Sunday, May 17, 2026
Sunday, May 17, 2026
Home Blog Page 148

Shimoga News ಗಾಯಕ ಡಾ.ಅಪ್ಪಗೆರೆ ತಿಮ್ಮರಾಜು ಅವರ ನೇತೃತ್ವದಲ್ಲಿ ಜನಪದ ಗೀತ ಗಾಯನ ತರಬೇತಿ ಶಿಬಿರ.

0

Shimoga News ಚಿರಂತನ ಯೋಗ ಮತ್ತು ಸಂಗೀತ ಟ್ರಸ್ಟ್ ನಿಂದ ಕರ್ನಾಟಕ ಸಂಘ ಶಿವಮೊಗ್ಗ, ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾ ಘಟಕದಿಂದ ಡಾ. ಅಪ್ಪಗೆರೆ ತಿಮ್ಮರಾಜು ಅವರ ಸಾರಥ್ಯದಲ್ಲಿ ಡಿಸೆಂಬರ್ 24 ಮತ್ತು 25ರಂದು ಕರ್ನಾಟಕ ಸಂಘದ ಸಭಾಂಗಣದಲ್ಲಿ “ಜಾಣರ ಪದ-ಜನಪದ” ಜಾನಪದ ಗೀತಗಾಯನ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ.

Shimoga News ಡಿಸೆಂಬರ್ 24ರಂದು ಬೆಳಗ್ಗೆ 10.15ಕ್ಕೆ ಶಿಬಿರವನ್ನು ಜಿಲ್ಲಾ ಲೇಖಕಿಯರ ಸಂಘದ ಸಂಸ್ಥಾಪಕಿ ಎಸ್.ವಿ.ಚಂದ್ರಕಲಾ ಉದ್ಘಾಟಿಸುವರು. ಚಿರಂತನ ಯೋಗ ಮತ್ತು ಸಂಗೀತ ಟ್ರಸ್ಟ್ ಸ್ಥಾಪಕ ಅಧ್ಯಕ್ಷೆ ಶಾಂತಾ ಎಸ್.ಶೆಟ್ಟಿ ಅಧ್ಯಕ್ಷತೆ ವಹಿಸುವರು. ಡಾ. ಅಪ್ಪಗೆರೆ ತಿಮ್ಮರಾಜು ಶಿಬಿರದ ನೇತೃತ್ವ ವಹಿಸುವರು. ಎಚ್.ಆರ್.ಶಂಕರನಾರಾಯಣ ಶಾಸ್ತ್ರಿ, ಎಚ್.ಎಸ್.ರಮಾಶಾಸ್ತ್ರಿ ಪಾಲ್ಗೊಳ್ಳುವರು.

ಡಿಸೆಂಬರ್ 25ರಂದು ಸಂಜೆ 4.30ಕ್ಕೆ ಸಮಾರೋಪ ಸಮಾರಂಭದಲ್ಲಿ ಪತ್ರಕರ್ತ ಎಸ್.ಚಂದ್ರಕಾಂತ್, ಸಮಾಜ ಸೇವಕ ಕೆ.ಇ.ಕಾಂತೇಶ್, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಭಾಗವಹಿಸುವರು.

ಫೋಟೊ: ಡಾ. ಅಪ್ಪಗೆರೆ ತಿಮ್ಮರಾಜು

Shimoga APMC ಭಾನುವಾರ ಬೆಳಿಗ್ಗೆ ಮಾತ್ರ ಎಪಿಎಂಸಿ ಬಳಿರಾಸಾಯನಿಕ ರಹಿತ ಸಾವಯವ ಪದಾರ್ಥಗಳ ಮಾರಾಟದ” ವಿಷಮುಕ್ತ ರೈತರ ಸಂತೆ”.

0

Shimoga APMC ಪ್ರತಿ ಭಾನುವಾರ ಶಿವಮೊಗ್ಗ ವಿನೋಬನಗರ- ಆಲ್ಕೊಳ ರಸ್ತೆಯ ಎಪಿಎಂಸಿ ತರಕಾರಿ ಮಾರುಕಟ್ಟೆ ಗಿಂತ ಸ್ವಲ್ಪ ದೂರದ ಐಜಿ ಸರ್ಕಲ್ ನಲ್ಲಿ ವಿಷ ಮುಕ್ತ ರೈತರ ಸಂತೆ ನಡೆಯುತ್ತದೆ. ಬೆಳಿಗ್ಗೆ 07 ರಿಂದ 10 ಗಂಟೆ ವರೆಗೆ.
ಸಾವಯವ ಮತ್ತು ಸಹಜ ಕೃಷಿಯಲ್ಲಿ ಯಾವುದೇ ರಾಸಾಯನಿಕ, ಕ್ರಿಮಿನಾಶಕ ಬಳಸದೇ ಬೆಳೆದ ಪದಾರ್ಥಗಳನ್ನು ಮಾರಾಟ ಮಾಡಲಾಗುತ್ತಿದೆ. ಆಸಕ್ತರು ಭೇಟಿ ನೀಡಿ ಖರೀದಿ ಮಾಡಬಹುದು. ಇಲ್ಲಿ ರೈತರಿಂದ ನೇರ ಮಾರಾಟ.

Shimoga News ಡಿಸೆಂಬರ್ 28.ಸರ್ವ ಜಾತಿ- ಜನಾಂಗಗಳವಿಧುರ-ವಿಧವೆ ಸಮಾಲೋಚನಾ ಸಭೆ.

0

Shimoga News “ಮರಳಿ ಯತ್ನವ ಮಾಡು ಮರಳಿ ಯತ್ನವ ಮಾಡು” ಎಂಬ ತತ್ವಪದದಂತೆ ಶಿವಮೊಗ್ಗ ನಗರದ ಶ್ರೀ ಕಲಾ ಕೌಶಲ್ಯಾಭಿವೃದ್ಧಿ ಕೇಂದ್ರದಲ್ಲಿ ಇದೇ ಡಿಸೆಂಬರ್-28 ರಂದು ಭಾನುವಾರ ಸವ೯ ಜಾತಿ-ಜನಾಂಗಗಳ ವಿಧುರ-ವಿಧವೆ ಪುನರ್ವಿವಾಹ ಸಮಾಲೋಚನೆ ಸಭೆ ಏಪ೯ಡಿಸಲಾಗಿದೆ.
ಇದೊಂದು ಮಾನವೀಯ ಸಂಬಂಧ ಹಾಗು ಸಾಮಾಜಿಕ ಕಳಕಳಿಯ ಹೊಸ ದಿಕ್ಕಿನ ಕಡೆಗಿನ ಪ್ರಯತ್ನವಾಗಿದ್ದು ನಾಡಿನ ನಾನಾ ಕಡೆಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಅಂದು ಬೆಳಿಗ್ಗೆ 11=00 ಗಂಟೆಗೆ ವಿವಿಧೆಡೆಗಳಿಂದ ವಿಧುರ-ವಿಧವೆ ಹಾಗು ಪರಿತ್ಯಕ್ತರು ಭಾಗವಹಿಸಲಿದ್ದಾರೆ.
Shimoga News ಆಸಕ್ತರು ಆರ್.ಟಿ. ನಟರಾಜ್ ಶ್ರೀಕಲಾ ಕೌಶಲ್ಯಾಭಿವೃದ್ಧಿ ಕೇಂದ್ರ, ಒಂದನೆ ಮಹಡಿ, ಜಿಲ್ಲಾ ನಿವೃತ್ತ ನೌಕರರ ಸಂಘದ ಕಟ್ಟಡ, ಪ್ರೆಸ್ ಕ್ಲಬ್ ಎದುರು, ಆರ್.ಟಿ.ಒ. ಆಫೀಸ್ ರಸ್ತೆ, ಜಿಲ್ಲಾಧಿಕಾರಿಗಳ ಕಚೇರಿ ಆವರಣ, ಶಿವಮೊಗ್ಗ. ಮೊಬೈಲ್ : 9448143165/9449552635/9342158359/6363002259 ಇವರಲ್ಲಿ ಹೆಸರು ನೊಂದಾಯಿಸಿಕೊಂಡು ಪೋಸ್ಟ್ ಕಾಡ್೯ ಸೈಜ್ ಫೋಟೋ, ಆಧಾರ್ ಕಾಡ್೯, ಇತರೆ ಸಮಂಜಸ ದಾಖಲೆಗಳ ಸಹಿತ ಕಾಯ೯ಕ್ರಮದಲ್ಲಿ ಭಾಗವಹಿಸಬಹುದು.

Ayyappa Pindi ಧ್ಯಾನ ಕಾರ್ಯಕ್ರಮಕ್ಕೆ ಐದು ಸಾವಿರಕ್ಕೂ ಅಧಿಕ ಜನರಾಗಮನ. ಯಶಸ್ವಿ,ಅರ್ಥಪೂರ್ಣ- ಡಾ.ಅಯ್ಯಪ್ಪ ಪಿಂಡಿ

0

Ayyappa Pindi ಸಾರ್ವಜನಿಕರ ಒಳಿತಿಗಾಗಿ, ಆರೋಗ್ಯವಂತ ಸಮಾಜ ನಿರ್ಮಾಣಕ್ಕಾಗಿ ದೇಶಾದ್ಯಂತ ಧ್ಯಾನ ಕಾರ್ಯಕ್ರಮ ನಡೆಸುತ್ತಿದ್ದೇವೆ ಎಂದು ಅಂತರಾಷ್ಟ್ರೀಯ ಧ್ಯಾನ ತರಬೇತುದಾರ ಡಾ. ಅಯ್ಯಪ್ಪ ಪಿಂಡಿ ಹೇಳಿದರು.
ವಿಶ್ವ ಧ್ಯಾನ ದಿನದ ಅಂಗವಾಗಿ ಪೆಸಿಟ್ ಕಾಲೇಜಿನ ಸಭಾಂಗಣದಲ್ಲಿ ಪಿಎಸ್‌ಎಸ್‌ಎಂ, ಪಿರಮಿಡ್ ವರ್ಲ್ಡ್ ಫೌಂಡೇಷನ್, ಪ್ರೇರಣಾ ಎಜುಕೇಷನಲ್ ಆಂಡ್ ಸೋಶಿಯಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಶಿವಮೊಗ್ಗ ನಾದ ಧ್ಯಾನ ಚಕ್ರ 7 ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಯಾವುದೇ ಕಾರ್ಯಕ್ರಮದ ಯಶಸ್ಸಿಗೆ ಸಾರ್ವಜನಿಕರ ಸಹಕಾರ ಮುಖ್ಯ. ಧ್ಯಾನ ಕಾರ್ಯಕ್ರಮಕ್ಕೆ ಐದು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿರುವುದು ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿ ಎಂದು ತಿಳಿಸಿದರು.
ಶಿವಮೊಗ್ಗ ನಾದ ಧ್ಯಾನ ಚಕ್ರ ಕಾರ್ಯಕ್ರಮ ನಡೆಸಲು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ಉಚಿತವಾಗಿ ಪ್ರೇರಣಾ ಸಭಾಂಗಣ ನೀಡಿರುವುದು ವಿಶೇಷವಾಗಿದೆ. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳು ಎಂದರು.
ಶಾಂತಲಾ ಸ್ಪೇರೋಕಾಸ್ಟ್ ಶಾಂತಲಾ ಗ್ರೂಪ್ ಮ್ಯಾನೇಜಿಂಗ್ ಡೈರೆಕ್ಟರ್ ಡಿ.ಎಸ್.ಚಂದ್ರಶೇಖರ್ ದಂಪತಿಗೆ ಸನ್ಮಾನಿಸಲಾಯಿತು. ನಂತರ ಡಿ.ಎಸ್.ಚಂದ್ರಶೇಖರ್ ಮಾತನಾಡಿ, 25 ವರ್ಷದಿಂದ ಪ್ರಾಣಾಯಾಮ ಮಾಡುತ್ತಿದ್ದು, ವಿಶೇಷ ಅನುಭವ ನೀಡುತ್ತದೆ. ಧ್ಯಾನದಿಂದ ನಮ್ಮ ದೇಹದ ಪ್ರತಿಯೊಂದು ಅಂಗಾಂಗಗಳು ಆರೋಗ್ಯದಿಂದ ಇರುತ್ತವೆ. ಪ್ರತಿ ದಿನ 20 ನಿಮಿಷ ಧ್ಯಾನ ಮಾಡಬೇಕು ಎಂದು ತಿಳಿಸಿದರು.
Ayyappa Pindi ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಧ್ಯಾನದ ಅಭ್ಯಾಸದಿಂದ ಸದಾ ಲವಲವಿಕೆಯಿಂದ ಇರಲು ಸಾಧ್ಯ ಆಗುತ್ತದೆ ಎಂದರು.
ರಾಷ್ಟ್ರಮಟ್ಟದ ವಾದ್ಯಗಾರರು ಮೂರು ಗಂಟೆ ವಿಶೇಷ ಸಂಗೀತ ನುಡಿಸಿದರು. ಮಮತಾ ರುದ್ರೇಶ್, ಜಯಾ ಸುರೇಶ್, ನಾಗೇಂದ್ರ, ಶೋಭಾ ಶಿರೂರ, ಮಲ್ಲಿಕಾರ್ಜುನ, ಶ್ರೀಕಾಂತ, ವಿನಾಯಕ ಹೆಗಡೆ ಇತರರಿದ್ದರು.

Dr. Anuradha Kurunji ಆನ್ ಲೈನ್ ಪಾಡ್ ಕಾಸ್ಟ್ ಸಂದೇಶ.ಮಾನವೀಯ ಮೌಲ್ಯ ಅಳವಡಿಸಿಕೊಳ್ಳಿ- ಡಾ.ಅನುರಾಧ ಕುರುಂಜಿ

0

Dr. Anuradha Kurunji ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಆದರ್ಶಮಯವಾಗಿ ಯಶಸ್ವಿ ಜೀವನ ನಡೆಸಬೇಕೆಂದು ದಕ್ಷಿಣ ಕನ್ನಡದ ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಹಾಗೂ ವ್ಯಕ್ತಿತ್ವ ವಿಕಸನ ತರಬೇತುದಾರರಾದ ಡಾ.ಅನುರಾಧ ಕುರುಂಜಿ ವಿದ್ಯಾರ್ಥಿಗಳಿಗೆ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ಸಹಯೋಗದೊಂದಿಗೆ ಡಿ.19 ರಂದು ಇನ್‌ಸ್ಪೆöÊರ್ ಎಂಬ ವಿನೂತನ ಕಾರ್ಯಕ್ರಮದಡಿ ಇಗ್ನೆöÊಟ್ ಮೈಂಡ್ & ಇಗ್ನೆöÊಟ್ ಪಾಸಿಟಿವಿಟಿ ಎಂಬ ಘೋಷವಾಕ್ಯದೊಂದಿಗೆ ಏರ್ಪಡಿಸಲಾಗಿದ್ದ ಆನ್‌ಲೈನ್ ಪಾಡ್‌ಕಾಸ್ಟ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ 32 ಮುರಾರ್ಜಿ ದೇಸಾಯಿ ವಸತಿ ಶಾಲೆಗಳು ಮತ್ತು 183 ವಿದ್ಯಾರ್ಥಿ ನಿಲಯಗಳ 5 ನೇ ತರಗತಿಯಿಂದ ಪದವಿ/ಇಂಜಿನಿಯರಿAಗ್/ಸ್ನಾತಕೋತ್ತರ ಓದುತ್ತಿರುವ ಸುಮಾರು 15 ರಿಂದ 20 ಸಾವಿರ ವಿದ್ಯಾರ್ಥಿಗಳೊಂದಿಗೆ ವಿಡಿಯೋ ಸಂವಾದದ ಮೂಲಕ ಅವರು ಮಾತನಾಡಿದರು.
ಮಾನವ ಜೀವನ ಅತ್ಯಂತ ಸೋಜಿಗದಿಂದ ಕೂಡಿದ್ದು, ತಾಯಿ ತನ್ನ ನೋವಿನಲ್ಲೂ ಸಂತಸ ಪಡುತ್ತಾ, ಮಕ್ಕಳ ಪಾಲನೆ-ಪೋಷಣೆ ಮಾಡಿ ಮಕ್ಕಳನ್ನು ದೊಡ್ಡವರನ್ನಾಗಿ ಮಾಡುತ್ತಾಳೆ. ಇಂದು ಹೆಣ್ಣು ಪ್ರತಿ ಕ್ಷೇತ್ರದಲ್ಲಿ ತನ್ನ ಛಾಪನ್ನು ಮೂಡಿಸಿದ್ದರೂ ಶೋಷಣೆ ತಪ್ಪಿಲ್ಲ. ಹೆಣ್ಣಿನ ವಿರುದ್ದದ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇದನ್ನು ಹೋಗಲಾಡಿಸಲು ಉತ್ತಮ ಶಿಕ್ಷಣ ಮತ್ತು ಮಾನವೀಯ ಮೌಲ್ಯಗಳು ಅತ್ಯಗತ್ಯವಾಗಿದ್ದು, ಸಮಾಜದಲ್ಲಿ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ಶೋಷಣೆಗಳನ್ನು ತಡೆಯುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಾದ ನೀವು ದಿಟ್ಟ ಹೆಜ್ಜೆ ಇಡಬೇಕು. ಸಮಾಜದಲ್ಲಿ ಹೆಣ್ಣಿಗೆ ಉತ್ತಮ ಸ್ಥಾನಮಾನ ಮತ್ತು ಗೌರವ ದೊರೆಯುವಂತೆ ಮಾಡಬೇಕು ಎಂದರು.
Dr. Anuradha Kurunji ಈ ಆನ್‌ಲೈನ್ ಪಾಡ್‌ಕಾಸ್ಟ್ ವಿಡಿಯೋ ಸಂವಾದದಲ್ಲಿ ಜಿ.ಪಂ ಸಿಇಓ ಹೇಮಂತ್ ಎನ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶ್ರೀನಿವಾಸ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಲ್ಲೇಶಪ್ಪ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಶೋಭಾ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರೀತಿ ಭಾಗವಹಿಸಿದ್ದರು.

Police in Bhadravati ಮಹಿಳೆ ಕಾಣಿಯಾಗಿದ್ದಾರೆ. ಭದ್ರಾವತಿ ಹಳೇಪೇಟೆ ಪೊಲೀಸ್ ಪ್ರಕಟಣೆ.

0

Police in Bhadravati ಭದ್ರಾವತಿ ಹಳೆಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಭದ್ರಾವತಿ ಅಮೀರ್‌ಜಾನ್ ಕಾಲೋನಿ ಹೊಳೆಹೊನ್ನರು ರಸ್ತೆಯಲ್ಲಿರುವ ಹೈದರ್ ಆಲಿ ಮನೆಯ ಆಲೆಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಸಮೀರುನ್ನೀಸಾ ಕೋಂ ಅಹದ್ ಆಲಿ ಎಂಬುವವರು ಡಿ. 16 ರಂದು ಹೊರಗಡೆ ಹೋದವರು ಈತನಕ ವಾಪಾಸ್ಸಾಗಿರುವುದಿಲ್ಲ. ಈಕೆಯ ಚಹರೆ 4.5 ಅಡಿ ಎತ್ತರ, ಕೋಲುಮುಖ, ಸಾಧಾರಣ ಮೈಕಟ್ಟು, ಎಡ ಮೊಣಕೈ ಹತ್ತಿರ ಗೋಲಿ ಗಾತ್ರದ ಗಂಟು ಇದೆ. ಉರ್ದು, ಹಿಂದಿ, ಅಸ್ಸಾಂ ಭಾಷೆ Police in Bhadravati ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಗುಲಾಬಿ ಬಣ್ಣದ ಚೂಡಿದಾರ ಧರಿಸಿರುತ್ತಾರೆ.
ಈತನ ಬಗ್ಗೆ ಸುಳಿವು ಸಿಕ್ಕಲ್ಲಿ ಭದ್ರಾವತಿ ಹಳೆಪೇಟೆ ಪೊಲೀಸ್ ಠಾಣೆ ದೂ.ಸಂ.: 08182-261414/ 9620348689 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ

Shivamogga Police ಹರಿಗೆಯಿಂದ ತಾಯಿ ಮಗಳು ನಾಪತ್ತೆ. ಮಾಹಿತಿ,ಸುಳಿವು ನೀಡಲು ಪೊಲೀಸ್ ಪ್ರಕಟಣೆ.

0

Shivamogga Police ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹರಿಗೆ, ಚಿಲಕಾದ್ರಿ ವಾಸಿ ಅವಿನಾಶ್ ಎಂಬುವವರ ಪತ್ನಿ 32 ವರ್ಷದ ವೀಣಾ ಎಂಬುವವರು ತನ್ನ 7 ವರ್ಷದ ಮಗಳು ಚೈತನ್ಯಳನ್ನು ಕರೆದುಕೊಂಡು ಡಿ. 03 ರಂದು ಮನೆಯಿಂದ ಎಂಗೆಜ್‌ಮೆAಟ್‌ಗೆ ಹೋದವರು ಈವರೆಗೆ ಮನೆಗೆ ವಾಪಾಸ್ಸಾಗಿರುವುದಿಲ್ಲ.
ವೀಣಾರ ಚಹರೆ; 5 ಅಡಿ ಎತ್ತರ, ದುಂಡುಮುಖ, ಬಿಳಿ ಮೈಬಣ್ಣ, ದೃಢಕಾಯ ಮೈಕಟ್ಟು ಹೊಂದಿದ್ದು, ಎಡಕಣ್ಣಿನ ಹುಬ್ಬಿನ ಹತ್ತಿರ ಕಪ್ಪು ಮಚ್ಚೆ ಇರುತ್ತದೆ. ಮನೆಯಿಂದ ಹೋಗುವಾಗ ಆಕಾಶ್ ನೀಲಿ ಬಣ್ಣದ ಡ್ರೆಸ್ ಧರಿಸಿರುತ್ತರೆ. ಕನ್ನಡ ಭಾಷೆ ಮಾತನಾಡುತ್ತಾರೆ.
ಚೈತನ್ಯಾಳ ಚಹರೆ: 3.5 ಅಡಿ ಎತ್ತರ, ಕೋಲುಮುಖ, ಬಿಳಿ ಮೈಬಣ್ಣ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾಳೆ. ನೀಲಿ ಬಣ್ಣದ ಫ್ರಾಕ್ ಧರಿಸಿರುತ್ತಾರೆ.]
Shivamogga Police ಈ ತಾಯಿ-ಮಗಳ ಕುರಿತು ಸುಳಿವು ದೊರೆತಲ್ಲಿ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ಖುದ್ದಾಗಿ ಅಥವಾ ದೂ.ಸಂ.: 08182-261400/261418/9480803332/9480803350 ಗಳನ್ನು ಸಂಪರ್ಕಿಸುವುದು.

Seva Sindhu ವಿಕಲಚೇತನರ ರಿಯಾಯಿತಿ ಬಸ್ ಪಾಸ್ / ನವೀಕರಣಕ್ಕೆ ಅರ್ಜಿ ಆಹ್ವಾನ.

0

Seva Sindhu 2026ನೇ ಸಾಲಿಗೆ ವಿಕಲಚೇತನರ ರಿಯಾಯಿತಿ ಬಸ್ ಪಾಸ್‌ಗಳ ವಿತರಣೆ/ನವೀಕರಣಕ್ಕೆ “ಸೇವಾ ಸಿಂಧು” ಆನ್‌ಲೈನ್ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ದಿ.30/12/2025 ರಿಂದ ದಿ.28/02/2026 ರವರೆಗೆ https://serviceonline.gov.in.karnataka/URL ಬಳಸಿ ಅರ್ಜಿ ಸಲ್ಲಿಸುವುದು ಕಡ್ಡಾಯ. ನಿಗದಿಪಡಿಸಿದ ದಿನಾಂಕದ ಒಳಗೆ ಪಾಸ್‌ಗಳ ವಿತರಣೆ/ನವಿಕರಿಸಬೇಕಾಗಿರುತ್ತದೆ.
ಹೊಸದಾಗಿ ವಿಕಲಚೇತನರ ಬಸ್‌ಪಾಸ್ ಪಡೆಯಲು ವಿಭಾಗೀಯ ನಿಯಂತ್ರಣಾಧಿಕಾರಿಗಳು ಶಿವಮೊಗ್ಗ ವಿಭಾಗ ಎಂಬ ಕೌಂಟರ್ ಆಯ್ಕೆ ಮಾಡುವುದು ಹಾಗೂ 2025ನೇ ಸಾಲಿನಲ್ಲಿ ಪಾಸ್ ಪಡೆದಿರುವ ಫಲಾನುಭವಿಗಳು ಪಾಸ್ ನವೀಕರಣಕ್ಕಾಗಿ ಘಟಕ ವ್ಯವಸ್ಥಾಪಕರ ಕೌಂಟರ್ ಆಯ್ಕೆ ಮಾಡಲು ಸೂಚಿಸಿದೆ.
Seva Sindhu ಫಲಾನುಭವಿಗಳು ಪಾಸ್ ಪಡೆಯಲು ಬರುವಾಗ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಯವರಿಂದ ದೃಢೀಕರಿಸಿದ ಮಾನ್ಯತೆ ಇರುವ ವಿಕಲಚೇತನರ ಗುರುತಿನ ಚೀಟಿ ಪುಸ್ತಕ ಅಥವಾ ಯುಡಿಐಡಿ ಸ್ಮಾರ್ಟ್ ಕಾರ್ಡ್, ಡಿಸೆಬಿಲಿಟಿ ಸರ್ಟಿಫಿಕೇಟ್, ಫಲಾನುಭವಿಗಳ ಇತ್ತೀಚಿನ 3 ಭಾವಚಿತ್ರ, 2025ನೇ ಸಾಲಿನಲ್ಲಿ ಪಡೆದಿರುವ ವಿಕಲಚೇತನರ ಮೂಲ ಪಾಸ್(ನವೀಕರಣಕ್ಕಾಗಿ), ಆಧಾರ್ ಕಾರ್ಡ್ ಅಥವಾ ರೇಷನ್ ಕಾರ್ಡ್ ನೀಡಬೇಕು(ಈ ಎಲ್ಲಾ ದಾಖಲಾತಿಗಳು ಜೆಪಿಜಿ ಅಥವಾ ಪಿಡಿಎಫ್ ನಮೂನೆಯಲ್ಲಿ ಅಡಕಗೊಂಡಿರಬೇಕು). ಪಾಸ್ ಶುಲ್ಕ ರೂ.660 ಗಳನ್ನು ನಗದು ಮೂಲಕ ಪಾವತಿಸಬೇಕೆಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

Shimoga Riverside Karnataka ರೋಟರಿ ಸಂಸ್ಥೆಯು ಸೇವೆಯೊಂದಿಗೆ ಸದೃಢ ಆರೋಗ್ಯ ರಕ್ಷಣೆಯನ್ನೂ ಪ್ರೋತ್ಸಾಹಿಸುತ್ತದೆ- ಕೆ.ಪಾಲಾಕ್ಷ

0

Shimoga Riverside Karnataka ರೋಟರಿ ಸಂಸ್ಥೆಯು ಅಂತರಾಷ್ಟ್ರೀಯ ಮಟ್ಟದಲ್ಲಿ ಸಮಾಜಮುಖಿ ಚಟುವಟಿಕೆಗಳನ್ನು ನಡೆಸುವ ಜತೆಯಲ್ಲಿ ಸೇವಾ ಕಾರ್ಯಗಳನ್ನು ನಡೆಸುತ್ತಿದೆ. ಸೇವೆಯೊಂದಿಗೆ ಸದೃಢ ಆರೋಗ್ಯ ಕಾಪಾಡಿಕೊಳ್ಳಲು ಪ್ರೋತ್ಸಾಹಿಸುತ್ತದೆ ಎಂದು ರೋಟರಿ ಜಿಲ್ಲಾ ಗವರ್ನರ್ ಕೆ.ಪಾಲಾಕ್ಷ ಹೇಳಿದರು.
ಶಿವಮೊಗ್ಗ ನಗರದಲ್ಲಿ ರೋಟರಿ ಜಿಲ್ಲೆ 3182ರ ಆಶ್ರಯದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ರಿವರ್ ಸೈಡ್ ಅವರ ಆತಿಥ್ಯದಲ್ಲಿ ಪಿಇಎಸ್ ಕಾಲೇಜು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಮಲೆನಾಡು ಕ್ರೀಡೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ರೋಟರಿ ಎಂದರೆ ಕೇವಲ ಸಭೆ ಅಥವಾ ಯೋಜನೆಗಳು ಅಲ್ಲ. ಶಿಸ್ತಿನ ಜೀವನ, ಸೇವಾಭಾವ ಮತ್ತು ಆರೋಗ್ಯದ ಬಗ್ಗೆ ಅರಿವು ಮೂಡಿಸುವ ವಿಶೇಷ ಸಂಸ್ಥೆ. ನಾಲ್ಕು ಜಿಲ್ಲೆಗಳ 87 ಕ್ಲಬ್‌ಗಳ ಸದಸ್ಯರು ಒಂದೇ ವೇದಿಕೆಯಲ್ಲಿ ಸೇರಿ ಕ್ರೀಡೋತ್ಸವ ಯಶಸ್ವಿಗೊಳಿಸಿರುವುದು ರೋಟರಿ ಬಂಧುತ್ವದ ಜೀವಂತ ಸಾಕ್ಷಿ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಮಾತನಾಡಿ, ಕ್ರೀಡೆಯನ್ನು ಕೇವಲ ಪದಕ, ಬಹುಮಾನ ಅಥವಾ ಸ್ಪರ್ಧೆ ಮಿತಿಗೆ ಸೀಮಿತಗೊಳಿಸದೆ, ಆರೋಗ್ಯಕರ ಜೀವನಶೈಲಿಯ ಅವಿಭಾಜ್ಯ ಅಂಗವಾಗಿ ನೋಡಬೇಕು. ನಿಯಮಿತ ವ್ಯಾಯಾಮ, ಕ್ರೀಡಾಸಕ್ತಿ ಮತ್ತು ಶಿಸ್ತು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಅವಶ್ಯ. ಈ ಮೌಲ್ಯಗಳನ್ನು ರೋಟರಿ ಕ್ರೀಡೆಗಳ ಮೂಲಕ ಜನರಿಗೆ ತಲುಪಿಸುತ್ತಿರುವುದು ಶ್ಲಾಘನೀಯ ಎಂದರು.
Shimoga Riverside Karnataka ಜಿಲ್ಲಾ ಕ್ರೀಡಾ ಸಮಿತಿಯ ಚೇರ್ಮನ್ ರವಿ ಕೋಟೋಜಿ ಮಾತನಾಡಿ, ಸೇವೆ ಮತ್ತು ಆರೋಗ್ಯ ಒಂದೇ ನಾಣ್ಯದ ಎರಡು ಮುಖಗಳು. ಆರೋಗ್ಯವಿಲ್ಲದೆ ಸೇವೆಯೂ ಸಂಪೂರ್ಣವಾಗುವುದಿಲ್ಲ ಎಂದು ಹೇಳಿದರು. ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ ಪೃಥ್ವಿ ಕೆ.ರಾಯ್ ಅವರನ್ನು ಸನ್ಮಾನಿಸಲಾಯಿತು.
ಇವೆಂಟ್ ಚೇರ್ಮನ್ ಸಿ.ಎನ್.ಮಲ್ಲೇಶ್, ಜಿಲ್ಲಾ ಮಾಜಿ ಗವರ್ನರ್ ರಾಜಾರಮ್ ಭಟ್, ನಿಯೋಜಿತ ಜಿಲ್ಲಾ ಗವರ್ನರ್ ವಂಸತ್ ಹೋಬಳಿದಾರ್, ಜಿಲ್ಲಾ ಕಾರ್ಯದರ್ಶಿ ಪ್ರದೀಪ್ ಜಿ.ಎಸ್., ವಲಯ 10ರ ಸಹಾಯಕ ಗವರ್ನರ್ ಕೆ.ಪಿ.ಶೆಟ್ಟಿ, ಲಕ್ಷ್ಮಣ್ ಗೌಡ, ರೋಟರಿ ಕ್ಲಬ್ ಶಿವಮೊಗ್ಗ ರಿವರ್ ಸೈಡ್ ಅಧ್ಯಕ್ಷ ಕೆ.ಎಸ್.ವಿಶ್ವನಾಥ ನಾಯಕ, ಇವೆಂಟ್ ಸೆಕ್ರೆಟರಿ ಬಸವರಾಜ, ಎಂ.ಆರ್.ನಿತಿನ್ ಯಾದವ್, ಮಾಜಿ ಸಹಾಯಕ ಗವರ್ನರ್ ಎಂ.ಪಿ.ಆನಂದ್ ಮೂರ್ತಿ, ರೋಟರಿ ಜಿಲ್ಲಾ ಸೆಕ್ರೆಟರಿ (ಅಡ್ಮಿನ್) ಜಲೇಂದ್ರ ಡಿ.ಎಂ., ಜಿಲ್ಲಾ ಮಾಜಿ ಗವರ್ನರ್‌ಗಳು, ಮಾಜಿ ಸಹಾಯಕ ಗವರ್ನರ್‌ಗಳು, ಜಿಲ್ಲಾ ಹಾಗೂ ಕ್ಲಬ್ ಮಟ್ಟದ ನಾಯಕರು ಉಪಸ್ಥಿತರಿದ್ದರು.

Kuvempu ಡಿಸೆಂಬರ್ 29. ಕುಪ್ಪಳಿಯಲ್ಲಿ ವಿಶ್ವ ಮಾನವ ದಿನಾಚರಣೆಗೆಜಿಲ್ಲಾಡಳಿತದಿಂದ ಪೂರ್ವಸಿದ್ಧತೆ.

0

Kuvempu ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್- ಶಿವಮೊಗ್ಗ ಮತ್ತು ರಾಷ್ಟçಕವಿ ಕುವೆಂಪು ಪ್ರತಿಷ್ಠಾನ-ಕುಪ್ಪಳಿ ಇವರ ಸಂಯುಕ್ತಾಶ್ರಯದಲ್ಲಿ ಡಿಸೆಂಬರ್ 29ರಂದು ಬೆಳಿಗ್ಗೆ 10.00ಕ್ಕೆ ಕುಪ್ಪಳಿಯ ಹೇಮಾಂಗಣದಲ್ಲಿ ಕುವೆಂಪು ಅವರ 121ನೇ ಜನ್ಮದಿನೋತ್ಸವ, ಕುವೆಂಪು ರಾಷ್ಟ್ರೀಯ ಪುರಸ್ಕಾರ ಪ್ರದಾನ ಸಮಾರಂಭ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಅಂದು ಬೆಳಿಗ್ಗೆ 10.00ಕ್ಕೆ ಅತಿಥಿಗಳಿಂದ ಕವಿಶೈಲದಲ್ಲಿ ಕವಿನಮನ, ಬೆ. 11 ರಿಂದ ಮಾಜಿ ಗೃಹಸಚಿವ, ಶಾಸಕ ಆರಗ ಜ್ಞಾನೇಂದ್ರರವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಶಸ್ತಿ ಪ್ರದಾನ ಮಾಡಲಿರುವರು. ಕಾರ್ಯಕ್ರಮದಲ್ಲಿ 2025ನೇ ಸಾಲಿನ ಕುವೆಂಪು ಪ್ರಶಸ್ತಿ ಪುರಸ್ಕೃತ ಗೋವಾದ ಖ್ಯಾತ ಕೊಂಕಣಿ ಸಾಹಿತಿ ಶ್ರೀ ಮಹಾಬಳೇಶ್ವರ ಸೈಲ್‌ರವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಡಾ. ಬಿ.ಎಲ್.ಶಂಕರ್, ಕುವೆಂಪು ವಿವಿ ಕುಲಪತಿಗಳು ಹಾಗೂ ಕುವೆಂಪು ಪ್ರತಿಷ್ಠಾನದ ಉಪಾಧ್ಯಕ್ಷ ಡಾ. ಶರತ್ ಅನಂತಮೂರ್ತಿ ಗೌರವ ಉಪಸ್ಥಿತಿ ಹಾಗೂ ಮುಖ್ಯ ಅತಿಥಿಗಳಾಗಿ ಪೂರ್ಣಚಂದ್ರ ಕನ್ನಡ ಅಧ್ಯಯನ ಕೇಂದ್ರದ ಶೈಕ್ಷಣಿಕ ಸಂಚಾಲಕ ಕೇಶವ ಮಳಗಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ತಂಗಡಗಿ ಶಿವರಾಜ್ ಸಂಗಪ್ಪ ಸೇರಿದಂತೆ ಜಿಲ್ಲೆಯ ಸಂಸದರು, ಎಲ್ಲಾ ವಿಧಾನ ಸಭಾ ಮತ್ತು ವಿಧಾನ ಪರಿಷತ್ ಶಾಸಕರುಗಳು, ವಿವಿಧ ನಿಗಮ/ಮಂಡಳಿ/ಪ್ರಾಧಿಕಾರದ ಅಧ್ಯಕ್ಷರುಗಳು, ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿರುವರು.
Kuvempu ಅಂದು ಸಂಜೆ 6.00ಕ್ಕೆ ತೀರ್ಥಹಳ್ಳಿಯ ಶಾಂತವೇರಿ ಗೋಪಾಲಗೌಡ ರಂಗಮAದಿರದಲ್ಲಿ ತೀರ್ಥಹಳ್ಳಿಯ ಸುಮುಖ ಸಂಗೀತ ನೃತ್ಯ ಶಾಲೆ ಮತ್ತು ಶ್ರೀ ರಾಜರಾಜೇಶ್ವರಿ ನೃತ್ಯ ತಂಡ ಪ್ರಸ್ತುತಪಡಿಸುವ ಕುವೆಂಪು ಗೀತೆಗಳ ನೃತ್ಯ ಸಂಭ್ರಮ ಹಾಗೂ ನವೀನ್ ಸಾಣೆಹಳ್ಳಿ ನಿರ್ದೇಶನದ ಶ್ರೀ ಗಜಾನನ ಯುವಕ ಮಂಡಳ, ಶೇಷಗಿರಿ, ಹಾನಗಲ್ ತಾ. ಪ್ರಸ್ತುತಪಡಿಸುವ ಕುವೆಂಪು ವಿರಚಿತ “ ಬೆರಳ್ ಗೆ ಕೊರಳ್ ಎಂಬ ನಾಟಕ ಏರ್ಪಡಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಶತಮಾನದ ಸಂಭ್ರಮದಲ್ಲಿರುವ ‘ಬೊಮ್ಮನಹಳ್ಳಿಯ ಕಿಂದರಿಜೋಗಿ’ ಕೃತಿಯ ಆಯ್ದ ಸನ್ನಿವೇಶಗಳನ್ನು ಆಧರಿಸಿದ ಚಿತ್ರಗಳೊಂದಿಗೆ 2026ರ ಕ್ಯಾಲೆಂಡರ್ ವಿಶೇಷವಾಗಿ ರೂಪಿಸಲಾಗಿದ್ದು ಬಿಡುಗಡೆ ಮಾಡಲಾಗುತ್ತಿದೆ.
ಅಂದು ಬೆಳಗ್ಗೆ 10.00ಕ್ಕೆ ಕುವೆಂಪು ಜನ್ಮಸ್ಥಳ ಹಿರಿಕೊಡಿಗೆಯಲ್ಲಿ ಕೊಪ್ಪ ತಾಲೂಕು ಆಡಳಿತ ಮತ್ತು ಕೊಪ್ಪ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಕವಿನಮನ ಕಾರ್ಯಕ್ರಮ ನಡೆಯಲಿದೆ.
ಡಿಸೆಂಬರ್ 27 ರಿಂದ 29 ರವರೆಗೆ ಬೆಂಗಳೂರು ವಿಶ್ವ ಮಾನವ ಕುವೆಂಪು ವೇದಿಕೆಯ ಸಹಕಾರದಲ್ಲಿ ಕುವೆಂಪು ಸಾಹಿತ್ಯ ಅಧ್ಯಯನ ಶೀಬಿರ ನಡೆಯಲಿದೆ. ಖ್ಯಾತ ವಿಮರ್ಶಕ ಡಾ. ಬಸವರಾಜ ಕಲ್ಗುಡಿ ಈ ಶಿಬಿರದ ನಿರ್ದೇಶಕರು.