ನಮ್ಮೂರ ಬಳಗದ ವತಿಯಿಂದ ಭಾರತೀಯ ಧಾರ್ಮಿಕ ಸುಧಾರಕರು ಮತ್ತು ಆಧ್ಯಾತ್ಮಿಕ ನಾಯಕರು ಅಹಿಂಸಾ ಧರ್ಮ ಪ್ರತಿಪಾದಕರಾದ ಭಗವಾನ್ ಶ್ರೀ ಮಹಾವೀರ ಜಯಂತಿಯ ಅಂಗವಾಗಿ ದಾರ್ಶನಿಕರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸಿಹಿ ವಿತರಿಸುವ ಮುಖಾಂತರ ಆಚರಿಸಲಾಯಿತು.
ಈ ಸಂದರ್ಭದಲ್ಲಿ ನಮ್ಮೂರ ಬಳಗದ ಪ್ರಧಾನ ಸಂಚಾಲಕರಾದ ಕೆ ರಂಗನಾಥ್ ಮಾತನಾಡಿ ಭಗವಾನ್ ಶ್ರೀ ಮಹಾವೀರರ ಜನನದ ಸಮಯದಲ್ಲಿ, ದೇಶದಲ್ಲಿ ಸಾಮಾಜಿಕ ಮತ್ತು ಧಾರ್ಮಿಕ ಪರಿಸ್ಥಿತಿ ಅತ್ಯಂತ ಅನಿಶ್ಚಿತವಾಗಿತ್ತು.
ಮಹಿಳೆಯರು ಮತ್ತು ಕೆಳವರ್ಗದವರನ್ನು ದಮನಿಸಲಾಗುತ್ತಿತ್ತು. ಧರ್ಮದ ಸ್ವರೂಪವು ಬಾಹ್ಯ ಆಡಂಬರ ಮತ್ತು ಪ್ರದರ್ಶನದಲ್ಲಿ ಸಿಲುಕಿಕೊಂಡಿತ್ತು ಮತ್ತು ಜಾತಿವಾದದ ಪ್ರಭಾವವು ಬೆಳೆಯುತ್ತಿತ್ತು.
ಅಂತಹ ಸಮಯದಲ್ಲಿ, ಭಗವಾನ್ ಮಹಾವೀರರು ಜೈನ ಧರ್ಮದ 24ನೇ ತೀರ್ಥಂಕರಾಗಿ ಇಡೀ ಜಗತ್ತಿಗೆ ಅಹಿಂಸಾ ಧರ್ಮವನ್ನು ಪ್ರತಿಪಾದಿಸುತ್ತ ಎಲ್ಲರೂ ಸಹಬಾಳ್ವೆ, ಸಹಕಾರ ಸೇವಾಮನೋಭಾವದ ಜೀವನವನ್ನು ನಡೆಸಬೇಕೆಂದು ಸಾರಿದರು. ಇಂತಹ ಮಹಾನ್ ದಾರ್ಶನಿಕರ ಜೀವನ ತತ್ವ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಂಡು ಉತ್ತಮ ಸಮಾಜದ ನಿರ್ಮಾಣ ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.
ಈ ಸಂದರ್ಭದಲ್ಲಿ ನಮ್ಮೂರ ಬಳಗದ ಗೌರವ ಸಂಚಾಲಕರಾದ ಸಿ ರವಿ, ಸಂಚಾಲಕರುಗಳಾದ ಕೆ ಆರ್ ಸುರೇಶ್, ಹೆಚ್.ಪಿ. ಗಿರೀಶ್, ಮದನ್ ಸಿಂಗ್, ಮಹೇಂದ್ರ ಜೈನ್, ರಾಜೇಶ್ ಮಂದಾರ, ಆಚಾರಿ ಗೋಪಿ, ಟಿ ಗುರುಪ್ರಸಾದ್, ಕೆ ಎಲ್ ಪವನ್, ರಜನಿಕಾಂತ್, ಆರ್ ಕಿರಣ್, ಕೇಬಲ್ ಲೋಕೇಶ್, ಜಯಪ್ರಕಾಶ್, ಸುಬ್ರಮಣಿ, ನಂದನ್, ಶ್ರೀಕಾಂತ್, ರಾಘವೇಂದ್ರ, ಮನ್ವಿಕ್ ಜೈನ್ ಇತರರು ಉಪಸ್ಥಿತರಿದ್ದರು.
ದೇಹದ ಆರೋಗ್ಯ ಉತ್ತಮವಾಗಿದ್ದರೆ, ದೇಶದ ಆರೋಗ್ಯವೂ ಚೆನ್ನಾಗಿರುತ್ತದೆ ಎಂದು ಶ್ರೀ ಆದಿ ಚುಂಚನಗಿರಿ ಶಾಖಾ ಮಠದ ಪೂಜ್ಯ ಶ್ರೀ ಶ್ರೀ ನಾದಮಯಾನಂದನಾಥ ಸ್ವಾಮೀಜಿ ಹೇಳಿದರು. ಅವರು ಇಂದು ಭಾರತ ಸರ್ಕಾರ, ಆಯುಷ್ ಸಚಿವಾಲಯ, ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆ, ನವದೆಹಲಿ, ಶ್ರೀ ಆದಿಚುಂಚಬಗಿರಿ ಶಿಕ್ಷಣ ಟ್ರಸ್ಟ್ (ರಿ) ಶಿವಮೊಗ್ಗ. ಹಾಗೂ ಶ್ರೀ ವೇದವ್ಯಾಸ ಯೋಗ ಪ್ರತಿಷ್ಠಾನ (ರಿ), ಮೈಸೂರು ಇವರ ಸಹಯೋಗದೊಂದಿಗೆ ಇಂದು ಶರಾವತಿ ನಗರದ ಶ್ರೀ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯಲ್ಲಿ ರಾಷ್ಟ್ರೀಯ ಯೋಗೋತ್ಸವ – ೨೦೨೬ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದ ಅವರು, ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಾಗೂ ಯೋಗ ಶಿಬಿರವನ್ನು ಉದ್ಘಾಟಿಸಿದರು. ಪ್ರತಿಯೊಬ್ಬರ ಆರೋಗ್ಯ ಚೆನ್ನಾಗಿದ್ದರೆ ಸದೃಢವಾದ ಮತ್ತು ಭವ್ಯ ಭಾರತವನ್ನು ಕಟ್ಟಬಹುದಾಗಿದೆ ಎಂದು ಹೇಳಿದರು. ಪ್ರಸ್ತುತ ದಿನಮಾನಗಳಲ್ಲಿ ಶುದ್ದವಾದ ಗಾಳಿಗೂ ಕೂಡ ಪರಿತಪಿಸುವಂತಾಗಿದೆ. ಶ್ವಾಸ ನಿಶ್ವಾಸದ ಮೇಲೆ ನಮ್ಮ ಬದುಕು ನಿಂತಿದೆ. ಸರಿಯಾದ ಮಾರ್ಗದರ್ಶನದಲ್ಲಿ ನಾವುಗಳೂ ಯೋಗಾಭ್ಯಾಸ ಮಾಡಿದ್ದೇ ಆದರೆ ಯಾವುದೇ ಮದ್ದಿಲ್ಲದೇ ರೋಗವನ್ನು ಹೋಗಲಾಡಿಸಬಹುದಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಯೋಗದ ಅಭ್ಯಾಸವನ್ನು ಮಾಡಿಕೊಳ್ಳಬೇಕು ಎಂದರು. ಯೋಗಾಭ್ಯಾಸ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದು ಆಗ ಮಾತ್ರ ನಮ್ಮ ದೇಹ ಗಟ್ಟಿಮುಟ್ಟಾಗಿದೆ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ , ಮೈಸೂರಿನ ಶ್ರೀ ವೇದವ್ಯಾಸ ಯೋಗ ಪ್ರತಿಷ್ಠಾನದ ಅಧ್ಯಕ್ಷ ಡಾ. ವಸಂತಕುಮಾರ್ ಪೈ Adichunchabagiri Education Trust ಅವರು ಈ ಕಾರ್ಯಕ್ರಮಕ್ಕೆ ಶುಭ ಪ್ರಶಂಸೆಗೈಯುತ್ತಾ ವಿಶ್ವಮಾನ್ಯತೆ ಪಡೆದ ಯೋಗಕ್ಕೆ ಈಗ ಯೋಗ ಬಂದಿದೆ ಎಂದರು. ಯೋಗದಿಂದ ಸ್ವಾಸ್ಥ್ಯದ ಜೊತೆಗೆ, ಸರ್ವಾಂಗೀಣ ವ್ಯಕ್ತಿತ್ವವನ್ನು ನಿರ್ಮಿಸಿಕೊಳ್ಳಲು ಸಾಧ್ಯ ಎಂದರು. ರಾಷ್ಟ್ರೀಯ ಯೋಗ ಸಂಚಾಲಕ ರಾಘವೇಂದ್ರ ಪೈ ಪ್ರಾಸ್ತಾವಿಕವಾಗಿ ಮಾತನಾಡಿ, ಸಾಮೂಹಿಕ ಯೋಗಾಭ್ಯಾಸ, ಯೋಗ ವಿಚಾರ ಸಂಕಿರಣ. ಯೋಗ ಪ್ರದರ್ಶನ,ಯೋಗದಿಂದ ಆಗುವ ಪ್ರಯೋಜನಗಳ ಬಗ್ಗೆ ಸವಿಸ್ತಾರ ಬಗ್ಗೆ ತಿಳಿಸಿದರು. ಇಂದು ಯೋಗದಲ್ಲಿ ೪೦೦ ಕ್ಕೂ ಹೆಚ್ಚಿನ ಯೋಗಪಟುಗಳು ಭಾಗವಹಿಸಿದ್ದರು. ಭಾಗವಹಿಸಿದ ಎಲ್ಲರಿಗೂ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು. ಇದೇ ಸಂಧರ್ಭದಲ್ಲಿ ಸಂದರ್ಭದಲ್ಲಿ ಯೋಗಪಟುಗಳಾದ ಶ್ರೀ ಬ.ಮ. ಶ್ರೀಕಂಠ ಇವರಿಗೆ ಯೋಗಭೂಷಣ ಪ್ರಶಸ್ತಿ ಹಾಗೂ ಡಾ. ಮಣೂರು ಪ್ರಭಾಕರ ಪ್ರಭು ಇವರಿಗೆ ಕರ್ಮಯೋಗ ಭೂಷಣ ಪ್ರಶಸ್ತಿಯನ್ನು ಜೀವಮಾನದ ಸಾಧನೆಗಾಗಿ ರಾಷ್ಟ್ರೀಯ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.
Shimoga Pesit College ಕಳೆದ ಮಾ. 26ರಿಂದ 29ರವರೆಗೆ ತಿಪಟೂರು ಕಲ್ಪತರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಆಯೋಜಿಸಿದ್ದ 27ನೇ ರಾಜ್ಯಮಟ್ಟದ ಇಂಟರ್ ಕಾಲೇಜು ಅಥ್ಲೆಟಿಕ್ ಚಾಂಪಿಯನ್ ಶಿಪ್‌ನಲ್ಲಿ ಶಿವಮೊಗ್ಗದ ಪೆಸಿಟ್ ಕಾಲೇಜಿನ ಪ್ರಥಮ ವರ್ಷದ ಎಂಬಿಎ ವಿದ್ಯಾರ್ಥಿ ಆಕಾಶ್ ಎಸ್. ಅವರು 400ಮೀಟರ್ ಹರ್ಡಲ್ಸ್‌ನಲ್ಲಿ ದ್ವಿತೀಯ ಸ್ಥಾನ ಹಾಗೂ 400 ಮೀಟರ್ ಓಟದಲ್ಲಿ ತೃತೀಯ ಸ್ಥಾನ ಪಡೆದು ಜಿಲ್ಲೆಗೆ ಹಾಗೂ ಪೆಸಿಟ್ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಇವರಿಗೆ ನಾಗಾರ್ಜುನ ಅವರು ತರಬೇತುದಾರರಾಗಿದ್ದಾರೆ. ಈ ಪ್ರತಿಭಾನ್ವಿತ ಕಾಳಿಕಾ ಪರಮೇಶ್ವರಿ ಸಹಕಾರ ಸಂಘದ ಉಪಾಧ್ಯಕ್ಷರಾದ ಎ. ಸತೀಶ್ ಮತ್ತು ಸುನಿತಾ ದಂಪತಿಗಳ ಪುತ್ರರಾಗಿದ್ದಾರೆ.
Klive Special Article ಜನ ಸಂಸ್ಕೃತಿಗಳು ನಿಂತ ನೀರಾದಾಗಲೆಲ್ಲಾ ಅದನ್ನು ಕಲಕಿ, ಹರಿದು ಹೋಗುವಂತೆ ಮಾಡುವ ಕ್ರಾಂತಿಕಾರರು ಜನ್ಮ ತಾಳುವುದು ಸಂಸ್ಕೃತಿಗಳ ಸಮತೋಲನ ಉಳಿಸಿಕೊಳ್ಳಲು ಅಗತ್ಯ. ಜೈನ ಧರ್ಮದ ಸಂಸ್ಥಾಪಕನೆಂದು ಹೇಳಲಾಗುವ ಅಹಿಂಸೆಯ ಪ್ರತಿಪಾದಕ ಮಹಾವೀರನದ್ದು ಜನಸಂಸ್ಕೃತಿಗಳ ಹರಿಯುವಿಕೆಗೆ ದೊಡ್ಡ ಕೊಡುಗೆ.
ಆದರೆ, ಇಂಥ ಇತಿಹಾಸ ಪುರುಷರು, ಸಂಸ್ಕೃತಿಗಳ ಚೈತನ್ಯಗಳು ತಮ್ಮ ತತ್ತ್ವಗಳಿಗೇ ವಿರುದ್ಧವಾಗಿ ಧಾರ್ಮಿಕ ವ್ಯಕ್ತಿಗಳಾಗಿ, ಶಿಲಾಮೂರ್ತಿಗಳಾಗಿ ಗುಡಿ ಗೋಪುರಗಳೊಳಗೆ ಬಂಧಿತರಾಗುವುದು ನಮ್ಮದೇ ನೆಲದ ವೈಚಿತ್ರ್ಯಗಳಲ್ಲೊಂದು.
ನಮಗೆ ಅಧಿಕೃತವಾಗಿ ಲಭ್ಯವಾಗುವ ಮಾಹಿತಿಯ ಪ್ರಕಾರ ಜೈನಧರ್ಮದ ಸ್ಥಾಪಕ ನೆಂದು ಹೇಳಲಾಗುವ ವರ್ಧಮಾನ ಮಹಾವೀರ ಜನ್ಮ ತಳೆದು ಇಂದಿಗೆ 2600 ವರ್ಷಗಳಿಗೂ ಮಿಕ್ಕಿದೆ.
ಕ್ರಿ.ಪೂ. 599ರಲ್ಲಿ ಬಿಹಾರದ ವಿದೇಹದ ರಾಜಧಾನಿ ವೈಶಾಲಿಯ ಕುಂಡಪುರದಲ್ಲಿ ಮಹಾವೀರ ಜನಿಸಿದರು. ತಂದೆ ಸಿದ್ದಾರ್ಥ, ತ್ರಿಶಾಲ ದೇವಿ ಅರಮನೆಯಲ್ಲಿ ಸಕಲ ಸುಖೋಪ ಭೋಗಗಳು, ಮತ್ತೊಂದಡೆ ಹೆತ್ತವರ ಪ್ರೀತಿಯ ಹಾರೈಕೆ, ಮಹಾವೀರನಿಗೆ ಇವೆಲ್ಲ ಬೇಕಾಗಿರಲಿಲ್ಲ.
ತನ್ನ ಸುತ್ತಲಿನ ಸಮಾಜದ ಅತ್ಯಂತ ಕೆಳಸ್ತರದ ಜನರ ನೋವು, ಆಕ್ರಂದನ, ಒಡಿಗೊಳಿಗಾಗಿ ಬಡವರ ಹಾಹಾಕಾರ, ರೋಗ ರುಜಿನಗಳು, ಆರಮನೆ, ಒಡ್ಡೋಲಗ, ಧನಕನಕಕ್ಕಿಂತ ಮಿಗಿಲಹುದು ಮತ್ತೊಂದಿದೆ ಎಂಬ ಜಿಜ್ಞಾಸೆ ಅವರನ್ನು ತೀವ್ರ ವಾಗಿ ಬಾಧಿಸಿತು.
ಮಹಾವೀರ ಬೋದಿಸಿದ ತತ್ವಗಳು, ಅಂದಿನ ಆಡುಭಾಷೆಯಾದ ಅರ್ಥಮಾನದಿಯಲ್ಲಿತ್ತು. ಎಲ್ಲಾ ವರ್ಗದ ಜನರನ್ನು ಒಡಗೂಡಿಸಿ, ‘ಸಮವಸರಣ ಸಭೆಯನ್ನು ರಚಿಸಿದ, ಮಹಾವೀರ ಮಹಾನ್ ದಾರ್ಶನಿಕನೂ ಹೌದು. ಹೊಸದೇನನ್ನೋ ಬೋಧಿಸುವಾಗ ಬರುವ ತೊಂದರೆಗಳು ಮಹಾವೀರನಂಥ ಮಹಾನುಭಾವನನ್ನೂ ಬಿಟ್ಟಿರಲಿಲ್ಲ, ಅದಲ್ಲವನ್ನೂ ಮೀರಿ ಬೆಳೆದು ನಿಂತ ಮಹಾವೀರನ ಜೀವನವೇ ದರ್ಶನ, ಹೆತ್ತವರ ಪ್ರೀತಿಯಿಂದ ವಂಚಿತ ಸಮಾಜದಿಂದ ತಿರಸ್ಕೃತಳಾದ ಮಹಿಳೆಯೋರ್ದಳಿಗೆ ಸಮವಸರಣ ಸಭೆಯಲ್ಲಿ ವಿಶೇಷ ಪ್ರಾತಿನಿಧ್ಯ ನೀಡಿದ್ದು, ನಿಸರ್ಗದಲ್ಲಿರುವ ಗಿಡಮರ ಬಳ್ಳಿಗಳ ಮಹತ್ತ್ವವನ್ನು ಎತ್ತಿ ಹೇಳಿದು, ಬದುಕಿಗೆ ಅವಶ್ಯವಿದ್ದಷ್ಟೇ ಸಂಪಾದಿಸುವಂತೆ ಮನವೊಲಿಸಿದ್ದು, ನಾಲಿಗೆ ಚಪಲಕ್ಕೆ ಪ್ರಾಣಿಹಿಂಸೆ ಮಾಡದಂತೆ ಬುದ್ಧಿ ಹೇಳಿದ್ದು…
ಮೊದಲಾದ ಮಹಾವೀರನ ಕಾರ್ಯಗಳು ಬದುಕನ್ನು ಹಸನುಗೊಳಿಸಲು ಹಸಿಕೊಂಡಿದ್ದರು, ಇದ್ಯಾವದೇ ಧರ್ಮದ ಮನುಷ್ಯರಿಗೆ ಮೂಲಭೂತವಾಗಿ ಇರಬೇಕಾದ ಒಳ್ಳೆಯ ದರ್ಶನ, ಒಳ್ಳೆಯ ಜ್ಞಾನ ಮತ್ತು ಒಳ್ಳೆಯ ನಡವಳಿಕೆ ಕುರಿತು ಬೋಧಿಸಿದ ಮಹಾವೀರ, ತಾನೂ ಬದುಕಿ, ಇತರರನ್ನು ಬದುಕಲು ಬಿಡುವುದೇ ಧರ್ಮ ಎಂದು ಹೇಳಿದರು.
ಶಾಂತಿಪ್ರಿಯರೂ, ಸಾಹಿತ್ಯ-ಕಲೆಗಳ ಆರಾಧಕರ, ಬಂದಿರುವ ಜೈನ ಧರ್ಮೀಯರಿಂದ ಕಲೆ, ಸಾಹಿತ್ಯ, ಸಂಸ್ಕೃತಿಗಳಿಗೂ ಅಪಾರ ಕೊಡುಗೆ ದೊರಕಿದೆ. ತಮಿಳಿನ ಮಹಾಕಾವ್ಯವಾದ ತಿರುಕ್ಕುರುಳ್, ಸಂಸ್ಕೃತದ ಅಮರಕೋಶ ಮತ್ತು ಯಶಸ್ತಿಲಕ ಚಂದ್ರ, ಹತ್ತನೇ ಶತಮಾನದಿಂದ ಮರೆಯುತ್ತಿರುವ ಪಂಪ-ರನ್ನ-ಜನ್ನ, ‘ಬೃಹತ್ಕಥೆ’ ಬರೆದ ಹರಿಷೇಣ, ‘ಅಭಿಜ್ಞಾನಮಾಲಾ’ ಬರೆದ ಹಾಲಾಯುಧ, ‘ಲಕ್ಷ್ಮೀನಾಮಮಾಲಾ’ ಬರೆದ ಧನಪಾಲ ಮತ್ತಿತರರು, ತಮಿಳಿನ ಇಲಿಯಡ್ ಮತ್ತು ಒಬ್ಬ ಎಂದೇ ಹೇಳಲಾಗುತ್ತಿರುವ ‘ಜೀವಕ ಚಿಂತಾಮಣಿ’, ‘ತತ್ವಾರ್ಥ ಸಾರ, ಪಂಚಾಸ್ತಿಕಾಯ’ ಮೊದಲಾದ ಕೃತಿಗಳು ಸಾಹಿತ್ಯದ ಹಿರಿಮೆಯೂ ಹೌದು, ಜನಾಂಗದ ಹಿರಿಮೆಯೂ ಹೌದು, ಪ್ರತಿವರ್ಷ ಸಾಹಿತ್ಯಕ್ಕಾಗಿ ನೀಡಲಾಗುತ್ತಿರುವ ಪ್ರತಿಷ್ಠಿತ “ಜ್ಞಾನಪೀಠ ಪ್ರಶಸ್ತಿ”ಯನ್ನು ಸ್ಥಾಪಿಸಿದವರು ಶಾಂತಿ ಪ್ರಸಾದ್ ಜೈನ್. ಭಗವಾನ್ ಮಹಾವೀರ ಬೋಧಿಸಿದ ಧರ್ಮದ ತಿರುಳುಗಳು, ರಾಜಸ್ಥಾನದ ಉದಯಗಿರಿ, ಖಂಡು, ಉಂತಗಿರಿ, ರಾಜು, ಪಾವಾಪುರಿ, ತಾಲಿಕ್, ಮೌಂಟ್ ಅಬುವಿನಲ್ಲಿ ರುವ ದಿಬ್ಬಾರ ಜೈನ ಬಸದಿ, ಬಿಹಾರದ ಸಮ್ಮೇದ ಶಿಖರ ಅಜಂತ ಮತ್ತು ಎಲ್ಲೋರದಲ್ಲಿರುವ ನೂರಾರು ಕಲಾತ್ಮಕವಾದ ಬಸದಿ ಮತ್ತು ಗುಹಾಂತರ ದೇವಾಲಯಗಳು, ಕರ್ನಾಟಕದ ಶ್ರವಣ ಬೆಳಗೊಳ, ಕಾರ್ಕಳ, ಬೇಲೂರು, ಧರ್ಮಗಳ ಆಗ್ರಾದ ಶೋಣಾದಿನ ಗೊಮ್ಮಟನ ವಿಗ್ರಹಗಳು ಕಲೆ, ಉಹಿತ್ಯ, ಸಂಸ್ಕೃತಿಯ ಬೆಳವಣಿಗೆಯಲ್ಲಿ ಜೈನರ ಕೊಡುಗೆ ಅಪಾರ, ಜೈನ ನಿಂತಿದ್ದರೂ, ಜೈನರು ಇಂದಿಗೂ ಅಲ್ಪಸಂಖ್ಯಾತರು.ದೇವರನ್ನು ಮನುಷ್ಯರತ್ತ ತಂದ ಸಂಸ್ಕೃತಿ ದೇಶದ ಉಳಿದ ಸಂಸ್ಕೃತಿಗಳ ಮೇಲೆ ಪ್ರಭಾವ ಬೀರಿ ಬೆಳೆಸಿದ ಕೀರ್ತಿಯೂ ಜೈನರಿಗೆ ಸಂಸ್ಕೃತಿಗಳ ಕಲೆ, ಸಾಹಿತ್ಯ, ಸಂಸ್ಕೃತಿಯ ಬೆಳವಣಿಗೆಯಲ್ಲಿ ಜೈನರ ಕೊಡುಗೆ ಅಪಾರ, ಜೈನರು ಇಂದಿಗೂ ಅಲ್ಪಸಂಖ್ಯಾತರು. ದೇವರನ್ನು ಮನುಷ್ಯರತ್ತ ತಂದ ಸಂಸ್ಕೃತಿ ದೇಶದ ಉಳಿದ ಸಂಸ್ಕೃತಿಗಳ ಮೇಲೆ ಪ್ರಭಾವ ಬೀರಿ, ಬೆಳೆದ ಕೀರ್ತಿಯೂ ಜೈನರಿಗೆ ಸಲ್ಲಬೇಕು.
ಜೀವನೋತ್ಸಾಹ ಹಾಗೂ ಹಿರಿಯರಲ್ಲಿ ಪ್ರೀತಿ ವಾತ್ಸಲ್ಯ ಹೇಗಿರಬೇಕು ಎಂಬುದಕ್ಕೆ ಇದೊಂದು ಹೃದಯಸ್ಪರ್ಶಿ ನಿದರ್ಶನ. ನಿನ್ನೆ (23-03-2026) ದಾವಣಗೆರೆಯ ಚೌಕಿಪೇಟೆಯಲ್ಲಿ ನೆರವೇರಿದ ಶ್ರೀ ಬಕ್ಕೇಶ್ವರರ ಮಹಾರಥೋತ್ಸವ ವೀಕ್ಷಿಸಲು ಇಷ್ಟಪಟ್ಟ ಅತ್ಯಂತ ವಯೋವೃದ್ಧೆ (ಬಹುಷಃ ತಾಯಿ ಇರಬೇಕು)ಯನ್ನು ವಯಸ್ಸಾದ ಪುರುಷನೋರ್ವ ಜಾತ್ರೆಯ ಜನಜಂಗುಳಿಯಲ್ಲೂ ಗಾಲಿ ಕುರ್ಚಿಯ ಮೇಲೆ ಕರೆದುಕೊಂಡು ಬಂದು ರಥೋತ್ಸವ ಹಾಗೂ ಮೆರವಣಿಗೆ ದೃಶ್ಯಗಳನ್ನು ತೋರಿಸಿದ್ದು ಹಾಗೂ ವಯೋವೃದ್ದೆಯವರು ಆಸಕ್ತಿಯಿಂದ ನೋಡಿದ್ದು ನಿಜವಾಗಿಯೂ ಹೃದಯಸ್ಪರ್ಶಿಯೂ, ಹೃದಯಂಗಮವೂ ಆಗಿತ್ತು. ಅಭಿನವ ಶ್ರವಣಕುಮಾರನಂತಹ ಈ ವ್ಯಕ್ತಿಯ ನಡೆ ಹಾಗೂ ವಯೋವೃದ್ಧೆಯವರ ಜೀವನೋತ್ಸಾಹ, ಬತ್ತದ ಆಸಕ್ತಿ ನಿಜಕ್ಕೂ ಅನುಕರಣೀಯ. ಇಂತಹ ದೃಶ್ಯಗಳು ಹೆಚ್ಚು ಜನರಿಗೆ ಮುಟ್ಟುವುದು ಆರೋಗ್ಯಕರ ಸಮಾಜಕ್ಕೆ ಪ್ರೇರಕ, ಹಂಚಿಕೊಳ್ಳಿ. ಮುಪ್ಪಿನ ಮಾತಾಪಿತರನ್ನು ವೃದ್ಧಾಶ್ರಮಕ್ಕೆ ಸೇರಿಸುವವರು ಇದನ್ನು ನೋಡಿ ಪರಿವರ್ತನೆಗೊಳ್ಳಬೇಕು. -ಡಾ ಎಚ್ ಬಿ ಮಂಜುನಾಥ, ಹಿರಿಯ ಪತ್ರಕರ್ತ, ದಾವಣಗೆರೆ-
CM Siddharamaih ಪೊಲೀಸ್ ಸೇವೆಯಲ್ಲಿ ಶಿಸ್ತು, ಸಂಯಮ, ಪ್ರಾಮಾಣಿಕತೆ, ಮಾನವೀಯತೆ ಬಹಳ ಮುಖ್ಯ. ಸಮಾಜದಲ್ಲಿನ ದೀನ ದಲಿತರ, ಅಶಕ್ತರ, ಮಹಿಳೆಯರ ರಕ್ಷಣೆ ಮಾಡುವುದು ಪೊಲೀಸರ ಜವಾಬ್ದಾರಿ. ಮಧ್ಯರಾತ್ರಿಯಲ್ಲಿ ಮಹಿಳೆಯರು ನಿರ್ಭೀಡೆಯಿಂದ ಓಡಾಡುವಂತಾದಾಗ ಮಾತ್ರ, ನಿಜ ಅರ್ಥದಲ್ಲಿ ಸ್ವಾತಂತ್ರ್ಯ ದೊರೆತಂತೆ ಎಂದು ಮಹಾತ್ಮ ಗಾಂಧಿಯವರು ಹೇಳಿದ್ದರು. ಆದ್ದರಿಂದ ನ್ಯಾಯವನ್ನು ಎತ್ತಿಹಿಡಿಯುವ ಕೆಲಸದಲ್ಲಿ ಪೊಲೀಸರು ಯಾವುದೇ ಕಾರಣಕ್ಕೂ ರಾಜಿಯಾಗಬಾರದು. ಎಲ್ಲರಿಗೂ ರಕ್ಷಣೆ, ಸಮಾನ ಅವಕಾಶಗಳು ದೊರೆಯಬೇಕು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮೈಸೂರು ಘಟಕದ 46ನೇ ತಂಡದ ಸಿವಿಲ್ ಪೊಲೀಸ್ ಉಪ ನಿರೀಕ್ಷಕ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು..
ಪೊಲೀಸರು ಸರ್ಕಾರದ ಪ್ರತಿನಿಧಿಯಾಗಿ ಕರ್ತವ್ಯ ನಿರ್ವಹಿಸಬೇಕಿಲ್ಲದೇ, ಕಾನೂನು ಸುವ್ಯವಸ್ಥೆಯನ್ನು ಕಾಯುವಲ್ಲಿ ಮಹತ್ವದ ಪಾತ್ರ ವಹಿಸಬೇಕು.
ತರಬೇತಿಯಲ್ಲಿ ಕಲಿತಿದ್ದನ್ನು ಜ್ಞಾಪಕವಿಟ್ಟುಕೊಂಡು ಜೀವನದಲ್ಲಿ ಪಾಲಿಸಬೇಕು. ತರಬೇತಿಗಳು ಆಗಾಗ್ಗೆ ನಡೆಯಬೇಕಲ್ಲದೆ ತರಬೇತಿ ಜೀವನದ ಅಂಗವಾಗಬೇಕು. 377 ಸಬ್ ಇನ್ಸ್ ಪೆಕ್ಟರ್ ಗಳು ಸೇವೆಗೆ ಸೇರ್ಪಡೆಯಾಗುತ್ತಿದ್ದು, ಖಾಲಿಯಿದ್ದ 4,911 ಹುದ್ದೆಗಳನ್ನು ಮೂರು ವರ್ಷಗಳಲ್ಲಿ ಭರ್ತಿ ಮಾಡಲಾಗಿದೆ. ಖಾಲಿ ಇರುವ 8000 ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಬಜೆಟ್ ನಲ್ಲಿ ಘೋಷಿಸಲಾಗಿದೆ. ಅದನ್ನು ಮಾಡಿಯೇ ತೀರುತ್ತೇವೆ. ಸರ್ಕಾರ ಸದಾ ನಿಮ್ಮೊಂದಿಗಿರುತ್ತದೆ.
ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುವಾಗ ಸರ್ಕಾರ ಹಿಂದೆಮುಂದೆ ನೋಡುವುದಿಲ್ಲ. ಕೆಲಸದಲ್ಲಿರುವ ಸಂದರ್ಭದಲ್ಲಿ ಕುಟುಂಬದವರ ಯೋಚನೆ ಮಾಡುವ ಅಗತ್ಯವಿಲ್ಲ. ಸತ್ಯ, ನಿಷ್ಠೆಯಿಂದ ಸೇವೆ ಸಲ್ಲಿಸುತ್ತೀರಿ ಎಂದು ನಂಬಿದ್ದೇನೆ.
ಮಾದಕವಸ್ತು ಮುಕ್ತ ಸಮಾಜ ನಿರ್ಮಾಣ ಮಾಡುವುದಾಗಿ ಸರ್ಕಾರ ಘೋಷಣೆ ಮಾಡಿದ್ದು, ಆ ದಿಕ್ಕಿನಲ್ಲಿ ಆರಕ್ಷಕರು ತಮ್ಮ ಠಾಣಾ ವ್ಯಾಪ್ತಿಯಲ್ಲಿ ಮಾದಕವಸ್ತು ತಯಾರಕರು, ಮಾರಾಟ ಮಾಡುವವರ ಮೇಲೆ ಕ್ರಮ ಕೈಗೊಳ್ಳಬೇಕು. ಯುವ ಜನಾಂಗದ ಮೇಲೆ ಮಾದಕ ವಸ್ತುಗಳ ಪರಿಣಾಮ ಮಾರಕವಾಗುತ್ತದೆ. ಇದನ್ನು ನಿರ್ಮೂಲನೆ ಮಾಡದೆ ಹೋದರೆ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾಧ್ಯವಿಲ್ಲ. ಆದ್ದರಿಂದ ಈ ದಿಕ್ಕಿನಲ್ಲಿ ಪ್ರಾಮಾಣಿಕ ಪ್ರಯತ್ನ ಅಗತ್ಯ.
CM Siddharamaih ಪೊಲೀಸರು ಮಾನವೀಯತೆಯಿಂದ ಕೆಲಸ ಮಾಡಬೇಕು. ಸಾರ್ವಜನಿಕರ ಜೊತೆಗೆ ಸ್ನೇಹದಿಂದ ಇರಬೇಕು. ಅಪರಾಧಿಗಳಿಗೆ ಕರುಣೆ ತೋರಬೇಕಿಲ್ಲ. ನಿರಪರಾಧಿಗಳಿಗೆ ಕರುಣೆ ತೋರಬೇಕು. ಸೈಬರ್ ಅಪರಾಧಗಳನ್ನು ನಿಗ್ರಹಿಸಲು ಸೂಕ್ತ ತರಬೇತಿ ನೀಡಿದ್ದು, ಅವುಗಳನ್ನು ಬಳಕೆ ಮಾಡಿಕೊಳ್ಳಬೇಕು. ಸಮಾಜದ ದುರ್ಬಲ ವರ್ಗದವರನ್ನು ಮುಖ್ಯವಾಹಿನಿಗೆ ತರಬೇಕು.
ಬಲಾಢ್ಯರ ಕೈಯಲ್ಲಿ ಅಧಿಕಾರವಿದ್ದರೆ ಸಮಸಮಾಜ ನಿರ್ಮಾಣ ಸಾಧ್ಯವಿಲ್ಲ ಎಂದು ಅಂಬೇಡ್ಕರ್ ಹೇಳಿದ್ದರು. ಶ್ರೀಮಂತರು ಹಣಬಲದಿಂದ ದುರುಪಯೋಗ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಅಂಥ ಆಮಿಷಗಳಿಗೆ ಒಳಗಾಗಬಾರದು, ಧೈರ್ಯದಿಂದ ಕೆಲಸ ಮಾಡಿ ಪೋಲಿಸ್ ವೃತ್ತಿಯಲ್ಲಿ ಯಶಸ್ವಿಯಾಗಬೇಕು ಎಂದು ಸಿದ್ಧರಾಮಯ್ಯ ಪ್ರಶಕ್ಷಣಾರ್ಥಿಗಳಿಗೆ ಕಿವಿಮಾತು ಹೇಳಿದರು
Kuvempu University ಎನ್.ಶಾಂತನಾಯ್ಕ ಮಾರ್ಗದರ್ಶನದಲ್ಲಿ ಜೋನ್ ಲೀಲಾ ಮಾಡ್ತಾ ಕಲಾ ಅಧ್ಯಯನ ಪಡಿಸಿದ ಫೇಪ್, ಥೇಟ್ ಮತ್ತು ಪೊರ್ಟಿಟ್ಯುಡ್ ವಿ: ಎ ಕಂಪೆರೇಟಿವ್ ಸ್ಟಡಿ ಆಪ್ ಬಿಬ್ಲಿಕಲ್ ವಿಮೆನ್ ಅಂಡ್ ಏಮಿ ಟ್ಯಾನ್‌ಸ್ ವಿಮೆನ್ ಎಂಬ ಮಹಾ ಪ್ರಬಂಧವನ್ನು ಪಿಎಚ್.ಡಿಗೆ ಅಂಗೀಕರಿಸಲಾಗಿದೆ ಎಂದು ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.
Dr. Dhananjaya Sarji ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ಭಾಷಾ ವಿಷಯಗಳ ಆಯ್ಕೆಗೆ ಸಂಬಂಧಿಸಿದಂತೆ ಜಾರಿಗೆ ತರಲಾಗಿರುವ ಕನಿಷ್ಠ 40 ವಿದ್ಯಾರ್ಥಿಗಳ ಸಂಖ್ಯೆಯ ನಿಯಮವನ್ನು ಸಡಿಲಗೊಳಿಸುವಂತೆ ಇಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಮಧು ಬಂಗಾರಪ್ಪ ಅವರೊಂದಿಗೆ ವಿಧಾನ ಪರಿಷತ್ ಸದಸ್ಯರಾದ ಡಾ.ಧನಂಜಯ ಸರ್ಜಿ ಚರ್ಚಿಸಿದರು.
ಸರ್ಕಾರದ ಇತ್ತೀಚಿನ ನಿಯಮದಂತೆ ಪ್ರತಿ ವಿಭಾಗಕ್ಕೆ 40 ವಿದ್ಯಾರ್ಥಿಗಳಿರಬೇಕು ಎಂಬ ಷರತ್ತು ಭಾಷಾ ವಿಷಯಗಳಿಗೂ ಅನ್ವಯವಾಗುತ್ತಿರುವುದು ಪ್ರಾಯೋಗಿಕವಾಗಿ ಅನೇಕ ಸಮಸ್ಯೆಗಳನ್ನು ತಂದೊಡ್ಡುತ್ತಿದೆ. ಒಂದು ವಿಭಾಗದಲ್ಲಿ ಒಟ್ಟು 40 ವಿದ್ಯಾರ್ಥಿಗಳಿದ್ದಾಗ, ಅವರು ತಮ್ಮ ಇಷ್ಟದ ವಿವಿಧ ಭಾಷೆಗಳನ್ನು ಹಂಚಿಕೊಂಡರೆ, ಯಾವುದೇ ಒಂದು ಭಾಷಾ ವಿಷಯಕ್ಕೆ ಕನಿಷ್ಠ 40 ವಿದ್ಯಾರ್ಥಿಗಳು ಸಿಗುವುದು ಅಸಾಧ್ಯದ ಮಾತು. ಈ ನಿಯಮದಿಂದಾಗಿ ಭಾಷಾ ಉಪನ್ಯಾಸಕರಿಗೆ ಕಾರ್ಯಭಾರದ ಕೊರತೆ ಉಂಟಾಗಿ, ಅವರು ಅನಿವಾರ್ಯವಾಗಿ ಬೇರೆ ಕಾಲೇಜುಗಳಿಗೆ ನಿಯೋಜನೆಗೊಳ್ಳುವ (Deputation) ಭೀತಿ ಎದುರಾಗಿದೆ. ಅಲ್ಲದೆ, ಖಾಲಿ ಇರುವ ಭಾಷಾ ವಿಷಯಗಳ ಹುದ್ದೆಗಳನ್ನು ಭರ್ತಿ ಮಾಡಲು ಈ ತಾಂತ್ರಿಕ ನಿಯಮವು ದೊಡ್ಡ ಅಡ್ಡಿಯಾಗಿದೆ ಎಂಬ ವಿಷಯವನ್ನ ಸಚಿವರ ಗಮನಕ್ಕೆ ಡಾ.ಧನಂಜಯ ಸರ್ಜಿ ತಂದರು. ವಿದ್ಯಾರ್ಥಿಗಳಿಗೆ ತಮ್ಮ ಇಷ್ಟದ ಭಾಷೆಯನ್ನು ಕಲಿಯುವ ಸ್ವಾತಂತ್ರ್ಯ ಸಿಗಬೇಕು ಮತ್ತು ಭಾಷಾ ಉಪನ್ಯಾಸಕರ ವೃತ್ತಿ ಜೀವನಕ್ಕೆ ಭದ್ರತೆ ಒದಗಿಸಬೇಕು ಎಂಬ ಉದ್ದೇಶದಿಂದ, ಈ ಕೂಡಲೇ ಈ ನಿಯಮದಲ್ಲಿ ಬದಲಾವಣೆ ತರಬೇಕೆಂದು ಸಚಿವರಲ್ಲಿ ಮನವಿಮಾಡಿದರು.
Dr. Dhananjaya Sarji ಈ ವೇಳೆ ವಿಧಾನ ಪರಿಷತ್ ಶಾಸಕರುಗಳಾದ ಎಸ್.ಎಲ್ ಭೋಜೇಗೌಡ ಅವರು, ಕಿಶೋರ್ ಕುಮಾರ್ ಪುತ್ತೂರು ಅವರು, ಶಾಲಾ ಮತ್ತು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ರಶ್ಮಿ ಮಹೇಶ್ ಅವರು, ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘಟನೆಯ ಪದಾಧಿಕಾರಿಗಳ ಉಪಸ್ಥಿತರಿದ್ದರು.
Shivamogga Police 2025ನೇ ಸಾಲಿನ ಮುಖ್ಯ ಮಂತ್ರಿಗಳ ಪದಕಕ್ಕೆ ಶಿವಮೊಗ್ಗ ಜಿಲ್ಲಾ ಪೊಲೀಸ್ ನ ಮೂವರು ಅಧಿಕಾರಿ, ಸಿಬ್ಬಂದಿಗಳು ಭಾಜನರಾಗಿರುತ್ತಾರೆ. 1) ಶ್ರೀ ಎಸ್. ರಮೇಶ್ ಕುಮಾರ್ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ಶಿವಮೊಗ್ಗ ಜಿಲ್ಲೆ. 2) ಶ್ರೀ ಅಣ್ಣಪ್ಪ ಎನ್, ಹೆಚ್.ಸಿ 71 ಹೊಳೆಹೊನ್ನೂರು ಪೊಲೀಸ್ ಠಾಣೆ 3) ಶ್ರೀ ರಾಘವೇಂದ್ರ, ಜಿ. ಹೆಚ್.ಸಿ 336, ಹಳೇನಗರ ಪೊಲೀಸ್ ಠಾಣೆ.
ಸದರಿ ಮೂರು ಜನ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂಧಿಗಳಿಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದುನ್ನತ ಅಧಿಕಾರಿಗಳು