Wednesday, March 4, 2026
Wednesday, March 4, 2026
Home Blog Page 1548

ಪಾಕ್ ಮಾಜಿ ಪ್ರಧಾನಿ ಹತ್ಯೆಗೆ ಸಂಚು?

0

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂಬ ವದಂತಿಗಳು ಹೆಚ್ಚಿದೆ. ಇಸ್ಲಾಮಾಬಾದ್ ಪೊಲೀಸ್ ಇಲಾಖೆ ಬನಿಯ ಅಕ್ಕಪಕ್ಕದ ಪ್ರದೇಶಗಳಲ್ಲಿ ಭದ್ರತಾ ಏಜೆನ್ಸಿಗಳನ್ನು ಎಚ್ಚರಿಕೆಯನ್ನು ತಿಳಿಸಿದೆ.

ಇಸ್ಲಾಮಾಬಾದ್‌ನಲ್ಲಿ ಈಗಾಗಲೇ ಸೆಕ್ಷನ್ 144 ವಿಧಿಸಲಾಗಿದೆ. ಕೂಟಗಳನ್ನು ನಿಷೇಧಿಸಲಾಗಿದೆ ಎಂದು ಇಸ್ಲಾಮಾಬಾದ್ ಪೊಲೀಸ್ ವಕ್ತಾರರು ಹೇಳಿದ್ದಾರೆ.

ಪಾಕಿಸ್ತಾನ ತೆಹ್ರೀಕ್ ಎ ಇನ್ಸಾಫ್ ಅಧ್ಯಕ್ಷ ಇಮ್ರಾನ್ ಖಾನ್ ಅವರು ಇಸ್ಲಾಮಾಬಾದ್‌ನಲ್ಲಿರುವ ವಸತಿ ಪ್ರದೇಶವಾಗಿರುವ ಬನಿ ಗಾಲಾಕ್ಕೆ ಆಗಮಿಸುವ ನಿರೀಕ್ಷೆಯ ಹಿನ್ನೆಲೆಯಲ್ಲಿ, ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಇಸ್ಲಾಮಾಬಾದ್ ಪೊಲೀಸರು ಇಲ್ಲಿಯವರೆಗೆ ಇಮ್ರಾನ್ ಖಾನ್ ತಂಡದಿಂದ ಅವರು ಹಿಂದಿರುಗುವ ಯಾವುದೇ ದೃಢೀಕೃತ ಸುದ್ದಿಯನ್ನು ಸ್ವೀಕರಿಸಿಲ್ಲ. ಆದರೂ, ಭದ್ರತಾ ವಿಭಾಗವು ಬನಿ ಗಾಲಾದಲ್ಲಿ ಮೀಸಲಾದ ಭದ್ರತೆಯನ್ನು ನಿಯೋಜಿಸಿದೆ ಎಂದು ಇಸ್ಲಾಮಾಬಾದ್ ಪೊಲೀಸರು ಅವರು ಟ್ವೀಟ್ ಮಾಡಿದ್ದಾರೆ.

ಇಮ್ರಾನ್ ಖಾನ್‌ಗೆ ಏನಾದರೂ ಸಂಭವಿಸಿದರೆ, ಈ ಕೃತ್ಯವನ್ನು ಪಾಕಿಸ್ತಾನದ ಮೇಲಿನ ದಾಳಿ ಎಂದು ಪರಿಗಣಿಸಲಾಗುತ್ತದೆ ಎಂದು ಇಮ್ರಾನ್ ಖಾನ್ ಅವರ ಸೋದರಳಿಯ ಹಸನ್ ನಿಯಾಜಿ ಅವರು ತಿಳಿಸಿದ್ದಾರೆ.

ಮತ್ತೆ ರಾಜ್ಯದಲ್ಲಿ ಕೊರೋನ ಭೀತಿ:ಮಾರ್ಗಸೂಚಿ ಅನುಸರಿಸಿ: ತಜ್ಞರ ಎಚ್ಚರಿಕೆ

0

ರಾಜ್ಯದಲ್ಲಿ ಮತ್ತೆ ಕೊರೋನಾ ವೈರಸ್ ಅಬ್ಬರ ಶುರುವಾಗಿದೆ. ಕಳೆದ ವಾರದಿಂದ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 2 ಸಾವಿರ ಗಡಿ ದಾಟಿದೆ.

ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕೊರೊನಾ 4ನೇ ಭೀತಿ ಎದುರಾಗಿದೆ.

ಮುಂದಿನ 2-3 ವಾರಗಳು ನಿರ್ಣಾಯಕವಾಗಿದೆ. ಕೊರೋನಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ರಾಜ್ಯದಲ್ಲಿ ಕಳೆದ 10 ದಿನಗಳಲ್ಲಿ 1,927 ಸೋಂಕು ಪ್ರಕರಣಗಳು ವರದಿಯಾಗಿದೆ. ದಿನದ ಸೋಂಕು ಪ್ರಮಾಣ ದರ ಶೇ. 1ಕ್ಕಿಂತ ಹೆಚ್ಚಿದೆ. ಈ ಅವಧಿಯಲ್ಲಿ 1443 ಸೋಂಕಿತರು ಚೇತರಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಕೊರೋನಾ 4ನೇ ಭೀತಿ ಆತಂಕ ಎದುರಾಗಿರುವ ಹಿನ್ನೆಲೆಯಲ್ಲಿ ತಜ್ಞರು ಎಚ್ಚರಿಕೆ ನೀಡಿದೆ. ಕೋವಿಡ್ ಲಸಿಕೆ ಪಡೆದಿದ್ದರೂ ಜನರು ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಹೇಳಿದೆ.

ಪಿಎಸ್ಐ ನೇಮಕಾತಿ ಅನ್ಯಾಯ ಆಗಿರುವುದು 545 ಅಭ್ಯರ್ಥಿಗಳಿಗೆ-ಎಚ್ ಡಿಕೆ

0

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಲು ಬಂದಿದ್ದ ಪಿಎಸ್‌ಐ ಹುದ್ದೆ ವಂಚಿತ ಅಭ್ಯರ್ಥಿಗಳು ಅವರ ವಿರುದ್ದವೇ ಪ್ರತಿಭಟನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮೋದಿ,ಮೋದಿ, ಎಂದು ಘೋಷಣೆ ಕೂಗಿದ್ದಾರೆ.

ಪ್ರತಿಭಟನಾನಿರತ ಅತಿಥಿ ಉಪನ್ಯಾಸಕರ ಸಮಸ್ಯೆ ಆಲಿಸಲು ಬಂದಿದ್ದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಪಿಎಸ್‌ಐ ಅಭ್ಯರ್ಥಿಗಳು ಮನವಿ ಸಲ್ಲಿಸಲು ಬಂದಿದ್ದರು. ಈ ನಡುವೆ ಪರೀಕ್ಷೆ ಬರೆದು ಪಾಸಾದ ವಿದ್ಯಾರ್ಥಿಗಳೂ ಮರು ಪರೀಕ್ಷೆ ಮಾಡದೇ ನೇಮಕಾತಿ ಮಾಡುವಂತೆ ಮನವಿ ಸಲ್ಲಿಸಲು ಆಗಮಿಸಿದ್ದರು.

ಮುಂಚೆ ಪಿಎಸ್‌ಐ ನೇಮಕಾತಿಯಲ್ಲಿ ಆಗಿರುವ ಹಗರಣದಿಂದ 56 ಸಾವಿರ ಅಭ್ಯರ್ಥಿಗಳಿಗೆ ಅನ್ಯಾಯ ಆಗಿದೆ. ಇದಕ್ಕೆ, ನ್ಯಾಯ ಸಿಗುವಂತೆ ಮಾಡಬೇಕು. ಅಕ್ರಮ ಆಗದಂತೆ ಸೂಕ್ತ ರೀತಿಯಲ್ಲಿ ಮರು ಪರೀಕ್ಷೆ ಕೈಗೊಳ್ಳಬೇಕು ಎಂದು ಪಿಎಸ್‌ಐ ವಂಚಿತ ಅಭ್ಯರ್ಥಿಗಳು ಮನವಿ ಸಲ್ಲಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು, ಅನ್ಯಾಯ ಆಗಿರುವುದು 56 ಸಾವಿರ ಅಭ್ಯರ್ಥಿಗಳಿಗಲ್ಲ. ಪರೀಕ್ಷೆ ಬರೆದು ಪಾಸಾದ 545 ಅಭ್ಯರ್ಥಿಗಳಿಗೆ ಎಂದು ಹೇಳಿದ್ದಾರೆ.

ಈ ಹೇಳಿಕೆಯಿಂದ ಕೆರಳಿದ ಪಿಎಸ್‌ಐ ಅಭ್ಯರ್ಥಿಗಳು ಕುಮಾರಸ್ವಾಮಿ ಅವರ ವಿರುದ್ದವೇ ಪ್ರತಿಭಟನೆ ನಡೆಸಿದ್ದಾರೆ. ಅವರೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ. ಇಷ್ಟಲ್ಲದೆ ಕುಮಾರಸ್ವಾಮಿ ಕವಿವಿಯಿಂದ ಹೊರಡುವಾಗ ಅವರ ಕಾರಿನತ್ತ ನುಗ್ಗಿ, ಮೋದಿ, ಮೋದಿ ಎಂದು ಘೋಷಣೆ ಕೂಗಿದ್ದಾರೆ. ಆಗ ಮಧ್ಯಪ್ರವೇಶಿಸಿದ ಪೊಲೀಸರು ಯುವಕರಿಗೆ ಲಾಠಿ ಚಾರ್ಜ್ ಮಾಡಿದ್ದಾರೆ.

ಭಾರತೀಯ ನೋಟುಗಳಲ್ಲಿ ಗಣ್ಯರ ಭಾವಚಿತ್ರ ಮುದ್ರಣಕ್ಕೆ ಚಿಂತನೆ

0

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಲು ಬಂದಿದ್ದ ಪಿಎಸ್‌ಐ ಹುದ್ದೆ ವಂಚಿತ ಅಭ್ಯರ್ಥಿಗಳು ಅವರ ವಿರುದ್ದವೇ ಪ್ರತಿಭಟನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮೋದಿ,ಮೋದಿ, ಎಂದು ಘೋಷಣೆ ಕೂಗಿದ್ದಾರೆ.

ಪ್ರತಿಭಟನಾನಿರತ ಅತಿಥಿ ಉಪನ್ಯಾಸಕರ ಸಮಸ್ಯೆ ಆಲಿಸಲು ಬಂದಿದ್ದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಪಿಎಸ್‌ಐ ಅಭ್ಯರ್ಥಿಗಳು ಮನವಿ ಸಲ್ಲಿಸಲು ಬಂದಿದ್ದರು. ಈ ನಡುವೆ ಪರೀಕ್ಷೆ ಬರೆದು ಪಾಸಾದ ವಿದ್ಯಾರ್ಥಿಗಳೂ ಮರು ಪರೀಕ್ಷೆ ಮಾಡದೇ ನೇಮಕಾತಿ ಮಾಡುವಂತೆ ಮನವಿ ಸಲ್ಲಿಸಲು ಆಗಮಿಸಿದ್ದರು.

ಮುಂಚೆ ಪಿಎಸ್‌ಐ ನೇಮಕಾತಿಯಲ್ಲಿ ಆಗಿರುವ ಹಗರಣದಿಂದ 56 ಸಾವಿರ ಅಭ್ಯರ್ಥಿಗಳಿಗೆ ಅನ್ಯಾಯ ಆಗಿದೆ. ಇದಕ್ಕೆ, ನ್ಯಾಯ ಸಿಗುವಂತೆ ಮಾಡಬೇಕು. ಅಕ್ರಮ ಆಗದಂತೆ ಸೂಕ್ತ ರೀತಿಯಲ್ಲಿ ಮರು ಪರೀಕ್ಷೆ ಕೈಗೊಳ್ಳಬೇಕು ಎಂದು ಪಿಎಸ್‌ಐ ವಂಚಿತ ಅಭ್ಯರ್ಥಿಗಳು ಮನವಿ ಸಲ್ಲಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು, ಅನ್ಯಾಯ ಆಗಿರುವುದು 56 ಸಾವಿರ ಅಭ್ಯರ್ಥಿಗಳಿಗಲ್ಲ. ಪರೀಕ್ಷೆ ಬರೆದು ಪಾಸಾದ 545 ಅಭ್ಯರ್ಥಿಗಳಿಗೆ ಎಂದು ಹೇಳಿದ್ದಾರೆ.

ಈ ಹೇಳಿಕೆಯಿಂದ ಕೆರಳಿದ ಪಿಎಸ್‌ಐ ಅಭ್ಯರ್ಥಿಗಳು ಕುಮಾರಸ್ವಾಮಿ ಅವರ ವಿರುದ್ದವೇ ಪ್ರತಿಭಟನೆ ನಡೆಸಿದ್ದಾರೆ. ಅವರೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ. ಇಷ್ಟಲ್ಲದೆ ಕುಮಾರಸ್ವಾಮಿ ಕವಿವಿಯಿಂದ ಹೊರಡುವಾಗ ಅವರ ಕಾರಿನತ್ತ ನುಗ್ಗಿ, ಮೋದಿ, ಮೋದಿ ಎಂದು ಘೋಷಣೆ ಕೂಗಿದ್ದಾರೆ. ಆಗ ಮಧ್ಯಪ್ರವೇಶಿಸಿದ ಪೊಲೀಸರು ಯುವಕರಿಗೆ ಲಾಠಿ ಚಾರ್ಜ್ ಮಾಡಿದ್ದಾರೆ.

ಉಕ್ರೇನ್-ರಷ್ಯ ಯುದ್ಧವನ್ನ ಭಾರತ ದೂರದಿಂದ ನಿಂತು ನೋಡುತ್ತಿಲ್ಲ-ಜೈಶಂಕರ್

0

ರಷ್ಯಾ ,ಉಕ್ರೇನ್‌ ನಡುವಿನ ಯುದ್ಧದ ವಿಚಾರದಲ್ಲಿ ಭಾರತ ತಳೆದಿರುವ ತಟಸ್ಥ ನಿಲುವಿನ ಬಗ್ಗೆ ಐರೋಪ್ಯ ರಾಷ್ಟ್ರಗಳು ಟೀಕೆ ಮಾಡುತ್ತಿವೆ. ಈ ವಿಚಾರಕ್ಕೆ ಭಾರತದ ವಿದೇಶಾಂಗ ಸಚಿವ ಎಸ್‌. ಜೈ ಶಂಕರ್‌ ಅವರು ತಿರುಗೇಟು ನೀಡಿದ್ದಾರೆ.

ಗ್ಲೋಬ್‌ಸೆಕ್‌ 2022 ಬ್ರಟಿಸ್ಲಾವಾ ಫೋರಂನಲ್ಲಿ ಮಾತನಾಡಿದ ಅವರು, ಯೂರೋಪ್‌ನ ಸಮಸ್ಯೆಗಳು ಇಡೀ ವಿಶ್ವದ ಸಮಸ್ಯೆಗಳು ಎಂಬಂತೆ ಬಿಂಬಿಸುವುದನ್ನು ಮೊದಲು ಬಿಡಿ ಎಂದು ಸಚಿವ ಎಸ್. ಜೈ. ಶಂಕರ್ ಅವರು ಹೇಳಿದ್ದಾರೆ.

ರಷ್ಯಾ, ಉಕ್ರೇನ್‌ ಯುದ್ಧದಲ್ಲಿ ಭಾರತ ದೂರದಲ್ಲಿ ನಿಂತು ನೋಡುತ್ತಿಲ್ಲ. ನಮ್ಮ ನಿಲುವು ಈ ವಿಚಾರದಲ್ಲಿ ತಟಸ್ಥವಾಗಿದೆಯಷ್ಟೇ ಎಂದು ಸ್ಪಷ್ಟ ಪಡಿಸಿದ್ದಾರೆ.

ರಷ್ಯಾದಿಂದ ನಾವು ತೈಲ ಖರೀದಿಸಿದರೆ, ಅದರಿಂದ ಬರುವ ಹಣವನ್ನು ರಷ್ಯಾ ಯುದ್ಧಕ್ಕೆ ಬಳಸುತ್ತದೆಂಬ ಆಪಾದನೆ ಭಾರತದ ಮೇಲಿದೆ. ಆದರೆ, ಐರೋಪ್ಯ ರಾಷ್ಟ್ರಗಳು ರಷ್ಯಾದ ಅಡುಗೆ ಅನಿಲ ಖರೀದಿಸುತ್ತಿಲ್ಲವೇ, ಅದರಿಂದ ಬಂದ ಹಣವು ಯುದ್ಧಕ್ಕೆ ಉಪಯೋಗವಾಗುವುದಿಲ್ಲವೇ ಎಂದು ಜೈ ಶಂಕರ್ ಅವರು ಹೇಳಿದ್ದಾರೆ.

ನಾವು ತೈಲ ಖರೀದಿಸುತ್ತಿರುವುದು ಅದು ಅಗ್ಗದ ದರಕ್ಕೆ ಸಿಗುತ್ತಿದೆ ಎಂಬ ಕಾರಣಕ್ಕೆ. ನಮ್ಮ ಜನರಿಗೆ ಅದರಿಂದ ಒಳಿತಾಗುತ್ತದೆ ಎಂಬ ದೃಷ್ಟಿಯಿಂದ ನಾವು ತೈಲ ಖರೀದಿಸುತ್ತಿದ್ದೇವೆ ಎಂದು ಜೈ ಶಂಕರ್ ಸ್ಪಷ್ಟವಾಗಿ ವಿವರಿಸಿದ್ದಾರೆ.

ಆರ್ ಎಸ್ ಎಸ್ ಒಂದು ದೇಶಭಕ್ತಿ ಸಂಘಟನೆ-ಬೊಮ್ಮಾಯಿ

0

ಆರ್‌ಎಸ್‌ಎಸ್‌ ಒಂದು ದೇಶ ಭಕ್ತಿ ಸಂಘಟನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

ಹುಬ್ಬಳ್ಳಿಯ ಆದರ್ಶನಗರದಲ್ಲಿನ ತಮ್ಮ ನಿವಾಸದಲ್ಲಿ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ಗೆ ಯಾವುದೇ ಸಂಘಟನೆಗೆ ಬದ್ಧತೆ ಇಲ್ಲ. ಆರ್‌ಎಸ್‌ಎಸ್‌ ರಾಷ್ಟ್ರದ ಸಂಘಟನೆ, ದೇಶ ಕಟ್ಟುವ ಕಾರ್ಯದಲ್ಲಿ ತೊಡಗಿಕೊಂಡಿದೆ. ಇಷ್ಟು ವರ್ಷ ಸಾರ್ವಜನಿಕ ಜೀವನದಲ್ಲಿದ್ದವರು ಈ ಬಗ್ಗೆ ತಿಳಿದುಕೊಂಡು ಮಾತನಾಡಬೇಕು ಎಂದು ಬಸವರಾಜ್ ಬೊಮ್ಮಾಯಿ ಅವರು ಹೇಳಿದ್ದಾರೆ.

ಪಿಎಫ್‍ಐ, ಎಸ್‍ಡಿಪಿಐ, ಮುಸ್ಲಿಂ ಲೀಗ್ ಮೇಲೆ ಪ್ರೀತಿ ಬರುತ್ತೆ. ಅವರೆಲ್ಲರೂ ಇವರಿಗೆ ಜಾತ್ಯಾತೀತರಾಗಿ ಕಾಣುತ್ತಾರೆ. ಆದರೆ, ಆರ್‌ಎಸ್‌ಎಸ್‌ ಬಗ್ಗೆ ದ್ವೇಷ ಇಟ್ಟುಕೊಳ್ಳಬಾರದು. ಅವರು ಆರ್‌ಎಸ್‌ಎಸ್‌ ಅನ್ನು ಅರ್ಥ ಮಾಡಿಕೊಳ್ಳಬೇಕು. ಆಗ, ಅವರಿಗೆ ದೇಶ ಭಕ್ತಿ ಅಂದರೆ ಏನು ಅಂತಾ ಗೊತ್ತಾಗುತ್ತದೆ. ದೇಶದಲ್ಲಿ ಅನೇಕ ಜನಪರ ಕಾರ್ಯಗಳನ್ನು ಮಾಡಿದ್ದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಹೇಳಿದ್ದಾರೆ.

ಶ್ರೀರಾಘವೇಶ್ವರ ಶ್ರೀಗಳು ಗೋರಕ್ಷಣೆಯನ್ನ ತಪಸ್ಸಿನ ರೀತಿ ಮಾಡಿದ್ದಾರೆ ಸಂಸದ ರಾಘವೇಂದ್ರ

0

ಹೊಸನಗರ, ರಾಘವೇಶ್ವರ ಭಾರತೀ ಮಹಾ ಸ್ವಾಮೀಜಿಯವರ ನೇತೃತ್ವದಲ್ಲಿ ಗೋ ಸೇವೆ, ಜಾಗೃತಿ ಹಾಗೂ ಗೋ ಸಂರಕ್ಷಣೆಯನ್ನು ತಪಸ್ಸಿನ ರೀತಿಯಲ್ಲಿ ಮಾಡಿದ್ದಾರೆ.
ನಮ್ಮ ರಾಜ್ಯ ಸರ್ಕಾರವೂ ಸಹ ಗೋವಿನ ರಕ್ಷಣೆಗೆ ಬದ್ದವಾಗಿದೆ, ಮತ್ತು ಈ ಗೋವಿನ ಹತ್ಯೆ ಮಾಡುವವರ ವಿರುದ್ಧ ಕಠಿಣ ಕಾನೂನಿನ ಕ್ರಮವನ್ನು ಜರುಗಿಸುತ್ತಿದೆ ಎಂದು ಸಂಸದರಾದ ಬಿ. ವೈ ರಾಘವೇಂದ್ರ ಅವರು ತಿಳಿಸಿದ್ದಾರೆ.

ಈ ಪುಣ್ಯ ಕ್ಷೇತ್ರದಲ್ಲಿ ಅತ್ಯಂತ ಸುಂದರವಾಗಿ ವಾಸ್ತು ಶಿಲ್ಪದ ಮೂಲಕ ನಿರ್ಮಾಣವಾಗಿರುವ ಶ್ರೀ ಚಂದ್ರಮೌಳೀಶ್ವರ ದೇವರ ಭವ್ಯ ದೇವಾಲಯ ನಿರ್ಮಾಣವಾಗಿ ಇಂದು ಧ್ವಜ ಸ್ತoಭದ ಪ್ರತೀಷ್ಠಾಪನ ಕಾರ್ಯವಾಗಿದೆ. ಮುಂದಿನ ದಿನದಲ್ಲಿ ಸುಕ್ಷೇತ್ರವಾಗಿ ಹೊರಹೊಮ್ಮಲಿದೆ. ಇಲ್ಲಿ ಸೇವೆ ಸಲ್ಲಿಸುವ ಅವಕಾಶ ನನಗೆ ಕಲ್ಪಿಸಿದ ಇಲ್ಲಿನ ಜನರಿಗೆ ಮತ್ತು ಶ್ರೀಗಳಿಗೆ ನನ್ನ ನಮನಗಳು ಹೊಸನಗರ ತಾಲೂಕಿನ ಶ್ರೀ ರಾಮಚಂದ್ರಾ ಪುರಮಠದ ಶ್ರೀ ಚಂದ್ರಮೌಳೀಶ್ವರ ದೇವಾಲಯದ ಶ್ರೀದೇವರ ಧ್ವಜ ಸ್ತoಭ ಪ್ರತೀಷ್ಠಾ ಕಾರ್ಯಕ್ರಮದಲ್ಲಿ ಸಂಸದರಾದ ಬಿ. ವೈ. ರಾಘವೇಂದ್ರ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಹೊರನಾಡು ಕ್ಷೇತ್ರದ ಧರ್ಮದರ್ಶಿಗಳಾದ ಡಾ.ಭೀಮೇಶ್ವರ ಜೋಶಿ ಅವರು, ಶಾಸಕರಾದ ಹರತಾಳು ಹಾಲಪ್ಪ ,ಸಿಗಂದೂರು ಪ್ರಧಾನ ಅರ್ಚಕರಾದ ಶೇಷಗಿರಿ ಭಟ್, ಹಟ್ಟಿಅಂಗಡಿಯ ಪ್ರಧಾನ ಅರ್ಚಕರಾದ ಬಾಲಚಂದ್ರ ಭಟ್ ,ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಗುರುಮೂರ್ತಿ, ಆರ್. ಎಸ್ ಹೆಗಡೆ, ಪ್ರಭಾಕರ್ ವಿಷ್ಣು ,ಕುಚುಕಾಡು ಮತ್ತಿತರರು ಉಪಸ್ಥಿತರಿದ್ದರು

ನೈನಿತಾಲ್ ನಲ್ಲಿ ಏಷಿಯಾದ ಬೃಹತ್ದೂರದರ್ಶಕ ಸ್ಥಾಪನೆ

0

ಸೂಪರ್ನೋವಾ, ಬಾಹ್ಯಾಕಾಶ ಅವಶೇಷಗಳು, ಕ್ಷುದ್ರಗ್ರಹಗಳು ಹಾಗೂ ಇತರ ಆಕಾಶ ವಸ್ತುಗಳನ್ನು ವೀಕ್ಷಿಸಲು ಭಾರತವು ತನ್ನ ಮೊದಲ ಲಿಕ್ವಿಡ್ ಮಿರರ್ ಟೆಲಿಸ್ಕೋಪ್ ಅನ್ನು ಉತ್ತರಾಖಂಡದಲ್ಲಿ ಸ್ಥಾಪಿಸಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.

ಇದು ಏಷ್ಯಾದ ಅತಿ ದೊಡ್ಡ ದೂರದರ್ಶಕವಾಗಿದೆ.

ಭಾರತ, ಬೆಲ್ಜಿಯಂ ಮತ್ತು ಕೆನಡಾದ ಖಗೋಳಶಾಸ್ತ್ರಜ್ಞರು ಜಂಟಿಯಾಗಿ ಇದನ್ನು ನಿರ್ಮಿಸಿದ್ದಾರೆ. ಇದು ಉತ್ತರಾಖಂಡದ ನೈನಿತಾಲ್‌ನ ದೇವಸ್ಥಾಲ್ ವೀಕ್ಷಣಾಲಯದಲ್ಲಿ 2,450 ಮೀಟರ್ ಎತ್ತರದಲ್ಲಿದೆ.

ಹಳ್ಳಿಯ ಸ್ಥಳೀಯನಾಗಿ ನಿಮ್ಮ ಸ್ವಾಗತಕ್ಕೆ ಬಂದಿದ್ದೇನೆ-ರಾಷ್ಟ್ರಪತಿ ರಾಮನಾಥ್ ಕೋವಿಂದ್

0

ವಂಶಾಡಳಿತದ ರಾಜಕೀಯದ ಬಗ್ಗೆ ಮೋದಿ ಹೇಳಿಕೆಗಳನ್ನು ಜನರು ಸಾಮಾನ್ಯವಾಗಿ ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. ಹಾಗೂ ಪರಿವಾರ ವಾದದ ಬಗ್ಗೆ ನನ್ನ ಟೀಕೆ ಯಾವುದೇ ಪಕ್ಷ ಅಥವಾ ವ್ಯಕ್ತಿಯನ್ನು ಗುರಿಯಾಗಿಸಿಕೊಂಡಿಲ್ಲ ಎಂದು ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಪ್ರಬಲ ಪ್ರತಿಪಕ್ಷದ ಪರವಾಗಿದ್ದಾರೆ. ಆದರೆ ವಂಶಾಡಳಿತದ ರಾಜಕೀಯವನ್ನು ಕಟುವಾಗಿ ಟೀಕಿಸಿದ್ದು, ಅದು ಪ್ರತಿಭೆಯನ್ನು ಕೊಲ್ಲುತ್ತದೆ ಎಂದು ಹೇಳಿದ್ದಾರೆ.

ವಂಶಾಡಳಿತದ ರಾಜಕೀಯದ ಬಗ್ಗೆ ಮೋದಿ ಹೇಳಿಕೆಗಳನ್ನು ಜನರು ಸಾಮಾನ್ಯವಾಗಿ ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. ಪರಿವಾರವಾದ ಬಗ್ಗೆ ಅವರ ಟೀಕೆ ಯಾವುದೇ ಪಕ್ಷ ಅಥವಾ ವ್ಯಕ್ತಿಯನ್ನು ಗುರಿಯಾಗಿಸಿಕೊಂಡಿಲ್ಲ. ನಾನು ಯಾವುದೇ ರಾಜಕೀಯ ಪಕ್ಷ ಅಥವಾ ವ್ಯಕ್ತಿಯ ಬಗ್ಗೆ ಮಾತನಾಡುತ್ತಿಲ್ಲ. ಪರಿವಾರದ ನನ್ನ ವ್ಯಾಖ್ಯಾನಕ್ಕೆ ಸರಿ ಹೊಂದುವ ಜನರು ನನ್ನ ಮೇಲೆ ಕೋಪಗೊಂಡಿರುವುದನ್ನು ನಾನು ನೋಡುತ್ತೇನೆ. ಈ ವಂಶಾಡಳಿತ ಆಡಳಿತಗಾರರು ದೇಶದಾದ್ಯಂತ ನನ್ನ ವಿರುದ್ಧ ಒಂದಾಗುತ್ತಿದ್ದಾರೆ. ದೇಶದ ಯುವಕರು ಮೋದಿಯನ್ನು ಏಕೆ ಗಂಭೀರವಾಗಿ ಪರಿಗಣಿಸುತ್ತಿದ್ದಾರೆ ಎಂದು ಅವರು ಕೋಪಗೊಂಡಿದ್ದಾರೆ ಎಂದು ಮೋದಿ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ನನ್ನ ಹೇಳಿಕೆಯನ್ನು ಜನರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ನಾನು ನಿಮಗೆ ಹೇಳಲೇಬೇಕು. ದೇಶದಲ್ಲಿ ಪ್ರಬಲ ಪ್ರತಿಪಕ್ಷ ಇರಬೇಕು ಮತ್ತು ರಾಜಕೀಯ ಪಕ್ಷಗಳು ವಂಶಾಡಳಿತ ರಾಜಕಾರಣದಿಂದ ಹೊರಬರಬೇಕು ಎಂದು ನಾನು ಬಯಸುತ್ತೇನೆ. ಇದು ದೇಶದಲ್ಲಿ ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ. ಹಾಗೂ ಯುವಕರು ರಾಜಕೀಯದಲ್ಲಿ ಹೆಚ್ಚಿನ ಅವಕಾಶಗಳನ್ನು ಪಡೆಯುತ್ತಾರೆ. ಆದರೆ, ನಾನು ರಾಜವಂಶದ ರಾಜಕೀಯ ಪಕ್ಷಗಳಿಂದ ಬಹಳಷ್ಟು ನಿರೀಕ್ಷಿಸುತ್ತಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ದೆಹಲಿಯ ಕಾನ್ಪುರ ದೇಹತ್ ಜಿಲ್ಲೆಯ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಪೂರ್ವಜರ ಪರೌಂಖ್ ಗ್ರಾಮದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ತಮ್ಮ ಗ್ರಾಮಕ್ಕೆ ಭೇಟಿ ನೀಡಿರುವ ರಾಷ್ಟ್ರಪತಿ ಕೋವಿಂದ್ ಅವರು ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ಕಾನ್ಪುರ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ನನ್ನನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ಬಂದಿದ್ದಕ್ಕೆ ನನಗೆ ನಾಚಿಕೆಯಾಯಿತು. ನಾನು ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತೇವೆ. ನಾನು ಈ ಬಗ್ಗೆ ಕೇಳಿದಾಗ, ‘ನಾನು ದೇಶದ ರಾಷ್ಟ್ರಪತಿಯಾಗಿ ಅಲ್ಲ, ನನ್ನ ಮೌಲ್ಯಗಳ ಪ್ರಕಾರ ಹಳ್ಳಿಯ ಸ್ಥಳೀಯನಾಗಿ ನಿಮ್ಮನ್ನು ಸ್ವಾಗತಿಸಲು ಬಂದಿದ್ದೇನೆ’ ಎಂದು ರಾಷ್ಟ್ರಪತಿ ಉತ್ತರಿಸಿದರು ಎಂದು ಮೋದಿ ಹೇಳಿದರು.

ಕೊರೋನ ಸೋಂಕು:ಮಾರ್ಗಸೂಚಿ ಅನುಸರಿಸಲು ರಾಜ್ಯಕ್ಕೆ ಕೇಂದ್ರದಿಂದ ಪತ್ರ

0

ಕಳೆದ ಒಂದು ವಾರದಿಂದ ಕೊರೋನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.ಕೊರೋನಾ ಸೋಂಕು ಹರಡದಂತೆ ತೀವ್ರ ನಿಗಾ ವಹಿಸಲು ಕರ್ನಾಟಕ, ತಮಿಳುನಾಡು, ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಎಚ್ಚರಿಕೆಯನ್ನು ನೀಡಿದೆ.

ಸೋಂಕು ಹರಡದಂತೆ ಸಂಬಂಧಪಟ್ಟ ರಾಜ್ಯಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ಮುಂಬೈ ಉಪನಗರ ಸೇರಿದಂತೆ ಮಹಾರಾಷ್ಟ್ರದ 6 ಜಿಲ್ಲೆಗಳಲ್ಲಿ ಸೋಂಕು ಗಣನೀಯವಾಗಿ ಏರಿಕೆಯಾಗಿದೆ. ಮೇ 27ರಿಂದ ಜೂನ್‌ 2ರ ಅವಧಿಯಲ್ಲಿ 2,330 ಹೊಸ ಪ್ರಕರಣಗಳು ವರದಿಯಾಗಿದೆ.

ಮುಂಬೈ, ಠಾಣೆ, ರಾಯಗಡದಲ್ಲಿ ಕಳೆದ ವಾರಕ್ಕೆ ಹೋಲಿಸಿದರೆ ಪ್ರಕರಣಗಳ ಸಂಖ್ಯೆ ದುಪ್ಪಟ್ಟು ಏರಿಕೆಯಾಗಿದೆ.

ಬೆಂಗಳೂರು ನಗರದಲ್ಲಿ ವಾರದಲ್ಲಿ 1,063 ಪ್ರಕರಣಗಳು ವರದಿಯಾಗಿದೆ. ಪಾಸಿಟಿವಿಟಿ ದರ ಶೇ 1.84ರಷ್ಟಿದೆ. ಚೆನ್ನೈ, ಚೆಂಗಲ್ಪಟ್ಟು ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಶೇ 3ರಷ್ಟಿದೆ. ಕೇರಳದಲ್ಲೂ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ವಾರದಲ್ಲಿ 6,556 ಪ್ರಕರಣ ವರದಿಯಾಗಿದೆ.

ಕೊರೋನಾ ಪರೀಕ್ಷೆ, ಲಸಿಕೆ ಸೇರಿದಂತೆ ಸಚಿವಾಲಯ ಹೊರಡಿಸಿರುವ ಮಾರ್ಗಸೂಚಿ ಅನುಸರಿಬೇಕು ಎಂದು ಆರೋಗ್ಯ ಸಚಿವಾಲಯ ಸೂಚನೆ ನೀಡಿದೆ.