Saturday, August 8, 2026
Saturday, August 8, 2026
Home Blog Page 144

ಶಾಲಾ ವಿದ್ಯಾರ್ಥಿಗಳಿಗೆ ಏಪ್ರಿಲ್ 10 ರತನಕ ಬಸ್ ಪಾಸ್ ಅವಧಿ ವಿಸ್ತರಣೆ

0

ಶಾಲಾ ವಿದ್ಯಾರ್ಥಿಗಳಿಗೆ ನೀಡಿರುವ ಬಸ್‌ ಪಾಸ್‌ ಅವಧಿಯನ್ನು ಏಪ್ರಿಲ್‌ 10ರ ವರೆಗೆ ಕೆಎಸ್‌ಆರ್‌ಟಿಸಿ ವಿಸ್ತರಿಸಿದೆ.

ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಏ. 10ರ ವರೆಗೆ ತರಗತಿಗಳು ಇವೆ. ಪಾಸ್‌ ಅವಧಿ ಮಾರ್ಚ್‌ 31ಕ್ಕೆ ಕೊನೆಗೊಂಡಿದೆ. 10 ದಿನ ಹಣ ಪಾವತಿಸಿ, ಬಸ್‌ಗಳಲ್ಲಿ ಸಂಚರಿಸುವುದು ಕಷ್ಟಸಾಧ್ಯ. ಹೀಗಾಗಿ ಸಾರಿಗೆ ನಿಗಮವು ಒಂದನೇ ತರಗತಿಯಿಂದ 9ನೇ ತರಗತಿಯವರೆಗಿನ ವಿದ್ಯಾರ್ಥಿಗಳು ಅದೇ ಪಾಸ್‌ ತೋರಿಸಿ ಹತ್ತು ದಿನ ಸಂಚರಿಸಲು ಅವಕಾಶ ಕಲ್ಪಿಸಿದೆ.

ಏಪ್ರಿಲ್ 1 ರಿಂದ 15 ವರೆಗೆ ” ಸ್ವಯಂ ಗಣತಿ” ಗೆ ಅವಕಾಶ. ಸಾರ್ವಜನಿಕರಿಗೆ ಇಲ್ಲಿದೆ ಮಾಹಿತಿ

0

ಭಾರತದ ಜನಗಣತಿ-2027ರ ಅಂಗವಾಗಿ
ದಿ: 1-04-2026 ರಿಂದ 15-04-2026 ರವರೆಗೆ
‘ಸ್ವಯಂ ಗಣತಿ’ ಗೆ ಅವಕಾಶ ಕಲ್ಪಿಸಲಾಗಿದೆ.
ಸ್ವಯಂ ಜನಗಣತಿ (Self-Enumeration) ಎಂಬುದು ಡಿಜಿಟಲ್ ಜನಗಣತಿಯ ಒಂದು ಪ್ರಮುಖ ಭಾಗವಾಗಿದೆ.
ಏನಿದು ಸ್ವಯಂ ಜನಗಣತಿ?
ಹಿಂದೆ ಜನಗಣತಿ ಮಾಡುವವರು ಮನೆಗೆ ಬಂದು ಮಾಹಿತಿ ಪಡೆದು ಫಾರಂ ತುಂಬುತ್ತಿದ್ದರು. ಆದರೆ ಈಗ ನಾಗರಿಕರು ತಾವಾಗಿಯೇ ಆನ್‌ಲೈನ್ ಪೋರ್ಟಲ್ ಮೂಲಕ ತಮ್ಮ ಕುಟುಂಬದ ವಿವರಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ. ಇದನ್ನೇ ‘ಸ್ವಯಂ ಜನಗಣತಿ’ ಎಂದು ಕರೆಯಲಾಗುತ್ತದೆ.
ಇದು ಹೇಗೆ ಕೆಲಸ ಮಾಡುತ್ತದೆ?
ನೋಂದಣಿ: ನಾಗರಿಕರು ಜನಗಣತಿಯ ಅಧಿಕೃತ ಪೋರ್ಟಲ್‌ಗೆ ಭೇಟಿ ನೀಡಿ ತಮ್ಮ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಲಾಗಿನ್ ಆಗಬೇಕು.
ಮಾಹಿತಿ ಸಲ್ಲಿಕೆ: ಕುಟುಂಬದ ಸದಸ್ಯರು, ಶಿಕ್ಷಣ, ಉದ್ಯೋಗ, ಮತ್ತು ಮನೆಯ ಸೌಲಭ್ಯಗಳ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿ ಫಾರ್ಮ್ ಭರ್ತಿ ಮಾಡಬೇಕು.
ಕೋಡ್ ಸ್ವೀಕೃತಿ: ನೀವು ಮಾಹಿತಿಯನ್ನು ಸಲ್ಲಿಸಿದ ನಂತರ, ನಿಮ್ಮ ಮೊಬೈಲ್‌ಗೆ ಒಂದು ಉಲ್ಲೇಖ ಸಂಖ್ಯೆ (Reference Number) ಬರುತ್ತದೆ.
ಗಣತಿದಾರರಿಗೆ ಸಲ್ಲಿಕೆ: ಜನಗಣತಿ ಅಧಿಕಾರಿಗಳು (Enumerators) ನಿಮ್ಮ ಮನೆಗೆ ಬಂದಾಗ, ನೀವು ಈ ಉಲ್ಲೇಖ ಸಂಖ್ಯೆಯನ್ನು ಅವರಿಗೆ ನೀಡಿದರೆ ಸಾಕು. ಅವರು ಮತ್ತೆ ಎಲ್ಲ ಪ್ರಶ್ನೆಗಳನ್ನು ಕೇಳುವ ಅಗತ್ಯವಿರುವುದಿಲ್ಲ.
ಕರ್ನಾಟಕದಲ್ಲಿ ಮೊದಲ ಹಂತದ ‘ಮನೆಗಳ ಪಟ್ಟಿ ಮತ್ತು ಮನೆ ಗಣತಿ’ ಪ್ರಕ್ರಿಯೆಯು ದಿನಾಂಕ 16.04.2026 ರಿಂದ 15.05.2026 ರವೆರೆಗೆ ನಡೆಯಲಿದ್ದು
ಒಟ್ಟು 30 ದಿನಗಳ ಕಾಲ ನಡೆಯುವ ಈ ಗಣತಿಯಲ್ಲಿ ಮನೆಗಳ ಸ್ಥಿತಿಗತಿ, ಲಭ್ಯವಿರುವ ಸೌಲಭ್ಯಗಳು ಹಾಗೂ ಆಸ್ತಿಪಾಸ್ತಿಗಳ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ.

ಸ್ವಯಂ ಗಣತಿ ಮಾಡುವ ವಿಧಾನ:
ಅಧಿಕೃತ ಪೋರ್ಟಲ್‌ನಲ್ಲಿ ಮೊಬೈಲ್ ಸಂಖ್ಯೆಯೊಂದಿಗೆ ಲಾಗಿನ್ ಆಗುವುದು.
ನಿಮ್ಮ ಸ್ಥಳವನ್ನು ಆಯ್ಕೆ ಮಾಡಿ, ನಕ್ಷೆಯಲ್ಲಿ ಮನೆಯನ್ನು ಗುರುತಿಸುವುದು.
ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ ಸಬ್ಮಿಟ್ ಮಾಡುವುದು.
ಸಲ್ಲಿಕೆಯ ನಂತರ ಲಭಿಸುವ SE ID(ಎಸ್ಇ ಐಡಿ) ಅನ್ನು ಸುರಕ್ಷಿತವಾಗಿಟ್ಟುಕೊಳ್ಳುವುದು. ಹಾಗೂ ಗಣತಿದಾರರು ಭೇಟಿ ನೀಡಿದಾಗ ಅವರಿಗೆ ತೋರಿಸಬೇಕು.
ಗಣತಿದಾರರು ಮತ್ತು ಮೇಲ್ವಿಚಾರಕರ ಕ್ಷೇತ್ರ ಭೇಟಿ :
ಏಪ್ರಿಲ್ 16ರಿಂದ ಮೇ 15ರವರೆಗೆ ಗಣತಿದಾರರು ಪ್ರತಿಯೊಂದು ಮನೆಗೆ ಭೇಟಿ ನೀಡಲಿದ್ದಾರೆ. ಈಗಾಗಲೇ ಸ್ವಯಂ ಗಣತಿ ಮಾಡಿಕೊಂಡವರು ತಮ್ಮಲ್ಲಿರುವ ಎಸ್ ಇ‌ ಐಡಿ ಅನ್ನು ಗಣತಿದಾರರಿಗೆ ತೋರಿಸಿ ದತ್ತಾಂಶವನ್ನು ಪರಿಶೀಲಿಸಿಕೊಳ್ಳಬಹುದು. ಒಂದು ವೇಳೆ ಸ್ವಯಂ ಗಣತಿ ಮಾಡದಿದ್ದಲ್ಲಿ, ಗಣತಿದಾರರೇ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಹಿತಿಯನ್ನು ಸಂಗ್ರಹಿಸುತ್ತಾರೆ.
ಸಾರ್ವಜನಿಕರು, ಅಧಿಕಾರಿಗಳು, ಮತ್ತು ಸಿಬ್ಬಂದಿಗಳು https://se.census.gov.in ವೆಬ್‌ಸೈಟ್‌ಗೆ ಭೇಟಿ ನೀಡಿ ಸ್ವಯಂ‌ ಗಣತಿಯಲ್ಲಿ ಭಾಗವಹಿಸುಂತೆ ಜಿಲ್ಲಾಡಳಿತ ಕೋರಿದೆ.
ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ತಾಲೂಕು ಆಡಳಿತ, ಸ್ಥಳೀಯ ಸಂಸ್ಥೆ ಅಥವಾ ಜಿಲ್ಲಾಡಳಿತದ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

Klive Special Article ಶ್ರೀಬಿಷ್ಟಪ್ಪಯ್ಯನವರು

0

ಲೇ: ಪ್ರಸಾದ್ ಶ್ರೀವತ್ಸ.

Klive Special Article ಭಾರತವೆಂದರೆ ಅದು ಕೇವಲ ದೇಶವಲ್ಲ ಅದೆಷ್ಟೋ ಅಮೂಲ್ಯ ರತ್ನಗಳ ರತ್ನಾಕರ. ರಾಜಕೀಯ, ಇತಿಹಾಸ, ತರ್ಕ, ಶಾಸ್ತ್ರ, ವೇದ, ಉಪನಿಷತ್ ಹಾಗೆಯೇ ತಾತ್ತ್ವಿಕ ರಾಷ್ಟ್ರ. ಒಮ್ಮೆ ಭಾರತದ ಹಿರಿಮೆಯನ್ನು ಕಂಡು ದೊಡ್ಡ ತಾತ್ವಿಕರಿದ್ದಾರೆ ಎಂದು ಬಂದ ‘ಪಾಲ್ ಬ್ರಂಟನ್‌’ಯಾವುದೇ ಅಧ್ಯಾತ್ಮ‌ ಸಾಧಕರನ್ನು ಕಾಣದೇ, “shit..! Every begger is the saint in india” ಎಂದು ನಿರಾಶನಾಗಿ, ಹಿಂತಿರುಗುವಾಗ ಮಹರ್ಷಿ ರಮಣರನ್ನು ಕಂಡು, ಅವರ ಆಧ್ಯಾತ್ಮಿಕ ಸಂಪತ್ತನ್ನು ಕಂಡು ವಿದೇಶದಲ್ಲಿ ಭವ್ಯ ಭಾರತದ ಆಧ್ಯಾತ್ಮಿಕ ಹಿರಿಮೆಯನ್ನು ಸಾರಿದೆ.

ಅವನು‌ ಹಾಗೆ ಹೇಳಿದ್ದರಲ್ಲಿ ಅರ್ಥವಿದೆ. ಏಕೆಂದರೆ ಭಾರತವು ಆಗ ಆರ್ಥಿಕವಾಗಿ ಬಡರಾಷ್ಟ್ರವಾಗಿತ್ತು. ಬಡತನ ಅಧ್ಯಾತ್ಮದ ತವರು ಎಂಬ ನಾಣ್ಣುಡಿಯಿದೆ. ಅದಕ್ಕೆ ಪೂರಕವಾಗಿ ನಮ್ಮಲ್ಲಿ ಹೆಚ್ಚು ಸಾಧು ಸಂತರು ಕೇವಲ ಕಾಷಾಯಧಾರಿಗಳಾಗಿ, ಕೌಪೀನಧಾರಿಗಳಾಗಿ ಕಂಡರೆ ಇನ್ನೂ ಹಲವರು ಹುಚ್ಚರಂತೆ ಎಲ್ಲರಿಗೆ ಬೈಯ್ಯುತ್ತಾ, ಕೆಲವೊಮ್ಮೆ ಮೌನಿಗಳಾಗಿ, ಅರ್ಥವೇ ಆಗದಂತಹ ಅವಧೂತರು ಕಾಣ ಸಿಗುವುದು ಭಾರತದಲ್ಲಿ ಮಾತ್ರ. ಏಕೆಂದರೆ ಅಲೌಕಿಕ ಸಂಪತ್ತಿನ ಅನಾವರಣವಾಗುವುದು ಇಲ್ಲಿಯೇ…. ಸಹಜವಾಗಿ ಮನುಷ್ಯನಿಗೆ ನಿಜವಾದ ಸಂತೋಷ ಕೊಡುವ ವಸ್ತು ಯಾವುದು ಎಂದರೆ ಹಲವು ಉತ್ತರಗಳು ಬರುತ್ತವೆ.‌ದುಡ್ಡು, ಅಂತಸ್ತು,‌ಅಧಿಕಾರ, ಪದವಿ ಹೀಗೆ ಆದರೆ ಒಂದು ರೀತಿಯಲ್ಲಿ ಇದೆಲ್ಲವೂ ಹಂಗು ಹಾಗೂ ಒಮ್ಮೆ ಇಲ್ಲದಂತಾದಾಗ ದುಃಖ ಸಮುದ್ರದ ಅಲೆಯಂತೆ ಅಪ್ಪಳಿಸಿ ನಮ್ಮನ್ನು ಬೀಳಿಸಿಬಿಡುತ್ತದೆ. ಇದಕ್ಕೆ ಭರತನ ಭ್ರಾತೃತ್ವ, ಪಾಂಡವರ ವನವಾಸ, ಹನುಮನ ಭಕ್ತಿ ಎಲ್ಲವೂ ಒಟ್ಟಿಗೆ ಕಂಡು ದತ್ತ ಅವಧೂತನಿಂದ ಪ್ರಾರಂಭವಾಗಿ, ಸಾವಿರಾರು ಕಂಡರಿಯದ, ಕೇಳರಿಯದ ನಿಗೂಢವಾಸದಲ್ಲಿರುವ ಇಂದಿಗೂ ಸಾವಿರಾರು ವರ್ಷಗಳಿಂದ ಬದುಕಿರುವ ಸಾಧನೆ ಮಾಡುತ್ತಿರುವ ಮುನಿಗಳನ್ನು ನಾವು ಹಿಮಾಲಯದ ತಪ್ಪಲಿನಲ್ಲಿ ಕಾಣಬಹುದು… ಆದರೆ ಅವರನ್ನು ಸಂಧಿಸಲು ನಮ್ಮಿಂದ ಅಸಾಧ್ಯ ಎಂಬ ಮಾತೂ ಕೂಡಾ ಹಲವರಿಂದ ಕೇಳಿದ್ದೇನೆ.

ಈ ಅವಧೂತನೆಂದರೆ ಯಾರು ಎಂದು ನೋಡುತ್ತಿರುವಾಗ ಬ್ರಹ್ಮಾನಂದದಲ್ಲಿ ಯಾವಾಗಲೂ ಜ್ಞಾನಸಿಂಧುವಾಗಿ, ಮಾತನಾಡಿದಲ್ಲಿ ಕೇವಲ ತತ್ತ್ವವಿಚಾರ, ಪ್ರತಿಯೊಬ್ಬರೂ ತಲೆಬಾಗಿ ಅವನಲ್ಲಿ‌ ಜಾಗ್ರತರಾಗುವಂತಹ ಹಾಗೂ ಆಧ್ಯಾತ್ಮಿಕತೆಯೆಲ್ಲ ಪೊಳ್ಳು ಎನ್ನುವವರಿಗೆ ಅರೆಹುಚ್ಚರಂತೆ ಕಾಣುವ, ಉಪನಿಷತ್‌ಗಳಲ್ಲಿ ಬ್ರಹ್ಮ ಎಂದರೇನು ಎಂದು ತಿಳಿಸುವ, ಯಾವಾಗಲೂ ಬಾಲ-ಭಾವದಲ್ಲಿರುವ, ತನ್ನ ಮುಗ್ಧ ನಗೆಯಿಂದ ಜಗತ್ತು ಸೆಳೆಯುತ್ತಾ ತಮ್ಮ ದೇಹದ ಅಸ್ತಿತ್ವ ಹೋದ‌ ಮೇಲೆಯೂ ಪ್ರಭಾವ ಬೀರುವವರು.

ಮೊದಲಿನಿಂದ ನನ್ನ ಅಪ್ಪನೊಡನೆ ಬೆಳೆದ ನಾನು ಆಗಾಗ ಅವರು ತಿಳಿಸುತ್ತಿದ್ದ, ಅವರ ಗುರುಗಳ ಬಗ್ಗೆ ಕೇಳಿದ್ದೆ. ಆಗ ನಾನಿನ್ನೂ ಹತ್ತು-ಹನ್ನೆರಡು ವಯಸಿನವನಾದ್ದರಿಂದ ನನಗೆ ಅದರ ಅರ್ಥವಾಗಿರಲಿಲ್ಲ. ಅವರೊಟ್ಟಿಗೆ ಹಸು ಮೇಯಿಸಲು ಹೋಗುತ್ತಿದ್ದುದು ಕೂಡಾ ಅಧ್ಯಾತ್ಮ ಲೋಕದ ಹಲವಾರು ಅಚ್ಚರಿಗಳನ್ನು ತಿಳಿಯಲೇ ಎಂದರೆ ತಪ್ಪಾಗಲಾರದು. ಹೀಗಿರುವಾಗ ಒಮ್ಮೆ ಅವರು ಅವರ ಸ್ನೇಹಿತರಿಗೆ ಅವಧೂತ ಬಿಷ್ಟಪ್ಪಯ್ಯನವರ ಬಗ್ಗೆ ಮಾತನಾಡಿದ್ದು ಕೇಳಿದೆ.

ಈಗಿನ ರಾಯಲ ಸೀಮೆ ಅಥವಾ ಸೀಮಾಂಧ್ರದ ಗಡಿಯ ಹದಿನಾಲ್ಕು ಹಳ್ಳಿಗಳ ಒಡೆಯರಾಗಿದ್ದ ಅವರು. ಜೀವನ ಶೈಲಿಯಲ್ಲಿ ಮಹಾರಾಜನನ್ನೂ ಮೀರಿಸುವವರು. ಸ್ವಾತಂತ್ರ್ಯ ಪೂರ್ವದಲ್ಲಿ ಅವರಿಗಿದ್ದ ಆಸ್ತಿಗಳನ್ನು ಕೇಳಿದರೆ ಇಂದಿನ ವಿಶ್ವದ ಬಿಲೇನಿಯರ್ ಕೂಡಾ ಅವರ ಸರಿಸಮಾನವಿಲ್ಲ. ಐದು ಸಾವಿರ ಕುರಿಗಳು, ಒಂದು-ಒಂದೂವರೆ ನೂರು ಹಸುಗಳು, ಸುಮಾರು ಮೂರು ಸಾವಿರ‌ ಎಕರೆ ಭೂಮಿಯ ಒಡೆಯರು. ಮೂರು ಅಂತಸ್ತಿನ ಮಾಳಿಗೆ ಮನೆ, ಹತ್ತಾರು ಆಳುಕಾಳು, ಸುಖವಾದ ಸಂಸಾರ. ಅಷ್ಟೇ ದಾನ-ಧರ್ಮ ಕೂಡಾ ಅಲ್ಲಿ ನಡೆಯುತ್ತಿತ್ತು. ಹೀಗೇ ಅವರ ದರ್ಬಾರ ನಡೆಯುತ್ತಿರಲು ಒಂದು ದಿನ ಇದ್ದಕ್ಕಿದ್ದಂತೆ ಅವರ ಕುರಿ ಮತ್ತು ಹಸುಗಳು ಅಷ್ಟೂ ಸತ್ತು ಹೋಗುತ್ತವೆ. ಇದರ ವ್ಯಾಕುಲತೆಯಲ್ಲಿದ್ದಾಗಲೇ ಅವರ ತೋಟ, ಗದ್ದೆಗಳು ಹಾಳಾಗುತ್ತವೆ. ಅಂಥ ಸಂದರ್ಭದಲ್ಲಿ ಅವರು ತಮ್ಮ ಮನೆಯಲ್ಲಿ ಊಟ ಮುಗಿಸಿ ಚಿಂತಾಕ್ರಾಂತರಾಗಿ ತೂಗುಯ್ಯಾಲೆಯ ಮೇಲೆ ಕುಳಿತಿದ್ದಾಗ, ಅವರ ಪತ್ನಿ ತಾಂಬೂಲವನ್ನು ಅವರಿಗೆ ನೀಡುತ್ತಿದ್ದರು. ಮಧ್ಯಾಹ್ನ 12-12.30 ರ ಸಮಯ. ಮನೆ ಬಾಗಿಲಿಗೆ ಒಬ್ಬ ದಾಸಯ್ಯ ಬರುತ್ತಾನೆ. ಸಾಮಾನ್ಯವಾಗಿ ಅವರು ಇತ್ತೀಚೆಗೆ ಬರುವುದಿಲ್ಲ. ಹಾಗೂ ಎಲ್ಲಿಯೂ ಕಾಣ ಸಿಗುವುದಿಲ್ಲ. ಬಂದ ದಾಸಯ್ಯ ಗೋವಿಂದ ಕೀರ್ತನೆಯನ್ನು ಹಾಡುತ್ತಾನೆ ” ಮಂಚ ಬಾರದು ಮಡದಿ ಬಾರಳು ಕಂಚು ಕನ್ನಡಿ ಬಾರದು. ಸಂಚಿತಾರ್ಥದ ಧನವು ಬಾರದು ಮುನ್ನ ಮಾಡಿದ ಕರ್ಮವು- ಗೋವಿಂದ ಹರಿ ಗೋವಿಂದ ಗೋವಿಂದ ನಾರಾಯಣ ” ಎಂದು ಹಾಡಿದ ತಕ್ಷಣ ಬಿಷ್ಟಪ್ಪಯ್ಯನವರು ಎಚ್ಚರಾಗಿ. ಇನ್ನೊಮ್ಮೆ ಹೇಳಲು ದಾಸಯ್ಯ ಹಾಡಿದ ಇದೇ ರೀತಿ ಮೂರು-ನಾಲ್ಕು ಬಾರಿ ಹಾಡಿಸಿ ಪತ್ನಿಗೆ ಹೇಳಿದರು “ಅವನಿಗೆ ಏನಾದರೂ ಕೊಡು” ಐಶ್ವರ್ಯವಂತರಿಗೆ ಬರವೇ…? ಯಥೇಚ್ಚ ಭಿಕ್ಷೆ ನೀಡಿದರು. ಅವನು‌ ಮುಂದೆ ಹೋದ.

Klive Special Article ನಂತರ ಇವರು ಒಮ್ಮೆ ” ಮಂಚ ಬಾರದು ಮಡದಿ ಬಾರಳು ಕಂಚು ಕನ್ನಡಿ ಬಾರದು ” ಎನ್ನುತ್ತಾ ಮನೆಯನ್ನೂ, ಒಡವೆ ವಸ್ತುಗಳನ್ನೂ ನೋಡಿ ತಲೆಕೊಡವಿ ನಕ್ಕು, ಅವರ‌ ಕೈ-ಕೊರಳಿನಲ್ಲಿದ್ದ ಎಲ್ಲ ವಸ್ತುಗಳನ್ನೂ ಬಿಚ್ಚಿಟ್ಟು, ” ಸಂಚಿತಾರ್ಥದ ಧನವು ಬಾರದು ಮುನ್ನ ಮಾಡಿದ ಕರ್ಮವು” ಎನ್ನುತ್ತಾ ಜೇಬಿನಲ್ಲಿದ್ದ ದುಡ್ಡನ್ನು ಕೆಳಗಿಟ್ಟು ” ಗೋವಿಂದ ಹರಿ ಗೋವಿಂದ ಗೋವಿಂದ ನಾರಾಯಣ ” ಎಂದು ನಾನಸ್ಮರಣೆ ಮಾಡುತ್ತಾ ಹೊರಟು ಹೋದವರು ಮತ್ತೆ ಮನೆಗೆ ಬರಲೇ ಇಲ್ಲ. ದೊಡ್ಡ ಅವಧೂತರಾಗಿ ಹಲವರಿಗೆ ಮನೋಭೀಷ್ಟಗಳನ್ನೀಡೇರಿಸಿದರು.

ಭಾಗವತದಲ್ಲಿ ಉದ್ಧವನಿಗೆ ” ಯಸ್ಯಾನುಗ್ರಹಮಿಚ್ಛಾಮಿ ತಸ್ಯ ಸರ್ವಂ ಹರಾಮ್ಯಹಮ್ ” ಎಂದು ಕೃಷ್ಣನು ತಿಳಿಸುತ್ತಾನೆ. ಆದ್ದರಿಂದ ಕಷ್ಟಗಳು ಬರುವಾಗ ಭಗವಂತನ ನೆನಪಾಗಬೇಕು, ಅವನಿಗೆ ಹತ್ತಿರವಾಗಬೇಕು ಎಂಬುದು ನಮ್ಮ ಬುದ್ಧಿಗೆ ಗೋಚರವಸಗಬೇಕು. ಅವಧೂತರಲ್ಲಿಯೂ ಹೊಟ್ಟೆಪಾಡಿನವರು ಬಹಳ ಕಾಣಿಸುತ್ತಾರೆ. ಮೋಸ ಹೋಗುವ ಸಾಧ್ಯತೆಯಿರುತ್ತದೆ. ಆದ್ಧರಿಂದ ಅವಧೂತರೆಂದು ನಂಬಿ ಹೋಗುವ ಮೊದಲು ಅವಧೂತರು ಹೇಗಿರುತ್ತಾರೆ ಎಂದು ತಿಳಿದು ನಂತರ ಹೆಜ್ಜೆಯಿಡಬೇಕು. ಅದರ ಅನುಭವವಾದ ಮೇಲೆಯೇ ನಾನು ಕೂಡಾ ನಂಬಿದ್ದೇನೆ..

B.Y. Vijayendra ದಾವಣಗೆರೆ ಚುನಾವಣೆ: ಬಿಜೆಪಿ ಅಭ್ಯರ್ಥಿಗೇ ಗೆಲುವು- ಬಿ.ವೈ.ವಿಜಯೇಂದ್ರ.

0

B.Y. Vijayendra  ಶಿವಮೊಗ್ಗದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದರು.

ಬಾಗಲಕೋಟೆ, ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ನಡೀತಿದೆ.
ಏಪ್ರಿಲ್ 9 ಕ್ಕೆ ಮತದಾನ ನಡೆಯಲಿದೆ.
ಕಳೆದ ಒಂದು ವಾರದಿಂದ ಬಾಗಲಕೋಟೆ ನಗರ ಗ್ರಾಮಾಂತರ ಭಾಗದಲ್ಲಿ ಪ್ರವಾಸ ಮಾಡಿದ್ದೇನೆ ಎಂದರು.

ಎಲ್ಲಾ ಮುಖಂಡರ ಜೊತೆ ಪ್ರವಾಸ ಮಾಡಿದ್ದೇನೆ. ನಮ್ಮ ಅಭ್ಯರ್ಥಿ ವೀರಣ್ಣ ಚರಂತಿಮಠ ಗೆಲ್ತಾರೆ.
ನೂರಕ್ಕೆ ನೂರು ವಿಶ್ವಾಸವಿದೆ.
ದಾವಣಗೆರೆ ದಕ್ಷಿಣ ಕ್ಷೇತ್ರವೂ ಬಿಜೆಪಿಯ ಐತಿಹಾಸಿಕ ಗೆಲುವು ಸಾಕ್ಷಿಯಾಗುತ್ತೆ ಎಂದು ಹೇಳಿದರು.

ಕಾಂಗ್ರೆಸ್ ಅಲ್ಪಸಂಖ್ಯಾತರಿಗೆ ಮೋಸ ಮಾಡಿರೋದು ಮನವರಿಕೆ ಅಗಿದೆ.
ಬೇರೆ ಬೇರೆ ಕಾರಣಕ್ಕೆ ದಾವಣಗೆರೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ತಾರೆ. ಸಿದ್ದರಾಮಯ್ಯ ಅವರ ಹತಾಶೆಯಲ್ಲೇ ಗೊತ್ತಾಗುತ್ತೆ.
ವಿಜಯೇಂದ್ರ ಸಫಲರಾಗಲ್ಲ ಎಂದು ಸಿಎಂ ಹೇಳಿದ್ದಾರೆ ಎಂದು ತಿಳಿಸಿದರು.

B.Y. Vijayendra ನಾನು ಸಫಲ ಅನ್ನೋದಕ್ಕಿಂತ ಕಾರ್ಯಕರ್ತರು- ಮುಖಂಡರ ಶ್ರಮ ಇದೆ. ಸಿಎಂ ಸಿದ್ದರಾಮಯ್ಯ ಕೂಡ ಭಯಭೀತರಾಗಿದ್ದಾರೆ.
ಗ್ಯಾರಂಟಿಗಳ ಬಗ್ಗೆ ಸಿಎಂ ಗೆ ಭರವಸೆ ಹೋಗಿದೆ.ಬಾಗಲಕೋಟೆಯಲ್ಲೂ 15 ಕ್ಕೂ ಹೆಚ್ಚು ಸಚಿವರು ಸೂಟ್ ಕೇಸ್ ಸಹಿತ ಬಂದಿದ್ದಾರೆ. ದಾವಣಗೆರೆಯಲ್ಲೂ ಬಂದು ಹೋಗಿ ಆಗಿದೆ. ಇದು ಯಾವುದೇ ಕಾರಣಕ್ಕೂ ಮತದಾರರ ಮೇಲೆ ಪರಿಣಾಮ ಬೀರಲ್ಲ. ಎರಡು ಕ್ಷೇತ್ರದಲ್ಲೂ ಬಿಜೆಪಿ ಗೆಲ್ಲುತ್ತೇ.
ಬಾಗಲಕೋಟೆಯಲ್ಲಿ ಬಿಜೆಪಿ ಗೆದ್ದಾಗಿದೆ. ನಮ್ಮ ಅಭ್ಯರ್ಥಿ ಅಂತರ ಹೆಚ್ಚಾಗುತ್ತೇ ಅಂದ್ರೇ ಆಗಲಿ ಬಿಡಿ.
ಕಾಂಗ್ರೆಸ್ ನವರು ಸಹಾಯ ಮಾಡ್ತಿದ್ದಾರೆ. ಯಾರು ಬಂದ್ರೂ ಸ್ವಾಗತ ಮಾಡ್ತೇನೆ ಎಂದು ತಿಳಿಸಿದರು.

ಹೊರಗಡೆ ಮೈಕ್, ಸಾರ್ವಜನಿಕ ಸಭೆಯಲ್ಲಿ ಏನು ಬೇಕಾದ್ರೂ ಹೇಳಬಹುದು. ಸದನದಲ್ಲಿ ಹೇಳುವ ಎದೆಗಾರಿಕೆ ಇಲ್ಲ. ಬಿಜೆಪಿ ಎಷ್ಟು ಕೇಳಿದ್ರೂ ಸದನದಲ್ಲಿ ಹೇಳಲಿಲ್ಲ.
ಸಿಎಂ ಇರ್ತಾರಾ, ಬದಲಾಗ್ತಾರ ಗೊತ್ತಿಲ್ಲ. ಸಿಎಂ ಇದ್ದರೂ, ಬದಲಾದರೂ ರಾಜ್ಯದ ಆರ್ಥಿಕ ಸ್ಥಿತಿ ಬದಲಾಗಲ್ಲ. ಚುನಾವಣೆ ಫಲಿತಾಂಶ ಸರ್ಕಾರಕ್ಕೆ ಪರಿಣಾಮ ವಿಚಾರ.
ಎರಡು ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲೋದು ಶತಸಿದ್ಧ.ಸರ್ಕಾರಕ್ಕೆ ಯಾವ ರೀತಿ ಪರಿಣಾಮ ಬರುತ್ತೇ ಅಂತ ನಾನು ಹೇಳಲ್ಲ ಎಂದು ಹೇಳಿದರು.

Drinking water supply ಗಮನಿಸಿ!.ಏಪ್ರಿಲ್ 4 & 5 ರಂದುಶಿವಮೊಗ್ಗ ನಗರದಲ್ಲಿ ಹಲವೆಡೆ ನೀರು ಸರಬರಾಜು ವ್ಯತ್ಯಯ.

0

Drinking water supply ನಗರದ ಕೃಷ್ಣರಾಜೇಂದ್ರ ಜಲಶುದ್ಧೀಕರಣ ಘಟಕಕ್ಕೆ ವಿದ್ಯುತ್ ಸರಬರಾಜು ಮಾಡುವ 110/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ದುರಸ್ತಿ ಮತ್ತು ನಿರ್ವಹಣಾ ಕಾರ್ಯ ಹಮ್ಮಿಕೊಳ್ಳಲಾಗಿದ್ದು, ಈ ಹಿನ್ನೆಲೆಯಲ್ಲಿ ಏಪ್ರಿಲ್ ೪ ಮತ್ತು ೫ ರಂದು ನಗರದ ದೈನಂದಿನ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಮೆಸ್ಕಾಂ ವತಿಯಿಂದ ಅಂದು ವಿದ್ಯುತ್ ನಿಲುಗಡೆ ಮಾಡಲಾಗುತ್ತಿದ್ದು, ಜಲಶುದ್ಧೀಕರಣ ಘಟಕದ ಕಾರ್ಯನಿರ್ವಹಣೆಗೆ ಅಡಚಣೆಯಾಗಲಿದೆ. ಇದರಿಂದಾಗಿ ಅಂದು ನಗರದಾದ್ಯಂತ ಸಾರ್ವಜನಿಕರಿಗೆ ಪೂರೈಕೆಯಾಗುವ ನೀರಿನ ಪ್ರಮಾಣದಲ್ಲಿ ಏರುಪೇರಾಗಲಿದ್ದು, ಸಾರ್ವಜನಿಕರು ಮುನ್ನೆಚ್ಚರಿಕೆಯಾಗಿ ಅಗತ್ಯವಿರುವ ನೀರನ್ನು ಸಂಗ್ರಹಿಸಿಟ್ಟುಕೊಂಡು ಮಂಡಳಿಯೊಂದಿಗೆ ಸಹಕರಿಸಬೇಕೆಂದು ಸಹಾಯಕ ಕಾರ್ಯಪಾಲಕ ಅಭಿಯಂತರರು ಕೋರಿದ್ದಾರೆ.

World Water Day ಪ್ರಕೃತಿಯನ್ನು ಅನುಸರಿಸಿ ಬದುಕಿದರೆ ಉತ್ತಮ ಆರೋಗ್ಯ ಜೀವನ-ಜಿ.ಎ. ಮಂಜುನಾಥ್.

0

World Water Day ಪ್ರಕೃತಿಯನ್ನು ಅನುಸರಿಸಿ ಬದುಕಿದಲ್ಲಿ ಉತ್ತಮ ಆರೋಗ್ಯ, ಜೀವನ‌ ಹಾಗೂ ಸಮತೋಲನ ಸಾಧ್ಯವಾಗುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಮಂಜುನಾಥ ಜಿ ಎ ತಿಳಿಸಿದರು.

ಜಿಲ್ಲಾ ನ್ಯಾಯಾಂಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ ಜಿಲ್ಲಾ ವಕೀಲರ ಸಂಘದ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ‘ವಿಶ್ವ ಜಲ ದಿನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಕೃತಿಯಲ್ಲಿ ಎಲ್ಲವೂ ಮಿಳಿತವಾಗಿದೆ. ಅದನ್ನರಿತು ನಾವು ಬದುಕಬೇಕು.‌ ಪ್ರಕೃತಿಯಲ್ಲಿ ಅನೇಕ ಚಮತ್ಕಾರಗಳಿವೆ. ಪ್ರಾಣಿ, ಪಕ್ಷಿ ಸೇರಿದಂತೆ ಎಲ್ಲ ರೀತಿಯ ಜೀವ ಸಂಕುಲ ನಮ್ಮ ಜೀವನದ ಮುಖ್ಯ ಭಾಗವಾಗಿದ್ದು, ಇದನ್ನು‌ ಸಮತೋಲನವಾಗಿಟ್ಟುಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ ಎಂದ ಅವರು
ಕುಟುಂಬವನ್ನು ಚೆನ್ನಾಗಿ ಇಟ್ಟುಕೊಳ್ಳುವುದು ಕೂಡ ಪ್ರಕೃತಿ ಎಂದರು.

ಪ್ರಾಣಿ, ಪಕ್ಷಿಗಳಿಗೆ ಕುಡಿಯುವ ನೀರಿನ್ನು ಸಮರ್ಪಕವಾಗಿ ಒದಗಿಸಬೇಕು. ಪ್ರಾಣಿ, ಪಕ್ಷಿಗಳಿಗೆ ನೀರಿನ ಸೌಲಭ್ಯ ಒದಗಿಸುವುದು ಪುಣ್ಯದ ಕೆಲಸ‌ ಎಂದು ತಿಳಿಸಿದರು.

World Water Day ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಜಿ.ಆರ್.ರಾಘವೇಂದ್ರ ಮಾತನಾಡಿ, ನೀರು ನಮ್ಮೆಲ್ಲರ ಜೀವನಾಡಿಯಾಗಿದ್ದು, ಮನುಷ್ಯ, ಪ್ರಾಣಿ, ಪಕ್ಷಿ ಸಂಕುಲದೊಂದಿಗೆ
ಆಹಾರ ಉತ್ಪಾದಿಸುವ
ರೈತಾಪಿ ವರ್ಗಕ್ಕೆ ನೀರಿನ ಅನುಕೂಲ‌ ಮಾಡಿಕೊಡಬೇಕು. ನೀರಿನ ಪ್ರಾಮುಖ್ಯತೆಯನ್ನು ಎಲ್ಲರೂ ಅರಿತುಕೊಂಡು ಮಿತವಾಗಿ ಬಳಕೆ ಮಾಡಬೇಕು. ಈ ಕ್ಷಣದಿಂದಲೇ ಈ‌ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗೋಣ ಎಂದು‌ ಕರೆ ನೀಡಿದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಂತೋಷ್ ಎಂ ಎಸ್ ಪ್ರಾಸ್ತಾವಿಕವಾಗಿ‌ಮಾತನಾಡಿ‌, ಭೂಮಿ‌ ಮೇಲೆ ಲಭ್ಯವಿರುವ ಶೇ. 97 ರಷ್ಟು ನೀರಿನಲ್ಲಿ‌ ಕುಡಿಯಲು ಯೋಗ್ಯವಿರುವುದು ಕೇವಲ
ಶೇ.1.5 ರಷ್ಟು. ಈ ನೀರು ಅತ್ಯಮೂಲ್ಯವಾಗಿದ್ದು ಮಾನವರು ಸದ್ಬಳಕೆ ಮಾಡಿಕೊಂಡು ನಮ್ಮೊಂದಿಗೆ ಸಹ ಜೀವನ ಮಾಡಿಕೊಂಡಿರುವ ಪ್ರಾಣಿ, ಪಕ್ಷಿಗಳಿಗೆ ಸಹ ಒದಗಿಸಬೇಕು.
ನಮ್ಮ‌ಜಿಲ್ಲೆಯಲ್ಲಿ‌ನೀರಿನ ಅಭಾವ ಇಲ್ಲ. ಆದರೆ ಸರಿಯಾದ ಸದ್ಬಳಕೆ ಆಗಬೇಕಿದೆ. ಕುಡಿಯುವ ನೀರಿನ‌ ನಲ್ಲಿಗಳಿಗೆ ಮೀಟರ್ ಬಳಕೆ ಮಾಡಿದಲ್ಲಿ ನೀರನ್ನು‌ ಮಿತವಾಗಿ ಖರ್ಚು ಮಾಡಬಹುದು ಎಂದರು.

2015 ರಲ್ಲಿ ಹಸ್ತಿಮಲ್ ಜೈನ್ ಎಂಬುವವರು ವಾಟರ್ ಫಾರ್ ವಾಯ್ಸ್ ಲೆಸ್ ಎಂಬ ಸಂಸ್ಥೆ ಸ್ಥಾಪನೆ ಮಾಡಿ , ಈ ಮೂಲಕ ಪ್ರಾಣಿ, ಪಕ್ಷಿ ಗಳಿಗೆ ಅವಶ್ಯಕವಾದ ನೀರಿನ್ನು ಒದಗಿಸುವ ಬಗ್ಗೆ ಜಾಗೃತಿ ಮೂಡಿಸತ್ತಾ ಬಂದಿದ್ದಾರೆ ಎಂದರು.
ಬೆಂಗಳೂರಿನ ವಾಟರ್ ಆಫ್ ವಾಯ್ಸ್ ಲೆಸ್ ಸಂಸ್ಥೆ ಸಹ ಸಂಸ್ಥಾಪಕ ಪ್ರಫುಲ್ ಮೋನ್ ರವರು ಪ್ರಾಣಿ, ಪಕ್ಷಿಗಳ ನೀರಿನ ಅವಶ್ಯಕತೆ, ನೀರಿಗಾಗಿ ಅವುಗಳು ಎದುರಿಸುತ್ತಿರುವ ಸಮಸ್ಯೆಗಳು, ಸಂಘರ್ಷಗಳು ಮತ್ತು ಕೈಗೊಳ್ಳಬಹುದಾದ ಕ್ರಮಗಳ ಕುರಿತು ಪಿಪಿಟಿ ಪ್ರದರ್ಶನ ಮೂಲಕ ತಿಳಿಸಿಕೊಟ್ಟರು.

ವಾಟರ್ ಆಫ್ ವಾಯ್ಸ್ ಲೆಸ್ ಸಂಸ್ಥೆ ಸಾರ್ವಜನಿಕ ಸಂಪರ್ಕ ಅಧಿಕಾರಿಗಳಾದ ಅಮಿ ಫ್ರಫುಲ್ ಮೋನ್, ಸುಪ್ರಿಯಾ ಮಾತನಾಡಿ, ಸಂಸ್ಥೆಯು ಪ್ರಾಣಿ, ಪಕ್ಷಿಗಳಿಗೆ ಹೇಗೆ ನೀರು ಒದಗಿಸುತ್ತಿದೆ ಎಂಬುದನ್ನು‌ ವಿವರಿಸಿ, ಈ ಬಗ್ಗೆ ತರಬೇತಿ‌ ನೀಡಿದರು.
ಕಾರ್ಯಕ್ರಮದಲ್ಲಿ ವಕೀಲರು ಹಾಜರಿದ್ದರು.

Hanuman Jayanti ಪಾರಂಪರಿಕ ಶ್ರದ್ದಾಭಕ್ತಿಗಳಿಂದ ದಾವಣಗೆರೆಯಲ್ಲಿ ಹನುಮ ಜಯಂತಿ

0

Hanuman Jayanti  ದಾವಣಗೆರೆ.ಏ.2. ನಗರದ ಜಯದೇವ ವೃತ್ತದಲ್ಲಿರುವ ಅಧ್ಯಾತ್ಮ ಮಂದಿರದಲ್ಲಿ ಶ್ರೀ ಹನುಮ ಜಯಂತಿಯು ಮಂಡಲಯುಕ್ತ ಹೋಮ, ಷೋಡಶೋಪಚಾರ ಪೂಜಾ ಸಹಿತ ಪಾರಂಪರಿಕ ಶ್ರದ್ಧಾಭಕ್ತಿಗಳೊಂದಿಗೆ ನೆರವೇರಿತು.ರಾಜನಹಳ್ಳಿ ಹರಿಹರಪ್ಪ ಟ್ರಸ್ಟಿನ ಶ್ರೀಧರ ಶ್ರೇಷ್ಠಿ, ಗೀತಾ ಶ್ರೀಧರ್, ಶಿವರಾಮ ಶ್ರೇಷ್ಠಿ, ಆರ್. ಜಿ. ದತ್ತರಾಜ್, ರವೀಂದ್ರ ಶ್ರೇಷ್ಠಿ, ಕಾಸಲ ಕೃಷ್ಣಮೂರ್ತಿ, ಮಂಜಣ್ಣ, ಹುಚ್ಚೂರಾಯಪ್ಪ, ಪಳವಳ್ಳಿ ಬಾಬು ಮುಂತಾದವರಲ್ಲದೇ ಹಿರಿಯ ಪತ್ರಕರ್ತ ಡಾ.ಎಚ್ ಬಿ ಮಂಜುನಾಥ ವಿಶೇಷ ಆಹ್ವಾನಿತರಾಗಿದ್ದರು. ವೇದಮೂರ್ತಿಗಳಾದ ಪ್ರದೀಪ್, ಶಿವರಾಮ ಶಾಸ್ತ್ರಿ ಮುಂತಾದವರು ಋತ್ವಿಜರಾಗಿದ್ದರು.

Shivamogga Minority Welfare Department ಜಿಲ್ಲೆಯಲ್ಲಿನ ಬೌದ್ಧವಿಹಾರಗಳ ಧಮ್ಮಾಚಾರಿಗಳಿಗೆ ಮಾಸಿಕ ಗೌರವಧನ ಬಗ್ಗೆ ಸರ್ಕಾರದ ಪ್ರಕಟಣೆ.

0

Shivamogga Minority Welfare Department ಶಿವಮೊಗ್ಗ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಜಿಲ್ಲೆಯಲ್ಲಿರುವ ನೊಂದಾಯಿತ ಬೌದ್ಧ ವಿಹಾರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಧಮ್ಮಾಚಾರಿಗಳು ಮತ್ತು ಸಹಾಯಕ ಧಮ್ಮಾಚಾರಿಗಳಿಗೆ ಮಾಸಿಕ ಗೌರವಧನವನ್ನು ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಅರ್ಜಿ ನಮೂನೆಯನ್ನು ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಬೌದ್ದ ವಿಹಾರ ನೊಂದಣಿ ಪ್ರತಿ, ಆಡಳಿತ ಮಂಡಳಿಯ ಪ್ರತಿ, ಧಮ್ಮಾಚಾರಿಗಳ ಭಾವಚಿತ್ರ, ನಿವಾಸ ದೃಢೀಕರಣ, ಬ್ಯಾಂಕ್ ಖಾತೆ ವಿವರ, ಆಧಾರ್ ಕಾರ್ಡ್ ಪ್ರತಿ, ಸೇವಾ ದೃಢಿಕರಣ ಪತ್ರ ಹಾಗೂ ಧಾರ್ಮಿಕ ವಿದ್ಯಾರ್ಹತೆ ಕುರಿತು ಅಗತ್ಯ ದಾಖಲೆಗಳೊಂದಿಗೆ ಏ.09 ರೊಳಗಾಗಿ ಸಲ್ಲಿಸುವಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.

Shivamogga Minority Welfare Department ಹೆಚ್ಚಿನ ಮಾಹಿತಿಗಾಗಿ ದೂ.ಸಂ:08182-220206 , ಅಲ್ಪಸಂಖ್ಯಾತರ ಜಿಲ್ಲಾ ಮಾಹಿತಿ ಕೇಂದ್ರ ಶಿವಮೊಗ್ಗ-7676888388, ಅಲ್ಪಸಂಖ್ಯಾತರ ತಾಲೂಕು ಮಾಹಿತಿ ಕೇಂದ್ರ, ಭದ್ರಾವತಿ-9538853680, ತೀರ್ಥಹಳ್ಳಿ-8861982835, ಸೊರಬ-9513815513, ಶಿಕಾರಿಪುರ-7829136724, ಹೊಸನಗರ-9008447029, ಸಾಗರ-7338222907 ಗಳನ್ನು ಸಂಪರ್ಕಿಸುವುದು.

Sandalwood Trees ಶಿವಮೊಗ್ಗದ ಎಲ್ ಬಿ ಎಸ್ ನಗರದಲ್ಲಿ ಶ್ರೀಗಂಧ ಮರ ಕಡಿತಲೆ. ಕ್ರಮ ಕೈಗೊಳ್ಳಲು ನಿವಾಸಿಗಳ ಆಕ್ರೋಶ.

0

Sandalwood Trees ಶಿವಮೊಗ್ಗ ಎಲ್‌ಬಿಎಸ್ ನಗರದಲ್ಲಿರುವ ಶ್ರೀ ಚೌಡೇಶ್ವರಿ ದೇವಾಲಯದ ಆವರಣದಲ್ಲಿದ್ದ ಶ್ರೀಗಂಧದ ಮರವನ್ನು ಯಾರೋ ಕಳ್ಳರು ಕಡಿದು ಕದ್ದೊಯ್ದಿದ್ದಾರೆ. ಘಟನೆ ನಡೆದು ಎರಡು ದಿನಗಳು ಕಳೆದರೂ ಇದುವರೆಗೂ ಅರಣ್ಯ ಇಲಾಖೆಯವರು ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲಿಸಿ ದುಷ್ಕರ್ಮಿಗಳನ್ನು ಬಂಧಿಸದಿದ್ದಲ್ಲಿ ದೇವಸ್ಥಾನದ ಕಮಿಟಿಯ ಅಧ್ಯಕ್ಷ ರಾಮಣ್ಣ ಹಾಗೂ ಮತ್ತಿತರರು ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ.

DVS College of Arts, Science and Commerce ಭೌತಿಕ ಅವಶೇಷಗಳು ಮತ್ತು ಉತ್ಖನನ ಲಭ್ಯ ಮಾಹಿತಿಗಳಿಂದ ಮಾನವನ ಇತಿಹಾಸ, ಸಂಸ್ಕೃತಿ ಅಧ್ಯಯನ- ಡಾ.ಟಿ.ಮಂಜುನಾಥ್.

0

DVS College of Arts, Science and Commerce ಮಾನವನ ಇತಿಹಾಸ ಮತ್ತು ಸಂಸ್ಕೃತಿಯನ್ನು ಭೌತಿಕ ಅವಶೇಷಗಳಾದ ಉತ್ಖನನಗೊಂಡ ವಸ್ತುಗಳು, ಶಾಸನಗಳು, ನಾಣ್ಯಗಳು ಮತ್ತು ಸ್ಮಾರಕಗಳ ಮೂಲಕ ವೈಜ್ಞಾನಿಕವಾಗಿ ಅಧ್ಯಯನ ಮಾಡುವುದೇ ಪ್ರಾಕ್ತನಶಾಸ್ತç ಎಂದು ತರೀಕೆರೆ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಟಿ.ಮಂಜುನಾಥ್ ಹೇಳಿದರು.

ದೇಶೀಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಇತಿಹಾಸ ವಿಭಾಗದ ವತಿಯಿಂದ “ಪ್ರಾಕ್ತನಶಾಸ್ತ್ರ ಪರಿಚಯ” ವಿಷಯದ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಪುರಾತನ ವಿಧಾನಗಳ ಅಧ್ಯಯನದಿಂದ ಮಾನವನ ಇತಿಹಾಸ, ಸಂಸ್ಕೃತಿ ಮತ್ತು ವಿಕಾಸ ಅರ್ಥ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಪ್ರಾಕ್ತನ ಶಾಸ್ತ್ರದ ವೈಜ್ಞಾನಿಕ ವಿಧಾನಗಳ ಮೂಲಕ ಗತಕಾಲದ ಮಾನವನ ಸಾಂಸ್ಕೃತಿಕ ಚಟುವಟಿಕೆಗಳು, ಮಾನವನ ಬೆಳವಣಿಗೆಗಳು ಹಾಗೂ ಉತ್ಖನನದ ವಿಧಾನಗಳ ಕುರಿತು ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿ ನೀಡಿದರು.

ಕುವೆಂಪು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಲಕ್ಷ್ಮೀಕಾಂತ ಚಿಮನೂರು ಕಾರ್ಯಕ್ರಮ ಉದ್ಘಾಟನೆಯನ್ನು ನೆರವೇರಿಸಿದರು.

DVS College of Arts, Science and Commerce ವಿದ್ಯಾರ್ಥಿಗಳು ವಿಶೇಷ ಮಾರ್ಗದರ್ಶನ ಕಾರ್ಯಕ್ರಮದ ಪ್ರಯೋಜನ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಿವಿಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ವೆಂಕಟೇಶ್ ಅವರು ಪ್ರಾಕ್ತನ ಶಾಸ್ತ್ರದ ಅಧ್ಯಯನದ ಮೂಲಕ ಅನೇಕ ಉದ್ಯೋಗಾವಕಾಶಗಳಿವೆ ಎಂಬುದರ ಅರಿವು ಮೂಡಿಸಿದರು.

ಇತಿಹಾಸ ವಿಭಾಗದ ಮುಖ್ಯಸ್ಥೆ ರೂಪ.ಎಂ ಹಾಗೂ ಅಧ್ಯಾಪಕರಾದ ಅರುಣ್ ಕುಮಾರ್.ಕೆ.ಎಲ್, ಅಭಿಷೇಕ್.ಎನ್, ಪಲ್ಲವಿ ಬಿ.ಎಮ್ ಮತ್ತು ಚರಣ್.ಡಿ ಉಪಸ್ಥಿತರಿದ್ದರು.