Tuesday, March 3, 2026
Tuesday, March 3, 2026
Home Blog Page 1562

ಅಭಿಲಾಷಾ ಬರಾಕ್ ಚರಿತ್ರೆ ಸೃಷ್ಟಿಸಿದ ಭಾರತೀಯ ಮಹಿಳೆ

0

ಭಾರತೀಯ ಸೇನೆಯಲ್ಲಿ ಹೊಸ ಇತಿಹಾಸ ದಾಖಲಾಗಿದೆ.
ಇದೇ ಮೊದಲ ಬಾರಿಗೆ ಯುದ್ಧ ವಿಮಾನದ ಪೈಲಟ್​​ ಆಗಿ ಮಹಿಳೆಯೊಬ್ಬರು ನೇಮಕವಾಗಿರುವುದು ಇದಕ್ಕೆ ಸಾಕ್ಷಿ.

ಕ್ಯಾಪ್ಟನ್ ಅಭಿಲಾಷಾ ಬರಾಕ್ ಇಂತಹ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕಳೆದ ವರ್ಷದ ಜೂನ್‌ನಲ್ಲಿ ಮೊದಲ ಬಾರಿಗೆ ಯುದ್ಧ ವಿಮಾನದ ಪೈಲಟ್ ತರಬೇತಿಗೆ ಇಬ್ಬರು ಮಹಿಳಾ ಅಧಿಕಾರಿಗಳನ್ನು ಆಯ್ಕೆ ಮಾಡಲಾಗಿತ್ತು. ಇವರಿಬ್ಬರೂ ನಾಸಿಕ್‌ನ ಸೇನಾ ಯುದ್ಧ ವಿಮಾನಯಾನ ತರಬೇತಿ ಶಾಲೆಯಲ್ಲಿ ತರಬೇತಿಯನ್ನು ಯಶಸ್ವಿಯಾಗಿ ಪಡೆದಿದ್ದರು.

ಇದರಲ್ಲಿ ಒಬ್ಬರಾದ ಕ್ಯಾಪ್ಟನ್ ಅಭಿಲಾಷಾ ಬರಾಕ್ ಇದೀಗ ಏವಿಯೇಷನ್ ಕಾರ್ಪ್ಸ್​​ನ ಯುದ್ಧ ವಿಮಾನದ ಪೈಲಟ್​ ಆಗಿ ಸೇರಿದ್ದಾರೆ.

ಹರಿಯಾಣದ ಮೂಲದ ಕ್ಯಾಪ್ಟನ್ ಅಭಿಲಾಷಾ ಬರಾಕ್​, 2018 ರಲ್ಲಿ ಆರ್ಮಿ ಏರ್ ಡಿಫೆನ್ಸ್ ಕಾರ್ಪ್ಸ್​​ಗೆ ನೇಮಕಗೊಂಡಿದ್ದರು. ನಿವೃತ್ತ ಕರ್ನಲ್ ಎಸ್. ಓಂಸಿಂಗ್ ಅವರ ಪುತ್ರಿಯಾದ ಅವರು ಆರ್ಮಿ ಏವಿಯೇಷನ್ ಕಾರ್ಪ್ಸ್ ಸೇರುವ ಮೊದಲು ಹಲವಾರು ವೃತ್ತಿಪರ ಮಿಲಿಟರಿ ಕೋರ್ಸ್‌ಗಳನ್ನು ಪೂರೈಸಿದ್ದಾರೆ.

ನಾಸಿಕ್​ ಸೇನಾ ಯುದ್ಧ ವಿಮಾನಯಾನ ತರಬೇತಿ ಶಾಲೆಯಲ್ಲಿ ನಡೆದ ನಿರ್ಗಮನ ಪಥಸಂಚಲನದಲ್ಲಿ ಕ್ಯಾಪ್ಟನ್ ಅಭಿಲಾಷಾ ಬರಾಕ್ ಸೇರಿ 36 ಜನ ಪೈಲಟ್​​ಗಳಿಗೆ ಏವಿಯೇಷನ್​ನ ಮಹಾ ನಿರ್ದೇಶಕರು ‘ವಿಂಗ್’ ಪ್ರದಾನ ಮಾಡಿದರು.

ಎಂಟು ವರ್ಷಗಳ ಆಡಳಿತ:ಮೋದಿ ಅವರ ಟೀಂ ಇಂಡಿಯಾ ಹೆಜ್ಜೆಗುರುತುಗಳು

0

ಕಳೆದ 8 ವರ್ಷಗಳಲ್ಲಿ ಎಂದೂ ಕಾಣದ ಪರಿವರ್ತನೆ ಭಾರತದಲ್ಲಿ ಗೋಚರಿಸುತ್ತಿದೆ.
ಈ ಕಾರಣದಿಂದಾದ ಆರ್ಥಿಕ ಬೆಳವಣಿಗೆಯ ಫಲವನ್ನು ಕೂಡ ಜನರು ಪಡೆಯುತ್ತಿದ್ದಾರೆ. ಈ ಪರಿವರ್ತನೆಯ ಸ್ವರೂಪ ಎಷ್ಟು ವೇಗವಾಗಿದೆ ಎಂದರೆ, 2014 ರಿಂದೀಚೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರ ವಹಿಸಿಕೊಂಡ ನಂತರದ ಅವಧಿಯಲ್ಲಿನ ಆರ್ಥಿಕ ಬೆಳವಣಿಗೆಗಳ ವಿವರ ದಾಖಲಿಸುವುದು ಅಷ್ಟು ಸುಲಭವಲ್ಲ.

ದೇಶದ ಗ್ರಾಮೀಣ ಭಾಗದ ಜನತೆ ಬ್ಯಾಂಕ್ ವ್ಯವಹಾರ ಜಾಲದಲ್ಲಿ ದಾಖಲಾಗಿ, ಸರ್ಕಾರದ ನೇರ ಹಣ ವರ್ಗಾವಣೆಗಳಂತಹ ಪರಿಣಾಮಕಾರಿ ಫಲಾನುಭವಕ್ಕೆ ಸಾಕ್ಷಿಯಾದರು.

ದೇಶದ ಗ್ರಾಮೀಣ ಭಾಗದ ಹೆಣ್ಣುಮಕ್ಕಳಿಗೆ ಕುಟುಂಬದ ಅಡುಗೆ ಕಾರ್ಯಕ್ಕೆ ಕಾಡುಕಟ್ಟಿಗೆ, ಪಶುಗಳ ಸಗಣಿ ಕುಳ್ಳುಗಳೇ ಪರಂಪರಾಗತ ಅನಿವಾರ್ಯ ಇಂಧನ ಸಾಧನಗಳಾಗಿದ್ದವು. ಇದು ಮಹಿಳೆಯರ ಆರೋಗ್ಯಕ್ಕೆ ಮಾರಕವಾಗಿತ್ತು. ದೇಶದ ಗೃಹಿಣಿಯರ, ವಿಶೇಷವಾಗಿ ಗ್ರಾಮೀಣ ಬಡ ಹೆಣ್ಣುಮಕ್ಕಳ ಕಾಳಜಿಯೇ ಪ್ರಧಾನಿ ಉಜ್ವಲ ಯೋಜನೆಯ ಕಲ್ಪನೆಯಾಗಿ ಮೂಡಿಬಂತು. ಇದುವರೆಗೆ ದೇಶದಲ್ಲಿ 8 ಕೋಟಿ ಹೊಸ ಅಡುಗೆ ಅನಿಲದ ಸಂಪರ್ಕ ಕಲ್ಪಿಸಲಾಗಿದೆ.

ಪ್ರಧಾನಮಂತ್ರಿ ಆಯುಷ್ಮಾನ್ ಭಾರತ ಯೋಜನೆಯ ಅನುಷ್ಠಾನದಿಂದ ದೇಶದ ಆರೋಗ್ಯ ಕ್ಷೇತ್ರ ವ್ಯಾಪಕವಾಗಿ ಜನತೆಯ ಮನೆ ಬಾಗಿಲಿಗೆ ಬಂದಿದೆ. ಕೇಂದ್ರ ಹಾಗೂ ರಾಜ್ಯಗಳ ಜಂಟಿ ಅನುದಾನಗಳ ಆಧಾರಿತ ಈ ಯೋಜನೆ ದೇಶದ 10 ಕೋಟಿ ಬಡ ಕುಟುಂಬಗಳಿಗೆ ಉಚಿತ ವೈದ್ಯಕೀಯ ಸೌಲಭ್ಯ ನೀಡುವ ಗುರಿ ಇಟ್ಟುಕೊಂಡಿದೆ.

ನರೇಂದ್ರ ಮೋದಿ ನೇತೃತ್ವದ ಟೀಂ ಇಂಡಿಯಾಕ್ಕೆ ದೊರಕಿದ ಇಂತಹ ಗೆಲುವು ಅಭೂತಪೂರ್ವ! ಇದು ಮೋದಿ ನಾಯಕತ್ವದ ಮೂಲಧ್ಯೇಯಗಳಾದ ಸೇವೆ, ಸುಗಮ ಆಡಳಿತ ಹಾಗೂ ಬಡವರ ಕಲ್ಯಾಣದ ಸ್ಪಷ್ಟ ಪ್ರತಿಫಲನವಾಗಿದೆ.

ಈ ಸರ್ಕಾರ ಅಧಿಕಾರ ವಹಿಸಿಕೊಂಡ ತಕ್ಷಣವೇ ಪರಿಚಯಿಸಿದ ಪ್ರಧಾನಮಂತ್ರಿ ಜನಧನ್ ಯೋಜನೆ ಪರಿಣಾಮವಾಗಿ ಬ್ಯಾಂಕಿಂಗ್ ಕ್ಷೇತ್ರವು ದೇಶದ 45 ಕೋಟಿ ಜನರಿಗೆ (ಮೇ, 22-2022ರವರೆಗೆ )ತೆರೆದುಕೊಂಡಿದೆ. ಅಲ್ಲದೆ, 1,67,145 ಕೋಟಿ ರೂ. ಠೇವಣಿ ಬ್ಯಾಂಕುಗಳಲ್ಲಿ ಲಭ್ಯವಿದೆ.

ಇದರಿಂದಾಗಿ, 2016ರಲ್ಲಿದ್ದ ಅಡುಗೆ ಅನಿಲ ಬಳಕೆಯು ಶೇ. 62ರಿಂದ ಶೇ. 99.8ಕ್ಕೆ ಏರಿದೆ. 2022-23 ರ ಆಯವ್ಯಯದಲ್ಲಿ ಇನ್ನೂ 1 ಕೋಟಿ ಹೊಸ ಅಡುಗೆ ಅನಿಲದ ಸಂಪರ್ಕದ ಘೊಷಣೆ ಮಾಡಲಾಗಿದೆ. ಒಟ್ಟಾರೆ ಅಡುಗೆ ಮನೆಗಳನ್ನು ಹೊಗೆಮುಕ್ತವಾಗಿಸಿ ಗ್ರಾಮೀಣ ಮಹಿಳೆಯರನ್ನು ವಿಷಕಾರಿ ಹೊಗೆಯಿಂದ ಮುಕ್ತಗೊಳಿಸಲಾಗಿದೆ.

ಪರಿವಾರವಾದಿಗಳ ಪಕ್ಷದಿಂದ ಸ್ವಾರ್ಥ ಸಾಧನೆ- ಮೋದೀಜಿ

0

ಕುಟುಂಬ ರಾಜಕಾರಣದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ಮುಂದುವರೆಸಿದ್ದಾರೆ.

ಪರಿವಾರವಾದಿ’ ಪಕ್ಷಗಳು ಕೇವಲ ರಾಜಕೀಯ ಸಮಸ್ಯೆಯಲ್ಲ, ಬದಲಾಗಿ ನಮ್ಮ ದೇಶದ ಪ್ರಜಾಪ್ರಭುತ್ವ ಮತ್ತು ಯುವಜನತೆಯ ದೊಡ್ಡ ಶತ್ರುವಾಗಿವೆ ಎಂದರು.

ಹೈದರಾಬಾದ್​ನಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು,
21ನೇ ಶತಮಾನದ ಭಾರತವು ‘ಆತ್ಮನಿರ್ಭರ ಭಾರತ್’ ಮತ್ತು ‘ಮೇಕ್ ಇನ್ ಇಂಡಿಯಾ’ ಕನಸಿನೊಂದಿಗೆ ಮುನ್ನಡೆಯುತ್ತಿದೆ. ನಮ್ಮ ಸ್ಟಾರ್ಟ್‌ಅಪ್‌ಗಳು ಪ್ರಪಂಚದ ಮೇಲೆ ಪ್ರಭಾವ ಬೀರುತ್ತಿವೆ. ಇಂದು ನಾವು ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟ್‌ಅಪ್ ವ್ಯವಸ್ಥೆ ಹೊಂದಿದ್ದೇವೆ ಎಂದು ತಿಳಿಸಿದರು.

ಒಂದು ಕುಟುಂಬಕ್ಕೆ ಸಮರ್ಪಿತವಾಗಿರುವ ರಾಜಕೀಯ ಪಕ್ಷಗಳ ಮುಖವೇ ಭ್ರಷ್ಟಾಚಾರ ಎಂಬುದನ್ನು ನಮ್ಮ ದೇಶ ನೋಡಿದೆ. ‘ಪರಿವಾರವಾದಿ’ ಪಕ್ಷಗಳು ತಮ್ಮ ಅಭಿವೃದ್ಧಿಯ ಬಗ್ಗೆ ಮಾತ್ರ ಯೋಚಿಸುತ್ತವೆ. ಇಂತಹ ಪಕ್ಷಗಳು ಬಡವರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.
ಅಲ್ಲದೇ, ತಮ್ಮ ಕುಟುಂಬ ಮಾತ್ರವೇ ಹೇಗೆ ಅಧಿಕಾರದಲ್ಲಿ ಇರಬೇಕು ಮತ್ತು ಎಷ್ಟು ಸಾಧ್ಯವೋ ಅಷ್ಟು ಲೂಟಿ ಮಾಡಬಹುದು ಎಂಬುದರ ಮೇಲೆಯೇ ಅವರ ರಾಜಕೀಯ ಕೇಂದ್ರೀಕೃತ. ಅವರಿಗೆ ಜನರ ಅಭಿವೃದ್ಧಿಯಲ್ಲಿ ಆಸಕ್ತಿ ಇಲ್ಲ ಎಂದು ತೆಲಂಗಾಣದ ಸಿಎಂ ಕೆಸಿಆರ್​ ಕುಟುಂಬದ ವಿರುದ್ಧ ಪರೋಕ್ಷವಾಗಿ ಮೋದಿ ವಾಗ್ದಾಳಿ ನಡೆಸಿದರು.

ಜಾನುವಾರುಗಳ ನಿಗೂಢ ಕಾಯಿಲೆಗಳ ಬಗ್ಗೆ ವೈದ್ಯರಿಗೆ ಕಾರ್ಯಾಗಾರ

0

ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗದಲ್ಲಿ ಜಾನುವಾರು ನಿಗೂಢ ಕಾಯಿಲೆಗಳ ಸಂಶೋಧನಾ ಕೇಂದ್ರದಿಂದ ಪಶುವೈದ್ಯರಿಗೆ ಎರಡು ದಿನಗಳ ಕಾರ್ಯಾಗಾರ ನಡೆಯಲಿದೆ.

ಜಾನುವಾರುಗಳ ನಿಗೂಢ ಕಾಯಿಲೆಗಳ ಸಂಶೋಧನಾ ಕೇಂದ್ರ, ಪಶುವೈದ್ಯಕೀಯ ಮಹಾವಿದ್ಯಾಲಯದ ಆವರಣ, ಶಿವಮೊಗ್ಗ ಇಲ್ಲಿ 2 ದಿನಗಳ “ಜಾನುವಾರುಗಳ ರೋಗ ಪತ್ತೆ ಮತ್ತು ಚಿಕಿತ್ಸೆಯಲ್ಲಿ ಇತ್ತೀಚಿನ ಆವಿಷ್ಕಾರಗಳು” ಎಂಬ ಶಿರ್ಷಿಕೆಯ ತಾಂತ್ರಿಕ ಕಾರ್ಯಾಗಾರವನ್ನು ದಿನಾಂಕ 26-27 ಮೇ 2022 ರಂದು ಏರ್ಪಡಿಸಿದ್ದು, ಇದರಲ್ಲಿ ಜಾನುವಾರುಗಳಿಗೆ ಬರುವ ವಿವಿಧ ಕಾಯಿಲೆಗಳ ರೋಗ ಪತ್ತೆ ವಿಧಾನದ ಪ್ರಾಯೋಗಿಕ ಪ್ರಾತ್ಯಕ್ಷಿಕೆಗಳ ಸಮೇತ ತರಬೇತಿಯನ್ನು ವಿಷಯ ತಜ್ಞರಿಂದ ಒದಗಿಸಲಾಯಿತು. ಈ ಕಾರ್ಯಾಗಾರದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ 35 ಪಶುವೈದ್ಯರು ಭಾಗವಹಿಸಿದ್ದು ಕ್ಷೇತ್ರ ಮಟ್ಟದ ಪಶುವೈದ್ಯರ ಜ್ಞಾನ ಹೆಚ್ಚಿಸುವುದರಲ್ಲಿ ಇದು ಸಹಕಾರಿಯಾಗಲಿದೆ ಎಂದು ಪ್ರಧಾನ ಸಂಶೋಧಕರು ಮತ್ತು ಮುಖ್ಯಸ್ಥರಾಗಿರುವ ಡಾ: ಎನ್.ಬಿ.ಶ್ರೀಧರ ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ: ಮಹೇಶ್ವರಪ್ಪ,ನಿವೃತ್ತ ಉಪನಿರ್ದೇಶಕರು, ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಕರ್ನಾತಕ ಸರ್ಕಾರ ಇವರು ಭಾಗವಹಿಸಿ, ಕ್ಷೇತ್ರ ಮಟ್ಟದಲ್ಲಿರುವ ಪಶುವೈದ್ಯರು ರೈತರ ಒಳಿತಿಗಾಗಿ ಶ್ರಮಿಸಬೇಕೆಂದರು. ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗದ ಪ್ರಭಾರಿ ಡೀನ್‌ರವರಾದ ಡಾ: ಜಯರಾಮು, ಜಿ ಎಂ ಇವರು ಮಾತನಾಡುತ್ತಾ ಪಶುಚಿಕಿತ್ಸೆಯಲ್ಲಿ ಔಷಧಗಳನ್ನು ಎಚ್ಚರಿಕೆಯೆಂದು ಬಳಸಬೇಕೆಂದು, ಮತ್ತು ಶಿಬಿರದ ಪ್ರಯೋಜನವನ್ನು ಎಲ್ಲರು ಪಡೆಯಬೇಕೆಂದು ಕರೆಯಿತ್ತರು.
ಡಾ: ನಿರಂಜನ ಕಾರ್ಯಕ್ರಮ ನಿರೂಪಿಸಿದರೆ, ಡಾ: ಸುನಿಲಚಂದ್ರ ವಂದನಾರ್ಪಣೆ ಮಾಡಿದರು. ಡಾ: ಕವಿತಾ ರಾಣಿ, ಡಾ: ಆನಂದ, ಡಾ: ಮಂಜುನಾಥ್, ಡಾ: ಮಂಜು, ಡಾ: ಮಾಲತೇಶ್, ಡಾ:ರವೀಂದ್ರ, ಡಾ:ಅರುಣ್, ಡಾ:ಅನಂತಕೃಷ್ಣ ಇವರು ವಿಷಯ ತಜ್ಞರು ಮತ್ತು ಸಂಪೂನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು.

ಡಾ:ಎನ್.ಬಿ.ಶ್ರೀಧರ
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ
ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ

ಮಳೆಗಾಲದ ಮುನ್ನ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಭೆ

0

ಇತ್ತೀಚೆಗೆ ಅತಿವೃಷ್ಟಿಯಿಂದಾಗಿ ಉಂಟಾಗಿರುವ ಅನಾಹುತಗಳು ಮುಂಬರುವ ಮಳೆಗಾಲದಲ್ಲಿ ಮರುಕಳಿಸದಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತಕ್ಷಣದಿಂದಲೇ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಸೆಲ್ವಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ಅತಿವೃಷ್ಟಿ ಹಾನಿ ಕುರಿತು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದರು.

ಶಿವಮೊಗ್ಗ ನಗರದಲ್ಲಿ ಕಾಲುವೆಗಳು, ಚರಂಡಿಗಳಲ್ಲಿ ತುಂಬಿರುವ ಹೂಳನ್ನು ಸಂಪೂರ್ಣವಾಗಿ ತೆರವುಗೊಳಿಸಬೇಕು. ಇದೇ ರೀತಿ ನೀರು ಸರಾಗವಾಗಿ ಹರಿದುಹೋಗಲು ಅಡ್ಡಿಯಾಗುವ ಅಡೆತಡೆಗಳನ್ನು ನಿವಾರಿಸಬೇಕು. ಇತ್ತೀಚಿನ ಅತಿವೃಷ್ಟಿಯಿಂದ ಮತ್ತೆ ಚರಂಡಿಗಳಲ್ಲಿ ಕಸ ಕಡ್ಡಿಗಳು ತುಂಬಿರುವ ಸಾಧ್ಯತೆಯಿದ್ದು, ಆದಷ್ಟು ಬೇಗನೇ ತೆರವುಗೊಳಿಸಬೇಕು. ಶಿವಮೊಗ್ಗ ನಗರದಲ್ಲಿ ನೆರೆ ಪರಿಸ್ಥಿತಿಯನ್ನು ಎದುರಿಸಲು ವಾರ್ಡ್ವಾರು ಕ್ರಿಯಾ ಯೋಜನೆ ಸಿದ್ಧಪಡಿಸಬೇಕು. ಕಾಲುವೆ ಪ್ರದೇಶ ಒತ್ತುವರಿಯಾಗಿದ್ದರೆ ತೆರವುಗೊಳಿಸಬೇಕು ಅವರು ತಿಳಿಸಿದರು.

ಅತಿವೃಷ್ಟಿಯಿಂದ ಉಂಟಾಗಿರುವ ಬೆಳೆ ಹಾನಿ ಹಾಗೂ ಕಟಾವು ನಂತರ ಹಾನಿಗೀಡಾಗಿರುವ ಬೆಳೆಗಳಿಗೆ ಎನ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರ ಪರಿಹಾರವನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು. ಇತ್ತೀಚಿಗೆ ಹಾನಿಗೀಡಾಗಿರುವ ಎಲ್ಲಾ ಕೆರೆಗಳ ದುರಸ್ತಿ ಕಾರ್ಯವನ್ನು ಕೈಗೊಳ್ಳಬೇಕು. ಇದೇ ರೀತಿ ಎಲ್ಲಾ ಕೆರೆಗಳನ್ನು ಪರಿಶೀಲಿಸಿ, ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ನಗರದಲ್ಲಿ ಹಾದು ಹೋಗಿರುವ ತುಂಗಾ ಚಾನೆಲ್‌ನಲ್ಲಿ ತುಂಬಿರುವ ಹೂಳನ್ನು ತೆರವುಗೊಳಿಸಲು ಈಗಾಗಲೇ ಸೂಚನೆ ನೀಡಲಾಗಿದೆ. ನಗರದಲ್ಲಿ ಸುಮಾರು 4ಸಾವಿರ ಮನೆಗಳಿಗೆ ನೀರು ನುಗ್ಗಿ ಹಾನಿ ಸಂಭವಿಸಿದ್ದು, ಎನ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರ ಪರಿಹಾರ ಒದಗಿಸಲು ಚಾಲನೆ ನೀಡಲಾಗಿದೆ. ಬೆಳೆ ಹಾನಿ ಕುರಿತು ಈಗಾಗಲೇ ಸರ್ವೇ ಕಾರ್ಯ ನಡೆಸಲಾಗಿದ್ದು, ಪರಿಹಾರವನ್ನು ಆದಷ್ಟು ಬೇಗನೇ ವಿತರಿಸಲಾಗುವುದು. ಮಾನವ ಪ್ರಾಣ ಹಾನಿ ಹಾಗೂ ಜಾನುವಾರು ಪ್ರಾಣ ಹಾನಿ ಪ್ರಕರಣಗಳಲ್ಲಿ ಪರಿಹಾರವನ್ನು ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ತಿಳಿಸಿದರು.

ಮಳೆಯಿಂದ ತೊಂದರೆಗೊಳಗಾಗಬಹುದಾದ 93 ಗ್ರಾಮ ಪಂಚಾಯತ್‌ಗಳನ್ನು ಗುರುತಿಸಲಾಗಿದ್ದು, ಪ್ರತ್ಯೇಕ ಕ್ರಿಯಾ ಯೋಜನೆ ರೂಪಿಸಲಾಗಿದೆ. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಎಲ್ಲಾ ಕೆರೆಗಳನ್ನು ಪರಿಶೀಲಿಸಲು ಹಾಗೂ ಮೆಶ್ ಅಳವಡಿಸಿ ಮೀನುಗಾರಿಕೆ ನಡೆಸುವ ಮೂಲಕ ಕೆರೆಗಳಿಗೆ ಹಾನಿಯಾಗುವುದನ್ನು ತಪ್ಪಿಸಲು ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯರ್ನಿಹಣಾಧಿಕಾರಿ ವೈಶಾಲಿ ಅವರು ತಿಳಿಸಿದರು.

ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡ ಅವರು, ನಗರದಲ್ಲಿ ನೆರೆ ಪರಿಸ್ಥಿತಿಯನ್ನು ಎದುರಿಸಲು ಕೈಗೊಳ್ಳಲಾಗಿರುವ ಕ್ರಿಯಾ ಯೋಜನೆಗಳ ಮಾಹಿತಿಯನ್ನು ನೀಡಿದರು. ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಹೊನ್ನಳ್ಳಿ ಸೇರಿದಂತೆ ಎಲ್ಲಾ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

ತ್ಯಾವರೆಕೊಪ್ಪ ಹುಲಿ ಸಿಂಹಧಾಮದ ಸಂಗಡ ಈಗ ಪಾತರಗಿತ್ತಿ ಪಾರ್ಕ್

0

ಶಿವಮೊಗ್ಗದಲ್ಲಿ ಮೊಟ್ಟಮೊದಲ ‘ಚಿಟ್ಟೆ ಪಾರ್ಕ್’ ಸಿದ್ಧವಾಗುತ್ತಿದೆ. ಇಲ್ಲಿ ಬಗೆಬಗೆಯ ಚಿಟ್ಟೆಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಲಭಿಸಲಿದೆ. ಅಂದುಕೊಂಡಂತೆ ಆದರೆ ಕೆಲವೆ ಸಮಯದಲ್ಲಿ ಬಣ್ಣ ಬಣ್ಣದ ಪಾತರಗಿತ್ತಿಗಳು ನೋಡುವ ಅದೃಷ್ಟ ಒಲಿಯಲಿದೆ.

ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದಲ್ಲಿ ಚಿಟ್ಟೆ ಪಾರ್ಕ್ ರೆಡಿಯಾಗುತ್ತಿದೆ. ಪ್ರವಾಸಿಗರನ್ನು ಸೆಳೆಯಲು ಮತ್ತು ಅವರ ಮನಸಿಗೆ ಮುದ ನೀಡುವ ಸಲುವಾಗಿ ಈ ಚಿಟ್ಟೆ ಪಾರ್ಕ್ ನಿರ್ಮಾಣ ಮಾಡಲಾಗುತ್ತಿದೆ.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಬೃಹತ್ ಚಿಟ್ಟೆ ಪಾರ್ಕ್ ಸ್ಥಾಪಿಸಲಾಗಿದೆ. ಅಲ್ಲಿರುವುದು ಒಳಾಂಗಣ ಪಾರ್ಕ್. ಕಟ್ಟಡವೊಂದರಲ್ಲಿ ಚಿಟ್ಟೆಗಳನ್ನು ಸ್ವಚ್ಛಂದವಾಗಿ ವಿಹರಿಸಲು ವ್ಯವಸ್ಥೆ ಮಾಡಲಾಗಿದೆ. ಆದರೆ ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದಲ್ಲಿ ಹೊರಾಂಗಣ ಚಿಟ್ಟೆ ಪಾರ್ಕ್ ಆರಂಭಿಸಲಾಗುತ್ತಿದೆ. ಇದಕ್ಕಾಗಿ ಸ್ಥಳವನ್ನು ನಿಗದಿಪಡಿಸಿ, ಅಭಿವೃದ್ಧಿಪಡಿಸಲಾಗುತ್ತಿದೆ. ಸಫಾರಿಯ ಕ್ಯಾಂಟೀನ್ ಪಕ್ಕದಲ್ಲಿ ಖಾಲಿ ಜಾಗವಿತ್ತು.

ಇದನ್ನು ಚಿಟ್ಟೆ ಪಾರ್ಕ್’ಗೆ ಮೀಸಲಿಡಲಾಗಿದೆ. ಈಗಾಗಲೇ ಆ ಜಾಗವನ್ನ ಅಭಿವೃದ್ಧಿಪಡಿಸಲಾಗುತ್ತಿದೆ. ಕೆಲವೆ ತಿಂಗಳಲ್ಲಿ ಇಲ್ಲಿ ಕಣ್ಣಿಗೆ ಮುದ ನೀಡುವ ಬಣ್ಣ ಬಣ್ಣದ ಚಿಟ್ಟೆಗಳು ರೆಕ್ಕೆ ಬಡಿಯುತ್ತ ಹಾರುವುದನ್ನು ಕಾಣಬಹುದಾಗಿದೆ.

ಚಿಟ್ಟೆ ಪಾರ್ಕ್ ಆರಂಭಿಸುವ ಮೊದಲು ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದ ಸಿಬ್ಬಂದಿ ಸರ್ವೆ ನಡೆಸಿದ್ದರು. ಸಫಾರಿ ಭಾಗದಲ್ಲಿ ಎಷ್ಟು ಬಗೆಯ ಚಿಟ್ಟೆಗಳಿವೆ, ಯಾವೆಲ್ಲ ಜಾತಿಯ ಚಿಟ್ಟೆಗಳಿವೆ ಎಂದು ಪರಿಶೀಲಿಸಿದ್ದರು.

ಈ ಸಂದರ್ಭ ಸುಮಾರು 25 ವಿವಿಧ ಜಾತಿಯ ಚಿಟ್ಟೆಗಳು ಕಂಡು ಬಂದಿವೆ. ಅವುಗಳನ್ನು ಚಿಟ್ಟೆ ಪಾರ್ಕ್‌ನತ್ತ ಸೆಳೆಯುವ ಪ್ರಯತ್ನ ಆರಂಭಿಸಲಾಗಿದೆ.

ಟಾಟಾ ಐಪಿಎಲ್22 ರಜತ್ ಶತಕ: ಆರ್ಸಿಬಿ 2 ನೇ ಅರ್ಹತಾ ಪಂದ್ಯಕ್ಕೆ ಮುನ್ನಡೆ

ಐಪಿಎಲ್ 2022 ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಮಣಿಸಿದ ಆರ್‌ಸಿಬಿ 2ನೇ ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆ ಪಡೆದಿದೆ.

ಇದರೊಂದಿಗೆ ಲಖನೌ ಸೂಪರ್ ಜೈಂಟ್ಸ್ ಟೂರ್ನಿಯಿಂದ ಹೊರಬಿದ್ದಿದೆ. ಆರ್‌ಸಿಬಿ ನೀಡಿದ ಬೃಹತ್ ಮೊತ್ತದ ಮುಂದೆ ಲಖನೌ ನಾಯಕ ಕೆಎಲ್ ರಾಹುಲ್ ನಡೆಸಿದ ಹೋರಾಟ ವ್ಯರ್ಥವಾಯಿತು.

ನಾಯಕ ಕೆಎಲ್ ರಾಹುಲ್ ಹಾಗೂ ಮನನ್ ವೋಹ್ರಾ ತಂಡಕ್ಕೆ ಚೇತರಿಕೆ ನೀಡುವ ಪ್ರಯತ್ನ ಮಾಡಿದರು. ಆದರೆ ಇವರ ಜೊತೆಯಾಟ ಗಟ್ಟಿಯಾಗಿ ನೆಲೆಯೂರಲು ಆರ್‌ಸಿಬಿ ಅವಕಾಶ ನೀಡಲಿಲ್ಲ. ವೋಹ್ರಾ 19 ರನ್ ಸಿಡಿಸಿ ಔಟಾದರು. 41 ರನ್‌ಗಳಿಗೆ ಲಖನೌ ಪ್ರಮುಖ 2 ವಿಕೆಟ್ ಕಳೆದುಕೊಂಡಿತು.
ಕೆಎಲ್ ರಾಹುಲ್ ಹಾಗೂ ದೀಪಕ್ ಹೂಡ ಸ್ಫೋಟಕ ಬ್ಯಾಟಿಂಗ್ ಲಖನೌ ತಂಡದಲ್ಲಿ ಗೆಲುವಿನ ಆಸೆ ಚಿಗುರಿಸಿತ್ತು. ಆದರೆ ಹೂಡ 26 ಎಸೆತದಲ್ಲಿ 45 ರನ್ ಸಿಡಿಸಿ ಔಟಾದರು ಇತ್ತ ಹೋರಾಟ ಮುಂದುವರಿಸಿದ ಕೆಎಲ್ ರಾಹುಲ್ 79 ರನ್ ಸಿಡಿಸಿ ಔಟಾದರು.

ರಜತ್ ಪಾಟಿದಾರ್ ಸ್ಫೋಟಕ ಶತಕದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 207 ರನ್ ಸಿಡಿಸಿತ್ತು. 208 ರನ್ ಟಾರ್ಗೆಟ್ ಪಡೆದ ಲಖನೌ ಸೂಪರ್ ಜೈಂಟ್ಸ್ ತಂಡಕ್ಕೆ ಬ್ಯಾಟಿಂಗ್‌ನಲ್ಲೂ ಸಂಕಷ್ಟ ಎದುರಾಯಿತು. ಆರಂಭದಲ್ಲೇ ಕ್ವಿಂಟನ್ ಡಿಕಾಕ್ ವಿಕೆಟ್ ಕಳೆದುಕೊಂಡಿತು. ಡಿಕಾಕ್ 6 ರನ್ ಸಿಡಿಸಿ ಔಟಾದರು.

14 ರನ್ ಗೆಲುವು ದಾಖಲಿಸಿದ ಆರ್‌ಸಿಬಿ 2ನೇ ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆ ಪಡೆದಿದೆ.
ಮೇ.27 ರಂದು ನಡೆಯಲಿರುವ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಆರ್‌ಸಿಬಿ, ರಾಜಸ್ಥಾನ ರಾಯಲ್ಸ್ ವಿರುದ್ಧ ಹೋರಾಟ ನಡೆಸಲಿದೆ. ಇತ್ತ ಎಲಿಮಿನೇಟರ್ ಪಂದ್ಯ ಸೋತ ಲಖನೌ ಸೂಪರ್ ಜೈಂಟ್ಸ್ ಟೂರ್ನಿಯಿಂದ ನಿರ್ಗಮಿಸಿದೆ.

ಆರ್‌ಸಿಬಿ ಇನ್ನಿಂಗ್ಸ್
ಎಲಿಮಿನೇಟರ್ ಪಂದ್ಯದಲ್ಲಿ ಆರ್‌ಸಿಬಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಪ್ರಮುಖವಾಗಿ ರಜತ್ ಪಾಟಿದಾರ್ ಭರ್ಜರಿ ಶತಕ ತಂಡದ ಬೃಹತ್ ಮೊತ್ತಕ್ಕೆ ನೆರವಾಯಿತು. ರಜತ್ ಪಾಟಿದಾರ್ 49 ಎಸೆತದಲ್ಲಿ ಶತಕ ಪೂರೈಸಿದರು. ಒಟ್ಟು 54 ಎಸೆತ ಎದುರಿಸಿದ ರಜತ್ ಪಾಟಿದಾರ್ ಅಜೇಯ 112 ರನ್ ಸಿಡಿಸಿದರು. 12 ಬೌಂಡರಿ ಹಾಗೂ 7 ಸಿಕ್ಸರ್ ಸಿಡಿಸಿದರು.

ಕೊಹ್ಲಿ 25 ರನ್, ನಾಯಕ ಫಾಫ್ ಡುಪ್ಲೆಸಿಸ್ ಶೂನ್ಯ, ಗ್ಲೆನ್ ಮ್ಯಾಕ್ಸ್‌ವೆಲ್ 9 ರನ್ ಹಾಗೂ ಮಹಿಪಾಲ್ ಲೊಮ್ರೊರ್ 14 ರನ್ ಸಿಡಿಸಿದರು. ಇದರೊಂದಿಗೆ ಆರ್‌ಸಿಬಿ 4 ವಿಕೆಟ್ ನಷ್ಟಕ್ಕೆ 207 ರನ್ ಸಿಡಿಸಿತು.

ಕೆಎಂಎಫ್ ದಾಖಲೆ ಹಾಲು ಶೇಖರಣೆ ಸಾಧನೆ

0

ಹೈನೋದ್ಯಮ ಕ್ಷೇತ್ರದಲ್ಲಿ ಕರ್ನಾಟಕ ಹಾಲು ಮಹಾ ಮಂಡಳಿ ನಿಯಮಿತ ಇದೀಗ ಹೊಸ ಮೈಲುಗಲ್ಲು ಸ್ಥಾಪಿಸಿದೆ.

ಈ ಹಿಂದೆ ಕೆಎಂಎಫ್ 2020ನೇ ಸಾಲಿನ ಜುಲೈ 14ರಂದು 88.30 ಲಕ್ಷ ಕೆ.ಜಿ.ಯಷ್ಟು ಗರಿಷ್ಠ ಪ್ರಮಾಣದ ಹಾಲನ್ನು ಶೇಖರಣೆ ಮಾಡಿ ಮೊದಲ ಬಾರಿಗೆ ಹೊಸ ಮೈಲುಗಲ್ಲು ಸ್ಥಾಪಿಸಿತ್ತು. 2021ರ ಜೂ. 11ರಂದು 90.62 ಲಕ್ಷ ಕೆ.ಜಿ.ಯಷ್ಟು ಗರಿಷ್ಠ ಪ್ರಮಾಣದ ಹಾಲನ್ನು ಶೇಖರಿಸಿ 2ನೇ ಬಾರಿ ಮೈಲಿಗಲ್ಲನ್ನು ಮೆರೆದಿತ್ತು. ಇದೀಗ 91.07 ಲಕ್ಷ ಕೆ.ಜಿ. ಪ್ರಮಾಣದಷ್ಟು ಹಾಲು ಶೇಖರಿಸಿ ಮಂಡಲದ ಇತಿಹಾಸದಲ್ಲಿ ಮೂರನೇ ಬಾರಿ ಹೊಸ ದಾಖಲೆ ಬರೆದಿದೆ ಎಂದು ಕೆಎಂಎಫ್ ನ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ್‌ ಹೇಳಿದ್ದಾರೆ.

ಕಳೆದ ಮೇ 24ರಂದು 91.07 ಲಕ್ಷ ಕೆ.ಜಿ. ಗರಿಷ್ಠ ಪ್ರಮಾಣದ ಹಾಲು ಶೇಖರಿಸಿ ಮಂಡಲದ ಇತಿಹಾಸದಲ್ಲೇ ಅತೀ ಹೆಚ್ಚು ಪ್ರಮಾಣದಲ್ಲಿ ಹಾಲು ಶೇಖರಣೆ ಮಾಡುವ ಮೂಲಕ ಮತ್ತೂಂದು ಯಶೋಗಾಥೆ ಬರೆದಿದೆ.

ಯುದ್ಧ ನಿಲ್ಲಿಸಲು ಯಾರದೇ ಮಧ್ಯಸ್ಥಿಕೆ ಇಲ್ಲದೇ ನೇರ ಮಾತುಕತೆಗೆ ಸಿದ್ಧ- ಝೆಲೆನ್ಸ್ಕಿ

0

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಯುದ್ಧವನ್ನು ನಿಲ್ಲಿಸಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಧ್ಯವರ್ತಿಗಳ ಬದಲು ನೇರವಾಗಿ ಮಾತನಾಡಲು ಸಿದ್ದನಿದ್ದೇನೆ ಎಂದು ತಿಳಿಸಿದ್ದಾರೆ.

ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗಸಭೆಯ ವೇದಿಕೆಯಲ್ಲಿ ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡಿದರು.
ಇದಕ್ಕೂ ಮೊದಲು ರಷ್ಯಾದೊಂದಿಗೆ ಮಧ್ಯವರ್ತಿಗಳ ಮೂಲಕ ಮಾತುಕತೆ ನಡೆಸಿ ಯುದ್ಧವನ್ನು ನಿಲ್ಲಿಸುವ ಬಗ್ಗೆ ಚರ್ಚಿಸಲು ಝೆಲೆನ್ಸ್ಕಿ ಮುಂದಾಗಿದ್ದರು. ಆದರೆ ರಷ್ಯಾ ಅಧ್ಯಕ್ಷ ಇದಾವುದಕ್ಕೂ ಬಗ್ಗುವುದಿಲ್ಲ ಎಂಬುದು ಖಾತ್ರಿಯಾಗಿರುವುದರಿಂದ ಉಕ್ರೇನ್ ಅಧ್ಯಕ್ಷ ನೇರ ಮಾತುಕತೆ ನಡೆಸಲು ಸಿದ್ದರಿದ್ದಾರೆ ಎಂದಿದ್ದಾರೆ.

ಉಕ್ರೇನ್‌ನ ಎಲ್ಲಾ ಪ್ರದೇಶಗಳು ಯುದ್ಧದ ಪರಿಣಾಮದಿಂದ ಚೇತರಿಸಿಕೊಳ್ಳುವವರೆಗೂ ಹೋರಾಡಲಿದೆ. ಇದು ಮಾತುಕತೆಯ ಮೊದಲ ಹೆಜ್ಜೆಯಾಗಬಹುದು ಎಂದು ಹೇಳಿದರು.

ಕಳೆದ ವಾರ ಝೆಲೆನ್ಸ್ಕಿ ರಾಜತಾಂತ್ರಿಕತೆ ಇಲ್ಲದೇ ಯುದ್ಧವನ್ನು ನಿಲ್ಲಿಸುವುದು ಅಸಾಧ್ಯ ಎಂದು ತಿಳಿಸಿದ್ದರು. ಉಕ್ರೇನ್‌ನ 2ನೇ ಮುಖ್ಯ ನಗರವಾದ ಖಾರ್ಕೀವ್‌ನಲ್ಲಿ ನಮ್ಮ ಪಡೆ ರಷ್ಯಾ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುತ್ತಿದೆ.

ಆದರೆ ಡಾನ್ಬಾಸ್ ನಗರದಲ್ಲಿ ರಕ್ತಸಿಕ್ತ ಪರಿಸ್ಥಿತಿ ಉಂಟಾಗಿದೆ. ಅಲ್ಲಿ ನಮ್ಮ ಹಲವು ನಾಗರಿಕರನ್ನು ಕಳೆದುಕೊಂಡಿದ್ದೇವೆ ಎಂದಿದ್ದಾರೆ.

ದೌರ್ಜನ್ಯದಿಂದ ಮೃತಪಟ್ಟ ಎಸ್.ಸಿ, ಎಸ್.ಟಿ ಕುಟುಂಬಕ್ಕೆ ಅನುಕಂಪ ನೌಕರಿಗೆ ಆದೇಶ

0

ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಳೆದ ಕೆಲವು ದಿನಗಳ ಹಿಂದೆ ದೌರ್ಜನ್ಯಕ್ಕೆ ಒಳಗಾಗಿ ಮೃತಪಟ್ಟಂತ ಪರಿಶಿಷ್ಟ ಜಾತಿ, ವರ್ಗದ ವ್ಯಕ್ತಿಗಳ ಕುಟುಂಬದ ಸದಸ್ಯರಿಗೆ ಅನುಕಂಪದ ಆಧಾರದಲ್ಲಿ ನೌಕರಿ ನೀಡುವುದಾಗಿ ಘೋಷಿಸಿದ್ದರು. ಅದರಂತೆ ಪ್ರಸ್ತುತ ರಾಜ್ಯ ಸರ್ಕಾರ ಅಧಿಕೃತವಾಗಿ ಆದೇಶವನ್ನು ನೀಡಿದೆ.

ಈ ಕುರಿತಂತೆ ರಾಜ್ಯ ಸರ್ಕಾರದ ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದೆ. ಕರ್ನಾಟಕ ರಾಜ್ಯ ನಾಗರಿಕ ಸೇವಾ ನಿಯಮಗಳು 1999ಕ್ಕೆ ಮತ್ತಷ್ಟು ತಿದ್ದುಪಡಿ ಮಾಡಲಾಗಿದೆ.

ಈ ತಿದ್ದುಪಡಿ ನಿಯಮದಂತೆ ದೌರ್ಜನ್ಯದಿಂದ ಮೃತಪಟ್ಟ ಪರಿಶಿಷ್ಟ ಜಾತಿ, ವರ್ಗಕ್ಕೆ ಸೇರಿದ ಮೃತ ಕುಟುಂಬಸ್ಥರಿಗೆ ಅನುಕಂಪದ ಆಧಾರದ ನೌಕರಿಯನ್ನು ನೀಡಲಾಗುತ್ತದೆ. ವ್ಯಕ್ತಿ ಮರಣ ಹೊಂದಿದ ದಿನಾಂಕದಿಂದ 3 ವರ್ಷದ ಒಳಗೆ 18 ವರ್ಷಗಳನ್ನು ಪೂರೈಸಿರುವಂತಹ ಮತ್ತು ತದನಂತರ 2 ವರ್ಷಗಳೊಳಗೆ ಅರ್ಜಿಯನ್ನು ಸಲ್ಲಿಸತಕ್ಕದ್ದು ಎಂದು ಮೂಲಗಳು ಮಾಹಿತಿ ತಿಳಿಸಿದೆ.