DC Shivamogga ಭಾರತದ ಜನಗಣತಿ-2027ರ ಅಂಗವಾಗಿ ಕರ್ನಾಟಕದಲ್ಲಿ ಮೊದಲ ಹಂತದ ‘ಮನೆಗಳ ಪಟ್ಟಿ ಮತ್ತು ಮನೆ ಗಣತಿ’ ಪ್ರಕ್ರಿಯೆಯು ದಿನಾಂಕ 16.04.2026 ರಿಂದ 15.05.2026 ರವೆರೆಗೆ ನಡೆಯಲಿದೆ ಎಂದು ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದ್ದಾರೆ.
ಒಟ್ಟು 30 ದಿನಗಳ ಕಾಲ ನಡೆಯುವ ಈ ಗಣತಿಯಲ್ಲಿ ಮನೆಗಳ ಸ್ಥಿತಿಗತಿ, ಲಭ್ಯವಿರುವ ಸೌಲಭ್ಯಗಳು ಹಾಗೂ ಆಸ್ತಿಪಾಸ್ತಿಗಳ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ದಿ: 1-04-2026 ರಿಂದ 15-04-2026 ರವರೆಗೆ
‘ಸ್ವಯಂ ಗಣತಿ’ ಆಯ್ಕೆ ಲಭ್ಯವಿದೆ.
ಸ್ವಯಂ ಗಣತಿ ಮಾಡುವ ವಿಧಾನ:
ಅಧಿಕೃತ ಪೋರ್ಟಲ್‌ನಲ್ಲಿ ಮೊಬೈಲ್ ಸಂಖ್ಯೆಯೊಂದಿಗೆ ಲಾಗಿನ್ ಆಗುವುದು.
ನಿಮ್ಮ ಸ್ಥಳವನ್ನು ಆಯ್ಕೆ ಮಾಡಿ, ನಕ್ಷೆಯಲ್ಲಿ ಮನೆಯನ್ನು ಗುರುತಿಸುವುದು.
ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ ಸಬ್ಮಿಟ್ ಮಾಡುವುದು.
ಸಲ್ಲಿಕೆಯ ನಂತರ ಲಭಿಸುವ SE ID(ಎಸ್ಇ ಐಡಿ) ಅನ್ನು ಸುರಕ್ಷಿತವಾಗಿಟ್ಟುಕೊಳ್ಳುವುದು. ಹಾಗೂ ಗಣತಿದಾರರು ಭೇಟಿ ನೀಡಿದಾಗ ಅವರಿಗೆ ತೋರಿಸಬೇಕು.
DC Shivamogga ಗಣತಿದಾರರು ಮತ್ತು ಮೇಲ್ವಿಚಾರಕರ ಕ್ಷೇತ್ರ ಭೇಟಿ :
ಏಪ್ರಿಲ್ 16ರಿಂದ ಮೇ 15ರವರೆಗೆ ಗಣತಿದಾರರು ಪ್ರತಿಯೊಂದು ಮನೆಗೆ ಭೇಟಿ ನೀಡಲಿದ್ದಾರೆ. ಈಗಾಗಲೇ ಸ್ವಯಂ ಗಣತಿ ಮಾಡಿಕೊಂಡವರು ತಮ್ಮಲ್ಲಿರುವ ಎಸ್ ಇ ಐಡಿ ಅನ್ನು ಗಣತಿದಾರರಿಗೆ ತೋರಿಸಿ ದತ್ತಾಂಶವನ್ನು ಪರಿಶೀಲಿಸಿಕೊಳ್ಳಬಹುದು. ಒಂದು ವೇಳೆ ಸ್ವಯಂ ಗಣತಿ ಮಾಡದಿದ್ದಲ್ಲಿ, ಗಣತಿದಾರರೇ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಹಿತಿಯನ್ನು ಸಂಗ್ರಹಿಸುತ್ತಾರೆ.
ಸಾರ್ವಜನಿಕರು, ಅಧಿಕಾರಿಗಳು, ಮತ್ತು ಸಿಬ್ಬಂದಿಗಳು https://se.census.gov.in ವೆಬ್‌ಸೈಟ್‌ಗೆ ಭೇಟಿ ನೀಡಿ ಸ್ವಯಂ ಗಣತಿಯಲ್ಲಿ ಭಾಗವಹಿಸುಂತೆ ಜಿಲ್ಲಾಡಳಿತ ಕೋರಿದೆ.
ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ತಾಲೂಕು ಆಡಳಿತ, ಸ್ಥಳೀಯ ಸಂಸ್ಥೆ ಅಥವಾ ಜಿಲ್ಲಾಡಳಿತದ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.
DC Shivamogga ಭಾರತ ಜನಗಣತಿ – 2027 ಅಂಗವಾಗಿ ರಾಜ್ಯದಲ್ಲಿ ” ಮನೆಗಳ ಪಟ್ಟಿ & ಮನೆ ಗಣತಿ ಕಾರ್ಯ ಏಪ್ರಿಲ್ 16 ರಿಂದ ಮೇ 15 ವರೆಗೆ ನಡೆಯಲಿದೆ
S.N. Channabasappa ಆದಿಚುಂಚನಗಿರಿ ಮಠದ ಜನಪರ ಕಾರ್ಯಗಳು ಸಮಾಜದ ಸ್ವಾಸ್ಥ್ಯ ಕಾಪಾಡುತ್ತಿವೆ- ಎಸ್.ಎನ್.ಚನ್ನಬಸಪ್ಪ
S.N. Channabasappa ಸರಳತೆಯೇ ಸಂಸ್ಕೃತಿ, ಹಿರಿಯರ ಅನುಭವವೇ ಆಸ್ತಿ : ಆದಿಚುಂಚನಗಿರಿ ಮಠದಲ್ಲಿ ಸಾಮೂಹಿಕ ವಿವಾಹ ಹಾಗೂ ಶ್ರೀ ಕಾಲಭೈರವೇಶ್ವರ ದೇವಸ್ಥಾನದ ವಾರ್ಷಿಕೋತ್ಸವ ಸಂಭ್ರಮ!
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶಿವಮೊಗ್ಗ ಶಾಖಾ ಮಠದಲ್ಲಿ ಇಂದು ಪೂಜ್ಯಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ಆಯೋಜಿಸಲಾಗಿದ್ದ ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಸ್ಥಾನದ ವಾರ್ಷಿಕೋತ್ಸವ ಹಾಗೂ 27ನೇ ವರ್ಷದ ಸರಳ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ ಅತ್ಯಂತ ಹರ್ಷದಿಂದ ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ದಶಕಗಳ ಕಾಲ ಸುಖಮಯ ದಾಂಪತ್ಯ ನಡೆಸಿದ ಆದರ್ಶ ಹಿರಿಯ ದಂಪತಿಗಳನ್ನು ಸನ್ಮಾನಿಸುವ ಮೂಲಕ ಅವರನ್ನ ಗೌರವಿಸಲಾಯಿತು.
S.N. Channabasappa ಪೂಜ್ಯ ಸ್ವಾಮೀಜಿಯವರ ಆಶೀರ್ವಚನಗಳು ಮತ್ತು ಮಠದ ಈ ಜನಪರ ಕಾರ್ಯಗಳು ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ಶಾಸಕ ಚೆನ್ನಿ ಹೇಳಿದರು. ನವದಂಪತಿಗಳ ಜೀವನ ಸುಖಮಯವಾಗಿರಲಿ ಹಾಗೂ ಭಗವಂತನ ಕೃಪೆ ಸದಾ ಎಲ್ಲರ ಮೇಲಿರಲಿ ಎಂದು ಈ ಸಂದರ್ಭದಲ್ಲಿ ಪ್ರಾರ್ಥಿಸಲಾಯಿತು.
MESCOM ಏಪ್ರಿಲ್ 2 , ಶಿವಮೊಗ್ಗ ನಗರ ಮೆಸ್ಕಾಂ ಉಪವಿಭಾಗ 1ರ ಕಛೇರಿಯಲ್ಲಿ ಜನಸಂಪರ್ಕ ಸಭೆ
MESCOM ಶಿವಮೊಗ್ಗ ಮೆಸ್ಕಾಂ ನಗರ ಉಪವಿಭಾಗ-01 , ಸರ್ವಜ್ಞ ವೃತ್ತ, ಬಾಲರಾಜ್ ಅರಸ್ ರಸ್ತೆ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಛೇರಿಯಲ್ಲಿ ಏ.02. ರಂದು ಬೆಳಗ್ಗೆ 11.00 ರಿಂದ 01.00 ರವರೆಗೆ ಜನ ಸಂಪರ್ಕ ಸಭೆ ನಡೆಯಲ್ಲಿದ್ದು, ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲ್ಲಿದ್ದಾರೆ, ಈ ಸಭೆಯಲ್ಲಿ ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದರಿಂದ ಈ ಅವಕಾಶವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
Keladi Shivappa Nayaka Agriculture University ಏಪ್ರಿಲ್ 8 ರಿಂದ ಶಿವಮೊಗ್ಗದ ಕೃಷಿ ಕಾಲೇಜಿನ ಆವರಣದಲ್ಲಿ ವಿವಿಧ ಬೇಕರಿ ಉತ್ಪನ್ನ ತಯಾರಿಕೆ ತರಬೇತಿ.
Keladi Shivappa Nayaka Agriculture University ಶಿವಮೊಗ್ಗ ಕೃಷಿ ಮಹಾವಿದ್ಯಾಲಯ ಆವರಣದಲ್ಲಿ ಏಪ್ರಿಲ್ 08 ರಿಂದ ಮೇ 07 ರವರೆಗೆ 1 ತಿಂಗಳು ಬೇಕರಿ ಘಟಕದಲ್ಲಿ ವಿವಿಧ ಬೇಕರಿ ಉತ್ಪನ್ನಗಳ ತಯಾರಿಕೆ ಕುರಿತು ಕೌಶಲ್ಯಾಭಿವೃದ್ದಿ ತರಬೇತಿಯನ್ನು ಆಯೋಜಿಸಲಾಗಿದೆ.
ಬೆಣ್ಣೆ ಬಿಸ್ಕತ್ತು, ಕೋಕೊನಟ್ ಕುಕಿಸ್, ಕೋಕೊನಟ್ ಬಿಸ್ಕತ್ತು, ಮಸಾಲ ಬಿಸ್ಕತ್ತು, ಮೆಲ್ಟಿಂಗ್ ಮೊಮೆಂಟ್ ಬಿಸ್ಕತ್ತು, ಪೀನಟ್ ಕುಕಿಸ್, ವೆನಿಲ್ಲಾ ಬಟನ್, ಬನಾನಾ ಕೇಕ್, ಫ್ರೂಟ್ ಕೇಕ್, ಸ್ಪಾಂಜ್ ಕೇಕ್, ಆರೆಂಜ್ ಕೇಕ್, ಕಪ್ ಕೇಕ್, ಚಾಕಲೇಟ್ ಕೇಕ್, ಜಾಮ್ ರೋಲ್, ಜೆಲ್ ಕೇಕ್, ಪೇಸ್ಟ್ರೀ ಕೇಕ್, ಬಟರ್ ಐಸಿಂಗ್, ಡೋ ನಟ್, ಮಿಲ್ಕ್ ಬ್ರೆಡ್, ಬನ್, ರಸ್ಕ್, ಪಿಜ್ಜಾ, ಪಪ್ ಪೇಸ್ಟ್ರೀ, ದಿಲ್ ಪಸಂದ್, ಬಾಂಬೆ ಕಾರ ಹಾಗೂ ಇತರೆ ಬೇಕರಿ ಉತ್ಪನ್ನಗಳ ತಯಾರಿಕೆಯ ಬಗ್ಗೆ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಆಯೋಜಿಸಿದ್ದು, ಆಸಕ್ತರು ತರಬೇತಿ ಶುಲ್ಕ ರೂ. 4500/-ಗಳನ್ನು ಪಾವತಿಸಿ, ಏ.07 ರೊಳಗಾಗಿ ದೂರವಾಣಿ ಮೂಲಕ ಅಥವಾ ಖುದ್ದಾಗಿ ಕೃಷಿ ಮಹಾವಿದ್ಯಾಲಯ, ನವಿಲೆ, ಶಿವಮೊಗ್ಗ ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬೇಕು. ತರಬೇತಿ ಸಮಯದಲ್ಲಿ ಊಟ ಮತ್ತು ವಸತಿ ಸೌಲಭ್ಯ ಇರುವುದಿಲ್ಲ.
Keladi Shivappa Nayaka Agriculture University ನೋಂದಾವಣೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಡಾ. ಜಯಶ್ರೀ ಎಸ್. ಮೊ.ಸಂ. I 9449187763 ಮತ್ತು ಜಯಶಂಕರ 9686555897 ಇವರುಗಳನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.
Shivamogga Police ಏಪ್ರಿಲ್ 6. ಶಿವಮೊಗ್ಗ ಜಯನಗರ ಪೊಲೀಸ್ ಠಾಣೆಯಲ್ಲಿ ವಾಹನಗಳ ಬಹಿರಂಗ ಹರಾಜು.
Shivamogga Police ಶಿವಮೊಗ್ಗ ಜಯನಗರ ಪೊಲೀಸ್ ಠಾಣೆಯಲ್ಲಿ ವಾರಸುದಾರರು ಪತ್ತೆಯಾಗದ 08 ವಿವಿಧ ವಾಹನಗಳನ್ನು 1ನೇ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಶಿವಮೊಗ್ಗರವರ ಆದೇಶದಂತೆ ಏ.06 ರ ಬೆಳಿಗ್ಗೆ 10 ಗಂಟೆಗೆ ಜಯನಗರ ಠಾಣಾ ಆವರಣದಲ್ಲಿ ಯಥಾಸ್ಥಿತಿಯಾಗಿ ಬಹಿರಂಗ ಹರಾಜು ಮಾಡಲಾಗುವುದು. ಆಸಕ್ತರು ನಿಗಧಿತ ಅವಧಿಯಲ್ಲಿ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಪೊಲೀಸ್ ಇನ್ಸ್ಪೆಕ್ಟರ್ ತಿಳಿಸಿದ್ದಾರೆ.
Breaking News ಸಿಡಿಲು ಬಡಿದು ಶಿವಮೊಗ್ಗ ಸನಿಹದ ರಾಮನಗರದಲ್ಲಿ ಚಿಕನ್ ಅಂಗಡಿ ಮಾಲೀಕರ ಸಾವು.
Breaking News ಸಿಡಿಲು ಬಡಿದು ಚಿಕನ್ ಅಂಗಡಿಯ ಮಾಲೀಕ ಸಾವನಪ್ಪಿದ್ದಾನೆ. ಸೋಮವಾರ ಸುರಿದ ಸಿಡಿಲು, ಗುಡುಗು ಮಳೆಗೆ ವ್ಯಕ್ತಿ ಬಲಿಯಾಗಿದ್ದಾನೆ.
ಶೇಕ್ ಮುಜೀಬ್ ಎಂಬ 45 ವರ್ಷದ ವ್ಯಕ್ತಿ ಶಿವಮೊಗ್ಗ ತಾಲೂಕಿನ ರಾಮನಗರದಲ್ಲಿ ಚಿಕನ್ ಅಂಗಡಿಯಲ್ಲಿದ್ದಾಗ ಸಿಡಿಲು ಬಡಿದಿದೆ. ಸಿಡಿಲು ಬಡಿದ ಹೊಡೆತಕ್ಕೆ ಚಿಕನ್ ಅಂಗಡಿ ಮಾಲೀಕ ಸ್ಥಳದಲ್ಲಿಯೇ ಸಾವನಪ್ಪಿದ್ದಾನೆ. ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Breaking News ಶೇಕ್ ಮುಜೀಬ್ ಹಾರನಹಳ್ಳಿ ನಿವಾಸಿಯಾಗಿದ್ದು, ರಾಮನಗರದಲ್ಲಿ ಚಿಕನ್ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು. ಅಂಗಡಿ ಪಕ್ಕದಲ್ಲಿದ್ದ ಮರಕ್ಕೆ ಸಿಡಿಲು ಬಡಿದು ಅಲ್ಲೇ ಇದ್ದ
ಶೇಕ್ ಮುಜೀಬ್ ಗೆ ಸಿಡಿಲು ಬಡಿದಿದೆ.
Madhu Bangarappa ಸೊರಬದಲ್ಲಿ ಪೊಲೀಸ್ ಇಲಾಖೆಗೆ ನೀಡಿದ ವಾಹನಗಳನ್ನವಿತರಿಸಿದ ಸಚಿವ ಮಧು ಬಂಗಾರಪ್ಪ.
Madhu Bangarappa ಮಧು ಬಂಗಾರಪ್ಪನವರ ಮತಕ್ಷೇತ್ರ ಸೊರಬ ಜನತೆಯ ಸುರಕ್ಷತೆ ಹಾಗೂ ಸಾರ್ವಜನಿಕ ಸೇವೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ, ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಹಾಗೂ ವಿವಿಧ ಇಲಾಖೆಗಳ ಅನುದಾನದಡಿ ಮಂಜೂರಾದ ನಾಲ್ಕು ಹೊಸ ವಾಹನಗಳನ್ನು ಇಂದು ಸೊರಬ ಪೊಲೀಸ್ ಠಾಣೆಯ ಆವರಣದಲ್ಲಿ ಲೋಕಾರ್ಪಣೆಗೊಳಿಸಲಾಯಿತು.
ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ಅವರು ನೂತನ ವಾಹನವನ್ನು ಚಲಾಯಿಸಿದರು.
ಅವರೊಂದಿಗೆ ಪ್ರಯಾಣಿಸುವ ಮೂಲಕ ವಾಹನವನ್ನು ಅಧಿಕೃತವಾಗಿ ಚಾಲನೆ ಮಾಡಲಾಯಿತು.
Madhu Bangarappa ಪೊಲೀಸ್ ಇಲಾಖೆಗೆ ಹೊಸ ವಾಹನಗಳ ಸೇರ್ಪಡೆಯಿಂದಾಗಿ ಅಪರಾಧ ತಡೆ ಮತ್ತು ತುರ್ತು ಸಂದರ್ಭಗಳಲ್ಲಿ ಪೊಲೀಸರು ಸ್ಥಳಕ್ಕೆ ಧಾವಿಸಲು ಅನುಕೂಲವಾಗಲೆಂದು ಸೊರಬ ಪೊಲೀಸ್ ಠಾಣೆಗೆ ಎರಡು ವಾಹನಗಳು, ಆನವಟ್ಟಿ ಭಾಗದ ಜನರ ಸುರಕ್ಷತೆಗಾಗಿ ಒಂದು ವಾಹನ ಹಾಗೂ ಪಶುಪಾಲನಾ ಇಲಾಖೆಗೆ ಒಂದು ವಾಹನ ಸೇರಿದಂತೆ ಒಟ್ಟು ನಾಲ್ಕು ವಾಹನಗಳನ್ನು ನೀಡಲಾಗಿದೆ. ಈ ವಾಹನಗಳು ಇಂದಿನಿಂದಲೇ ಕಾರ್ಯಾರಂಭ ಮಾಡಲಿವೆ.
ಕಾರ್ಯಕ್ರಮದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಪ್ರಮುಖರು ಉಪಸ್ಥಿತರಿದ್ದರು.
Backward Classes Welfare Department ಪ್ರತಿಷ್ಠಿತ ಶಾಲೆಗಳ 6 ನೇ ತರಗತಿಗೆ ಅರ್ಹತಾ ಪರೀಕ್ಷೆ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ.
Backward Classes Welfare Department 2026-27 ನೇ ಸಾಲಿಗೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು ಜಿಲ್ಲೆಯಲ್ಲಿ ಪ್ರತಿಷ್ಟಿತ ಶಾಲೆಗಳಿಗೆ ಅರ್ಹತಾ ಪರೀಕ್ಷೆ ಮೂಲಕ 6ನೇ ತರಗತಿಯ 18 ಸ್ಥಾನಗಳಿಗೆ ದಾಖಲಿಸಿಕೊಳ್ಳಲು 5ನೇ ತರಗತಿಯಲ್ಲಿ 60% ಕ್ಕಿಂತ ಹೆಚ್ಚು ಅಂಕ ಪಡೆದ ಪ್ರತಿಭಾವಂತ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು ನಿಗದಿತ ನಮೂನೆ ಅರ್ಜಿಯನ್ನು ಏ. 15 ರಿಂದ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ, ಶಿವಮೊಗ್ಗ ಹಾಗೂ ಆಯಾ ತಾಲೂಕಿನ ಸಹಾಯಕ ನಿರ್ದೇಶಕರುಗಳ ಕಚೇರಿ, ಸಮಾಜ ಕಲ್ಯಾಣ ಇಲಾಖೆಗಳಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಮೇ 04 ರೊಳಗಾಗಿ ಸಲ್ಲಿಸುವಂತೆ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Backward Classes Welfare Department ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ, ಶಿವಮೊಗ್ಗ ಹಾಗೂ ಎಲ್ಲಾ ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆಗಳ ಕಚೇರಿ, ದೂ.ಸಂ: 08182-200266/ 9482762350/ 7022796636 ಗಳನ್ನು ಸಂಪರ್ಕಿಸುವುದು.
K. H. Muniyappa ಪ್ರತಿದಿನ ರಾಜ್ಯದಲ್ಲಿ 4 ಲಕ್ಷ ಗೃಹಬಳಕೆ ಮತ್ತು 18 ಸಾವಿರ ವಾಣಿಜ್ಯ ಎಲ್ ಪಿಜಿ ಸಿಲಿಂಡರ್ ವಿತರಣೆ- ಸಚಿವ ಕೆ.ಹೆಚ್. ಮುನಿಯಪ್ಪ
K. H. Muniyappa ರಾಜ್ಯಾದ್ಯಂತ ಪ್ರತಿದಿನ ಸುಮಾರು 4 ಲಕ್ಷ ಗೃಹ ಬಳಕೆ ಎಲ್‌ಪಿಜಿ ಸಿಲಿಂಡರ್‌ಗಳು ಹಾಗೂ ಸುಮಾರು 18 ಸಾವಿರ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳನ್ನು ಪೂರೈಕೆ ಮಾಡಲಾಗುತ್ತಿದೆ. ಗೃಹ ಬಳಕೆದಾರರಿಗೆ ಯಾವುದೇ ತೊಂದರೆ ಆಗದಂತೆ ಎಚ್ಚರಿಕೆ ವಹಿಸಲಾಗಿದೆ.
K. H. Muniyappa ನಗರ ಪ್ರದೇಶಗಳ ಗೃಹ ಬಳಕೆದಾರರಿಗೆ ಪ್ರತಿ 25 ದಿನಗಳಿಗೊಮ್ಮೆ ಒಂದು ಸಿಲಿಂಡರ್ ವಿತರಿಸಲಾಗುತ್ತಿದ್ದರೆ, ಗ್ರಾಮೀಣ ಪ್ರದೇಶದಲ್ಲಿ 45 ದಿನಗಳಿಗೊಮ್ಮೆ ಒಂದು ಸಿಲಿಂಡರ್ ಪೂರೈಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.
Shivamogga Police ಶಿವಮೊಗ್ಗ ನಗರದ ಪ್ರಮುಖ ರಸ್ತೆಗಳಿಗೆ ರಿಫ್ಲೆಕ್ಟರ್ ಕ್ಯಾಟ ಐಸ್ & ಸೋಲಾರ್ ರೋಡ್ ಸ್ಟಡ್ ಅಳವಡಿಕೆ.
Shivamogga Police ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಶಿವಮೊಗ್ಗ ನಗರದಲ್ಲಿ ಸಾರ್ವಜನಿಕ ವಾಹನ ಸವಾರರ ಸುರಕ್ಷಿತ ಸಂಚಾರಕ್ಕಾಗಿ ಮತ್ತು ರಸ್ತೆ ಅಪಘಾತಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಹಾಗೂ ರಾತ್ರಿ ಸಮಯದಲ್ಲಿ ರಸ್ತೆಯು ಸ್ಪಷ್ಟವಾಗಿ ಕಾಣುವಂತೆ ಮಾಡಲು ಮತ್ತು ಗೋಚರತೆಯನ್ನು ಹೆಚ್ಚಿಸುವ ಹಿನ್ನಲೆಯಲ್ಲಿ, ಶಿವಮೊಗ್ಗ ನಗರದ 14 ಟ್ರಾಫಿಕ್ ಸಿಗ್ನಲ್ ಸರ್ಕಲ್ ಗಳಲ್ಲಿ ಹಾಗೂ ಶಿವಮೊಗ್ಗ ನಗರದ ಪ್ರಮುಖ ರಸ್ತೆಗಳು ಮತ್ತು ರಸ್ತೆ ಹಂಪ್ಸ್ ಇರುವ ಸ್ಥಳಗಳಲ್ಲಿ ರಿಫ್ಲೆಕ್ಟರ್ ಕ್ಯಾಟ್ ಐಸ್ ಗಳನ್ನು ಮತ್ತು ಸೋಲಾರ್ ರೋಡ್ ಸ್ಟಡ್ ಗಳನ್ನು ಅಳವಡಿಸಲಾಗಿರುತ್ತದೆ.
Shivamogga Police ಸಾರ್ವಜನಿಕರು ರಸ್ತೆ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದರ ಜೊತೆಗೆ, ಎಲ್ಲಾ ವಾಹನ ಸವಾರರು ತಮ್ಮ ಸುರಕ್ಷತೆಗಾಗಿ ಅಗತ್ಯ ಸಂಚಾರ ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ಸೂಚಿಸಲಾಗಿದೆ.
