Karnataka Sahitya Academy ಕರ್ನಾಟಕ ಸಾಹಿತ್ಯ ಅಕಾಡೆಮಿಯು 2025 ನೇ ವರ್ಷದಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟಗೊಂಡಿರುವ ಸಾಹಿತ್ಯದ ವಿವಿಧ ಪ್ರಕಾರಗಳ ಕೃತಿಗಳನ್ನು ಅತ್ಯುತ್ತಮ ಪುಸ್ತಕ ಬಹುಮಾನಕ್ಕಾಗಿ ಆಹ್ವಾನಿಸಿದೆ.
ಲೇಖಕರು/ಪ್ರಕಾಶಕರು/ಸಾಹಿತ್ಯಾಸಕ್ತ ಸಾರ್ವಜನಿಕರು ನಾಲ್ಕು ಪ್ರತಿಗಳನ್ನು ರಿಜಿಸ್ಟ್ರಾರ್, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002 ಈ ವಿಳಾಸಕ್ಕೆ ರಿಜಿಸ್ಟರ್ ಅಂಚೆ/ಕೊರಿಯರ್ ಮೂಲಕ ಅಥವಾ ಖುದ್ದಾಗಿ ದಿ:30/06/2026 ರೊಳಗೆ ತಲುಪುವಂತೆ ಕಳುಹಿಸಬೇಕು.
2025ನೇಯ ವರ್ಷದ ಅತ್ಯುತ್ತಮ ಕೃತಿಗಳಿಗೆ ಬಹುಮಾನ :- ಕರ್ನಾಟಕ ಸಾಹಿತ್ಯ ಅಕಾಡೆಮಿಯು ಪ್ರತಿ ವರ್ಷದಂತೆ 2025ನೆಯ ವರ್ಷದ ಪುಸ್ತಕ ಬಹುಮಾನ ಪ್ರಕಾರದಲ್ಲಿ ವಿಮರ್ಶಕರು ಆಯ್ಕೆ ಮಾಡುವ ಒಂದು ಕೃತಿಗೆ ಬಹುಮಾನ ನೀಡಲಾಗುವುದು. ಬಹುಮಾನಕ್ಕೆ ಸಲ್ಲಿಸುವ ಕೃತಿಗಳು 2025ರ ಜನವರಿ 01 ರಿಂದ 2025ರ ಡಿಸೆಂಬರ್ 31 ರೊಳಗೆ ಪ್ರಥಮ ಆವೃತ್ತಿಯಾಗಿ ಪ್ರಕಟವಾಗಿರುವ ಕೃತಿಗಳಾಗಿರಬೇಕು. ಕೃತಿಯಲ್ಲಿ ಪ್ರಥಮ ಮುದ್ರಣ 2025 ಎಂದು ಮುದ್ರಿತವಾಗಿರಬೇಕು.
ಕಾವ್ಯ, ನವಕವಿಗಳ ಪ್ರಥಮ ಕವನಸಂಕಲನ (ದೃಢೀಕರಣ ಪತ್ರದೊಂದಿಗೆ), ಕಾವ್ಯ ಹಸ್ತಪ್ರತಿ (30 ವರ್ಷ ಒಳಗಿನ ಯುವಕವಿಗಳ ಅಪ್ರಕಟಿತ ಕವನ ಸಂಕಲನದ ಹಸ್ತಪ್ರತಿಯನ್ನು ಕಳಿಸಿಕೊಡಬೇಕು. (ಚಿ.ಶ್ರೀನಿವಾಸರಾಜು ದತ್ತಿನಿಧಿ ಬಹುಮಾನಕ್ಕಾಗಿ), ಕಾದಂಬರಿ (ಅಕಾಡೆಮಿ ಪುಸ್ತಕ ಬಹುಮಾನ ಹಾಗೂ ಚದುರಂಗ ದತ್ತಿನಿಧಿ ಬಹುಮಾನಗಳಿಗಾಗಿ), ಸಣ್ಣಕತೆ, ನಾಟಕ, ಲಲಿತ ಪ್ರಬಂಧ (ಹರಟೆ ಮತ್ತು ವಿನೋದ ಸಾಹಿತ್ಯ ಸೇರಿ)(ಅಕಾಡೆಮಿ ಮಸ್ತಕ ಬಹುಮಾನ ಹಾಗೂ ವಿ.ಸೀತಾರಾಮಯ್ಯ ಸೋದರಿ ಇಂದಿರಾ ದತ್ತಿನಿಧಿ ಬಹುಮಾನಗಳಿಗಾಗಿ), ಪ್ರವಾಸ ಸಾಹಿತ್ಯ, ಜೀವನಚರಿತ್ರೆ / ಆತ್ಮಕಥೆ (ಅಕಾಡೆಮಿ ಪುಸ್ತಕ ಬಹುಮಾನ ಹಾಗೂ ಸಿಂಪಿ ಲಿಂಗಣ್ಣ ದತ್ತಿನಿಧಿ ಬಹುಮಾನಗಳಿಗಾಗಿ), ಸಾಹಿತ್ಯ ವಿಮರ್ಶೆ (ಸಾಹಿತ್ಯಚರಿತ್ರೆ, ಸಾಹಿತ್ಯತತ್ವ ಮತ್ತು ಸೌಂದರ್ಯ ಮೀಮಾಂಸೆ ಸೇರಿ) (ಅಕಾಡೆಮಿ ಮಸ್ತಕ ಬಹುಮಾನ ಹಾಗೂ ಪಿ. ಶ್ರೀನಿವಾಸರಾವ್ ದತ್ತಿನಿಧಿ ಬಹುಮಾನಗಳಿಗಾಗಿ), ಮಕ್ಕಳ ಸಾಹಿತ್ಯ, ವಿಜ್ಞಾನ ಸಾಹಿತ್ಯ (ಭೌತ, ರಸಾಯನ, ಗಣಿತ, ಪ್ರಾಣಿ, ಸಸ್ಯ, ಇಂಜಿನಿಯರಿಂಗ್, ವೈದ್ಯ, ಭೂ, ಖಗೋಳ, ಗೃಹವಿಜ್ಞಾನ, ಪರಿಸರ), ಮಾನವಿಕ (ಜಾನಪದ, ಇತಿಹಾಸ, ರಾಜ್ಯ ಶಾಸ್ತ್ರ, ಸಮಾಜಶಾಸ್ತ್ರ, ಮಾನವಶಾಸ್ತ್ರ, ಮನಃಶಾಸ್ತ್ರ, ಭಾಷಾಶಾಸ್ತ್ರ, ಶಿಕ್ಷಣ, ವಾಣಿಜ್ಯ, ಕಾನೂನು, ಗ್ರಂಥಭಂಡಾರ ವಿಜ್ಞಾನ, ಸಮೂಹಸಂವಹನ, ಧಾರ್ಮಿಕ, ದಾರ್ಶನಿಕ), ಗ್ರಂಥ ಸಂಪಾದನೆ (ಪ್ರಾಚೀನ ಕೃತಿಗಳ ಸಂಪಾದನೆ) / ಸಂಶೋಧನೆ (ಕನ್ನಡ ಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಗಳಿಗೆ ಸಂಬಂಧಿಸಿದ ಸಂಶೋಧನೆ), ವೈಚಾರಿಕ / ಅಂಕಣ ಬರಹ (ಅಕಾಡೆಮಿ ಪುಸ್ತಕ ಬಹುಮಾನ ಹಾಗೂ ಬಿ.ವಿ. ವೀರಭದ್ರಪ್ಪ ದತ್ತಿನಿಧಿ ಬಹುಮಾನಗಳಿಗಾಗಿ), ಅನುವಾದ-1 (ಇಂಗ್ಲಿಷ್ ಸೇರಿದಂತೆ ಭಾರತೀಯ ಭಾಷೆಯಿಂದ ಕನ್ನಡಕ್ಕೆ ಅನುವಾದಗೊಂಡ ಸೃಜನ/ಸೃಜನೇತರ ಕೃತಿಗಳು (ಎಲ್ ಗುಂಡಪ್ಪ ಮತ್ತು ಶಾರದಮ್ಮ ದತ್ತಿನಿಧಿ ಬಹುಮಾನಗಳಿಗಾಗಿ), ಅನುವಾದ-2 (ಕನ್ನಡದಿಂದ ಭಾರತೀಯ ಭಾಷೆಗಳಿಗೆ ಅನುವಾದಗೊಂಡ ಸೃಜನ/ಸೃಜನೇತರ ಕೃತಿಗಳು), ಲೇಖಕರ ಮೊದಲ ಸ್ವತಂತ್ರಕೃತಿ (2025ರಲ್ಲಿ ಮುದ್ರಣಗೊಂಡ ಮೊದಲ ಸ್ವತಂತ್ರಕೃತಿ. ಖಾತರಿಪಡಿಸಲು ದೃಢೀಕರಣ ಪತ್ರ ಲಗತ್ತಿಸಬೇಕು.) (ಅಕಾಡೆಮಿ ಮಸ್ತಕ ಬಹುಮಾನ ಹಾಗೂ ಮಧುರಚೆನ್ನ ದತ್ತಿನಿಧಿ ಬಹುಮಾನಗಳಿಗಾಗಿ) (ಕಾವ್ಯ ಪ್ರಕಾರವನ್ನು ಹೊರತುಪಡಿಸಿ), ಕನ್ನಡದಿಂದ ಇಂಗ್ಲೀಷಿಗೆ ಅನುವಾದ (ಅಮೆರಿಕನ್ನಡ ದತ್ತಿನಿಧಿ ಬಹುಮಾನಕ್ಕಾಗಿ), ದಾನ ಸಾಹಿತ್ಯ (ದಾಸ ಸಾಹಿತ್ಯಕುರಿತ ಸೃಜನ/ ಸೃಜನೇತರ ಕೃತಿಗಳು) (ಶ್ರೀಮತಿ ಜಲಜಾ ಶ್ರೀಪತಿ ಆಚಾರ್ಯಗಂಗೂರ್ ದತ್ತಿನಿಧಿ ಬಹುಮಾನಕ್ಕಾಗಿ), ಸಂಕೀರ್ಣ (ಮೇಲಿನ ಯಾವುದೇ ಪ್ರಕಾರಕ್ಕೆ ಹೊಂದಿಕೊಳ್ಳದ ವಿಶಿಷ್ಟ ಕೃತಿಗಳು), ಗಜಲ್ ಕಾವ್ಯ (ನಾಡೋಜ ಡಾ. ಶಾಂತರಸ ಗಜಲ್ ಕಾವ್ಯ ದತ್ತಿ ಬಹುಮಾನಕ್ಕಾಗಿ). ಕುವೆಂಪು ಅವರ ಕೃತಿಗಳು ಮತ್ತು ಆಶಯಗಳ ಹಿನ್ನೆಲೆಯಲ್ಲಿ ರಚನೆಗೊಂಡ ಕನ್ನಡ ಸಾಹಿತ್ಯದ ಯಾವುದೇ ಪ್ರಕಾರದ ಪುಸ್ತಕ (ಬಾ ಇಲ್ಲಿ ಸಂಭವಿಸು-ಶ್ರೀಮತಿ ಕೆ.ಎಲ್. ಲಕ್ಷ್ಮಮ್ಮ ಮತ್ತು ಪ್ರೊ. ಶಿವರಾಮಯ್ಯ ದತ್ತಿನಿಧಿ ಬಹುಮಾನಕ್ಕಾಗಿ).
Karnataka Sahitya Academy ಬಹುಮಾನಕ್ಕಾಗಿ ಪರಿಗಣಿಸಲ್ಪಡದ ಕೃತಿಗಳು : ಮರುಮುದ್ರಣವಾದ ಪುಸ್ತಕಗಳು. ಪಿಎಚ್.ಡಿ. ಪದವಿಗಾಗಿ ಸಿದ್ಧಪಡಿಸಿದ ಸಂಶೋಧನಾ ಗ್ರಂಥಗಳು. ಪಠ್ಯಪುಸ್ತಕಗಳು. ಅಕಾಡೆಮಿಯ ಗೌರವ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ಕೃತಿಗಳು. ಈಗಾಗಲೇ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಒಟ್ಟಾರೆ ಮೂರು ಬಾರಿ ಪುಸ್ತಕ ಬಹುಮಾನ ಪಡೆದವರ ಕೃತಿಗಳು. ಒಂದು ಪ್ರಕಾರದಲ್ಲಿ ಒಂದು ಬಾರಿ ಪುಸ್ತಕ ಬಹುಮಾನ ಪಡೆದವರ ಕೃತಿಗಳು.
ಒಬ್ಬ ಲೇಖಕರಿಗೆ ಮೂರು ಬಾರಿ ಬೇರೆ ಬೇರೆ ಪ್ರಕಾರಗಳಲ್ಲಿ ಬಹುಮಾನ ಪಡೆಯುವ ಅವಕಾಶವಿದೆ. ಬಹುಮಾನಕ್ಕಾಗಿ ಕಳುಹಿಸುವ ಕೃತಿಯ ಮೇಲೆ ತಿಳಿಸಿದ ಪ್ರಕಾರಗಳಲ್ಲಿ ಯಾವ ಸಾಹಿತ್ಯ ಪ್ರಕಾರಕ್ಕೆ ಸೇರುತ್ತದೆ ಎನ್ನುವುದನ್ನು ಸ್ಪಷ್ಟವಾಗಿ ಪುಸ್ತಕದ ಶೀರ್ಷಿಕೆ ಪುಟದಲ್ಲಿ ಬರೆದಿರಬೇಕು.
ಹೆಚ್ಚಿನ ವಿವರಗಳಿಗೆ ಅಕಾಡೆಮಿಯ ವೆಬ್‌ಸೈಟ್ www.sahithyaacademy.karnataka.gov.in ಅನ್ನು ಸಂಪರ್ಕಿಸಬಹುದೆಂದು ಕನ್ನಡ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಕರಿಯಪ್ಪ ಎನ್. ತಿಳಿಸಿದ್ದಾರೆ.
Karnataka Sahitya Academy ಸಾಹಿತ್ಯ ಅಕಾಡೆಮಿಯಿಂದ ವಿವಿಧ ಪ್ರಕಾರಗಳ ಕೃತಿಗಳ ಪುಸ್ತಕ ಬಹುಮಾನಕ್ಕೆ ಆರ್ಜಿ ಆಹ್ವಾನ
Karnataka University ನಾಯಕತ್ವ ಗುಣ ರೂಪುಸುವಲ್ಲಿ ವಿದ್ಯಾರ್ಥಿ ಸಂಸತ್ತು ಸಹಕಾರಿ-ಪ್ರೊ.ಜೆ.ಎಂ.ನಾಗಯ್ಯ
Karnataka University ಪ್ರಜಾಪ್ರಭುತ್ವದ ಸಬಲತೆಗೆ ಸಮರ್ಥ ನಾಯಕತ್ವ ಅಗತ್ಯ. ಪರಿಣಾಮಕಾರಿಯಾಗಿ ವಿಷಯ ಮಂಡನೆ, ವಿಮರ್ಶಾ ಸಾಮರ್ಥ್ಯ, ವಾಕ್ಚಾತುರ್ಯ, ಸಂವಹನ ಕೌಶಲ್ಯ, ನೀತಿ ರೂಪಿಸುವ ಸಾಮರ್ಥ್ಯ ಇರುವವರನ್ನು ಉತ್ತಮ ನಾಯಕ ಎಂದು ಪರಿಗಣಿಸಲಾಗುತ್ತದೆ. ನಾಯಕತ್ವ ಗುಣ ರೂಪಿಸುಕೊಳ್ಳುವಲ್ಲಿ ವಿದ್ಯಾರ್ಥಿ ಸಂಸತ್ತು ಸಹಕಾರಿಯಾಗಿದೆ ಎಂದು ಸಹ ಎಂದು ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಜೆ.ಎಂ. ನಾಗಯ್ಯ ಹೇಳಿದರು
ತಾಳಗುಂದದಲ್ಲಿರುವ ಶ್ರೀ ವೀರಭದ್ರೇಶ್ವರ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ಏಪ್ರಿಲ್ 2ರ ಗುರುವಾರ ಬೆಳಿಗ್ಗೆ ಸದರಿ ಮಹಾವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ 2025- 26ನೇ ಸಾಲಿನ ಸಾಂಸ್ಕೃತಿಕ ವೇದಿಕೆ ಮತ್ತು ವಿದ್ಯಾರ್ಥಿ ಸಂಸತ್ತು ಉದ್ಘಾಟನೆ ಹಾಗೂ ಪ್ರಥಮ ಬಿ.ಇಡಿ. ಪ್ರಶಿಕ್ಷಣಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸ್ವಾಗತ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಶಾಲಾ ಕಾಲೇಜಿನ ಹಂತದಲ್ಲಿ ವಿದ್ಯಾರ್ಥಿ ಸಂಸತ್ತು ರೂಪಿಸಿರುವುದು ಉತ್ತಮ ಫಲಿತಾಂಶ ನೀಡುತ್ತಿದೆ. ಪ್ರಜಾಪ್ರಭುತ್ವದ ಆಶಯಗಳು ಬಲವರ್ಧನೆಗೊಳ್ಳಲು ವಿದ್ಯಾರ್ಥಿ ಸಂಸತ್ತು ಸಹಕಾರಿಯಾಗಿದೆ ಎಂದರು.
ಶಿಕ್ಷಣವನ್ನು ಪರ ಹಾಗೂ ಅಪರ ವಿದ್ಯೆ ಎಂದು ವಿಂಗಡಿಸಬಹುದಾಗಿದೆ. ಆತ್ಮಜ್ಞಾನ ಹಾಗೂ ಆತ್ಮ ವಿಕಸನಕ್ಕೆ ಪಡೆಯುವ ವಿದ್ಯೆಯನ್ನು ಪರ ವಿದ್ಯೆ ಎಂದೂ ಲೌಕಿಕ ಸುಖಕ್ಕೆ ಸಾಧಕವನ್ನಾಗಿ ಕಲಿಯುವ ವಿದ್ಯೆಯನ್ನು ಅಪರ ವಿದ್ಯೆ ಎಂದು ಪರಿಗಣಿಸಬಹುದಾಗಿದೆ. ಹಿಂದಿನ ಕಾಲದಲ್ಲಿ ಪರ ವಿದ್ಯೆ ಎಂದರೆ ಶಿಕ್ಷಣವನ್ನು ಆತ್ಮಜ್ಞಾನ ಅಥವಾ ಮೋಕ್ಷ ಪಡೆಯಲು ಅಧ್ಯಯನ ಮಾಡುತ್ತಿದ್ದರು. ಆದರೆ ಆಧುನಿಕ ಕಾಲಘಟ್ಟದಲ್ಲಿ ಪರ ಹಾಗೂ ಅಪರ ವಿದ್ಯೆಗಳೆರೆಡೂ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಶ್ರೀ ವೀರಭದ್ರೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಪರಮೇಶ ಹ. ಮಸಲವಾಡ ಅಧ್ಯಕ್ಷತೆವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಧಾರವಾಡದ ಹುರಿಕಡ್ಲಿ ಅಜ್ಜ ಮಹಿಳಾ ಪದವಿ ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯರಾದ ಡಾ. ರಾಜೇಶ್ವರಿ ಸಾಲಿ, ಹಂಸಭಾವಿ ಎಂಎಎಸ್‌ಸಿ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಎಂ.ಎA. ಅಕ್ಕಿ, ವಿಶೇಷ ಆಹ್ವಾನಿತರಾಗಿ ಶ್ರೀ ವೀರಭದ್ರೇಶ್ವರ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಜೆ.ಪಿ. ಸುನೀಲ್ ಕುಮಾರ ಆಗಮಿಸಿದ್ದರು.
Karnataka University ಸಾಂಸ್ಕೃತಿಕ ವೇದಿಕೆ ಕಾರ್ಯಾಧ್ಯಕ್ಷ ವೈ.ಹೆಚ್. ರಾಜು, ವಿದ್ಯಾರ್ಥಿ ಸಂಘದ ಕಾರ್ಯದರ್ಶಿಗಳಾದ ಪಿ.ಹೆಚ್. ಮಾಲತೇಶ, ಎಂ. ಸುಚಿತ್ರಾ, ಎಂ. ವಿನಾಯಕ, ಬಿ. ಭೂಮಿಕಾ ಮತ್ತಿತರರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿ ಸಂಘದವರಿಗೆ ಡಿ. ಗುರುರಾಜ್ ಪ್ರಮಾಣ ವಚನ ಬೋಧಿಸಿದರು. ಪ್ರೊ.ಜೆ.ಎಂ. ನಾಗಯ್ಯ ಮತ್ತು ಡಾ. ರಾಜೇಶ್ವರಿ ಸಾಲಿ ಅವರನ್ನು ಅಭಿನಂದಿಸಲಾಯಿತು.
Chamber of commerce shivamogga ಸರಕು ಮತ್ತು ಸೇವಾ ತೆರಿಗೆ ಪ್ರಕರಣ ಮೇಲ್ಮನವಿಗೆ ಶಿವಮೊಗ್ಗದಲ್ಲಿ ಮತ್ತೊಂದು ನ್ಯಾಯಪೀಠ ಸ್ಥಾಪಿಸಿ- ಬಿ.ಗೋಪಿನಾಥ್
Chamber of commerce shivamogga ಸರಕು ಮತ್ತು ಸೇವಾ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯ ಮತ್ತೊಂದು ಪೀಠವನ್ನು ಶಿವಮೊಗ್ಗದಲ್ಲಿ ಸ್ಥಾಪಿಸುವಂತೆ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಮನವಿ ಮಾಡಿದರು.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್ ಕೆ ಸಿ ಸಿ ಐ) ಸಭಾಂಗಣದಲ್ಲಿ ಆಯೋಜಿಸಿದ್ದ ಶಿವಮೊಗ್ಗ ಜಿಲ್ಲಾ ಸಮನ್ವಯ ಸಂವಾದಾತ್ಮಕ ಸಭೆಯಲ್ಲಿ ಮಾತನಾಡಿ, ಸರಕು ಮತ್ತು ಸೇವಾ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ ರಾಜ್ಯ ಪೀಠ ಅರೆ ನ್ಯಾಯಾಂಗ ಪ್ರಾಧಿಕಾರವಾಗಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲೆಯ ವಾಣಿಜ್ಯ ತೆರಿಗೆ ವಿಭಾಗವು ಮೊದಲಿನಿಂದಲೂ ಹಾಸನ ಮತ್ತು ಚಿಕ್ಕಮಗಳೂರು ಸೇರಿದಂತೆ ಮೂರು ಜಿಲ್ಲೆಗಳ ಮಲೆನಾಡು ವಿಭಾಗಿಯ ಕಚೇರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಅತಿ ಹೆಚ್ಚು ಸರಕು ಮತ್ತು ಸೇವಾ ತೆರಿಗೆಯ ವ್ಯಾಜ್ಯಗಳ ಮೇಲ್ಮನವಿ ಅರ್ಜಿಯನ್ನು ಸ್ವೀಕರಿಸುತ್ತಿದೆ. ಈ ಸಂಖ್ಯೆ ಇನ್ನೂ ಹೆಚ್ಚಾಗುವ ನಿರೀಕ್ಷೆ ಇದೆ. ಸುತ್ತಮುತ್ತಲಿನ ಇನ್ನೂ 3-4 ಜಿಲ್ಲೆಗಳನ್ನು ಸೇರಿಸಿಕೊಂಡು ಶಿವಮೊಗ್ಗವನ್ನು ಕೇಂದ್ರಿಕರಿಸಿ ಬೆಂಗಳೂರಿನ ಜತೆ ಮತ್ತೊಂದು ಮೇಲ್ಮನವಿ ನ್ಯಾಯಮಂಡಳಿಯನ್ನು ರಚಿಸಿದರೆ ಇಲ್ಲಿನ ವಾಣಿಜ್ಯ ಮತ್ತು ಕೈಗಾರಿಕಾ ಉದ್ಯಮಗಳಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.
ಶಿವಮೊಗ್ಗ ಜಿಲ್ಲೆಯ ಪರಿಸರ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಬೇಕು. ಟ್ರಕ್, ಬಸ್ ಟರ್ಮಿನಲ್, ಬಹುಹಂತದ ಕೌಶಲ್ಯಾಭಿವೃದ್ಧಿ ಕೇಂದ್ರ, ಶಿವಮೊಗ್ಗ-ಭದ್ರಾವತಿ ಪೊಲೀಸ್ ಆಯುಕ್ತರ ಕಚೇರಿ, ಆಹಾರ ಪದಾರ್ಥಗಳ ಸಂಸ್ಕರಣ ಘಟಕ ಹಾಗೂ ಶೀತಲ ಶೇಖರಣಾ ಘಟಕ ಸ್ಥಾಪನೆ, ಆಯಷ್ ಯೂನಿವರ್ಸಿಟಿಗೆ ಅನುದಾನ, ತುಂಗಾ ಮತ್ತು ಭದ್ರಾ ನದಿಯ ನೀರು ಸ್ವಚ್ಛತೆಗೆ ಒಂದು ವಿಶೇಷ ಯೋಜನೆ, ಕರಕುಶಲ ವಸ್ತುಗಳ ಪ್ರೋತ್ಸಾಹಕ್ಕಾಗಿ ಕಲಾಗ್ರಾಮ, ಅಮ್ನೆಸ್ಟಿ ಸ್ಕೀಮ್, ಸ್ಯಾಟ್ ಲೈಟ್ ಬಸ್ ಸ್ಟಾಂಡ್, ವಿ ಐ ಎಸ್ ಎಲ್, ಎಂ.ಪಿ.ಎಂ ಕೈಗಾರಿಕೆ ಪುನರಾರಂಭ, ಕೈಗಾರಿಕಾ ವಸಾಹತುಗಳ ಅಭಿವೃದ್ಧಿ, ಫುಡ್ ಪಾರ್ಕ್ ಸ್ಥಾಪನೆ, ಕೈಗಾರಿಕಾಗಳ ವೇತನ ಕಾಯ್ದೆ ಅಧಿಸೂಚನೆ ಸಮಸ್ಯೆ, ವಾಣಿಜ್ಯ ಹಾಗೂ ಕೈಗಾರಿಕಾ ಚಟುವಟಿಕೆಗಳನ್ನು ಏಕೀಕೃತ ನೋಂದಣಿ ಮಾಡಲು ಬೇಕಾದ ವ್ಯವಸ್ಥೆ, ಹೂಡಿಕೆಗಳನ್ನು ಆಕರ್ಷಿಸುವ ಸಲುವಾಗಿ ಮೂಲಸೌಕರ್ಯಗಳ ಅಭಿವೃದ್ಧಿ, ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಬಂಡವಾಳ, ಮಾರ್ಗದರ್ಶನ ಮತ್ತು ಮೂಲಸೌಕರ್ಯ ಬೆಂಬಲ, ಸಂಶೋಧನಾ ಸಂಸ್ಥೆಗಳ ಸ್ಥಾಪನೆ ಸೇರಿದಂತೆ ಶಿವಮೊಗ್ಗ ಜಿಲ್ಲೆಯ ಹಾಗೂ ರಾಜ್ಯದ ಶ್ರೇಯೋಭಿವೃದ್ಧಿಗೆ ಸಂಬಂಧಿಸಿದ ವಿಷಯಗಳನ್ನು ರಾಜ್ಯ ಸರ್ಕಾರದ ಗಮನಕ್ಕೆ ತಂದು ಪರಿಹರಿಸರಬೇಕು ಎಂದು ಮನವಿ ಮಾಡಿದರು.
Chamber of commerce shivamogga ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಅಧ್ಯಕ್ಷೆ ಉಮಾ ರೆಡ್ಡಿ, ಉಪಾಧ್ಯಕ್ಷ ಸಾಯಿರಾಮ್ ಪ್ರಸಾದ್, ಸಮನ್ವಯ ಅಧ್ಯಕ್ಷ ಹಿರೇಮಠ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ಖಜಾಂಚಿ ಆರ್.ಮನೋಹರ್, ಮಾಜಿ ಅಧ್ಯಕ್ಷ ಡಿ.ಎಂ.ಶಂಕರಪ್ಪ ಉಪಸ್ಥಿತರಿದ್ದರು.
B.Y. Raghavendra ಶಿಕಾರಿಪುರದ ಶ್ರೀ ಹುಚ್ಚರಾಯಸ್ವಾಮಿ ರಥೋತ್ಸವ ನಾಡಿನ ಸಾಂಸ್ಕೃತಿಕ ಸೊಬಗನ್ನ ಎತ್ತಿ ಹಿಡಿದಿದೆ- ಬಿ.ವೈ.ರಾಘವೇಂದ್ರ
ಶಿಕಾರಿಪುರದಲ್ಲಿ ಜರುಗಿದ ಸಾಂಪ್ರದಾಯಿಕ ರಥೋತ್ಸವದಲ್ಲಿ ಹಿರಿಯ ನಾಯಕರು, ಮಾಜಿ ಮುಖ್ಯಮಂತ್ರಿಗಳೂ ಆದ ಹಾಗೂ ಮಾಜಿ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪನವರು, ಸಂಸದ ಬಿ. ವೈ.ರಾಘವೇಂದ್ರ ಮತ್ತು ಶಿಕಾರಿಪುರ ಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷರಾದ ಶ್ರೀ ಬಿ.ವೈ. ವಿಜಯೇಂದ್ರ ಅವರು ಮತ್ತು ಅವರ ಕುಟುಂಬದ ಸದಸ್ಯರೊಂದಿಗೆ ಪಾಲ್ಗೊಂಡು ಸ್ವಾಮಿಯ ದರ್ಶನ ಪಡೆದು ಧನ್ಯರಾದರು.
ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತಾದಿಗಳ ಹರ್ಷೋದ್ಗಾರದ ನಡುವೆ ಸಾಗಿದ ರಥೋತ್ಸವವು ನಾಡಿನ ಸಾಂಸ್ಕೃತಿಕ ಸೊಬಗನ್ನು ಎತ್ತಿ ಹಿಡಿದಿದೆ.
ಈ ಸಂದರ್ಭದಲ್ಲಿ ರಥಕ್ಕೆ ಭಕ್ತಿಪೂರ್ವಕ ಸಂಸದ ಬಿ.ವೈ.ರಾಘವೇಂದ್ರ ಪೂಜೆ ಸಲ್ಲಿಸಿ, ಸಮಸ್ತ ಜನಕುಲಕ್ಕೆ ಒಳಿತಾಗಲಿ, ನಾಡಿನಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸಿದರು..
B.Y. Raghavendra ಸ್ವಾಮಿಯ ಕೃಪಾಶೀರ್ವಾದ ಸದಾ ನಮ್ಮೆಲ್ಲರ ಮತ್ತು ಕ್ಷೇತ್ರದ ಜನತೆಯ ಮೇಲಿರಲಿ ಎಂದು ಸಂಸದ ಬಿ.ವೈ.ರಾಘವೇಂದ್ರ ಪೂಜೆ ಸಲ್ಲಿಸದರು.
S.N. Channabasappa ಮಳೆಗೆ ಸಿಕ್ಕ ವಿವಿಧ ಬಡಾವಣೆಗಳಿಗೆ ಶಾಸಕ ಚನ್ನಬಸಪ್ಪ ಭೇಟಿ: ಶಾಶ್ವತ ಪರಿಹಾರಕ್ಕೆ ಸೂಚನೆ
S.N. Channabasappa ಶಿವಮೊಗ್ಗ ನಗರದಲ್ಲಿ ಕಳೆದ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ತೊಂದರೆಗೊಳಗಾದ ಶ್ರೀ ರಾಮನಗರ, ಕೆಂಚಪ್ಪ ಬಡಾವಣೆ ಹಾಗೂ ಶರಾವತಿ ನಗರದ ವಿವಿಧ ಭಾಗಗಳಿಗೆ ಶಾಸಕರಾದ ಶ್ರೀ ಎಸ್.ಎನ್. ಚನ್ನಬಸಪ್ಪ ಅವರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಬಡಾವಣೆಗಳಲ್ಲಿ ಮಳೆನೀರು ಸರಾಗವಾಗಿ ಹರಿಯದೆ ಸಾರ್ವಜನಿಕರ ಆಸ್ತಿಪಾಸ್ತಿಗಳಿಗೆ ಹಾನಿಯಾಗಿರುವುದನ್ನು ಗಮನಿಸಿದ ಶಾಸಕರು, ತಕ್ಷಣವೇ ಕಾರ್ಯಪ್ರವೃತ್ತರಾಗುವಂತೆ ಮಹಾನಗರ ಪಾಲಿಕೆ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಶಾಸಕರ ಪ್ರಮುಖ ಸೂಚನೆಗಳು:
ಶಾಶ್ವತ ಪರಿಹಾರ: ಮುಂಬರುವ ಮಳೆಗಾಲದ ವೇಳೆಗೆ ಯಾವುದೇ ಬಡಾವಣೆಯಲ್ಲಿ ನೀರು ನಿಲ್ಲದಂತೆ ರಾಜಕಾಲುವೆ ಹಾಗೂ ಚರಂಡಿಗಳ ದುರಸ್ತಿಯನ್ನು ಕಾರ್ಯವನ್ನು ಕೈಗೊಳ್ಳಬೇಕು.
ಹೂಳೆತ್ತುವ ಕಾರ್ಯ: ಮಳೆಗಾಲಕ್ಕೂ ಮುನ್ನವೇ ನಗರದ ಪ್ರಮುಖ ಚರಂಡಿಗಳಲ್ಲಿ ಹೂಳೆತ್ತುವ ಪ್ರಕ್ರಿಯೆ ಪೂರ್ಣಗೊಳ್ಳಬೇಕು.
ತ್ವರಿತ ಸ್ಪಂದನೆ: ಮಳೆಯಿಂದಾಗಿ ಸಾರ್ವಜನಿಕರಿಗೆ ತೊಂದರೆಯಾದಲ್ಲಿ ತಕ್ಷಣದ ಪರಿಹಾರ ಕಾರ್ಯಗಳಿಗೆ ವಿಶೇಷ ತಂಡಗಳನ್ನು ರಚಿಸಬೇಕು.
S.N. Channabasappa ಬಳಿಕ ಮಾತನಾಡಿದ ಶಾಸಕರು, “ಜನಸಾಮಾನ್ಯರು ಮಳೆಯಿಂದಾಗಿ ಸಂಕಷ್ಟಕ್ಕೀಡಾಗುತ್ತಿರುವುದು ವಿಷಾದನೀಯ. ಈ ಸಮಸ್ಯೆಗೆ ತಾಂತ್ರಿಕ ಪರಿಹಾರ ಕಂಡುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಜನರ ಸುರಕ್ಷತೆಯ ವಿಷಯದಲ್ಲಿ ಯಾವುದೇ ನಿರ್ಲಕ್ಷ್ಯವನ್ನು ಸಹಿಸುವುದಿಲ್ಲ,” ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಬಡಾವಣೆಯ ಪ್ರಮುಖರು ಉಪಸ್ಥಿತರಿದ್ದರು.
S.N. Channabasappa ಯುವ ಕಂಟೆಂಟ್ ಕ್ರಿಯೇಟರುಗಳು ಶಿವಮೊಗ್ಗದ ಸಾಂಸ್ಕೃತಿಕ ವೈಭವ ಪರಿಚಯಿಸಲಿ- ಶಾಸಕ ಚನ್ನಬಸಪ್ಪ
S.N. Channabasappa ಶಿವಮೊಗ್ಗ ನಗರದ ಶಾಂತಿ, ಸುಭದ್ರತೆ ಹಾಗೂ ಸೋಷಿಯಲ್ ಮೀಡಿಯಾ ವೇದಿಕೆಗಳ ಜವಾಬ್ದಾರಿಯುತ ಬಳಕೆಯ ಕುರಿತು ಇಂದು ಶಿವಮೊಗ್ಗದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ವಿಶೇಷ ಸಮಾಲೋಚನಾ ಸಭೆ ನಡೆಯಿತು. ಈ ಸಭೆಯಲ್ಲಿ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಸ್.ಎನ್. ಚನ್ನಬಸಪ್ಪ ಅವರು ಪಾಲ್ಗೊಂಡು ಮಾರ್ಗದರ್ಶನ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ಬಿ. ನಿಖಿಲ್ ಅವರ ಸಮ್ಮುಖದಲ್ಲಿ ನಡೆದ ಈ ಸಭೆಯಲ್ಲಿ, ‘ಅನವರತ ಫೌಂಡೇಶನ್’ ಸದಸ್ಯರು ಹಾಗೂ ಶಿವಮೊಗ್ಗ ಜಿಲ್ಲೆಯ ಪ್ರಮುಖ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳು ಮತ್ತು ಕಂಟೆಂಟ್ ಕ್ರಿಯೇಟರ್‌ಗಳು ಭಾಗವಹಿಸಿದ್ದರು.
ಸಭೆಯಲ್ಲಿ ನಗರದ ಸಂಚಾರ ನಿಯಮಗಳ ಜಾಗೃತಿ, ಸೈಬರ್ ಸುರಕ್ಷತೆ ಮತ್ತು ಗಾಂಜಾ ಗೆ ಸಂಬಂಧಿಸಿದಂತ ವಿಷಯಗಳಲ್ಲಿ ಪೊಲೀಸ್ ಇಲಾಖೆಯೊಂದಿಗೆ ಕಂಟೆಂಟ್ ಕ್ರಿಯೇಟರ್‌ಗಳು ಕೈಜೋಡಿಸುವ ಕುರಿತು ಚರ್ಚಿಸಲಾಯಿತು.
ನಮ್ಮ ನಗರದ ಸಾಂಸ್ಕೃತಿಕ ವೈಭವ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಜಗತ್ತಿಗೆ ಪರಿಚಯಿಸುವ ಮೂಲಕ ‘ಸಕಾರಾತ್ಮಕ ಶಿವಮೊಗ್ಗ’ವನ್ನು ನಿರ್ಮಿಸಲು ಯುವ ಕ್ರಿಯೇಟರ್‌ಗಳಿಗೆ ಶಾಸಕರು ಕರೆ ನೀಡಿದರು.
S.N. Channabasappa ಸಭೆಯಲ್ಲಿ ಇನ್‌ಫ್ಲುಯೆನ್ಸರ್‌ಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಹಾಗೂ ಜಿಲ್ಲಾಡಳಿತದೊಂದಿಗೆ ಸದಾ ಸಹಕರಿಸುವುದಾಗಿ ಭರವಸೆ ನೀಡಿದರು.
ಶಿವಮೊಗ್ಗದ ಅಶೋಕ ವೃತ್ತದಲ್ಲಿ ಸರಣಿ ಅಪಘಾತ, ಹಲವು ಮಂದಿಗೆ ತೀವ್ರ ಪೆಟ್ಟು, ಗಾಯ
ಶಿವಮೊಗ್ಗ ನಗರದ ಬಸ್ ನಿಲ್ದಾಣದ ಬಳಿ ಅಶೋಕ ವೃತ್ತದಲ್ಲಿ ಸರಣಿ ಅಪಘಾತ ಸಂಭವಿಸಿದ್ದು, ಕೆಎಸ್’ಆರ್’ಟಿಸಿ ಬಸ್’ವೊಂದು ವೇಗವಾಗಿ ಆಟೋಗೆ ಡಿಕ್ಕಿ ಹೊಡೆದು, ನಂತರ ಕಿಯಾ ಕಾರು ಹಾಗೂ ಶಾಲಾ ಬಸ್’ಗೆ ಡಿಕ್ಕಿ ಹೊಡೆದ ಘಟನೆ ಇಂದು ಬೆಳಗ್ಗೆ ಸಂಭವಿಸಿದೆ.
ಘಟನೆಯಲ್ಲಿ ಆಟೋ ಚಾಲಕ ರಾಜು ಎನ್ನುವವರಿಗೆ ಗಂಭೀರ ಗಾಯಗಳಾಗಿದೆ. ಎಡಗೈ, ಎಡಗಾಲು, ಸೊಂಟ ಹಾಗೂ ಎದೆಗೆ ಗಂಭೀರ ಪೆಟ್ಟು ಬಿದ್ದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬಿಎಚ್ ರಸ್ತೆಯ ಅಶೋಕ ವೃತ್ತದಲ್ಲಿ ರೆಡ್ ಸಿಗ್ನಲ್ ಇದ್ದುದರಿಂದ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಈ ವೇಳೆ ಎಎ ವೃತ್ತದ ಕಡೆಯಿಂದ ವೇಗವಾಗಿ ಬಂದ ಕೆಎಸ್’ಆರ್’ಟಿಸಿ ಬಸ್ ಮೊದಲು ಆಟೋಗೆ ಡಿಕ್ಕಿ ಹೊಡೆದಿದೆ. ನಂತರ ಆಟೋವನ್ನು ತಳ್ಳಿಕೊಂಡು ಕಿಯಾ ಕಾರು, ನಂತರ ಶಾಲಾ ಬಸ್’ಗೆ ಡಿಕ್ಕಿ ಹೊಡೆದಿದೆ.
ಅತಿ ವೇಗದಿಂದ ಬಸ್ ಡಿಕ್ಕಿ ಹೊಡೆದು ಕಾರು ಹಾಗೂ ಬಸ್ ನಡುವೆ ಸಿಲುಕಿದ ಪರಿಣಾಮ ಆಟೋ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಿಯಾ ಕಾರು ಸಹ ಬಹಳಷ್ಟು ಹಾನಿಯಾಗಿದೆ. ನಂತರ ಮುಂದಿದ್ದ ಶಾಲಾ ಬಸ್’ಗೆ ಡಿಕ್ಕಿ ಹೊಡೆದಿದೆ.
ಘಟನೆ ಸಂಭವಿಸಿದ ತಕ್ಷಣ ಸ್ಪಂದಿಸಿದ ಸಾರ್ವಜನಿಕರು, ಕಿಯಾ ಕಾರು ಚಾಲಕ ಸುದೀಪ್ ಶೆಟ್ಟಿ, ಶಾಲಾ ಬಸ್ ಚಾಲಕ ಖಾಸಿಂ ಷರೀಫ್ ಹಾಗೂ ಕೆಎಸ್’ಆರ್’ಟಿಸಿ ಬಸ್ ಕಂಡಕ್ಟರ್ ಕರಿಬಸಪ್ಪ ಅವರು ಆಟೋದಲ್ಲಿ ಸಿಲುಕಿದ್ದ ಚಾಲಕನನ್ನು ಹೊರಕ್ಕೆ ತೆಗೆದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕೆಎಸ್’ಆರ್’ಟಿಸಿ ಬಸ್ ಚಾಲಕ ದೇವರಾಜ್ ಅವರ ಅತಿ ವೇಗ ಹಾಗೂ ನಿರ್ಲಕ್ಷತನದ ಚಾಲನೆಯೇ ಘಟನೆಗೆ ಕಾರಣ ಎಂದು ವರದಿಯಾಗಿದೆ.
ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಹಾಗೂ ಎಫ್‌ಐಆರ್ ದಾಖಲಾಗಿದೆ.
Karnataka Sanga ಏಪ್ರಿಲ್ 3. ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ವಿಶೇಷ. ಶತಾವಧಾನಿ ಡಾ.ಗಣೇಶ್ ನೇತೃತ್ವದಲ್ಲಿ “ಅಷ್ಟಾವಧಾನ”
Karnataka Sanga ದಿನಾಂಕ 03ನೇ ಏಪ್ರಿಲ್ 2026ರ ಶುಕ್ರವಾರ ಸಂಜೆ 5;00ಕ್ಕೆ ಹಸೂಡಿ ವೆಂಕಟ ಶಾಸ್ತ್ರೀ ಸಾಹಿತ್ಯ ಭವನದಲ್ಲಿ ಪದ್ಮಭೂಷಣ ಶತಾವಧಾನಿ ಡಾ. ಆರ್. ಗಣೇಶ್, ಬಹುಶ್ರುತ ವಿದ್ವಾಂಸರು, ಬೆಂಗಳೂರು ಮತ್ತು ತಂಡದವರಿಂದ ‘ಅಷ್ಟಾವಧಾನ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಆಸಕ್ತರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಸಂಘದ ಅಧ್ಯಕ್ಷರಾದ ಪ್ರೊ. ಹೆಚ್.ಆರ್. ಶಂಕರನಾರಾಯಣ ಶಾಸ್ತ್ರೀ ಮತ್ತು ಕಾರ್ಯದರ್ಶಿ ವಿನಯ್ ಶಿವಮೊಗ್ಗ ವಿನಂತಿಸಿರುತ್ತಾರೆ.
Adichunchanari Branch ಆದಿಚುಂಚನಗಿರಿ ಶಾಖಾಮಠದ ಸಮಾಜಮುಖಿ ಕಾರ್ಯಗಳ ಮೂಲಕ ಸುಂದರ ಬದುಕನ್ನ ರೂಪಿಸಿಕೊಳ್ಳಲು ಸಾಧ್ಯವಾಗಿದೆ – ಶ್ರೀಮಾದಾರ ಚೆನ್ನಯ್ಯ ಶ್ರೀ
Adichunchanari Branch ಸಾಮರಸ್ಯ ಸಹಬಾಳ್ವೆ ಹಾಗೂ ನಮ್ಮ ಹಿತಕರ ಪರಿಸ್ಥಿತಿಯ ಬದುಕು ರೂಪಿತಗೊಳ್ಳಲು ನಮ್ಮ ಧರ್ಮ ಹಾಗೂ ಪರಂಪರೆ ಕಾರಣ ಈ ನಿಟ್ಟಿನಲ್ಲಿ ನಮ್ಮ ಧರ್ಮವನ್ನು ಹಾಗೂ ಎಲ್ಲಾ ಧರ್ಮಗಳನ್ನು ಪ್ರೀತಿಸುವ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ದೇಶಕ್ಕೆ ಮಾದರಿಯಾದ ಒಂದು ಕೇಂದ್ರವಾಗಿದೆ ಎಂದು ಚಿತ್ರದುರ್ಗದ ಮಾದಾರ ಚೆನ್ನಯ್ಯ ಮಠದ ಶ್ರೀ ಮಾದಾರ ಚೆನ್ನಯ್ಯ ಸ್ವಾಮೀಜಿ ತಿಳಿಸಿದರು.
ಶರಾವತಿ ನಗರದ ಶ್ರೀ ಆದಿಚುಂಚನರಿ ಶಾಖಾಮಠದಲ್ಲಿ ನಡೆದ, ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಸ್ಥಾದ ವಾರ್ಷಿಕೋತ್ಸವ,೨೭ನೇ ವರ್ಷದ ಸರಳ ಸಾಮೂಹಿಕ ವಿವಾಹ ಹಾಗೂ ಆದರ್ಶ ಹಿರಿಯ ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಾ, ದಂಪತಿಗಳು ಹಾಗೂ ನೂತನ ದಂಪತಿಗಳಿಗೆ ಆಶೀರ್ವಚನ ಸಮಾಜ ಮುಖಿಯಾದ ಕಾರ್ಯಕ್ರಮಗಳ ಮೂಲಕ ನಮ್ಮ ದೇಶದಲ್ಲಿ ನಾವು ಸುಂದರ ಬದುಕನ್ನು ರೂಪಿಸಿಕೊಳ್ಳಲು ಸಾಧ್ಯವಾಗಿದೆ ಎಂದರು.
ಶ್ರೀ ಮಠ ನಿಜಕ್ಕೂ ದೇಶದಲ್ಲಿ ಸಮಾನತೆ ಕಟ್ಟುವ ಕೆಲಸ ಮಾಡಿದೆ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರು ಸರ್ವಧರ್ಮ ಸಮಾನತೆಯನ್ನು ಸಾರಿದಂತವರಾಗಿದ್ದು, ನಂತರದ ಶ್ರೀಗಳು ಇಡಿ ಮಹಾಸಂಸ್ಥಾನವನ್ನು ಇಡೀ ವಿಶ್ವದಲ್ಲೇ ಪವಿತ್ರ ಕ್ಷೇತ್ರವನ್ನಾಗಿ ಮಾಡಿರುವುದು ಹೆಮ್ಮೆಯ ಸಂಗತಿ ಎಂದರು. ಹಸಿವು ಎಂಬುದು ಹೇಳಿದಾಗ ಮಾತ್ರ ಗೊತ್ತಾಗುತ್ತದೆ ಅದನ್ನು ನೋಡಿದಾಗ ತಿಳಿಯಲು ಸಾಧ್ಯವಿಲ್ಲ ಹಾಗೆಯೇ ನಮ್ಮ ಜ್ಞಾನದ ಹಸಿವು, ಧರ್ಮದ ಹಸಿವು ಹಾಗೂ ತತ್ವದ ಹಸುವು ಹೆಚ್ಚಾಗಬೇಕು ಎಂದರು.
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರು ತಮ್ಮ ಆಶೀರ್ವಚನದಲ್ಲಿ ಇಡೀ ವಿಶ್ವದಲ್ಲಿ ನಮ್ಮ ಧರ್ಮ ಹಾಗೂ ಸಂಸ್ಕೃತಿಗೆ ಅತ್ಯಂತ ಪವಿತ್ರವಾದ ಸ್ಥಾನವಿದೆ. ಬೇರೆ ದೇಶಗಳನ್ನು ಹೋಲಿಕೆ ಮಾಡಿ ನೋಡಿದಲ್ಲಿ ನಮ್ಮ ಸಂಸ್ಕೃತಿ ಹಾಗೂ ಸಂಸ್ಕಾರ ಎಲ್ಲರಿಗೂ ಮಾರ್ಗದರ್ಶನ ವಾಗುವ ಮೂಲ ತತ್ವವಾಗಿರುವುದು ಸಂತೋಷದ ವಿಷಯ ಎಂದರು ೨೭ನೇ ವರ್ಷದ ಶ್ರೀ ಕಾಲಭೈರವೇಶ್ವರ ದೇವಸ್ಥಾನದ ವಾರ್ಷಿಕೋತ್ಸವ ಸರಳ ಸಾಮೂಹಿಕ ವಿವಾಹ ಹಾಗೂ ಸುವರ್ಣ ವರ್ಷ ಮುಗಿಸಿದ ದಂಪತಿಗಳ ಸನ್ಮಾನ ಸಮಾರಂಭ ನಿಜಕ್ಕೂ ಅತ್ಯಂತ ಶ್ರೇಷ್ಠ ಹಾಗೂ ಹಿರಿಮೆಯ ಕಾರ್ಯಕ್ರಮ ಎಂದು ಹೇಳಿದರು.
ಆಸ್ಟ್ರೇಲಿಯಾ ಪ್ರವಾಸದ ಕುರಿತು ಮಾತನಾಡುತ್ತ ನಮ್ಮ ಸಂಸ್ಕೃತಿಯು ಗತಕಾಲದ ಯುಗಯುಗಗಳ ಐತಿಯ್ಯವನ್ನು ಬೀರುವಂತಹ ಮೂಲತತ್ವವನ್ನು ಒಳಗೊಂಡಿದೆ.ಅದೇ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅಲ್ಲಿನ ಜನ ತಮ್ಮ ಇತಿಹಾಸದ ಬಗ್ಗೆ ಹೇಳಿಕೊಳ್ಳಲು ಹಿಂಜರಿರುತ್ತಾರೆ ಏಕೆಂದರೆ ಬ್ರಿಟಿಷರು ಅಂದು ತಪ್ಪು ಮಾಡಿದವರನ್ನು ಗಡಿಪಾರು ಮಾಡುತ್ತಿದ್ದ ಸ್ಥಳ ಇದಂತೆ ಎಂದರು. ನವದಂಪತಿಗಳು ಸುವರ್ಣ ವರ್ಷ ಮುಗಿಸಿದ ಹಿರಿಯ ದಂಪತಿಗಳ ಆಶೀರ್ವಾದ ಪಡೆಯಬೇಕು ಅವರು ಬದುಕನ್ನು ರೂಪಿಸಿಕೊಂಡು, ಕಟ್ಟಿಕೊಂಡ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳಬೇಕು ಗೃಹಸ್ಥಾಶ್ರಮ ನಿಮ್ಮ ಜೀವನದಲ್ಲಿ ಉತ್ತಮವಾಗಿ ಬೆಳೆಯಲಿ ಎಂದರು.
ದಸರಿ ಘಟ್ಟ ಶಾಖಾ ಮಠದ ಶ್ರೀ ಚಂದ್ರಶೇಖರ್ನಾಥ ಸ್ವಾಮೀಜಿ, ಶಿವಮೊಗ್ಗ ಶಾಖಾ ಮಠದ ಶ್ರೀ ನಾದಮಯಾನಂದನಾಥ ಸ್ವಾಮೀಜಿ ಹಾಗೂ ಶ್ರೀ ಕ್ಷೇತ್ರದ ಶಾಖಾ ಮಠದ ಪೂಜ್ಯರು ದಿವ್ಯ ಉಪಸ್ಥಿತಿ ವಹಿಸಿದ್ದರು.
ಕಾರ್ಯ ಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ,ಶಾಸಕ ಹಾಗೂ ಹೆಸರಾಂತ ಮಕ್ಕಳ ತಜ್ಞ ಡಾ. ಧನಂಜಯ ಸರ್ಜಿ ಮಾತನಾಡಿ, ಶ್ರೀಆದಿಚುಂಚನಗಿರಿ ಮಹಾ ಸಂಸ್ಥಾನ ಮಠ ಇಂತಹ ಕಾರ್ಯಕ್ರಮವನ್ನು ಮಾಡುತ್ತಿರುವುದು ಅತ್ಯಂತ ಸ್ವಾಗತಾರ್ಹ ಎಂದರು.50 ರಿಂದ 60 ವರ್ಷಗಳ ಕಾಲ ಸತಿಪತಿಗಳಾಗಿ ಜೀವನ ನಡೆಸುವ ಮೂಲಕ ಇಂದಿನ ಯುವ ಸಮೂಹಕ್ಕೆ ಮಾದರಿಯಾಗಿದ್ದಾರೆ ಎಂದ ಡಾಕ್ಟರ್ ಸರ್ಜಿ ಇತ್ತೀಚಿನ ವರ್ಷಗಳಲ್ಲಿ ಯುವ ಸಮೂಹ ಪ್ರೀತಿಯಿಂದ ಮದುವೆಯಾಗಿ, ಅಷ್ಟೇ ದ್ವೇಷದಿಂದ ವಿಚ್ಛೇದನವನ್ನು ಪಡೆದುಕೊಳ್ಳುತ್ತಿರುವುದು ಅತ್ಯಂತ ವಿಪರ್ಯಾಸವಾಗಿದೆ. ಹಿರಿಯರ ಜೀವನ ಇಂದಿನ ಯುವಕರಿಗೆ ಮಾರ್ಗದರ್ಶನವಾಗಿದ್ದು,ಇವರುಗಳ ಜೀವನದ ಪುಸ್ತಕವನ್ನು ನಿರ್ಮಿಸುವ ಮೂಲಕ ಯುವ ಸಮೂಹಕ್ಕೆ ನೀಡಬೇಕು ಎಂದು ಸಲಹೆ ನೀಡಿದರು.
Adichunchanari Branch ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ,ಹಿಂದೂ ಸಮಾಜದಲ್ಲಿ ಮಾತ್ರ ಇಂತಹ ಸಂಸ್ಕೃತಿಯನ್ನು ಕಾಣಲು ಸಾಧ್ಯವಾಗಿದೆ. ಅನೇಕ ಕಷ್ಟ ಸುಖಗಳನ್ನ ಸಮನಾಗಿ ಎದುರಿಸಿ ಸುದೀರ್ಘ ವರ್ಷಗಳ ಕಾಲ ಸಂಸಾರ ಮಾಡಿದಂತಹ ದಾಂಪತ್ಯ ಜೀವನವನ್ನು ನಡೆಸಿದಂತಹ ಸತಿಪತಿಗಳಿಗೆ ಸನ್ಮಾನ ಮಾಡುತ್ತಿರುವುದು ಅತ್ಯಂತ ಸಂತೋಷಕರ ಹಾಗೂ ಶ್ಲಾಘನೀಯ ಕಾರ್ಯಕ್ರಮವಾಗಿದೆ ಎಂದು ಹೇಳಿದರು.
ಏನೇ ಕಷ್ಟ ಸುಖ ಬಂದರೂ ನಾವುಗಳು ಒಟ್ಟಾಗಿ ಇರುತ್ತೇವೆ ಎಂಬುದೇ ಈ ಸುದೀರ್ಘ ಜೀವನದ ಗುಟ್ಟಾಗಿದೆ ಸಮಾಜದಲ್ಲಿ ಇಂತಹ ಕಾರ್ಯಕ್ರಮಗಳು ಇತರರಿಗೆ ಮಾದರಿಯಾಗಿದೆ. ಶ್ರೀ ಆದಿಚುಂಚನಗಿರಿ ಮಠದ ವತಿಯಿಂದ ಹಿರಿಯ ದಂಪತಿಗಳನ್ನ ಸನ್ಮಾನಿಸುತ್ತಿರುವ ಕಾರ್ಯ ಅತ್ಯಂತ ಸ್ವಾಗತ ಎಂದು ಹೇಳಿದರು.
ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಮಾತನಾಡಿ, ಹಿಂದೂ ಸಮಾಜದಲ್ಲಿ ಸುಧೀರ್ಘ ಜೀವನ ನಡೆಸಿದ ಪತಿ ಪತ್ನಿಯರನ್ನ ಒಂದೆಡೆ ಸೇರಿಸಿ ಸನ್ಮಾನ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಇದು ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ಹೇಳಿದರು.
ಗಂಡನ ಅಭಿವೃದ್ಧಿ ಹೆಂಡತಿಯ ಪ್ರಾರ್ಥನೆಯಿಂದ ಆಗುತ್ತದೆ.ಪ್ರತಿ ಹಂತದಲ್ಲಿ ಹಾಗೂ ಸಂದರ್ಭದಲ್ಲಿ ಪತ್ನಿ ಯಾದವಳು ತನ್ನ ಗಂಡನ ಶ್ರೇಯಸ್ಸನ್ನ ಬಯಸುತ್ತಾಳೆ, ದೇವರಲ್ಲಿ ಕೂಡ ಇದನ್ನೇ ಪ್ರಾರ್ಥಿಸುತ್ತಾಳೆ, ಆದ್ದರಿಂದ ಗಂಡನ ಅಭಿವೃದ್ಧಿಯಲ್ಲಿ ಹೆಂಡತಿಯ ಪಾತ್ರವಿರುತ್ತದೆ ಎಂದು ಹೇಳಿದರು.
ದುಶ್ಚಟಗಳಿಂದ ಹೊರಬಂದು ಸುಖ ಸಂಸಾರ ನಡೆಸಿದಂತಹ ಅನೇಕ ಘಟನೆಗಳು ನಾವು ನೋಡಬಹುದು ಆದರೆ ಇತ್ತೀಚಿನ ದಿನಗಳಲ್ಲಿ ದೂರದರ್ಶನಗಳಲ್ಲಿ ಎರಡು ಮೂರು ಮದುವೆ ಆಗುವಂತಹ ಮನರಂಜನ ಕಾರ್ಯಕ್ರಮಗಳನ್ನ ಪ್ರಸಾರ ಮಾಡುತ್ತಿರುವುದು ಇತರರಿಗೆ ಪ್ರೇರಣೆಯಾಗುವ ಸಾಧ್ಯತೆ ಇದೆಟಿ ಇಂತಹ ಕಾರ್ಯಕ್ರಮಗಳಿಗೆ ಕಡಿವಾಣ ಹಾಕಬೇಕು ಇದು ಒಳ್ಳೆಯ ಬೆಳವಣಿಗೆಯಲ್ಲ.ಇದರಿಂದ ಯುವ ಸಮೂಹ ದಾರಿ ತಪ್ಪುವ ಸಾಧ್ಯತೆ ಇದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಗೃಹ ಮಂತ್ರಿ, ತೀರ್ಥ ಹಳ್ಳಿ ಶಾಸಕರಾದ ಆರಗ ಜ್ಞಾನೇಂದ್ರ,ರೇಷ್ಮೆ ಮತ್ತು ವಿದ್ಯುತ್ ಕೈಮಗ್ಗ ನಿಗಮದ ಅಧ್ಯಕ್ಷ ಚೇತನ್ ಗೌಡ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ರಮೇಶ ಹೆಗಡೆ, ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಧರ್ಮೇಶ್ ಸಿರಿಬೈಲು, ಕೆ. ಇ. ಕಾಂತೇಶ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
Draupadi Murmu ರಾಜ್ಯದ ಭೇಟಿಗೆ ಆಗಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಭವ್ಯ ಸ್ವಾಗತ ಕೋರಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
Draupadi Murmu 2026ನೇ ಏಪ್ರಿಲ್ 1 ರಂದು ತುಮಕೂರಿನ ಶ್ರೀ ಸಿದ್ದಗಂಗಾ ಮಠದಲ್ಲಿ ಆಯೋಜಿಸಲಾಗಿರುವ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ 119 ನೇ ಜಯಂತೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಭಾರತದ ಗೌರವಾನ್ವಿತ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಅವರು ಭಾರತೀಯ ವಾಯು ಸೇನೆಯ ವಿಶೇಷ ವಿಮಾನದ ಮೂಲಕ ಬೆಂಗಳೂರಿನ ಹೆಚ್.ಎ.ಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಈ ಸಮಯದಲ್ಲಿ ಗೌರವಾನ್ವಿತ ರಾಷ್ಟ್ರಪತಿಗಳನ್ನು ರಾಜ್ಯದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಆತ್ಮೀಯವಾಗಿ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಇಲಾಖೆಯ ರಾಜ್ಯ ಖಾತೆ ಸಚಿವರಾದ ವಿ. ಸೋಮಣ್ಣ, ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವರಾದ ರಾಮಲಿಂಗರೆಡ್ಡಿ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್, ಕರ್ನಾಟಕ ಪೊಲೀಸ್ ಮಹಾನಿರ್ದೇಶಕರಾದ ಡಾ.ಎಂ.ಎ. ಸಲೀಮ್, ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್, ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜಗದೀಶ್ ಜಿ, ಸೇರಿದಂತೆ ಹಿರಿಯ ಅಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದರು.
Draupadi Murmu ನಂತರ ಹೆಚ್.ಎ.ಎಲ್ ವಿಮಾನ ನಿಲ್ದಾಣದಿಂದ ಲೋಕ ಭವನಕ್ಕೆ ತೆರಳಿದರು.
