Friday, March 6, 2026
Friday, March 6, 2026
Home Blog Page 1543

ಹಜ್ ಯಾತ್ರಿಗಳ ಮೊದಲ ತಂಡದ ವಿಮಾನಕ್ಕೆ ಬೊಮ್ಮಾಯಿ ಚಾಲನೆ

0

ಇಂದಿನಿಂದ ಹಜ್ ಯಾತ್ರೆ ಪ್ರಾರಂಭವಾಗಲಿದ್ದು, ಇಂದು ಬೆಂಗಳೂರಿನಿಂದ ತೆರಳುವ ಮೊದಲ ವಿಮಾನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ.

ಬೆಂಗಳೂರಿನ ಹೆಗಡೆನಗರದಲ್ಲಿರುವ ಹಜ್ ಭವನದಲ್ಲಿ ಸಮಾರಂಭ ನಡೆಯಲಿದೆ. ಮೊದಲ ವಿಮಾನದ ಮೂಲಕ 450 ಜನರು ಹಜ್ ಯಾತ್ರೆಗೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ.

ಕಾರ್ಯಕ್ರಮದಲ್ಲಿ ವಕ್ಫ್ ಮಂಡಳಿ ಅಧ್ಯಕ್ಷ ಮೌಲಾನಾ ಶಾಫಿ ಸಅದಿ,ಹಜ್ ಸಮಿತಿ ಅಧ್ಯಕ್ಷ ವೋಫುದ್ದೀನ್ ಕಚೇರಿವಾಲೆ, ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್, ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ. ಖಾದರ್ ಸೇರಿದಂತೆ ಹಲವು ಮುಸ್ಲಿಂ ನಾಯಕರು ಭಾಗಿಯಾಗಲಿದ್ದಾರೆ.

ಹಳೆಯ ಪಠ್ಯಪುಸ್ತಕ ಇರಲಿ: ವಿಧಾನ ಸೌಧದ ಬಳಿ ಕಾಂಗ್ರೆಸ್ ಪ್ರತಿಭಟನೆ

0

ತೀವ್ರ ವಿವಾದಕ್ಕೆ ಕಾರಣವಾಗಿರುವ ಪಠ್ಯ ಪುಸ್ತಕ ಪರಿಷ್ಕರಣೆ ರದ್ದುಗೊಳಿಸುವಂತೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ವಿಧಾನಸೌಧದ ಬಳಿ ಪ್ರತಿಭಟನೆ ನಡೆಸಿದ್ದಾರೆ.

ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿರುವ ಕಾಂಗ್ರೆಸ್ ನಾಯಕರು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ್ದಾರೆ.

ಪಠ್ಯ ಪುಸ್ತಕದಲ್ಲಿ ಮಹನೀಯರಿಗೆ ಅವಮಾನ ಮಾಡಲಾಗಿದೆ. ನಾರಾಯಣಗುರು, ಅಂಬೇಡ್ಕರ್, ಬಸವಣ್ಣ, ಕುವೆಂಪು ಸೇರಿದಂತೆ ಹಲವು ಮಹಾನ್ ನಾಯಕರ ಕುರಿತ ಮಾಹಿತಿ ಮೊಟಕುಗೊಳಿಸಲಾಗಿದೆ. ಅನಗತ್ಯ ವಿಚಾರಗಳನ್ನು ಸೇರಿಸಿ ಮಕ್ಕಳಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡಲಾಗುತ್ತಿದೆ. ಹೊಸ ಪಠ್ಯ ಪುಸ್ತಕ ಕೈಬಿಟ್ಟು ಹಳೆಯ ಪಠ್ಯವನ್ನೇ ಮುಂದುವರೆಸಬೇಕು ಎಂದು ಒತ್ತಾಯಿಸಿದ್ದಾರೆ

ರಿಷಭ್ ಪಂತ್ ದ.ಆಫ್ರಿಕಾ ವಿರುದ್ಧ ಟಿ20 ಟೀಮ್ ಇಂಡಿಯಾ ನಾಯಕ

0

ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟಿ20 ಪಂದ್ಯ ಆರಂಭಕ್ಕೆ 24 ಗಂಟೆ ಬಾಕಿ ಇದೆ. ಟೀಂ ಇಂಡಿಯಾದಿಂದ ಹೊರಬಿದ್ದ ನಾಯಕ ಕೆ.ಎಲ್ ರಾಹುಲ್ ಬದಲಿಗೆ ರಿಷಭ್ ಪಂತ್ ನಾಯಕನಾಗಿ ಆಯ್ಕೆಯಾಗಿದ್ದಾರೆ.

ಆದರೆ, ನಿನ್ನೆ ಬುಧವಾರ ಸಂಜೆ ಟೀಂ ಇಂಡಿಯಾ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಅವರು, ಇನ್ನು ಕೆಲವೇ ನಿಮಿಷಗಳು ಬಾಕಿ ಇರುವಂತೆ ಪಂತ್ ನಾಯಕನಾಗಿ ಆಯ್ಕೆಯಾಗಿದ್ದರ ಕುರಿತು ಆಘಾತಗೊಂಡ ರಿಷಭ್, ಅದರಿಂದ ಹೊರಬರಲು ಸ್ವಲ್ಪ ಸಮಯವೇ ಆಗಿತೆಂದು ನಾಯಕಾಗಿ ಆಯ್ಕೆಯಾಗಿ ತನ್ನ ಮೊದಲ ಪ್ರತಿಕ್ರಿಯೆಯಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ನಾನು ಟೀಮ್ ಇಂಡಿಯಾವನ್ನು ಮುನ್ನಡೆಸುತ್ತೇವೆ ಎಂಬ ಅಂಶವನ್ನು ಜೀರ್ಣಿಸಿಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ ಎಂದು ರಿಷಬ್ ಪಂತ್ ಅವರು ಹೇಳಿಕೊಂಡಿದ್ದಾರೆ.

ನನಗೆ ಅದನ್ನು ಇನ್ನೂ ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಒಂದು ಗಂಟೆಯ ಹಿಂದೆ ನನಗೆ ಗೊತ್ತಾಯಿತು ಎಂದು ರಿಷಬ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಇದು ತುಂಬಾ ಒಳ್ಳೆಯ ಭಾವನೆ, ಆದರೆ, ತುಂಬಾ ಒಳ್ಳೆಯ ಸಂದರ್ಭಗಳಲ್ಲಿ ಬಂದಿಲ್ಲ. ಆದರೂ, ಕೂಡ ಅದೇ ಸಮಯದಲ್ಲಿ ನನಗೆ ಸಂತೋಷವಾಗಿದೆ. ಭಾರತ ತಂಡವನ್ನು ಮುನ್ನಡೆಸಲು ನನಗೆ ಈ ಅವಕಾಶವನ್ನು ನೀಡಿದ್ದಕ್ಕಾಗಿ ನಾನು ಬಿಸಿಸಿಐಗೆ ಧನ್ಯವಾದ ಹೇಳಲು ಬಯಸುತ್ತೇನೆ. ನನ್ನ ಕ್ರಿಕೆಟ್ ವೃತ್ತಿಜೀವನದ ಏರಿಳಿತದ ನನ್ನ ಪ್ರಯಾಣದಲ್ಲಿ ನನ್ನನ್ನು ಬೆಂಬಲಿಸಿದ್ದಕ್ಕಾಗಿ ಎಲ್ಲಾ ಹಿತೈಷಿಗಳಿಗೆ ಧನ್ಯವಾದಗಳು ಎಂದು ರಿಷಭ್ ಪಂತ್ ಅವರು ಹೇಳಿದ್ದಾರೆ.

ನಾಯಕನಾಗಿ, ಇದು ನನಗೆ ಬಹಳಷ್ಟು ಸಹಾಯ ಮಾಡುತ್ತದೆ. ಏಕೆಂದರೆ ನೀವು ಮತ್ತೆ ಮತ್ತೆ ಅದೇ ಕೆಲಸವನ್ನು ಮಾಡುತ್ತಿರುವಾಗ ನೀವು ಸುಧಾರಿಸುತ್ತೀರಿ. ನಾನು ತಪ್ಪುಗಳಿಂದ ಕಲಿಯುತ್ತಲೇ ಇರುವ ವ್ಯಕ್ತಿ ಮತ್ತು ಮುಂದಿನ ದಿನಗಳಲ್ಲಿ ಅದು ನನಗೆ ಸಹಾಯಕ ಎಂದು ನಾನು ಭಾವಿಸುತ್ತೇನೆ ಅಂತ ತಮ್ಮ ಸಂತೋಷದ ವಿಚಾರವನ್ನು ಹಂಚಿಕೊಂಡಿದ್ದಾರೆ.

ವಾಹನಗಳಲ್ಲಿ ಲೌಡ್ ಸ್ಪೀಕರ್ ಹಾವಳಿ: ಕೇರಳ ಹೈಕೋರ್ಟ್ ನಿರ್ಧಾರ

0

ವಾಹನಗಳಲ್ಲಿ ಲೌಡ್ ಸ್ಪೀಕರ್, ವೂಫರ್, ಡಿಜೆ ,ವಿಚಿತ್ರ ಶಬ್ದದ ಹಾರ್ನ್ ಬಳಕೆ ಕುರಿತಂತೆ ಕೇರಳ ಹೈಕೋರ್ಟ್ ಒಂದು ಮಹತ್ವದ ನಿರ್ಧಾರವನ್ನು ನೀಡಿದೆ.

ಅದೇನು ಅಂದರೆ, ಇವುಗಳ ಬಳಕೆಯಿಂದ ರಸ್ತೆಯಲ್ಲಿನ ಇತರೆ ಪ್ರಯಾಣಿಕರು, ವಾಹನಗಳ ಚಾಲಕರ ಏಕಾಗ್ರತೆಗೆ ಧಕ್ಕೆ ತರುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.

ಹೆಚ್ಚಾಗುತ್ತಿರುವ ರಸ್ತೆ ಅಪಘಾತಗಳ ಸಂಬಂಧ ಸ್ವಯಂ ಪ್ರೇರಿತ ವಿಚಾರಣೆ ನಡೆಸಿದ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಬೂಸ್ಟರ್ ಆಂಪ್ಲಿಫೈಯರ್, ವೂಫರ್ ಬಳಕೆಯು ಶಬ್ದ ಮಾಲಿನ್ಯ ತಡೆ ನಿಯಮಗಳನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಹೇಳಿದೆ.

ಆದ್ದರಿಂದ, ಸಾರಿಗೆ ಪ್ರಾಧಿಕಾರದ ಅಧಿಕಾರಿಗಳು, ಇವುಗಳನ್ನು ಅಳವಡಿಸಿಕೊಂಡು ಸಂಚಾರ ಮಾಡುವ ವಾಹನ ಚಾಲಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಫಿಟ್ನೆಸ್ ಪ್ರಮಾಣಪತ್ರವನ್ನು ರದ್ದುಗೊಳಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದೆ.

ಆಗಸ್ಟ್ ಮೊದಲ ವಾರದಲ್ಲಿ ಭಾರತ್ ಗೌರವ್ ರೈಲು ಸಂಚಾರ

0

ಆಗಸ್ಟ್‌ ತಿಂಗಳ ಮೊದಲ ವಾರದಲ್ಲಿ ರಾಜ್ಯದ ಮೊದಲ ಭಾರತ್‌ ಗೌರವ್‌ ರೈಲು ಬೆಂಗಳೂರು, ಕಾಶಿ ನಡುವೆ ರೈಲು ಸಂಚಾರ ಆರಂಭವಾಗಲಿದೆ.

ಧಾರ್ಮಿಕ ದತ್ತಿ ಇಲಾಖೆ ಮಾಲಿಕತ್ವದಲ್ಲಿ ಸಂಚರಿಸಲಿದೆ. ಯಾತ್ರಾರ್ಥಿಗಳು ಕಡಿಮೆ ಖರ್ಚಿನಲ್ಲಿ ಕಾಶಿಯಾತ್ರೆ ಕೈಗೊಳ್ಳಬಹುದಾಗಿದೆ. ವಿಶೇಷ ಎಂದರೆ ಈ ಯಾತ್ರೆಗೆ ರಾಜ್ಯ ಸರಕಾರ ಯಾತ್ರಾರ್ಥಿಗಳಿಗೆ ಬಜೆಟ್‌ನಲ್ಲಿ ತಲಾ .5 ಸಾವಿರ ಸಹಾಯಧನ ನೀಡುವ ಯೋಜನೆಯನ್ನು ಘೋಷಿಸಿದೆ.

ಕೇಂದ್ರ ಸರ್ಕಾರದ ಭಾರತ್‌ ಗೌರವ್‌ ರೈಲು ಯೋಜನೆಯನ್ನು ಬಳಸಿಕೊಂಡು ಧಾರ್ಮಿಕ ದತ್ತಿ ಇಲಾಖೆ ಕಾಶಿಯಾತ್ರೆ ಯೋಜನೆ ಅನುಷ್ಠಾನಕ್ಕೆ ನಿರ್ಧರಿಸಿದೆ. ಇದಕ್ಕಾಗಿ ಕಳೆದ ವಾರ ನೈಋುತ್ಯ ರೈಲ್ವೆಯಲ್ಲಿ ನೋಂದಣಿ ಮಾಡಿಕೊಂಡಿತ್ತು. ಸದ್ಯ 2 ಇಲಾಖೆಗಳ ಹಿರಿಯ ಅಧಿಕಾರಿಗಳ ಸಭೆ ನಡೆಸಿ ರೈಲು ಬೋಗಿಗಳು, ಆಂತರಿಕ ಸೌಲಭ್ಯಗಳು, ವೇಳಾಪಟ್ಟಿ, ಮಾರ್ಗ, ಓಡಾಟ ವೆಚ್ಚದ ಕುರಿತು ಚರ್ಚಿಸಿದ್ದು ಯೋಜನೆ ಮೊದಲ ಪ್ರವಾಸವನ್ನು ಆಗಸ್ಟ್‌ ಮೊದಲ ವಾರ ಕೈಗೊಳ್ಳಲು ನಿರ್ಧರಿಸಲಾಗಿದೆ.

7 ದಿನಗಳ ಪ್ರವಾಸ ಇದಾಗಿದೆ. ಕಾಶಿ, ಅಯೋಧ್ಯೆ ಮತ್ತು ಪ್ರಯಾಗ ಧಾರ್ಮಿಕ ಸ್ಥಳಗಳ ದರ್ಶನ ಒಳಗೊಂಡಿದೆ. ರೈಲ್ವೆ ನಿಲ್ದಾಣ ನಂತರ ಯಾತ್ರಿ ಸ್ಥಳಗಳಲ್ಲಿ ಆಹಾರ, ವಸತಿ ಮತ್ತು ಸ್ಥಳೀಯ ಸಾರಿಗೆ ಅಗತ್ಯಗಳನ್ನು ಐಆರ್‌ಸಿಟಿಸಿ ನೋಡಿಕೊಳ್ಳಲಿದೆ. ಕಾಶಿಯಾತ್ರೆ ಯೋಜನೆ ಅರ್ಹ ಫಲಾನುಭವಿಗಳು ಹಾಗೂ ಇತರೆ ಯಾತ್ರಿಗಳ ನೋಂದಣಿ ಪ್ರಕ್ರಿಯೆ ಧಾರ್ಮಿಕ ದತ್ತಿ ಇಲಾಖೆ ಶೀಘ್ರದಲ್ಲಿಯೇ ಆರಂಭಿಸುವ ಸಾಧ್ಯತೆಗಳಿವೆ. ದೇಗುಲ ಪ್ರವಾಸೋದ್ಯಮವನ್ನು ಉತ್ತೇಜಿಸಲು ಮತ್ತು ಪ್ರಧಾನಿ ಮೋದಿಯವರ ದಿವ್ಯ ಕಾಶಿ, ಭವ್ಯ ಕಾಶಿ ಅಭಿಯಾನವನ್ನು ಉತ್ತೇಜಿಸಲು ಕರ್ನಾಟಕದ ಜನರಿಗೆ ಈ ವಿಶೇಷ ರೈಲು ಸೇವೆಯನ್ನು ಪ್ರಾರಂಭಿಸಲಾಗುತ್ತಿದೆ.

ಪಠ್ಯ ಪುಸ್ತಕ ವಿಚಾರದಲ್ಲಿ ತಪ್ಪಾಗಿದ್ದರೆ ತಿದ್ದಿಕೊಳ್ಳುತ್ತೇವೆ-ನಾಗೇಶ್

0

ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ತಪ್ಪಾಗಿದ್ದರೆ ತಿದ್ದಿಕೊಳ್ಳುತ್ತೇವೆ. ಪರಿಷ್ಕರಣೆ ಮಾಡುವಾಗ ದೊಡ್ಡ ತಪ್ಪು ಮಾಡಬಾರದು. ಇಂತಹ ಒಂದು ಜವಾಬ್ದಾರಿ ಸಿಕ್ಕಾಗ ಜಾಗರೂಕತೆಯಾಗಿ ಇರಬೇಕು. ಆದರೆ, ತಪ್ಪು ಆಗಿದ್ದನ್ನು ನಾವು ಗಮನಿಸಿ ಅದನ್ನು ಮರು ಪರಿಷ್ಕರಣೆಗೆ ಮುಂದಾಗಿದ್ದೇವೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಹೇಳಿದ್ದಾರೆ.

ಧಾರವಾಡದಲ್ಲಿ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಅವರು, ಬಸವಣ್ಣನ ಪಠ್ಯದಲ್ಲಿ ಅನೇಕ ಹೊಸ ವಿಚಾರದಲ್ಲಿ ಲೋಪದೋಷಗಳನ್ನು ಯಾರೇ ಕಂಡು ಹಿಡಿದರೂ ಅದನ್ನು ಸರಿ ಮಾಡುತ್ತೇವೆ. ಯಾವುದೇ ತಪ್ಪನ್ನು ಮುಚ್ಚಿಡುವುದು ನಾವು ಮಾಡುತ್ತಿಲ್ಲ. ವಾದ ವಿವಾದ ಮಕ್ಕಳ ಮೇಲೆ ಪರಿಣಾಮ ಬಿರಬಾರದು. ಆದ್ದರಿಂದ, ಅದನ್ನು ಸರಿ ಮಾಡುವ ಪ್ರಯತ್ನ ಮಾಡುತ್ತಿದ್ದೇವೆ. 84% ರಷ್ಟು ಬಿಇಓ ಕಚೇರಿ ಸೇರಿದೆ.

ಇನ್ನೊಂದು ತಿಂಗಳಲ್ಲಿ ಎಲ್ಲ ಪುಸ್ತಕ ಕೊಡುವ ಹಾಗಾಗುತ್ತದೆ ಎಂದು ತಮ್ಮ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಈ ಬಾರಿ ಅತಿಥಿ ಶಿಕ್ಷಕರನ್ನು ಶಿಕ್ಷಕರನ್ನಾಗಿ ತೆಗೆದುಕೊಳ್ಳುತ್ತಿದ್ದೇವೆ. ಬಿಜೆಪಿ ಸರ್ಕಾರದಲ್ಲಿ 27 ಸಾವಿರ ಅತಿಥಿ ಶಿಕ್ಷಕರನ್ನು ತೆಗೆದುಕೊಂಡಿದ್ದೇವ. ಮುಂಬರೋ ದಿನಗಲ್ಲಿ ಸೈಕಲ್ ವಿತರಣೆಯನ್ನು ಸಹ ಮಾಡುವ ವಿಚಾರ ಇದೆ ಸಾಹಿತಿಗಳನ್ನು ಯಾವುದೇ ರೀತಿಯಲ್ಲಿ ಕಡೆಗಣಿಸಿಲ್ಲ. ಮಹಾರಾಜರನ್ನು ತೆಗೆದು ಟಿಪ್ಪು ಸುಲ್ತಾನ್‌ ನನ್ನು ತರಲಾಗಿತ್ತು. ಹಿಂದೂ ಸಂಸ್ಕೃತಿ ಕಿತ್ತುಹಾಕಿ ನೆಹರೂ ಪಾಠ ತರಲಾಗಿತ್ತು. ಇಸ್ಲಾಂ ಮತ್ತು ಕ್ರೈಸ್ತರನ್ನ ಮಾತ್ರ ಪುಸ್ತಕದಲ್ಲಿ ತರಲಾಗಿತ್ತುವ. ಇಂತಹ 100 ಉದಾಹರಣೆಗಳು ಇವೆ ಎಂದು ಬಿ.ಸಿ. ನಾಗೇಶ್ ಅವರು ಹೇಳಿದ್ದಾರೆ.

ದೇಶದಲ್ಲಿ ಮತ್ತೆ ಆತಂಕ ಹುಟ್ಟಿಸಿದ ಕೊರೋನ ಸೋಂಕು

0

ದೇಶದಲ್ಲಿ ಕೊರೋನಾ ಸೋಂಕು ಸಂಖ್ಯೆಯಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಕಳೆದ 24 ಗಂಟೆಯಲ್ಲಿ 7,240 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.

ಕಳೆದ 24 ಗಂಟೆಗಳಲ್ಲಿ ಕೊರೋನಾ ಸೋಂಕಿನಿಂದ 8 ಜನರು ಸಾವನ್ನಪ್ಪಿದ್ದಾರೆ.ಇದುವರೆಗೆ ಕೊರೋನಾ ಸೋಂಕಿನ ಸಂಖ್ಯೆ 5,24,723 ಕ್ಕೆ ಹೆಚ್ಚಳವಾಗಿದೆ.

ಕತ್ತೆ ನಿನಗೆ ಸಾಟಿಯಿಲ್ಲ

0

ಕತ್ತೆ ಕಾಯೋಕೆ ಹೋಗ್ “ಅಂತ ಬೈಯೋದನ್ನ ನಾವು ಕೇಳಿದೀವಿ. ಹಾಗಂತ ಯಾರೂ ತಕ್ಷಣ ಅದನ್ನ ಆಜ್ಞೆ ಅಂತ ಪಾಲಿಸೋದಿಲ್ಲ!. ಬದಲಾಗಿ ಕೋಪದಿಂದ ಎರಡೇಟು ಬಿಗಿದೇ ಬರೋದು. ಪಾಪ ! ಕತ್ತೇದು ತಪ್ಪಲ್ಲ..ಅದರ ಜನ್ಮದ ಬಗ್ಗೆಯೂ ಅವಹೇಳನವಲ್ಲ.

ಈಗ ಅದಕ್ಕೆ ಮನುಷ್ಯರಿಗಿಂತ ಬೆಲೆ ಬರುವ ಕಾಲ ಸನ್ನಿಹಿತವಾಗಿದೆ. ಹಾಗಂತ ಹೇಳಿದ್ರೆ ನಿಮಗೆ ಅಚ್ಚರಿಯಾಗತ್ತೆ. ಕೇರಳದಲ್ಲಿ ಕತ್ತೆ ಸಾಕಾಣಿಕೆ ನಡೆದ ಬಗ್ಗೆ ನಿಮ್ಮಲ್ಲಿ ಬಹಳ ಮಂದಿ ಕೇಳಿರಬಹುದು. ಈಗ ಕರ್ನಾಟಕದಲ್ಲಿ ಸುದ್ದಿಯಾಗಿದೆ. ಮಂಗಳೂರಿನ ಬಳಿಯ ಶ್ರೀನಿವಾಸ ಗೌಡ ಎನ್ನುವವರು ಈ ಸಾಹಸಕ್ಕೆ ಕೈ ಹಾಕಿದ್ದಾರೆ.
ಅವರು ಪದವೀಧರರು. ಕತ್ತೆ ಸಾಕೋಕೆ ಮುಂಚೆ ಸಾಕಷ್ಟು ಯೋಚನೆ ಮತ್ತು ಸಿದ್ಧತೆ ಮಾಡಿಕೊಂಡಿದ್ದಾರೆ. ಯಾವುದೇ ವ್ಯವಹಾರ ಅಥವಾ ಉದ್ದಿಮೆ ನಡೆಸೋಕೆ ಮುಂಚೆ ಒಂದು ಸರ್ವೆ ಅಂತ ಮಾಡ್ತಾರೆ. ಅವರದ್ದು ಅದೇ ವಿಚಿತ್ರ ಹಾದಿ.!

ಈಗ ಕತ್ತೆ ಹಾಲಿಗೆ ಮಾರ್ಕೆಟ್ ಇದೆಯ? ನೋಡೋಣ ಅನ್ನಿಸಿತು. ಊರೂರು ಸುತ್ತಾಡಿದರು. ಅವರಿವರನ್ನ ವಿಚಾರಿಸಿದರು. ಕೊನೆಗೆ ಸತ್ಯ ಸಂಗತಿ ಹೊರಬಿತ್ತು. ಸೌಂದರ್ಯ ವರ್ಧಕಗಳಿಗೆ ಕತ್ತೆ ಹಾಲನ್ನ ತಯಾರಕರು ಬಳಸುತ್ತಾರೆ!. ಅವರಿಗೆ ಕತ್ತೆ ಹಾಲು ಕರೆದು ಮಾರಿದರೆ ಸಾಕು!. ಅದರ ರೇಟು.30 ml ಗೆ ₹ 150.ಲೆಕ್ಕ ಹಾಕಿದರು. ಕಂಪನೆಗಳಿಗೆ ವರ್ಷಕ್ಕೆ ಎಷ್ಟು ಲೀಟರ್ ಕತ್ತೆಯ ಹಾಲಿನ ಅಗತ್ಯವಿದೆ. ಅದನ್ನ ನಿಭಾಯಿಸಲು ಎಷ್ಟು ಕತ್ತೆಗಳನ್ನ ಸಾಕಬೇಕು.ಅವುಗಳ ನಿರ್ವಹಣೆ ,ಹಾಲು ಸಂಗ್ರಹ, ಪ್ಯಾಕಿಂಗ್ ಇತ್ಯಾದಿ ಲೆಕ್ಕಾಚಾರ ಮಾಡಿದರು.

ಇದರ ಜೊತೆಯಲ್ಲಿ ಶ್ರೀನಿವಾಸ್ ಮೊಲ ಮತ್ತು ಕಡಕ್ ನಾಥ್ ಕೋಳಿಗಳನ್ನು ಸಹ ಸಾಕಾಣಿಕೆ ಮಾಡುತ್ತಿದ್ದಾರೆ. ಪ್ರಸ್ತುತ ಶ್ರೀನಿವಾಸ್ ಅವರ ಫಾರ್ಮ್ ನಲ್ಲಿ 20 ಕತ್ತೆಗಳಿವೆ ಎನ್ನುವುದು ಇನ್ನೂ ಒಂದು ಗಮನಾರ್ಹ ಸಂಗತಿ.

ಅವರೀಗ ಸೌಂದರ್ಯವರ್ಧಕಗಳ ತಯಾರಿಕಾ ಕಂಪನಿಗಳಿಂದ ₹174 ಲಕ್ಷದ ಆರ್ಡರ್ ಪಡೆದಿದ್ದಾರಂತೆ.!
ಈಗ ಹೇಳಿ!, ದನ ಕಾಯೋವ್ನೆ.! ಕತ್ತೆ ಮಗನೆ, ಕತ್ತೆ ನನ್ ಮಗ್ನೆ ..ಕತ್ತೆ ಕಾಯೋಕೆ ಹೋಗ್ ಅಂತ ಬೈಯುವವರಿಗೆ ಆ ಬೈಗಳೆಲ್ಲಾ out of date ಆಗಿವೆ ಅಂತ ತಿಳಿಯ ಹೇಳಬೇಕಲ್ವೆ?

ಜಾಗತಿಕವಾಗಿ ಕೆಲವು ದೇಶಗಳಲ್ಲಿ ಮಂಕಿಪಾಕ್ಸ್ ಪ್ರಕರಣ: ಎಚ್ಚರವಿರಲು ಸೂಚನೆ

0

ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಮಂಕಿಪಾಕ್ಸ್‌ ಅಪಾಯ ಹೆಚ್ಚಾಗಿದೆ. ದೇಶಗಳಲ್ಲಿ ಸಾವಿರಕ್ಕೂ ಹೆಚ್ಚು ಪ್ರಕರಣಗಳು ದೃಢಪಟ್ಟಿದೆ.ಮಂಕಿಪಾಕ್ಸ್ ಅಪಾಯದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.

ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಮಾತನಾಡಿ, ಯುಎನ್ ಆರೋಗ್ಯ ಸಂಸ್ಥೆ ವೈರಸ್ ವಿರುದ್ಧ ಸಾಮೂಹಿಕ ಲಸಿಕೆಯನ್ನು ಶಿಫಾರಸು ಮಾಡುತ್ತಿಲ್ಲ ಮತ್ತು ಮಂಕಿಪಾಕ್ಸ್​ನಿಂದ ಯಾವುದೇ ಸಾವುಗಳು ವರದಿಯಾಗಿಲ್ಲ. ಆದರೆ, ಸ್ಥಳೀಯವಲ್ಲದ ದೇಶಗಳಲ್ಲಿ ಮಂಕಿಪಾಕ್ಸ್‌ ಅಪಾಯ ಹೆಚ್ಚಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಮಂಕಿಪಾಕ್ಸ್​ 9 ಆಫ್ರಿಕನ್ ದೇಶಗಳಲ್ಲಿ ಜನರಲ್ಲಿ ಸ್ಥಳೀಯವಾಗಿ ಹರಡುತ್ತಿದೆ. ಆದರೆ ಕಳೆದ ತಿಂಗಳು ಹಲವು ಇತರ ರಾಜ್ಯಗಳಲ್ಲಿ ಏಕಾಏಕಿ ವರದಿಯಾಗತ್ತಿದೆ. ಯುರೋಪ್​, ಬ್ರಿಟನ್, ಸ್ಪೇನ್ ಹಾಗೂ ಪೋರ್ಚುಗಲ್​ನಲ್ಲಿ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಹೇಳಿದ್ದಾರೆ.

ಈ ರೋಗಕ್ಕೆ ಸ್ಥಳೀಯವಲ್ಲದ 29 ದೇಶಗಳಿಂದ 1,000 ಕ್ಕೂ ಹೆಚ್ಚು ಮಂಕಿಪಾಕ್ಸ್ ಪ್ರಕರಣಗಳನ್ನು ವಿಶ್ವ ಆರೋಗ್ಯ ಸಂಸ್ಥೆ ವರದಿಯಾಗಿದೆ.

ಇಲ್ಲಿಯವರೆಗೆ ಈ ದೇಶಗಳಲ್ಲಿ ಯಾವುದೇ ಸಾವುಗಳು ವರದಿಯಾಗಿಲ್ಲ. ಲೈಂಗಿಕ ಸಂಪರ್ಕದಿಂದ ಮಾತ್ರವಲ್ಲದೆ, ಕೆಲವು ದೇಶಗಳು ಈಗ ಮಹಿಳೆಯರಲ್ಲಿ ಕೆಲವು ಪ್ರಕರಣಗಳನ್ನು ಒಳಗೊಂಡಂತೆ ಸ್ಪಷ್ಟವಾದ ಸಮುದಾಯ ಪ್ರಸರಣದ ಪ್ರಕರಣಗಳನ್ನು ವರದಿ ಮಾಡಲು ಪ್ರಾರಂಭಿಸಿವೆ ಎಂದಿದ್ದಾರೆ.

ಗ್ರೀಸ್​ನಲ್ಲಿ ನಿನ್ನೆ ಬುಧವಾರ ಮಂಕಿಪಾಕ್ಸ್ ರೋಗದ ಮೊದಲ ಪ್ರಕರಣವನ್ನು ದೃಢೀಕರಿಸಿದೆ. ಅಲ್ಲಿನ ಆರೋಗ್ಯ ಅಧಿಕಾರಿಗಳು ಇತ್ತೀಚೆಗೆ ಪೋರ್ಚುಗಲ್‌ಗೆ ಪ್ರಯಾಣಿಸಿದ ಮತ್ತು ಆಸ್ಪತ್ರೆಯಲ್ಲಿ ಸ್ಥಿರ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ಒಳಗೊಂಡಿದ್ದಾರೆ ಎಂದು ಹೇಳಿದ್ದಾರೆ.

ಗರ್ಭಿಣಿಯರು ಹಾಗೂ ಮಕ್ಕಳು ಸೇರಿದಂತೆ ದುರ್ಬಲ ಗುಂಪುಗಳಿಗೆ ವೈರಸ್ ಒಡ್ಡುವ ಅಪಾಯದ ಬಗ್ಗೆ ಅವರು ವಿಶೇಷವಾಗಿ ಕಳವಳ ವ್ಯಕ್ತಪಡಿಸಿದೆ ಎಂದು ಟೆಡ್ರೊಸ್ ತಿಳಿಸಿದ್ದಾರೆ.

ಸ್ಥಳೀಯ ದೇಶಗಳ ಹೊರಗೆ ಮಂಕಿಪಾಕ್ಸ್ ಹಠಾತ್ ಹಾಗೂ ಅನಿರೀಕ್ಷಿತವಾಗಿ ಕಾಣಿಸಿಕೊಂಡಿರುವುದು ಸ್ವಲ್ಪ ಸಮಯದವರೆಗೆ ಪತ್ತೆಯಾಗದ ಪ್ರಸರಣವಿರಬಹುದು ಎಂದು ಸೂಚಿಸುತ್ತದೆ.

ಆದರೆ, ಎಷ್ಟು ಸಮಯದವರೆಗೆ ಇರಲಿದೆ ಎಂಬುದು ತಿಳಿದಿಲ್ಲ. ಈ ವೈರಸ್ ದಶಕಗಳಿಂದ ಆಫ್ರಿಕಾದಲ್ಲಿ ಹರಡುತ್ತಿದೆ. ಈ ವರ್ಷ ಇದುವರೆಗೆ 1,400 ಕ್ಕೂ ಹೆಚ್ಚು ಶಂಕಿತ ಪ್ರಕರಣಗಳು ಮತ್ತು 66 ಸಾವುಗಳು ಸಂಭವಿಸಿವೆ ಎಂದು ಮಾಹಿತಿ ನೀಡಿದ್ದಾರೆ.

ಕ್ಲಿನಿಕಲ್ ಕೇರ್, ಸೋಂಕು ತಡೆಗಟ್ಟುವಿಕೆ ಮತ್ತು ನಿಯಂತ್ರಣ, ವ್ಯಾಕ್ಸಿನೇಷನ್ ಮತ್ತು ಸಮುದಾಯ ರಕ್ಷಣೆಯ ಕುರಿತು ಮುಂಬರುವ ದಿನಗಳಲ್ಲಿ ವಿಶ್ವ ಸಂಸ್ಥೆ ಮಾರ್ಗದರ್ಶನ ನೀಡಲಿದೆ. ರೋಗಲಕ್ಷಣಗಳನ್ನು ಹೊಂದಿರುವ ಜನರು ಮನೆಯಲ್ಲಿ ಪ್ರತ್ಯೇಕವಾಗಿರಬೇಕು. ಆರೋಗ್ಯ ಕಾರ್ಯಕರ್ತರನ್ನು ಸಂಪರ್ಕಿಸಬೇಕು. ಅದೇ ಮನೆಯ ಜನರು ನಿಕಟ ಸಂಪರ್ಕವನ್ನು ತಪ್ಪಿಸಬೇಕು ಎಂದು ಅವರು ಹೇಳಿದ್ದಾರೆ.

ರೋಗಿಗಳನ್ನು ಪ್ರತ್ಯೇಕಿಸಿರುವುದನ್ನು ಹೊರತುಪಡಿಸಿ ಕೆಲವು ಆಸ್ಪತ್ರೆಗಳು ವರದಿಯಾಗಿವೆ ಎಂದು ವಾರಾಂತ್ಯದಲ್ಲಿ ತಿಳಿಸಿದೆ.

ತಮಿಳುನಾಡಿಗೆ ಸತತ 4 ನೇ ವರ್ಷವೂ ಕಾವೇರಿ ನೀರು ಬಿಡುಗಡೆ

0

ಸತತ 4ನೇ ವರ್ಷವೂ ಕರ್ನಾಟಕದಿಂದ ತಮಿಳುನಾಡಿಗೆ ಹೆಚ್ಚುವರಿ ನೀರು ಬಿಡುಗಡೆ ಮಾಡಲಾಗಿದೆ. ಅದರಂತೆ, 2021-22ರ ಜಲ ವರ್ಷದಲ್ಲಿ 281 ಟಿಎಂಸಿ ನೀರು ಬಿಡುಗಡೆ ಮಾಡಲಾಗಿದೆ.

ವರ್ಷಕ್ಕೆ 177 ಟಿಎಂಸಿ ನೀರು ಹರಿಸಲು ಕರ್ನಾಟಕಕ್ಕೆ ನ್ಯಾಯಾಲಯ ಆದೇಶ ನೀಡಿದೆ.

ಆದರೆ, ಈ ವರ್ಷವೂ ರಾಜ್ಯದಲ್ಲಿ ಉತ್ತಮ ಮಳೆಯಾದ ಪರಿಣಾಮ 281 ಟಿಎಂಸಿ ನೀರು ಬಿಡುಗಡೆ ಮಾಡಲಾಗಿದೆ. ಅದರಂತೆ, 2021ರ ಜೂನ್‌ನಿಂದ 2022ರ ಮೇ ತಿಂಗಳ ವೇಳೆಗೆ ನೀರು ಬಿಡುಗಡೆ