Saturday, August 8, 2026
Saturday, August 8, 2026
Home Blog Page 153

Pallavi G ನಿವೇಶನ ರಹಿತ ಅಲೆಮಾರಿ ಜನಾಂಗದವರಿಗೆ ಮೊದಲ ಆದ್ಯತೆ ನೀಡಿ- ಜಿ.ಪಲ್ಲವಿ.

0

Pallavi G ಶಿವಮೊಗ್ಗ ತಾಲ್ಲೂಕುಗಳಲ್ಲಿನ ಸಮಾಜ ಕಲ್ಯಾಣ ಅಧಿಕಾರಿಗಳು, ತಹಶೀಲ್ದಾರರು, ಇಓ, ಪಿಡಿಓ ಗಳು ನಿವೇಶನ ರಹಿತ ಅಲೆಮಾರಿ ಜನಾಂಗದವರಿಗೆ ನಿವೇಶನ ನೀಡುವುದಕ್ಕೆ ಮೊದಲ ಆದ್ಯತೆ ನೀಡಬೇಕೆಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ದಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ ತಿಳಿಸಿದರು.

ಶಿವಮೊಗ್ಗ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ದಿ ನಿಗಮದಿಂದ ಜಾರಿಯಾದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ಮತ್ತು ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಿವಮೊಗ್ಗ ತಾಲ್ಲೂಕಿನ ಗೋಂದಿಚಟ್ನಹಳ್ಳಿಯಲ್ಲಿ ನಿವೇಶನರಹಿತ ಅಲೆಮಾರಿ ಜನಾಂಗದವರು ತಮಗೆ ನಿವೇಶನ ನೀಡುವಂತೆ ನಿರಂತರವಾಗಿ ಬೇಡಿಕೆ ಇಟ್ಟರೂ, ಅದಕ್ಕೆ ಆದ್ಯತೆ ನೀಡದೇ ಬೇರೆ ಕಾರಣಗಳಿಗೆ ಭೂಮಿ ನೀಡಲು ಮುಂದಾಗಿರುವುದು ತಮ್ಮ ಗಮನಕ್ಕೆ ಬಂದಿದ್ದು, ಇಲಾಖೆ ಅಧಿಕಾರಿಗಳು, ತಹಶೀಲ್ದಾರರು, ಇಓ ಮತ್ತು ಪಿಡಿಓ ಗಳು ಈ ಬಗ್ಗೆ ಸಮಗ್ರವಾಗಿ ಪರಿಶೀಲಿಸಿ ಮೊದಲು ನಿವೇಶನರಹಿತ ಅಲೆಮಾರಿಗಳಿಗೆ ನಿವೇಶನ ಗುರುತಿಸಿ ನೀಡುವುದಕ್ಕೆ ಆದ್ಯತೆ ನೀಡಬೇಕು ಎಂದು ಸೂಚನೆ ನೀಡಿದ ಅವರು ನಿಗಮದಲ್ಲಿ ಸುಮಾರು 3300 ವಸತಿ ಸೌಲಭ್ಯ ಕಲ್ಪಿಸಲು ರೂ.100 ಕೋಟಿ ಅನುದಾನ ಲಭ್ಯವಿದ್ದು, ಜಿಲ್ಲೆಯಲ್ಲಿ ಈ ವಸತಿ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.

ಹಾಗೂ ಎಲ್ಲಾ ತಾಲ್ಲೂಕುವಾರು ಸಂಬಂಧಿಸಿದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ನಿವೇಶನರಹಿತ ಅಲೆಮಾರಿ ಜನಾಂಗದವರ ಪಟ್ಟಿಯನ್ನು ಒಂದು ವಾರದೊಳಗೆ ನೀಡುವಂತೆ ಸೂಚಿಸಿದರು.
ಸಮರ್ಪಕ ಮಾಹಿತಿ ನೀಡಲು ಸೂಚನೆ : ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ಪರಿಶಿಷ್ಟ ಜಾತಿ ಮತ್ತು ಪಂಗಡದ ಅಲೆಮಾರಿ ಜಾತಿಗಳ ಕುರಿತು ಹಾಗೂ ತಾಲ್ಲೂಕುವಾರು ನಿವೇಶನ ರಹಿತರ ಮಾಹಿತಿಯನ್ನು ಸಮರ್ಪಕವಾಗಿ ನೀಡಿಲ್ಲ. ಅದನ್ನು ಶೀಘ್ರದಲ್ಲಿ ಸರಿಪಡಿಸಿ ನೀಡಬೇಕು ಎಂದು ತಾಕೀತು ಮಾಡಿದರು.

ವಸತಿ ಮತ್ತು ಇತರೆ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಅಗತ್ಯವಾದ ಮೂಲ ದಾಖಲೆಗಳಾದ, ಆಧಾರ್, ಜಾತಿ ಪ್ರಮಾಣ ಪತ್ರ, ರೇಷನ್ ಕಾರ್ಡ್ನಂತಹ ದಾಖಲೆಗಳು ಬಹಳಷ್ಟು ಅಲೆಮಾರಿ ಜನಾಂಗದವರ ಬಳಿ ಇಲ್ಲ. ಈ ಮೂಲ ದಾಖಲಾತಿಗಳನ್ನು ಒದಗಿಸಲು ತಹಶೀಲ್ದಾರರು ಸಹಕರಿಸಬೇಕು. ಸ್ಥಾನಿಕ ಚೌಕಾಸಿ ಮಾಡಿ ಜಾತಿ ಪ್ರಮಾಣ ಪತ್ರ ನಿಡಬೇಕು ಎಂದು ತಿಳಿಸಿದರು.

Pallavi G 2025-26 ನೇ ಸಾಲಿಗೆ ನಿಗಮದಿಂದ ಅಲೆಮಾರಿ ಜನಾಂಗಗಳಿಗೆ ಜಾರಿಗೊಳಿಸಿರುವ ವಿವಿಧ ಯೋಜನೆಗಳನ್ನು ಅವರಿಗೆ ನಿಗದಿತ ಸಮಯದೊಳಗೆ ತಲುಪಿಸಬೇಕು. ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯಡಿ ದಾಖಲಾತಿಗಳನ್ನು ಒಂದು ತಿಂಗಳಲ್ಲಿ ಸಲ್ಲಿಸದಿದ್ದಲ್ಲಿ ಅಲೆಮಾರಿ ಜನಾಂಗದ ಇತರರಿಗೆ ಅವಕಾಶ ಕೊಡಬೇಕು. ಉದ್ಯಮಶೀಲತಾ ಯೋಜನೆ, ಸ್ವಾವಲಂಬಿ ಸಾರಥಿ ಯೋಜನೆಗಳಡಿ ಫಲಾನುಭವಿಗಳನ್ನು ನಿಗದಿತ ಅವಧಿಯೊಳಗೆ ಆಯ್ಕೆ ಮಾಡಿ ಸೌಲಭ್ಯ ನೀಡುವಂತೆ ಸೂಚಿಸಿದರು.

ವಸತಿ ಶಾಲೆಗಳಲ್ಲಿ ಅಲೆಮಾರಿ ಜನಾಂಗಗಳಿಗೆ ಶೇ.10 ಮೀಸಲಾತಿಯ ವಿವರ ಪಡೆದ ಅವರು ಅಲೆಮಾರಿ ಜನಾಂಗದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕೆಂದರು.
ಬೊಮ್ಮನಕಟ್ಟೆ ಗ್ರಾ ಪಂ ವ್ಯಾಪ್ತಿಯ 12 ಅಲೆಮಾರಿ ಜನಾಂಗದ ಕುಟುಂಬಗಳಿಗೆ ನಿವೇಶನ ಇಲ್ಲ. ಇವರಿಗೆ ನಿವೇಶನ ಒದಗಿಸಲು ಕ್ರಮ ಕೈಗೊಳ್ಳಬೇಕು. ಶಿಕಾರಿಪುರದಲ್ಲಿ ಹಂದಿಜೋಗಿ ಜನಾಂಗದ 7 ಕುಟುಂಬಗಳಿಗೆ ನಿವೇಶನ ಇಲ್ಲ. ಪುರಸಭೆಯವರು ಇವರಿಗೆ ನಿವೇಶನ ಒದಗಿಸಿ ಮಾಹಿತಿ ನೀಡಬೇಕೆಂದರು. ಹೊಸನಗರ ತಾಲ್ಲೂಕಿನ ಜೇನಿ ಗ್ರಾಮದ ಶಿಳ್ಳೇಕ್ಯಾತ ಜನಾಂಗದ 20 ಕುಟುಂಬಗಳಿಗೆ ಮೂಲಭೂತ ಸೌಲಭ್ಯ ಒದಗಿಸುವಂತೆ ಸಂಬAಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶಿವಮೊಗ್ಗ ತಾಲ್ಲೂಕಿನ ಕಲ್ಲಾಪುರ ಗ್ರಾಮದಲ್ಲಿ ಅಲೆಮಾರಿ ಜನಾಂಗದವರು ಅರಣ್ಯ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದಾರೆಂಬ ಕಾರಣಕ್ಕೆ ಮೂಲಭೂತ ಸೌಕರ್ಯಗಳು ಸಿಗುತ್ತಿಲ್ಲ. ಮೂಲಭೂತ ಸೌಕರ್ಯಗಳು, ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿರುವ ಈ ಜನಾಂಗದವರು ಯಾವ ಜಾಗದಲ್ಲಿ ವಾಸಿಸುತ್ತಿದ್ದಾರೆ ಎಂದು ಖಾತ್ರಿಪಡಿಸಿಕೊಂಡು, ಮೂಲಭೂತ ಸೌಕರ್ಯಗಳು ಮತ್ತು ಸರ್ಕಾರದ ಸೌಲಭ್ಯಗಳು ಸಿಗುವಂತೆ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಅಲೆಮಾರಿ ಜನಾಂಗಗಳು ವಾಸಿಸುತ್ತಿರುವ ಸ್ಥಳಗಳಿಗೆ ಅಧಿಕಾರಿಗಳು ಭೇಟಿ ಅವರನ್ನೆಲ್ಲ ಒಂದೆಡೆ ಸೇರಿಸಿ ಸರ್ಕಾರದ ಸೌಲಭ್ಯಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಮಾಡಬೇಕು. ಐಇಸಿ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಮಾಡಬೇಕು ಎಂದು ತಿಳಿಸಿದರು.

ಮಿಷನ್ ಸುರಕ್ಷಾ ಅಭಿಯಾನದಡಿ ಬಾಲ್ಯ ವಿವಾಹ ಕುರಿತು ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಬೇಕು. ಈಗಾಗಲೇ ಕೈಗೊಂಡಿರುವ ಚಟುವಟಿಕೆಗಳ ಕುರಿತು ವರದಿ ನೀಡಬೇಕು ಎಂದರು.
ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮಾತನಾಡಿ, ಅಧಿಕಾರಿಗಳು ಸಭೆಗೆ ಸಮರ್ಪಕವಾದ ಮಾಹಿತಿಯನ್ನು ನೀಡಬೇಕು. ಅಲೆಮಾರಿ ಜನಾಂಗಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿಯನ್ನು ಇನ್ನೆರಡು ದಿನಗಳಲ್ಲಿ ತಮಗೆ ನೀಡಬೇಕು. ನಿಗದಿತ ವೇಳೆಯೊಳಗೆ ಸೌಲಭ್ಯ, ಯೋಜನೆಗಳನ್ನು ಅವರಿಗೆ ತಲುಪಿಸಬೇಕು. ಹಾಗೂ ಅಲೆಮಾರಿ ಜನಾಂಗದವರು ತಮ್ಮನ್ನು ನೇರವಾಗಿ ಭೇಟಿಯಾಗಿ ಅಹವಾಲು ನೀಡಬಹುದೆಂದು ತಿಳಿಸಿದರು.

ಸಭೆಯ ನಂತರ ನಿಗಮದ ಅಧ್ಯಕ್ಷರು ಪ.ಜಾ, ಪ.ಪಂ ಗಳ ಅಲೆಮಾರಿ ಸಮುದಾಯದ ಜನರಿಂದ ವಿವಿಧ ರೀತಿಯ ಕುಂದು ಕೊರತೆಗಳ ಅಹವಾಲುಗಳನ್ನು ಸ್ವೀಕರಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ, ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ರಮೇಶ್ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಲ್ಲೇಶಪ್ಪ, ನಿಗಮದ ಸದಸ್ಯರು, ನಿಗಮದ ಕೋಆರ್ಡಿನೇಟರ್ ಆನಂದಕುಮಾರ್, ಎಲ್ಲ ತಾಲ್ಲೂಕುಗಳ ತಹಶೀಲ್ದಾರರು, ಇಓ ಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

Klive.news ಸಂಪಾದಕೀಯ.ಜಗವೇ ನಾಟಕ ರಂಗ..ಡಾ.ಸುಧೀಂದ್ರ.ಪ್ರಧಾನ ಸಂಪಾದಕರು. ಕೆಲೈವ್ .ನ್ಯೂಸ್

0

Klive.news ಜಗದೀಶನಾಡುವ ಜಗವೇ ನಾಟಕ ರಂಗ
ಈ ಹಾಡು ಕೇವಲ ಸಿನಿಮಾ ನೋಡಿ ಅರ್ಥಮಾಡಿಕೊಳ್ಳುವುದಲ್ಲ. ಪ್ರಾಚೀನವಾಗಿ ನಮ್ಮ ಸನಾತನ ತಳಹದಿಯಲ್ಲೇ ಈ ಸಂದೇಶವಿದೆ.
ಭಗವಂತ ವಿಷ್ಣುವಿಗೆ ಜಗನ್ನಾಟಕ ಸೂತ್ರಧಾರಿ. ಜಗನ್ನಾಥ ,ರಂಗನಾಥ ಎಂಬೆಲ್ಲ ಸ್ತುತಿಗಳಿವೆ.

ನಾಟಕದ ಅಂಶಗಳು ನಮ್ಮಲ್ಲಿಲ್ಲವೆ? ಅಂದರೆ ನಮ್ಮದೇ ಮನೋಧರ್ಮಗಳ ಬಿಂಬವೇ ನಾಟಕವಾಗಿ ರಂಗದಮೇಲೆ ಅಭಿನಯವಾಗುತ್ತದೆ.
ಅಂದರೆ ನಮ್ಮಿಂದಲೇ ಆ ವಸ್ತು ,ರಂಗರೂಪ ತಾಳುತ್ತದೆ. ಪಾತ್ರಧಾರಿಗಳು ನಟಿಸುತ್ತಾರೆ.
ಅಂದರೆ ಯಾಕೆ ಈ ಪ್ರಯೋಗ? ಇದು ಬೇಕೆ? ರಂಗರೂಪ ಯಾಕೆ ಪ್ರದರ್ಶಿತವಾಗಬೇಕು? ಅದು ಅನಿವಾರ್ಯವೆ? ಔಚಿತ್ಯವಿದೆಯೆ? ಎಂಬೆಲ್ಲ ಪ್ರಶ್ನೆಗಳು ಕಾಡುತ್ತವೆ.

ಕೇವಲ ರಂಜನೆಯ ಪ್ರಯತ್ನವಾಗಿ ಜನಿಸಿದ ಈ ಮಾದರಿ ಇಂದು ಸಾಮಾಜಿಕರನ್ನ ತಿದ್ದುವ ಹೊಣೆ ಹೊತ್ತಿದೆ.

Rama Navami ಶ್ರೀರಾಮನವಮಿ: ಅರ್ಥಪೂರ್ಣವಾಗಿಸೋಣ.ಲೇ: ಎನ್.ಜಯಭೀಮ ಜೊಯ್ಸ್.

0

Rama Navami ಶ್ರೀವಿಷ್ಣುವಿನ ದಶಾವತಾರಗಳಲ್ಲಿ ಏಳನೆಯ ಅವತಾರ ಶ್ರೀರಾಮಾವತಾರ.ಶ್ರೀರಾಮ ಭರತಖಂಡದಲ್ಲಿ ಆದರ್ಶ ಪುರುಷನಾಗಿ ಬದುಕಿ,ರಾಜ್ಯವನ್ನಾಳಿ ಮಾನವತ್ವದಿಂದ ದೈವತ್ವಕ್ಕೇರಿ,ಮುಂದಿನ ಜನಾಂಗಕ್ಕೆ ಮಾರ್ಗದರ್ಶಕನಾದ.
ನಮ್ಮ ಪ್ರತಿಯೊಬ್ಬರ ಒಳಗೂ ಒಬ್ಬ ರಾಮನಿದ್ದಾನೆ
ಮತ್ತು ಒಬ್ಬ ರಾವಣನಿದ್ದಾನೆ. ರಾಮನು “ಮರ್ಯಾದ ಪುರುಷೋತ್ತಮ”ಅಂದರೆ ಮನುಷ್ಯನು ಮಿತಿಯೊಳಗೆ ಇದ್ದುಕೊಂಡು ಹೇಗೆಶ್ರೇಷ್ಠನಾಗಬಹುದು ಎಂಬುದಕ್ಕೆ ಸಾಕ್ಷಿ.ರಾಮನುಸಾತ್ವಿಕ ಗುಣದ ಪ್ರತೀಕ.ತನ್ನ ತಂದೆಯ ಮಾತನ್ನುಉಳಿಸಲು,ಸಿಗಬೇಕಿದ್ದ ರಾಜಪಟ್ಟವನ್ನೇ ತ್ಯಜಿಸಿ ಕಾಡಿಗೆಷಹೋದವನು ಶ್ರೀರಾಮ.ಇಲ್ಲಿ ರಾಜ್ಯಪಟ್ಟ
ಎಂದರೆ ಲೌಕಿಕ ಸುಖ ಮತ್ತು ಅಧಿಕಾರದ ಸಂಕೇತ.
ಅದನ್ನು ತ್ಯಜಿಸುವುದು ಎಂದರೆಅಹಂಕಾರವನ್ನುಬಿಡುವುದು ಎಂದರ್ಥ.ಮತ್ತೊಂದೆಡೆ,ರಾವಣನುಹತ್ತುತಲೆಗಳಅಸುರ.ಈ ಹತ್ತು ತಲೆಗಳು ಕೇವಲ ದೈಹಿಕ ರೂಪವಲ್ಲ,ಅವು ನಮ್ಮ ಐದು ಜ್ಞಾನೇಂದ್ರಿಯಗಳುlಮತ್ತು ಐದು ಕರ್ಮೇಂದ್ರಿಯಗಳ ಸಂಕೇತ.ರಾವಣನು ಮಹಾನ್ಶಪಂಡಿತ ನಾಗಿದ್ದರೂ,ವೇದ ಪಾರಂಗತನಾಗಿದ್ದರೂ ತನ್ನ ಇಂದ್ರಿಯಗಳ ಮೇಲೆ ಹತೋಟಿ ಹೊಂದಿರಲಿಲ್ಲ.ಯಾವಾಗ ಮನುಷ್ಯ ತನ್ನ ಇಂದ್ರಿಯಗಳಿಗೆ ದಾಸ ನಾಗುತ್ತಾನೋ,ಆಗ ಅವನುಎಷ್ಟೇಜ್ಞಾನಿಯಾಗಿದ್ದರೂ ರಾವಣನಂತೆ ಪತನ ಹೊಂದುತ್ತಾನೆ.ಶ್ರೀರಾಮನು ರಾವಣ
ನಿಂದಶಕಡೆಯ ಉಪದೇಶವನ್ನು ಲಕ್ಷ್ಮಣನಮುಖಾಂತರ ತಿಳಿಯಲಪೇಕ್ಷಿಸಿದಾಗ ಸಾವಿನ ದಡೆಯಲ್ಲಿದ್ದ ರಾವಣನು “ನಾನುಇಂದ್ರಿಯಗಳಿಗೆದಾಸನಾದೆ,ಪರಸ್ತ್ರೀಯನ್ನುವ್ಯಾಮೋಹಿಸಿದೆ,ಇದು ನನ್ನ ವಿನಾಶಕ್ಕೆ ಕಾರಣವಾಯಿತು”ಎಂದು ಅವನು ಒಪ್ಪಿಕೊಳ್ಳುತ್ತಾನೆ.ಇದು ಮಾನವಕುಲಕ್ಕೆ ನೀಡುವ ಎಚ್ಚರಿಕೆ,ಬುದ್ಧವಂತಿಕೆಗಿಂತ ಶೀಲ ಮುಖ್ಯ ಎನ್ನುವುದನ್ನು ಪ್ರತಿಬಿಂಬಿಸುತ್ತದೆ.ಶ್ರೀರಾಮನು ಧರ್ಮವನ್ನು ಎತ್ತಿ ಹಿಡಿಯಲು “ಅರ್ಥ”ಎಂದರೆಸಂಪತ್ತು ಹಾಗೂ ರಾಜ್ಯವನ್ನು ಮತ್ತುಕಾಮಅಂದರೆಆಸೆಹಾಗೂಸುಖವನ್ನುಬದಿಗೊತ್ತಿದನು.
ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಹೇಳುವಂತೆ,”ಧರ್ಮಕ್ಕೆ ಅವಿರೋಧವಾದ ಕಾಮ ನಾನೇ” ಅಂದರೆ,ನಮ್ಮ ಆಸೆಗಳು ಧರ್ಮದ ಚೌಕಟ್ಟಿನಲ್ಲಿದ್ದಾಗ ಮಾತ್ರ ಅವು ಜೀವನಕ್ಕೆಶೋಭೆ ತರುತ್ತವೆ.ರಾವಣನು ಧರ್ಮವನ್ನು ಮೀರಿ ಕಾಮದ ಬೆನ್ನು ಹತ್ತಿದ್ದರಿಂದಲೇ ಸರ್ವನಾಶವಾದನು.ಶ್ರೀರಾಮನ ಚಾರಿತ್ರ್ಯ ಎಂತಆದಹುದುಎಂದರೆ,ಅವನಶತೃಗಳೂಅವನನ್ನುಗೌರವಿಸುತ್ತಿದ್ದರು.ಆಧ್ಯಾತ್ಮಿಕವಾಗಿ ಸೀತೆಯು “ಶಾಂತಿ”ಯಸಂಕೇತ.
ಆ ಶಾಂತಿಯನ್ನು ರಾವಣನೆಂಬ “ಅಹಂಕಾರ” ಮತ್ತು “ಕಾಮ” ಅಪಹರಿಸುತ್ತವೆ.ಆ ಶಾಂತಿಯನ್ನು ಮರಳಿ ಪಡೆಯಲು ರಾಮನೆಂಬ “ಆತ್ಮ ಹನುಮಂತ (ರಾಮನ ಅಂತರಂಗ ಭಕ್ತ) ನೆಂಬ “ಮನಸ್ಸಿನ” ಸಹಾಯದಿಂದ ಲಂಕೆ ಎಂಬ“ದೇಹ”ದಒಳಗೆಹೋಗಿಯುದ್ಧಮಾಡಬೇಕಾಗುತ್ತದೆ.ಈ ಯುದ್ಧವು ಹೊರಗಿನದಲ್ಲ.ನಮ್ಮೊಳಗಿನ ಅಜ್ಞಾನದ ವಿದುದ್ಧದ ಹೊರಾಟ.ರಾಮಾಯಣವು ನಮಗೆಸಂಬಂಧಗಳ ಮೌಲ್ಯವನ್ನುಕಲಿಸುತ್ತದೆ.ರಾಮನುಒಬ್ಬಆದರ್ಶಮಗನಾಗಿ,ಸಹೋದರನಾಗಿ,ಪತಿಯಾಗಿ ಮತ್ತು ರಾಜನಾಗಿ ಹೇಗೆ ವರ್ತಿಸಬೇಕುಎಂಬುದನ್ನುತೋರಿಸಿಕೊಟ್ಟಿದ್ದಾನೆ.ಅಧಿಕಾರಕ್ಕಾಗಿ ಹೊಡೆದಾಡುವ ಈ ಕಾಲದಲ್ಲಿ ತನಗೇ ಬರಬೇಕಾಗಿದ್ದ Rama Navami  ರಾಜ್ಯಪಟ್ಟವನ್ನು ತಮ್ಮ ಭರತನಿಗೆಬಿಟ್ಟುಕೊಡುವ ರಾಮ ಮತ್ತುಅಣ್ಣನಪಾದುಕೆಗಳನ್ನೇಇಟ್ಟುರಾಜ್ಯವಾಳುವಭರತ,ಇವರಿಬ್ಬರೂ ನಿಸ್ವಾರ್ಥತೆಯ ಪಾಠವನ್ನು ಕಲಿಸಿಕೊಡುತ್ತಾರೆ.
ರಾಮಾಯಣವುನಮಗೆನೀಡುವಸಂದೇಶಸ್ಪಷ್ಟವಾಗಿದೆ.”ಹೃದಯದಲ್ಲಿರಾಮನಿರುವಕಡೆಕಾಮವಿರುವುದಿಲ್ಲ,ಕಾಮವಿರುವ ಕಡೆ ರಾಮನಿರುವುದಿಲ್ಲ.ನಾವು ಹೊರಗಿನ ರಾಮನನ್ನು ಪೂಜಿಸುವುದರ ಜೊತೆಗೆ,ನಮ್ಮೊಳಗಿನ ರಾವಣತ್ವವನ್ನು ತೊಲಗಿಸಬೇಕಾಗಿದೆ.ಇಂದ್ರಿಯಗಳನ್ನು ಗೆದ್ದು ಧರ್ಮದ ಹಾದಿಯಲ್ಲಿ ನಡೆದಾಗ ಮಾತ್ರ ನಮ್ಮ ಜೀವನವೂ “ರಾಮರಾಜ್ಯ”ವಾಗಲು ಸಾಧ್ಯ.ರಾಮಾಯಣವು ಕೇವಲ ಹಿಂದಿನ ಕಥೆಯಲ್ಲ,ಅದುನಮ್ಮದೈನಂದಿನಬದುಕಿನಪ್ರತಿಕ್ಷಣ
ನಿರ್ಧಾರಗಳ ಸಂಕಲನ.
ಶ್ರೀರಾಮನವಮಿಆಚರಣೆಬರೇಪಾನಕ,ಕೋಸಂಬರಿ ಹಂಚಿಕೆಗೆ ಸೀಮಿತವಾಗದೇಶ್ರೀರಾಮನ ಆದರ್ಶಗಳನ್ನು
ಸ್ವಲ್ಪವಾದರೂಪಾಲಿಸುತ್ತೇವೆಂದುಪ್ರತಿಜ್ಞೆಮಾಡಿದರೆ,ರಾಮನವಮಿಆಚರಣೆ ಅರ್ಥಪೂರ್ಣವಾದೀತು!.

Department of School Education and Literacy ಸರ್ಕಾರಿ ಶಾಲಾ & ಪಿಯು ಕಾಲೇಜುಗಳ ಭೂಮಿ ರಕ್ಷಣೆಯ ಮಸೂದೆಗೆ ಒಮ್ಮತದ ಅಂಗೀಕಾರ.

0

Department of School Education and Literacy ಸರ್ಕಾರಿ ಶಾಲಾ-ಪಿಯುಸಿ ಕಾಲೇಜುಗಳ ಭೂಮಿ ರಕ್ಷಣೆಯ ಐತಿಹಾಸಿಕ ಮಸೂದೆಗೆ ವಿಧಾನ ಪರಿಷತ್ತಿನಲ್ಲೂ ಒಮ್ಮತದ ಅಂಗೀಕಾರ!

ವಿಧಾನಸಭೆಯ ಬೆನ್ನಲ್ಲೇ, ಇಂದು ವಿಧಾನ ಪರಿಷತ್ತಿನಲ್ಲಿಯೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅತ್ಯಂತ ಮಹತ್ವದ ‘ಕರ್ನಾಟಕ ಸರ್ಕಾರಿ ಶೈಕ್ಷಣಿಕ ಸಂಸ್ಥೆಗಳ ಭೂಮಿಗಳ (ರಕ್ಷಣೆ ಮತ್ತು ಸಕ್ರಮಾತಿ) ವಿಧೇಯಕ-2026’ ಅನ್ನು ಮಂಡಿಸಲಾಯಿತು. ಈ ಮಸೂದೆಗೆ ಮೇಲ್ಮನೆಯ ಎಲ್ಲಾ ಹಿರಿಯ ಸದಸ್ಯರು ಪಕ್ಷಭೇದ ಮರೆತು, ಸುದೀರ್ಘ ಚರ್ಚೆ ನಡೆಸಿ ಒಮ್ಮತದ ಬೆಂಬಲ ಸೂಚಿಸಿ ಅಂಗೀಕರಿಸಿರುವುದು ಅತ್ಯಂತ ಸಂತಸದ ಹಾಗೂ ಹೆಮ್ಮೆಯ ವಿಚಾರ.

ದಶಕಗಳ ಹಿಂದೆ ಸರ್ಕಾರಿ ಶಾಲೆಗಳ ಉಳಿವಿಗಾಗಿ ಹಾಗೂ ಮಕ್ಕಳ ಶಿಕ್ಷಣಕ್ಕಾಗಿ ತಮ್ಮ ಸ್ವಂತ ಜಮೀನುಗಳನ್ನು ನಿಸ್ವಾರ್ಥವಾಗಿ ನೀಡಿದ ದಾನಿಗಳ ಆಶಯವನ್ನು ಈ ಮಸೂದೆ ಎತ್ತಿಹಿಡಿಯಲಿದೆ. ದಾಖಲೆಗಳ ಕೊರತೆಯಿಂದ ಆಗಿದ್ದ ಸಮಸ್ಯೆಗಳನ್ನು ಸರಿಪಡಿಸಿ, ಜಮೀನುಗಳನ್ನು ಅಧಿಕೃತವಾಗಿ ಇಲಾಖೆಯ ಸುಪರ್ದಿಗೆ ತರುವ ಜೊತೆಗೆ ದಾನಿಗಳ ಹೆಸರನ್ನು ಉಳಿಸುವ ಪ್ರಾಮಾಣಿಕ ಪ್ರಯತ್ನ ಇದಾಗಿದೆ.

ಕಳೆದ 12 ವರ್ಷಗಳಿಗೂ ಹೆಚ್ಚು ಕಾಲದಿಂದ ಸರ್ಕಾರಿ ಶಾಲೆಗಳು ಕಾರ್ಯನಿರ್ವಹಿಸುತ್ತಿರುವ, ಆದರೆ ಇಲಾಖೆಯ ಹೆಸರಿಗೆ ನೋಂದಣಿಯಾಗದ ಖಾಸಗಿ ಅಥವಾ ಇತರ ಜಮೀನುಗಳನ್ನು ಕಾನೂನುಬದ್ಧವಾಗಿ ಸಕ್ರಮಗೊಳಿಸಿ ಇಲಾಖೆಯ ಸುಪರ್ದಿಗೆ ಪಡೆಯಲು ಈ ವಿಧೇಯಕ ಹಾದಿ ಸುಗಮಗೊಳಿಸಿದೆ.

Department of School Education and Literacy ಶಾಲೆಗಳ ಜಮೀನುಗಳು ಯಾವುದೇ ಕಾರಣಕ್ಕೂ ಒತ್ತುವರಿಯಾಗದಂತೆ ತಡೆಯಲು ಮತ್ತು ಅನ್ಯ ಕಾರ್ಯಗಳಿಗೆ ಬಳಕೆಯಾಗದಂತೆ ಕಟ್ಟುನಿಟ್ಟಿನ ರಕ್ಷಣೆ ಒದಗಿಸಲು ಈ ಕಾನೂನು ಬಲ ತುಂಬಲಿದೆ.

ಮಕ್ಕಳ ಭವಿಷ್ಯ ಹಾಗೂ ಸರ್ಕಾರಿ ಶಾಲೆಗಳ ಸಬಲೀಕರಣವೇ ನಮ್ಮ ಸರ್ಕಾರದ ಮೂಲ ಮಂತ್ರ. ಈ ಮಸೂದೆಯ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ, ತಮ್ಮ ಅತ್ಯಮೂಲ್ಯವಾದ ಸಲಹೆ-ಸೂಚನೆಗಳನ್ನು ನೀಡಿ ಒಮ್ಮತದ ಅಂಗೀಕಾರಕ್ಕೆ ಕಾರಣರಾದ ಸನ್ಮಾನ್ಯ ಸಭಾಪತಿಗಳಿಗೆ ಹಾಗೂ ವಿಧಾನ ಪರಿಷತ್ತಿನ ಎಲ್ಲಾ ಸದಸ್ಯರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಗಳು.

ಸರ್ಕಾರಿ ಶಾಲೆ ಉಳಿಸೋಣ, ಬೆಳೆಸೋಣ!

Water Tax ಶಿವಮೊಗ್ಗದ ವಿವಿಧೆಡೆ ನೀರಿನ ಕಂದಾಯ ಪಾವತಿ ಕೌಂಟರ್ ವ್ಯವಸ್ಥೆ.

0

Water Tax ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣಾ ವಿಭಾಗ ಮತ್ತು ಉಪವಿಭಾಗ ಶಿವಮೊಗ್ಗ ಇವರ ವತಿಯಿಂದ 2025-26 ನೇ ಸಾಲಿನ ಮಾರ್ಚ್ 29 ರ ಭಾನುವಾರದಂದು ನೀರಿನ ಕಂದಾಯ ಮತ್ತು ಬಾಕಿ ಕರ ವಸೂಲಾತಿ ಮಾಡಲು ವಿಶೇಷ ವಸೂಲಾತಿ ಕೌಂಟರ್‌ಗಳನ್ನು ಕೆಳಕಂಡ ಸ್ಥಳಗಳಲ್ಲಿ ತೆರೆಯಲಾಗಿದೆ.
ಭಾರತೀಯ ಸಭಾ ಭವನ ಎದುರು, ಆರ್.ಎಂ.ಎಲ್.ನಗರ, ಹಲ್ ಹಬಿಬ್ ಶಾಲೆ ಎದುರು, 1ನೇ ತಿರುವು, ಟಿಪ್ಪುನಗರ, ಸೀಗೇಹಟ್ಟಿ ಸರ್ಕಾರಿ ಶಾಲೆ ಆವರಣ, ಅಶೋಕನಗರ ನಂದಿನ ಬೂತ್, ಪೊಲೀಸ್ ಕ್ವಾಟ್ರಸ್ ಹತ್ತಿರ, ಕಾಶಿಪುರ ಕೆನರಾ ಬ್ಯಾಂಕ್ ಹತ್ತಿರ ವಿಶೇಷ ಕೌಂಟರ್‌ಗಳನ್ನು ತೆರೆಯಲಾಗಿದೆ. ನೀರಿನ ಖಾತೆದಾರರು ಬಾಕಿ ಉಳಿಸಿಕೊಂಡಿರುವ ನೀರಿನ ಕಂದಾಯವನ್ನು ಪಾವತಿಸದಿದ್ದಲ್ಲಿ Water Tax ಅಂತಹವರ ನೀರಿನ ಸಂಪರ್ಕವನ್ನು ಕಡಿತಗೊಳಿಸಲಾಗುವುದು. ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸಬೇಕೆಂದು ಕನನೀಸ ಮತ್ತು ಒಚ ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.

Adichunchanagiri Mutt ಏಪ್ರಿಲ್1. ಸರಳ ಸಾಮೂಹಿಕ ವಿವಾಹ & ಹಿರಿಯ ಆದರ್ಶ ದಂಪತಿಗಳಿಗೆ ಸನ್ಮಾನ

0

Adichunchanagiri Mutt ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪರಮಪೂಜ್ಯ ಜಗದ್ಗುರು ಪದ್ಮಭೂಷಣ ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಗಳವರ ಕೃಪಾಶೀರ್ವಾದಗಳೊಂದಿಗೆ, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ಮತ್ತು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಗಳವರ ದಿವ್ಯ ಉಪಸ್ಥಿತಿಯಲ್ಲಿ, ವಿಶೇಷ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

ಇಲ್ಲಿನ ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಸ್ಥಾನದ 27 ನೇ ವಾರ್ಷಿಕೋತ್ಸವ, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಶಿವಮೊಗ್ಗ ಶಾಖೆ, ಶರಾವತಿ ನಗರ, ಶಿವಮೊಗ್ಗ ಇಲ್ಲಿ ಕಾರ್ಯಕ್ರಮ ನಡೆಯಲಿದ್ದು, ಆದರ್ಶ ಹಿರಿಯ ದಂಪತಿಗಳಿಗೆ ಸನ್ಮಾನ ಕೂಡ ನಡೆಯುವುದು.1998 ರಂದು ನಿರ್ಮಿಸಿದ ಶ್ರೀ ಆದಿಚುಂಚನಗಿರಿ ಸಮುದಾಯಭವನ ಉದ್ಘಾಟನೆ ದಿನದಿಂದ ಆರಂಭಗೊಂಡ ಸಾಮೂಹಿಕ ವಿವಾಹ ಮಹೋತ್ಸವಕ್ಕೆ ಇಂದು 27ರ ಸಂಭ್ರಮ. ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ, ಶಿವಮೊಗ್ಗ ಶಾಖೆಯಲ್ಲಿ ನಡೆಯುವ ಈ ಶುಭ ವಿವಾಹ ಅಂದಿನಿಂದ ಇಂದಿನವರೆಗೆ ಸರಿಸುಮಾರು 750 ಕ್ಕಿಂತ ಹೆಚ್ಚು ದಾಂಪತ್ಯ ಜೀವನಗಳನ್ನು ಕಟ್ಟಿಕೊಟ್ಟಿದೆ.

ಇಂದಿನ ಪ್ರತಿ ವಿವಾಹ ಮಹೋತ್ಸವದ ವಿಶೇಷತೆ ಎಂದರೆ ಮದುವೆಯಾಗುವ ವಧು ವರರಿಗೆ ವಿವಾಹಕ್ಕೆ ಬೇಕಾದ ಅಗತ್ಯ ಸಾಮಗ್ರಿಗಳನ್ನು ಮಠವೇ ನೀಡುತ್ತದೆ. ಹೆಣ್ಣಿಗೆ ತಾಳಿ, ಕಾಲುಂಗುರ, ಬಟ್ಟೆ ನೀಡಿದರೆ, ಗಂಡಿಗೆ ಅಂಗಿ, ಪಂಚೆ, ಕಲ್ಪವೃಕ್ಷ ನೀಡುತ್ತಾರೆ.
ಪೂಜ್ಯಸದ್ಗುರು ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ನೇತೃತ್ವದಲ್ಲಿ ಇಂತಹ ಉಚಿತ ಸಾಮೂಹಿಕ ವಿವಾಹ ಸಮಾರಂಭಗಳನ್ನು ಎಂತಹುದೇ ಸಂದರ್ಭದಲ್ಲಿ ನಿಲ್ಲಿಸದೇ ಕಳೆದ 26 ವರ್ಷಗಳಿಂದ ನಿರಂತರವಾಗಿ, ವೈಭವಯುತವಾಗಿ ನಡೆಸಿಕೊಂಡು ಬರುತ್ತಿರುವ ಶಿವಮೊಗ್ಗದ ಶ್ರೀ ಆದಿಚುಂಚನಗಿರಿ ಶಾಖಾಮಠದ ಪ್ರಯತ್ನ ಶ್ಲಾಘನೀಯ ಹಾಗೂ ಗೌರವಾನ್ವಿತವಾದುದೇ ಹೌದು.

Adichunchanagiri Mutt ಈ ಬಾರಿಯ 27ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ ಏಪ್ರಿಲ್01 ರಂದು ಬೆಳಿಗ್ಗೆ 5:30 ರಿಂದ ಶ್ರೀ ಕಾಲಭೈರವೇಶ್ವರ ದೇವಾಲಯದ ವಾರ್ಷಿಕೋತ್ಸವ ಸಮಾರಂಭದ ನಿಮಿತ್ತ ಸ್ವಾಮಿಗೆ ಹೋಮ ಹವನಾದಿಗಳೊಂದಿಗೆ ಕುಂಭಾಭಿಷೇಕ, ಮಹಾಮಂಗಳಾರತಿ ವಿಶೇಷ ಪೂಜಾ ಕೈಂಕರ್ಯಗಳೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ನಂತರ ಬೆಳಿಗ್ಗೆ 8 ಗಂಟೆಗೆ ಆದರ್ಶ ಹಿರಿಯ ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮ ಸಹ ಇದೇ ಸ್ಥಳದಲ್ಲಿ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸಾನ ಶಾಖಾ ಮಠದ ಪೂಜ್ಯರು ಉಪಸ್ಥಿತರಿರುವರು .ಈ ಎಲ್ಲಾ ಕಾರ್ಯಕ್ರಮದಲ್ಲಿ.ನಗರದ ನಾಗರಿಕರು ಹಾಗೂ ಪೋಷಕ ಬಂಧುಗಳು ಹಾಗೂ ಶ್ರೀ ಮಠದ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಶುಭ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಡಬೇಕಾಗಿ ಕಾರ್ಯಕ್ರಮದ ಆಯೋಜಕರು ಕೋರಿದ್ದಾರೆ.

Bharat Scouts And Guides ಪ್ರಕೃತಿ ವಿಕೋಪದ ಸಂದರ್ಭಗಳಲ್ಲಿ ಕೈಗೊಳ್ಳಬೇಕಾದ ಜೀವರಕ್ಷಣೆ ಕಾರ್ಯಗಳ ಬಗ್ಗೆ ಯುವಜನರಿಗೆ ತರಬೇತಿ ಅಗತ್ಯ- ವಿ.ಅಭಿಷೇಕ್.

0

Bharat Scouts And Guides ಪ್ರಾಕೃತಿಕ ವಿಕೋಪ ಸಂದರ್ಭಗಳಲ್ಲಿ ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆ ಯುವಜನರಿಗೆ ತರಬೇತಿ ನೀಡುವುದು ಅತ್ಯಂತ ಅವಶ್ಯಕ ಎಂದು ಅಪರ ಜಿಲ್ಲಾಧಿಕಾರಿ ವಿ.ಅಭಿಷೇಕ್ ಹೇಳಿದರು.
ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಶಿವಮೊಗ್ಗ ಜಿಲ್ಲಾ ಘಟಕ ಹಾಗೂ ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಂಯುಕ್ತ ಆಶಯದಲ್ಲಿ ರಾಜ್ಯ ಘಟಕ ಆಯೋಜಿಸಿದ್ದ ಕೇಂದ್ರ ಸರ್ಕಾರದ ಯೋಜನೆಯಾದ ಯುವ ಆಪತ್ ಮಿತ್ರ ರಾಷ್ಟ್ರೀಯ ವಿಪತ್ತು ನಿರ್ವಹಣಾ ಶಿಬಿರದ ಕಾರ್ಯಕ್ರಮದಲ್ಲಿ ಮಾತನಾಡಿ, ತುರ್ತು ಸಂದರ್ಭಗಳಲ್ಲಿ ಮನುಷ್ಯರ ಜೀವ ಉಳಿಸಲು ಪ್ರಥಮ ಚಿಕಿತ್ಸೆಯು ತುಂಬಾ ಮುಖ್ಯ. ಜನರಿಗೆ ಪ್ರಥಮ ಚಿಕಿತ್ಸೆ ಬಗ್ಗೆ ಅರಿವು ಇದ್ದಲ್ಲಿ ಅನೇಕ ಜೀವಗಳನ್ನು ಉಳಿಸಲು ಸಾಧ್ಯವಿದೆ ಎಂದು ತಿಳಿಸಿದರು.
ಯುವ ಆಪತ್ ಮಿತ್ರ ರಾಷ್ಟ್ರೀಯ ವಿಪತ್ತು ನಿರ್ವಹಣಾ ಶಿಬಿರ ರಾಷ್ಟ್ರೀಯ ಕಾರ್ಯಕ್ರಮ ಆಗಿದ್ದು, ಪ್ರತಿಯೊಬ್ಬರೂ ಸಂಕಷ್ಟ ಕಾಲದಲ್ಲಿ ತಮ್ಮ ಅಮೂಲ್ಯವಾದ ಜೀವವನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬುವುದರ ಬಗ್ಗೆ ಅಗತ್ಯವಾದ ಅಮೂಲ್ಯವಾದ ಜಾಗೃತಿ ಕಾರ್ಯಕ್ರಮ ಇದಾಗಿದೆ. ಇಂತಹ ತರಬೇತಿ ಶಿಬಿರಗಳಲ್ಲಿ ಪಾಲ್ಗೊಂಡಾಗ ತಾವು ತರಬೇತಿ ಪಡೆದುಕೊಂಡು ವಿಪತ್ತಿನಲ್ಲಿ ಇರುವ ಪ್ರತಿಯೊಬ್ಬರನ್ನು ಸಂರಕ್ಷಿಸುವ ಕಾರ್ಯವಾಗಬೇಕಾಗಿದೆ ಎಂದು ಹೇಳಿದರು.
ವಿಪತ್ತುಗಳು ಯಾರಿಗೆ ಯಾವ ಸಂದರ್ಭದಲ್ಲಿ ಸಂಭವಿಸುತ್ತವೆ ಎಂಬುದರ ಅರಿವು ಇರುವುದಿಲ್ಲ. ನಾವುಗಳು ಸದಾ ಪರಿಣಿತರಾಗಿ ಧೈರ್ಯದಿಂದ ಇಂತಹ ಸಮಸ್ಯೆಗಳನ್ನು ಎದುರಿಸುವಲ್ಲಿ ಕಾಲೇಜು ವಿದ್ಯಾರ್ಥಿಗಳು ತರಬೇತಿ ಪಡೆದುಕೊಳ್ಳುವುದು ತುಂಬಾ ಅಗತ್ಯವಾಗಿದೆ. ಒಂದು ವಾರ ವಿವಿಧ ಬಗೆಯ ತರಬೇತಿಗಳು ನಡೆಯಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪ್ರಧಾನ ಆಯುಕ್ತೆ ಶಕುಂತಲಾ ಚಂದ್ರಶೇಖರ್ ಮಾತನಾಡಿ, ರಾಷ್ಟ್ರೀಯ ಕಾರ್ಯಕ್ರಮವನ್ನು ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಮುಖಾಂತರ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ರೋವರ್ಸ್ ರೆಂಜರ್ಸ್ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿ ವಿಪತ್ತುಗಳು ಎದುರಾದಾಗ ಅದನ್ನು ಸರಿಯಾಗಿ ನಿರ್ವಹಣೆ ಮಾಡುವ ವಿಧಾನವನ್ನು ಕಲಿಯಬೇಕು ಎಂದು ಹೇಳಿದರು.
Bharat Scouts And Guides ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ಮನುಕುಲದ ಸೇವೆಗಳ ಜೊತೆಗೆ ಇಂತಹ ವ್ಯಕ್ತಿತ್ವ ನಿರ್ಮಾಣ ಕಾರ್ಯದಲ್ಲೂ ಸಹ ಕೈಜೋಡಿಸುತ್ತಿದೆ ಎಂದು ತಿಳಿಸಿದರು.
ಎನ್ ಡಿ ಆರ್ ಎಫ್ ತಂಡದಿಂದ ವಿವೇಕ್, ದೇವರಾಜ್, ಸುಧೀರ್, ಕೃಷ್ಣ, ಸೋನುಪ ಕುಮಾರ್, ಸ್ಕೌಟ್ಸ್ ಅಂಡ್ ಗೈಡ್ಸ್ ನ ಆಯುಕ್ತ ಆನಂದ್ ಎಸ್ ಎನ್, ರವಿ ಕೆ, ಲಕ್ಷ್ಮೀ ಕೆ ರವಿ, ಕೇಂದ್ರ ಸ್ಥಾನಿಕ ಆಯುಕ್ತ ಜಿ. ವಿಜಯಕುಮಾರ್, ರಾಜೇಶ್ ಅವಲಕ್ಕಿ, ಚುಡಾಮಣಿ ಪವಾರ್, ಚಂದ್ರಶೇಖರಯ್ಯ ಕೆ ವಿ, ಮಲ್ಲಿಕಾರ್ಜುನ ಕಾನೂರ್, ರಾಜ್ಯ ಸಂಘಟನಾ ಆಯುಕ್ತರಾದ ಸುಮನಾ ಶೇಖರ್, ರಾಘವೇಂದ್ರ, ರುದ್ರಪ್ಪ ಚೀಲೂರ್ ಮತ್ತಿತರರು ಇದ್ದರು.

Rama Navami ಶಿವಮೊಗ್ಗ ನಾಗಸುಬ್ರಹ್ಮಣ್ಯ ದೇವಾಲಯದಲ್ಲಿ ಶ್ರೀರಾಮೋತ್ಸವ ಪ್ರಯುಕ್ತ ವಿಶೇಷ ಕಾರ್ಯಕ್ರಮ

0

Rama Navami ರಾಮೋತ್ಸವ ದ ಪ್ರಯುಕ್ತ ದಿನಾಂಕ :-28-03-26 ಶನಿವಾರ ದಂದು ಮಧ್ಯಾಹ್ನ 3:00ರಿಂದ ಗೋಪಾಲಗೌಡ ಬಡಾವಣೆಯ ಶ್ರೀನಾಗಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಕಾರ್ಯಕ್ರಮ ರಾಮಾಯಣದ ಮಹಾಪಾತ್ರದ ವೇಷಭೂಷಣ – ಕಿರು ನಾಟಕ – ಭಾಷಣ – ಮಿಮಿಕ್ರಿ -ಹಾಡು – ಭಜನೆ – ಚಿತ್ರ ಸ್ಪರ್ಧೇಗಳನ್ನು ಏರ್ಪಡಿಸಲಾಗಿದೆ. ಸ್ಪರ್ಧಿಗಳು ಗುಂಪು ಗೂಡಿ ಕೂಡ ಮಾಡಬಹುದು – 3 ವರ್ಷದಿಂದ 15 ವರ್ಷ ವಯೋಮಿತಿ ಇರುವ ಎಲ್ಲರೂ ಭಾಗವಹಿಸಬಹುದು
ಮಹಾಮಂಗಳಾರತಿ :- 8:00ಕ್ಕೆ ಇದೆ
ತಾವುಬನ್ನಿ-ತಮ್ಮವರನ್ನೂ ಕರೆ ತನ್ನಿ ಸ್ಪರ್ಧೇಯಲ್ಲಿ ಭಾಗವಹಿಸಿ ಎಂದು ನಾಗಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಅರ್ಚಕರಾದ ಸಂದೇಶ ಉಪಾಧ್ಯ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಹೆಚ್ಚಿನ ಮಾಹಿತಿಗೆ ಈ ಕೆಳಕಂಡ ಮೊಬೈಲ್ ಸಂಖ್ಯೆಗೆ ಕರೆ ಮಾಡಿ 9964597654, 7619579340

Shivamogga City Corporation ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ‌ತೆರಿಗೆ ಪಾವತಿಗೆ ಶೇ 5 ರಿಯಾಯಿತಿ ಸೌಲಭ್ಯ ಏಪ್ರಿಲ್ 30 ವರೆಗೆ ವಿಸ್ತರಣೆ.

0

Shivamogga City Corporation ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪಾವತಿಗೆ ಅನುಕೂಲವಾಗುವಂತೆ ಪಾಲಿಕೆ ಕಚೇರಿಯ ಆವರಣದಲ್ಲಿ ಕೌಂಟರ್‌ಗಳನ್ನು ಪ್ರಾರಂಭ ಮಾಡಲಾಗಿದ್ದು, ಸಾರ್ವಜನಿಕರು ನೇರವಾಗಿ ಕಚೇರಿಯಲ್ಲಿ ಆಸ್ತಿ ತೆರಿಗೆ ಪಾವತಿಸಲು ಅವಕಾಶವಿರುತ್ತದೆ.
ಅಲ್ಲದೇ ಈಗಾಗಲೇ ಜಾರಿಯಲ್ಲಿರುವಂತೆ ಆಸ್ತಿ ತೆರಿಗೆ ಪಾವತಿಯನ್ನು ಮಹಾನಗರಪಾಲಿಕೆಯ ವೆಬ್‌ಸೈಟ್ ವಿಳಾಸ www.shivamoggacitycorp.org ಮುಖಾಂತರ ಆನ್‌ಲೈನ್‌ನಲ್ಲಿ ಹಾಗೂ ಪೇಟಿಎಂ/ನೆಟ್‌ಬ್ಯಾಂಕಿಂಗ್/ ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್/ ಶಿವಮೊಗ್ಗ ಒನ್ ವ್ಯವಸ್ಥೆಯಡಿಯಲ್ಲಿ ಆಸ್ತಿ ತೆರಿಗೆ ಪಾವತಿ ಮಾಡಬಹುದಾಗಿರುತ್ತದೆ. ವಿಶೇಷವಾಗಿ 2026-27 ರ ಖಾತೆದಾರರಿಗೆ ಇಡಿಸಿ (ಪಿಓಎಸ್) ಯಂತ್ರಗಳ ಮೂಲಕ ಸ್ವತಿನ ಆಸ್ತಿ ತೆರಿಗೆಯನ್ನು ಪಾವತಿಸಿದ ರಸೀದಿಯನ್ನು ನೀಡಲಾಗುತ್ತದೆ.

Shivamogga City Corporation ಏ.30 ರವರೆಗೆ ಆರ್ಥಿಕ ವರ್ಷ 2026-27 ನೇ ಸಾಲಿಗೆ ಅನ್ವಯಿಸುವ ಆಸ್ತಿ ತೆರಿಗೆ ಮೇಲಿನ ಶೇ. 5% ರ ತೆರಿಗೆ ರಿಯಾಯಿತಿಯ ಸೌಲಭ್ಯದ ಕಾಲಾವಧಿ ಇರುತ್ತದೆ. ಜೂನ್ 30ರವೆಗೆ ದಂಡರಹಿತವಾಗಿ ಆಸ್ತಿ ತೆರಿಗೆ ಪಾವತಿಸಬಹುದಾಗಿರುತ್ತದೆ.
ಜು. 01 ರ ನಂತರ ಪಾವತಿಸಿದಲ್ಲಿ ಮಾಸಿಕ ಶೇ. 2% ರಷ್ಟು ದಂಡದೊAದಿಗೆ ಪಾವತಿಸಬೇಕಾಗುತ್ತದೆ. ಆದ್ದರಿಂದ ಸಾರ್ವಜನಿಕರು ಏಪ್ರಿಲ್ 2026ರ ಅವಧಿಯಲ್ಲಿ ಆಸ್ತಿ ತೆರಿಗೆ ಪಾವತಿಸಿ ಶೇ. 5%ರ ರಿಯಾಯಿತಿ ಪಡೆಯುವಂತೆ ಹಾಗೂ ಆಸ್ತಿ ತೆರಿಗೆ ಪಾವತಿಸಿ ನಗರದ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸುವಂತೆ ಎಂದು ಶಿವಮೊಗ್ಗ ಮಹಾನಗರಪಾಲಿಕೆ ಉಪ ಆಯುಕ್ತರು ಪತ್ರಿಕೆ ಪ್ರಕಟಣೆ ತಿಳಿಸಿದ್ದಾರೆ.

MESCOM ತಾವರೆಚಟ್ನಳ್ಳಿ ಸುತ್ತಮುತ್ತ ಮಾರ್ಚ್ 28 & 29 ರಂದು ವಿದ್ಯುತ್ ಸರಬರಾಜು ವ್ಯತ್ಯಯ.ಮೆಸ್ಕಾಂ ಪ್ರಕಟಣೆ.

0

MESCOM ತಾವರೆಚಟ್ನಹಳ್ಳಿ ವಿವಿ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಮಾರ್ಗಗಳಲ್ಲಿ ಮಾರ್ಚ್ 28 ಮತ್ತು 29 ರಂದು ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿAದ ಕುವೆಂಪುನಗರದ ಸೂಡಾ ಸಿ ಮತ್ತು ಡಿ ಬ್ಲಾಕ್, ಶಿವಕುಮಾರಸ್ವಾಮಿ ಲೇಔಟ್ ಮತ್ತು ಇನ್ಫಾç ಸಿಟಿ, ಮ್ಯಕ್ಸ್ ಲೇಔಟ್, ಎಂಇಎಸ್ ಲೇಔಟ್, ರೆಡ್ಡಿ ಲೇಔಟ್, ಸವಳಂಗ ರಸ್ತೆ ರತ್ನಗಿರಿ ನಗರ ಮತ್ತು ಹುಣಸೋಡು, ಕಲ್ಲಗಂಗೂರು ಸುತ್ತಮುತ್ತಲಿನ ಜಲ್ಲಿ ಕ್ರಷರ್‌ಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಕೋರಿದೆ.