Bangalore- Joga Tour Package ಮುಂಗಾರು ಮಳೆ ಎಲ್ಲೆಡೆ ಸಕ್ರಿಯವಾಗಿದೆ. ಮಲೆನಾಡು, ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಇನ್ನಿಲ್ಲದಂತೆ ಮಳೆ ನಿರಂತರವಾಗಿ ಸುರಿದಿದೆ. ಪರಿಣಾಮ ಶಿವಮೊಗ್ಗದ ಜೋಗ ಜಲಪಾತ ಸೇರಿದಂತೆ ಅನೇಕ ಜಲಪಾತಿಗಳು ಮೈದುಂಬಿ ಹರಿಯುತ್ತಿವೆ. ಈ ಸಂಬಂಧ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಲು KSRTC ವಿಶೇಷ ಊಟ ಸಹಿತ ಟೂರ್ ಪ್ಯಾಕೇಜ್ ಘೋಷಿಸಿದೆ.
ರಾಜಧಾನಿಯಿಂದ ಮಲೆನಾಡಿನ ಹೆಬ್ಬಾಗಿಲ ಜಿಲ್ಲೆಯಾದ ಶಿವಮೊಗ್ಗಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ವಿಶೇಷ ಟೂರ್ ಪ್ಯಾಕೇಜ್ ಘೋಷಿಸಿದೆ.
ಹಚ್ಚ ಹಸಿರ ಹೊದಿಕೆಯ ಮಧ್ಯೆ ಉಕ್ಕುವ ಹಾಲಿನಂತ ಪ್ರಪಾತಕ್ಕೆ ಧುಮ್ಮಿಕ್ಕುವ ಜೋಗ ಜಲಪಾತ, ಅದರ ಸೌಂದಯವನ್ನು ಈ ಮಳೆಗಾಲದಲ್ಲಿ ಕಣ್ತುಂಬಿಕೊಳ್ಳುವುದೇ ಆನಂದದ ಸಂಗತಿ. ಶರಾವತಿ ನದಿ ನೀರೆ ಜೋಗದಲ್ಲಿ ಭೋರ್ಗರೆಯುತ್ತಿದೆ. ದೇಶದ ಎರಡನೇ ಅತೀ ದೊಡ್ಡ ಜಲಪಾತವನ್ನು ನೀವು ಈ ಮಾನ್ಸೂನ್ ವೇಳೆ ನೋಡಬಯಸಿದರೆ ನಿಮಗಾಗಿ ಕೆಎಸ್‌ಆರ್‌ಟಿಸಿ ನಿಗಮವು ಊಟ, ತಿಂಡಿ ಸಹಿತವಾಗಿ ವಿಶೇಷ ಟೂರ್ ಪ್ಯಾಕೇಜ್ ಘೋಷಿಸಿದೆ.
ಜೋಗಕ್ಕೆ ಹೊರಡುವ ದಿನಾಂಕ
ಮುಂದಿನ ವಾರಾಂತ್ಯಕ್ಕೆ ಶುಕ್ರವಾರ (ಜುಲೈ 19) ಮತ್ತು ಶನಿವಾರ (ಜುಲೈ 20) ಎರಡು ದಿನವು KSRTCಯಿಂದ ಬಸ್‌ಗಳು ಪ್ರವಾಸಿಗರನ್ನು ಕರೆದುಕೊಂಡು ಹೋಗಿ, ಮರಳಿ ಕರೆತರಲಿವೆ. ಒಬ್ಬರಿಗೆ ರೂ. 3000 ರೂಪಾಯಿ (6ರಿಂದ 12 ವರ್ಷದವರಿಗೆ ರೂ.2800) ನಿಗದಿ ಮಾಡಲಾಗಿದೆ.
ಒಟ್ಟಾರೆ ಟೂರ್ ಸಮಯದ ಪೂರ್ಣ ವಿವರ
KSRTC ಬಸ್ ಬೆಂಗಳೂರು ಮೆಜೆಸ್ಟಿಕ್ ನಿಂದ ಹೊರಡಲಿದೆ. ಬೆಂಗಳೂರಿನಿಂದ ರಾತ್ರಿ 22.30 ಗಂಟೆಗೆ ಹೊರಟು ಬೆಳಗ್ಗೆ 05.30ಕ್ಕೆ ಸಾಗರ ತಲುಪುತ್ತದೆ. ನಂತರ ಅಲ್ಲಿನ ಹೋಟೆಲ್‌ನಲ್ಲಿ ಫ್ರೆಶ್ ಅಪ್ ಹಾಗೂ ವಿಶ್ರಾಂತಿ ಪಡೆಯಲು ಬೆಳಗ್ಗೆ 07 ಗಂಟೆವರೆಗೆ ಅವಕಾಶ ಇರುತ್ತದೆ.
Bangalore- Joga Tour Package ನಂತರ ಬೆಳಗ್ಗೆ 7.15ರ ಹೊತ್ತಿಗೆ ತಿಂಡಿ ತಿಂದು ಅಲ್ಲಿಂದ (ಸಾಗರ) ವರದಹಳ್ಳಿಗೆ 0730 ತಲುಪುತ್ತದೆ. ನಂತರ ವರದಹಳ್ಳಿಯಿಂದ 8.30ಕ್ಕೆ ಹೊರಟು 9 ಗಂಟೆಗೆ ವರದಮೂಲ ತಲುಪಲಿದೆ. ನಂತರ ಅರ್ಧ ಗಂಟೆಯ ಆಸು ಪಾಸಿನಲ್ಲಿ ವರದಮೂಲದಿಂದ ಇಕ್ಕೇರಿ, ಇಕ್ಕೇರಿಯಿಂದ ಕೆಳದಿ, ಕೆಳದಿಯಿಂದ ಸಾಗರ ಬರಲಿದೆ.
ಮಧ್ಯಾಹ್ನ ಸಾಗರದಲ್ಲಿ 13.15 ಗಂಟೆವರೆಗೆ ಊಟಕ್ಕೆ ಸಮಯ ನೀಡಲಾಗುತ್ತದೆ. ಊಟದ ಬಳಿಕ ಸಾಗರದಿಂದ ಜೋಗಕ್ಕೆ ಮಧ್ಯಾಹ್ನ 14.15ರ ಹೊತ್ತಿಗೆ ತೆರಳಲಿದೆ. ನಂತರ ಸಂಜೆ ಜೋಗದಿಂದ 18.15 ಹೊರಟು 19 ಗಂಟೆಗೆ ಬಸ್ ಸಾಗರ ತಲುಪಲಿದೆ. ಅಲ್ಲಿ ಒಂದು ಗಂಟೆ ಶಾಪಿಂಗ್ ಗೆ ಸಮಯ ಇರುತ್ತದೆ. ನಂತರ ರಾತ್ರಿ ಊಟ ಮುಗಿಸಿ 22.00 ಗಂಟೆಗೆ ಸಾಗರದಿಂದ ಹೊರಟು ಮರುದಿನ ಬೆಳಗ್ಗೆ 05.00 ಗಂಟೆಗೆ ಬೆಂಗಳೂರು ಬಂದು ಸೇರಲಿದೆ.
ಹುಬ್ಬಳ್ಳಿಯಿಂದಲೂ ಜೋಗಕ್ಕೆ ವಿಶೇಷ ಬಸ್:
ಇದರೊಂದಿಗೆ ಕೆಎಸ್‌ಆರ್‌ಟಿಸಿ ಬೆಂಗಳೂರಿನಿಂದ ಸೋಮನಾಥಪುರ, ತಲಕಾಡು, ಮಧ್ಯರಂಗ, ಭರಚುಕ್ಕಿ, ಗಗನಚುಕ್ಕಿ ಜಲಾಪತಕ್ಕೂ ಟೂರ್ ಪ್ಯಾಕೇಜ್ ಘೋಷಿಸಿದೆ.
ಇದಷ್ಟೇ ಅಲ್ಲದೇ ಹುಬ್ಬಳ್ಳಿಯಿಂದ ವಾಯುವ್ಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಕಳೆದ ಶನಿವಾರ ಮತ್ತು ಭಾನುವಾರ ಜೋಗ ಜಲಪಾತಕ್ಕೆ ಅತಿ ಕಡಿಮೆ ದರದಲ್ಲಿ ಬಸ್ ನಿಯೋಜಿಸಲಾಗಿತ್ತು. ಸಾಮಾನ್ಯ ಮತ್ತು ಎಸಿ ಬಸ್ ಸಹ ಬಿಡಲಾಗಿತ್ತು. ಇದೀಗ ಬೆಂಗಳೂರಿನಿಂದ ಜೋಗ ಜಲಪಾತಕ್ಕೆ ಕೆಎಸ್‌ಆರ್‌ಟಿಸಿ ಬಸ್ ಘೋಷಿಸಿದೆ.