Wednesday, March 4, 2026
Wednesday, March 4, 2026
Home Blog Page 1544

ದ್ವೇಷರಾಜಕಾರಣದಿಂದ ಭಾರತದ ಸ್ಥಾನಕ್ಕೆ ಧಕ್ಕೆ-ರಾಹುಲ್ ಗಾಂಧಿ

0

ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಹಿರಿಯ ನಾಯಕರು ದ್ವೇಷ ರಾಜಕಾರಣವನ್ನು ಪೋಷಿಸಿದ ಕಾರಣದಿಂದಲೇ, ಭಾರತವು ಇಂದು ಜಾಗತಿಕ ಸಮುದಾಯದ ಎದುರು ತಲೆಬಗ್ಗಿಸುವಂತಾಗಿದೆ ಎಂದು ವಿರೋಧ ಪಕ್ಷಗಳು ಟೀಕಿಸಿವೆ.

ಪ್ರವಾದಿ ಮಹಮ್ಮದರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಬಿಜೆಪಿ ನಾಯಕರನ್ನು ತಕ್ಷಣವೇ ಬಂಧಿಸಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸಿವೆ.

ಮಧ್ಯಪ್ರದೇಶದಲ್ಲಿ ಬಿಜೆಪಿ ಸಂಸದರೊಬ್ಬರು ಗಾಂಧೀಜಿ ಹಂತಕ ನಾಥೂರಾಮ್‌ ಗೋಡ್ಸೆಯನ್ನು ಹೊಗಳಿದರು. ಆಗ ಪ್ರಧಾನಿ ನರೇಂದ್ರ ಮೋದಿ ಮೌನವಾಗಿದ್ದರು. ಅದರಿಂದ ನಮಗೆ ತೀವ್ರ ಆಘಾತವಾಗಿತ್ತು. ನೀವು ಏನು ಮಾಡಲು ಅನುಮತಿ ನೀಡಿರುತ್ತೀರೋ ಅದನ್ನೇ ಪ್ರೋತ್ಸಾಹಿಸುತ್ತೀರಿ ಎಂದು ಮೋದಿ ಅವರಿಗೆ ಹೇಳಲು ಬಯಸುತ್ತೇನೆ’ ಎಂದು ಟಿಆರ್‌ಎಸ್‌ ಕಾರ್ಯಾಧ್ಯಕ್ಷ ಕೆ.ಟಿ.ರಾಮರಾವ್ ಟೀಕಿಸಿದ್ದಾರೆ.

ದ್ವೇಷ ಭಾಷಣವನ್ನು ಬಿಜೆಪಿ ಪ್ರೋತ್ಸಾಹಿಸಿದೆ. ಬಿಜೆಪಿ ಮುಖಂಡರು ಇಂತಹ ಹೇಳಿಕೆ ನೀಡಿದಾಗ ಪ್ರಧಾನಿ ನರೇಂದ್ರ ಮೋದಿ ಅವರು ಸುಮ್ಮನೆ ಇರುತ್ತಿದ್ದರು. ಈ ಕಾರಣದಿಂದಲೇ ಬಿಜೆಪಿ ಮುಖಂಡರು ಇಂದು ಇಂತಹ ಹೇಳಿಕೆ ನೀಡಿದ್ದಾರೆ.

ಇದರಿಂದಲೇ ಭಾರತವು ಇಂದು ವಿಶ್ವದ ಎದುರು ತಲೆ ತಗ್ಗಿಸಿ ನಿಂತಿದೆ’ ಎಂದು ಎಎಪಿ ಸಂಸದ ಸಂಜಯ್ ಸಿಂಗ್ ಟೀಕಿಸಿದ್ದಾರೆ.
ಇದೇ ರೀತಿಯ ಹೇಳಿಕೆ ನೀಡಿರುವ ಕಾಂಗ್ರೆಸ್‌ ಮುಖಂಡ ಪಿ.ಚಿದಂಬರಂ, ‘ನೂಪುರ್ ಆಗಲೀ ನವೀನ್‌ ಆಗಲೀ ಈ ರೀತಿಯ ಹೇಳಿಕೆ ನೀಡಿದ ಮೊದಲಿಗರಲ್ಲ. ಬದಲಿಗೆ ಅವರು ಇಂತಹ ಹೇಳಿಕೆ ನೀಡುವ ಮೂಲಕ ತಮ್ಮ ರಾಜನಿಗೆ ನಿಷ್ಠರಾಗಿರಲು ಯತ್ನಿಸಿದ್ದಾರೆ’ ಎಂದು ಲೇವಡಿ ಮಾಡಿದ್ದಾರೆ.

ಆಂತರಿಕವಾಗಿ ವಿಭಜನೆಯಾಗಿರುವ ಭಾರತವು ವಿಶ್ವದ ಎದುರು ದುರ್ಬಲವಾಗಿದೆ. ಬಿಜೆಪಿಯ ನಾಚಿಕೆಗೇಡಿನ ದ್ವೇಷರಾಜಕಾರಣದಿಂದ ನಾವು ಜಾಗತಿಕ ಸಮುದಾಯದಲ್ಲಿ ಒಂಟಿಯಾಗಿದ್ದು ಮಾತ್ರವಲ್ಲ, ಭಾರತದ ಸ್ಥಾನಕ್ಕೂ ಧಕ್ಕೆಯಾಗಿದೆ’ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್ ಗಾಂಧಿ ಟ್ವೀಟ್‌ ಮಾಡಿದ್ದಾರೆ.

ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್‌ ಅವರನ್ನು ಮೂಲಭೂತವಾದಿಗಳು ಎಂದು ಕರೆದ ಬಿಜೆಪಿಯ ನಡೆಯನ್ನೂ ವಿರೋಧ ಪಕ್ಷಗಳು ಪ್ರಶ್ನಿಸಿವೆ. ‘ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್‌ ಅವರನ್ನು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿಯ ಪ್ರಮುಖ ನಾಯಕರೆಲ್ಲರೂ ಟ್ವಿಟರ್‌ನಲ್ಲಿ ಅನುಸರಿಸುತ್ತಿದ್ದಾರೆ. ಆದರೆ ಈಗ ಇವರಿಬ್ಬರನ್ನು ಬಿಜೆಪಿ ಸರ್ಕಾರವೇ ‘ಮೂಲಭೂತವಾದಿಗಳು’ ಎಂದು ಕರೆದಿದೆ. ಪಕ್ಷದ ಅಧಿಕೃತ ಹುದ್ದೆಗಳಲ್ಲಿ ಇರುವವರನ್ನೇ ಬಿಜೆಪಿ ‘ಮೂಲಭೂತವಾದಿಗಳು’ ಎಂದು ಕರೆಯಲು ಹೇಗೆ ಸಾಧ್ಯ’ ಎಂದು ಸಿಪಿಎಂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಪ್ರಶ್ನಿಸಿದ್ದಾರೆ.

ಮುಂಬೈ to ಅಹ್ಮದಾಬಾದ್ ಬುಲೆಟ್ ರೈಲು ದರ ಇಳಿಕೆ

0

ಪ್ರಧಾನಿ ಮೋದಿ ಸರ್ಕಾರದ ಅನೇಕ ಯೋಜನೆಗಳಲ್ಲಿ ಒಂದಾದ ಬುಲೆಟ್ ಟ್ರೈನ್ ಗೆ ಈಗ ಒಳ್ಳೆಯ ಕಾಲ ಕೂಡಿ ಬಂದಿದೆ.

ಅದೇನು ಅಂದ್ರೆ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಬುಲೆಟ್ ಟ್ರೈನ್ ದರವನ್ನು ಫಸ್ಟ್ ಎಸಿಗೆ ಸಮನಾಗಿ ಇರಿಸಲು ಸೂಚನೆ ನೀಡಿದ್ದಾರೆ.

ಬಾಡಿಗೆ ವಿಚಾರಕ್ಕೆ ಸಂಬಂಧಪಟ್ಟಂತೆ ಸರ್ಕಾರ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಆದರೂ, ಇದು ಜನರಿಗೆ ಕೈಗೆಟುಕುವ ದರದಲ್ಲಿ ಸಿಗಲಿದೆ ಎಂದು ತಿಳಿಸಿದ್ದಾರೆ.

ಇದಕ್ಕಾಗಿ, ಫಸ್ಟ್ ಎಸಿಯ ಆಧಾರದ ಮೇಲೆ ಬುಲೆಟ್ ಟ್ರೈನ್ ದರ ನಿಗದಿ ಮಾಡಲಾಗುತ್ತಿದೆ. ಇದು ತುಂಬಾ ಜಾಸ್ತಿ ದರವೇನಿಲ್ಲ, ವಿಮಾನ ದರಕ್ಕಿಂತ ಕಡಿಮೆಯಿರುತ್ತದೆ. ಆದರೆ, ಇಯ್ಲಿ ಸಿಗುವ ಸೌಲಭ್ಯಗಳು ಉತ್ತಮವಾಗಿರುತ್ತವೆ. ಯೋಜನೆ ಪೂರ್ಣಗೊಂಡ ನಂತರ ಬಾಡಿಗೆ ನಿಗದಿ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಅಶ್ವಿನಿ ವೈಷ್ಣವ್ ಅವರು ಬುಲೆಟ್ ರೈಲು ಯೋಜನೆಗೆ ಭೇಟಿ ನೀಡಿ, ಮುಂಬೈ, ಅಹಮದಾಬಾದ್ ಹೈಸ್ಪೀಡ್ ರೈಲು ಯೋಜನೆ ಪೂರ್ಣಗೊಂಡ ನಂತರವೇ 2ನೇ ಹೈಸ್ಪೀಡ್ ರೈಲು ಯೋಜನೆಯನ್ನು ಪ್ರಾರಂಭಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು. ಈ ನಿಟ್ಟಿನಲ್ಲಿ ಉತ್ತಮ ಪ್ರಗತಿ ಕಾಣುತ್ತಿರುವುದರಿಂದ 2026ರಲ್ಲಿ ಗುಜರಾತ್‌ನ ಸೂರತ್ ಹಾಗೂ ಬಿಲಿಮೊರಾ ನಡುವೆ ದೇಶದ ಮೊದಲ ಬುಲೆಟ್ ರೈಲು ಓಡಿಸುವ ಗುರಿಯನ್ನು ಸಾಧಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಅಹಮದಾಬಾದ್,ಮುಂಬೈ ಬುಲೆಟ್ ರೈಲು ಯೋಜನೆಯ ಪ್ರಗತಿಯನ್ನು ಪರಿಶೀಲಿಸಲು ಸೂರತ್‌ಗೆ ಬಂದಿದ್ದರು.

2026 ರಲ್ಲಿ ಸೂರತ್ ಹಾಗೂ ಬಿಲಿಮೋರಾ ನಡುವೆ ಮೊದಲ ಬುಲೆಟ್ ರೈಲು ಓಡಿಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ಅವರು ಹೇಳಿದ್ದಾರೆ.

ಇದರಲ್ಲಿ ಉತ್ತಮ ಪ್ರಗತಿ ಕಾಣುತ್ತಿದ್ದೇವೆ, ಅಷ್ಟರೊಳಗೆ ರೈಲು ಓಡಿಸುವ ಕಾರ್ಯವನ್ನು ಪೂರ್ಣಗೊಳಿಸುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಕೇಂದ್ರ ನೌಕರರು ಉನ್ನತ ಪದವಿ ಪಡೆದರೆ ಪ್ರೋತ್ಸಾಹಕಮೊತ್ತ ಏರಿಕೆ

0

ಕೇಂದ್ರ ಸರ್ಕಾರಿ ನೌಕರರು ಹೊಸ ಉನ್ನತ ವಿದ್ಯಾರ್ಹತೆಗಳನ್ನು ಪಡೆಯಬಹುದಾಗಿದೆ. ಇದಕ್ಕಾಗಿ ಸರ್ಕಾರ ಅವರನ್ನು ಪ್ರೋತ್ಸಾಹಿಸುತ್ತಿದೆ. ಪಿಎಚ್‌ಡಿ ಯಂತಹ ಉನ್ನತ ಪದವಿಗಳನ್ನು ಪಡೆಯುವ ಉದ್ಯೋಗಿಗಳಿಗೆ, ಪ್ರೋತ್ಸಾಹ ಮೊತ್ತವು ರೂ.30,000 ಕ್ಕಿಂತ ಹೆಚ್ಚಾಗಿರುತ್ತದೆ.

7ನೇ ವೇತನ ಆಯೋಗದ ಶಿಫಾರಸಿನ ಪ್ರಕಾರ, ಸೇವೆಗೆ ಸೇರಿದ ನಂತರ ಉನ್ನತ ವಿದ್ಯಾರ್ಹತೆಗಳನ್ನು ಪಡೆಯುವ ಕೇಂದ್ರ ಸರ್ಕಾರಿ ಉದ್ಯೋಗಿಯು ಕೆಲಸ ಮಾಡುವಾಗ ಉನ್ನತ ಪದವಿಯನ್ನು ಗಳಿಸಿದರೆ, ಅವನು ಪ್ರತ್ಯೇಕ ಪ್ರಯೋಜನವನ್ನು ಪಡೆಯುತ್ತಾನೆ. ಉನ್ನತ ಪದವಿ ಪಡೆದ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರ ಪ್ರೋತ್ಸಾಹಧನವನ್ನು 5 ಪಟ್ಟು ಹೆಚ್ಚಿಸಿದೆ.

ಮೊದಲಿನ ನಿಯಮಗಳ ಪ್ರಕಾರ, ಇಲ್ಲಿಯವರೆಗ ಉದ್ಯೋಗದ ಅವಧಿಯಲ್ಲಿ ಉನ್ನತ ಪದವಿಗಳನ್ನು ಪಡೆದ ಉದ್ಯೋಗಿಗಳಿಗೆ 2000 ರೂ.ಗಳಿಂದ 10,000 ರೂ. ನೀಡಲಾಗುತ್ತಿತ್ತು. ಸದ್ಯ, 2019 ರಿಂದ, ಈ ಪ್ರೋತ್ಸಾಹ ಧನವನ್ನು ಕನಿಷ್ಠ 2000 ರೂ.ನಿಂದ 10,000 ರೂ.ಗೆ ಹೆಚ್ಚಿಸಲಾಗಿದೆ.

ಪ್ರಸ್ತುತವಾಗಿ, ಉನ್ನತ ಪದವಿ ಪಡೆದ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರ ಪ್ರೋತ್ಸಾಹಧನವನ್ನು 5 ಪಟ್ಟು ಹೆಚ್ಚಿಸಿದೆ. ಪಿಎಚ್.ಡಿ ಮುಂತಾದ ಉನ್ನತ ಪದವಿ ಪಡೆದ ಉದ್ಯೋಗಿಗಳಿಗೆ ಪ್ರೋತ್ಸಾಹ ಧನವನ್ನು ರೂ.10,000ದಿಂದ ರೂ.30,000ಕ್ಕೆ ಹೆಚ್ಚಿಸುವುದಾಗಿ ತಿಳಿಸಿದೆ.

ಭಾರತದಲ್ಲಿ ಕೋವಿಡ್ ಮತ್ತೆ ಆತಂಕ ಸೃಷ್ಟಿಸುತ್ತಿದೆ?

0

ಭಾರತದಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗಿನ ಹೊಸ ಅಲೆ ಸೃಷ್ಟಿಯಾಗುತ್ತಿದೆಯಾ ಎಂಬ ಆತಂಕ ಹುಟ್ಟಿಕೊಳ್ಳುತ್ತಿದೆ. ಮೂರು ತಿಂಗಳ ನಂತರದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ಶೇ.41ರಷ್ಟು ಏರಿಕೆಯಾಗಿದೆ.

ಕಳೆದ 24 ಗಂಟೆಗಳಲ್ಲಿ 5,233 ಜನರಿಗೆ ಕೊರೋನಾ ವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಿಂದ ಪತ್ತೆಯಾಗಿದೆ.

ಇದೇ ಅವಧಿಯಲ್ಲಿ 7ಮಂದಿ ಮಹಾಮಾರಿಯಿಂದ ಪ್ರಾಣ ಬಿಟ್ಟಿದ್ದರೆ, 3,345 ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಭಾರತೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ದೇಶದಲ್ಲಿ ಒಟ್ಟು ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ 43,190,282ಕ್ಕೆ ಹೆಚ್ಚಾಗಿದೆ. ಇದರ ಹೊರತಾಗಿ, ಇದುವರೆಗೂ 42,636,710 ಸೋಂಕಿತರು ಗುಣಮುಖರಾಗಿದ್ದಾರೆ. 524,715 ಮಂದಿ ಮಹಾಮಾರಿಯಿಂದ ಸಾವನ್ನಪ್ಪಿದ್ದಾರೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 28,857ಕ್ಕೆ ಏರಿಕೆಯಾಗಿದೆ.

ಜನಕಾಳಜಿಯುಳ್ಳ ಜಿಲ್ಲಾಧಿಕಾರಿಯ ಗಮನ ಸೆಳೆದ ಸಭೆ

0

ವೈದ್ಯರನ್ನು ದೇವರ ಸಮಾನ ಎಂದು ನೋಡುವ ದೇಶ ನಮ್ಮದು ಹಾಗಾಗಿ ವೈದ್ಯ ವೃತ್ತಿಯಲ್ಲಿರುವವರು ದೇವರು ಮೆಚ್ಚುವಂತೆ ಕೆಲಸ ಮಾಡಬೇಕು. ಸಿಜೇರಿಯನ್ ಹೆರಿಗೆಗೆ ಹೆಚ್ಚು ಒಲವು ತೋರದೆ ಸಾಮಾನ್ಯ ಹೆರಿಗೆಗೆ ಹೆಚ್ಚು ಒತ್ತು ನೀಡಿ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.

ದಾವಣಗೆರೆ ಜಿಲ್ಲಾಡಳಿತ ಭವನದಲ್ಲಿ ನಡೆದ ಜಿಲ್ಲಾ ಆರೋಗ್ಯ ಅಭಿಯಾನ ಕಾರ್ಯಕಾರಿ ಸಮಿತಿ ಸಭೆಯ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮ ಹಾಗೂ ಚಟುವಟಿಕೆಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಂಕಿಅಂಶಗಳ ಪ್ರಕಾರ ಸಿಸೇರಿಯನ್ ಹೆರಿಗೆಗಳ ಪ್ರಮಾಣ ಜಾಸ್ತಿ ಇದೆ. ಸಾಮಾನ್ಯ ಹೆರಿಗೆ ಮಾಡಿಸಲು ಏಕೆ ಸಾಧ್ಯವಿಲ್ಲ? ಕೆಲ ಕ್ಲಿಷ್ಟಕರ ಸಂದರ್ಭಗಳಲ್ಲಿ ಹೊರತುಪಡಿಸಿ ಹೆಚ್ಚು ಸಿಸೇರಿಯನ್ ಹೆರಿಗೆಗಳಿಗೆ ಅವಕಾಶ ಬೇಡ ಎಂದರು.

ಈ ಹಿಂದಿನ ವರ್ಷಗಳಲ್ಲಿ ದಾವಣಗೆರೆ ಆರೋಗ್ಯ ಇಲಾಖೆಯ ಕಾರ್ಯಪ್ರಗತಿ ನಂಬರ್ ಒನ್ ಸ್ಥಾನದಲ್ಲಿರುತ್ತಿತ್ತು. ನಂತರದ ದಿನಗಳಲ್ಲಿ ಬರುಬರುತ್ತಾ ರ್ಯಾಂಕಿಂಗ್ ನಲ್ಲಿ ಕೆಳಗಿನಿಂದ ನಾಲ್ಕೈದು ಸ್ಥಾನಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೇವೆ. ಬಹಳ ಕ್ರಿಯಾಶೀಲ ಅಧಿಕಾರಿಗಳು, ವೈದ್ಯರು ಜಿಲ್ಲೆಯಲ್ಲಿದ್ದೀರಿ ಕೆಲಸದ ಕಡೆ ಗಮನ ನೀಡದೆ ಹೀಗಾಗಿದೆ. ಮುಂದಿನ ದಿನಗಳಲ್ಲಿ ಸರಿಪಡಿಸಿಕೊಳ್ಳದಿದ್ದರೆ ಸಹಿಸಲು ಸಾಧ್ಯವಿಲ್ಲ ಎಂದರು.

ಜಿಲ್ಲೆಯಲ್ಲಿ ಲಸಿಕಾಕರಣ ವೇಗ ಪಡೆದುಕೊಳ್ಳಬೇಕು. ಪೋಲಿಯೋ ನಿರ್ಮೂಲನೆ ಈಗಾಗಲೇ ಆಗಿದ್ದು ದಢಾರ ರುಬೆಲ್ಲಾ ನಿರ್ಮೂಲನೆಗೂ ಸರ್ಕಾರ ಶ್ರಮಿಸುತ್ತದ್ದು ಆರೋಗ್ಯ ಇಲಾಖೆ ಸಿಬ್ಬಂದಿ ಕೈ ಜೋಡಿಸಬೇಕೆಂದರು ಹಾಗೂ ಶಾಲಾ ಲಸಿಕಾಕರಣ ಜೂನ್ 15 ರೊಳಗೆ ಮುಗಿಸಬೇಕೆಂದರು.

ಶಿಶುಮರಣ ತಗ್ಗಿಸುವುದರೊಂದಿಗೆ ಮಕ್ಕಳು ಗರ್ಭಿಣಿಯರು, ವಯೋವೃದ್ದರ ಬಗೆಗೆ ಕಾಳಜಿ ಇರಲಿ ಎಂದರು.
ಡಾ. ನಟರಾಜು ಮಾಹಿತಿ ನೀಡಿ ಮಲೇರಿಯ ಮಾಸಾಚರಣೆ ಆಚರಿಸಲಾಗುತ್ತಿದ್ದು, ಹಿಂದಿನ ವರ್ಷ ಮೂರು ಕೇಸ್ ದಾಖಲಾಗಿದ್ದು ಬಿಟ್ಟರೆ ಈ ವರ್ಷ ಯಾವುದೇ ಮಲೇರಿಯಾ ಪ್ರಕರಣಗಳು ಕಂಡುಬಂದಿಲ್ಲ ಎಂದರು.

ಇದೇ ವೇಳೆ ಮಲೇರಿಯ ವಿರೋಧಿ ಮಾಸಾಚರಣೆ-2022 ಬಿತ್ತಿಪತ್ರಗಳನ್ನು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಬಿಡುಗಡೆ ಮಾಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಚನ್ನಪ್ಪ ಎ, ಜಿಲ್ಲಾ ಆರೋಗ್ಯಾಧಿಕಾರಿ ಡಾ,ನಾಗರಾಜ್, ಡಾ.ರಾಘವನ್, ಆರ್‍ಸಿಹೆಚ್ ಡಾ. ಮೀನಾಕ್ಷಿ, ಎಸ್‍ಎಂಒ ಡಾ.ಶ್ರೀಧರ್ ಸೇರಿದಂತೆ ವಿವಿಧ ಜಿಲ್ಲಾಮಟ್ಟದ ಆರೋಗ್ಯಾಧಿಕಾರಿಗಳು ಹಾಜರಿದ್ದರು.

ದೇಶಕ್ಕಾಗಿ ಪ್ರಧಾನಿಯವರು ₹155 ಕೋಟಿ ಸಾಲಮಾಡಿದ್ದಾರೆ- ಸಿದ್ಧರಾಮಯ್ಯ

0

ನರೇಂದ್ರ ಮೋದಿ ಪ್ರಧಾನಿ ಆದ ಮೇಲೆ 155 ಲಕ್ಷ ಕೋಟಿ ರೂಪಾಯಿ ಸಾಲ ಮಾಡಿದ್ದಾರೆ. ಲೆಕ್ಕ ಹಾಕಿ ನೋಡಿದರೆ ಪ್ರತಿಯೊಬ್ಬ ‍ಪ್ರಜೆಯ ತಲೆ ಮೇಲೆ 1.75 ಲಕ್ಷ ರೂಪಾಯಿ ಸಾಲ ಹೇರಿದ್ದಾರೆ. ಇಂಥವರಿಂದ ದೇಶ ಉಳಿಯುತ್ತದೆಯೇ ಎಂದು ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ, ಮಂಗಳವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದಾಗಿನಿಂದ 2014ರವರೆಗೆ ದೇಶದ ಸಾಲ 53.11 ಲಕ್ಷ ಕೋಟಿ ರೂಪಾಯಿ ಮಾತ್ರ ಇತ್ತು. ಆದರೆ, ಬಿಜೆಪಿ ಸರ್ಕಾರ ಬಂದ 8 ವರ್ಷಗಳಲ್ಲಿ 3 ಪಟ್ಟು ಸಾಲ ಮಾಡಿದ್ದಾರೆ. ಈ ಸಾಲವನ್ನು ಮೋದಿ ತೀರಿಸುತ್ತಾರಾ? ದೇಶದ ಜನರೇ ಈ ಭಾರ ಹೊತ್ತುಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ.

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ರಾಜ್ಯದಿಂದ ಒಟ್ಟು 19 ಲಕ್ಷ ಕೋಟಿ ರೂಪಾಯಿ ತೆರಿಗೆ ಸಂದಾಯ ಮಾಡಲಾಗಿದೆ. ಆದರೆ, ರಾಜ್ಯಕ್ಕೆ ಮರಳಿ ಸಿಕ್ಕ ತೆರಿಗೆ ಪಾಲು ಕೇವಲ 1.29 ಲಕ್ಷ ಕೋಟಿ. ರೂಪಾಯಿ ಇನ್ನೂ 18.71 ಲಕ್ಷ ಕೋಟಿ ರೂಪಾಯಿಯನ್ನು ಕೇಂದ್ರವೇ ಇಟ್ಟುಕೊಂಡಿದೆ. ಇದೆಲ್ಲ ಯಾರು ದುಡ್ಡು? ರಾಜ್ಯದ ಜನ ದುಡಿದು ಕೊಟ್ಟ ದುಡ್ಡು. ಇಂಥವರಿಗೆ ಮತ್ತೆ ಮತ ಕೊಡಬೇಕೆ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

2014ರಲ್ಲಿ ಕಚ್ಚಾತೈಲದ ಬೆಲೆ ಒಂದು ಬ್ಯಾರಲ್‌ಗೆ 118 ಡಾಲರ್ ಇತ್ತು. ಈಗ 113 ಡಾಲರ್‌ಗೆ ಇಳಿದಿದೆ. ಆದರೆ, ದೇಶದಲ್ಲಿ ‍ಪೆಟ್ರೋಲ್‌ ಹಾಗೂ ಡೀಸೆಲ್‌ ದರ ಮಾತ್ರ ಗಗನಕ್ಕೇರುತ್ತಿದೆ. ಕಾರಣ ಕೇಳಿದರೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ದುಬಾರಿಯಾಗಿದೆ ಎಂದು ಸುಳ್ಳು ಹೇಳಿ ಜನರಿಗೆ ಮೋಸ ಮಾಡುತ್ತಾರೆ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಪ್ರಸಕ್ತ ವಿಧಾನ ಪರಿಷತ್‌ ಚುನಾವಣೆಯಲ್ಲಿ ಶಿಕ್ಷಕರು, ಪದವೀಧರರು ಮತದಾರರು. ಮುಂದಿನ ಸಾರ್ವತ್ರಿಕ ಚುನಾವಣೆಗೆ ಇದು ದಿಕ್ಸೂಚಿ ಆಗಿದೆ. ಪ್ರಜ್ಞಾವಂತರಾದ ನೀವು ಯೋಚಿಸಿ ಮತ ಹಾಕಿ ಎಂದು ಅವರು ಮನವಿ ಮಾಡಿದ್ದಾರೆ.

ಭಾರತದ ಹೆಮ್ಮೆಯ ಅಗ್ನಿ4 ಕ್ಷಿಪಣಿ ಯಶಸ್ವಿ ಪ್ರಯೋಗ

0

ಪಾಕಿಸ್ತಾನ, ಚೀನಾ ಸೇರಿದಂತೆ ಭಾರತದ ಶತ್ರುಗಳಿಗೆ ನಡುಕ ಶುರುವಾಗಿದೆ. ಕಾರಣ ಭಾರತ ಅಗ್ನಿ4 ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ ಮಾಡಿದೆ.

ಭಾರತ ಈಗಾಗಲೇ ಹಲವು ಕ್ಷಿಪಣಿಗಳ ಪರೀಕ್ಷೆಯನ್ನು ನಡೆಸಿದೆ. ಆದರೆ ಈ ಬಾರಿ ಪರೀಕ್ಷಿಸಿದ ಅಗ್ನಿ 4 ನ್ಯೂಕ್ಲಿಯರ್ ಸಾಮರ್ಥ್ಯದ ಮಿಸೈಲ್ ಆಗಿದೆ.
ಇಷ್ಟೇ ಅಲ್ಲ ಬರೋಬ್ಬರಿ 4,000 ಕಿಲೋಮೀಟರ್ ಗುರಿ ಸಾಮರ್ಥ್ಯ ಹೊಂದಿದೆ.
ಒಡಿಶಾದ ಎಪಿಜೆ ಅಬ್ಬುಲ್ ಕಲಾಂ ಕೇಂದ್ರದಿಂದ ಅಗ್ನಿ 4 ಕ್ಷಿಪಣಿ ಪರೀಕ್ಷೆ ನಡೆಸಲಾಗಿದೆ. ಇಂದು ಸಂಜೆ 7.30ಕ್ಕೆ ಈ ಕ್ಷಿಪಣಿ ಪರೀಕ್ಷೆ ಮಾಡಲಾಯಿತು.

ಭಾರತೀಯ ನೌಕಾಪಡೆ ಹಾಗೂ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಯು ಜಂಟಿಯಾಗಿ ಒಡಿಶಾದ ಚಂಡೀಪುರ ತೀರದಿಂದ ನೌಕಾ ಹೆಲಿಕಾಪ್ಟರ್‌ ಮೂಲಕ ಪರೀಕ್ಷಾರ್ಥವಾಗಿ ಕ್ಷಿಪಣಿಯನ್ನು ಉಡಾವಣೆ ಮಾಡಿತ್ತು. ಕ್ಷಿಪಣಿ ನಿಗದಿತ ಗುರಿಯನ್ನು ಯಶಸ್ವಿಯಾಗಿ ತಲುಪಿದೆ ಎಂದು ನೌಕಾಪಡೆ ತಿಳಿಸಿದೆ.

ಡಿಫೆರನ್ಸ್ ರಿಚರ್ಸ್ ಅಂಡ್ ಡೆವಲಪ್‌ಮೆಂಟ್ ಆರ್ಗನೈಜೇಶನ್ ಅಭಿವೃದ್ಧಿಪಡಿಸಿದ ಈ ಕ್ಷಿಪಣಿ ಅತ್ಯಂತ ಸಾಮರ್ಥ್ಯದ ಮಿಸೈಲ್ ಆಗಿದೆ.

ದೆಹಲಿಯಿಂದಲೇ ಕೂತು ಪಾಕಿಸ್ತಾನವನ್ನೇ ಸರ್ವನಾಶ ಮಾಡಲು ಸಾಧ್ಯವಿದೆ.
ಯುದ್ಧನೌಕೆ ಧ್ವಂಸ ಕ್ಷಿಪಣಿ ಪ್ರಯೋಗ ಯಶಸ್ವಿ
ದೇಶೀಯವಾಗಿ ಅಭಿವೃದ್ಧಿ ಪಡಿಸಿದ ಹಡಗು ಧ್ವಂಸ (ಆಯಂಟಿ-ಶಿಪ್‌) ನೌಕಾ ಕ್ಷಿಪಣಿಯು ತನ್ನ ಪರೀಕ್ಷಾರ್ಥ ಹಾರಾಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಅರಣ್ಯ ರಕ್ಷಣೆ ಎಲ್ಲರ ಹೊಣೆ- ಶಾಸಕ ರುದ್ರೇಗೌಡರು

0

ಅರಣ್ಯ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ.ಈ ಕಾರ್ಯದಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಎಸ್.ರುದ್ರೇಗೌಡ ಅವರು ಕರೆ ನೀಡಿದ್ದಾರೆ.

ಅವರು ಭಾನುವಾರ ಅರಣ್ಯ ಇಲಾಖೆ ವತಿಯಿಂದ ಆಯನೂರು ವಲಯದ ಕೆಂಪಿನಕೊಪ್ಪದಲ್ಲಿ ಆಯೋಜಿಸಲಾಗಿದ್ದ ಬಿತ್ತೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಎದೆಗೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜ ಉತ್ತಮ ಫಲವನ್ನೇ ನೀಡುವುದು. ಸಾಲು ಮರದ ತಿಮ್ಮಕ್ಕನಂತಹವರು ತಮ್ಮ ಇಳಿವಯಸ್ಸಿನಲ್ಲಿ ವೃಕ್ಷ ರಕ್ಷಣೆಗೆ ಜೀವನವನ್ನು ಮುಡಿಪಾಗಿಟ್ಟಿರುವುದು ನಮಗೆಲ್ಲರಿಗೂ ಮಾದರಿಯಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಮಾತನಾಡಿ, ಮಕ್ಕಳು ಪರಿಸರ, ಅರಣ್ಯದ ಬಗ್ಗೆ ಪ್ರೀತಿಯನ್ನು ಬೆಳೆಸಿಕೊಳ್ಳಬೇಕು. ಗಿಡವನ್ನು ನೆಡಲು ನಮ್ಮಿಂದ ಸಾಧ್ಯವಾಗದಿದ್ದರೂ, ಮರವನ್ನು ಕಡಿಯುವ ಕೃತ್ಯಕ್ಕೆ ಯಾರೂ ಕೈ ಹಾಕಬಾರದು. ಪರಿಸರದಲ್ಲಿರುವ ಹಕ್ಕಿಗಳು, ಸುತ್ತಮುತ್ತಲಿನ ಮರಗಿಡಗಳ ಬಗ್ಗೆ ಮಕ್ಕಳಿಗೆ ಮಾಹಿತಿಯನ್ನು ನೀಡಬೇಕು. ಸಸಿಗಳನ್ನು ನೆಡುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ಹೇಳಿದರು.

ಕೆಂಪಿನಕೊಪ್ಪ ಅರಣ್ಯ ವಲಯದಲ್ಲಿ ಶಾಲಾ ಮಕ್ಕಳು ಮತ್ತು ಸಾರ್ವಜನಿಕರು, ಗಣ್ಯರು ಈ ಸಂದರ್ಭದಲ್ಲಿ ಬೀಜಗಳನ್ನು ಬಿತ್ತನೆ ಮಾಡಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಜಿ.ಯು.ಶಂಕರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆ.ಟಿ.ಹನುಮಂತಪ್ಪ, ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾರದಾ ರಂಗನಾಥ್ ಮತ್ತಿತರರು ಉಪಸ್ಥಿತರಿದ್ದರು.

ರಾಜ್ಯದ 4 ಜಿಲ್ಲೆಗಳಲ್ಲಿ ಸಂಚಾರಿ ಆಸ್ಪತ್ರೆಗಳ ಪ್ರಾರಂಭ

0

ರಾಜ್ಯ ಸರ್ಕಾರವು ಜನರಿಗೆ ಮತ್ತೊಂದು ಸಂತೋಷದ ಸಮಾಚಾರ ತಿಳಿಸಿದೆ. ರಾಜ್ಯದ 4 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಸಂಚಾರಿ ಆಸ್ಪತ್ರೆಯನ್ನು ಆರಂಭಿಸಲಾಗಿದೆ. ಶೀಘ್ರವೇ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.

ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ರೋಟರಿ ಬೆಂಗಳೂರು ಹೈಗ್ರೌಂಡ್ಸ್ ಸಹಯೋಗದೊಂದಿಗೆ ಇನ್ಫೋಸಿಸ್ ಫೌಂಡೇಶನ್ ಕೂಡ ಮಾಡಿರುವ ಸಂಚಾರಿ ಪ್ರಯೋಗಾಲಯಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಬೊಮ್ಮಾಯಿ ಅವರು, ಬಜೆಟ್ ನಲ್ಲಿ ಘೋಷಣೆ ಮಾಡಿರುವಂತೆ ನಾಲ್ಕು ಜಿಲ್ಲೆಗಳಲ್ಲಿ ಮೊಬೈಲ್ ಆಸ್ಪತ್ರೆಯನ್ನು ಆರಂಭಿಸಲಾಗುತ್ತದೆ. ಪ್ರಯೋಗ ಯಶಸ್ವಿಯಾದರೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿ ಸಂಚಾರಿ ಕ್ಲಿನಿಕ್ ಉಪಯೋಗವನ್ನು ಮನಗಂಡು ಮೈಸೂರು, ಹುಬ್ಬಳ್ಳಿ-ಧಾರವಾಡ, ಕಲಬುರಗಿ ಮತ್ತು ಮಂಗಳೂರುಮಹಾನಗರ ಪಾಲಿಕೆಗಳಿಗೆ ಇವುಗಳನ್ನು ಆರೋಗ್ಯ ಇಲಾಖೆಯಿಂದ ಹಸ್ತಾಂತರ ಮಾಡಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಜನರಿಗೆ ಪ್ರಯೋಗಾಲಯದ ಸೇವೆ ಒದಗಿಸುವ ಉದ್ದೇಶದಿಂದ ಸಂಚಾರಿ ಆಸ್ಪತ್ರೆಯನ್ನು ಇನ್ಫೋಸೆಸ್ ಹಾಗೂ ರೋಟರಿ ಸಂಸ್ಥೆಗಳು ದೇಣಿಗೆಯಾಗಿ ನೀಡಿವೆ ಎಂದು ಹೇಳಿದ್ದಾರೆ.

ಗ್ರಾಮೀಣ ಭಾಗದಲ್ಲಿ ಆರೋಗ್ಯ ತಪಾಸಣೆಯ ಕೊರತೆ ಇರುವ ಕಡೆಗಳಲ್ಲಿ ಇಂತಹ ಸಂಚಾರಿ ಕ್ಲಿನಿಕ್ ಗಳನ್ನು ಒದಗಿಸಲಾಗುತ್ತಿದೆ. ಆರೋಗ್ಯ ಸೇವೆಗಳು ತಲುಪದೆ ಇರುವವರಿಗೆ ಈ ಸೇವೆಗಳನ್ನು ತಲುಪಲಿವೆ.ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಸಂಚಾರಿ ಕ್ಲಿನಿಕ್ ನಲ್ಲಿ ಸಾಂಕ್ರಮಿಕ ರೋಗಗಳಾದ ಕೊರೋನಾ ವೈರಸ್, ಟಿಬಿ, ಮಲೇರಿಯಾ, ಡೆಂಘಿ ಮತ್ತು ಸಾಂಕ್ರಮಿಕ ರೋಗಗಳನ್ನು ಪತ್ತೆ ಹಚ್ಚಲು ಸಹಕಾರಿಯಾಗಿದೆ. ಎಲ್ಲ ವೈದ್ಯಕೀಯ ಸೌಲಭ್ಯಗಳನ್ನು ನಿರಂತರವಾಗಿ ಗ್ರಾಮೀಣ ಭಾಗದ ಜನರಿಗೆ ಸೂಕ್ತ ಸಮಯದಲ್ಲಿ ನೀಡಲಿವೆ ಎಂದು ತಿಳಿಸಿದ್ದಾರೆ.

ಡಾ.ಅಂಬೇಡ್ಕರ್ ಅವರ ‌ಹೆಸರಿಗೆ ಸಂವಿಧಾನ ಶಿಲ್ಪಿ ಬಿರುದು ಸೇರ್ಪಡೆಗೊಳಿಸಿ ಮುದ್ರಣ- ನಾಗೇಶ್

0

ರೋಹಿತ್ ಚಕ್ರತೀರ್ಥ ಸಮಿತಿಯು ಪಠ್ಯ ಪರಿಷ್ಕರಣೆ ವೇಳೆ ಕೈ ಬಿಟ್ಟಿದ್ದ ಡಾ.ಬಿ.ಆರ್. ಅಂಬೇಡ್ಕರ್ ಸಂವಿಧಾನ ಶಿಲ್ಪಿ ಬಿರುದನ್ನು ಮತ್ತೆ ಸೇರಿಸಿ 9 ನೇ ತರಗತಿ ಸಮಾಜ ವಿಜ್ಞಾನ ನಮ್ಮ ಸಂವಿಧಾನ ಅಧ್ಯಾಯವನ್ನು ಪ್ರತ್ಯೇಕವಾಗಿ ಮುದ್ರಿಸಿ ಶಾಲೆಗಳಿಗೆ ಪೂರೈಸಲು ಶಿಕ್ಷಣ ಇಲಾಖೆ ಮುಂದಾಗಿದೆ.

9 ನೇ ತರಗತಿಯ ನಮ್ಮ ಸಂವಿಧಾನ ಅಧ್ಯಾಯದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರಿಗಿದ್ದ ಸಂವಿಧಾನ ಶಿಲ್ಪಿ ಬಿರುದನ್ನು ಕೈಬಿಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾದ ಬಳಿಕ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಸಂವಿಧಾನ, ಅಂಬೇಡ್ಕರ್ ವಿಚಾರಗಳಿಗೆ ಸಂಬಂಧಿಸಿದಂತೆ ತಪ್ಪುಗಳಿದ್ದರೆ ಅವುಗಳನ್ನು ಸರಿಪಡಿಸಿ, ನಮ್ಮ ಸಂವಿಧಾನ ಅಧ್ಯಾಯವನ್ನು ಹೊಸದಾಗಿ ಮುದ್ರಿಸಲು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.