Sunday, May 17, 2026
Sunday, May 17, 2026
Home Blog Page 149

Madhu Bangarappa ಒಗ್ಗಟ್ಟಾಗಿ ನಮ್ಮ ಸಂಸ್ಕೃತಿ ಪರಂಪರೆ ಉಳಿಸಿ ಬೆಳೆಸಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡೋಣ- ಮಧು ಬಂಗಾರಪ್ಪ.

0

Madhu Bangarappa ಶಿವಮೊಗ್ಗದ ಆರ್ಯ ಈಡಿಗರ ಭವನದಲ್ಲಿ ಆಯೋಜಿಸಿದ್ದ “ದೀವರ ಸಾಂಸ್ಕೃತಿಕ ವೈಭವ – 2025” ಕಾರ್ಯಕ್ರಮದಲ್ಲಿ ಭಾಗವಹಿಸಿ, ಶ್ರೀ ಕ್ಷೇತ್ರ ಕಾರ್ತಿಕೇಯ ಪೀಠದ ಅವಧೂತರಾದ ಯೋಗೇಂದ್ರ ಶ್ರೀಗಳವರ ದಿವ್ಯ ಸಾನಿಧ್ಯದಲ್ಲಿ ಸನ್ಮಾನ್ಯ ಶಾಲಾ ಶಿಕ್ಷಣ ಸಚಿವರು ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಮಧು ಬಂಗಾರಪ್ಪ ಅವರು ಕಾರ್ಯಕ್ರಮವನ್ನು ಜ್ಯೋತಿ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ, ಮಾತನಾಡಿದರು.

ಕಾರ್ಯಕ್ರಮಕ್ಕೂ ಮೊದಲು ದೀವರ ಸಾಂಸ್ಕೃತಿಕ ವೈಭವದ ಕುರುಹುಗಳಾದ ಭೂಮಣ್ಣಿ ಬುಟ್ಟಿ, ಹಸೆ ಚಿತ್ತಾರ, ಡೊಳ್ಳು, ಕೋಲಾಟ, ಅಂಟಿಕೆ–ಪಿಂಟಿಕೆ ಹಾಗೂ ಸಂಪ್ರದಾಯದ ಹಾಡುಗಳು ಸಮಾರಂಭದಲ್ಲಿ ಎಲ್ಲರನ್ನೂ ಆಕರ್ಷಿತರನ್ನಾಗಿ ಮಾಡಿದ್ದವು, ಈ ವೇಳೆ ಮಧು ಬಂಗಾರಪ್ಪನವರು ತಮ್ಮ ಕೈಯಾರೆ ಹಸೆ ಚಿತ್ತಾರ ಬಿಡಿಸುವ ಮೂಲಕ ಕಾರ್ಯಕ್ರಮಕ್ಕೆ ಪ್ರೋತ್ಸಾಹಿಸಿದರು.

Madhu Bangarappa ನಂತರ ಮಾತನಾಡಿದ ಅವರು ದೀವರ ಕಲೆ, ಸಂಸ್ಕೃತಿ ಅಳಿವಿನಂಚಿನಲ್ಲಿದ್ದು ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಮಹತ್ವದ ಹೊಣೆಗಾರಿಕೆ ನಮ್ಮ ಮೇಲಿದೆ. ನಾವೆಲ್ಲರೂ ಒಗ್ಗಟ್ಟಾಗಿ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳಸಿ ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡೋಣ. ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ನನ್ನ ಸಂಪೂರ್ಣ ಸಹಕಾರವಿರುತ್ತದೆ ಎಂದು ತಿಳಿಸಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾದ ಸಾಗರ ಕ್ಷೇತ್ರದ ಶಾಸಕರಾದ ಶ್ರೀ ಗೋಪಾಲಕೃಷ್ಣ ಬೇಳೂರು, ಶ್ರೀ ಪ್ರೊ.ರಮೇಶ್, ಸುರೇಶ್ ಬಾಳೆಗುಂಡಿ, ಶ್ರೀ ನಾಗರಾಜ್ ನೇರಿಗೆ, ಶ್ರೀ ಶ್ರೀ ಡಿ.ಪಿ ಶ್ರೀಧರ್ ಈಡೂರು ಸೇರಿದಂತೆ ಅನೇಕ ಗಣ್ಯರು, ಜನಪ್ರತಿನಿಧಿಗಳು ಹಾಗೂ ಸಮಾಜದ ಬಂಧುಗಳು ಹಾಜರಿದ್ದರು.

University of Sciences ಜೇನುಕೃಷಿ : ರೈತರಿಂದ- ರೈತರಿಗಾಗಿ ಡಿಸೆಂಬರ್ 23 ರಂದು ತರಬೇತಿ ಕಾರ್ಯಕ್ರಮ

0

University of Sciences ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ, ವಿಸ್ತರಣಾ ನಿರ್ದೇಶನಾಲಯದ ರೈತರ ತರಬೇತಿ ಸಂಸ್ಥೆಯು “ಜೇನು ಕೃಷಿಯ ಬಗ್ಗೆ ರೈತರಿಂದ ರೈತರಿಗಾಗಿ ತರಬೇತಿ ಕಾರ್ಯಕ್ರಮ”
ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತದೆ.

ಈ ಕಾರ್ಯಕ್ರಮವನ್ನು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ “ರೈತರ ತರಬೇತಿ ಸಂಸ್ಥೆ, ವರದಾ ಬ್ಲಾಕ್, ನೆಲ ಮಹಡಿ, ಇರುವಕ್ಕಿ” ಯಲ್ಲಿ ದಿನಾಂಕ: 23.12.2025 ರ ಬೆಳಗ್ಗೆ 10 ಗಂಟೆಗೆ ನೆರವೇರಿಸಲಾಗುತ್ತದೆ.

University of Sciences ಆದುದರಿಂದ ಆಸಕ್ತ ರೈತರು ಮತ್ತು ರೈತ ಮಹಿಳೆಯರು, ರೈತರ ತರಬೇತಿ ಸಂಸ್ಥೆಯ ಸಿಬ್ಬಂದಿಯವರಿಗೆ ಫೋನ್ ಮುಖಾಂತರ ಸಂಪರ್ಕಿಸಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಈ ತರಬೇತಿ ಕಾರ್ಯಕ್ರಮವು ಉಚಿತವಾಗಿರುತ್ತದೆ.

ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಲು ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆಗಳು 9958324261/ 8618715599 / 9448312978

ತರಬೇತಿ ನಡೆಯುವ ಸ್ಥಳಕ್ಕೆ ಬರಲು ಈ ಕೋಡ್ ಪಿನ್ 44L-7L7-PJM6 ಅನ್ನು ಗೂಗಲ್ ಮ್ಯಾಪ್ ನಲ್ಲಿ

Shri Shivaganga Yoga Kendra ಧ್ಯಾನಗಳಲ್ಲಿ 112ಕ್ಕಿಂತಲೂ ಜಾಸ್ತಿ ವಿಧಾನಗಳಿವೆ- ವಿರಕ್ತಮಠದ ಹಾಲಯ್ಯ.

0

Shri Shivaganga Yoga Kendra ಆನಾಪಾನಸತಿ ಧ್ಯಾನ ಅಂದರೆ ನಮ್ಮ ದೇಹದ ಒಳಗೆ ಸಹಜವಾಗಿ ಬರುವ ಉಸಿರು ಮತ್ತು ದೇಹದಿಂದ ಹೊರಗೆ ಹೋಗುವ ಸಹಜವಾದ ಉಸಿರನ್ನು ಗಮನಪೂರ್ವಕವಾಗಿ ಬಹುಎಚ್ಚರಿಕೆಯಿಂದ ಅರಿಯುವುದು ಎಂದು ವಿರಕ್ತಮಠದ ಹಾಲಯ್ಯ ಹೇಳಿದರು.

ಶಿವಗಂಗಾ ಯೋಗಕೇಂದ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಆನಾಪಾನಸತಿ ಧ್ಯಾನ ಪದ್ಧತಿಯು ಈಗಲೂ ಸಹ ಹಲವಾರು ಧ್ಯಾನ ಕ್ರಮಗಳಿಗೆ ಮೊದಲ ಮೆಟ್ಟಿಲಾಗಿದೆ. ಧ್ಯಾನದಲ್ಲಿ 112ಕ್ಕಿಂತಲೂ ಜಾಸ್ತಿ ವಿಧಾನಗಳು ಇವೆ ಎಂದು ತಿಳಿಸಿದರು.

ಗೌತಮ ಬುದ್ಧ ಸಂಶೋಧಿಸಿದ ಹೊಸ ಧ್ಯಾನದ ದಾರಿ ಎಂದರೆ ಅದು ವಿಪಶ್ಯನ. ವಿಪಶ್ಯನ ಎನ್ನುವುದು ಪಾಳಿ ಶಬ್ಧದ ಮೂಲ ರೂಪ. ಪಶ್ಯನ ಎಂದರೆ ನೋಡುವುದು ವಿಪಶ್ಯನ ಅಂದ್ರೆ ವಿಶೇಷವಾಗಿ ನೋಡುವುದು. ನಮ್ಮ ದೇಹದಲ್ಲಿ ಉಂಟಾಗುವ ಸಂವೇದನೆಗಳನ್ನ ನಿರಂತರವಾಗಿ ಗಮನಪೂರ್ವಕವಾಗಿ ದೃಷ್ಟ ಭಾವದಿಂದ ಗಮನಿಸುವುದೇ ಆಗಿದೆ. ಅದನ್ನು ವಿಪಶ್ಯನ ಧ್ಯಾನ ಎನ್ನುತ್ತಾರೆ ಎಂದರು.

Shri Shivaganga Yoga Kendra ಧ್ಯಾನ ಮಾಡುವುದರಿಂದ ನಮ್ಮ ಮನೋಮಂದಿರದ ಆಳದಲ್ಲಿ ಹುದುಗಿರುವ ಎಲ್ಲ ತರದ ಮನೋಕ್ಲೇಶಗಳು, ಭ್ರಾಂತಿಗಳು, ಅಸುರಿ ಗುಣಗಳು ಮಾಯವಾಗುತ್ತ ಬೇರು ಸಮೇತ ಹೊರಗೆ ಬರುತ್ತವೆ. ಅಂದರೆ ನಮ್ಮ ಮನಸ್ಸು ಸಂಪೂರ್ಣವಾಗಿ ನಿರ್ಮಲವಾಗುತ್ತದೆ. ತನ್ಮೂಲಕ ನಮ್ಮ ದೇಹದ ಮತ್ತು ಮನಸ್ಸಿನ ಮೇಲಾಗುವ ಕಾಯಿಲೆಗಳ ಪ್ರಭಾವವು ಕಡಿಮೆಯಾಗುತ್ತದೆ. ನಮ್ಮ ಆರೋಗ್ಯ ಸಹಜವಾಗಿ ಸುಧಾರಣೆಯಾಗುತ್ತದೆ. ಎಲ್ಲ ತರದ ಮನೋದೈಹಿಕ ಕಾಯಿಲೆಗಳು ಮನೋ ಮೂಲ ಹೊಂದಿರುವ ತೊಂದರೆಗಳು ನಿವಾರಣೆಯಾಗುತ್ತವೆ.

ಇಂತಹ ಅಮೂಲ್ಯವಾದ ಮತ್ತು ಅತಿ ಸರಳವಾದ, ಎಲ್ಲಾ ಜಾತಿ, ಮತ, ಪಂಥ, ಧರ್ಮ, ಭಾಷೆ, ದೇಶ, ಜನಾಂಗದವರು ಸಹ ಅನುಸರಿಸಬಹುದಾಗಿದೆ. ಸಾರ್ವಕಾಲಿಕ ಧ್ಯಾನದ ಕ್ರಮವನ್ನ ನಾವು ಅನುಸರಿಸುತ್ತ ನಮ್ಮ ಎಲ್ಲ ಕಷ್ಟ ಸಂಕೋಲೆಗಳಿಂದ ಮುಕ್ತಿಯನ್ನು ಹೊಂದಬೇಕು ಎಂದು ಹೇಳಿದರು.

ಶಿವಗಂಗಾ ಯೋಗ ಕೇಂದ್ರದಲ್ಲಿ ಆಯೋಜಿಸಿದ್ದ ವಿಶ್ವ ಧ್ಯಾನ ದಿನಾಚರಣೆಯಲ್ಲಿ ಜಿ.ವಿಜಯಕುಮಾರ್, ಕಾಟನ್ ಜಗದೀಶ್, ಜಿ.ಎಸ್.ಓಂಕಾರ್, ವಿಜಯ ಬಾಯರ್, ಟ್ರಸ್ಟಿ ಹಾಲಪ್ಪ, ಶಿವಗಂಗಾ ಯುವ ಕೇಂದ್ರದ ಕಾರ್ಯದರ್ಶಿ ಚಂದ್ರಶೇಖರಯ್ಯ ಹಾಗೂ ಟ್ರಸ್ಟಿನ ಪದಾಧಿಕಾರಿಗಳು ಉಪಸ್ಥಿತರಿದ್ದರು.

38 ಶಾಖೆಗಳಿಂದ ಯೋಗ ಶಿಬಿರಾರ್ಥಿಗಳು ಧ್ಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಒಂದು ಗಂಟೆ ಧ್ಯಾನ ಮಾಡುವುದರ ಜೊತೆಗೆ ವಿಶ್ವ ಧ್ಯಾನ ದಿನಾಚರಣೆಯ ಮಹತ್ವವನ್ನು ಅರಿತರು. ಕಾರ್ಯಕ್ರಮದಲ್ಲಿ ಎಲ್ಲಾ ಶಾಖೆಗಳ ಯೋಗ ಶಿಕ್ಷಕರು ಪಾಲ್ಗೊಂಡಿದ್ದರು.

Madhu Bangarappa ಶಾಲೆಗಳಲ್ಲಿ ನೈತಿಕ ಶಿಕ್ಷಣಕ್ಕೆ ಒತ್ತು- ಸಚಿವ ಮಧು ಬಂಗಾರಪ್ಪ

0

Madhu Bangarappa ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ಶಿಕ್ಷಕರ ಪ್ರೋತ್ಸಾಹದ ಜೊತೆಗೆ ಪೋಷಕರ ಸಹಕಾರವೂ ಅತ್ಯಗತ್ಯವಾಗಿದೆ. ಶಾಲೆಗಳಲ್ಲಿ ನೈತಿಕ ಶಿಕ್ಷಣಕ್ಕೆ ಒತ್ತುಕೊಟ್ಟಿರುವುದರಿಂದ ಮಕ್ಕಳಿಗೆ ಪೋಷಕರ, ಹಿರಿಯರ ಬಗ್ಗೆ ಗೌರವದ ಭಾವನೆಗಳು ಮೂಡಲಿವೆ. ಅಲ್ಲದೇ ಭಾವನಾತ್ಮಕ ಸಂಬಂಧಗಳು ಗಟ್ಟಿಗೊಳ್ಳುತ್ತವೆ ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಅವರು ಹೇಳಿದರು.
ಅವರು ಇಂದು ನಗರದ ಡಿ.ವಿ.ಎಸ್. ಮಹಾವಿದ್ಯಾಲಯದ ಸಿಂಗಾರ ಸಭಾಂಗಣದಲ್ಲಿ 2022-23 ಮತ್ತು 2023-24ನೇ ಸಾಲಿನಲ್ಲಿ 10ನೇ ತರಗತಿಯಲ್ಲಿ ಶೇ.100ರಷ್ಟು ಫಲಿತಾಂಶ ಪಡೆದು ಸಾಧನೆ ಮಾಡಿದ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗಾಗಿ ಏರ್ಪಡಿಸಲಾಗಿದ್ದ ಅಭಿನಂದನಾ ಸಮಾರಂಭಕ್ಕೆ ತೆರಳುವ ಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದರು.
ಧಾರವಾಡ ಮತ್ತು ಕಲಬುರಗಿ ವಿಭಾಗಗಳ ವ್ಯಾಪ್ತಿಯ ಸರ್ಕಾರಿ ಶಾಲೆಗಳಲ್ಲಿ ಕಲಿಕಾ ಸುಧಾರಣಾ ಕ್ರಮಗಳು, ಗುಣಾತ್ಮಕ ಶಿಕ್ಷಣ ಅನುಷ್ಠಾನ ಕ್ರಮಗಳ ಕುರಿತು ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಲಾಗಿದೆ. ಎಲ್.ಕೆ.ಜಿ.ಯಿಂದ ಪದವಿಪೂರ್ವ ಶಿಕ್ಷಣದವರೆಗೆ ವ್ಯಾಸಂಗ ಮಾಡುವ ಎಲ್ಲಾ ಮಕ್ಕಳಿಗೆ ಉಚಿತ ನೋಟ್‌ಪುಸ್ತಕ ಮತ್ತು ಪಠ್ಯಪುಸ್ತಕವನ್ನು ವಿತರಿಸಲು ಕ್ರಮ ವಹಿಸಲಾಗುತ್ತಿದೆ. ಈವರೆಗೆ ಎಸ್.ಎಸ್.ಎಲ್.ಸಿ. ವರೆಗಿನ ವಿದ್ಯಾರ್ಥಿಗಳಿಗೆ ಮಾತ್ರ ಪಠ್ಯಪುಸ್ತಕ, ನೋಟ್‌ ಪುಸ್ತಕ, ಬಿಸಿಯೂಟ, ಹಾಲು, ಮೊಟ್ಟೆ ಮತ್ತಿತರ ಸೌಲಭ್ಯಗಳನ್ನು ಒದಗಿಸಲಾಗುತ್ತಿತ್ತು ಎಂದ ಅವರು, ಕಲಿಕೆಯಲ್ಲಿ ದ್ವಿಭಾಷಾ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಅಂತೆಯೇ ಆರಂಭದಿಂದಲೇ ಕಂಫ್ಯೂಟರ್‌ ಕಲಿಕೆಗೆ ಕ್ರಮಕೈಗೊಳ್ಳಲಾಗುತ್ತಿದೆ ಎಂದರು.
ಈಗಾಗಲೇ ನಿರ್ಣಯ ಕೈಗೊಂಡಿರುವಂತೆ 500ಕೆ.ಪಿ.ಎಸ್. ಶಾಲೆಗಳ ಜೊತೆಗೆ ಹೆಚ್ಚುವರಿಯಾಗಿ 300ಕೆ.ಪಿ.ಎಸ್. ಶಾಲೆಗಳು ಹಾಗೂ ಅಲ್ಪಸಂಖ್ಯಾತರ ಇಲಾಖೆಗಳ ಅನುದಾನದಿಂದ 100ಕೆ.ಪಿ.ಎಸ್. ಶಾಲೆಗಳು ಸೇರಿದಂತೆ ಒಟ್ಟು 900ಕೆ.ಪಿ.ಎಸ್. ಶಾಲೆಗಳನ್ನು ಮುಂದಿನ ವರ್ಷಾರಂಭದಲ್ಲಿ ಆರಂಭಿಸಲು ಉದ್ದೇಶಿಸಲಾಗಿದೆ. ಅದಕ್ಕಾಗಿ ಡಿ.ಪಿ.ಆರ್‌ ಸಿದ್ದಗೊಳ್ಳುತ್ತಿದ್ದು, ಟೆಂಡರ್‌ ಪ್ರಕ್ರಿಯೆ ಕೂಡ ಪ್ರಗತಿಯಲ್ಲಿದೆ. ಯೋಜನೆಯ ಅಧಿಕೃತ ಉದ್ಘಾಟನೆಗಾಗಿ ಮಾನ್ಯ ಮುಖ್ಯಮಂತ್ರಿಗಳಲ್ಲಿ ದಿನಾಂಕ ನಿಗಧಿಗೊಳಿಸಿಕೊಡಲು ಕೋರಲಾಗಿದೆ.
Madhu Bangarappa ಪ್ರಸ್ತುತ ಬಂದಿರುವ ಪರೀಕ್ಷಾ ಫಲಿತಾಂಶವೂ ಕೂಡ ಸಮಾಧಾನಕರವಾಗಿದೆ. ಶಿಕ್ಷಣ ಇಲಾಖೆ ಸಮಸ್ಯೆಗಳಿಂದ ಮುಕ್ತವಾಗಿಲ್ಲ. ಆದಾಗ್ಯೂ ಇತ್ತೀಚಿನ ಶಿಕ್ಷಣ ಕ್ಷೇತ್ರದಲ್ಲಿನ ಮಹತ್ವದ ಬದಲಾವಣೆಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದ ಅವರು, ಶಿಕ್ಷಣ ಇಲಾಖೆಯ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾಗುವ ವಿಷಯಗಳನ್ನು, ಸಮಸ್ಯೆ-ಸವಾಲುಗಳನ್ನು ಗಮನಿಸಿ, ಅಗತ್ಯ ಕ್ರಮ ವಹಿಸಲಾಗುತ್ತಿದೆ ಎಂದರು.
ಶಿಕ್ಷಣ ಇಲಾಖೆಯ ಕಾರ್ಯಕ್ರಮಗಳ ವ್ಯವಸ್ಥಿತ ಅನುಷ್ಠಾನಕ್ಕೆ ಯಾವುದ ಹಣಕಾಸಿನ ಅಡಚಣ ಇಲ್ಲ. ದೈಹಿಕ ಶಿಕ್ಷಣ ಮತ್ತು ಸಂಗೀತ ಶಿಕ್ಷಕರ ನೇಮಕಕ್ಕೆ ಕ್ರಮವಹಿಸಲಾಗುವುದು. 1995ರ ನಂತರದ ಖಾಸಗಿ ಶಾಲೆಗಳನ್ನು ಅನುದಾನದ ವ್ಯಾಪ್ತಿಗೊಳಪಡಿಸಲು ಯೋಚಿಸಲಾಗುತ್ತಿದೆ. ಶಿಕ್ಷಕರ ಕೊರತೆಯನ್ನು ನೀಗಿಸುವಲ್ಲಿ 12000ಶಿಕ್ಷಕರ ನೇಮಕಾತಿಗೆ ಕ್ರಮ ಇವೆಲ್ಲವುಗಳು ಪ್ರತಿ ಮಗುವಿನ ಕಲಿಕೆಯಲ್ಲಿ ಪೂರಕ ವಾತಾವರಣ ನಿರ್ಮಾಣಗೊಳ್ಳಲಿದೆ ಎಂಬ ಆಶಯ ತಮಗಿದೆ ಎಂದರು.
ಮಕ್ಕಳಿಗೆ ಉಚಿತ ಮತ್ತು ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಸರ್ಕಾರ ಬದ್ಧವಾಗಿದೆ. ಹಲವು ದಶಕಗಳ ಶರಾವತಿ ಸಂತ್ರಸ್ಥರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಸರ್ಕಾರ ಕಾರ್ಯಪ್ರವೃತ್ತವಾಗಿದೆ. ಮನುಷ್ಯ ಮತ್ತು ವನ್ಯ ಪ್ರಾಣಿಗಳ ಸಂಘರ್ಷಕ್ಕೆ ನಿಯಂತ್ರಣ ಕ್ರಮ ವಹಿಸಲಾಗುತ್ತಿದೆ. ಚಂದ್ರಗುತ್ತಿ ದೇವಳ ಅಭಿವೃದ್ಧಿಗೆ ಪ್ರಾಧಿಕಾರ ರಚಿಸಲಾಗಿದ್ದು, ಶೀಘ್ರದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಗುವುದು. ಇನ್ನಷ್ಟು ಮೂಲಭೂತ ಸೌಕರ್ಯಗಳನ್ನು ಒದಗಿಸಿ, ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಆಕರ್ಷಿಸಲಾಗುವುದು. ಖಾಸಗಿ ಶಾಲೆಗಳ ಡೊನೇಷನ್‌ ಹಾವಳಿ ನಿಯಂತ್ರಣಕ್ಕೂ ಕ್ರಮ ವಹಿಸಲಾಗುವುದು ಎಂದರು.
ಜಿಲ್ಲೆಯ ಮಲೆನಾಡು ಭಾಗದ ಜನರಲ್ಲಿ ಆತಂಕ ಮೂಡಿಸಿರುವ ಮಂಗನಕಾಯಿಲೆ, ಅಡಿಕೆ ಬೆಳೆಗೆ ಎಲೆಚುಕ್ಕೆ ರೋಗ ಅವುಗಳ ನಿಯಂತ್ರಣಕ್ಕೆ ಸರ್ಕಾರ ಕ್ರಮ ಕೈಗೊಂಡಿದ್ದು, ಸಂಶೋಧನಾ ಚಟುವಟಿಕೆಗಳಿಗೆ ಸರ್ಕಾರದ ಅನುದಾನ ಬಿಡುಗಡೆಗೊಳಿಸಿದೆ. ಗಾಂಜಾ, ಅಫೀಮು ಮತ್ತಿತರ ಮಾದಕ ವಸ್ತುಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಈ ನಿಯಂತ್ರಣ ಕಾರ್ಯದಲ್ಲಿ ಲೋಪ ಎಸಗುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ವಹಿಸಲಾಗುವುದು. ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳು ಜನಸ್ನೇಹಿಯಾಗಿವೆ. ಇದರಿಂದಾಗಿ ರಾಜ್ಯದ ಜಿಡಿಪಿ ದರದಲ್ಲಿ ಗಣನೀಯ ಏರಿಕೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಆರ್.ಪ್ರಸನ್ನಕುಮಾರ್‌, ಚಂದ್ರಭೂಪಾಲ, ಬಂಡಿ ರಾಮಚಂದ್ರ, ರವಿಕುಮಾರ್‌, ಮಧು, ದೇವಿಪ್ರಸಾದ್‌, ಜಿ.ಡಿ.ಮಂಜುನಾಥ್‌, ಬಷೀರ್‌ ಅಹ್ಮದ್‌ ಸೇರಿದಂತೆ ಹಲವರು ಗಣ್ಯರು ಉಪಸ್ಥಿತರಿದ್ದರು.

Madhu Bangarappa ಮಧು ಬಂಗಾರಪ್ಪ ಅವರಿಂದ ಪಲ್ಸ್ ಪೊಲಿಯೋ ಗೆ ಚಾಲನೆ

0

Madhu Bangarappa ಮಾನ್ಯ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಅವರು ನಗರದ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಪಲ್ಸ್‌ ಪೋಲಿಯೋ ಆಂದೋಲನಕ್ಕೆ ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ Madhu Bangarappa ಎನ್.ಹೇಮಂತ್‌, ಎನ್.ಸಿ.ಡಿ.ಉಪನಿರ್ದೇಶಕರು ಡಾ|| ರಘುನಂದನ್‌, ಮೆಡಿಕಲ್‌ ಸೂಪರಿಡೆಂಟ್‌ ಡಾ|| ತಿಮ್ಮಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ನಟರಾಜ್‌, ಆರ್.ಸಿ.ಹೆಚ್‌. ಡಾ||ಮಲ್ಲಪ್ಪ ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿ ಸಿಬ್ಬಂಧಿಗಳು ಉಪಸ್ಥಿತರಿದ್ದರು.

MESCOM ಡಿಸೆಂಬರ್ 24. ಮಾಚೇನಹಳ್ಳಿ,ಬಿದರೆ ಸುತ್ತಮುತ್ತ ವ್ಯಿದ್ಯುತ್ ಸರಬರಾಜು ವ್ಯತ್ಯಯ.ಮೆಸ್ಕಾಂ ಪ್ರಕಟಣೆ.

0

MESCOM ಶಿವಮೊಗ್ಗ ಮಾಚೇನಹಳ್ಳಿ 110/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದ ಎಂ.ಸಿ.ಎಫ್-3,4,14,20 ರ ಮಾರ್ಗಗಳಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಹಮ್ಮಿಕೊಂಡಿದ್ದು, ಡಿ. 24 ರ ಬೆಳಗ್ಗೆ 9.00 ರಿಂದ ಸಂಜೆ 6.00 ರವರೆಗೆ ಮಾಚೇನಹಳ್ಳಿ, ಬಿದರೆ, ಬಿದರೆ ಗೇಟ್, ನಿದಿಗೆ, ಓತಿಘಟ್ಟ, ಸಿದ್ದರಗುಡಿ, ಹಾರೇಕಟ್ಟೆ, ಸೋಗಾನೆ, ಜನತಾ ಕಾಲೋನಿ, ಶಿವಣ್ಣ ಕ್ಯಾಂಪ್, ಆಚಾರಿ ಕ್ಯಾಂಪ್, ಹೊಸೂರು ರೆಡ್ಡಿಕ್ಯಾಂಪ್, ದುಮ್ಮಳ್ಳಿ, ಶುಗರ್ ಕಾಲೋನಿ ಮತ್ತು ಜಯಂತಿ ಗ್ರಾಮ, ಹೊನ್ನವಿಲೆ, ಕಿಯೋನಿಕ್ಸ್ ಐಟಿ ಪಾರ್ಕ್, ಮಲ್ನಾಡ್ ಆಸ್ಪತ್ರೆ, MESCOM ಕೆ.ಎಸ್.ಆರ್.ಪಿ. ಕಾಲೋನಿ, ನವುಲೆ ಬಸವಾಪುರ, ಶೆಟ್ಟಿಹಳ್ಳಿ, ಮಾಳೇನಹಳ್ಳಿ, ಗುಡ್ರಕೊಪ್ಪ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Gurudutt Hegde ಡಿಸೆಂಬರ್ 23. ಬಾಲ್ಯ ಮತ್ತು ಕಿಶೋರಾವಸ್ಥೆ ಕಾರ್ಮಿಕ ಕಾಯ್ದೆ ಕಾರ್ಯಾಗಾರ- ಗುರುದತ್ತ ಹೆಗಡೆ

0

Gurudutt Hegde ಬಾಲ್ಯಾವಸ್ಥೆಯ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986ರ ಕಲಂ ಹಾಗೂ 17ರಡಿ ನೇಮಕಗೊಂಡ ಅಧಿಕಾರಿಗಳಿಗೆ ಈ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲು ಜಿಲ್ಲಾ ಪಂಚಾಯತ್‌ನ ನಜೀರ್ ಸಾಬ್ ಸಭಾಂಗಣದಲ್ಲಿ ಡಿ.23 ರಂದು ಬೆಳಿಗ್ಗೆ 10 ಗಂಟೆಗೆ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ ತಿಳಿಸಿದ್ದಾರೆ.

Bhadravati News ಭದ್ರಾವತಿ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ: ತಹಶೀಲ್ದಾರ್ ಪ್ರಕಟಣೆ.

0

BhadravatiNews ಮಾನ್ಯ ಭಾರತ ಚುನಾವಣಾ ಆಯೋಗ, ನವದೆಹಲಿ ಹಾಗೂ ಮಾನ್ಯ ಮುಖ್ಯ ಚುನಾವಣಾಧಿಕಾರಿಗಳು, ಬೆಂಗಳೂರು ರವರ ನಿರ್ದೇಶನದ ಮೇರೆಗೆ ಮುಂಬರುವ ದಿನಗಳಲ್ಲಿ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ ಕಾರ್ಯ(ಎಸ್‌ಐಆರ್-ಸ್ಪೆಷಲ್ ಇಂಟೆನ್ಸಿವ್ ರಿವಿಷನ್) ಪ್ರಾರಂಭವಾಗಲಿದ್ದು, ಇದಕ್ಕೆ ಪೂರಕವಾಗಿ 112-ಭದ್ರಾವತಿ ವಿಧಾನ ಸಭಾ ಕ್ಷೇತ್ರದಲ್ಲಿ 2002 ಮತ್ತು 2025ರ ಮತದಾರರ ಪಟ್ಟಿಯ ಮ್ಯಾಪಿಂಗ್ ಮತ್ತು ಪ್ರೋಜಿನಿ (ಸಂತತಿ ಸೇರ್ಪಡೆ-18 ವರ್ಷ ಮೇಲ್ಪಟ್ಟ 40 ವರ್ಷದೊಳಗಿನ ಮತದಾರರು) ಕಾರ್ಯ ನಡೆಯುತ್ತಿದೆ.
BhadravatiNews 2002 ರಲ್ಲಿ ಮತದಾರರ ಪಟ್ಟಿಯಲ್ಲಿರುವ ಮತದಾರರನ್ನು 2025 ರ ಮತದಾರರ ಪಟ್ಟಿಯೊಂದಿಗೆ ಗುರುತಿಸಿ ಮ್ಯಾಪಿಂಗ್ ಮತ್ತು ಪ್ರೊಜಿನಿ ಕಾರ್ಯ ನಡೆಸಬೇಕಾಗಿರುತ್ತದೆ. ಆದ್ದರಿಂದ 112-ಭದ್ರಾವತಿ ವಿಧಾನ ಸಭಾ ಮತಕ್ಷೇತ್ರದಲ್ಲಿರುವ ಮತದಾರರು ತಾವು ಮತದಾನ ಮಾಡುವ ಕೇಂದ್ರದಲ್ಲಿ ಬಿ.ಎಲ್.ಓ ರವರನ್ನು ಭೇಟಿಯಾಗಿ ಪ್ರಸ್ತುತ ತಮ್ಮ ಮತದಾರರ ಗುರುತಿನ ಚೀಟಿಯೊಂದಿಗೆ 2002 ರಲ್ಲಿ ನೀವು ಮತದಾನ ಮಾಡಿದ ಗುರುತಿನ ಚೀಟಿ, ಮತದಾನ ಮಾಡಿದ ಮತಕ್ಷೇತ್ರ, ಮತದಾನ ಕೇಂದ್ರ, ಕ್ರಮ ಸಂಖ್ಯೆಯನ್ನು ಸಂಬAಧಪಟ್ಟ ಬಿ.ಎಲ್.ಓ ರವರಿಗೆ ತಿಳಿಸಿ ಅಥವಾ ಹಾಜರುಪಡಿಸಿ ಮ್ಯಾಪಿಂಗ್ ಮಾಡಿಸಿಕೊಳ್ಳಲು ಈ ಮೂಲಕ 112-ಭದ್ರಾವತಿ ವಿಧಾನ ಸಭಾ ಮತಕ್ಷೇತ್ರದ ಮತದಾರರಲ್ಲಿ ಸಹಾಯಕ ಮತದಾರರ ನೊಂದಣಾಧಿಕಾರಿ 112-ಭದ್ರಾವತಿ ವಿಧಾನ ಸಭಾ ಕ್ಷೇತ್ರ ಹಾಗೂ ತಹಶೀಲ್ದಾರ್, ಭದ್ರಾವತಿ ತಾಲ್ಲೂಕು ಇವರು ಕೋರಿದ್ದಾರೆ.

Doddapete Police Station ವ್ಯಕ್ತಿ ಕಾಣೆಯಾಗಿದ್ದಾರೆ.ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆ ಪ್ರಕಟಣೆ

0

Doddapete Police Station ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಭಾರತಿ ಕಾಲೋನಿ 1ನೇ ಕ್ರಾಸ್ ವಾಸಿ, ಸಿಟಿ ಸೆಂಟ್ರಲ್‌ನಲ್ಲಿ ಕಾಫಿ ಶಾಪ್ ಅಂಗಡಿ ಮಾಲೀಕರಾದ ಐಶ್ವರ್ಯ ಎಂಬುವವರ ಪತಿ ಸಚಿನ್ ಬಿನ್ ನಂಜುAಡಪ್ಪ ಎಂಬುವವರು ಹೊಳೆಹೊನ್ನೂರು ಗ್ರಾಮದಲ್ಲಿ ಫರ್ಟಿಲೈಜರ್ ಅಂಗಡಿ ಇಟ್ಟುಕೊಂಡಿದ್ದು, ಡಿ. 14 ರಂದು ಸಂಜೆ 7.30ಕ್ಕೆ ಹೊರಗಡೆ ಹೋಗಿ ಬರುತ್ತೇನೆಂದು ಹೋದವರು ಈತನಕ ವಾಪಾಸ್ಸಾಗಿರುವುದಿಲ್ಲ. ಈತನ ಚಹರೆ 5.5 ಅಡಿ ಎತ್ತರ, ಕೋಲುಮುಖ, ಗೋಧಿ ಮೈಬಣ್ಣ, ದಪ್ಪ ಗಡ್ಡ ಮೀಸೆ ಬಿಟ್ಟಿರುತ್ತಾರೆ. ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಕೇಸರಿ ಬಣ್ಣದ ಶರ್ಟ್ ಹಾಗೂ ಕಪ್ಪು ಬಣ್ಣದ ನೈಟ್ ಪ್ಯಾಂಟ್ ಧರಿಸಿರುತ್ತಾರೆ.
Doddapete Police Station ಈತನ ಬಗ್ಗೆ ಸುಳಿವು ಸಿಕ್ಕಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ದೂ.ಸಂ.: 08182-261414/ 9620348689 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ

S. Rudregowda ಯೋಗ-ಧ್ಯಾನಗಳು ಜೀವನಕ್ಕೆ ಅಗತ್ಯವಿರುವ ಎಲ್ಲ ಮೌಲ್ಯಗಳನ್ನು ಒಗ್ಗೂಡಿಸುತ್ತದೆ- ಎಸ್.ರುದ್ರೇಗೌಡ

0

S. Rudregowda ಕುಟುಂಬದ ಶಾಂತಿ, ನೆಮ್ಮದಿ ಜತೆಯಲ್ಲಿ ಶಾಂತಿಯುತ ವಾತಾವರಣ ನಿರ್ಮಾಣ ಮಾಡಲು ಯೋಗ ಮತ್ತು ಧ್ಯಾನ ಪ್ರಕ್ರಿಯೆ ಸಹಕಾರಿಯಾಗುತ್ತದೆ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರುದ್ರೇಗೌಡ ಹೇಳಿದರು.

ಅಂತರಾಷ್ಟ್ರೀಯ ಯೋಗ ಧ್ಯಾನ ದಿನಾಚರಣೆ ಅಂಗವಾಗಿ ಶಿವಗಂಗಾ ಯೋಗ ಕೇಂದ್ರ ಕೃಷಿ ನಗರ, ಎಲ್‌ಬಿಎಸ್ ನಗರ, ಅಶ್ವತ್ಥ್ ನಗರಗಳ ಯೋಗಶಾಖೆಗಳಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಹುತೇಕ ರಾಷ್ಟ್ರಗಳ ಜನಸಂಖ್ಯೆಯಲ್ಲಿ ಮೂರನೇ ಒಂದು ಭಾಗ ಅಶಕ್ತತೆ, ಒತ್ತಡ, ಘರ್ಷಣೆ, ಹಿಂಸೆ, ಅನಿಶ್ಚಿತತೆ ಮತ್ತು ಭಾವನಾತ್ಮಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಯೋಗ, ಧ್ಯಾನಗಳ ಆಚರಣೆಯಿಂದ ಪ್ರತಿಯೊಬ್ಬ ವ್ಯಕ್ತಿಯ ದೇಹ, ಮನಸ್ಸು, ಬುದ್ಧಿ ಚಿತ್ತಗಳಲ್ಲಿ ಪ್ರೀತಿ, ಪ್ರೇಮ, ಸ್ನೇಹ, ಸಹಬಾಳ್ವೆ, ನಂಬಿಕೆ ಮತ್ತು ಜೀವನಕ್ಕೆ ಅಗತ್ಯವಿರುವ ಎಲ್ಲ ಮೌಲ್ಯಗಳನ್ನು ಒಗ್ಗೂಡಿಸುತ್ತದೆ ಎಂದು ತಿಳಿಸಿದರು.

ಶಿವಗಂಗಾ ಯೋಗಕೇಂದ್ರವು ಯೋಗಾಚಾರ್ಯ ಡಾ. ಸಿ.ವಿ.ರುದ್ರಾರಾಧ್ಯ ಅವರ ನೇತೃತ್ವದ ತಂಡ ಕಾರ್ಯೋನ್ಮುಖರಾಗಿರುವುದು ಶ್ಲಾಘನೀಯ ಎಂದು ಹೇಳಿದರು.

S. Rudregowda ವಿರಕ್ತ ಮಠದ ಹಾಲಯ್ಯ ಮಾತನಾಡಿ, ಧ್ಯಾನದಿಂದ ನಮ್ಮ ದೇಹದಲ್ಲಿ ಆಗುವ ಸೂಕ್ಷ್ಮ ಬದಲಾವಣೆಗಳನ್ನು ವೈಜ್ಞಾನಿಕವಾಗಿ ವಿವರಿಸಿದರು. ಶಿವಗಂಗಾ ಯೋಗಕೇಂದ್ರದ ಕಾರ್ಯಾಧ್ಯಕ್ಷ ಡಾ. ಸಿ.ವಿ.ರುದ್ರಾರಾಧ್ಯ ಮಾತನಾಡಿ, ನಗರದ ವಿವಿಧೆಡೆಗಳಲ್ಲಿ ಸಾರ್ವಜನಿಕರಿಗೆ ಯೋಗ ತರಬೇತಿ ನೀಡಲಾಗುತ್ತಿದೆ ಎಂದರು.

ಶಿವಗಂಗಾ ಯೋಗಕೇಂದ್ರದ ಕಾರ್ಯದರ್ಶಿ ಎಚ್.ಎಂ.ಚಂದ್ರಶೇಖರಯ್ಯ ಕಾರ್ಯಕ್ರಮ ನಿರೂಪಿಸಿದರು. ಶಿವಗಂಗಾ ಯೋಗಕೇಂದ್ರದ ಪೋಷಕ ಪರಮೇಶ್, ಜಿ.ಎಸ್.ಓಂಕಾರ್, ನೀಲಕಂಠರಾವ್, ಜಿ.ವಿಜಯಕುಮಾರ್, ವಿಜಯ ಬಾಯರ್, ಅನಿಲ್‌ಕುಮಾರ್, ಪ್ರೊ. ಸುರೇಶ್, ಕಾಟನ್ ಜಗದೀಶ್, ಕೃಷ್ಣಮೂರ್ತಿ, ನಾಗರತ್ನ ಚಂದ್ರಶೇಖರಯ್ಯ, ಜ್ಯೋತಿ, ರುದ್ರೇಶ್, ರವಿ ಹಾಗೂ ಯೋಗ ಶಿಬಿರಾರ್ಥಿಗಳು ಹಾಜರಿದ್ದರು.