು ತಮ್ಮ ಮಾತುಗಳಲ್ಲಿ ಶಿಬಿರದ ಮಹತ್ವವನ್ನು ವಚನದೊಂದಿಗೆ ವಿಸ್ತರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕುವೆಂಪು ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿಗಳಾದ ಪ್ರೋ.ವೀರಭದ್ರಪ್ಪ ಬಿ.ಪಿ. ಇವರು ತಮ್ಮ ಕಾಲೇಜಿನ ಶಿಬಿರದ ದಿನಗಳನ್ನು ನೆನಪು ಮಾಡಿಕೊಳ್ಳುತ್ತಾ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವವಿಕಸನ ಸಾಮಾಜಿಕ ಮೌಲ್ಯ ನಿಸ್ವಾರ್ಥ ಸೇವೆಯ ಮಹತ್ವ, ರಾಷ್ಟ್ರೀಯ ಏಕತೆಯನ್ನು ತಿಳಿಸಿಕೊಳ್ಳುವಂತಹ ಇಂತಹ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಗಳಿಗೆ ನಮ್ಮ ವಿಶ್ವವಿದ್ಯಾಲಯದ ಸಂಪೂರ್ಣ ಸಹಕಾರವಿದೆ. ಈ ಶಿಬಿರವು ನಮ್ಮ ವಿಶ್ವವಿದ್ಯಾಲಯಕ್ಕೆ ಗೌರವವನ್ನು ತರಲಿದೆ ಎಂದು ಅಧ್ಯಕ್ಷೀಯ ನುಡಿಗಳನ್ನಾಡಿದರು.
ಡಾ|| ಶುಭಮರವಂತೆ ಸಹಶಿಬಿರಾಧಿಕಾರಿಗಳು ಕಾರ್ಯಕ್ರಮದ ವಂದನಾರ್ಪಣೆಯನ್ನು ಮಾಡಿದರು. ಕಾರ್ಯಕ್ರಮದಲ್ಲಿ ಪ್ರೋ. ವೀಣಾ ಎಂ. ಕೆ. ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಶಿವಮೊಗ್ಗ. ಡಾ|| ವಾಗ್ದೇವಿ ಹೆಚ್. ಎಂ. ಪ್ರಾಚಾರ್ಯರು ಸಹ್ಯಾದ್ರಿ ವಿಜ್ಞಾನ ಕಾಲೇಜು ಶಿವಮೊಗ್ಗ ಇವರು ಉಪಸ್ಥಿತರಿದ್ದರು. ನಂತರ ಕುವೆಂಪು ವಿಶ್ವವಿದ್ಯಾಲಯದ ಸ್ವಯಂ ಸೇವಕರು ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡಿದರು. ಶಿಬಿರಾರ್ಥಿಗಳನ್ನು ತಂಡಗಳಿಗೆ ನಿಯೋಜಿಸಲಾಯಿತು.
ಶಿಬಿರಾಧಿಕಾರಿಗಳು ಕಾವೇರಿ ತಂಡಕ್ಕೆ ಧ್ವಜಾ ಹಸ್ತಾಂತರ ಮಾಡಿ ಮೊದಲ ಧ್ವಜಾರೋಹಣ ಕಾರ್ಯಕ್ರಮದ ಜವಾಬ್ದಾರಿಯನ್ನು ನೀಡಿ ಶುಭಹಾರೈಸಿದರು. ನಂತರ ಸಹ್ಯಾದ್ರಿ ವಿದ್ಯಾರ್ಥಿನಿಲಯದಲ್ಲಿ ಭೋಜನವನ್ನು ಸ್ವೀಕರಿಸಿ ತಮ್ಮ ತಮ್ಮ ಕೊಠಡಿಗಳಿಗೆ ವಿಶ್ರಾಂತಿಗೆ ತೆರಳಿದರು.